Thursday, February 26, 2026
Thursday, February 26, 2026
Home Blog Page 1623

ಇದುವರೆಗೆ ಯುದ್ಧದಲ್ಲಿ ಸು.3000 ಉಕ್ರೇನ್ ಸೈನಿಕರ ಸಾವು-ಝೆಲೆನ್ಸ್ಕಿ

0

ರಷ್ಯಾದೊಂದಿಗೆ ಇದುವರೆಗಿನ ಯುದ್ಧದಲ್ಲಿ ಸುಮಾರು 2,500 ರಿಂದ 3,000 ಉಕ್ರೇನಿಯನ್ ಸೈನಿಕರು ಸಾವನ್ನಪ್ಪಿದ್ದಾರೆ. ಸುಮಾರು 10,000 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಅವರು ತಿಳಿಸಿದ್ದಾರೆ.

ಯುದ್ಧದಲ್ಲಿ 19,000 ರಿಂದ 20,000 ರಷ್ಯಾದ ಸೈನಿಕರು ಸಾವನ್ನಪ್ಪಿದ್ದಾರೆ. ಇನ್ನೂ, ಯುದ್ಧವು ಈಗ ಎಂಟನೇ ವಾರಕ್ಕೆ ಕಾಲಿಟ್ಟಿದೆ. ಯುದ್ಧದಲ್ಲಿ ಕಳೆದ ತಿಂಗಳು 1,351 ರಷ್ಯಾದ ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು 3,825 ಮಂದಿ ಗಾಯಗೊಂಡಿದ್ದಾರೆ ಎಂದು ಮಾಸ್ಕೋ ಹೇಳಿದೆ.

ರಾಯಿಟರ್ಸ್‌ಗೆ ಎರಡೂ ಕಡೆಯ ಸಾವಿನ ಸಂಖ್ಯೆಯನ್ನು ಸಂಪೂರ್ಣವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.

ರಷ್ಯದ ಭೀಕರ ದಾಳಿಗೆ ಉಕ್ರೇನ್ ಸೇನಾ ಸಾಧನ ಕಾರ್ಖಾನೆ ಧ್ವಂಸ

0

ರಷ್ಯಾ ಪಡೆಗಳು ಸಮುದ್ರದಿಂದ ಉಡಾಯಿಸುವ ದೀರ್ಘ ಶ್ರೇಣಿಯ ಕಲಿಬ್‌ ಕ್ಷಿಪಣಿಗಳನ್ನು ಬಳಸಿ ಕೀವ್‌ ಹೊರ ವಲಯದ ವಿಶ್ನೆವೆ ಪಟ್ಟಣದಲ್ಲಿನ ಉಕ್ರೇನ್‌ ಸೇನಾ ಸಾಧನಗಳ ಕಾರ್ಖಾನೆಯನ್ನು ಧ್ವಂಸಗೊಳಿಸಿವೆ ಎಂದು ತಿಳಿದುಬಂದಿದೆ.

ವಿಜಾರ್ ಕಂಪನಿಯ ರಕ್ಷಣಾ ಉಪಕರಣ ತಯಾರಿಕೆಯ ಸಂಕೀರ್ಣದಲ್ಲಿರುವ ಕಾರ್ಖಾನೆ ಧ್ವಂಸವಾಗಿದೆ.

ವಿಮಾನ ಹೊಡೆದುರುಳಿಸುವ ದೀರ್ಘ ಶ್ರೇಣಿಯ ಮತ್ತು ಮಧ್ಯಮ ಶ್ರೇಣಿಯ ಕ್ಷಿಪಣಿ ವ್ಯವಸ್ಥೆಗಳ ಉತ್ಪಾದನೆ ಮತ್ತು ದುರಸ್ತಿ ಕಾರ್ಯಾಗಾರ ಹಾಗೂ ಹಡಗು ಹೊಡೆದುರುಳಿಸುವ ಕ್ಷಿಪಣಿಗಳನ್ನು ನಾಶಪಡಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ.

‘ಹಾರ್ಕಿವ್ ನಗರ ಸಮೀಪದ ಇಝಿಯುಮ್‌ಸ್ಕೊ ಗ್ರಾಮದಲ್ಲಿ ನಡೆಸಿದ ಕ್ಷಿಪಣಿ ದಾಳಿಗೆ ಪೋಲೆಂಡ್‌ನ 30 ಬಾಡಿಗೆ ಸೈನಿಕರು ಹತರಾಗಿದ್ದಾರೆಎಂದು ಪ್ರತ್ಯೇಕ ಹೇಳಿಕೆಯಲ್ಲಿ ಅದು ತಿಳಿಸಿದೆ.
ಗಡಿ ಪಟ್ಟಣಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿರುವುದಕ್ಕೆ ಮತ್ತು ‘ಮಾಸ್ಕವಾ’ ನೌಕೆ ಮುಳುಗಿಸಿದಕ್ಕೆ ಪ್ರತೀಕಾರವಾಗಿ ಕೀವ್‌ ಮೇಲೆ ಕ್ಷಿಪಣಿ ದಾಳಿ ತೀವ್ರಗೊಳಿಸುವುದಾಗಿ ರಷ್ಯಾ ಎಚ್ಚರಿಕೆ ನೀಡಿದೆ.

