Wednesday, March 18, 2026
Wednesday, March 18, 2026
Home Blog Page 1500

ವಿವಿಧ ನಿಗಮಗಳ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

0

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಡಿಯಲ್ಲಿ ಬರುವ ವಿವಿಧ ನಿಗಮಗಳ ವತಿಯಿಂದ 2022-23 ನೇ ಸಾಲಿಗೆ ನಿಗಮವಾರು ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

ಜುಲೈ 20 ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು ಆಗಸ್ಟ್ 20 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ. ಆಸಕ್ತ ಅರ್ಹ ಫಲಾಪೇಕ್ಷಿಗಳು ನಿಗಮವಾರು ವೆಬ್‍ಸೈಟ್‍ಗಳಾದ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ www.adcl.karnataka.gov.in,, ಕರ್ನಾಟಕ ಆದಿಜಾಂಬವ ಅಭಿವೃದ್ದಿ ನಿಗಮ www.adijambava.karnataka.gov.in, ಕರ್ನಾಟಕ ತಾಂಡ ಅಭಿವೃದ್ದಿ ನಿಗಮ www.banjarathanda.kar.nic.in, ಕರ್ನಾಟಕ ಭೋವಿ ಅಭಿವೃದ್ದಿ ನಿಗಮ www.kbdc.karnataka.gov.in, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮ www.ksskdc.kar.nic.in ಇಲ್ಲಿ ಅರ್ಜಿಯನ್ನು ಡೌನ್‍ಲೋಡ್ ಮಾಡಿಕೊಂಡು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ರಂಗನಾಥ ನಿಲಯ, ಗಾಂಧಿನಗರ, 6ನೇ ತಿರುವು, ‘ಎ’ ಬ್ಲಾಕ್, ಶಿವಮೊಗ್ಗ, ದೂ.ಸಂ: 08182-224349 ನ್ನು ಸಂಪರ್ಕಿಸಬಹುದೆಂದು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

ಉಪರಾಷ್ಟ್ರಪತಿ ಹುದ್ದೆಗೆ ಚುನಾವಣಾ ಅಭ್ಯರ್ಥಿ ಮಾರ್ಗರೇಟ್ ಆಳ್ವ ನಾಮಪತ್ರ ಸಲ್ಲಿಕೆ

0

14ನೇ ಉಪರಾಷ್ಟ್ರಪತಿ ಹುದ್ದೆಗೆ ಆಕಾಂಕ್ಷಿಯಾಗಿ ಮಾರ್ಗರೆಟ್ ಆಳ್ವಾ ಇಂದು ವಿಪಕ್ಷಗಳ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮಾರ್ಗರೇಟ್ ಆಳ್ವ ಅವರನ್ನು ವಿರೋಧ ಪಕ್ಷದ ಜಂಟಿ ಅಭ್ಯರ್ಥಿಯಾಗಿದ್ದು, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಘೋಷಿಸಿದ್ದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಶಿವಸೇನೆ ನಾಯಕ ಸಂಜಯ್ ರಾವುತ್ ಮತ್ತು ಇತರ ವಿರೋಧ ಪಕ್ಷದ ನಾಯಕರು ಉಪಸ್ಥಿತರಿದ್ದರು.

ಪ್ಯಾಕ್ ಮಾಡದ ವಸ್ತುಗಳಿಗೆ ಜಿಎಸ್ ಟಿ ಇಲ್ಲ- ವಿತ್ತಸಚಿವೆ

0

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಜಿಎಸ್‌ಟಿಯಿಂದ ವಿನಾಯಿತಿ ಪಡೆದ ಆಹಾರ ಪದಾರ್ಥಗಳ ಪಟ್ಟಿಯನ್ನು ನೀಡಿದ್ದಾರೆ.
ಯಾವುದೇ ವಸ್ತುಗಳನ್ನು ಪ್ಯಾಕೆಟ್‌ ಮಾಡದೇ ಮಾರಾಟ ಮಾಡಿದರೆ ಅದಕ್ಕೆ ಜಿಎಸ್ಟಿ ಅನ್ವಯವಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಇವುಗಳಲ್ಲಿ ಬೇಳೆಕಾಳುಗಳು/ದಾಲ್, ಗೋಧಿ, ಓಟ್ಸ್, ಮೆಕ್ಕೆಜೋಳ, ಅಕ್ಕಿ, ಆಟಾ/ಹಿಟ್ಟು, ರವಾ, ಬೇಸನ್, ಉರಿಯಕ್ಕಿ ಮತ್ತು ಮೊಸರು/ಲಸ್ಸಿ ಮುಂತಾದ ಪದಾರ್ಥಗಳು ಸೇರಿವೆ.

