Saturday, March 21, 2026
Saturday, March 21, 2026
Home Blog Page 1454

ಇಂಡೋನೇಶಿಯ ಕರೆನ್ಸಿಯಲ್ಲಿ ಕಂಡ ಕರಿವದನ

0

ನಮಗೆಲ್ಲಾ ಗೊತ್ತಿರುವ ಹಾಗೆ ಭಾರತದ ಯಾವ ನೋಟಿನಲ್ಲೂ ನಮ್ಮ ಯಾವ ದೇವತೆಗಳು ಇಲ್ಲ. ಆದರೆ, ಒಂದು ದೇಶದಲ್ಲಿ ವಿಘ್ನವಿನಾಶಕ ಗಣೇಶನ ಫೋಟೋ ಇದೆ. ಅದು ಮುಸ್ಲಿಂ ಪ್ರಾಬಲ್ಯ ಇರುವ ದೇಶದಲ್ಲಿ ಎಂದರೆ ನೀವು ನಂಬಲೇಬೇಕು. ಗಣೇಶನ ಚಿತ್ರವಿರುವ ನೋಟು ಇಂಡೋನೇಷ್ಯಾ ದೇಶದ್ದಾಗಿದೆ.
20,000 ರೂಪಾಯಿ ಮುಖಬೆಲೆಯ ಇಂಡೊನೇಷ್ಯಾದ ಹಳೆಯ ನೋಟಿನಲ್ಲಿ ಗಣೇಶನ ಫೋಟೋ ಇದೆ.

ಗಣೇಶ ಎಂದರೆ ಬುದ್ಧಿವಂತ, ಕಲೆ ಮತ್ತು ವಿಜ್ಞಾನದ ಸಂಕೇತ ಎಂದು ಇಲ್ಲಿ ನಂಬಲಾಗಿದೆ. ಈ ಕಾರಣಕ್ಕಾಗಿಯೇ ನೋಟಿನಲ್ಲಿ ಮುದ್ರಿಸಲಾಗಿದೆ ಎಂದು ಹೇಳಲಾಗುತ್ತದೆ.

ಛತ್ತೀಸ್ ಗಢದಲ್ಲೊಂದುಯು ಟ್ಯೂಬರ್ ಗಳ ಗ್ರಾಮ

0

ಛತ್ತೀಸ್‌ಗಢದ ರಾಯ್ಪುರ ಜಿಲ್ಲೆಯ ತುಸ್ಲಿ ಎಂಬ ಗ್ರಾಮ ಕ್ರಿಯೇಟರ್‌ಗಳನ್ನು ಸೃಷ್ಟಿಸಿರುವ ಗ್ರಾಮವೆಂದೇ ಹೆಸರುವಾಸಿ.

ಈ ಊರಿಗೆ “ಯೂಟ್ಯೂಬ್‌ ಹಬ್‌’ ಎಂದೂ ಕರೆಯಲಾಗುತ್ತದೆ. ಇಲ್ಲಿ ಪ್ರತಿ ಬೀದಿಯಲ್ಲಿ ಕ್ರಿಯೇಟರ್‌ಗಳು ಸಿಗುತ್ತಾರೆ. ಪ್ರತಿದಿನ ಚಿತ್ರೀಕರಣ ನಡೆಯುತ್ತಲೇ ಇರುತ್ತದೆ.

ಎಸ್‌ಬಿಐನಲ್ಲಿ ಇಂಟರ್‌ನೆಟ್‌ ಇಂಜಿನಿಯರ್‌ ಆಗಿದ್ದ ಜ್ಞಾನೇಂದ್ರ ಶುಕ್ಲಾ ಹಾಗೂ ಶಿಕ್ಷಕನಾಗಿದ್ದ ಜೈ ವರ್ಮಾ ಈ ಗ್ರಾಮದ ಮೊದಲ ಯೂಟ್ಯೂಬರ್‌ಗಳು.
ಇಬ್ಬರೂ 2011-12ರ ಸಮಯದಲ್ಲಿ ಕೆಲಸ ತ್ಯಜಿಸಿ ಯೂಟ್ಯೂಬ್‌ ಸೇರಿಕೊಂಡಿದ್ದಾರೆ. ಮೊದ ಮೊದಲಿಗೆ ಅವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಚಿತ್ರೀಕರಣ ಮಾಡುವುದೆಂದರೆ ಮುಜುಗರವಾಗುತ್ತಿತ್ತಂತೆ. ಆದರೆ ಗ್ರಾಮದ ಯುವ ಜನತೆ ಅವರನ್ನು ಪ್ರೋತ್ಸಾಹಿಸಿದ ಹಿನ್ನೆಲೆ ಅವರು ಹಿಂಜರಿಕೆ ಬಿಟ್ಟು ಎಲ್ಲೆಡೆ ಚಿತ್ರೀಕರಣ ಮಾಡಲಾರಂಭಿಸಿದ್ದಾರೆ.
ಇವರಿಬ್ಬರ ಚಾನೆಲ್‌ ಪ್ರಸಿದ್ಧತೆ ಪಡೆದುಕೊಂಡಿದೆ. ಅದರಿಂದ ಸ್ಫೂರ್ತಿ ಪಡೆದ ಗ್ರಾಮದ ಉತ್ಸಾಹಿತ ಜನರೆಲ್ಲರೂ ತಮ್ಮದೇ ಆದ ಯೂಟ್ಯೂಬ್‌ ಚಾನೆಲ್‌ಗ‌ಳನ್ನು ತೆರೆದಿದ್ದಾರೆ. ಈ ಗ್ರಾಮದವರದ್ದು ಈಗ ಕನಿಷ್ಠ 40 ಯೂಟ್ಯೂಬ್‌ ಚಾನೆಲ್‌ಗ‌ಳಿವೆ.

