Shivamogga Karnataka Sangha ಸಾಹಿತ್ಯ ಜೀವನ ದೃಷ್ಟಿ ರೂಪಿಸಿಕೊಳ್ಳಬೇಕಾದರೆ, ಸಾಹಿತಿಯು ಹೊಂದಿರುವ ಸಾಹಿತ್ಯಕ ದೃಷ್ಟಿ ಮುಖ್ಯವಾಗಿರುತ್ತದೆ. ಸಾಹಿತ್ಯಕ ದೃಷ್ಟಿ ಬೇರೆಯಾಗಿರುತ್ತದೆ. ಸಹಜವಾದ ಮನುಷ್ಯನ ದೃಷ್ಟಿಯ ಬೇರೆಯಾಗಿರುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಕೋಡಂಗಲ್ಲಿನ ಖ್ಯಾತ ಸಾಹಿತಿಗಳಾದ ಶ್ರೀ. ಅರವಿಂದ ಚೊಕ್ಕಾಡಿಯವರು ಹೇಳಿದರು.
ಶಿವಮೊಗ್ಗದ ಕರ್ನಾಟಕ ಸಂಘ ಭವನದಲ್ಲಿ ಆಯೋಜಿಸಿದ ತಿಂಗಳ ಅತಿಥಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಸಾಹಿತ್ಯ ಮತ್ತು ಜೀವನ ದೃಷ್ಟಿ ವಿಷಯದ ಕುರಿತು ಮಾತನಾಡಿದರು. ಜೀವನ ವಿಧಾನ ಎಂಬುದು ಜೀವನ ದೃಷ್ಟಿಯನ್ನು ಅವಲಂಬಿಸಿರುತ್ತದೆ ಎಂದರು.
Shivamogga Karnataka Sangha ಈ ಸಂದರ್ಭದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಎಂ ಎನ್ ಸುಂದರ್ ರಾಜ್, ಕರ್ನಾಟಕ ಸಂಘದ ಕಾರ್ಯದರ್ಶಿಗಳಾದ ಪ್ರೊ. ಎಂ ಆಶಾಲತಾ, ಸಾಹಿತ್ಯಾಸ್ತಕರು ಉಪಸ್ಥಿತರಿದ್ದರು.
Siddaramaiah as Chief Minister for the Second Time ಚಿಕ್ಕಮಗಳೂರು, ರಾಜ್ಯದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ನವರು ಹಾಗೂ ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ರವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮವನ್ನು ಕಾಂಗ್ರೆಸ್ ಕಾರ್ಯಕರ್ತರು ಕೋಟೆ ಸಮೀಪದ ಕೋಟೆ ಸೋಮಣ್ಣನವರ ಮನೆಯಲ್ಲಿ ಇಂದು ವೀಕ್ಷಿಸಿದರು.
Siddaramaiah as Chief Minister for the Second Time ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ಜಿಲ್ಲಾ ಕಾರ್ಯದರ್ಶಿ ತನ್ವೀರ್ ಮಹಮ್ಮದ್, ಸಿಪಿಐ ಜಿಲ್ಲಾ ಮಂಡಳಿ ಸದಸ್ಯ ವಸಂತ್ಕುಮಾರ್, ಮಹರ್ಷಿ ವಾಲ್ಮೀಕಿ ಯುವಕರ ಸಂಘದ ಜಿಲ್ಲಾಧ್ಯಕ್ಷ ಜಗದೀಶ್, ಮುಖಂಡರು ಗಳಾದ ಕೋಟೆ ನಂದಣ್ಣ, ದಿನೇಶ್, ವಸಂತ್ ಕುಮಾರ್, ಸಂಪತ್, ರಘು, ಸುರೇಶ್ ನಂಜಪ್ಪ, ನವೀನ್ ಮತ್ತಿತರರು ಉಪಸ್ಥಿತರಿದ್ದರು.
Kuvempu University Shivamogga ಕಾವ್ಯಕ್ಕೆ ಯಾವುದೇ ಮೈಲಿಗೆಯಿಲ್ಲ. ಮನಸ್ಸು ಹೃದಯಗಳನ್ನು ಮುಟ್ಟುವುದೇ ಅದರ ಗುರಿಯಾಗಿರಬೇಕು. ಬಿಚ್ಚು ಮನಸ್ಸಿನಿಂದ, ಸ್ವಚ್ಛ ಭಾವದಿಂದ ಬರೆದಾಗ ಜೀವತುಂಬುವ ಕಾವ್ಯ ಹುಟ್ಟಲು ಸಾಧ್ಯ ಎಂದು ಶಂಕರಘಟ್ಟದ ಕುವೆಂಪು ವಿದ್ಯಾವಿದ್ಯಾಲಯ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಹೇಳಿದರು.