ಇಂತಹ ಆಹಾರ ಪದಾರ್ಥಗಳ ಮೇಲೆ ತೆರಿಗೆ ವಿಧಿಸುತ್ತಿರುವುದು ಇದೇ ಮೊದಲಲ್ಲ ಎಂದು ಅವರು ಹೇಳಿದರು. ‘ಜಿಎಸ್‌ಟಿ ಪೂರ್ವದ ಆಡಳಿತದಲ್ಲಿ ರಾಜ್ಯಗಳು ಆಹಾರಧಾನ್ಯದಿಂದ ಗಮನಾರ್ಹ ಆದಾಯವನ್ನು ಸಂಗ್ರಹಿಸುತ್ತಿದ್ದವು. ಪಂಜಾಬ್ ಒಂದರಲ್ಲೇ ಖರೀದಿ ತೆರಿಗೆಯ ಮೂಲಕ ಆಹಾರ ಧಾನ್ಯದ ಮೇಲೆ 2,000 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಯುಪಿ 700 ಕೋಟಿ ಸಂಗ್ರಹಿಸಿದೆ ಎಂದು ಅವರು ಹೇಳಿದರು.

ಇತ್ತೀಚೆಗೆ ಜಾರಿಗೆ ಬಂದ ಜಿಎಸ್‌ಟಿಯ ಹೊಸ ದರಗಳ ಕುರಿತು ಸಚಿವರು ಸರಣಿ ಟ್ವೀಟ್‌ಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಜಿಎಸ್‌ಟಿ ದರಗಳು ಮತ್ತು ಬೆಲೆ ಏರಿಕೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆ ಲೋಕಸಭೆಯ ಕಲಾಪವನ್ನು ಮಂಗಳವಾರ ಮುಂದೂಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ನಿರ್ಮಲಾ ಸೀತಾರಾಮನ್ ಅವರು ತಮ್ಮ ಟ್ವೀಟ್‌ಗಳಲ್ಲಿ ಆಹಾರ ಪದಾರ್ಥಗಳ ಮೇಲೆ ಶೇಕಡಾ 5 ರಷ್ಟು ಜಿಎಸ್‌ಟಿ ವಿಧಿಸಿರುವುದನ್ನು ಸಮರ್ಥಿಸಿಕೊಂಡರು ಮತ್ತು ಜಿಎಸ್‌ಟಿ ಕೌನ್ಸಿಲ್ ಈ ನಿರ್ಧಾರವನ್ನು ಸರ್ವಾನುಮತದಿಂದ ತೆಗೆದುಕೊಂಡಿದೆ ಮತ್ತು ಜೂನ್‌ನಲ್ಲಿ ದರ ತರ್ಕಬದ್ಧಗೊಳಿಸುವಿಕೆಯ ಕುರಿತು ಸಚಿವರ ಗುಂಪು ಈ ವಿಷಯವನ್ನು ಮಂಡಿಸಿದಾಗ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು ಎಂದು ಅವರು ಹೇಳಿದರು.

ಉಕ್ರೇನ್ ವಿರುದ್ಧ ಸಮರ: ರಷ್ಯಕ್ಕೆ ಬೆಂಬಲ ನೀಡಿದ ಇರಾನ್?

0

ಉಕ್ರೇನ್​ ಮೇಲೆ ದಾಳಿ ಮುಂದುವರೆದ ಮಧ್ಯೆಯೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಇರಾನ್​ ಪ್ರವಾಸ ಕೈಗೊಂಡಿದ್ದಾರೆ.
ಇದು ಯುದ್ಧಾರಂಭವಾದ ಬಳಿಕ ಪುಟಿನ್​ ಕೈಗೊಂಡ ಮೊದಲ ವಿದೇಶ ಪ್ರವಾಸವಾಗಿದೆ.

ಫೆಬ್ರವರಿ 24 ರಂದು ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಘೋಷಿಸಿದ ಬಳಿಕ ಸೋವಿಯತ್ ಒಕ್ಕೂಟದ ಹೊರ ರಾಷ್ಟ್ರಗಳಿಗೆ ಅಧ್ಯಕ್ಷ ಪುಟಿನ್​ ಭೇಟಿ ನೀಡಿರಲಿಲ್ಲ. ಇರಾನ್​ಗೆ ಭೇಟಿ ನೀಡುವ ಮೂಲಕ ಉಭಯ ರಾಷ್ಟ್ರಗಳ ನಡುವಿನ ಸಹಕಾರದ ಬಗ್ಗೆ ಚರ್ಚಿಸಿದರು.
ಇರಾನ್​ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಜೊತೆಗಿನ ಮಾತುಕತೆಯ ವೇಳೆ ಉಕ್ರೇನ್​ ಮೇಲಿನ ದಾಳಿಗೆ ಬೆಂಬಲ ನೀಡುವಂತೆ ಪುಟಿನ್​ ಕೋರಿದ್ದಾರೆ ಎಂದು ತಿಳಿದು ಬಂದಿದೆ.

