Saturday, February 28, 2026
Saturday, February 28, 2026
Home Blog Page 1601

ನಮ್ಮ ಫಿಲ್ಮ್ Icons ಹೀಗಿರಲಿ

0

ಸಿನಿಮಾ ಜಗತ್ತಿನ ಅದೆಷ್ಟೋ ನಟ ನಟಿಯರು ತಮ್ಮ ನಡೆ ನುಡಿ, ಹಾಗೂ ವ್ಯಕ್ತಿತ್ವದಿಂದ ತಮ್ಮ ಅಭಿಮಾನಿಗಳಿಗೆ ಮಾದರಿಯಾಗಿರುತ್ತಾರೆ.
ನಟ-ನಟಿಯರ ಉಡುಗೆ,ತೊಡುಗೆ, ಹವ್ಯಾಸಗಳು, ಅವರ ಸಾಮಾಜಿಕ ಕಾರ್ಯಗಳೂ ಕೂಡ ಅವರ ಅಭಿಮಾನಿಗಳ ಮೇಲೆ ಪರಿಣಾಮ ಬೀರುತ್ತವೆ.

ಅದೆಷ್ಟೋ ಜನರು ತಮ್ಮ ನೆಚ್ಚಿನ ನಟ ನಟಿಯರ ಹಾಗೆ ಉಡುಗೆಗಳನ್ನು ತೊಡುತ್ತಾರೆ. ಇದರೊಂದಿಗೆ ಇನ್ನೂ ಕೆಲವರಂತೂ ಅವರು ಯಾವ ಆಹಾರವನ್ನು ಸೇವಿಸುತ್ತಾರೋ ಅದನ್ನೇ ಸೇವಿಸುವವರು ಇದ್ದಾರೆ..

ಸಿನಿಮಾ ನಟ-ನಟಿಯರು ವಿವಿಧ ಬಗೆಯ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ನಿಜವಾಗಿಯೂ ಆ ಒಂದು ಬಗೆಯ ಉತ್ಪನ್ನವನ್ನು ಉಪಯೋಗಿಸುತ್ತಾರೊ ಇಲ್ಲವೋ ಎನ್ನುವುದು ಯಾರಿಗೂ ತಿಳಿದಿಲ್ಲ. ಆದರೆ, ಕೆಲವು ನಟ ನಟಿಯರು ಹಣದಾಸೆಗೆ ಜಾಹೀರಾತಿಗೆ ಒಪ್ಪಿಕೊಂಡರೆ, ಇನ್ನೂ ಕೆಲವರು ಪ್ರೇಕ್ಷಕರಿಗೆ ಕೆಟ್ಟ ಸಂದೇಶವನ್ನು ನೀಡಬಾರದು, ಸುಳ್ಳು ವಿಷಯವನ್ನು ತಲುಪಿಸ ಬಾರದು ಎನ್ನುವ ನಿಟ್ಟಿನಲ್ಲಿ ಅದೆಷ್ಟು ಕೋಟಿ ಹಣದ ಜಾಹೀರಾತನ್ನು ತಳ್ಳಿಹಾಕುತ್ತಾರೆ.

ಈಗ ಈ ಸಾಲಿಗೆ ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಕೂಡ ಸೇರಿಕೊಂಡಿದ್ದಾರೆ. ತಮ್ಮ ಸಾಮಾಜಿಕ ಕಳಕಳಿಯ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

ಇತ್ತೀಚಿಗಷ್ಟೇ ಅಕ್ಷಯ್ ಕುಮಾರ್, ಅಜಯ್ ದೇವಗನ್ ಹಾಗೂ ಶಾರುಖ್ ಖಾನ್ ಈ ಮೂವರೂ ಸೂಪರ್‌ಸ್ಟಾರ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಕೆಲವು ದಿನಗಳಿಂದ ಟ್ರೋಲ್ ಆಗುತ್ತಿದ್ದಾರೆ. ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡ ಬಳಿಕವಂತೂ ಈ ಮೂವರು ಬಾಲಿವುಡ್‌ ನಟರನ್ನೂ ‘ಗುಟ್ಕಾ ಗ್ಯಾಂಗ್’ ಎಂದೇ ಕಾಲೆಳೆಯುತ್ತಿದ್ದಾರೆ ನೆಟ್ಟಿಗರು.

ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಅಕ್ಷಯ್ ಕುಮಾರ್ ಬಹಿರಂಗವಾಗಿ ಕ್ಷಮೆಯಾಚಿಸುವುದು ನಿಮಗೆಲ್ಲಾ ಗೊತ್ತೇ ಇದೆ.

ಜಾಹೀರಾತಿನಿಂದ ಬಂದ ಹಣವನ್ನು ಸಮಾಜಮುಖಿ ಕೆಲಸಕ್ಕೆ ಬಳಸಿಕೊಳ್ಳುವುದಾಗಿಯೂ ಹೇಳಿದ್ದರು. ಹೀಗಿದ್ದರೂ, ಇತ್ತೀಚೆಗೆ ಹಿಂದಿ ರಾಷ್ಟ್ರ ಭಾಷೆ ಎಂದಿದ್ದ ಅಜಯ್ ದೇವಗನ್‌ಗೆ ಬೆಂಬಲಿಸಿ ಅಕ್ಷಯ್ ಮತ್ತೆ ಪೇಚಿಗೆ ಸಿಕ್ಕಿಕೊಂಡಿದ್ದರು.

ಈ ಬೆನ್ನಲ್ಲೇ ಮತ್ತೆ ಅಕ್ಷಯ್ ಕುಮಾರ್ ಹಾಗೂ ಅಜಯ್ ದೇವಗನ್ ಇದೇ ಪಾನ್ ಮಸಾಲ ಜಾಹೀರಾತಿಗೆ ಟ್ರೋಲ್ ಆಗಿದ್ದರು. ಈಗ ಯಶ್ ಇಂತಹದ್ದೇ ಪಾನ್ ಮಸಾಲ ಜಾಹೀರಾತನ್ನು ತಿರಸ್ಕರಿಸಿ ಮೆಚ್ಚುಗೆ ಗಳಿಸಿದ್ದಾರೆ.

