Saturday, March 21, 2026
Saturday, March 21, 2026
Home Blog Page 1453

ಅನಿವಾಸಿ ಭಾರತೀಯರಿಗೆಸ್ವದೇಶಿ ಆದಾಯತೆರಿಗೆ ಮಾಹಿತಿ

0

ಆದಾಯ ತೆರಿಗೆ ಎಂಬುದು ದೇಶದ ಪ್ರಗತಿಗೆ ಉನ್ನತ ಕೊಡುಗೆ ನೀಡುತ್ತದೆ ಎಂಬುದರಲ್ಲಿ ಸಂಶಯವೇ ಇಲ್ಲ. ಹಾಗಾಗಿ ಪ್ರತಿಯೊಬ್ಬ ಭಾರತೀಯ ನಾಗರಿಕ ಆದಾಯ ತೆರಿಗೆ ವ್ಯಾಪ್ತಿಯಲ್ಲಿ ಬರುವಂತಹ ಆದಾಯವನ್ನು ಹೊಂದಿದ್ದಲ್ಲಿ ತೆರಿಗೆ ನೀಡಬೇಕಾಗಿರುವುದು ಆದ್ಯ ಕರ್ತವ್ಯ.

ಆದರೆ, ಪಾಸ್ ಪೋರ್ಟ್ ಹೊಂದಿರುವ ಅನಿವಾಸಿ ಭಾರತೀಯರು ಒಮ್ಮೊಮ್ಮೆ ತಮ್ಮ ಭಾರತ ದೇಶದಲ್ಲಿರುವ ಪಿತ್ರಾರ್ಜಿತ ಆಸ್ತಿಯನ್ನು ಮಾರುವಾಗ ಅದರಿಂದ ಬರುವ ಆದಾಯಕ್ಕೂ ತೆರಿಗೆ ಕಟ್ಟಬೇಕೆ ಎಂಬ ಬಗ್ಗೆ ಪ್ರಶ್ನಿಸಿಕೊಳ್ಳುವುದು ಸಹಜ.

ಅನಿವಾಸಿ ಭಾರತೀಯರು ಆಸ್ತಿಯನ್ನು ಮಾರಾಟ ಮಾಡಲು ಏನೇನು ಮಾಡಬೇಕು
“ನಾನು ಭಾರತೀಯ, ಪಾಸ್‌ಪೋರ್ಟ್ ಹೊಂದಿರುವ ಅನಿವಾಸಿ ಭಾರತೀಯ. ನಾನು ಭಾರತದಲ್ಲಿ ನನ್ನ ಪೂರ್ವಜರ ಆಸ್ತಿಯನ್ನು ಮಾರಾಟ ಮಾಡಲು ಬಯಸುತ್ತಿದ್ದೇನೆ. ಆಸ್ತಿಯನ್ನು 1961 ರಲ್ಲಿ ಖರೀದಿಸಲಾಗಿದೆ. ಈಗ ಅದು ಕಾನೂನುಬದ್ಧ ಉತ್ತರಾಧಿಕಾರದ ಮೂಲಕ ನನ್ನ ಮಾಲೀಕತ್ವದಲ್ಲಿದೆ. ನಾನು ಈಗ ಆಸ್ತಿಯನ್ನು ಮಾರಾಟ ಮಾಡಲು ಬಯಸಿರುವುದರಿಂದ ಅದರ ಪ್ರತಿ ನನಗೆ ಯಾವುದೇ ಹೊಣೆಗಾರಿಕೆ ಇರುತ್ತದೆಯೇ? ನಾನು ಇಂಡೆಕ್ಸೇಶನ್ ಅನ್ನು ಕ್ಲೈಮ್ ಮಾಡಬಹುದೇ? ಅಂತಹ ಸಂದರ್ಭದಲ್ಲಿ ನನಗೆ ಟಿಡಿಎಸ್ ಅನ್ವಯಿಸುತ್ತದೆಯೇ? ಹೌದೆಂದಾದಲ್ಲಿ ಅದು ಎಷ್ಟು?” ಈ ಎಲ್ಲ ಪ್ರಶ್ನೆಗಳು ಸದ್ಯ ನಿಮದಾಗಿದ್ದರೆ ಈ ಬಗ್ಗೆ ಒಮ್ಮೆ ಈ ಲೇಖನ ಓದಿ.

ನೀವು ಎನ್‌ಆರ್‌ಐ ಆಗಿರಲಿ ಅಥವಾ ಭಾರತೀಯ ನಿವಾಸಿಯಾಗಿರಲಿ, ಪಿತ್ರಾರ್ಜಿತ ಆಸ್ತಿಯ ಮಾರಾಟದ ತೆರಿಗೆ ನಿಬಂಧನೆಗಳು ಒಂದೇ ಆಗಿರುತ್ತವೆ ಎಂಬುದನ್ನು ಇಲ್ಲಿ ಗಮನದಲ್ಲಿರಿಸಿಕೊಳ್ಳಬೇಕು.

