Friday, February 27, 2026
Friday, February 27, 2026
Home Blog Page 1606

ಕೋವಿಡ್ ನಿರ್ಬಂಧ ಬೇಡ ಮುನ್ನೆಚ್ಚರಿಕೆ ಪಾಲಿಸಿ- ಮೋದಿ

0

ಕೊರೋನಾ 4 ನೇ ಅಲೆಯ ಭಯ ಇಡೀ ದೇಶದಲ್ಲಿ ಆರಂಭಗೊಂಡಿದೆ. ಈ ವಿಷಯದ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕೆಲವು ನಿರ್ದೇಶನಗಳನ್ನು ಸೂಚಿಸಿದ್ದಾರೆ.

ಪ್ರಧಾನ ಮಂತ್ರಿಗಳೊಂದಿಗೆ ನಡೆಸಿದ ಸಭೆಯ ನಂತರ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದರು.

ರಾಜ್ಯದಲ್ಲಿ ಸ್ಥಿತಿ ಹೇಗಿದೆ ಹಾಗೂ ಯಾವ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಅಂತ ಪ್ರಧಾನಿಗಳಿಗೆ ವಿವರಣೆ ನೀಡಲಾಗಿದೆ. ಎಂದು ಹೇಳಿದರು.

6ರಿಂದ 12 ವರ್ಷದ ಮಕ್ಕಳಿಗೆ ಲಸಿಕೆ ನೀಡುವುದನ್ನು ಶಾಲೆಗಳಲ್ಲೇ ಒಂದು ಅಭಿಯಾನದ ರೂಪದಲ್ಲಿ ಆರಂಭಿಸಲು ಅವರು ಸೂಚಿಸಿದ್ದಾರೆ ಎಂದು ಹೇಳಿದರು.

ಎಲ್ಲಾ ಹಂತಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಜನರು ಪಾಲಿಸುವಂತೆ ನಿಗಾವಹಿಸಬೇಕು. 15-18 ಪ್ರಾಯದ ಮಕ್ಕಳಿಗೆ ನೀಡಲಾಗುತ್ತಿರುವ ಲಸಿಕಾ ಅಭಿಯಾನವನ್ನು ಚುರುಕುಗೊಳಿಸಲು ಪ್ರಧಾನಿ ತಿಳಿಸಿದ್ದಾರೆ ಎಂದು ಬೊಮ್ಮಾಯಿ ಅವರು ಹೇಳಿದರು.

ಟೆಸ್ಟ್, ಟ್ರ್ಯಾಕ್, ಟ್ರೇಸ್ ಮತ್ತು ಟೀಕಾ-ನಾಲ್ಕು-ಟಿ ಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮಾಸ್ಕ್ ಧರಿಸದೆ ಓಡಾಡಬಾರದು.ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳುತ್ತಿರಬೇಕು.ಈ ನಿಯಮಗಳನ್ನು ಜಾರಿಗೊಳಿಸಿ ಅವುಗಳ ಪಾಲನೆ ಕುರಿತು ಎಚ್ಚರವಹಿಸಬೇಕು. ಕೊರೋನಾ ಸೋಂಕಿತರಿಗಾಗಿ ಆಸ್ಪತ್ರೆಗಳನ್ನು ಸಿದ್ಧಗೊಳಿಸಬೇಕು. ಎಲ್ಲ ಆಸ್ಪತ್ರೆಗಳಲ್ಲಿ ಬೆಂಕಿ ನಂದಿಸುವ ಉಪಕರಣ ಇರುವುದನ್ನು ಖಾತ್ರಿಪಡಿಸಿಕೊಳ್ಳಲು ಪ್ರಧಾನಿ ಮೋದಿ ತಿಳಿಸಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೊರೋನಾ ಲಸಿಕಾಕರಣ ಅಭಿಯಾನ ಬಹಳ ಬಿರುಸಾಗಿ ನಡೆದ ಕಾರಣ 3ನೇ ಅಲೆಯಲ್ಲಿ ತೊಂದರೆಯಾಗಲಿಲ್ಲ. ಆದ್ದರಿಂದ, ಇನ್ನೂ ಲಸಿಕೆಯ 2 ಡೋಸ್ ತೆಗೆದುಕೊಳ್ಳದವರಿದ್ದರೆ ಅವರ ಮನವೊಲಿಸಿ ಕೊಡಿಸಬೇಕು. ಅರ್ಹರಿಗೆ ಬೂಸ್ಟರ್ ಡೋಸ್ ನೀಡುವ ಕೆಲಸ ಎಡಬಿಡದೆ ಸಾಗಬೇಕು ಅಂತ ಪ್ರಧಾನಿ ಹೇಳಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.

ಜನರು ಅನಾವಶ್ಯಕವಾಗಿ ಅತಂಕ, ಗಾಬರಿಗೊಳಗಾಗದಂತೆ ನೋಡಿಕೊಳ್ಳಬೇಕು. ಸದ್ಯಕ್ಕೆ ಯಾವುದೇ ನಿರ್ಬಂಧ ಬೇಡ ಅಂತ ಪ್ರಧಾನಿ ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.

ಮುದ್ರಣ ಕಾಗದ ಬೆಲೆ ಏರಿದೆ.ಇಳಿಕೆ ಮಾಡಿ- ಸಿದ್ಧರಾಮಯ್ಯ

0

ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕೋದ್ಯಮ. ಇದರಲ್ಲಿ ಪತ್ರಿಕಾ ಮಾಧ್ಯಮ ಬಹಳ ಮಹತ್ವ ಪಡೆದಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಪತ್ರಿಕಾರಂಗಕ್ಕೆ ಮುದ್ರಣ ಕಾಗದದ ಬೆಲೆ ಏರಿಕೆ ತೀವ್ರವಾಗಿ ಕಾಡುತ್ತಿದೆ.

