Saturday, August 8, 2026
Saturday, August 8, 2026
Home Blog Page 140

ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆಗಳು ಕೇವಲ ಬೈ – ಎಲೆಕ್ಷನ್ ಅಲ್ಲ- ಆರ್.ಅಶೋಕ್

0

ಕಾಂಗ್ರೆಸ್ ಸರ್ಕಾರಕ್ಕೆ ಕರ್ನಾಟಕದ ಜನರು ದಾವಣಗೆರೆ ಮತ್ತು ಬಾಗಲ ಕೋಟೆ ಉಪಚುನಾವಣೆಅ ಸನ್ನಿವೇಶದಲ್ಲಿ ಹೇಳುತ್ತಿರುವ “ಟಾಟಾ… ಟಾಟಾ… ಬೈ ಬೈ ಎಲೆಕ್ಷನ್!” ಎಂದು ವಿಪಕ್ಷ ನಾಯಕ ಆರ್ .ಅಶೋಕ್ ಕಾಂಗ್ರೆಸ್ ಪಕ್ಷದ ಸರ್ಕಾರದ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ನಾಯಕರು “ಅನುಕಂಪದ ಅಲೆ” ಬಗ್ಗೆ ಕನಸು ಕಾಣುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಈ ಕಾಣುತ್ತಿರುವುದು ಅನುಕಂಪದ ಅಲೆ ಅಲ್ಲ, ಜನಾಕ್ರೋಶದ ಅಲೆ!

ಕಳೆದ ಮೂರು ವರ್ಷಗಳಲ್ಲಿ ಸಿಎಂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು
ಜನರ ಮೇಲೆ ತೆರಿಗೆ ಭಾರ ಹೇರಿದೆ. ದಿನನಿತ್ಯದ ಬಳಕೆ ವಸ್ತುಗಳು ಮತ್ತು ಸೇವೆಗಳ ಬೆಲೆ ಏರಿಕೆ ಮಾಡಿದೆ.
ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗಿದೆ.
ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಅಧೋಗತಿಗೆ ತಳ್ಳಿದೆ.
ಕನ್ನಡಿಗರನ್ನು ಸಾಲದ ಸುಳಿಗೆ ಸಿಲುಕಿಸಿದೆ ಅಭಿವೃದ್ಧಿಯನ್ನು ಮರೀಚಿಕೆಯಾಗಿಸಿದೆ .

ಒಂದು ಕೈಯಲ್ಲಿ ಗ್ಯಾರಂಟಿ ಕೊಡುವ ನಾಟಕವಾಡಿ, ಇನ್ನೊಂದು ಕೈಯಲ್ಲಿ ತೆರಿಗೆ ಮತ್ತು ಬೆಲೆ ಏರಿಕೆಯಿಂದ ಜನರ ಜೇಬಿಗೆ ಕನ್ನ ಹಾಕುವ ಪಿಕ್ ಪಾಕೆಟ್ ನಡೆಯುತ್ತಿದೆ.

ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆ ಕೇವಲ ಎರಡು ಕ್ಷೇತ್ರಗಳ ಚುನಾವಣೆ ಅಲ್ಲ.

ಇದು ದುರಾಡಳಿತ, ಭ್ರಷ್ಟಾಚಾರ ಮತ್ತು ಜನವಿರೋಧಿ ನೀತಿಗಳ ವಿರುದ್ಧ ಕನ್ನಡಿಗರು ನೀಡಲಿರುವ ಎಚ್ಚರಿಕೆಯ ಗಂಟೆ.

ಜನಸಾಮಾನ್ಯರು ಈ ನಾಲಾಯಕ್ ಕಾಂಗ್ರೆಸ್ ಸರ್ಕಾರಕ್ಕೆ ಬುದ್ಧಿ ಕಲಿಸುವ ನಿರ್ಧಾರ ಮಾಡಿದ್ದಾರೆ.

ಕಾಂಗ್ರೆಸ್ ಸರ್ಕಾರಕ್ಕೆ ಜನರಿಂದ ಬರುತ್ತಿರುವ ಸಂದೇಶ ಸ್ಪಷ್ಟ – “ಟಾಟಾ… ಟಾಟಾ… ಬೈ ಬೈ!” ಕಟುವಾಗಿ ಆರ್.ಅಶೋಕ್ ಕಾಂಗ್ರೆಸ್ ಪಕ್ಷದ ಆಡಳಿತ ವೈಖರಿ ಮೇಲೆ ಟೀಕಾಸ್ತ್ರ ಪ್ರಯೋಗಮಾಡಿದ್ದಾರೆ

CM Siddharamaiah ಆರೋಗ್ಯ ಕ್ಷೇತ್ರಕ್ಕೆ ಸರ್ಕಾರದಿಂದ ಹಚ್ಚಿನ ಮುತುವರ್ಜಿವಹಿಸಲಾಗಿದೆ- ಮುಖ್ಯಮಂತ್ರಿ ಸಿದ್ಧರಾಮಯ್ಯ

