Friday, March 20, 2026
Friday, March 20, 2026
Home Blog Page 1465

ಕೋರೋನ ರೋಗಿಗಳಿಂದ ಪಡೆದ ಹೆಚ್ಚುವರಿ ಫೀಸು ವಾಪಸ್ ಕೊಡಿ

0

ಕೊರೋನಾ ರೋಗಿಗಳಿಂದ ಹೆಚ್ಚುವರಿ ಹಣ ವಸೂಲಿ ಮಾಡಿದ್ದ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ನೀಡಲಾಗಿದೆ. ರೋಗಿಗಳಿಂದ ಪಡೆದ ಹಣ ಮರಳಿ ನೀಡುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕೊರೋನಾ ರೋಗಿಗಳಿಂದ ಹೆಚ್ಚುವರಿ ಹಣ ಪಡೆದ ರಾಜ್ಯದ 577 ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನೋಟಿಸ್ ಜಾರಿ ಮಾಡಲಾಗಿದೆ. ಈ ಕುರಿತು ಸಾರ್ವಜನಿಕರಿಂದ ಇಲಾಖೆಗೆ ಬಂದ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಿದ ಇಲಾಖೆ ಆ ನಿಟ್ಟಿನಲ್ಲಿ ನೋಟಿಸ್ ಜಾರಿಗೊಳಿಸಿ ಇಲಾಖೆ ಕ್ರಮ ಕೈಗೊಂಡಿದೆ.

ಈ ಬಗ್ಗೆ ದೂರುಗಳು ಸಲ್ಲಿಕೆಯಾದ ನಂತರ ಅಗತ್ಯ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಚಿವ ಡಾ. ಕೆ. ಸುಧಾಕರ್ ಅವರು ಸೂಚಿಸಿದ್ದರು.

ಅದರಂತೆ ಇಲಾಖೆಯು ಕೊರೋನಾ ರೋಗಿಗಳಿಂದ ಶುಲ್ಕ ಪಡೆಯುವುದರ ಜೊತೆಗೆ, ಸರ್ಕಾರದಿಂದಲೂ ಹಣ ಪಡೆದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ವಹಿಸಲಾಗಿದೆ.

ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ಮೂಲಕ ಸ್ಪಷ್ಟ ಎಚ್ಚರಿಕೆ ನೀಡಲಾಗಿದೆ. 577 ಆಸ್ಪತ್ರೆಗಳು 403 ರೋಗಿಗಳ ಕುಟುಂಬಗಳಿಗೆ 1,58,22,359 ರೂ. ಹಣವನ್ನು ಮರಳಿ ನೀಡಬೇಕು ಎಂದು ಈಗಾಗಲೇ ತಿಳಿಸಿದೆ.

ಈ ಕುರಿತು ಮಾತನಾಡಿರುವ ಸಚಿವ ಸುಧಾಕರ್, ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆಯಡಿ ರೆಫರಲ್ ಆಧಾರದಲ್ಲಿ ಕೊರೋನಾ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಹಿಂದೆಯೇ ಕ್ರಮ ವಹಿಸಲಾಗಿತ್ತು. ಕೊರೋನಾ ರೋಗಿಗಳ ಕುಟುಂಬಕ್ಕೆ ನೆರವಾಗುವ ಸದುದ್ದೇಶದಿಂದ ಸರ್ಕಾರ ಈ ಪ್ರಯೋಜನವನ್ನು ನೀಡುತ್ತಿದೆ ಎಂದು ತಿಳಿಸಿದ್ದಾರೆ.

ಅತ್ಯಾಚಾರಿಗಳಿಗೆ ಬಿಡುಗಡೆ ಮಾಡಬೇಡಿ:ರಾಷ್ಟ್ರಪತಿಗೆ ಪತ್ರ ಮೂಲಕ ಮನವಿ

0

11 ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿರುವ ಗುಜರಾತ್‌ ಸರ್ಕಾರದ ನಿರ್ಧಾರವನ್ನು ವಾಪಸ್‌ ಪಡೆಯಲು ನಿರ್ದೇಶಿಸುವಂತೆ ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆಯಲಾಗಿದೆ.

ಗುಜರಾತ್‌ನ ಮುಸ್ಲಿಂ ಸಮುದಾಯಕ್ಕೆ ಸೇರಿದ ಮೂವರು ಕಾಂಗ್ರೆಸ್‌ ಶಾಸಕರು ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ.

ಅಪರಾಧಿಗಳನ್ನು ಬಿಡುಗಡೆ ಮಾಡಿರುವ ನಾಚಿಕೆಗೇಡಿನ ಕ್ರಮವನ್ನು ಹಿಂತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.

ಶಾಸಕರಾದ ಗಯಾಸುದ್ದೀನ್‌ ಶೇಖ್‌, ಇಮ್ರಾನ್‌ ಖೇಡಾವಾಲ ಮತ್ತು ಜಾವೇದ್‌ ಪಿರಜಾದ್‌ ಜಂಟಿಯಾಗಿ ರಾಷ್ಟ್ರಪತಿ ಅವರಿಗೆ ಪತ್ರ ಬರೆದಿದ್ದಾರೆ. 11 ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿರುವ ಕ್ರಮ ನಾಚಿಕೆಗೇಡಿನಿಂದ ಕೂಡಿದೆ. ಸಂವೇದನೆಯಿಲ್ಲದ್ದಾಗಿದೆ.

