Saturday, August 8, 2026
Saturday, August 8, 2026
Home Blog Page 155

ಶಿವಮೊಗ್ಗ ಜಿಲ್ಲಾ 7ನೇ ಶರಣ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸಂಸದರಾದ ಬಿ.ವೈ. ರಾಘವೇಂದ್ರ ಭಾಗಿ

0

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕ ಶಿವಮೊಗ್ಗದ ವತಿಯಿಂದ ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿರುವ ಶಿವಮೊಗ್ಗ ಜಿಲ್ಲಾ 7ನೇ ಶರಣ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸಂಸದರಾದ ಬಿ.ವೈ. ರಾಘವೇಂದ್ರ ಅವರು ಭಾಗವಹಿಸಿದ್ದರು.

ಮಾರ್ಚ್ 24 ಮತ್ತು 25ರಂದು ನಡೆಯುವ ಈ ಸಮ್ಮೇಳನವು “ನನ್ನ ನಡೆ – ವಚನದಡೆ” ಎಂಬ ಆಶಯದೊಂದಿಗೆ ಶರಣರ ವಿಚಾರಧಾರೆಗಳನ್ನು ಜನಮಾನಸಕ್ಕೆ ತಲುಪಿಸುತ್ತಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯ ಮತ್ತು ನೇತ್ರತ್ವವನ್ನು ವಹಿಸಿದ್ದ ಪರಮಪೂಜ್ಯ ಜಗದ್ಗುರುಗಳು, ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು, ಶ್ರೀಮತ್ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠ, ಸುತ್ತೂರು, ಸಮ್ಮೇಳನಾಧ್ಯಕ್ಷರು, ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರು, ಶ್ರೀ ಮುರುಘಾಮಠ, ಆನಂದಪುರಂ, ಮತ್ತು ಶ್ರೀ ಬೆಕ್ಕಿನಕಲ್ಮಠ, ಶಿವಮೊಗ್ಗ, ಪೂಜ್ಯರ ದಿವ್ಯ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣವಾಗಿ ಜರುಗಿತು.

ವಚನ ಸಾಹಿತ್ಯವು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಶಕ್ತಿಯನ್ನು ಹೊಂದಿದೆ. ಇಂತಹ ಸಾಹಿತ್ಯ ಸಮ್ಮೇಳನಗಳು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಸೇತುವೆಯಾಗಲಿ ಎಂದು ಆಶಿಸಿದ್ದಾರೆ.

ಮೃತ ವೈದ್ಯೆಗೆ ಪಶು ವೈದ್ಯ ಸೇವಾ ಇಲಾಖೆ ವತಿಯಿಂದ ಸಂತಾಪ

0

ಡಾ|| ಸಮೀಕ್ಷಾ ರೆಡ್ಡಿ ಶಿವಮೊಗ್ಗ ಜಿಲ್ಲೆಯ ತ್ಯಾವರೆ ಕೊಪ್ಪದ ಹುಲಿ ಮತ್ತು ಸಿಂಹ ಧಾಮದಲ್ಲಿ ನೀರಾನೆಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ನೀರಾನೆ ದಾಳಿಯಿಂದ ಸಾವನಪ್ಪಿದ್ದಾರೆ.

ಈ ಸಾವು ದುರದೃಷ್ಟಕರವಾಗಿದ್ದು, ಈ ಘಟನೆಗೆ ಪಶುಪಾಲನಾ ಮತ್ತು ಪಶುವೈದ್ಯ ಸೇವೆ ಇಲಾಖೆ ಹಾಗೂ ಪಶುವೈದ್ಯ ವೃತ್ತಿಬಾಂಧವರು ಸಂತಾಪ ಸೂಚಿಸಿದ್ದಾರೆ.

CM Siddharamaih ಬಿಜೆಪಿ ಒಡ್ಡುವ ಆಸೆ ಆಮಿಷಗಳಿಗೆ ಒಳಗಾಗಬೇಡಿ- ಸಿದ್ಧರಾಮಯ್ಯ

0

CM Siddharamaih ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿಯವರ ನಾಮಪತ್ರ ಸಲ್ಲಿಕೆ ಬಳಿಕ‌ ಕಾರ್ಯಕ್ರಮವನ್ನು ಉದ್ದೇಶಿಸಿ ಸಿಎಂ ಸಿದ್ದರಾಮಯ್ಯನವರು ಮಾತನಾಡಿದರು.

ರಾಜ್ಯದಲ್ಲಿ ಈಗ ಎರಡು ಉಪಚುನಾವಣೆಗಳು ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿ ನಡೆಯುತ್ತಿದ್ದು, ಎರಡೂ ಕ್ಷೇತ್ರಗಳಲ್ಲಿ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಶ್ಯಾಮನೂರು ಶಿವಶಂಕರಪ್ಪ ಹಾಗೂ ಹೆಚ್ ವೈ ಮೇಟಿಯವರು ಗೆದ್ದಿದ್ದರು. ಇವರಿಬ್ಬರೂ ಅಕಾಲಿಕವಾಗಿ ಮರಣ ಹೊಂದಿದ್ದು, ಉಪಚುನಾವಣೆ ನಡೆಯುತ್ತಿದೆ ಎಂದರು.

ಹೆಚ್ ವೈ ಮೇಟಿಯವರು ಆಸ್ಪತ್ರೆಯಲ್ಲಿದ್ದಾಗ ನಾನು ಭೇಟಿಮಾಡಿದ್ದೆ, ಆಗ ಅವರು ಬದುಕುವ ನಿರೀಕ್ಷೆಯನ್ನು ಹೊಂದಿದ್ದರು. ಇದನ್ನು ನಾವು ನಿರೀಕ್ಷಿಸಿರಲಿಲ್ಲ. ಅವರು ಐದು ಬಾರಿ ಶಾಸಕರು ಹಾಗೂ ಒಮ್ಮೆ ಸಂಸದರಾಗಿದ್ದರು. ಎರಡು ಬಾರಿ ಮಂತ್ರಿಯೂ ಆಗಿದ್ದರು. ದಲಿತರ, ಅಲ್ಪಸಂಖ್ಯಾತರ, ಬಡವರ, ರೈತರ, ಕಾರ್ಮಿಕರ ಪರವಾಗಿ ಇದ್ದಂತಹ ಜಾತ್ಯತೀತ ವ್ಯಕ್ತಿಯಾಗಿದ್ದರು.

