Wednesday, March 18, 2026
Wednesday, March 18, 2026
Home Blog Page 1497

75 ನೇ ಸ್ವಾತಂತ್ರ್ಯೋತ್ಸವ: ಮನೆಮನೆಯಲ್ಲಿ ಭಾರತ ಬಾವುಟ ಹಾರಿಸಿ- ಮೋದಿ

0

75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರದ ಜನರಿಗೆ ಕರೆ ನೀಡಿದ್ದಾರೆ.

ಹರ್‌ ಘರ್‌ ತಿರಂಗ ಆಂದೋಲನವನ್ನು ಬಲಪಡಿಸಲು ಆಗಸ್ಟ್‌ 13ರಿಂದ 15ರ ನಡುವೆ ರಾಷ್ಟ್ರಧ್ವಜವನ್ನು ಮನೆಯಲ್ಲಿ ಆರೋಹಣ ಅಥವಾ ಪ್ರದರ್ಶನ ಮಾಡಬೇಕು ಎಂದು ಮೋದೀಜಿ ಅವರು ಹೇಳಿದ್ದಾರೆ.

ಸರಣಿ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ ಅವರು, ಈ ಆಂದೋಲನವು ನಮ್ಮ ತ್ರಿವರ್ಣ ಧ್ವಜದ ಜೊತೆಗಿನ ಬಾಂಧವ್ಯವನ್ನು ವೃದ್ಧಿಸುತ್ತದೆ. 1947ರ ಜುಲೈ 22ರಂದು ರಾಷ್ಟ್ರ ಧ್ವಜವನ್ನು ಅಂಗೀಕರಿಸಲಾಯಿತು ಎಂದು ಸ್ಮರಿಸಿದ್ದಾರೆ.

ಸ್ವತಂತ್ರ ಭಾರತದ ಧ್ವಜದ ಕನಸು ಕಂಡ ಎಲ್ಲರ ಪ್ರಯತ್ನದ ಮತ್ತು ಶೌರ್ಯದ ಸ್ಮರಣೆಯನ್ನು ನಾವಿಂದು ಮಾಡುತ್ತಿದ್ದೇವೆ. ಅವರ ಕನಸಿನಂತೆ ರಾಷ್ಟ್ರವನ್ನು ಸದೃಢವಾಗಿಸಲು ಬದ್ಧರಾಗಿದ್ದೇವೆ ಎಂದು ಮೋದಿ ಅವರು ತಿಳಿಸಿದ್ದಾರೆ.

ನಾವು ಈ ವರ್ಷ ಆಜಾದಿ ಕಾ ಅಮೃತ ಮಹೋತ್ಸವ ವನ್ನು ಆಚರಿಸುತ್ತಿದ್ದೇವೆ. ಹರ್‌ ಘರ್‌ ತಿರಂಗ ಆಂದೋಲನವನ್ನು ಪ್ರಬಲಗೊಳಿಸೋಣ. ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಆಗಸ್ಟ್‌ 13 ಮತ್ತು 15ರ ನಡುವೆ ಆರೋಹಣ ಅಥವಾ ಪ್ರದರ್ಶನ ಮಾಡೋಣ. ಈ ಆಂದೋಲನವು ರಾಷ್ಟ್ರ ಧ್ವಜದೊಂದಿಗಿರುವ ನಮ್ಮ ಬಾಂಧವ್ಯವನ್ನು ಮತ್ತಷ್ಟು ಆಳವಾಗಿಸುತ್ತದೆ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಜಿಲ್ಲಾ ಸಮಾರಂಭಕ್ಕೆ ಸಚಿವರ ನಿಯೋಜನೆ

0

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಗಸ್ಟ್ 15ರಂದು ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ(ಬೆಂಗಳೂರು ನಗರ ಜಿಲ್ಲೆಯನ್ನು ಹೊರತುಪಡಿಸಿ) ಧ್ವಜಾರೋಹಣವನ್ನು ನೆರವೇರಿಸಲು ಸಚಿವರು ಹಾಗೂ ಜಿಲ್ಲಾಧಿಕಾರಿಗಳನ್ನು ನೇಮಿಸಲಾಗಿದೆ.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ-ಬೆಳಗಾವಿ,
ಸಾರಿಗೆ ಸಚಿವ ಬಿ.ಶ್ರೀರಾಮುಲು-ಬಳ್ಳಾರಿ, ವಸತಿ ಸಚಿವ ವಿ.ಸೋಮಣ್ಣ-ಚಾಮರಾಜನಗರ, ಅರಣ್ಯ ಸಚಿವ ಉಮೇಶ್ ಕತ್ತಿ-ವಿಜಯಪುರ, ಮೀನುಗಾರಿಕೆ ಸಚಿವ ಎಸ್.ಅಂಗಾರ-ಉಡುಪಿ, ಗೃಹ ಸಚಿವ ಆರಗ ಜ್ಞಾನೇಂದ್ರ-ತುಮಕೂರು, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ-ರಾಮನಗರ.
ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್-ಬಾಗಲಕೋಟೆ, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್-ಕೊಪ್ಪಳ, ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ-ಉತ್ತರ ಕನ್ನಡ,