ನ್ಯಾಯಕ್ಕಾಗಿ ಹೋರಾಡುತ್ತಿರುವವರಿಗೆ ನಿರಾಶೆಯನ್ನುಂಟು ಮಾಡಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಗುಜರಾತ್‌ನಲ್ಲಿ 2002ರಲ್ಲಿ ನಡೆದ ಬಿಲ್ಕಿಸ್‌ ಬಾನು ಮೇಲಿನ ಅತ್ಯಾಚಾರ ಮತ್ತು ಅವರ ಕುಟುಂಬದ 7 ಮಂದಿಯ ಹತ್ಯೆ ಪ್ರಕರಣದ 11 ಅಪರಾಧಿಗಳನ್ನು 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ಬಿಡುಗಡೆ ಮಾಡಲಾಗಿದೆ. ಆಗ ಬಿಲ್ಕಿಸ್‌ ಬಾನು ಅವರು 5 ತಿಂಗಳ ಗರ್ಭಿಣಿಯಾಗಿದ್ದರು. ಬಾನು ಅವರ ಮೂರು ವರ್ಷದ ಮಗು ಸೇರಿ 7 ಜನರನ್ನು ಹತ್ಯೆ ಮಾಡಲಾಗಿತ್ತು.

ವರದಕ್ಷಿಣೆ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಬೇಕು-ಸುಪ್ರೀಂ ಕೋರ್ಟ್

0

ವರದಕ್ಷಿಣೆ ಸಾವಿನ ವಿಷಯದ ಬಗ್ಗೆ ಸುಪ್ರೀಂಕೋರ್ಟ್ ಪ್ರತಿಕ್ರಿಯಿಸಿದೆ. ಜಾರ್ಖಂಡ್‌ ಹೈಕೋರ್ಟ್‌ನ ಆದೇಶವನ್ನ ಪ್ರಶ್ನಿಸಿ ಸುಪ್ರೀಂಕೋರ್ಟ್‌, ವರದಕ್ಷಿಣೆ ಸಾವು ಸಮಾಜದ ವಿರುದ್ಧ ಅಪರಾಧ ಎಂದು ಹೇಳಿದೆ. ಇಂತಹ ಅಪರಾಧ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಕಟ್ಟುನಿಟ್ಟಿನ ಸಂದೇಶ ನೀಡಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304ಬಿ ಸೇರಿಸುವ ಶಾಸಕಾಂಗ ಉದ್ದೇಶವು ವರದಕ್ಷಿಣೆ ಸಾವಿನ ಅಪರಾಧವನ್ನ ಕಠಿಣವಾಗಿ ಎದುರಿಸುವುದಾಗಿದೆ ಎಂದು ನ್ಯಾಯಮೂರ್ತಿ ಎಂ.ಆರ್ ಶಾ ಮತ್ತು ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರ ಪೀಠವು ಗಮನಿಸಿದೆ. ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವರದಕ್ಷಿಣೆ ಮರಣದಂಡನೆಯನ್ನ ಪರಿಗಣಿಸುವ ಅಗತ್ಯವಿದೆ ಎಂದು ಪೀಠ ಹೇಳಿದೆ.

ವರದಕ್ಷಿಣೆ ನಿಷೇಧ ಕಾಯ್ದೆಯಡಿ ಅಪರಾಧ ಎಸಗಿದ ಅಪರಾಧಿಗಳ ವಿರುದ್ಧ ಕಟ್ಟುನಿಟ್ಟಾಗಿ ವ್ಯವಹರಿಸುವಂತೆ ಸುಪ್ರೀಂಕೋರ್ಟ್ ಹೇಳಿದೆ. ಮಹಿಳೆಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ತೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಹೀಗೆ ಹೇಳಿದೆ. ಮಹಿಳೆಯ ಅತ್ತೆಗೆ ಹೈಕೋರ್ಟ್ ಶಿಕ್ಷೆ ವಿಧಿಸಿತ್ತು. ಮದುವೆಯಾದ ಒಂದು ವರ್ಷದಲ್ಲಿ ಮಹಿಳೆ ಸಾವನ್ನಪ್ಪಿದ್ದಾಳೆ. ವರದಕ್ಷಿಣೆ ಸಾವಿನ ವಿಷಯ ಬಂದಾಗ ಸುಪ್ರೀಂಕೋರ್ಟ್ ಸಮಾಜಕ್ಕೆ ಸ್ಪಷ್ಟ ಸಂದೇಶ ನೀಡಿದೆ. ಇದನ್ನ ಉಲ್ಲೇಖಿಸಿದ ಅವರ, ವರದಕ್ಷಿಣೆ ನಿಷೇಧ ಕಾಯ್ದೆಯಡಿ ವರದಕ್ಷಿಣೆ ಮರಣದ ಅಪರಾಧದಲ್ಲಿ ಭಾಗಿಯಾಗಿರುವ ಅಪರಾಧಿಗಳನ್ನ ಕಟ್ಟುನಿಟ್ಟಾಗಿ ಎದುರಿಸಲಾಗುವುದು ಎಂಬ ಸಂದೇಶವು ಸಮಾಜದೊಳಗೆ ಸ್ಪಷ್ಟವಾಗಿರಬೇಕು ಎಂದು ಹೇಳಿದರು.