ಇರಾನ್​ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರೊಂದಿಗೆ ಮಾತುಕತೆ ನಡೆಸಿದರು.ಅಲ್ಲದೇ ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧಗಳ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.

ಉಕ್ರೇನ್​ ಮೇಲಿನ ರಷ್ಯಾದ ಮಿಲಿಟರಿ ಕಾರ್ಯಾಚರಣೆಗೆ ಇರಾನ್‌ನಿಂದ ಬಲವಾದ ಬೆಂಬಲ ವ್ಯಕ್ತವಾಗಿದೆ. ಸ್ವತಂತ್ರ ಮತ್ತು ಬಲಿಷ್ಠ ರಷ್ಯಾವನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ವಿರೋಧಿಸುತ್ತಿವೆ. ಉಕ್ರೇನ್‌ಗೆ ಮೇಲೆ ರಷ್ಯಾ ಹಿಡಿತ ಸಾಧಿಸದಿದ್ದರೆ, ನ್ಯಾಟೋ ಪಡೆಗಳೇ ಆ ದೇಶದ ಮೇಲೆ ದಾಳಿ ಮಾಡುತ್ತಿದ್ದವು ಎಂದು ಅಲಿ ಖಮೇನಿ ಹೇಳಿದ್ದಾರೆ.

ಯುದ್ಧ ಘೋಷಣೆ ವ್ಲಾಡಿಮಿರ್​ ಪುಟಿನ್ ಅವರ ಗಟ್ಟಿ ನಿರ್ಧಾರವಾಗಿದೆ. ರಷ್ಯಾ ಮತ್ತು ಇರಾನ್​ ನಡುವಿನ ನಿಕಟ ಸಂಬಂಧ ಮುಂದುವರಿಯುತ್ತದೆ ಎಂದೂ ಹೇಳಿದ್ದಾರೆ.
ಉಕ್ರೇನ್ ದಾಳಿ ಬಳಿಕ ರಷ್ಯಾಧ್ಯಕ್ಷರ ಆರೋಗ್ಯದ ಬಗ್ಗೆ ಹಲವು ಊಹಾಪೋಹಗಳು ಹರಿದಾಡಿದ್ದವು. ಕ್ಯಾನ್ಸರ್​, ಚರ್ಮ ಸಂಬಂಧಿ ರೋಗದಿಂದ ಪುಟಿನ್ ಬಳಲುತ್ತಿದ್ದಾರೆ ಎಂದೆಲ್ಲಾ ಹೇಳಲಾಗಿತ್ತು

ರಷ್ಯಾ ದಿಗ್ಬಂಧನದಿಂದಉಕ್ರೇನ್ ಜನಕ್ಕೆ ಹಸಿವಿನ ಬಳಲಿಕೆ

0

ಉಕ್ರೇನ್‌ನ ಬಂದರುಗಳಿಗೆ ರಷ್ಯಾದ ದಿಗ್ಬಂಧನವು ಹಸಿವಿನಿಂದ ಬಳಲುತ್ತಿರುವ ಸಾವಿರಾರು ಜನರಿಗೆ ಧಾನ್ಯ ಪೂರೈಕೆಗೆ ಬೆದರಿಕೆ ಒಡ್ಡಿದೆ ಎಂದು ಯುರೋಪಿಯನ್ ಯೂನಿಯನ್ ವಿದೇಶಿ ಕಾರ್ಯನೀತಿ ವಿಭಾಗದ ಮುಖ್ಯಸ್ಥ ಜೋಸೆಫ್ ಬೊರೆಲ್ ಅವರು ಎಚ್ಚರಿಸಿದ್ದಾರೆ.

ಇದು ಹಲವರಿಗೆ ಬದುಕು ಮತ್ತು ಸಾವಿನ ವಿಷಯವಾಗಿದೆ. ರಷ್ಯಾ ದಿಗ್ಬಂಧನ ತೆರವುಗೊಳಿಸಿ ಉಕ್ರೇನ್‌ನ ಧಾನ್ಯ ರಫ್ತಿಗೆ ಅವಕಾಶ ಮಾಡಿಕೊಡಬೇಕು ಎಂದು ಸುದ್ಧಿಗೋಷ್ಟಿಯಲ್ಲಿ ಬೊರೆಲ್ ಅವರು ಆಗ್ರಹಿಸಿದ್ದಾರೆ.