ಪಶುಸಂಗೋಪನೆ ಸಚಿವ ಪ್ರಭು ಚೌವಾಣ್-ಯಾದಗಿರಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ-ಕಲಬುರಗಿ, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್-ಹಾವೇರಿ.
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್-ಮೈಸೂರು, ಕೃಷಿ ಸಚಿವ ಬಿ.ಸಿ.ಪಾಟೀಲ್-ಚಿತ್ರದುರ್ಗ, ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ(ಬೈರತಿ)-ದಾವಣಗೆರೆ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್-ಬೆಂಗಳೂರು ಗ್ರಾಮಾಂತರ, ಅಬಕಾರಿ ಸಚಿವ ಕೆ.ಗೋಪಾಲಯ್ಯ-ಹಾಸನ, ಮುಜುರಾಯಿ ಸಚಿವೆ ಶಶಿಕಲಾ ಜೊಲ್ಲೆ-ವಿಜಯನಗರ, ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜು-ಚಿಕ್ಕಬಳ್ಳಾಪುರ.

ರೇಶ್ಮೆ ಸಚಿವ ಡಾ.ನಾರಾಯಣಗೌಡ-ಶಿವಮೊಗ್ಗ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್-ಕೊಡಗು, ಇಂಧನ ಸಚಿವ ವಿ.ಸುನೀಲ್ ಕುಮಾರ್-ದಕ್ಷಿಣ ಕನ್ನಡ, ಗಣಿ ಸಚಿವ ಆಚಾರ್ ಹಾಲಪ್ಪ-ಧಾರವಾಡ, ಜವಳಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ-ರಾಯಚೂರು, ತೋಟಗಾರಿಕೆ ಸಚಿವ ಮುನಿರತ್ನ-ಕೋಲಾರ ಜಿಲ್ಲಾ ಕೇಂದ್ರದಲ್ಲಿ ಧ್ವಜಾರೋಹಣ ನೆರವೇರಿಸಲು ನೇಮಿಸಲಾಗಿದೆ.
ಗದಗ, ಮಂಡ್ಯ, ಬೀದರ್ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಧ್ವಜಾರೋಹಣ ನೆರವೇರಿಸಲು ನೇಮಿಸಲಾಗಿದೆ.

ಅನಾರೋಗ್ಯ ಅಥವಾ ಇತರೆ ಕಾರಣಗಳಿಂದಾಗಿ ಸಚಿವರು ಧ್ವಜಾರೋಹಣ ಕಾರ್ಯಕ್ರಮಕ್ಕೆ ಅನುಪಸ್ಥಿತರಿದ್ದಲ್ಲಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಧ್ವಜಾರೋಹಣ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ರಾಷ್ಡ್ರಪತಿ ಕೋವಿಂದ್ ಬೀಳ್ಕೊಡುಗೆ ಸಮಾರಂಭಕ್ಕೆ ಬೊಮ್ಮಾಯಿ ಉಪಸ್ಥಿತಿ

0

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಅಧಿಕಾರಾವಧಿ ಜುಲೈ 24ಕ್ಕೆ ಮುಗಿಯಲಿದೆ.
ಜುಲೈ 25ರಂದು ನೂತನ ರಾಷ್ಟ್ರಪತಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹೀಗಾಗಿ, ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ನಾಳೆ ದೆಹಲಿಯ ಖಾಸಗಿ ಹೋಟೆಲ್​ನಲ್ಲಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿದೆ.

ಈ ಔತಣಕೂಟದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಪಾಲ್ಗೊಳ್ಳಲಿದ್ದಾರೆ.
ರಾಷ್ಟ್ರಪತಿಯಾಗಿ ರಾಮನಾಥ್ ಕೋವಿಂದ್ ಅವರ ಅಧಿಕಾರವಧಿ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಔತಣಕೂಟ ಏರ್ಪಡಿಸಿದ್ದಾರೆ.