ಹೌದು.. ರಾಕಿಂಗ್ ಸ್ಟಾರ್ ಯಶ್ ಬಹು ಕೋಟಿ ಮೊತ್ತದ ಪಾನ್ ಮಸಾಲ ಜಾಹೀರಾತನ್ನು ತಿರಸ್ಕರಿಸಿದ್ದಾರೆ. ರಾಕಿ ಬಾಯ್‌ ತೆಗೆದುಕೊಂಡು ಈ ನಿರ್ಧಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕೆಜಿಎಫ್ 2′ ಅದ್ಧೂರಿ ಯಶಸ್ಸಿನ ಬಳಿಕ ಪಾನ್ ಮಸಲಾ ಹಾಗೂ ಎಲೈಚಿ ಸಂಸ್ಥೆಯೊಂದು ಬ್ರ್ಯಾಂಡ್ ಅಂಬಾಸಿಡರ್ ಆಗುವಂತೆ ಯಶ್‌ಗೆ ಕೇಳಲಾಗಿತ್ತು. ಆದರೆ, ಯಶ್ ಈ ದುಬಾರಿ ಮೌಲ್ಯದ ಜಾಹೀರಾತನ್ನು ತಿರಸ್ಕರಿಸಿದ್ದಾರೆ.

ಕೆಜಿಎಫ್’ ಬಳಿಕ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಯಶ್, ತಮ್ಮ ಅಭಿಮಾನಿಗಳು ಹಾಗೂ ಜನರ ಆರೋಗ್ಯದ ದೃಷ್ಟಿಯಿಂದ ಈ ಜಾಹೀರಾತನ್ನು ಕೈ ಬಿಟ್ಟಿದ್ದಾರೆ ಎಂದು ಟ್ಯಾಲೆಂಟ್ ಮ್ಯಾನೆಜ್ಮೆಂಟ್ ಏಜೆನ್ಸಿ ಬಹಿರಂಗ ಪಡಿಸಿದೆ.

ಹಣ ಅಂದ್ರೆ ಹೆಣ ಕೂಡ ಬಾಯಿ ಬಿಡುತ್ತದೆ ಎನ್ನುವ ಮಾತನ್ನು ನೀವೆಲ್ಲ ಕೇಳ್ತೀರಾ.. ಹಣಕಾಸಿಗೆ ಅದೆಷ್ಟೋ ಜಾಹೀರಾತುಗಳಲ್ಲಿ ನಟಿಸಿ, ಸುಳ್ಳು ಮಾಹಿತಿಯನ್ನು ನೀಡುವವರ ಮಧ್ಯೆ ಯಶ್ ಅವರ ಈ ನಿರ್ಧಾರದಿಂದ ರಾಕಿಂಗ್ ಸ್ಟಾರ್ ಮತ್ತಷ್ಟು ಅಭಿಮಾನಿಗಳ ಹೃದಯದಲ್ಲಿ ಮನೆ ಮಾಡಿದ್ದಾರೆ.

ಝೆಲೆನ್ಸ್ಕಿ ಆತ್ಮ ವಿಶ್ವಾಸದ ಭಾಷಣ

0

ಮುಂಬರುವ ಯುದ್ಧದ ದಿನಗಳಲ್ಲಿ ಸಾವಿರಾರು ಜನರು ಸಾಯುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಆದ್ದರಿಂದ ನೀವು ಉಕ್ರೇನ್‌ ಯುದ್ಧದಲ್ಲಿ ಹೋರಾಡಬೇಡಿ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ತಮ್ಮ ರಾತ್ರಿಯ ವೀಡಿಯೊ ಭಾಷಣದಲ್ಲಿ ರಷ್ಯಾದ ಸೈನಿಕರಿಗೆ ಹೇಳಿದ್ದಾರೆ.

ಯುದ್ಧದ ಆರಂಭಿಕ ವಾರಗಳಲ್ಲಿ ನಾಶವಾದ ಘಟಕಗಳಿಗೆ ಕಡಿಮೆ ಪ್ರೇರಣೆ ಮತ್ತು ಕಡಿಮೆ ಯುದ್ಧದ ಅನುಭವದೊಂದಿಗೆ ರಷ್ಯಾ ಹೊಸ ಪಡೆಗಳನ್ನು ನೇಮಿಸಿಕೊಳ್ಳುತ್ತಿದೆ. ಆದ್ದರಿಂದ, ಈ ಘಟಕಗಳನ್ನು ಮತ್ತೆ ಯುದ್ಧಕ್ಕೆ ಬಿಡಬಹುದು. ಮುಂಬರುವ ವಾರಗಳಲ್ಲಿ ಸಾವಿರಾರು ಜನರು ಸಾಯುತ್ತಾರೆ.ಮತ್ತು ಸಾವಿರಾರು ಜನರು ಗಾಯಗೊಂಡಿದ್ದಾರೆ ಎಂದು ರಷ್ಯಾದ ಕಮಾಂಡರ್‌ಗಳು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ಝೆಲೆನ್ಸ್ಕಿ ಅವರು ಹೇಳಿದರು.

ರಷ್ಯಾದ ಕಮಾಂಡರ್‌ಗಳು ತಮ್ಮ ಸೈನಿಕರಿಗೆ ಸುಳ್ಳು ಹೇಳುತ್ತಿದ್ದಾರೆ. ಅವರು ಹೋರಾಡಲು ನಿರಾಕರಿಸಿದ್ದಕ್ಕಾಗಿ ಅವರು ಗಂಭೀರವಾಗಿ ಜವಾಬ್ದಾರರಾಗಿರಬಹುದು ಎಂದು ನಿರೀಕ್ಷಿಸಬಹುದು. ಹಾಗೂ ನಂತರ ಅವರಿಗೆ ಹೇಳಬೇಡಿ. ಉದಾಹರಣೆಗೆ ರಷ್ಯಾದ ಸೈನ್ಯವು ದೇಹಗಳನ್ನು ಸಂಗ್ರಹಿಸಲು ಹೆಚ್ಚುವರಿ ರೆಫ್ರಿಜರೇಟರ್ ಟ್ರಕ್‌ಗಳನ್ನು ಸಿದ್ಧಪಡಿಸುತ್ತಿದೆ. ಜನರಲ್‌ಗಳು ನಿರೀಕ್ಷಿಸುವ ಹೊಸ ನಷ್ಟಗಳ ಬಗ್ಗೆ ಅವರು ಅವರಿಗೆ ಹೇಳುವುದಿಲ್ಲ. ಈ ಸಂದೇಶದಿಂದ ಪ್ರತಿ ರಷ್ಯಾದ ಸೈನಿಕನು ಇನ್ನೂ ತನ್ನ ಪ್ರಾಣವನ್ನು ಉಳಿಸಿಕೊಳ್ಳಬಹುದು. ನಮ್ಮ ಭೂಮಿಯಲ್ಲಿ ನಾಶವಾಗುವುದಕ್ಕಿಂತ ನೀವು ರಷ್ಯಾದಲ್ಲಿ ಬದುಕುವುದು ಉತ್ತಮ ಎಂದು ಅವರು ಹೇಳಿದರು.