ಎಲ್ಲಾ ಜಾತಿ , ಧರ್ಮದವರನ್ನು ಸಮಾನವಾಗಿ ಕಾಣುವುದು ಮೇಟಿಯವರ ಮೇರು ಗುಣವಾಗಿತ್ತು. ಹಿಂದುಳಿದವರ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಬಹಳ ನಿಷ್ಠಾವಂತ ವ್ಯಕ್ತಿಯಾಗಿದ್ದರು. ಯಾರನ್ನಾದರೂ ನಂಬಿಕೊಂಡರೆ ಅವರನ್ನು ಎಂದಿಗೂ ಕೈಬಿಡುತ್ತಿರಲಿಲ್ಲ. ಅಂಥ ವ್ಯಕ್ತಿಯನ್ನು ಕಳೆದುಕೊಂಡು ಉಪಚುನಾವಣೆ ನಡೆಯುತ್ತಿದೆ ಎಂದು ತಿಳಿಸಿದರು.

ಉಪಚುನಾವಣೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗ ನಾನು, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಎಐಸಿಸಿ ಕಾರ್ಯದರ್ಶಿಗಳು ಹೈಕಮಾಂಡ್ ಜೊತೆ ಮಾತನಾಡಿ ಮೇಟಿಯವರ ಕುಟುಂಬಕ್ಕೆ ಟಿಕೆಟ್ ಕೊಡಲು ತೀರ್ಮಾನಿಸಲಾಗಿದೆ. ಮರಣ ಹೊಂದಿದ ಅಭ್ಯರ್ಥಿಯ ಮನೆಯವರಿಗೆ ಟಿಕೆಟ್ ಕೊಡುವುದು ನಮ್ಮ ಕಾಂಗ್ರೆಸ್ ಪಕ್ಷದ ಸಂಪ್ರದಾಯ. ಹಾಗಾಗಿ ಮೇಟಿಯವರ ನಾಲ್ಕು ಮಕ್ಕಳ ಪೈಕಿ ಮೇಟಿಯವರ ಪುತ್ರ ಉಮೇಶ್ ಮೇಟಿಯವರಿಗೆ ಟಿಕೆಟ್ ನೀಡಲಾಗಿದೆ.

ಕಾಂಗ್ರೆಸ್ ಪಕ್ಷ ಸಮಾಜದಲ್ಲಿ ಎಲ್ಲರನ್ನು ಒಳಗೊಂಡಿರುವ ಪಕ್ಷ. ಈ ದೇಶದ ಎಲ್ಲರನ್ನೂ ಪ್ರತಿನಿಧಿಸುವ ಪಕ್ಷ ಕಾಂಗ್ರೆಸ್ ಮಾತ್ರ. ಸಾಮಾಜಿಕ ನ್ಯಾಯದಲ್ಲಿ ಬದ್ಧತೆಯಿರುವ ಪಕ್ಷ ಕಾಂಗ್ರೆಸ್. ಬಸವಣ್ಣ ಈ ಕೇತ್ರದಲ್ಲಿ ಹುಟ್ಟಿದವರು. ನಮ್ಮ ಪಕ್ಷದ ನಾವೆಲ್ಲರೂ ಬಸವಣ್ಣನವರ ಅನುಯಾಯಿಗಳು. ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದೇವೆ. ಬಿಜೆಪಿಯವರು ಹಿಂದೂಗಳ ವಾರಸುದಾರರು ಎಂದು ಬಹಳ ಮಾತನಾಡುತ್ತಾರೆ. ನಾವೆಲ್ಲಾ ಹಿಂದೂಗಳಲ್ಲವೇ? ಮೇಟಿಯವರು ಹಿಂದೂ ಅಲ್ಲವೇ? ಹಿಂದೂ ಎನ್ನುವುದು ಜನರಿಗೆ ತೋರ್ಪಡಿಸಲು ಮಾತ್ರವೇ ಹೊರತು ಬಿಜೆಪಿಯವರು ನಿಜವಾಗಿ ಬಡವರು, ಹಿಂದುಳಿದವರು ಅಲ್ಪಸಂಖ್ಯಾತರ ವಿರೋಧಿಗಳು. ಮನುವಾದದಲ್ಲಿ ನಂಬಿಕೆಯುಳ್ಳವರು.

CM Siddharamaih ಬಾಗಲಕೋಟೆಗೆ ವೈದ್ಯಕೀಯ ಕಾಲೇಜು ಘೋಷಣೆ ಮಾಡಲು ಹೆಚ್ ವೈ ಮೇಟಿಯವರು ಕಾರಣ. ವೈದ್ಯಕೀಯ ಕಾಲೇಜು ಶಂಕುಸ್ಥಾಪನೆಯ ಸಂದರ್ಭದಲ್ಲಿ ಮೇಟಿಯವರು ಇಲ್ಲದ್ದು ದುರ್ದೈವ.
ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತಕ್ಕೆ ಬಿಜೆಪಿ ಸರ್ಕಾರ ಇರುವ ವರೆಗೂ ಪರಿಹಾರ ಕೊಟ್ಟಿರಲಿಲ್ಲ. ನಮ್ಮ ಸರ್ಕಾರ ರೈತ ಮುಖಂಡರು, ಶಾಸಕರೊಂದಿಗೆ ಸಭೆ ಮಾಡಿ ಒಂದೇ ಹಂತದಲ್ಲಿ ಒಪ್ಪಂದದ ಮೂಲಕ ಪರಿಹಾರ ನೀಡಲು ತೀರ್ಮಾನಿಸಿದೆ ಎಂದರು.