ನಿಮ್ಮ ವಾಟ್ಸ್ ಆಪ್ ಖಾತೆ hack ಆಗಬಹುದು ಹಣ ಬೇಡುವವರ ಬಗ್ಗೆ ಜಾಗ್ರತೆಯಾಗಿರಿ

0

ವಾಟ್ಸ್ಯಾಪ್ ಖಾತೆಯನ್ನು ಹ್ಯಾಕ್ ಮಾಡಿ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಹಣದ ಅಗತ್ಯವಿದೆ ಎನ್ನುವ ಸಂದೇಶ ರವಾನಿಸುವ ಮೂಲಕ ಸಾವಿರಾರು ರೂಪಾಯಿ ವಂಚಿಸಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.

ಕಾಲೇಜಿನಲ್ಲಿ ಲೆಕ್ಕಶಾಸ್ತ್ರ ಉಪನ್ಯಾಸಕಿಯಾಗಿರುವ ಮಹಿಳೆ ವಂಚನೆಗೆ ಬಲಿಯಾಗಿ ಪರಿತಪಿಸುತ್ತಿದ್ದಾರೆ. ವಂಚನೆ ಕುರಿತು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪಟ್ಟಣದ ಪಿಯು ಕಾಲೇಜಿನ ಉಪನ್ಯಾಸಕಿ ಮತ್ತು ಲೇಖಕಿ ದೀಪಾ ಹಿರೇಗುತ್ತಿ ಫೇಸ್​ಬುಕ್​ ಪೋಸ್ಟ್​ನಲ್ಲಿ ವಿವರಿಸಿದ್ದಾರೆ.

ಯಾರಿಂದ ಮೆಸೇಜ್ ಬಂದರೂ ಕರೆ ಮಾಡದೇ ದುಡ್ಡು ಕಳಿಸಬೇಡಿ’ ಎಂದು ಎಚ್ಚರಿಕೆಯ ಕಿವಿಮಾತು ಹೇಳಿದ್ದಾರೆ.

ಇದುವರೆಗೆ ಫೇಸ್​ಬುಕ್​ನಲ್ಲಿ ಅಕೌಂಟ್ ಕ್ರಿಯೇಟ್ ಮಾಡಿ ದುಡ್ಡು ಕೇಳುತ್ತಿದ್ದರು. ಈಗ ಒಂದು ಫೋನ್ ಕಾಲ್ ಮಾಡಿ ನಿಮ್ಮ ವಾಟ್ಸ್ಯಾಪ್​ ಹ್ಯಾಕ್ ಮಾಡಬಹುದುಎಂದು ಎಚ್ಚರಿಸಿದ್ದಾರೆ. ದೀಪಾ ಹಿರೇಗುತ್ತಿ ಅವರು ಈ ಪೋಸ್ಟ್​ ವೈರಲ್ ಆಗಿದ್ದು, 700ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. 120ಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದು, 218 ಅಕೌಂಟ್​ಗಳಲ್ಲಿ ಶೇರ್ ಆಗಿದೆ.

ದೀಪಾ ಅವರ ಪೋಸ್ಟ್​ನ ಒಕ್ಕಣೆ ಇದು… ‘ಬಹಳ ಮುಖ್ಯ ವಿಷಯ. ದಯವಿಟ್ಟು ಓದಿ. ಹಂಚಿಕೊಳ್ಳಿ. ಮೊನ್ನೆ ನನ್ನ ಸಹೋದ್ಯೋಗಿ ಒಬ್ಬರ ಸಂಬಂಧಿಯ ಮನೆಯಲ್ಲಿ ನಡೆದ ಘಟನೆ. ತಂಗಿಯ ವಾಟ್ಸ್ಯಾಪ್ ನಂಬರ್​ನಿಂದ ಅಕ್ಕನಿಗೆ ‘ಅರ್ಜೆಂಟ್ 9000 ಬೇಕು. ನನ್ನ ಕಾರ್ಡ್ ಬ್ಲಾಕ್ ಆಗಿದೆ. ಹಣ ಕಳಿಸು’ ಎಂಬ ಮೆಸೇಜ್ ಬಂದಿದೆ.