ಶುಕ್ರವಾರ ರಾತ್ರಿ 8 ಗಂಟೆಗೆ ಖಾಸಗಿ ಹೋಟೆಲ್​​ನಲ್ಲಿ ಔತಣಕೂಟ ಏರ್ಪಡಿಸಲಾಗಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಕೂಡ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ. ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿರುವ ಕರ್ನಾಟಕ ಭವನದಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ರಾಜ್ಯದಲ್ಲಿ 480 ನಮ್ಮ ಕ್ಲಿನಿಕ್ ಪ್ರಾರಂಭ-ಡಾ.ಸುಧಾಕರ್

0

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ 480 ನಮ್ಮ ಕ್ಲಿನಿಕ್ ಪ್ರಾರಂಭಿಸಲಾಗುತ್ತದೆ ಎಂದು ಆರೋಗ್ಯ ಮತ್ತು ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ.

ನಿಮ್ಹಾನ್ಸ್ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಿದುಳು ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಮಹಿಳೆಯರಿಗೆ ವಿಶೇಷ ಕ್ಲಿನಿಕ್ ಸ್ಥಾಪಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ 243 ವಾರ್ಡ್‍ಗಳಲ್ಲೂ ನಮ್ಮ ಕ್ಲಿನಿಕ್ ಪ್ರಾರಂಭಿಸಲಾಗುತ್ತದೆ. ರಾಜ್ಯದ ಪ್ರತಿಯೊಬ್ಬರಿಗೂ ನೇತ್ರ ತಪಾಸಣೆ ಕೈಗೊಂಡು ಅಗತ್ಯವಿದ್ದರೆ ಉಚಿತ ಕನ್ನಡಕ ನೀಡಲಾಗುತ್ತದೆ. ಕಣ್ಣಿನ ಪರೆಯ ಶಸ್ತ್ರ ಚಿಕಿತ್ಸೆಯನ್ನು ಸಹ ಮಾಡಲಾಗುತ್ತದೆ. ಆರೋಗ್ಯ ಸೇವೆಯನ್ನು ಸರ್ಕಾರ ಮೂಲಭೂತ ಹಕ್ಕು ಎಂದು ಭಾವಿಸಿದೆ. ಶ್ರೇಷ್ಠ ಚಿಕಿತ್ಸೆ ಹಾಗೂ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ಡಾ. ಕೆ. ಸುಧಾಕರ್ ಅವರು ತಿಳಿಸಿದ್ದಾರೆ.

ರಾಜ್ಯದ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತ ಕಾರ್ಯಕ್ರಮವನ್ನು ಮೆಚ್ಚಿ ಕೇಂದ್ರ ಸರ್ಕಾರ ಇಡೀ ದೇಶಕ್ಕೆ ವಿಸ್ತರಣೆ ಮಾಡುವ ಘೋಷಣೆ ಮಾಡಿದೆ. ಕ್ರಿಕೆಟ್‍ಪಟು ರಾಬಿನ್ ಉತ್ತಪ್ಪ ಅವರು ಮಾನಸಿಕ ಆರೋಗ್ಯ ಕಾರ್ಯಕ್ರಮದ ರಾಯಭಾರಿಯಾಗಿದ್ದಾರೆ. ಜಯನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೊದಲ ಬ್ರೈನ್ ಹೆಲ್ತ್ ಕ್ಲಿನಿಕ್‍ನ್ನು ಉದ್ಘಾಟನೆ ಮಾಡಲಾಗಿದೆ.

ಮಾನಸಿಕ ರೋಗಿಗಳಿಗೆ ಆರಂಭಿಕ ಚಿಕಿತ್ಸೆ ನೀಡುವ ಬಗ್ಗೆ ನಿಮ್ಹಾನ್ಸ್‍ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂರು ವೈದ್ಯರಿಗೆ ತರಬೇತಿ ನೀಡಲಾಗಿದೆ. ಮಾನಸಿಕ ರೋಗಕ್ಕೆ ಸಂಬಂಧಿಸಿದಂತೆ ಎಲ್ಲರೂ ನಿಮ್ಹಾನ್ಸ್‍ಗೆ ಬರುವ ಅಗತ್ಯವಿಲ್ಲ. ಆರಂಭಿಕ ಹಂತದಲ್ಲಿ ತರಬೇತಿ ಪಡೆದಂತಹ ಈ ವೈದ್ಯರ ಬಳಿ ಚಿಕಿತ್ಸೆ ಪಡೆಯಬಹುದು. 3ನೇ ಹಂತದ ಅಥವಾ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಮಾತ್ರ ನಿಮ್ಹಾನ್ಸ್‍ಗೆ ಬರಬೇಕಾಗುತ್ತದೆ ಎಂದು ಹೇಳಿದ್ದಾರೆ.