ಮುದ್ರಣ ಮಾಧ್ಯಮ ನಿರಾತಂಕವಾಗಿ ಮುಂದುವರಿಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಪತ್ರಿಕಾ ಸಂಸ್ಥೆಗಳಿಗೆ ಸುಗಮ ಮತ್ತು ಸರಳವಾಗಿ ಮುದ್ರಣ ಕಾಗದ ಲಭ್ಯವಾಗುವಂತೆ ಕೇಂದ್ರ ಸರ್ಕಾರ ನೀತಿ ರೂಪಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿಗೆ ಮನವಿ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.

ಪತ್ರಿಕಾಲಯಗಳನ್ನು ಕಾಗದದ ಮೇಲೆ ನೀಡಬೇಕಿದ್ದ ತೆರಿಗೆ ಪ್ರಮಾಣ ಈಗ ಶೇ.68 ಆಗಿದೆ. ಜಿಎಸ್​ಟಿ ಜಾರಿಗೆ ಬರುವ ಮುನ್ನ ಒಟ್ಟಾರೆ ಶೇ.3 ಮಾತ್ರ ತೆರಿಗೆ ಇತ್ತು. ಸದ್ಯದ ಪರಿಸ್ಥಿತಿಯಿಂದ ಪತ್ರಿಕೆಗಳ ದರವನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರ ಜತೆಗೆ ಪೆಟ್ರೋಲ್​-ಡಿಸೇಲೆ ಬೆಲೆ ಏರಿಕೆ, ಕಚ್ಚಾ ಪದಾರ್ಥಗಳ ಕೊರತೆ, ಕೋವಿಡ್​ ಸೃಷ್ಟಿಸಿದ ಪರಿಣಾಮ… ಮುದ್ರಣ ಕಾಗದದ ಬೆಲೆ ದುಪ್ಪಟ್ಟು ಏರಿಕೆ ಆಗಿದೆ. ಪತ್ರಿಕೆಗಳಿಗೆ ಬರುತ್ತಿದ್ದ ಜಾಹೀರಾತು ಪ್ರಮಾಣವೂ ಕಡಿಮೆ ಆಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಪತ್ರಿಕೆಗಳನ್ನು ನಡೆಸುವುದೇ ದುಸ್ತರವಾಗಿದೆ.

ಮಾಧ್ಯಮ ಕ್ಷೇತ್ರ ಪ್ರಜಾಪ್ರಭುತ್ವದ ನಾಲ್ಕನೇ ಅಂಗ. ಜನರ ಧ್ವನಿಯಾಗಿ ಕೆಲಸ ಮಾಡುತ್ತಿರುವ ಪ್ರತಿಕೆಗಳಿಗೆ ಇದೀಗ ಮುದ್ರಣ ಕಾಗದದ ಸಮಸ್ಯೆ ಕಾಡುತ್ತಿದೆ. ಅಗತ್ಯ ಪ್ರಮಾಣದಲ್ಲಿ ಕಾಗದ ಲಭ್ಯವಾಗುತ್ತಿಲ್ಲ ಎಂದು ಸಿದ್ದರಾಮಯ್ಯ ನವರು ವಿವರಿಸಿದ್ದಾರೆ.

ಪೇಪರ್ ಪ್ರಿಂಟ್ ಮಾಡಲು ಬಹಳ ವೆಚ್ಚ ತಗಲುತ್ತಿದ್ದು, ಆದಾಯ ಕಡಿಮೆ ಆಗಿದೆ. ಪರಿಣಾಮ ನಷ್ಟ ಉಂಟಾಗಿ ಬಹುತೇಕ ಸಂಸ್ಥೆಗಳು ನಷ್ಟ ಅನುಭವಿಸುತ್ತಿವೆ. ದಯವಿಟ್ಟು ಕೆಲ ನೀತಿಗಳನ್ನು ಬದಲಾಯಿಸಿ ಪತ್ರಿಕಾ ಮಾಧ್ಯಮದ ಸಮಸ್ಯೆಗೆ ಧ್ವನಿಯಾಗಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

 ಚಹಾದಲ್ಲಿ ಹೋದ ಮಾನ ಚೂಡಾ ಕೊಟ್ಟರೂ ಬರದು

0

ದತ್ತಗುರುಗಳ ದರ್ಶನಕ್ಕೆ ಬಂದ ಕೇಂದ್ರ ಸಚಿವರಿಗೆ ಏನೂ ತೊಂದರೆಯಾಗಲಿಲ್ಲ. ಆದರೆ ಅವರು ಒಂದು ಕ್ಷಣ ವಿಮಾನ ನಿಲ್ದಾಣದ ವಿಶ್ರಾಂತಿಕೋಣೆಯಲ್ಲಿ ಚಹಾ ಕೇಳಿದಾಗ ಆಯಿತು.

ಎಂತಹ ಇರಿಸುಮುರುಸಿನ ಪ್ರಸಂಗ ನಡೆದುಬಿಟ್ಟಿತು. ಒಂದು ಸಲ ಚಹಾ ಸಿಗುತ್ತ ಅಂತ ಕೇಳಿದರು. ಸುಮ್ಮನಾದರು.ಪ್ರಯಾಣದ ಪ್ರಯಾಸ ಪರಿಹಾರಕ್ಕೆ ಅಗತ್ಯವಿತ್ತು. 

ಈಗ ಯಾರೇ ಒಬ್ಬ ಪುಢಾರಿ ಬಂದರೂ ಪ್ರವಾಸಿ ಮಂದಿರಗಳಲ್ಲಿ ಚಹಾಬಿಸ್ಕತ್ತು ರೆಡಿ ಇರುತ್ತದೆ. ಆದರೆ ಕೇಂದ್ರ ಕ್ಯಾಬಿನೆಟ್ ಸಚಿವರಿಗೆ ಇಲ್ಲ ಎಂದರೆ ಆದೀತೆ! ಎರಡು ಬಾರಿ ಕೇಳಿದರೂ ಚಹಾ ಬರಲೇ ಇಲ್ಲ!.

