Saturday, August 8, 2026
Saturday, August 8, 2026
Home Blog Page 156

N. Chaluvaraya Swamy ಎಲ್ಲಾ ಹುದ್ದೆಗಳ ನೇಮಕಾತಿ ಕೆಇಎ ಮೂಲಕ ನಡೆಸಲು ಸರ್ಕಾರದ ನಿರ್ಧಾರ- ಸಚಿವ ಎನ್.ಚಲುವರಾಯ ಸ್ವಾಮಿ

0

N. Chaluvaraya Swamy ನಮ್ಮ ರಾಜ್ಯದ ಸಾವಿರಾರು ನಿರುದ್ಯೋಗಿ ಯುವಜನತೆಯ ಹಾಗೂ ಲಕ್ಷಾಂತರ ರೈತಾಪಿ ಕುಟುಂಬಗಳ ಆಶೋತ್ತರಗಳಿಗೆ ಸ್ಪಂದಿಸುವುದು ನಮ್ಮ ಸರ್ಕಾರದ ಮೊದಲ ಆದ್ಯತೆ ಎಂದು ಸಚಿವರಾದ ಚೆಲುವರಾಯಸ್ವಾಮಿಯವರು ತಿಳಿಸಿದ್ದಾರೆ.

ಕಳೆದ ವರ್ಷ ಕೃಷಿ ಇಲಾಖೆಯ ಸುಮಾರು 945 ಕೃಷಿ ಅಧಿಕಾರಿ (AO) ಹಾಗೂ ಸಹಾಯಕ ಕೃಷಿ ಅಧಿಕಾರಿ (AAO) ಹುದ್ದೆಗಳ ನೇಮಕಾತಿಯನ್ನು KPSC ಮೂಲಕ ನಡೆಸಲು ಆದೇಶಿಸಲಾಗಿತ್ತು.

ಆದರೆ, ಈ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ಇರಬೇಕು ಮತ್ತು ಶೀಘ್ರವಾಗಿ ನೇಮಕಾತಿ ನಡೆಯಬೇಕು ಎಂಬುದು ರಾಜ್ಯದ ಸಾವಿರಾರು ಅಭ್ಯರ್ಥಿಗಳ ಮನವಿ ಹಾಗೂ ಒತ್ತಾಯವಾಗಿತ್ತು.

ಈ ನ್ಯಾಯಯುತ ಬೇಡಿಕೆಯನ್ನು ಪರಿಗಣಿಸಿ, KPSC ಮೂಲಕ ನೇಮಕಾತಿ ನಡೆಸುವ ಹಳೆಯ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಇಂದು ರದ್ದುಗೊಳಿಸಿದ್ದೇವೆ ಎಂದಿದ್ದಾರೆ.

N. Chaluvaraya Swamy ಈ ಎಲ್ಲಾ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಇನ್ನು ಮುಂದೆ KEA ಮೂಲಕವೇ ನಡೆಸಲು ಅಧಿಕೃತವಾಗಿ ಆದೇಶ ಹೊರಡಿಸಿದ್ದೇವೆ ಎಂದಿದ್ದಾರೆ.

ಪಾರದರ್ಶಕತೆ ಮತ್ತು ಅರ್ಹತೆಗೆ ಆದ್ಯತೆ ನೀಡುವುದು ನಮ್ಮ ಬದ್ಧತೆ. ಗ್ರಾಮೀಣ ಭಾಗದ, ಕೃಷಿ ಕುಟುಂಬದ ಹಿನ್ನೆಲೆಯುಳ್ಳ ಪ್ರತಿಭಾವಂತ ಯುವಕರಿಗೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

University of Agricultural 2047 ರ ಹೊತ್ತಿಗೆ ನಮ್ಮ ದೇಶ ಆಹಾರ ವ್ಯವಸ್ಥೆಯಲ್ಲಿ ಜಾಗತಿಕ ಶಕ್ತಿಯಾಗಿ ಹೊಮ್ಮಲಿದೆ- ಡಾ.ಎಸ್.ಕೆ.ಮಲ್ಹೋತ್ರಾ