ಒಪ್ಪಂದ ರೀತ್ಯ ರಷ್ಯದಿಂದ ಭಾರತಕ್ಕೆ S-400 ರಕ್ಷಣಾ ಪರಿಕರ ಪೂರೈಕೆ

0

ಉಕ್ರೇನ್‌ನೊಂದಿಗೆ ತನ್ನ ಮಿಲಿಟರಿ ಆಕ್ರಮಣ ಮುಂದುವರೆಯುತ್ತಿದ್ದರೂ ಮಾಡಿಕೊಂಡಿರುವ ಒಪ್ಪಂದದಂತೆ ಭಾರತಕ್ಕೆ S-400ವಾಯು ರಕ್ಷಣಾ ವ್ಯವಸ್ಥೆಯ ಪರಿಕರಗಳನ್ನು ರಷ್ಯಾ ಪೂರೈಸಿದೆ ಎಂದು ತಿಳಿದುಬಂದಿದೆ.

ಒಪ್ಪಂದದ ಪ್ರಕಾರ ಮತ್ತಷ್ಟು ರಕ್ಷಣಾ ಪರಿಕರಗಳನ್ನು ಶೀಘ್ರದಲ್ಲೇ ಪೂರೈಸುವುದಾಗಿ ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.

ಕೊಟ್ಟಿರುವ ಮಾತಿನಂತೆ ನಡೆದುಕೊಳ್ಳುವುದು ನಮ್ಮ ಕರ್ತವ್ಯ ಹಾಗಾಗಿ ಒಪ್ಪಂದದಂತೆ ರಕ್ಷಣಾಯುಧಗಳನ್ನು ನೀಡಿರುವುದಾಗಿ ರಷ್ಯಾ ಹೇಳಿದೆ.

S-400 ನ ಮೊದಲ ಸ್ಕ್ವಾಡ್ರನ್ ಈಗಾಗಲೇ ವಾಯುಪಡೆಗೆ ಸೇರ್ಪಡೆಗೊಂಡಿವೆ. ಇನ್ನುಳಿದ ಐದು ರೆಜಿಮೆಂಟ್‌ಗಳು ಸೇರ್ಪಡೆ ಕ್ರಮದಲ್ಲಿವೆ ಎನ್ನಲಾಗಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ವಿಧಿಸಿರುವ ತೀವ್ರ ಆರ್ಥಿಕ ನಿರ್ಬಂಧಗಳ ಹೊರತಾಗಿಯೂ, ರಷ್ಯಾ ಚಾಲ್ತಿಯಲ್ಲಿರುವ ಎಲ್ಲಾ ಒಪ್ಪಂದಗಳನ್ನು ಪೂರೈಸಲು ನಿರ್ಧರಿಸಿದೆ. ಈ ಸಂಬಂಧ ನಿಗದಿತ ಸಮಯದಲ್ಲಿ ಎಲ್ಲಾ ಪರಿಕರಗಳನ್ನು ವಿತರಣೆ ಮಾಡಲಾಗುವುದು ಎಂದು ರಷ್ಯಾ ಈ ಹಿಂದೆ ಹೇಳಿದಂತೆ, ಭಾರತಕ್ಕೆ ಶಸ್ತ್ರಾಸ್ತ್ರ ಪೂರೈಕೆ ಮಾಡಿ ಕೊಟ್ಟ ಮಾತನ್ನು ಉಳಿಸಿಕೊಂಡಿದೆ.

ವಿಯೆಟ್ಮಾಂ ಪ್ರಧಾನಿಯೊಂದಿಗೆ ಮೋದಿ ಮಾತುಕತೆ

0

ವಿಯೆಟ್ನಾಂನ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ನ್ಗುಯೆನ್ ಫು ಟ್ರೋಂಗ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದರು.