ಬಂದಂತಹ ಲಾಭವನ್ನು ದೀರ್ಘಾವಧಿಯ ಬಂಡವಾಳದ ಲಾಭವಾಗಿ ಪರಿಗಣಿಸಿ ಅದರ ಮೇಲೆ ತೆರಿಗೆ ವಿಧಿಸಲಾಗುತ್ತದೆ
ಆಸ್ತಿಯನ್ನು 1961 ರಲ್ಲಿ ಸ್ವಾಧೀನಪಡಿಸಿಕೊಂಡಿರುವುದರಿಂದ, ಅದರ ಮಾರಾಟದ ಮೇಲೆ ಮಾಡಿದ ಯಾವುದೇ ಲಾಭವನ್ನು ದೀರ್ಘಾವಧಿಯ ಬಂಡವಾಳದ ಲಾಭವಾಗಿ ಪರಿಗಣಿಸಿ ಅದರ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಬಂಡವಾಳ ಲಾಭಗಳನ್ನು ಲೆಕ್ಕಾಚಾರ ಮಾಡುವ ಉದ್ದೇಶಕ್ಕಾಗಿ, ನೀವು 1ನೇ ಏಪ್ರಿಲ್ 2001 ರಂತೆ ಆಸ್ತಿಯ ನ್ಯಾಯೋಚಿತ ಮಾರುಕಟ್ಟೆ ಮೌಲ್ಯವನ್ನು ನಿಮ್ಮ ವೆಚ್ಚವಾಗಿ ತೆಗೆದುಕೊಳ್ಳಬೇಕಾಗುತ್ತದೆ. ನೀವು ನೋಂದಾಯಿತ ಮೌಲ್ಯಮಾಪಕರಿಂದ 1 ಏಪ್ರಿಲ್ 2001 ರಂತೆ ಆಸ್ತಿಯ ನ್ಯಾಯೋಚಿತ ಮಾರುಕಟ್ಟೆ ಮೌಲ್ಯಕ್ಕಾಗಿ ಮೌಲ್ಯಮಾಪನವನ್ನು ಮಾಡಿಸಿ ಅದರ ವರದಿಯನ್ನು ಪಡೆಯಬೇಕು.

ನ್ಯಾಯೋಚಿತ ಮಾರುಕಟ್ಟೆ ಮೌಲ್ಯವು ಆ ದಿನಾಂಕದ ಆಸ್ತಿಯ ಸ್ಟ್ಯಾಂಪ್ ಡ್ಯೂಟಿ ಮೌಲ್ಯಮಾಪನಕ್ಕಿಂತ ಹೆಚ್ಚಿರಬಾರದು
ನ್ಯಾಯೋಚಿತ ಮಾರುಕಟ್ಟೆ ಮೌಲ್ಯವು ಆ ದಿನಾಂಕದ ಆಸ್ತಿಯ ಸ್ಟ್ಯಾಂಪ್ ಡ್ಯೂಟಿ ಮೌಲ್ಯಮಾಪನಕ್ಕಿಂತ ಹೆಚ್ಚಿರಬಾರದು ಎಂಬ ನಿಯಮವಿದೆ. ಆಸ್ತಿಯ ಅಂತಹ ನ್ಯಾಯೋಚಿತ ಮಾರುಕಟ್ಟೆ ಮೌಲ್ಯವನ್ನು ಮಾರಾಟದ ವರ್ಷದ ವೆಚ್ಚದ ಹಣದುಬ್ಬರ ಸೂಚ್ಯಂಕದೊಂದಿಗೆ ಸೂಚ್ಯಂಕಗೊಳಿಸಬೇಕಾಗುತ್ತದೆ

ಮಾರಾಟವಾದ ನಂತರ ಸೂಚ್ಯಂಕ ವೆಚ್ಚ ಸೇರಿದಂತೆ ಅದಕ್ಕೆ ಸಂಬಂಧಿಸಿದ ಪ್ರಾಸಂಗಿಕ ವೆಚ್ಚಗಳನ್ನು ಕಡಿತಗೊಳಿಸಿದ ನಂತರ ಉಳಿಯುವ ನಿವ್ವಳ ಮಾರಾಟದ ಬೆಲೆ ನೀವು ಪಾವತಿಸಬೇಕಾದ ತೆರಿಗೆಯ ಅಡಿಯಲ್ಲಿ ದೀರ್ಘಾವಧಿಯ ಬಂಡವಾಳ ಲಾಭಗಳೆಂದು ಪರಿಗಣಿಸಲ್ಪಟ್ಟು ಅದರ ಮೇಲೆ ತೆರಿಗೆ @ 20% (ಜೊತೆಗೆ ಸರ್ಚಾರ್ಜ್ ಮತ್ತು ಸೆಸ್) ಪಾವತಿಸ ಬೇಕಾಗುತ್ತದೆ.