ಉಕ್ರೇನ್‌ನ ಬಂದರಿನ ಮೇಲಿನ ದಿಗ್ಬಂಧನವನ್ನು ಅಂತ್ಯಗೊಳಿಸುವ ಒಪ್ಪಂದ ರೂಪಿಸುವ ನಿಟ್ಟಿನಲ್ಲಿ ರಷ್ಯಾ ಮತ್ತು ಉಕ್ರೇನ್ ಸಂಧಾನಕಾರರು ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ವಿಶ್ವಸಂಸ್ಥೆ ಮತ್ತು ಟರ್ಕಿಯ ನಿಯೋಗದ ಜತೆ ಬುಧವಾರ ಮಾತುಕತೆ ನಡೆಸಲಿದ್ದಾರೆ. ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿದ ನಂತರ ರಷ್ಯಾವು ಉಕ್ರೇನ್‌ನ ಪ್ರಮುಖ ಆಹಾರಧಾನ್ಯ ರಫ್ತಿನ ಕೇಂದ್ರವಾಗಿರುವ ಒಡೆಸಾ ಬಂದರು ಸಹಿತ ಕಪ್ಪುಸಮುದ್ರದ ಹಲವು ಬಂದರುಗಳನ್ನು ವಶಪಡಿಸಿಕೊಂಡು ಆಹಾರ ಧಾನ್ಯದ ರಫ್ತಿಗೆ ತಡೆಯೊಡ್ಡಿದೆ.

ರಷ್ಯಾದ ಆಕ್ರಮಣವನ್ನು ತಡೆಯಲು ತನ್ನ ಕೆಲವು ಬಂದರುಗಳ ಮಾರ್ಗವನ್ನು ಉಕ್ರೇನ್ ತಡೆಹಿಡಿದಿದೆ. ವಿಶ್ವದ ಧಾನ್ಯದ ಬಾಸ್ಕೆಟ್ ಎಂದು ಕರೆಸಿಕೊಳ್ಳುವ ಉಕ್ರೇನ್ ವಿಶ್ವಕ್ಕೆ , ಅದರಲ್ಲೂ ಮುಖ್ಯವಾಗಿ ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ದೇಶಗಳಿಗೆ ಪ್ರಮುಖ ಧಾನ್ಯ ಪೂರೈಕೆದಾರನಾಗಿದೆ. ವಿಶ್ವದ ಹಲವು ದೇಶಗಳಲ್ಲಿ ಆಹಾರದ ಕೊರತೆಯಿರುವುದು ಆತಂಕಕಾರಿ ವಿಷಯವಾಗಿದೆ ಮತ್ತು ಉಕ್ರೇನ್‌ನಿಂದ ಆಹಾರ ರಫ್ತಿಗೆ ರಷ್ಯಾ ತಡೆಯೊಡ್ಡಿರುವುದು ಆಹಾರದ ಕೊರತೆಗೆ ಕಾರಣವಾಗಿದೆ ಎಂದು ಬೊರೆಲ್ ಅವರು ಹೇಳಿದ್ದಾರೆ.

ರಷ್ಯಾದ ಆಕ್ರಮಣವನ್ನು ವಿರೋಧಿಸಿ ವಿಧಿಸಲಾಗಿರುವ ನಿರ್ಬಂಧದಲ್ಲಿ ಇರುವ ಲೋಪದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ನಡೆಯಲಿರುವ ಯುರೋಪಿಯನ್ ಯೂನಿಯನ್ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಬೊರೆಲ್ ಬ್ರಸೆಲ್ಸ್‌ಗೆ ಆಗಮಿಸಿದ್ದಾರೆ. ಉಕ್ರೇನ್ ಬಂದರಿನಲ್ಲಿರುವ ತಡೆ ನಿವಾರಣೆಯ ಬಗ್ಗೆ ಈ ವಾರದಲ್ಲಿ ಟರ್ಕಿಯಲ್ಲಿ ನಡೆಯುವ ಸಭೆಯಲ್ಲಿ ಒಪ್ಪಂದಕ್ಕೆ ಬರುವ ನಿರೀಕ್ಷೆಯಿದೆ. ಇದು ಸಾವಿರಕ್ಕೂ ಅಧಿಕ ಜನರ ಬದುಕಿನ ಪ್ರಶ್ನೆಯಾಗಿದೆ. ಇದು ರಾಜತಾಂತ್ರಿಕ ಮೇಲಾಟದ ವಿಷಯವಲ್ಲ ಎಂದು ಬೊರೆಲ್ ಅವರು ಹೇಳಿದ್ದಾರೆ.

