Wednesday, February 25, 2026
Wednesday, February 25, 2026
Home Blog Page 1633

ಜ್ಯೂ.ಮಹಿಳಾ ವಿಶ್ವಕಪ್ ಹಾಕಿ ಉಪಾಂತ್ಯಕ್ಕೆ ಭಾರತ

0

ಭಾರತದ ಜೂನಿಯರ್ ಮಹಿಳೆಯರ ಹಾಕಿ ತಂಡ ಎಫ್ ಐ ಎಚ್ ಗೆಳೆಯರ ಹಾಕಿ ಜೂನಿಯರ್ ವಿಶ್ವಕಪ್ ನಲ್ಲಿ ಭಾರತ ಸೆಮಿಫೈನಲ್ ಪ್ರವೇಶಿಸಿದೆ.
2013ರಲ್ಲಿ ಎಫ್ ಐ ಎಚ್ ಜೂನಿಯರ್ ಮಹಿಳಾ ವಿಶ್ವಕಪ್ ನಲ್ಲಿ ಭಾರತದ ಮಹಿಳಾ ತಂಡ ಅಂತಿಮ ನಾಲ್ಕರ ಘಟ್ಟ ತಲುಪಿತ್ತು. ಕೊನೆಗೆ ಕಂಚಿನ ಪದಕದೊಂದಿಗೆ ಆಟ ಮುಗಿಸಿತು.
ಶುಕ್ರವಾರ ನಡೆದ ಕ್ವಾಟರ್ ಫೈನಲ್ಸ್ ಪಂದ್ಯದಲ್ಲಿ ಭಾರತ ತಂಡ 3–0 ಗೋಲ್ ಗಳ ಅಂತರದಿಂದ ದಕ್ಷಿಣ ಕೊರಿಯಾ ವಿರುದ್ಧ ಜಯಗಳಿಸಿತು. ಭಾರತ ತಂಡದ ಪರ ಟೂರ್ನಿಯುದ್ದಕ್ಕೂ ಶ್ರೇಷ್ಠ ಪ್ರದರ್ಶನ ನೀಡುತ್ತಿರುವ ಮುಮ್ತಾಜ್ ಖಾನ್ (ಹನ್ನೊಂದನೇ ನಿಮಿಷ), ಲಾಲ್ರಿಂದಿಕಿ (ಐದನೇ ನಿಮಿಷ) ಸಂಗೀತ ಕುಮಾರಿ ( ಒಂದನೇ ನಿಮಿಷ) ತಲಾ ಒಂದೊಂದು ಗೋಲು ಬಾರಿಸಿ ಜಯದ ಕಡೆ ಮುಖ ಮಾಡಿದರು.
ಗೋಲ್ಕೀಪರ್ ಬಿಚು ದೇವಿ ಖಾರಿಬಾಮ್ ಸಹ ಅಮೋಘವಾದ ರಕ್ಷಣೆಯ ಆಟ ಪ್ರದರ್ಶಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.

ಆರಂಭದಿಂದಲೇ ಕೊರಿಯಾ ತಂಡದ ಮೇಲೆ ಒತ್ತಡ ಹೇರಿದ ಭಾರತೀಯ ಆಟಗಾರ್ತಿಯರು 11ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲ್ ಬಾರಿಸಿ ಮುನ್ನಡೆಯನ್ನು ಕಾಯ್ದುಕೊಂಡರು. ಇದಾದ ನಾಲ್ಕೇ ನಿಮಿಷ ಗಳಲ್ಲಿ ಲಾಲ್ರಿ೦ದಿಕಿ ಎರಡನೇ ಗೋಲ್ ಬಾರಿಸಿದರು. ಹೀಗಾಗಿ ಮೊದಲ ಕ್ವಾಟರ್ ಮುಕ್ತಾಯಗೊಳ್ಳುವುದು ತಂಡದ ಮುನ್ನಡೆ 2–0 ಗೇರಿತು. ಮೂರನೆಯ ಕ್ವಾಟರ್ ನಲ್ಲಿ ಮತ್ತೊಂದು ಗೋಲ್ ಬಾರಿಸಿದ ಭಾರತ ಕೊನೆಯವರೆಗೂ ಎದುರಾಳಿ ತಂಡಕ್ಕೆ ಗೋಲ್ ಬಾರಿಸಲು ಅವಕಾಶ ನೀಡದೆ ಗೆಲುವಿನ ದಡ ಸೇರಿತು

ಪೌಷ್ಠಿಕ ಅಕ್ಕಿ ವಿತರಣೆ ಪ್ರಸ್ತಾಪಕ್ಕೆ ಕೇಂದ್ರ ಸಂಪುಟ ಅನಮೋದನೆ

0

ಎಲ್ಲಾ ಸರ್ಕಾರಿ ಯೋಜನೆಗಳಲ್ಲಿ ಫೋರ್ಟಿಫೈಡ್ ಅಕ್ಕಿಯನ್ನ ವಿತರಿಸುವ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಸಾರ್ವಜನಿಕ ವಿತರಣಾ ವ್ಯವಸ್ಥೆ ಹಾಗೂ ಇತರ ಯೋಜನೆಗಳ ಅಡಿಯಲ್ಲಿ ಪೌಷ್ಠಿಕ ಅಕ್ಕಿ ವಿತರಣೆಯನ್ನ ಮೂರು ಹಂತಗಳಲ್ಲಿ ಜಾರಿಗೆ ತರಲಾಗುತ್ತದೆ.

ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ
ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಅನುಮೋದಿಸಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ತಿಳಿಸಿದ್ದಾರೆ.

ಭಾರತೀಯ ಆಹಾರ ನಿಗಮ ಮತ್ತು ರಾಜ್ಯ ಸಂಸ್ಥೆಗಳು ಈ ನಿಟ್ಟಿನಲ್ಲಿ ಪೂರೈಕೆ ಮತ್ತು ವಿತರಣೆಗಾಗಿ ಹೆಚ್ಚುವರಿಯಾಗಿ 88.65 ಲಕ್ಷ ಟನ್ ಹೆಚ್ಚುವರಿ ಪೌಷ್ಠಿಕ ಅಕ್ಕಿಯನ್ನು ಈ ಹಿಂದೆ ಸಂಗ್ರಹಿಸಿವೆ ಎಂದು ಅವರು ಮಾಹಿತಿ ತಿಳಿಸಿದ್ದಾರೆ.

