Saturday, March 21, 2026
Saturday, March 21, 2026
Home Blog Page 1452

ಎಸ್ ಬಿ ಐ ನಲ್ಲಿ ಪದವೀಧರರಿಗೆ ಉದ್ಯೋಗಾವಕಾಶ

0

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ
ಹುದ್ದೆಗಳ ಸಂಖ್ಯೆ 714.
ಉದ್ಯೋಗ ಸ್ಥಳ ಮುಂಬೈ ಸೇರಿದಂತೆ ದೇಶಾದ್ಯಂತ.
ಸಂಬಳ 36000-78230 ರೂ ಪ್ರತಿ ತಿಂಗಳು
ಅಧಿಕೃತ ನೇಮಕಾತಿ ಅನುಸಾರ ಅಭ್ಯರ್ಥಿಗಳು ಕನಿಷ್ಟ 20ರಿಂದ ಗರಿಷ್ಟ 50 ವರ್ಷಗಳ ವಯೋಮಿತಿ ಹೊಂದಿರಬೇಕು.
ಅರ್ಜಿ ಸಲ್ಲಿಕೆಯನ್ನು ಆನ್​ಲೈನ್​​ ಮೂಲಕ ಕಳುಹಿಸಬೇಕು.

ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಆನ್​ಲೈನ್​ ಮೂಲಕ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 20 ಸೆಪ್ಟೆಂಬರ್​ ಆಗಿದೆ.

ಆಯ್ಕೆ ಪ್ರಕ್ರಿಯೆ ವಿಧಾನ ಎಂದರೆ
ಶಾರ್ಟ್​ಲಿಸ್ಟ್​, ಸಂವಹನ, ಆನ್‌ಲೈನ್ ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 31 ಆಗಸ್ಟ್​​ 2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ಸೆಪ್ಟೆಂಬರ್​​ 2022.

ಅಧಿಕೃತ ವೆಬ್‌ಸೈಟ್: sbi.co.in

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಎಂದರೆ

ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.

ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ಇತ್ಯಾದಿ ದಾಖಲೆಗಳನ್ನು ಅರ್ಜಿಯಲ್ಲಿ ದಾಖಲಿಸಿ

ಅನ್ವಯಿಸಿದರೆ, ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ.

-ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ.

ಆತ್ಮಹತ್ಯೆಗೆ ನೇಣಿನ ಕುಣಿಕೆಯೇ ಹೆಚ್ಚು ಬಳಕೆ- ಅಪರಾಧಗಳ ದಾಖಲೆ ಬ್ಯೂರೋ ವರದಿ

0

ಆತ್ಮಹತ್ಯೆ ಮಾಡಿಕೊಳ್ಳಲು ಇತರ ಯಾವುದೇ ವಿಧಾನಗಳಿಗಿಂತ ಕಳೆದ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ತಮ್ಮ ಜೀವನವನ್ನು ಅಂತ್ಯಗೊಳಿಸಿಕೊಳ್ಳಲು ಹೆಚ್ಚಾಗಿ ಅಳವಡಿಸಿಕೊಂಡ ನೇಣು ಬಿಗಿದುಕೊಳ್ಳುವ ವಿಧಾನವನ್ನೇ ಬಳಸಿ ಹೆಚ್ಚು ಜನರು ಸಾವಿಗೀಡಾಗುತ್ತಿದ್ದಾರೆ.

ಕುಟುಂಬ ಸಂಬಂಧಿತ ಸಮಸ್ಯೆಗಳು ಹಾಗೂ ಅನಾರೋಗ್ಯದ ಮೇಲಿನ ಹತಾಶೆಯು ಭಾರತೀಯರು ತಮ್ಮ ಜೀವನವನ್ನು ಕೊನೆಗೊಳಿಸಿಕೊಳ್ಳುವಂತೆ ಮಾಡಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ 2019-21ರ ಇತ್ತೀಚಿನ ವರದಿ ಪ್ರಕಾರ, 54 ವರ್ಷಗಳಲ್ಲಿ 17.56 ಲಕ್ಷಕ್ಕೂ ಹೆಚ್ಚು ಮಹಿಳೆಯರು ಸೇರಿದಂತೆ 4.7 ಕೋಟಿ ಮಂದಿ ಆತ್ಮಹತ್ಯೆ ಮಾಡಿಕೊಳ್ಳಲು ವಿವಿಧ ಮಾರ್ಗಗಳನ್ನು ಆಶ್ರಯಿಸಿ ತಮ್ಮ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾರೆ ಎಂದು ತಿಳಿಸಿದೆ.

