Saturday, March 21, 2026
Saturday, March 21, 2026
Home Blog Page 1450

ಕುಷ್ಠದ ಸೋಂಕನ್ನ ತೊಲಗಿಸುವಲ್ಲಿ ಶ್ರಮ ಪಡಬೇಕು- ಅನಿರುಧ್ ಶ್ರವಣ್

0

ಆಶಾ ಕಾರ್ಯಕರ್ತೆಯರು ವ್ಯಾಲೆಂಟರಿಗಳು ತಂಡ ತಂಡಗಳಾಗಿ ಮನೆ-ಮನೆ ಭೇಟಿ ನೀಡುವ ಮೂಲಕ ಕುಷ್ಠರೋಗ ಶಂಕಿತ ಪ್ರಕರಣಗಳನ್ನು ಪತ್ತೆಹಚ್ಚಿ ಹಾಗೂ ದೃಢಪಟ್ಟ ಪ್ರಕರಣಗಳನ್ನು ಚಿಕಿತ್ಸೆಗೆ ಒಳಪಡಿಸುವುದರ ಮೂಲಕ ಸಮಾಜದಲ್ಲಿ ಸೋಂಕನ್ನು ನಿರ್ಮೂಲನೆ ಮಾಡುವುದಕ್ಕೆ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರು ಹೇಳಿದರು.
ಶುಕ್ರವಾರದಂದು ವಿಜಯನಗರ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಅಂತರ್ ಇಲಾಖೆಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಜಯನಗರ ಜಿಲ್ಲೆಯಾದ್ಯಂತ ಕುಷ್ಟರೋಗ ಪತ್ತೆ ಹಚ್ಚುವ ಅಭಿಯಾನವು ಸೆ.12ರಿಂದ ಸೆ.29ರವರೆಗೆ ನಡೆಯಲಿದ್ದು, ಎಲ್ಲಾ ತಾಲೂಕು ಅಧಿಕಾರಿಗಳ ಜೊತೆಗೆ ಆಶಾ ಕಾರ್ಯಕರ್ತೆಯರು, ಸ್ವಯಂ ಸೇವಕರು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನದಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಬೇಕು ಎಂದರು.

ವಿಜಯನಗರ ಜಿಲ್ಲೆಯ ಎಲ್ಲಾ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ, ಶಾಲಾ,ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಕಾರ್ಮಿಕ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಾರ್ಮಿಕರಿಗೆ ಕುಷ್ಠರೋಗ ತಪಾಸಣೆ ಮಾಡಲು ಕ್ರಮವಹಿಸಬೇಕು ಎಂದು ಅವರು ತಿಳಿಸಿದರು.
ವಿಜಯನಗರ ಜಿಲ್ಲೆಯ ಎಲ್ಲಾ ಗ್ರಾಮ, ಪಟ್ಟಣಗಳಲ್ಲಿ ಕುಷ್ಠ ರೋಗ ಪತ್ತೆಹಚ್ಚುವ ಆಂದೋಲನದ ಬಗ್ಗೆ ತಮ್ಮ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆಯ ಆಡಳಿತದ ಮುಖಾಂತರ ಡಂಗೂರು ಸಾರಿಸುವುದು, ಕಸ ವಿಲೇವಾರಿ ವಾಹನಗಳಲ್ಲಿ ಮೈಕಿಂಗ್, ಜಿಂಗಲ್ಸ್ ಗಳ ಮೂಲಕ ಪ್ರಚಾರ ಮಾಡುವುದು ಸೇರಿದಂತೆ ಭಿತ್ತಿಚಿತ್ರಗಳನ್ನು ಗ್ರಾಮ ಪಂಚಾಯಿತಿ, ಕೃಷಿ ಪತ್ತಿನ ಸಹಕಾರ ಸಂಘ, ಇಂದಿರಾ ಕ್ಯಾಂಟಿನ್, ಅಂಗನವಾಡಿ ಕೇಂದ್ರಗಳಲ್ಲಿ ಹಾಗೂ ಸಾರ್ವಜನಿಕ ಸೇರುವ ಸ್ಥಳಗಳಲ್ಲಿ ಅಂಟಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿದರು.
ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿಗಳಾದ ಡಾ.ಭಾಸ್ಕರ್ ಅವರು ಮಾತನಾಡಿ ನಮ್ಮ ಜಿಲ್ಲೆಯಲ್ಲಿ ಸದರಿ ಅಭಿಯಾನದಲ್ಲಿ 3 ಲಕ್ಷ ಮನೆಗಳಿಂದ 1504114 ಜನಸಂಖ್ಯೆಯನ್ನು ತಪಾಸಣೆ ಮಾಡಲು 1104 ತಂಡಗಳನ್ನು ರಚಿಸಲಾಗಿದೆ. ಇದರಲ್ಲಿ 220 ಮೇಲ್ವಿಚಾರಕರು ಹಾಗೂ 1990 ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ಒಳಗೊಂಡಂತೆ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಹೊಸದಾಗಿ ಕುಷ್ಠರೋಗ ಪ್ರಕರಣಗಳಿಗೆ ಉಂಟಾಗುವ ಅಂಗವಿಕಲತೆಯನ್ನು 10 ಲಕ್ಷ ಜನಸಂಖ್ಯೆಗೆ ಒಂದಕ್ಕಿಂತ ಕಡಿಮೆ ಮಾಡಲು ಮತ್ತು ಸುಪ್ತ ಕುಷ್ಠರೋಗ ಪ್ರಕರಣಗಳನ್ನು ಅತೀ ಶೀಘ್ರವಾಗಿ ಪತ್ತೆ ಹಚ್ಚಲು ಈ ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಲೀಂ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಭಾಸ್ಕರ್, ಆರ್.ಸಿ.ಹೆಚ್.ಒ ಡಾ.ಜಂಭಯ್ಯ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕಮಾಲ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಶಂಕರ್‍ನಾಯ್ಕ್ ಸೇರಿದಂತೆ ಎಲ್ಲಾ ತಾಲೂಕು ಆರೋಗ್ಯ ಅಧಿಕಾರಿಗಳು, ತಾಲ್ಲೂಕು ಆರೋಗ್ಯ ಶಿಕ್ಷಣ ಅಧಿಕಾರಿಗಳು ಹಾಗೂ ಅಂತರ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.

ಯೋಜನೆಗಳ ಸವಲತ್ತುಗಳನ್ನ ಅರ್ಹರಿಗೆ ತಲುಪಿಸಬೇಕು-ಶ್ರೀನಿವಾಸ ಪೂಜಾರಿ

0

ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದ್ದು, ಅತ್ಯಂತ ಪಾರದರ್ಶಕವಾಗಿ ಈ ಸವಲತ್ತುಗಳು ಅರ್ಹರನ್ನು ತಲುಪಲು ಜನಪ್ರತಿನಿಧಿಗಳು ಸಹಕರಿಸಬೇಕೆಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ನುಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ವಿವಿಧ ಅಭಿವೃದ್ದಿ ನಿಗಮಗಳ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಪೆಸಿಟ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಪಂಚಾಯತ್ ರಾಜ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಅನೇಕ ಯೋಜನೆಗಳ ರಾಜ್ಯ ಮಟ್ಟದ ಮಾಹಿತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬಡವರ ಕಲ್ಯಾಣಕ್ಕಾಗಿ ಸರ್ಕಾರ ಅನೇಕ ಯೋಜನೆಗಳ ಮೂಲಕ ಸೌಲಭ್ಯಗಳನ್ನು ನೀಡುತ್ತಿದೆ. ಸರ್ಕಾರದ ಈ ಎಲ್ಲ ಸೌಲಭ್ಯಗಳ ಕುರಿತು ಗ್ರಾ.ಪಂ ನಿಂದ ಹಿಡಿದು ಎಲ್ಲ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ತಿಳಿದುಕೊಂಡು ಅರ್ಹರಿಗೆ ತಲುಪಿಸಬೇಕೆಂಬ ಉದ್ದೇಶದಿಂದ ಅಂತ್ಯೋದಯ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ.

ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆಗೆ ನೀಡಲಾಗುವ ಅನುದಾನವನ್ನು ಪಾರದರ್ಶಕವಾಗಿ ಬಳಕೆ ಮಾಡಿಕೊಂಡಲ್ಲಿ ಇನ್ನು 5 ವರ್ಷದಲ್ಲಿ ಎಸ್‍ಸಿ ಅಥವಾ ಎಸ್‍ಟಿ ಸಾಕಷ್ಟು ವಿದ್ಯಾರ್ಥಿಗಳು ವೈದ್ಯರು, ಎಂಜಿನಿಯರ್‍ಗಳಾಗುತ್ತಾರೆ. ರಾಜ್ಯದಲ್ಲಿ 826 ವಸತಿ ಶಾಲೆಗಳಿವೆ. ವಸತಿ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬರುತ್ತಿದೆ. ವಸತಿ ಶಾಲೆಗಳ ಸಂಖ್ಯೆ ಹೆಚ್ಚಿಸಲು ಯೋಜನೆ ರೂಪಿಸಲಾಗುತ್ತಿದೆ.

ವಸತಿ ಶಾಲೆಗಳಲ್ಲಿ ಶೇ.99.15 ಮಕ್ಕಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಿದೆ. ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಐಐಟಿ, ಐಐಎಂ ಗೆ ಸಹ ಮಕ್ಕಳು ಆಯ್ಕೆಯಾಗಿದ್ದಾರೆ. ಇನ್ನು ಮುಂದೆ ಇಂತಹ ಕೋರ್ಸಿಗೆ ಆಯ್ಕೆಯಾದ ಮಕ್ಕಳ ಶುಲ್ಕ ಪಾವತಿ ಸಹ ಮಾಡಲು ಇಲಾಖೆ ಯೋಚಿಸುತ್ತಿದೆ.
ಬಡಮಕ್ಕಳ ರಕ್ಷಣೆ ಉದ್ದೇಶದಿಂದ ಒನಕೆ ಓಬವ್ವ ಆತ್ಮರಕ್ಷಣೆ ಕಲೆ ಯೋಜನೆಯಡಿ ರಾಜ್ಯದಲ್ಲಿ 4 ಲಕ್ಷ ಹೆಣ್ಣು ಮಕ್ಕಳಿಗೆ ಕರಾಟೆ ತರಬೇತಿ ನೀಡಲಾಗಿದೆ. 2 ಸಾವಿರ ಕರಾಟೆ ಶಿಕ್ಷಕರ ನೇಮಕ ಮಾಡಲಾಗಿದೆ. ಸೌಲಭ್ಯ ನೀಡುವಿಕೆ ಪಾರದರ್ಶಕಗೊಳಿಸಲು ಸೇವಾಸಿಂಧು ಆನ್‍ಲೈನ್ ಪೋರ್ಟಲ್ ರಚಿಸಲಾಗಿದೆ. ನಿನ್ನೆ ಒಂದೇ ದಿನಕ್ಕೆ 8 ಸಾವಿರ ಅರ್ಜಿ ಬಂದಿವೆ. ಆದ್ದರಿಂದ ಅಧಿಕಾರಿಗಳು, ಜನಪ್ರತಿನಿಧಿಗಳು ಅತ್ಯಂತ ಪಾರದರ್ಶಕವಾಗಿ, ಪ್ರಾಮಾಣಿಕತೆ ಮತ್ತು ಶ್ರದ್ದೆಯಿಂದ ಕೆಲಸ ಮಾಡಿದಲ್ಲಿ ಅರ್ಹರಿಗೆ ಸೌಲಭ್ಯ ದೊರೆಯಲಿವೆ. ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರಬೇಕು ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ನಿಕಟಪೂರ್ವ ಮುಖ್ಯಮಂತ್ರಿಗಳು ಹಾಗೂ ಶಿಕಾರಿಪುರ ಕ್ಷೇತ್ರದ ಶಾಸಕರಾದ ಬಿ.ಎಸ್.ಯಡಿಯೂರಪ್ಪ ನೆರವೇರಿಸಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾದರೂ ಇನ್ನೂ ಬಡತನ ಸೇರಿದಂತೆ ಹಲವು ಸಮಸ್ಯೆಗಳಿವೆ. ಈ ಲೋಪದೋಷಕ್ಕೆ ಜನಪ್ರತಿನಿಧಿಗಳಾದ ನಾವೇ ಕಾರಣ ಎಂಬುದನ್ನು ಮರೆಯಬಾರದು. ಜನಪ್ರತಿನಿಧಿಗಳಾದ ನಾವು ಬಡವರ ಕಣ್ಣೀರು ಒರೆಸುವ ಕೆಲಸವನ್ನು ಎಷ್ಟರ ಮಟ್ಟಿಗೆ ಮಾಡುತ್ತಿದ್ದೇವೆ ಎಂಬ ಪ್ರಶ್ನೆ ಹಾಕಿಕೊಳ್ಳಬೇಕು ಎಂದರು.
ಮಧ್ಯವರ್ತಿಗಳ ಹಾವಳಿ, ಭಷ್ಟಾಚಾರದಿಂದಾಗಿ ಮುಕ್ತವಾಗಿ, ನೇರವಾಗಿ ಸರ್ಕಾರದ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ತಲುಪಬೇಕು ಎಂದ ಅವರು ಜನಪ್ರತಿನಿಧಿಗಳು ಸೇರಿದಂತೆ ಎಲ್ಲರೂ ಸಂಘಟಿತರಾಗಿ ಸರ್ಕಾರಿ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವ ಕೆಲಸ ಮಾಡೋಣ ಎಂದರು.

ರೇಷ್ಮೆ, ಯುವಜನ, ಕ್ರೀಡಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸಿ.ನಾರಾಯಣಗೌಡ ಮಾತನಾಡಿ, ಸರ್ಕಾರ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಿಗೆ ಹೆಚ್ಚಿನ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಗ್ರಾ.ಪಂ ಸದಸ್ಯರಿಗೆ ಅತ್ಯಂತ ಹೆಚ್ಚಿನ ಜವಾಬ್ದಾರಿ ಇರುತ್ತದೆ ಎಂದ ಅವರು ಎಲ್ಲ ಜನಪ್ರತಿನಿಧಿಗಳು ಈ ಕಾರ್ಯಾಗಾರದ ಸದುಪಯೋಗಪಡಿಕೊಳ್ಳಬೇ ಕು ಎಂದರು.

ಗೃಹ ಸಚಿವರಾದ ಆರಗ ಜ್ಞಾನೇಂದ್ರ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಆತ್ಮವಿಶ್ವಾಸದಿಂದ ಬದುಕಬೇಕೆಂಬ ಘನ ಉದ್ದೇಶ ಸರ್ಕಾರದ್ದಾಗಿದ್ದು, ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಕೇವಲ ಸರ್ಕಾರದ ಅನುದಾನ, ಸೌಲಭ್ಯಗಳನ್ನು ತಲುಪಿಸುವ ಪೋಸ್ಟ್‍ಮ್ಯಾನ್ ಮಾತ್ರವಾಗದೇ, ಹಣವಿಲ್ಲದೆ ಮಾಡುವ ಅನೇಕ ಮಾಹಿತಿ, ಅರಿವು ಕಾರ್ಯಗಳನ್ನು ಕೈಗೊಂಡು ಬದ್ದತೆಯಿಂದ, ಪ್ರಾಮಾಣಿಕವಾಗಿ ತಮ್ಮ ಕಾರ್ಯ ನಿರ್ವಹಿಸಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಕೆ.ಎಸ್.ಈಶ್ವರಪ್ಪ ಮಾತನಾಡಿ, ಯಾವುದೇ ವ್ಯಕ್ತಿ ಊಟ, ಉದ್ಯೋಗವಿಲ್ಲದೇ ಇರಬಾರದೆಂದು ಸರ್ಕಾರ ನರೇಗಾ ಸೇರಿದಂತೆ ಅನೇಕ ಯೋಜನೆಗಳು ಮತ್ತು ಮೂಲಭೂತ ಸೌಲಭ್ಯಗಳನ್ನು ನೀಡಿದೆ. ಈ ಎಲ್ಲ ಯೋಜನೆಗಳ ಕುರಿತು ಗ್ರಾ.ಪಂ ಸದಸ್ಯರು ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ತಿಳಿದುಕೊಂಡು, ಬಡವರಿಗೆ ತಲುಪಿಸುವುದು ಅವರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕೆಂದು ಕರೆ ನೀಡಿದರು.

ಸಂಸದರಾದ ಬಿ.ವೈ.ರಾಘವೇಂದ್ರ ಮಾತನಾಡಿ, ರಾಜ್ಯದಲ್ಲಿ ಬಗರ್‍ಹುಕುಂ ಸಾಗುವಳಿದಾರರಿಂದ ಹಕ್ಕುಪತ್ರಕ್ಕಾಗಿ 2.94 ಲಕ್ಷ ಅರ್ಜಿ ಸ್ವೀಕೃತವಾಗಿವೆ. ಜಿಲ್ಲೆಯಲ್ಲಿ 97 ಸಾವಿರ ಅರ್ಜಿ ಬಂದಿದೆ. 24,444 ಅರ್ಜಿ ವಿಲೇವಾರಿ ಆಗಿವೆ. ಅರಣ್ಯ ಸಾಗುವಳಿದಾರರು ಸೇರಿದಂತೆ ಯಾವುದೇ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲಾಗುವುದಿಲ್ಲ. ರೈತರು ತಾಳ್ಮೆಯಿಂದ ಇರಬೇಕೆಂದು ಹೇಳಿದರು.

ರೈತರಿಗೆ ಮೋಸಮಾಡುವವರಿಗೆ ಕೃಷಿಇಲಾಖೆ ಸಿಬ್ಬಂದಿ ಸಿಂಹಸ್ವಪ್ನವಾಗಬೇಕು

0

ರೈತರಿಗೆ ಮೋಸಮಾಡುವ ನಕಲುಕೋರರಿಗೆ ಕೃಷಿ ಇಲಾಖಾಧಿಕಾರಿಗಳು ಸಿಂಹಸ್ವಪ್ನವಾಗಬೇಕು ಎಂದು ಕೃಷಿ ಸಚಿವರೂ ಆಗಿರುವ ಚಿತ್ರದುರ್ಗ ಮತ್ತು ಗದಗ ಜಿಲ್ಲಾ ಉಸ್ತುವಾರಿ ಬಿ.ಸಿ.ಪಾಟೀಲ್ ಖಡಕ್ ಸೂಚನೆ ನೀಡಿದರು.
ಬೆಳಗಾವಿಯ ಸುವರ್ಣಸೌಧ ಸೆಂಟ್ರಲ್‌ ಹಾಲ್‌ನಲ್ಲಿ ನಡೆದ ಸಚಿವರ ಅಧ್ಯಕ್ಷತೆಯಲ್ಲಿ ನಡೆದ 2022-23 ನೇ ಸಾಲಿನ ಜಿಲ್ಲಾ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಅಬ್ನ ನೀಡುವ ರೈತನಿಗೆ ಕಳಪೆ ಗೊಬ್ಬರ ರಾಸಾಯನಿಕ ಔಷಧಿ ಬಿತ್ತನೆ ಬೀಜ ಮಾರವಂತಹದಂತಹ ನೀಚ ಕೆಲಸದ ದುರಂತ ಮತ್ತೊಂದಿಲ್ಲ.ಇಂತವರ ಮೇಲೆ ಕೃಷಿ ಇಲಾಖೆ ಸದಾ ಹದ್ದಿನಕಣ್ಣು ಇಟ್ಟಿರಬೇಕು.ರೈತನನ್ನು ಪೋಷಿಸಿ ಬೆಳೆಸಿ ಅನ್ನದಾತನಿಗೆ ಹರಸಬೇಕು.ಹಿಂದೆ ಕೃಷಿ ಇಲಾಖೆ ಅಧಿಕಾರಿಗಳೆಂದರೆ ಹೆಚ್ಚು ಗೌರವ ಬೆಲೆ ಅಷ್ಟಾಗಿ ಸಿಗುತ್ತಿರಲಿಲ್ಲ.ಆದರೆ ಇದೀಗ ತಾವು ಬಂದಮೇಲೆ ಕೃಷಿ ವಿಚಕ್ಷಣಾ ದಳದ ಕಾರ್ಯವೈಖರಿಯಿಂದ ಇಡೀ ಇಲಾಖೆಗೆ ಮಹತ್ವ ಗೌರವ ಬಂದಿದೆ. ನಕಲುಕೋರರು ರೈತನಿಗೆ ಮೋಸ ಮಾಡುವವರು ಕೃಷಿ ಇಲಾಖೆ ಕೃಷಿ ಇಲಾಖಾಧಿಕಾರಿಗಳೆಂದರೆ ಎಚ್ಚೆತ್ತುಕೊಳ್ಳಬೇಕು.ತಪ್ಪು ಮಾಡಬಾರದು ರೈತನಿಗೆ ಮೋಸ ಮಾಡಬಾರದು ಎಂದು ಅಂಜಬೇಕು.ಇಂತಹ ಕೆಲಸವನ್ನು ಕೃಷಿ ಇಲಾಖಾಧಿಕಾರಿಗಳು ಮಾಡಬೇಕು ಎಂದು ಕಿವಿ ಮಾತು ಹೇಳಿದರು.
‌ನಕಲು ರಸಗೊಬ್ಬರ,ಕಳಪೆ ಬೀಜ ಕೃತಕ ಅಭಾವ ಹೆಚ್ಚಿಸುವ ರಾಜ್ಯದಲ್ಲಿ ಕೃಷಿ ವಿಚಕ್ಷಣಾ(ಜಾಗೃತ)ದಳ ಹೆಚ್ಚು ಕ್ರಿತಾತ್ಮಕವಾಗಿದೆ.ಜಾಗೃತದಳದಿಂದ ಇಲ್ಲಿವರೆಗೆ 28 ಕೋ ರೂ ಮೊತ್ತದ ನಕಲಿ ಕಳಪೆ ರಸಗೊಬ್ಬರ ಬಿತ್ತನೆಬೀಜವನ್ನು ಸೀಜ್ ಮಾಡಲಾಗಿದೆ.15 ಲಕ್ಷ ರೂ ದಂಡವಾಗಿ 148 ನಕಲುಕೋರರ ಪರವಾನಿಗೆಯನ್ನು ರದ್ದುಪಡಿಸಲಾಗಿದೆ. ರೈತನಿಗೆ ಮೋಸ ಮಾಡುವವರನ್ನು ಗುರುತಿಸುವುದು ಅವರ ಮೇಲೆ ಕಣ್ಣಿಡುವುದು ಬರೀ ಜಾಗೃತದಳದ ಕೆಲಸವೆಂಬುದನ್ನು ತಾತ್ಸಾರ ಭಾವನೆ ತೋರದೇ ಇದು ರೈತನ ಕೆಲಸ ಅನ್ನದಾತನ ಕೆಲಸ ಇದಕ್ಕಾಗಿ ಎಲ್ಲರೂ ಮುಂದಾಗಿ ಕೃಷಿಕನನ್ನು ಹರಸಬೇಕೆಂಬ ಸದ್ಭಾವನೆ ಎಲ್ಲರ ಮನದಲ್ಲಿ ತಾಳಬೇಕು ಎಂದು ಬಿ.ಸಿ.ಪಾಟೀಲ್ ಸಭೆಯಲ್ಲಿ ಸಲಹೆ ನೀಡಿದರು.
ರಸಗೊಬ್ಬರದ ಕೊರತೆ ಎಲ್ಲಿಯೂ ಇಲ್ಲ.ಆದರೆ ಕೆಲ ವ್ಯಾಪಾರಸ್ಥರು ದುರಾಸೆಯ ಲಾಭಕ್ಕಾಗಿ ಕೃತಕ ಲಾಭ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರುವ ಹುನ್ನಾರ ಮಾಡುತ್ತಲೇ ಇರುತ್ತಾರೆ.ರಸಗೊಬ್ಬರವನ್ನು ಕೇಂದ್ರ ಸಕಾಲದಲ್ಲಿ ಸಮರ್ಪಕವಾಗಿ ಪೂರೈಸುತ್ತಲೇ ಇದೆ.ರಸಗೊಬ್ಬರದ ದಾಸ್ತಾನು ಇದೆ.ಇದನ್ನು ಅಧಿಕಾರಿಗಳು ರೈತರಿಗೆ ಒತ್ತಿ ಹೇಳುವ ಕೆಲಸ ಮಾಡಬೇಕು.
ನ್ಯಾನೋ ಗೊಬ್ಬರ ಬಳಕೆಗೆ ಹೆಚ್ಚು ಪ್ರೋತ್ಸಾಹಿಸಬೇಕು.ಭೂಮಿಯನ್ನು ಮಣ್ಣನ್ನು ಉಳಿಸುವ ಕೆಲಸ ಮಾಡಬೇಕು.

ಮಳೆಯಿಂದ ಹಾನಿಗೊಳಗಾದ ರೈತರ ಜಮೀನುಗಳಿಗೆ ತಾಕುಗಳಿಗೆ ಕಂದಾಯ ಇಲಾಖಾಧಿಕಾರಿಗಳೊಂದಿಗೆ ಕೃಷಿ ಇಲಾಖಾಧಿಕಾರಿಗಳೂ ಸಹ ಭೇಟಿ ನೀಡಿ ವಾರದೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು.ರೈತ ವಿದ್ಯಾನಿಧಿ ಉಓಜನೆಯನ್ನು ರೈತ ಕೂಲಿಕಾರ್ಮಿಕ ಮಕ್ಕಳಿಗೂ ಸರ್ಕಾರ ವಿಸ್ತರಿಸಿದರ ಬಗ್ಗೆ ಹೆಚ್ಚು ಪ್ರಚಾರ ಮೂಡಿಸಬೇಕು.ಸರ್ಕಾರದ ಸೌಲಭ್ಯಗಮಕನ್ನು‌ರೈತರಿಗೆ ದೊರೆಯುವ ಬಗ್ಗೆ ಹಾಗೂ ರೈತ ಸ್ನೇಹಿ ಆಡಳಿತ ನೀಡುವ ಬಗ್ಗೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಬೆಳಗಾವಿ ವಿಭಾಗದ ಎಲ್ಲಾ ಜಿಲ್ಲೆಗಳು ಒಂದು ವಾರದಲ್ಲಿ ಪರಿಹಾರ ತಂತ್ರಾಂಶದಲ್ಲಿ ಜಂಟಿ ಬೆಳೆ ಸಮೀಕ್ಷೆಯ ರೈತರ ವರದಿಗಳನ್ನು ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಆದೇಶಿಸಿದರು.

ಸಭೆಯಲ್ಲಿ ಬೆಳಗಾವಿ ವಿಭಾಗ ಮಟ್ಟದ ಕೃಷಿ ಅಧಿಕಾರಿಗಳು, ಇಲಾಖೆಯ ಕಾರ್ಯದರ್ಶಿ ಶಿವಯೋಗಿ ಕಳಸದ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಎ.ಸಿ.ಮಂಜು,ಜಲಾನಯನ ನಿರ್ದೇಶಕ ಶ್ರೀನಿವಾಸ್ ಸೇರಿದಂತೆ ಮತ್ತಿತ್ತರ ಪ್ರಮುಖರು ಪಾಲ್ಗೊಂಡಿದ್ದರು.

ಮೋದಿ ಭೇಟಿ ನಮಗೆಲ್ಲಾ ಸ್ಫೂರ್ತಿ ತಂದಿದೆ-ಈಶ್ವರಪ್ಪ

0

ಶಿವಮೊಗ್ಗದಲ್ಲಿ, ರಾಜ್ಯಕ್ಕೆ ಮೋದಿ ಭೇಟಿ ವಿಚಾರದ ಸಲುವಾಗಿ,
ಇಂತಹ 50 ಕಾರ್ಯಕ್ರಮಗಳನ್ನು ನಾವು ಮಾಡುತ್ತೇವೆ ಎಂದುಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದ್ದಾರೆ.

ಬಿಜೆಪಿಗೆ ಜನ ಬೆಂಬಲ ಕೊಡ್ತಿರುವುದಕ್ಕೆ ನಿನ್ನೆ ಶುಕ್ರವಾರ ಕಾರ್ಯಕ್ರಮ ಸಾಕ್ಷಿಯಾಗಿದೆ.

ಮೋದಿ ಎಲ್ಲಿ ಬರುತ್ತಾರೋ ಅಲ್ಲಿ ಜನರ ಸಂಚಲನ ಇರುತ್ತದೆ.ಜನಜಾಗೃತಿ ಮೂಢಿಸಿ ದೇಶ ಭಕ್ತಿ ಮೂಢಿಸುವ ಪ್ರತೀಕ ಅಂದರೆ ಮೋದಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಅಭಿಪ್ರಾಯಪಟ್ಟಿದ್ದಾರೆ.

ಮೋದಿ ಭೇಟಿಯಲ್ಲಿ ಚುನಾವಣೆ ವಿಚಾರ ಬರಲೇ ಇಲ್ಲ.ಅವರ ಭಾಷಣದಲ್ಲಿ ಒಂದೇ ಒಂದು ರಾಜಕೀಯ ವಿಷಯ ಇರಲಿಲ್ಲ. ನಿಜವಾದ ರಾಷ್ಟ್ರ ಭಕ್ತನನ್ನು ಪಡೆದದ್ದು ನಮ್ಮ ಪುಣ್ಯ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದ್ದಾರೆ.

ಅವರು ರಾಜ್ಯಕ್ಕೆ ಭೇಟಿ ನೀಡಿದ್ದು ನಮಗೆಲ್ಲಾ ಸ್ಪೂರ್ತಿ ತುಂಬಿದೆ ನಮ್ಮ ಬಲಗೈಗೆ ಶಕ್ತಿ ಬಂದಂತಾಗಿದೆ ಎಂದು ಹೇಳಿದ್ದಾರೆ.

ಭಾರತದ ಕಡಲಭದ್ರತೆಗೆ ಐಎನ್ಎಸ್ ವಿಕ್ರಾಂತ್ ಮಹತ್ವದ ಹೆಜ್ಜೆ- ರಾಹುಲ್

0

ಐಎನ್‌ಎಸ್ ವಿಕ್ರಾಂತ್ ದೇಶದ ಕಡಲ ಭದ್ರತೆಗೆ ಮಹತ್ವದ ಹೆಜ್ಜೆ ಎಂದು ಬಣ್ಣಿಸಿರುವ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭಾರತೀಯ ನೌಕಾಪಡೆ, ನೌಕಾ ವಿನ್ಯಾಸ ಬ್ಯೂರೋ ಮತ್ತು ಕೊಚ್ಚಿನ್ ಶಿಪ್‌ಯಾರ್ಡ್ ಅನ್ನು ದೇಶೀಯವಾಗಿ ವಿನ್ಯಾಸಗೊಳಿಸಿದ ಮತ್ತು ತಯಾರಿಸಿ ಮೊದಲ ವಿಮಾನವಾಹಕ ನೌಕೆಯನ್ನು ನಿಯೋಜಿಸಿದ್ದಕ್ಕಾಗಿ ಅಭಿನಂದಿಸಿದ್ದಾರೆ.

ಭಾರತೀಯ ನೌಕಾಪಡೆ, ನೇವಲ್ ಡಿಸೈನ್ ಬ್ಯೂರೋ ಮತ್ತು ಕೊಚ್ಚಿನ್ ಶಿಪ್‌ಯಾರ್ಡ್‌ಗೆ ಹಲವು ವರ್ಷಗಳ ಕಠಿಣ ಪರಿಶ್ರಮಕ್ಕಾಗಿ ಐಎನ್‌ಎಸ್ ವಿಕ್ರಾಂತ್‌ನ ದೃಷ್ಟಿಕೋನವನ್ನು ಸಾಕಾರಗೊಳಿಸಿದೆ.

ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ, ವಿಕ್ರಾಂತ್ ಭಾರತದ ಕಡಲ ಭದ್ರತೆಗೆ ಮಹತ್ವದ ಹೆಜ್ಜೆಯಾಗಿದೆ ಎಂದು ವಿಮಾನವಾಹಕ ನೌಕೆಯ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಭಾರತವು ತನ್ನ ಚೊಚ್ಚಲ, ಸ್ಥಳೀಯವಾಗಿ ವಿನ್ಯಾಸಗೊಳಿಸಿ ನಿರ್ಮಿಸಿದ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಅನ್ನು , ಪ್ರಧಾನಿ ನರೇಂದ್ರ ಮೋದಿಯವರು ದೇಶಕ್ಕೆ ಸಮರ್ಪಿಸಿದ್ದರು.

ಮುರುಘಾ ಶ್ರೀಗಳು ಸೆ 5 ರವರೆಗೆ ಪೋಲಿಸ್ ಕಷ್ಟಡಿಗೆ

0

ಅಪ್ರಾಪ್ತರಿಗೆ ಲೈಂಗಿಕ ದೌರ್ಜನ್ಯ ನೀಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರನ್ನು 2 ನೇ ಅಪರ ಜಿಲ್ಲಾ ಕೋರ್ಟ್ ಎದುರು ಹಾಜರುಪಡಿಸಲಾಗಿದೆ. ಸೆ. 5 ರವರೆಗೆ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಮಠದ ಹಾಸ್ಟೆಲ್‌ ನಲ್ಲಿರುವ ವಿದ್ಯಾರ್ಥಿನಿಯರ ಬಗ್ಗೆ ಚಿಂತೆ ಶುರುವಾಗಿದೆ. ಹೀಗಾಗಿ ಮಕ್ಕಳ ಹಕ್ಕು ಆಯೋಗವು ಮುರುಘಾ ಮಠದಲ್ಲಿರುವ ವಿದ್ಯಾರ್ಥಿನಿಯರನ್ನು ಬೇರೆಡೆಗೆ ಶಿಫ್ಟ್‌ ಗೆ ಸೂಚಿಸಲಾಗಿದೆ.

ಸ್ವಾಮೀಜಿ ಬಂಧನದ ಬೆನ್ನಲ್ಲೆ ಮಠದ ವಿದ್ಯಾರ್ಥಿನಿಯರ ಭವಿಷ್ಯದತ್ತ ಮಕ್ಕಳ ಆಯೋಗ ಚಿಂತನೆ ನಡೆಸಿದೆ. ಸದ್ಯಕ್ಕೆ ವಿದ್ಯಾರ್ಥಿನಿಯರನ್ನು ಮೊರಾರ್ಜಿ ದೇಸಾಯಿ ಹಾಸ್ಟೆಲ್‌ಗೆ ಶಿಫ್ಟ್‌ ಮಾಡುವ ನಿರ್ಧಾರ ಕೈಗೊಂಡಿದೆ.

ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ತೊಡಕಾಗದಂತೆ ಕ್ರಮಕೈಗೊಳ್ಳಲಾಗುವುದು ಎಂದು ಆಯೋಗ ತಿಳಿಸಿದೆ.

ಉದ್ದ ಸೌತೆಕಾಯಿ ಬೆಳೆದು ಗಿನ್ನೆಸ್ ದಾಖಲೆ ಬರೆದ ಕೃಷಿಕ

0

ಸೌತೆಕಾಯಿ ಸಾಮಾನ್ಯವಾಗಿ ಬಳಸುವ ತರಕಾರಿಗಳಲ್ಲೊಂದು. ಅದರ ಅಳತೆಯ ಪರಿಚಯವೂ ಎಲ್ಲರಿಗೂ ಇದ್ದೇ ಇರುತ್ತದೆ.
ಹೆಚ್ಚೆಂದರೆ ಒಂದು ಮೊಣಕೈ ಉದ್ದ ಇರಬಹುದು. ಆದರೆ ಇಲ್ಲೊಬ್ಬರು 113 ಸೆಂ.ಮೀಟರ್​ ಸೌತೆಕಾಯಿ ಬೆಳೆಸಿ ವಿಶ್ವದಾಖಲೆ ಬರೆದಿದ್ದಾರೆ.

ಅಮೆರಿಕಾದ ಸೌತಾಂಪ್ಟನ್​ ನಿವಾಸಿ, ಪೋಲೆಂಡ್​ ಮೂಲದ ಸೆಬಾಸ್ಟಿಯನ್​ ಸುಸ್ಕಿ ಅವರು ವಿಶ್ವದ ಅತಿ ಉದ್ದದ ಸೌತೆಕಾಯಿ ಬೆಳೆದಿದ್ದಾರೆ.
ಇದು 113.4 ಸೆಂಟಿಮೀಟರ್​ಗಳಿದ್ದು, ಗಿನ್ನಿಸ್​ ವರ್ಲ್ಡ್​ ರೆಕಾರ್ಡ್​ನಲ್ಲಿ ತಮ್ಮ ಹೆಸರು ದಾಖಲಿಸಿದ್ದಾರೆ.
ಈ ಹಿಂದೆ ಅವರದೆ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದರು.

ಯುರೋಪಿಯನ್​ ಜೈಂಟ್​ ವೆಜಿಟಬಲ್​ ಗ್ರೋವರ್ಸ್​ ಅಸೋಸಿಯೇಷನ್​ನಲ್ಲಿ ಕಾರ್ಯನಿರ್ವಹಿಸುವ ಸೆಬಾಸ್ಟಿಯನ್​ ಹಲವಾರು ರಾಷ್ಟ್ರೀಯ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಸೆಬಾಸ್ಟಿಯನ್​ ಪ್ರಕಾರ, ದೊಡ್ಡ ಸೌತೆಕಾಯಿಗಳನ್ನು ಬೆಳೆಯುವುದು ಅಪಾಯಕಾರಿ ವ್ಯವಹಾರ. ಬೇಗನೆ ಕತ್ತರಿಸಿದರೆ, ರೆಕಾರ್ಡ್​ ಬ್ರೇಕರ್​ ಆಗಬಹುದು. ಆದರೆ ಹೆಚ್ಚು ಸಮಯ ಬಿಟ್ಟರೆ ಅಪಾಯ ಎದುರಾಗುತ್ತದೆ. ಸೌತೆಕಾಯಿ ಬೆಳೆದಂತೆ ಕೊಳೆಯುವ ಅಪಾಯವಿದೆ ಎಂದಿದ್ದಾರೆ.
ಸೌತೆಕಾಯಿಯ ಬೆಳವಣಿಗೆಯ ವೇಳೆ ಅವರು ಆಸ್ಪತ್ರೆಗೆ ಸೇರಿದ್ದರಂತೆ, ಅವರ ಅನುಪಸ್ಥಿತಿಯಲ್ಲಿ ಪತ್ನಿ ರೆನಾಟಾ ಸಹಾಯಕ್ಕೆ ಬಂದು ತರಕಾರಿಯನ್ನು ನೋಡಿಕೊಂಡರಂತೆ
ವಿಶ್ವದ ಅತಿ ಉದ್ದದ ಸೌತೆಕಾಯಿ ಬೆಳೆಯುವ ಮೊದಲು ಸೆಬಾಸ್ಟಿಯನ್​ ಸೌತೆಕಾಯಿ ಬೀಜದ ಬಗ್ಗೆ ಹುಡುಕಾಡಿದ್ದರು.ಯುಕೆ, ಜರ್ಮನಿ, ಪೋಲೆಂಡ್ ​ಸುತ್ತಿ ಮತ್ತೆ ಯುಕೆಗೆ ಹಿಂತಿರುಗಿ ನಿರ್ದಿಷ್ಟ ಸೌತೆ ಬೀಜವನ್ನು ಕಂಡುಕೊಂಡರು.

ಈ ಬೀಜಗಳು ಪೋಲೆಂಡ್​ನ ಬೆಳೆಗಾರರಾದ ಪಿಯೋಟರ್​ ಹೊಲೆವಾ ಅವರಿಂದ ನನಗೆ ಬಂದಿವೆ. ಅವರ ಸೌತೆಕಾಯಿಗಳು 99 ಸೆಂಟಿಮೀಟರ್​ ಉದ್ದವನ್ನು ತಲುಪಬಹುದು ಎಂದು ಸೆಬಾಸ್ಟಿಯನ್​ ಹೇಳಿಕೊಂಡಿದ್ದಾರೆ.

ತೆಂಗಿನ ಬಗ್ಗೆ ತಿಳುವಳಿಕೆ

0

ತೆಂಗಿನ ಮರ’ ಎಂದರೆ ಭಾರತೀಯರಿಗೆ ಪೂಜ್ಯ ಭಾವ. ತೆಂಗಿನಮರವನ್ನು ಕಲ್ಪವೃಕ್ಷ ಎಂತಲೂ ಕರೆಯುತ್ತಾರೆ. ಏಕೆಂದರೆ ತೆಂಗಿನಮರ ಕೊಡುವ ತೆಂಗಿನ ಕಾಯಿ, ಇದರ ಎಲೆ/ಗರಿ, ಕತ್ತ, ಕಾಂಡ ಎಲ್ಲ ಉಪಯೋಗಕಾರಿಯಾಗಿವೆ. ತೆಂಗಿನ ಮರದ ಪ್ರತಿಯೊಂದು ಭಾಗವು ಮನುಷ್ಯನಿಗೆ ಬಹುಪಯೋಗಿ.

ಭಾರತದಾದ್ಯಂತ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಒರಿಸ್ಸಾ, ಗೋವಾರಾಜ್ಯಗಳ ಕರಾವಳಿ ಪ್ರಾಂತಗಳಲ್ಲಿ ಹೆಚ್ಚಾಗಿ ಸಾಗುವಳಿ ಮಾಡುತ್ತಾರೆ. ಅಂಡಮಾನ್-ನಿಕೋಬಾರ್ ದ್ವೀಪಗಳ ಸಮುದ್ರ ತೀರ ಪ್ರಾಂತ್ಯದಲ್ಲೂ ತೆಂಗು ಬೆಳೆಯಲಾಗುತ್ತದೆ. ಅಸ್ಸಾಂ, ಗುಜರಾತ್, ಮಹಾರಾಷ್ಟ್ರ, ನಾಗಲ್ಯಾಂಡ್ ತ್ರಿಪುರ, ಪಶ್ಚಿಮ ಬಂಗಾಳ, ಲಕ್ಷದ್ವೀಪ, ಪಾಂಡಿಚೆರಿ ರಾಜ್ಯಗಳಲ್ಲಿಯೂ ಸಾಗುವಳಿ ನಡೆಯುತ್ತಿದೆ.
ಇನ್ನು ಕರ್ನಾಟಕದಲ್ಲಿ ತುಮಕೂರು, ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು, ಮಂಡ್ಯ, ಚಾಮರಾಜನಗರ, ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತೆಂಗನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.

‘ಕಲ್ಪವೃಕ್ಷ’ ವೆನಿಸಿಕೊಂಡಿರುವ ತೆಂಗು ರಾಜ್ಯದ ಮುಖ್ಯ ವಾಣಿಜ್ಯ ಬೆಳೆಗಳಲ್ಲೊಂದು.
ಇದು ಆಹಾರ (ಎಣ್ಣೆ), ಒಣಕೊಬ್ಬರಿ, ಪಾನೀಯ ಮತ್ತು ಉರುವಲು ವಸ್ತುಗಳನ್ನು ಒದಗಿಸುವುದಲ್ಲದೇ ಹಲವಾರು ಕೈಗಾರಿಕೆಗಳಿಗೆ
ಕಚ್ಚಾ ಪದಾರ್ಥಗಳನ್ನು ಒದಗಿಸುವುದು. ಕೊಬ್ಬು ಮತ್ತು ಹಲವು ಜೀವಸತ್ವಗಳನ್ನು ಹೊಂದಿರುವುದರಿಂದ ಪಿಷ್ಟಯುಕ್ತ
ಆಹಾರ ಪದಾರ್ಥಗಳಲ್ಲಿಯ ಕೊರತೆಗಳನ್ನು ಸರಿದೂಗಿಸುತ್ತದೆ.

ನಾಟಿ ಮತ್ತು ಉತ್ತಮ ಸಸಿಗಳ ಆಯ್ಕೆ :
ಉತ್ತಮ ಗುಣಮಟ್ಟದ ಸಸಿಗಳನ್ನು ಬೆಳೆಸಲು ಕೆಳಗಿನ ವಿಧಾನಗಳನ್ನು ಅನುಸರಿಸಬೇಕು
ಅ) ಬೀಜದ ಕಾಯಿಗಳ ಆಯ್ಕೆ
೧. ಮಳೆಯಾಶ್ರಯದಲ್ಲಿ ಪ್ರತಿ ವರ್ಷವೂ ೮೦-೧೦೦ ಕಾಯಿ ಬಿಡುತ್ತಿರುವ ೨೫-೪೦ ವರ್ಷ
ವಯಸ್ಸಿನ ಆರೋಗ್ಯವಾದ ಮರಗಳಿಂದ ಗೋಲಾಕಾರದ ಮಧ್ಯಮ ಗಾತ್ರದ ಕಾಯಿಗಳನ್ನು ಬಿತ್ತನೆಗಾಗಿ ಆರಿಸಬೇಕು.
೨. ಕಡಿಮೆ ನೀರುಳ್ಳ ಸಂಪೂರ್ಣ ಬಲಿತ ಕಾಯಿಗಳನ್ನು ಆರಿಸಬೇಕು.
೩. ಪ್ರತಿ ತಾಯಿ ಮರವು ೧೨ ಗೊಂಚಲು ಮತ್ತು ೩೦-೪೦ ಗರಿಗಳನ್ನು ಹೊಂದಿರಬೇಕು.
೪. ಅಕ್ಟೋಬರ್‌ನಿಂದ ಮಾರ್ಚ್ ತಿಂಗಳವರೆಗೆ ಬರುವ ಕಾಯಿಗಳನ್ನು ಬಿತ್ತನೆಗೆ ಉಪಯೋಗಿಸಬೇಕು.
೫. ಆಯ್ದ ಕಾಯಿಗಳನ್ನು ೨ ತಿಂಗಳು ಕಾಲ ತೊಟ್ಟು ಮೇಲ್ಮುಖವಾಗಿರುವಂತೆ ಶೇಕರಿಸಿಡಬೇಕು.
ಆ) ಸಸಿಮಡಿ ತಯಾರಿಕೆ ಮತ್ತು ಕಾಯಿ ನೆಡುವಿಕೆ
೧. ೭.೫ ಮೀ. ಉದ್ದ x ೧.೫ ಮೀ. ಅಗಲದ ಅಳತೆಯ ಸಸಿಮಡಿಗಳನ್ನು ತಯಾರಿಸಿ. ೪೦ ಸೆಂ.ಮೀ. ಅಂತರದ ಸಾಲುಗಳಲ್ಲಿ, ೪೫ ಸೆಂ.ಮೀ. ಆಳದ ಕಾಲುವೆ ಮಾಡಿ ತೆಗೆದು ಮರಳನ್ನು ತುಂಬಬೇಕು.
೨. ಎರಡು ತಿಂಗಳು ಸಂಗ್ರಹಿಸಿಟ್ಟ ಬೀಜದ ಕಾಯಿಗಳನ್ನು ೩೦ ಸೆಂ.ಮೀ. ಅಂತರದಲ್ಲಿ ನೇರವಾಗಿ ಸಸಿಮಡಿಯಲ್ಲಿ ನಾಟಿ ಮಾಡಬೇಕು. ಕಾಯಿಗಳ ಮೇಲೆ ೫ ಸೆಂ.ಮೀ.
ಗಿಂತ ಹೆಚ್ಚು ಮರಳು ಇರಬಾರದು. ಕಾಯಿಗಳನ್ನು ಅಡ್ಡಲಾಗಿಯೂ ಸಹ
ನೆಡಬಹುದು.
೩. ನಾಟಿ ಮಾಡಿದ ಬೀಜದ ಕಾಯಿಗಳು ೩-೪ ತಿಂಗಳುಗಳಲ್ಲಿ ಮೊಳಕೆಯೊಡೆದು, ಸುಮಾರು ೧೨-೧೮ ತಿಂಗಳಲ್ಲಿ ನಾಟಿಗೆ ಸಿದ್ಧವಾಗುತ್ತವೆ. ೫ ತಿಂಗಳುಗಳ ನಂತರ ಮೊಳಕೆ ಬಂದ ಸಸಿಗಳನ್ನು ನಾಟಿಗೆ ಉಪಯೋಗಿಸಬಾರದು.
೪. ಹೆಚ್ಚು ಗರಿಗಳುಳ್ಳ (೫-೬), ದಪ್ಪಕಾಂಡ ಹೊಂದಿದ (೧೦ ಸೆಂ.ಮೀ. ಗಾತ್ರ), ದೃಢವಾಗಿರುವ, ತ್ವರಿತ ಬೆಳವಣಿಗೆ ಹೊಂದಿರುವ, ಹೆಚ್ಚು ಬೇರು ಹಾಗೂ ಎರಿಯ
ತುದಿ ಒಡೆದಿರುವ ಸಸಿಗಳನ್ನು ನಾಟಿ ಮಾಡಲು ಉಪಯೋಗಿಸಬೇಕು.
ತೆಂಗಿನ ಗರಿಷ್ಠ ಪರಿಣಾಮಕಾರಿ ಬೇರಿನ ವಲಯ ೨ ಮೀ. ನಷ್ಟು ಇರುತ್ತದೆ ಹಾಗೂ ಒಂದು ತೆಂಗಿನ ಮರವು ಒಟ್ಟು ಪ್ರದೇಶದ ಶೇ. ೧೨.೬ ರಿಂದ ಶೇ. ೧೯.೬ ರಷ್ಟು ಪ್ರದೇಶವನ್ನು ಮಾತ್ರ ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳುತ್ತದೆ, ಉಳಿದ ಶೇ. ೮೦.೪ ರಿಂದ ಶೇ. ೮೭.೪ ಪ್ರದೇಶವನ್ನು ಬೇರೆ ಬೆಳೆಗಳನ್ನು ಬೆಳೆಯಲು ಉಪಯೋಗಿಸಿಕೊಳ್ಳಬಹುದಾಗಿದೆ .

ತೆಂಗಿನ ತೋಟದಲ್ಲಿ
ಅಂತರ/ಮಿಶ್ರ ಬೆಳೆಯ ಮಹತ್ವ
ತೆಂಗಿನ ಬೆಳೆಯ ಜೀವನ ಸರದಿಯನ್ನು, ಅದರ ಎತ್ತರ, ವಿಸ್ತಾರಕ್ಕನುಗುಣವಾಗಿ ಮೂರು
ವಿಧಗಳಾಗಿ ವಿಂಗಡಿಸಬಹುದು:

(ಅ) ನೆಟ್ಟ ಸಮಯದಿಂದ ೮ ವರುಷದವರೆಗಿನ ತೆಂಗು ಹೆಚ್ಚು ಆವರಿಸುವುದಿಲ್ಲ ಹಾಗೂ
ತೆಂಗಿನ ಬೆಳೆಯ ಬೇರಿನ ಬೆಳವಣಿಗೆ ಒಂದು ಮೀಟರ್ ವ್ಯಾಸದಲ್ಲಿ ಮಾತ್ರ
ಆವರಿಸಿರುತ್ತದೆ.
ಶೇಕಡಾ ೮೦ – ೯೦ ರಷ್ಟು ಸೂರ್ಯನ ಕಿರಣಗಳ ಲಭ್ಯತೆ.

(ಆ) ೮ ವರ್ಷದಿಂದ ೨೫ ವರ್ಷದವರೆಗಿನ ತೆಂಗಿನ ಮರವು ಹೆಚ್ಚಿನ ಎರಿಗಳನ್ನು
ಹೊಂದಿರುತ್ತದೆ, ಅದರ ಗಾತ್ರ ದೊಡ್ಡದಾಗಿರುತ್ತದೆ ಮತ್ತು ಗಿಡವು ಭೂಮಿಯನ್ನು ಹೆಚ್ಚಾಗಿ ಆವರಿಸಿರುತ್ತದೆ. ಈ ಅವಧಿಯಲ್ಲಿ
ಅಂತರ ಬೆಳೆಗಳನ್ನು ಬೆಳೆಯುವಾಗ,
ನೆರಳಿನಲ್ಲಿ ಬೆಳೆಯಬಲ್ಲ ಬೆಳೆಗಳನ್ನು ಮಾತ್ರ ಬೆಳೆಯಬಹುದು.
ಶೇಕಡಾ ೨೦ ರಷ್ಟು ಸೂರ್ಯನ ಕಿರಣಗಳ ಲಭ್ಯತೆ.

(ಇ) ೨೫ ವರುಷದ ನಂತರದ ತೆಂಗಿನ ಕಾಂಡ ಎತ್ತರವಾಗಿ ಬೆಳೆದಿರುತ್ತದೆ ಹಾಗೂ ಅಧ್ಯಯನದ ಪ್ರಕಾರ ಶೇ. ೭೩ ರಷ್ಟು ಬೇರುಗಳು ೧.೮ ಮೀಟರ್ ವ್ಯಾಸದಲ್ಲಿ ಕೇಂದ್ರೀಕೃತವಾಗಿರುತ್ತವೆ. ಇದರಿಂದ ಈ ಬೆಳೆಯನ್ನು ಏಕ ಬೆಳೆಯಾಗಿ ೭.೫ x ೭.೫ ಮೀಟರ್ ಅಂತರದಲ್ಲಿ ಬೆಳೆಯುವುದರಿಂದ, ಶೇ. ೨೫ ರಷ್ಟು ಭೂಮಿ ಮಾತ್ರ
ಉಪಯೋಗಿಸಲ್ಪಡುತ್ತದೆ. ಈ ಅವಧಿಯಲ್ಲಿ ವಿವಿಧ ಬೆಳೆಗಳನ್ನು ಮಿಶ್ರ ಬೆಳೆಯಾಗಿ ಬೆಳೆಯಬಹುದು.

ಕೊಯ್ಲು ಮತ್ತು ಇಳುವರಿ :
ತಳಿಗೆ ಅನುಗುಣವಾಗಿ ನಾಟಿ ಮಾಡಿದ ೪-೭ ವರ್ಷಗಳಲ್ಲಿ ಗಿಡಗಳು ಕಾಯಿ ಬಿಡಲು ಪ್ರಾರಂಭಿಸುತ್ತವೆ. ಗಿಡ್ಡ ತಳಿಗಳು ೩-೪ ವರ್ಷಕ್ಕೆ ಫಲಕ್ಕೆ ಕೊಡುತ್ತವೆ. ಪ್ರತಿ ಮರದಿಂದಲೂ ವರ್ಷಕ್ಕೆ ಸರಾಸರಿ ಕಾಯಿಗಳ ಇಳುವರಿ ಈ ಕೆಳಗಿನಂತಿರುತ್ತದೆ.
• ಎತ್ತರ ತಳಿಗಳು – ೮೦-೧೦೦ ಕಾಯಿಗಳು
• ಗಿಡ್ಡ ತಳಿಗಳು – ೮೦ -೯೫ ಕಾಯಿಗಳು
• ಸಂಕರಣ ತಳಿಗಳು – ೧೦೦-೧೫೦ ಕಾಯಿಗಳು
ದೊರೆಯುತ್ತವೆ.

ತೆಂಗಿಗೆ ರೋಗ ಬಾಧೆ ಸಾಮಾನ್ಯ. ಕಾಯಿ ಪೀಚು ಪೀಚಾಗುವುದು, ಮಿಳ್ಳೆಗಳು ಉದುರಿ ಹೋಗುವುದು, ನುಸಿಪೀಡೆ, ರಸಸೋರುವಿಕೆ ಬಾಧೆ… ಹೀಗೆ ಹತ್ತು ಹಲವಾರು ಸಮಸ್ಯೆಗಳಿಂದ ತೆಂಗಿನ ಮರ ಬಳಲುತ್ತದೆ.

ತೆಂಗಿನ ಮರ ಚೆನ್ನಾಗಿ ಬೆಳೆಯಲು ಕಾಯಿ ಬಿಡುವ ಪ್ರತಿ ತೆಂಗಿನ ಮರಕ್ಕೆ ಕನಿಷ್ಠ 45 ಲೀಟರ್ ನೀರು ಉಣಿಸಬೇಕು. ಈ ಮರಕ್ಕೆ ವರ್ಷಕ್ಕೆ 100 ಕೆ.ಜಿ. ಹಸಿರೆಲೆ ಗೊಬ್ಬರ, 30 ಕೆ.ಜಿ. ತಿಪ್ಪೆಗೊಬ್ಬರ ಮತ್ತು 10 ಕೆ.ಜಿ. ಒಲೆಬೂದಿ ಹಾಕಬೇಕು.
ಒಂದು ತಿಂಗಳವರೆಗೆ ದೇಸೀ ಆಕಳ ಮಜ್ಜಿಗೆ ಸಂಗ್ರಹಿಸಿ, ಚೆನ್ನಾಗಿ ಹುಳಿ ಬಂದ ಎರಡು ಲೀಟರ್ ಮಜ್ಜಿಗೆಯನ್ನು 18 ಲೀಟರ್‌ಗೆ ನೀರಿಗೆ ಸೇರಿಸಿ ಬೆಳೆಗಳಿಗೆ ಸಿಂಪಡಿಸಬೇಕು.

ಮೊಸರನ್ನು ಮರದ ಬೇರಿನ ಸುತ್ತ ಪ್ರತಿದಿನ ಹಾಕಬೇಕು. ಸ್ವಲ್ಪ ತಿಂಗಳು ನಿತ್ಯ ಇದನ್ನು ಮಾಡುತ್ತಿದ್ದರೆ ತೆಂಗಿನ ಮಿಳ್ಳೆ ಉದುರುವುದು ಕಮ್ಮಿಯಾಗುತ್ತದೆ. ಹಸಿಮೆಣಸಿನಕಾಯಿ ಹಾಗೂ ಬೇವಿನ ಸೊಪ್ಪನ್ನು ಚೆನ್ನಾಗಿ ಅರೆದು 18 ಲೀಟರ್ ನೀರಿಗೆ ಒಂದು ಲೀಟರ್ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕಲಕಿ ಸಿಂಪಡಿಸಿದರೆ ಕೀಟಬಾಧೆ ಬರುವುದಿಲ್ಲ.ಹುಳು, ನುಸಿ ನಿಯಂತ್ರಣಕ್ಕೆ ತೆಂಗಿನ ಮರದ ಸುಳಿಯ ಬಳಿ ಅರಿಶಿಣ, ಇಂಗು, ಬೆಳ್ಳುಳ್ಳಿ, ಶುಂಠಿಗಳನ್ನು ಕಟ್ಟಬಹುದು.

ತೇವಾಂಶ ಹೆಚ್ಚಾಗಿ ಅತಿ ಶೀತದಿಂದ ರಸ ಸೋರುವ ರೋಗ ಬರುತ್ತದೆ. ಅಂತಹ ಸಂದರ್ಭದಲ್ಲಿ 4 ಅಡಿ ಎತ್ತರದಲ್ಲಿ ದಪ್ಪ ಮೊಳೆಯಿಂದ ಎರಡೂ ಕಡೆ ರಂಧ್ರ ಮಾಡಬೇಕು. ರಸ ಸೋರಿಹೋದ ಮೇಲೆ ಬೆಂಕಿ ಹಚ್ಚಿದ ಶಾಖ ಕೊಡಬೇಕು. ಕಾಂಡಕ್ಕೆ ಸುಣ್ಣ ಬಳಿಯಬೇಕು. ಮಣ್ಣು, ಗೊಬ್ಬರ, ನೀರು ಸರಿಪಡಿಸಿ ಗುಣಪಡಿಸಬಹುದು. ಉಳಿಯಿಂದ ರಸ ಸೋರುವ ಜಾಗವನ್ನು ಚೌಕಾಕಾರವಾಗಿ ಕೆತ್ತಬೇಕು. ಅದಕ್ಕೆ ಎಕ್ಕದ ಸೊಪ್ಪು, ತುಂಬೆ ಸೊಪ್ಪು, ಅಂಬಳಿ ಸೊಪ್ಪು, ಸೇರಿಸಿ ಅರೆದು ರಸವನ್ನು ಹಚ್ಚಬೇಕು. ಹೀಗೆ ನಾಲ್ಕಾರು ಬಾರಿ ಹಚ್ಚಿದರೆ. ಕ್ರಮೇಣ ರೋಗ ವಾಸಿಯಾಗುತ್ತಾ ಬರುತ್ತದೆ.

ತೆಂಗಿನ ಮರಗಳ ಬುಡಭಾಗದಲ್ಲಿ ಕಾಂಡ ಸೋರುವ ಲಕ್ಷಣಗಳು ಕಂಡುಬರುತ್ತವೆ. ಬುಡದಿಂದ ಒಂದು ಮೀಟರ್ ಎತ್ತರದೊಳಗೆ ಕೆಂಪುಮಿಶ್ರಿತ ಕಂದುಬಣ್ಣದ ದ್ರವ ತೊಗಟೆಯ ಸೀಳುಗಳಿಂದ ಹೊರಬರುತ್ತದೆ. ಈ ರೋಗ ನಿಯಂತ್ರಿಸಲು 50 ಕೆ.ಜಿ. ಕೊಟ್ಟಿಗೆ ಗೊಬ್ಬರವನ್ನು ಪ್ರತಿ ತೆಂಗಿನ ಮರಕ್ಕೆ ವರ್ಷಕ್ಕೊಮ್ಮೆ ಸೇರಿಸುವ ಜೊತೆಗೆ 5 ಕೆ.ಜಿ. ಬೇವಿನ ಹಿಂಡಿ, 50 ಗ್ರಾಂ ಟ್ರೈಕೋಡರ್ಮ ಎಂಬ ಜೀವಾಣುವನ್ನು ತೆಂಗಿನಮರದ ಬುಡಕ್ಕೆ ಸೇರಿಸಬೇಕು. ರೋಗದ ಸೋಂಕು ಕಾಣಿಸಿಕೊಳ್ಳುವ ಮರಗಳನ್ನು ಗುರುತಿಸಿ, ತೊಗಟೆ ಸಹಿತ ರೋಗಕಾರಕ ಮಚ್ಚೆಗಳನ್ನು ಕೆತ್ತಿ ತೆಗೆಯಬೇಕು. ಕೆತ್ತಿದ ಭಾಗಕ್ಕೆ ಶೇ 10ರ ತಾಮ್ರದ ಆಕ್ಸಿ ಕ್ಲೋರೈಡ್‌ ಶಿಲೀಂಧ್ರನಾಶಕ ಲೇಪಿಸಿ, ಬೇರಿನ ಮೂಲಕ ಪ್ರತಿ ಮೂರು ತಿಂಗಳಿಗೊಮ್ಮೆ 5 ಮಿ.ಲೀ. ಟ್ರೈಕೋಮಾಫರ್‌ ಅನ್ನು 100 ಲೀಟರ್ ನೀರಿನಲ್ಲಿ ಮಿಶ್ರಣಮಾಡಿ ಕೊಡಬೇಕು.

1 ಕೆ.ಜಿ. ಕಡಲೆಕಾಯಿ ಹಿಂಡಿಯನ್ನು 4 ಲೀಟರ್ ನೀರಿನಲ್ಲಿ ಸ್ವಲ್ಪ ಹುಳಿ ಮಜ್ಜಿಗೆಯೊಂದಿಗೆ 5–6 ದಿನ ಹುದುಗಿಸಿ 2 ಲೀಟರ್ ಅಳತೆ ಡಬ್ಬದಲ್ಲಿ ಅರ್ಧದಷ್ಟು ತುಂಬಿಸಿ ನೆಲದಿಂದ 5 ಅಡಿ ಎತ್ತರದಲ್ಲಿ ಕಟ್ಟಿದರೆ ಸುಳಿ ಕೊರೆಯುವ ಹುಳುಗಳನ್ನು ನಾಶಪಡಿಸಬಹುದು.

ಅಣಬೆ ರೋಗ ತಡೆಯಲು ಬಸಿಗಾಲುವೆ ಸರಿಪಡಿಸಿ, ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಇದನ್ನು ನಿಯಂತ್ರಿಸಲು ಈ ಮೇಲೆ ತಿಳಿಸಿರುವ (ಕಾಂಡ ಸೋರುವ ಸಮಸ್ಯೆಗೆ ನೀಡಿರುವ ಪರಿಹಾರ) ಉಪಚಾರದೊಂದಿಗೆ ರೋಗಬಾಧಿತ ಮರಗಳ ಸುತ್ತ 2 ಮೀ. ಸುತ್ತಳತೆಯಲ್ಲಿ 1 ಮೀ. ಆಳ, 30 ಸೆ.ಮೀ. ಅಗಲದ ಕಾಲುವೆ ನಿರ್ಮಿಸಿ 4 ಕೆ.ಜಿ. ಗಂಧಕದ ಪುಡಿ ಸೇರಿಸಬೇಕು. ರೋಗಕ್ಕೆ ಬಲಿಯಾದ ಮರಗಳನ್ನು ಬುಡಸಮೇತ ತೆಗೆದು ಆ ಗುಂಡಿಗೆ 3 ಮಿ.ಲೀ. ಟ್ರೈಕೋಮಾಫರ್ ಅನ್ನು ಒಂದು ಲೀಟರ್ ನೀರಿನಲ್ಲಿ ಮಿಶ್ರಣಮಾಡಿ 10- 15ಲೀ. ಸುರಿಯುವುದರಿಂದ ಮಣ್ಣಿನಲ್ಲಿರುವ ರೋಗಾಣುಗಳನ್ನು ನಿರ್ಮೂಲನೆ ಮಾಡಬಹುದು.

ತೆಂಗಿನ ಮರಕ್ಕೆ ಸಾಮಾನ್ಯವಾಗಿ ಎಲ್ಲೆಡೆ ಕಾಡುವ ರೋಗ ಬುಡ ಸೋರುವಿಕೆ ಅಥವಾ ಕಾಂಡ ¸ ಸೋರುವಿಕೆ. ಈ ರೋಗಕ್ಕೆ ತುತ್ತಾದ ಮರಗಳಲ್ಲಿ ಫಸಲು ಕಡಿಮೆ ಆಗುತ್ತದೆ. ರೋಗ ಗರಿಷ್ಠ ಮಟ್ಟ ತಲುಪಿದಾಗ ಆ ಮರವೇ ಸತ್ತು ಹೋಗುತ್ತದೆ. ತೆಂಗು ಪ್ರಧಾನವಾಗಿ ಬೆಳೆಯುವ ಭಾಗಗಳ ರೈತರಿಗೆ ಬುಡ ಸೋರುವಿಕೆ ಇಂದಿಗೂ ತಲೆನೋವಾಗಿದೆ. ಈ ರೋಗ ಗುಣಪಡಿಸಲು ತೆಂಗಿನ ಮರಗಳಿಗೆ ತುಮಕೂರಿನ ಸಹಜ ಬೇಸಾಯ ವಿಜ್ಞಾನಿ ಡಾ|| ಮಂಜುನಾಥ ಹೇಳುವ ಆಯುರ್ವೇದ ಪದ್ಧತಿಯಲ್ಲಿ ಚಿಕಿತ್ಸೆಯು ಬಹಳ ಪರಿಣಾಮಕಾರಿ. ಇದೀಗ ರೈತರ ಗಮನವನ್ನು ಹೆಚ್ಚು ಸೆಳೆಯುತ್ತಿದೆ.


ಚಿಕಿತ್ಸೆಯ ಕ್ರಮ ಹೀಗಿದೆ ನೋಡಿ:
ಗಾಳಿ ಮತ್ತು ನೀರಿನ ಮೂಲಕ ಈ ಶಿಲೀಂಧ್ರ ರೋಗ ಹರಡುತ್ತದೆ. ಅದು ತಗುಲಿದ ಮರದ ರಸ ಸೋರುತ್ತಿರುವ ಭಾಗದ ತೊಗಟೆ ತೆಗೆಯಬೇಕು. ೧೦ ಗ್ರಾಂ ಇಂಗು, ಬೇವು ಮತ್ತು ಎಕ್ಕದ ಎಲೆ ತಲಾ ಒಂದು ಕೆ.ಜಿ, ಬೇವಿನ ಹಿಂಡಿ ೨೫ ಗ್ರಾಂ, ಸ್ವಲ್ಪ ಹೊಗೆಸೊಪ್ಪು, ಕರ್ಪೂರ, ಲಂಟಾನ ೨೫೦ ಗ್ರಾಂ ಮತ್ತು ೨೦ ಬೆಳ್ಳುಳ್ಳಿಯನ್ನು ಚೆನ್ನಾಗಿ
ಅರೆಯಬೇಕು. ಹಸುವಿನ ಸಗಣಿ, ಗಂಜಲ ಮಿಶ್ರಣ ಮಾಡಿಕೊಂಡು ರಸ ಸೋರುವ ಕಡೆ ಮೆತ್ತಬೇಕು. ಹೊಂಗೆ
ಎಣ್ಣೆಯಲ್ಲಿ ಅದ್ದಿದ ಕಾಟನ್ ಬಟ್ಟೆಯನ್ನು ಈ ಬಾಗಕ್ಕೆ ಸುತ್ತಬೇಕು. ಬಟ್ಟೆ ಒಣಗದಂತೆ ಮೂರು ದಿನಕ್ಕೆ ಒಮ್ಮೆ ಹೊಂಗೆ ಎಣ್ಣೆ ಸಿಂಪಡಿಸಬೇಕು. ಹೀಗೆ ಸರಾಸರಿ ಒಂದೂವರೆ ತಿಂಗಳು ಮಾಡುವುದರಿಂದ ರೋಗ ವಾಸಿ ಆಗುತ್ತದೆ’ ಎನ್ನುತ್ತಾರೆ ಡಾ|| ಮಂಜುನಾಥ.

ದೇಶದಲ್ಲಿ ಕೋವಿಡ್ ಚೇತರಿಕೆ ಪ್ರಮಾಣ ಶೇ 98.68

0

ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 7,219 ಹೊಸ ಕೊರೊನಾವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ ಸೋಂಕಿತರ ಸಂಖ್ಯೆ 4,44,49,726ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಶನಿವಾರಕ್ಕೆ ಕೊನೆಗೊಂಡಂತೆ ಕೇರಳದಲ್ಲಿ 8 ಸೇರಿ 24 ಗಂಟೆಗಳ ಅವಧಿಯಲ್ಲಿ 33 ಜನರು ಕೋವಿಡ್‌ನಿಂದ ಮೃತಪಟ್ಟಿದ್ದು, ಒಟ್ಟು 5,27,965 ಜನರು ಈವರೆಗೆ ಸೋಂಕಿನಿಂದ ಸಾವಿಗೀಡಾಗಿದ್ದಾರೆ.

ಒಟ್ಟು ಸೋಂಕು ಪ್ರಕರಣಗಳ ಪೈಕಿ ಶೇ 0.13ರಷ್ಟು ಸಕ್ರಿಯ ಪ್ರಕರಣಗಳಿದ್ದರೆ, ರಾಷ್ಟ್ರೀಯ ಚೇತರಿಕೆ ದರ ಶೇ 98.68ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ದಿನದ ಪಾಸಿಟಿವಿಟಿ ದರ ಶೇ 1.98ರಷ್ಟಿದೆ. ಮರಣ ಪ್ರಮಾಣ 1.19ರಷ್ಟಿದೆ. ಈವರೆಗೆ 4,38,65,016 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಸಚಿವಾಲಯದ ಪ್ರಕಾರ, ದೇಶದಾದ್ಯಂತ ಲಸಿಕೆ ಅಭಿಯಾನದ ಅಡಿಯಲ್ಲಿ ಈವರೆಗೆ 213.01 ಕೋಟಿ ಕೊರೋನಾ ವಿರುದ್ಧದ ಲಸಿಕಾ ಡೋಸ್‌ಗಳನ್ನು ವಿತರಿಸಲಾಗಿದೆ.

ವಿಶ್ವ ಆರ್ಥಿಕತೆ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಐದನೇ ಸ್ಥಾನ

0

ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶಗಳ ಪಟ್ಟಿಯಲ್ಲಿ ಬ್ರಿಟನ್ ಹಿಂದಿಕ್ಕಿರುವ ಭಾರತ 5ನೇ ಸ್ಥಾನಕ್ಕೇರಿದ್ದು, ಬ್ರಿಟನ್ ಆರನೇ ಸ್ಥಾನಕ್ಕೆ ಕುಸಿದಿದೆ.

ಬ್ರಿಟನ್ ನಲ್ಲಿನ ಅತೀ ಹೆಚ್ಚಿನ ಜೀವನ ವೆಚ್ಚದ ಆಘಾತ ಎದುರಿಸುತ್ತಿರುವ ಸರ್ಕಾರಕ್ಕೆ ಮತ್ತಷ್ಟು ಹೊಡೆತ ನೂತನ ವಿಶ್ವದ ಅತಿದೊಡ್ಡ ಆರ್ಥಿಕತೆಯ ಮತ್ತೊಂದು ಹೊಡೆತ ನೀಡಿದ್ದು, ಪಟ್ಟಿಯಲ್ಲಿ ಒಂದು ಸ್ಥಾನ ಕುಸಿದಿರುವ ಬ್ರಿಟನ್ 6ನೇ ಸ್ಥಾನಕ್ಕೆ ಕುಸಿದಿದ್ದು, ಭಾರತ ಒಂದು ಸ್ಥಾನ ಮೇಲೆರಿ 5ನೇ ಸ್ಥಾನಕ್ಕೇರಿದೆ.

2021 ರ ಅಂತಿಮ ತ್ರೈಮಾಸಿಕ ವರದಿಯಲ್ಲಿ ಭಾರತವು ಬ್ರಿಟನ್ ಹಿಂದಿಕ್ಕಿ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯ GDP ಅಂಕಿಅಂಶಗಳ ಪ್ರಕಾರ ಭಾರತವು ಮೊದಲ ತ್ರೈಮಾಸಿಕದಲ್ಲಿ ತನ್ನ ಮುನ್ನಡೆಯನ್ನು ವಿಸ್ತರಿಸಿದ್ದು, ಬ್ರಿಟನ್ ಆರ್ಥಿಕತೆಯನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೆ ಏರಿಕೆಯಾಗಿದೆ.

ಪಟ್ಟಿಯಲ್ಲಿ ದೊಡ್ಡಣ್ಣ ಅಮೆರಿಕ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. 2ನೇ ಸ್ಥಾನದಲ್ಲಿ ಚೀನಾ, ಜಪಾನ್ 3 ಮತ್ತು ಜರ್ಮನಿ 4ನೇ ಸ್ಥಾನದಲ್ಲಿದೆ ಎನ್ನಲಾಗಿದೆ. 5ನೇ ಸ್ಥಾನದಲ್ಲಿ ಭಾರತವಿದ್ದು, ಬ್ರಿಟನ್ 6ನೇ ಸ್ಥಾನಕ್ಕೆ ಕುಸಿದಿದೆ. ಇದೇ ಭಾರತ ಈಗ್ಗೆ ದಶಕದ ಹಿಂದೆ 11ನೇ ಸ್ಥಾನದಲ್ಲಿತ್ತು. ಬ್ರಿಟನ್ 5ನೇ ಸ್ಥಾನದಲ್ಲಿತ್ತು ವರದಿ ಉಲ್ಲೇಖಿಸಿದೆ.