ಈ ಘಟನೆ ನಡೆದದ್ದು ಕಲಬುರ್ಗಿಯಲ್ಲಿ. ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೇ ಚಹಾ ಕೇಳಿದವರು. ಗಾಣಗಾಪುರದಲ್ಲಿ ಎಲ್ಲವೂ ಸುಗಮವಾಗಿತ್ತು. ಆದರೆ ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ  ಮಾತ್ರ ಸಚಿವರು ಚಹಾ ಸಿಗದೇ ಚಡಪಡಿಸಿದರಂತೆ.

ಶಿಷ್ಟಾಚಾರದ ಪ್ರಕಾರ ಸಚಿವರಿಗೆ ಈ ಎಲ್ಲವೂ ಸಿದ್ಧವಾಗಿರಬೇಕು.

ಆಹಾರ ಸುರಕ್ಷತಾ ಅಧಿಕಾರಿಯ ಕರ್ತವ್ಯ ಅದು. ಇಲ್ಲಿ ಆದ ಪ್ರಮಾದವೆಂದರೆ ಅವರನ್ನೇ ಒಳಗಡೆ ಬಿಡದೆ ಭದ್ರತಾ ಅಧಿಕಾರಿಗಳು ಆಹಾರ ಸುರಕ್ಷತಾ ಸಿಬ್ಬಂದಿಯನ್ನ ಹೊರಗೆ ನಿಲ್ಲಿಸಿದ್ದರು. ಆದರೂ ಸಂಸದ  ಡಾ‌.ಉಮೇಶ್ ಜಾಧವ್ ಗೆ ಈ ವಿಷಯ ತಳಿಯಿತು.

ತಕ್ಷಣ ನಿಲ್ದಾಣದ ನಿರ್ದೇಶಕ ಜ್ಞಾನೇಶ್ವರ್ ಅವರನ್ನ  ತರಾಟೆಗೆ ತೆಗೆದುಕೊಂಡರು.

” ಇನ್ ಟೈಮ್ಗೆ ಟೀ ಕೊಡದಿದ್ರೆ.ನಮ್ಮ ಕರ್ನಾಟಕದ ಮಂತ್ರಿಗಳು ಏನು ತಿಳಿದುಕೊಳ್ಳುತ್ತಾರೆ?  ಮುಂದೆ ಹೀಗಾಗದಂತೆ ಬೀ ಕೇರ್ ” ಅನ್ನುವ ರೀತಿಯಲ್ಲಿ ಹೇಳಿದರಂತೆ. 

ಕೊನೆಗೆ ವಿಮಾನ ನಿಲ್ದಾಣದ ಹೊರಗಡೆ ಕ್ಯಾಂಟೀನ್ ನಿಂದ ಚಹಾ ಬಂತು.

ಸದ್ಯ ಸಚಿವ ಗಡ್ಕರಿ ಅವರು ಬೆಂಗಳೂರು ಮಂತ್ರಿಗಳಿಗೆ ಫೋನ್ ಮಾಡಿ ರಾದ್ಧಾಂತ ಎಬ್ಬಿಸಲಿಲ್ಲ. ಅದಕ್ಕೇ ಕನ್ನಡದ ಗಾದೆ ಮಾತಿನ ರೀತಿ 

” ಚಹಾದಲ್ಲಿ ಹೋದ ಮಾನ ,ಚೂಡಾ ಕೊಟ್ಟರೂ ಬರದು !” ಅನ್ನೋಣವೆ?

ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಲ್ಲಿ ನೇಮಕಾತಿ

0

ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಲಿಮಿಟೆಡ್, ಕ್ಲರ್ಕ್, ಅಟೆಂಡರ್, ಡ್ರೈವರ್ ಸೇರಿದಂತೆ 98 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಆಸಕ್ತ ಅಭ್ಯರ್ಥಿಗಳು ಮೇ 16, 2022ರಂದು ಅಥವಾ ಮೊದಲು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನಲ್ಲಿ ಖಾಲಿ ಇರುವ ಹುದ್ದೆಗಳ ಅಧಿಸೂಚನೆ
ಸಂಸ್ಥೆಯ ಹೆಸರು: ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಲಿಮಿಟೆಡ್ (ಶಿವಮೊಗ್ಗ ಡಿಸಿಸಿ ಬ್ಯಾಂಕ್)
ಹುದ್ದೆಗಳ ಸಂಖ್ಯೆ: 98
ಉದ್ಯೋಗ ಸ್ಥಳ: ಶಿವಮೊಗ್ಗ, ಕರ್ನಾಟಕ
ಹುದ್ದೆಯ ಹೆಸರು: ಕ್ಲರ್ಕ್, ಅಟೆಂಡರ್, ಡ್ರೈವರ್
ವೇತನ: 17000-62600 ರೂ.
ಶೈಕ್ಷಣಿಕ ಅರ್ಹತೆ: ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಹುದ್ದೆಗಳಿಗೆ ಅನುಗುಣವಾಗಿ 4ನೇ ತರಗತಿ, 10ನೇ ತರಗತಿ, ಪದವಿ/ ಬಿಟೆಕ್ ಪೂರ್ಣಗೊಳಿಸಿರಬೇಕು.
ವಯೋಮಿತಿ: ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಮೇ 16, 2022ಕ್ಕೆ ಅಥವಾ ಮೊದಲು ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

ಶಿವಮೊಗ್ಗ ಡಿಸಿಸಿ ಬ್ಯಾಂಕ್ ನೇಮಕಾತಿ 2022 ಅರ್ಹತಾ ವಿವರಗಳು ಹೀಗಿವೆ..