ಅದೂ ತಂಗಿ ಅಕ್ಕನನ್ನು ಕರೆಯುವ ನಿಕ್ ನೇಮ್ ಸಹಿತ. ಆಯ್ತು ಎಂದು ಇವಳು ಆ ನಂಬರ್​ಗೆ ಒಂಬತ್ತು ಸಾವಿರ ಹಾಕಿದ್ದಾಳೆ. ತಕ್ಷಣ ಇನ್ನು 21 ಸಾವಿರ ಹಾಕು, ಒಟ್ಟಿಗೇ 30 ಸಾವಿರ ಕಳುಹಿಸುತ್ತೇನೆ ನಾಳೆ ಎಂದು ಮೆಸೇಜ್ ಬಂದಿದೆ. ಅಕ್ಕ ಮತ್ತೆ 21,000 ಕಳಿಸಿದ್ದಾರೆ. ಕೆಲ ಕ್ಷಣದಲ್ಲೇ ಮತ್ತೆ 25,000 ಕಳಿಸು ಎಂಬ ಸಂದೇಶ ಬಂದಿದೆ. ಈಗ ಅಕ್ಕನಿಗೆ ಅನುಮಾನ ಶುರು ಆಗಿದೆ. ಫೋನ್ ಮಾಡಿದರೆ ಆ ಕಡೆ ಎತ್ತುವವರಿಲ್ಲ. ಅದೇ ವೇಳೆಗೆ ತಂಗಿಯ ಸ್ನೇಹಿತೆ ಕೂಡ 9 ಸಾವಿರ ಹಾಕಿದ್ದಾಳೆ. ಮತ್ತೊಬ್ಬ ಸ್ನೇಹಿತ ಒಂದು ಸಾವಿರ ಹಾಕಿ ಫೋನ್ ಮಾಡಿದರೆ ಈ ಕಡೆ ಫೋನ್ ಎತ್ತುತ್ತಾ ಇಲ್ಲ. ಅದೇ ವೇಳೆಗೆ ತಂಗಿಯ ಚಿಕ್ಕಮ್ಮನ ಹೈಸ್ಕೂಲ್ ಓದುವ ಮಗಳಿಗೂ hi ಎಂದು ಸಂದೇಶ ಬಂದಿದೆ. ಇವಳು hi ಅಂದಿದ್ದಾಳೆ. 9,000 ಕಳಿಸು ಎಂದು ಸಂದೇಶ ಬಂದಿದೆ. ಅರೆ, ಚಿಕ್ಕಮ್ಮ ಅಮ್ಮನ ಹತ್ತಿರ ಕೇಳೋದು ಬಿಟ್ಟು ನನ್ನ ಹತ್ತಿರ ದುಡ್ಡು ಕೇಳುತ್ತಾ ಇದ್ದಾಳೆ ಏಕೆ ಎಂದು ಅಮ್ಮನಿಗೆ ಹೇಳಿದ್ದಾಳೆ. ವಿಡಿಯೋ ಕಾಲ್ ಮಾಡಿದರೆ ಯಾರೂ ಇಲ್ಲ. ಕಾರಣ ತಂಗಿಯ whatsApp hack ಆಗಿದೆ ಎಂದು ದೀಪಾ ನಡೆದ ಘಟನೆಯನ್ನು ವಿವರಿಸಿದ್ದಾರೆ.

ಬರಹ ಮುಂದುವರಿಸಿರುವ ಅವರು, ‘ನೋಡಿ, ಹತ್ತು ನಿಮಿಷದಲ್ಲಿ ಅದೆಷ್ಟು ಮಂದಿಗೆ ಮೆಸೇಜ್ ಮಾಡಿ ಅದೆಷ್ಟು ದುಡ್ಡು ಹೊಡೆದಿದ್ದಾರೆ! ಇದುವರೆಗೆ Facebook ನಲ್ಲಿ ಅಕೌಂಟ್ ಕ್ರಿಯೇಟ್ ಮಾಡಿ ದುಡ್ಡು ಕೇಳುತ್ತಾ ಇದ್ದರು. ಈಗ ಒಂದು ಫೋನ್ ಕಾಲ್ ಮಾಡಿ ನಿಮ್ಮ whatsApp ಅನ್ನು hack ಮಾಡಬಹುದು. So be careful. ಯಾರಿಂದ ಮೆಸೇಜ್ ಬಂದರೂ ಕರೆ ಮಾಡದೇ ದುಡ್ಡು ಕಳಿಸಬೇಡಿ. ಇದನ್ನು ಓದಿದ ನೀವು ಮತ್ತು ನಿಮ್ಮ ಸಂಬಂಧಿಗಳು, ಸ್ನೇಹಿತರು ಯಾರೂ ದುಡ್ಡು ಕಳೆದುಕೊಳ್ಳಬೇಡಿ’ ಎಂದು ಎಚ್ಚರಿಸಿದ್ದಾರೆ.

ಸಿದ್ದರಾಮಯ್ಯ ಅವರಿಗೀಗ ತಪ್ಪಿನ ಅರಿವಾಗಿದೆ-ಶಾಮನೂರು ಶಿವಶಂಕರಪ್ಪ

0

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಈಗ ತಪ್ಪಿನ ಅರಿವಾಗಿದೆ ಎಂದು ದಾವಣಗೆರೆಯಲ್ಲಿ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ, ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಹೇಳಿದ್ದಾರೆ.

ಬಾಳೆಹೊನ್ನೂರಿನ ರಂಭಾಪುರಿ ಮಠಕ್ಕೆ ಚೊಚ್ಚಲ ಭೇಟಿ ನೀಡಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಸ್ವಾಮಿಗಳ ಸಮ್ಮುಖದಲ್ಲಿ ಲಿಂಗಾಯತ – ವೀರಶೈವ ಧರ್ಮ ಒಡೆದ ಆರೋಪದ ಬಗ್ಗೆ ಮಾತನಾಡುತ್ತಾ ಪಶ್ಚಾತಾಪ, ವಿಶಾದ ವ್ಯಕ್ತಪಡಿಸಿದ ಕುರಿತು ಮಾತನಾಡಿದ ಅವರು ಸಿದ್ದರಾಮಯ್ಯ ಪಶ್ಚಾತ್ತಾಪ ಪಟ್ಟಿದ್ದಾರೆ ಅಲ್ಲಿಗೆ ಮುಗಿತು. ನಾನು ಮತ್ತೊಮ್ಮೆ ಧರ್ಮ ಹೊಡೆಯುವ ಪ್ರಯತ್ನಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯನಿಗೆ ಒಳ್ಳೆಯ ಬುದ್ದಿ ಬಂದಿದೆ. ಅದರಲ್ಲಿ ಅವರ ಪಾತ್ರ ಏನು ಇಲ್ಲ, ಬೇರೆಯವರ ಒತ್ತಡ ಇತ್ತು. ಆ ಆರೋಪ ಮಾತ್ರ ಅವರ ಮೇಲೆ ಬಂತು ಅಷ್ಟೇ. ನಾನು ಈ ಬಾರಿ ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿದರು.