ಖಾಸಗಿ ಆಯಂಬುಲೆನ್ಸ್‍ಗಳ ದರ ಪರಿಷ್ಕರಣೆಯನ್ನು ಸಾರಿಗೆ ಇಲಾಖೆ ಮಾಡುತ್ತದೆ. ರೋಗಿ ಹಾಗೂ ಅವರ ಸಂಬಂಧಿಕರಿಗೆ ದುಬಾರಿ ದರ ವಿಧಿಸುತ್ತಿರುವ ಬಗ್ಗೆ ಸಾರಿಗೆ ಸಚಿವರೊಂದಿಗೆ ಚರ್ಚಿಸಲಾಗುತ್ತದೆ. ಬೇಕಾಬಿಟ್ಟಿ ದರ ವಿಧಿಸುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದ ಅವರು, ಸರ್ಕಾರಿ ಆಯಂಬುಲೆನ್ಸ್‍ಗಳ ಸೇವೆ ಉಚಿತವಾಗಿ ದೊರೆಯುತ್ತಿದೆ ಎಂದು ತಿಳಿಸಿದ್ದಾರೆ.

ನಗರಪ್ರದೇಶಗಳಲ್ಲಿ ಕೊರೋನಾ ಪಾಸಿಟಿವ್ ಪ್ರಮಾಣ ಹೆಚ್ಚಾಗುತ್ತಿದೆ. ಆದರೂ ಆತಂಕಪಡುವ ಅಗತ್ಯವಿಲ್ಲ. ಈ ವ್ಯಾಧಿ ಅಷ್ಟೊಂದು ತೀವ್ರವಾಗಿ ಉಲ್ಭಣವಾಗುತ್ತಿಲ್ಲ. ರೋಗಕ್ಕೆ ಸಂಬಂಧಿಸಿದ ಮಾದರಿಗಳನ್ನು ಕಳುಹಿಸಿ ಅಲ್ಲಿ ವಿಶೇಷ ತಳಿ ರೂಪಾಂತರಗೊಂಡಿರುವ ಬಗ್ಗೆ ಮಾಹಿತಿ ದೊರೆತರೆ ಮುಂದಿನ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಡಾ. ಕೆ. ಸುಧಾಕರ್ ಅವರು ತಿಳಿಸಿದ್ದಾರೆ.

ಐ ಹ್ಯಾವ್ ಕ್ಯಾನ್ಸರ್ ಜೋ ಬೈಡನ್ ಹೇಳಿಕೆ ಆತಂಕ ಸೃಷ್ಟಿ

0

ಸೋಮರ್ಸೆಟ್‍ನಲ್ಲಿರುವ ಹಿಂದಿನ ಕಲ್ಲಿದ್ದಲು ಗಣಿ ಸ್ಥಾವರಕ್ಕೆ ಭೇಟಿ ನೀಡಿದ್ದ ಸಂದರ್ಭ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ನೀಡಿದ ಭಾಷಣದ ವೇಳೆ ʼಐ ಹ್ಯಾವ್ ಕ್ಯಾನ್ಸರ್’ (ನನಗೆ ಕ್ಯಾನ್ಸರ್ ಇದೆ) ಎಂಬ ಮಾತನ್ನು ಹೇಳಿಕೊಂಡಿದ್ದರು. ಇದು ಸಾಕಷ್ಟು ಸಂಚಲನದ ಜೊತೆಗೆ ಆತಂಕವನ್ನೂ ಸೃಷ್ಟಿಸಿತ್ತು.

ಕೊನೆಗೆ ಶ್ವೇತಭವನ ಸ್ಪಷ್ಟೀಕರಣ ನೀಡಿ, ಅಧ್ಯಕ್ಷರು ತಾವು ಅಧ್ಯಕ್ಷ ಹುದ್ದೆ ಏರುವ ಮುನ್ನ ಕಳೆದ ವರ್ಷ ಒಳಗಾಗಿದ್ದ ಚರ್ಮದ ಕ್ಯಾನ್ಸರ್ ಚಿಕಿತ್ಸೆ ಕುರಿತು ಮಾತನಾಡಿದ್ದರು ಎಂದು ಹೇಳಿದೆ.