ಇದನ್ನು ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಜಾರಿಗೆ ತರಲಾಗುತ್ತದೆ ಎಂದು ಅನುರಾಗ್ ಠಾಕೂರ್ ಅವರು ಹೇಳಿದ್ದಾರೆ.

ಇದನ್ನು 2024ರ ಸಮಯಕ್ಕೆ ಹಂತ ಹಂತವಾಗಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ತರಲಾಗುತ್ತದೆ. ಈ ಯೋಜನೆಗೆ ವಾರ್ಷಿಕ 2,700 ಕೋಟಿ ರೂ.ವೆಚ್ಚವಾಗಲಿದೆ. ಇದನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದು ಅನುರಾಗ್ ಠಾಕೂರ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಟಾಟಾ ಐಪಿಎಲ್ -22 ಗುಜರಾತ್ ಟೈಟನ್ಸ್ ಹ್ಯಾಟ್ರಿಕ್ ಜಯ

0

ಕೊನೆಯ ಎರಡು ಎಸೆತಗಳನ್ನು ಸಿಕ್ಸರ್ ಗೆ ಅಟ್ಟುವ ಮೂಲಕ ರಾಹುಲ್ ತೆವತಿಯ ಐಪಿಎಲ್ 15ನೇ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ಗೆ ಹ್ಯಾಟ್ರಿಕ್ ಜಯ ತಂದುಕೊಟ್ಟರು. ಪಂದ್ಯದ ಕೊನೆಯ ಎಸೆತದ ವರೆಗೂ ತೀವ್ರ ಕುತೂಹಲ ಕೆರಳಿಸಿದ ಪಂದ್ಯದಲ್ಲಿ ಕೊನೆಗೂ ಒತ್ತಡ ಮೆಟ್ಟಿನಿಂತ ಗುಜರಾತ್ ಟೈಟನ್ಸ್ ಗೆ ಆರು ವಿಕೆಟ್ ಗಳಿಂದ ಪಂಜಾಬ್ ತಂಡಕ್ಕೆ ಸೋಲುಣಿಸಿ ಸಂಭ್ರಮಿಸಿತು.
ಇಲ್ಲಿನ ಬ್ರಬೋನ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಹಣಾಹಣಿಯಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಮಾಯಾಂಕ್ ಅಗರ್ವಾಲ್ ಸಾರಥ್ಯದ ಪಂಜಾಬ್ ಕಿಂಗ್ಸ್ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಗೆ 189 ರನ್ ಕಲೆಹಾಕಿತು. ನಂತರ ಕಠಿಣ ಗುರಿ ಬೆನ್ನಟ್ಟಿದ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ತಂಡ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು.

ತಂಡಕ್ಕೆ ಗೆಲ್ಲಲು ಅಂತಿಮ ಓವರ್ ನಲ್ಲಿ 19 ರನ್ ಗಳ ಅಗತ್ಯವಿತ್ತು. ಓಡೇನ್ ಸ್ಮಿತ್ ಆ ಎಸೆದ ಓವರ್ನಲ್ಲಿ ಇಲ್ಲದ ರನ್ ಕದಿಯಲು ಮಿಲ್ಲರ್ ಯತ್ನಿಸಿದ ಕಾರಣ ನಾಯಕ ಹಾರ್ದಿಕ್ ಪಾಂಡ್ಯ ಔಟಾದರು. ಆ ಬಳಿಕ ಜೊತೆಗೂಡಿದ ಮಿಲ್ಲರ್ ಮತ್ತು ತೇವತಿಯಾ ಜೋಡಿ ರೋಚಕ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಯಿತು.

ಇದಕ್ಕೂ ಮುನ್ನ, 34 ರನ್ ಕಲೆ ಹಾಕುವಷ್ಟರಲ್ಲಿ ಆರಂಭಿಕ ಇಬ್ಬರನ್ನು (ಮಾಯಾಂಕ್ ಅಗರ್ವಾಲ್ ಮತ್ತು ಜಾನಿ ಬೈರ್ ಸ್ಟೋವ್) ಕಳೆದುಕೊಂಡು ಕಷ್ಟದಲ್ಲಿ ಸಿಲುಕಿಕೊಂಡ ಪಂಜಾಬ್ ತಂಡಕ್ಕೆ ಎಡಗೈ ಬ್ಯಾಟರ್ ಶಿಖರ್ ಧವನ್ ಮತ್ತು ಲಿವಿಂಗ್ ಸ್ಟನ್ ಆಸರೆಯಾದರು. ಬಿರುಸಿನ ಬ್ಯಾಟಿಂಗ್ ಮೂಲಕ ಗುಜರಾತ್ ತಂಡದ ಸ್ಪಿನ್ ಮತ್ತು ವೇಗದ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ, ಅಪಾಯಕಾರಿಯಾಗುವ ಮುನ್ಸೂಚನೆ ನೀಡಿತು. ಆದರೆ, ಹನ್ನೊಂದನೇ ಓವರ್ನಲ್ಲಿ ಆಫ್ಟನ್ ಮೂಲಕ ರಶೀದ್ ಖಾನ್, 35 ರನ್ ಗಳಿಸಿದ್ದ ಶಿಖರ್ ಧವನ್ ಗೆ ಡಕ್ ಔಟ್ ದಾರಿತೋರಿಸುವಲ್ಲಿ ಯಶಸ್ವಿಯಾದರು. ಹೀಗಾಗಿ ಜೊತೆಯಾಟ ಕೊನೆಗೊಂಡಿತು. ಅದಕ್ಕೂ ಮೊದಲು ಮೂರನೇ ವಿಕೆಟ್ ಗೆ 32 ಎಸೆತಗಳಲ್ಲಿ 52 ರನ್ ಹರಿದುಬಂದಿದ್ದವು.

