Sunday, March 1, 2026
Sunday, March 1, 2026
Home Blog Page 1584

ಶಿವಮೊಗ್ಗ ಹಿರಿಯ ಹುಲಿ ‘ರಾಮ’ ಇನ್ನಿಲ್ಲ

0

ಶಿವಮೊಗ್ಗ ಸಮೀಪದಲ್ಲಿರುವ ತ್ಯಾವರೆಕೊಪ್ಪ ‘ಲಯನ್ ಸಫಾರಿ’ ಪ್ರಮುಖ ಪ್ರವಾಸಿ ಕೇಂದ್ರಗಳ ಪೈಕಿ ಪ್ರಮುಖವಾಗಿದೆ.

ಶಿವಮೊಗ್ಗ ಕೇಂದ್ರ ಸ್ಥಾನದಿಂದ ಕೇವಲ ಹತ್ತು ಕಿಲೋಮೀಟರ್ ದೂರದಲ್ಲಿ ಲಯನ್ ಸಫಾರಿ ಇದೆ. ಇಲ್ಲಿ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಾರೆ.

ಇಲ್ಲಿರುವ ಹುಲಿ, ಸಿಂಹಗಳು ಪ್ರಮುಖ ಆಕರ್ಷಣೆಯಾಗಿದ್ದು, ಅರಣ್ಯ ಇಲಾಖೆ ವಾಹನಗಳಲ್ಲಿ ಪ್ರವಾಸಿಗರನ್ನು ಕರೆದೊಯ್ದು ಇವುಗಳನ್ನು ತೋರಿಸಲಾಗುತ್ತದೆ.

ಈ ಪೈಕಿ ಹಿರಿಯ ಹುಲಿ ‘ರಾಮ’ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.
ಆದರೆ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ 17 ವರ್ಷದ ‘ರಾಮ’ ಎಂಬ ಹುಲಿ ಸಾವನ್ನಪ್ಪಿದೆ.

ಇದರಿಂದಾಗಿ ಈಗ ಸಫಾರಿಯಲ್ಲಿ ಕೇವಲ ಐದು ಹುಲಿಗಳು ಉಳಿದುಕೊಂಡಂತಾಗಿದೆ. ಈ ಹಿಂದೆ ಮತ್ತೊಂದು ಹಿರಿಯ ಹುಲಿ ‘ವಾಲಿ’ ಅನಾರೋಗ್ಯದಿಂದಾಗಿ ಸಾವನ್ನಪ್ಪಿತ್ತು.

ಶಿವಮೊಗ್ಗದಲ್ಲಿ ದ್ರವೀಕೃತ ಮತ್ತು ಕಂಪ್ರೆಸ್ಡ್ ನೈಸರ್ಗಿಕ ಅನಿಲ ಘಟಕ ಸ್ಥಾಪನೆ

0

ಶಿವಮೊಗ್ಗದಲ್ಲಿ ಪ್ರಥಮ ಬಾರಿಗೆ ಎಜಿ ಅಂಡ್ ಪಿ ಪ್ರಥಮ್ ಸಂಸ್ಥೆಯಿಂದ ಸಿ.ಎನ್.ಜಿ. ಮತ್ತು ಎಲ್.ಸಿ.ಎನ್.ಜಿ. ಘಟಕ ಸ್ಥಾಪನೆ ಮಾಡಲಾಗುವುದು ಎಂದು ಸಂಸ್ಥೆಯ ಪ್ರಾದೇಶಿಕ ಮುಖ್ಯಸ್ಥ ಗೌತಮ್ ಆನಂದ್ ಹೇಳಿದರು.

ಅವರು ಇಂದು ನಗರದ ರಾಯಲ್ ಆರ್ಕಿಡ್ ನಲ್ಲಿ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.

ಶಿವಮೊಗ್ಗದಲ್ಲಿ ಹೊಸ ಮಂಡ್ಲಿಯಲ್ಲಿ ಎಲ್.ಸಿ.ಎನ್.ಜಿ. ಘಟಕ ನಿರ್ಮಿಸಲಾಗುತ್ತಿದೆ. ಇದರ ಮೂಲಕ ಜಿಲ್ಲೆಯಲ್ಲಿ ನೈಸರ್ಗಿಕ ಅನಿಲಕ್ಕಿರುವ ಬೇಡಿಕೆ ಪೂರೈಸಲಾಗುವುದು ಎಂದರು.ಸರ್ಕಾರದಿಂದ ಈಗಾಗಲೇ ಯೋಜನೆಗೆ ಅನುಮತಿ ಪಡೆಯಲಾಗಿದೆ. ಕೇವಲ ಸಾರಿಗೆ, ಗೃಹಬಳಕೆ ಮಾತ್ರವಲ್ಲದೇ ಕಾರ್ಕಾನೆಗಳು ಬಾಯ್ಲರ್ ಗಳಲ್ಲೂ ಕೂಡ ಈ ಗ್ಯಾಸ್ ವಿಸ್ತರಿಸಲಾಗುವುದು. ಇದು ಅಂತರಾಷ್ಟ್ರೀಯ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ ಎಂದರು.