0

CM Siddharamaiah ನಮ್ಮ ಸರ್ಕಾರವು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಮುತುವರ್ಜಿ ನೀಡುತ್ತಿದ್ದು, ಸ್ವಸ್ಥ ಸಮಾಜ – ಸದೃಢ ಕರ್ನಾಟಕ ಧ್ಯೇಯದಡಿ ಕಾರ್ಯನಿರ್ವಹಿಸುತ್ತಿದೆ.
ಸುಸಜ್ಜಿತ ಆಸ್ಪತ್ರೆಗಳ ನಿರ್ಮಾಣ, ಉಚಿತ ಚಿಕಿತ್ಸೆ, ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆ, ಗಂಭೀರ ಕಾಯಿಲೆಗಳಿಗೆ ಅಗ್ಗದ ದರದಲ್ಲಿ ಚಿಕಿತ್ಸೆ, ಹೆಣ್ಣುಮಕ್ಕಳು ವಿಶೇಷವಾಗಿ ತಾಯಂದಿರು ಹಾಗೂ ಮಕ್ಕಳ ಆರೋಗ್ಯಕ್ಕೆ ಹೆಚ್ಚಿನ ಮಹತ್ವವನ್ನು ನೀಡುವ ಮೂಲಕ ಸ್ವಸ್ಥ ಕರ್ನಾಟಕ ನಿರ್ಮಾಣದತ್ತ ದಿಟ್ಟ ಹೆಜ್ಜೆಯಿಟ್ಟಿದೆ ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ರಾಜ್ಯದ ಎಲ್ಲಾ ವರ್ಗದ, ಎಲ್ಲಾ ಪ್ರದೇಶದ ಜನತೆಗೆ ಆರೋಗ್ಯಯುತ ನೆಮ್ಮದಿಯ ಬದುಕನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳು, ಯೋಜನೆಗಳ ವಿವರ ಹೀಗಿದೆ.

ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ತೃತೀಯ ಹಂತದ ಕ್ಯಾನ್ಸರ್‌ ಆರೈಕೆ ಒದಗಿಸಲು ಕ್ಯಾನ್ಸರ್‌ ಆಸ್ಪತ್ರೆ ಮುನಿರಾಬಾದ್‌ – ಟಿ.ಬಿ. ಡ್ಯಾಂನಲ್ಲಿ ಸ್ಥಾಪನೆ

ಬೆಂಗಳೂರಿನ ವಾಣಿ ವಿಲಾಸ್‌ ಆಸ್ಪತ್ರೆ ಮತ್ತು ಕಲಬುರಗಿಯ ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಐವಿಎಫ್‌ ಕೇಂದ್ರಗಳನ್ನು ಸ್ಥಾಪಿಸಲು ತಲಾ 1 ಕೋಟಿ ರೂ. ಮೀಸಲು

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ಎಂದು ಮರುನಾಮಕರಣ

CM Siddharamaiah ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳು ಮತ್ತು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣ ಕಾಮಗಾರಿಗೆ ₹620 ಕೋಟಿ ಅನುದಾನ ಮತ್ತು ಉಪಕರಣಗಳ ಖರೀದಿಗಾಗಿ ₹220 ಕೋಟಿ ಮೀಸಲು ಇರಿಸಿದೆ ಎಂದು ತಿಳಿಸಿದ್ದಾರೆ.

ಆನಂದವು ಹೃದಯ ಮತ್ತು ಆತ್ಮಕ್ಕೆ ಆಗುವ ಅನುಭವ- ಡಾ.ಹೆಚ್.ಬಿ.ಮಂಜುನಾಥ್

0

ಸುಖ ಸಂತೋಷಗಳು ದೇಹ ಮತ್ತು ಮನಸ್ಸಿಗೆ ಆಗುವ ಅನುಭವಗಳಾದರೆ ಆನಂದವು ಹೃದಯ ಮತ್ತು ಆತ್ಮಕ್ಕೆ ಆಗುವ ಅನುಭವ ಎಂದು ಹಿರಿಯ ಪತ್ರಕರ್ತ ಡಾ. ಎಚ್. ಬಿ. ಮಂಜುನಾಥ ಹೇಳಿದರು.

ಕುವೆಂಪು ಕನ್ನಡ ಭವನದಲ್ಲಿ ನಾಟ್ಯ ಭಾರತಿ ಶಾಸ್ತ್ರೀಯ ನೃತ್ಯ ಸಂಗೀತ ಕಲಾ ಕೇಂದ್ರದ ವತಿಯಿಂದ ಏರ್ಪಾಡಾಗಿದ್ದ ಪುರಂದರ ದಾಸರ, ತ್ಯಾಗರಾಜರ ಹಾಗೂ ವಾಗ್ಗೇಯಕಾರರ ಸ್ಮರಣೋತ್ಸವದ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಭಯ, ಶೋಕ, ಮೋಹಗಳಿಲ್ಲದ ಆನಂದದ ಅನುಭವವು ನಮಗೆ ಗಾಢ ನಿದ್ರೆಯಲ್ಲಿ ಆಗುತ್ತಿದ್ದು ಇದನ್ನು ಎಚ್ಚರದಲ್ಲೂ ಹೊಂದಲು ಭಾರತೀಯ ವಾದ ಶಾಸ್ತ್ರೀಯ ಸಂಗೀತ, ನೃತ್ಯ, ಸಾಹಿತ್ಯ, ಲಲಿತ ಕಲಾದಿಗಳಿಂದ ಸಾಧ್ಯ ಎಂದು ಹೇಳಿದರು.
ಕಠಿಣ ತರವಾಗಿದ್ದ ಶಾಸ್ತ್ರೀಯ ಸಂಗೀತವನ್ನು ಮಕ್ಕಳು ಸಹಾ ಸುಲಭವಾಗಿ ಕಲಿಯುವಂತೆ ಸರಳೀಕರಣ ಗೊಳಿಸಿ ಕೊಟ್ಟವರು ದಾಸ ಶ್ರೇಷ್ಠ ಪುರಂದರದಾಸರು. ಇಂತಹ ಕರ್ನಾಟಕ ಶಾಸ್ತ್ರೀಯ ಸಂಗೀತದ ರಾಗಗಳಿಗೆ ಕೃತಿಗಳನ್ನು ರಚಿಸಿ ಕೊಟ್ಟವರು ತ್ಯಾಗರಾಜ ಭಾಗವತರು ಮುಂತಾಗಿ ಅನೇಕ ವಾಗ್ಗೇಯಕಾರರು, ಇಂತಹ ಶಾಸ್ತ್ರಿಯ ಕಲೆಗಳನ್ನು ತಾವೂ ಕಲಿತು ಮಕ್ಕಳಿಗೂ ಕಲಿಯಲು ಪ್ರೋತ್ಸಾಹಿಸುವ ಪೋಷಕರು ಅಭಿನಂದನಾರ್ಹರು ಎಂದರು.