ಹೌದು, ಈ ವಹಿವಾಟಿನ ಮೇಲೆ ತೆರಿಗೆ ಕಡಿತ ಅನ್ವಯಿಸುತ್ತದೆ. ನೀವು ತೆರಿಗೆ ಉದ್ದೇಶಗಳಿಗಾಗಿ ಅನಿವಾಸಿಯಾಗಿರುವುದರಿಂದ, ಆಸ್ತಿಯ ಮಾರಾಟದ ಮೌಲ್ಯವನ್ನು ಲೆಕ್ಕಿಸದೆಯೇ ತೆರಿಗೆ ವಿಧಿಸಬಹುದಾದ ಬಂಡವಾಳ ಲಾಭಗಳ ಮೇಲೆ ಸೆಕ್ಷನ್ 195 @ 20% ರ ಪ್ರಕಾರ ಮೂಲದಲ್ಲಿಯೇ ತೆರಿಗೆಯನ್ನು ಕಡಿತಗೊಳಿಸಬೇಕಾಗುತ್ತದೆ.

ಖರೀದಿದಾರರು ದೀರ್ಘಾವಧಿಯ ಬಂಡವಾಳ ಲಾಭಗಳ ತೆರಿಗೆಯ ಮೊತ್ತವನ್ನು ಸರಿಯಾಗಿ ಲೆಕ್ಕಾಚಾರ ಮಾಡಲು, ನೀವು ಮೌಲ್ಯಮಾಪನ ಪ್ರಮಾಣಪತ್ರ ಮತ್ತು ಮಾರಾಟದ ವಹಿವಾಟಿಗೆ ತಗಲುವ ವೆಚ್ಚಗಳಂತಹ ಸಂಬಂಧಿತ ದಾಖಲೆಗಳನ್ನು ಹಂಚಿಕೊಳ್ಳಬೇಕಾಗುತ್ತದೆ. ಖರೀದಿದಾರರು ಮೂಲದಲ್ಲಿ ತೆರಿಗೆಯನ್ನು ಕಡಿತಗೊಳಿಸಬಾರದು ಎಂದು ನೀವು ಬಯಸಿದರೆ, ಮೂಲದಲ್ಲಿ ತೆರಿಗೆಯನ್ನು ಕಡಿತಗೊಳಿಸದಿರುವ ಬಗ್ಗೆ ಪ್ರಮಾಣಪತ್ರವನ್ನು ನೀಡಲು ನೀವು ನ್ಯಾಯವ್ಯಾಪ್ತಿಯ ಆದಾಯ ತೆರಿಗೆ ಅಧಿಕಾರಿಯನ್ನು ಸಹ ಸಂಪರ್ಕಿಸಬಹುದು.

ಬಡವಿದ್ಯಾರ್ಥಿಗಳಿಗೆ ಭೋದಿಸಲು ಉದ್ಯೋಗ ತೊರೆದ ಐಎಎಸ್ ಅಧಿಕಾರಿ

0

ಯುಪಿಎಸ್‌ಸಿ ಪರೀಕ್ಷೆಗಳೆಂದರೆ ಕಬ್ಬಿಣದ ಕಡಲೆ ಎಂಬ ಮಾತೇ ಇದೆ. ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕೆಂದರೆ ಅಷ್ಟೇ ತಯಾರಿ ಕೂಡ ಮುಖ್ಯ.

ಐಎಎಸ್ ಅಧಿಕಾರಿಯಾಗಿರುವ ಅರುಣ್ ಕುಮಾರ್ ಅವರು ಹಿಂದುಳಿದ ಯುಪಿಎಸ್‌ಸಿ ಆಕಾಂಕ್ಷಿಗಳಿಗಾಗಿಯೇ ತಮ್ಮ ಐಎಎಸ್ ಸ್ಥಾನಕ್ಕೆ ರಾಜೀನಾಮೆ ನೀಡಿ ಬೋಧಿಸುವ ಕಾಯಕಕ್ಕೆ ಮುನ್ನುಡಿ ಬರೆದಿದ್ದಾರೆ.

ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಬೋಧಿಸಲು ಉದ್ಯೋಗವನ್ನೇ ತೊರೆದ ಐಎಎಸ್ ಅಧಿಕಾರಿ
ಸ್ವಂತ ಸುಖಕ್ಕಿಂತ ಸೇವೆಯೇ ಮೊದಲು ಎಂಬ ಮನೋಭಾವವನ್ನು ಮೈಗೂಡಿಸಿಕೊಂಡಿರುವ ಒಬ್ಬ ಅಸಾಧಾರಣ ವ್ಯಕ್ತಿ ಅರುಣ್ ಕುಮಾರ್. ಮಾಜಿ ಐಎಎಸ್ ಅಧಿಕಾರಿಯಾಗಿದ್ದ ಅರುಣ್ ಕುಮಾರ್ ಬಿಹಾರದ ಪಾಟ್ನಾದಲ್ಲಿರುವ ಹಿಂದುಳಿದ ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಬೋಧಿಸುವ ಸಲುವಾಗಿ ತಮ್ಮ ಪ್ರತಿಷ್ಠಿತ ಕೆಲಸವನ್ನು ತೊರೆದರು. ಅವರ ನಿಸ್ವಾರ್ಥತೆ ಮತ್ತು ಪರಹಿತಚಿಂತನೆಯು ಈಗ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಪ್ರಶಂಸೆ ಮತ್ತು ಮೆಚ್ಚುಗೆಯನ್ನು ಗಳಿಸುತ್ತಿದೆ.