ಶೈಕ್ಷಣಿಕ ಅರ್ಹತೆ: ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಹುದ್ದೆಗಳಿಗೆ ಅನುಗುಣವಾಗಿ 4ನೇ ತರಗತಿ, 10ನೇ ತರಗತಿ, ಪದವಿ/ ಬಿಟೆಕ್ ಪೂರ್ಣಗೊಳಿಸಿರಬೇಕು.

ವಯೋಮಿತಿ: ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಮೇ 16, 2022ಕ್ಕೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.

ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳು: 03 ವರ್ಷಗಳು
SC, ST ಅಭ್ಯರ್ಥಿಗಳು: 5 ವರ್ಷಗಳು
Person With Disability (PWD) ಅಭ್ಯರ್ಥಿಗಳು: 10 ವರ್ಷಗಳು
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ/ ಸಿಬ್ಬಂದಿ ನಿಯಂತ್ರಣ ಸಮಿತಿ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಲಿಮಿಟೆಡ್. ಬಾಲರಾಜ್ ಅರಸ್ ರಸ್ತೆ, ಪಿ.ಬಿ.ಸಂ. 62, ಶಿವಮೊಗ್ಗ- 577201 ಮೇ 16, 2022ರ ಒಳಗೆ ಅರ್ಜಿ ಸಲ್ಲಿಸಬೇಕು.

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಕ್ಲರ್ಕ್, ಅಟೆಂಡರ್, ಡ್ರೈವರ್ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಕ್ರಮಗಳುಮೊದಲನೆಯದಾಗಿ ಶಿವಮೊಗ್ಗ ಸೆಂಟ್ರಲ್ ಕೋ ಆಪ್ ಬ್ಯಾಂಕ್ ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಬೇಕು.

ಕೆಳಗಿನ ಬ್ಯಾಂಕ್ ಶಿವಮೊಗ್ಗ ಕೇಂದ್ರ ಸಹಕಾರ ಲಿಂಕ್ ಅಥವಾ ಅಧಿಕೃತ ಅಧಿಸೂಚನೆಯಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಮತ್ತು ನಿಗದಿತ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.

ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.

ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ).

ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ.

ಪ್ರಮುಖ ದಿನಾಂಕಗಳು:
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಏಪ್ರಿಲ್ 22, 2022
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 16, 2022
ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: ಮೇ 16, 2022

ರಾಯಲ್ಸ್ ಗೆ ಗೆಲುವು ರಾಯಲ್ ಗೆ ಸೋಲು

0

ರಾಯಲ್ ಚಾಲೆಂಜರ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ ಭರ್ಜರಿ ಜಯ.

ಬ್ಯಾಟಿಂಗ್ನಲ್ಲಿ ಮುಗ್ಗರಿಸಿದ ಆರ್ಸಿಬಿ ರಾಜಸ್ಥಾನ್ ರಾಯಲ್ಸ್ 29 ರನ್ ಗಳ ಜಯ
ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿಯು ಬ್ಯಾಟಿಂಗ್ನಲ್ಲಿ ಸಂಪೂರ್ಣ ವಿಫಲವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 15ನೇ ಆವೃತ್ತಿಯ 39ನೇ ಪಂದ್ಯದಲ್ಲಿ ನೇತೃತ್ವದ ರಾಜಸ್ಥಾನ್ ರಾಯಲ್ಸ್ 29ರನ್ ಗಳಿಂದ ಶರಣಾಯಿತು.

ಎಂಸಿಎ ಕ್ರೀಡಾಂಗಣದಲ್ಲಿ ಮಂಗಳವಾರ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡು ಸಂಜು ಸ್ಯಾಮ್ಸನ್ ಬಳಗವನ್ನು 144 ರನ್ ಗಳಿಗೆ ಕಟ್ಟಿ ಹಾಕಿದ ಡುಪ್ಲೆಸಿಸ್ ಬಳಗ, ರಾಯಲ್ ಬೌಲರ್ ಗಳ ದಾಳಿಗೆ ತತ್ತರಿಸಿ 19. 3 ಓವರ್ ಗಳಲ್ಲಿ 115 ರನ್ ಗಳಿಗೆ ಸರ್ವ ಪತನಗೊಂಡಿತು. ಇದು ಬೆಂಗಳೂರು ತಂಡಕ್ಕೆ 9 ಪಂದ್ಯಗಳಲ್ಲಿ 4ನೇ ಸೋಲು. ಇದುವರೆಗೆ ಆಡಿದ 8 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದ ರಾಯಲ್ಸ್ ತಂಡ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3 ನೇ ಸ್ಥಾನದಿಂದ ಅಗ್ರಸ್ಥಾನಕ್ಕೆ ಜಿಗಿದರೆ, ಆರ್ಸಿಬಿ 5ನೇ ಸ್ಥಾನದಲ್ಲಿ ಉಳಿದುಕೊಂಡಿತು.
ಆರ್ಸಿಬಿ ಪರ ನಾಯಕ ಡುಪ್ಲೆಸಿಸ್ (23), ರಜಿತ್ ಪಾಟಿದಾರ್ (16), ಶಹಬಾಜ್ ಅಹಮದ್ (17) ಮತ್ತು ಹಸರಂಗ (18) ಮಾತ್ರ ಎರಡಂಕಿ ಮೊತ್ತ ಗಳಿಸಿದರು. ರಾಜಸ್ಥಾನ ತಂಡದ ಪರ ಅರ್ಧಶತಕ ಬಾರಿಸಿದ್ದ ಪರಾಗ್. ಕೊನೆಯಲ್ಲಿ ನಾಲ್ಕು ಕ್ಯಾಚ್ ಪಡೆದು ರಾಯಲ್ ಚಾಲೆಂಜರ್ಸ್ ತಂಡಕ್ಕೆ ಮುಳುವಾದರು.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ನಾಯಕ ಡುಪ್ಲೆಸಿಸ್ ಅವರ ನಿರ್ಧಾರವನ್ನು ಸಮರ್ಥಿಸಲೂ ಎಂಬಂತೆ ಆರ್ಸಿಬಿ ವೇಗಿಗಳಾದ ಮಹಮ್ಮದ್ ಸಿರಾಜ್ (30 ಕ್ಕೆ2) ಮತ್ತು ಹೆಂಜಲ್ ವುಡ್ (19ಕ್ಕೆ2) ಹಾಗೂ ಸ್ಪಿನ್ನರ್ ಹಸರಂಗ (23ಕ್ಕೆ 2) ರಾಜಸ್ಥಾನ್ ಬ್ಯಾಟ್ಸ್ಮನ್ಗಳ ಮೇಲೆ ಮುಗಿಬಿದ್ದರು. ತಂಡ 10 ಎಸೆತಗಳಲ್ಲಿ 11 ರನ್ ಗಳಿಸುವಷ್ಟರಲ್ಲಿ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಔಟ್ ಆದರು. ಅಲ್ಲಿಂದಲೇ ಶುರುವಾಗಿದ್ದು ರಾಯಲ್ಸ್ ಬಳಗದ ಪೆವಿಲಿಯನ್ ಪಥಸಂಚಲನ. ತಂಡದ ಮೊತ್ತ 33 ರನ್ ತಲುಪುವಷ್ಟರಲ್ಲಿ ರವಿಚಂದ್ರನ್ ಅಶ್ವಿನ್ ಮತ್ತು ಬಟ್ಲರ್ ಕೂಡ ಪೆವಿಲಿಯನ್ ಗೆ ಸೇರಿಕೊಂಡರು. ಪಡಿಕಲ್ ಮತ್ತು ಅಶ್ವಿನ್ ವಿಕೆಟ್ ಮಹಮ್ಮದ್ ಸಿರಾಜ್ ಪಾಲಾದರೆ, ಜೋಸ್ ಗೆ ಪೆವಿಲಿಯನ್ ಹಾದಿ ತೋರಿಸಿದ್ದು ಹೆಂಜಾಲ್ ವುಡ್. ಬಿಸಿರಕ್ತದ ತರುಣ ರಿಯಾನ್ ಪರಾಗ್ ಒಂದೆಡೆ ಕ್ರೀಸ್ ಹಚ್ಚಿಕೊಂಡಿದ್ದು ಹೊರತುಪಡಿಸಿದರೆ ಉಳಿದ ಆಟಗಾರರದ್ದು ಪುಟ್ಟ ಪುಟ್ಟ ಕತೆಯಾಯಿತು