ಮತ್ತೋರ್ವ ಮುಖ್ಯ ಅತಿಥಿಗಳಾಗಿ ಮಾತನಾಡಿದ ಹಿರಿಯ ಹಿಂದೂಸ್ತಾನಿ ಸಂಗೀತ ಕಲಾವಿದರಾದ ಭೀಮಸೇನ ರಂಗಾಚಾರ್ ಜೋಶಿಯವರು ಹಾಡಲು ಪ್ರಯತ್ನಿಸುವವರಿಗೆ ಸ್ವರ ಲಯಗಳು ತಾನಾಗಿಯೇ ಬರಬಹುದು ಆದರೆ ರಾಗ ತಾಳಗಳು ಮಾತ್ರ ಗುರುಗಳಿಂದಲೇ ಕಲಿಯಬೇಕಾದ್ದು ಎಂದರು.
ಗೌರವ ಉಪಸ್ಥಿತಿಯಲ್ಲಿ ಮಾತನಾಡಿದ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಿ ವಾಮದೇವಪ್ಪ ತೊಗಲೇರಿಯವರು ಶಾಸ್ತ್ರೀಯ ಸಂಗೀತ ನೃತ್ಯ ಸಾಹಿತ್ಯಗಳ ಕಲಿಕೆ, ಪ್ರಸ್ತುತಿ ಹಾಗೂ ಅಸ್ವಾದನೆಗಳು ಸುಸಂಸ್ಕೃತಿಯ ಲಕ್ಷಣ ಎಂದರು.
ನಾಟ್ಯ ಭಾರತಿಯ ಅಧ್ಯಕ್ಷೆ ವಿದುಷಿ ಶ್ರೀಮತಿ ರಜನಿ ರಘುನಾಥ ಕುಲಕರ್ಣಿ ಅಧ್ಯಕ್ಷತೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ವಿಜಯ ಕುಮಾರ್ ಕಲಮದಾನಿಯವರ ಉಪಸ್ಥಿತಿಯಲ್ಲಿ ನೃತ್ಯ ಶಿಕ್ಷಕ ವಿದ್ವಾನ್ ಶ್ರೀನಿಧಿ ಆರ್ ಕುಲಕರ್ಣಿ ಸ್ವಾಗತ ಕೋರಿದರು.
ಕಲಾ ಕೇಂದ್ರದ ಹಿರಿಕಿರಿಯ ವಿದ್ಯಾರ್ಥಿಗಳು ವೈವಿಧ್ಯಮಯ ಸಂಗೀತ ಕೃತಿಗಳನ್ನು ಪ್ರಸ್ತುತಪಡಿಸುವಾಗ ಹಾರ್ಮೋನಿಯಂ ಹಾಗೂ ತಬಲಾ ಸಹವಾದ್ಯವನ್ನು ಕ್ರಿಸ್ತಾನಂದ ಮತ್ತು ಭರತೇಶ್ ನೀಡಿದರು. ಬಿ ವಿ ರಾಜಶೇಖರ್, ವಿಶ್ವನಾಥ್, ಜಯಶ್ರೀ ಮುಂತಾದವರು ಸಹಕರಿಸಿದರು.

Sri Kala Skill Development Centre ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಕಾ. ಎಂ.ಲಿಂಗಪ್ಪ ಸ್ಮಾರಕ ಪ್ರಶಸ್ತಿ ಘೋಷಣೆ

0

Sri Kala Skill Development Centre ಶಿವಮೊಗ್ಗ ನಗರದಲ್ಲಿ ಪತ್ರಕರ್ತರಾಗಿ, ಸಮಾಜಮುಖಿ ದನಿಯಾಗಿ ಅವರ ೯೬ ವರ್ಷದ ಪ್ರಾಯದವರಿಗೂ ದಣಿವರಿಯದ ಸೇವೆ ಸಲ್ಲಿಸಿ ಮಲೆನಾಡಿನ ಹೋರಾಟದ ಈ ನೆಲೆಯಲ್ಲಿ ಶಾಸನವಾದ ಹಿರಿಯ ಪತ್ರಕರ್ತರಾದ ಕಾಮ್ರೆಡ್ ಎಂ ಲಿಂಗಪ್ಪ ಅವರ ಹೆಸರಿನಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಐವರಿಗೆ ಏ.9ರಂದು ಆರ್.ಟಿ.ಓ ರಸ್ತೆಯ ಶ್ರೀ ಕಲಾ ಕೌಶಲ್ಯ ಅಭಿವೃದ್ಧಿ ಕೇಂದ್ರದ ಆವರಣದಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ ಸಂಸ್ಥೆಯು ತಿಳಿಸಿದೆ.