ಎಜಿ ಅಂಡ್ ಪಿ ಅನಿಲ ವಿತರಣೆಯ ಪ್ರಮುಖ ಕಂಪನಿಯಾಗಿದ್ದು, ಕರ್ನಾಟಕದಲ್ಲಿ ಮುಂದಿನ 5 ವರ್ಷಗಳಲ್ಲಿ 5 ಸಾವಿರ ಕೋಟಿ ರೂ. ಹೂಡಿಕೆಯ ಭಾಗವಾಗಿ ಮೂಲ ಸೌಕರ್ಯ ನಿರ್ಮಿಸಲಾಗುವುದು. ಪ್ರತಿ ಜಿಲ್ಲೆಯಲ್ಲೂ ಗ್ರಾಹಕರಿಗೆ ಅನುಕೂಲವಾಗುವಂತೆ ನ್ಯಾಚುರಲ್ ಗ್ಯಾಸ್ ಸೌಲಭ್ಯ ನೀಡಲಾಗುವುದು ಎಂದರು.

ವಾಹನಗಳಿಗೆ ಮಾತ್ರವಲ್ಲದೇ ಗೃಹಬಳಕೆಯ ಗ್ರಾಹಕರ ಅಡುಗೆ ಮನೆಗಳಿಗೆ ನೈಸರ್ಗಿಕ ಅನಿಲ ಪೂರೈಸುವ ಗುರಿ ಹೊಂದಿದ್ದು, ಮೈಸೂರು ಸೇರಿದಂತೆ ಕರ್ನಾಟಕದ ಅನೇಕ ಕಡೆಗಳಲ್ಲಿ ಈಗಾಗಲೇ ತನ್ನ ಕಾರ್ಯ ಆರಂಭ ಮಾಡಿದೆ.ಗೃಹ ಗ್ರಾಹಕರ ನೋಂದಣಿ ಸಹ ಮಾಡಲಾಗುತ್ತಿದೆ ಎಂದು ತಿಳಿಸಿದರು.

ತ್ರಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಸಿ.ಎನ್.ಜಿ. ಅಳವಡಿಸಿರುವ ವಾಹನಗಳೇ ಸಿಗುತ್ತವೆ. ಆಕಸ್ಮಾತ್ ಅಂತಹ ವಾಹನಗಳು ಇಲ್ಲದಿದ್ದರೆ, ಸಿ.ಎನ್.ಜಿ.ಗೆ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಈ ನೈಸರ್ಗಿಕ ಅನಿಲ ಪರಿಸರ ಪ್ರೇಮಿಯಾಗಿದೆ. ಆರ್ಥಿಕವಾಗಿ ಲಾಭವಾಗುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ಬಳಕೆಗಿಂತ ಶೇ. 40 ರಷ್ಟು ಉಳಿತಾಯವಾಗುತ್ತದೆ ಎಂದು ತಿಳಿಸಿದರು.

ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆ ಯೋಜನೆ : ರಾಜ್ಯದ ಸಾಧನೆ

0

ಆತ್ಮ ನಿರ್ಭರ ಭಾರತ ಅಭಿಯಾನದ ಪಿಎಂಎಫ್ಎಂಇ ಯೋಜನೆಯಡಿ ದೇಶದಲ್ಲಿಯೇ ಕರ್ನಾಟಕ ರಾಜ್ಯ ದ್ವಿತೀಯ ಸ್ಥಾನಗಳಿಸಿದ್ದು, ಕರ್ನಾಟಕದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಪ್ರಗತಿಪರ ರೈತರು ಈ ಯೋಜನೆಯ ನೆರವು ಪಡೆದು ಆಹಾರ ಸಂಸ್ಕರಣಾ ಉದ್ಯಮಿಯಾಗಲು ಸುವರ್ಣಾವಕಾಶ ಒದಗಿಸಿದೆ. ರೈತರು, , ಕಿರು ಉದ್ಯಮಿಗಳು , ರೈತ ಉತ್ಪಾದನಾ ಸಂಸ್ಥೆಗಳು , ಸ್ವಸಹಾಯ ಸಂಘಗಳು , ಸಹಕಾರಿಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಕರೆ ನೀಡಿದ್ದಾರೆ.

ಪ್ರಧಾನ ಮಂತ್ರಿಗಳ ಆಶಯಕ್ಕೆ ಮತ್ತಷ್ಟು ಬಲ ತುಂಬಲು ರಾಜ್ಯ ಸರ್ಕಾರವು ಯೋಜನೆಯಡಿಯಲ್ಲಿ ಶೇಕಡ 35 ರಷ್ಟು ಸಾಲ ಸಂಪರ್ಕಿತ ಸಹಾಯಧನಕ್ಕೆ ಹೆಚ್ಚುವರಿಯಾಗಿ ಶೇಕಡ 15 ರಷ್ಟು ಸಹಾಯಧನವನ್ನು ವೈಯಕ್ತಿಕ ಉದ್ದಿಮೆದಾರರಿಗೆ ಹಾಗೂ ರೈತರ ಗುಂಪುಗಳಿಗೆ ನೀಡುತ್ತಿದ್ದು , ಈ ಯೋಜನೆಯನ್ನು ಮತ್ತಷ್ಟು ಆಕರ್ಷಕಗೊಳಿಸಿದೆ .