ಪ್ರಸಕ್ತ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ-ಸುನೀಲ್ ಕುಮಾರ್

0

ರಾಜ್ಯದ ಜನರಿಗೆ ಇಂಧನ ಸಚಿವ ಸುನೀಲ್ ಕುಮಾರ್ ಸಿಹಿ ಸುದ್ದಿ ನೀಡಿದ್ದಾರೆ.

ರಾಜ್ಯದಲ್ಲಿ ದಿನದ 24 ಗಂಟೆ ವಿದ್ಯುತ್ ಸರಬರಾಜಿಗೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದಾರೆ.

ಕಾರ್ಕಳದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗಿದೆ.

ಪ್ರಸಕ್ತ ಸಾಲಿನ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಸಮಸ್ಯೆ ಎದುರಾಗಿಲ್ಲ. ದಿನದ 24 ಗಂಟೆ ವಿದ್ಯುತ್ ಸರಬರಾಜಿಗೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದಾರೆ.

ಮುಂದಿನ 10 ವರ್ಷ ಮುಂದಿಟ್ಟುಕೊಂಡು ದಿನದ 24 ಗಂಟೆಯೂ ವಿದ್ಯುತ್ ಪೂರೈಕೆಗೆ ಯೋಜನೆ ಸಿದ್ಧಪಡಿಸಲಾಗುತ್ತಿದೆ. ವಿದ್ಯುತ್ ಪರಿವರ್ತಕ, ವಿದ್ಯುತ್ ಸರಬರಾಜು ನಿರ್ವಹಣೆಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ತಾಳಿ ಕಟ್ಟೋ ಶುಭವೇಳೆ ತಾಳಿ ತಾಳಿ ಎಂದು ಮದುವೆ ತಡೆದ ವಧು

0

ವಿವಾಹ ಎಂಬುದು ಪ್ರತಿಯೊಬ್ಬ ಜೀವನದ ಪ್ರಮುಖ ಘಟ್ಟ. ಹೆಣ್ಣು-ಗಂಡು ಹಾಗೂ ಅವರ ಕುಟುಂಬಗಳು ಪರಸ್ಪರ ಒಪ್ಪಿ ವಿವಾಹ ನಿಗದಿಮಾಡಲಾಗುತ್ತದೆ. ವಿವಾಹ ದ ದಿನ ಮನೆಮಂದಿಗೆಲ್ಲಾ ಸಂತೋಷ ಪಡುವ ಒಂದು ಹಬ್ಬದ ಹಾಗೆ. ಆದರೆ ಕೆಲವೊಂದು ಮದುವೆಗಳು ಅರ್ಧದಲ್ಲಿ ನಿಂತುಹೋಗುವ ಅದೆಷ್ಟು ಪ್ರಸಂಗಗಳನ್ನು ನಾವು ಕೇಳಿರುತ್ತೇವೆ. ಅದೇ ರೀತಿ ಇನ್ನೊಂದು ಮದುವೆ ಇನ್ನೇನು ವರ ತಾಳಿ ಕಟ್ಟುವ ವೇಳೆಗೆ ತನಗೆ ಮದುವೆ ಬೇಡ ಎಂದು ವಧು ವರನಿಗೆ ತಿಳಿಸಿದ್ದಾಳೆ. ಈ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.

ಸುಮಾರು 4 ತಿಂಗಳ ಹಿಂದೆ ಈ ಜೋಡಿಗೆ ನಿಶ್ಚಿತಾರ್ಥವಾಗಿತ್ತು. ಪರಸ್ಪರ ಹೆಣ್ಣು,ಗಂಡು ಒಪ್ಪಿಗೆಯ ಮೇರೆಗೆ ವಿವಾಹ ನಿಶ್ಚಿತವಾಗಿತ್ತು. ಆದರೆ ಈಗ ವಧು ತನಗೆ ಮದುವೆ ಬೇಡ ಎಂದು ವರನಿಗೆ ತಿಳಿಸಿದ್ದಾಳೆ. ತನಗೆ ಇನ್ನೊಂದು ಪ್ರಪೋಸಲ್ ಇಷ್ಟವಾಗಿದೆ ಎಂದು ಕೂಡ ತಿಳಿಸಿದ್ದಾಳೆ ಎನ್ನಲಾಗುತ್ತಿದೆ.

ವರಹ ಬ್ರಹ್ಮಾವರದ ವರಾಗಿದ್ದಾರೆ. ಈತ ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದಾನೆ. ವಧು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಎಲ್ಲಾ ಕಾರ್ಯಕ್ರಮಗಳು ಮುಗೀತು ಇನ್ನೇನು ಕೆಲವೇ ಕ್ಷಣಗಳಲ್ಲಿ ತಾಳಿ ಕಟ್ಟಬೇಕು ಎಂದು ತಯಾರಿ ನಡೆಯುವಷ್ಟರಲ್ಲಿ ತನಗೆ ಮದುವೆ ಇಷ್ಟವಿಲ್ಲ ಎಂದು ಹೇಳಿದ್ದಾಳೆ. ಮದುವೆಗೆ ಸುಮಾರು 1000 ಜನರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ ಈಗ ಮದುವೆ ಬೇಡವೆಂದು ಅರ್ಧದಲ್ಲಿ ಮುರಿದುಬಿದ್ದಿದೆ.

ಬ್ರಹ್ಮಾವರ ಪೊಲೀಸರು ಆಗಮಿಸಿ ಎರಡೂ ಮನೆಯವರು ಖರ್ಚಿನ ಸಮಪಾಲು ಹಾಕಲು ಒಪ್ಪುವುದರಿಂದ ಪ್ರಕರಣ ಮುಕ್ತಾಯಗೊಂಡಿದೆ.

ಕೊನೆ ಕ್ಷಣದಲ್ಲಿ ವಧು ತನಗೆ ಮದುವೆ ಬೇಡ ಎಂದು ಹೇಳಿ ಮದುವೆ ಕಾರ್ಯಕ್ರಮಕ್ಕೆ ಅಂತ್ಯ
ಹಾಡಿದ್ದಾಳೆ.

ರಷ್ಯಾಗೆ ಉಕ್ರೇನ್ ಯುದ್ಧ ಚ್ಯೂಯಿಂಗ್ ಗಮ್ ಆಗುತ್ತಿದೆಯೆ?

0

ಎರಡು ತಿಂಗಳಿನಿಂದ ಉಕ್ರೇನ್‌ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ, ಮರಿಯುಪೋಲ್‌ ಬಳಿಕ ಉಕ್ರೇನ್‌ನ ಮತ್ತೊಂದು ನಗರವನ್ನು ವಶಕ್ಕೆ ತೆಗೆದುಕೊಂಡಿದೆ. ಲುಕಾಂಕ್ಷ್ ವಲಯದಲ್ಲಿರುವ ಕ್ರೆಮಿನ್ನಾ ನಗರದಲ್ಲಿ ಹಲವು ದಿನಗಳ ಕಾಳಗದ ಬಳಿಕ ವಶಕ್ಕೆ ಪಡೆಯುವಲ್ಲಿ ರಷ್ಯಾ ಸಫಲವಾಗಿದೆ ಎಂದು ಬ್ರಿಟನ್‌ನ ರಕ್ಷಣಾ ಸಚಿವಾಲಯ ತಿಳಿಸಿದೆ.

ಆದರೆ ಈ ಬಗ್ಗೆ ಉಕ್ರೇನ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಈ ಮಧ್ಯೆ, ಮೂರನೇ ಮಹಾಯುದ್ಧದ ಕುರಿತು ಉಕ್ರೇನ್‌ ಪ್ರಚೋದನೆ ನೀಡಬಾರದು. ಜತೆಗೆ ಅಣ್ವಸ್ತ್ರ ಬಿಕ್ಕಟ್ಟಿನ ಬೆದರಿಕೆಯನ್ನು ಉಕ್ರೇನ್‌ ಲಘುವಾಗಿ ಪರಿಗಣಿಸಬಾರದು ಎಂದು ರಷ್ಯಾದ ರಾಯಭಾರಿ ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ, ರೈಲು ಹಾಗೂ ಇಂಧನ ಕೇಂದ್ರಗಳ ಮೇಲೆ ರಷ್ಯಾ ತನ್ನ ದಾಳಿಯನ್ನು ತೀವ್ರಗೊಳಿಸಿದೆ.
ರಷ್ಯಾ ಹೊಸದಾಗಿ ವಶಪಡಿಸಿಕೊಂಡಿರುವ ಕ್ರಿಮಿನ್ನಾ ಉಕ್ರೇನ್‌ ರಾಜಧಾನಿ ಕೀವ್‌ನಿಂದ 575 ಕಿ.ಮೀ. ದೂರದಲ್ಲಿದೆ.

ಉಕ್ರೇನ್‌ನ ಎರಡನೇ ಅತಿದೊಡ್ಡ ನಗರ ಖಾರ್ಕೀವ್‌ ಮೇಲೆ ರಷ್ಯಾದ ದಾಳಿ ಮುಂದುವರೆದಿದೆ.