ಈ ಪ್ರಶಸ್ತಿಯು ಮಾದರಿಯಾಗಿದ್ದು ಅಲ್ಲದೆ, ಪ್ರಶಸ್ತಿಗೆ ಭಾಜನರಾದವರಿಗೆ ಸ್ಪೂರ್ತಿ ಹಾಗೂ ಜವಾಬ್ದಾರಿಯು ಆಗಿದೆ ಎಂದು ಹೇಳಿದೆ, ನಿಷ್ಟೆಯ ಸೇವೆ, ಹೋರಾಟಗಳ ಮುಖೇನ ತಮ್ಮನ್ನು ತಾವು ಗುರುತಿಸಿಕೊಂಡಿದ್ದ ಪತ್ರಕರ್ತರಾದ ಕಾಮ್ರೆಡ್ ಎಂ ಲಿಂಗಪ್ಪನವರು ನಾಡು ಕಂಡ ಮೊದಲ ಆಗ್ರಮಾನ್ಯರು ಅಲ್ಲದೆ ಚಿರಪರಿಚಿತರಾಗಿದ್ದು, ಅವರ ಧರಿಸುತ್ತಿದ್ದ ವಸ್ತ್ರಗಳು, ಹೋರಾಟಕ್ಕೆ ಬಳಸುತ್ತಿದ್ದ ಜಾಗಟೆಗಳಿಂದ ಸಾಮಾಜಿಕ ನ್ಯಾಯ ದಕ್ಕಿಸಿಕೊಳ್ಳುವಲ್ಲಿ ಮುಖ್ಯ ಪಾತ್ರವಾಗಿತ್ತು, ಇಂತಹ ಮುತ್ಸದ್ಧಿತನದ ಹೆಸರಿನಲ್ಲಿ ಈ ವರುಷದಿಂದ ಕಾಮ್ರೆಡ್ ಎಂ ಲಿಂಗಪ್ಪ ಪ್ರಶಸ್ತಿ ನೀಡುವ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು ಅವರೊಂದಿಗೆ ಒಡನಾಟವಿದ್ದವರು, ಸ್ನೇಹಿತರು, ಹಿತೈಷಿಗಳು ಕಾರ್ಯಕ್ರಮಕ್ಕೆ ಮುಕ್ತವಾಗಿ ಬರುವಂತೆ ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ ಸಂಸ್ಥೆಯು ಈ ಮೂಲಕ ವಿನಂತಿಸಿದೆ.

ಪ್ರಶಸ್ತಿಗೆ ಭಾಜನರಾದವರು : ಸಿನಿಮಾ ರಂಗದಿಂದ ಸನ್ಮಾನ್ಯ ಶ್ರೀ ರಘುರಾಜ್ ಮಲ್ನಾಡ್, ಪತ್ರಕರ್ತ ವಲಯದಿಂದ ಸನ್ಮಾನ್ಯ ಶ್ರೀ ರೇಣುಕೇಶ್,
ಲೇಖಕರ ವಲಯದಿಂದ ಸನ್ಮಾನ್ಯ ಶ್ರೀ ಖಲಂದರ್ ರಜ್ವಿ ಬೆಜ್ಜವಳ್ಳಿ, ಕನ್ನಡ ಸೇವಾ ವಲಯದಿಂದ ಕೆ. ಪ್ರಸನ್ನ ಗೌಡ ವಕೀಲರ ವಲಯದಿಂದ ರೇಖೇಶ್ ಮಾನೆ ಇಂತಿವರುಗಳಾಗಿರುತ್ತಾರೆ,

Sri Kala Skill Development Centre ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ : ಡಿ.ರವಿಕುಮಾರ್, ಸಂಸ್ಥಾಪಕರು, ಅಕ್ಷರ ಎಜ್ಯುಕೇಷನ್ ಟ್ರಸ್ಟ್. ಜಿ.ಗೋಪಾಲಕೃಷ್ಣ, ಮಾಜಿ ಪಾಲಿಕೆ ಸದಸ್ಯರು. ಶಿವಮೊಗ್ಗ. ಕಲೀಮ್ ಪಾಷಾ, ಅಧ್ಯಕ್ಷರು ದಕ್ಷಿಣ ಬ್ಲಾಕ್ ಕಾಂಗ್ರೆಸ್, ಶಿವಮೊಗ್ಗ. ಗೀತಾ ಮಾನೆ, ವಕೀಲರು, ಶಿವಮೊಗ್ಗ.
ನಟರಾಜ್ ಆರ್.ಟಿ, ಸಂಚಾಲಕ, ಹಿಂದೂಳಿದ ಜನಜಾಗೃತಿ ಸಮಿತಿ. ಕುಮರೇಶ್.ಎನ್, ಉದ್ಯಮಿಗಳು, ಶಿವಮೊಗ್ಗ ಅವರುಗಳು ಆಗಮಿಸಲಿದ್ದಾರೆ ಎಂದು ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ ಸಂಸ್ಥೆಯು ತಿಳಿಸಿದೆ.

ಮೆಕ್ಕೆಜೋಳ ಬೆಳೆಗೆ ವಿಮೆ ಪರಿಹಾರ ಪಡೆಯದ ರೈತರು ಆಕ್ಷೇಪಣೆ ಸಲ್ಲಿಸಲು ಅವಕಾಶ

0

2024ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ‘ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ’ ಅಡಿಯಲ್ಲಿ ಮೆಕ್ಕೆಜೋಳ ಬೆಳೆಗೆ ವಿಮೆ ಮಾಡಿಸಿ, ತಾಂತ್ರಿಕ ಕಾರಣಗಳಿಂದ ಪರಿಹಾರ ಲಭಿಸದ ರೈತರಿಗೆ ಆಕ್ಷೇಪಣೆ ಸಲ್ಲಿಸಲು ಕೃಷಿ ಇಲಾಖೆ ಅವಕಾಶ ನೀಡಿದೆ.

ಬೆಳೆ ಸಮೀಕ್ಷೆಯ ಫೋಟೋಗಳು ಮತ್ತು ವಿಮೆ ಮಾಡಿಸಿದ ಬೆಳೆಗಳ ನಡುವೆ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಕೆಲವು ಅರ್ಜಿಗಳನ್ನು ವಿಮಾ ಸಂಸ್ಥೆಯು ತಿರಸ್ಕರಿಸಿದೆ.

ಇಂತಹ ತಿರಸ್ಕೃತಗೊಂಡ ಅರ್ಜಿಗಳ ಪಟ್ಟಿಯನ್ನು ಆಯಾ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸಲಾಗಿದೆ.
ಯಾವ ರೈತರಿಗೆ ಇನ್ನೂ ವಿಮೆ ಪರಿಹಾರ ಬಂದಿಲ್ಲವೋ, ಅವರು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಪಟ್ಟಿಯನ್ನು ಪರಿಶೀಲಿಸಬೇಕು.