ಯುಪಿಎಸ್‌ಸಿ ಕೋಚಿಂಗ್ ತರಗತಿಯ ಹೆಚ್ಚುವರಿ ಶುಲ್ಕವನ್ನು ಭರಿಸಲಾಗದೇ ಇರುವ ವಿದ್ಯಾರ್ಥಿಗಳಿಗೆ 1994 ರ ಬ್ಯಾಚ್‌ನ IAS ಅಧಿಕಾರಿ, ಅರುಣ್ ಕುಮಾರ್ ಉಚಿತ ತರಗತಿಗಳನ್ನು ನಡೆಸುತ್ತಾರೆ ಎಂಬುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಪರೀಕ್ಷೆ ಬರೆಯಲು ಆರ್ಥಿಕ ಸ್ಥಿತಿ ಅಡಚಣೆಯಾಗಿರಬಾರದು ಎಂಬುದೇ ಇವರ ಉದ್ದೇಶವಾಗಿದೆ.
ಗಂಗಾ ನದಿಯ ದಡದಲ್ಲಿ ತಮ್ಮ ಪತ್ನಿ ರಿತು ಜೈಸ್ವಾಲ್ ಮುಕ್ತ ತರಗತಿಗಳನ್ನು ನಡೆಸುತ್ತಿದ್ದಾಗ ಅದರಿಂದ ಸ್ಫೂರ್ತಿ ಪಡೆದ ಅರುಣ್ ಕುಮಾರ್ ಯಾವುದೇ ವಿದ್ಯಾರ್ಥಿಗೂ UPSC ನಾಗರಿಕ ಸೇವೆಗಳ ಪರೀಕ್ಷೆಯನ್ನು ಭೇದಿಸಲು ಆರ್ಥಿಕ ಸ್ಥಿತಿ ಅಡಚಣೆಯಾಗಿರಬಾರದು ಎಂಬುದಾಗಿ ತಿಳಿಸಿದ್ದಾರೆ.

ಚಿತ್ರರಂಗದಲ್ಲಿ 25 ವರ್ಷಗಳ ಸಾಧನೆ ಕಿಚ್ಚನ ವಿಶೇಷ ಅಂಚೆ ಲಕೋಟೆಗೆ ಸಿದ್ದತೆ

0

ಭಾರತೀಯ ಅಂಚೆ ಇಲಾಖೆಯು ಕಿಚ್ಚ ಸುದೀಪ್ ಅವರ ವಿಶೇಷ ಅಂಚೆ ಲಕೋಟೆಯನ್ನು ಹೊರ ತರುತ್ತಿದೆ.

ಭಾರತ ಸರ್ಕಾರದ ಅಂಚೆ ಇಲಾಖೆಯು ದೇಶದ ಮಹತ್ತರ ಘಟನೆಗಳನ್ನು, ಪ್ರಶಸ್ತಿಗಳನ್ನು ಅಥವಾ ವ್ಯಕ್ತಿಗಳ ಸಾಧನೆಗಳನ್ನು ನೂರಾರು ವರ್ಷ ದಾಖಲೆಯಾಗಿ ಉಳಿಸಬೇಕೆಂಬ ಕಾರಣಕ್ಕೆ ‘ವಿಶೇಷ ಅಂಚೆ ಲಕೋಟೆಯನ್ನು’ ಬಿಡುಗಡೆ ಮಾಡುತ್ತದೆ.

ಚಿತ್ರರಂಗದಲ್ಲಿ 25ವರ್ಷಗಳನ್ನು ಕಳೆದಿರುವ ನಟ ಸುದೀಪ್ ಅವರ ಸಾಧನೆಯನ್ನು ಸಹ ಭಾರತೀಯ ಅಂಚೆ ಇಲಾಖೆ ದಾಖಲೆ ಮಾಡುತ್ತಿದೆ. ಆ ನಿಮಿತ್ತ ಇಂದು ಅಂಚೆ ಇಲಾಖೆಯ ಅಧೀಕ್ಷರಾದ ಮಾದೇಶ್ ಅವರು ಕಿಚ್ಚ ಸುದೀಪ್ ಅವರ ಮನೆಗೆ ಆಗಮಿಸಿ ಅವರಿಂದ NOC ಯನ್ನು ಪಡೆದರು ಮತ್ತು ಬಿಡುಗಡೆ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಆಹ್ವಾನಿಸಿದರು.
ಈ ವಿಶೇಷ ಅಂಚೆ ಲಕೋಟೆಯ ಬಿಡುಗಡೆ ಸಮಾರಂಭವು ಶೀಘ್ರದಲ್ಲಿಯೇ ನೆರವೇರಲಿದೆ. ಕಿಚ್ಚ ಸುದೀಪ್ ಅವರ ಸಾಧನೆಗಳನ್ನು ಗುರುತಿಸಿ ‘ವಿಶೇಷ ಅಂಚೆ ಲಕೋಟೆ’ ಮೂಲಕ ಗೌರವ ಸಲ್ಲಿಸುತ್ತಿರುವ ಭಾರತೀಯ ಅಂಚೆ ಇಲಾಖೆಯನ್ನು ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಮತ್ತು ಕನ್ನಡ ಮನಸುಗಳು ಸಾಮಾಜಿಕ ಜಾಲತಾಣದಲ್ಲಿ ಹೃದಯತುಂಬಿ ಶ್ಲಾಘಿಸುತ್ತಿದ್ದಾರೆ.