ನಂತರ ಜೊತೆಯಾದ ಲಿಯಮ್ ಮತ್ತು ಜಿತೇಶ್ ಶರ್ಮಾ ಸಹ ತ್ವರಿತ ಗತಿಯಲ್ಲಿ ರನ್ ಕೂಡಿಹಾಕಿದ ಕಾರಣ ತಂಡದ ಮೊತ್ತ 12 ಓವರುಗಳಲ್ಲಿ ಮೂರಂಕಿ ಮುಟ್ಟಿತು. ಆದರೆ, ಅಷ್ಟರಲ್ಲಿ 11 ಎಸೆತಗಳಲ್ಲಿ ಎರಡು ಸಿಕ್ಸರ್ ಒಳಗೊಂಡ 23 ರನ್ ಗಳಿಸಿದ್ದ ಜಿತೇಶ್ ನಿರ್ಗಮಿಸಿದರು. ಅಲ್ಲದೆ, ಹೊಡಿಬಡಿ ಬ್ಯಾಟ್ಸ್ ಮ್ಯಾನ್ ಸ್ಮಿತ್ ಕೂಡ ಬಂದ ದಾರಿಗೆ ಸುಂಕವಿಲ್ಲದಂತೆ ಪೆವಿಲಿಯನ್ ಅತ್ತ ಸಾಗಿದರು. ಇದರ ನಡುವೆಯೂ ತಮ್ಮ ಅತ್ಯದ್ಭುತ ಬ್ಯಾಟಿಂಗ್ ಮುಂದುವರಿಸಿದ ಲಿವಿಂಗ್ ಸ್ಟನ್ ಅರ್ಧಶತಕದ ಸಂಭ್ರಮ ಆಚರಿಸಿದರು. ಆದರೆ ಅದನ್ನು ದೊಡ್ಡ ಮೊತ್ತವಾಗಿ ವಿಸ್ತರಿಸಲು ರಶೀದ್ ಖಾನ್ ಆಸ್ಪದ ನೀಡಲಿಲ್ಲ . 27 ಎಸೆತಗಳನ್ನೆದುರಿಸಿದ ಲಿವಿಂಗ್ ಸ್ಟನ್ 7 ಫೋರ್, ನಾಲ್ಕು ಸಿಕ್ಸರ್ ಸಹಿತ 64 ರನ್ ಗಳಿಗೆ ಹೋರಾಟ ಮುಗಿಸಿದರು

ಕೆಳಕ್ರಮಾಂಕದಲ್ಲಿ ಅಬ್ಬರಿಸಲು ಮುಂದಾದ ಪ್ರತಿಭಾವಂತ ಹೊಡಿಬಡಿ ಆಟಗಾರ ಶಾರುಖ್ ಖಾನ್ (15ರನ್) ಅವರಿಗೂ ಸ್ಪಿನ್ನರ್ ರಶೀದ್ ಕಂಟಕವಾದರು. ಆದರೆ, ಕೊನೆಹಂತದ ಓವರ್ಗಳಲ್ಲಿ ಮಿಂಚಿನ ಸಂಚಲನ ಮೂಡಿಸಿದ ರಾಹುಲ್ ಚಹರ್ ಕೇವಲ 14 ಎಸೆತಗಳಲ್ಲಿ 2 ಫೋರ್, ಒಂದು ಸಿಕ್ಸರ್ ಒಳಗೊಂಡ 22 ರನ್ ಚಚ್ಚಿದರು.

ಹಿಜಾಬ್ ವಿವಾದ ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸ್ ನಿಗಾ

0

ಹಿಜಾಬ್‌ ಬಗ್ಗೆ ಪ್ರಚೋದಿತ ಪೋಸ್ಟ್‌ ಹಾಕುವವರ ಮೇಲೆ ಖಾಕಿ ಕಣ್ಣು ಇಡಲಾಗಿದೆ. ಇನ್ಮುಂದೆ ಪ್ರಚೋದಿತ ಪೋಸ್ಟ್‌ ಹಾಕಿದ್ರೆ ಪ್ರಕರಣ ದಾಖಲಾಗುತ್ತದೆ.ಈ ಬಗ್ಗೆ ಬೆಂಗಳೂರು ಪೊಲೀಸರು ಫುಲ್‌ ಅಲರ್ಟ್‌ ಆಗಿದ್ದಾರೆ.

ರಾಜ್ಯದ ಯಾವುದೇ ಭಾಗದಲ್ಲಿ ಹಿಜಾಬ್‌ ಬಗ್ಗೆ ಆಕ್ಷನ್ , ರಿಯಾಕ್ಷನ್ ಪೋಸ್ಟ್‌ ಹಾಕಿದ್ರೆ ಪತ್ತೆ ಮಾಡಲಾಗುತ್ತದೆ. ವಾಟ್ಸಪ್‌ ಗ್ರೂಪ್‌, ಫೇಸ್‌ಬುಕ್‌ ಟ್ಟಿಟರ್‌ ಮೇಲೆ ನಿಗಾ ಇಡಲಾಗಿದೆ

ವಿವಾದಾತ್ಮಕ ಪೋಸ್ಟ್‌ ಹಾಕಿದ್ರೆ ಪತ್ತೆ ಮಾಡುವಂತೆ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಧಾರ್ಮಿಕ ಮುಖಂಡ ಜೊತೆ ಕೂಡಲೇ ಸಭೆ ನಡೆಸುವಂತೆ ಡಿಸಿಪಿಗಳಿಗೆ ಪೊಲೀಸ್‌ ಆಯುಕ್ತರು ಸೂಚನೆ ನೀಡಿದ್ದಾರೆ.

ಸ್ವಸಹಾಯ ಸಂಘಗಳ ಆರ್ಥಿಕ ಭದ್ರತೆಗೆ ಆಯಂಕರ್ ಬ್ಯಾಂಕ್ ಆರಂಭ-ಬೊಮ್ಮಾಯಿ

0

ರಾಜ್ಯ ಸರ್ಕಾರವು ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಸಿಹಿಸುದ್ದಿ ನೀಡಿದೆ. ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಒಂದು ತಿಂಗಳಲ್ಲಿ ಅಗತ್ಯ ಆರ್ಥಿಕ ಅನುಕೂಲಗಳು ಸುಗಮವಾಗಿ ಸಿಗುವಂತೆ ಮಾಡಲು ಆಯಂಕರ್ ಬ್ಯಾಂಕ್ ನ್ನು ಆರಂಭವಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ್ದಾರೆ.