ಇಲ್ಲಿರುವ 3000 ಜನರಲ್ಲಿ ಕನಿಷ್ಠ ಶೇ.40 ಮಂದಿ ಯೂಟ್ಯೂಬ್‌ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಇಲ್ಲಿನ ಯೂಟ್ಯೂಬರ್‌ ಜೈ ವರ್ಮಾ ಅವರು,
ಎಂ.ಎಸ್ಸಿ ಪದವೀಧರನಾದ ನಾನು ಕಾಲೇಜೊಂದರಲ್ಲಿ ಪಾರ್ಟ್‌ ಟೈಮ್‌ ಪ್ರಾಧ್ಯಾಪಕನಾಗಿದ್ದೆ. ನನ್ನದೇ ಆದ ಕೋಚಿಂಗ್‌ ಸೆಂಟರ್‌ ತೆರೆದುಕೊಂಡಿದ್ದೆ. ಆದರೆ ಆಗ ನನಗೆ ಸಿಗುತ್ತಿದ್ದದ್ದು ಮಾಸಿಕ 12-15 ಸಾವಿರ ರೂ. ಮಾತ್ರ. ಆದರೆ ಈಗ ಯೂಟ್ಯೂಬ್‌ನಿಂದ ತಿಂಗಳಿಗೆ 30-40 ಸಾವಿರದವರೆಗೆ ದುಡಿಯುತ್ತಿದ್ದೇನೆ’ ಎನ್ನುತ್ತಾರೆ.

ನಕ್ಸಲರ ಕಾಟವಿದ್ದಿದ್ದರಿಂದ ನಮ್ಮೂರಿನಲ್ಲಿ ಹೆಣ್ಣು ಮಕ್ಕಳಿಗೆ ಮನೆಯಿಂದ ಹೊರಗೆ ಬರುವುದಕ್ಕೆ ಅವಕಾಶವಿರಲಿಲ್ಲ. ಆದರೆ ಯೂಟ್ಯೂಬ್‌ ಚಾನೆಲ್‌ಗ‌ಳನ್ನು ಆರಂಭಿಸಿದಾಗಿನಿಂದ ನಾವೂ ಮನೆಯಿಂದ ಹೊರಗೆ ಸ್ವತಂತ್ರವಾಗಿ ಓಡಾಡುತ್ತಿದ್ದೇವೆ ಎನ್ನುತ್ತಾರೆ ಯುಟ್ಯೂಬ್‌ ಚಾನೆಲ್‌ ಮಾಡಿಕೊಂಡಿರುವ ತುಸ್ಲಿ ಗ್ರಾಮಸ್ಥೆ ಪಿಂಕು ಸಾಹು.

ಹುಬ್ಬಳ್ಳಿ ಈದ್ಗ ಮೈದಾನದಲ್ಲಿ ಗಣೇಶೋತ್ಸವಕ್ಕೆ ತಡರಾತ್ರಿ ಹೈಕೋರ್ಟ್ ಅನುಮತಿ

0

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡಿ ಹೈಕೋರ್ಟ್ ವಿಭಾಗೀಯ ಪೀಠ ತಡರಾತ್ರಿ ಆದೇಶ ಹೊರಡಿಸಿದೆ.

ಈ ಮೂಲಕ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರ ಆದೇಶವನ್ನು ಹೈಕೋಟ್‌ ಎತ್ತಿಹಿಡಿದಿದೆ.
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ವಿಚಾರಕ್ಕೆ ಸಂಬಂಧಿಸಿ ಚಾಮರಾಜಪೇಟೆ ಈದ್ಗಾ ಮೈದಾನದ ಸುಪ್ರೀಂಕೋರ್ಟ್ ಆದೇಶ ಆಧರಿಸಿ ವಿಚಾರಣೆಗೆ ಅರ್ಜಿದಾರರು ಸಲ್ಲಿಸಿದ ಮನವಿ ಮೇರೆಗೆ ರಾತ್ರಿ 10 ಗಂಟೆಗೆ ಅರ್ಜಿ ವಿಚಾರಣೆ ನಡೆಸಲಾಯಿತು.