ಯಡಿಯೂರಪ್ಪ ನವರಿಗೆ ಸಂಸದೀಯ ಸ್ಥಾನ ವಿಚಾರವಾಗಿ ಮಾತನಾಡಿದ ಅವರು ಬಿ ಎಸ್​ ಯಡಿಯೂರಪ್ಪ ಒಬ್ಬರಿಂದ ಏನ್ ಮಾಡೋಕೆ ಆಗೋದಿಲ್ಲ. ಸರ್ಕಾರ ನಾವು ರಚನೆ ಮಾಡುತ್ತೇವೆ, ನಮ್ಮ ಸರ್ಕಾರವೇ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಾಗ್ರತೆ ರಾಜ್ಯದಲ್ಲಿ ಮತ್ತೆ ಮುಂಗಾರು ಚುರುಕು

0

ರಾಜ್ಯದಲ್ಲಿ ಕೆಲ ದಿನಗಳಿಂದ ತಗ್ಗಿದ್ದ ಮುಂಗಾರು ಮಳೆ ಇಂದಿನಿಂದ ಮತ್ತೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದಲ್ಲಿ ಇಂದು ಮತ್ತು ನಾಳೆ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಆಗಸ್ಟ್ 23 ರಿಂದ 3 ದಿನ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ 3 ದಿನ ಮಳೆಯಾಗುವ ಸಾಧ್ಯತೆ ಇದೆ. ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಆಗಸ್ಟ್ 24 ರಂದು ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಚಾಮರಾಜನಗರ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ತಿಳಿಸಿದೆ.

ಮದ್ಯ ಮತ್ತು ಧೂಮಪಾನಿಗಳೇ ನಿಮಗೆ ಲೈಫ್ ರಿಸ್ಕ್ ಕಟ್ಟಿಟ್ಟ ಬುತ್ತಿ

0

ಮದ್ಯಪಾನ, ಧೂಮಪಾನ ಪ್ರಿಯರಿಗೆ ಇದು ಆಘಾತಕಾರಿ ಸುದ್ದಿ. ಅಧ್ಯಯನವೊಂದರಲ್ಲಿ ಕಂಡುಬಂದಿರುವ ಈ ಅಂಶಗಳು ಮದ್ಯ ಹಾಗೂ ಬೀಡಿ ಸಿಗರೇಟ್​ ಕೈಗೆತ್ತಿಕೊಳ್ಳುವ ಮುನ್ನ ಒಮ್ಮೆ ಯೋಚಿಸುವಂತೆ ಮಾಡಿದರೂ ಅಚ್ಚರಿ ಏನಲ್ಲ. ಇಂಥದ್ದೊಂದು ಆತಂಕಕಾರಿ ಅಂಶ ಈ ಜಾಗತಿಕ ಅಧ್ಯಯನಲ್ಲಿ ಕಂಡುಬಂದಿದೆ.

ಯುನಿವರ್ಸಿಟಿ ಆಫ್​ ವಾಷಿಂಗ್ಟನ್ಸ್​ ಸ್ಕೂಲ್​ ಆಫ್​ ಮೆಡಿಸಿನ್​ನ ಇನ್​ಸ್ಟಿಟ್ಯೂಟ್​ ಫಾರ್​​ ಹೆಲ್ತ್​ ಮೆಟ್ರಿಕ್ಸ್​ ಆಯಂಡ್ ಇವ್ಯಾಲ್ಯುವೇಷನ್​ ನಿರ್ದೇಶಕ ಡಾ. ಕ್ರಿಸ್ಟೋಫರ್ ಮುರ್ರೆ ಅವರು ಮಂಡಿಸಿದ ಅಧ್ಯಯನದಲ್ಲಿ ಈ ಆಘಾತಕಾರಿ ಅಂಶಗಳು ಕಂಡುಬಂದಿದೆ. ಇದನ್ನು ಲ್ಯಾನ್ಸೆಟ್ ಮೆಡಿಕಲ್ ಜರ್ನಲ್ ಪ್ರಕಟಿಸಿದೆ. ಈ ಅಧ್ಯಯನದಲ್ಲಿನ ಅಂಶಗಳು ಮದ್ಯ ಹಾಗೂ ಧೂಮಪಾನ ಪ್ರಿಯರಿಗೆ ಎಚ್ಚರಿಕೆ ಗಂಟೆಯಂತಿದೆ.

ಲ್ಯಾನ್ಸೆಟ್​​ನಲ್ಲಿ ಪ್ರಕಟಗೊಂಡಿರುವ ಗ್ಲೋಬಲ್​ ಬರ್ಡನ್​ ಆಫ್ ಡಿಸೀಸಸ್​, ಇಂಜುರೀಸ್ ಆಯಂಡ್ ರಿಸ್ಕ್​ ಫ್ಯಾಕ್ಟರ್ಸ್​ ರಿಪೋರ್ಟ್ 2019 ಎಂಬ ಶೀರ್ಷಿಕೆಯ ಅಧ್ಯಯನ ವರದಿಯಲ್ಲಿನ ಅಂಶಗಳು ಒಂದಷ್ಟು ಮಾಹಿತಿಯನ್ನು ಹೊರಹಾಕಿವೆ. ಇದರ ಪ್ರಕಾರ 2019ರಲ್ಲಿ ಭಾರತದಲ್ಲಿನ ಕ್ಯಾನ್ಸರ್​ ರೋಗಿಗಳಲ್ಲಿ ಸತ್ತವರ ಪೈಕಿ ಶೇ. 37 ರೋಗಿಗಳ ಸಾವಿಗೆ ಧೂಮಪಾನ, ಮದ್ಯಪಾನ ಮತ್ತು ಹೈ ಬಾಡಿ ಮಾಸ್​ ಇಂಡೆಕ್ಸ್​ ಕಾರಣ ಎಂಬುದು ಕಂಡುಬಂದಿದೆ. ಜಾಗತಿಕವಾಗಿ ಹೇಳುವುದಾದರೆ, ಕ್ಯಾನ್ಸರ್​​ನಿಂದ ಸತ್ತವರ ಪೈಕಿ ಶೇ. 44.4 ಸಾವಿಗೆ ಈ ರಿಸ್ಕ್​ ಫ್ಯಾಕ್ಟರ್​​ಗಳೇ ಕಾರಣ ಎಂದು ತಿಳಿದುಬಂದಿದೆ.