0

University of Agricultural ಅತ್ಯುತ್ತಮ ಪರಿಸರ ಸೇವೆ ನೀಡುತ್ತಿರುವ ಅಲಂಕಾರಿಕ ತೋಟಗಾರಿಕೆ ಮತ್ತು ಪುಷ್ಪಕೃಷಿಯನ್ನು ಚಾಂಪಿಯನ್ ಸೇವಾ ವಲಯಗಳಲ್ಲಿ ಒಂದು ಎಂದು ಸರ್ಕಾರ ಗುರುತಿಸಿದ್ದು, ಈ ವಲಯದ ಈ ಕುರಿತು ಹೆಚ್ಚಿನ ಚರ್ಚೆ, ಅಧ್ಯಯನ ನಡೆಸಿ, ಕಾರ್ಯರೂಪಕ್ಕೆ ತರುವ ಕೆಲಸ ಆಗಬೇಕೆಂದು ಐಎಸ್‌ಓಹೆಚ್ ನ ಅಧ್ಯಕ್ಷರು ಹಾಗೂ ಹರಿಯಾಣದ ಎಂಹೆಚ್‌ಯು ಕುಲಪತಿಗಳಾದ ಡಾ.ಎಸ್.ಕೆ.ಮಲ್ಹೋತ್ರಾ ತಿಳಿಸಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಭಾರತೀಯ ಅಲಂಕಾರಿಕ ತೋಟಗಾರಿಕೆ ಸಂಘ, ಐಸಿಎಆರ್-ಐಎಆರ್‌ಐ ನವದೆಹಲಿ, ಐಸಿಎಆರ್-ಪುಷ್ಪ ಕೃಷಿ ಸಂಶೋಧನಾ ನಿರ್ದೇಶನಾಲಯ ಪುಣೆ, ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ಐಸಿಎಆರ್-ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಬೆಂಗಳೂರು ಈ ಸಂಸ್ಥೆಗಳ ಸಹಯೋಗದೊಂದಿಗೆ ಮಾರ್ಚ್ 23 ರಿಂದ 25 ರವರೆಗೆ ಶಿವಮೊಗ್ಗದ ನವಿಲೆ ಕೃಷಿ ಮಹಾವಿದ್ಯಾಲದ ಆವರಣದಲ್ಲಿ ಮೂರು ದಿನಗಳ ಕಾಲ ಏರ್ಪಡಿಸಲಾಗಿರುವ ವಿಕಸಿತ ಭಾರತ@2047ರ ಪುಷ್ಪ ಕೃಷಿ ಮತ್ತು ಭೂದೃಶ್ಯ ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
2047 ರ ಹೊತ್ತಿಗೆ ನಮ್ಮ ದೇಶ ಆಹಾರ ವ್ಯವಸ್ಥೆಯಲ್ಲಿ ಜಾಗತಿಕ ಶಕ್ತಿಯಾಗಿ ಹೊರಹೊಮ್ಮುವ ನೋಟ ಹೊಂದಿದೆ. ಆದರೆ ಇದನ್ನು ಸಾಧಿಸಲು ಹವಾಮಾನ ಬದಲಾವಣೆಯಂತಹ ಹಲವಾರು ಸವಾಲುಗಳಿವೆ. ಮಣ್ಣಿನಲ್ಲಿನ ಇಂಗಾಲದ ಡೈ ಆಕ್ಸೆöÊಡ್ ಪ್ರಮಾಣ, ಹಸಿರು ಮನೆ ಅನಿಲಗಳ ಪ್ರಮಾಣವನ್ನು ತಗ್ಗಿಸುವುದು ಹೇಗೆಂದು ಚಿಂತಿಸಬೇಕಿದೆ. ಹಸಿರುಮನೆ ಅನಿಲಗಳನ್ನು ಶೇ.15 ರಿಂದ ಶೇ.5 ಕ್ಕೆ ಇಳಿಸಬೇಕಿದೆ. ಸುಸ್ಥಿರ ಕೃಷಿ ಪದ್ದತಿಗಳನ್ನು ಅಳವಡಿಸಿಕೊಂಡು ಈ ಪರಿಣಾಮಗಳನ್ನೆಲ್ಲ ತಗ್ಗಿಸಬೇಕಿದೆ. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಶ್ರಮಿಸಬೇಕಿದೆ. ಕೃಷಿಯಲ್ಲಿ ಆಧುನಿಕತೆ, ಎಐ ಬಳಕೆ ಮತ್ತು ಯಂತ್ರೋಪಕರಣಗಳನ್ನು ಹೆಚ್ಚಿಸಬೇಕಿದೆ ಎಂದರು.
ರಸ್ತೆಗಳಲ್ಲಿ, ಅವೆನ್ಯು, ಬ್ಯಾಕ್‌ಯಾರ್ಡ್ಗಳಲ್ಲಿ ಬೆಳೆಯಲಾಗುತ್ತಿರುವ ಈ ಪುಷ್ಪಗಳು, ಅಲಂಕಾರಿಕ ಸಸ್ಯಗಳು ವಾತಾವರಣದಲ್ಲಿನ ಕಾರ್ಬನ್ ಡೈ ಆಕ್ಸೆöÊಡ್‌ನ್ನು ಕಡಿಮೆ ಮಾಡುವ ಶಕ್ತಿ ಹೊಂದಿದ್ದು ಇದನ್ನು ಗುರುತಿಸಲಾಗುತ್ತಿಲ್ಲ. ಇದನ್ನು ಗುರುತಿಸಿ ಈ ಕುರಿತು ಅಧ್ಯಯನ ಮಾಡಬೇಕಿದೆ. ನಾವು ಸಮ್ಮೇಳನದಲ್ಲಿ ಇಂತಹ ವಿಷಯಗಳನ್ನು ಚರ್ಚಿಸಿ, ಅದನ್ನು ಕಾರ್ಯಗತಗೊಳಿಸುವ ಕೆಲಸವನ್ನು ಮಾಡುತ್ತೇವೆ. ಇಂತಹ ಸಮ್ಮೇಳನದ ಮೂಲಕವೇ ಅನೇಕ ಮಾರ್ಗಸೂಚಿಗಳನ್ನು ರಚಿಸಲಾಗಿದೆ. ವರ್ಟಿಕಲ್ ಗಾರ್ಡನಿಂಗ್, ಹೈಡ್ರೋಫೋನಿಕ್ಸ್ಗಳನ್ನು ಮಾರ್ಗಸೂಚಿಗಳಲ್ಲಿ ಸೇರ್ಪಡೆಗೊಳಿಸಲಾಗಿದೆ ಎಂದರು.
University of Agricultural 1919 ರಲ್ಲಿ ಇಂಡಿಯನ್ ಸೊಸೈಟಿ ಆಫ್ ಆರ್ನಮೆಂಟಲ್ ಹಾರ್ಟಿಕಲ್ಚರ್ ರಚನೆಯಾಗಿದ್ದು, ಅಲಂಕಾರಿಕ ಸಸ್ಯಗಳು ಮತ್ತು ಪುಷ್ಪಕೃಷಿ ಕುರಿತು ಭಾಗೀದಾರರಲ್ಲಿ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ. ಅರ್ಬನ್, ಪೆರಿ ಅರ್ಬನ್ ತೋಟಗಾರಿಕೆ, ಗ್ರಾಮೀಣ ತೋಟಗಾರಿಕೆ, ಬಲ್ಬಸ್ ಹೂವು ಬೆಳೆ, ಬಯೋ ಡೈವರ್ಸಿಟಿ ಸೇರಿದಂತೆ ಹಲವಾರು ತೋಟಗಾರಿಕಾ ವಿಷಯಗಳಿಗೆ ಸಂಬAಧಿಸಿದAತೆ ಬೇರೆ ಬೇರೆ ನಗರಗಳಲ್ಲಿ ಸಮ್ಮೇಳನಗಳನ್ನು ನಡೆಸಲಾಗಿದ್ದು, ಪುಷ್ಪಕೃಷಿ ಮತ್ತು ಭೂದೃಶ್ಯ ಕುರಿತು ಇಲ್ಲಿ ಸಮ್ಮೇಳನ ನಡೆಸಲು ನಿರ್ಧರಿಸಿ, ಅತ್ಯುತ್ತಮವಾಗಿ ಸಮ್ಮೇಳನ ಆಯೋಜಿಸಲಾಗಿದೆ ಎಂದರು.
ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ ವೈಎಸ್ ಆರ್ ತೋಟಗಾರಿಕಾ ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಪತಿಗಳಾದ ಡಾ.ಟಿ.ಜಾನಕಿರಾಮ್ ಮಾತನಾಡಿ, ದೇಶದಲ್ಲಿ 371 ಮಿಲಿಯನ್ ಟನ್ ತೋಟಗಾರಿಕಾ ಉತ್ಪನ್ನಗಳನ್ನು ಬೆಳೆಯಲಾಗುತ್ತಿದೆ. ತಂತ್ರಜ್ಞಾನ ಅಭಿವೃದ್ದಿ, ಸರ್ಕಾರದ ನಿಯಮಗಳು, ರೈತರ ಭಾಗವಹಿಸುವಿಕೆ, ರೈತ ಕೇಂದ್ರಗಳು ಇವರೆಲ್ಲರ ಸಹಕಾರದಿಂದ ಈ ಅಭಿವೃದ್ದಿ ಸಾಧಿಸಲಾಗಿದೆ.
ಪುಷ್ಪ ಕೃಷಿಯು ಕೃಷಿ ವಿದ್ಯಾರ್ಥಿಗಳ ದೃಷ್ಟಿಯಿಂದ ಸಹ ಪ್ರಮುಖ ಪಾತ್ರ ವಹಿಸುತ್ತದೆ. ಕೌಶಲ್ಯ ಅಭಿವೃದ್ಧಿಗೆ, ಹೊಸ ಸ್ಟಾರ್ಟ್ ಅಪ್‌ಗಳ ಆರಂಭಕ್ಕೆ ಅನುಕೂಲಕರವಾಗಿದೆ. ಸ್ವಂತ ಉದ್ಯಮ ಒದಗಿಸುವ ಜೊತೆ ಇತರರಿಗೂ ಉದ್ಯೋಗ ನೀಡುತ್ತಿದೆ. ಪುಷ್ಪಕೃಷಿಯಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಕೃತಕ ಬುದ್ದಿಮತ್ತೆ ಬಳಕೆ ಕೂಡ ಬಹಳ ಮುಖ್ಯವಾಗಿದ್ದು, ಇದರಿಂದ ಪುಷ್ಪ ಕೃಷಿ ಮತ್ತು ಉದ್ಯಮವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ದಿಪಡಿಸಬಹುದು ಎಂದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಅನೇಕ ಹೊಸ ಪ್ರಯೋಗಗಳನ್ನು ಮಾಡಿ ಯಶಸ್ಸು ಸಾಧಿಸುತ್ತಿದೆ. ವಿಶ್ವವಿದ್ಯಾಲಯ ಅಭಿವೃದ್ದಿಪಡಿಸಿರುವ ಸಹ್ಯಾದ್ರಿ ಕೆಂಪುಮುಕ್ತಿ ಅಕ್ಕಿ ತಳಿ ಬಹಳ ಪ್ರಸಿದ್ದಿಯಾಗಿದ್ದು ಸುಮಾರು 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಇದನ್ನು ಬೆಳೆಯುತ್ತಿರುವುದು ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದರು.
ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಹಾಗೂ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕರಾದ ಡಾ.ಬಿ. ಹೇಮ್ಲಾ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಪುಷ್ಪಕೃಷಿಯು ಜಾಗತಿಕವಾಗಿ ಮಲ್ಟಿ ಬಿಲಿಯನ್ ಡಾಲರ್ ಉದ್ಯಮವಾಗಿ ಹೊರಹೊಮ್ಮಿದ್ದು, ಇದರಿಂದ 55 ಬಿಲಿಯನ್ ಡಾಲರ್ ಆದಾಯ ಬರುತ್ತಿದೆ. 10 ಮಿಲಿಯನ್ ಜನರಿಗೆ ಉದ್ಯೋಗ ಒದಗಿದೆ. ಭಾರತ ದೇಶ ಪುಷ್ಪಕೃಷಿಯಲ್ಲಿ ಚೀನಾದ ನಂತರ ಎರಡನೇ ದೊಡ್ಡ ದೇಶವಾಗಿದೆ. 2.97 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಪುಷ್ಪಕೃಷಿ ಮಾಡಲಾಗುತ್ತಿದೆ.
ಹಲವಾರು ಕಮರ್ಷಿಯಲ್ ಪ್ಲಾಂಟ್‌ಗಳನ್ನು ಬೆಳೆಯಲಾಗುತ್ತಿದ್ದು ಪುಷ್ಪಕೃಷಿಯಲ್ಲಿ ದೇಶವು ಸುಮಾರು ರೂ. 2000 ಕೋಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ಹಲವು ಜಿಲ್ಲೆಗಳು ತಮ್ಮದೇ ಆದ ವಿಶೇಷ ಪುಷ್ಪಕೃಷಿ ವಲಯಗಳನ್ನು ಅಭಿವೃದ್ದಿಪಡಿಸಿವೆ. ಮಲ್ಲಿಗೆ ಕೃಷಿ ಹಲವರಿಗೆ ಉದ್ಯೋಗ ನೀಡಿದ್ದು ಹೂವಿನ ಹಡಗಲಿ ಮಲ್ಲಿಗೆ ಮೈಸೂರು, ಉಡುಪಿ, ಮಧುರೈ ಮಲ್ಲಿಗೆ ಸೇರಿದಂತೆ ಹಲವು ಮಲ್ಲಿಗೆ ಬೆಳೆಗಳು ಜಿಐ ಟ್ಯಾಗ್ ಪಡೆದಿವೆ. ಕರ್ನಾಟಕವು ಭಾರತದ ವಾಣಿಜ್ಯ ಪುಷ್ಪ ಕೃಷಿಯ ರಾಜಧಾನಿ ಎಂದೇ ಹೆಸರಾಗಿದ್ದು ಅಂತಾರಾಷ್ಟ್ರೀಯ ಗುಣಮಟ್ಟದ ಹೂವುಗಳನ್ನು ವೈಜ್ಞಾನಿಕವಾಗಿ ಬೆಳೆದು ರಫ್ತು ಮಾಡುವ ಬೃಹತ್ ಉದ್ಯಮವಾಗಿ ಬೆಳೆದಿದೆ ಎಂದು ತಿಳಿಸಿದರು.
ಐಸಿಎಆರ್-ಐಎಆರ್‌ಐ ನಿಕಟಪೂರ್ವ ಡೀನ್ ಮತ್ತು ಮುಖ್ಯಸ್ಥ (ಎಫ್‌ಎಲ್‌ಎಸ್ )ರಾದ ಡಾ.ಎಸ್.ಎಸ್.ಸಿಂಧು, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಆರ್.ಸಿ.ಜಗದೀಶ ಮಾತನಾಡಿದರು.
ಸಮ್ಮೇಳನದಲ್ಲಿ ಭಾರತೀಯ ಅಲಂಕಾರಿಕ ತೋಟಗಾರಿಕೆ ಸಂಘದ ವತಿಯಿಂದ 5 ಮಂದಿ ಪುಷ್ಪ ಕೃಷಿ ವಿಜ್ಞಾನಿಗಳಿಗೆ ಫೆಲೋಷಿಪ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇಬ್ಬರು ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಡಾಕ್ಟೋರಲ್ ಸಂಶೋಧನಾ ಪ್ರಬಂಧಕ್ಕೆ ಅತ್ಯುತ್ತಮ ಸಂಶೋಧನಾ ಪ್ರಬಂಧ ಪ್ರಶಸ್ತಿಯನ್ನು ಹಾಗೂ 4 ಮಂದಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಸಂಶೋಧನಾ ಪ್ರಬಂಧಕ್ಕೆ ಅತ್ಯುತ್ತಮ ಪ್ರಬಂಧ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಹಾಗೂ ಇಬ್ಬರಿಗೆ ಅತ್ಯುತ್ತಮ ಸಂಶೋಧನಾ ಪ್ರಬಂಧ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಸಮ್ಮೇಳನದಲ್ಲಿ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವರಾಜ್, ಡಾ.ಬಿ.ಕೆ ಕುಮಾರಸ್ವಾಮಿ, ಹೆಚ್ ಡಿ ದೇವಿಕುಮಾರ್, ಜೆ.ಜಿ.ಕಾವೇರಿಯಪ್ಪ, ಹೆಚ್ ಎಸ್ ಶಶಾಂಕ್, ಕೃಷಿ ವಿರ್ಸವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.
ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು, ವಿಜ್ಞಾನಿಗಳು, ಕಾರ್ಪೂರೇಟರ್ ವಲಯದ ತಜ್ಞರು, ಪ್ರಗತಿಪರ ರೈತರು, ಉದ್ದಿಮೆದಾರರು, ಮಾರುಕಟ್ಟೆ ತಜ್ಞರು ಹಾಗೂ ಪುಷ್ಪ ಕೃಷಿ ರೈತರು, ಆಸಕ್ತರು ಭಾಗವಹಿಸಿದ್ದರು.