ನ್ಯಾಯಮೂರ್ತಿ ಅಶೋಕ್.ಎಸ್ ಕಿಣಗಿಯವರ ಕಚೇರಿಯಲ್ಲಿ ಅರ್ಜಿ ವಿಚಾರಣೆ ನಡೆಯಿತು. ವಾದ ವಿವಾದ ಆಲಿಸಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಹೈಕೋರ್ಟ್ ಸಮ್ಮತಿ ನೀಡಿದೆ.
ಚಾಮರಾಜಪೇಟೆಯ ಈದ್ಗಾ ಮೈದಾನಕ್ಕೆ ಸಂಬಂಧಪಟ್ಟಂತೆ ಆದೇಶ ನೀಡಿದ್ದ ಸುಪ್ರೀಂಕೋರ್ಟ್ ಗಣೇಶ ಉತ್ಸವಕ್ಕೆ ಅನುಮತಿಯನ್ನು ನಿರಾಕರಿಸಿತ್ತು. ಬುಧವಾರ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಆದೇಶ ಮಹತ್ವ ಪಡೆದುಕೊಂಡಿತ್ತು.

ಮುರುಘಾಶ್ರೀಗಳ ಮೇಲೆ ಮತ್ತೊಂದು ಕೇಸು ದಾಖಲೆ ಸಂಭವ

0

ಮುರುಘಾ ಶ್ರೀಗೆ ಮತ್ತೊಂದು ತೊಂದರೆ ಎದುರಾಗಿದೆ. ಲೈಂಗಿಕ ಕಿರುಕುಳದ ಬಗ್ಗೆ ಆರೋಪ ಮಾಡಿರುವ ಒಬ್ಬರಲ್ಲಿ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ಈ ಹಿನ್ನಲೆಯಲ್ಲಿ ಶ್ರೀಗಳ ವಿರುದ್ದ , ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಮುರುಘಾ ಶ್ರೀಗಳ ವಿರುದ್ಧ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.

ಆಗಸ್ಟ್‌ 28ರಂದು ಪ್ರಕರಣದ ವಿಚಾರಣೆ ವೇಳೆಯಲ್ಲಿ ಬಾಲಕಿಯ ಹೇಳಿಕೆ ಮೇರೆಗೆಶ್ರೀಗಳ ವಿರುದ್ದ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. ಈ ನಡುವೆ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದ ವಿರುದ್ಧ ಚಿತ್ರದುರ್ಗ ಬಾಲಕಿಯರ ಬಾಲಮಂದಿರ ಎದುರು ದಲಿತ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ.
ಮಕ್ಕಳ ಪರವಾಗಿ ಹೋರಾಟ ನಡೆಸುತ್ತೇವೆ. ಶ್ರೀಗಳನ್ನು ಕೂಡಲೇ ಬಂಧಿಸಬೇಕು. ದೊಡ್ಡವರನ್ನು ಬಂಧಿಸಲು ಯಾಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿಭಟನಾ ಸ್ಥಳವಾದ ಬಾಲಮಂದಿರ ಎದುರು 100m ಮೀಟರ್‌ ಗಳ ವರೆಗೆ ಪೊಲೀಸರ ನಿಯೋಜನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್‌ಗೆ ಮುರುಘಾ ಶ್ರೀ ಅರ್ಜಿಯನ್ನು ಶ್ರೀಗಳ ಪರ ವಕೀಲರು ಚಿತ್ರದುರ್ಗಕೋರ್ಟ್‌ ಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಅರ್ಜಿಯನ್ನು ಸ್ವೀಕರಿಸಿರುವ ನ್ಯಾಯಾಲಯವು ಅರ್ಜಿ ವಿಚಾರಣೆಯನ್ನು ಸೆಪ್ಟಂಬರ್‌ 1ರಂದು ನಡೆಸುವುದಾಗಿ ತಿಳಿಸಿದೆ.

ಈ ನಡುವೆ ಬಾಲಕಿಯರ ಮೇಲೆ ಲೌಂಗಿಕ ದೌರ್ಜನ್ಯ ಆರೋಪದಲ್ಲಿ ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಅವರನ್ನು ಇದೀಗ ಪೋಲಿಸರ ವಶಕ್ಕೆ ಪಡೆದುಕೊಳ್ಳಲಾಗಿದೆ ಎನ್ನಲಾಗಿತ್ತು. ಈ ನಡುವೆ ಮಠಕ್ಕೆ ವಾಪಸ್ಸು ಬಂದ ಶ್ರೀಗಳು ಮಠದ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.