ತಮ್ಮ ಹೆಸರು ತಿರಸ್ಕೃತ ಪಟ್ಟಿಯಲ್ಲಿದ್ದರೆ, 2024ರ ಮುಂಗಾರು ಹಂಗಾಮಿನ ಪಹಣಿ (ಇದರಲ್ಲಿ ವಿಮೆ ಮಾಡಿಸಿದ ಬೆಳೆ ನಮೂದಾಗಿರಬೇಕು), ಬೆಂಬಲ ಬೆಲೆ ಯೋಜನೆಯಲ್ಲಿ ಪ್ರಯೋಜನೆ ಪಡೆದಿರುವ ಬಗ್ಗೆ ರಸೀದಿ, ಪಶು ಆಹಾರ ಘಟಕಕ್ಕೆ ನೀಡಿದ ಬಗ್ಗೆ ಅಥವಾ ಎಪಿಎಂಸಿ ಮಾರುಕಟ್ಟೆಗೆ ಉತ್ಪನ್ನಗಳನ್ನು ಮಾರಾಟ ಮಾಡಿದ ರಸೀದಿಗಳೊಂದಿಗೆ ಲಿಖಿತ ಮನವಿಯನ್ನು ಸಲ್ಲಿಸಬಹುದು.

ಆಕ್ಷೇಪಣೆ ಸಲ್ಲಿಸಲು ಏಪ್ರಿಲ್ 25 ಕೊನೆಯ ದಿನಾಂಕವಾಗಿದೆ. ಸಲ್ಲಿಕೆಯಾದ ಮನವಿಗಳನ್ನು ತಾಲೂಕು ಮಟ್ಟದ ತಹಶೀಲ್ದಾರರ ಅಧ್ಯಕ್ಷತೆಯ ಸಮಿತಿಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಶಿವಮೊಗ್ಗ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

B.Y. Raghavendra ಹೊಸನಗರಕ್ಕೆ ಮೊದಲಿನ ರಾಜಕೀಯ ಅಸ್ಮಿತೆ ಮರಳಿ ಸಿಗಬೇಕು- ಸಂಸದ ಬಿ.ವೈ.ರಾಘವೇಂದ್ರ

0

B.Y. Raghavendra ರಿಪ್ಪನ್‌ಪೇಟೆಯಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ವಿವಿಧ ಮಠಾಧೀಶರು, ಹೋರಾಟ ಸಮಿತಿಯ ಪ್ರಮುಖರು ಹಾಗೂ ಸಾವಿರಾರು ಸಾರ್ವಜನಿಕರೊಂದಿಗೆ ಪಾಲ್ಗೊಂಡು ಜನರ ಭಾವನೆಗಳಿಗೆ ಸಾಕ್ಷಿಯಾಗಲಾಯಿತು. ಈ ಪವಿತ್ರ ಹೋರಾಟದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುವ ಮೂಲಕ ಹೊಸನಗರದ ಸ್ವಾಭಿಮಾನದ ಧ್ವನಿಗೆ ಬೆಂಬಲ ಸೂಚಿಸಲಾಯಿತು.

ಹೊಸನಗರಕ್ಕೆ ತನ್ನದೇ ಆದ ರಾಜಕೀಯ ಅಸ್ಮಿತೆ ಮರಳಿ ಸಿಗಬೇಕು ಎಂಬುದು ಈ ಭಾಗದ ಪ್ರತಿಯೊಬ್ಬರ ಆಶಯವಾಗಿದೆ. ಈ ಕುರಿತು ಸರ್ಕಾರದ ಮಟ್ಟದಲ್ಲಿ ಹಾಗೂ ಕ್ಷೇತ್ರ ಪುನರ್ ವಿಂಗಡಣಾ ಆಯೋಗದ ಮುಂದೆ ಸೂಕ್ತವಾಗಿ ಪ್ರಸ್ತಾವನೆ ಸಲ್ಲಿಸಿ, ನ್ಯಾಯ ಒದಗಿಸಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ. ಜನರ ಈ ಒಕ್ಕೊರಲ ಧ್ವನಿಗೆ ನಾವು ಸದಾ ಜೊತೆಯಾಗಿರುತ್ತೇವೆ ಎಂದರು.
B.Y. Raghavendra ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀ ಶ್ರೀ ಮ.ನಿ.ಪ್ರ ಅಭಿನವ ಚನ್ನಬಸವ ಶ್ರೀಗಳು, ಹುಂಚ ಜೈನ ಮಠದ ಶ್ರೀ ಶ್ರೀ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಶ್ರೀಗಳು, ನಾರಾಯಣಗುರು ಸಂಸ್ಥಾನ ಮಠದ ಶ್ರೀ ಶ್ರೀ ರೇಣುಕಾನಂದ ಶ್ರೀಗಳು, ಮುಸ್ಲಿಂ ಧರ್ಮ ಗುರುಗಳು, ಹೋರಾಟದ ರುವಾರಿಗಳು ಮಾಜಿ ಶಾಸಕರಾದ ಶ್ರೀ ಬಿ.ಸ್ವಾಮಿರಾವ್, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮಧು ಬಂಗಾರಪ್ಪ, ಶಾಸಕರಾದ ಶ್ರೀ ಆರಗ ಜ್ಞಾನೇಂದ್ರ, ಶ್ರೀ ಬೇಳೂರು ಗೋಪಾಲ ಕೃಷ್ಣ, ಮಾಜಿ ಸಚಿವರಾದ ಶ್ರೀ ಹರತಾಳು ಹಾಲಪ್ಪ, ಶ್ರೀ ವೀರೇಶ್ ಆಲವಳ್ಳಿ, ಶ್ರೀ ಕಲಗೋಡು ರತ್ನಾಕರ್, ಶ್ರೀ ಎನ್ ಆರ್ ದೇವಾನಂದ್, ಶ್ರೀ ವರ್ತೆಶ್, ಶ್ರೀ ಆರ್. ಚಾಬುಸಾಬ್ ಶ್ರೀ ಬಿ ಜಿ ಚಂದ್ರಮೌಳಿ, ಶ್ರೀಬಂಡಿ ರಾಮಚಂದ್ರ ಹಾಗೂ ವಿವಿಧ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