2020 ರಲ್ಲಿ 88,460 ವ್ಯಕ್ತಿಗಳು ಮತ್ತು 2021 ರಲ್ಲಿ 93,580 ಜನರು ಸೀಲಿಂಗ್ ಫ್ಯಾನ್‌ಗಳು ಅಥವಾ ಛಾವಣಿಗೆ ನೇಣು ಬಿಗಿದುಕೊಂಡಿದ್ದು, ಒಟ್ಟು ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ 58 ಕ್ಕಿಂತ ಹೆಚ್ಚು ಜನರು ತಮ್ಮ ಜೀವನವನ್ನು ಕೊನೆಗೊಳಿಸುವುದ್ಕೆ ಈ ವಿಧಾನಕ್ಕೆ ಆದ್ಯತೆ ನೀಡಿದ್ದಾರೆ ಎಂಬುದು ಅಂಕಿಅಂಶಗಳಿಂದ ತಿಳಿದುಬಂದಿದೆ.

ಎನ್‌ಸಿಆರ್‌ಬಿ ವರದಿಯಿಂದ ಹೊರಹೊಮ್ಮಿದ ಆಶ್ಚರ್ಯಕರ ಸಂಗತಿಯೆಂದರೆ, ಭಾರತದಲ್ಲಿ 1998 ರಿಂದ 43,027 ಮಹಿಳೆಯರು ಸೇರಿದಂತೆ 104,713 ವ್ಯಕ್ತಿಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗಳ ಹೆಚ್ಚಳದ ಪ್ರಮಾಣವು 1998 ರಿಂದ ತೀವ್ರವಾಗಿ ಏರಲು ಪ್ರಾರಂಭಿಸಿತು. ಆ ವರ್ಷದಿಂದ, ವರದಿಯಾದ ಆತ್ಮಹತ್ಯೆಗಳ ಸಂಖ್ಯೆ ಆರು ಅಂಕೆಗಳಿಗೆ ಏರಿಕೆಯಾಗಿದೆ. 2009 ರಲ್ಲಿ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕೆಲವು ಸಣ್ಣ ವ್ಯತ್ಯಾಸಗಳೊಂದಿಗೆ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 1,10,587 ಕ್ಕೆ ಏರಿಕೆಯಾಯಿತು ಎಂದು ಎನ್‌ಸಿಆರ್‌ಬಿ ಮೂಲಗಳು ತಿಳಿಸಿವೆ.

2020 ಮತ್ತು 2019 ರಲ್ಲಿ ಕ್ರಮವಾಗಿ 1,53,052 ಮತ್ತು 1,39,123 ಜನರು ಆತ್ಮಹತ್ಯೆ ಮಾಡಿಕೊಂಡಿದೆ. ಇದಕ್ಕೆ ಹೋಲಿಸಿದರೆ 2021 ರಲ್ಲಿ 1,65,033 ಆತ್ಮಹತ್ಯೆಗಳು ವರದಿಯಾಗುವ ಮೂಲಕ ಈ ಸಂಖ್ಯೆಗಳು ಗರಿಷ್ಠ ಮಟ್ಟವನ್ನು ತಲುಪಿದವು. 2017ರಲ್ಲಿ ಒಟ್ಟು 1,29,887 ಆತ್ಮಹತ್ಯೆಗಳು ವರದಿಯಾಗಿದೆ. 2018ರಲ್ಲಿ 1,34,516ಕ್ಕೆ ಏರಿಕೆಯಾಗಿದೆ.

2014 ಮತ್ತು 2021 ರ ನಡುವೆ 310 ತೃತೀಯ ಲಿಂಗಿಗಳು ತಮ್ಮ ಜೀವನವನ್ನು ಕೊನೆಗೊಳಿಸಿದ್ದಾರೆ. 2021 ರಲ್ಲಿ 28, 2020 ರಲ್ಲಿ 22, 2019 ರಲ್ಲಿ 17 ಹಾಗೂ 2018 ರಲ್ಲಿ 11 ಜನ ತೃತೀಯ ಲಿಂಗಿಗಳು ಪ್ರಾಣ ಕಳೆದುಕೊಂಡಿದ್ದಾರೆ. 2021ರಲ್ಲಿ ದೇಶದಾದ್ಯಂತ 131 ಸಾಮೂಹಿಕ ಮತ್ತು ಕುಟುಂಬ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.

ಈ ಪೈಕಿ, 197 ವಿವಾಹಿತ 143 ಅವಿವಾಹಿತರು ಸೇರಿದಂತೆ 340 ಜನರು ತಮ್ಮ ಪ್ರಾಣವನ್ನು ತೆಗೆದುಕೊಂಡಿದ್ದಾರೆ. ಆಘಾತಕಾರಿ ಸಂಗತಿ ಎಂದರೆ 2021 ರಲ್ಲಿ ತಮಿಳುನಾಡಿನಲ್ಲಿ 33 ಸಾಮೂಹಿಕ ಮತ್ತು ಕುಟುಂಬ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ನಂತರ ರಾಜಸ್ಥಾನದಲ್ಲಿ 25, ಆಂಧ್ರಪ್ರದೇಶದಲ್ಲಿ 22, ಕೇರಳದಲ್ಲಿ 12 ಮತ್ತು ಕರ್ನಾಟಕದಲ್ಲಿ 10 ಪ್ರಕರಣಗಳು ವರದಿಯಾಗಿವೆ. ತಮಿಳುನಾಡಿನಲ್ಲಿ 33 ಪ್ರಕರಣಗಳಲ್ಲಿ 80 ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗಣೇಶ ಮಂಟಪಕ್ಕೆ ಆಧಾರ್ ಕಾರ್ಡ್ ವಿನ್ಯಾಸ

