Wednesday, February 25, 2026
Wednesday, February 25, 2026
Home Blog Page 1632

ಗೆಲ್ಲದ ರಷ್ಯಕ್ಕೆ ಹೊಸ ಮಿಲಿಟರಿ ಸಾರಥಿಯಾಗಿ ಡ್ವೋರ್ನಿಕೋವ್ ನೇಮಕ

0

ಉಕ್ರೇನ್ ನಡುವಿನ ಯುದ್ಧದಲ್ಲಿ ರಷ್ಯಾ ಮಿಲಿಟರಿ ಕೀವ್ ನಗರವನ್ನು ಪೂರ್ಣವಾಗಿ ವಶಪಡಿಸಿಕೊಳ್ಳಲು ವಿಫಲವಾದ ಕಾರಣ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಸೈನ್ಯಕ್ಕೆ ಹೊಸ ಜನರಲ್ ನೇಮಕ ಮಾಡಿದ್ದಾರೆ. ಅಲೆಕ್ಸಾಂಡರ್ ಡ್ವೊರ್ನಿಕೋವ್ ಅವರನ್ನು ನೇಮಿಸಿದ್ದಾರೆ.

ರಷ್ಯಾದ ದಕ್ಷಿಣ ಮಿಲಿಟರಿ ಜಿಲ್ಲೆಯ ಕಮಾಂಡರ್ ಉಕ್ರೇನ್‌ನಲ್ಲಿ ಯುದ್ಧವನ್ನು ಮುನ್ನಡೆಸಲಿದ್ದಾರೆ.

ಡ್ವೊರ್ನಿಕೋವ್ ಅವರನ್ನು ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಯ ಥಿಯೇಟರ್ ಕಮಾಂಡರ್ ಎಂದು ಹೆಸರಿಸಲಾಗಿದೆ.

ಮೇ 9 ರಂದು ನಡೆಯಲಿರುವ ವಿಜಯ ದಿನ ಆಚರಣೆಯ ಮೊದಲು ಯುದ್ಧಭೂಮಿಯಲ್ಲಿ ಭಾರಿ ಪ್ರಗತಿಯೊಂದಿಗೆ ಪುಟಿನ್ ಅವರ ಮುಂದೆ ಕಾಣಿಸಿಕೊಳ್ಳುವ ಗುರಿಯನ್ನು ರಷ್ಯಾದ ಜನರಲ್ ಹೊಂದಿದ್ದಾರೆ ಎಂಬ ಊಹಾಪೋಹವಿದೆ.

ಮಿಲಿಟರಿ ವಿಶ್ಲೇಷಕರು ಮತ್ತು ಗುಪ್ತಚರ ಮೌಲ್ಯಮಾಪನಗಳೊಂದಿಗೆ ಪರಿಚಿತವಾಗಿರುವ ಯುಎಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಸಿಎನ್‌ಎನ್ ಈ ಮಾಹಿತಿಯನ್ನು ತಿಳಿಸಿದೆ.

ಮೇ 9 ವಿಜಯ ದಿನ ರಷ್ಯಾದಲ್ಲಿ ಅತ್ಯಂತ ಮಹತ್ವದ ದಿನವಾಗಿದೆ. ಏಕೆಂದರೆ ಇದು ಎರಡನೇ ಮಹಾಯುದ್ಧದಲ್ಲಿ ಜರ್ಮನಿಯ ಮೇಲೆ ಸೋವಿಯತ್ ಒಕ್ಕೂಟದ ವಿಜಯದ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ.

ಉತ್ತರ ಉಕ್ರೇನ್‌ನಿಂದ ರಷ್ಯಾ ನಿರ್ಗಮನಕ್ಕೆ ಮುಂದಾಗಿದೆ ಎಂಬುದಕ್ಕೆ ಪುರಾವೆಗಳನ್ನು ತೋರಿಸುತ್ತದೆ ಎಂದು ನಿನ್ನೆ ಇಂಗ್ಲೆಂಡ್ ಮಿಲಿಟರಿ ಗುಪ್ತಚರ ಮಾಹಿತಿ ತಿಳಿಸಿದೆ.

ರಷ್ಯಾದ 13 ವೈಮಾನಿಕ ಗುರಿಗಳನ್ನು ನಿನ್ನೆ ನಾಶಪಡಿಸಲಾಗಿದೆ ಎಂದು ಉಕ್ರೇನ್‌ನ ವಾಯುಪಡೆಯು ಮಾಹಿತಿ ನೀಡಿದೆ.

ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ನಿನ್ನೆ ಕೈವ್‌ನಲ್ಲಿ ಭೇಟಿಯಾಗಿ, ಉಕ್ರೇನಿಯನ್ ಜನರೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಉಕ್ರೇನ್‌ಗೆ ಪ್ರಯಾಣಿಸಿದ್ದೇನೆ ಎಂದು ಹೇಳಿದ್ದಾರೆ.

ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರ ಸಾವು

0

ಇಂದು ಮಧ್ಯ ಕಾಶ್ಮೀರದ ಶ್ರೀನಗರ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ.

ಅವರಲ್ಲಿ ಒಬ್ಬರು ಇತ್ತೀಚೆಗೆ ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.

ಇತ್ತೀಚೆಗೆ ಸಿಆರ್‌ಪಿಎಫ್ ಸಿಬ್ಬಂದಿಯ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರಲ್ಲಿ ಒಬ್ಬರು, ಶ್ರೀನಗರ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟರು. ಮತ್ತು ಇನ್ನೊಬ್ಬರು ಸಿಕ್ಕಿಬಿದ್ದಿದ್ದಾರೆ. ಎನ್‌ಕೌಂಟರ್ ನಡೆಯುತ್ತಿದೆ.
ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕಾಶ್ಮೀರ ವಲಯದ ಇನ್‌ಸ್ಪೆಕ್ಟರ್ ಜನರಲ್ ಪೊಲೀಸ್ ಅವರನ್ನು ಉಲ್ಲೇಖಿಸಿ ವಿಜಯ್ ಕುಮಾರ್ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಪೊಲೀಸರು ಮತ್ತು ಭದ್ರತಾ ಪಡೆಗಳ ಜಂಟಿ ತಂಡವು ಪ್ರದೇಶವನ್ನು ಸುತ್ತುವರೆದಿದೆ. ಹಾಗೂ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಗುಂಡಿನ ಚಕಮಕಿ ನಡೆದಿದೆ.

ವಸತಿ ರಹಿತ ಬಡಜನರಿಗೆ ಸರ್ಕಾರದಿಂದ 3 ಲಕ್ಷ ಮನೆ ನಿರ್ಮಾಣ- ಸೋಮಣ್ಣ

0

ವಸತಿ ರಹಿತ ಬಡಜನರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ರಾಜ್ಯ ಸರಕಾರ 3 ಲಕ್ಷ ಮನೆಗಳನ್ನು ನಿರ್ಮಿಸಲಾಗುತ್ತದೆ ಎಂದು ವಸತಿ ಸಚಿವ ವಿ. ಸೋಮಣ್ಣ ಅವರು ತಿಳಿಸಿದ್ದಾರೆ.

ಬೆಂಗಳೂರಿನ ವಿವಿ ಪುರಂನಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊಳಚೆ ಪ್ರದೇಶ ಅಭಿವೃದ್ದಿ ಮಂಡಳಿಯಿಂದ 1.8 ಲಕ್ಷ ಮನೆಗಳು ಮತ್ತು ರಾಜೀವ್‌ ಗಾಂಧೀ ಆವಾಸ್‌ ವಸತಿ ಯೋಜನೆಯಡಿ 1.20 ಲಕ್ಷ ಮನೆಗಳು ಸೇರಿದಂತೆ ಒಟ್ಟು 3 ಲಕ್ಷ ಮನೆ ನಿರ್ಮಿಸಿ ವಸತಿ ರಹಿತ ಬಡಜನರಿಗೆ ವಿತರಿಸಲಾಗುತ್ತದೆ ಎಂದು ಹೇಳಿದ್ದಾರೆ.

ನಗರ ಪ್ರದೇಶದಲ್ಲಿರುವ ಬಡವರಿಗೆ ಈಗಾಗಲೇ 1.20 ಲಕ್ಷ ಮನೆಗಳನ್ನು ಹಂಚಿಕೆ ಮಾಡಲಾಗಿದೆ ಮುಂದಿನ ದಿನಗಳಲ್ಲಿ 1.8 ಲಕ್ಷ ಮನೆಗಳನ್ನು ಸೂರಿಲ್ಲದ ಬಡವರಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ವಿ. ಸೋಮಣ್ಣ ಅವರು ಹೇಳಿದ್ದಾರೆ.

ಯುದ್ಧದ ಕಾರಣ ಬೇರ್ಪಟ್ಟಿದ್ದ ಶ್ವಾನ ಮತ್ತೆ ಮಾಲೀಕನಿಗೆ ಸಿಕ್ಕಾಗ…

0

ಉಕ್ರೇನಿನ ಮೇಲೆ ರಷ್ಯಾ ದಾಳಿ ಮಾಡಲು ಆರಂಭಿಸಿ ಸುಮಾರು ಒಂದುವರೆ ತಿಂಗಳೇ ಕಳೆದಿದೆ. ಈ ದಾಳಿಯಲ್ಲಿ ಲಕ್ಷಾಂತರ ಜನರು ತಮ್ಮ ಪ್ರಾಣವನ್ನು ಬಿಟ್ಟಿದ್ದಾರೆ. ಇನ್ನು ಹಲವಾರು ಮಂದಿ ಗಾಯಗೊಂಡಿದ್ದಾರೆ. ಅನೇಕರ ಕುಟುಂಬಗಳು ಚೂರುಚೂರಾಗಿದೆ. ಇದರ ಜೊತೆಗೆ ತಾವು ಪ್ರೀತಿಯಿಂದ ಸಾಕಿರುವ ಸಾಕುಪ್ರಾಣಿಗಳಿಂದ ಕೂಡ ದೂರವಾಗಿದ್ದಾರೆ.