ಚಿಕ್ಕಮಗಳೂರು ತಾಲ್ಲೂಕಿನ ಖಾಂಡ್ಯ ಸಮೀಪದ ಶ್ರೀ ಮಾರ್ಖಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕುವೆಂಪು ವಿದ್ಯಾವಿದ್ಯಾಲಯದ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ಕಾವ್ಯ ಕಮ್ಮಟ ಉದ್ಘಾಟನಾ ಸಮಾರಂಭ ಕಾರ್ಯಕ್ರಮಕ್ಕೆ ಚಾಲನೆ ಅವರು ಮಾತನಾಡುತ್ತಿದ್ದರು.
ಯುವ ಬರಹಗಾರರಿಗೆ ಆಪ್ತವಾಗಿಯೂ, ಮುಕ್ತವಾಗಿಯೂ ಚಿಂತಿಸಿ ಕಾವ್ಯ ರಚನೆಗೆ ಇಳಿಯಬೇಕೆಂಬ ಸೂಚನೆ ನೀಡುವುದೇ ಕಾವ್ಯ ಕಮ್ಮಟದ ಉದ್ದೇಶ. ಸಾಹಿತ್ಯದ ಆಸಕ್ತಿ ಇರುವ ಯುವ ಮನಸ್ಸುಗಳು ಒಂದೆಡೆ ಕಲೆತು ಕಾವ್ಯದ ಒಳ-ಹೊರಗುಗಳ ಚರ್ಚೆ ಮಾಡಲು ಹುಟ್ಟಿಕೊಂಡಿದ್ದೆ ‘ಕಾವ್ಯ ಕಮ್ಮಟ’ ಎಂದು ವಿವರಿಸಿದರು.
ಪ್ರಸ್ತುತ ಯುವಜನರಲ್ಲಿ ಸಾಹಿತ್ಯದ ಆಸಕ್ತಿ ಕಡಿಮೆ ಆಗುತ್ತಿದೆ. ಹೊಸ ತಲೆಮಾರು ಕಾವ್ಯದಿಂದ ದೂರ ಸರಿಯುತ್ತಿದೆ ಎಂಬ ಕೂಗಿನ ನಡುವೆಯೂ ಕಾವ್ಯ ಕಮ್ಮಟ ಮೂಲಕ ಹೊಸ ಭರವಸೆ, ಹೊಸ ಬೆಳಕು ಕನ್ನಡ ಸಾಹಿತ್ಯಕ್ಕೆ ಗೋಚರಿಸುತ್ತಿದೆ ಎಂದರೆ ತಪ್ಪಾಗಲಾರದು. ಕಾವ್ಯ ಕಾಜಾಣ, ಕಥಾ ಕಮ್ಮಟ ಹೊಸ ತಲೆಮಾರಿನ ಬರಹಗಾರರು, ಕವಿಯತ್ರಿಯರು ಹುಟ್ಟಲು ಸಹಕಾರಿಯಾಗಿದೆ ಎಂದರು.
ಕನ್ನಡ ಭಾಷೆಯ ಬೆಳವಣಿಗೆಗಾಗಿ ಕುವೆಂಪು ಅವರು ಸಾಹಿತ್ಯದ ಮೂಲಕ ನಾಡಿಗೆ ಅಪಾರವಾದ ಕೊಡುಗೆ ನೀಡಿರುವ ಪರಿಣಾಮ ಇಂದು ವಿಶ್ವದ ಅನೇಕ ಯೂವನಿರ್ಸಿಟಿಗಳಲ್ಲಿ ಕನ್ನಡಿಗರು ರಾರಾಜಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಕುವೆಂಪು ಅವರ ‘ಎಲ್ಲಾದರೂ ಇರು, ಎಂತಾದರೂ ಇರು, ನೀ ಕನ್ನಡವಾಗಿರು’ ಸಾಲುಗಳನ್ನು ಮನದಟ್ಟು ಮಾಡಿಕೊಂಡಿರಬೇಕು ಎಂದರು.