ನಾವೆಲ್ಲರೂ ಒಟ್ಟಾಗಿ, ಇದಕ್ಕೆ ಶಾಶ್ವತವಾಗಿ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ ಎಂದರು.

ಬಹಳಷ್ಟು ಅಪರೂಪದಗಣಪತಿ ಕತೆಯೊಂದು ಹೀಗಿದೆ

0

ಗಣಪತಿಯ ಹುಟ್ಟಿನ ಬಗ್ಗೆ ಹಾಗೂ ಗಣಪತಿಗೆ ಆನೆಯ ಮುಖ ಬಂದ ಬಗ್ಗೆ ಸಾಮಾನ್ಯವಾಗಿ ನಂಬಿರುವ ಕಥೆ ಒಂದಾದರೆ ಬ್ರಹ್ಮ ವೈವರ್ತ ಪುರಾಣ ಹೇಳುವುದೇ ಇನ್ನೊಂದು ಕಥೆ, ಅದನ್ನಿಲ್ಲಿ ಸಂಕ್ಷಿಪ್ತವಾಗಿ ಕೊಡಲಾಗಿದೆ. ಗಣಪತಿಯ ಹುಟ್ಟಿನ ಬಗ್ಗೆ ಸಾಮಾನ್ಯವಾಗಿ ಎಲ್ಲರೂ ತಿಳಿದಿರುವುದು ಏನೆಂದರೆ ಪಾರ್ವತಿಯ ಮೈ ಮಣ್ಣಿನಿಂದ ಸೃಷ್ಟಿಯಾದ ಮಗುವಿನ ಶಿರವನ್ನು ಗೊತ್ತಿಲ್ಲದೇ ಶಿವ ತ್ರಿಶೂಲದಿಂದ ತೆಗೆದ, ನಂತರ ತಪ್ಪಿನ ಅರಿವಾಗಿ ಆನೆಯ ಶಿರವನ್ನು ಅದಕ್ಕೆ ಜೋಡಿಸಿ ‘ಗಣಾಧಿಪತಿ’ ಎಂದು ಹರಸಿದ ಎಂಬುದು ಕಥೆ ಆದರೆ ಅಷ್ಟಾದಶ ಪುರಾಣಗಳಲ್ಲಿ ಒಂದಾದ ‘ಬ್ರಹ್ಮವೈವರ್ತ ಪುರಾಣ’ದಲ್ಲಿ ಗಣಪತಿಯ ಹುಟ್ಟಿನ ಬಗ್ಗೆ ಮತ್ತೊಂದು ಕಥೆಯೇ ಇದೆ. ಇದು ಸ್ವಾರಸ್ಯಕರವೂ ಆಗಿದೆ. ಬ್ರಹ್ಮ ವೈವರ್ತ ಪುರಾಣದ ಗಣಪತಿ ಖಂಡದಲ್ಲಿ ಹೇಳುವ ಪ್ರಕಾರ ಗಣಪತಿಯು ಪಾರ್ವತಿಯ ಗರ್ಭ ಸಂಜಾತನಾಗಿದ್ದು ಆಕೆಯ ಉದರದಿಂದ ಜನಿಸಿದ ಮಗುವಿನ ತೊಟ್ಟಿಲು ಕಾರ್ಯದಲ್ಲಿ ದೇವಾನುದೇವತೆಗಳೆಲ್ಲರೂ ಆಗಮಿಸಿ ಆಶೀರ್ವಾದಪೂರ್ವಕವಾಗಿ ವರಗಳನ್ನು ಕೊಟ್ಟಾಗ ವಿಷ್ಣುವು ಆ ಮಗುವಿಗೆ ಅಂದರೆ ಗಣಪತಿಗೆ “ಜ್ಞಾನಿಯಾಗು, ಪರಾಕ್ರಮಿಯಾಗು” ಎಂದರೆ ಬ್ರಹ್ಮನು “ಕೀರ್ತಿ ಶಾಲೆಯಾಗು” ಎಂದೂ ಶಿವನು “ದಾನಬುದ್ಧಿ, ವಿದ್ಯೆ ಮತ್ತು ಪುಣ್ಯದ ನೆಲೆಯಾಗು” ಎಂದೂ ಧರ್ಮನು “ಧರ್ಮಸ್ಥನಾಗು” ಎಂದೂ ಲಕ್ಷ್ಮಿಯು “ಸದಾ ಸೌಭಾಗ್ಯದಾತನಾಗು” ಎಂದೂ ಸರಸ್ವತಿಯು “ಕವಿತೆ ಮತ್ತು ವಿದ್ಯಾಧಾರಣ ಶಕ್ತಿ ಉಳ್ಳವನಾಗು” ಎಂದೂ ವೇದಮಾತೆ ಗಾಯತ್ರಿಯು “ವೇದಾಧಿಪತ್ಯ ನಿನಗಾಗಲೆಂದೂ” ಹಿಮಾಲಯವು “ನಿಶ್ಚಲತೆಯನ್ನೂ”, ಮೇನಾ ದೇವಿಯು “ಗಾಂಭೀರ್ಯತೆಯನ್ನೂ, ಸಮುದ್ರವು “ರತ್ನಾಕರತ್ವ ವನ್ನೂ,” ಭೂದೇವಿಯು “ಕ್ಷಮಾಗುಣ” ಮುಂತಾಗಿ ವರಗಳನ್ನಾಗಿ ಆ ಮಗುವಿಗೆ ಅಂದರೆ ಗಣಪತಿಗೆ ನೀಡಿದಾಗ ಅಲ್ಲಿಗೆ ಬಂದಿದ್ದ ಶನಿದೇವರು ತಾನು ಮಗುವನ್ನು ನೋಡದೆ ದೂರದಿಂದಲೇ ಆಶೀರ್ವಾದ ಮಾಡಿ ಹೋಗುವುದಾಗಿಯೂ, ತನ್ನ ದೃಷ್ಟಿಯು ಮಗುವಿನ ಮೇಲೆ ಬೀಳುವುದು ಬೇಡ ಎಂದೂ ಹೇಳಿದಾಗ ಪಾರ್ವತಿಯು ಅದಕ್ಕೆ ಒಪ್ಪದೇ ಮಗುವನ್ನು ನೋಡಿಯೇ ಆಶೀರ್ವದಿಸುವಂತೆ ಶನಿ ದೇವರನ್ನು ಒತ್ತಾಯಿಸಿದಳು.