ಉಕ್ರೇನಿನ ಯುದ್ಧದಿಂದ ಹಾನಿಗೊಳಗಾಗಿರುವ ಬುಚಾದಲ್ಲಿ ಸುಮಾರು ದಿನಗಳಿಂದ ತನ್ನ ಮಾಲೀಕರಿಂದ ಬೇರ್ಪಟ್ಟಿದ್ದ ಶ್ವಾನ ಮತ್ತೆ ಮಾಲೀಕರ ಮಡಿಲು ಸೇರಿದೆ. ಉಕ್ರೇನಿನ ಒಬ್ಬ ವ್ಯಕ್ತಿ ತನ್ನ ಮುದ್ದಿನ ನಾಯಿಯನ್ನು ಯುದ್ಧ ಸಂದರ್ಭದಲ್ಲಿ ತನ್ನಿಂದ ದೂರವಾಗಿದ್ದ ಶ್ವಾನ ತನ್ನ ಮಡಿಲ ಸೇರಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನೆಸ್ಸಿ ಎಂಬ ಬಿಳಿ ಹಾಗೂ ಕಪ್ಪು ಬಣ್ಣದ ಶ್ವಾನ ತನ್ನ ಮಾಲೀಕರನ್ನು ನೋಡಿ ಆತನೇ ಕಡೆಗೆ ಓಡಿಬರುವ ವಿಡಿಯೋ ವೈರಲ್ ಆಗಿದೆ. ತನ್ನ ಯಜಮಾನನ್ನು ನೋಡಿ ಸಂತೋಷದಿಂದ ಆತನ ಕಡೆಗೆ ನೆಗೆದು ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದೆ. ಹಾಗೆ ಮಾಲಿಕನು ಕೂಡ ತನ್ನ ಮುದ್ದಿನ ಶ್ವಾನವನ್ನು ನೋಡುತ್ತಿದ್ದ ಹಾಗೆಯೇ ಅದನ್ನು ಬಿಗಿದಪ್ಪಿ, ನಿರಂತರವಾಗಿ ಚುಂಬನವನ್ನು ನೀಡಿದ್ದಾನೆ.

ತನ್ನ ನೆಚ್ಚಿನ ನಾಯಿಯನ್ನು ಮತ್ತೆ ತನಗೆ ಹಿಂದಿರುಗಿಸಿದ ಕ್ಕಾಗಿ ಸೈನಿಕರಿಗೆ ಧನ್ಯವಾದಗಳನ್ನು ಕೂಡ ತಿಳಿಸಿದ್ದಾನೆ.

ವಿಪಕ್ಷಗಳ‌ ಗೂಗ್ಲಿಗೆ ಪ್ರಧಾನಿ ಇಮ್ರಾನ್ ಬೌಲ್ಡ್

0

ಹಲವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾದ ಪಾಕಿಸ್ತಾನದ ರಾಜಕೀಯ ಈಗ ಒಂದು ಹಂತ ತಲುಪಿದೆ. ಪ್ರಧಾನಿ ಇಮ್ರಾನ್ ಖಾನ್ ಅವರು ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸಲು ವಿಫಲರಾಗಿದ್ದಾರೆ.ಮತ್ತು ಪ್ರಧಾನಿ ಪಟ್ಟವನ್ನು ತ್ಯಜಿಸಿದ್ದಾರೆ.

ಮಧ್ಯರಾತ್ರಿ ನಡೆದ ವಿಶ್ವಾಸಮತ ಮಂಡನೆಯಲ್ಲಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ 174 ಸದಸ್ಯರು ಮತ ಹಾಕಿದರು.

ಪ್ರಧಾನಿ ಇಮ್ರಾನ್ ಖಾನ್ ಮತದಾನದ ಸಮಯದಲ್ಲಿ ಗೈರುಹಾಜರಾಗಲು ನಿರ್ಧರಿಸಿದರೆ, ಅವರ ಪಕ್ಷದ ಶಾಸಕರು ವಾಕ್‌ಔಟ್ ನಡೆಸಿದರು. 342 ಸದಸ್ಯರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ 174 ಶಾಸಕರು ಮತ ಚಲಾಯಿಸುವುದರೊಂದಿಗೆ ಅಂತಿಮವಾಗಿ ಅವಿಶ್ವಾಸ ಮತವನ್ನು ಅಂಗೀಕರಿಸಲಾಯಿತು.

