Thursday, February 26, 2026
Thursday, February 26, 2026
Home Blog Page 1622

ಶಿವಮೊಗ್ಗದಲ್ಲಿ ಶ್ರೀಹನುಮ ಜಯಂತಿ

0

ಇಂದು ಹನುಮ ಜಯಂತಿ ಪ್ರಯುಕ್ತ ಶಿವಮೊಗ್ಗದ ಕೋಟೆ ಶ್ರೀಆಂಜನೇಯಸ್ವಾಮಿಗೆ ವಿಶೇಷ ಪೂಜೆಯನ್ನು ನಡೆಸಲಾಯಿತು .

ಹಬ್ಬಗಳ ನಾಡು ಈ ದೇಶದಲ್ಲಿ ನಾವು ಹಲವಾರು ಹಬ್ಬಗಳನ್ನು ಆಚರಿಸುತ್ತೇವೆ ಹಿಂದುಗಳು ಆಚರಿಸುವ ಹಬ್ಬಗಳಲ್ಲಿ ಹನುಮ ಜಯಂತಿ ಕೂಡ ಒಂದು. ಈ ದಿನದಂದು ಹನುಮಂತನಿಗೆ ವಿಶೇಷವಾದ ಪೂಜೆಯನ್ನು ಮಾಡಲಾಗುತ್ತದೆ.


ಅದೇ ರೀತಿ ದೇಶದ ವಿಧ ಕಡೆಯಲ್ಲಿ ಹನುಮ ಜಯಂತಿಯನ್ನು ಆಚರಿಸಲಾಗುತ್ತದೆ. ಶಿವಮೊಗ್ಗ ನಗರದ ಪ್ರಮುಖ ದೇವಾಲಯಗಳಲ್ಲಿ ಒಂದಾದಂತಹ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹನುಮನಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು . ದೇವಸ್ಥಾನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ದೇವರ ದರ್ಶನ ಮಾಡಿ ಪಾವನ ರಾಗಿದ್ದಾರೆ. ಹಾಗೂ ಹನುಮಂತನಿಗೆ ಮೊಸರನ್ನ ಮತ್ತು ಪುಳಿಯೋಗರೆ ನೈವೇದ್ಯಮಾಡಿ ಭಕ್ತಾದಿಗಳಿಗೆ ವಿತರಿಸಲಾಯಿತು.

ಇದೇ ದಿನ ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನದಲ್ಲಿ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾದರು.

ಹೋರಾಡಿ ಗೆದ್ದ ಹೈದ್ರಾಬಾದ್ ಸನ್ ರೈಸರ್ಸ್

0

ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ರೋಚಕ ಗೆಲುವು.

ತ್ರಿಪಾಠಿ,ಮಾರ್ಕ್ರಮ್ ಅರ್ಧಶತಕ/ಸನ್ ರೈಸರ್ಸ್ ಗೆ 7 ವಿಕೆಟ್ ಗಳ ಭರ್ಜರಿ ಜಯರಾಹುಲ್ ತ್ರಿಪಾಠಿ (71 ರನ್, 37 ಎಸೆತ, 4 ಫೋರ್, 6 ಸಿಕ್ಸರ್) ಮತ್ತು ಎಡೆನ್ ಮಾರ್ಕ್ರಮ್ (68 ರನ್, 36 ಎಸೆತ, 6 ಫೋರ್, 4 ಸಿಕ್ಸರ್) ಅವರ ಸಿಡಿಲಬ್ಬರದ ಅರ್ಧಶತಕಗಳ ಸಾಹಸದಿಂದ ಮಿಂಚಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ 15ನೇ ಆವೃತ್ತಿಯ 25ನೇ ಪಂದ್ಯದಲ್ಲಿ ಏಳು ವಿಕೆಟ್ ಗಳಿಂದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸಿ ಟೂರ್ನಿಯಲ್ಲಿ ಹ್ಯಾಟ್ರಿಕ್ ಜಯ ದಾಖಲಿಸಿದೆ.


ಬ್ರಬೋರ್ನ್ ಕ್ರೀಡಾಂಗಣ ದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಹೈದ್ರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಬ್ಯಾಟಿಂಗ್ ಗೆ ಇಳಿದ ಕೊಲ್ಕತ್ತಾ ತಂಡ, ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 175. ರನ್ ಬಾರಿಸಿತು. ಇದಕ್ಕೆ ಪ್ರತ್ಯುತ್ತರವಾಗಿ ಹೈದ್ರಾಬಾದ್ ತಂಡ 13 ಎಸೆತಗಳು ಬಾಕಿ ಇರುವಂತೆಯೇ ಮೂರು ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿ ಸಂಭ್ರಮಿಸಿತು.

ಆರಂಭಿಕ ಹಿನ್ನಡೆಯನ್ನು ಹೊರತಾಗಿಯೂ ತ್ರಿಪಾಠಿ ಮತ್ತು ಮಾರ್ಕ್ರಮ್ ಜೋಡಿ ಮೂರು ವಿಕೆಟ್ ಗೆ ಕೇವಲ 54 ಎಸೆತಗಳಲ್ಲಿ 94 ರನ್ ಸಿಡಿಸಿದರು. ನಂತರ ಪೂರನ್ ಜೊತೆ ಮುರಿಯದೆ 4ನೇ ವಿಕೆಟ್ಗೆ 43 ರನ್ ಜೊತೆಯಾಟ ಆಡಿದ ಮಾರ್ಕ್ರಮ್, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.