ಬಜೆಟ್ ನಲ್ಲಿ ಹಣವನ್ನು ಇಟ್ಟಿಲ್ಲ ಎಂದು ಬಿಜೆಪಿ ಆರೋಪಿಸುತ್ತದೆ. ಆದರೆ ಅದು ಸತ್ಯಕ್ಕೆ ದೂರವಾದ ವಿಚಾರ. ಮೊನ್ನೆ ವೈದ್ಯಕೀಯ ಕಾಲೇಜು ಶಂಕುಸ್ಥಾಪನೆಯ ದಿನ ಪರಿಹಾರ ನೀಡಲಾಗಿದೆ. ಜಮೀನು ಕೊಡಲು ಒಪ್ಪಿ ಬರುವ ಎಲ್ಲರಿಗೂ ಪರಿಹಾರ ನೀಡಲಾಗುವುದು. ಕೇಂದ್ರದಲ್ಲಿ ಇಂದಿನವರೆಗೆ ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲ. ನಾನು ಹಾಗೂ ಉಪಮುಖ್ಯಮಂತ್ರಿಗಳು ಅನೇಕ ಸಾರಿ ಸಂಬಂಧಪಟ್ಟವರನ್ನು ಭೇಟಿ ಮಾಡಿದರೂ ಇಂದಿನವರೆಗೂ ಅಧಿಸೂಚನೆ ಹೊರಡಿಸಿಲ್ಲ. ಬಿಜೆಪಿಯವರಿಗೆ ನಮ್ಮನ್ನು ಪ್ರಶ್ನಿಸಲು ಯಾವುದೇ ನೈತಿಕತೆ ಇಲ್ಲ.

ಉಮೇಶ್ ಮೇಟಿಯವರು ಇಂದು ನಾಮಪತ್ರವನ್ನು ಸಲ್ಲಿಸಿದ್ದು, ಅವರನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇವೆ. ಅವರನ್ನು ಆಶೀರ್ವಾದಿಸುವುದು ನಿಮ್ಮ ಜವಾಬ್ದಾರಿ. ಬಿಜೆಪಿ ಒಡ್ಡುವ ಆಸೆ, ಆಮಿಷಗಳಿಗೆ ಒಳಗಾಗಬೇಡಿ.
ಉಮೇಶ್ ಮೇಟಿಯವರನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿಕೊಡಿ. ಕ್ಷೇತ್ರದಲ್ಲಿ ನಾಲ್ಕೈದು ದಿನ ಇದ್ದು ಹಳ್ಳಿ ಹಳ್ಳಿಗೂ ಭೇಟಿ ನೀಡಿ ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.

ಎಂ. ಶ್ರೀಕಾಂತ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಶ್ರೀ ಮಾರಿಕಾಂಬಾ ದೇವಸ್ಥಾನ ದಲ್ಲಿ ವಿಶೇಷ ಪೂಜೆ

0

ಡಿಸಿಸಿ ಬ್ಯಾಂಕ್ ನಿರ್ದೇಶಕರು, ರಾಜ್ಯ ಕಾಂಗ್ರೆಸ್‌ನ ನಾಯಕರಾದ ಎಂ. ಶ್ರೀಕಾಂತ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಕೋಟೆ ಶ್ರೀ ಮಾರಿಕಾಂಬಾ ದೇವಸ್ಥಾನ ದಲ್ಲಿ ವಿಶೇಷ ಪೂಜೆ ಸಲಿಸಲಾಯಿತು. ಹಾಗೂ ಬೃಹತ್ ರಕ್ತದಾನ ಶಿಬಿರವನ್ನು ರಾಮಣ್ಣ ಶ್ರೇಷ್ಠಿ ಪಾರ್ಕ್‌ನ ಗಣಪತಿ ದೇವಸ್ಥಾನದಲ್ಲಿ ನಡೆಸಲಾಯಿತು. ಈ ಶಿಬಿರದಲ್ಲಿ 100 ಕೂ ಹೆಚ್ಚು ಜನ ರಕ್ತ ದಾನವನು ಮಾಡಿದರು. ಯುವ ಕಾಂಗ್ರೆಸ್ ಮುಖಂಡ ವಿನಯ್ ತಾಂಡ್ಲೆ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮಾಜಿ ಉಪ ಮೇಯರ್ ಎಚ್ . ಪಾಲಾಕ್ಷಿ , ಹಾಪ್‌ಕಾಮ್ಸ್ ನಿರ್ದೇಶಕ ಡಾ . ಶರತ್ ಮರಿಯಪ್ಪ , ಬಸವರಾಜ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುನಿಲ್ , ಸತೀಶ್, ಶಿವಮೂರ್ತಿ, ಚಂದ್ರಶೇಖರ್, ಭಾಸ್ಕರ್, ಸಂತೋಷ್, ಅನಿಲ್, ಸಂದೀಪ್, ಭರತ್, ರಾಘವೇಂದ್ರ, ಮಸ್ಕನ್, ಮಂಜುನಾಥ್, ರಘು ಗೌಡ, ಶಿವಕುಮಾರ್, ಸಂದೇಶ್ ಸೇರಿದಂತೆ ಹಲವರಿದ್ದರು.

National Horticulture Mission Scheme ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪ. ಜಾ./ ಪ. ಪಂ. ರೈತರಿಂದ ಅರ್ಜಿ ಅಹ್ವಾನ

0

National Horticulture Mission Scheme 2025-26ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಅರ್ಹ ಸಾಮಾನ್ಯ ಮತ್ತು ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡದ ರೈತರಿಂದ ಅರ್ಜಿ ಆಹ್ವಾನಿಸಿದೆ.
“ಸಮಗ್ರ ಪೋಷಕಾಂಶ ನಿರ್ವಹಣೆ ಹಾಗೂ ಸಮಗ್ರ ರೋಗ \ ಕೀಟ ನಿಯಂತ್ರಣ” ಕಾರ್ಯಕ್ರಮದಡಿ ಜೈವಿಕ ಗೊಬ್ಬರವಾದ ಅರ್ಕ ಮೈಕ್ರೋಬಿಯಲ್ ಕನ್ಸಾರ್ಷಿಯಮ್ ಪರಿಕರವನ್ನು ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಲಘು ಪೋಷಕಾಂಶಗಳ ಮಿಶ್ರಣ ಅಥವಾ ಬೆಳೆ ಸ್ಪೇಷಲ್ ಪರಿಕರವನ್ನು ವಿತರಿಸಲಾಗುತ್ತಿದೆ.
ಆಸಕ್ತ ರೈತರು ಅರ್ಜಿಯೊಂದಿಗೆ ಪಹಣಿ, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್, ಆರ್‌ಡಿ ಸಂಖ್ಯೆ ಇರುವ ಜಾತಿ ಪ್ರಮಾಣ ಪತ್ರ ನಕಲುಗಳೊಂದಿಗೆ ಶಿಕಾರಿಪುರ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವುದು.
National Horticulture Mission Scheme ಹೆಚ್ಚಿನ ಮಾಹಿತಿಗಾಗಿ ತಮ್ಮ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದೆಂದು ಶಿಕಾರಿಪುರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

