Tuesday, November 17, 2026
Tuesday, November 17, 2026
Home Blog Page 1416

Breaking News ಶಾಸಕ ಯು.ಟಿ. ಖಾದರ್ ವಿಧಾನ ಸಭಾಧ್ಯಕ್ಷರಾಗಿ ಅವಿರೋಧ ಅಯ್ಕೆ

0

Breaking News ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಶಾಸಕ ಯು ಟಿ ಖಾದರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕರ್ನಾಟಕ ವಿಧಾನಸಭೆಯ 23ನೇ ಅಧ್ಯಕ್ಷರಾಗಿದ್ದಾರೆ. ಮಂಗಳೂರು ಕ್ಷೇತ್ರದ ಶಾಸಕರಾಗಿರುವ ಯು ಟಿ ಖಾದರ್ ಅವರು ಈ ಹಿಂದೆ ಆರೋಗ್ಯ ಮತ್ತು ಕುಟುಂಬ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ನಗರ ಅಭಿವೃದ್ಧಿ ಮತ್ತು ವಸತಿ ಇಲಾಖೆ ಹಾಗೂ ಕಳೆದ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕರಾಗಿ ಸೇವಿ ಸಲ್ಲಿಸಿದ ಅನುಭವವಿದೆ.

ನೂತನ ಸ್ಪೀಕರ್ ಆಗಿ ಆಯ್ಕೆಯಾದ ಖಾದರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್, ಸಂಪುಟದ ಸದಸ್ಯರು, ಹಾಗೂ ವಿವಿಧ ಶಾಸಕರು ಅಭಿನಂದಿಸಿದ್ದಾರೆ.

Breaking News U.T ಖಾದರ್ ಅಧಿಕೃತವಾಗಿ ಸ್ಪೀಕರ್ ಆಗಿ ಅಧಿಕಾರ ಸ್ವೀಕಾರವನ್ನು ಹಂಗಾಮಿ ಸ್ಪೀಕರ್ ಆರ್.ವಿ. ದೇಶಪಾಂಡೆ ಅವರಿಂದ ಸ್ವೀಕರಿಸಿದರು.

Thirthahalli today Climate ಬೇಸಿಗೆ ಮಳೆಗೆ ತಂಪಾಯ್ತು ಇಳೆ… ತೀರ್ಥಹಳ್ಳಿ ಈಗ ಕೂಲ್ ಕೂಲ್…

0

Thirthahalli today Climate ಬಿಸಿಲಿನ ಧಗೆಯಿಂದ ಕಾದ ಕಾವಲಿಯಂತಾಗಿದ್ದ ತೀರ್ಥಹಳ್ಳಿಯಲ್ಲಿ ವರುಣ ಪ್ರತ್ಯಕ್ಷವಾಗಿದ್ದಾನೆ. ಗುಡುಗು ಸಹಿತ ಮಿಂಚು, ಗಾಳಿ ಜೋರು ಮಳೆ ಸುರಿದಿದೆ. ಇದರಿಂದಾಗಿ ತೀರ್ಥಹಳ್ಳಿ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಿತ್ತು.
Thirthahalli today Climate ಏಕಾಏಕಿ ಮಳೆ ಸುರಿಯಲು ಆರಂಭವಾಗಿದೆ. ಕಳೆದ ಕೆಲವು ದಿನದಿಂದ ಬಾರಿ ಬಿಸಿಲಿನ ತಾಪ ತೀರ್ಥಹಳ್ಳಿಯಲ್ಲಿ ಹೆಚ್ಚಾಗಿತ್ತು. ತಾಪಮಾನ 35 ಡಿಗ್ರಿವರೆಗೆ ಏರಿಕೆಯಾಗಿತ್ತು.

B. Y. Raghavendra ರೈಲ್ವೆ ಯೋಜನೆಗಳು ಸಫಲವಾಗಲು ಮಂಜೂರಾತಿ ನೀಡಿದ ಕೇಂದ್ರಕ್ಕೆ ಧನ್ಯವಾದಗಳು- ಬಿ.ವೈ.ರಾಘವೇಂದ್ರ

0

B. Y. Raghavendra ಸಂಸದರಾದ ಬಿ.ವೈ.ರಾಘವೇಂದ್ರ ಅವರು ದಿನಾಂಕ: 22-05-2023 ರಂದು ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆಯ ಮಹಾಪ್ರಬಂಧಕರಾದ ಸಂಜೀವ್ ಮತ್ತು ಹಿರಿಯ ರೈಲ್ವೆ ಅಧಿಕಾರಿಗಳೊಂದಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ರೈಲ್ವೆ ಯೋಜನೆಗಳ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸಿದರು.
ತಾಳಗುಪ್ಪ, ಶಿವಮೊಗ್ಗ ನಗರ, ಸಾಗರ ರೈಲ್ವೆ ನಿಲ್ದಾಣಗಳನ್ನು ಆಧುನೀಕರಣಗೊಳಿಸಲು ಕ್ರಮ ಕೈಗೊಳ್ಳಲು ಮಾನ್ಯ ಸಂಸದರು ರೈಲ್ವೆ ಇಲಾಖೆಯನ್ನು ಒತ್ತಾಯಿಸುತ್ತಲೇ ಇದ್ದರ ಫಲವಾಗಿ ಕೇಂದ್ರ ಸರ್ಕಾರವು 2023-24ರ ಬಜೆಟ್ ನಲ್ಲಿ ಘೋಷಿಸಿದ ‘ಅಮೃತ್ ಭಾರತ್ ಯೋಜನೆ” ಯಡಿ, ರೂ. 22.5 ಕೋಟಿಗಳ ವೆಚ್ಚದಲ್ಲಿ ತಾಳಗುಪ್ಪ ರೈಲ್ವೆ ನಿಲ್ದಾಣವನು ರೂ. 19.28 ಕೋಟಿಗಳ ವೆಚ್ಚದಲ್ಲಿ ಶಿವಮೊಗ್ಗ ನಗರದ ರೈಲ್ವೆ ನಿಲ್ದಾಣವನ್ನು ಮತ್ತು ರೂ. 21.10 ಕೋಟಿಗಳ ವೆಚ್ಚದಲ್ಲಿ ಸಾಗರ ರೈಲ್ವೆ ನಿಲ್ದಾಣವನ್ನು ಹಾಗೂ ರೂ. 33.00 ಕೋಟಿಗಳ ವೆಚ್ಚದಲ್ಲಿ ಶಿವಮೊಗ್ಗ ಗೂಡ್ಸ್ ಯಾರ್ಡನ್ನು ಅಭಿವೃದ್ಧಿಪಡಿಸುವ ಸಲುವಾಗಿ ಕೇಂದ್ರ ರೈಲ್ವೆ ಇಲಾಖೆಯು ಅನುದಾನ ಒದಗಿಸಿದೆ.