ನನ್ನ ತಾಯಿ ನಮ್ಮನ್ನು ನಡೆಸಿಕೊಂಡು ಹೋಗುವ ಬದಲು ಕಾರಿನಲ್ಲಿ ಕರೆದೊಯ್ದಿದ್ದರು. ಏನಾಯಿತು ಗೊತ್ತೇ? ಕಾರಿನ ಗಾಜಿನಲ್ಲಿ ತೈಲದ ಅಂಶಗಳಿಂದಾಗಿ ನಾವು ವಿಂಡ್‍ಶೀಲ್ಡ್ ವೈಪರ್‍ಗಳನ್ನು ಬಳಸಬೇಕಾಯಿತು. ಅದರಿಂದಾಗಿಯೇ ನಾನು, ಮತ್ತು ನಾನು ಜೊತೆಯಾಗಿ ಬೆಳೆದ ಹಲವರಿಗೆ ಕ್ಯಾನ್ಸರ್ ಇದೆ. ಡೆಲವೇರ್ ದೇಶದಲ್ಲಿಯೇ ಗರಿಷ್ಠ ಕ್ಯಾನ್ಸರ್ ಪ್ರಕರಣಗಳನ್ನು ಹೊಂದಿದೆ ಎಂದು ಅವರು ಹೇಳಿದ್ದರು.

ಐಟಿ ಬಿಟಿಯ ನಾವೀನ್ಯತಾ ಸೂಚ್ಯಂಕ: ರಾಜ್ಯಕ್ಕೆಪ್ರಥಮ ಸ್ಥಾನ

0

ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವವೇ ಗುರುತಿಸುವಂತಹ ಸಾಧನೆ ಮಾಡಿರುವ ಕರ್ನಾಟಕ ನಾವೀನ್ಯತೆಯಲ್ಲಿ ದೇಶದ ಇತರೆ ಎಲ್ಲ ರಾಜ್ಯಗಳಿಗಿಂತ ಮುಂಚೂಣಿಯಲ್ಲಿದೆ. ನೀತಿ ಆಯೋಗ ಬಿಡುಗಡೆ ಮಾಡಿರುವ ಮೂರನೇ ವರ್ಷದ ಭಾರತೀಯ ನಾವೀನ್ಯತಾ ಸೂಚ್ಯಂಕದಲ್ಲಿ ಮೂರನೇ ವರ್ಷವೂ ಕರ್ನಾಟಕ ದೇಶದಲ್ಲೇ ನಂ.1 ಸ್ಥಾನ ಪಡೆದುಕೊಂಡು ಗಮನ ಸೆಳೆದಿದೆ.

ರಾಜ್ಯಗಳ ಮಟ್ಟದಲ್ಲಿ ಇರುವ ನಾವೀನ್ಯತಾ ಸಾಮರ್ಥ್ಯ ಹಾಗೂ ಪೂರಕ ವಾತಾವರಣವನ್ನು ಪರಿಶೀಲಿಸಿ ನೀತಿ ಆಯೋಗ ಈ ರ್ಯಾಂಕಿಂಗ್‌ ಪಟ್ಟಿಯನ್ನು ಸಿದ್ಧಪಡಿಸಿದೆ. 17 ದೊಡ್ಡ ರಾಜ್ಯಗಳು’, 10 ಈಶಾನ್ಯ, ಗುಡ್ಡಗಾಡು ರಾಜ್ಯಗಳು’ ಹಾಗೂ ‘9 ಕೇಂದ್ರಾಡಳಿತ ಪ್ರದೇಶಗಳು ಹಾಗೂ ನಗರ ರಾಜ್ಯಗಳು’ ಎಂಬ ವಿಭಾಗದಲ್ಲಿ ಈ ಪಟ್ಟಿಯನ್ನು ತಯಾರಿಸಲಾಗಿದೆ.

ಜಾಗತಿಕ ನಾವೀನ್ಯತಾ ಸೂಚ್ಯಂಕದ ರೀತಿಯೇ ಈ ಪಟ್ಟಿ ಇದ್ದು, ದೊಡ್ಡ ರಾಜ್ಯಗಳ ವಿಭಾಗದಲ್ಲಿ ಕರ್ನಾಟಕ 3ನೇ ವರ್ಷವೂ ಪ್ರಥಮ ಸ್ಥಾನ ಬಾಚಿಕೊಂಡಿದೆ.