ಇದೇ ಅಧ್ಯಯನದ ಪ್ರಕಾರ, 2019ರಲ್ಲಿ ಜಗತ್ತಿನಲ್ಲಿ ಸಂಭವಿಸಿದ ಪುರುಷ ಕ್ಯಾನ್ಸರ್​ ರೋಗಿಗಳ ಸಾವಿನಲ್ಲಿ ಶೇ. 50.6ರಷ್ಟು ಸಾವು ಹಾಗೂ ಮಹಿಳಾ ಕ್ಯಾನ್ಸರ್​ ರೋಗಿಗಳಲ್ಲಿ ಶೇ. 36.3 ಸಾವು ಈ ರಿಸ್ಕ್ ಫ್ಯಾಕ್ಟರ್​ಗಳಿಂದ ಸಂಭವಿಸಿದೆ ಎಂಬುದು ಕಂಡುಬಂದಿದೆ. ಅಂದರೆ ಈ ಅವಧಿಯಲ್ಲಿನ ಕ್ಯಾನ್ಸರ್​ ರೋಗಿಗಳಲ್ಲಿ 2.88 ದಶಲಕ್ಷ ಪುರುಷರು ಮತ್ತು 1.58 ದಶಲಕ್ಷ ಮಹಿಳೆಯರ ಸಾವು ಧೂಮಪಾನ, ಮದ್ಯಪಾನ, ಅತಿಯಾದ ಬಿಎಂಐ ಮುಂತಾದ ರಿಸ್ಕ್​ ಫ್ಯಾಕ್ಟರ್​ಗಳಿಂದ ಸಂಭವಿಸಿದೆ ಎಂದು ಈ ಅಧ್ಯಯನ ಹೇಳಿದೆ.

ಈ ಅಧ್ಯಯನವು 23 ವಿವಿಧ ಕ್ಯಾನ್ಸರ್​ಗಳಲ್ಲಿ ಸಾವು ಅಥವಾ ಆರೋಗ್ಯ ಅತಿಯಾಗಿ ಹದಗೆಡುವಂಥದ್ದಕ್ಕೆ ಕಾರಣವಾಗುವ 34 ವಿಧದ ರಿಸ್ಕ್​ ಫ್ಯಾಕ್ಟರ್​ಗಳ ವಿಶ್ಲೇಷಣೆ ನಡೆಸಿದೆ. ಅವುಗಳ ಪೈಕಿ ಧೂಮಪಾನ, ಮದ್ಯಪಾನ ಮತ್ತು ಅತಿಯಾದ ಬಾಡಿ ಮಾಸ್ ಇಂಡೆಕ್ಸ್​ ಪುರುಷ ಹಾಗೂ ಮಹಿಳೆಯರಿಬ್ಬರಲ್ಲೂ ಸಾವು ಹಾಗೂ ಆರೋಗ್ಯ ಹದಗೆಡುವಲ್ಲಿ ಪ್ರಮುಖ ಕಾರಣವಾಗುತ್ತಿವೆ ಎಂದು ಡಾ.ಮುರ್ರೆ ಅವರು ಹೇಳಿದ್ದಾರೆ.

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಗೆ ಬಂಧನ ಸಾಧ್ಯತೆ

0

ದೇಶದ ಉನ್ನತ ತನಿಖಾ ಸಂಸ್ಥೆಯ ಮುಂದೆ ಹಾಜರಾಗದ ಮತ್ತು ಅಕ್ರಮ ಹಣಕಾಸು ಪ್ರಕರಣದಲ್ಲಿ ತನ್ನ ನೋಟಿಸ್ ಗೆ ಸ್ಪಂದಿಸದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸಬಹುದು.

ಪಾಕಿಸ್ತಾನದ ದೈನಿಕ ಪತ್ರಿಕೆ ದಿ ನ್ಯೂಸ್ ನ ವರದಿಯ ಪ್ರಕಾರ, ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಶುಕ್ರವಾರ ಇಮ್ರಾನ್ ಖಾನ್ʼಗೆ ಈ ಬಗ್ಗೆ 2ನೇ ನೋಟಿಸ್ ನೀಡಿದೆ. ಕಳೆದ ಬುಧವಾರ ಮೊದಲ ನೋಟಿಸ್ ಕಳುಹಿಸಲಾಗಿದ್ದು, ಅವರು ಎಫ್‌ಐಎ ತಂಡದ ಮುಂದೆ ಹಾಜರಾಗಲು ನಿರಾಕರಿಸಿದ್ದಾರೆ ಎಂದು ದಿ ನ್ಯೂಸ್ ವರದಿ ಯಲ್ಲಿ ತಿಳಿಸಿದೆ.