ಸುಪ್ರೀಂ ಕೋರ್ಟ್ ಆದೇಶದಂತೆ ನಿನ್ನೆ ಇಮ್ರಾನ್ ಖಾನ್ ಅವಿಶ್ವಾಸ ಗೊತ್ತುವಳಿ ಎದುರಿಸಬೇಕಿತ್ತು. ಆದರೆ ಸ್ಪೀಕರ್ ನೆರವಿನಿಂದ ಇಡೀ ದಿನ , ರಾತ್ರಿಯ ತನಕವೂ ಇಮ್ರಾನ್ ಮತದಾನ ನಡೆಸಲಿಲ್ಲ.

ಕಲಾಪ ಆರಂಭವಾದಾಗಿನಿಂದಲೂ ವಿಪಕ್ಷಗಳ ನಾಯಕರು, ಸರ್ವೋಚ್ಚ ನ್ಯಾಯಾಲಯದ ಆದೇಶದ ಅನ್ವಯ ಕೂಡಲೇ ಅವಿಶ್ವಾಸ ಗೊತ್ತುವಳಿ ಪರ ಮತದಾನ ನಡೆಸಿ ಎಂದು ಸ್ಪೀಕರ್‌ ಖೈಸರ್‌ ಅವರನ್ನು ಒತ್ತಾಯಿಸತೊಡಗಿದರು. ವಿಪಕ್ಷ ನಾಯಕ ಶೆಹಬಾಜ್‌ ಷರೀಫ್ ಅವರು ಸಂಸತ್‌ನಲ್ಲಿ ಮಾತನಾಡುತ್ತಿದ್ದಂತೆ ಆಡಳಿತಾರೂಢ ಪಕ್ಷದ ಸಂಸದರು ಗದ್ದಲವೆಬ್ಬಿಸಿದರು ಎಂಬ ನೆಪ ಹೇಳಿ ಸ್ಪೀಕರ್‌ ಕಲಾಪವನ್ನು ಮುಂದೂಡಿದರು.

ಅನಂತರ ಸದನ ಸಮಾವೇಶಗೊಂಡಾಗ ರಮ್ಜಾನ್‌ ಇರುವ ಕಾರಣ ಇಫ್ತಾರ್‌ ಬಳಿಕ ಮತದಾನ ನಡೆಸುತ್ತೇನೆ ಎಂದು ಭರವಸೆ ನೀಡಿ, ಕಲಾಪವನ್ನು ಮುಂದೆ ಹಾಕಿದರು. ಇಷ್ಟೆಲ್ಲ ಆಗುತ್ತಿದ್ದರೂ ಇಮ್ರಾನ್‌ ಖಾನ್‌ ಮಾತ್ರ ಸದನದಲ್ಲಿ ಉಪಸ್ಥಿತರಿರಲಿಲ್ಲ. ಆದರೆ ಈ ಬೆಳವಣಿಗೆಗಳ ನಡುವೆಯೇ ಅವರು ರಾತ್ರಿ 9ಕ್ಕೆ ಸಂಪುಟ ಸಭೆ ಕರೆದರು.

ಇಫ್ತಾರ್‌ ಮುಗಿಯುತ್ತಿದ್ದಂತೆ ಮತದಾನ ಆರಂಭವಾಗುತ್ತದೆ ಎಂದು ನಂಬಿದ್ದ ವಿಪಕ್ಷಗಳಿಗೆ ಮತ್ತೆ ನಿರಾಶೆಯಾಯಿತು. ಸ್ಪೀಕರ್‌ ಮತ್ತೆ ಕಲಾಪವನ್ನು ಮುಂದೂಡಿದರು. ಹೀಗಾಗಿ ರಾತ್ರಿಯಿಡೀ ಪಾಕ್‌ ಸಂಸತ್ತಿನಲ್ಲಿ ಹೈಡ್ರಾಮಾ ಸೃಷ್ಟಿಯಾಗುವ ಲಕ್ಷಣ ಗೋಚರಿಸಿತು.

ನಂತರ ಪ್ರಧಾನಿ ಇಮ್ರಾನ್ ಖಾನ್ ಮತದಾನದ ಸಮಯದಲ್ಲಿ ಗೈರುಹಾಜರಾಗಲು ನಿರ್ಧರಿಸಿದರೆ, ಅವರ ಪಕ್ಷದ ಶಾಸಕರು ವಾಕ್‌ಔಟ್ ನಡೆಸಿದರು. 342 ಸದಸ್ಯರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ 174 ಶಾಸಕರು ಮತ ಚಲಾಯಿಸುವುದರೊಂದಿಗೆ ಅಂತಿಮವಾಗಿ ಅವಿಶ್ವಾಸ ಮತವನ್ನು ಅಂಗೀಕರಿಸಲಾಯಿತು.