ನಾವೀನ್ಯತಾ ಸೂಚ್ಯಂಕವನ್ನು ನೀತಿ ಆಯೋಗದ ಉಪಾಧ್ಯಕ್ಷ ಸುಮನ್‌ ಬೇರಿ ಅವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್ವರನ್‌ ಅಯ್ಯರ್‌ ಸಮ್ಮುಖದಲ್ಲಿ ಗುರುವಾರ ಬಿಡುಗಡೆ ಮಾಡಿದರು. ಈಶಾನ್ಯ ರಾಜ್ಯಗಳ ವಿಭಾಗದಲ್ಲಿ ಮಣಿಪುರ, ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ಚಂಡೀಗಢ ಪ್ರಥಮ ಸ್ಥಾನಗಳಿಸಿವೆ.

ಕರ್ನಾಟಕ 18.01 ಅಂಕ ಗಳಿಸಿ ಪ್ರಥಮ ಸ್ಥಾನದಲ್ಲಿದ್ದರೆ, ತೆಲಂಗಾಣ ಹಾಗೂ ಹರ್ಯಾಣ ನಂತರದ ಸ್ಥಾನದಲ್ಲಿವೆ. 10.97 ಅಂಕಗಳೊಂದಿಗೆ ಛತ್ತೀಸ್‌ಗಢ ಕೊನೆಯ ಸ್ಥಾನದಲ್ಲಿದೆ. ಈ ವಿಭಾಗದ ಸರಾಸರಿ ಅಂಕ 14.02 ಆಗಿದೆ. ವಿದೇಶಿ ನೇರ ಹೂಡಿಕೆ ಆಕರ್ಷಿಸುವಲ್ಲಿ ಅತ್ಯುತ್ಕೃಷ್ಟ ಸಾಧನೆ ತೋರಿರುವುದು ಹಾಗೂ ಬೃಹತ್‌ ಪ್ರಮಾಣದ ವೆಂಚರ್‌ ಕ್ಯಾಪಿಟಲ್‌ ಒಪ್ಪಂದಗಳು ಆಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಮೂರನೇ ವರ್ಷವೂ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪಾಕ್ ಸರ್ಕಾರ ಆರ್ಥಿಕ ಬಿಕ್ಕಟ್ಟು ನಿರ್ವಹಣೆಯಲ್ಲಿ ವಿಫಲ- ಇಮ್ರಾನ್

0

ಪಾಕಿಸ್ತಾನದಲ್ಲಿ ತಲೆದೋರಿರುವ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆರೋಪಿಸಿದ್ದಾರೆ.

ಏಪ್ರಿಲ್‌ನಲ್ಲಿ ಅಮೆರಿಕನ್ ಡಾಲರ್ ಎದುರು ಪಾಕಿಸ್ತಾನಿ ರೂಪಾಯಿ ಮೌಲ್ಯ 178 ರೂ. ಇತ್ತು. ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಒಪ್ಪಂದದ ಹೊರತಾಗಿಯೂ ಈಗ ಮೌಲ್ಯ 224 ರೂ.ಗೆ ಕುಸಿದಿದೆ. ಇದು ಶರೀಫ್ ಕುಟುಂಬವು ಲೂಟಿ, ಅಕ್ರಮ ಹಣ ವರ್ಗಾವಣೆ ನಡೆಸುತ್ತದೆ ಎಂಬುದನ್ನು ತೋರಿಸುತ್ತದೆ ಎಂದು ಆರೋಪಿಸಿದರು.

ಪ್ರಧಾನಿ ಶೆಹಬಾಜ್‌ ಷರೀಫ್‌ ವಿರುದ್ಧ ವಾಗ್ದಾಳಿ ನಡೆಸಿರುವ ತೆಹ್ರಿಕ್‌-ಇ-ಇನ್ಸಾಫ್‌ ಪಕ್ಷದ ಅಧ್ಯಕ್ಷರೂ ಆಗಿರುವ ಇಮ್ರಾನ್ ಖಾನ್, ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸಲು ಪ್ರಧಾನಿ ಸಮರ್ಥರಲ್ಲ ಎಂದು ದೂರಿದ್ದಾರೆ.