ಪತ್ರಿಕಾ ವಿತರಕರಿಗೆ ಬದುಕಿದ್ದಾಗಲೇ ಆರೋಗ್ಯ ಪರಿಹಾರ & ವಿಮಾ ಸೌಲಭ್ಯ ನೀಡಿ- ಮಾಲತೇಶ್

0

ಪತ್ರಿಕಾ ವಿತರಕರಿಗೆ ಸತ್ತ ಮೇಲೆ ಅಪಘಾತ ವಿಮೆ ನೀಡುವ ಬದಲು ಇದ್ದಾಗ ಆರೋಗ್ಯ ಪರಿಹಾರ ಅಥವಾ ವಿಮೆಗಳನ್ನು ನೀಡಿ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಶಿವಮೊಗ್ಗ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಮಾಲತೇಶ್ ಮಾತನಾಡಿ
ಪ್ರತಿನಿತ್ಯ ಬೆಳಗಿನ ಜಾವ ಎಲ್ಲರೂ ಏಳುವ ಮುಂಚೆ ನಾವು ಸಮಾಜ ಮತ್ತು ಸರ್ಕಾರ, ರಾಜಕೀಯ ಗಣ್ಯರುಗಳ ಹಾಗೂ ರಾಜ್ಯ, ದೇಶ,ವಿದೇಶದ ಸುದ್ದಿಗಳನ್ನು ಹೊತ್ತು ತಂದು ಮನೆ ಮನೆ ಬಾಗಿಲಿಗೆ ತಲುಪಿಸುವ ಮಹತ್ವದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇವೆ ನಮ್ಮ ಜೀವನ ಶೋಚನೀಯವಾಗಿದೆ. ಅದೇ ರೀತಿ ನಮ್ಮ ರಾಜ್ಯಾಧ್ಯಕ್ಷ ಶಂಭುಲಿಂಗ ರವರಿಗೆ ಜಿ. ಬಿ ಸಿಂಡ್ರೋಮ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ ಕೂಡಲೆ ಸರ್ಕಾರ ಇತ್ತ ಪರಿಹಾರ ನೀಡಬೇಕು ಎಂದರು.

ಪತ್ರಿಕ ವಿತರಕ ಸಂಘದ ಗೌರವಾಧ್ಯಕ್ಷ ಹುಲಿಗಿ ಕೃಷ್ಣ ಮಾತನಾಡಿ, ಕನಿಷ್ಠ ಕಾರ್ಮಿಕ ಇಲಾಖೆ ಸೌಲಭ್ಯನೂ ಸಹ ನಮಗೆ ದೊರೆಯದೆ, ಅನ್ಯಾಯವಾಗಿದ್ದು ಎಲ್ಲಾ ಪತ್ರಿಕ ವಿತರಿಕರಿಗೂ ಆರೋಗ್ಯ ವಿಮೆ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಉಚಿತ ನೆರವಿನ ರೀತಿಯಲ್ಲಿ ಹೊಸ ಚಿಂತನೆ ಮಾಡಿ ಪತ್ರಿಕ ವಿತರಕರ ಜೀವನ ಸ್ಪೂರ್ತಿಯಾಗಿ ಎಂದರು.

ಜಯ ಕರ್ನಾಟಕ ಜನಪರ ವೇದಿಕೆ ಶಿಕಾರಿಪುರ ತಾಲೂಕು ಅಧ್ಯಕ್ಷ ಶಿವಯ್ಯ ಎನ್ ಶಾಸ್ತ್ರಿ ಮಾತನಾಡಿ, ಪತ್ರಿಕಾ ವಿತರಕರ ಜೀವನ ಬಹಳಷ್ಟು ಕಷ್ಟದಲ್ಲಿದ್ದು ಸರ್ಕಾರ ವಿಶೇಷವಾದ ಅನುದಾನ ಮತ್ತು ಸೌಲಭ್ಯಗಳನ್ನು ನೀಡುವ ಮುಖಾಂತರ ಇಡೀ ದೇಶಕ್ಕೆ ಮಾದರಿಯಾಗಿ ಸಮಾಜದ ಹಾಗೂಹೋಗುಗಳ ವಿಷಯ ಮತ್ತು ಸುದ್ದಿಯನ್ನು ತಲುಪಿಸುವ ವಿತರಕರ ಬದುಕು ಕಟ್ಟಿಕೊಳ್ಳಲು ಹೊಸ ಕಾನೂನು ಜಾರಿಗೆ ತಂದ ಸಮಾಜಕ್ಕೆ ಸ್ಪೂರ್ತಿಯಾಗಿ ಎಂದು ಆಗ್ರಹಿಸಿದರು.