S.N. Channabasappa ಮತಪತ್ರ ಪದ್ಧತಿ ಜಾರಿಗೆ ತರುತ್ತಿರುವ ಸರ್ಕಾರದ ನಿರ್ಧಾರಕ್ಕೆ ಸದನದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ತೀವ್ರ ವಿರೋಧ

0

S.N. Channabasappa ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಮತ್ತಷ್ಟು ಡಿಜಿಟಲೀಕರಣಗೊಳಿಸುವ ಬದಲು, ಹಳೆಯ ‘ಮತಪತ್ರ’ (Ballot Paper) ಪದ್ಧತಿಯನ್ನು ಮರಳಿ ಜಾರಿಗೆ ತರಲು ಸರ್ಕಾರವು ವಿಧೇಯಕ ತಿದ್ದುಪಡಿ ಮಾಡುತ್ತಿರುವುದನ್ನು ಶಿವಮೊಗ್ಗ ಶಾಸಕ ಶ್ರೀ ಎಸ್.ಎನ್. ಚನ್ನಬಸಪ್ಪ ಅವರು ಇಂದು ವಿಧಾನಸಭೆಯಲ್ಲಿ ತೀವ್ರವಾಗಿ ವಿರೋಧಿಸಿ, ಸರ್ಕಾರದ ಗಮನ ಸೆಳೆದರು.

ಈ ಕುರಿತು ಸದನದಲ್ಲಿ ಮಾತನಾಡಿದ ಶಾಸಕರು, “ಜಗತ್ತು ತಂತ್ರಜ್ಞಾನದಲ್ಲಿ ಅಸಾಧಾರಣ ಪ್ರಗತಿ ಸಾಧಿಸುತ್ತಿದೆ. ಇಡೀ ವಿಶ್ವವೇ ಭಾರತದ ಡಿಜಿಟಲ್ ಕ್ರಾಂತಿಯನ್ನು ಮಾದರಿಯಾಗಿ ಸ್ವೀಕರಿಸುತ್ತಿರುವ ಈ ಸಂದರ್ಭದಲ್ಲಿ, ನಾವು ಮತಯಂತ್ರಗಳ (EVM) ಮೇಲೆ ಅನಗತ್ಯ ಅನುಮಾನ ವ್ಯಕ್ತಪಡಿಸಿ ದಶಕಗಳ ಹಿಂದಿನ ಹಳೆಯ ಪದ್ಧತಿಗೆ ಮರಳುತ್ತಿರುವುದು ಅತ್ಯಂತ ವಿಪರ್ಯಾಸದ ಸಂಗತಿ. ಇದು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾವು ಪ್ರಗತಿಯತ್ತ ಸಾಗುವ ಬದಲು ಹಿನ್ನಡೆ ಅನುಭವಿಸುತ್ತಿದ್ದೇವೆ ಎನ್ನುವುದಕ್ಕೆ ಸಾಕ್ಷಿಯಾಗಿದೆ,” ಎಂದು ಆತಂಕ ವ್ಯಕ್ತಪಡಿಸಿದರು.

S.N. Channabasappa ಮತಯಂತ್ರಗಳ ಬಳಕೆ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ವೇಗ ಮತ್ತು ನಿಖರತೆಯನ್ನು ತಂದಿದೆ. ಇದನ್ನು ಕೈಬಿಟ್ಟು ಮತ್ತೆ ಮತಪತ್ರಗಳ ಕಾಲಕ್ಕೆ ಹೋಗುವುದು ಚುನಾವಣಾ ಅಕ್ರಮಗಳಿಗೆ ಎಡೆಮಾಡಿಕೊಟ್ಟಂತೆ ಎಂಬ ಆಕ್ಷೇಪವನ್ನು ವ್ಯಕ್ತಪಡಿಸಿದ ಅವರು, ಸರ್ಕಾರವು ಈ ತಿದ್ದುಪಡಿ ನಿರ್ಧಾರವನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.

MESCOM ಸಾಗರ : ಮೆಸ್ಕಾಂ ಜನ ಸಂಪರ್ಕ ಸಭೆ

0

MESCOM ಸಾಗರ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಮಾ 26 ರಂದು ಬೆಳಿಗ್ಗೆ 11.00 ರಿಂದ 01.00 ಗಂಟೆಯವರೆಗೆ ಜನಸಂಪರ್ಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಸಂಪರ್ಕಿಸಬಹುದಾದ ದೂರವಾಣಿಸಂಖ್ಯೆ;.9480880595.

Manasadhara Trust ಸರ್ಕಾರಿ ಶಾಲಾ ಮಕ್ಕಳಿಗಾಗಿ ಮನಃಸ್ಫೂರ್ತಿ ಬೇಸಿಗೆ ಶಿಬಿರ

0

Manasadhara Trust ಮಾನಸಾಧಾರ ಟ್ರಸ್ಟ್(ರಿ), ಮನಃಸ್ಫೂರ್ತಿ ವಿಶೇಷ ಶಾಲೆ(ರಿ) ಮತ್ತು ಕಲಿಕಾ ಕೇಂದ್ರ ಹಾಗೂ ನಮ್ಮ ಹಳ್ಳಿ ಥಿಯೇಟರ್(ರಿ) ರವರ ಸಹಯೋಗದೊಂದಿಗೆ 6 ರಿಂದ 9 ನೇ ತರಗತಿಯ ಸರ್ಕಾರಿ ಶಾಲೆ ಮಕ್ಕಳಿಗಾಗಿ “ಮನಃಸ್ಫೂರ್ತಿ ಶಿಬಿರ – 2026” ಅನ್ನು ಆಯೋಜಿಸಲಾಗಿದ್ದು, ಈ ಶಿಬಿರವು ದಿನಾಂಕ : 13/04/2026 ರಿಂದ 25/04/2026 ರವರೆಗೆ ಪ್ರತಿ ದಿನ ಬೆಳಿಗ್ಗೆ 9:30 ರಿಂದ ಸಂಜೆ 4:00 ರವರೆಗೆ ಇರುತ್ತದೆ.

ಶಿಬಿರದಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಮೌಲ್ಯಯುತ ಶಿಕ್ಷಣ, ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾಡುಗಾರಿಕೆ, ಹಾಸ್ಯ ಕಥೆ, ನಾಟಕ, ಚಿತ್ರಕಲೆ, ನೃತ್ಯ, ಜಾದು, ಮೇಕಪ್, ಯೋಗ, ಧ್ಯಾನ, ಅರಿವು, ಸಿನಿಮಾ ವೀಕ್ಷಣೆ, ಕ್ಲೇ ಮಾಡೆಲ್, ಪ್ರವಾಸ, ತೊಗಲು ಗೊಂಬೆ, ಯಕ್ಷಗಾನ, ಓರಿಗಾಮಿ, ಚಿತ್ರಕಲೆ, ಮೂಕಾಭಿನಯ, ಆರೋಗ್ಯ, ಸಾಮಾನ್ಯ ಜ್ಞಾನ ಮತ್ತು ಮಕ್ಕಳ ಹಕ್ಕುಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಲಾಗುವುದು. ಶಿಬಿರವು ಸಂಪೂರ್ಣವಾಗಿ ಉಚಿತವಾಗಿದ್ದು, 6 ರಿಂದ 9 ನೇ ತರಗತಿಯ 60 ಸರ್ಕಾರಿ ಶಾಲಾ ಮಕ್ಕಳಿಗೆ ಮಾತ್ರ ಅವಕಾಶವಿರುತ್ತದೆ. Manasadhara Trust ಆಸಕ್ತ ಮಕ್ಕಳ ಪೋಷಕರು ಏಪ್ರಿಲ್ 4 ರೊಳಗೆ ಶಿವಮೊಗ್ಗದ ಜೆ ಪಿ ಎನ್ ರಸ್ತೆಯ ಮಾನಸ ನರ್ಸಿಂಗ್ ಹೋಂ ಬಳಿಯ ಮನಃಸ್ಫೂರ್ತಿ ಕಲಿಕಾ ಕೇಂದ್ರದಲ್ಲಿ ಹೆಸರು ನೋಂದಾಯಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮನಃಸ್ಫೂರ್ತಿ ಕಛೇರಿ 8867540973 / ಶಿಬಿರದ ಸಂಚಾಲಕರಾದ ಶ್ರೀ ಯುತ ಮಂಜುನಾಥ್ ಸ್ವಾಮಿ 9845014229 / ಶ್ರೀಮತಿ ರಂಗನಾಯಕಿ 9663645373 ಇವರನ್ನು ಸಂಪರ್ಕಿಸಬೇಕಾಗಿ ಮನಃಸ್ಫೂರ್ತಿಯ ಶೈಕ್ಷಣಿಕ ನಿರ್ದೇಶಕರಾದ ಡಾ.ಪ್ರೀತಿ.ವಿ.ಶಾನ್ ಭಾಗ್ ಪ್ರಕಟಣೆಯಲ್ಲಿ ಕೋರಿದ್ದಾರೆ.

India Scouts and Guides ರಸ್ತೆ ಸಂಚಾರ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಿ

0

India Scouts and Guides ಸಮಾಜದ ಪ್ರತಿಯೊಬ್ಬರೂ ರಸ್ತೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಟ್ರಾಫಿಕ್ ಪೊಲೀಸ್ ವೈ.ಸುರೇಶ್ ಕುಮಾರ್ ಹೇಳಿದರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಹಾಗೂ ಜಿಲ್ಲಾ ಸಂಸ್ಥೆ ಶಿವಮೊಗ್ಗ, ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಬೆಂಗಳೂರು ಸಹಯೋಗದಲ್ಲಿ ಶಿವಮೊಗ್ಗ ಸ್ಕೌಟ್ಸ್ ಭವನದಲ್ಲಿ ಆಯೋಜಿಸಿದ್ದ ಯುವ ಆಪತ್ ಮಿತ್ರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಶಿಬಿರದಲ್ಲಿ ಮಾತನಾಡಿ, ಪ್ರತಿನಿತ್ಯ ರಸ್ತೆಯಲ್ಲಿ ಸಾವಿರಾರು ಜನರು ತಮ್ಮ ಅಮೂಲ್ಯವಾದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರಸ್ತೆ ಅಪಘಾತಗಳನ್ನು ತಪ್ಪಿಸಲು ನಾವು ನೀವೆಲ್ಲರೂ ನಿಯಮಗಳನ್ನು ಪಾಲಿಸಲೇಬೇಕು ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ವ್ಹೀಲಿಂಗ್ ಮಾಡುವುದು, ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವುದು ಹಾಗೂ ಮದ್ಯಪಾನ ಮಾಡಿ ವಾಹನ ಚಲಾಯಿಸುವುದರಿಂದ ಅಪಘಾತಗಳ ಪ್ರಮಾಣ ಸಂಖ್ಯೆ ಹೆಚ್ಚುತ್ತಿದೆ. ಯುವಜನರು ವಾಹನ ಓಡಿಸುವಾಗ ಏಕಾಗ್ರತೆಯಿಂದ ಎಚ್ಚರಿಕೆ ವಹಿಸಬೇಕು ಎಂದರು.
ಈಗಾಗಲೇ ಶಿವಮೊಗ್ಗದಲ್ಲಿ ನಾಲ್ಕು ಸಾವಿರ ಸಿಸಿ ಕ್ಯಾಮರಾಗಳು ಚಾಲನೆಯಲ್ಲಿವೆ. ಬರುವ ದಿನಗಳಲ್ಲಿ ಹೊಸ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯವರು ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ಇಂತಹ ಜಾಗೃತಿ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ತಿಳಿಸುವುದರ ಮುಖಾಂತರ ಅಪಘಾತಗಳನ್ನು ತಪ್ಪಿಸಬೇಕು. 18 ವರ್ಷದ ಒಳಗಿನ ಮಕ್ಕಳು ವಾಹನ ಓಡಿಸಿದರೆ ವಾಹನದ ಮಾಲೀಕರಿಗೆ 25,000 ರೂ. ದಂಡ ವಿಧಿಸಲಾಗುತ್ತದೆ ಎಂದು ಹೇಳಿದರು.
ವಾಹನವನ್ನು ಸರಿಯಾಗಿ ಅಭ್ಯಾಸ ಮಾಡಿ ಪರವಾನಿಗೆ ಪಡೆದು ವಾಹನ ಚಲಾಯಿಸಬೇಕು. ದ್ವಿಚಕ್ರ ವಾಹನದಲ್ಲಿ ಇಬ್ಬರು ಮಾತ್ರ ಸವಾರಿ ಮಾಡಬೇಕು. ಹೆಲ್ಮೇಟ್‌ಗಳನ್ನು ಕಡ್ಡಾಯವಾಗಿ ಧರಿಸಬೇಕು ಎಂದರು.
India Scouts and Guides ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪ್ರಧಾನ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಮಾತನಾಡಿ, ಇಂತಹ ಜಾಗೃತಿ ಕಾರ್ಯಕ್ರಮಗಳಿಂದ ಜಿಲ್ಲೆಯ 19 ಕಾಲೇಜುಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ಬಹಳ ಉಪಯೋಗವಾಗುತ್ತದೆ. ಸಾಕಷ್ಟು ಅಪಘಾತಗಳನ್ನು ಸಹ ತಪ್ಪಿಸಬಹುದಾಗಿದೆ. ವಿದ್ಯಾರ್ಥಿಗಳು ಇಂತಹ ಶಿಬಿರದ ಉಪಯೋಗವನ್ನು ಪಡೆದುಕೊಳ್ಳಬೇಕು. ಈ ಒಂದು ವಾರಗಳ ಕಾಲ ನಡೆಯುವ ವಿವಿಧ ರೀತಿಯ ಶಿಬಿರಗಳಲ್ಲಿ ಪಾಲ್ಗೊಂಡು ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದು ನುಡಿದರು.
ಜಿಲ್ಲಾ ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್, ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ರಾಜೇಶ್ ಅವಲಕ್ಕಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಸುಮನಾ ಶೇಖರ್, ಗೈಡ್ ಆಯುಕ್ತೆ ಲಕ್ಷ್ಮೀ ಕೆ.ರವಿ, ಜಿಲ್ಲಾ ಕಾರ್ಯದರ್ಶಿ ಕೆ.ವಿ.ಚಂದ್ರಶೇಖರಯ್ಯ, ಮಲ್ಲಿಕಾರ್ಜುನ್ ಕಾನೂರ್ ಹಾಗೂ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

B.Y. Raghavendra ಯೋಜನೆಗಳು-ಬ್ಯಾಂಕಿಂಗ್ ಸೇವೆಗಳನ್ನು ಜನಸಾಮಾನ್ಯರಿಗೆ ತಲುಪಿಸಬೇಕು : ಬಿ.ವೈ.ರಾಘವೇಂದ್ರ

0

B.Y. Raghavendra ಪ್ರತಿಯೊಬ್ಬ ನಾಗರೀಕರಿಗೆ ಆರ್ಥಿಕ ಸಬಲೀಕರಣ ನೀಡಬೇಕೆಂಬ ಉದ್ದೇಶದಿಂದ ಅನುಷ್ಟಾನಗೊಳಿಸಲಾಗಿರುವ ಯೋಜನೆಗಳನ್ನು ಹಾಗೂ ಬ್ಯಾಂಕಿಂಗ್ ಸೇವೆಗಳನ್ನು ಸರಳಗೊಳಿಸಿ ಜನಸಾಮಾನ್ಯರಿಗೆ ತಲುಪಿಸಬೇಕೆಂದು ಸಂಸದರಾದ ಬಿ.ವೈ.ರಾಘವೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಡಿಸಿಸಿ ಮತ್ತು ಡಿಎಲ್‌ಆರ್‌ಸಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬ್ಯಾಂಕುಗಳ ಮೂಲಕ ಸರ್ಕಾರದ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದ್ದು ಬ್ಯಾಂಕ್‌ಗಳ ಸೇವೆ ಸ್ಮರಣೀಯವಾಗಿರುತ್ತದೆ. ಸರ್ಕಾರದ ಪ್ರತಿಯೊಂದು ಸೌಲಭ್ಯವು ಜಿಲ್ಲೆಯ ಕಟ್ಟಕಡೆಯ ವ್ಯಕ್ತಿಗೂ ತಲುಪುಂತಾಗಬೇಕು. ಬ್ಯಾಂಕಿಂಗ್ ಸೇವೆಗಳನ್ನು ಜನಸಾಮಾನ್ಯರಿಗೆ ನಿಲುಕುವಂತೆ ಸರಳಗೊಳಿಸಿ ನೀಡಬೇಕೆಂದು ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದ ಅವರು ಪಿಎಂ ಕಿಸಾನ್, ಪಿಎಂ ಮುದ್ರಾ, ಪಿಎಂ ಸ್ವನಿಧಿ, ಎಸ್‌ಸಿ/ಎಸ್‌ಟಿ, ಮಹಿಳೆ ಮತ್ತು ಅಲ್ಪಸಂಖ್ಯಾತರಿಗಾಗಿ ಇರುವ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಪಿಎಂ ವಿಶ್ವಕರ್ಮ ಯೋಜನೆಯಡಿ ಬ್ಯಾಂಕುಗಳಲ್ಲಿ ಸುಮಾರು ಅರ್ಧದಷ್ಟು ಅರ್ಜಿಗಳು ತಿರಸ್ಕೃತಗೊಂಡಿವೆ. ಯಾವ ಕಾರಣಕ್ಕೆ ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ಬ್ಯಾಂಕ್ ಅಧಿಕಾರಿಗಳು ಮತ್ತೊಮ್ಮೆ ಪರಿಶೀಲಿಸಿ, ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು. ರೈತರಿಗೆ ಸಾಲ, ಶಿಕ್ಷಣ ಸಾಲ, ವಸತಿ ಯೋಜನೆಯಡಿ ಸಾಲ ವಿತರಣೆಗೆ ಆದ್ಯತೆ ನೀಡಬೇಕು ಎಂದರು.