ಸುಪ್ರೀಂ ಕೋರ್ಟ್ ಆದೇಶದಂತೆ ಶನಿವಾರ ಇಮ್ರಾನ್ ಖಾನ್ ಅವಿಶ್ವಾಸ ಗೊತ್ತುವಳಿ ಎದುರಿಸಬೇಕತ್ತು. ಆದರೆ ಸ್ಪೀಕರ್ ನೆರವಿನಿಂದ ಇಡೀ ದಿನ ಕಣ್ಣಾಮುಚ್ಚಾಲೆಯಾಡಿದ ಇಮ್ರಾನ್ ರಾತ್ರಿಯ ತನಕವೂ ಮತದಾನ ನಡೆಸಲಿಲ್ಲ.

ಕಲಾಪ ಆರಂಭವಾದಾಗಿನಿಂದಲೂ ವಿಪಕ್ಷಗಳ ನಾಯಕರು, ಸರ್ವೋಚ್ಚ ನ್ಯಾಯಾಲಯದ ಆದೇಶದ ಅನ್ವಯ ಕೂಡಲೇ ಅವಿಶ್ವಾಸ ಗೊತ್ತುವಳಿ ಪರ ಮತದಾನ ನಡೆಸಿ ಎಂದು ಸ್ಪೀಕರ್‌ ಖೈಸರ್‌ ಅವರನ್ನು ಒತ್ತಾಯಿಸತೊಡಗಿದರು. ವಿಪಕ್ಷ ನಾಯಕ ಶೆಹಬಾಜ್‌ ಷರೀಫ್ ಅವರು ಸಂಸತ್‌ನಲ್ಲಿ ಮಾತನಾಡುತ್ತಿದ್ದಂತೆ ಆಡಳಿತಾರೂಢ ಪಕ್ಷದ ಸಂಸದರು ಗದ್ದಲವೆಬ್ಬಿಸಿದರು ಎಂಬ ನೆಪ ಹೇಳಿ ಸ್ಪೀಕರ್‌ ಕಲಾಪವನ್ನು ಮುಂದೂಡಿದರು.

ದೇಶದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಇಳಿಕೆ

0

ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಕಳೆದ 24 ಗಂಟೆಗಗಳಲ್ಲಿ 1054 ಮಂದಿಗೆ ಹೊಸದಾಗಿ ಸೋಂಕು ದೃಢಪ್ಟಟಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಗಳಲ್ಲಿ 1054 ಮಂದಿಗೆ ಹೊಸದಾಗಿ ಸೋಂಕು ದೃಢಪ್ಟಟಿದೆ.

ಕಳೆದ 24 ಗಂಟೆಗಳಲ್ಲಿ 29 ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 1054 ಹೊಸ ಕೊರೋನಾ ಪ್ರಕರಣಗಳು, 1258 ಚೇತರಿಕೆಗಳು ಮತ್ತು 29 ಸಾವುಗಳು ವರದಿಯಾಗಿವೆ.

ಸಕ್ರಿಯ ಪ್ರಕರಣಗಳು ಸಂಖ್ಯೆ 11,132.
ಸಾವಿನ ಸಂಖ್ಯೆ 5,21,685.
ಒಟ್ಟು 4,25,024,54. ಈವರೆಗೆ 1,85,70,71,655 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.

ಶ್ರೀರಾಮ ನವಮಿಯನ್ನ ಭಕ್ತಿಯಿಂದ ಆಚರಿಸೋಣ-ಎಚ್. ಡಿ.ಕೆ

0

ನಾಡಿನ ಸಮಸ್ತ ಜನತೆಯಲ್ಲಿ ನನ್ನ ವಿನಮ್ರ ಮನವಿ. ರಾಮನವಮಿ ಹಬ್ಬವನ್ನು ಭಕ್ತಿ,ಶ್ರದ್ಧೆಯಿಂದ ಆಚರಿಸೋಣ. ಆದರೆ, ನಮ್ಮ ರಾಮಸ್ಮರಣೆ ಇನ್ನೊಬ್ಬರಿಗೆ ನೋವುಂಟು ಮಾಡದಂತೆ ಎಚ್ಚರ ವಹಿಸೋಣ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಶ್ರೀರಾಮಚಂದ್ರ ಮಹಾಪ್ರಭು ನಮ್ಮೆಲ್ಲರ ಆರಾಧ್ಯ ದೈವ. ಅಷ್ಟೇ ಅಲ್ಲ ಮನುಕುಲಕ್ಕೆ ಆದರ್ಶ, ತ್ಯಾಗ, ಸರಳತೆ, ಶಾಂತಿ, ಸಹನೆ, ಮೌಲ್ಯಗಳ ದಿವ್ಯಬೆಳಕು ತೋರಿದ ನಮ್ಮೊಳಗಿನ ದೈವ. ರಾಮರಾಜ್ಯವು ಸರ್ವ ಜನಾಂಗದ ಶಾಂತಿಯ ತೋಟವಾಗಿತ್ತು. ರಾಮನ ಹೆಸರಿನಲ್ಲಿ ಶೋಭಾಯಾತ್ರೆ ನಡೆಸಲು ನನ್ನದೇನೂ ಅಭ್ಯಂತರ ಇಲ್ಲ. ಅದಕ್ಕೆ ನನ್ನದೂ ಬೆಂಬಲ ಇದೆ. ಶೋಭಾಯಾತ್ರೆ ಹೆಸರಿನಲ್ಲಿ ಇನ್ನೊಂದು ಸಮುದಾಯ ವಾಸ ಮಾಡುವ ಬೀದಿಗಳಲ್ಲಿ ಅಥವಾ ಅವರ ಪ್ರಾರ್ಥನಾ ಮಂದಿರಗಳ ಮುಂದೆ ಡಿಜೆ ಸೆಟ್ಟುಗಳನ್ನು ಹಾಕಿಕೊಂಡು 15-20 ನಿಮಿಷ ಕಾಲ ಕುಣಿಯುವುದು, ಕೇಕೆ ಹಾಕುವುದು ಇತ್ಯಾದಿ ಬೇಡ. ಇದರಿಂದ ಶಾಂತಿ ಕದಡುತ್ತದೆ. ಹೀಗೆ ಆಗುವುದು ಬೇಡ ಎಂದು ಮಾಜಿ ಮುಖ್ಯಮಂತ್ರಿ ಕುಮರಸ್ವಾಮಿ ಅವರು ತಿಳಿಸಿದ್ದಾರೆ.