ಶನಿದೇವರ ಅದೋದೃಷ್ಟಿ ಆ ಮಗುವಿನ ಮೇಲೆ ಬೀಳುತ್ತಲೇ ಮಗುವಿನ ಶಿರ ಅಂದರೆ ತಲೆ ಹೋಯಿತು, ಆಗ ಕೋಪಗೊಂಡ ಪಾರ್ವತಿಯು “ನಿನಗೆ ಕಾಲಿಲ್ಲದೇ ಹೋಗಲಿ, ಕುಂಟನಾಗು” ಎಂದು ಶನಿ ದೇವರಿಗೆ ಶಾಪ ಕೊಟ್ಟಳು. ಪಾರ್ವತಿಯ ಶಾಪದಿಂದಾಗಿ ಮಂದಗತಿಯವನಾದ ಅಂದರೆ ನಿಧಾನಗತಿಯವನಾದ ಶನಿಯು ಸೂರ್ಯನ ಸುತ್ತ ಸುತ್ತಲು ಏಳೂವರೆ ವರ್ಷ ತೆಗೆದುಕೊಳ್ಳುವಂತಾಯಿತು. ಮಗುವಿನ ಶಿರಹೋದ ಬಗ್ಗೆ ಪಾರ್ವತಿಯು ದುಃಖಿಸಿದಾಗ ಶಿವನು ಐರಾವತದ ಸಂತಾನವಾದ ಆನೆಯೊಂದರ ಶಿರವನ್ನು ತರಿಸಿ ಆ ಮಗುವಿಗೆ ಜೋಡಿಸಿ ‘ಗಣಾಧಿಪತಿ’ಯೆಂಬುದಾಗಿ ಹರಸಿದ ಎಂದು ಬ್ರಹ್ಮ ವೈವರ್ತ ಪುರಾಣದ ‘ಗಣಪತಿ ಖಂಡ’ವು ಹೇಳುತ್ತದೆ.