ಇದರ ಫಲವಾಗಿ ಯೋಜನೆಯ ಅನುಷ್ಠಾನದಲ್ಲಿ ರಾಜ್ಯವು ದೇಶದಲ್ಲಿಯೇ 2 ನೇ ಸ್ಥಾನದಲ್ಲಿದ್ದು , 340 ಉದ್ದಿಮೆಗಳಿಗೆ ಸಾಲ ಮಂಜೂರಾತಿಯಾಗಿದ್ದು , ರೂ .52.62 ಕೋಟಿ ಬಂಡವಾಳವು ಕಿರು ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಹೂಡಿಕೆಯಾಗಿದೆ.

ಬೆಲ್ಲ ತಯಾರಿಕೆ , ತೆಂಗಿನ ಉತ್ಪನ್ನಗಳು , ಸಿರಿಧಾನ್ಯಗಳ ಉತ್ಪನ್ನಗಳು , ಉಪ್ಪಿನಕಾಯಿ , ಮೆಣಸಿನಕಾಯಿ , ಅಡಿಗೆ ಎಣ್ಣೆ , ಬೇಕರಿ ಉತ್ಪನ್ನಗಳು , ಹಣ್ಣು ಮತ್ತು ತರಕಾರಿ ಉತ್ಪನ್ನಗಳು , ಕಾಫಿ , ಮೀನು ಮತ್ತು ಮಾಂಸ ಉತ್ಪನ್ನಗಳು ಸೇರಿದಂತೆ ಇತ್ಯಾದಿ ಆಹಾರ ಸಂಸ್ಕರಣಾ ಘಟಕಗಳಿಗೆ ಸಾಲ ಮಂಜೂರಾತಿ ಮಾಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 3871 ಘಟಕಗಳಿಗೆ ಸಾಲ ಮಂಜೂರಾತಿ ನೀಡುವ ಗುರಿ ಹೊಂದಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.

ಆತ್ಮ ನಿರ್ಭರ ಭಾರತ ಅಭಿಯಾನದಡಿಯಲ್ಲಿ ಪ್ರಧಾನ ಮಂತ್ರಿಗಳ ದೂರದೃಷ್ಟಿಯ ಫಲವಾಗಿ ದೇಶದಲ್ಲಿರುವ ಸುಮಾರು 2.00 ಲಕ್ಷ ಅಸಂಘಟಿತ ಆಹಾರ ಸಂಸ್ಕರಣಾ ಉದ್ದಿಮೆಗಳ ಕ್ರಮಬದ್ಧಗೊಳಿಸುವ ಸಲುವಾಗಿ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಔಪಚಾರೀಕರಣ ಯೋಜನೆ ಇದಾಗಿದ್ದು, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಸಹಯೋಗದೊಂದಿಗೆ 60:40 ಅನುಪಾತದಲ್ಲಿ 2020-21ನೇ ಸಾಲಿನಿಂದ ಅನುಷ್ಠಾನಗೊಳಿಸುತ್ತಿರುವ 5 ವರ್ಷಗಳ ಈ ಯೋಜನೆಯಡಿಯಲ್ಲಿ ರಾಜ್ಯದಲ್ಲಿಯೂ ರೂ .493.55 ಕೋಟಿ ಅನುದಾನದಲ್ಲಿ 11910 ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಹೊಸದಾಗಿ ಪ್ರಾರಂಭಿಸಲು ಅಥವಾ ಹಾಲಿ ಕಾರ್ಯನಿರ್ವಹಿಸುತ್ತಿರುವ ಅಸಂಘಟಿತ ಉದ್ದಿಮೆಗಳನ್ನು ಕ್ರಮಬದ್ಧಗೊಳಿಸಲು ಯೋಜಿಸಲಾಗಿದೆ . ಉದ್ದಿಮೆಗಳಿಗೆ ಸಾಲ ಮಂಜೂರಾತಿ ಮಾಡಲಾಗಿರುತ್ತದೆ.

ಪ್ರಸ್ತುತ ಸಾಲಿನಲ್ಲಿ 3871 ಘಟಕಗಳಿಗೆ ಸಾಲ ಮಂಜೂರಾತಿ ನೀಡುವ ಗುರಿ ಹೊಂದಲಾಗಿದೆ.ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಸಲ್ಲಿಕೆಗಾಗಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಲು ಸಚಿವರು ಕರೆ ನೀಡಿದ್ದಾರೆ

ಹರ್ಷ ಹತ್ಯೆ ಪ್ರಕರಣ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಸ್ತರಣೆ

0

ರಾಜ್ಯಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ಸಂಬಂಧ ಬಂಧಿಸಲಾಗಿರುವ ಹತ್ತು ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು 190 ದಿನಕ್ಕೆ ವಿಸ್ತರಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಎನ್‌ಐಎ ವಿಶೇಷ ನ್ಯಾಯಾಲಯದ ಉಸ್ತುವಾರಿ ನ್ಯಾಯಾಧೀಶ ಕಸನಪ್ಪ ನಾಯಕ್‌ ವಿಚಾರಣೆ ನಡೆಸಿ, ಎನ್‌ಐಎ ಪರ ವಕೀಲರು ಸಲ್ಲಿಸಿದ ಮನವಿಯನ್ನು ಮಾನ್ಯ ಮಾಡಿದರು.