ಉಕ್ರೇನ್‌ನ ಉಕ್ಕು ಕಾರ್ಖಾನೆ ಮೇಲೆ ರಷ್ಯಾ ದಾಳಿ
ರಷ್ಯಾ ಸೇನೆ ಬಹುತೇಕ ವಶಕ್ಕೆ ಪಡೆದುಕೊಂಡಿರುವ ಬಂದರು ನಗರ ಮರಿಯುಪೋಲ್‌ನಲ್ಲಿ ಉಳಿದಿರುವ ಉಕ್ರೇನ್‌ನ ಕೊನೆಯ ತುಕಡಿಯನ್ನು ಹೊರಹಾಕುವ ಉದ್ದೇಶದಿಂದ ಇಲ್ಲಿನ ಉಕ್ಕು ಕಾರ್ಖಾನೆಯ ಮೇಲೆ ರಷ್ಯಾ ಪಡೆಗಳು ವಾಯುದಾಳಿ ನಡೆಸಿವೆ ಎಂದು ತಿಳಿದುಬಂದಿದೆ.

ಮರಿಯುಪೋಲ್‌ನಲ್ಲಿ ಉಳಿದಿರುವ ಜನರಿಗೆ ಆಹಾರದ ಅಭಾವ ಎದುರಾಗಿದೆ. ಇದೇ ವೇಳೆ ರಾಜಧಾನಿ ಕೀವ್‌ನಿಂದ ತನ್ನ ಸೇನೆಯನ್ನು ಹಿಂಪಡೆಯುತ್ತಿರುವ ರಷ್ಯಾ ಉಳಿದ ನಗರ ಮೇಲಿನ ದಾಳಿಯನ್ನು ತೀವ್ರಗೊಳಿಸಿದೆ

ರಷ್ಯಾದ ಉಕ್ಕು ಕಾರ್ಖಾನೆಯಲ್ಲಿ ವಶಪಡಿಸಿಕೊಳ್ಳಲು ಸುಮಾರು 2000 ಯೋಧರು ಹೋರಾಟ ನಡೆಸುತ್ತಿದ್ದಾರೆ. ಅತಿ ದೂರಕ್ಕೆ ದಾಳಿ ಮಾಡಬಲ್ಲ ವಿಮಾನಗಳನ್ನುಬಳಸಿ ರಷ್ಯಾ ದಾಳಿ ನಡೆಸುತ್ತಿದೆ.

ಯುದ್ಧ ಆರಂಭವಾದಾಗಿನಿಂದಲೂ ಬಂದರು ನಗರ ಮಾರಿಯುಪೋಲ್‌ ಮೇಲೆ ರಷ್ಯಾ ಭೀಕರ ದಾಳಿ ನಡೆಸುತ್ತಲೇ ಇದೆ.

ಕೃಷ್ಣ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಬದ್ಧ- ಸಿಎಂ

0

ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಕಾಮಗಾರಿಗಳ ಅನುಷ್ಠಾನಕ್ಕೆ ಸರ್ಕಾರ ಕಟಿಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಬೂದಿಹಾಳ, ಪೀರಾಪೂರ ಏತ ನೀರಾವರಿ ಯೋಜನೆಯ ಹಂತ-01 ಪೈಪ್‌ ವಿತರಣೆ ಜಾಲದ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಯೋಜನೆ ಸಂಬಂಧ ಕೋರ್ಟ್ ನಲ್ಲಿ ಕಾನೂನಾತ್ಮಕ ಹೋರಾಟ ನಡೆಯುತ್ತಿದೆ. ಇನ್ನು 2-3 ತಿಂಗಳಲ್ಲಿ ಈ ಸಂಬಂಧ ಆದೇಶ ಹೊರಬೀಳುವ ಸಾಧ್ಯತೆ ಇದೆ. ನಂತರ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಯೋಜನೆ ಜಾರಿಗೊಳಿಸಲಾಗುತ್ತದೆ. ಈ ಯೋಜನೆಗಾಗಿ ಈ ಬಾರಿ ಬಜೆಟ್‌ನಲ್ಲಿ .5 ಸಾವಿರ ಕೋಟಿ ತೆಗೆದಿಡಲಾಗಿದೆ. 3ನೇ ಹಂತದ ಯೋಜನೆಗೆ ಸಂಬಂಧಿಸಿದಂತೆ ಕಾನೂನಾತ್ಮಕ ಹೋರಾಟಕ್ಕೆ ಅಂತಿಮ ತೆರೆ ಬಿದ್ದರೆ 130 ಟಿಎಂಸಿ ನೀರು ಸದ್ಬಳಕೆ ಮಾಡಿಕೊಳ್ಳಲು ಕೈಗೊಳ್ಳಬೇಕಾದ ಎಲ್ಲ ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಭಗೀರಥನಾಗುವ ಕನಸಿಲ್ಲ.
ನನಗೆ ಭಗೀರಥನಾಗುವ ಕನಸಿಲ್ಲ. ಪ್ರಚಾರವೂ ಬೇಕಿಲ್ಲ. ಆದರೆ, ರೈತರು ನಲುಗಬಾರದೆನ್ನುವುದು ನನ್ನ ಕಾಳಜಿಯಾಗಿದೆ. ಬರದ ನೆಲಕ್ಕೆ ಹಸಿರು ಸೀರೆ ಉಡಿಸಬೇಕೆಂಬುದು ನನ್ನ ಕನಸಾಗಿದೆ. ಈ ಕಾರಣ- ಕಾಳಜಿಯಿಂದಾಗಿ ಏತ ನೀರಾವರಿಯಂತಹ ನೀರಾವರಿ ಯೋಜನೆಗಳು ರಾಜ್ಯದಲ್ಲಿ ಅನುಷ್ಠಾನಗೊಳ್ಳಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ

ಆಲಮಟ್ಟಿ ಅಣೆಕಟ್ಟೆ ಎತ್ತರ 524.256 ಮೀಟರ್‌ಗೆ ಹೆಚ್ಚಿಸುವುದರಿಂದ ಮುಳುಗಡೆಯಾಗಲಿರುವ 20 ಹಳ್ಳಿಗಳ ಪುನರ್ವಸತಿ ಮತ್ತು ಪುನರ್‌ ನಿರ್ಮಾಣಕ್ಕೆ ಮತ್ತು ಭೂಸ್ವಾಧೀನಕ್ಕೆ ಎಷ್ಟುಹಣದ ಅವಶ್ಯಕತೆ ಆಗುತ್ತದೆಯೋ ಅಷ್ಟೂ ಹಣವನ್ನು ರಾಜ್ಯ ಸರ್ಕಾರ ಒದಗಿಸಲು ಸಿದ್ಧವಿದೆ ಎಂದು ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ.

ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆ ಅನುಷ್ಠಾನಕ್ಕೆ .55,000 ಕೋಟಿ ಅಗತ್ಯವಿದೆ. ಭಾರಿ ಮೊತ್ತದ ಹಣ ಒದಗಿಸಲು ರಾಜ್ಯ ಸರ್ಕಾರ ಸಿದ್ಧವಿದೆ. 3ನೇ ಹಂತದ ಯೋಜನೆ ಬೇಗನೆ ಪೂರ್ಣಗೊಂಡು ರೈತರ ಜಮೀನಿಗೆ ನೀರು ಒದಗಿಸಲಾಗುತ್ತದೆ. ನಮ್ಮ ಮೊದಲ ಆದ್ಯತೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಉಮೇಶ ಕತ್ತಿ, ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ, ಬಸನಗೌಡ ಪಾಟೀಲ ಯತ್ನಾಳ, ಸಂಸದ ರಮೇಶ ಜಿಗಜಿಣಗಿ ಉಪಸ್ಥಿತರಿದ್ದರು

ಒಂದು ವರ್ಷದ ಅವಧಿಗೆ 27,000 ಅತಿಥಿ ಶಿಕ್ಷಕರ ನೇಮಕ- ನಾಗೇಶ್

0

ಸರ್ಕಾರಿ ಶಾಲೆಗಳ ಶಿಕ್ಷಕರ ಕೊರತೆ ನೀಗಿಸಲು ಮುಂದಾಗಿರುವ ರಾಜ್ಯ ಸರ್ಕಾರ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ 27,000 ಅತಿಥಿ ಶಿಕ್ಷಕರನ್ನು ಒಂದು ವರ್ಷದ ಅವಧಿಗೆ ನೇಮಿಸಿಕೊಳ್ಳಲು ನಿರ್ಧರಿಸಿದೆ.

ಈ ವರ್ಷ ಶಾಲೆ ಆರಂಭವಾಗುವ ಹೊತ್ತಿಗೆ ನೇಮಕ ಮಾಡಿಕೊಳ್ಳಲು ತೀರ್ವನಿಸಿದೆ. ಶೀಘ್ರ ಪ್ರಕ್ರಿಯೆ ಆರಂಭವಾಗಲಿದೆ.ಅತಿಥಿ ಶಿಕ್ಷಕರ ನೇಮಕಾತಿಗೆ ಆರ್ಥಿಕ ಇಲಾಖೆಯಿಂದ ಗ್ರೀನ್ ಸಿಗ್ನಲ್ ದೊರೆತಿದೆ. ಇದರ ಜೊತೆಗೆ ಇನ್ನೂ 3 ಸಾವಿರ ಶಿಕ್ಷಕರನ್ನು ಹೆಚ್ಚುವರಿಯಾಗಿ ನೇಮಿಸಿಕೊಳ್ಳಲು ಪ್ರಸ್ತಾವನೆ ಕಳುಹಿಸಲಾಗಿದೆ. ಇದಕ್ಕೆ ಅನುಮೋದನೆ ದೊರೆತರೆ ಒಟ್ಟು 30 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಪ್ರಕ್ರಿಯೆ ಆರಂಭಿಸಲಿದೆ. ಈಗಾಗಲೇ 15 ಸಾವಿರ ಶಿಕ್ಷಕರ ಕಾಯಂ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದೆ.

ಇದಕ್ಕೆ ಅರ್ಜಿ ಸಲ್ಲಿಸಲು ಏ.25 ಕೊನೆಯ ದಿನವಾಗಿತ್ತು. ಮೇ 21 ಮತ್ತು 22ರಂದು ಪರೀಕ್ಷೆ ನಡೆಯಲಿದೆ. ನೇಮಕಾತಿ ಪೂರ್ಣಗೊಂಡು ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಲು ವರ್ಷದ ಅವಧಿ ಬೇಕಾಗುತ್ತದೆ. ಅಲ್ಲಿಯವರೆಗೆ ಕೊರತೆ ನೀಗಲು ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಸದ್ಯ ಸರ್ಕಾರ 4 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿದೆ.

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಕಾರ್ಯಯೋಜನೆ ರೂಪಿಸಲಾಗುತ್ತಿದೆ. ಇದರ ಭಾಗವಾಗಿ 27 ಸಾವಿರ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವುದಾಗಿ ಸರ್ಕಾರ ಬಜೆಟ್​ನಲ್ಲಿ ಘೋಷಣೆ ಮಾಡಿತ್ತು. ಅದರಂತೆ ಈಗ ಆರ್ಥಿಕ ಇಲಾಖೆ ಅನುಮೋದನೆ ಸಿಕ್ಕಿದೆ. ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಇಲಾಖೆಯ ಅಧಿಕಾರಿಗಳೊಂದಿಗೆ ನಿರಂತರ ಸಭೆಗಳನ್ನು ನಡೆಸಿದ್ದಾರೆ. ಮೇ 16ಕ್ಕೆ ಶಾಲೆಗಳು ಆರಂಭವಾಗಲಿದೆ. ಮೊದಲ ದಿನವೇ ಅತಿಥಿ ಶಿಕ್ಷಕರು ಹಾಜರಾಗಲಿದ್ದಾರೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.