ಖ್ಯಾತ ಚುಟುಕು ಕವಿ ಹೆಚ್.ಡುಂಡಿರಾಜ್ ಮಾತನಾಡಿ ಶಾಸ್ತ್ರಿಯವಾಗಿ ಸಾಹಿತ್ಯ ಓದದವರೂ ಕಮ್ಮಟದ ಭಾಗವಾಗಬಹುದು. ಇದರಿಂದ ಸೃಜನಶೀಲ ಬರಹಗಾರನೊಬ್ಬ ಹುಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಭಿನ್ನ ವ್ಯಕ್ತಿತ್ವ, ಆಲೋಚನೆಗಳ ಪರಿಚಯವಾಗುತ್ತದೆ. ಹೊಸ ಗ್ರಹಿಕೆ, ಆಳವಾದ ವಿಚಾರಧಾರೆ ತೆರೆದುಕೊಳ್ಳಲು ಇಂತಹ ಕಮ್ಮಟಗಳು ನೆರವಾಗುವ ಜೊತೆಗೆ ಕನ್ನಡ ಸಾಹಿತ್ಯದಲ್ಲಿ ಹೊಸ ಪ್ರಯೋಗಕ್ಕೆ ನಾಂದಿಯಾಡುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಕಥಾ ಕಮ್ಮಟದ ಸ್ಪೂರ್ತಿಯಿಂದ ರಾಜ್ಯಮಟ್ಟದ ಕಾವ್ಯ ಕಮ್ಮಟ ಕಾರ್ಯಕ್ರಮವನ್ನು ಆಯೋಜಿಸಿ ಯುವಪ್ರತಿಭೆಗಳಿಗೆ ಅನಾವರಣ ಗೊಳಿಸಲು ಮುಂದಾಗುತ್ತಿದ್ದು ರಾಜ್ಯದ ವಿವಿಧ ಜಿಲ್ಲೆಗಳಿಂದ ಅನೇಕ ಮಂದಿ ಸಾಹಿತ್ಯಾಭಿಮಾನಿಗಳು ಭಾಗವಹಿಸಿ ಯಶಸ್ವಿಗೊಳಿಸಲು ಮುಂದಾಗಿದ್ದಾರೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಕಸಾಪವು ಸಂಘಟನೆಯ ಮೂಲಕ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಯುವಕ, ಯುವತಿಯರಿಗೆ ಸಾಹಿತ್ಯದ ಅರಿವು ಮೂಡಿಸುವ ಸಲುವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
Kuvempu University Shivamogga ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಗೌರವಾಧ್ಯಕ್ಷ ಜಿ.ಬಿ.ಪವನ್, ತಾಲ್ಲೂಕು ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇ ಖರ್, ಸಾಹಿತಿಗಳಾದ ನಾಗರಾಜ್ರಾವ್ ಕಲ್ಕಟ್ಟೆ, ಸವಿತಾ ನಾಗಭೂಷಣ್, ಶ್ರೀನಿವಾಸಮೂರ್ತಿ, ನಾಗರತ್ನ, ಸರೋಜಾ, ಶೋಭಾ ಮತ್ತಿತರರು ಉಪಸ್ಥಿತರಿದ್ದರು.
Breaking News ಇಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂ ನಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷೆಗೂ ಮೀರಿ 135 ಸ್ಥಾನ ಗೆಲ್ಲಲು ಪಕ್ಷ ಘೋಷಿಸಿರುವ ಐದು ಪ್ರಮುಖ ಗ್ಯಾರಂಟಿಗಳು ಕಾರಣವಾಗಿದೆ.