ಆರೋಪಿಗಳನ್ನು ಇನ್ನೂ ಹೆಚ್ಚಿನ ತನಿಖೆಗೆ ಒಳಪಡಿಸುವ ಅಗತ್ಯವಿರುವುದರಿಂದ ಅವರ ನ್ಯಾಯಾಂಗ ಬಂಧನ ಅವಧಿಯನ್ನು 90 ದಿನಗಳಿಂದ 190 ದಿನಗಳಿಗೆ ಹೆಚ್ಚಿಸಬೇಕೆಂದು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಮಾಡಿದ ಮನವಿಯನ್ನು ವಿಶೇಷ ಕೋರ್ಟ್ ಪುರಸ್ಕರಿಸಿದೆ.

ಎನ್‌ಐಎ ಪರ ವಾದ ಮಂಡಿಸಿದ ವಿಶೇಷ ಪ್ರಾಸಿಕ್ಯೂಟರ್‌ ಪಿ.ಪ್ರಸನ್ನಕುಮಾರ್, ಪ್ರಕರಣದಲ್ಲಿ ಈಗಾಗಲೇ ಆರೋಪಿಗಳ ಗುರುತು ಪತ್ತೆಯ ಪೆರೇಡ್‌ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಆದರೆ, ಪ್ರತ್ಯಕ್ಷ ಸಾಕ್ಷಿಗಳ ವಿಚಾರಣೆ ನಡೆಯಬೇಕಿದೆ.

ಜೊತೆಗೆ ಆರೋಪಿಗಳು ಬಳಸುತ್ತಿದ್ದ ವಿದ್ಯುನ್ಮಾನ ಸಾಧನಗಳು ಮತ್ತು ಸಿಡಿಆರ್ ವಿಶ್ಲೇಷಣೆಯು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಇನ್ನೂ ನಡೆಯಬೇಕಿದೆ. ಹಾಗಾಗಿ ತನಿಖೆಗಾಗಿ ಆರೋಪಿಗಳ ನ್ಯಾಯಾಂಗ ಬಂಧನ ಅಗತ್ಯವಿದೆ ಎಂದರು.

ಅಲ್ಲದೆ, ಹತ್ಯೆ ನಡೆಸಿ ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸಲು ನಡೆಸಲಾದ ಸಂಚನ್ನು ಕಾರ್ಯಗತಗೊಳಿಸಿದ ಬಗೆ, ಅದಕ್ಕಾಗಿ ಎಲ್ಲಿಂದ ಹಣಕಾಸಿನ ನೆರವು ಪಡೆಯಲಾಯಿತು ಎಂಬುದನ್ನೆಲ್ಲಾ ಪತ್ತೆ ಹಚ್ಚಬೇಕಿದೆ.

ಆದ ಕಾರಣ, ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ)-1967ರ ಕಲಂ 43ಡಿ (2)(ಬಿ) ಅಡಿಯಲ್ಲಿ 190 ದಿನಗಳಿಗೆ ವಿಸ್ತರಿಸಿ ಆದೇಶಿಸಬೇಕು ಎಂದು ಕೋರಿದರು.

ಅದಕ್ಕೆ ಒಪ್ಪಿದ ನ್ಯಾಯಾಧೀಶರು ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು 190 ದಿನಗಳಿಗೆ ವಿಸ್ತರಿಸಿ ಆದೇಶಿಸಿದರು.

ಕೃಷಿ ಪರಿಕರಗಳನ್ನು ನಿಯಮಾನುಸಾರ ಮಾರಾಟ ಮಾಡಬೇಕು-ಶಿವರಾಜಕುಮಾರ್

0

ಕೃಷಿ ಪರಿಕರ ಮಾರಾಟಗಾರರು ನಿಯಮಾನುಸಾರವಾಗಿ ಪರಿಕರಗಳನ್ನು ಮಾರಾಟ ಮಾಡಬೇಕು. ಒಂದು ವೇಳೆ ನಿಯಮಗಳನ್ನು ಉಲ್ಲಂಘನೆ ಮಾಡಿದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಶಿವರಾಜಕುಮಾರ್ ತಿಳಿಸಿದರು.