ಬೆಂಗಳೂರಿನಲ್ಲಿ, ರಾಷ್ಟ್ರೀಯ ಸಂಜೀವಿನಿ ಸರಸ್ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ಮಹಿಳೆಯರ ಸ್ವಸಹಾಯ ಸಂಘಗಳಿಗೆ ಬಲ ತುಂಬಲು ಈ ಸಲದ ಬಜೆಟ್ ನಲ್ಲಿ 500 ಕೋಟಿ ರೂ. ಕೊಡಲಾಗಿದೆ. ಈ ಮೂಲಕ 4 ಲಕ್ಷ ಮಹಿಳೆಯರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಲಾಗುವುದು. ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಒಂದು ತಿಂಗಳಲ್ಲಿ ಅಗತ್ಯ ಆರ್ಥಿಕ ಅನುಕೂಲಗಳು ಸುಗಮವಾಗಿ ಸಿಗುವಂತೆ ಮಾಡಲು ಆಯಂಕರ್ ಬ್ಯಾಂಕ್ ನ್ನು ಪ್ರಾರಂಭಿಸಲಾಗುತ್ತದೆ ಎಂದು ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ರಾಜ್ಯ ಸರ್ಕಾರವು ಈ ವರ್ಷ ಮಹಿಳಾ ಕಾರ್ಯಕ್ರಮಗಳಿಗೆ 47 ಸಾವಿರ ಕೋಟಿ ರೂ. ಮತ್ತು ಮಕ್ಕಳಿಗೆ ಸಂಬಂಧಿಸಿದ ನಾನಾ ಯೋಜನೆಗಳಿಗೆ 43 ಸಾವಿರ ಕೋಟಿ ರೂ.ಗಳಷ್ಟು ಅಗಾಧ ಮೊತ್ತವನ್ನು ಬಜೆಟ್ ನಲ್ಲಿ ಪ್ರಕಟಿಸಲಾಗಿದೆ. ಇವೆಲ್ಲವುಗಳ ಅನುಷ್ಠಾನದ ಸಂಬಂಧ ಇನ್ನು ಒಂದು ವಾರದಲ್ಲಿ ಸೂಕ್ತ ಆದೇಶಗಳನ್ನು ಹೊರಡಿಸಲಾಗುತ್ತದೆ ಎಂದು ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ.

ಭಾರತದಲ್ಲಿ ಕೊರೋನ ರೂಪಾಂತರಿ XE ಸೋಂಕು ಪತ್ತೆ

0

ವಿಶ್ವ ಆರೋಗ್ಯ ಸಂಸ್ಥೆಯು ಇತ್ತೀಚೆಗೆ ಯುಕೆ ಯಲ್ಲಿ ಹೊಸ ಕೊರೋನಾ ರೂಪಾಂತರಿತ ಎಕ್ಸ್ ಇ ಕಂಡುಬಂದಿದೆ ಮತ್ತು ಇದು ಕೊರೋನಾ ದ ಬಿಎ.2 ಉಪವರ್ಗಕ್ಕಿಂತ ಹೆಚ್ಚು ಹರಡಬಹುದು ಎಂದು ಹೇಳಿದೆ . ಈ ನಡುವೆ ಗುಜರಾತ್ ‌ ನಲ್ಲಿ ಒಬ್ಬ ವ್ಯಕ್ತಿಗೆ ಕೊರೊನಾವೈರಸ್ ರೂಪಾಂತರ ಎಕ್ಸ್ ಇ ಸೋಂಕಿಗೆ ಒಳಗಾಗಿದ್ದಾನೆ ಎಂದು ವರದಿಯಾಗಿದೆ.

ಕೊರೋನಾ ರೂಪಾಂತರಿ ಎಕ್ಸ್ ಇ ಭಾರತದಲ್ಲಿ ಮೊದಲು ಮುಂಬೈನಲ್ಲಿ ದಾಖಲಾಗಿದೆ ಎನ್ನಲಾಗಿತ್ತು. ಇದೀಗ ಗುಜರಾತ್ ನಲ್ಲಿ ಎಕ್ಸ್ ಇ ರೂಪಾಂತರಿಯ ಇನ್ನೊಂದು ಕೇಸ್ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

ಎಕ್ಸ್ ಇ ಒಮಿಕ್ರಾನ್ ನ ಉಪ ರೂಪಾಂತರಿಯಾಗಿದೆ. ವಡೋದರಾದ ಗೋತ್ರಿ ಎಂಬ ಏರಿಯಾದ 60 ವರ್ಷದ ವ್ಯಕ್ತಿಯಲ್ಲಿ ಈ ರೂಪಾಂತರಿ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಯಾವುದೇ ಸೂಪರ್ ಪವರ್ ದೇಶ ಭಾರತಕ್ಕೆ ಷರತ್ತುಗಳನ್ನ ನಿರ್ದೇಶಿಸಲು ಸಾಧ್ಯವಿಲ್ಲ ಇಮ್ರಾನ್

0

ಯಾವುದೇ ಸೂಪರ್ ಪವರ್ ಕೂಡಾ ಭಾರತಕ್ಕೆ ಷರತ್ತುಗಳನ್ನು ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಅವಿಶ್ವಾಸ ನಿರ್ಣಯದ ಮೇಲೆ ಮತ ಚಲಾಯಿಸುವ ಮೊದಲು ತಮ್ಮ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಇಮ್ರಾನ್, ಜನರ ಹಿತಾಸಕ್ತಿಗಳನ್ನು ಉಲ್ಲೇಖಿಸಿ ರಷ್ಯ, ಉಕ್ರೇನ್ ಯುದ್ಧದಲ್ಲಿ ಯಾವುದೇ ಪಕ್ಷವನ್ನು ತೆಗೆದುಕೊಳ್ಳಲು ನಿರಾಕರಿಸಿದಾಗ ಯಾವುದೇ ದೇಶವು ಭಾರತದ ವಿರುದ್ಧ ನಿಲ್ಲಲು ಸಾಧ್ಯವಿಲ್ಲ.