0

ಕಳೆದೆರಡು ವರ್ಷಗಳಿಂದ ಕೊರೋನಾ ಕಾರಣಗಳಿಂದ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ವರ್ಷ ಎಲ್ಲೆಡೆ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಭಕ್ತರು ನಾನಾ ರೀತಿಯಲ್ಲಿ ಗಣೇಶನನ್ನು ರೂಪಿಸಲು ಯೋಜನೆ ಮಾಡಿದ್ದಾರೆ. ಜೆಮ್​ಶೆಡ್ ಪುರದಲ್ಲಿ ಗಣೇಶನನ್ನು ಆಧಾರ್ ಕಾರ್ಡ್ ರೂಪವನ್ನು ನಿರ್ಮಿಸಲಾಗಿದೆ.

ಈ ಬಾರಿ ಗಣೇಶನನ್ನು ಜನರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದಾನೆ. ಅದೇನು ಎಂದರೆ, ಆಧಾರ ಕಾರ್ಡ್​ ಮಾದರಿಯಲ್ಲಿ ಗಣಪನ ಮಂಟಪದ ವಿನ್ಯಾಸವನ್ನು ಮಾಡಿ ಗಣೇಶನನ್ನು ಕೂರಿಸಿದ್ದಾರೆ.

6ನೇ ಶತಮಾನದಲ್ಲಿ ಕೈಲಾಸದಲ್ಲಿರುವ ಗಣೇಶನ ವಿಳಾಸ ಹಾಗೂ ಗಣಪನ ಜನ್ಮದಿನಾಂಕವನ್ನು ಆಧಾರ್ ಕಾರ್ಡಿನ ಮಾದರಿಯಲ್ಲಿ ನಮೂದಿಸಿದ್ದಾರೆ. ಜೊತೆಗೆ, ಫೋಟೋ ಸ್ಥಳದಲ್ಲಿ ಗಣೇಶನ ವಿಗ್ರಹ ಇರಿಸಿದ್ದಾರೆ. ಪಕ್ಕದಲ್ಲಿರುವ ಬಾರ್ ಕೋಡ್​ ಸ್ಕ್ಯಾನ್ ಮಾಡಿದಾಗ ಗಣೇಶನ ಚಿತ್ರಗಳಿರುವ ಗೂಗಲ್​ ಲಿಂಕ್​ ಪರದೆ ತೆರೆದುಕೊಳ್ಳುತ್ತದೆ.

ಅದರ ಮೇಲೆ ನಮೂದಿಸಲಾದ ವಿಳಾಸ ಹೀಗಿದೆ…
ಶ್ರೀ ಗಣೇಶ, S/o ಮಹದೇವ, ಕೈಲಾಸ ಪರ್ವತ, ಮೇಲ್​ಮಹಡಿ ಹತ್ತಿರ, ಮಾನಸ ಸರೋವರ, ಕೈಲಾಸ ಪಿನ್‌ಕೋಡ್- 000001. ಮತ್ತು ಹುಟ್ಟಿದ ವರ್ಷ 01/01/600CE. ಹೀಗೆ ಗಣೇಶನನ್ನು ಆಧಾರ್ ಕಾರ್ಡ್ ನಲ್ಲಿ ಬಿಂಬಿಸಲಾಗಿದೆ.

ವಿಶ್ವದ ದೊಡ್ಡ ಕಾಫಿ ಕಂಪನಿಗೆ ಸಿಇಓ ಆಗಿ ಭಾರತ ಮೂಲದ ಲಕ್ಷ್ಮಣ್ ನರಸಿಂಹನ್

0

ವಿಶ್ವದ ಅತಿ ದೊಡ್ಡ ಕಾಫಿ ಉತ್ಪನ್ನ ಕಂಪನಿ ಸ್ಟಾರ್‌ಬಕ್ಸ್‌ಗೆ ಭಾರತ ಮೂಲದ ಲಕ್ಷ್ಮಣ್ ನರಸಿಂಹನ್ ಹೊಸದಾಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಲಾಗಿದೆ.