ಪ್ರಧಾನ ಕಾರ್ಯದರ್ಶಿ ನಜೀರ್ ಅಹ್ಮದ್, ಪದಾಧಿಕಾರಿಗಳಾದ ಪರಶುರಾಮ್ ರಾವ್, ಮಲ್ಲಿಕಾರ್ಜುನ್ ಭದ್ರಾವತಿ , ಪಾರ್ಥಿಬನ್, ರಾಮು ಜಿ, ಚಂದ್ರಶೇಖರ್, ಪ್ರತಾಪ್, ಶರತ್, ಧನಂಜಯ್, ಅಜೀ ಉಲ್ಲಾ, ಪ್ರಾಣೇಶ್, ಸಂಗಮೇಶ್ವರ್, ಜಯ ಕರ್ನಾಟಕ ಜನಪರ ವೇದಿಕೆಯ ತಾಲೂಕು ಕಾರ್ಯದರ್ಶಿ ಇಮ್ರಾನ್, ಕರವೇ ಜನಮನ ರಾಜ್ಯ ಸಂಘಟನೆ ಪದಾಧಿಕಾರಿಗಳು, ಇದ್ದರು.

ಮಹಿಳೆಯರ ಸಾಧನೆ ಗುರುತಿಸಿ ಗೌರವಿಸುವುದು ಒಳ್ಳೆಯ ಸಂಪ್ರದಾಯ- ಸಂದೇಶ್ ಉಪಾಧ್ಯ

0

ಮಹಿಳೆಯರ ಸಾಧನೆಯನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ನಾಗಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕ ಸಂದೇಶ್ ಉಪಾಧ್ಯ ಹೇಳಿದರು.

ನಾಗಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸದ್ದಿಲ್ಲದೇ ಸೇವೆ ಮಾಡುತ್ತಿರುವ ಸಾಕಷ್ಟು ಜನ ಮಹಿಳೆಯರು ನಮ್ಮಲ್ಲಿ ಇರುತ್ತಾರೆ. ಅವರ ಸೇವೆ ಸಮಾಜಕ್ಕೆ ತುಂಬಾ ಅಗತ್ಯವಾಗಿರುತ್ತದೆ. ಅಂತಹ ಮಹಿಳೆಯರನ್ನು ಗುರುತಿಸಿ ಗೌರವಿಸಿದಾಗ ಸಂಸ್ಥೆಗೆ ಒಳ್ಳೆಯ ಹೆಸರು ಬರುತ್ತದೆ ಎಂದು ತಿಳಿಸಿದರು.

ಮಹಿಳೆಯರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಾಗ ಅವರ ಪ್ರತಿಭೆ ಅನಾವರಣಗೊಳ್ಳುತ್ತದೆ. ಸಮಾಜಮುಖಿಯಾಗಿ ಸಹ ಬೆಳೆಯಲು ಅವಕಾಶ ದೊರಕುತ್ತದೆ. 40 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಇವರ ಸೇವೆ ಅನನ್ಯ. ಇಂಥವರ ಸಂಖ್ಯೆ ಸಮಾಜದಲ್ಲಿ ಹೆಚ್ಚಾಗಬೇಕು ಎಂದು ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಒಳ್ಳೆಯ ವ್ಯಕ್ತಿಗಳನ್ನು ಗುರುತಿಸಿ ಗೌರವಿಸಿದಾಗ ಸಮಾಜದಲ್ಲಿ ಅಂತಹವರ ಸೇವೆ ಇನ್ನೂ ಹೆಚ್ಚಾಗುತ್ತದೆ ಎಂದು ಹೇಳಿದರು.

ಶ್ರೀ ಶಾರದಾ ಶಂಕರ ಭಜನಾ ಮಂಡಳಿ ವತಿಯಿಂದ ಶಿಕ್ಷಕಿ ರಾಜಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು. ರಾಜಲಕ್ಷ್ಮೀ ಅವರು 3000 ಮಹಿಳೆಯರಿಗೆ ಸೌಂದರ್ಯ ಲಹರಿ, ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ, ಶಿವಾನಂದ ಲಹರಿ ಸ್ತೋತ್ರಗಳನ್ನು ಹೇಳಿಕೊಟ್ಟಿದ್ದಾರೆ. 30ನೇ ವಯಸ್ಸಿನಿಂದ ಈವರೆಗೂ ತರಬೇತಿ ನೀಡುತ್ತಿದ್ದಾರೆ.

ಸನ್ಮಾನಿತ ರಾಜಲಕ್ಷ್ಮೀ ಅವರು ಗೀತೆಗಳನ್ನು ಹಾಡಿದರು. ಶ್ರೀ ಶಾರದಾ ಶಂಕರ ಭಜನಾ ಮಂಡಳಿ ಸದಸ್ಯರು ಇದ್ದರು. ನಾಗಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷ ರಾಮಲಿಂಗಪ್ಪ, ಚಿತ್ರಲೇಖಾ ಉಪಾಧ್ಯ, ಸುರೇಶ್, ಇನ್ನರ್‌ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯಕುಮಾರ್ ಹಾಗೂ ವಿವೇಕ್ ಭಾಗವತ್ ಇದ್ದರು.

ಕುಸ್ತಿಪಟುಗಳ ಸಂಘಟನೆಯಿಂದ ಮೆಗ್ಗಾನ್ ಆಸ್ಪತ್ರೆ ರೋಗಿಗಳಿಗೆ ಬ್ರೆಡ್,ಕೇಕ್,ಹಣ್ಣು ಹಂಪಲು ವಿತರಣೆ

0

ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿ, ಪರಿಸರವಾದಿ, ಮಹಾಲಿಂಗೇಶ್ವರ ಟ್ರಸ್ಟ್ ಅಧ್ಯಕ್ಷ ಮತ್ತು ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷ ಹಾಗೂ ಜಯ ಕರ್ನಾಟಕ ಜನಪರ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬೆhttps://klive.news/2024/01/14/41395/ಳ್ಳಿ ಪಾಡಿ ಗುಣ ರಂಜನ್ ಶೆಟ್ಟಿ ಅವರ ಜನ್ಮದಿನದ ಅಂಗವಾಗಿ ಕರ್ನಾಟಕ ರಾಜ್ಯದ್ಯಂತ ಕಾರ್ಯಕರ್ತರು ಮತ್ತು ಅಭಿಮಾನಿಗಳ ಹರ್ಷೋದ್ಗಾರ ದೊಂದಿಗೆ ಬಡ ರೋಗಿಗಳಿಗೆ ಮತ್ತು ಆಶ್ರಮಗಳಿಗೆ ರಾಜ್ಯದ ವಿವಿಧ ಭಾಗಗಳಲ್ಲಿ ಅನ್ನ ಸಂತರ್ಪಣೆ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮದ ಅಂಗವಾಗಿ ಶಿವಮೊಗ್ಗ ಮೆಗನ್ ಆಸ್ಪತ್ರೆಯ ರೋಗಿಗಳಿಗೆ ಬ್ರೆಡ್ಡು, ಕೇಕ್, ಹಣ್ಣು ಹಂಪಲುಗಳನ್ನು ನೀಡುವ ಮುಖಾಂತರ ಶಿವಮೊಗ್ಗ ಜಿಲ್ಲಾ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಜನ್ಮದಿನವನ್ನು ಆಚರಿಸಲಾಯಿತು.

ರಾಜ್ಯ ಸಮಿತಿಯ ರಘುವೀರ್ ಸಿಂಗ್,
ಜಿಲ್ಲಾಧ್ಯಕ್ಷ ಸುರೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಹುಲಿಗಿ ಕೃಷ್ಣ, ಪರಶುರಾಮ್, ನಾಗರಾಜ್, ವಿಜಯಕುಮಾರ್, ನವೀನ್, ಪವನ್, ಶಿಕಾರಿಪುರ ತಾಲೂಕ ಅಧ್ಯಕ್ಷ ಶಿವಯ್ಯ ಎನ್ ಶಾಸ್ತ್ರಿ, ಕಾರ್ಯದರ್ಶಿ ಇಮ್ರಾನ್, ಚಂದ್ರಶೇಖರ, ಶ್ರೀನಿವಾಸ್, ಸ್ಟೆಲ್ಲಾ ಮಾರ್ಟಿನ್, ಅರ್ಚನಾ, ರಂಗನಾಥ್, ಮಂಜುನಾಥ್, ಇನ್ನು ಹಲವರಿದ್ದರು.