ಪ್ರಯಾಣಿಕ ಸ್ನೇಹಿ ಸವಲತ್ತುಗಳನ್ನು (ಗ್ರಾನೇಟ್ ನೆಲಹಾಸಿನ ಪ್ಲಾಟ್ ಫಾರಂ, ಡಿಜಿಟಲ್ ಸಿಗ್ನಲ್ಸ್, ಪ್ಲಾಟ್ ಫಾರಂ ಶೆಲ್ಪರ್, ಪಾಕಿರ್ಂಗ್ ಜಾಗದಲ್ಲಿ ಶೆಡ್ ನಿರ್ಮಾಣ, ಕಾಂಪೌಂಡ್ ವಾಲ್ ನಿರ್ಮಾಣ, ಸರ್ಕುಲೇಟಿಂಗ್ ಏರಿಯಾ ಅಭಿವೃದ್ಧಿ, ಸ್ಪೇಷನ್ ನಿಲ್ದಾಣದ ಸೌಂದರೀಕರಣ, ನಿಲ್ದಾಣದ ಮುಂಭಾಗದ ಉದ್ಯಾವನ, ಫೂಟ್ ಓವರ್ ಬ್ರಿಡ್, ಆಧುನಿಕ ಶೌಚಾಲಯಗಳು, ಉತ್ತಮ ಗುಣಮಟ್ಟದ ವಿದ್ಯುತ್ ಬೆಳಕಿನ ವ್ಯವಸ್ಥೆ, ಸಿ.ಸಿ.ಟಿ.ವಿ. ರೈಲ್ವೆ ಉದ್ಘೋಷಣಾ ವ್ಯವಸ್ಥೆ ಇಂತಹ ಹಲವಾರು ಸವಲತ್ತುಗಳನ್ನು ಒದಗಿಸುವ ಯೋಜನೆಯು ಮಂಜೂರಾತಿ ಗೊಂಡಿದೆ. ಹಾಗೆಯೇ ಶಿವಮೊಗ್ಗ ಗೂಡ್ಸ್ ಯಾರ್ಡನಲ್ಲಿ ಅಗತ್ಯ ಮೂಲ ಸೌಕರ್ಯವನ್ನು ಹೆಚ್ಚಿಸುವ ಮೂಲಕ ಶಿವಮೊಗ್ಗ ಜಿಲ್ಲೆಗೆ ಅಗತ್ಯವಿರುವ ರಸಗೊಬ್ಬರ, ಪಡಿತರ ಧಾನ್ಯ, ಸಿಮೆಂಟ್, ಕಬ್ಬಿಣ ಮತ್ತಿತರ ಅಗತ್ಯ ವಸ್ತುಗಳನ್ನು ಶೀಘ್ರವಾಗಿ ಲಭ್ಯವಾಗುವಂತೆ ಮಾಡಲು ಕ್ರಮಕೈಗೊಳ್ಳುವುದಾಗಿ ಸಭೆಯಲ್ಲಿ ರೈಲ್ವೆ ಉನ್ನತಾಧಿಕಾರಿಗಳು ತಿಳಿಸಿರುತ್ತಾರೆ.

ಸುಮಾರು ರೂ. 100 ಕೋಟಿಗಳ ಅನುದಾನವನ್ನು ಈ ನಾಲ್ಕು ರೈಲ್ವೆ ನಿಲ್ದಾಣ / ಯಾರ್ಡ್ ಗಳ ಅಭಿವೃದ್ಧಿಗಾಗಿ ಒದಗಿಸಿರುವ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್, ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲ ಸೀತಾರಾಮನ್ ಹಾಗೂ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರಿಗೆ ವೈಯಕ್ತಿಕವಾಗಿ ಹಾಗೂ ಕ್ಷೇತ್ರದ ಜನತೆಯ ಪರವಾಗಿ ಧನ್ಯವಾದಗಳನ್ನು ಸಂಸದರು ಸಲ್ಲಿಸಿದ್ದಾರೆ.

2019-20ರ ಕೇಂದ್ರ ಮುಂಗಡ ಪತ್ರದಲ್ಲಿ ಮಲೆನಾಡಿನಿಂದ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಸಂಪರ್ಕ ಸೇತುವೆಯಾಗುವ ರೂ.1,200 .ಕೋಟೆಗಳ ಅಂದಾಜು ವೆಚ್ಚದಲ್ಲಿ ಮಂಜೂರಾಗಿರುವ ಶಿವಮೊಗ್ಗ ಶಿಕಾರಿಪುರ ರಾಣೆಬೆನ್ನೂರು ನೂತನ ರೈಲ್ವೆ ಮಾರ್ಗ ಯೋಜನೆಯ ಮೊದಲನೇ ಹಂತವಾದ ಶಿವಮೊಗ್ಗ-ಶಿಕಾರಿಪುರ (46 ಕಿ.ಮೀ) ನಡುವಿನ ಕಾಮಗಾರಿಗೆ ಅಗತ್ಯವಿರುವ ಸಂಪೂರ್ಣ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಕಾಮಗಾರಿಯನ್ನು ನಿರ್ವಹಿಸಲು ಗುತ್ತಿಗೆದಾರರನ್ನು ಸಹ ನಿಗದಿಪಡಿಸಲಾಗಿದೆ.

ದಿನಾಂಕ: 27.02.2023 ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯರವರ ಅಮೃತ ಹಸ್ತದಿಂದ ಶಿಲಾನ್ಯಾಸಗೊಂಡಿರುವ ಈ ಯೋಜನೆಯ ಕಾಮಗಾರಿಯ ಪೂರ್ವಭಾವಿ ಸಿದ್ಧತೆಗಳು ಆರಂಭಗೊಂಡಿದೆ. ಮುಂದಿನ ವಾರದಿಂದ ಕಾಮಗಾರಿಯನ್ನು ಪ್ರಾರಂಭಿಸಿ 2025ರ ಡಿಸೆಂಬರ್ ವೇಳೆಗೆ ಶಿವಮೊಗ್ಗ-ಶಿಕಾರಿಪುರ ನಡುವಿನ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿರುತ್ತಾರೆ.

ಭದ್ರಾವತಿಯ ಕಡದಕಟ್ಟೆ ಹತ್ತಿರ ರೈಲ್ವೆ ಎಲ್‍ಸಿ 33, ಶಿವಮೊಗ್ಗ ನಗರದ ಸವಳಂಗ ರಸ್ತೆಯ ಎಲ್‍ಸಿ 49 ಹಾಗೂ ಕಾಶಿಪುರ ಗೇಟ್ ಬಳಿಯ ಎಲ್‍ಸಿ 52 ರ ಬದಲಿಗೆ ನಿರ್ಮಿಸಲಾಗುತ್ತಿರುವ ROB/RUB ಗಳ ಕಾಮಗಾರಿಗಳು ಭರದಿಂದ ಸಾಗುತ್ತಿದೆ. ಅವಳಿ ನಗರಗಳ ವಾಹನಗಳ ದಟ್ಟಣೆಯ ಸಮಸ್ಯೆಗೆ ಈ ಯೋಜನೆಗಳನ್ನು ಅತ್ಯಂತ ತ್ವರಿತವಾಗಿ ಪೂರ್ಣಗೊಳಿಸುವ ಅಗತ್ಯತೆಯನ್ನು ತಿಳಿಯಪಡಿಸಲಾಗಿದೆ. ಇವುಗಳನ್ನು ಕ್ರಮವಾಗಿ ಡಿಸೆಂಬರ್ 2023. ಅಕ್ಟೋಬರ್ 2023 ಹಾಗೂ ಜೂನ್ 2023ರ ಒಳಗೆ ಪೂರ್ಣಗೊಳಿಸುವುದಾಗಿ ಪ್ರಧಾನ ವ್ಯವಸ್ಥಾಪಕರು ತಿಳಿಸಿರುತ್ತಾರೆ.

B. Y. Raghavendra ಶಿವಮೊಗ್ಗ ಜಿಲ್ಲೆಯ ಮೊದಲ ಕೋಚಿಂಗ್ ಡೀಪೆÇೀ ಆದಂತಹ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡೀಪೆÇೀ ಅನ್ನು 2020-21ರ ಮುಂಗಡ ಪತ್ರದಲ್ಲಿ ಸುಮಾರು 100.00 ಕೋಟಿಗಳ ಅಂದಾಜು ವೆಚ್ಚದಲ್ಲಿ ಮಂಜೂರು ಮಾಡಲಾಗಿದೆ. ರಾಜ್ಯ ಸರ್ಕಾರವು ಈ ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಈಗಾಗಲೇ ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿದೆ. 3 ಪ್ಲ್ಯಾಟ್‍ಫಾರಂಗಳನ್ನೊಳಗೊಂಡ ಕೋಟೆಗಂಗೂರಿನ ನೂತನ ರೈಲ್ವೆ ನಿಲ್ದಾಣ, 2 ಪಿಟ್‍ಲೈನ್, 3 ಸಿಕ್‍ಲೈನ್, 3 ಸ್ಟೇಬಲಿಂಗ್ ಲೈನ್‍ಗಳನ್ನೊಳಗೊಂಡಿದೆ. ಈ ಯೋಜನೆಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಕಾಮಗಾರಿ ಈಗಾಗಲೇ ಆರಂಭಗೊಂಡಿದೆ. 2024ರ ಮೇ ಅಥವಾ ಜೂನ್ ಗೂ ಮೊದಲು ಈ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ನೈರುತ್ಯ ರೈಲ್ವೆಯ ಸಭೆಯಲ್ಲಿ ತಿಳಿಸಿರುತ್ತಾರೆ.

ಸಂಸದರು ಭವಿಷ್ಯದಲ್ಲಿ ವಂದೇ ಭಾರತ್ ರೈಲುಗಾಡಿಯನ್ನು ಸಹ ಇಲ್ಲಿ ನಿರ್ವಹಣೆ ಮಾಡಲು ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವಂತೆ ಕೋರಲಾಗಿ, ಜನರಲ್ ಮ್ಯಾನೇಜರ್ ರವರು ಈ ಬಗ್ಗೆ ಪೂರಕವಾಗಿ ಸ್ಪಂದಿಸಿ ನೂತನ ಯೋಜನಾ ವರದಿಯನ್ನು ಸಿದ್ದಪಡಿಸಿ ರೈಲ್ವೆ ಮಂಡಳಿಯಿಂದ ಮಂಜೂರಾತಿ ಪಡೆಯಲು ಕ್ರಮ ವಹಿಸುವುದಾಗಿ ತಿಳಿಸಿರುತ್ತಾರೆ.
ತಾಳಗುಪ್ಪ – ತಡಸ – ಹೊನ್ನಾವರ – ಶಿರಸಿ – ಹುಬ್ಬಳ್ಳಿ ನೂತನ ರೈಲ್ವೆ ಮಾರ್ಗ ಯೋಜನೆಯ ಸರ್ವೆ ಕಾಮಗಾರಿಯು ಪೂರ್ಣಗೊಂಡಿದೆ. ನೈರುತ್ಯ ರೈಲ್ವೆಯು ಸರ್ವೆ ವರದಿಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಿರುತ್ತದೆ.

ಸಂಸದರು ಈ ಯೋಜನೆ ಮಂಜೂರು ಮಾಡಲು ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್‍ರವರನ್ನು ಈಗಾಗಲೇ ಕೋರಿದ್ದು ನೈರುತ್ಯ ರೈಲ್ವೆಯಿಂದಲು ಸಹ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲು ತಿಳಿಸಲಾಯಿತು.

ಅರಸಾಳು ಮತ್ತು ಹಾರನಹಳ್ಳಿಯಲ್ಲಿ ಮೈಸೂರು-ತಾಳಗುಪ್ಪ-ಮೈಸೂರು ಎಕ್ಸ್‍ಪ್ರೆಸ್ ರೈಲುಗಳ ನಿಲುಗಡೆಯನ್ನು ಮಾಡಲು ಸಂಸದರು ಒತ್ತಾಯಿಸಿದರು. ಈ ಕುರಿತಂತೆ ಅಗತ್ಯ ಕ್ರಮಕೈಗೊಳ್ಳುವುದಾಗಿ ನೈರುತ್ಯ ರೈಲ್ವೆಯವರು ತಿಳಿಸಿರುತ್ತಾರೆ.

ಸಂಸದರು ಬೆಂಗಳೂರು ಹಾಗು ಶಿವಮೊಗ್ಗ ನಗರಗಳ ನಡುವೆ ವಂದೇ ಭಾರತ ರೈಲು ಸೇವೆಯನ್ನು ಆರಂಭಿಸಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಕುರಿತಂತೆ ರೈಲ್ವೆ ಮಂಡಳಿಯ ಅನುಮೋದನೆ ಪಡೆಯಲು ಕ್ರಮ ಕೈಗೊಳ್ಳುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿರುತ್ತಾರೆ.

ಶಿವಮೊಗ್ಗ – ಬೆಂಗಳೂರು ಹಾಗೂ ಮೈಸೂರು ನಡುವೆ ಸಂಚರಿಸುತ್ತಿರುವ ರೈಲುಗಳ ವೇಳಾಪಟ್ಟಿಯಲ್ಲಿ ಕೆಲ ಸಣ್ಣ ಪುಟ್ಟ ಬದಲಾವಣೆಯನ್ನು ಅಳವಡಿಸಿಕೊಳ್ಳುವ ಮೂಲಕ ಈ ರೈಲುಗಳ ಸೇವೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸುವಂತೆ ಮಾಡಲು ಸಂಸದರು ಮನವಿ ಮಾಡಿದರು. ನೈರುತ್ಯ ರೈಲ್ವೆಯು ಈ ಪ್ರಸ್ತಾವನೆಯನ್ನು ಪರಿಶೀಲಿಸಿ ಸಾಧ್ಯವಿರುವಲ್ಲಿ ಶಿಫಾರಸು ಮಾಡುವಂತೆ ಸೂಕ್ತ ಬದಲಾವಣೆಗಳನ್ನು ಮಾಡುವ ನಿಟ್ಟಿನಲ್ಲಿ ರೈಲ್ವೆ ಉನ್ನತ ಅಧಿಕಾರಿಗಳು ತಿಳಿಸಿರುತ್ತಾರೆ ಎಂದು ಸಂಸದರು ತಿಳಿಸಿದ್ದಾರೆ.

Do not re-induct those who left the Congress party ಕಾಂಗ್ರೆಸ್ ಪಕ್ಷ ತೊರೆದವರನ್ನ ಮತ್ತೆ ಸೇರಿಸಿಕೊಳ್ಳಬೇಡಿ-ಮಧುಕುಮಾರ್

0

Do not re-induct those who left the Congress party ಕಾಂಗ್ರೆಸ್ ತೊರೆದು ಇತ್ತೀಚೆಗೆ ಜೆಡಿಎಸ್ ಸೇರ್ಪಡೆಯಾಗಿದ್ದ ಮುಖಂಡರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಮರು ಸೇರ್ಪಡೆ ಮಾಡಿಕೊಳ್ಳಬಾರದು ಎಂದು ಶಿವಮೊಗ್ಗ ಜಿಲ್ಲಾ ಕಾರ್ಮಿಕ ಕಾಂಗ್ರೆಸ್ ವಿಭಾಗದ ಅಧ್ಯಕ್ಷ ಮಧುಕುಮಾರ್.ಜಿ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ದೀಪಕ್ ಸಿಂಗ್ ಮತ್ತಿತರರು ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಆದರೆ, ಶಿವಮೊಗ್ಗ ನಗರದಲ್ಲಿ ಜೆಡಿಎಸ್ ಅಭ್ರ‍್ಥಿ ಸೋಲುತ್ತಿದ್ದಂತೆ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಇದೀಗ ಪುನಃ ಇವರೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಹಿಂದಿರುಗಲು ಪ್ರಯತ್ನಿಸುತ್ತಿದೆ. ಇವರಿಗೆ ಕಾಂಗ್ರೆಸ್ ಪಕ್ಷ ಯಾವುದೇ ಕಾರಣಕ್ಕೂ ಮಣೆ ಹಾಕಬಾರದು ಎಂದು ಮಧು ಮನವಿ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷ ಕೆ.ಬಿ.ಪ್ರಸನ್ನಕುಮಾರ್ ಅವರನ್ನು ಶಾಸಕರನ್ನಾಗಿ ಮಾಡಿತ್ತು. ಅಲ್ಲದೇ, ಮತ್ತೊಂದು ಬಾರಿಯೂ ಚುನಾವಣೆಯಲ್ಲಿ ಸ್ರ‍್ಧಿಸಲು ಅವಕಾಶ ಮಾಡಿಕೊಟ್ಟಿತ್ತು. ಆದರೆ ಚುನಾವಣೆಯಲ್ಲಿ ಬಾರಿ ಅಂತರದಲ್ಲಿ ಸೋಲು ಅನುಭವಿಸಿದ ಕಾರಣಕ್ಕಾಗಿ ಈ ಬಾರಿ ಎಚ್.ಸಿ.ಯೋಗೀಶ್ ಅವರಿಗೆ ಪಕ್ಷ ಅವಕಾಶ ಮಾಡಿಕೊಟ್ಟಿತ್ತು. ಇದನ್ನು ಸಹಿಸಲು ಆಗದ ಪ್ರಸನ್ನಕುಮಾರ್ ಅವರು ಯೋಗೀಶ್ ಅವರನ್ನು ಸೋಲಿಸಲೆಂದೇ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದರು ಎಂದು ಅವರು ತಿಳಿಸಿದ್ದಾರೆ.

Do not re-induct those who left the Congress party ಕೆ.ಬಿ.ಪ್ರಸನ್ನಕುಮಾರ್ ಮತ್ತವರ ತಂಡ ಇದೀಗ ತಮ್ಮ ಅಸ್ತಿತ್ವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ತಮಗೆ ಭವಿಷ್ಯವಿಲ್ಲ ಎಂಬುದು ಅರಿವಾಗುತ್ತಿದ್ದಂತೆ ಮರಳಿ ಕಾಂಗ್ರೆಸ್ಗೆ ಬರಲು ಪ್ರಯತ್ನ ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಕಾಂಗ್ರೆಸ್ ಅಭ್ರ‍್ಥಿಯನ್ನು ಸೋಲಿಸಲೆಂದೇ ಜೆಡಿಎಸ್ ಪಕ್ಷಕ್ಕೆ ಹೋಗಿದ್ದ ಇವರನ್ನು ಪುನಃ ಕಾಂಗ್ರೆಸ್ ಗೆ ಸೇರ್ಪಡೆ ಮಾಡಿಕೊಂಡರೇ ಇಲ್ಲಿನ ನಿಷ್ಟಾವಂತ ಮುಖಂಡರು, ಕಾರ್ಯಕರ್ತರು ಹಾಗೂ ಮತದಾರರಿಗೆ ನೋವುಂಟಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದು ಒತ್ತಾಯಿಸಿದ್ದಾರೆ.

New MLA of Shivamogga City ಶಾಸಕ ಚೆನ್ನಿ ಅವರಿಗೆ ಅಭಿನಂದನಾ ಸಮಾರಂಭ

0

New MLA of Shivamogga City ಶಿವಮೊಗ್ಗ ನಗರದ ನೂತನ ಶಾಸಕರಾದ ಚನ್ನಬಸಪ್ಪ ( ಚೆನ್ನಿ) ಅವರಿಗೆ ಶ್ರೀ ವೈಷ್ಣವ ಮಹಾಪರಿಷತ್ ವತಿಯಿಂದ ಸನ್ಮಾನಿಸಲಾಯಿತು.

New MLA of Shivamogga City ಈ ಸಂದರ್ಭದಲ್ಲಿ ಅಶ್ವತ್ ನಾರಾಯಣ S.P., ಕೃಷ್ಣ ಸ್ವಾಮಿ, ರಾಮಸ್ವಾಮಿ, ಮುದ್ದುರಂಗಯ್ಯ, ಕೇಶವಮೂರ್ತಿ, ಸತೀಶ್ ಶ್ರೀಕಾಂತ್, ಅಶ್ವತ್ ನಾರಾಯಣ B. N. ಮೋಹನ್ ರಾಜು ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Literary Field ಸಾಹಿತ್ಯ ಕ್ಷೇತ್ರದಲ್ಲಿ ವೈಯಕ್ತಿಕ ಅಥವಾ ಆರ್ಥಿಕ ಲಾಭದ ಯೋಚನೆ ಸಲ್ಲದು- ಹಿರೇಮಗಳೂರು ಕಣ್ಣನ್

0

Literary Field ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸತನದೊಂದಿಗೆ ಕಾಲಿಡುವ ಯುವಮನಸ್ಸು ಗಳು ವೈಯಕ್ತಿಕ ಅಥವಾ ಆರ್ಥಿಕ ಲಾಭ ದೃಷ್ಟಿಯಿಂದ ಯೋಚಿಸಿ ಪಾದಾರ್ಪಣೆ ಮಾಡಿದ್ದಲ್ಲಿ ಸಾಹಿತ್ಯ ಹಾಗೂ ಸಂಸ್ಕೃತಿಗೆ ಧಕ್ಕೆಯಾದಂತೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಎಚ್ಚರಿಸಿದರು.

ಚಿಕ್ಕಮಗಳೂರು ತಾಲ್ಲೂಕಿನ ಖಾಂಡ್ಯ ಸಮೀಪದ ಶ್ರೀ ಮಾರ್ಖಾಂಡೇಶ್ವರ ದೇವಾಲಯದ ಆವರಣದಲ್ಲಿ ನಡೆದ ರಾಜ್ಯಮಟ್ಟದ ಕಾವ್ಯಕಮ್ಮಟ ಸಮಾರೋಪ ಸಮಾರಂಭದಲ್ಲಿ ಭಾನುವಾರ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಹಾಸ್ಯ ಹಾಗೂ ಚುಟುಕು ಸಾಹಿತ್ಯದ ಸೊಬಗನ್ನು ಮನಮುಟ್ಟುವಂತೆ ಎಳೆ ಎಳೆಯಾಗಿ ಬಿಚ್ಚಿಟ್ಟರು.

ಕವನ, ಹನಿಗವನ ಹಾಗೂ ಚುಟುಕುಗಳಲ್ಲಿ ಕನ್ನಡ ಪದಗಳ ಪ್ರಯೋಗವನ್ನು ಅತ್ಯಂತ ಸೂಕ್ಷö್ಮವಾಗಿ ಬಳಸುವ ನಿಪುತೆಯನ್ನು ಪಡೆದುಕೊಳ್ಳಬೇಕು. ಸಾಹಿತ್ಯವನ್ನು ಬದುಕಿನಲ್ಲಿ ಯುವಮನಸ್ಸುಗಳು ಅಳವಡಿಸಿಕೊಂಡಲ್ಲಿ ಎಲ್ಲರಿಗೂ ಪ್ರಿಯರಾಗುತ್ತಿರಿ. ಆ ನಿಟ್ಟಿನಲ್ಲಿ ಕನ್ನಡದ ಪದಗಳನ್ನು ಕ್ರಿಯಾಶೀಲರಾಗಿ ಬಳಸಿಕೊಂಡಲ್ಲಿ ಯಶಸ್ಸು ಸಾಧಿಸಬಹುದು ಎಂದರು.

ಸಾಹಿತ್ಯಾಸಕ್ತರು ಕವನಗಳ ರಚನೆ ವೇಳೆಯಲ್ಲಿ ಕೇವಲ ಕಂಠಸ್ಥವಾಗಿ ಅಭ್ಯಾಸಿಸಿದರೆ ಸಾಲದು, ಹೃದಯಸ್ಥ ಮಾಡಿಕೊಳ್ಳಬೇಕು. ಆ ಸಾಲಿನಲ್ಲಿ ನಾಡಿನ ಕುವೆಂಪು, ಬೇಂದ್ರೆ, ಮಾಸ್ತಿ ವೆಂಕಟೇಶ್ ಅಯ್ಯರ್ ಹಾಗೂ ನಿಸಾರ್ ಅಹ್ಮದ್‌ರವರ ಸಾಧನೆ ಅಭೂತಪೂರ್ವವಾದುದು. ಅವರ ಪ್ರತಿಯೊಂದು ಪುಸ್ತಕಗಳು ಯುವ ಪ್ರತಿಭೆಗಳಿಗೆ ಸಂಜೀವಿನಿಯಿದ್ದಂತೆ ಎಂದು ಕಿವಿಮಾತು ಹೇಳಿದರು.

ಡಿವಿಜಿ ಕುರಿತು ಕೆಲವು ಸನ್ನಿವೇಶಗಳನ್ನು ಬಿಡಿಸಿಟ್ಟ ಕಣ್ಣನ್, 80ರ ಆಸುಪಾಸಿನ ಸಾಹಿತಿಯು ಜೀವನದಲ್ಲಿ ನೆಮ್ಮದಿ ಹಾಗೂ ಕುಟುಂಬವನ್ನು ಕಳೆದುಕೊಂಡು ಮುಂದಿನ ಜೀವನ ಎಷ್ಟಿದೆ ಎಂಬುದನ್ನು ಅರಿಯದೇ ಕೊರಗುತ್ತಿರುವಾಗ ಡಿವಿಜಿ ಪತ್ರದ ಮೂಲಕ ಬರೆದು ಕನ್ನಡ ತಾಯಿಗೆ ನಿಮ್ಮ ಸೇವೆ ಅಗತ್ಯವಿದೆ ಎಂದಾಕ್ಷಣ ಆ ವ್ಯಕ್ತಿ ಬದುಕುವ ಆಶಾಭಾವನೆ ಹೊಂದುತ್ತಾನೆ ಅದುವೇ ಸಾಹಿತ್ಯಕ್ಕೀರುವ ಅದ್ಬುತ ಶಕ್ತಿ ಎಂದು ವಿವರಿಸಿದರು.

ಹೊಸತನದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುವ ಯುವಕ, ಯುವತಿಯರು ವಿಚಾರ ವಿನಿಮಯ ಮಾಡಿಕೊಂಡು ಮುಂದುವರೆಯಬೇಕು. ನಮ್ಮ ಸುತ್ತಮುತ್ತಲಿನ ಜನಸಾಮಾನ್ಯರಲ್ಲಿ ನಡೆಯುವ ವಿವಿಧ ಹಾಸ್ಯ ಚುಟುಕು, ಸಂಭಾಷಣೆಗಳು ಹರಿದಾಡುತ್ತಿರುತ್ತೇವೆ. ಅವುಗಳಿಂದ ಸ್ಪೂರ್ತಿ ಪಡೆದು ಯುವಪ್ರತಿಭೆ ಸಾಹಿತ್ಯ ರಚನೆಗೆ ಮುಂದಾಗಬೇಕು ಎಂದು ತಿಳಿಸಿದರು.

Literary Field ಪ್ರಶಸ್ತಿ ವಿತರಿಸಿ ಮಾತನಾಡಿದ ಸಂಸ್ಕೃತಿ ಚಿಂತಕ ಡಾ. ಜೆ.ಪಿ.ಕೃಷ್ಣೇಗೌಡ ಮನುಷ್ಯ ಹುಟ್ಟುವಾಗ ಹೆಸರಿರು ವುದಿಲ್ಲ ಉಸಿರಿರುವುದು, ಸಾವಿನ ನಂತರ ಉಸಿರಿರುವುದಿಲ್ಲ, ಹೆಸರು ಉಳಿಯಲಿದೆ. ಆ ಹೆಸರನ್ನು ಗಗನಕ್ಕೇತ್ತರ ಬೆಳೆಸಲು ಪ್ರತಿಯೊಬ್ಬರು ಆಯಾ ಕ್ಷೇತ್ರಗಳಲ್ಲಿ ಶ್ರಮವಿಟ್ಟು ಕಾರ್ಯನಿರ್ವಹಿಸಿದರೆ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಲು ಸಾಧ್ಯವಾಗಲಿದೆ ಎಂದು ಸಲಹೆ ಮಾಡಿದರು.

ಇಂದಿನ ರಾಜ್ಯಮಟ್ಟದ ಕಾವ್ಯ ಕಮ್ಮಟಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಯುವಮನಸ್ಸುಗಳು, ಸಾಹಿತ್ಯಾಭಿ ಮಾನಿಗಳು ಧಾವಿಸಿ ಎರಡು ದಿನದ ಕಮ್ಮಟ ಕಾರ್ಯಾಗಾರವನ್ನು ಅತಿಹೆಚ್ಚು ಯಶಸ್ಸಿನಿಂದ ಪೂರೈಸಿರುವು ದು ವೈಯಕ್ತಿಕವಾಗಿ ಅತ್ಯಂತ ಖುಷಿ ತಂದಿದೆ ಎಂದ ಅವರು ರಾಜ್ಯಾದ್ಯಂತ ಅತಿಹೆಚ್ಚು ಕನ್ನಡ ಸಾಹಿತ್ಯ ಕಾರ್ಯ ಕ್ರಮಗಳನ್ನು ಚಿಕ್ಕಮಗಳೂರು ಬಿಟ್ಟರೇ ಬರ‍್ಯಾವ ಜಿಲ್ಲೆಯಲ್ಲೂ ಕಂಡಿಲ್ಲ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾgಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಕಾವ್ಯ ಕಮ್ಮಟ ಯಶಸ್ವಿಯಾಗಿ ಪೂರೈಸಲು ಕಸಾಪದ ಮೂರು ಮಂದಿ ಅತ್ಯಂತ ಶ್ರಮವಹಿಸಿ ಕಾರ್ಯನಿರ್ವಹಿಸಿರುವ ಪರಿಣಾಮ ಯಾವುದೇ ಒಂದು ನೂನ್ಯತೆಗಳಿಲ್ಲದೇ ಸಂಪೂರ್ಣವಾಗಿ ಯಶಸ್ಸು ಕಂಡಿದೆ. ಸದ್ಯದಲ್ಲೇ ಶೃಂಗೇರಿಯಲ್ಲಿ ಅಖಿಲ ಭಾರತ ಚುಟುಕು ಸಾಹಿತ್ಯ ಸಮ್ಮೇಳನವನ್ನು ಆಯೋಜನೆ ಮಾಡುವ ಗುರಿ ಹೊಂದಲಾಗಿದ್ದು ಪ್ರತಿಯೊಬ್ಬರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ಕಾವ್ಯಕಮ್ಮಟ ಶಿಬಿರದಲ್ಲಿ ಗುಲ್ಬರ್ಗಾ, ರಾಮನಗರ, ಬಳ್ಳಾರಿ, ಕಾಸರಗೋಡು, ಮಂಗಳೂರು, ಶಿವಮೊಗ್ಗ, ಚಾಮರಾಜನಗರ, ಗದಗ, ಉತ್ತರ ಕನ್ನಡ, ಹುಬ್ಬಳ್ಳಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿ ದಂತಹ ಸುಮಾರು 190ಕ್ಕೂ ಹೆಚ್ಚು ಸಾಹಿತ್ಯಾಭಿಮಾನಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ತಾಲ್ಲೂಕು ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್, ಕಡೂರು ತಾಲ್ಲೂಕು ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ, ಖಾಂಡ್ಯ ಹೋಬಳಿ ಅಧ್ಯಕ್ಷ ಹುಣಸೇಹಳ್ಳಿ ರಾಜಪ್ಪಗೌಡ, ಕಳಸ ತಾಲ್ಲೂಕು ಅಧ್ಯಕ್ಷ ಹಾರ ಸತೀಶ್, ಯುವಸಾಹಿತಿ ಪೃಥ್ವಿ ಸೂರಿ, ಸಾಹಿತಿ ನಾಗಶ್ರೀ ತ್ಯಾಗರಾಜ್, ಕಳಸಾಪುರ ಶಾಲೆ ಪ್ರಾಂಶುಪಾಲ ನಾಗರಾಜ್‌ರಾವ್ ಕಲ್ಕಟ್ಟೆ, ಸಂಸ್ಕೃತಿ ಚಿಂತಕ ಕೆ.ಟಿ. ವೆಂಕಟೇಶ್, ಶೃಂಗೇರಿ ಕಸಾಪ ಕಾರ್ಯದರ್ಶಿ ಸುನೀತಾ, ಕಾಫಿ ಬೆಳೆಗಾರ ಎಸ್.ವಿ.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

Karnataka Congress ಶಾಸಕರು ಶಿಸ್ತಿನ ಸಿಪಾಯಿಗಳಾಗಬೇಕು

0

Karnataka Congress ನಮ್ಮ ಹಿರಿಯರು ಕೆಲವೊಮ್ಮೆ ಕಿರಿಯರ ಅತಿ ಮಾತಿಗೆ ಬೈದು ಹೇಳುವುದುಂಟು. ತಲೆಹರಟೆ ಮಾಡಬೇಡ ತಿಳೀತ? ಅಂತ.
ಇಷ್ಟಾದರೂ ಹಿರಿಯರ ಮಾತನ್ನ
ಸೀರಿಯಸ್ ಆಗಿ ತಗೊಳ್ಳದೇ ಇದ್ದಾಗ ಅಂಥವರನ್ನ ಉಪೇಕ್ಷಿಸುತ್ತಾರೆ.

ಅಂತಹ ಎರಡು ಮಾತಿನ ಸಂಗತಿಗಳು ಮಾಧ್ಯಮಗಳಲ್ಲಿ ಬಿತ್ತರವಾಗಿವೆ.‌

ಗೌರವಾನ್ವಿತ ಸಚಿವ ಎಂ.ಬಿ.ಪಾಟೀಲರು ಇತ್ತೀಚೆಗೆ ಮೈಸೂರಿನಲ್ಲಿ ಪಕ್ಷದ ಹೈಕಮಾಂಡ್ ಸೂಚನೆಯನ್ನ
ಮರೆತು ಮಾತಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ
ಕಗ್ಗಂಟಾಗಿದ್ದ ಸೀಎಂ ಮತ್ತು ಡಿಸಿಎಂ ಸ್ಥಾನಗಳ ಬಗ್ಗೆ ನಡೆದ ಪೈಪೋಟಿ ಎಲ್ಲರಿಗೂ ಗೊತ್ತಿದೆ.
ಆದರೆ ಹೈಕಮಾಂಡ್ ಏನೆಲ್ಲಾ ಸರ್ಕಸ್ ಮಾಡಿ ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನ ಸಂಧಾನದ ಮೂಲಕ
ಒಪ್ಪಿಸಿತ್ತು.

ಪ್ರತಿಯೊಬ್ಬರೂ ಐದು ವರ್ಷದ ಅಧಿಕಾರವನ್ನ ಸಮನಾಗಿ ಹಂಚಿಕೊಳ್ಳಬೇಕೆಂದು ಸೂಚಿಸಿತ್ತು. ಅಷ್ಟೇ ಅಲ್ಲದೇ
ಅಧಿಕಾರ ಹಂಚಿಕೆ ಬಗ್ಗೆ ಸಾರ್ವಜನಿಕ ಚರ್ಚೆ ಮಾಡಕೂಡದೆಂದು ನೀಡಿದ ನಿರ್ದೇಶನ ಮಾಧ್ಯಮಗಳಲ್ಲಿ ಪ್ರಸಾರವಾಗಿ ಹಳತಾಗಿದೆ

ಆದರೂ ಸಚಿವ ಎಂ .ಬಿ. ಪಾಟೀಲರು ಸಿದ್ಧರಾಮಯ್ಯನವರೇ ಪೂರ್ಣಾವಧಿ ಸಿಎಂ ಎಂದೂ ಹೇಳಿಕೆ ನೀಡಿರುವುದು ವರದಿಯಾಗಿದೆ.

ಇದು ಪಕ್ಷದ ಸದಸ್ಯರು ಮತ್ತು ಪಕ್ಷಕ್ಕೆ ಬಿಟ್ಟ ವಿಚಾರ.ಆದರೆ
ರಾಜ್ಯದ ರಾಜಕೀಯದಲ್ಲಿ ಈಗತಾನೇ ಬಹಮತ ಪಡೆದು
ಬಂದ ಕಾಂಗ್ರೆಸ್ ಗೆದ್ದು ಬೀಗುತ್ತಿದ್ದಾಗಲೇ ವಿವಾದಾತ್ಮಕ ಹೇಳಿಕೆ ನೀಡಿದರೆ ವ್ಯಕ್ತಿಗಳ ಬಗ್ಗೆ
ಶಿಸ್ತಿನ ಬಗ್ಗೆ ಸಂದೇಹ ಬರುತ್ತದೆ.

ಈ ಬಗ್ಗೆ ಉಪಮುಖ್ಯಮಂತ್ರಿ
ಡಿ.ಕೆ.ಶಿವಕುಮಾರ್ ಮಾದ್ಯಮಗಳು ಪ್ರತಿಕ್ರಿಯೆ ಕೇಳಿದಾಗ “ನೋ ಕಾಮೆಂಟ್ಸ್ “
ಎಂದಿದ್ದಾರೆ.

Karnataka Congress ಆಡಳಿತಕ್ಕೆ ಬಂದಾಗ ಮುಂದಿನ ದಾರಿ ಸಾಧನೆ ಪ್ರತಿಯೊಬ್ಬರ
ಮುಂದಿರುತ್ತದೆ. ಅಂತಹ ಹೊಣೆ ಇದ್ದಾಗ ಪೂರ್ಣಾವಧಿ ,ಅರ್ಧಾವಧಿ ಇತ್ಯಾದಿ ಕಾಮೆಂಟ್ಸ್ ನೀಡುತ್ತಿದ್ದರೆ
ಪಕ್ಷದೊಳಗೆ, ಸಾರ್ವಜನಿಕರಲ್ಲಿ
ಯಾವಾವ ರೀತಿಯ ಭಾವನೆ ಉಂಟುಮಾಡುತ್ತದೆ ಎಂಬುದನ್ನು ಅವರು ಗಮನಿಸಬೇಕು ಎಂಬುದೇ
ಪರಿಣಿತರು ಹೇಳುವ ಮಾತು.

ಮತ್ತೊಮ್ಮೆ ಮಾಧ್ಯಮದವರಿಗೆ ಸಿಕ್ಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಯಾರು ಏನೇ ಹೇಳಲಿ ಹೈಕಮಾಂಡ್ ನೋಡಿಕೊಳ್ಳುತ್ತದೆ
ಎಂದು ಸ್ವಲ್ಪ ಖಾರವಾಗಿಯೇ ಹೇಳಿದ್ದಾರೆ.

Kimmane Rathnakar ಮತದಾರರಿಗೆ ಆಮಿಷವೊಡ್ಡಿ ಜ್ಞಾನೇಂದ್ರ ಗೆದ್ದಿದ್ದಾರೆ-ಕಿಮ್ಮನೆ ಆರೋಪ

Kimmane Rathnakar ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಪಿ ಎಸೈ ನೇಮಕಾತಿ ಹಗರಣವನ್ನು ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ಒಪ್ಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲು ಕ್ಷೇತ್ರ ಕಾಂಗ್ರೆಸ್ ಘಟಕ ನಿರ್ಣಯಿಸಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಹೇಳಿದರು.

ತೀರ್ಥಹಳ್ಳಿಯ ಗಾಯತ್ರಿ ಮಂದಿರದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಚುನಾವಣೆಯಲ್ಲಿ ಗೆಲ್ಲಲು ಆರಗ ಜ್ಞಾನೇಂದ್ರ ಅವರು 68 ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಿದ್ದಾರೆ. ಚುನಾವಣೆಯಲ್ಲಿ ಜನರು ನನ್ನನ್ನು ಸೋಲಿಸಿಲ್ಲ. ಆರಗ ಜ್ಞಾನೇಂದ್ರ ಚೆಲ್ಲಿದ ಹಣ ನನ್ನನ್ನು ಸೋಲಿಸಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಬಡತನದ ಹೆಸರಲ್ಲಿ ರಾಜಕಾರಣ ಮಾಡಿದ ಆರಗ ಜ್ಞಾನೇಂದ್ರ, ಮತ್ತು ಅವರ ರಕ್ತ ಸಂಬಂಧಿಗಳು ಕೋಟ್ಯಾಂತರ ರೂಪಾಯಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದಾರೆ ಎಂದು ಹೇಳಿದರು.  

ಹೊಸ ಬೈಕ್ ಖರೀದಿಸಲು ಕೆಲ ಯುವಕರಿಗೆ ಮುಂಗಡವಾಗಿ 10,000, ಕೆಲವು ಮಹಿಳಾ ಸಂಘದ ಪದಾಧಿಕಾರಿಗಳಿಗೆ 5 ಸಾವಿರ ರೂ., ಜಾತಿ ಸಂಘಟನೆಯ ಕೆಲವು ಪ್ರಮುಖರಿಗೆ ಭಾರಿ ಮೊತ್ತದ ಹಣ, ಕೇರಿ ಕಾಲೋನಿಯ ಕೆಲವು ಪ್ರಮುಖರಿಗೆ ಹತ್ತರಿಂದ ಇಪ್ಪತ್ತು ಸಾವಿರ ಹಣಕೊಟ್ಟು ಆರಗ ಜ್ಞಾನೇಂದ್ರ ಅವರು ಆಮೀಷ ಒಡ್ಡಿದ್ದಾರೆ ಎಂದು ಹೇಳಿದರು.

Kimmane Rathnakar ಚುನಾವಣೆಯಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಆಧಾರ ಇಲ್ಲದೆ ಯಾರೊಬ್ಬರ ಮೇಲೂ ದೂಷಣೆ ಮಾಡಬಾರದು. ಹೊಂದಾಣಿಕೆ ಮೂಲಕ ಕಾಂಗ್ರೆಸ್ ಬಲವರ್ಧನೆ ನಮ್ಮ ಗುರಿಯಾಗಬೇಕು. ಏನೇ ತೊಂದರೆಯಾದರೂ ಕಾರ್ಯಕರ್ತರು ತಕ್ಷಣ ಸಂಪರ್ಕಿಸಿ. ನಾನು ನಿಮ್ಮ ಜೊತೆ ಜೀವ ಇರುವವರೆಗೂ ಇರುತ್ತೇನೆ ಎಂದು ಕಿಮ್ಮನೆ ರತ್ನಾಕರ್ ಅವರು ಭರವಸೆ ನೀಡಿದರು.

Kudali mutt ಪರಂಪರೆ ಮತ್ತು ಆಚಾರ ವಿಚಾರಗಳ ಮೂಲಕ ನಮ್ಮ ನೆಲೆಗಟ್ಟು ಕಂಡುಕೊಳ್ಳಲು ಸಾಧ್ಯ-ಶ್ರೀ ಅಭಿನವ ಶಂಕರ ಭಾರತಿಶ್ರೀ

0

Kudali mutt ಸಾಂಸ್ಕೃತಿಕ ಗುರುತಿಗೆ ಮಾತ್ರ ಪರಂಪರೆ ಬೇಕಾಗುತ್ತದೆ ಎಂಬುದು ನಮ್ಮೆಲ್ಲರ ಆಶಯವಾಗಿದೆ. ಆದರೆ ಪರಂಪರೆ ಎಂಬುದು ನಮ್ಮನ್ನು ಗುರುತಿಸುವುದರ ಜೊತೆಗೆ ನಮ್ಮನ್ನು ಶತಮಾನಗಳ ಕಾಲ ಮುಂದೆ ತೆಗೆದುಕೊಂಡು ಹೋಗುವ ಕಾರ್ಯ ಮಾಡುತ್ತದೆ. ಜೀವನದಲ್ಲಿ ಸಾಕಷ್ಟು ಏರುಪೇರುಗಳಿದ್ದು, ಅದನ್ನು ಸರಿದೂಗಿಸುವ ಶಕ್ತಿ ಪರಂಪರೆಗೆ ಇರುತ್ತದೆ ಎಂದು ಶ್ರೀಮದ್ ಜಗದ್ಗುರು ಕೂಡಲಿ ಸಂಸ್ಥಾನ ಉತ್ತರಾಧಿಕಾರಿಯಾಗಿ ಸ್ವೀಕರಿಸಿದ ಶ್ರೀ ಅಭಿನವ ಶಂಕರ ಭಾರತಿ ಸ್ವಾಮೀಜಿ ಅವರು ಹೇಳಿದರು.

ಹೊಳೆಹೊನ್ನೂರು ಸಮೀಪದ ಶ್ರೀ ಕ್ಷೇತ್ರ ಕೂಡಲಿ ಸಂಸ್ಥಾನ ನೂತನ ಸನ್ಯಾಸಪೂರ್ವಕ ಶಿಷ್ಯ ಪರಿಗ್ರಹಣ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಮ್ಮ ಜೀವನದ ಎಲ್ಲಾ ವಿಚಾರದಲ್ಲೂ ಪರಂಪರೆ ಎಂಬುದು ಅಳವಡಿಸಿಕೊಂಡರೆ ನಾವು ಮುನ್ನೆಲೆಗೆ ಬರುತ್ತೇವೆ. ಅದನ್ನು ಹೊರತುಪಡಿಸಿದರೆ ಸಾಕಷ್ಟು ಸಮಯ ಮತ್ತು ಪರಿಶ್ರಮ ಹಾಳು ಮಾಡಿಕೊಳ್ಳುತ್ತೇವೆ ಎಂದರು.

Kudali  mutt ನಾವು ಎಲ್ಲಿಯೇ ಹೋದರೂ, ನಮ್ಮ ಪರಂಪರೆ, ನಮ್ಮ ಆಚಾರ ವಿಚಾರಗಳನ್ನು ಮುಂದಿಟ್ಟುಕೊಂಡು ಸಾಕಿದರೆ ಮಾತ್ರ ಭಾರತದಂತಹ ಸಾಂಸ್ಕೃತಿಕ ರಾಷ್ಟ್ರದಲ್ಲಿ ನಮ್ಮ ನೆಲಗಟ್ಟು ಕಂಡುಕೊಳ್ಳಲು ಸಾಧ್ಯ ಎಂದರು.

B. Y. Vijayendra ಶಿಕಾರಿಪುರ ಜನತೆಗೆ ಧನ್ಯವಾದ-ಬಿ.ವೈ.ವಿಜಯೇಂದ್ರ

0

B. Y. Vijayendra ಶಿಕಾರಿಪುರದ ಮಂಗಳ ಭವನದಲ್ಲಿ ಬಿಜೆಪಿ ವತಿಯಿಂದ ಮತದಾರರಿಗೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭ ನಡೆಸಲಾಯಿತು.

ಈ ವೇಳೆ‌ ಮಾತನಾಡಿ ನೂತನ ಶಾಸಕ‌ ಬಿವೈ ವಿಜಯೇಂದ್ರ ಅವರು, ಶಿಕಾರಿಪುರ ತಾಲೂಕಿನಲ್ಲಿ ತಂದೆ ಬಿ.ಎಸ್ ಯಡಿಯೂರಪ್ಪನವರು ಸಹೋದರ ಸಂಸದ ಬಿವೈ ರಾಘವೇಂದ್ರ‌ ಅವರು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಅವರ ಹಾದಿಯಲ್ಲಿ ನಾನು ತಾಲೂಕಿನ‌ ಜನರ ಸೇವೆ ಮಾಡಲು ಬದ್ದನಾಗಿದ್ದು, ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿಕೊಂಡು‌ ಹೋಗುತ್ತೇನೆ ಎಂದರು.

ನನ್ನ ಮೊದಲ ಚುನಾವಣೆಯಲ್ಲಿ ತಾಲೂಕಿನ‌ ಹಿರಿಯ ಕಿರಿಯ ಕಾರ್ಯಕರ್ತರು ಸಾಕಷ್ಟು ಶ್ರಮವಹಿಸಿ ಜಯ ಗಳಿಸಲು ಸಹಕಾರ ನೀಡಿದ್ದಾರೆ. ಇದು ಕಾರ್ಯಕರ್ತರ ಗೆಲುವು ಬಿಜೆಪಿ ಗೆಲುವು ಎಲ್ಲಾ ಮತದಾರರಿಗೆ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಈ ವೇಳೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರು ಮಾತನಾಡಿ, ಪುತ್ರ ಬಿವೈ ವಿಜಯೇಂದ್ರರವರ ಮೊದಲ ಚುನಾವಣೆಯಲ್ಲಿ ತಾಲೂಕಿನ ಮತದಾರರು ಆರ್ಶಿವಾದ ಮಾಡಿ ಅವರಿಗೆ ಶಕ್ತಿ ತುಂಬಿದ್ದಾರೆ. ನಿಮ್ಮ ಎಲ್ಲಾ ಪ್ರೀತಿ ವಿಶ್ವಾಸ ಅಭಿಮಾನ ಅವರು ಉಳಿಸಿಕೊಂಡು ಹೊಗಲಿದ್ದಾರೆ ಎಂದರು.

B. Y. Vijayendra ಈ‌ ಸಂದರ್ಭದಲ್ಲಿ ಸಂಸದ ಬಿ.ವೈ ರಾಘವೇಂದ್ರ, ಎಂಎಲ್ ಸಿ ರುದ್ರೆಗೌಡ,ಬಿಜೆಪಿ ಜಿಲ್ಲಾಧ್ಯಕ್ಷರಾದ ಟಿಡಿ ಮೇಘರಾಜ್‌, ಮುಖಂಡರಾದ
ಕೆ.ಎಸ್ ಗುರುಮೂರ್ತಿ, ಕೆ.ರೇವಣ್ಣಪ್ಪ, ಕೆ.ಹಾಲಪ್ಪ, ಚನ್ನವೀರಪ್ಪ, ಟಿ.ಎಸ್ ಮೋಹನ್,ಹೆಚ್ ಟಿ ಬಳಿಗಾರ್ ,ರಾಜಣ್ಣ ಕಬಾಡಿ,ರೇಖಾಬಾಯಿ ಮಂಜುಸಿಂಗ್, ವಿರೇಂದ್ರ ಪಾಟೀಲ್ ಇನ್ನೂ ಮುಂತಾದ ಗಣ್ಯರು ಉಪಸ್ಥಿತರಿದ್ದರು.