ಯುರೋಪಿಯನ್ ಯೂನಿಯನ್ ರಾಜತಾಂತ್ರಿಕರು ಪಾಕಿಸ್ತಾನ ರಷ್ಯಾದ ವಿರುದ್ಧ ಮಾತನಾಡಬೇಕು ಎಂದು ಒತ್ತಡ ಹೇರುತ್ತಲೇ ಇದ್ದರು. ಆದರೆ ಭಾರತ ಸಾರ್ವಭೌಮ ರಾಷ್ಟ್ರವಾಗಿರುವುದರಿಂದ ಭಾರತಕ್ಕೆ ಅದನ್ನು ಹೇಳುವ ಧೈರ್ಯ ಅವರಿಗೆ ಸಾಧ್ಯವಾಗಲಿಲ್ಲ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ನಾನು ಬೇರೆ ದೇಶಕ್ಕಾಗಿ ಜನರನ್ನು ಸಾಯಲು ಬಿಡಲಾರೆ. ನಮ್ಮ ವಿದೇಶಾಂಗ ನೀತಿ ಸಾರ್ವಭೌಮವಾಗಿರಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.

ನನ್ನ ರಷ್ಯಾ ಭೇಟಿಯಿಂದ ಯುಎಸ್ ಅತೃಪ್ತಿ ಹೊಂದಿತ್ತು. ಮಿತ್ರ ರಾಷ್ಟ್ರವಾಗಿದ್ದರೂ ಪಾಶ್ಚಿಮಾತ್ಯ ದೇಶವು ಪಾಕಿಸ್ತಾನದಲ್ಲಿ 400 ಡ್ರೋನ್ ದಾಳಿಗಳನ್ನು ನಡೆಸಿತ್ತು. ಪ್ರತಿಪಕ್ಷಗಳೊಂದಿಗೆ ಶಾಮೀಲಾಗಿ ತನ್ನ ಸರ್ಕಾರವನ್ನು ಉರುಳಿಸಲು ಸಕ್ರಿಯವಾಗಿ ಸಂಚು ರೂಪಿಸಿದೆ ಎಂದು ಇಮ್ರಾನ್ ಖಾನ್ ಕಿಡಿಕಾರಿದ್ದಾರೆ.

ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸಿದರೆ ಮಾತ್ರ ಯುಎಸ್ ಪಾಕಿಸ್ತಾನವನ್ನು ಕ್ಷಮಿಸುತ್ತದೆ ಎಂದು ಅಮೆರಿಕದ ಪ್ರತಿನಿಧಿಯೊಬ್ಬರು ಹೇಳಿದ್ದಾರೆ ಎಂದು ಇಮ್ರಾನ್ ಖಾನ್ ತಮ್ಮ ಆರೋಪವನ್ನು ಮುಂದುವರೆಸಿದರು. ಕೆಲವು ವಿಚಾರಗಳನ್ನು ಸಾರ್ವಜನಿಕರಿಗೆ ಮತ್ತು ಮಾಧ್ಯಮಗಳಿಗೆ ಬಹಿರಂಗಪಡಿಸಲು ಸಾಧ್ಯವಿಲ್ಲ. ಯಾಕೆಂದರೆ ಅವುಗಳು ಉನ್ನತ ರಹಸ್ಯವಾಗಿದ್ದು, ಒಂದು ವೇಳೆ ಸೋರಿಕೆಯಾದಲ್ಲಿ, ಪಾಕಿಸ್ತಾನದ ಭದ್ರತೆಗೆ ಸಂಕಷ್ಟವಾಗುತ್ತದೆ ಎಂದು ಇಮ್ರಾನ್ ತಿಳಿಸಿದ್ದಾರೆ.

ತಮ್ಮ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸುವ ರಾಷ್ಟ್ರೀಯ ಅಸೆಂಬ್ಲಿ ಡೆಪ್ಯೂಟಿ ಸ್ಪೀಕರ್ ಅವರ ವಿವಾದಾತ್ಮಕ ನಿರ್ಧಾರದ ಕುರಿತು ಸುಪ್ರೀಂ ಕೋರ್ಟ್‌ನ ತೀರ್ಪಿನ ಬಗ್ಗೆ ನಿರಾಶೆಯನ್ನು ವ್ಯಕ್ತಪಡಿಸುತ್ತಾ, ಪಾಕಿಸ್ತಾನದಲ್ಲಿ ಆಮದು ಮಾಡಿಕೊಂಡ ಸರ್ಕಾರ” ವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಕನಿಷ್ಠ ವಿದೇಶಿ ಪಿತೂರಿಯ ಪುರಾವೆಗಳನ್ನು ನೋಡಬೇಕು ಮತ್ತು ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸಬೇಕು ಎಂದು ಇಮ್ರಾನ್ ಖಾನ್ ತಿಳಿಸಿದ್ದಾರೆ.

ಚಿಂತಕ ಕೃಷ್ಣಪ್ಪ ಅವರ ಇತಿಹಾಸವನ್ನ ಯುವಪೀಳಿಗೆ ತಿಳಿಯಬೇಕಿದೆ – ರಾಜೇಂದ್ರ ಚೆನ್ನಿ

0

ದಲಿತರ ಮೇಲಿನ ಶೋಷಣೆಗಳ ವಿರುದ್ಧ ಹೋರಾಡಿದ ಮತ್ತು ದಲಿತರಿಗೆ ಭೂಹಕ್ಕು ಕೊಡಿಸುವಲ್ಲಿ ಶ್ರಮಿಸಿದ ಪ್ರೊ. ಬಿ. ಕೃಷ್ಣಪ್ಪ ಅವರ ಇತಿಹಾಸವನ್ನು ಇಂದಿನ ಯುವಪೀಳಿಗೆ ತಿಳಿದುಕೊಳ್ಳುವ ತುರ್ತು ಇದೆ ಎಂದು ಕುವೆಂಪು ವಿವಿಯ ನಿವೃತ್ತ ಪ್ರಾಧ್ಯಾಪಕ ಮತ್ತು ಚಿಂತಕ ಪ್ರೊ. ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟರು.