Dinesh Gundu Rao ಗೃಹ ಆರೋಗ್ಯ ಯೋಜನೆಯಿಂದ ಗಂಭೀರ ಆರೋಗ್ಯ ಸಮಸ್ಯೆಗಳ ಪತ್ತೆ ಸಾಧ್ಯವಾಗಿದೆ- ಸಚಿವ ದಿನೇಶ್ ಗುಂಡೂರಾವ್

0

Dinesh Gundu Rao ರೋಗ ಬರುವ ಮುನ್ನವೇ ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆಗಳನ್ನು ಕೊಂಡೊಯ್ಯುವ ನಮ್ಮ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹ ಆರೋಗ್ಯ’ ಯೋಜನೆ ಸಫಲತೆ ಕಂಡಿದೆ. ಆದರೆ, ಆ‌ ವರದಿ ಬೇಸರದ ಸಂಗತಿಗೆ ಹಾಗೂ ಆರೋಗ್ಯದ ಬಗ್ಗೆ ನಮ್ಮ ಗ್ರಾಮೀಣರು ಹೆಚ್ಚು ಆಸಕ್ತಿ ತೋರಬೇಕಾದ ಸಂದರ್ಭಕ್ಕೆ ಕಾರಣವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಇತ್ತೀಚಿನ ನಡೆಸಿದ ತಪಾಸಣಾ ವರದಿಯು ಒಂದು ಆಘಾತಕಾರಿ ಸತ್ಯವನ್ನು ಹೊರಹಾಕಿದ್ದು, ನಗರ ಪ್ರದೇಶಗಳಿಗಿಂತ ಹೆಚ್ಚಾಗಿ ನಮ್ಮ ಗ್ರಾಮೀಣ ಭಾಗದ ಜನರಲ್ಲಿ ರಕ್ತದೊತ್ತಡದ (High BP) ಸಮಸ್ಯೆ ಅತಿಹೆಚ್ಚು ಕಾಣಿಸಿಕೊಳ್ಳುತ್ತಿದೆ.

ರಾಜ್ಯಾದ್ಯಂತ 30 ವರ್ಷ ಮೇಲ್ಪಟ್ಟ ಸುಮಾರು 76 ಲಕ್ಷ ಜನರ ತಪಾಸಣೆ ನಡೆಸಲಾಗಿದ್ದು, ಈ ಪೈಕಿ 35.27 ಲಕ್ಷಕ್ಕೂ ಅಧಿಕ ಮಂದಿ ಹೈ ಬಿ.ಪಿ ಸಮಸ್ಯೆಯಿಂದ ಬಳಲುತ್ತಿರುವುದು ಪತ್ತೆಯಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಈ ಪ್ರಮಾಣ ಶೇ. 19ರಷ್ಟಿದ್ದರೆ, ರಾಜ್ಯದ ಇತರ ಜಿಲ್ಲೆಗಳಲ್ಲಿ ಶೇ. 43.9ರಷ್ಟು ಪ್ರಕರಣಗಳು ದಾಖಲಾಗಿರುವುದು ಆತಂಕದ ಸಂಗತಿಯಾಗಿದೆ.

ಜಿಲ್ಲಾವಾರು ಅಂಕಿ-ಅಂಶಗಳನ್ನು ನೋಡುವುದಾದರೆ ಬೆಳಗಾವಿಯಲ್ಲಿ ಅತಿಹೆಚ್ಚು ಅಂದರೆ 3,86,257 ಪ್ರಕರಣಗಳು ವರದಿಯಾಗಿವೆ.
ಮೈಸೂರಿನಲ್ಲಿ 1,94,712, ತುಮಕೂರಿನಲ್ಲಿ 1,94,191, ಬಳ್ಳಾರಿಯಲ್ಲಿ 1,91,917 ಹಾಗೂ ಧಾರವಾಡದಲ್ಲಿ 1,74,543 ಪ್ರಕರಣಗಳು ಪತ್ತೆಯಾಗಿವೆ. ಈ ಅಂಕಿ-ಅಂಶಗಳು ನಮ್ಮ ‘ಗೃಹ ಆರೋಗ್ಯ’ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸಾಕ್ಷಿಯಾಗಿವೆ.

Dinesh Gundu Rao ಮನೆ ಮನೆಗೆ ತೆರಳಿ ತಪಾಸಣೆ ನಡೆಸುತ್ತಿರುವುದರಿಂದ ಇಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ನಾವು ಗುರುತಿಸಲು ಸಾಧ್ಯವಾಗಿದೆ.
ನಾಡಿನ ಜನತೆ ಈ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ. ಗೃಹ ಆರೋಗ್ಯ ಯೋಜನೆಯಡಿ ನಿಮ್ಮನ್ನು ಕಾಳಜಿ ಮಾಡಲು ಮತ್ತು ನಿಮಗೆ ಸೂಕ್ತ ಚಿಕಿತ್ಸೆ ಒದಗಿಸಲು ನಾವಿದ್ದೇವೆ. ಆದರೆ, ನೀವು ಸರಿಯಾದ ಆಹಾರ ಸೇವನೆ, ಉತ್ತಮವಾದ ಜೀವನಶೈಲಿಯನ್ನು ರೂಢಿಸಿಕೊಳ್ಳುವ ಮೂಲಕ ನಿಮ್ಮ ಆರೋಗ್ಯ ಸುಧಾರಣೆಗೆ ಗಮನ ನೀಡಬೇಕು ಎಂದು ಸಚಿವರು ತಿಳಿಸಿದ್ದಾರೆ.

CM Siddaramaiah ಮೌಢ್ಯತೆ ವಿರುದ್ಧ ಸಿಡಿದೆದ್ದುಸಮಸಮಾಜದ ಕನಸು ಬಿತ್ತಿದ ಶರಣ ದೇವರ ದಾಸಿಂಯ್ಯ- ಸಿದ್ಧರಾಮಯ್ಯ

0

CM Siddaramaiah ಮೌಢ್ಯ, ಕಂದಾಚಾರಗಳ‌ ಹೆಸರಿನಲ್ಲಿ ತಳ ಸಮುದಾಯಗಳ ಜನರನ್ನು ಶೋಷಣೆಗೊಳಪಡಿಸಿದ್ದ ಸಮಾಜದ ಪಟ್ಟಭದ್ರ ಶಕ್ತಿಗಳ ವಿರುದ್ಧ ಸಿಡಿದೆದ್ದು, ಸಮಸಮಾಜದ ಕನಸು ಬಿತ್ತಿದ ಆದ್ಯ ವಚನಕಾರ ದೇವರ ದಾಸಿಮಯ್ಯನವರು ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿದ್ದಾರೆ.

ದಾಸಿಮಯ್ಯನವರು ಸೇರಿದಂತೆ ಶರಣರು ಮುನ್ನಡೆಸಿದ ಸಾಮಾಜಿಕ ಹಾಗೂ ಧಾರ್ಮಿಕ ಚಳವಳಿಯು ನೊಂದ ಜೀವಗಳೊಳಗೆ ಪ್ರತಿರೋಧದ ಧ್ವನಿ ಹುಟ್ಟಲು ಪ್ರೇರಣೆಯಾಯಿತು ಎಂದಿದ್ದಾರೆ.

CM Siddaramaiah ವಚನಗಳ ಮೂಲಕ ಅರಿವಿನ ಜ್ಯೋತಿ ಬೆಳಗಿದ ದೇವರ ದಾಸಿಮಯ್ಯನವರನ್ನು ಈ ದಿನ ನೆನೆದು, ನಮಿಸುತ್ತೇನೆ ಎಂದು ಹೇಳಿದ್ದಾರೆ.

Sagara News ಸಾಗರದಲ್ಲಿ “ಕ್ಯಾಂಪಸ್ ಕಟ್ಟೆ”.ಸಾಧಕಿಯರ ಬಗ್ಗೆ ವಿದ್ಯಾರ್ಥಿನಿಯರಿಂದ ಪರಿಚಯ.