ಒಂದು ಸಮುದಾಯದ ಜನರು ಈಗ ಉಪವಾಸ ಆಚರಣೆಯಲ್ಲಿದ್ದಾರೆ. ಈ ಸಮಯದಲ್ಲಿ ಅವರ ಬಡಾವಣೆಗಳಿಗೆ ಹೋಗಿ ಶಾಂತಿಗೆ ಭಂಗ ತರುವುದು ಬೇಡ. ಅದಕ್ಕೆ ಅವಕಾಶವನ್ನು ಕೊಡಬಾರದು ಎಂದು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ನನ್ನ ಮನವಿ. ಶೋಭಾಯಾತ್ರೆಯನ್ನು ಹಿಂದುಗಳ ವಾಸ ಮಾಡುವ ಬಡಾವಣೆ, ಬೀದಿಗಳಲ್ಲಿ ಮಾಡಿ. ಅಲ್ಲೆಲ್ಲ ಅರ್ಧ ಗಂಟೆ ಸಾಲದಿದ್ದರೆ, ಒಂದು ಗಂಟೆ ಮಾಡಿ. ಇದಕ್ಕೆ ನನ್ನ ಬೆಂಬಲವಿದೆ. ಎಲ್ಲರೂ ರಾಮಸ್ಮರಣೆ ಮಾಡೋಣ, ಪ್ರತಿಯೊಬ್ಬರ ಹೃದಯದಲ್ಲಿ ಆ ರಾಮನು ಚಿರಸ್ಥಾಯಿಯಾಗಿ ನಿಲ್ಲಬೇಕು ಎನ್ನುವುದೇ ನನ್ನ ಆಶಯ ಎಂದು ಟ್ವೀಟ್ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ರಾಜ್ಯದಲ್ಲಿ ಮಳೆಯ ಮುನ್ಸೂಚನೆ

0

ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಮಿಳುನಾಡು ಕರಾವಳಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪ್ರಭಾವದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ.ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಸೃಷ್ಟಿಸಿದೆ.

ಬೆಂಗಳೂರು, ಮಂಗಳೂರು, ಮಂಡ್ಯ, ಮೈಸೂರು, ರಾಮನಗರ, ಹಾಸನ, ಚಾಮರಾಜನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಮುಂಜಾನೆ ಇದ್ದು, ಮಧ್ಯಾಹ್ನದ ಸಮಯಕ್ಕೆ ಬಿಸಿಲಿನ ತಾಪ ಏರಿಕೆಯಾಗಲಿದೆ.

ಶಿವಮೊಗ್ಗ, ಬೆಳಗಾವಿ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಮಳೆಯಾಗಲಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಭಾನುವಾರ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಚಂದ್ರು ಹತ್ಯೆ ಪ್ರಕರಣ ಸಿಐಡಿಯಿಂದ ತನಿಖೆ- ಬಸವರಾಜ ಬೊಮ್ಮಾಯಿ

0

ಸಾಕಷ್ಟು ವಿವಾದಕ್ಕೆ ಕಾರಣವಾಗಿರುವ ಚಂದ್ರು ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ಯಾರ ಹೇಳಿಕೆಯೂ ಮುಖ್ಯವಲ್ಲ.ಸತ್ಯ ಹೊರಬರಬೇಕು. ಅದು ಬಹಳ ಮುಖ್ಯ. ಈ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಮತ್ತು ಡಿಐಜಿ ಜೊತೆ ಚರ್ಚೆ ಮಾಡಿದ್ದೇನೆ. ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಲು ನಿರ್ಧರಿಸಿದ್ದೇವೆ. ನಿಸ್ಪಕ್ಷವಾದ ತನಿಖೆಯಾಗಲಿ, ಸತ್ಯ ಹೊರಬರಲಿ ಎಂದು ಹೇಳಿದ್ದಾರೆ.