ಪಾರ್ವತಿಯು ತಾನಾಗಿಯೇ ಶನಿದೇವರನ್ನು ಒತ್ತಾಯಿಸಿ ಮಗುವನ್ನು ನೋಡುವಂತೆ ಮಾಡಿದ್ದು ಅದರಿಂದಾಗಿ ಮಗುವಿನ ತಲೆ ಹೋಗಿದ್ದು, ತಾನು ಶನಿ ದೇವರಿಗೆ ಶಾಪ ಕೊಟ್ಟದ್ದು ಹೀಗೆಲ್ಲ ಏಕೆ ಆಯಿತೆಂದು ವಿಷ್ಣುವನ್ನು ಕೇಳಿದಾಗ ವಿಷ್ಣುವು “ನಾನು ಬೇರೆಯಲ್ಲ, ಗಣಪತಿ ಬೇರೆಯಲ್ಲ, ಹಿಂದೆ ಕಶ್ಯಪನ ಪತ್ನಿಯಾಗಿದ್ದ ದನುವಿಗೆ ಮಾಲಿ, ಸುಮಾಲಿ ಹಾಗೂ ಮಾಲ್ಯವಂತ ಎಂಬ ಮೂವರು ಮಕ್ಕಳಿದ್ದರು, ಅದರಲ್ಲಿ ಸುಮಾಲಿಯನ್ನು ವಿಷ್ಣು ವಾದ ನಾನು ಕೊಂದಾಗ ಕೋಪಗೊಂಡ ಕಶ್ಯಪರು “ಶಿವ ಪಾರ್ವತಿಯ ಮಗನಾಗಿ ನೀನು ಜನಿಸಿದಾಗ ನನ್ನ ತಲೆ ಹೋಗಲಿ” ಎಂದು ಶಾಪ ಕೊಟ್ಟಿದ್ದರು, ಅದರಿಂದಾಗಿ ಹೀಗೆಲ್ಲಾ ಆಯ್ತುಎಂದು ವಿಷ್ಣು ಹೇಳಿದ. ಪರಶುರಾಮನು ಕಾರ್ತವೀರ್ಯಾರ್ಜುನನನ್ನು ಕೊಂದು ಈ ಸುದ್ದಿಯನ್ನು ತನ್ನ ಗುರುವಿಗೆ ಹೇಳಲೆಂದು ಹೋಗುತ್ತಿರುವಾಗ ಮಾರ್ಗದಲ್ಲಿ ಗಣಪತಿಯು ತಡೆದನು,ಕೋಪಗೊಂಡ ಪರಶುರಾಮನು ತನ್ನ ಕೊಡಲಿಯಿಂದ ಗಣಪತಿಯ ದಂತ ತುಂಡರಿಸಿದ, ಇದರಿಂದಾಗಿ ಗಣಪತಿಯು ‘ಏಕದಂತ’ ನಾದನು ಎಂದೂ ಸಹ ಬ್ರಹ್ಮವೈವರ್ತ ಪುರಾಣದ ಗಣಪತಿ ಖಂಡವು ಹೇಳುತ್ತದೆ. -ಎಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತ-

ನಾಡಹಬ್ಬಕ್ಕೆ ಈಗ ₹50 ಕೋಟಿ ಬಜೆಟ್

0

ವಿಶ್ವವಿಖ್ಯಾತ ದಸರಾ ಮಹೋತ್ಸವ 2022 ಹಿನ್ನೆಲೆ ದಸರಾಗೆ 50ಕೋಟಿ ರೂಪಾಯಿ ಖರ್ಚುಮಾಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಅರಮನೆ ಕಾರ್ಯಕ್ರಮಗಳಿಗೆ 5 ಕೋಟಿ ರೂಪಾಯಿ ಅರಮನೆ ಆಡಳಿತ ಮಂಡಳಿಯಿಂದಲೇ ಖರ್ಚು ಮಾಡಲಾಗಿದೆ. ಹೊರಗಿನ ಕಾರ್ಯಕ್ರಮಗಳಿಗೆ ಮುಡಾ ನೆರವು ನೀಡಲಾಗಿದ್ದು, 10ಕೋಟಿ ರೂ.ಗಳನ್ನು ಮುಡಾ ಮಂಜೂರು ಮಾಡಲಾವುದು. ಮುಂದಿನ ವಾರದಲ್ಲಿ ಅನುದಾನ ಬಿಡುಗಡೆ ನಿರೀಕ್ಷೆಯಿದೆ ಎಂದು ಮೈಸೂರು ಡಿಜಿ. ಡಾ.ಬಗಾದಿ ಗೌತಮ್‌ ತಿಳಿಸಿದ್ದಾರೆ.

ಬಿಬಿಎಂಪಿಯಿಂದ ಮಳೆಹಾನಿ ಪರಿಹಾರ ಘೋಷಣೆ

0

ಬೆಂಗಳೂರಿನಲ್ಲಿ ಭಾರೀ ಮಳೆಯಿಂದಾಗಿ ಮನೆಗಳಿಗೆ ಹಾನಿಯಾದ ಹಿನ್ನೆಲೆಯಲ್ಲಿ ಬಿಬಿಎಂಪಿಯಿಂದ 10 ಸಾವಿರ ರೂ. ಪರಿಹಾರ ಘೋಷಣೆ ಮಾಡಲಾಗಿದೆ.