ಇದಕ್ಕೂ ಮುನ್ನ ಕೆಕೆಆರ್ ಪರ ಇನ್ನಿಂಗ್ಸ್ ಆರಂಭಿಸಿದ ವೆಂಕಟೇಶ್ ಅಯ್ಯರ್ ಮತ್ತು ಆಸ್ಟ್ರೇಲಿಯಾದ t20 ಫಿಂಚ್, ತಂಡಕ್ಕೆ ಭದ್ರಬುನಾದಿ ಹಾಕುವಲ್ಲಿ ಎಡವಿದರು. ಹಾಲಿ ಟೂರ್ನಿಯಲ್ಲಿ ಮೊದಲ ಪಂದ್ಯ ಆಡಿದ ಪಿಂಚ್ ಗೆ (7) ಮಾರ್ಕೊ ಜಾನ್ಸನ್ ಪೆವಿಲಿಯನ್ ಹಾದಿ ತೋರಿಸಿದರು. ಆಗ ತಂಡದ ಮೊತ್ತ 11. ರಕ್ಷಣಾತ್ಮಕ ಆಟದೊಂದಿಗೆ ಕ್ರೀಸ್ ಗೆ ಅಂಟಿಕೊಳ್ಳಲು ಯತ್ನಿಸಿದ್ದ ವೆಂಕಟೇಶ್ ಅಯ್ಯರ್ (6)ಗೆ ಟಿಪ್ ಇಂಡಿಯಾದ ಯಾರ್ಕರ್ ತಜ್ಞ ಟಿ. ನಟರಾಜನ್ ಮುಳ್ಳಾದರು. ನಂತರ 6 ರನ್ ಗಳ ಅಂತರದಲ್ಲಿ ಆಲ್-ರೌಂಡರ್ ಸುನಿಲ್ ನರೈನ್ ಅವರನ್ನು ಡಕ್ಔಟ್ ಗೆ ಸೇರಿಸುವಲ್ಲಿ ನಟರಾಜನ್ ಹಿಂದೆ ಬೀಳಲಿಲ್ಲ ಈ ಮೂಲಕ ನಾಯಕ ವಿಲಿಯಂಸನ್ ಅವರ ನಿಲುವಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಭಯೋತ್ಪಾದಕರ ಸಂಚು ವಿಫಲಗೊಳಿಸಿದ ಭದ್ರತಾ ಪಡೆ

0

ಇಂದು ಮುಂಜಾನೆ ರಜೌರಿ-ಗುರ್ದನ್ ರಸ್ತೆಯ ಪಕ್ಕದಲ್ಲಿ ಇರಿಸಲಾಗಿದ್ದ ಸುಧಾರಿತ ಸ್ಫೋಟಕ ಸಾಧನವನ್ನು ಭದ್ರತಾ ಪಡೆಗಳು ಪತ್ತೆಹಚ್ಚಿ ನಾಶಪಡಿಸಿವೆ. ಈ ಮೂಲಕ ಭಯೋತ್ಪಾದಕ ಸಂಚನ್ನು ವಿಫಲಗೊಳಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ವಕ್ತಾರರ ಪ್ರಕಾರ, ಕಳೆದ ರಾತ್ರಿ ರಾಜೌರಿ-ಗಾರ್ಡನ್ ರಸ್ತೆಯಲ್ಲಿರುವ ಗುಡ್ಡನ್ ಚಾವಾ ಗ್ರಾಮದಲ್ಲಿ ಕೆಲವು ಅನುಮಾನಾಸ್ಪದ ಚಲನವಲನಗಳ ಬಗ್ಗೆ ಮಾಹಿತಿ ಸಿಕ್ಕಿವೆ ಎಂದು ಪೊಲೀಸ್ ವಕ್ತಾರರು ಹೇಳಿದ್ದಾರೆ.

ಪೊಲೀಸರು ಹಾಗೂ ಸೇನಾ ಸಿಬ್ಬಂದಿಯ ಜಂಟಿ ತಂಡಗಳು ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಈ ಸಂದರ್ಭದಲ್ಲಿ ರಸ್ತೆಬದಿಯಲ್ಲಿ ಅನುಮಾನಸ್ಪದ ವಸ್ತುಗಳು ಪತ್ತೆಯಾದವು. ತಪಾಸಣೆ ವೇಳೆ ವಸ್ತು ಸ್ಫೋಟಕ ಎಂದು ತಿಳಿಯಿತು.

ನಂತರ ಪೊಲೀಸರ ಬಾಂಬ್ ಸ್ಕ್ವಾಡ್ ಮೂಲಕ ತಪಾಸಣೆ ಮಾಡಿದರು. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.

ಎಲ್ಲರಿಗೂ ಸಮಾಧಾನ ತರುವ ಸುದ್ದಿ- ಕೋವಿಡ್ ಅಂತ್ಯದತ್ತ ಸಾಗಿದೆ

0

ಭಾರತದಲ್ಲಿ ಮಹಾಮಾರಿ ಕೊರೋನಾ 3ನೇ ಅಲೆ ಅಂತ್ಯದತ್ತ ಸಾಗಿದೆ. ದೇಶದಲ್ಲಿ 24 ಗಂಟೆಗಳಲ್ಲಿ 975 ಕೋವಿಡ್ ಪ್ರಕರಣಗಳು ಪತ್ತೆಯಾಗಿ 4 ಮಂದಿ ಸಾವನ್ನಪ್ಪಿದ್ದಾರೆ.

ದೇಶದಲ್ಲಿ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 4,30,40,947ಕ್ಕೆ ಏರಿಕೆಯಾಗಿದೆ. ಕೋವಿಡ್ ನಿಂದ ಸಾವನ್ನಪ್ಪಿರುವವರ ಸಂಖ್ಯೆ 5,21,749ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 11,366ಕ್ಕೆ ಇಳಿಕೆಯಾಗಿದೆ.

ಈ ನಡುವೆ ಕಳೆದ 24 ಗಂಟೆಗಳಲ್ಲಿ 796 ಮಂದಿ ಗುಣಮುಖರಾಗುವುದರೊಂದಿಗೆ ಇದುವರೆಗೆ ಚೇತರಿಸಿಕೊಂಡವರ ಸಂಖ್ಯೆ 4,25,07,834ಕ್ಕೆ ತಲುಪಿದೆ.