ಶಾಲಾ ಮಕ್ಕಳಿಗೆಂದೇ “ಟಿ-5 ಚುಟುಕು ಕ್ರಿಕೆಟ್” ಪಂದ್ಯಾವಳಿ ಏರ್ಪಡಿಸಿ ಪ್ರೋತ್ಸಾಹಿಸಿ- ಡಾ.ಸುಧೀಂದ್ರ

0

DCA ಸಂಸ್ಥೆಯ 2026ರ ಸಾಲಿನ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರವನ್ನು ದಿನಾಂಕ 5/4/2026 ರಂದು ಶಿವಮೊಗ್ಗನಗರದ ಕುವೆಂಪು ರಂಗಮಂದಿರದ ಹಿಂಭಾಗದ NES ಕ್ರೀಡಾ ಆವರಣದಲ್ಲಿ ದಿನಾಂಕ 5/4/2026 ರಂದು ವಿದ್ಯುಕ್ತವಾಗಿ ಪ್ರಾರಂಭಿಸಲಾಯಿತು.
ಶ್ರೀ ಐಡಿಯಲ್ ಗೋಪಾಲಕೃಷ್ಣ, DCA ಸಂಸ್ಥೆಯ ಸಹಾ ಕಾರ್ಯದರ್ಶಿ ರವರು ಉದ್ಘಾಟನಾ ಕಾರ್ಯಕ್ರಮದ ಅತಿಥಿ ಗಳಾದ ಶ್ರೀ ಸುಧೀಂದ್ರ ರಾವ್, ಶ್ರೀ ನಾಗರಾಜ ಶೆಣೈ,ಸಂಸ್ಥೆಯ ಅಧ್ಯಕ್ಷ ರಾದ ಡಿ. ಆರ್. ನಾಗರಾಜ್, ಕಾರ್ಯದರ್ಶಿ ಹೆಚ್. ಎಸ್. ಸದಾನಂದ ಹಾಗೂ ತರಬೇತಿ ಶಿಬಿರದ ಮುಖ್ಯತರಬೇತುದಾರರದ ನಿತ್ಯಾನಂದ ಪೈ ರವರನ್ನು,ವೇದಿಕೆಗೆ ಸ್ವಾಗತಿಸಿದರು. ಉಪಸ್ಥಿತರಿದ್ದ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರನ್ನು, ಸಂಸ್ಥೆಯ ಹಿರಿಯ ಸದಸ್ಯರನ್ನು, ಶಿಬಿರಾರ್ಥಿಗಳನ್ನು, ಪಾಲಕರು /ಪೋಷಕರನ್ನು ಸ್ವಾಗತಿಸಿ ಸಂಸ್ಥೆಯ ಪರಿಚಯ, ಬೆಳೆದುಬಂದ ಹಾದಿ, ಸಂಸ್ಥೆ ವತಿಯಿಂದ ಬೆಳೆದ ಆಟಗಾರರ ವಿವರ,ಇವರಲ್ಲಿ ರಾಜ್ಯ ತಂಡ ಪ್ರತಿನಿಧಿಸಿದವರ ವಿವರ ಎಲ್ಲರಿಗೂ ಪರಿಚಯ ಮಾಡಿಕೊಟ್ಟರು.
ಶ್ರೀಯುತ ಸುಧೀಂದ್ರ ರಾವ್, ಆಕಾಶವಾಣಿಯ ಕಾರ್ಯಕ್ರಮ ಕಾರ್ಯನಿರ್ವಾಹಕ ಅಧಿಕಾರಿ (ನಿವೃತ್ತ )ರವರು ತರಬೇತಿ ಶಿಬಿರವನ್ನು ಉದ್ಘಾಟನೆ ಮಾಡುತ್ತಾ,ಸದರಿಯವರು ತಮ್ಮ ಉದ್ಘಾಟನಾ ಮಾತುಗಳಲ್ಲಿ ತಾವು ಚಿಕ್ಕವರಾಗಿದ್ದಾಗ, ಆಗಿನ ದಿನಪತ್ರಿಕೆಗಲ್ಲಿ DCA ತಂಡದ ವಿಜಯ ವಾರ್ತೆ ಓದುತಿದ್ದನ್ನು ಸ್ಮರಿಸಿಕೊಂಡು, ಸಂಸ್ಥೆಯ ಹಿರಿಯ ಸದಸ್ಯರುಗಳಾದ ನಾರಾಯಣ ಭಟ್, ಪುಟ್ಟಪ್ಪ, ನಾಣಿ ರವರನ್ನು ನೆನೆಪಿಸಿಕೊಂಡು ಸದರಿಯವರು ಸಂಸ್ಥೆ ಕಟ್ಟುವಲ್ಲಿ ಹಾಗೂ ಬೆಳೆಸುವಲ್ಲಿ ತೆಗೆದುಕೊಂಡ ಶ್ರಮದ ಬಗ್ಗೆ ಶ್ಲಾಘೀಸಿದರು.
ಇದೆ ಪರಂಪರೆಯನ್ನು ಮುಂದುವರಿಸುತ್ತಿರುವ ಹಾಗೂ ಇದಕ್ಕಾಗಿ ತಮ್ಮ ಸಮಯವನ್ನು ಮೀಸಲಿಡುತ್ತಿರುವ ಈಗಿನ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಸದಸ್ಯರುಗಳಿಗೆ ಅಭಿನಂದಿಸಿದರು.