ಶಿವಮೊಗ್ಗದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಸಭಾಂಗಣದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಬುಧವಾರ ಏರ್ಪಡಿಸಿದ್ದ ಕೃಷಿ ಪರಿಕರ ಮಾರಾಟಗಾರರ ಸಭೆ ಹಾಗೂ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈಗಾಗಲೇ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅಗತ್ಯ ರಸಗೊಬ್ಬರ ಕೀಟನಾಶಕ ಮತ್ತು ಬಿತ್ತನೆ ಬೀಜಗಳನ್ನು ಕಡ್ಡಾಯವಾಗಿ ರಸಗೊಬ್ಬರ ಅಂಗಡಿ ಮುಂಗಟ್ಟುಗಳ ಮಾಲೀಕರು ಸಕಾಲದಲ್ಲಿ ನಿಗದಿತ ದರದಲ್ಲಿ ವಿತರಣೆ ಮಾಡಬೇಕು. ಯಾವುದೇ ಕಾರಣಕ್ಕೂ ಯಾವುದೇ ರೀತಿಯ ರಸಗೊಬ್ಬರ, ಕೀಟನಾಶಕ ಮತ್ತು ಬಿತ್ತನೆ ಬೀಜಗಳನ್ನು ಗೋಡಾನ್‍ಗಳಲ್ಲಿ ಅನಧಿಕೃತವಾಗಿ ದಾಸ್ತಾನು ಮಾಡುವ ಹಾಗಿಲ್ಲ. ತಪ್ಪಿದಲ್ಲಿ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕೃಷಿ ಪರಿಕರ ಮಾರಾಟಗಾರರು ನಿಯಮಾನುಸಾರ ಪರಿಕರ ಮಾರಾಟ ಮಾಡಬೇಕು. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿ ಅಧಿಕ ದರಕ್ಕೆ ಮಾರಾಟ, ಅನಧಿಕೃತ ದಾಸ್ತಾನು ಶೇಖರಣೆ, ಕೃತಕ ಅಭಾವ ಸೃಷ್ಟಿಸುವಿಕೆ, ಲೂಸ್ ಸೀಡ್ಸ್ ಬಿತ್ತನೆ ಬೀಜ ಮಾರಾಟ ಮಾಡುವುದು ಕಂಡು ಬಂದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು. ಪ್ರತಿಯೊಬ್ಬರು ರೈತರ ಹಿತಾಸಕ್ತಿಗಾಗಿ ದುಡಿಯಬೇಕೆಂದು ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕರ(ಜಾಗೃತ ದಳ) ವೀರಭದ್ರಪ್ಪ ಮಾತನಾಡಿ, ಯೂರಿಯಾ ಗೊಬ್ಬರಕ್ಕೆ ಸರ್ಕಾರ ಪ್ರತಿ 45 ಕೆ.ಜಿ ಚೀಲಕ್ಕೆ ರೂ.800/- ಮೊತ್ತದ ಸಹಾಯಧನ ಭರಿಸುತ್ತಿದೆ. ಡಿಎಪಿ ಗೊಬ್ಬರಕ್ಕೆ ಪ್ರತಿ 50 ಕೆಜಿ ಚೀಲಕ್ಕೆ ರೂ. 2500 ಹಾಗೂ 15:15:15 ಗೊಬ್ಬರಕ್ಕೆ ಪ್ರತಿ 50 ಕೆ.ಜಿ ಚೀಲಕ್ಕೆ ರೂ. 1425/- ಸಹಾಯಧನ ಭರಿಸುತ್ತದೆ

ದೇಶದಲ್ಲಿ ರಸಗೊಬ್ಬರಕ್ಕಾಗಿ ಕೇಂದ್ರ ಸರ್ಕಾರವು 2020-21 ನೇ ಸಾಲಿನಲ್ಲಿ ರೂ.127 ಲಕ್ಷ ಕೋಟಿ, 2021-22 ನೇ ಸಾಲಿನಲ್ಲಿ ರೂ.160 ಲಕ್ಷ ಕೋಟಿ ಹಾಗೂ ಪ್ರಸಕ್ತ ಸಾಲಿನಲ್ಲಿ ರೂ.200 ಲಕ್ಷ ಕೋಟಿ ಸಹಾಯಧನವನ್ನು ನೀಡುತ್ತಿದೆ ಎಂದರು.

ತಾಲ್ಲೂಕಿನಲ್ಲಿ ಒಟ್ಟು 123 ಕೃಷಿ ಪರಿಕರಗಳ ಮಾರಾಟಗಾರರು ಪರವಾನಗಿ ಪಡೆದಿದ್ದಾರೆ. ಅದರಲ್ಲಿ 100 ಖಾಸಗಿ ಮತ್ತು 23 ಸೊಸೈಟಿಗಳಿವೆ. ಒಟ್ಟು 26,000 ಹೆಕ್ಟೇರ್ ಕೃಷಿ ಮತ್ತು 49,000 ತೋಟಗಾರಿಕೆ ಬೆಳೆಗಳು ಸೇರಿದಂತೆ ಒಟ್ಟು 75,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು ಆವರಿಸಿದೆ ಎಂದು ತಿಳಿಸಿದರು.

ಸಭೆಯಲ್ಲಿ ಶಿವಮೊಗ್ಗ ತಾಲ್ಲೂಕಿನ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿಗಳಾದ ಸುನೀತಾ, ಮಹೇಶ್ ಇತರರು ಹಾಗೂ ತಾಲ್ಲೂಕಿನ ಎಲ್ಲಾ ಹೋಬಳಿಗಳ ಕೃಷಿ ಅಧಿಕಾರಿಗಳು ಪಾಲ್ಗೊಂಡಿದ್ದರು.

ಭ್ರಷ್ಟಾಚಾರ ಆರೋಪದ ಮೇಲೆ ಐಎಎಸ್ ಅಧಿಕಾರಿ ಬಂಧನ-ವಿಚಾರಣೆ

0

ಜಾರ್ಖಂಡ್ ಐಎಎಸ್ ಪೂಜಾ ಸಿಂಘಾಲ್ ಅವರನ್ನು ಜಾರಿ ನಿರ್ದೇಶನಾಲಯ ಇಂದು ಬಂಧಿಸಿದೆ. ಬಂಧನಕ್ಕೂ ಮುನ್ನ ಆಕೆಯನ್ನು ಹಲವು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿತ್ತು.

ಜಾರಿ ನಿರ್ದೇಶನಾಲಯ ಜಾರ್ಖಂಡ್ ಗಣಿ ಕಾರ್ಯದರ್ಶಿ ಪೂಜಾ ಸಿಂಘಾಲ್ ಮತ್ತು ಅವರ ಕುಟುಂಬ ಸೇರಿದಂತೆ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಮನಿ ಲಾಂಡರಿಂಗ್ ತನಿಖೆಗೆ ಸಂಬಂಧಿಸಿದಂತೆ ಖುಂಟಿ ಜಿಲ್ಲೆಯಲ್ಲಿ ಸುಮಾರು 18 ಕೋಟಿ MGNREGA ನಿಧಿಯನ್ನು ದುರುಪಯೋಗಪಡಿಸಿಕೊಂಡ ಆರೋಪ ಅವರ ಮೇಲಿದೆ.

ರಾಜ್ಯ ರಾಜಧಾನಿ ರಾಂಚಿಯಲ್ಲಿ ತಪಾಸಣೆ ನಡೆಸಿದ ಸಂಸ್ಥೆಯು ಎರಡು ಸ್ಥಳಗಳಿಂದ ಒಟ್ಟು 19.31 ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಐಎಎಸ್ ಅಧಿಕಾರಿ ಮತ್ತು ಅವರ ಕುಟುಂಬದೊಂದಿಗೆ ಸಂಪರ್ಕ ಹೊಂದಿರುವ ರಾಂಚಿ ಮೂಲದ ಚಾರ್ಟರ್ಡ್ ಅಕೌಂಟೆಂಟ್-ಕಮ್-ಫೈನಾನ್ಷಿಯಲ್ ಅಡ್ವೈಸರ್ ಅವರ ಆವರಣದಿಂದ ಸುಮಾರು 17.51 ​​ಕೋಟಿ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಗರದ ಮತ್ತೊಂದು ಸ್ಥಳದಿಂದ ಸುಮಾರು 1.8 ಕೋಟಿ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಪೂಜಾ ಸಿಂಘಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.

ಇಡೀ ಸಮುದಾಯ ಮಾದಕ ವಸ್ತು ಗಳಿಂದ ದೂರವಿರಲು ಯುವಜನತೆ ಪ್ರಯತ್ನಿಸಬೇಕು

0

ಯುವಜನರು ದೇಶದ ಆಸ್ತಿ. ಆದರೆ, ಅದೇ ಆಸ್ತಿ ಈಗ ಮಾದಕ ವ್ಯಸನಗಳ ಬಲೆಗೆ ಬಿದ್ದು ತಮ್ಮ ಅಮೂಲ್ಯ ವಿದ್ಯಾರ್ಥಿ ಜೀವನ, ಬದುಕನ್ನ ಹಾಳುಮಾಡಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿಯವರು ತಿಳಿಸಿದರು.

ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ವಿಜಯ ಕರ್ನಾಟಕ , ಹಾಗೂ ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಮಾದಕ ವಸ್ತುಗಳ ವಿರುದ್ಧ ಕರ್ನಾಟಕ ಅಭಿಯಾನ ವನ್ನು ಉದ್ಘಾಟಿಸಿ ಮಾತನಾಡಿದರು.

ಮಾದಕ ವಸ್ತುಗಳ ವಿರುದ್ಧದ ಹೋರಾಟಕ್ಕೆ ವಿದ್ಯಾರ್ಥಿಗಳು ರಾಯಭಾರಿಗಳಾಗಬೇಕು. ನಾನೊಬ್ಬನೇ ಮಾದಕ ವಸ್ತುಗಳಿಂದ ದೂರ ಇದ್ದರೆ ಆಗುವುದಿಲ್ಲ. ಸಮುದಾಯವು ವ್ಯಸನಗಳಿಂದ ಮುಕ್ತವಾಗಬೇಕು. ಉತ್ತಮ ಸಮಾಜ ನಿರ್ಮಾಣವಾಗಬೇಕಾದಲ್ಲಿ ಪ್ರತಿಯೊಬ್ಬರೂ ಮಾದಕ ದ್ರವ್ಯಗಳಿಂದ ದೂರ ಇರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್ ಮಾತನಾಡಿ, ಡ್ರೆಗ್ಸ್ ಬಳಕೆಯು ಕೇವಲ ವೈಯಕ್ತಿಕ ಬದುಕು ಮಾತ್ರವಲ್ಲದೆ, ಅವರ ಇಡೀ ಕುಟುಂಬವನ್ನು ಸಂಕಷ್ಟದ ಕೂಪಕ್ಕೆ ತಳ್ಳುತ್ತದೆ. ಮಾದಕ ವ್ಯಸನವು ಬಡವ ಶ್ರೀಮಂತರೆನ್ನದೆ ಎಲ್ಲ ವರ್ಗದವರನ್ನೂ ಆವರಿಸಿಕೊಂಡಿದೆ. ದಯವಿಟ್ಟು ತಪ್ಪು ಹೆಜ್ಜೆ ತುಳಿದು ನಿಮ್ಮ ಬದುಕು ಮತ್ತು ಕುಟುಂಬವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದರು.

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಮಾತನಾಡಿ, ಮನುಷ್ಯನ ಜೀವನದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎಲ್ಲವೂ ಎದುರಾಗುತ್ತವೆ. ಉಜ್ವಲ ಮತ್ತು ಸುಂದರ ಬದುಕಿಗಾಗಿ ಒಳ್ಳೆಯದನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂದರು.

ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ಎಂ.ಎ. ರಮೇಶ್ ಹೆಗಡೆ ಮಾತನಾಡಿ, ಮಾತು ರೋಗಿಗಳಿಗೆ ದಾಸರಾಗಿ ಲಕ್ಷಾಂತರ ಜನರು ಸಾವನ್ನಪ್ಪುತ್ತಿರುವ ಸಂಗತಿ ಭಯ ಮೂಡಿಸುತ್ತದೆ. ಮಾದಕ ವಸ್ತುಗಳ ವಿರುದ್ಧ ಜಾಗೃತಿ ಅಭಿಯಾನ ಕೇವಲ ಒಂದು ಕಾರ್ಯಕ್ರಮಕ್ಕೆ ಸೀಮಿತವಾಗಬಾರದು ಎಂದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಡಿವೈ ಎಸ್ ಪಿ ಬಾಲರಾಜ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ ಡಾ. ಸಂತೋಷ್ ಮತ್ತು ವಿಜಯಕರ್ನಾಟಕ ಸ್ಥಾನಿಕ ಸಂಪಾದಕ ಆರಗ ರವಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು

ರವೀಂದ್ರನಾಥ್ ಅವರ ರಾಜಿನಾಮೆ ಅಂಗೀಕರಿಸದಂತೆ ಎಂ.ಪಿ.ಕುಮಾರಸ್ವಾಮಿ ಮನವಿ

0

ಹಿರಿಯ ಐಪಿಎಸ್ ಅಧಿಕಾರಿ ಡಾ.ಪಿ‌.ರವೀಂದ್ರನಾಥ ಅವರ ರಾಜೀನಾಮೆ ಅಂಗೀಕರಿಸದಂತೆ ಅನುಸೂಚಿತ ಜಾತಿ ಪಂಗಡಗಳ ಸಮಿತಿ ಅಧ್ಯಕ್ಷ ಎಂ.ಪಿ.‌ಕುಮಾರಸ್ವಾಮಿ ನೇತೃತ್ವದ ಸಮಿತಿ ಸದಸ್ಯರು ರಾಜ್ಯ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿದರು.

ಹಿರಿಯ ಐಪಿಎಸ್ ಅಧಿಕಾರಿ ರವೀಂದ್ರ ನಾಥ್ ತಮ್ಮ ರಾಜೀನಾಮೆ ಹಿಂಪಡೆಯಲು ತಮ್ಮ ಅಭ್ಯಂತರವಿಲ್ಲ ಎಂದು ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ನಿಯೋಗಕ್ಕೆ ಭರವಸೆ ನೀಡಿದರು.

ಸಮಿತಿಯಲ್ಲಿ ಶಾಸಕರಾದ ಎನ್ .
ಮಹೇಶ್, ಪಿ.ರಾಜೀವ್, ಅಬ್ಬಯ್ಯ, ಪ್ರಸಾದ್, ಪ್ರೊ. ಲಿಂಗಣ್ಣ ಇನ್ನಿತರರು ಹಾಜರಿದ್ದರು.
ಸಮಿತಿಯಲ್ಲಿ ನಕಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಉನ್ನತ ಹುದ್ದೆ ಗಿಟ್ಟಿಸಿಕೊಂಡವವರ ವಿರುದ್ದ ತನಿಖೆಗೆ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಧಾರದ ಆಧಾರದ ಮೇಲೆ ರವೀಂದ್ರ ನಾಥ್ ಸಂಬಂಧಿಸಿದವರಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ ಎಂದು ಎಂ.ಪಿ. ಕುಮಾರ ಸ್ವಾಮಿ ಹೇಳಿಕೆ ನೀಡಿದ್ದಾರೆ.

ರಾಜೀನಾಮೆ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದು,ರೇಣುಕಾಚಾರ್ಯ ಸೇರಿದಂತೆ ಬಿಜೆಪಿ ಮುಖಂಡರಿಗೆ ನಕಲಿ ಜಾತಿ ಪ್ರಮಾಣ ಪತ್ರ ಪಡೆದ ಪ್ರಕರಣ ಸಂಬಂಧ ನೋಟಿಸ್ ನೀಡಿದ್ದಕ್ಕೆ ರವೀಂದ್ರನಾಥ ವರ್ಗಾವಣೆಯಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ರಾಜೀನಾಮೆಗೆ ಸಿದ್ದರಾಮಯ್ಯ ಹಾಗೂ ಬಿಜೆಪಿ ಕಾರಣ ಎಂದು ಎಚ್.ಡಿ.ಕುಮಾರ ಸ್ವಾಮಿ ಆರೋಪಿಸಿದ್ದರು.
ಪೊಲೀಸ್ ತರಬೇತಿ ವಿಭಾಗದ ಡಿಜಿಪಿ ಸ್ಥಾನಕ್ಕೆ ಡಾ.ಪಿ‌.ರವೀಂದ್ರನಾಥ ಮಂಗಳವಾರ ರಾಜೀನಾಮೆ ಸಲ್ಲಿಸಿದ್ದರು.

ನಾಗರಿಕ ಹಕ್ಕು ನಿರ್ದೇಶನಾಲಯದ ನಿರ್ದೇಶಕ ಸ್ಥಾನದಿಂದ ವರ್ಗಾವಣೆ ಮಾಡಿರುವ ಹಿನ್ನೆಲೆಯಲ್ಲಿ ಬೇಸರಗೊಂಡು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕೊಲ್ಲೂರ ಮೂಕಾಂಬಿಕೆ ದೇಗುಲದಲ್ಲಿ ದಾಖಲೆ ಕಾಣಿಕೆ ಸಂಗ್ರಹ

0

ಉಡುಪಿ ಜಿಲ್ಲೆಯ ಪುರಾಣ ಪ್ರಸಿದ್ದ ಕೊಲ್ಲೂರು ಶ್ರೀಮೂಕಾಂಬಿಕೆ ದೇವಾಲಯದ ಕಾಣಿಕೆ ಹುಂಡಿಯ ಎಣಿಕೆ ಕಾರ್ಯ ಮುಗಿದಿದ್ದು, ದಾಖಲೆ ಮೊತ್ತದ ಹಣ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.

ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಧರ್ಮದಾಯ (ಮುಜರಾಯಿ) ಇಲಾಖೆಯ ಮೊದಲ ಐದು ಶ್ರೀಮಂತ ದೇವಾಲಯಗಳ ಪೈಕಿ ಕೊಲ್ಲೂರು ದೇವಾಲಯ ಕೂಡಾ ಒಂದು.

ಕಾಣಿಕೆ ರೂಪದಲ್ಲಿ 2.5 ಕೆಜಿ ಬಂಗಾರ ಮತ್ತು 4.2 ಕೆಜಿ ಬೆಳ್ಳಿವಸ್ತುಗಳೂ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ. ರಾಜ್ಯದ ಪ್ರಸಿದ್ದ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ನಂತರ, ಮುಜರಾಯಿ ಇಲಾಖೆಗೆ ಅತಿಹೆಚ್ಚು ಆದಾಯ ತಂದು ಕೊಡುವ ದೇವಾಲಯಗಳ ಪೈಕಿ ಕೊಲ್ಲೂರು ಮೂಕಾಂಬಿಕೆ ದೇವಾಲಯ ಕೂಡಾ ಒಂದು.
ಕೊಲ್ಲೂರು ಕ್ಷೇತ್ರಕ್ಕೆ ಸರಾಸರಿ ಹತ್ತು ಸಾವಿರ ಭಕ್ತರು ಆಗಮಿಸುತ್ತಿದ್ದಾರೆ.

ಕೊರೊನಾ ನಂತರದ ನಿರ್ಬಂಧ ಸಡಿಲಿಕೆ, ಶಾಲಾ ಕಾಲೇಜುಗಳಿಗೆ ರಜೆ, ಸಾಲುಸಾಲು ಸರಕಾರೀ ರಜೆಯ ಕಾರಣಗಳಿಂದಾಗಿ, ಕಳೆದ ಕೆಲವು ದಿನಗಳಿಂದ ಭಾರೀ ಸಂಖ್ಯೆಯಲ್ಲಿ ಭಕ್ತರು ದೇಗುಲಕ್ಕೆ ಆಗಮಿಸುತ್ತಿದ್ದಾರೆ.
ಕೊಲ್ಲೂರು ಸಲಾಂ ಮಂಗಳಾರತಿ
ಕಾಣಿಕೆ ಹುಂಡಿ ಎಣಿಕೆ ಮುಗಿದಿದೆ.

ದೇವಾಲಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕಾಣಿಕೆ ರೂಪದ ಹಣ 1.53 ಕೋಟಿ ಸಂಗ್ರಹವಾಗಿದೆ. ಇದುವರೆಗೆ, ನಾಲ್ಕು ತಿಂಗಳ ಕೆಳಗೆ 1.39 ಕೋಟಿ ಸಂಗ್ರಹವಾಗಿದ್ದೇ ಅತಿ ಹೆಚ್ಚಾಗಿತ್ತು ಎಂದು ತಿಳಿದುಬಂದಿದೆ.

ಜಿಲ್ಲೆಯ ಬೈಂದೂರು ತಾಲೂಕಿನ ವ್ಯಾಪ್ತಿಯಲ್ಲಿ ಈ ದೇವಾಲಯವಿದೆ.