ಇನ್ನು ಭಾರತದಲ್ಲಿ ಒಂದೇ 3,67,213 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದೆ. ಈ ವರೆಗೂ 83,11,77,370 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ತಿಳಿಸಿದೆ.

ಭಾರತದಲ್ಲಿ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಕೊರೋನಾ ಲಸಿಕೆಗೆ ಪ್ರಧಾನಿ ಮೋದಿ ಅವರು ಚಾಲನೆ ನೀಡಿದ್ದರು. ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್’ಗೆ ಲಸಿಕೆಯ ಮೊದಲ ಆದ್ಯತೆಯನ್ನು ನೀಡಲಾಗಿತ್ತು. ನಂತರ 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರಿಗೆ ಲಸಿಕೆ ನೀಡಲಾಗಿತ್ತು. ಮೇ.1ರಿಂದ 18-45 ವರ್ಷ ವಯಸ್ಸಿನ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ.

ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ 1,86,30,62,546 ಜನರಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ತಿಳಿಸಿದೆ.

ಕೆಜಿಎಫ್ 2 ಬಾಲಿವುಡ್ ಕಲೆಕ್ಷನ್ ಹೊಸಕಿಹಾಕಿದೆ- ರಾಮ್ ಗೋಪಾಲ್

0

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್- 2 ಗುರುವಾರ ದೇಶ,ವಿದೇಶಗಳಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವು ಭಾರತ ಸೇರಿದಂತೆ 70ಕ್ಕೂ ಅಧಿಕ ದೇಶಗಳಲ್ಲಿ ತೆರೆಕಂಡಿದೆ. ಸಿನಿಪ್ರೇಮಿಗಳಿಗೆ ಈ ಚಿತ್ರ ಹೃದಯ ಗೆದ್ದುಕೊಂಡಿದೆ.

ಇದೇ ಸಂದರ್ಭದಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೆಜಿಎಫ್ 2 ಚಿತ್ರದ ಬಗ್ಗೆ ತಮ್ಮ ಸರಣಿ ಟ್ವೀಟ್ ಗಳ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಹಿಂದಿ ಚಿತ್ರೋದ್ಯಮವನ್ನು ಬಿಡಿ, ಕೆಜಿಎಫ್ ಮತ್ತು ಈಗ ತೆಲುಗು ಹಾಗೂ ತಮಿಳು ಚಿತ್ರರಂಗ ಕೂಡ ಕನ್ನಡ ಚಿತ್ರರಂಗವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಈಗ ಪ್ರಶಾಂತ್ ನೀಲ್ ಕೆಜಿಎಫ್ 2 ಮೂಲಕ ಅದನ್ನು ವಿಶ್ವ ಭೂಪಟದಲ್ಲಿ ಇರಿಸಿದ್ದಾರೆ.

ರಾಕಿ ಮುಂಬೈಗೆ ಮಷಿನ್ ಗನ್ ಮೂಲಕ ವಿಲನ್ ಗಳನ್ನು ಸೆದೆಬಡಿಯಲು ಹೇಗೆ ಬರುತ್ತಾರೋ ಹಾಗೆ ಯಶ್ ಅಕ್ಷರಶಃ ಎಲ್ಲಾ ಬಾಲಿವುಡ್ ತಾರೆಯರ ಕಲೆಕ್ಷನ್ ನ್ನು ಮಷಿನ್ ಗನ್ ಮೂಲಕ ಓಪನಿಂಗ್ ಕಲೆಕ್ಷನ್ ಹೊಸಕಿ ಹಾಕಿದಂತೆ. ಇದರ ಫೈನಲ್ ಕಲೆಕ್ಷನ್ ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ನ ಮೇಲೆ ಎಸೆದ ಅಣುಬಾಂಬ್ ಆಗಿರುತ್ತದೆ.

ರಷ್ಯದ ಯುದ್ಧನೌಕೆಯನ್ನ ಕಪ್ಪು ಸಮುದ್ರದಲ್ಲಿ ಮುಳುಗಿಸಿದ ಉಕ್ರೇನ್

0

ರಷ್ಯಾದ ಪ್ರಮುಖ ಯುದ್ಧನೌಕೆ ಕಪ್ಪು ಸಮುದ್ರದಲ್ಲಿ ಗುರುವಾರ ಮುಳುಗಿದೆ. ತನ್ನ ನೆಪ್ಚೂನ್ ಕ್ಷಿಪಣಿ ಅಪ್ಪಳಿಸಿದ್ದರಿಂದ ಯುದ್ಧನೌಕೆ ಮುಳುಗಿದೆ ಎಂದು ಉಕ್ರೇನ್ ಮಾಹಿತಿ ತಿಳಿಸಿದೆ. ಆದರೆ, ನೌಕೆಯಲ್ಲಿದ್ದ ಶಸ್ತ್ರಾಸ್ತ್ರ ಸ್ಫೋಟಗೊಂಡು ನೌಕೆ ಹಾನಿ ಮುಳುಗಿದೆ ಎಂದು ರಷ್ಯಾ ಪ್ರತಿಪಾದಿಸಿದೆ.

ಮೋಸ್ಕ್ವ ಫ್ಲ್ಯಾಗ್‌ಶಿಪ್ ಯುದ್ಧನೌಕೆ‌ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಯುದ್ಧನೌಕೆ ಮುಳುಗಲು ಕಾರಣವೇನು ಎಂಬುವುದಕ್ಕೆ ಇನ್ನೂ ಸ್ಪಷ್ಟ ಮಾಹಿತಿ ದೊರೆತಿಲ್ಲ. ನೌಕೆಯಲ್ಲಿದ್ದ ಶಸ್ತ್ರಾಸ್ತ್ರ ಸ್ಫೋಟಿಸಿದ್ದರಿಂದ ನೌಕೆ ಹಾನಿಗೊಳಗಾಗಿದೆ.