ಈ ಹಿಂದೆ ರೆಕಿಟ್ ಕಂಪನಿಯ ಸಿಇಒ ಲಕ್ಷ್ಮಣ್ ನರಸಿಂಹನ್ ಅವರು ಆಗಿದ್ದರು. ಪೆಪ್ಸಿಕೊವಿನ ಜಾಗತಿಕ ಮುಖ್ಯ ವಾಣಿಜ್ಯ ಅಧಿಕಾರಿಯಾಗಿಯೂ ಕೂಡ ಇವರು ಕಾರ್ಯ ನಿರ್ವಹಿಸಿದ್ದರು, ಇದೀಗ ಕಾಫಿ ಉತ್ಪನ್ನ ಕಂಪನಿ ಸ್ಟಾರ್‌ಬಕ್ಸ್‌ಗೆ CEO ಆಗಿ ನೇಮಕವಾಗಿದ್ದಾರೆ.
ಅಕ್ಟೋಬರ್ 1 ರಂದು ಲಕ್ಷ್ಮಣ್ ನರಸಿಂಹನ್ ಕಂಪನಿಗೆ ಸೇರಲಿದೆ. 2023ರ ಏಪ್ರಿಲ್‌ನಲ್ಲಿ ಚುಕ್ಕಾಣಿ ಹಿಡಿಯಲಿದ್ದಾರೆ.

ಅಲ್ಲಿಯವರೆಗೆ, ಹಂಗಾಮಿ ಸಿಇಒ ಹೋವರ್ಡ್ ಸ್ಕುಲ್ಟ್ಜ್ ಕಂಪನಿಯನ್ನು ಮುನ್ನಡೆಸಲಿದ್ದಾರೆ.

ನರಸಿಂಹನ್ ಅವರು ಕಾಫಿಹೌಸ್ ಹಾಗೂ ರೋಸ್ಟರ್ ರಿಸರ್ವ್ನ ನಿರ್ದೇಶಕರ ಮಂಡಳಿಯ ಸದಸ್ಯರಾಗಿರುತ್ತಾರೆ ಎಂದು ಸ್ಟಾರ್ಬಕ್ಸ್ ತಿಳಿಸಿದೆ.

ಲಂಡನ್ ನಿಂದ ಅಮೆರಿಕಕ್ಕೆ ಸ್ಥಳಾಂತರಗೊಂಡ ನಂತರ ಅವರು ಸ್ಟಾರ್ ಬಕ್ಸ್ ಗೆ ಸೇರಲಿದ್ದಾರೆ.

ಬಸವರಾಜನ್ ಅವರನ್ನ ಮುರುಘಾಮಠದಕಾರ್ಯದರ್ಶಿ ಸ್ಥಾನದಿಂದ ವಜಾ ಮಾಡಲಾಗಿದೆ

0

ಷರತ್ತುಗಳನ್ನು ಉಲ್ಲಂಘಿಸಿ ಮಠ ಹಾಗೂ ಪೀಠಾಧಿಪತಿ ಘನತೆ, ಗೌರವಕ್ಕೆ ಧಕ್ಕೆ ತರಲು ಒಳಸಂಚು ರೂಪಿಸಿದ ಆರೋಪದ ಮೇರೆಗೆ ಮಾಜಿ ಶಾಸಕ ಎಸ್‌.ಕೆ.ಬಸವರಾಜನ್‌ ಅವರನ್ನು ಮುರುಘಾ ಮಠದ ಆಡಳಿತಾಧಿಕಾರಿ ಮತ್ತು ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಹುದ್ದೆಯಿಂದ ವಜಾ ಮಾಡಲಾಗಿದೆ.

ಮಾರ್ಚ್‌ 7ರಂದು ಅವರು ಈ ಹುದ್ದೆಗೆ ನೇಮಕಗೊಂಡಿದ್ದರು. ಈ ವೇಳೆ ಬಸವರಾಜನ್‌ ಅವರಿಗೆ 8ಕ್ಕೂ ಹೆಚ್ಚು ಷರತ್ತುಗಳನ್ನು ವಿಧಿಸಲಾಗಿತ್ತು. 2007ರಲ್ಲಿಯೂ ಇವರನ್ನು ಇದೇ ಹುದ್ದೆಯಿಂದ ಕಿತ್ತುಹಾಕಲಾಗಿತ್ತು.
‘ಲಿಂಗಾಯತ-ವೀರಶೈವ ಮತ್ತು ವಿವಿಧ ಸಮಾಜಗಳ ಮುಖಂಡರ ಒತ್ತಾಸೆಯಂತೆ ಬಸವರಾಜನ್‌ ಅವರನ್ನು ಮಾರ್ಚ್‌ 7ರಂದು ಪುನರ್‌ ನೇಮಕಾತಿ ಮಾಡಿಕೊಳ್ಳಲಾಗಿತ್ತು. ಮಠ ಮತ್ತು ಬಸವರಾಜನ್‌ ಅವರ ನಡುವಿನ ವ್ಯಾಜ್ಯಗಳನ್ನು ಮುಕ್ತಾಯಗೊಳಿಸುವುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಲಾಗಿತ್ತು.