ಉಕ್ರೇನ್‌ನಲ್ಲಿ ನಡೆಯುತ್ತಿರುವ ಬಿಕ್ಕಟ್ಟು ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿನ ಪರಿಸ್ಥಿತಿ ಸೇರಿದಂತೆ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

ವಿಯೆಟ್ನಾಂನ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಎಚ್.ಇ. ನ್ಗುಯೆನ್ ಫು ಟ್ರೋಂಗ್ ಅವರೊಂದಿಗೆ ಇಂದು ಮಾತನಾಡಿದರು. ನಾವು ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ ಮತ್ತು ನಮ್ಮ ಆರ್ಥಿಕ, ವ್ಯಾಪಾರ ಮತ್ತು ರಕ್ಷಣಾ ಮಾತುಕತೆಯಲ್ಲಿ ನಿಕಟ ಸಹಕಾರವನ್ನು ಉತ್ತೇಜಿಸಲು ಒಪ್ಪಿಕೊಂಡಿದ್ದೇವೆ ಎಂದು ಮೋದಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ತಮ್ಮ ದೂರವಾಣಿ ಸಂಭಾಷಣೆಯಲ್ಲಿ, 2016 ರಲ್ಲಿ ಮೋದಿಯವರ ವಿಯೆಟ್ನಾಂ ಭೇಟಿಯ ಸಮಯದಲ್ಲಿ ಸ್ಥಾಪಿಸಲಾದ ಭಾರತ-ವಿಯೆಟ್ನಾಂ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವದಡಿಯಲ್ಲಿ ವ್ಯಾಪಕವಾದ ಸಹಕಾರದ ತ್ವರಿತ ಗತಿಯ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು ಎಂದು ಪ್ರಧಾನ ಮಂತ್ರಿ ಕಚೇರಿ (PMO) ಹೇಳಿಕೆಯಲ್ಲಿ ತಿಳಿಸಿದೆ.

ಭಾರತದ ಕಾಯಿದೆ ಪೂರ್ವ ನೀತಿ ಮತ್ತು ಇಂಡೋ-ಪೆಸಿಫಿಕ್ ವಿಷನ್‌ನ ಪ್ರಮುಖ ಆಧಾರಸ್ತಂಭವಾಗಿ ವಿಯೆಟ್ನಾಂನ ಪ್ರಾಮುಖ್ಯತೆಯನ್ನು ಮೋದಿ ಪುನರುಚ್ಚರಿಸಿದರು ಮತ್ತು ಅಸ್ತಿತ್ವದಲ್ಲಿರುವ ಉಪಕ್ರಮಗಳ ತ್ವರಿತ ಪ್ರಗತಿಗಾಗಿ ಕೆಲಸ ಮಾಡುವುದರ ಜೊತೆಗೆ ದ್ವಿಪಕ್ಷೀಯ ಸಂಬಂಧದ ವ್ಯಾಪ್ತಿಯನ್ನು ಹೆಚ್ಚಿಸಲು ಪ್ರಯತ್ನಿಸಿದರು.
ವಿಯೆಟ್ನಾಂನಲ್ಲಿ ಭಾರತದ ಫಾರ್ಮಾ ಮತ್ತು ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಪ್ರವೇಶದ ಹೆಚ್ಚಿನ ಅನುಕೂಲಕ್ಕಾಗಿ ಪ್ರಧಾನಿ ವಿನಂತಿಸಿದರು ಎಂದು ಪಿಎಂಒ ಹೇಳಿಕೆ ತಿಳಿಸಿದೆ.ಉಭಯ ದೇಶಗಳ ನಡುವಿನ ಐತಿಹಾಸಿಕ ಮತ್ತು ನಾಗರಿಕತೆಯ ಸಂಬಂಧಗಳನ್ನು ಎತ್ತಿ ಹಿಡಿದ ಮೋದಿ, ವಿಯೆಟ್ನಾಂನಲ್ಲಿ ಚಾಮ್ ಸ್ಮಾರಕಗಳ ಮರುಸ್ಥಾಪನೆಯಲ್ಲಿ ಭಾರತದ ಪಾಲ್ಗೊಳ್ಳುವಿಕೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಉಭಯ ದೇಶಗಳ ನಡುವಿನ ರಕ್ಷಣಾ ಪಾಲುದಾರಿಕೆಯನ್ನು ಹೆಚ್ಚಿಸಲು ನಾಯಕರು ಒಪ್ಪಿಕೊಂಡಿದ್ದಾರೆ ಎಂದು ಪಿಎಂಒ ತಿಳಿಸಿದೆ.

ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 50 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅವರು ಪರಸ್ಪರ ಅಭಿನಂದಿಸಿದರು.

ಕೋವಿಡ್ ನಿಯಮ ಪಾಲನೆಯಿಂದ ಸೋಂಕು ತಟ್ಟದು- ಸಮೀಕ್ಷಾ ವರದಿ

0

ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದರಿಂದ ಭಾರತದಲ್ಲಿನ 10 ಕುಟುಂಬಗಳ ಪೈಕಿ ಎಂಟು ಕುಟುಂಬಗಳು ಕೋವಿಡ್ ಸೋಂಕಿಗೆ ಒಳಗಾಗಿಲ್ಲ ಎಂದು ಹೊಸ ಸಮೀಕ್ಷೆಯೊಂದು ಹೇಳಿದೆ.