ಇದಕ್ಕೆಲ್ಲ ಆಡಳಿತವನ್ನು ಬದಲಿಸಿ ಪಾಕಿಸ್ತಾನವನ್ನು ಈ ದುಸ್ಥಿತಿಗೆ ತಲುಪಿಸಿದ ಎಲ್ಲರೂ ಹೊಣೆಗಾರರು ಎಂದು ಹೇಳಿದರು.

ಕಳೆದೆರಡು ದಿನಗಳಲ್ಲಿ ಡಾಲರ್ ಎದುರಿಗೆ ಪಾಕಿಸ್ತಾನಿ ರೂಪಾಯಿ ಭಾರಿ ಕುಸಿತವನ್ನು ಕಂಡಿದೆ. ಇನ್ನೊಂದೆಡೆ ಪಾಕಿಸ್ತಾನದ ಷೇರು ಮಾರುಕಟ್ಟೆ ವಹಿವಾಟಿನಲ್ಲಿ 1,500ಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡಿದೆ.

ರಾಷ್ಟ್ರಪತಿ ಚುನಾವಣೆ ಮತ ಎಣಿಕೆ: ಭಾರೀ ಮುನ್ನಡೆಯಲ್ಲಿ ದ್ರೌಪದಿ ಮುರ್ಮು

0

ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಮೊದಲ ಸುತ್ತಿನಲ್ಲೇ ವಿರೋಧ ಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ಅವರಿಗಿಂತ ಮುನ್ನಡೆ ಸಾಧಿಸಿದ್ದಾರೆ.

ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಚುನಾವಣೆಯಲ್ಲಿ 3.78 ಲಕ್ಷ ಮತಗಳನ್ನು ಗಳಿಸಿದರೆ, ಪ್ರತಿಸ್ಪರ್ಧಿ ಯಶವಂತ್ ಸಿನ್ಹಾ ಅವರು 1.45 ಲಕ್ಷ ಮತಗಳನ್ನು ಪಡೆದು ಹಿನ್ನಡೆ ಅನುಭವಿಸಿದ್ದಾರೆ. ಒಟ್ಟು 15 ಮತಗಳು ಅಸಿಂಧುವಾಗಿವೆ ಎಂದು ತಿಳಿದುಬಂದಿದೆ.

ಮೊದಲ ಸುತ್ತಿನ ಮತ ಎಣಿಕೆಯಲ್ಲಿ ದ್ರೌಪದಿ ಮುರ್ಮು ಮುನ್ನಡೆ ಸಾಧಿಸುತ್ತಿದ್ದಂತೆ, ಎನ್‌ಡಿಎ ಅಧ್ಯಕ್ಷೀಯ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಪತಿ ಶ್ಯಾಮ್ ಚರಣ್ ಮುರ್ಮು ನಿಧನದ ನಂತರ ಪತಿ ಹಾಗೂ ಇಬ್ಬರು ಪುತ್ರರ ಸ್ಮರಣಾರ್ಥ ಸ್ಥಾಪಿಸಿದ ಪಹಾದ್‌ಪುರದ ಎಸ್‌ಎಲ್‌ಎಸ್ ಸ್ಮಾರಕ ವಸತಿ ಶಾಲೆಯಲ್ಲಿ ಸಂಭ್ರಮಾಚರಣೆ ಪ್ರಾರಂಭವಾಗಿದೆ.

ಮುರ್ಮು ಅವರು 4 ವರ್ಷಗಳ ಅವಧಿಯಲ್ಲಿ ಪತಿ ಮತ್ತು ಇಬ್ಬರು ಪುತ್ರರನ್ನು ಕಳೆದುಕೊಂಡಿದ್ದರು

ವರದಕ್ಷಿಣೆ ಕಾಯಿದೆಯನ್ನು ಪತಿ ವಿರುದ್ಧ ಆಯುಧವಾಗಿ ಬಳಸುವುದು ಕ್ರೌರ್ಯ

0

ಪತ್ನಿ ಅಥವಾ ಆಕೆಯ ಸಂಬಂಧಿಕರಿಂದ ವರದಕ್ಷಿಣೆ ಕಿರುಕುಳವನ್ನು ಆಯುಧವಾಗಿ ಬಳಸುವುದು ಪತಿ ಮತ್ತು ಅತ್ತೆ-ಮಾವಂದಿರ ಮೇಲಿನ ಕ್ರೌರ್ಯ ಎಂದು ಛತ್ತೀಸ್ಗಢ ಹೈಕೋರ್ಟ್ ತೀರ್ಪಿ ನೀಡಿದೆ.