ರಾಜ್ಯದಲ್ಲಿ ಇನ್ನೂ ಎರಡು ದಿನ ಭಾರಿ ಮಳೆ ಸಾಧ್ಯತೆ

0

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇನ್ನೂ ಎರಡು ದಿನ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರ್ನಾಟಕದ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಕಲಬುರ್ಗಿ, ಯಾದಗಿರಿ ಹಾಗೂ ದಕ್ಷಿಣ ಒಳನಾಡಿನ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳು ಹಾಗೂ ಉತ್ತರ ಕರ್ನಾಟಕದ ಬೆಳಗಾವಿ, ಗದಗ, ಧಾರವಾಡ, ಬಳ್ಳಾರಿ, ಹಾವೇರಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಕಾಂಗ್ರೆಸ್ ನಿಂದ 2ನೇ ಹಂತದ ಪಾದಯಾತ್ರೆ

0

ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಕಾಲದಲ್ಲಿ ದೇಶಕ್ಕಾಗಿ ಪಕ್ಷ ನೀಡಿರುವ ನೀಡಿರುವ ಕೊಡುಗೆಗಳನ್ನು ಜನತೆಗೆ ತಿಳಿಸಲು ಕಲಬುರಗಿ ದಕ್ಷಿಣದಲ್ಲಿ ಕಾಂಗ್ರೆಸ್‌ ಪಕ್ಷದ ಮುಖಂಡರ 2ನೇ ಹಂತದ ಜನಜಾಗೃತಿ ಪಾದಯಾತ್ರೆ ಮುಂದುವರಿದಿದ್ದು, ನಗರದ ಕೊಟನೂರ ಡಿ ಗ್ರಾಮದಲ್ಲಿ ಹಲವಾರು ಮುಖಂಡರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು.

ಮಾಜಿ ಎಂಎಲ್‌ಸಿ ಅಲ್ಲಂಪ್ರಭು ಪಾಟೀಲ ನೇತೃತ್ವದಲ್ಲಿನ ಕಾಂಗ್ರೆಸ್‌ ಪಕ್ಷದ ಪಾದಯಾತ್ರೆಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಮುಖಂಡರಾದ ನೀಲಕಂಠರಾವ್‌ ಮೂಲಗೆ, ಚೇತನ ಗೋನಾಯಕ, ಲಿಂಗರಾಜ ಕಣ್ಣಿ, ಲಿಂಗರಾಜ ತಾರಫೈಲ್‌ ಹಾಗೂ ಇನ್ನಿತರರು ಪಾಲ್ಗೊಂಡು, ಕಾಂಗ್ರೆಸ್‌ ಪಕ್ಷದ ಕೊಡುಗೆಗಳನ್ನು ವಿವರಿಸಿದರು.

ಕೊಟನೂರ ಡಿ ಗ್ರಾಮದ ಪಾದಯಾತ್ರೆಯಲ್ಲಿ ಮುಖಂಡರಾದ ಮಹಾದೇವಪ್ಪ ಪಟೀಲ್‌, ಸಂತೋಷ ಪಾಟೀಲ, ಜಗ್ಗು ಸಿರಸಗಿ, ಸುನೀಲ ಗೌನಳ್ಳಿ, ಶ್ರೀಶೈಲ ಹೂಗಾರ, ಚೇತನ ಸಾವಳಗಿ, ಅಂಬರೀಶ ಜಾನಿ, ಮಲ್ಲಿಕಾರ್ಜುನ ಗುಡೂರ್‌ ಹಾಗೂ ಇತರರು ವಿವಿಧ ಪಕ್ಷಗಳನ್ನು ತೆರೆದು ಕಾಂಗ್ರೆಸ್‌ ಸೇರಿದರು. ಕಾಂಗ್ರೆಸ್‌ ಪಕ್ಷದ ಮುಖಂಡ, ಮಾಜಿ ಎಂಎಲ್‌ಸಿ ಅಲ್ಲಂಪ್ರಭು ಪಾಟೀಲರು ಕಾಂಗ್ರೆಸ್‌ ಧ್ವಜ ನೀಡಿ ಸ್ವಾಗತಿಸಿಕೊಂಡರು.