ಹಲವಾರು ರಾಜ್ಯಗಳು ಕೋವಿಡ್ ನಿರ್ಬಂಧಗಳನ್ನು ತೆಗೆದುಹಾಕಿರುವ ಸಮಯದಲ್ಲಿ ಸಮೀಕ್ಷೆಯನ್ನು ನಡೆಸಲಾಯಿತು. ಒಟ್ಟಾರೆ ಆಧಾರದ ಮೇಲೆ, 57 ಪ್ರತಿಶತ ಭಾರತೀಯ ಕುಟುಂಬಗಳು ಕಳೆದ ಎರಡು ವರ್ಷಗಳಲ್ಲಿ ಅಥವಾ ಸಾಂಕ್ರಾಮಿಕ ರೋಗದ ಮೊದಲ, ಎರಡನೆಯ ಅಥವಾ ಮೂರನೇ ಅಲೆಯಲ್ಲಿ ಒಂದು ಅಥವಾ ಹೆಚ್ಚಿನ ವ್ಯಕ್ತಿಗಳು ಕೋವಿಡ್ ಪರೀಕ್ಷೆ ಮಾಡಿಸುತ್ತಿದ್ದಾರೆ. ಈ ಪ್ರಶ್ನೆಗೆ 10,200 ಪ್ರತಿಕ್ರಿಯೆಗಳು ಬಂದಿವೆ.

ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆಯು, ಭಾರತದ 345 ಜಿಲ್ಲೆಗಳಲ್ಲಿ ನಾಗರಿಕರಿಂದ 29,000 ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ.
ಕಳೆದ ಎರಡು ವರ್ಷಗಳಲ್ಲಿ ಶೇ.57 ರಷ್ಟು ಭಾರತೀಯ ಕುಟುಂಬಗಳು ಒಂದು ಅಥವಾ ಹೆಚ್ಚಿನ ವ್ಯಕ್ತಿಗಳು ಕೋವಿಡ್ ಪಾಸಿಟಿವ್ ಅನ್ನು ಪರೀಕ್ಷಿಸಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಸಮೀಕ್ಷೆಯಲ್ಲಿ ಶೇ.61 ಪುರುಷರು ಮತ್ತು ಶೇ.39ರಷ್ಟು ಮಹಿಳೆಯರು ಪ್ರತಿಕ್ರಿಯಿಸಿದ್ದಾರೆ ಎಂಬುದು ತಿಳಿದು ಬಂದಿದೆ.
ಕಳೆದ ಎರಡು ವರ್ಷಗಳಲ್ಲಿ ಸೋಂಕಿಗೆ ಒಳಗಾಗದ ನಾಗರಿಕರ ಪ್ರತಿಕ್ರಿಯೆಗಳನ್ನು ವಿಶ್ಲೇಷಿಸಿದರೆ, ಶೇ.80 ರಷ್ಟು ಜನರು ಸಾಮಾಜಿಕ ಸಂಪರ್ಕವನ್ನು ಕಡಿಮೆ ಮಾಡಿದ್ದಾರೆ. ಕೋವಿಡ್ ಹೆಚ್ಚಿದ್ದಾಗ ಸಾಮಾಜಿಕ ಅಂತರ, ಪ್ರೋಟೋಕಾಲ್ಗಳನ್ನು ಅನುಸರಿಸಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

ಪ್ರತಿಕ್ರಿಯಿಸಿದವರಲ್ಲಿ 45 ಪ್ರತಿಶತದಷ್ಟು ಜನರು ನಗರಗಳಿಂದ, 31 ಪ್ರತಿಶತದಷ್ಟು ಜನರು ಪಟ್ಟಣಗಳಿಂದ ಮತ್ತು 24 ಪ್ರತಿಶತದಷ್ಟು ಗ್ರಾಮೀಣ ಪ್ರದೇಶದಿಂದ ಬಂದವರು ಎಂದು ಹೇಳಲಾಗಿದೆ.

ಫೋನ್ ಕರೆ ಮೂಲಕ ಪಿಂಚಣಿ ಪ್ರಮಾಣಪತ್ರ ಪಡೆಯಬಹುದು- ಅಶೋಕ್

0

ರಾಜ್ಯ ಸರ್ಕಾರವು ಪಿಂಚಣಿದಾರರಿಗೆ ಮತ್ತೊಂದು ಸಿಹಿಸುದ್ದಿ ನೀಡಿದೆ. ಸರ್ಕಾರದ ಪಿಂಚಣಿ ಪ್ರಯೋಜನ ಪಡೆಯಲು ಇನ್ಮುಂದೆ 72 ಗಂಟೆಗಳಲ್ಲಿ ಪಿಂಚಣಿ ಪ್ರಮಾಣ ಪತ್ರ ಮನೆ ಬಾಗಿಲಿಗೆ ಬರಲಿದೆ.
ಈ ಕುರಿತು ಮಾಹಿತಿ ನೀಡಿರುವ ಕಂದಾಯ ಸಚಿವ ಆರ್.
ಅಶೋಕ್ ಅವರು ಮಾಹಿತಿ ನೀಡಿದ್ದಾರೆ.