ಇಂತಹ ಪ್ರಸಂಗದಲ್ಲಿ ವೈವಾಹಿಕ ಸಂಬಂಧವು ಮುರಿದುಬಿದ್ದ ನಂತರ ಸೇರಿಸಲು ಸಾಧ್ಯವಿಲ್ಲ. ಎರಡು ಕುಟುಂಬಗಳ ನಡುವಿನ ವೈಷಮ್ಯವು ಹೊರಹೊಮ್ಮುತ್ತದೆ. ಅರ್ಜಿದಾರ ವೈದ್ಯರಿಗೆ ಪರಿಹಾರ ನೀಡುವಾಗ ಹೈಕೋರ್ಟ್ ವಿಚ್ಛೇದನಕ್ಕೆ ಆದೇಶಿಸಿದೆ. ತನ್ನ ಶಿಕ್ಷಕ ಪತ್ನಿಗೆ ಜೀವನಾಂಶವಾಗಿ ಪ್ರತಿ ತಿಂಗಳು 15,000 ರೂಪಾಯಿಗಳನ್ನು ಪಾವತಿಸುವಂತೆ ನ್ಯಾಯಾಲಯವು ಅರ್ಜಿದಾರರಿಗೆ ನಿರ್ದೇಶಿಸಿದೆ.

ಸುರ್ಗುಜಾ ಜಿಲ್ಲೆಯ ಚಾಂದನಿ ಪೊಲೀಸ್ ಠಾಣೆ ಪ್ರದೇಶದ ನಿವಾಸಿಯಾದ ಮಹಿಳೆ 1993 ರಲ್ಲಿ ಡಾ.ರಾಮ್ಕೇಶ್ವರ್ ಸಿಂಗ್ ಅವರನ್ನು ವಿವಾಹವಾದರು.
ಮಹಿಳೆ ಕೊರ್ಬಾ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾಳೆ. ಡಾ. ರಾಮಕೇಶ್ವರ್ ಅವರನ್ನು ಕೊಂಡಗಾಂವ್ ನ ಮರ್ದಪಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿಯೋಜಿಸಲಾಗಿದೆ.

ಮದುವೆಯಾದ ಒಂದು ವರ್ಷದ ನಂತರ, ಪರಸ್ಪರ ಭಿನ್ನಾಭಿಪ್ರಾಯದಿಂದಾಗಿ, ಗಂಡ ಮತ್ತು ಹೆಂಡತಿಯ ನಡುವೆ ವಿವಾದ ಉಂಟಾಯಿತು ಮತ್ತು ಇಬ್ಬರೂ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು.

ಮೂರು ವರ್ಷಗಳ ನಂತರ, ಡಾ. ಸಿಂಗ್ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದರು. ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನದ ಬಗ್ಗೆ ವೈದ್ಯರ ಪತಿಗೆ ತಿಳಿದ ತಕ್ಷಣ, ಪತ್ನಿ ತನ್ನ ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳದ ಬಗ್ಗೆ ಚಾಂದನಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಮೊರಾರ್ಜಿ ಶಾಲೆಗಳನ್ನು ಪಿಯುಸಿ ವರೆಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ

0

ರಾಜ್ಯದ ಬಡ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಮೊರಾರ್ಜಿ ವಸತಿ ನಿಲಯ ಸೇರಿದಂತೆ ಹಲವು ವಸತಿ ನಿಲಯಗಳನ್ನು ಪಿಯುಸಿವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡ ವಿದ್ಯಾರ್ಥಿಗಳು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೊರಾರ್ಜಿ ಶಾಲೆಗಳು ಉತ್ತಮ ವೇದಿಕೆಯಾಗಿವೆ. 6 ನೇ ತರಗತಿಯಿಂದ ಪಿಯುಸಿವರೆಗೂ ಒಂದೇ ಸ್ಥಳದಲ್ಲಿ ವಿದ್ಯಾಭ್ಯಾಸ ದೊರೆಯುವಂತಾಗಬೇಕು ಎಂಬುದು ನಮ್ಮ ಆಶಯವಾಗಿದೆ.

ಹೀಗಾಗಿ ಮೊರಾರ್ಜಿ ಶಾಲೆಗಳನ್ನು ಪಿಯುಸಿವರೆಗೆ ವಿಸ್ತರಿಸುವ ಕುರಿತಂತೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.