ಕುವೆಂಪು ವಿವಿಯ ಪ್ರೊ. ಬಿ. ಕೃಷ್ಣಪ್ಪ ಅಧ್ಯಯನ ಕೇಂದ್ರದ ವತಿಯಿಂದ ವಿವಿಯ ಪ್ರೊ. ಎಸ್. ಪಿ. ಹಿರೇಮಠ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪ್ರೊ. ಬಿ. ಕೃಷ್ಣಪ್ಪ ಮತ್ತು ದಲಿತ ಚಳವಳಿ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಒಳಗೆ 70-80ರ ದಶಕದಲ್ಲಿ ನಡೆದ ಹೋರಾಟಗಳು ಸ್ವಾತಂತ್ರ್ಯಾನಂತರ ನಡೆದ ಮಹಾನ್ ಹೋರಾಟಗಳು. ದಲಿತರ ಮೇಲಿನ ಅತ್ಯಾಚಾರ, ಶೋಷಣೆಗಳ ವಿರುದ್ಧ ಹಾಗೂ ಭೂಮಿ ಪಡೆಯುವ ಹೋರಾಟಗಳು ಈ ಕಾಲಘಟ್ಟದಲ್ಲಿ ನಡೆದಂತಹವು. ಮಹಾರಾಷ್ಟ್ರದಲ್ಲಿ ಆರಂಭವಾದ ಚಳವಳಿ ಕಿಚ್ಚು ಕರ್ನಾಟಕದಲ್ಲಿ ಪ್ರೊ. ಬಿ. ಕೃಷ್ಣಪ್ಪ ಅವರಿಂದ ಗಾಢವಾಗಿ ಹಬ್ಬಿದವು. ಅವುಗಳ ಅಧ್ಯಯನದ ಅಗತ್ಯವಿದೆ ಎಂದರು.

ದಲಿತರಿಗೆ ಅಭಿವ್ಯಕ್ತಿಯನ್ನು, ಅಸ್ಮಿತೆಯನ್ನು ನೀಡುವ ಮಹಾನ್ ಕಾರ್ಯವನ್ನು ಪ್ರೊ. ಕೃಷ್ಣಪ್ಪ ಈ ಸಂದರ್ಭದಲ್ಲಿ ಮಾಡಿದರು. ಇದರಿಂದಾಗಿ ದಲಿತ ಸಾಹಿತಿಗಳು, ಚಳವಳಿಗಾರರು ಹುಟ್ಟಿಕೊಂಡರು. ದಲಿತ ಚಳವಳಿ ರೂಪಿಸುವಲ್ಲಿ ಇವುಗಳೆಲ್ಲ ಮುಖ್ಯಪಾತ್ರ ನಿರ್ವಹಿಸಿದವು. ಜಮೀನ್ದಾರಿ ಪದ್ಧತಿ ವಿರುದ್ಧ, ಬೆತ್ತಲೆ ಸೇವೆವಿರುದ್ಧ, ಬ್ರಾಹ್ಮಣತ್ವದ ವಿರುದ್ಧ ಭಾರೀ ಚಳವಳಿ ಆರಂಭವಾಗಿ ದಲಿತ ಅಸ್ಮಿತೆ ಬೃಹತ್ತಾಗಿ ಬೆಳೆಯಿತು. ಇದಕ್ಕೆ ಕಾರಣವಾದ ಪ್ರೊ. ಬಿ. ಕೃಷ್ಣಪ್ಪ ಅವರ ಬರಹಗಳನ್ನು, ಭಾಷಣಗಳನ್ನು, ಹೋರಾಟದ ಕುರಿತ ವರದಿಗಳನ್ನು ಸಂಗ್ರಹಿಸಿ ಆಕರಗ್ರಂಥಗಳನ್ನು ರೂಪಿಸುವ ಕೆಲಸವಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೊ. ಬಿ.ಪಿ. ವೀರಭದ್ರಪ್ಪ, ಭಾರತದಲ್ಲಿ ದಲಿತರಿಗೆ ಹಕ್ಕುಗಳನ್ನು ನೀಡಿದ ಮಹಾನ್ ಹೋರಾಟಗಾರರಾಗಿ ಅಂಬೇಡ್ಕರ್ ಕಂಡರೆ, ಕರ್ನಾಟಕದ ಮಟ್ಟಿಗೆ ಆ ಕಾರ್ಯವನ್ನು ಪ್ರೊ. ಬಿ. ಕೃಷ್ಣಪ್ಪ ಮಾಡಿದ್ದಾರೆ ಎಂದು ಧೈರ್ಯವಾಗಿ ಹೇಳಬಹುದು. ದಲಿತರ ಮೇಲೆ ನಡೆಯುತ್ತಿದ್ದ ಅನೇಕ ತರಹದ ಶೋಷಣೆಗಳ ವಿರುದ್ಧ ಕೃಷ್ಣಪ್ಪ ಅವರ ಅಂದಿನ ಹೋರಾಟಗಳು ಮಾದರಿಯಾಗಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರೊ. ಬಿ. ಕೃಷ್ಣಪ್ಪ ಅಧ್ಯಯನ ಕೇಂದ್ರದ ಸಂಚಾಲಕ ಪ್ರೊ. ಶಿವಾನಂದ ಕೆಳಗಿನಮನಿ, ಕನ್ನಡ ಭಾರತಿಯ ನಿರ್ದೇಶಕ ಪ್ರೊ. ಪ್ರಶಾಂತ್ ನಾಯಕ್ ಜಿ., ಮಾತನಾಡಿದರು. ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಮೂರ್ತಿ, ಡಾ. ಮೇಟಿ ಮಲ್ಲಿಕಾರ್ಜುನ್, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಸೇರಿದಂತೆ ಹಲವರು ಹಾಜರಿದ್ದರು. ನಂತರ ದಲಿತ ಚಳವಳಿಯ ಚಾರಿತ್ರಿಕ ನೋಟ, ದಲಿತ ಸಂಘಟನೆ ಮತ್ತು ರಾಜಕೀಯ, ದಲಿತ ಸಾಹಿತ್ಯ ಸೇರಿದಂತೆ ಹಲವು ವಿಷಯಗಳ ಮೇಲೆ ಡಾ. ಚಂದ್ರಶೇಖರ್, ಡಾ. ನೆಲ್ಲಿಕಟ್ಟೆ ಸಿದ್ಧೇಶ್, ಡಾ. ಮೋಹನ್ ಚಂದ್ರಗುತ್ತಿ ವಿಚಾರಗಳನ್ನು ಮಂಡಿಸಿದರು.