ಇಂಥ ಯೋಜನೆ ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಜಾರಿಗೆ ತರಲಾಗಿದೆ.
ಯೋಜನೆಗೆ ಸಂಬಂಧಿಸಿದಂತೆ ನಾಳ್ಕು ಡಿಜಿಟಲ್ ಗಳ ಟೋಲ್ ಫ್ರೀ ನಂಬರ್ ನೀಡಲಾಗುತ್ತದೆ. ಆ ನಂಬರ್ ಗೆ ಕರೆ ಮಾಡಿ ಪಿಂಚಣಿ ಫಲಾನುಭವಿಗಳಾಗುವವರ ಆಧಾರ್ ಸಂಖ್ಯೆ, ಬ್ಯಾಂಕ್ ಅಕೌಂಟ್ ಸಂಖ್ಯೆ ನೀಡಬೇಕು. 15 ನಿಮಿಷಗಳಲ್ಲಿ ಆ ಮಾಹಿತಿ ಸಂಬಂಧಪಟ್ಟ ಜಿಲ್ಲಾಧಿಕಾರಿ, ತಹಸೀಲ್ದಾರ್ ಮತ್ತಿತರ ಅಧಿಕಾರಿಗೆ ಹೋಗುತ್ತದೆ. ಗ್ರಾಮ ಸಹಾಯಕರು ಅವರ ಮನೆಗೆ ತೆರಳಿ ಫಲಾನುಭವಿಯ ಫೋಟೋ, ಇತರೆ ದಾಖಲೆ ಪಡೆದು ಅಪ್ ಲೋಡ್ ಮಾಡುತ್ತಾರೆ.ಅದಾದ 72 ಗಂಟೆಗಳಲ್ಲಿ ಪಿಂಚಣಿ ಪ್ರಮಾಣ ಪತ್ರ ಫಲಾನುಭವಿಯ ಕೈಸೇರಲಿದೆ ಎಂದರು.

ಸರ್ಕಾರದ ಪಿಂಚಣಿ ಯೋಜನೆಯ ಪ್ರಯೋಜನ ಪಡೆಯಲು ಇನ್ಮುಂದೆ ಕಚೇರಿಗಳಿಗೆ ಅಲೆದಾಡಬೇಕಿಲ್ಲ. ದೂರವಾಣಿ ಕರೆ ಮಾಡಿ ಹಲೋ ಎಂದು ಎರಡು ದಾಖಲೆಗಳ ನಂಬರ್ ಗಳನ್ನು ಕೊಟ್ಟರೆ ಸಾಕು, 72 ಗಂಟೆಯಲ್ಲಿ ಪಿಂಚಣಿ ಪ್ರಮಾಣ ಮನೆ ಬಾಗಿಲಿಗೆ ಬರಲಿದೆ ಎಂದರು.

ಡಾ.ಅಂಬೇಡ್ಕರ್ ಓರ್ವ ವಿಶ್ವಮಾನವ -ಅಶ್ವತ್ಥನಾರಾಯಣ

0

ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಯಾವುದೇ ಪೂರ್ವಾಗ್ರಹವಿಲ್ಲದ ಪರಿಪೂರ್ಣ ತಿಳಿವಳಿಕೆ ಹೊಂದಿದ್ದ ಧೀಮಂತರಾಗಿದ್ದರು ಎಂದು ಉನ್ನತ ಶಿಕ್ಷಣ ಹಾಗೂ ಐಟಿ/ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಸಾಗರ ತಾಲ್ಲೂಕು ಬಿಜೆಪಿ ಘಟಕ ಗುರುವಾರ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶೋಷಿತ ವರ್ಗದಲ್ಲಿ ಹುಟ್ಟಿದ ಅಂಬೇಡ್ಕರ್ ಅವರು ಪರಿಶ್ರಮದಿಂದ ಜ್ಞಾನಾರ್ಜನೆ ಮಾಡಿ ತಮ್ಮ ಪ್ರತಿಭೆಗೆ ಸಾಣೆ ಹಿಡಿದುಕೊಂಡಿದ್ದರು ಎಂದು ಅಭಿಪ್ರಾಯಪಟ್ಟರು.