ಮಕ್ಕಳಿಗೆ ತರಬೇತಿಯಲ್ಲಿ ಉತ್ತಮ ಆಟಕಲಿತು ಮುಂದೆ ತಾವು ಬೆಳೆಯಲು ಹಾಗೂ ಸಂಸ್ಥೆಗೆ ಯಶಸ್ಸು ತರುವಂತೆ ಶುಭ ಹಾರೈಸಿ ತರಬೇತಿ ಶಿಬರಕ್ಕೆ ಶುಭ ಹಾರೈಸಿದರು.
ಮಕ್ಕಳಲ್ಲಿ ಉತ್ಸಾಹ ಬೆಳೆಯಲು 5 ಓವರ್ ಗಳ ಚುಟುಕು ಪಂದ್ಯಾವಳಿಯನ್ನು ತರಬೇತಿ ಸಮಯದಲ್ಲಿ ಆಯೋಜಿಸಲು ಸಲಹೆ ನೀಡಿದರು.
ಇನ್ನೊರ್ವ ಅತಿಥಿಗಳಾದ ಶ್ರೀಯುತ ನಾಗರಾಜ ಶೆಣೈ ರವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಪ್ರತಿದಿನ ಬೆಳಿಗ್ಯೆ ಬೇಗನೆ ಏಳುವ ಕುರಿತು ತಿಳಿಸಿ ಇದರಿಂದಾಗುವ ಪ್ರಯೋಜನ ತಿಳಿಸಿದರು. ಇದರಿಂದ ಒಳ್ಳೆಯ ಆರೋಗ್ಯ, ಬುದ್ದಿ ಹಾಗೂ ದಿನವಿಡಿ ಲವಲವಿಕೆಯಿಂದ ಇರಬಹುದಾಗಿದ್ದು ದಿನವಿಡಿ ಉಲ್ಲಾಸದಿಂದಿರಬಹುದೆಂದು ತಿಳಿಸುತ್ತಾ ತರಬೇತಿಯಲ್ಲಿ ಉತ್ತಮ ಆಟ ಕಲಿಯುವಂತೆ ಶುಭಹಾರೈಸಿದರು.
ಸಂಸ್ಥೆಯ ಅಧ್ಯಕ್ಷರಾದ ಶ್ರೀ ಡಿ. ಆರ್. ನಾಗರಾಜ್ ರವರು ಮಾತನಾಡುತ್ತಾ ತರಬೇತಿ ಶಿಬಿರದಲ್ಲಿ ಸಂಸ್ಥೆವತಿಯಿಂದ ನೀಡುವ ಸವಲತ್ತು, ತರಬೇತಿ, ಸಮವಸ್ತ್ರ ಹಾಗೂ ತರಬೇತಿಯ ನಂತರ ಪ್ರತಿದಿನ ನೀಡುವ ಹಾಲು ಹಾಗೂ ಬನ್ನು ಗಳ ವಿವರ ಅತಿಥಿಗಳಿಗೆ ಹಾಗೂ ನೆರೆದಿದ್ದ ಶಿಬಿರಾರ್ಥಿಗಳಿಗೆ, ಪಾಲಕರಿಗೆ ತಿಳಿಸುತ್ತಾ ಶಿವಮೊಗ್ಗದಲ್ಲಿ ಅತೀ ಕಡಿಮೆ ಮೊತ್ತದಲ್ಲಿ ಸಂಸ್ಥೆಯು ನೀಡುತ್ತಿರುವ ಸೇವೆಬಗ್ಗೆ ವಿವರಿಸಿದರು.
ಈ ಸಮಯದಲ್ಲಿ ಕೆಲವು ಮಕ್ಕಳಿಗೆ ಉದ್ಘಾಟನೆಯ ಸಂಕೇತವಾಗಿ ಸಮವಸ್ತ್ರ ಹಾಗೂ ಟೋಪಿ ನೀಡಲಾಯಿತು.
ಶ್ರೀಯುತ ಅನಿಲ್ ಪಾಟೀಲ್ ರವರು ಎಲ್ಲರಿಗೂ ವಂದನಾರ್ಪಣೆ ಸಲ್ಲಿಸಿದರು.
ಶ್ರೀ. ಗೋಪಾಲಕೃಷ್ಣ ರವರು ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆ ಮಾಡಿದರು.ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯರಾದ KL ಸುಬ್ರಮಣ್ಯ. DN ರಮಾನಂದ್. DV ರಾಮಚಂದ್ರ. ರಘುಪ್ರಸಾದ್ ಮನ್ ಮೋಹನ್
ತರಬೇತಿ ಶಿಬಿರದ ತರಬೇತುದಾರರದ ಮಿಥುನ್, ಗಣೇಶ್, ಅರ್ಜುನ್, ರವಿ, ಸಚ್ಚಿನ್ ರವರು ಹಾಜರಿದ್ದರು.