ಬಸವರಾಜನ್‌ ಅವರು ಆಡಳಿತಾತ್ಮಕವಾಗಿ ಯಾವುದೇ ರೀತಿಯ ಸಹಕಾರ ನೀಡುತ್ತಿರಲಿಲ್ಲ. ಮಠದ ಪರವಾಗಿ ಬಸವರಾಜನ್ ಅವರ ಹೆಸರಿನಲ್ಲಿ ಖರೀದಿಸಿದ ಆಸ್ತಿಗಳನ್ನು ಹಿಂದಿರುಗಿಸದೇ ಸಮಸ್ಯೆ ಸೃಷ್ಟಿಸಿದರು. ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು ಅಮೆರಿಕ ಮತ್ತು ಮಾರಿಷಸ್ ಪ್ರವಾಸಗಳಲ್ಲಿರುವಾಗ ಮಠದ ವಿರೋಧಿ ಕೃತ್ಯದಲ್ಲಿ ತೊಡಗಿದರು. ಪೀಠಾಧ್ಯಕ್ಷರು ಹಲವು ಬಾರಿ ಸೂಚನೆ ನೀಡಿದರೂ ತಪ್ಪು ತಿದ್ದಿಕೊಳ್ಳಲಿಲ್ಲ’ ಎಂದು ಮಾಹಿತಿ ನೀಡಲಾಗಿದೆ.

ಮೊದಲ ಹೆಜ್ಜೆಯಾಗಿ ನಗರದ ಕಾವೇರಿ ಸ್ಟೋರ‍್ಸ್‌ಗೆ ಸಂಬಂಧಿಸಿದ ವ್ಯಾಜ್ಯವನ್ನು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ರಾಜಿಯೊಂದಿಗೆ ಇತ್ಯರ್ಥಗೊಳಿಸಿಕೊಳ್ಳಲಾಗಿತ್ತು. ಆದರೆ, ಆನಂತದ ಅವರ ನಡೆಗಳು ಅನುಮಾಸ್ಪದವಾಗಿದ್ದವು’ ಎಂದು ಮಠ ಆರೋಪಿಸಿದೆ.

ಪ್ರಧಾನಿಯಿಂದ ಮಂಗಳೂರಿನಲ್ಲಿ₹3,800 ಕೋಟಿ ವೆಚ್ಚದ ಯೋಜನೆಗಳಲೋಕಾರ್ಪಣೆ

0

ಕೂಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಮಧ್ಯಾಹ್ನ 1.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ 3,800 ಕೋಟಿ ರೂ. ಮೊತ್ತದ 8 ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಪ್ರಧಾನಿ ಲೋಕಾರ್ಪಣೆ ಮಾಡುವ ಯೋಜನೆಗಳಲ್ಲಿ, ಕಂಟೇನರ್‌ಗಳು ಹಾಗೂ ಇತರೆ ಸರಕು ನಿರ್ವಹಣೆಗಾಗಿ ಬರ್ತ್ ಸಂಖ್ಯೆ 14 ರ ಯಾಂತ್ರೀಕರಣ (ರೂ. 281 ಕೋಟಿ), ಬಿಎಸ್ VI ಉನ್ನತೀಕರಣ ಯೋಜನೆ (ರೂ. 1829 ಕೋಟಿ), ಸಮುದ್ರ ನೀರಿನ ನಿರ್ಲವಣೀಕರಣ ಘಟಕ (ರೂ. 677 ಕೋಟಿ) ಗಳು ಸೇರಿವೆ.

ಕುಳಾಯಿಯಲ್ಲಿ ಇಪಿಸಿ ಮಾದರಿಯಲ್ಲಿ ಮೀನುಗಾರಿಕಾ ಬಂದರು ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ನರೇಂದ್ರ ಮೋದಿ, ಎನ್‌ಎಂಪಿಟಿಯಲ್ಲಿ ಸಮಗ್ರ ಎಲ್ಪಿಜಿ ಹಾಗೂ ಬೃಹತ್ ಪಿಓಎಲ್ ಸೌಲಭ್ಯ (ಅಂದಾಜು ವೆಚ್ಚ ರೂ. 500 ಕೋಟಿ), ಶೇಖರಣಾ ಟ್ಯಾಂಕ್‌ ಗಳು ಹಾಗೂ ಖಾದ್ಯ ತೈಲ ಸಂಸ್ಕರಣಾಗಾರ ನಿರ್ಮಾಣ (ರೂ. 100 ಕೋಟಿ), ಬಿಟುಮಿನ್ ಶೇಖರಣಾ ಟ್ಯಾಂಕ್ ಘಟಕಗಳ ನಿರ್ಮಾಣ (ರೂ. 100 ಕೋಟಿ) ಹಾಗೂ ಬಿಟುಮಿನ್, ಖಾದ್ಯ ತೈಲ ಶೇಖರಣಾ ಟ್ಯಾಂಕ್‌ ಗಳು ಹಾಗೂ ಸಂಬಂಧಿತ ಸೌಲಭ್ಯಗಳ ನಿರ್ಮಾಣ (ರೂ. 100 ಕೋಟಿ) ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಷಿ, ಬಂದರು, ಹಡಗು ಮತ್ತು ಜಲಸಾರಿಗೆ ಹಾಗೂ ಆಯುಷ್ ಸಚಿವ ಸರ್ಬಾನಂದ್ ಸೋನೋವಾಲ್, ಇಂಧನ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ, ಬಂದರು, ಹಡಗು ಮತ್ತು ಜಲಸಾರಿಗೆ ರಾಜ್ಯ ಸಚಿವರಾದ ಶ್ರೀಪಾದ್ ಯೆಸ್ಸೋ ನಾಯಕ್ ಹಾಗೂ ಶಂತನು ಠಾಕೂರ್ ಉಪಸ್ಥಿತರಿರಲಿದ್ದಾರೆ ಎನ್ನಲಾಗಿದೆ