ಪಕ್ಷದ ಮುಖಂಡರಾದ ಗುಂಡಪ್ಪಾ ಲಂಡನಕರ್‌, ಲತಾ ರವಿ ರಾಠೊಡ್‌ ವಾಣಿಶ್ರೀ ಸಗರಕರ್‌, ಶೋಭಾ ಕಾಳೆ, ಅವಿನಾಶ ಭಾಸ್ಕರ ಹಾಗೂ ಪಕ್ಷದ ಹಿರಿಯ-ಕಿರಿಯ ಮುಖಂಡರು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಮಂಗಳವಾರ ಪಾದಯಾತ್ರೆಯು ಪಾಣೆಗಾಂವ, ನಾಗನಳ್ಳಿ, ಕೋಟನೂರ್‌, ಉದನೂರ್‌, ಹುಣಸಿಹಡಗಿಲ್‌, ಸುಲ್ತಾನಪುರ್‌, ನಾಗನಹಳ್ಳಿ ಗ್ರಾಮಗಳ ಮೂಲಕ ಸಾಗಿ ಬಂತು.

ಪ್ಲಾಸ್ಟಿಕ್ ವಾಟರ್ ಬಾಟಲ್ ಗಳಿಂದ ಗಣೇಶ ಮೂರ್ತಿ ನಿರ್ಮಾಣ

0

ರಾಜ್ಯದಲ್ಲಿ ಗಣೇಶ ಹಬ್ಬ ಆಚರಣೆ ಜೋರಾಗಿದ್ದು, ಬಾಗಲಕೋಟೆಯ ಇಳಕಲ್​ನಲ್ಲಿ ಪ್ಲಾಸ್ಟಿಕ್ ವಾಟರ್‌ ಬಾಟಲ್​ಗಳಿಂದ ಗಣೇಶ ಮೂರ್ತಿಯನ್ನು ತಯಾರು ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಪ್ರತಿ ವರ್ಷದಂತೆ ಈ ಬಾರಿಯೂ ಗಣೇಶ ಹಬ್ಬಕ್ಕೆ ಎಲ್ಲಡೆ ತಯಾರಿ ಜೋರಾಗಿದೆ. ಸಾಮಾನ್ಯವಾಗಿ ಮಣ್ಣಿನಲ್ಲಿ ವಿವಿಧ ಬಗೆಯ ಗಣಪನ ಮೂರ್ತಿಗಳನ್ನು ನೋಡಿರ್ತಿವಿ. ಆದ್ರೆ, ಬಾಗಲಕೋಟೆಯ ಇಳಕಲ್​ನಲ್ಲಿ ಪ್ಲಾಸ್ಟಿಕ್ ವಾಟರ್‌ ಬಾಟಲ್​ಗಳಿಂದ ಗಣೇಶ ಮೂರ್ತಿಯನ್ನು ತಯಾರು ಮಾಡಲಾಗಿದೆ.

ನಗರದ ವಿಜಯ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಇಂತಹ ಪ್ರಯತ್ನವೊಂದಕ್ಕೆ ಮುಂದಾಗಿದ್ದು, ಸುಮಾರು 20 ಅಡಿ ಎತ್ತರದ ಗಣೇಶ ಮೂರ್ತಿಯನ್ನ ಸಿದ್ಧಪಡಿಸಲಾಗಿದೆ.

ಹಿಂದಿನ ಸೋವಿಯಟ್ ಒಕ್ಕೂಟದ ಮಾಜಿ ಅಧ್ಯಕ್ಷ ಗೋರ್ಬಚೆವ್ ನಿಧನ

0

ರಷ್ಯಾದ ಮಾಜಿ ಅಧ್ಯಕ್ಷ, ಸೋವಿಯತ್‌ ಒಕ್ಕೂಟದ (ಯುಎಸ್‌ಎಸ್‌ಆರ್)‌ ಕೊನೆಯ ನಾಯಕ ಮಿಖಾಯಿಲ್‌ ಗೊರ್ಬಚೆವ್‌ (91) ಅವರು ನಿಧನರಾಗಿದ್ದಾರೆ.

ಧೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ರಷ್ಯಾದ ಸೆಂಟ್ರಲ್‌ ಕ್ಲಿನಿಕಲ್‌ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ವೈದ್ಯರು ಅಧಿಕೃತವಾಗಿ ತಿಳಿಸಿದ್ದಾರೆ.

ಸೋವಿಯತ್‌ ಒಕ್ಕೂಟದ ಕೊನೆಯ ಅಧ್ಯಕ್ಷರಾಗಿದ್ದ ಗೊರ್ಬಚೆವ್‌, ಯುನೈಟೆಡ್‌ ಸ್ಟೇಟ್ಸ್‌ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ಶಸ್ತ್ರಾಸ್ತ್ರ ಕಡಿತದ ಒಪ್ಪಂದ ಮಾಡಿಕೊಂಡಿದ್ದರು.

ದೇಶದ ಆಯ್ದ ಪ್ರದೇಶಗಳಲ್ಲಿ ದೀಪಾವಳಿ ವೇಳೆಗೆ5G ಸೇವೆ-ಮುಖೇಶ್ ಅಂಬಾನಿ

0

ರಿಲಯನ್ಸ್ ಇಂಡಸ್ಟ್ರೀಸ್ ಸೋಮವಾರ ತನ್ನ ವಾರ್ಷಿಕ ಸಾಮಾನ್ಯ ಸಭೆ ನಡೆಸುತ್ತಿದ್ದು ಇದರಲ್ಲಿ ಮುಖೇಶ್ ಅಂಬಾನಿ ಮಹತ್ವದ ಘೋಷಣೆ ಮಾಡಿದ್ದಾರೆ.