ಬೆಂಗಳೂರಿನ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಮಾರತ್‌ಹಳ್ಳಿಯಲ್ಲಿ ರಾಜಕಾಲುವೆ ಮುಚ್ಚಿದ್ದಕ್ಕೆ ನಡುರಸ್ತೆಗೆ ಮಳೆ ನೀರು ನುಗ್ಗಿದೆ. ಮಾರತ್‌ಹಳ್ಳಿಯ ಇಕೋ ಸ್ಪೇಸ್ ಬಳಿಯ ಮುಖ್ಯರಸ್ತೆ ಜಲಾವೃತಗೊಂಡಿದೆ.

ಕೈಗೊಂಡನಹಳ್ಳಿ, ಸರ್ಜಾಪುರ ಕೆರೆಗಳ ನೀರು ರಸ್ತೆಗೆ ರಭಸವಾಗಿ ಹರಿದು ಬರುತ್ತಿದೆ. ಮಾರತ್‌ಹಳ್ಳಿ-ಸರ್ಜಾಪುರ ಔಟರ್‌ ರಿಂಗ್‌ರೋಡ್ ಜಲಾವೃತವಾಗಿದೆ.
ಮಳೆಯಿಂದಾಗಿ ಹಾನಿಯಾದ ಮನೆಗಳಿಗೆ ಬಿಬಿಎಂಪಿ 10 ಸಾವಿರ ರೂ. ಪರಿಹಾರ ಘೋಷಿಸಲಾಗಿದ್ದು, ಸರ್ವೆ ಕಾರ್ಯ ನಡೆಯುತ್ತಿದೆ. ಕಾನೂನು ಪ್ರಕಾರ ಪರಿಹಾರ ನೀಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ತಿಳಿಸಿದ್ದಾರೆ.

ಸಿಲಿಕಾನ್ ವ್ಯಾಲಿ ಈಗ ಸೈಬರ್ ಅಪರಾಧಗಳ ಸಂಖ್ಯೆಯಲ್ಲಿ ಪ್ರಥಮ

0

ರಾಜ್ಯ ರಾಜಧಾನಿ ಬೆಂಗಳೂರು ಸಿಲಿಕಾನ್ ವ್ಯಾಲಿ ಎಂದೇ ಹೆಸರುವಾಸಿ. NCBR ಸಲ್ಲಿಸಿರುವ ವರದಿಯಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, 2021 ರಲ್ಲಿ ಬೆಂಗಳೂರಿನಲ್ಲಿ 6523 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.

ಈ ಮೂಲಕ ಬೆಂಗಳೂರು ಈ ವಿಚಾರದಲ್ಲಿ ಪ್ರಥಮ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಹೈದರಾಬಾದ್ ನಗರವಿದ್ದು ಇಲ್ಲಿ ಒಟ್ಟು 3303 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. ಮೂರನೇ ಸ್ಥಾನದಲ್ಲಿ ದೇಶದ ವಾಣಿಜ್ಯ ರಾಜಧಾನಿ ಮುಂಬೈ ಇದ್ದು, ಇಲ್ಲಿ 2883 ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿವೆ.

ಏಳು ಐಎಎಸ್ ಅಧಿಕಾರಿಗಳ ವರ್ಗಾವಣೆ

ಡಾ.ರಿತೇಶ್‌ ಕುಮಾರ್‌ ಸಿಂಗ್‌ ಅವರನ್ನು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.
ಇನ್ನು ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಅವರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕಿ, ಎನ್‌.ಮಂಜುಶ್ರೀ ಅವರನ್ನು ಪೌರಾಡಳಿತ ನಿರ್ದೇಶಕಿಯಾಗಿ ವರ್ಗಾವಣೆ ಮಾಡಲಾಗಿದೆ.

ಆರ್‌. ವೆಂಕಟೇಶ್‌ ಕುಮಾರ್‌ ಅವರನ್ನು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ (ವೆಚ್ಚ) , ಡಾ.ಆರ್‌.ರಾಗಪ್ರಿಯಾ ರಾಷ್ಟ್ರೀಯ ಜೀವನೋಪಾಯ ಮಿಷನ್‌ ನಿರ್ದೇಶಕ, ಜಿ.ಆರ್‌.ಜೆ. ದಿವ್ಯಾ ಪ್ರಭು ಅವರನ್ನು ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಲಿ., ವ್ಯವಸ್ಥಾಪಕ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಅದರಂತೆ ಪಲ್ಲವಿ ಅಕ್ಕುರತಿ ಅವರು ಆರ್ಥಿಕ ನೀತಿ ಸಂಸ್ಥೆಯ ಜಂಟಿ ನಿರ್ದೇಶಕಿಯಾಗಿ ವರ್ಗಾವಣೆಗೊಂಡಿದ್ದಾರೆ.