ಬ್ಯಾಂಕ್‌ಗಳ ಅಧಿಕಾರಿಗಳು ಸಭೆಗೆ ಹಾಜರಾಗಿ ಮಾಹಿತಿ ನೀಡಬೇಕು. 260 ಬ್ರಾಂಚ್‌ಗಳಲ್ಲಿ ಮಾತ್ರ ಡಿಎಲ್‌ಸಿಸಿ ಸಭೆ ಆಗಿದೆ. 85 ಬ್ರಾಂಚ್‌ಗಳಲ್ಲಿ ಆಗಿಲ್ಲ. ನಿಯಮಿತವಾಗಿ ಸಭೆಗಳನ್ನು ಕೈಗೊಂಡು ಕ್ರಮ ವಹಿಸಬೇಕೆಂದು ಇದೇ ವೇಳೆ ತಿಳಿಸಿದರು.

ಮಾ.24 ರಿಂದ 26 ರವರೆಗೆ ನಗರದ ಅಂಬೇಡ್ಕರ್ ಭವನದಲ್ಲಿ ಪಿಎಂ ವಿಶ್ವಕರ್ಮ ವಸ್ತು ಪ್ರದರ್ಶನ ಮತ್ತು ವ್ಯಾಪಾರ ಮೇಳ ಏರ್ಪಡಿಸಲಾಗಿದ್ದು ಇಲ್ಲಿ ಒಟ್ಟು 50 ಮಳಿಗೆಗಳನ್ನು ತೆರೆಯಲಾಗುತ್ತಿದೆ.

ಫಲಾನುಭವಿಗಳು ಕಾರ್ಯಕ್ರಮದ ಸದುಪಯೋಗ ಪಡೆಯಬೇಕು ಹಾಗೂ ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲಾ ಬ್ಯಾಂಕುಗಳು ಕೈಜೋಡಿಸಬೇಕೆಂದು ಎಂದು ಮನವಿ ಮಾಡಿದರು.

ಕೆನರಾ ಬ್ಯಾಂಕ್ ಡಿಜಿಎಂ ಮತ್ತು ಪ್ರಾದೇಶಿಕ ಮುಖ್ಯಸ್ಥರಾದ ದೇವರಾಜ್ ಆರ್ ಮಾತನಾಡಿ, 2025 ರ ಡಿಸೆಂಬರ್ ಅಂತ್ಯಕ್ಕೆ ಕೃಷಿ ಕ್ಷೇತ್ರದಲ್ಲಿ ಶೇ.74.26 ಪ್ರಗತಿ ಸಾಧನೆ ಮಾಡಿದ್ದು 2024 ನೇ ಸಾಲಿಗಿಂತ ಶೇ.31.26 ಪ್ರಗತಿ ಸಾಧಿಸಲಾಗಿದೆ. ಎಂಎಸ್‌ಎಂಇ ವಲಯದಲ್ಲಿ ಶೇ.80.03 ಪ್ರಗತಿ ಸಾಧಿಸಿದ್ದು 2024 ನೇ ಸಾಲಿಗಿಂತ ಶೇ.11.49 ಹೆಚ್ಚು ಪ್ರಗತಿ ಸಾಧಿಸಲಾಗಿದೆ.
ವಸತಿ ಸಾಲ ವಿತರಣೆ ಪ್ರಗತಿ ಕಡಿಮೆಯಾಗಿದ್ದು, ಆದ್ಯತೆ ಮೇಲೆ ಸಾಲ ವಿತರಣೆಗೆ ಬ್ಯಾಂಕುಗಳು ಕ್ರಮ ವಹಿಸಬೇಕು. ಪಿಎಂ ವಿಶ್ವಕರ್ಮ ಯೋಜನೆಯಡಿ ತಿರಸ್ಕೃತಗೊಂಡ ಅರ್ಜಿಗಳನ್ನು ಪರಿಶೀಲಿಸಿ, ಮಂಜೂರು ಮಾಡಲು ಕ್ರಮ ವಹಿಸಬೇಕು ಎಂದು ತಿಳಿಸಿದರು.

ಜಿ.ಪಂ ಸಿಇಓ ಹೇಮಂತ್ ಎನ್ ಮಾತನಾಡಿ, ಬ್ಯಾಂಕುಗಳು ಪ್ರಧಾನಮಂತ್ರಿ ವಿಶ್ವಕರ್ಮ, ಮುದ್ರಾ ಸೇರಿದಂತೆ ಪಿಎಂ ಸಾಲ/ಸೌಲಭ್ಯ ನೀಡುವ ಯೋಜನೆಗಳಡಿ ಬಂದಂತಹ ಅರ್ಜಿಗಳನ್ನು ಸಮರ್ಪಕವಾಗಿ ಪರಿಶೀಲಿಸಿ ಮಂಜೂರು ಮಾಡಬೇಕು. ಪಿ.ಎಂ. ವಿಶ್ವಕರ್ಮ ಯೋಜನೆಯಡಿ 10994 ಅರ್ಜಿಗಳು ಸ್ವೀಕೃತವಾಗಿದ್ದು 5169 ಅರ್ಜಿಗಳು ಮಂಜೂರಾಗಿವೆ. ಶೇ.50 ರಷ್ಟು ಅರ್ಜಿಗಳು ತಿರಸ್ಕೃತಗೊಂಡಿವೆ. ಇದಕ್ಕೆ ಸಮರ್ಪಕವಾದ ಕಾರಣಗಳನ್ನು ಒದಗಿಸುವ ವರದಿಯನ್ನು ಬ್ಯಾಂಕುವಾರು ನೀಡಬೇಕು. ವಿವಿಧ ಯೋಜನೆಯಡಿ ಫಲಾನುಭವಿಗಳು ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ, ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