ಮೂರು ತಂಡದಲ್ಲಿ ರಾಜ್ಯ ಪ್ರವಾಸ ಮಾಡುತ್ತಿದ್ದೇವೆ. ಕಾರ್ಯಕರ್ತರ, ಮುಖಂಡರ ಜೊತೆ ಸಭೆ ಮಾಡುತ್ತೇವೆ. ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಅರುಣ್ ಸಿಂಗ್ ಜೊತೆಗಿರುತ್ತಾರೆ ಎಂದು ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಸದ್ಗುಣಗಳ ಗಣಿ ಶ್ರೀರಾಮಚಂದ್ರ

0

ಶ್ರೀರಾಮನವಮಿಯಂದು ಶ್ರೀರಾಮಚಂದ್ರನು
ಭೂಮಿಯಲ್ಲಿ ಅವತಾರ ಮಾಡಿದ ದಿನ.
ಶ್ರೀವಿಷ್ಣುವಿನ ದಶಾವತಾರದಲ್ಲಿ ಏಳನೇ ಅವತಾರವೇಶ್ರೀರಾಮಾವತಾರ.ಶ್ರೀರಾಮಚಂದ್ರನು
ಮಹಾವಿಷ್ಣುವಿನ ಅವತಾರವಾದರೂ ತನ್ನ ಆದರ್ಶ
ನಡೆಯಿಂದ ಭೂಮಿಯಲ್ಲಿಮಹಾಪುರುಷನಾದನು.
ಶ್ರೀರಾಮನುಒಬ್ಬಆದರ್ಶಪುತ್ರ,ಆದರ್ಶಮಿತ್ರ,
ಆದರ್ಶ ಬಂಧು,ಪ್ರಜೆಗಳ ಅಭ್ಯುದಯವನ್ನು ಬಯಸಿದ ಆದರ್ಶರಾಜ.
ಇಡೀ ಮನುಷ್ಯ ಕುಲಕ್ಕೆ ಆದರ್ಶ ಪುರುಷ ಶ್ರೀರಾಮಚಂದ್ರ.ಅವನ ಜೀವನ ಮಾರ್ಗ ನಡೆದ ಹಾದಿ,ಆತನ ಗುಣ ಇಂದಿಗೂ ಆದರ್ಶನೀಯ.
ಭಗವಂತನಾದರೂ ಸ್ವತಃ ಮನುಷ್ಯನಾಗಿ ಭೂಮಿಯಲ್ಲಿ ಜನ್ಮ ತಾಳಿ ಪ್ರತಿಯೊಬ್ಬರಿಗೂ ಜೀವನದ ಅತ್ಯುನ್ನತ ಮಾರ್ಗವನ್ನು ತೋರಿಸಿದ
ಮಹಾ ಪುರುಷ ಶ್ರೀರಾಮ.
ಅಯೋಧ್ಯೆಯ ರಾಜನಾಗಿದ್ದ ದಶರಥನು ತನ್ನ
ಹಿರಿಯ ಮಗನಾಗಿದ್ದ ರಾಮನಿಗೆ ರಾಜ್ಯಾಭಿಷೇಕವನ್ನು ಮಾಡಬೇಕೆಂದು ಅರಮನೆಯೆಲ್ಲಾ ಸಂತೋಷದಿಂದ ಮುಳುಗಿದ್ದಾಗ ಹಠಾತ್ತಾಗಿ ರಾಮನಿಗೆ ಪಟ್ಟಾಭಿಷೇಕದ ಬದಲು ವನವಾಸಕ್ಕೆ ಹೋಗಬೇಕಾದ ಪರಿಸ್ಥಿತಿ ಎದುರಾಗುತ್ತದೆ.ಇದನ್ನು ರಾಮನು ಬಹಳಸಮಚಿತ್ತದಿಂದ ಸಂತೋಷದಿಂದ
ಸ್ವೀಕರಿಸುತ್ತಾನೆ.ರಾಮನು ವನವಾಸಕ್ಕೆ ಹೋಗಲು
ಕಾರಣಳಾದವಳು ದಶರಥನ ರಾಣಿ ಕೈಕೇಯಿ.
ಕೈಕೇಯಿ ತನ್ನನ್ನು ವನವಾಸಕ್ಕೆ ಕಳಿಸುವಂತೆ ಮಾಡಿದರೂ ರಾಮನಿಗೆ ಅವಳ ಮೇಲಿನ ಪ್ರೀತಿ ಕಿಂಚಿತ್ತೂ ಬದಲಾಗುವುದಿಲ್ಲ.
ಇತ್ತ ರಾಮನು ವನವಾಸಕ್ಕೆ ಹೋದಮೇಲೆ,ಹಿರಿಯ
ಮಗನ ಅಗಲುವಿಕೆಯನ್ನು ಸಹಿಸಿಕೊಳ್ಳಲಾಗದೇ
ದಶರಥ ರಾಜನು ಮರಣ ಹೊಂದುತ್ತಾನೆ.
ಭರತ,ಶತೃಘ್ನರು ತಂದೆಯ ದಿನ ಕರ್ಮಾದಿ ಕಾರ್ಯಕ್ರಮಗಳು ಮುಗಿದ ಮೇಲೆ,ರಾಮನನ್ನು
ಒಲಿಸಿ ಅಯೋಧ್ಯೆಯ ರಾಜ್ಯಾಭಿಷೇಕಕ್ಕೆ ಕರೆದುಕೊಂಡು ಬರುವ ಧೃಡ ನಿರ್ಧಾರಮಾಡಿ
ಅವರಿದ್ದ ಚಿತ್ರಕೂಟದ ಬಿಡಾರಕ್ಕೆ ಬರುತ್ತಾರೆ.ಇವರು ಬರುತ್ತಿರುವುದನ್ನು ದೂರದಿಂದ ನೋಡಿದ ಲಕ್ಷ್ಮಣನು ಭರತನು ರಾಮನನ್ನು
ಹೆದರಿಸಲು ಬರುತ್ತಿರ ಬಹುದೆಂದು ಊಹಿಸಿ
ರಾಮನ ಹತ್ತಿರ ಹೇಳುತ್ತಾನೆ.ರಾಮನು ತಾವು
ವನವಾಸಕ್ಕೆ ಬರುವಾಗ ಭರತ ಶತೃಘ್ನರು ಅಯೋಧ್ಯೆಯಲ್ಲಿ ಇಲ್ಲದಿದ್ದುದರಿಂದ ತಮ್ಮನ್ನು
ಮಾತನಾಡಿಸಲಿಕ್ಕೆ ಬರುತ್ತಿದ್ದಾರೆ ,ಇದರಲ್ಲಿ ಬೇರೆ
ಏನನ್ನೂ ಯೋಚಿಸುವುದು ಬೇಡ ಎಂದು ಲಕ್ಷ್ಮಣನಿಗೆ ಸಮಾಧಾನ ಮಾಡುತ್ತಾನೆ.ಹೀಗೆ ತನ್ನ ತಮ್ಮಂದಿರಲ್ಲಿ ಸಹೋದರ ವಾತ್ಸಲ್ಯವನ್ನು ಯಾವಾಗಲೂ ಹೊಂದಿದ್ದವನು ಶ್ರೀರಾಮ.