ರಾಜ್ಯದ ನೆರೆ ಸಂತ್ರಸ್ತರಿಗೆ ₹255 ಕೋಟಿ ಬಿಡುಗಡೆ- ಸಚಿವ ಅಶೋಕ್

0

ನೆರೆ ಸಂತ್ರಸ್ತರಿಗಾಗಿ ಕಂದಾಯ ಇಲಾಖೆಯಿಂದ 255 ಕೋಟಿ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್​.ಅಶೋಕ್ ಅವರು ತಿಳಿಸಿದ್ದಾರೆ.

ಮಳೆ ಹಾನಿ ಕುರಿತ ವರದಿ ಪರಿಶೀಲಿಸಿ ಕೇಂದ್ರ ಸರ್ಕಾರಕ್ಕೆ ಅನದಾನ ಕೋರಿ ಮನವಿ ಸಲ್ಲಿಸಲಾಗುತ್ತೆ. ಎನ್​ಡಿಆರ್​​ಫ್ ಅಡಿ 1022.05 ಕೋಟಿ ಅನುದಾನ ಬರಬೇಕಿದೆ ಎಂದು ತಿಳಿಸಿದರು.

ಈಗಾಗಲೇ ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಭೇಟಿ ನೀಡ್ತಿದ್ದಾರೆ. ಮಳೆಯಿಂದ ಮನೆಗಳಿಗೆ ಹಾನಿಯಾದರೆ ತಕ್ಷಣ ಪರಿಹಾರ ನೀಡಲಾಗುತ್ತದೆ. ರಾಜ್ಯದಲ್ಲಿ ಜೂನ್​ನಿಂದ ಈವರೆಗೂ ಮಳೆಯಿಂದ 96 ಜನ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಯೊಳಗೆ ರಾಮನಗರ, ಬಳ್ಳಾರಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. 992 ಮನೆಗಳು ಹಾನಿಯಾಗಿವೆ. 10, 274 ಅರ್ಧ ಮನೆ ಹಾನಿಯಾಗಿವೆ. ನಿನ್ನೆ ಒಂದೇ ದಿನದಲ್ಲಿ 148 ಮನೆಗಳು ಹಾನಿಯಾಗಿದ್ದು, 258 ಪಶುಗಳು ಸಾವನ್ನಪ್ಪಿವೆ ಎಂದು ಹೇಳಿದರು.

ರಾಜ್ಯದಲ್ಲಿ 820 ಮಿಲಿಮೀಟರ್ ಮಳೆಯಾಗಿದೆ. ದಾವಣಗೆರೆ, ತುಮಕೂರು, ವಿಜಯಪುರ, ಮೈಸೂರು, ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಿದೆ. ಒಟ್ಟು 27 ಜಿಲ್ಲೆಗಳಲ್ಲಿ ಅತೀ ಹೆಚ್ಚಿನ ಮಳೆಯಾಗಿದೆ. ರಾಮನಗರ, ಮಂಡ್ಯದಲ್ಲಿ 9 ಮಿಲಿಮೀಟರ್​ನಷ್ಟು ಮಳೆಯಾಗಿದೆ.

ಕಳೆದ 24 ಗಂಟೆಯಲ್ಲಿ 20 ಜಿಲ್ಲೆಯಲ್ಲಿ ಮಳೆ ಎಫೆಕ್ಟ್ ಆಗಿದೆ. 29, 967 ಜನರಿಗೆ ಸಮಸ್ಯೆ ಆಗಿದೆ. ಜುಲೈ ಮತ್ತು ಅಗಸ್ಟ್ ತಿಂಗಳಿನಲ್ಲಿ ಕೃಷಿ ಬೆಳೆ 3,100.83 ಹೆಕ್ಟೇರ್, ತೋಟಗಾರಿಕಾ ಬೆಳೆ 201.95 ಹೆಕ್ಟೇರ್, ಬಹುವಾರ್ಷಿಕ ಬೆಳೆ 265.51 ಹೆಕ್ಟೇರ್, ಮೆಕ್ಕಲು ಮತ್ತು ಕೃಷಿ ಭೂಮಿ 0.84 ಹೆಕ್ಟೇರ್ ಮತ್ತು ರೇಷ್ಮೆ ಬೆಳೆ 0.13 ಹೆಕ್ಟೇರ್​ನಷ್ಟು ಭೂಮಿ ನಾಶವಾಗಿದೆ. 467 ಜಾನುವಾರುಗಳು ಸಾವನ್ನಪ್ಪಿವೆ. 24,408 ಮನೆಗಳು ಹಾನಿಯಾಗಿವೆ. 22,734 ಕಿ.ಮೀ ರಸ್ತೆ ಹಾನಿಯಾಗಿದ್ದು, ಇದರಲ್ಲಿ ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳು 4159 ಕಿ.ಮೀ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.