ನಮ್ಮ ನಡಿಗೆ ಶಾಂತಿಯ ಕಡೆಗೆ ಜಾಥಾಕ್ಕೆ ಚಾಲನೆ

0

ಜಿಲ್ಲಾಡಳಿತ, ಜಿಲ್ಲಾ ನ್ಯಾಯಾಲಯ, ಸರ್ಜಿ ಫೌಂಡೇಷನ್ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಇಂದು ಡಿವಿಎಸ್ ಕಾಲೇಜ್ ವೃತ್ತದ ಬಳಿ ಇರುವ ಬಸವೇಶ್ವರ ಪುತ್ಥಳಿಗೆ ಹೂಮಾಲೆ ಹಾಕುವ ಮೂಲಕ ‘ಸೆ.3 ರಂದು ಕೈಗೊಳ್ಳಲಿರುವ ‘ನಮ್ಮ ನಡಿಗೆ ಶಾಂತಿಯ ಕಡೆಗೆ’ ಕಾಲ್ನಡಿಗೆ ಜಾಥಾ ಹಾಗೂ ಸೌಹಾರ್ಧ ಸಂದೇಶ ಸಾರುವ ವಾಹನಕ್ಕೆ ಚಾಲನೆ ನೀಡಲಾಯಿತು.

ಜಿಲ್ಲೆಯಲ್ಲಿ ಶಾಂತಿ ನೆಲೆಸುವ ದೃಷ್ಟಿಯಿಂದ ಸೆ.3 ರಂದು ಏರ್ಪಡಿಸಲಾಗಿರುವ ನಮ್ಮ ನಡಿಗೆ ಶಾಂತಿಯ ಕಡೆಗೆ ಕಾಲ್ನಡಿಗೆ ಜಾಥಾ ಮತ್ತು ಸೌಹಾರ್ಧ ಸಂದೇಶ ಸಾರುವ ವಾಹನಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮುಸ್ತಫಾ ಹುಸೇನ್ ಎಸ್.ಎ ಚಾಲನೆ ನೀಡಿದರು.

ಈ ವೇಳೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ರಾಜ್ಯ ರೈತ ಸಂಘದ ಅಧ್ಯಕ್ಷ ಹೆಚ್.ಆರ್.ಬಸವರಾಜಪ್ಪ, ಸರ್ಜಿ ಫೌಂಡೇಷನ್‌ನ ಡಾ.ಧನಂಜಯ ಸರ್ಜಿ, ವಕೀಲರಾದ ಕೆ.ಪಿ.ಶ್ರೀಪಾಲ್ ಇತರರು ಹಾಜರಿದ್ದರು

ಸ್ವಾತಂತ್ರ್ಯದ ಚಳವಳಿಗೆ ಶಿವಮೊಗ್ಗ ಜಿಲ್ಲೆಯ ಕೊಡುಗೆ ವಿಶೇಷ ಕಾರ್ಯಕ್ರಮ

0

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ರಿ. ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ ಸ್ವಾತಂತ್ರ್ಯ ಚಳುವಳಿಗೆ ಶಿವಮೊಗ್ಗ ಜಿಲ್ಲೆಯ ಕೊಡುಗೆ ಕುರಿತು ಉಪನ್ಯಾಸ ಮಾಲಿಕೆ ನಿರಂತರವಾಗಿ ಜಿಲ್ಲೆಯ ಪದವಿ, ಪದವಿ ಪೂರ್ವ ಕಾಲೇಜು ಗಳಲ್ಲಿ ನಡೆಸಿದ ಉಪನ್ಯಾಸ ಮಾಲಿಕೆಯ ಸಮಾರೋಪ ಸಮಾರಂಭ ಆಗಸ್ಟ್ 29 ರಂದು ಶಿವಮೊಗ್ಗದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆಯಿತು.