ಇಮ್ರಾನ್ ಖಾನ್ ಬಂಧಿಸುವ ಬಗ್ಗೆ ಮೂರು ನೋಟಿಸ್‌ಗಳನ್ನ ನೀಡಿದ ಬಳಿಕ ಅಂತಿಮ ನಿರ್ಧಾರವನ್ನ ತೆಗೆದುಕೊಳ್ಳಬಹುದು ಎಂದು ಉನ್ನತ ಮಟ್ಟದ ಎಫ್‌ಐಎ ಅಧಿಕಾರಿಗಳನ್ನು ಉಲ್ಲೇಖಿಸಿ ದಿ ನ್ಯೂಸ್ ವರದಿ ತಿಳಿಸಿದೆ.

ಯುಎಸ್, ಆಸ್ಟ್ರೇಲಿಯಾ, ಕೆನಡಾ, ಯುಕೆ ಮತ್ತು ಬೆಲ್ಜಿಯಂನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಜಿ ಪ್ರಧಾನಿಯ ಪಕ್ಷಕ್ಕೆ ಸೇರಿದ ಐದು ಕಂಪನಿಗಳನ್ನ ಎಫ್‌ಐಎ ಪತ್ತೆಹಚ್ಚಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ. ಪಾಕಿಸ್ತಾನದ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವರದಿಯಲ್ಲಿ ಈ ಕಂಪನಿಗಳನ್ನು ಉಲ್ಲೇಖಿಸಲಾಗಿಲ್ಲ.

ಯುವಜನತೆಯಲ್ಲಿ ಅಂತರ್ಜಾಲ ವ್ಯಸನ-ವಿಷಯದ‌ ಬಗ್ಗೆ ಶಿವರಾಜ್ ಅವರಿಗೆ ಪಿಎಚ್ ಡಿ ಪದವಿ

0

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೀರ್ಥಹಳ್ಳಿ ಮನಶಾಸ್ತ್ರದ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ. ಶಿವರಾಜು ಸಿ. ಇವರು ಧಾರವಾಡ ವಿಶ್ವವಿದ್ಯಾಲಯದ ಮನೋವಿಜ್ಞಾನ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ಷಣ್ಮುಖ. ವಿ. ಕಾಂಬಳೆ ಅವರ ಮಾರ್ಗದರ್ಶನದಲ್ಲಿ ಎಮೋಷನಲ್ ಇಂಟೆಲಿಜೆನ್ಸ್, ಸೋಶಿಯಲ್ ಸ್ಕಿಲ್ಸ್ ಅಂಡ್ ಮೆಂಟಲ್ ಹೆಲ್ತ್ ಆಫ್ ಇಂಟರ್ನೆಟ್ ಆಡಿಕ್ಟೆಡ್ ಅಡೋ ಲೆಸೆಂಟ್ಸ್ ಮಂಡಿಸಿದ ಮಹಾ ಪ್ರಬಂಧಕ್ಕೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಪಿ ಎಚ್ ಡಿ ಪದವಿಯನ್ನು ಪ್ರಧಾನ ಮಾಡಲಾಗಿದೆ.

ಶ್ರೀ. ಶಿವರಾಜು .ಸಿ. ಅವರು ಮೂಲತಃ ಕನಕಪುರ ತಾಲೂಕಿನ ತಟ್ಟಿಗುಪ್ಪೆ ಗ್ರಾಮದ ದಿ. ಚಿಕ್ಕಯ್ಯ ಮತ್ತು ಲಕ್ಷ್ಮಮ್ಮರವರ ಪುತ್ರರಾಗಿದ್ದಾರೆ.

ಈ ಮಹಾಪ್ರಬಂಧದ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಇಂದಿನ ಯುವ ಪೀಳಿಗೆಯು ನಿದ್ರಿಸುವ ಸಮಯಕ್ಕಿಂತ ಹೆಚ್ಚು ಸಮಯವನ್ನು ಮೊಬೈಲ್ ಎಂಬ ಮಾಯಜಾಲದಲ್ಲಿ ಕಳೆಯುತ್ತಿದ್ದಾರೆ.ಹೆಚ್ಚು ಹೆಚ್ಚು ಸಮಯವನ್ನು ಅಂತರಾಜಾಲದಲ್ಲಿ ಕಳೆಯುತ್ತಿದ್ದಾರೆ. ಹೀಗೆ, ದಾಸರಾಗುತ್ತಿದ್ದರೆ, ಅತಿಯಾದರೆ ಅಮೃತ ವಿಷವಾಗಿ ಪರಿಣಮಿಸು ವಂತೆಯೇ, ಇಂಟರ್ನೆಟ್ ನ ಅತಿಯಾದ ಬಳಕೆಯಿಂದ ಕಾಲಕ್ರಮೇಣ ಇಂಟರ್ನೆಟ್ ವ್ಯಸನವಾಗಿ ವ್ಯಕ್ತಿಯ ಕೌಟುಂಬಿಕ ಜೀವನ, ಜೀವನದ ಮೇಲೆ ಮತ್ತು ಶಾರೀರಿಕ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತವೆ.