ಇಂದು ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಈ ಗ್ಯಾರಂಟಿ ಯೋಜನೆಗಳ ಅಂಕಿತ ಹೊರ ಬಿದ್ದಿದೆ. ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿ ನಡೆಸಿ, ಈ ಐದು ಗ್ಯಾರಂಟಿಗಳ ಬಗ್ಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
Breaking News ಪ್ರತಿ ಮನೆಗೂ 200 ಯೂನಿಟ್ ವಿದ್ಯುತ್ ಸಂಪರ್ಕ ಉಚಿತ, ಪ್ರತಿ ಮನೆ ಒಡತಿಗೆ ಮಾಸಿಕ 2000 ನೀಡಲಾಗುತ್ತದೆ. ನಿರುದ್ಯೋಗ ಪದವೀಧರರು ಅಥವಾ ಡಿಪ್ಲೋಮೋ ಮಾಡಿದವರಿಗೆ ತಿಂಗಳಿಗೆ 3000 ಅಥವಾ 1500 ರೂಪಾಯಿ. ಬಡವರಿಗೆ ಅನ್ನ ಭಾಗ್ಯ ಯೋಜನೆ ಮಾಸಿಕ 10 ಕೆಜಿ ಅಕ್ಕಿ ವಿತರಿಸಲಾಗುತ್ತದೆ. ಕರ್ನಾಟಕದಲ್ಲಿನ ಮಹಿಳೆಯರಿಗೆ ಸರ್ಕಾರಿ ಬಸ್ ಪ್ರಯಾಣಕ್ಕಾಗಿ ಉಚಿತ ಪಾಸ್ ನೀಡಲಾಗುತ್ತದೆ. ಈ ಐದು ಗ್ಯಾರಂಟಿಗಳ ಬಗ್ಗೆ ಸಂಪುಟ ಸಭೆಯಲ್ಲಿ ಒಪ್ಪಿಗೆಯನ್ನು ನೀಡಲಾಗಿದೆ.
Paired Chariot Race ಚಿಕ್ಕಮಗಳೂರು, ಕೆಸವಿನಮನೆ ಗೌಡರ ಬಳಗದ ವತಿಯಿಂದ ಚಿಕ್ಕಮಗಳೂರು ಕಡೂರು ತಾಲ್ಲೂಕು ಕೆಸವಿನ ಮನೆ ಗ್ರಾಮದಲ್ಲಿ ನಡೆದ ಜಿಲ್ಲಾ ಮಟ್ಟದ ಜೋಡೆಎತ್ತಿನ ಗಾಡಿ ಓಟದ ಸ್ಪರ್ಧೆಯಲ್ಲಿ ಗವನಹಳ್ಳಿ ವಾಸಿ ಲೋಕರಾಜು ಎಂಬುವವರು ದ್ವಿತೀಯ ಸ್ಥಾನ ಪಡೆದುಕೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥ ಎಂ.ಹರಿಪ್ರಸಾದ್ ನೇತೃತದಲ್ಲಿ ಯುವಕರು ಗವನಹಳ್ಳಿಯಲ್ಲಿ ಮೆರವಣಿಗೆ ನಡೆಸುವ ಮೂಲಕ ಗೌರವಿಸಿದರು.
ಕಡೂರು ತಾಲ್ಲೂಕಿನ ಕೆಸವಿನಮನೆ ಗ್ರಾಮದಲ್ಲಿ 5ನೇ ವರ್ಷದ ಜೋಡೆಎತ್ತಿನಗಾಡಿ ಓಟದ ಸ್ಪರ್ಧೆಯನ್ನು ಗುರುವಾರ ಆಯೋಜಿಸಲಾಗಿತ್ತು.
Paired Chariot Race ಇದರಲ್ಲಿ ಗವನಹಳ್ಳಿ ವಾಸಿ ಲೋಕರಾಜು ದ್ವಿತೀಯ ಸ್ಥಾನ ಪಡೆದುಕೊಂಡು ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗವನಹಳ್ಳಿ ಗ್ರಾಮಸ್ಥರಾದ ನವೀನ್ಶೆಟ್ಟಿ, ರಮೇಶ್ಅರಸ್, ತುಳಸಿ ಹಾಗೂ ಯುವಕರು, ಮಕ್ಕಳು ಹಾಜರಿದ್ದರು.
Kateel Ashok Pai Memorial College ನಮ್ಮನ್ನು ನಾವು ಬ್ರಾಂಡ್ ಗಳಾಗಿ ಪರಿವರ್ತಿಸಿಕೊಳ್ಳಬೇಕು. ಆತ್ಮವಿಶ್ವಾಸದೊಂದಿಗೆ ಕಾಯಕವನ್ನು ನಿರ್ವಹಿಸಬೇಕು ಎಂದು ಹೈದರಾಬಾದ್ ನ ಐಸಿಎಫ್ ಎಐ ಬಿಸಿನೆಸ್ ಸ್ಕೂಲ್ ನ ಪ್ರಾಧ್ಯಾಪಕರಾದ ಕೆ ಎನ್. ವಿಶ್ವನಾಥನ್ ಅವರು ಅಭಿಪ್ರಾಯಪಟ್ಟರು.
ಶಿವಮೊಗ್ಗ ನಗರದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಮತ್ತು ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಸಹಯೋಗದಲ್ಲಿ ಎಂ. ಫಿಲ್ ಕ್ಲಿನಿಕಲ್ ಸೈಕಾಲಜಿಯ ಉದ್ಘಾಟನಾ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಂ.ಫಿಲ್ ಎಂಬುವುದು ತುಂಬಾ ವಿಶೇಷವಾದ ಕೋರ್ಸ್. ಜನರಿಗೆ ಸೈಕಾಲಜಿಕಲ್ ಸಮಸ್ಯೆಗಳು ಇರುತ್ತವೆ. ಕ್ಲಿನಿಕಲ್ ಸೈಕಾಲಜಿಯಲ್ಲಿ ನಾವು ವಿವಿಧ ಮಾನಸಿಕ ಒತ್ತಡಯುಳ್ಳ ವ್ಯಕ್ತಿಗಳೊಂದಿಗೆ ವ್ಯವಹರಿಸುತ್ತೇವೆ. ಆದ್ದರಿಂದ ನಮ್ಮ ಮಾನಸಿಕ ಸ್ಥೈರ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಕ್ಕೆ ಸಂಯೋಜಿತವಾಗಿರುವ ಈ ಸಂಸ್ಥೆಯು ಭಾರತೀಯ ಪುನರ್ವಸತಿ ಮಂಡಳಿಯಿಂದ ಅನುಮೋದನೆಯನ್ನು ಪಡೆದುಕೊಂಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದು ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು.
Kateel Ashok Pai Memorial College ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ,ಅಲೈಡ್ ಹೆಲ್ತ್ ಸೈನ್ಸಸ್ , ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಡೀನ್ , ಬೆಂಗಳೂರಿನ ಪದ್ಮಶ್ರೀ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ನಿರ್ದೇಶಕರಾಗಿರುವ ಪ್ರೊ. ರಾಜೇಶ್ ಶೆಣೈ ಅವರು ಮಾತನಾಡಿ, ಮನಶಾಸ್ತ್ರ ಎನ್ನುವುದು ವಿವಿಧ ಮನಸ್ಸುಗಳೊಂದಿಗೆ ಸಂವಹನ ನಡೆಸಬೇಕಾಗುತ್ತದೆ. ಕ್ಲಿನಿಕಲ್ ಸೈಕಾಲಜಿಯಲ್ಲಿ ಎಂ.ಫಿಲ್ ಮಾಡುವುದು ಎಂದರೆ ಸಾಹಸವೇ ಸರಿ.. ಇತ್ತೀಚೆಗೆ ಪ್ರತಿ ವರ್ಷವೂ ಪಠ್ಯಕ್ರಮಗಳು ಬದಲಾಗುತ್ತಲೇ ಇರುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಹೆದರಿಕೊಳ್ಳುವ ಅಗತ್ಯವಿಲ್ಲ . ಪಠ್ಯಕ್ರಮದಲ್ಲಿ ನವೀಕರಣ ಉತ್ತಮ ಬದಲಾವಣೆಗಾಗಿಯೇ ಆಗಿರುತ್ತದೆ ಎಂದು ತಿಳಿಸಿದರು.
ನಂತರದಲ್ಲಿ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಅವರು ಮಾತನಾಡಿ, ಕಾಲೇಜಿನಲ್ಲಿ ಕ್ಲಿನಿಕಲ್ ಸೈಕಾಲಜಿ ವಿಭಾಗ ನಡೆದು ಬಂದ ಹಾದಿ, ಒಂದು ಸಂಸ್ಥೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕಾದರೆ ಅಲ್ಲಿರುವ ಬೋಧಕ ಬೋಧಕೇತರ ಸಿಬ್ಬಂದಿಗಳ ಶ್ರಮದ ಕುರಿತು ತಿಳಿಸಿದರು.
ಈ ಸಂದರ್ಭದಲ್ಲಿ ಮಾನಸ ಟ್ರಸ್ಟ್ ನ ನಿರ್ದೇಶಕರಾದ ರಜನಿ ಪೈ, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಬೋಧಕ, ಬೋಧಕೇತರು, ಎಂ.ಫಿಲ್ ವಿಭಾಗದ ಮುಖ್ಯಸ್ಥರಾದ ಪುಷ್ಪಲತಾ, ಮನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಅರ್ಚನಾ, ಪ್ರಾಧ್ಯಾಪಕರಾದ ಶ್ರಿದೇವಿ, ಅನನ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Karnataka CM Swearing in Ceremonyಶಿವಮೊಗ್ಗದ ವಿನೋಬನಗರ ಪೊಲೀಸ್ ಚೌಕಿಯಲ್ಲಿ ಸಂಗೊಳ್ಳಿ ರಾಯಣ್ಣ ಕುರುಬರ ವೇದಿಕೆ ವತಿಯಿಂದ ಇಂದು ರಾಜಧಾನಿಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಬಗ್ಗೆ ಸಡಗರ ಹಾಗೂ ಸಂಭ್ರಮಪಟ್ಟರು.
Karnataka CM Swearing in Ceremony ಸಿದ್ದರಾಮಯ್ಯ ಅವರ ಭಾವಚಿತ್ರಕ್ಕೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿ, ಸಿಹಿಯನ್ನು ಹಂಚಿದರು. ಅಲ್ಲದೆ ಹಿಡಿ ಮೊದ್ದು, ಪಟಾಕಿಯನ್ನು ಹಚ್ಚುವ ಮೂಲಕ ಸಂತೋಷಪಟ್ಟರು.
Death News ತೀರ್ಥಹಳ್ಳಿ ಮೇಲಿನ ಕುರುವಳ್ಳಿಯ ಬಳಿ ಕೆರೆಯ ನೀರಿಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
36 ವರ್ಷದ ಶೃತಿ ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಈ ಕೆಯ ಆತ್ಮಹತ್ಯೆಗೆ ಪತಿಯ ಸಾಲದ ಕಾರಣ ಇರಬಹುದು ಎಂದು ಅನುಮಾನ ಪಡಲಾಗಿದೆ. ಮೃತ ಮಹಿಳೆಗೆ ಅವಳಿ ಜವಳಿ ನಾಲ್ಕು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ. ಆಕೆಯ ಪತಿಯನ್ನು Death News ಅನುಮಾನದ ಮೆರೆಗೆ ಪೊಲೀಸರು ದಸ್ತಗಿರಿ ಮಾಡಿದ್ದಾರೆ.
RBI to pull out ₹2,000 notes from active circulation ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಜನರಿಗೆ ಒಂದು ಶಾಕ್ ನೀಡಿದೆ. ಇನ್ನು ಮುಂದೆ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಆರ್ ಬಿಐ ಘೋಷಿಸಿದೆ.
ಆರ್ ಬಿ ಐ ಜನರ ಬಳಿ ಇರುವ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ ನೀಡಿದೆ. ಒಂದು ದಿನಕ್ಕೆ 20 ಸಾವಿರ ರೂಪಾಯಿ ವಿನಿಮಯ ಮಾಡಿಕೊಳ್ಳಬಹುದು. ಮೇ 23 ರಿಂದ ನೋಟು ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಜನರು ತಮ್ಮ ಹತ್ತಿರದ ಯಾವುದೇ ಬ್ಯಾಂಕ್ ಶಾಖೆ ಹಾಗೂ ಆರ್ ಬಿ ಐ ಪ್ರಾದೇಶಿಕ ಕಚೇರಿಗಳಿಗೆ ತೆರಳಿ 2ಸಾವಿರ ರೂಪಾಯಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು.
2000 ವಿನಿಮಯ ಮಾಡಿಕೊಳ್ಳಲು ಯಾವುದೇ ಶುಲ್ಕ ವಿಧಿಸುವಂತಿಲ್ಲ. ಒಂದು ವೇಳೆ ಬ್ಯಾಂಕ್ ಗಳು ಹಣ ಸ್ವೀಕರಿಸದೆ ಹೋದರೆ ನಾಗರಿಕರು ಅವರ ವಿರುದ್ಧ ದೂರನ್ನು ಸಲ್ಲಿಸಬಹುದು.
RBI to pull out ₹2,000 notes from active circulation 2000 ರೂ. ಚಲಾವಣೆಯ ನೋಟು ಆರ್ ಬಿಐ ಹಿಂಪಡೆದ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ... ಈಗ 2000 ಮೌಲ್ಯದ ನೋಟು ನಿಷೇಧಿಸಿದರೇ, 2016ರಲ್ಲಿ ಅದನ್ನು ಚಲಾವಣೆಗೆ ತಂದದ್ದು ಯಾಕೆ? ಯಾವ ಕಾರಣಕ್ಕಾಗಿ ಈಗ ಇದನ್ನು ನಿಷೇಧಿಸಲಾಗಿದೆ? ಕಪ್ಪು ಹಣವನ್ನು ನಿಯಂತ್ರಿಸುವ ನೋಟು ನಿಷೇಧ ಎಂಬ ಪ್ರಬಲ ಅಸ್ತ್ರವನ್ನ ಪ್ರಧಾನಿ ನರೇಂದ್ರ ಮೋದಿಯವರು ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಟ್ವಿಟ್ಟರ್ ನಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ
KLive Special Article ಸಮಾಧಾನದ ಸಂಗತಿಯೆಂದರೆ ರಾಜ್ಯದ ಮತದಾರ ಸುಸ್ಥಿರ ಸರ್ಕಾರ ಬಯಸಿದ್ದಾನೆ. ಅದರಂತೆ ಕಾಂಗ್ರೆಸ್ ಪಕ್ಷಕ್ಕೆ 135 ಸ್ಥಾನಗಳು ಲಭಿಸಿವೆ. ಸದ್ಯ ಈ ಸಾಧನೆ ದೇಶದ ಹಲವು ರಾಜ್ಯಗಳಲ್ಲಿ ಸೋತು ಸುಣ್ಣಾಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಸಂಜೀವಿನಿಯಂತಾಗಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಬಿಜೆಪಿಯ ದೌರ್ಬಲ್ಯಗಳನ್ನ ಪ್ರಬಲ ಅಸ್ತ್ರವನ್ನಾಗಿಸಿತು ಆದರೆ ಜೆಡಿಎಸ್, ಆಮ್ ಆದ್ಮಿ ಪಕ್ಷಗಳು ತಮ್ಮದೇ ಸುಳಿಯಲ್ಲಿ ಸಿಕ್ಕಿಕೊಂಡಂತಿದ್ದವು. ಜೆಡಿಎಸ್ ತನ್ನ ಪ್ರಭಾವಿ ಶಾಸಕರನ್ನ ಕಳೆದುಕೊಂಡು ಒಂದು ರೀತಿ ಅನೀಮಿಕ್ ಆಯಿತು. ಹಿರಿಯರಾದ ಮಾಜಿ ಪ್ರಧಾನಿಗಳ ನುಡಿಗಳಿಗೂ ಜನ ಕಿವಿಗೊಡಲಿಲ್ಲ. ಕುಮಾರಸ್ವಾಮಿ ಅವರೂ ತಮ್ಮ ಹಿಡಿತ ಸಡಿಲಿಸಲಿಲ್ಲ. ಅವರೊಂದಿಗೆ ಜನರಿದ್ದರು. ಅಷ್ಟೆ.ಮತಗಳಾಗಿ ಪರಿವರ್ತನೆಯಾಗಲಿಲ್ಲ.
ನಾಯಕತ್ವ ಹೇಗಿರಬೇಕು ಎಂಬುದನ್ನ ಮಾಧ್ಯಮಗಳು ಬಿಡಿಸಿ ಹೇಳಿದವು. ರಾಷ್ಟ್ರೀಯ ನಾಯಕರ ದಂಡುಗಳು ಬಂದರೂ ಪಕ್ಷಗಳಿಗೆ ಅದು ಮತಗಳಾಗಲಿಲ್ಲ.
ಪ್ರಾದೇಶಿಕ ಪಕ್ಷಗಳ ಅಸ್ತಿತ್ವ ಯಾಕೋ ನಮ್ಮ ರಾಜ್ಯದಲ್ಲಿ ಢಾಳಾಗಿ ನಿಲ್ಲುತ್ತಿಲ್ಲ.
ಕೇಜ್ರಿವಾಲ್ ದಾಳ ಉರುಳಿಸಲೂ ಅಸಾಧ್ಯವಾಯಿತು. ಪಕ್ಷ ಸೇರಿದ ಪ್ರಮುಖರೂ ಮತ್ತೆ ಹೊರಬಂದರು. ರಾಜ್ಯ ಮಟ್ಟದ ನಾಯಕತ್ವ ಇಲ್ಲದೇ ಆ ಪಕ್ಷ ಸೊರಗಿದೆ
ಈ ಬಾರಿಯ ಚುನಾವಣೆ ಗ್ಯಾರಂಟಿ ಭಾಗ್ಯಗಳ ತಳಹದಿ ಮೇಲೆ ನಡೆದಿದೆ. ಪಕ್ಷಗಳ ರಾಷ್ಟ್ರೀಯ ವಿಚಾರಧಾರೆ, ಭ್ರಷ್ಟಾಚಾರ ಇವೆಲ್ಲ ಮೇಲ್ನೋಟಕ್ಕಷ್ಟೆ. ಆದರೆ ಒಳ ರಭಸದ ಅಲೆ ಗ್ಯಾರಂಟಿ ಭಾಗ್ಯದ್ದೆ.
ಗ್ಯಾರಂಟಿ ಕಾರ್ಡ್ ಬಗ್ಗೆ ಬಹಳ ಊಹಾಪೋಹಗಳಿವೆ. ಚುನಾವಣಾ ಆಯೋಗ ಹೇಳಿವಂತೆ ಮತದಾರನಿಗೆ ಪಕ್ಷ ಅಥವಾ ವ್ಯಕ್ತಿಯಾಗಲೀ ಆಮಿಷ ಒಡ್ಡಿ ಮತ ಕೇಳಬಾರದು. ಹಾಗಾದಲ್ಲಿ ಅದು ಅನರ್ಹತೆ. ಈಗ ಜನ ಸುಮುದಾಯದಲ್ಲಿ ಸದ್ಯ ಗ್ಯಾರಂಟಿ ಕಾರ್ಡ ವಿತರಣೆ ಆಮಿಷದ ವ್ಯಾಖ್ಯೆಯೊಳಗೆ ಬರುತ್ತದೆಯೆ ಎಂಬ ಚರ್ಚೆ ನಡೆಯುತ್ತಿದೆಯಂತೆ.
ಗ್ಯಾರಂಟಿ ಬಗ್ಗೆ ಈಗಾಗಲೇ ಸ್ವಂತ ಪಕ್ಷದವರೇ ಕಂಡೀಷನ್ ಅಪ್ಲೆ ಎಂಬ ರಾಗ ಎಳೆಯುತ್ತಿದ್ದಾರೆ ಗ್ಯಾರಂಟಿಭಾಗ್ಯಗಳ ಬಗ್ಗೆ ಆಡಳಿತಾರೂಢ ಸರ್ಕಾರ ಯಾವುದೇ ಹಿಂದೇಟು, ಷರತ್ತು ಗಳ ಬಗ್ಗೆ ಹಿಂದೆ ನೋಡುವಂತಿಲ್ಲ.ಯಾಕೆಂದರೆ ಚುನಾವಣಾ ಪ್ರಚಾರ ಸಮಯದಲ್ಲಿ ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೀಡಿದ ಭರವಸೆಯ ಮಾತುಗಳ ಆಡಿಯೊ ಮತ್ತು ವಿಡಿಯೋಗಳನ್ನ ಜನ ಕಾಯ್ದಿಟ್ಟುಕೊಂಡಿದ್ದಾರೆ.
ಈಗ ಮುಖ್ಯಮಂತ್ತಿ ಸಿದ್ಧರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟದ ಮೊದಲ ಸಭೆಯಲ್ಲೇ ಆದೇಶ ಹೊರಡಿಸುವ ಭರವಸೆ ನೀಡಿದ್ದಾರೆ.
KLive Special Article ಗ್ಯಾರಂಟಿ ..ಪಕ್ಕಾ ಆದರೆ ನಿಜಕ್ಕೂ ವಿರೋಧ ಪಕ್ಷಗಳು ಇನ್ನೂ ಎರಡು ಅವಧಿಗೆ ಮಕಾಡೆಯಾಗುತ್ತವೆ. ಬರಲಿರುವ ಸಂಸದೀಯ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಸ್ಥಿತಿ ಉತ್ತಮಪಡಿಸಿಕೊಳ್ಳುತ್ತದೆ.