0

Sagara News ಮಹಿಳಾ ಸಬಲೀಕರಣ ಪ್ರಾಮುಖ್ಯತೆ ಪಡೆಯುತ್ತಿರುವ ಅದೂ ಮಹಿಳಾ ದಿನಾಚರಣೆಯ ತಿಂಗಳಿನಲ್ಲಿ ಸಾಗರದ ಎಲ್ ಬಿ ಮತ್ತು ಎಸ್ ಬಿ ಎಸ್ ಕಾಲೇಜಿನ ವಿದ್ಯಾರ್ಥಿನಿಯರು ಭದ್ರಾವತಿಯ ಆಕಾಶವಾಣಿ ಕೇಂದ್ರದಿಂದ ಶುಕ್ರವಾರದಂದು ಕಾಲೇಜಿನಲ್ಲಿ ನಡೆಸಿದ ಕ್ಯಾಂಪಸ್ ಕಟ್ಟೆ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯರ ಕುರಿತು ಅದ್ಭುತವಾಗಿ ಬೆಳಕು ಚೆಲ್ಲಿದರು. ಸ್ವತಂತ್ರ ಹೋರಾಟ, ರಾಜ್ಯಾಡಳಿತ, ಸಮಾಜ ಸುಧಾರಣೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕಿಯರಾದ ಬೆಳವಡಿ ಮಲ್ಲಮ್ಮ, ಕೆಳದಿ ಚೆನ್ನಮ್ಮ, ರಾಣಿ ಚೆನ್ನ ಭೈರಾದೇವಿ, ಅಕ್ಕಮಹಾದೇವಿ, ಸಾಹಿತಿ ಸಹನಾ ವಿಜಯಕುಮಾರ್, ಸಬಿತಾ ಬನ್ನಾಡಿ ಮತ್ತು ದೀಪಾ ಬಸ್ತಿ ಯವರ ಕೊಡುಗೆ ಮತ್ತು ಸಾಧನೆಗಳ ಕುರಿತು ವಿದ್ಯಾರ್ಥಿನಿಯರು ಮಾತನಾಡಿದರು.
ಭೈರಪ್ಪನವರ ಛಾಯೆಯಂತೆ ಬಿಂಬಿತರಾಗಿರುವ ಮತ್ತು ಮಾನಸ ಪುತ್ರಿ ಎಂದೇ ಕರೆಯಲ್ಪಡುವ ಸಹನಾ ವಿಜಯಕುಮಾರ್ ಅವರ ಬಗ್ಗೆ ಪ್ರಥಮ ಬಿ.ಎ.ವಿದ್ಯಾರ್ಥಿನಿ ಸಂಜನಾ ಮಾತನಾಡಿ ಸಹನಾ ವಿಜಯಕುಮಾರ್ ರವರ ಬರಹದಲ್ಲಿ ಎತ್ತಿರುವ ಪ್ರಶ್ನೆಗಳು, ಅವರ ವೈಚಾರಿಕತೆ ಮತ್ತು ಕಾದಂಬರಿಗಳ ಬಗ್ಗೆ ಸಮಗ್ರವಾಗಿ ವಿವರಿಸಿದರು. ಪೋರ್ಚುಗೀಸರಿಗೆ ಸಿಂಹಸ್ವಪ್ನವಾಗಿದ್ದ ಮತ್ತು ಕಾಳು ಮೆಣಸಿನ ರಾಣಿ ಎಂದೇ ಖ್ಯಾತಿ ಪಡೆದಿದ್ದ ಗೇರುಸೊಪ್ಪದ ಚೆನ್ನ ಭೈರಾದೇವಿ ಕುರಿತು ಪ್ರಥಮ ಬಿ.ಎಸ್ಸಿ. ಯ ಸ್ಮಿತಾ ಎಂ.ಎಸ್ ಮಾತನಾಡಿದರು. ಉತ್ತಮ ಆಡಳಿತಕ್ಕೆ ಹೆಸರಾದ ಮಲೆನಾಡಿನ ರಾಣಿ ಕೆಳದಿ ಚೆನ್ನಮ್ಮನ ಕುರಿತು ಅಂತಿಮ ಬಿ.ಸಿ.ಎ ಯ ಶ್ರಾವ್ಯ ಕೆ.ಎಸ್. ಮಾತನಾಡಿ ಚೆನ್ನಮ್ಮಳ ಧೈರ್ಯ, ಆಡಳಿತ ವೈಖರಿ ಮತ್ತು ಜನಸಾಮಾನ್ಯರೊಂದಿಗಿನ ಸಂಬಂಧವನ್ನು ಸಮಗ್ರವಾಗಿ ವಿವರಿಸಿದರು.
ಕರ್ನಾಟಕದ ವಚನ ಸಾಹಿತ್ಯದಲ್ಲಿ ತನ್ನದೇ ಚಾಪು ಮೂಡಿಸಿದ ಅಕ್ಕಮಹಾದೇವಿಯ ಕುರಿತು ಅಂತಿಮ ಬಿ.ಎಸ್ಸಿ ವಿದ್ಯಾರ್ಥಿನಿ ಚಂದನಾ ಮಾತನಾಡಿ ಕರ್ನಾಟಕದ ಮಹಿಳೆಯರಿಗೆ ಅಕ್ಕಮಹಾದೇವಿ ಒಂದು ಆದರ್ಶ ಮತ್ತು ಭಕ್ತಿಯ ಮೂಲಕ ತನ್ನ ಹೆಸರನ್ನು ಇತಿಹಾಸದಲ್ಲಿ ದಾಖಲಿಸಿದ್ದಾಳೆ ಎಂದು ಅಭಿಪ್ರಾಯಪಟ್ಟಳು.
Sagara News ಕನ್ನಡ ಸಾಹಿತ್ಯದಲ್ಲಿ ತನ್ನದೇ ಹೆಸರು ಮಾಡಿದ ಸಬಿತಾ ಬನ್ನಾಡಿ ಕುರಿತು ಬಿ.ಸಿ.ಎ. ವಿದ್ಯಾರ್ಥಿನಿ ಸದ್ವಿನಿ ಮಾತನಾಡಿ ಅವರ ಲೇಖನ ಮತ್ತು ಬರಹಗಳು ಪ್ರಸ್ತುತತೆಯ ಕೈಗನ್ನಡಿಯಾಗಿವೆ ಮತ್ತು ನವ ಸಾಹಿತ್ಯದ ಹೊಸ ಆಯಾಮಗಳನ್ನು ಬಳಸಿಕೊಂಡು ಸಾಹಿತ್ಯವನ್ನು ರಚಿಸಿದ್ದಾರೆ ಎಂದು ಹೇಳಿದರು. ಕರ್ನಾಟಕದ ಹೆಸರನ್ನು ವಿಶ್ವದಾದ್ಯಂತ ಪರಿಚಯಿಸಿದ ಬುಕರ್ ಪ್ರಶಸ್ತಿಯ ಜೊತೆ ಗುರುತಿಸಿಕೊಂಡ ದೀಪಾ ಬಸ್ತಿ ಅವರ ಬಗ್ಗೆ ಬಿ ಕಾಂ ವಿದ್ಯಾರ್ಥಿನಿ ದಿವ್ಯಶ್ರೀ ಮಾತನಾಡಿದಳು. ಎದೆಯ ಹಣತೆ ತರ್ಜುಮೆಗಾಗಿ ಬುಕರ್ ಪ್ರಶಸ್ತಿ ದೊರೆತಿದ್ದು ಅವರ ಸಾಹಿತ್ಯಕ್ಕೆ ಹಲವಾರು ಮನ್ನಣೆಗಳು ಬಂದಿರುವುದನ್ನು ಸಮಗ್ರವಾಗಿ ವಿವರಿಸಿದರು. ಸೋಶಿಯಲ್ ಮೀಡಿಯಾದ ಈ ಯುಗದಲ್ಲಿ ವಿದ್ಯಾರ್ಥಿಗಳು ಮಹಿಳಾ ಸಾಧಕಿಯರ ಬಗ್ಗೆ ಅಧ್ಯಯನ ಮಾಡಿದ ವಿಷಯ ಮಂಡನೆಯು ಕೇಳುಗರನ್ನು ಆಕರ್ಷಿಸಿದರೆ, ಈ ಅವಕಾಶ ವಿದ್ಯಾರ್ಥಿನಿಯರಿಗೆ ವಿಶೇಷ ಪ್ರೇರಣೆಯನ್ನು ನೀಡಿತು. ವಿದ್ಯಾರ್ಥಿನಿಯರ ಅದ್ಭುತವಾದ ಮಂಡನೆಯನ್ನು ಆಕಾಶವಾಣಿ ಕೇಂದ್ರದ ವಸಿಷ್ಠ ರವರು ಶ್ಲಾಘಿಸಿದರು. ನಮ್ಮ ಕಾಲೇಜಿನ ವಿದ್ಯಾರ್ಥಿನಿಯರಿಗೆ ಅವಕಾಶ ನೀಡಿದ್ದಕ್ಕಾಗಿ ಭದ್ರಾವತಿಯ ಆಕಾಶವಾಣಿ ಕೇಂದ್ರಕ್ಕೆ ಕಾಲೇಜಿನ ಪ್ರಾoಶುಪಾಲರಾದ ಡಾ. ಲಕ್ಷ್ಮೀಶ ಎ.ಎಸ್. ರವರು ಧನ್ಯವಾದಗಳನ್ನು ಹೇಳಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಮಾಡಿದ ಭದ್ರಾವತಿ ಆಕಾಶವಾಣಿ ಕೇಂದ್ರದ ಉದ್ಘೋಷಕರಾದ ಡಾ. ಬಸವರಾಜು ಟಿ. ಎನ್.
ರವರು ವಿದ್ಯಾರ್ಥಿನಿಯರ ಆಸಕ್ತಿಯನ್ನು ಮೆಚ್ಚಿ, ಇನ್ನಷ್ಟು ಅವಕಾಶಗಳನ್ನು ಬಳಸಿಕೊಳ್ಳುವoತೆ ತಿಳಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ನಿರಂಜನ್ ಮೂರ್ತಿ ಟಿ, ಮಂಜುನಾಥ ಎಂ.ಎಲ್ , ರವೀಂದ್ರ , ಆಂಗ್ಲ ವಿಭಾಗದ ಮುಖ್ಯಸ್ಥರಾದ ಡಾ. ಪ್ರಶಾಂತ್ ಮಾಂಡ್ರೆ, ಕ್ಯಾl ನೂತನ ಹೆಚ್.ಡಿ, ವಿನಯ, ಚಂದನ್, ದೇವರಾಜ್ ಕೆ ಮತ್ತು ಕು. ಜೆನಿಫರ್ ಡಿಸೋಜ, ಕು. ನಂದನ ಟೆಂಬೆ ಇವರು ಪಾಲ್ಗೊಂಡಿದ್ದರು.