ಈ ಸಂಶೋಧನಾ ವಿಷಯವು ತರುಣ ಹಾಗೂ ತರುಣಿಯರಲ್ಲಿನ ಮಾನಸಿಕ ಸಂವೇಗಗಳಲ್ಲಿನ ವ್ಯತ್ಯಾಸಗಳು, ಕೌಶಲ್ಯಗಳು ಹಾಗೂ ಅವರ ಮಾನಸಿಕ ಆರೋಗ್ಯದ ಮೇಲೆ ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳುವುದಾಗಿದೆ. ಪರಸ್ಪರ ಚರ್ಚಿಸುವುದು. ಸಂವಹನ ಮುಖಾಮುಖಿ ಭೇಟಿ, ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು. ಸಾಮಾಜಿಕ ಸನ್ನಿವೇಶಗಳಲ್ಲಿ ಭಾಗಿಯಾಗಿರುವುದರ ಮಹತ್ವ, ಆರೋಗ್ಯಕರ ಅಂತರ ವ್ಯಕ್ತಿ ಸಂಬಂಧಗಳನ್ನು ಗಟ್ಟಿ ಕಳುಹಿಸುವುದರ ಬಗ್ಗೆ ಗಮನ ಚೆಲ್ಲುತ್ತದೆ. ಮತ್ತು ಸಂಜ್ಯಾತ್ಮಕ ಬೆಳವಣಿಗೆಗಳ ಸವಾಲುಗಳ ಬಗ್ಗೆ ಅರಿವನ್ನು ತಿಳಿಸುತ್ತದೆ ಎಂದು ಶ್ರೀ. ಶಿವರಾಜು. ಸಿ. ಅವರು ತಿಳಿಸಿದ್ದಾರೆ.

ಮನಶಾಸ್ತ್ರದಲ್ಲಿ ಪಿ ಎಚ್ ಡಿ ಪದವಿ ಪಡೆದಿರುವ ಶ್ರೀ. ಶಿವರಾಜು ಸಿ ಇವರಿಗೆ ನಮ್ಮ ಕೆ ಲೈವ್ ಬಳಗದ ವತಿಯಿಂದ ಅಭಿನಂದನೆಗಳು…

ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಡಿ,31 ರೊಳಗೆ ಉತ್ತೀರ್ಣರಾಗಲು ಗಡುವು

0

ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012 ರ ನಿಯಮ 1(3) ರಲ್ಲಿ ನಿರ್ದಿಷ್ಟಪಡಿಸಿದ ಹುದ್ದೆಗಳನ್ನು ಹೊರತುಪಡಿಸಿ ಇನ್ನಿತರೆ ಎಲ್ಲಾ ಅಭ್ಯರ್ಥಿಗಳು ಡಿ.31ರೊಳಗಾಗಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾಗಿರುತ್ತದೆ.

ಸದರಿ ದಿನಾಂಕದ ನಂತರ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ನೌಕರರು ಪರಿವೀಕ್ಷಣಾ ಅವಧಿ, ಮುಂಬಡ್ತಿ ಹಾಗೂ ವೇತನ ಬಡ್ತಿ ಇತ್ಯಾದಿಗಳನ್ನು ಪಡೆಯಲು ಅನರ್ಹರಾಗಿರುತ್ತಾರೆ ಮತ್ತು ಸರ್ಕಾರವು ಮತ್ತೊಮ್ಮೆ ದಿನಾಂಕವನ್ನು ವಿಸ್ತರಿಸುವುದಿಲ್ಲವೆಂದು ಸ್ಪಷ್ಟಪಡಿಸಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಮುಂದಾಗಬಹುದಾದ ಅನಾನುಕೂಲಗಳನ್ನು ತಪ್ಪಿಸುವ ದೃಷ್ಟಿಯಿಂದ ಪರೀಕ್ಷೆ ಪಡೆಯದಿರುವ ಬಳ್ಳಾರಿ ಜಿಲ್ಲೆಯ ಎಲ್ಲಾ ರಾಜ್ಯ ಸರ್ಕಾರಿ ಅಧಿಕಾರಿ ಮತ್ತು ನೌಕರರು ಪ್ರತಿ ಶನಿವಾರ ಮತ್ತು ಭಾನುವಾರ ನಡೆಯಲಿರುವ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೆಗೆದುಕೊಂಡು ಡಿ.31ರೊಳಗಾಗಿ ಉತ್ತೀರ್ಣರಾಗಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬಳ್ಳಾರಿ ಜಿಲ್ಲಾ ಶಾಖೆಯ ಜಿಲ್ಲಾಧ್ಯಕ್ಷರಾದ ಎಂ.ಶಿವಾಜಿರಾವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮತದಾರರ ಗುರುತಿನ ಚೀಟಿಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಲು ಜಿಲ್ಲಾಧಿಕಾರಿಗಳು ತುರ್ತು ಸಂದೇಶದಲ್ಲಿ ಸೂಚಿಸಿರುತ್ತಾರೆ.

ಆ ಮೇರೆಗೆ ಜಿಲ್ಲೆಯ ಎಲ್ಲಾ ರಾಜ್ಯ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಗೂಗಲ್ ಪ್ಲೇ ಸ್ಟೋರ್ ನಲ್ಲಿ ‘ವೋಟರ್ ಹೆಲ್ಪ್ ಲೈನ್’ ಅಯಪ್ ಡೌನ್ ಲೋಡ್ ಮಾಡಿಕೊಂಡು ಆ ಮೂಲಕ ತಮ್ಮ ಹಾಗೂ ತಮ್ಮ ಕುಟುಂಬಸ್ತರ ಮತದಾರರ ಗುರುತಿನ ಚೀಟಿಗಳನ್ನು ಸಂಬಂಧಿಸಿದ ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.