ರಿಲಯನ್ಸ್ ಏಕೀಕೃತ ಆದಾಯವು ಶೇಕಡಾ 47 ರಷ್ಟು ಏರಿಕೆಯಾಗಿ 7.93 ಲಕ್ಷ ಕೋಟಿ ರೂ.ಗೆ ಅಥವಾ 104.6 ಬಿಲಿಯನ್ ಡಾಲರ್​ಗೆ ತಲುಪಿದೆ ಎಂದು ಹೇಳಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನ 45ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಖ್ಯಸ್ಥ ಮುಖೇಶ್ ಅಂಬಾನಿ ಮಹತ್ವದ ಘೋಷಣೆ ಮಾಡಿದ್ದಾರೆ.

ಭಾರತದ ಆಯ್ದ ಕೆಲ ಪ್ರದೇಶಗಳಲ್ಲಿ ದೀಪಾವಳಿ ವೇಳೆಗೆ ಜಿಯೋ 5G ಸೇವೆ ಆರಂಭವಾಗಲಿದೆ ಎಂದು ಹೇಳಿದ್ದಾರೆ. ”ದೀಪಾವಳಿ 2022 ರ ಹೊತ್ತಿಗೆ ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದ ಮೆಟ್ರೋ ನಗರಗಳನ್ನು ಒಳಗೊಂಡಂತೆ ಬಹು ಪ್ರಮುಖ ನಗರಗಳಲ್ಲಿ ಜಿಯೋ 5G ಅನ್ನು ಪ್ರಾರಂಭಿಸುತ್ತೇವೆ. 5ಜಿಯನ್ನು ಬಳಸಿಕೊಂಡು, ನಾವು ಉನ್ನತ ಗುಣಮಟ್ಟದ, ಹೆಚ್ಚು ಕೈಗೆಟುಕುವ ಸ್ಥಿರ ಬ್ರಾಡ್ಬ್ಯಾಂಡ್ ಸೇವೆಗಳ ರೋಲ್-ಔಟ್ ಅನ್ನು ತ್ವರಿತಗೊಳಿಸಬಹುದು,” ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ.

ಜಿಯೋ 5 ಜಿ ವಿಶ್ವದ ಅತ್ಯಂತ ಸುಧಾರಿತ 5 ಜಿ ಆಗಿದೆ. ಜಿಯೋ 5G ವಿಶ್ವದ ಅತಿದೊಡ್ಡ ಮತ್ತು ಅತ್ಯಾಧುನಿಕ 5G ನೆಟ್‌ವರ್ಕ್ ಆಗಲಿದೆ. ಇದು Jio 4G ನೆಟ್‌ವರ್ಕ್‌ಗೆ ಅವಲಂಬನೆಯಾಗಿಲ್ಲ ಎಂಬುದನ್ನು ಕೂಡ ಸ್ಪಷ್ಟ ಪಡಿಸಿದ್ದಾರೆ. ನಮ್ಮ ಕಂಪನಿಯು ವಾರ್ಷಿಕ ಆದಾಯದಲ್ಲಿ 100 ಬಿಲಿಯನ್ ಡಾಲರ್ ದಾಟಿದ ಭಾರತದ ಮೊದಲ ಕಾರ್ಪೊರೇಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಗುಜರಾತಿನಲ್ಲಿ ನಡೆದ ಎಲ್ಲ ಬಾಬ್ರಿ ಮಸೀದಿ ಸಂಬಂಧಿಸಿದ ಪ್ರಕರಣಗಳೆಲ್ಲ ರದ್ದು

0

2002ರಲ್ಲಿ ಗುಜರಾತ್‌ನಲ್ಲಿ ನಡೆದ ಬಾಬ್ರಿ ಮಸೀದಿಗೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನೂ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.

ಈ ಪ್ರಕರಣಗಳು ಈಗ “ಸಮಯದ ಜೊತೆಗೂಡಲು ಅಸಮರ್ಥವಾಗಿವೆ” ಎಂದು ದೇಶದ ಸರ್ವೋಚ್ಛ ನ್ಯಾಯಾಲಯವು ಈ ಆದೇಶದ ವೇಳೆ ಹೇಳಿದೆ. ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದ ಒಂಬತ್ತು ಪ್ರಕರಣಗಳ ಪೈಕಿ ಎಂಟು ಪ್ರಕರಣಗಳ ವಿಚಾರಣೆಯನ್ನು ಮುಕ್ತಾಯಗೊಳಿಸಲಾಗಿದೆ.

ಪ್ರಸ್ತುತ ಗುಜರಾತ್‌ನ ನರೋಡಾ ಗಾಂವ್‌ನಲ್ಲಿರುವ ವಿಚಾರಣಾ ನ್ಯಾಯಾಲಯದಲ್ಲಿ ಅಂತಿಮ ವಾದದಲ್ಲಿ ಅಂತಿಮ ವಾದಗಳು ನಡೆಯುತ್ತಿವೆ ಎಂದು ನ್ಯಾಯಾಲಯ ಸೂಚಿಸಿದೆ.