ಭದ್ರಾ ಡ್ಯಾಂ ಸೇತುವೆ ಸುರಕ್ಷತೆ ಜರೂರಾಗಬೇಕಿದೆ

0

ಶಿವಮೊಗ್ಗ ಜಿಲ್ಲೆಯ ಭದ್ರಾ ಡ್ಯಾಂ ಗರಿಷ್ಠ ಮಟ್ಟ ತಲುಪಿದೆ. ಕಳೆದ ಹಲವು ದಿನಗಳಿಂದ ನೀರು ಹೊರ ಬಿಡಲಾಗುತ್ತಿದೆ. ಜಲರಾಶಿ ಸೊಬಗು ಕಣ್ತುಂಬಿಕೊಳ್ಳಲು ನೂರಾರು ಪ್ರವಾಸಿಗರು ಆಗಮಸಿತ್ತಿದ್ದಾರೆ. ಆದರೆ ಡ್ಯಾಂ ನೀರಿನ ರಭಸಕ್ಕೆ ಸಮೀಪದಲ್ಲಿ ಭೂ ಕುಸಿತ ಉಂಟಾಗಿದೆ. ತಡೆಗೋಡೆ ಕುಸಿದು ಬಿದ್ದಿದೆ.ದಿನದಿಂದ ದಿನಕ್ಕೆ ಭೂ ಕುಸಿತ ಹೆಚ್ಚಾಗುತ್ತಿದೆ. ಅಪಾಯಕಾರಿ ಸ್ಥಿತಿಯಲ್ಲಿದೆ. ಆದರೆ ಇಲ್ಲಿಯವರೆಗೂ ಸೂಕ್ತ ದುರಸ್ತಿ ಕಾಮಗಾರಿಯಾಗಲಿ, ಮುನ್ನೆಚ್ಚರಿಕೆ ಕ್ರಮವಾಗಲಿ ಕೈಗೊಂಡಿಲ್ಲ. ಪೊಲೀಸ್ ಇಲಾಖೆಯ ಬ್ಯಾರಿಕೇಡ್ ಕೂಡ ಕುಸಿದು ನದಿಗೆ ಬಿದ್ದಿದೆ ಎಂದು ಪ್ರವಾಸಿಗರು ದೂರಿದ್ದಾರೆ. ಡ್ಯಾಂನಿಂದ ನೀರು ಹೊರಬಿಟ್ಟಿರುವ ಕಾರಣದಿಂದ ಭಾರೀ ಸಂಖ್ಯೆಯ ಪ್ರವಾಸಿಗರು ಡ್ಯಾಂ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ತಡೆಗೋಡೆ ಕುಸಿತವಾಗಿರುವ ಸ್ಥಳದ ಬಳಿಯೇ ಓಡಾಡುತ್ತಿದ್ದಾರೆ. ಕೊಂಚ ಹೆಚ್ಚಾ ಕಮ್ಮಿಯಾದರೂ ನದಿಗೆ ನಾಗರೀಕರು ನದಿಗೆ ಬೀಳುವ ಸಾಧ್ಯತೆಯಿದೆ. ತಕ್ಷಣವೇ ಭದ್ರಾ ಜಲಾಶಯ ಆಡಳಿತ ದುರಸ್ತಿ ಕಾರ್ಯ ನಡೆಸಬೇಕು. ಜೊತೆಗೆ ಸ್ಥಳದಲ್ಲಿ ಪ್ರವಾಸಿಗರ ಸಂಚಾರ ನಿರ್ಬಂಧಿಸಿ, ಸೂಕ್ತ ಬ್ಯಾರಿಕೇಡ್ ಮುನ್ನೆಚ್ಚರಿಕೆ ಫಲಕ ಹಾಕಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸಿದ್ಧರಾಮಯ್ಯ ಅವರ ಆಡಳಿತವೇ ಭ್ರಷ್ಡಾಚಾರದ‌ ಕೂಪವಾಗಿತ್ತು

0

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತಾಡುವಾಗ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

2023ರ ವಿಧಾನ ಸಭಾ ಚುನಾವಣೆ ತನ್ನ ಕೊನೆಯ ಚುನಾವಣೆ ಎಂದಿರುವ ಸಿದ್ದರಾಮಯ್ಯ ರಾಜ್ಯದಲ್ಲಿರುವ ಭ್ರಷ್ಟ ಸರ್ಕಾರವನ್ನು ಸೋಲಿಸಲು ಸ್ಪರ್ಧಿಸುತ್ತಿರುವುದಾಗಿ ಹೇಳಿದ್ದಾರೆ. 2016 ರಲ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಪಿಎಸ್ ಐ ನೇಮಕಾತಿಯಲ್ಲಿ ಹಗರಣ ನಡೆದಿತ್ತು, ಅವರ ಅಧಿಕಾರಾವಧಿ ಭಷ್ಟಾಚಾರದ ಕೂಪವಾಗಿತ್ತು ಎಂದು ಕುಮಾರಸ್ವಾಮಿ ಹೇಳಿದರು.

ಕೇರಳದಲ್ಲಿ ಎರಡನೇ ಮಂಕಿಪಾಕ್ಸ್ ಪ್ರಕರಣಪತ್ತೆ

0

ಕೇರಳದಲ್ಲಿ 2ನೇ ಮಂಕಿಪಾಕ್ಸ್ ಪ್ರಕರಣ ದೃಢಪಟ್ಟಿದೆ. ಈ ಮೂಲಕ ಭಾರತದ 2ನೇ ಮಂಕಿಪಾಕ್ಸ್ ಪ್ರಕರಣ ಖಚಿತಪಟ್ಟಂತಾಗಿದೆ. ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯಲ್ಲಿ ದೇಶದ ಮಂಕಿಪಾಕ್ಸ್ 2ನೇ ಪ್ರಕರಣ ದಾಖಲಾಗಿದೆ. ಈ ಮುನ್ನವೂ ಕೇರಳದಲ್ಲಿಯೇ ಮೊದಲ ಪ್ರಕರಣ ಪತ್ತೆಯಾಗಿತ್ತು. ಮಂಕಿಪಾಕ್ಸ್ ಹರಡುವಿಕೆಯನ್ನು ತಡೆಗಟ್ಟಲು ಎಲ್ಲಾ ಅಂತರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇಡಲು ಕೇಂದ್ರ ಸೂಚಿಸಿದೆ.

ಇದಲ್ಲದೇ ಬಂದರು ಮತ್ತು ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟಾದ ಆರೋಗ್ಯ ತಪಾಸಣೆ ಮಾಡಲು ಸಹ ಸೂಚಿಸಿದೆ. ಕೇಂದ್ರವು ಬಂದರು ಗಳು ಮತ್ತು ವಿಮಾನ ನಿಲ್ದಾಣಗಳಿಗೆ ಸೂಚಿಸಿದೆ. ಕಟ್ಟುನಿಟ್ಟಿನ ಕ್ರಮ ವಹಿಸುವ ಬಗ್ಗೆ ಸಂಜೆ ವಿಮಾನ ನಿಲ್ದಾಣ ಮತ್ತು ಬಂದರು ಆರೋಗ್ಯ ಅಧಿಕಾರಿಗಳು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಪ್ರಾದೇಶಿಕ ಕಚೇರಿಗಳ ಪ್ರಾದೇಶಿಕ ನಿರ್ದೇಶಕರು ಸಭೆ ನಡೆಸಿದ್ದಾರೆ.

ದೇಶಕ್ಕೆ ಮಂಕಿಪಾಕ್ಸ್ ಪ್ರಕರಣ ಹೆಚ್ಚಿಸುವ ಅಪಾಯವನ್ನು ಕಡಿಮೆ ಮಾಡಲು ಎಲ್ಲಾ ಅಂತರರಾಷ್ಟ್ರೀಯ ಪ್ರಯಾಣಿಕರ ಕಟ್ಟುನಿಟ್ಟಾದ ಆರೋಗ್ಯ ತಪಾಸಣೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸಲಹೆ ನೀಡಲಾಯಿತು. ಮಂಕಿಪಾಕ್ಸ್ ನಿರ್ವಹಣೆಯ ಮಾರ್ಗಸೂಚಿಗಳ ಪ್ರಕಾರ ಮಂಗನ ಕಾಯಿಲೆಯ ವೈದ್ಯಕೀಯ ಪ್ರಸ್ತುತಿಯಲ್ಲಿ ಅಧಿಕಾರಿಗಳಿಗೆ ಸಲಹೆ ನೀಡಲಾಯಿತು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಆರೋಗ್ಯ ತಪಾಸಣೆ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಅಂತರಾಷ್ಟ್ರೀಯ ಬಂದರುಗಳು ಮತ್ತು ವಿಮಾನ ನಿಲ್ದಾಣಗಳಲ್ಲಿನ ವಲಸೆಯಂತಹ ಇತರ ಮಧ್ಯಸ್ಥಗಾರರ ಏಜೆನ್ಸಿಗಳೊಂದಿಗೆ ಸಮನ್ವಯಗೊಳಿಸಲು ಕೇಂದ್ರ ಸಲಹೆ ನೀಡಿದೆ.

ಏಕಾಏಕಿ ಜಾಗತಿಕ ಆರೋಗ್ಯ ತುರ್ತುಸ್ಥಿತಿಯಾಗಿದೆಯೇ ಎಂದು ನಿರ್ಧರಿಸಲು ಜುಲೈ 21 ರಂದು ತನ್ನ ಪರಿಣಿತ ಮಂಕಿಪಾಕ್ಸ್ ಸಮಿತಿಯನ್ನು ಮರುಸಂಘಟಿಸುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಲಭ್ಯವಿರುವ ಅಂಕಅಂಶಗಳ ಪ್ರಕಾರ, ಇಲ್ಲಿಯವರೆಗೆ ಬಾಧಿತವಾಗಿರುವ ಬಹುತೇಕ ಎಲ್ಲಾ ರೋಗಿಗಳು ಪುರುಷರಾಗಿದ್ದಾರೆ. ಸರಾಸರಿ ವಯಸ್ಸು 37 ಅಗಿದೆ. ಐದನೇ ಮೂರು ಭಾಗದಷ್ಟು ಜನರು ಪುರುಷರೊಂದಿಗೆ ಸಂಭೋಗಿಸುವ ಪುರುಷರು ಎಂದು ಗೊತ್ತಾಗಿದೆ ಎಂದು WHO ಹೇಳಿದೆ.

ಮುನ್ನಡೆ ಕಾಯ್ದುಕೊಂಡ ರಿಷಿ ಸುನಕ್

0

ಬ್ರಿಟನ್ ಪ್ರಧಾನಿ ರೇಸ್‍ನಲ್ಲಿ ರಿಷಿ ಸುನಕ್ ಮುನ್ನಡೆ ಮುಂದುವರೆದಿದ್ದು, ಮೂರನೇ ಸುತ್ತಿನಲ್ಲಿ 115 ಮತಗಳನ್ನು ಗಳಿಸುವ ಮೂಲಕ ಅಗ್ರ ಸ್ಥಾನದಲ್ಲಿದ್ದಾರೆ. ಕಳೆದ ವಾರದಿಂದ ಆರಂಭವಾಗಿರುವ ಮತದಾನ ಪ್ರಕ್ರಿಯೆಯಲ್ಲಿ 42 ವರ್ಷದ ಸುನಕ್ ಸತತವಾಗಿ ನಂ 1ಸ್ಥಾನದಲ್ಲಿದ್ದಾರೆ ಈಗ ಸ್ಪರ್ಧೆ ಕುತೂಹಲ ಘಟಕ್ಕೆ ಬರಲಿದ್ದು ಈಗ ಕೇವಲ ನಾಲ್ಕು ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು ಇಬ್ಬರು ಅಂತಿಮ ಹಂತಕ್ಕೆ ಬರಲಿದ್ದಾರೆ.

ಟೋರಿ ಬ್ಯಾಕ್ಬೆಂಚರ್ ಮತ್ತು ಹೌಸ್ ಆಫ್ ಕಾಮನ್ಸ ವಿದೇಶಾಂಗ ವ್ಯವಹಾರಗಳ ಸಮಿತಿ ಅಧ್ಯಕ್ಷ ಟಾಮ್ ತುಗೆಂಧತ್ ಅವರು ಕನಿಷ್ಠ ಮತಗಳಿಸಿ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.
ನಾಲ್ಕನೇ ಸುತ್ತಿನ ಮತದಾನವು ಇಂದು ನಡೆಯಲಿದ್ದು,ಗುರುವಾರದ ವೇಳೆಗೆ ಕೇವಲ ಇಬ್ಬರು ಅಭ್ಯರ್ಥಿಗಳ ಅಂತಿಮ ಪಟ್ಟಿ ಬಹಿರಂಗಗೊಳ್ಳಲಿದೆ.

ಮೂರನೇ ಸುತ್ತಿನ ಮತದಾನದಲ್ಲಿ ಸಚಿವ ಪೆನ್ನಿ ಮೊರ್ಡಾಂಟ್ 82 ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ 71 ಮತಗಳೊಂದಿಗೆ ಮತ್ತು ಮಾಜಿ ಸಚಿವ ಕೆಮಿ ಬಡೆನೋಚ್ 58 ಮತಗಳನ್ನು ಗಳಿಸಿದ್ದಾರೆ.