ಹನುಮಂತನಿಂದ ಪರಿಚಯವಾದ ಸುಗ್ರೀವನಿಗೆ
ತನ್ನ ಅಣ್ಣನಾದ ವಾಲಿಯನ್ನು ಸಂಹಾರ ಮಾಡಿ
ಕಿಷ್ಂಧೆಯ ರಾಜನನ್ನಾಗಿ ಮಾಡುತ್ತಾನೆ.ಹೀಗೆ
ಸ್ನೇಹಬಯಸಿ ಬಂದು ಸಹಾಯ ಅಪೇಕ್ಷಿಸಿದವರಿಗೆ
ಸಹಾಯ ಹಸ್ತ ಚಾಚಿದವನು ಶ್ರೀರಾಮ.
ರಾವಣನ ತಮ್ಮ ವಿಭೀಷಣನು ಇವನ ಆಶ್ರಯ
ಬಯಸಿ ಬಂದು ಮೊರೆಹೋದಾಗ ,ಶತೃಪಕ್ಷದಿಂದ
ಬಂದವನು ಎಂದು ನೋಡದೆ ಇವನೂ ತನ್ನ ನಿಜವಾದ ಭಕ್ತನೆಂದು ತಿಳಿದು ಅವನಿಗೆ ಆಶ್ರಯ
ಕೊಟ್ಟವನು ಸ್ನೇಹಮಯಿ ಶ್ರೀರಾಮ.ಹೀಗೆ ಶ್ರೀರಾಮನ ಆದರ್ಶನಡೆಗಳನ್ನು ರಾಮಾಯಣದಲ್ಲಿ ನಾವು ಕಾಣುತ್ತೇವೆ.
ಶ್ರೀರಾಮನವಮಿಯಂದು ನಾವು ಶ್ರೀರಾಮನ ಆದರ್ಶಗಳನ್ನು ಅಳವಡಿಸಿಕೊಳ್ಳಲು ಸಂಕಲ್ಪಿಸಿ
ಜೀವನದಲ್ಲಿ ಪಾಲಿಸಿದರೆ ರಾಮನವಮಿ ಆಚರಣೆ
ಅರ್ಥಪೂರ್ಣವಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.