B.Y. Raghavendra ಪಿ ಎಂ ಸ್ವನಿಧಿ ಯೋಜನೆಯಡಿ ಮೊದಲನೇ ಹಂತದ ಸಾಲ ವಿತರಣೆ ಪ್ರಗತಿ ಚೆನ್ನಾಗಿದೆ. 2 ಮತ್ತು ಮೂರನೇ ಭಾಗದ ಸಾಲ ಪ್ರಗತಿ ಮತ್ತು ಪ್ರಕ್ರಿಯೆ ನಿಧಾನವಾಗಿದೆ. ಇದನ್ನು ಚುರುಕುಗೊಳಿಸಿ, ಪ್ರಗತಿ ಸಾಧಿಸಬೇಕು ಎಂದು ಸೂಚನೆ ನೀಡಿದರು.
ಎಲ್ಲ ಬ್ಯಾಂಕುಗಳು ಕಿಸಾನ್ ಕ್ರೆಡಿಟ್ ಕಾಡ್‌ಗಳನ್ನು ಸಮರ್ಪಕವಾಗಿ ನಿಗದಿತ ಗುರಿಯನ್ವಯ ವಿತರಣೆ ಮಾಡಬೇಕು. ಪ್ರಗತಿ ಸಾಧಿಸದ, ಹಾಗೂ ಕಡಿಮೆ ಪ್ರಗತಿ ಮಾಡಿರುವ ಬ್ಯಾಂಕುಗಳು ಈ ಕುರಿತು ಕೂಡಲೇ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದರು.

ಹಣಕಾಸು ಸಾಕ್ಷರತಾ ಕೇಂದ್ರ(ಎಫ್‌ಎಲ್‌ಸಿ)ಗಳು ಹಾಗೂ ಸೆಂಟರ್ ಫಾರ್ ಫೈನಾನ್ಶಿಯಲ್ ಲಿಟರಸಿಗಳು ಪರಿಣಾಮಕಾರಿಯಾಗಿ ಆಯ್ದ ಸ್ಥಳಗಳಲ್ಲಿ ಶಿಬಿರಗಳನ್ನು, ಸಭೆಗಳನ್ನು ನಡೆಸಿ ಬ್ಯಾಂಕ್ ಖಾತೆ ತೆರೆಯುವುದು, ವಿವಿಧ ಯೋಜನೆಗಳು ಸೇರಿದಂತೆ ಹಣಕಾಸು ವಿಷಯದಲ್ಲಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.
ಪಿಎಂ ಫಾರ್ಮಲೈಸೇಷನ್ ಆಫ್ ಮೈಕ್ರೊ ಫುಡ್ ಪ್ರಾಸೆಸಿಂಗ್ ಎಂಟರ್‌ಪ್ರೈಸಸ್ ಯೋಜನೆಯಡಿ ಶಿವಮೊಗ್ಗಕ್ಕೆ 200 ಗುರಿ ನೀಡಲಾಗಿದ್ದು 114 ಸಾಧನೆ ಸಾಧಿಸಿದ್ದು, ಬಾಕಿ ಉಳಿದ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ತಿಳಿಸಿದರು.

ಪಿಎಂಜೆಜೆಬಿವೈ, ಪಿಎಂಎಸ್‌ಬಿವೈ, ಕೆವಿಐಬಿ ಪ್ರಾಯೋಜಿತ ಪಿಎಂಇಜಿಪಿ ಯೋಜನೆಗಳಡಿ ಗುರಿಯನ್ವಯ ಸಾಧನೆ ಮಾಡಬೇಕು. ಪಿಎಂ ಯೋಜನೆಗಳು/ಕಾರ್ಯಕ್ರಮಗಳ ಪ್ರಗತಿಯಲ್ಲಿ ಹಿಂದೆ ಇರುವ ಬ್ಯಾಂಕುಗಳು ಸೂಕ್ತ ಕ್ರಮ ಕೈಗೊಂಡು ನಿಗದಿತ ಪ್ರಗತಿಯನ್ನು ಸಾಧಿಸಬೇಕು. ಯಾವುದೇ ಸಾಲ/ಸೌಲಭ್ಯ/ಅರಿವು ನೀಡುವ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಜಿ.ಪಂ ಸಹಕಾರ ಎಂದಿಗೂ ಇದೆ. ಆಶಾ, ಅಂಗನವಾಡಿ ಸಹಾಯಕರು, ಪಂಚಾಯಿತಿ ಸಹಾಯಕರ ಸಹಾಯವನ್ನು ಸಹ ಪಡೆಯಬಹುದು ಎಂದರು.

ಸಭೆಯಲ್ಲಿ ಪಿಎಂಇಜಿಪಿ, ಪಿಎಂ ಸೂರ್ಯ ಘರ್ ಪಿಎಂ ಎಫ್‌ಎಂಇ ಯೋಜನೆಯಡಿ 15 ಫಲಾನುಭವಿಗಳಿಗೆ ಶಾಮಿಯಾನ, ರೋಟಿ ಮೇಕರ್, ಶಿಕ್ಷಣಕ್ಕೆ ಸಂಬಂಧಿಸಿದ ಸಾಲದ ಚೆಕ್‌ನ್ನು ವಿತರಿಸಲಾಯಿತು.

ಸಭೆಯಲ್ಲಿ ಆರ್‌ಬಿಐ ಲೀಡ್ ಜಿಲ್ಲಾ ಅಧಿಕಾರಿ ಸೂರಜ್ ಎಸ್, ನಬಾರ್ಡ್ ಜಿಲ್ಲಾ ಅಭಿವೃದ್ದಿ ಪ್ರಬಂಧಕ ಶರತ್ ಗೌಡ, ಲೀಡ್ ಬ್ಯಾಂಕ್ ಮ್ಯಾನೇಜರ್ ಹನುಮಂತಪ್ಪ ಪಿ, ವಿವಿಧ ಬ್ಯಾಂಕುಗಳ ಅಧಿಕಾರಿಗಳು ಹಾಜರಿದ್ದರು.