ಕೋವಿಡ್ ಪ್ರಕರಣ ಕೊಂಚ ಏರಿಕೆ

0

ಭಾರತದಲ್ಲಿ ಹೊಸ ಕೋವಿಡ್ ಪ್ರಕರಣ ಮತ್ತು ಸಕ್ರಿಯ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ.

ದೇಶದ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 19,092 ಆಗಿದೆ.

ಭಾನುವಾರ, ಕೇಂದ್ರ ಆರೋಗ್ಯ ಸಚಿವಾಲಯದ ಹೆಲ್ತ್ ಬುಲೆಟಿನ ಪ್ರಕಾರ 24 ಗಂಟೆಯಲ್ಲಿ ದೇಶದಲ್ಲಿ 3,324 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. 40 ಜನರು ಮೃತಪಟ್ಟಿದ್ದಾರೆ.

ಭಾರತದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 4,30,79,188 ಆಗಿದೆ. ಒಟ್ಟು ಸಾವನ್ನಪ್ಪಿದವರ ಸಂಖ್ಯೆ 5,23,843 ಆಗಿದೆ.

ಭಾರತದ ಪ್ರತಿದಿನ ಪಾಸಿಟಿವಿಟಿ ದರ 0.68 ಆಗಿದೆ. 24 ಗಂಟೆಯಲ್ಲಿ ದೇಶದಲ್ಲಿ 4,71,087 ಮಾದರಿಗಳ ಪರೀಕ್ಷೆಗಳನ್ನು ಮಾಡಲಾಗಿದೆ.

ಏರುತ್ತಿರುವ ಗ್ಯಾಸ್ ಸಿಲಿಂಡರ್ ಬೆಲೆ!

0

ದೇಶದ ಜನರಿಗೆ ಬೆಲೆ ಏರಿಕೆಯ ಬಿಸಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಂದು ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ 102.50 ರೂಪಾಯಿ ಏರಿಕೆ ಮಾಡಲಾಗಿದೆ. ಇದರಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್​ ಬೆಲೆ 2,335.50 ರೂಪಾಯಿಗೆ ಏರಿಕೆಯಾಗಿದೆ.

ಫೆಬ್ರವರಿ 1ರ ಬಜೆಟ್​ ದಿನದಂದು ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರಿನ ಬೆಲೆಯಲ್ಲಿ 91.50 ರೂಪಾಯಿ ಇಳಿಕೆ ಕಂಡಿತ್ತು. ಈ ವೇಳೆ ದೆಹಲಿಯಲ್ಲಿ 19 ಕೆಜಿ ಸಿಲಿಂಡರಿನ ಬೆಲೆ 1907 ರೂಪಾಯಿ ಇತ್ತು.

ಇದಾದ ನಂತರ ಮಾರ್ಚ್​ 1ರಂದು ಎಲ್​ಪಿಜಿ ಸಿಲಿಂಡರಿನ ಬೆಲೆ 105 ರೂ. ಏರಿಕೆ ಕಂಡು, 19 ಕೆಜಿ ಸಿಲಿಂಡರಿನ ಬೆಲೆ 2012 ರೂಪಾಯಿ ಆಗಿತ್ತು.

ಏಪ್ರಿಲ್​ 1ರಂದು ಮತ್ತೆ ದರ ಏರಿಕೆಯಾಗಿತ್ತು. ಬರೋಬ್ಬರಿ 250 ರೂಪಾಯಿ ಏರಿಕೆಯಾಗಿ, 19 ಕೆಜಿ ವಾಣಿಜ್ಯ ಸಿಲಿಂಡರ್​ ಬೆಲೆ 2,253 ರೂಪಾಯಿ ತಲುಪಿತ್ತು. ಈಗ ಮೇ 1ರ ಕಾರ್ಮಿಕ ದಿನದಂದು ಕೂಡ ವಾಣಿಜ್ಯ ಬಳಕೆಯ ಸಿಲಿಂಡರ್​ನ ಬೆಲೆಯಲ್ಲಿ 102.50 ರೂಪಾಯಿ ಏರಿಕೆಯಾಗಿದೆ.

ಹಲೋ ಕಂದಾಯ ಸಚಿವರೆ! ಸಹಾಯವಾಣಿ-ದೇಶದಲ್ಲೇ ಮೊದಲ ಪ್ರಯತ್ನ

0

ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬಳಸಲು ಭೂಮಾಲೀಕರಿಗೆ 3 ದಿನದಲ್ಲಿ ಅವಕಾಶ ಕಲ್ಪಿಸಲು ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ಮತ್ತು ರಾಜ್ಯದ 9 ವಿವಿಧ ಮಾಸಿಕ ಪಿಂಚಣಿಗಳ ಅರ್ಹರಿಗೆ 72 ಗಂಟೆಯಲ್ಲಿ ಮನೆ ಬಾಗಿಲಿಗೆ ಪಿಂಚಣಿ ತಲುಪಿಸಲು ದೇಶದಲ್ಲಿಯೇ ಮೊದಲ ಬಾರಿಗೆ ಹಲೋ, ಕಂದಾಯ ಸಚಿವರೇ ಸಹಾಯವಾಣಿ ಕಾರ್ಯಕ್ರಮವನ್ನು ಶೀಘ್ರದಲ್ಲಿಯೇ ಅನುಷ್ಠಾನಗೊಳಿಸಲು ಸರ್ಕಾರ ತೀರ್ಮಾನಿಸಿದೆ.