ಅದನ್ನು ಈಗ ದಡಕ್ಕೆ ಎಳೆದು ತಂದು ಲಂಗರು ಹಾಕಲಾಗಿದೆ ಎಂದು ರಷ್ಯಾದ ರಕ್ಷಣಾ ಇಲಾಖೆ ಮಾಹಿತಿ ತಿಳಿಸಿದೆ. ರಷ್ಯಾ ಸೇನೆಯ ಮುತ್ತಿಗೆಗೆ ಒಳಗಾಗಿರುವ ಉಕ್ರೇನ್ ನ ಆಯಕಟ್ಟಿನ ಬಂದರು ನಗರ ಮರಿಯುಪೋಲ್ನಲ್ಲಿ ಈ ನೌಕೆಯನ್ನು ನಿಯೋಜಿಸಲಾಗಿತ್ತು. ಈ ಮಧ್ಯೆ, ಗಡಿಯುದ್ದಕ್ಕೂ ಅಲ್ಲಲ್ಲಿ ಆಕ್ರಮಣದ ಪ್ರಕರಣ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೀವ್ ವಿರುದ್ಧದ ಕ್ಷಿಪಣಿ ದಾಳಿಯನ್ನು ಹೆಚ್ಚಿಸಲಾಗುತ್ತದೆ ಎಂದು ರಷ್ಯಾ ಎಚ್ಚರಿಕೆ ನೀಡಿದೆ.

ರಷ್ಯಾದ ಭೂಪ್ರದೇಶದಲ್ಲಿ ಉಕ್ರೇನ್ ರಾಷ್ಟ್ರೀಯತಾವಾದಿ ಆಡಳಿತ ನಡೆಸುವ ಯಾವುದೇ ವಿಧ್ವಂಸಕ ಕೃತ್ಯ ಅಥವಾ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಕೀವ್ ಅನ್ನು ಗುರಿಯಾಗಿಸಿ ನಡೆಸುವ ಆಕ್ರಮಣದ ಪ್ರಮಾಣ ಹಾಗೂ ಸಂಖ್ಯೆ ಹೆಚ್ಚಾಗಲಿದೆ ಎಂದು ರಷ್ಯಾದ ರಕ್ಷಣಾ ಇಲಾಖೆ ತಿಳಿಸಿದೆ. ಅಲ್ಲದೆ ನಿನ್ನೆ ದೀರ್ಘದೂರ ವ್ಯಾಪ್ತಿಯ ಕ್ಷಿಪಣಿ ಪ್ರಯೋಗಿಸಿ, ಉಕ್ರೇನ್ ರಾಜಧಾನಿಯ ಪಕ್ಕದಲ್ಲಿರುವ ಮಿಲಿಟರಿ ಕಾರ್ಖಾನೆಯ ಮೇಲೆ ದಾಳಿ ನಡೆಸಿ ಅದನ್ನು ನಾಶಗೊಳಿಸಲಾಗಿದೆ ಎಂದು ರಷ್ಯಾ ಹೇಳಿದೆ. ಈ ಕಾರ್ಖಾನೆಯಲ್ಲಿ ನೆಪ್ಚೂನ್ ಕ್ಷಿಪಣಿ ಉತ್ಪಾದಿಸಲಾಗುತ್ತಿದೆ. ಈ ಕ್ಷಿಪಣಿ ಬಳಸಿ ರಷ್ಯಾದ ಯುದ್ಧನೌಕೆಯನ್ನು ಮುಳುಗಿಸಿರುವುದಾಗಿ ಉಕ್ರೇನ್ ಹೇಳಿತ್ತು.

ಮುಂದಿನ ಹತ್ತು ವರ್ಷಗಳಲ್ಲಿ ದೇಶದಲ್ಲಿ ವೈದ್ಯರ ಸಂಖ್ಯೆ ದಾಖಲೆ ಮಟ್ಟದಲ್ಲಿ ಹೆಚ್ಚಳ- ಮೋದಿ

0

ಇನ್ನು ಮುಂದಿನ 10 ವರ್ಷಗಳಲ್ಲಿ ದಾಖಲೆ ಮಟ್ಟದಲ್ಲಿ ಹೊಸ ವೈದ್ಯರನ್ನು ದೇಶ ಹೊಂದಲಿದೆ ಎಂದು ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.

ಗುಜರಾತ್‌ನ ಭುಜ್ ಜಿಲ್ಲೆಯಲ್ಲಿರುವ ಕೆಕೆ ಪಟೇಲ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಿನ್ನೆ ಉದ್ಘಾಟನೆ ಮಾಡಿದ್ದಾರೆ.

ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಅವರು, ಕೇಂದ್ರ ಸರ್ಕಾರದ ಹೊಸ ನೀತಿಯ ಅನುಸಾರ ದೇಶದ ಪ್ರತಿಯೊಂದು ಜಿಲ್ಲೆಗಳಲ್ಲೂ ಕನಿಷ್ಟ ಒಂದು ವೈದ್ಯಕೀಯ ಕಾಲೇಜುಗಳನ್ನ ಸ್ಥಾಪಿಸುವ ಗುರಿ ಹೊಂದಿದೆ. ವೈದ್ಯಕೀಯ ಶಿಕ್ಷಣ ಎಲ್ಲರಿಗೂ ದೊರೆಯಬೇಕು ಎಂಬ ಉದ್ದೇಶದಿಂದ ಈ ಪ್ರಯತ್ನಕ್ಕೆ ಮುಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಗುಜರಾತ್‌ ಎರಡು ದಶಕಗಳ ಹಿಂದೆ ಒಂಬತ್ತು ವೈದ್ಯಕೀಯ ಕಾಲೇಜುಗಳನ್ನು ಹೊಂದಿತ್ತು. ಅದರಲ್ಲಿ ಕೇವಲ 1100 ಸೀಟುಗಳು ಮಾತ್ರ ಇತ್ತು. ಆದರೆ, ಕಳೆದ 20 ವರ್ಷಗಳಲ್ಲಿ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಪ್ರಸ್ತುತ ಗುಜರಾತ್‌ನಲ್ಲಿ 36ಕ್ಕೂ ಅಧಿಕ ವೈದ್ಯಕೀಯ ಕಾಲೇಜುಗಳಿದೆ. ಪ್ರತಿವರ್ಷ 6000 ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ಈ ಮೂಲಕ ಯುವಜನತೆಗೆ ವೈದ್ಯಕೀಯ ಶಿಕ್ಷಣವನ್ನು ಮುಕ್ತವಾಗಿ ಪಡೆಯಲು ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆಯಲ್ಲಿ 2001ರಲ್ಲಿ ಉಂಟಾಗಿದ್ದ ಭೀಕರ ಭೂಕಂಪನದ ವಿನಾಶದ ಕುರಿತು ಪ್ರಧಾನಿ ಅವರು ನೆನಪು ಮಾಡಿಕೊಂಡರು. ಆಗಿನ ಸ್ಥಿತಿಯನ್ನು ಎದುರಿಸಿ ಭುಜ್ ಹಾಗೂ ಕಚ್‌ನ ಜನರು ತಮ್ಮ ಪರಿಶ್ರಮದಿಂದ ತಮ್ಮ ಪ್ರದೇಶವನ್ನು ಕಟ್ಟಿದ್ದಾರೆ ಎಂದು ಹೇಳಿದರು. ಭುಜ್ ನಲ್ಲಿ ಸ್ಥಾಪಿಸಿರುವ ವೈದ್ಯಕೀಯ ಆಸ್ಪತ್ರೆ ಜನರಿಗೆ ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲಿದೆ ಎಂದು ಒತ್ತಿ ತಿಳಿಸಿದರು.

ಕೆಕೆ ಪಟೇಲ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನ ಶ್ರೀ ಕುಟ್ಚಿ ಲೇವಾ ಪಟೇಲ್ ಸಮಾಜ ನಿರ್ಮಿಸಿದೆ. 200 ಹಾಸಿಗೆಯನ್ನು ಹೊಂದಿರುವ ಈ ಆಸ್ಪತ್ರೆಯಲ್ಲಿ ಬಡವರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನ ಕಡಿಮೆ ದರದಲ್ಲಿ ನೀಡಲಿದೆ ಎಂದು ಮಾಹಿತಿ ನೀಡಿದ್ದಾರೆ.

ಶ್ರೀಮಠಕ್ಕೆ ಬರುವವರು ಜಾತಿ ಮತ್ತು ಪಕ್ಷವನ್ನು ಹೊರಗಿಟ್ಟು ಬನ್ನಿ-ಹರಿಹರಪುರಶ್ರೀ

0

ಭಾರತೀಯ ಸಂಸ್ಕೃತಿಯ ನಂಬಿಕೆ ಮತ್ತು ಆಚಾರ ವಿಚಾರಗಳಿಗೆ ಶಕ್ತಿ ತುಂಬುವ ಕೆಲಸ ಧಾರ್ಮಿಕ ಕೇಂದ್ರಗಳಿಂದ ಆಗುತ್ತಿದೆ ಎಂದು ಶ್ರೀಮದ್‌ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳವರು ನುಡಿದರು.

ಹರಿಹರಪುರ ಮಠದಲ್ಲಿ ಮಹಾ ಕುಂಭಾಭಿಷೇಕ ಕಾರ್ಯಕ್ರಮದ ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಅದ್ವೈತ ಸಿದ್ಧಾಂತದ ಪ್ರಕಾರ ಸಮಾನತೆಯನ್ನು ಕಾಪಾಡುವುದು ಧರ್ಮಗಳನ್ನು ಉಳಿಸುವುದು ಮಠ ಮತ್ತು ಧಾರ್ಮಿಕ ಕೇಂದ್ರಗಳ ಕೆಲಸವಾಗಬೇಕು ಎಂದರು.

ಅದ್ವೈತಿಗಳಾದ ನಾವು ವೈವಿಧ್ಯತೆಯನ್ನು ಬಯಸುವವರು. ಸಮಾಜದಲ್ಲಿ ಶಾಂತಿ ಸಾಮರಸ್ಯ ನೆಲೆ ನಿಲ್ಲುವವರೆಗೂ ನಾವು ವಿಶ್ರಮಿಸುವುದಿಲ್ಲ. ಮುಂದಿನ ದಿನಗಳಲ್ಲಿ ಶ್ರೀ ಮಠದಲ್ಲಿ ಸೌಹಾರ್ದತೆಯನ್ನು ಸಾರುವ ಅನೇಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಶ್ರೀ ಮಠಕ್ಕೆ ಸಾಮರಸ್ಯದಿಂದ ಬೇಧಭಾವವಿಲ್ಲದೇ ಎಲ್ಲರೂ ಬರಬಹುದಾಗಿದೆ. ಶ್ರೀ ಮಠಕ್ಕೆ ಬರುವವರು ಜಾತಿ ಮತ್ತು ಪಕ್ಷವನ್ನು ಮಠದ ಹೊರಗೆ ಬಿಟ್ಟು ಬನ್ನಿ. ಭಗವಂತನ ಸನ್ನಿಧಿಯಲ್ಲಿ ಎಲ್ಲರೂ ಸಮಾನರು ಎಂದರು.

ವೈವಿಧ್ಯತೆಯಲ್ಲಿ ಏಕತೆ ಇರುವ ನಾಡು ನಮ್ಮದಾಗಿದೆ. ಕೆಲವರು ವೈವಿಧ್ಯತೆಯನ್ನೇ ನಕಾರಾತ್ಮಕವಾಗಿ ಬಿಂಬಿಸಿ ಸಮಾಜದಲ್ಲಿ ಅಶಾಂತಿಯ ವಾತಾವರಣವನ್ನು ಸೃಷ್ಠಿಸುತ್ತಿದ್ದಾರೆ. ಸಮುದಾಯದ ಸಂಘಟನೆಗಳು ಸಾಮರಸ್ಯವನ್ನು ಮಾತಾಡಲು ಮುಂದಾಗಿದೆ. ಧರ್ಮ ಎಂದರೆ ಪರಸ್ಪರ ಜೋಡಿವುದೇ ಹೊರತು, ತುಂಡರಿಸುವುದಲ್ಲ. ತಾರತಮ್ಯ ಭಾವನೆಯಿಂದ ಹೊರಬಂದು ಸಾಮರಸ್ಯ ಸೌಹಾರ್ದತೆ ಮೆರೆಯಲು ಮುಂದಾಗಬೇಕು ಎಂದು ಹೇಳಿದರು.