ಜಿಲ್ಲಾ ಕಸಾಪ, ಕಸಾಸಾಂ ವೇದಿಕೆ ಅಧ್ಯಕ್ಷರಾದ ಡಿ. ಮಂಜುನಾಥ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಡಾ. ಕಲೀಮ್ ಉಲ್ಲಾ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಜಿಲ್ಲೆಯ ಮಹಿಳೆಯರ ಕೊಡುಗೆ ಕುರಿತು ಮಾತನಾಡಿದರು. ಡಾ. ಎಚ್. ಟಿ. ಕೃಷ್ಣಮೂರ್ತಿ ಅವರು ಸಮಾರೋಪ ಮಾತುಗಳನ್ನಾಡಿ ಕಾರ್ಯಕ್ರಮ ಅರ್ಥಪೂರ್ಣವಾಗಿತ್ತು.

ರಾಜ್ಯದ ಯಾವ ಜಿಲ್ಲೆಯಲ್ಲೂ ಯೋಚಿಸದೆಯಿರುವ ವಿಶಿಷ್ಠವಾದ ಕಾರ್ಯಕ್ರಮ ರೂಪಿಸಿದ ಡಿ. ಮಂಜುನಾಥ ಅವರನ್ನು ಅವಿಶ್ರಾಂತ ಅಧ್ಯಕ್ಷರು ಎಂದು ಅಭಿನಂದಿಸಿದರು. ಕಾಲೇಜು ಪ್ರಿನ್ಸಿಪಾಲ್ ಡಾ. ದುಗ್ಗಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು.

ಡಾ. ಚಿನ್ನಪ್ಪ ಸ್ವಾಗತಿಸಿದರು. ಉಪನ್ಯಾಸಕ ನವೀನ್ ಅವರು ಅಭಿನಂದನೆ ಸಲ್ಲಿಸಿದರು. ವಿದ್ಯಾರ್ಥಿನಿ ಗೌತಮಿ ಪ್ರಾರ್ಥನೆ ಹಾಡಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರಸಾದ್ ವಂದಿಸಿದರು.

ಕು. ಸುಪ್ರಿಯಾ ನಿರೂಪಿಸಿದರು. ಸೋಮಿನಕಟ್ಟಿ, ಕುಬೇರಪ್ಪ ಉಪಸ್ಥಿತರಿದ್ದರು.

2023ರ ಅವಧಿಗೆ ಜಿಡಿಪಿಯಲ್ಲಿ 13.5ರಷ್ಟು ವೃದ್ಧಿ

0

ಭಾರತದ ಆರ್ಥಿಕತೆಯು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ 13.5ರ ಪ್ರಗತಿ ದಾಖಲಿಸಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಅಂದರೆ ಏಪ್ರಿಲ್-ಜೂನ್ 2021ರಲ್ಲಿ ಭಾರತದ ಜಿಡಿಪಿ ಶೇ 20.1ರಷ್ಟು ಪ್ರಗತಿ ಸಾಧಿಸಿತ್ತು ಎಂದು ರಾಷ್ಟ್ರೀಯ ಅಂಕಿಅಂಶಗಳ ಕಚೇರಿ ತಿಳಿಸಿದೆ.

ಭಾರತದ ಆರ್ಥಿಕತೆಯ ಮೂಲಾಂಶಗಳು ಸದೃಢವಾಗಿರುವುದರಿಂದ ಈ ಬಾರಿಯ ಜಿಡಿಪಿ ಪ್ರಗತಿ ಎರಡಂಕಿ ದಾಖಲಾಗಬಹುದು ಎಂದು ಮೊದಲೇ ಹಲವು ಸಂಸ್ಥೆಗಳು ವಿಶ್ಲೇಷಿಸಿದ್ದವು.
2022ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತವು ಶೇ 13ರ ಪ್ರಗತಿ ದಾಖಲಿಸಬಹುದು ಎಂದು ಇಕ್ರಾ ವಿಶ್ಲೇಷಿಸಿತ್ತು.

ಭಾರತೀಯ ಸ್ಟೇಟ್​ ಬ್ಯಾಂಕ್​ನ ಅರ್ಥಶಾಸ್ತ್ರಜ್ಞರು ಜಿಡಿಪಿ ಪ್ರಗತಿಯು ಶೇ 15.7 ಇರಬಹುದು ಎಂದು ಅಂದಾಜಿಸಿದ್ದರು. ಇದೇ ತಿಂಗಳ ಆರಂಭದಲ್ಲಿ ಹಣಕಾಸು ಮಾರ್ಗದರ್ಶಿ ಸಮಿತಿ ಸಭೆ ನಡೆಸಿದ್ದ ಭಾರತೀಯ ರಿಸರ್ವ್​ ಬ್ಯಾಂಕ್ ಮೊದಲ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಪ್ರಗತಿಯು ಶೇ 16.2 ಇರಬಹುದು ಎಂದು ಅಂದಾಜಿಸಿತ್ತು. ಇದೇ ಅವಧಿಯಲ್ಲಿ ಚೀನಾದ ಶೇ 0.4ರ ಜಿಡಿಪಿ ಪ್ರಗತಿ ದಾಖಲಿಸಿದೆ.