ಮ್ಯಾಜಿಕ್ ಸಂಖ್ಯೆಯನ್ನು 120 ಈಗಾಗಲೆ ಸನಕ್ ಹತ್ತಿರದಲ್ಲಿದ್ದಾರೆ 2ನೆ ಅಭ್ಯರ್ಥಿಯ ಸ್ಥಾನ ಪೈಪೋಟಿ ನಡೆಯಲಿದೆ.

ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಉದ್ಯೋಗಾವಕಾಶ

0

ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಖಾಲಿ ಇರುವ 104 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಮಸಾಜ್​ ಥೆರಪಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಎಸ್​ಎಸ್​ಎಲ್​ಸಿ ರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಕೇಂದ್ರ ಸರ್ಕಾರದ ಈ ಉದ್ಯೋಗದಲ್ಲಿ ಕಾರ್ಯ ನಿರ್ವಹಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​ 6 ಆಗಿದ್ದು, ಅಭ್ಯರ್ಥಿಗಳು ಅರ್ಜಿಯನ್ನು ಆನ್​ಲೈನ್​ ಮೂಲಕ ಸಲ್ಲಿಸಬಹುದಾಗಿದೆ.

ಈ ಹುದ್ದೆಗಳನ್ನು ನಿರ್ಧಿಷ್ಟ ಸಮಯಕ್ಕೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಸಲಾಗುತ್ತಿದೆ. ಈಗಾಗಲೇ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಮಸಾಜ್ ಥೆರಪಿಸ್ಟ್​ ಆಗಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳು ಈ ಹುದ್ದೆಗೆ ಹೊಸದಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಆಯ್ಕೆಗೊಂಡ ಅಭ್ಯರ್ಥಿಗಳು ಭಾರತೀಯ ಕ್ರೀಡಾ ಪ್ರಾಧಿಕಾರ ಹಲವು ರಾಜ್ಯಗಳಲ್ಲಿ ಹೊಂದಿರುವ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.

ಭಾರತೀಯ ಕ್ರೀಡಾ ಪ್ರಾಧಿಕಾರ ಹುದ್ದೆ: ಮಸಾಜ್ ಥೆರಪಿಸ್ಟ್
ಹುದ್ದೆಗಳ ಸಂಖ್ಯೆ: 104
ಉದ್ಯೋಗ ಸ್ಥಳ: ದೇಶದೆಲ್ಲೆಡೆ
ವೇತನ: 35000ರೂ. ಪ್ರತಿ ತಿಂಗಳು

ಶೈಕ್ಷಣಿಕ ಅರ್ಹತೆ: ಭಾರತೀಯ ಕ್ರೀಡಾ ಪ್ರಾಧಿಕಾರದ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಯಾವುದೇ ಬೋರ್ಡ್‌ಗಳು ಅಥವಾ ವಿಶ್ವವಿದ್ಯಾಲಯಗಳಿಂದ 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.

ಮಸಾಜ್ ಥೆರಪಿಯಲ್ಲಿ ನಿರ್ಧಿಷ್ಟ ಸರ್ಟಿಫಿಕೇಟ್​ ಕೋರ್ಸ್​ ಅಥವಾ ಮಾಸಾಜ್​ ಥೆರಪಿಯಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.

ಅನುಭವದ ವಿವರಗಳು:
ಅಭ್ಯರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಕೆಲಸದ ಅನುಭವವನ್ನು ಹೊಂದಿರಬೇಕು.

ವಯೋಮಿತಿ: ಭಾರತೀಯ ಕ್ರೀಡಾ ಪ್ರಾಧಿಕಾರದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 35 ವರ್ಷಗಳು ಮೀರಿರಬಾರದು.

ವಯೋಮಿತಿ ಸಡಿಲಿಕೆ:
ಭಾರತೀಯ ಕ್ರೀಡಾ ಪ್ರಾಧಿಕಾರದ ನಿಯಮಗಳ ಪ್ರಕಾರ
ಆಯ್ಕೆ ಪ್ರಕ್ರಿಯೆ
ಅರ್ಹತೆ, ಅನುಭವ, ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನ

ಅರ್ಜಿ ಸಲ್ಲಿಕೆ : ಇಮೇಲ್​ ಮುಖಾಂತರ

ಇಮೇಲ್​ ವಿಳಾಸ: recruitment.massagetherapist@gmail.com

ಪ್ರಮುಖ ದಿನಾಂಕಗಳು:
ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 15 ಜುಲೈ 2022
ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: 06 ಆಗಸ್ಟ್ 2022