Bakkeshwara Swamy Rathotsava ದಾವಣಗೆರೆ ಹೃದಯಭಾಗದ ರಾಜಬೀದಿಯ ಏಕೈಕವಾದ ಶ್ರೀಬಕ್ಕೇಶ್ವರ ಮಹಾರಥೋತ್ಸವ. ಲೇ: ಡಾ..ಹೆಚ್.ಬಿ.ಮಂಜುನಾಥ್.

0

Bakkeshwara Swamy Rathotsava ದಾವಣಗೆರೆಯು ಅನಾದಿಕಾಲದಿಂದಲೂ ವ್ಯಾಪಾರೋದ್ಯಮಕ್ಕೆ ಪ್ರಸಿದ್ಧವಾದ ಕೇಂದ್ರವಾಗಿದ್ದು 1801 ರ ವೇಳೆಗೆ ಕೇವಲ ಐದುನೂರು ಮನೆಗಳ ಚಿಕ್ಕ ಊರಾಗಿದ್ದ ದಾವಣಗೆರೆಯು ಪ್ರಮುಖ ವ್ಯಾಪಾರಿ ಕೇಂದ್ರವಾಗಿತ್ತು. ಇಕ್ಕೇರಿಯ ಸಾಗರ ಸೀಮೆಯ ಕಡೆಯಿಂದ ಅಡಕೆ, ಕಾಳುಮೆಣಸು ಮುಂತಾದುವನ್ನು ಖರೀದಿಸಿ ತಂದು ತಮಿಳುನಾಡಿನ ಆರ್ಕಾಟ್ ಸಮೀಪದ ವಲ್ಲಜಪೇಟೆಗೆ ದಾವಣಗೆರೆಯ ವ್ಯಾಪಾರಿಗಳು ಎತ್ತಿನಗಾಡಿಯಲ್ಲಿ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಪರದೇಶಗಳಿಂದ ಮದರಾಸಿನ ಮುಖಾಂತರ ವಲ್ಲಜಪೇಟೆಗೆ ಬರುತ್ತಿದ್ದ ವಸ್ತುಗಳನ್ನು ದಾವಣಗೆರೆಗೆ ತಂದು ಮಾರಾಟ ಮಾಡುತಿದ್ದರು ಎಂದು ವಿದೇಶೀ ಯಾತ್ರಿಕ ಫ್ರಾನ್ಸಿಸ್ ಬುಕಾನೆನ್ ದಾಖಲಿಸಿದ್ದಾನೆ. ಮುಂದೆ ದಾವಣಗೆರೆಯ ಇಂತಹ ವ್ಯಾಪಾರೋದ್ಯಮಿಗಳಿಗೆ ಶ್ರೀರಕ್ಷೆಯಾಗಿ ಆಶೀರ್ವದಿಸಿ ಇಲ್ಲಿನ ವಾಣಿಜ್ಯೋದ್ಯಮವನ್ನು ಉತ್ತುಂಗಕ್ಕೇರಿಸಿದ್ದು ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿಗಳ ಕೃಪಾಶೀರ್ವಾದ ಎಂದು ಇಂದಿಗೂ ನಂಬಲಾಗುತ್ತಿದೆ.

ಹೆಬ್ಬಾಳು ಮಠದ ರುದ್ರೇಶ್ವರರ ಕೃಪಾಶೀರ್ವಾದದೊಂದಿಗೆ ಗುಮ್ಮನೂರಿನ ಬಸವಲಿಂಗಯ್ಯ ಪಾರ್ವತಮ್ಮನವರ ಗರ್ಭಾಂಬುದಿಯಲ್ಲಿ 1770 ರಲ್ಲಿ ಜನಿಸಿದ ಮಗುವಿಗೆ ಹುಟ್ಟುವಾಗಲೇ ತಲೆಯ ಮೇಲೊಂದು ಬೊಕ್ಕೆ ಇದ್ದುದರಿಂದ “ಬಕ್ಕೇಶ” ಎಂದು ನಾಮಕರಣ ಮಾಡಲಾಯಿತು, ಮುಂದೆ ಜಂಗಮರಾಗಿ ಪರ್ಯಟನ ಮಾಡುತ್ತಾ ಲೀಲಾ ಪವಾಡಗಳನ್ನು ಮೆರೆದ ಬಕ್ಕೇಶ್ವರರು 1802ನೇ ಇಸ್ವಿಯ ಹಾಗೆ ದಾವಣಗೆರೆಗೆ ಬಂದು ಹಳೆ ಊರಿನ ಶ್ರೀ ದುರ್ಗಾಂಬಿಕಾ ದೇವಸ್ಥಾನ ಶ್ರೀ ಹನುಮಂತ ದೇವರ ದೇವಸ್ಥಾನದ ಬಳಿ ಮಠ ಮಾಡಿಕೊಂಡವರು 1853 ರ ಸುಮಾರಿಗೆ ಲಿಂಗೈಕ್ಯರಾದಾಗ ಅವರ ಆಣತಿಯಂತೆ ಸ್ಮಶಾನ ಸದೃಶವಾಗಿದ್ದ ಚೌಕಿ ಗುಂಡಿಯ ಬಳಿ ಅವರ ಕ್ರಿಯಾ ಸಮಾಧಿಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಚಿತ್ರದುರ್ಗ ಬೃಹನ್ಮಠದ ಜಗದ್ಗುರುಗಳಾಗಿದ್ದ ಸಣ್ಣ ಪಾದದ ಚೆನ್ನವೀರ ಮಹಾಸ್ವಾಮಿಗಳು ಸಹಾ ಸಾನ್ನಿಧ್ಯ ವಹಿಸಿದ್ದರೆಂದು ತಿಳಿದು ಬರುತ್ತದೆ.

1902 ರ ಸುಮಾರಿಗೆ ಮಾಗಾನಹಳ್ಳಿ ಮನೆತನದವರು ಮುಂತಾಗಿ ಭಕ್ತರು ಸೇರಿ ಬಕ್ಕೇಶ್ವರರ ಕ್ರಿಯಾ ಸಮಾಧಿಗೆ ಗುಡಿಯನ್ನು ನಿರ್ಮಿಸಿದರು. 1924 ರಿಂದ ಶ್ರೀ ಬಕ್ಕೇಶ್ವರ ಮಹಾಸ್ವಾಮಿಗಳವರ ರಥೋತ್ಸವ ಆರಂಭವಾಯಿತು. 1925 ರ ಸುಮಾರಿಗೆ ಹಂಜಿಗಿ ಮಠದ ವೀರಭದ್ರಯ್ಯನವರು ಬಕ್ಕೇಶ್ವರರ ಗದ್ದುಗೆಯ ಮೇಲೆ ಪೂಜಾ ಮೂರ್ತಿಯನ್ನು, ಪಾದುಕೆಗಳನ್ನು, ಹಿತ್ತಾಳೆಯ ಆನೆಯನ್ನು, ಗುಡಿಗೆ ಕಬ್ಬಿಣದ ಕಟಾಂಜನವನ್ನು, ಕಾಣಿಕೆ ಡಬ್ಬವನ್ನು ಮಾಡಿಸಿಕೊಟ್ಟರೆಂದು ತಿಳಿದು ಬರುತ್ತದೆ. ಕವಿ, ಪಂಡಿತ, ಗಾನಯೋಗಿ ಶ್ರೀ ಡಾ. ಪುಟ್ಟರಾಜ ಗವಾಯಿಗಳವರ ನಿರ್ದೇಶನದಲ್ಲಿ ಜಗಜ್ಯೋತಿ ಬಸವೇಶ್ವರ ಹಾಗೂ ಶಿವ ಭಕ್ತ ಸಿರಿಯಾಳ ಸಹಾಯಾರ್ಥ ನಾಟಕಗಳು ನೆರವೇರಿ ಬಂದ ಹಣದಿಂದ ಶ್ರೀ ಬಕ್ಕೇಶ್ವರರ ಮೂರ್ತಿಗೆ ಬಂಗಾರದ ಕಿರೀಟವು ಅಲಂಕೃತಗೊಂಡಿತು. ಮುಂದೆ ಕೀರ್ತಿ ಶೇಷ ಶಾಮನೂರು ಶಿವಶಂಕರಪ್ಪನವರವರೆಗೆ ಅನೇಕ ಮಹನೀಯರು ಶ್ರೀ ಬಕ್ಕೇಶ್ವರ ಮಹಾ ಸ್ವಾಮಿಯ ದೇವಸ್ಥಾನದ ಅಭಿವೃದ್ಧಿಗೆ ಅನೇಕ ರೀತಿಯ ದಾನ ದೇಣಿಗೆಗಳನ್ನು ನೀಡಿರುವುದು ತಿಳಿದೇ ಇರುತ್ತದೆ.

