Thursday, June 18, 2026
Thursday, June 18, 2026

B. Y. Vijayendra ಶಿಕಾರಿಪುರ ಜನತೆಗೆ ಧನ್ಯವಾದ-ಬಿ.ವೈ.ವಿಜಯೇಂದ್ರ

Date:

B. Y. Vijayendra ಶಿಕಾರಿಪುರದ ಮಂಗಳ ಭವನದಲ್ಲಿ ಬಿಜೆಪಿ ವತಿಯಿಂದ ಮತದಾರರಿಗೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭ ನಡೆಸಲಾಯಿತು.

ಈ ವೇಳೆ‌ ಮಾತನಾಡಿ ನೂತನ ಶಾಸಕ‌ ಬಿವೈ ವಿಜಯೇಂದ್ರ ಅವರು, ಶಿಕಾರಿಪುರ ತಾಲೂಕಿನಲ್ಲಿ ತಂದೆ ಬಿ.ಎಸ್ ಯಡಿಯೂರಪ್ಪನವರು ಸಹೋದರ ಸಂಸದ ಬಿವೈ ರಾಘವೇಂದ್ರ‌ ಅವರು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಅವರ ಹಾದಿಯಲ್ಲಿ ನಾನು ತಾಲೂಕಿನ‌ ಜನರ ಸೇವೆ ಮಾಡಲು ಬದ್ದನಾಗಿದ್ದು, ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿಕೊಂಡು‌ ಹೋಗುತ್ತೇನೆ ಎಂದರು.

ನನ್ನ ಮೊದಲ ಚುನಾವಣೆಯಲ್ಲಿ ತಾಲೂಕಿನ‌ ಹಿರಿಯ ಕಿರಿಯ ಕಾರ್ಯಕರ್ತರು ಸಾಕಷ್ಟು ಶ್ರಮವಹಿಸಿ ಜಯ ಗಳಿಸಲು ಸಹಕಾರ ನೀಡಿದ್ದಾರೆ. ಇದು ಕಾರ್ಯಕರ್ತರ ಗೆಲುವು ಬಿಜೆಪಿ ಗೆಲುವು ಎಲ್ಲಾ ಮತದಾರರಿಗೆ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಈ ವೇಳೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರು ಮಾತನಾಡಿ, ಪುತ್ರ ಬಿವೈ ವಿಜಯೇಂದ್ರರವರ ಮೊದಲ ಚುನಾವಣೆಯಲ್ಲಿ ತಾಲೂಕಿನ ಮತದಾರರು ಆರ್ಶಿವಾದ ಮಾಡಿ ಅವರಿಗೆ ಶಕ್ತಿ ತುಂಬಿದ್ದಾರೆ. ನಿಮ್ಮ ಎಲ್ಲಾ ಪ್ರೀತಿ ವಿಶ್ವಾಸ ಅಭಿಮಾನ ಅವರು ಉಳಿಸಿಕೊಂಡು ಹೊಗಲಿದ್ದಾರೆ ಎಂದರು.

B. Y. Vijayendra ಈ‌ ಸಂದರ್ಭದಲ್ಲಿ ಸಂಸದ ಬಿ.ವೈ ರಾಘವೇಂದ್ರ, ಎಂಎಲ್ ಸಿ ರುದ್ರೆಗೌಡ,ಬಿಜೆಪಿ ಜಿಲ್ಲಾಧ್ಯಕ್ಷರಾದ ಟಿಡಿ ಮೇಘರಾಜ್‌, ಮುಖಂಡರಾದ
ಕೆ.ಎಸ್ ಗುರುಮೂರ್ತಿ, ಕೆ.ರೇವಣ್ಣಪ್ಪ, ಕೆ.ಹಾಲಪ್ಪ, ಚನ್ನವೀರಪ್ಪ, ಟಿ.ಎಸ್ ಮೋಹನ್,ಹೆಚ್ ಟಿ ಬಳಿಗಾರ್ ,ರಾಜಣ್ಣ ಕಬಾಡಿ,ರೇಖಾಬಾಯಿ ಮಂಜುಸಿಂಗ್, ವಿರೇಂದ್ರ ಪಾಟೀಲ್ ಇನ್ನೂ ಮುಂತಾದ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...

ಸಮಾನತೆ, ಸ್ವಾವಲಂಬನೆ ಸಾಧಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಅಪಾರ : ಶ್ರೀರಂಭಾಪುರಿಶ್ರೀ

ಸಮಾನತೆ, ಸ್ವಾವಲಂಬನೆ ಸಾಧನೆಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವವಾದದು. ಅಭಿವೃದ್ಧಿಯನ್ನು ಸಾಧಿಸಲು...