ಭಾರತದಲ್ಲಿ ಧರ್ಮಕ್ಕೆ ಕೊರತೆಯಿಲ್ಲ- ಸೂಲಿಬೆಲೆ

0

ದಿವ್ಯತ್ರಯರ ಸಂದೇಶಗಳನ್ನು ಹಾಗೂ ಭಾರತೀಯ ಸನಾತನ ಪರಂಪರೆಯನ್ನು ಪ್ರತಿಪಾದಿಸಿದ ಮಹಾನ್ ವ್ಯಕ್ತಿಗಳ ಮೌಲ್ಯಗಳನ್ನು ಸಮಾಜದಲ್ಲಿರುವ ಜನತೆಗೆ ತಲುಪಿಸುವ ಸದುದ್ದೇಶದಿಂದ ರಾಮಕೃಷ್ಣ ವಿವೇಕಾನಂದ ಭಾವ ಪ್ರಚಾರ ಪರಿಷತ್ ಕಾರ್ಯನಿರ್ವಹಿಸುತ್ತಿದೆ. ಈ ಪರಿಷತ್ತಿನ ಏಳನೇ ವಾರ್ಷಿಕ ಸಮಾವೇಶವನ್ನು ಏಪ್ರಿಲ್ 8 ಹಾಗೂ 9ನೇ ತಾರೀಕಿನಂದು ಶಿವಮೊಗ್ಗದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆಸಲಾಗುತ್ತಿದೆ.

ಈ ಕಾರ್ಯಕ್ರಮಕ್ಕೆ ಭಾರತದಾದ್ಯಂತ ಶ್ರೀಕೃಷ್ಣ ಪರಂಪರೆಯ ಯತಿಗಳು, ಮಾತಾಜಿ ಗಳು, ಹಾಗೂ ಖ್ಯಾತ ಚಿಂತಕರು, ಕರ್ನಾಟಕದ ಹಲವು ಮಠಾಧೀಶರು ಭಾಗವಹಿಸಿದ್ದರು.

ಪೂಜ್ಯ ಶ್ರೀ ಸ್ವಾಮಿ ರಘುವೀರ ನಂದ ಜಿ ಮಹಾರಾಜ್ ಹಾಗೂ ಯತಿ ಸಮೂಹ ಅವರಿಂದ ಭಜನಾ ಕಾರ್ಯಕ್ರಮ ನೆರವೇರಿತು.

ವಿವೇಕಾನಂದರ ಚಿಂತನಾಧಾರೆ ಪ್ರಥಮ ಗೋಷ್ಠಿಯಲ್ಲಿ ಉಪನ್ಯಾಸವನ್ನು ಖ್ಯಾತ ಚಿಂತಕರಾದ ಹಾಗೂ ಮಾರ್ಗದರ್ಶಕರಾದ ಯುವ ಬ್ರಿಗೇಡ್ ಶ್ರೀ ಚಕ್ರವರ್ತಿ ಸೂಲಿಬೆಲೆ ಅವರು ನೀಡಿದರು ನೀಡಿದರು.

ಸ್ವಾಮಿ ವಿವೇಕಾನಂದರು ತನ್ನ ದೇಶವನ್ನು ಕುರಿತು ಅಮೆರಿಕದಲ್ಲಿ ಭಾಷಣ ಮಾಡುವಾಗ ಹೇಳುತ್ತಾರೆ, ನನ್ನ ದೇಶಕ್ಕೆ ಕೊರತೆ ಇರುವುದು ಅನ್ನಕ್ಕಾಗಿ, ಜನರು ಹಸಿವಿನಿಂದ ಸಾಯುತ್ತಿದ್ದಾರೆ. ನಿಮಗೆ ನಿಜವಾಗಲೂ ಜಗತ್ತಿಗೆ ಒಳಿತು ಮಾಡಬೇಕೆಂಬ ಕ್ರಿಸ್ತನ ಮನೋಭಾವನೆ ನಿಮ್ಮೊಳಗಿನ ಇದ್ದರೇ, ನೀವು ಭಾರತದ ಜನರಿಗೆ ಅನ್ನವನ್ನು ಕೊಡಬೇಕೆ ಹೊರತು, ನಿಮ್ಮ ಧರ್ಮ ಗಳನ್ನಲ್ಲ. ಭಾರತದಲ್ಲಿ ಧರ್ಮಗಳ ಕೊರತೆಯಿಲ್ಲ. ಭಾರತದಲ್ಲಿ ಅನೇಕ ಧರ್ಮಗಳಿವೆ. ನಮಗೆ ಅನ್ನವನ್ನ ಕೊಟ್ಟು ನಮ್ಮ ಧರ್ಮಗಳನ್ನು ಇಲ್ಲಿಗೆ ಬಂದು ಹಂಚಿ ಎಂದು ಸ್ವಾಮಿ ವಿವೇಕಾನಂದರು ಅಮೆರಿಕದ ಜನರಿಗೆ ಹೇಳಿದ್ದರು.
ಎಂದು ಶ್ರೀ ಚಕ್ರವರ್ತಿ ಸೂಲಿಬೆಲೆಯವರು ಭಾರತಕ್ಕೆ ಸ್ವಾಮಿ ವಿವೇಕಾನಂದರ ಕೊಡುಗೆಯನ್ನು ವಿವರಿಸಿದ್ದಾರೆ.

ಕಾರ್ಯಕ್ರಮದಲ್ಲಿ ಪೂಜಶ್ರೀ ಸ್ವಾಮಿತ್ಯಾಗಿ ಶ್ವರಾ ನಂದಜಿ ರಾಜ್ ಕಾರ್ಯದರ್ಶಿ ಗಳು ರಾಮಕೃಷ್ಣ ಮಿಷನ್ ದಾವಣಗೆರೆ, ಪೂಜ್ಯ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ, ಇನ್ನು ಮುಂತಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹ್ಯಾಟ್ರಿಕ್ ಗೆಲುವಿನ ಲಕ್ನೊ ಸೂಪರ್ ಜೈಂಟ್ಸ್.

0

ವಿಕೆಟ್ ಕೀಪರ್ ಕ್ವಿ೦ಟನ್ ಪೀಕಾಕ್ (80) ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಲಕ್ನೋ ಸೂಪರ್ ಜಯಂಟ್ಸ್ ತಂಡ ಐಪಿಎಲ್ 15ನೇ ಆವೃತ್ತಿಯ 15ನೇ ಪಂದ್ಯದಲ್ಲಿ ಆರು ವಿಕೆಟ್ ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಟೂರ್ನಿಯಲ್ಲಿ ಹ್ಯಾಟ್ರಿಕ್ ಜಯ ದಾಖಲಿಸಿತು.


ಡಿ. ವೈ ಪಾಟೀಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಡೆಲ್ಲಿ ತಂಡ ಆರಂಭದಲ್ಲಿ ಅಬ್ಬರಿಸಿದರು ಅಂತಿಮವಾಗಿ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಕೇವಲ 149 ರನ್ ಕಲೆಹಾಕಿತು ಪ್ರತ್ಯುತ್ತರವಾಗಿ ಲಕ್ನೋ ಸೂಪರ್ ಜಯಂಟ್ಸ್ ತಂಡ, 19.4 ಓವರುಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 155 ರನ್ ಗಳಿಸಿತು. ಮೊದಲ ವಿಕೆಟ್ ಗೆ ನಾಯಕ ಕೆ ಎಲ್ ರಾಹುಲ್ (24) ಜೊತೆ 73 ರನ್ ಜೊತೆಯಾಟದಲ್ಲಿ ಪಾಲ್ಗೊಂಡ ಡಿಕಾಕ್, ಅಂತಿಮವಾಗಿ 52 ಎಸೆತಗಳಲ್ಲಿ 80 ರನ್ ಕಲೆಹಾಕಿದರು. ತ ಪಂದ್ಯದ ಕೊನೆಯ ಕ್ಷಣ ವರೆಗೂ ಗೆಲುವಿಗಾಗಿ ಹೋರಾಟ ನಡೆಸಿದರು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸತತ ಎರಡನೇ ಸೋಲು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ

ಹಾಲಿ ಆವೃತ್ತಿಯಲ್ಲಿ ಮೊದಲ ಪಂದ್ಯವನ್ನಾಡಿದ ಡೇವಿಡ್ ವಾರ್ನರ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಪೃಥ್ವಿ ಶಾ, ಆರಂಭದಿಂದಲೇ ಅಬ್ಬರಿಸತೊಡಗಿದ್ದಾರೆ. ಕೃಷ್ಣಪ್ಪ ಗೌತಮ್ ಎಸೆದ ಇನ್ನಿಂಗ್ಸ್ ನ ಎರಡನೇ ಓವರ್ ನ ಮೂರನೇ ಎಸೆತವನ್ನು ಬೌಂಡರಿ ಗಟ್ಟುವ ಮೂಲಕ ಮೊದಲ ಫೋನ್ ಬಾರಿಸಿದ ಪೃಥ್ವಿ ನಂತರ ಎದುರಾಳಿ ಬೌಲರ್ಗಳನ್ನು ನಿರ್ದಾಯ ಕವಾಗಿ ದಂಡಿಸಿದರು. ಅದರಲ್ಲೂ ನಾಲ್ಕನೇ ಓವರ್ನಲ್ಲಿ ಆವೇಶ್ ಖಾನ್ ಗೆ ಹ್ಯಾಟ್ರಿಕ್ ಫಾರ್ ಬಾರಿಸಿದ ಶಾ, ಪವರ್ ಪ್ಲೇ ಅವಧಿ ಮುಕ್ತಾಯಗೊಳ್ಳುವ ಅಷ್ಟರಲ್ಲಿ ತಂಡದ ಮೊತ್ತವನ್ನು 52 ರನ್ ಗಳಿಸಿದರು. ಆದರೆ, ಕ್ರಿಸ್ ನ ಇದು ತುದಿಯಲ್ಲಿದ್ದ ವಾರ್ನರ್ ರನ್ ಗಳಿಸಲು ವಿಫಲರಾದರು. ಈ ಮಧ್ಯೆ 30 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ ಮುಂಬೈನ ಬ್ಯಾಟರ್ ಪೃಥ್ವಿ ಅಂತಿಮವಾಗಿ ಎಂಟನೇ ಓವರ್ನಲ್ಲಿ ಕೃಷ್ಣಪ್ಪ ಗೌತಮ್ ಗೆ
ವಿಕೆಟ್ ಒಪ್ಪಿಸಿದರು. ಆಗ ತಂಡದ ಮೊತ್ತ 67.

7.2 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 67 ರನ್ ಗಳಿಸಿ ಉತ್ತಮ ಮೊತ್ತ ಪೇರಿಸುವ ನೀಡಿದ ಡೆಲ್ಲಿ, ಮಧ್ಯಮ ಓವರ್ ಗಳಲ್ಲಿ ಎದುರಾಳಿ ತಂಡದ ಬಿಗು ಬೋಲಿಂಗ್ ದಾಳಿಗೆ ತತ್ತರಿಸಿತು. ಏಳು ರನ್ ಗಳ ಅಂತರದಲ್ಲಿ ಪೃಥ್ವಿ, ವಾರ್ನರ್ ಮತ್ತು ಪೊವೆಲ್ ವಿಕೆಟ್ ಪತನ ಗೊಂಡವು. ನೋಡನೋಡುತ್ತಿದ್ದಂತೆ ರನ್ ಗತಿ ಕುಸಿಯಿತು. ನಂತರ ಕ್ರಿಸಿಗಿಳಿದ ನಾಯಕ ರಿಷಬ್ ಪಂತ್ ಮತ್ತು ಖಾನ್ ವಿಕೆಟ್ ಉಳಿಸಿಕೊಳ್ಳುವುದಕ್ಕೆ ಹೆಚ್ಚಿನ ಆದ್ಯತೆ ನೀಡಿದ ಕಾರಣ ರನ್ ಗತಿ ಸೂಪರ್ 5.22ಕ್ಕೆ ಕುಸಿಯಿತು