ಅಂಬೇಡ್ಕರ್ ಅವರು ಶಿಕ್ಷಣ ತಜ್ಞರಾಗಿ, ವಕೀಲರಾಗಿ, ಆರ್ಥಿಕ ತಜ್ಞರಾಗಿ, ಪತ್ರಕರ್ತರಾಗಿ, ಸಮಾಜ ಸೇವಕರಾಗಿ, ಎಲ್ಲಾ ಧರ್ಮಗಳ ಬಗ್ಗೆ ತಿಳಿವಳಿಕೆ ಹೊಂದಿ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದರು. ನಮಗೆ ಸಂವಿಧಾನವನ್ನ ಕೊಟ್ಟ ಅವರು. ವಿಶ್ವಮಾನವರಾಗಿದ್ದರು ಎಂದು ವಿವರಿಸಿದರು.

ಅಂಬೇಡ್ಕರ್ ಅವರು ಶಿಕ್ಷಣದ ಬಲದಿಂದ ಹಾಗೂ ತಮಗಿದ್ದ ಸಮಾಜಪರ ಕಾಳಜಿಯಿಂದಾಗಿ ಇಡೀ ವಿಶ್ವಕ್ಕೆ ಪ್ರಸ್ತುತವಾದ ವ್ಯಕ್ತಿಯಾಗಿದ್ದರು. ಸದೃಢ ಸಮಾಜ ಕಟ್ಟುವ ನಿಟ್ಟಿನಲ್ಲಿ ನಾವು ನಮ್ಮ ನಮ್ಮ ನಡುವಿನ ಪೈಪೋಟಿಯನ್ನು ಬಿಟ್ಟು ಇಡೀ ಜಗತ್ತಿನೊಂದಿಗೆ ಸ್ಪರ್ಧೆ ಮಾಡಬೇಕು. ಉದ್ಯೋಗದಲ್ಲಿ, ಕೌಶಲದಲ್ಲಿ, ಶಿಕ್ಷಣದಲ್ಲಿ, ಉದ್ಯಮಶೀಲತೆಯಲ್ಲಿ ನಾವು ಸಾಧನೆ ಮಾಡಲು ಈಗ ಬೆಂಗಳೂರಿನಂತಹ ನಗರಕ್ಕೋ ಅಥವಾ ಅಮೆರಿಕದಂತಹ ದೇಶಕ್ಕೋ ಹೋಗಲೇಬೇಕು ಎಂದೇನೂ ಇಲ್ಲ. ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಇಲ್ಲಿದ್ದುಕೊಂಡೇ ಜಗತ್ತಿನ ಗಮನ ಸೆಳೆಯುವಂತಹ ಸಾಧನೆ ಮಾಡಿ ಅಭಿವೃದ್ಧಿ ಹೊಂದಬಹುದು ಎಂದು ಅಶ್ವತ್ಥನಾರಾಯಣ ನುಡಿದರು.

ಶಾಸಕ ಹರತಾಳು ಹಾಲಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಮೇಘರಾಜ್ ಮತ್ತಿತರರು ಇದ್ದರು.

ನಾಡಪ್ರಭು ಕೆಂಪೇಗೌಡರ 108 ಅಡಿ ಪ್ರತಿಮೆ ನಿರ್ಮಾಣ ಭರದಿಂದ ಸಾಗುತ್ತಿದೆ-ಅಶ್ವತ್ಥನಾರಾಯಣ

0

ಒಕ್ಕಲಿಗರ ಸಂಘದ ವತಿಯಿಂದ ಖಾಸಗಿ ವಿಶ್ವವಿದ್ಯಾನಿಲಯ ಸ್ಥಾಪಿಸಲು ಸರ್ಕಾರವು ಕೆಲವೇ ತಿಂಗಳುಗಳಲ್ಲಿ ಅನುಮೋದನೆ ಕೊಡಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಸಾಗರ ಪಟ್ಟಣದಲ್ಲಿ ಹೊಸದಾಗಿ ನಿರ್ಮಿಸಿರುವ ಒಕ್ಕಲಿಗರ ಸಂಘದ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಕ್ಕಲಿಗರ ಸಂಘದ ವತಿಯಿಂದ ಖಾಸಗಿ ವಿಶ್ವವಿದ್ಯಾನಿಲಯ ಸ್ಥಾಪಿಸಬೇಕೆಂಬುದು ಸಮುದಾಯದ ಮಠಾಧೀಶರ ಅಪೇಕ್ಷೆಯಾಗಿದೆ ಎಂದರು.

ಇಲ್ಲಿ ಇಂತಹ ಭವನ ನಿರ್ಮಿಸಬೇಕೆಂಬುದು ಬಹಳ ದಿನಗಳ ಕನಸಾಗಿತ್ತು. ಈಗ ಇದು ಹಲವರ ಶ್ರಮದಿಂದ ಸಾಕಾರವಾಗಿದೆ. ಸಮುದಾಯದ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಇದು ಈಡೇರಿದೆ. ಈ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ರೂ 30 ಲಕ್ಷ ಮಂಜೂರು ಮಾಡಿದೆ ಎಂದು ಹೇಳಿದರು.

ದೇಶ ವಿದೇಶಗಳಲ್ಲಿ ಕೂಡ ಒಕ್ಕಲಿಗರು ಸಂಘಟಿತರಾಗಿದ್ದು ನಾಡು ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರೆ ಸಮುದಾಯದವರ ಅಭಿವೃದ್ಧಿಗಾಗಿ ಸರ್ಕಾರವು ಒಕ್ಕಲಿಗರ ಅಭಿವೃದ್ಧಿ ಕಾರ್ಪೊರೇಷನ್ ಸ್ಥಾಪಿಸಿದೆ. ಒಕ್ಕಲಿಗರು ಎಲ್ಲೆಲ್ಲಿ ಅಲ್ಪಸಂಖ್ಯಾತರಾಗಿದ್ದಾರೋ ಅವರ ಅಭಿವೃದ್ಧಿಗಾಗಿ ಕಾರ್ಪೊರೇಷನ್ ಕೆಲಸ ಮಾಡಲಿದೆ ಎಂದರು.

ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಸ್ಥಾಪನೆಗೆ ಕೆಲಸ ಬಿರುಸಿನಿಂದ ನಡೆಯುತ್ತಿದೆ. ಕೆಂಪೇಗೌಡರು ಕಟ್ಟಿದ ಬೆಂಗಳೂರು ಇವತ್ತು ದೇಶದಲ್ಲೇ ಮುಂಚೂಣಿ ನಗರವಾಗಿದೆ. ತಂತ್ರಜ್ಞಾನ, ಕೌಶಲ, ಉದ್ಯಮಶೀಲತೆ, ನವೋದ್ಯಮ ನಗರವಾಗಿ ಬೆಂಗಳೂರು ಗಮನ ಸೆಳೆದಿದೆ. ಹೀಗೆ ಬೆಂಗಳೂರು ಅಭಿವೃದ್ಧಿ ಕಾಣುವುದರಲ್ಲಿ ಒಕ್ಕಲಿಗರ ಕೊಡುಗೆ ಸಾಕಷ್ಟಿದೆ ಎಂದು ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.

ಒಕ್ಕಲಿಗ ಸಮುದಾಯ ಅಸಹಾಯಕವಾಗಬಾರದು. ನಾವು ಇಚ್ಛಾಶಕ್ತಿ ಆಧಾರಿತ ಪ್ರಯತ್ನಗಳನ್ನು ಮಾಡಿ ಸಾಧನೆ ಮಾಡಬೇಕು. ಕೌಶಲ, ಶಿಕ್ಷಣ, ಜ್ಞಾನದೊಂದಿಗೆ ಜಾಗತಿಕ ಮಟ್ಟದಲ್ಲಿ ನಾವು ಸ್ಪರ್ಧೆ ಮಾಡಬೇಕು ಎಂದು ಆಶಿಸಿದರು.

ಶ್ರೀ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶಿವಮೊಗ್ಗ ಶಾಖಾ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶ್ರೀ ರೇಣುಕಾನಂದ ಸ್ವಾಮೀಜಿ, ಶಾಸಕ ಹರತಾಳು ಹಾಲಪ್ಪ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಸಾಗರ ಒಕ್ಕಲಿಗರ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಸಹಕಾರಿ ವಲಯದ ಮಂಜಣ್ಣ ಮತ್ತಿತರರು ಇದ್ದರು

ಸೀಎಂ ಗೆ ರಾಜಿನಾಮೆ ಸಲ್ಲಿಸಿದ ಸಚಿವ ಈಶ್ವರಪ್ಪ

0

ರಾಜ್ಯದಾದ್ಯಂತ ರಾಜಕೀಯ ಸಂಚಲನ ಎಬ್ಬಿಸಿದ್ದ
ಶೇ 40 ಭ್ರಷ್ಟಾಚಾರ ಹಗರಣವೀಗ ಒಂದು ಹಂತಕ್ಕೆ ತಲುಪಿದಂತಾಗಿದೆ.
ಸಚಿವರು ಸೀಎಂ ಅವರ ನಿವಾಸಕ್ಕೆ ಆಗಮಿಸುತ್ತಿದ್ದಂತೆಯೇ ಅವರ ಅಭಿಮಾನಿಗಳೂ ಹಿಂಬಾಲಿಸಿಕೊಂಡೇ ಬಂದು ಹೆಚ್ಚಿನ ಸಂಖ್ಯೆಯಲ್ಲಿ
ಘೇರಾಯಿಸಿದ್ದ ದೃಶ್ಯ ಕಂಡು ಬಂದಿತು.
ಸೀಎಂ ನಿವಾಸಕ್ಕೆ ಸಂಪೂರ್ಣ ಪೋಲಿಸ್ ಭದ್ರತೆ ಒದಗಿಸಲಾಗಿತ್ತು.
ಅಭಿಮಾನಿಗಳು
ನ್ಯಾಯಬೇಕು.ಈಶ್ವರಪ್ಪ ಜಿಂದಾಬಾದ್ ಎಂಬ ಘೋಷಣೆ ಹಾಕುತ್ತಿದ್ದರು.
ಒಂದೇ ಸಾಲಿನ ಒಕ್ಕಣಿಕೆಯ ರಾಜಿನಾಮೆ ಪತ್ರ ಸಲ್ಲಿಸಿ ಸಚಿವ ಈಶ್ವರಪ್ಪ ಸೀಎಂ ಅವರೊಂದಿಗೆ ಚರ್ಚಿಸಿದರು.
ಸೀಎಂ ನಿವಾಸದಲ್ಲಿ
ಸಚಿವರಾದ ರಮೇಶ್ ಜಾರಕಿ ಹೊಳಿ ಮುರುಗೇಶ್ ನಿರಾಣಿ,ಆರಗ ಜ್ಞಾನೇಂದ್ರ,ಭೈರತಿ ಬಸವರಾಜ್, ಹಾಜರಿದ್ದರು.

ಯುದ್ಧ ಗೆಲ್ಲಲಾಗದೇ ಹತಾಶವಾಗಿರುವ ರಷ್ಯ

0

ಉಕ್ರೇನ್‌ ಯುದ್ಧದ ಹಿನ್ನಡೆಗಳಿಂದ ಹತಾಶಗೊಂಡಿರುವ ಪುಟಿನ್‌ ಒಡ್ಡುತ್ತಾ ಇರುವ ಪರಮಾಣು ಬೆದರಿಕೆಗಳನ್ನು ಹಗುರವಾಗಿ ತೆಗೆದುಕೊಳ್ಳುವ ಹಾಗಿಲ್ಲ ಎಂದು ಅಮೆರಿಕದ CIA ಡೈರೆಕ್ಟರ್‌ ವಿಲಿಯಮ್‌ ಬರ್ನ್ಸ್‌ ಅವರು ಹೇಳಿದ್ದಾರೆ.

ಅಟ್ಲಾಂಟದಲ್ಲಿ ಈ ಕುರಿತು ಮಾತನಾಡಿರುವ ಅವರು ಇದುವರೆಗೂ ರಷ್ಯಾ ಸೇನೆ ಅನುಭವಿಸುತ್ತಿರುವ ಹಿನ್ನಡೆಗಳಿಂದ ಪುಟಿನ್‌ ಮತ್ತು ರಷ್ಯಾದ ನಾಯಕತ್ವ ಹತಾಶೆಗೊಂಡಿದೆ.

ಇದನ್ನು ನೋಡುತ್ತಿದ್ದರೆ ಅವರು ಒಡ್ಡುತ್ತಾ ಇರುವ ಪರಮಾಣು ಆಯುಧ ಬಳಕೆಯ ಬೆದರಿಕೆಗಳನ್ನು ಅಷ್ಟು ಸುಲಭವಾಗಿ ತೆಗೆದುಕೊಳ್ಳುವ ಹಾಗಿಲ್ಲ ಎಂದಿದ್ದಾರೆ.

ಇದರೊಂದಿಗೆ ರಷ್ಯಾ ಪರಮಾಣು ಶಸ್ತ್ರಾಸ್ತ್ರಕ್ಕೆ ಸಂಬಂಧಿಸಿದಂತೆ, ಎಸ್ಕಲೇಟ್‌ ಟು ಡಿಎಸ್ಕಲೇಟ್‌’ ತತ್ವ ಪಾಲಿಸುತ್ತಿದೆ. ರಷ್ಯಾದ ಭದ್ರತೆಗೆ ಅಪಾಯ ಎದುರಾದಾಗ ರಷ್ಯಾ ಎಷ್ಟೇ ಚಿಕ್ಕ ಯುದ್ಧ ಅಥವಾ ಸಂಘರ್ಷ ಎಂದು ನೋಡದೆ ತಾನೇ ಮೊದಲು ಪರಮಾಣು ಅಸ್ತ್ರವನ್ನು ಬಳಸಬಹುದು.

ರಷ್ಯಾ ಈ ರೀತಿ ನಡೆದುಕೊಂಡರೆ ನ್ಯಾಟೋ ಉಕ್ರೇನ್‌ ಯುದ್ಧದಲ್ಲಿ ಭಾಗಿಯಾಗ ಬೇಕಾಗುತ್ತದೆ . ಮುಂದೆ ಅದು ಮೂರನೇ ವಿಶ್ವಯುದ್ಧ ಆಗುವ ಕಳವಳ ಕಳವಳ ಅಧ್ಯಕ್ಷ ಬೈಡನ್‌ಗೆ ಇರುವುದು ನನಗೆ ಅರ್ಥವಾಗಿದೆ ಎಂದಿದ್ದಾರೆ.