ನಿನ್ನೆ ಶನಿವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಂದಾಯ ಸಚಿವ ಆರ್‌.ಅಶೋಕ್‌ ಅವರು, ಇಲಾಖೆಯಲ್ಲಿ ಕೈಗೊಂಡ ಸುಧಾರಣಾ ಕ್ರಮಗಳ ಕುರಿತು ವಿಸ್ತೃತವಾಗಿ ಮಾಹಿತಿ ನೀಡಿದರು.

ದೇಶದಲ್ಲಿಯೇ ಪ್ರಥಮ ಬಾರಿಗೆ ದೂರವಾಣಿ ಮೂಲಕವೇ ಪಿಂಚಣಿ ಕೋರಿಕೆ ಸ್ವೀಕರಿಸಿ 72 ಗಂಟೆಯಲ್ಲಿ ನವೋದಯ ಮೊಬೈಲ್‌ ಆ್ಯಪ್ ಆಧರಿಸಿ ಪಿಂಚಣಿ ಮಂಜೂರಾತಿ ಮಾಡುವ ವಿನೂತನ ಕಾಗದ ರಹಿತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮುಖ್ಯಮಂತ್ರಿಗಳು ಶೀಘ್ರದಲ್ಲಿಯೇ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಲಿದೆ. ಆ ಸಮಯದಲ್ಲಿ ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು.

ಕುಟುಂಬದ ವಾರ್ಷಿಕ ಆದಾಯ 32 ಸಾವಿರ ರೂ.ಗಿಂತ ಕಡಿಮೆ ಇರುವ ವೃದ್ಧರು, ಅಂಗವಿಕಲರು, ವಿಧವೆಯರು ಮತ್ತು ಅವಿವಾಹಿತ ಅಥವಾ ವಿಚ್ಛೇದಿತ ಮಹಿಳೆಯರು ಮಾಸಿಕ ಪಿಂಚಣಿ ಸೌಲಭ್ಯಕ್ಕಾಗಿ ದೂರವಾಣಿ ಮೂಲಕ ಕೋರಿಕೆ ಸಲ್ಲಿಸಬಹುದು. ಆಧಾರ್‌ ಸಂಖ್ಯೆ ಒದಗಿಸಿ ಪಿಂಚಣಿ ಸೌಲಭ್ಯಕ್ಕೆ ಮನವಿ ಮಾಡಬಹುದಾಗಿದೆ. ದೂರವಾಣಿ ಮೂಲಕ ಸ್ವೀಕರಿಸಲಾದ ಕೋರಿಕೆ ಮೇರೆಗೆ ಗ್ರಾಮ ಲೆಕ್ಕಾಧಿಕಾರಿಗಳು ಅರ್ಜಿದಾರರ ಮನೆಬಾಗಿಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನವೋದಯ ಮೊಬೈಲ್‌ ಆ್ಯಪ್ ಮೂಲಕ ಅರ್ಜಿದಾರರ ಮಾಹಿತಿ ನಮೂದಿಸುತ್ತಾರೆ. ಅರ್ಜಿದಾರರು ಕಡ್ಡಾಯವಾಗಿ ಆಧಾರ್‌ ಕಾರ್ಡ್‌, ಬ್ಯಾಂಕ್ ಅಥವಾ ಅಂಚೆ ಖಾತೆ ವಿವರ, ವಿಳಾಸ ಮತ್ತು ವಯಸ್ಸಿಗೆ ಸಂಬಂಧಿಸಿದ ದಾಖಲಾತಿಗಳನ್ನು ಒದಗಿಸಬೇಕು. ಅರ್ಹರಿಗೆ 72 ಗಂಟೆಯೊಳಗೆ ಉಪತಹಸೀಲ್ದಾರರಿಂದ ಪಿಂಚಣಿ ಮಂಜೂರಾತಿ ಅನುಮೋದನೆ ನೀಡಲಾಗುತ್ತದೆ ಎಂದು ವಿವರಿಸಿದರು.

ಸರ್ಕಾರದಿಂದ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆಗೆ ಅವಕಾಶ

0

2022-23ನೇ ಸಾಲಿಗೆ ಇಲಾಖಾವಾರು ಸಾರ್ವತ್ರಿಕ ವರ್ಗಾವಣೆಗೆ ಸರ್ಕಾರ ಮುಂದಾಗಿದೆ. ಮೇ 1 ರಿಂದ 15 ರವರೆಗೆ ಸಾರ್ವತ್ರಿಕ ವರ್ಗಾವಣೆಗೆ ಅವಕಾಶ ನೀಡಲಾಗಿದೆ.

ಮೇ 1ರಿಂದ ಜೂನ್ 15ರವರೆಗೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಸಂಬಂಧಪಟ್ಟ ಇಲಾಖಾ ಸಚಿವರಿಗೆ ಅಧಿಕಾರ ನೀಡಲಾಗಿದೆ.

ಎಲ್ಲಾ ಇಲಾಖೆಗಳ ಗ್ರೂಪ್ ಎ, ಬಿ, ಸಿ ಹಾಗೂ ಡಿ ವರ್ಗದ ಅಧಿಕಾರಿ ಮತ್ತು ನೌಕರರಿಗೆ ಅನ್ವಯವಾಗುವಂತೆ ಜೇಷ್ಠತಾ ಘಟಕದಲ್ಲಿ ಕಾರ್ಯನಿರತ ವೃಂದ ಬಲದ ಶೇ.6ರಷ್ಟು ಮೀರಬಾರದು ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ಈ ಮೊದಲು ಮೇ ಮತ್ತು ಜೂನ್ ತಿಂಗಳಲ್ಲಿ ಶೇ.4 ರಿಂದ5 ರಷ್ಟು ನೌಕರರ ವರ್ಗಾವಣೆಗೆ ಅವಕಾಶ ನೀಡಲಾಗಿತ್ತು. 2020-21ನೇ ಸಾಲಿನಿಂದ ಶೇ.6ರಷ್ಟು ಮೀರದಂತೆ ವರ್ಗಾವಣೆಗೆ ಅವಕಾಶ ನೀಡಲಾಗಿದೆ.