ಕಾಲಾನಂತರದಲ್ಲಿ ಈ ಪ್ರಕರಣಗಳು ಈಗ ನಿರುಪಯುಕ್ತವಾಗಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಒಂಬತ್ತು ಪ್ರಕರಣಗಳಲ್ಲಿ ಎಂಟು ಪ್ರಕರಣಗಳ ವಿಚಾರಣೆ ಮುಗಿದಿದ್ದು, ವಿಚಾರಣಾ ನ್ಯಾಯಾಲಯದಲ್ಲಿ ಒಂದು ಪ್ರಕರಣದಲ್ಲಿ ಅಂತಿಮ ವಾದಗಳು ನಡೆಯುತ್ತಿವೆ.

ಒಂಬತ್ತು ಪ್ರಕರಣಗಳಲ್ಲಿ ಎಂಟು ಪ್ರಕರಣಗಳ ವಿಚಾರಣೆ ಮುಗಿದಿದ್ದು, ವಿಚಾರಣಾ ನ್ಯಾಯಾಲಯದಲ್ಲಿ ಒಂದು ಪ್ರಕರಣದಲ್ಲಿ ಅಂತಿಮ ವಾದಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.

ಭಾರತೀಯ ಆಹಾರ ನಿಗಮದಲ್ಲಿ ಉದ್ಯೋಗಾವಕಾಶಗಳು

0

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭಾರತೀಯ ಆಹಾರ ನಿಗಮದ ಅಧಿಕೃತ ವೆಬ್‌ಸೈಟ್ fci.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

FCI Recruitment 2022: ಭಾರತೀಯ ಆಹಾರ ನಿಗಮ (FCI) ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
ಎಫ್​ಸಿಐನ ವಿವಿಧ ವಲಯಗಳಲ್ಲಿನ ಮ್ಯಾನೇಜರ್ (ಜನರಲ್ / ಡಿಪೋ / ಅಕೌಂಟ್ / ಟೆಕ್ನಿಕಲ್ / ಸಿವಿಲ್ ಇಂಜಿನಿಯರಿಂಗ್ / ಎಲೆಕ್ಟ್ರಿಕಲ್ ಮೆಕ್ಯಾನಿಕಲ್ ಇಂಜಿನಿಯರಿಂಗ್) ಹುದ್ದೆಗಳಿಗೆ ಭರ್ತಿ ಪ್ರಕ್ರಿಯೆ ನಡೆಯುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭಾರತೀಯ ಆಹಾರ ನಿಗಮದ ಅಧಿಕೃತ ವೆಬ್‌ಸೈಟ್ fci.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
ಹುದ್ದೆಗಳ ವಿವರಗಳು:
ಒಟ್ಟು ಹುದ್ದೆಗಳು- 113
ಉತ್ತರ ವಲಯ: 38 ಹುದ್ದೆಗಳು
ಪೂರ್ವ ವಲಯ: 21

ಹುದ್ದೆಗಳು
ಈಶಾನ್ಯ ವಲಯ: 18

ಹುದ್ದೆಗಳು
ಅರ್ಹತಾ ಮಾನದಂಡ:
ಮ್ಯಾನೇಜರ್ (ಸಾಮಾನ್ಯ) ಹುದ್ದೆ: ಕನಿಷ್ಠ 60% ಅಂಕಗಳೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ CA/ICWA/CS ಮಾಡಿರಬೇಕು. ಇನ್ನು SC/ST/ PwBD ಅಭ್ಯರ್ಥಿಗಳಿಗೆ ಕನಿಷ್ಠ ಅಂಕಗಳಲ್ಲಿ ವಿನಾಯಿತಿ ನೀಡಲಾಗಿದ್ದು, ಅದರಂತೆ 55% ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಮ್ಯಾನೇಜರ್ (ಡಿಪೋ) ಹುದ್ದೆ: ಕನಿಷ್ಠ 60% ಅಂಕಗಳೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ CA/ICWA/CS ಮಾಡಿಬೇಕು. ಇನ್ನು 55% ಹೊಂದಿರುವ SC/ST/ PwBD ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು.

ವಯೋಮಿತಿ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 28 ವರ್ಷಗಳಿಗಿಂತ ಹೆಚ್ಚಿರಬಾರದು. ಇದಾಗ್ಯೂ ಕೆಲ ಹುದ್ದೆಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಅರ್ಹ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ಪರಿಶೀಲಿಸಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಶುಲ್ಕವಾಗಿ ರೂ 800 ಪಾವತಿಸಬೇಕಾಗುತ್ತದೆ. ಇನ್ನು SC / ST / PWBD ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಸೆಪ್ಟೆಂಬರ್ 26, 2022

ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಅಭ್ಯರ್ಥಿಗಳು Fci.gov.in ಮೂಲಕ ಆನ್‌ಲೈನ್‌ನಲ್ಲಿ ನೇರವಾಗಿ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಮಾಡಿ.