Sunday, March 22, 2026
Sunday, March 22, 2026
Home Blog Page 1449

ದೇಶದಲ್ಲಿ ನಿನ್ನೆಗೆ 6.809 ,ಕೋವಿಡ್ ಸೋಂಕು ಪ್ರಕರಣ ಪತ್ತೆ

0

ಭಾರತದಲ್ಲಿ ಕಳೆದ 24ಗಂಟೆಯಲ್ಲಿ 6,809 ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದೆ. 16 ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿರುವ ಅಂಕಿ ಅಂಶದಿಂದ ಮಾಹಿತಿ ತಿಳಿದು ಬಂದಿದೆ.

ದೇಶಾದ್ಯಂತ ಕೊರೋನಾ ಸೋಂಕಿನಿಂದ ಗುಣಮುಖರಾದವರ ಒಟ್ಟು ಸಂಖ್ಯೆ 4,38,80,464 ಕೋಟಿಗೆ ಏರಿಕೆಯಾಗಿದೆ. ಭಾರತದಲ್ಲಿನ ಕೋವಿಡ್ ಸೋಂಕಿನ ಒಟ್ಟು ಚೇತರಿಕೆ ಪ್ರಮಾಣ ಶೇ.98.69ರಷ್ಟಿದೆ.

ಭಾರತದಲ್ಲಿನ ಸಕ್ರಿಯ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ 53,974ಕ್ಕೆ ಇಳಿಕೆಯಾಗಿದೆ ಎಂದು ಅಂಕಿಅಂಶ ವಿವರಿಸಿದೆ. ಭಾನುವಾರ ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ 55,114ರಷ್ಟಿತ್ತು.

ಒಂದೇ ದಿನದಲ್ಲಿ ಕೋವಿಡ್ 19 ಸೋಂಕಿನಿಂದ 16 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ದೇಶಾದ್ಯಂತ ಕೊರೋನಾ ಸೋಂಕಿನಿಂದ ಸಾವನ್ನಪ್ಪಿರುವವರ ಒಟ್ಟು ಸಂಖ್ಯೆ 5,28,007ಕ್ಕೆ ತಲುಪಿದೆ.

ಐಸಿಎಂಆರ್ ಅಂಕಿಅಂಶದ ಪ್ರಕಾರ, ದೇಶಾದ್ಯಂತ ಸೆಪ್ಟೆಂಬರ್ 04ರವರೆಗೆ 88,73,79,274 ಕೊರೋನಾ ಸ್ಯಾಂಪಲ್ಸ್ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದೆ.

2020ರ ಮಾರ್ಚ್ ನಲ್ಲಿ ದೇಶದಲ್ಲಿ ಕೋವಿಡ್ ಸೋಂಕಿನಿಂದ ಮೊದಲ ಸಾವು ಸಂಭವಿಸಿದ ಪ್ರಕರಣ ವರದಿಯಾಗಿತ್ತು.

ಶಿಕ್ಷಕರ ದಿನದಂದು ಗುರುಶಿಷ್ಯರು ಟ್ರೈಲರ್ ಬಿಡುಗಡೆ

0

ಸೆಪ್ಟೆಂಬರ್ 23ರಂದು ರಾಜ್ಯಾದ್ಯಂತ ತೆರೆ ಮೇಲೆ ಬರಲಿರುವ ಗುರು ಶಿಷ್ಯರು ಸಿನಿಮಾ ಟ್ರೈಲರ್ ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ.

ಇಂದು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ರಿಲೀಸ್ ಆಗಿರುವ ಈ ಟ್ರೈಲರ್ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದು ಕೊಂಡಿದೆ.

ಸ್ಪೋರ್ಟ್ಸ್ ಡ್ರಾಮಾ ಆಧಾರಿತ ಈ ಚಿತ್ರದಲ್ಲಿ ಶರಣ್ ಖೋ ಖೋ ಕೋಚ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶರಣ್ ಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ಅವರು ಅಭಿನಯಿಸಿದ್ದಾರೆ.

ಜಡೇಶ .ಕೆ ಹಂಪಿ ಅವರು ನಿರ್ದೇಶಿಸಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ನೀಡಿದ್ದಾರೆ.

ಲಡ್ಡು ಸಿನಿಮಾಸ್ ಬ್ಯಾನರ್ ನಡಿ ಶರಣ್ ಹಾಗೂ ತರುಣ್ ಸುಧೀರ್ ಗುರು ಶಿಷ್ಯರು ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಈ ಬಾರಿ ಹೊಸ ಮೆರುಗಿನಲ್ಲಿ ಮೈಸೂರು ದಸರಾ

0

ಈ ಬಾರಿಯ ಮೈಸೂರು ದಸರಾ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ವಿವಿಧ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೊರೋನಾ ಕಾರಣದಿಂದಾಗಿ ಕಳೆದ 2 ವರ್ಷಗಳಿಂದ ಸಾಧಾರಣ ದಸರಾ ಉತ್ಸವ ಆಚರಿಸಲಾಗಿತ್ತು. ಆದ್ದರಿಂದ ಈ ಬಾರಿ ಅದ್ಧೂರಿ ಉತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಮಾಹಿತಿ ನೀಡಿದ್ದಾರೆ.

ಅದ್ಧೂರಿ ದಸರಾ ಉತ್ಸವ ಆಚರಣೆ ಕುರಿತಂತೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಉತ್ಸವದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಮೈಸೂರಿನ ಜಿ.ಪಂ. ಆವರಣದಲ್ಲಿರುವ ಅಬ್ದುಲ್ ನಜೀರ್‍ಸಾಬ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನವರಾತ್ರಿಯ ದಿನಗಳಲ್ಲಿ ಆಯೋಜಿಸಲಾಗುವ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ವಹಿಸಲು ಆಸಕ್ತಿ ಇರುವ ಸಂಘ-ಸಂಸ್ಥೆಗಳು, ಕೈಗಾರಿಕೆಗಳು, ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಬ್ಯಾಂಕ್‍ಗಳು ಮತ್ತು ಪ್ರಾಯೋಜಕತ್ವ ವಹಿಸಲು ಆಸಕ್ತಿ ಇರುವ ಸಂಸ್ಥೆಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಕೊರೋನಾ ನಿಯಂತ್ರಣದಲ್ಲಿರುವುದರಿಂದ ಎಲ್ಲಾ ಚಟುವಟಿಕೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ, ಈ ಬಾರಿಯ ದಸರಾದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದ್ದಾರೆ.

ಎಸ್‍ಪಿ ಆರ್.ಚೇತನ್ ಮಾತನಾಡಿ, ಈ ಬಾರಿಯ ದಸರಾದಲ್ಲಿ ನಡೆಯುವ ಯುವ ದಸರಾ ಹಾಗೂ ಯುವ ಸಂಭ್ರಮದ ಕಾರ್ಯಕ್ರಮದಲ್ಲಿ ಬಾಲಿವುಡ್ ನೈಟ್ ಹಾಗೂ ಸ್ಯಾಂಡಲ್‍ವುಡ್ ನೈಟ್ ಎಂಬ ಕಾರ್ಯಕ್ರಮ ನಡೆಸಲಾಗುತ್ತಿದೆ. ಬಾಲಿವುಡ್ ಮತ್ತು ಸ್ಯಾಂಡಲ್‍ವುಡ್‍ನ ಹಲವಾರು ಸಂಗೀತಗಾರರು ಹಾಗೂ ನಟರನ್ನು ಕರೆಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ ಮಾತನಾಡಿ, ಈ ಬಾರಿಯ ದಸರಾದಲ್ಲಿ ಪ್ರಾಯೋಜಕತ್ವ ವಹಿಸುವ ಕಂಪೆನಿಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ದಸರಾ ಉತ್ಸವದ ಆಚರಣೆಗಾಗಿ 16 ಉಪಸಮಿತಿಗಳನ್ನು ರಚಿಸಲಾಗಿದೆ. ಈ ಉಪಸಮಿತಿಗಳ ವ್ಯಾಪ್ತಿಯಲ್ಲಿ ಪ್ರತಿದಿನ ಕಾರ್ಯಕ್ರಮಗಳು ಜರುಗಲಿವೆ ಎಂದು ಅವರು ವಿವರಣೆ ನೀಡಿದ್ದಾರೆ.

ಸಭೆಯಲ್ಲಿ ಜಿಪಂ ಸಿಇಒ ಪೂರ್ಣಿಮಾ, ಡಿಸಿಪಿ ಗೀತಾ ಪ್ರಸನ್ನ ಮತ್ತಿತರ ಅಕಾರಿಗಳು, ವಿವಿಧ ಕಂಪೆನಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಮುರುಘಾ ಶ್ರೀಗಳ ಮೌಖಿಕ ವಿಚಾರಣೆ ಮುಂದುವರಿಕೆ

0

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಬಂಧಿತರಾಗಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿಚಾರಣೆಯನ್ನು ತನಿಖಾಧಿಕಾರಿಗಳು ಭಾನುವಾರ ಮುಂದುವರಿಸಿದ್ದಾರೆ.

ಪೊಲೀಸ್ ವಶಕ್ಕೆ ಪಡೆದಿರುವ ತನಿಖಾ ತಂಡ ಆರೋಪಿಯನ್ನು ಡಿವೈಎಸ್ಪಿ ಕಚೇರಿಯಲ್ಲಿ ಉಳಿಸಿದೆ.

ಶನಿವಾರ ರಾತ್ರಿ ಊಟ ಸೇವಿಸಿದ ಶರಣರು ವಿಶ್ರಾಂತಿ ಪಡೆದರು. ಬೆಳಿಗ್ಗೆ ಎದ್ದು ನಿತ್ಯಕರ್ಮ ಮುಗಿಸಿದ ಅವರಿಗೆ ತಿಂಡಿ ನೀಡಲಾಗಿದೆ. ಬೆಳಿಗ್ಗೆ 10 ಗಂಟೆಯಿಂದ ವಿಚಾರಣೆ ಮುಂದುವರಿಸಲಾಗಿದೆ. ಬೆಳಿಗ್ಗೆ 11.20ಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಡಿವೈಎಸ್ಪಿ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು.

ಲೈಂಗಿಕ ಕಿರುಕುಳ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಮೊದಲ ಆರೋಪಿ ಶಿವಮೂರ್ತಿ ಮುರುಘಾ ಶರಣರನ್ನು ಸೆ.1ರಂದು ಪೊಲೀಸರು ಬಂಧಿಸಿದ್ದರು. ನ್ಯಾಯಾಂಗ ಬಂಧನದಲ್ಲಿರುವ ಶರಣರನ್ನು ಸೆ.2 ರಂದು ಪೊಲೀಸರು ವಶಕ್ಕೆ ಪಡೆದಿದ್ದರು.

ಪುಟಾಣಿಗಳ ಗಣೇಶೋತ್ಸವ

0

ದೇಶದಾದ್ಯಂತ ಸಂಭ್ರಮ,ಸಡಗರದಿಂದ ಗಣೇಶೋತ್ಸವವನ್ನು ಆಚರಿಸಲಾಗಿದೆ.

2 ವರ್ಷಗಳ ಹಿಂದೆ ಕೊರೋ ನಾ ಕಾಣಿಸಿಕೊಂಡ ನಂತರ ಸಾರ್ವಜನಿಕ ಗಣೇಶೋತ್ಸವಕ್ಕೆ ಕಡಿವಾಣ ಹಾಕಿದ್ದ ಸರ್ಕಾರ ಈ ವರ್ಷ ಎಲ್ಲೆಡೆ ಗಣೇಶ ಹಬ್ಬವನ್ನು ಆಚರಿಸಲು ಅನುಮತಿ ನೀಡಿದೆ.

ಆದ್ದರಿಂದ, ಪ್ರತಿಯೊಂದು ಊರಿನಲ್ಲೂ ಸಾರ್ವಜನಿಕ ಗಣೇಶೋತ್ಸವ ಆಚರಿಸಲಾಗುತ್ತಿದೆ. ಅನೇಕ ಕಡೆ ಈಗಾಗಲೇ ಗಣಪತಿ ವಿಸರ್ಜನೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಅದ್ದೂರಿ ಮೆರವಣಿಗೆ, ಡಾನ್ಸ್‌ ಸೇರಿದಂತೆ ಕಲಾತಂಡಗಳು ವಿಸರ್ಜನಾ ಮೆರವಣಿಗೆಗೆ ಕಳೆ ನೀಡುತ್ತವೆ.ಅದೇ ರೀತಿ ಇಲ್ಲೊಂದು ವಿಡಿಯೋ ಸಾಮಾಜಿಕ ತಾಣಗಳಲ್ಲಿ
ಹೆಚ್ಚು ವೈರಲ್ ಆಗಿದೆ. ಆ ವಿಡಿಯೋ ಯಾವುದು ಅಂತ ಯೋಚಿಸುತ್ತಿದ್ದೀರಾ…!

ಈ ವಿಡಿಯೋ ಶ್ರೀಮಂತ ಮನಸ್ಸಿನವರ ಅದ್ದೂರಿ ಗಣಪತಿ ವಿಸರ್ಜನಾ ಮೆರವಣಿಗೆ ಎಂದು ಬಣ್ಣಿಸಬಹುದು.

ಮನಸ್ಸಿಗೆ ಖುಷಿ ನೀಡುವ ಈ ಸುಂದರ ವಿಡಿಯೋದಲ್ಲಿ ಪುಟ್ಟ ಮಕ್ಕಳು ಗಾಡಿಯೊಂದರಲ್ಲಿ ಗಣಪತಿ ಮೂರ್ತಿಯನ್ನು ತೆಗೆದುಕೊಂಡು ಹೋಗುತ್ತಿದ್ದರೆ ಮತ್ತಿಬ್ಬರು ಕೋಲಿನಿಂದ ಡಬ್ಬ ಬಡಿಯುತ್ತಾ ಮೆರವಣಿಗೆ ಹಿಂಬಾಲಿಸಿದ್ದಾರೆ. ಜೊತೆಗೆ ಮೂರ್ನಾಲ್ಕು ಪುಟ್ಟ ಹುಡುಗ – ಹುಡುಗಿಯರು ಮೆರವಣಿಗೆ ಜೊತೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ.

15 ನೇ ಹಣಕಾಸು ಯೋಜನೆಯಡಿ ಕೇಂದ್ರದಿಂದ ರಾಜ್ಯಕ್ಕೆ ₹ 1046.78 ಕೋಟಿ ಬಿಡುಗಡೆ

0

ಕರ್ನಾಟಕ ಸೇರಿ ದೇಶದ ಎಲ್ಲಾ ರಾಜ್ಯಗಳಿಗೂ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕರ್ನಾಟಕ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 1,046.78 ಕೋಟಿ ಹಣ ಬಿಡುಗಡೆ ಮಾಡಿದೆ.

ಪ್ರಸಕ್ತ ಹಣಕಾಸು ವರ್ಷದ 2022-23ರ 15ನೇ ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ, ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಿಗೆ ಹಳ್ಳಿಗಳಲ್ಲಿ ಕುಡಿಯುವ ನೀರು ಸರಬರಾಜು, ನೈರ್ಮಲ್ಯ ಹಾಗೂ ನೈರ್ಮಲ್ಯದ ಸುಧಾರಣೆಗೆ ಹಣವನ್ನು ಬಿಡುಗಡೆ ಮಾಡಿದೆ.

ಅದರಂತೆ, ಕೇಂದ್ರ ಹಣಕಾಸು ಸಚಿವಾಲಯವು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಅನುದಾನದ ಅಡಿಯಲ್ಲಿ ಹಣವನ್ನು ಬಿಡುಗಡೆ ಮಾಡುವ ಆದೇಶವನ್ನ ಹೊರಡಿಸಿದೆ. ಎಲ್ಲಾ ರಾಜ್ಯಗಳಿಗೆ ಒಟ್ಟು 15,705.65 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ ಬಿಹಾರಕ್ಕೆ 1,921 ಕೋಟಿ, ಛತ್ತೀಸ್‌ಗಢಕ್ಕೆ 557 ಕೋಟಿ, ಗುಜರಾತ್‌ಗೆ 1,181 ಕೋಟಿ ಮತ್ತು ಹಿಮಾಚಲ ಪ್ರದೇಶಕ್ಕೆ 1,181 ಕೋಟಿಗಳನ್ನ ಬಿಡುಗಡೆ ಮಾಡಲಾಗಿದೆ. 224.30 ಕೋಟಿ, ಜಾರ್ಖಂಡ್ 249.80 ಕೋಟಿ, ಕರ್ನಾಟಕ 1,046.78 ಕೋಟಿ, ಕೇರಳ 623 ಕೋಟಿ, ಮಧ್ಯಪ್ರದೇಶ 1,472 ಕೋಟಿ, ಮಹಾರಾಷ್ಟ್ರ 1,092.92 ಕೋಟಿ, ಮೇಘಾಲಯ 40.50 ಕೋಟಿ, ನಾಗಾಲಾಡ್ 18.40 ಕೋಟಿ, ಒಡಿಶಾ 864 ಕೋಟಿ, ತಮಿಳುನಾಡು 1,380.50 ಕೋಟಿ, ತೆಲಂಗಾಣಕ್ಕೆ 273 ಕೋಟಿ, ತ್ರಿಪುರಾಕ್ಕೆ 73.50 ಕೋಟಿ ಮತ್ತು ಉತ್ತರ ಪ್ರದೇಶಕ್ಕೆ 3,733 ಕೋಟಿಗಳನ್ನ ನರೇಂದ್ರ ಮೋದಿ ಸರ್ಕಾರ ಬಿಡುಗಡೆ ಮಾಡಿದೆ.

ನದಿ ವಿವಾದ ಪರಸ್ಪರ ಬಗೆಹರಿಸಿಕೊಳ್ಳಿ- ಅಮಿತ್ ಶಾ

0

ದಕ್ಷಿಣ ಭಾರತದಲ್ಲಿ ಹೆಚ್ಚಾಗಿರುವ ಅಂತಾರಾಜ್ಯ ನದಿ ವಿವಾದಗಳನ್ನು ಪರಸ್ಪರ ಮಾತುಕತೆ ಮುಖಾಂತರ ಬಗೆಹರಿಸಿಕೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ದಕ್ಷಿಣ ರಾಜ್ಯಗಳಿಗೆ ಸಲಹೆ ನೀಡಿದ್ದಾರೆ.

ಕೇರಳ ರಾಜಧಾನಿ ತಿರುವನಂತಪುರದಲ್ಲಿ ನಡೆದ ದಕ್ಷಿಣ ಭಾರತ ರಾಜ್ಯಗಳ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಜಲವಿವಾದ ಸಂಬಂಧ ಜಂಟಿಯಾಗಿ ಒಂದು ಪರಿಹಾರ ಸೂತ್ರ ಕಂಡುಕೊಳ್ಳಬೇಕು ಎಂದು ಅಮಿತ್ ಶಾ ಅವರು ತಿಳಿಸಿದ್ದಾರೆ.

ಈ ಸಭೆಯಲ್ಲಿ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ತಮಿಳುನಾಡಿನ ಎಂ.ಕೆ.ಸ್ಟಾಲಿನ್‌ ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್‌ ಗವರ್ನರ್‌ಗಳು ಉಪಸ್ಥಿತರಿದ್ದರು.

ಸದ್ಯ ಕಾವೇರಿ ವಿಚಾರದಲ್ಲಿ ಕರ್ನಾಟಕ-ತಮಿಳುನಾಡು, ತೆಲಂಗಾಣ ಹಾಗೂ ಆಂಧ್ರ ಪ್ರದೇಶ ನಡುವೆ ಕೃಷ್ಣಾ ನದಿ ನೀರಿನ ಸಮಸ್ಯೆ ಇದೆ. ಈ ಸಭೆ ಕೇಂದ್ರಹಾಗೂ ರಾಜ್ಯಗಳ ನಡುವಿನ ತಿಕ್ಕಾಟ ಮತ್ತು ರಾಜ್ಯಗಳ ನಡುವಿನ ಸಮಸ್ಯೆ ಬಗೆಹರಿಸಿಕೊಳ್ಳಲು ವೇದಿಕೆಯಾಗಿದೆ ಎಂದು ಶಾ ತಿಳಿಸಿದ್ದಾರೆ.

ಮಳೆ ಮುನ್ಸೂಚನೆ ಶಿವಮೊಗ್ಗ ಜಿಲ್ಲೆ ಯಲ್ಲೋ ಅಲರ್ಟ್

0

ಬೆಂಗಳೂರು, ಕರಾವಳಿ, ಮಲೆನಾಡು, ಕೊಡಗು ಜಿಲ್ಲೆಗಳಲ್ಲಿ ಇಂದಿನಿಂದ ಸೆ. 9ರವರೆಗೆ ಮಳೆಯಾಗಲಿದೆ.

ಇಂದು ಕೊಡಗು, ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗೆ ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದೆ. ಬೆಂಗಳೂರಿನಲ್ಲಿ ಮಳೆ ಸ್ವಲ್ಪ ಕಡಿಮೆಯಾಗಿದ್ದರೂ ಇನ್ನೂ ಒಂದು ವಾರ ಹಗುರ ಮಳೆಯಾಗುವ ನಿರೀಕ್ಷೆ ಇದೆ.

ಕರಾವಳಿ, ಮಲೆನಾಡಿನಲ್ಲೂ ಸೆ. 9ರವರೆಗೆ ಮಳೆಯಾಗುವ ಸಾಧ್ಯತೆಯಿದೆ. ಈಗಾಗಲೇ ಕಳೆದೊಂದು ತಿಂಗಳಿನಿಂದ ವರುಣನ ಆರ್ಭಟ ಹೆಚ್ಚಾಗಿರುವುದರಿಂದ ಕಂಗೆಟ್ಟಿರುವ ಜನರಿಗೆ ಇದರಿಂದ ಇನ್ನಷ್ಟು ಆತಂಕ ಎದುರಾಗಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ವೇಗವಾಗಿ ಗಾಳಿ ಬೀಸುವ ಸಾಧ್ಯತೆಯಿದೆ. ಆದ್ದರಿಂದ, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುನ್ಸೂಚನೆ ನೀಡಿದೆ.

ಬೆಂಗಳೂರು, ಕರಾವಳಿ, ಮಲೆನಾಡು, ಕೊಡಗು ಜಿಲ್ಲೆಗಳಲ್ಲಿ ಇಂದಿನಿಂದ ಸೆ. 9ರವರೆಗೆ ಮಳೆಯಾಗಲಿದೆ.

ಈಗಾಗಲೇ ಭಾರೀ ಮಳೆಯಿಂದ ತತ್ತರಿಸಿರುವ ರಾಜ್ಯದಲ್ಲಿ ಮುಂದಿನ 6 ದಿನಗಳ ಕಾಲ ಧಾರಾಕಾರ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಮಾಹಿತಿ ತಿಳಿಸಿದೆ.

ಕೊಡಗು, ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗೆ ಹಳದಿ ಅಲರ್ಟ್‌ ಘೋಷಿಸಲಾಗಿದೆ. ಇಂದಿನಿಂದ 4 ದಿನ ಬೀದರ್‌, ಕಲಬುರಗಿ, ವಿಜಯಪುರ, ಗದಗ, ಧಾರವಾಡ, ಹಾವೇರಿ, ದಾವಣಗೆರೆ, ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ, ಕೋಲಾರ, ಬೆಂಗಳೂರು ನಗರ, ರಾಮನಗರ ಜಿಲ್ಲೆಗೆ ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಭಾರತವು ವ್ಯಾಪಕ ಸಾಮಾಜಿಕ ಪರಿವರ್ತನೆ ಕಂಡಿದೆ- ಜೈಶಂಕರ್

0

ಜಾಗತಿಕ ಆರ್ಥಿಕತೆಯಲ್ಲಿ ಭಾರತ ದೇಶವು ಬ್ರಿಟನ್ ದೇಶವನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೇರಿದ ಬೆನ್ನಲ್ಲೇ, ದೇಶವು ವ್ಯಾಪಕ ಸಾಮಾಜಿಕ ಪರಿವರ್ತನೆ ಕಂಡಿದ್ದು, ಹೆಚ್ಚಿನ ಆರ್ಥಿಕ ಬೆಳವಣಿಗೆಗೆ ಸಿದ್ಧವಾಗಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ತಿಳಿಸಿದ್ದಾರೆ .

ಗುಜರಾತ್‌ನ ಐಐಎಂ ಅಹಮದಾಬಾದ್‌ನಲ್ಲಿ ದೇಶದ ನಿಲುವು ಮತ್ತು ಭಾರತೀಯ ವಿದೇಶಾಂಗ ನೀತಿಯ ಕುರಿತು ವಿವಿಧ ವಿಷಯಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ದೇಶದ ಅಗಾಧ ಸಾಮಾಜಿಕ ಪರಿವರ್ತನೆಯನ್ನು ಶ್ಲಾಘಿಸಿದೆ. ಭಾರತವು ಶೇ. 7 ರಿಂದ 8 ರಷ್ಟು ಆರ್ಥಿಕ ಚೇತರಿಕೆಗೆ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಅಂತೆಯೇ ಕೇಂದ್ರ ಸರ್ಕಾರವು 800 ಮಿಲಿಯನ್ ಜನರಿಗೆ ಆಹಾರವನ್ನು ವಿತರಿಸಿದೆ ಎಂದು ಅವರು ಹೇಳಿದರು.

ಭಾರತವು ವಿಶಾಲವಾದ ಸಾಮಾಜಿಕ ಪರಿವರ್ತನೆಯನ್ನು ಕಂಡಿದೆ. ನಾವು ಇಂದು ಶೇಕಡಾ 7ರಿಂದ 8 ರ ಆರ್ಥಿಕ ಚೇತರಿಕೆಗೆ ಸಿದ್ಧರಾಗಿದ್ದೇವೆ. ಜಗತ್ತು ನಮ್ಮ ಆರ್ಥಿಕತೆಯನ್ನು ಬಹಳ ಗೌರವದಿಂದ ನೋಡುತ್ತಿದೆ. ಕೊರೋನಾ ಲಾಕ್‌ಡೌನ್‌ನಿಂದ ಇಂದಿನವರೆಗೆ 800 ಮಿಲಿಯನ್ ಜನರು ಆಹಾರವನ್ನು ಸ್ವೀಕರಿಸಿದ್ದಾರೆ. ಸರ್ಕಾರವು ರೋಗಕ್ಕಿಂತ ಹೆಚ್ಚಿನ ಜನರು ಹಸಿವಿನಿಂದ ಸಾಯುವುದನ್ನು ತಪ್ಪಿಸಿದೆ. ಸ್ವಚ್ಛ ಭಾರತ್ ಮತ್ತು ಶೌಚಾಲಯ ನಿರ್ಮಾಣವು ಪ್ರಪಂಚದ ಗಮನವನ್ನು ಸೆಳೆದಿದೆ. ಅದು ನಮ್ಮ ಚಿತ್ರಣಕ್ಕೆ ಕಳಂಕವಾಗಿತ್ತು. ನಾವು ನೈರ್ಮಲ್ಯದಲ್ಲಿ ಗೋಚರ ಸುಧಾರಣೆಯೊಂದಿಗೆ 100 ಮಿಲಿಯನ್ ಶೌಚಾಲಯಗಳನ್ನು ನಿರ್ಮಿಸಿದ್ದೇವೆ ಎಂಬ ಅಂಶವು ವಾಸ್ತವವಾಗಿ ವಿದೇಶದಲ್ಲಿ ದೊಡ್ಡ ಪರಿಣಾಮ ಬೀರಿದೆ ಎಂದರು.

ಇದೇ ವೇಳೆ ಕೊರೋನಾ ಲಸಿಕೆಗಳ ಸ್ಥಳೀಯ ಉತ್ಪಾದನೆಯ ಬಗ್ಗೆಯೂ ಅವರು ಒತ್ತಿ ಹೇಳಿದ ಅವರು, ನಾವು ನಮ್ಮದೇ ಆದ ಲಸಿಕೆಯನ್ನು ತಯಾರಿಸಿದ್ದೇವೆ ಎಂಬ ಅಂಶವು ನಿಜವಾಗಿಯೂ ಪ್ರತಿಧ್ವನಿಸಿದೆ ಹಾಗೂ ಪ್ರಪಂಚದಾದ್ಯಂತ ನಮಗೆ ಗೌರವವನ್ನು ಗಳಿಸಿದೆ. ನಮ್ಮ ಬ್ರ್ಯಾಂಡ್ ಅನ್ನು ನವೀಕರಿಸಲು ಭಾರತದಲ್ಲಿ ತಯಾರಿಸಲ್ಪಟ್ಟಿದೆ. ಕೊರೋನಾ ಸಾಂಕ್ರಾಮಿಕ, ಉಕ್ರೇನ್ ಸಂಘರ್ಷ ಮತ್ತು ಹವಾಮಾನ ವೈಪರೀತ್ಯಗಳ ಮೂರು ಆಘಾತಗಳು ಏಷ್ಯಾದ ಆರ್ಥಿಕತೆಯ ವಿಕಾಸದ ಮೇಲೆ ಪರಿಣಾಮ ಬೀರುತ್ತಿವೆ ಎಂದು ಜೈಶಂಕರ್ ಹೇಳಿದರು.

ಹೆಚ್ಚಿನ ಬೆಳವಣಿಗೆಯ ಎಂಜಿನ್‌ಗಳು ಮತ್ತು ಸ್ಥಿತಿಸ್ಥಾಪಕ ಮತ್ತು ವಿಶ್ವಾಸಾರ್ಹ ಪೂರೈಕೆ ಸರಪಳಿಗಳಿಗೆ ಪ್ರಬಲವಾದ ಒತ್ತು ನೀಡುತ್ತದೆ. ಡಿಜಿಟಲ್ ಜಗತ್ತಿನಲ್ಲಿ ಸಮಾನಾಂತರ ಚರ್ಚೆ ನಡೆಯುತ್ತಿದೆ, ಅದು ನಂಬಿಕೆ ಮತ್ತು ಪಾರದರ್ಶಕತೆಯನ್ನು ಕೇಂದ್ರೀಕರಿಸುತ್ತದೆ. ಇದು ಹೇಗೆ ಕಾರ್ಯತಂತ್ರದ ಫಲಿತಾಂಶಗಳಾಗಿ ಅನುವಾದಿಸುತ್ತದೆ ಎಂಬುದನ್ನು ಊಹಿಸಲು ಈಗಲೇ ಸಾಧ್ಯವಿಲ್ಲ. ಏರುತ್ತಿರುವ ಏಷ್ಯಾ ವಿಶ್ವ ಕ್ರಮಕ್ಕೆ ನೀಡಬಹುದಾದ ಕೊಡುಗೆಯನ್ನು ಜೈಶಂಕರ್ ಒತ್ತಿ ಹೇಳಿದರು.

ತಾತ್ಕಾಲಿಕ ರದ್ದುಪಡಿಸಿರುವ ರಾಜ್ಯದ ರೈಲುಗಳ ಮಾಹಿತಿ

0

ಬೆಂಗಳೂರು, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ ಸೇರಿದಂತೆ ವಿವಿಧ ಮಾರ್ಗಗಳ 28 ಪ್ಯಾಸೆಂಜರ್ ರೈಲುಗಳನ್ನು ಇಂದು ಮತ್ತು ನಾಳೆ ರದ್ದು ಮಾಡಲಾಗಿದೆ.

ತಾಂತ್ರಿಕ ನಿರ್ವಹಣಾ ಕಾಮಗಾರರಿ ಹಿನ್ನೆಲೆಯಲ್ಲಿ ವಿವಿಧ ಮಾರ್ಗಗಳ 28 ಪ್ಯಾಸೆಂಜರ್ ರೈಲುಗಳನ್ನು ರದ್ದು ಮಾಡಲಾಗಿದೆ. ಬೆಂಗಳೂರು ರೈಲ್ವೆ ವಿಭಾಗದಲ್ಲಿ ಕೆಎಸ್ ಆರ್ ಬೆಂಗಳೂರು ನಿಲ್ದಾಣದಿಂದ ಧರ್ಮಾವರಂ, ಜೋಲಾರಪೇಟೆ, ತುಮಕೂರು, ಮಾರಿಕುಪ್ಪಂ, ರಾಮನಗರ, ಕುಪ್ಪಂ, ಬಂಗಾರಪೇಟೆ, ಸತ್ಯಸಾಯಿ ಪ್ರಶಾಂತಿ ನಿಲಯ, ವೈಪ್ ಫೀಲ್ಡ್ ಗೆ ಹಾಗೂ ಮಾರಿಕುಪ್ಪಂನಿಂದ ಸರ್. ವಿಶ್ವೇಶ್ವರಯ್ಯ ಟರ್ಮಿನಲ್, ಬೈಯ್ಯಪ್ಪನಹಳ್ಳಿ ನಡುವೆ ಸಂಚರಿಸುವ ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ಸೆ. 4 ರಂದು ರದ್ದು ಮಾಡಲಾಗಿದೆ.

ಹುಬ್ಬಳ್ಳಿ ರೈಲ್ವೆ ವಿಭಾಗದಲ್ಲಿ ಕುಲೆಂ ವಾಸ್ಡೋಡ ಗಾಮಾ, ಹುಬ್ಬಳ್ಳಿಯಿಂದ ಕಾರಟಗಿ, ಚಿತ್ರದುರ್ಗ, ವಿಜಯಪುರ, ಸೋಲಾಪುರ, ಹರಿಹರ-ಹೊಸಪೇಟೆ, ಅರಸೀಕೆರೆ, ಹುಬ್ಬಳ್ಳಿ, ಮತ್ತು ಮೈಸೂರು ರೈಲ್ವೆ ವಿಭಾಗದಲ್ಲಿ ಚಿಕ್ಕಮಗಳೂರು-ಶಿವಮೊಗ್ಗ ಟೌನ್, ತಾಳಗುಪ್ಪ-ಶಿವಮೊಗ್ಗ ಟೌನ್, ತುಮಕೂರು-ಶಿವಮೊಗ್ಗ ಟೌನ್, ಶಿವಮೊಗ್ಗ ಟೌನ್-ಮೈಸೂರು, ಮೈಸೂರು-ಅರಸೀಕೆರೆ ಪ್ಯಾಸೆಂಜರ್ ಇಂದು ರದ್ದಾಗಿವೆ.