ಕಲಬುರ್ಗಿಯಲ್ಲಿಕಾಂಗ್ರೆಸ್ 2ನೇ ಹಂತದ ಜನಜಾಗೃತಿಪಾದಯಾತ್ರೆ

0

ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಕಾಲದಲ್ಲಿ ದೇಶಕ್ಕಾಗಿ ಪಕ್ಷ ನೀಡಿರುವ ನೀಡಿರುವ ಕೊಡುಗೆಗಳನ್ನು ಜನತೆಗೆ ತಿಳಿಸಲು ಕಲಬುರಗಿ ದಕ್ಷಿಣದಲ್ಲಿ ಕಾಂಗ್ರೆಸ್‌ ಪಕ್ಷದ ಮುಖಂಡರ 2ನೇ ಹಂತದ ಜನಜಾಗೃತಿ ಪಾದಯಾತ್ರೆ ಮುಂದುವರಿದಿದ್ದು, ನಗರದ ಕೊಟನೂರ ಡಿ ಗ್ರಾಮದಲ್ಲಿ ಹಲವಾರು ಮುಖಂಡರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು.

ಮಾಜಿ ಎಂಎಲ್‌ಸಿ ಅಲ್ಲಂಪ್ರಭು ಪಾಟೀಲ ನೇತೃತ್ವದಲ್ಲಿನ ಕಾಂಗ್ರೆಸ್‌ ಪಕ್ಷದ ಪಾದಯಾತ್ರೆಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಮುಖಂಡರಾದ ನೀಲಕಂಠರಾವ್‌ ಮೂಲಗೆ, ಚೇತನ ಗೋನಾಯಕ, ಲಿಂಗರಾಜ ಕಣ್ಣಿ, ಲಿಂಗರಾಜ ತಾರಫೈಲ್‌ ಹಾಗೂ ಇನ್ನಿತರರು ಪಾಲ್ಗೊಂಡು, ಕಾಂಗ್ರೆಸ್‌ ಪಕ್ಷದ ಕೊಡುಗೆಗಳನ್ನು ವಿವರಿಸಿದರು.

ಕೊಟನೂರ ಡಿ ಗ್ರಾಮದ ಪಾದಯಾತ್ರೆಯಲ್ಲಿ ಮುಖಂಡರಾದ ಮಹಾದೇವಪ್ಪ ಪಟೀಲ್‌, ಸಂತೋಷ ಪಾಟೀಲ, ಜಗ್ಗು ಸಿರಸಗಿ, ಸುನೀಲ ಗೌನಳ್ಳಿ, ಶ್ರೀಶೈಲ ಹೂಗಾರ, ಚೇತನ ಸಾವಳಗಿ, ಅಂಬರೀಶ ಜಾನಿ, ಮಲ್ಲಿಕಾರ್ಜುನ ಗುಡೂರ್‌ ಹಾಗೂ ಇತರರು ವಿವಿಧ ಪಕ್ಷಗಳನ್ನು ತೆರೆದು ಕಾಂಗ್ರೆಸ್‌ ಸೇರಿದರು. ಕಾಂಗ್ರೆಸ್‌ ಪಕ್ಷದ ಮುಖಂಡ, ಮಾಜಿ ಎಂಎಲ್‌ಸಿ ಅಲ್ಲಂಪ್ರಭು ಪಾಟೀಲರು ಕಾಂಗ್ರೆಸ್‌ ಧ್ವಜ ನೀಡಿ ಸ್ವಾಗತಿಸಿಕೊಂಡರು.

ಪಕ್ಷದ ಮುಖಂಡರಾದ ಗುಂಡಪ್ಪಾ ಲಂಡನಕರ್‌, ಲತಾ ರವಿ ರಾಠೊಡ್‌ ವಾಣಿಶ್ರೀ ಸಗರಕರ್‌, ಶೋಭಾ ಕಾಳೆ, ಅವಿನಾಶ ಭಾಸ್ಕರ ಹಾಗೂ ಪಕ್ಷದ ಹಿರಿಯ-ಕಿರಿಯ ಮುಖಂಡರು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಮಂಗಳವಾರ ಪಾದಯಾತ್ರೆಯು ಪಾಣೆಗಾಂವ, ನಾಗನಳ್ಳಿ, ಕೋಟನೂರ್‌, ಉದನೂರ್‌, ಹುಣಸಿಹಡಗಿಲ್‌, ಸುಲ್ತಾನಪುರ್‌, ನಾಗನಹಳ್ಳಿ ಗ್ರಾಮಗಳ ಮೂಲಕ ಸಾಗಿ ಬಂತು.