ಕಾಂಗ್ರೆಸ್ ಕಾಯಕಲ್ಪಕ್ಕೆ 3 ಸಲಹೆ ನೀಡಿದ ಪ್ರಿಯಾಂಕ

0

2012ರ ವಿಧಾನಸಭಾ ಚುನಾವಣೆ ನಂತರ ಉತ್ತರಪ್ರದೇಶದಲ್ಲಿ ಕುಸಿಯುತ್ತ ಸಾಗಿರುವ ಕಾಂಗ್ರೆಸ್‌ ಈಗ ತೀರಾ ಕೆಳಮಟ್ಟಕ್ಕೆ ತಲುಪಿದೆ.

ಮೊದಲನೆಯದಾಗಿ ಯುಪಿ ಕಾಂಗ್ರೆಸ್‌ ಸಮಿತಿಯನ್ನು ಪುನರ್ರಚನೆ ಮಾಡುವುದು, ಹಿರಿಯ ನಾಯಕರೊಬ್ಬರನ್ನು ಇದಕ್ಕೆ ಉಸ್ತುವಾರಿಯನ್ನಾಗಿ ನೇಮಿಸುವುದು. ಎರಡನೆಯದಾಗಿ, 4-5 ಕಾರ್ಯಾಧ್ಯಕ್ಷರನ್ನು ನೇಮಿಸಿ ಸಂಘಟನೆಯನ್ನು ಬಲಪಡಿಸುವುದು, ಇವರ ಮೇಲ್ವಿಚಾರಣೆಗೆ ರಾಜ್ಯಾಧ್ಯಕ್ಷರ ನೇಮಕ. ಮೂರನೇಯದಾಗಿ, ಉತ್ತರಪ್ರದೇಶವನ್ನು ಪಶ್ಚಿಮ, ಪೂರ್ವ, ಅವಧ್‌, ಎಂಬ ನಾಲ್ಕು ವಲಯಗಳನ್ನಾಗಿ ವಿಭಾಗಿಸಿ ಅಲ್ಲಿ ಪ್ರತ್ಯೇಕ ಸಮಿತಿಗಳನ್ನು ರಚಿಸುವುದು.
ಸದ್ಯ ಈ ಪ್ರಸ್ತಾವವನ್ನು ಸೋನಿಯಾ ಪರಿಶೀಲಿಸುತ್ತಿದ್ದಾರೆಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

2022ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ದಕ್ಕಿದ್ದು ಕೇವಲ 2 ಸ್ಥಾನ ಮಾತ್ರ. ಇದನ್ನು ಸರಿಪಡಿಸಲು ಆ ರಾಜ್ಯದ ಉಸ್ತುವಾರಿ ಹೊತ್ತಿರುವ ಪ್ರಿಯಾಂಕಾ ಗಾಂಧಿ ವಾದ್ರಾ, ಮೂರು ಸಲಹೆಗಳನ್ನು ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾ ಗಾಂಧಿಗೆ ನೀಡಿದ್ದಾರೆನ್ನಲಾಗಿದೆ.

ಕುವೆಂಫು ವಿವಿ 32 ನೇ ಘಟಿಕೋತ್ಸವ-ಅವಶ್ಯ ಮಾಹಿತಿ

0

ಕುವೆಂಪು ವಿವಿಯ 32ನೇ ವಾರ್ಷಿಕ ಘಟಿಕೋತ್ಸವವನ್ನು ಮೇ ತಿಂಗಳಿನಲ್ಲಿ ಆಯೋಜಿಸಲು ಸಿದ್ಧತೆ ನಡೆಸಿದ್ದು, ರೆಗ್ಯುಲರ್ ಹಾಗೂ ದೂರಶಿಕ್ಷಣ ಅಭ್ಯರ್ಥಿಗಳಿಂದ ಘಟಿಕೋತ್ಸವ ಪ್ರಮಾಣಪತ್ರ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಮಾರ್ಚ್ 2021ರ ನಂತರದ ಅಂತಿಮ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ರೆಗ್ಯುಲರ್ ವಿದ್ಯಾರ್ಥಿಗಳಿಗೆ ಮತ್ತು ಆಗಸ್ಟ್ 2021ರ ನಂತರ ನಡೆದ ಅಂತಿಮ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ದೂರಶಿಕ್ಷಣ ಅಭ್ಯರ್ಥಿಗಳಿಗೆ 32ನೇ ಘಟಿಕೋತ್ಸವದಡಿ ಪದವಿ ಪ್ರಮಾಣಪತ್ರಗಳನ್ನು ನೀಡಲಾಗುವುದು.

ಘಟಿಕೋತ್ಸವ ಕಾರ್ಯಕ್ರಮದಲ್ಲಿ ಈ ವರ್ಷಗಳ ಪರೀಕ್ಷೆಗಳಲ್ಲಿ ರ‍್ಯಾಂಕ್ ಪಡೆದ ಅಭ್ಯರ್ಥಿಗಳಿಗೆ ಚಿನ್ನದ ಪದಕ ಮತ್ತು ನಗದು ಬಹುಮಾನ ಪ್ರಮಾಣಪತ್ರಗಳನ್ನು ವಿತರಿಸಲಾಗುವುದು.

ಮೇಲ್ಕಂಡ ವರ್ಷಗಳಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಪರೀಕ್ಷೆ ಶುಲ್ಕದ ಜೊತೆಗೆ ಘಟಿಕೋತ್ಸವ ಶುಲ್ಕ ಪಾವತಿಸಿದ್ದಲ್ಲಿ ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆಯಿರುವುದಿಲ್ಲ.

ಉಳಿದಂತೆ ಹಿಂದಿನ ವರ್ಷಗಳಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಪದವಿ ಪ್ರಮಾಣ ಪತ್ರದ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದು.

ಪಿಹೆಚ್.ಡಿ. ಪದವೀಧರರು ಅರ್ಜಿಯನ್ನು ನೇರವಾಗಿ ವಿವಿಯ ವೆಬ್‌ಸೈಟ್‌ನಲ್ಲಿ (www.kuvempu.ac.in) ಆನ್‌ಲೈನ್ ಮೂಲಕ ಸಲ್ಲಿಸಬಹುದು. ವೆಬ್‌ಸೈಟ್‌ನಲ್ಲಿ ಎಕ್ಸಾಮಿನೇಶನ್ ಆಯ್ಕೆ ಬಳಸಿ ಕಾನ್ವೊಕೇಶನ್ ಅಪ್ಲಿಕೇಶನ್ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು.

ರ‍್ಯಾಂಕ್ ಹೊರತುಪಡಿಸಿ ಉಳಿದ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಪ್ರಮಾಣ ಪತ್ರಗಳನ್ನು ಆಯಾ ವಿಭಾಗ, ಕಾಲೇಜು, ಮತ್ತು ದೂರಶಿಕ್ಷಣ ಅಧ್ಯಯನ ಕೇಂದ್ರಗಳಿಗೆ ಕಳುಹಿಸಿಕೊಡಲಾಗುವುದು ಎಂದು ವಿವಿ ಪರೀಕ್ಷಾಂಗ ವಿಭಾಗದ ಪ್ರಕಟಣೆ ತಿಳಿಸಿದೆ.

ಕಾಯಕ ನಿಷ್ಠೆ ಮತ್ತು ದಾಸೋಹ ಬಸವಣ್ಣನವರ ತತ್ವ- ಮಂಜುನಾಥ್

0

ಅತೃಪ್ತಿ, ಅಸಮಾನತೆ, ಅಶಾಂತಿ, ಅರಾಜಕತೆ ಎಲ್ಲವಕ್ಕೂ ಭಯ, ಶೋಕ, ಮೋಹಗಳೇ ಕಾರಣವಾಗಿದ್ದು ಇದರ ನಿವಾರಣೆಗೆ ಅನಾದಿಕಾಲದಿಂದಲೂ ಎಷ್ಟೇ ಚಿಂತನೆಗಳಿದ್ದರೂ ತಿಳಿಗನ್ನಡದಲ್ಲಿ ಸರಳವಾಗಿ ಪರಿಹಾರ ಹೇಳಿದವರು ಬಸವಾದಿ ಶರಣರು ಎಂದು ಹಿರಿಯ ಪತ್ರಕರ್ತ ಎಚ್.ಬಿ.ಮಂಜುನಾಥ ಅಭಿಪ್ರಾಯಪಟ್ಟರು.

ಅವರು ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಲೇಖಕಿಯರ ಸಂಘ ಇವರ ಸಹಯೋಗದಲ್ಲಿ ಏರ್ಪಾಡಾಗಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಬಸವಣ್ಣನವರ ವೈಚಾರಿಕತೆ ಹಾಗೂ ಮಾನವೀಯತೆ’ ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದರು.

ಬಸವಣ್ಣನವರು ‘ಆತ್ಮೋದ್ಧಾರ’ ಅಂದರೆ ಮನೋವಿಕಾರಗಳನ್ನು ದೂರಮಾಡಿಕೊಂಡು ಪರಿಶುದ್ಧ ಆತ್ಮ ನಾಗುವುದು, ಸಮ ಸಮಾಜ’ ಅಂದರೆ ಜಾತಿ, ಮತ, ಲಿಂಗ, ವರ್ಗ ಭೇದ ರಹಿತವಾಗಿ ಬಾಳುವುದು, ‘ಕಾಯಕ’ ಎಂದರೆ ಪ್ರಾಮಾಣಿಕತೆಯಿಂದ ದುಡಿಯುವುದು, ‘ದಾಸೋಹ’ ಎಂದರೆ ದುಡಿದದ್ದನ್ನು ಹಂಚಿ ತಿನ್ನುವುದು ಇವುಗಳ ಪ್ರಾಮಾಣಿಕ ಪಾಲನೆಯಿಂದ ಜಗತ್ತು ಭಯ ಶೋಕ ಮೋಹಾದಿಗಳಿಂದ ಮುಕ್ತವಾಗಬಹುದು ಎಂಬುದು ಬಸವಣ್ಣನವರ ಅಭಿಪ್ರಾಯವಾಗಿತ್ತು ಎಂದರು.

ಅನ್ಯ ಭಿನ್ನ ವಿಲ್ಲದ ಜ್ಞಾನ ಮಾರ್ಗವೇ ಬಸವಣ್ಣನವರ ತತ್ವವಾಗಿದ್ದು ‘ಅರಿವಿನ ತೃಪ್ತಿಗೆ ಅನುಭಾವವೇ ಆಶ್ರಯ’, ಕಣ್ಣಿಗೆ ದೃಶ್ಯದಿಂದ, ಮೂಗಿಗೆ ವಾಸನೆಯಿಂದ, ಬಾಯಿಗೆ ರುಚಿಯಿಂದ, ಕಿವಿಗೆ ಶಬ್ದದಿಂದ ತ್ವಚೆಗೆ ಸ್ಪರ್ಶದಿಂದ ತೃಪ್ತಿ ಸಿಕ್ಕರೆ, ಬುದ್ಧಿಗೆ ಭಾವ, ಭಾವಕ್ಕೆ ವಿಚಾರ ಕೊಟ್ಟು ತೃಪ್ತಿ ಪಡಿಸಬಹುದು ಆದರೆ ‘ಅರಿವಿನ ತೃಪ್ತಿಗೆ ಅನುಭಾವವೇ ಆಶ್ರಯ’ ಎಂದು ಬಸವಣ್ಣನವರು ಪ್ರತಿಪಾದಿಸಿದ್ದು ಅವರ ವಚನಗಳ ಅಧ್ಯಯನ ಮತ್ತು ಅನುಷ್ಠಾನದಿಂದ ಇದನ್ನು ಸಾಧಿಸಬಹುದು ಎಂದು ಉದಾಹರಣೆಗಳ ಸಹಿತ ಮಂಜುನಾಥ್ ಅವರು ವಿವರಿಸಿದರು.

ದಾವಣಗೆರೆ ಜಿಲ್ಲಾ ಕನ್ನಡ ಲೇಖಕಿಯರ ಸಂಘದ ಅಧ್ಯಕ್ಷೆ ಶ್ರೀಮತಿ ವೀಣಾ ಕೃಷ್ಣಮೂರ್ತಿಯವರ ನಿವಾಸದಲ್ಲಿ ಏರ್ಪಾಡಾಗಿದ್ದ ಉಪನ್ಯಾಸ ಕಾರ್ಯಕ್ರಮದ ಉದ್ಘಾಟನೆಯನ್ನು ಸಾಹಿತಿ ಕೆ.ಎನ್. ಸ್ವಾಮಿ ನೆರವೇರಿಸಿದರು.

ಪ್ರಾಸ್ತಾವಿಕ ನುಡಿಗಳನ್ನು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಪ್ರಸ್ತುತಪಡಿಸಿದರು.

ವಿರಕ್ತಮಠದ ಬಸವಪ್ರಭು ಸ್ವಾಮಿಗಳ ಸಾನ್ನಿಧ್ಯದಲ್ಲಿ ದಾವಣಗೆರೆ ತಾಲೂಕು ಕಸಾಪ ಅಧ್ಯಕ್ಷೆ ಶ್ರೀಮತಿ ಸುಮತಿ ಜಯಪ್ಪ, ಮಾಜಿ ಮೇಯರ್ ಅಜಯ್ ಕುಮಾರ್, ದಾವಣಗೆರೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪರಮೇಶ್ವರಪ್ಪ, ಕ. ಸಾ.ಪ.ದ ದಿಳ್ಯಪ್ಪ,ಮಲ್ಲಮ್ಮ, ಅವರಗೆರೆ ರುದ್ರಮುನಿ ಮುಂತಾದವರ ಉಪಸ್ಥಿತರಿದ್ದರು.

ದಾಗಿನಕಟ್ಟೆ ಪರಮೇಶ್ವರಪ್ಪ, ಜಗದೀಶ್ ಕೂಲಂಬಿ ಕಾರ್ಯಕ್ರಮ ನಿರೂಪಿಸಿದರು. ಉಮಾದೇವಿ ವಚನ ಹಾಡಿದರು, ಕೋಟೆ ಹಾಳು ಬಸಮ್ಮ ಹಂಪೋಳ್ ಶಿವಪ್ಪ,ಹೆಚ್.ಎಸ್. ಬಸವರಾಜ್, ಶಕುಂತಲಾ ಶಂಭುಲಿಂಗಪ್ಪ ಬಸಪ್ಪ ನೆಸ್ವಿ, ಸಂಗನಬಸವ ನೆಸ್ವಿ, ಕತ್ತಲಗೆರೆ ಮಲ್ಲಮ್ಮ ಗೌಡರ ಜಯದೇವಪ್ಪ ಹಾಗೂ ಸುಧಾ ಮತ್ತು ಜೆ.ಬಿ. ರಾಜ್ ಇವರುಗಳ ದತ್ತಿ ಗಳಿಂದ ಕಾರ್ಯಕ್ರಮ ಏರ್ಪಾಡಾಗಿತ್ತು.

ರೈತರ ಆರ್ಥಿಕತೆ ಹೆಚ್ಚಿಸುವ ಗೋಮಾತೆ ಮಾನ್ಯಳು- ಬಿಎಸ್ ವೈ

0

ಮನುಷ್ಯನ ಅಗತ್ಯಗಳಿಗೆ ಎಲ್ಲವನ್ನೂ ನೀಡುವ, ಅವರ ಆರೋಗ್ಯವನ್ನು ವೃದ್ಧಿಸುವ ಹಾಗೂ ರೈತರ ಆರ್ಥಿಕತೆಯನ್ನು ಅಭಿವೃದ್ಧಿಗೊಳಿಸುವ ಗೋಮಾತೆ ಧನ್ಯಳು, ಮಾನ್ಯಳು ಎಂದು ನಿಕಟಪೂರ್ವ ಮುಖ್ಯಮಂತ್ರಿ ಹಾಗೂ ಶಾಸಕ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.

ಅವರು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಜಿಲ್ಲಾ ಪಂಚಾಯತ್ ಶಿವಮೊಗ್ಗ, ಶಿವಮೊಗ್ಗ ಹಾಲು ಒಕ್ಕೂಟ ಮತ್ತು ಪಶುವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದೊಂದಿಗೆ ಸರ್ಕಾರಿ ನೌಕರರ ಸಭಾಭವನದಲ್ಲಿ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಏರ್ಪಡಿಸಲಾಗಿದ್ದ ವಿಶ್ವ ಪಶುವೈದ್ಯಕೀಯ ದಿನಾಚರಣೆ ಹಾಗೂ ಜಿಲ್ಲೆಯ ಪಶುವೈದ್ಯರಿಗೆ ಜಿಲ್ಲಾ ಮಟ್ಟದ ತಾಂತ್ರಿಕ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಉಪಕಸುಬನ್ನಾಗಿಸಿಕೊಂಡಿರುವ ಹಾಗೂ ರೈತರು ಅವಲಂಬಿಸಿರುವ ಹೈನುಗಾರಿಕೆ, ಕುರಿ-ಮೇಕೆ-ಕೋಳಿ ಸಾಕಾಣಿಕೆಗೆ ಹಗಲಿರುಳೆನ್ನದೆ ಶ್ರಮಿಸುತ್ತಿರುವ ಪಶುವೈದ್ಯರ ಪಾತ್ರ ಪ್ರಮುಖವಾದುದ್ದಾಗಿದೆ ಎಂದ ಅವರು, ತಾವು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಹಾಲು ಉತ್ಪಾದಕರಿಗೆ ಪ್ರತಿ ಲೀ. ಹಾಲಿಗೆ ರೂ.2 ಪ್ರೋತ್ಸಾಹಧನವನ್ನು ನೀಡಲಾಗುತ್ತಿತ್ತು. ಪ್ರಸ್ತುತ ಈ ಪ್ರೋತ್ಸಾಹಧನವನ್ನು ರೂ.5ಕ್ಕೆ ಹೆಚ್ಚಿಸಲಾಗಿದೆ. ಭಾರತದ ಜಿಡಿಪಿ.ಗೆ ಕೃಷಿಯಿಂದ ಶೇ.16ರಷ್ಟು ಕೊಡುಗೆ ನೀಡಲಾಗುತ್ತಿದೆ. ಇದರಲ್ಲಿ ಶೇ.25ರಷ್ಟು ಪಶುಪಾಲಕರ ಪಾತ್ರವಿದೆ ಎಂದವರು ನುಡಿದರು.

2006ರಲ್ಲಿ ಜಿಲ್ಲೆಯಲ್ಲಿ ಪಶುವೈದ್ಯಕೀಯ ಕಾಲೇಜನ್ನು ಪ್ರಾರಂಭಿಸಿ, ಪಶುವೈದ್ಯಕೀಯ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸಲಾಗಿದೆ. ಇದರಿಂದಾಗಿ ರೈತರಿಗೆ ನೆರವು ದೊರೆಯಲಿದೆ. ದೇಶವು ಜಾನುವಾರು ಸಂಖ್ಯೆಯಲ್ಲಿ ಮತ್ತು ಹಾಲು ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ರಾಜ್ಯದಲ್ಲಿ ದಿನಂಪ್ರತಿ 18 ಬಿಲಿಯನ್ ಲೀ. ಹಾಲು ಉತ್ಪಾದನೆಯಾಗುತ್ತಿದೆ. ಇದರಿಂದಾಗಿ ಕರ್ನಾಟಕ ರಾಜ್ಯ ಉತ್ಪಾದನೆಯಲ್ಲಿ 8ನೇ ಸ್ಥಾನದಲ್ಲಿರುವುದು ಹರ್ಷದ ಸಂಗತಿ ಎಂದರು.

ಪಶುಪಾಲಕರ ಅನುಕೂಲಕ್ಕಾಗಿ ಪಶುಗಳಿಗೆ ಅಂಬುಲೆನ್ಸ್ ಪ್ರಾರಂಭಿಸಿದೆ. ಗೋಸಂರಕ್ಷಣಾ ಕಾಯ್ದೆ-2020ಅನ್ನು ಜಾರಿಗೊಳಿಸಲಾಗಿದೆ.

ಇದರಿಂದಾಗಿ ವಯಸ್ಸಾದ ಜಾನುವಾರುಗಳನ್ನು ಸಂರಕ್ಷಿಸಲು ಜಿಲ್ಲೆಗೊಂದರಂತೆ ಗೋಶಾಲೆ ಪ್ರಾರಂಭಿಸಲು ಚಿಂತನೆ ನಡೆಸಲಾಗಿದ್ದು, ಕಾರ್ಯ ಪ್ರಗತಿಯಲ್ಲಿದೆ. ಮೈಸೂರಿನ ಪಿಂಜಾರಿಪೋಲ್ ಮತ್ತು ಇತರೆ ಗೋಶಾಲೆಗಳಿಗೆ ಬೆಂಬಲ ಯೋಜನೆಯಡಿಯಲ್ಲಿ ಗೋಶಾಲೆಗಳ ಪ್ರತಿ ಗೋವಿಗೆ ನಿರ್ವಹಣಾ ವೆಚ್ಚವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಪಶುಪಾಲನಾ ಇಲಾಖೆ ಆರಂಭವಾದಾಗಿನಿಂದ ನೆನೆಗುದಿಗೆ ಬಿದ್ದಿದ್ದ ಇಲಾಖಾ ಪುನಃರಚನೆಯನ್ನು ಮಾಡಿ, ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರೂಪಿಸಿ, ಪಶುವೈದ್ಯಾಧಿಕಾರಿಗಳ ಹುದ್ದೆಯನ್ನು ಗುಂಪು ಬಿ. ಯಿಂದ ಎ. ಗುಂಪಿಗೆ ಮೇಲ್ದರ್ಜೆಗೇರಿಸಲಾಗಿದೆ. ಹೊಸ ಹುದ್ದೆಗಳನ್ನು ಸೃಜಿಸಿ ಮುಂಬಡ್ತಿಗೆ ಹೆಚ್ಚಿನ ಅವಕಾಶ ಮಾಡಿಕೊಡಲಾಗಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಪಶು ವೈದ್ಯಕೀಯ ಕ್ಷೇತ್ರಕ್ಕೆ ಅಗತ್ಯವಿರುವ ಎಲ್ಲವನ್ನು ಗಮನಿಸಿ, ಅದಕ್ಕೆ ಪೂರಕವಾಗಿ ಸಹಕಾರ ನೀಡಲಾಗುವುದು ಎಂದರು.

ದೇಶದಾದ್ಯಂತ ಗೋಮಾತೆಯನ್ನು ಮಾತೃ ಸ್ಥಾನದಲ್ಲಿಟ್ಟು ಪೂಜನೀಯ ಭಾವದಿಂದ ಕಾಣಲಾಗುತ್ತಿದೆ. ಗೋಮಾತೆಯಲ್ಲಿ ಮುಕ್ಕೋಟಿ ದೇವತೆಗಳನ್ನು ಕಾಣುವ ನಾವು ಗೋರಕ್ಷಣೆಗೆ ಮುಂದಾಗುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸದ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ಗೋವುಗಳ ಸೇವೆ ಅವಶ್ಯವಿರುವಂತೆಯೇ ಪಶುವೈದ್ಯರ ಬೇಡಿಕೆಯೂ ಹೆಚ್ಚಿದೆ. ಗೋವುಗಳ ಸೇವೆ ಮಾಡುವ ಪಶುವೈದ್ಯರ ಸೇವೆ ಅಭಿನಂದನೀಯ. ಕಾಲಕಾ¯ಕ್ಕೆ ಬದಲಾಗುತ್ತಿರುವ ವ್ಯವಸ್ಥೆಗೆ ಪೂರಕವಾಗಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ತಮ್ಮ ಜವಾಬ್ದಾರಿಯರಿತು ಕಾರ್ಯನಿರ್ವಹಿಸುವಂತೆ ಪಶು ವೈದ್ಯಾಧಿಕಾರಿಗಳಿಗೆ ಸಲಹೆ ನೀಡಿದರು.

ಕಾರ್ಯಾಗಾರದಲ್ಲಿ ಪಶು ಸೇವೆಗೆ ಸಂಬಂಧಿಸಿದಂತೆ ಆಹ್ವಾನಿತ ತಜ್ಞರಿಂದ ತಾಂತ್ರಿಕ ವಿಚಾರ ಸಂಕಿರಣ ಹಾಗೂ ಗೋಷ್ಠಿಗಳನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ರುದ್ರೇಗೌಡರು, ಮೇಯರ್ ಶ್ರೀಮತಿ ಸುನಿತಾ ಅಣ್ಣಪ್ಪ, ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಶಿವಯೋಗಿ ಬಿ.ಯಲಿ ಅವರು ಉಪಸ್ಥಿತರಿದ್ದರು.