Bakkeshwara Swamy Rathotsava ಸ್ಮಶಾನ ಸದೃಶವಾಗಿದ್ದ ಚೌಕಿ ಗುಂಡಿ ಪ್ರದೇಶವು ಶ್ರೀ ಗುರು ಬಕ್ಕೇಶ್ವರರ ಕರ್ತೃಗದ್ದುಗೆಯಾದ ನಂತರ ದೊಡ್ಡ ವ್ಯಾಪಾರೋದ್ಯಮ ಪ್ರದೇಶವಾಗಿ, ‘ಚೌಕಿಪೇಟೆ’ಯಾಗಿ, ದಾವಣಗೆರೆಯ ವಾಣಿಜ್ಯೋದ್ಯಮದ ಹೃದಯ ಭಾಗವೇ ಆಗಿ, ರಾಜಬೀದಿಯೂ ಆಗಿ ಪ್ರಖ್ಯಾತವಾಯಿತು.

ಇಂತಹ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿಗಳ ಮಹಾ ರಥೋತ್ಸವವು ಪ್ರತಿ ವರ್ಷ ಚೈತ್ರ ಶುದ್ಧ ಪಂಚಮಿಯ ದಿನದಂದು ನೆರವೇರುತ್ತಿದ್ದು ದಾವಣಗೆರೆಯ ಬಹುತೇಕ ಎಲ್ಲಾ ವಾಣಿಜ್ಯೋದ್ಯಮಿಗಳು, ವ್ಯಾಪಾರಸ್ಥರು, ಎಪಿಎಂಸಿಯ ವರ್ತಕರು, ದಲ್ಲಾಲರು, ಗುಮಾಸ್ತರು, ಕಾರ್ಮಿಕರು, ಹಮಾಲಿಗಳು ಆದಿಯಾಗಿ ಎಲ್ಲರೂ ಕುಟುಂಬ ಸಮೇತ ಬಂದು ರಥೋತ್ಸವದಲ್ಲಿ ಭಾಗವಹಿಸುವುದು ಇಂದಿಗೂ ಮುಂದುವರೆದಿದೆ, ಅಲ್ಲದೆ ಬಕ್ಕೇಶ್ವರರ ಭಕ್ತ ಪರಂಪರೆಯವರು ಹೊರ ರಾಜ್ಯ ಹೊರ ದೇಶಗಳಲ್ಲಿ ನೆಲೆಸಿದ ಅನೇಕರು ಸಹಾ ಈ ರಥೋತ್ಸವದಲ್ಲಿ ಭಾಗವಹಿಸಲು ಬರುತ್ತಾರೆ.

ಶತಮಾನದಷ್ಟು ಹಳೆಯದಾದ ಪ್ರಾಚೀನ ರಥವು ಶಿಥಿಲಾವಸ್ಥೆ ಹೊಂದುತ್ತಿದೆ ಎಂದು ವಿಶೇಷವಾಗಿ ಸಾಂಪ್ರದಾಯಿಕವಾದ ನೂತನ ರಥವನ್ನು ನಿರ್ಮಿಸಲಾಗಿದ್ದು ಇದೇ ಮಾರ್ಚ್ 23 ಸೋಮವಾರ ಸಂಜೆ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿಯವರ ಮಹಾ ರಥೋತ್ಸವ ನೆರವೇರಿತ್ತಿದ್ದು ಇದು ದಾವಣಗೆರೆ ವ್ಯಾಪಾರೋದ್ಯಮದ ಹೃದಯ ಭಾಗದಂತಿರುವ ರಾಜಬೀದಿ ಚೌಕಿಪೇಟೆಯಲ್ಲಿ ನೆರವೇರುವ ಏಕೈಕ ಮಹಾ ರಥೋತ್ಸವವಾಗಿವೆ. ಮಹಾ ರಥೋತ್ಸವದ ಹಿಂದಿನ ದಿನ ಸ್ವಾಮಿಯ ಗಜವಾಹನೋತ್ಸವವು, ಮಹಾ ರಥೋತ್ಸವದ ಮಾರನೆಯ ದಿನ ನಂದಿವಾಹನೋತ್ಸವವು ಸಹಾ ನೆರವೇರುತ್ತದೆ. ಸ್ವಾಮಿಯ ಮಹಾರಥೋತ್ಸವವಂತೂ
ಪಾರಂಪರಿಕ ಭಕ್ತಿ ಶ್ರದ್ಧಾದಿಗಳಿಂದ ಕೂಡಿ ವೈಭವೋಪೇತವಾಗಿ ನೆರವೇರುವುದನ್ನು ವೀಕ್ಷಿಸುವ ಸದವಕಾಶ ಯಾರೂ
ತಪ್ಪಿಸಿಕೊಳ್ಳಬಾರದು.

-ಡಾ. ಎಚ್. ಬಿ. ಮಂಜುನಾಥ, ಹಿರಿಯ ಪತ್ರಕರ್ತರು-

KFD ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮಂಗನ ಕಾಯಿಲೆಗೆ ಈ ವರ್ಷಎರಡನೇ ಬಲಿ.

0

KFD ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತಟ್ಟಿಕೇವಿಯಲ್ಲಿ ಮಂಗನ ಕಾಯಿಲೆಗೆ ಈ ವರ್ಷ ಎರಡನೇ ಸಾವಾಗಿದೆ.

ಅರಳಸುರುಳಿ ಸಮೀಪದ ತಟ್ಟಿಕೇವಿ ಗ್ರಾಮದ ಮಹಿಳೆ ಗುಲಾಬಿ ಶೆಟ್ಟಿ ( 60) ಮಣಿಪಾಲ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ರೋಗ
ಉಲ್ಬಣಗೊಂಡ ಸ್ಥಿತಿಯಲ್ಲಿ ಮಂಗಳವಾರ ಸರ್ಕಾರಿ ಜೆಸಿ ಆಸ್ಪತ್ರೆಗೆ ದಾಖಲಾಗಿದ್ದರು.
ಹೆಚ್ಚಿನ ಚಿಕಿತ್ಸೆಗಾಗಿ ಅದೇ ದಿನ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ
ಫಲಕಾರಿಯಾಗದೆ ಕಳೆದ ಗುರುವಾರ ಸಾವನ್ನಪ್ಪಿದ್ದಾರೆ.
ಕಿಡ್ನಿ ಸಮಸ್ಯೆ ಕೂಡ ಇತ್ತು ಎಂದು
ಹೇಳಲಾಗಿದೆ. ಈ ಮೊದಲು ಕಟಗಾರು ಆಸ್ಪತ್ರೆ ವ್ಯಾಪ್ತಿಯ ಹೊನ್ನೇಕೇರಿಯ ಯುವಕ ಕೆಎಫ್‌ಡಿ ಸೋಂಕಿನಿಂದ ಸಾವನಪ್ಪಿದ್ದರು.

ತಾಲೂಕಿನಲ್ಲಿ 29 ಪ್ರಕರಣ ದಾಖಲಾಗಿದ್ದು,
ಜನವರಿಯಿಂದ ಈವರೆಗೆ ಇಬ್ಬರು ಮೃತರಾಗಿದ್ದಾರೆ.

KFD ಪ್ರಸ್ತುತ ಸರ್ಕಾರಿ ಜೆಸಿ ಆಸ್ಪತ್ರೆಯಲ್ಲಿ
5 ಮತ್ತು ಮಣಿಪಾಲ ಆಸ್ಪತ್ರೆಯಲ್ಲಿ 3 ಜನರು ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ
ಎಂದು ತಾಲೂಕು ವೈದ್ಯಾಧಿಕಾರಿ ಡಾ. ಅನಿಕೇತನ್‌ ತಿಳಿಸಿದ್ದಾರೆ.

ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಯಲ್ಲಿ 5
ರೋಗಿಗಳಿದ್ದು, ಗುಣಮುಖರಾಗಿ ಮನೆಗೆ ಹೋಗಿದ್ದ ಇಬ್ಬರು ಮತ್ತೆ ಜ್ವರ ಮರುಕಳಿಸಿದ
ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.