ಭಗವಂತನು ಎಲ್ಲರಲ್ಲೂ ಇದ್ದಾನೆ. ಅವರವರ ಸೇವೆಗೆ ಅನುಗುಣವಾಗಿ ಫಲಾಫಲಗಳನ್ನು ಕೊಡುವವನು ಭಗವಂತ. ಬುದ್ಧನ ಹೃದಯ ಆದಿಶಂಕರಾಚಾರ್ಯರ ಮೆದುಳು. ಇವೆರಡು ಸೇರಿದಲ್ಲಿ ಸುಸಂಸ್ಕೃತಿಯ ಸಮಾಜ ಸೃಷ್ಠಿಯಾಗಲಿದೆ ಎಂದರು.

ಕುಂಭಾಭಿಷೇಕ ಕಾರ್ಯಕ್ರಮವು ಪರಮಾತ್ಮನ ಪ್ರೇರಣೆಯಂತೆ ಐತಿಹಾಸಿಕ ಕಾರ್ಯಕ್ರಮವಾಗಿ ನಡೆದಿದೆ. ಸಂಕಲ್ಪ ನಮ್ಮದು ಪ್ರೇರಣೆ ಭಗವಂತನದ್ದು, ಆತನ ಪ್ರೇರಣೆಯಂತೆ ಸಹಸ್ರಾರು ಭಕ್ತಾದಿಗಳ ಸೇವೆ ಮತ್ತು ಶ್ರಮ ಇದರಲ್ಲಿ ಅಡಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಅವರ ಆಶಯದಂತೆ ಸ್ವಸಹಾಯ ಸಂಘದ ಎಲ್ಲ ಸದಸ್ಯರು ಕಾರ್ಯಕ್ರಮದ ಏಳಿಗೆಗಾಗಿ ಶ್ರಮ ವಹಿಸಿದ್ದಾರೆ. ಅನೇಕರು ಸ್ವಯಂಪ್ರೇರಣೆಯಿಂದ ಪಾಲ್ಗೊಂಡಿದ್ದಾರೆ.

ಪರೋಕ್ಷವಾಗಿ, ಪ್ರತ್ಯಕ್ಷವಾಗಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂದವರಿಗೆ ಶ್ರೀಲಕ್ಷ್ಮೀನರಸಿಂಹ ದೇವರ ಹಾಗೂ ಶಾರದಾ ಪರಮೇಶ್ವರಿಯ ಪರಿಪೂರ್ಣ ಆಶೀರ್ವಾದವಿರಲಿ ಎಂದರು.

ಶ್ರೀಲಂಕಾ ಬಿಕ್ಕಟ್ಟು ಪೆಟ್ರೋಲ್ ಗೆ ಪಡಿತರ ವ್ಯವಸ್ಥೆ

0

ಶ್ರೀಲಂಕಾದಲ್ಲಿ ಭಾರೀ ಆರ್ಥಿಕ ಬಿಕ್ಕಟ್ಟು ಉಂಟಾಗಿರುವ ಹಿನ್ನೆಲೆಯಲ್ಲಿ, ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನು ಪಡಿತರದ ರೀತಿ ಸೀಮಿತ ಪ್ರಮಾಣದಲ್ಲಿ ವಿತರಿಸುವಂತೆ ವಿತರಣೆ ಮಾಡುವುದಾಗಿ ಸರ್ಕಾರ ಘೋಷಿಸಿದೆ.

ಈ ಕ್ರಮವು ತತ್‌ಕ್ಷಣದಿಂದಲೇ ಜಾರಿಗೆ ಬರುವುದಾಗಿ ತಿಳಿಸಿದೆ.
ಈ ಪ್ರಕಾರ, ಒಂದು ಸಲಕ್ಕೆ ಮೋಟಾರ್‌ ಸೈಕಲ್‌ ಅಥವಾ ದ್ವಿಚಕ್ರ ವಾಹನಗಳು ಪೆಟ್ರೋಲ್‌ ಬಂಕ್‌ಗಳಲ್ಲಿ ಗರಿಷ್ಠ 1000 ರು. ವರೆಗೆ ಮಾತ್ರ ತೈಲ ಖರೀದಿಸಬಹುದು. ತ್ರಿಚಕ್ರ ವಾಹನಗಳು ಗರಿಷ್ಠ 1,500 ರು. ವರೆಗೆ ಹಾಗೂ ಕಾರು, ಜೀಪು, ವ್ಯಾನುಗಳು ಗರಿಷ್ಠ 5000 ರು. ವರೆಗೆ ಪೆಟ್ರೋಲ್‌ ಅಥವಾ ಡೀಸೆಲ್‌ ಖರೀದಿಸಬಹುದು. ಇನ್ನು ಬಸ್ಸು, ಲಾರಿ ಮತ್ತಿತರ ವಾಣಿಜ್ಯ ವಾಹನಗಳು ಈ ನಿರ್ಬಂಧದಿಂದ ವಿನಾಯ್ತಿ ಪಡೆಯಲಿವೆ ಎಂದು ತಿಳಿಸಿದೆ.

ಆರ್ಥಿಕ ಪತನದಿಂದಾಗಿ ಭಾರೀ ಪ್ರಮಾಣದ ತೈಲ ಕೊರತೆ ಸೃಷ್ಟಿಯಾಗಿರುವುದು ಶ್ರೀಲಂಕಾ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಜೊತೆಗೆ ವಿದ್ಯುತ್‌, ಅಗತ್ಯ ವಸ್ತುಗಳ ಕೊರತೆಯೂ ಉಂಟಾಗಿ ಜನರು ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈಗಾಗಲೇ ತೀವ್ರ ಆರ್ಥಿಕ ಹೊಡೆತದಿಂದ ತತ್ತರಿಸುತ್ತಿರುವ ಶ್ರೀಲಂಕಾ ಮತ್ತೊಂದು ಭಾರೀ ಬಿಕ್ಕಟ್ಟಿನ ಕೂಪಕ್ಕೆ ನೂಕಲ್ಪಡುವ ಅಪಾಯ ಎದುರಿಸುತ್ತಿದೆ. ಭಾರತ ನೀಡಿದ್ದ 500 ದಶಲಕ್ಷ ಡಾಲರ್‌ ಸಾಲದ ಹಣ ಖಾಲಿ ಆಗುತ್ತಿದ್ದು, ಏಪ್ರಿಲ್‌ ಅಂತ್ಯಕ್ಕೆ ದೇಶದಲ್ಲಿನ ಡೀಸೆಲ್‌ ದಾಸ್ತಾನು ಖಾಲಿ ಆಗುವ ಭೀತಿ ಸೃಷ್ಟಿಯಾಗಿದೆ.

ಇನ್ನೊಂದೆಡೆ ಔಷಧ ಹಾಗೂ ವೈದ್ಯಕೀಯ ಸಲಕರಣೆಗಳ ಖರೀದಿಗೂ ಹಣವಿಲ್ಲದಂತಾಗಿದ್ದು, ಶೀಘ್ರದಲ್ಲೇ ತುರ್ತು ಚಿಕಿತ್ಸೆ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಇದರ ನಡುವೆ, ಸರ್ಕಾರದ ವೈಫಲ್ಯದ ವಿರುದ್ಧ ವಿಪಕ್ಷಗಳು ಸಿಡಿದೆದ್ದಿವೆ. ಶೀಘ್ರದಲ್ಲೇ ಬಿಕ್ಕಟ್ಟು ಬಗೆಹರಿಸದೇ ಇದ್ದರೆ ಗೋಟಬಾಯ ರಾಜಪಕ್ಸೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗುತ್ತದೆ ಎಂದು ಪ್ರಮುಖ ವಿಪಕ್ಷ ಎಚ್ಚರಿಸಿದೆ. ಉದ್ದಿಮೆದಾರರು ಹಾಗೂ ವ್ಯಾಪಾರಿಗಳು ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಮುಖ ವಸ್ತುಗಳ ರಫ್ತು ಶೇ.30ರಷ್ಟುಕುಸಿಯಲಿದ್ದು, ಮತ್ತಷ್ಟುಆರ್ಥಿಕ ಸಂಕಟ ಎದುರಾಗಲಿದೆ ಎಂದು ಹೇಳಿದ್ದಾರೆ. ಈಗಾಗಲೇ 41 ಸಂಸದರು ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದಿದ್ದಾರೆ. ಆದರೂ ತಮಗೆ ಬಹುಮತ ಇದೆ ಎಂದು ರಾಜಪಕ್ಸೆ ಹೇಳಿಕೊಳ್ಳುತ್ತಿದ್ದಾರೆ.

ಈಗಾಗಲೇ ತೀವ್ರ ಆರ್ಥಿಕ ಹೊಡೆತದಿಂದ ತತ್ತರಿಸುತ್ತಿರುವ ಶ್ರೀಲಂಕಾ ಮತ್ತೊಂದು ಭಾರೀ ಬಿಕ್ಕಟ್ಟಿನ ಕೂಪಕ್ಕೆ ನೂಕಲ್ಪಡುವ ಅಪಾಯ ಎದುರಿಸುತ್ತಿದೆ.

ಭಾರತ ನೀಡಿದ್ದ 500 ದಶಲಕ್ಷ ಡಾಲರ್‌ ಸಾಲದ ಹಣ ಖಾಲಿ ಆಗುತ್ತಿದ್ದು, ಏಪ್ರಿಲ್‌ ಅಂತ್ಯಕ್ಕೆ ದೇಶದಲ್ಲಿನ ಡೀಸೆಲ್‌ ದಾಸ್ತಾನು ಖಾಲಿ ಆಗುವ ಭೀತಿ ಸೃಷ್ಟಿಯಾಗಿದೆ. ಇನ್ನೊಂದೆಡೆ ಔಷಧ ಹಾಗೂ ವೈದ್ಯಕೀಯ ಸಲಕರಣೆಗಳ ಖರೀದಿಗೂ ಹಣವಿಲ್ಲದಂತಾಗಿದ್ದು, ಶೀಘ್ರದಲ್ಲೇ ತುರ್ತು ಚಿಕಿತ್ಸೆ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಸರ್ಕಾರದ ವೈಫಲ್ಯದ ವಿರುದ್ಧ ವಿಪಕ್ಷಗಳು ಸಿಡಿದೆದ್ದಿವೆ. ಶೀಘ್ರದಲ್ಲೇ ಬಿಕ್ಕಟ್ಟು ಬಗೆಹರಿಸದೇ ಇದ್ದರೆ ಗೋಟಬಾಯ ರಾಜಪಕ್ಸೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗುತ್ತದೆ ಎಂದು ಪ್ರಮುಖ ವಿಪಕ್ಷ ಎಚ್ಚರಿಸಿದೆ. ಉದ್ದಿಮೆದಾರರು ಹಾಗೂ ವ್ಯಾಪಾರಿಗಳು ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಮುಖ ವಸ್ತುಗಳ ರಫ್ತು ಶೇ.30ರಷ್ಟುಕುಸಿಯಲಿದ್ದು, ಮತ್ತಷ್ಟುಆರ್ಥಿಕ ಸಂಕಟ ಎದುರಾಗಲಿದೆ ಎಂದು ಹೇಳಿದ್ದಾರೆ.

ಈಗಾಗಲೇ 41 ಸಂಸದರು ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದಿದ್ದಾರೆ. ಆದರೂ ತಮಗೆ ಬಹುಮತ ಇದೆ ಎಂದು ರಾಜಪಕ್ಸೆ ಹೇಳಿಕೊಳ್ಳುತ್ತಿದ್ದಾರೆ.

ಷಹಬಾಜ್ ನೇತೃತ್ವದ ಸರ್ಕಾರ ಪತನಕ್ಕೆ ದೇಣಿಗೆ ಕೊಡಿ- ಇಮ್ರಾನ್ ಕರೆ

0

ಶೆಹಬಾಝ್ ಶರೀಫ್ ನೇತೃತ್ವದ ವಿದೇಶಿ ಬೆಂಬಲಿತ ಸರ್ಕಾರವನ್ನು ಪತನಗೊಳಿಸಲು ವಿದೇಶಗಳಲ್ಲಿ ನೆಲೆಸಿರುವ ಪಾಕಿಸ್ತಾನಿಗಳು ತಮ್ಮ ಪಾಕಿಸ್ತಾನ್ ತೆಹ್ರಿಕ್ ಇ ಇನ್ಸಾಫ್ (ಪಿಟಿಐ) ಪಕ್ಷಕ್ಕೆ ದೇಣಿಗೆ ನೀಡಬೇಕು ಎಂದು ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ಮನವಿ ಮಾಡಿದ್ದಾರೆ.

ವಿಚಿತ್ರವೆಂದರೆ ತಮ್ಮ ಸರ್ಕಾರ ಪತನಗೊಳಿಸಲು ಅಮೆರಿಕ ಸಂಚು ಹೂಡಿತ್ತು ಎಂಬ ಆರೋಪ ಮಾಡಿರುವ ಇಮ್ರಾನ್ ಇದೀಗ ಹಾಲಿ ಸರ್ಕಾರವನ್ನು ಪತನಗೊಳಿಸಲು ಸಾಗರೋತ್ತರ ಪಾಕಿಸ್ತಾನಿಗಳ ನೆರವು ಕೋರಿದ್ದಾರೆ.

ಟ್ವಿಟ್ಟರ್ ವೀಡಿಯೊ ಮೂಲಕ ಸಾಗರೋತ್ತರ ಪಾಕಿಸ್ತಾನಿಗಳಿಗೆ, ಶೆಹಬಾಝ್ ಶರೀಫ್ ಸರ್ಕಾರವನ್ನು ಪದಚ್ಯುತಗೊಳಿಸಿ ಹೊಸ ಚುನಾವಣೆ ನಡೆಸುವ ಸಂಬಂಧ ದೇಣಿಗೆಗಳನ್ನು ಸಂಗ್ರಹಿಸುತ್ತಿರುವ namanzoor.com ಎಂಬ ವೆಬ್‍ಸೈಟನ್ನು ಇಮ್ರಾನ್ ಪರಿಚಯಿಸಿದ್ದಾರೆ.

ಈ ಅಭಿಯಾನವನ್ನು ಹಖಿಖಿ ಅಝಾದಿ ಎಂದು ಕರೆದಿರುವ ಅವರು, ಭ್ರಷ್ಟ ಸರ್ಕಾರವನ್ನು ಪಾಕಿಸ್ತಾನದ 22 ಕೋಟಿ ಮಂದಿಯ ಮೇಲೆ ಹೇರಲಾಗಿದೆ ಎಂದು ಆಪಾದಿಸಿದ್ದಾರೆ.

ಶೆಹಬಾಝ್ ಶರೀಫ್ ಜತೆಗೆ ಸಂಚು ರೂಪಿಸಿರುವ ಅಮೆರಿಕ, ಪಾಕಿಸ್ತಾನಿ ಜನತೆಯ ಮೇಲೆ ಈ ಸರ್ಕಾರವನ್ನು ಹೇರಿದೆ ಎಂದು ಅವರು ಆಪಾದಿಸಿದ್ದಾರೆ.

ಶೆಹಬಾಝ್ ಶರೀಫ್ ಜತೆಗೆ ಸಂಚು ರೂಪಿಸಿರುವ ಅಮೆರಿಕ, ಪಾಕಿಸ್ತಾನಿ ಜನತೆಯ ಮೇಲೆ ಈ ಸರ್ಕಾರವನ್ನು ಹೇರಿದೆ ಎಂದು ಅವರು ಆಪಾದಿಸಿದ್ದಾರೆ.

ಈ ಅಭಿಯಾನವನ್ನು ಹಖಿಖಿ ಅಝಾದಿ ಎಂದು ಕರೆದಿರುವ ಅವರು, ಭ್ರಷ್ಟ ಸರ್ಕಾರವನ್ನು ಪಾಕಿಸ್ತಾನದ 22 ಕೋಟಿ ಮಂದಿಯ ಮೇಲೆ ಹೇರಲಾಗಿದೆ ಎಂದು ಆಪಾದಿಸಿದ್ದಾರೆ.

ಪಾಕಿಸ್ತಾನವನ್ನು ಪಿಟಿಐ ಪಾರ್ಟಿ ಅಥವಾ ಮೂರು ವರ್ಷಗಳಿಂದ ಜೈಲಿನಲ್ಲಿದ್ದು, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಭ್ರಷ್ಟ ಶರೀಫ್ ಕುಟುಂಬ ಹೀಗೆ ಯಾರು ಆಳ್ವಿಕೆ ಮಾಡಬೇಕು ಎಂದು ನಿರ್ಧರಿಸುವುದು ಪಾಕಿಸ್ತಾನಿಗಳ ಹಕ್ಕು ಎಂದು ವಿವರಿಸಿದ್ದಾರೆ.