Acharya Tulsi National College of Commerce ಮೇ1. ಎಟಿ ಎನ್ ಸಿಸಿ ಕಾಲೇಜಿನ ವಿದ್ಯಾರ್ಥಿಗಳ ಸಮಾಗಮ

0

ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಮೇ 1ರಂದು ಬೆಳಗ್ಗೆ 10.30ಕ್ಕೆ ಹಳೇಯ ವಿದ್ಯಾರ್ಥಿಗಳ ಸಂಘದಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಎಟಿಎನ್‌ಸಿಸಿ ಕಾಲೇಜು 60ನೇ ವರ್ಷಕ್ಕೆ ಕಾಲಿಡುತ್ತಿದ್ದು, ಎಲ್ಲಾ ಹಳೆಯ ವಿದ್ಯಾರ್ಥಿಗಳಿಗೆ ನಾವು ಓದಿದ ಕಾಲೇಜ್ ಎಂಬ ಹೆಮ್ಮೆ ಇರುವುದು ಸಹಜ. ಬಹಳಷ್ಟು ಹಳೆಯ ವಿದ್ಯಾರ್ಥಿಗಳಿಗೆ ಮತ್ತೆ ಕಾಲೇಜಿಗೆ ಭೇಟಿ ನೀಡಬೇಕೆಂಬ ಹಂಬಲ ಇರುತ್ತದೆ. ಆದರೆ ಯಾವುದೇ ವಿಷಯ ಇಲ್ಲದೆ ಹೋಗುವುದು ಅಸಂಭವ.
ಸಮಯ ಅವಕಾಶ ದೊರಕಿದರೆ ಸಾಕೆಂದು ಹಲವರು ಹಂಬಲಿಸುತ್ತಾರೆ. ಈ ನಿಟ್ಟಿನಲ್ಲಿ ನಮ್ಮ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಹಳೆಯ ವಿದ್ಯಾರ್ಥಿ ಬಳಗದ ವತಿಯಿಂದ ಎಟಿಎನ್‌ಸಿಸಿ ಕಾಲೇಜಿನಲ್ಲಿ ಓದಿದ ಎಲ್ಲಾ ಸಾಲಿನ ವಿದ್ಯಾರ್ಥಿಗಳನ್ನು ಕಾಲೇಜಿನ ಆವರಣಕ್ಕೆ ಪ್ರತಿ ವರ್ಷ ಮೇ 1ರಂದು ಆಹ್ವಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವ ಸಲುವಾಗಿ ಈ ಸಾಲಿನಲ್ಲಿ ಪ್ರಥಮ ಪ್ರಯತ್ನವಾಗಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Acharya Tulsi National College of Commerce ಮೇ 1ರಂದು ಬೆಳಗ್ಗೆ 10.30ಕ್ಕೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಹಾಜರಾಗುವವರು ಅರ್ಜಿ ನಮೂನೆ ಭರ್ತಿ ಮಾಡಿ ಮಾಹಿತಿ ನೀಡಬೇಕು. ಅರ್ಜಿ ನಮೂನೆಯನ್ನು ಭರ್ತಿ ಮಾಡಿಕೊಳ್ಳುವ ಮೂಲಕ ತಮ್ಮ ತರಗತಿ ಮಿತ್ರರನ್ನು ಹಾಗೂ ಇತರ ಸ್ನೇಹಿತರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬಹುದು. ಮಾಹಿತಿಗೆ ಮೊಬೈಲ್ ಸಂಖ್ಯೆ 9844809533, 9449808608, 9844665591 ಸಂಪರ್ಕಿಸಬಹುದಾಗಿದೆ.

ರಿಪ್ಪನ್ ಪೇಟೆಯ ಆಸ್ಪತ್ರೆ ಮತ್ತು ವಿದ್ಯಾರ್ಥಿನಿಲಯಕ್ಕೆ ಡೀಸಿ ಪ್ರಭುಲಿಂಗ ಕವಳಿಕಟ್ಟಿ ಭೇಟಿ

0

ಶಿವಮೊಗ್ಗ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿಯವರು ಸೋಮವಾರ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ ಸೌಲಭ್ಯಗಳನ್ನು ಪರಿಶೀಲಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಸಾರ್ವಜನಿಕರಿಗೆ ಸಿಗುತ್ತಿರುವ ವೈದ್ಯಕೀಯ ಸೇವೆಗಳ ಬಗ್ಗೆ ಮಾಹಿತಿ ಪಡೆದರು. ಕೇಂದ್ರದ ಕಾರ್ಯನಿರ್ವಹಣೆ, ಅಗತ್ಯ ಔಷಧಿಗಳ ದಾಸ್ತಾನು ಇದೆಯೇ ಎಂಬುದನ್ನು ಪರಿಶೀಲಿಸಿದ ಅವರು ರೋಗಿಗಳೊಂದಿಗೆ ಕೇಂದ್ರದಿಂದ ದೊರಕುತ್ತಿರುವ ಸೌಲಭ್ಯಗಳ ಕುರಿತು ಮಾತನಾಡಿದರು.
ಬಳಿಕ ಹತ್ತಿರದ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಮೊದಲು ಅಡುಗೆ ಕೋಣೆ ಮತ್ತು ದಾಸ್ತಾನು ಕೊಠಡಿಯನ್ನು ವೀಕ್ಷಿಸಿದರು. ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಖುದ್ದಾಗಿ ಪರಿಶೀಲನೆ ನಡೆಸಿದರು. ಮೆನುವಿನಂತೆ ಆಹಾರ ನೀಡಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿ, ಶುಚಿಗೊಳಿಸುವಿಕೆಗೆ ಹೆಚ್ಚಿನ ಆದ್ಯತೆ ನೀಡಲು ಸೂಚಿಸಿದರು.
ನಿಲಯದ ಆವರಣ ಮತ್ತು ಶೌಚಾಲಯಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಲು ವಾರ್ಡನ್‌ಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ವಿದ್ಯಾರ್ಥಿಗಳೊಂದಿಗೆ ಸಂವಾದ: ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಓದಿಗೆ ಪೂರಕವಾದ ವಾತಾವರಣವಿದೆಯೇ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯಿದೆಯೇ ಎಂದು ವಿಚಾರಿಸಿದರು.

ನಿರುದ್ಯೋಗಿ ವಿದ್ಯಾವಂತರೆ,ಗಮನಿಸಿ..! ಏಪ್ರಿಲ್ 9. ಉದ್ಯೋಗ ವಿನಿಮಯ ಕಛೇರಿಯಲ್ಲಿ ನೇರ ಸಂದರ್ಶನ

0

ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಏ.09 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ.
ಈ ನೇರ ಸಂದರ್ಶನದಲ್ಲಿ ಮುತ್ತೂಟ್ ಮನಿ ಮತ್ತು ಮಾರುತಿ ಸುಜುಕಿ (ಅರೇನಾ) ಕಂಪನಿ ಭಾಗವಹಿಸಲಿದ್ದು, ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ. ಪಿಯುಸಿ ಮತ್ತು ಇತರೆ ಡಿಗ್ರಿ ತೇರ್ಗಡೆ ಹೊಂದಿದ 18 ರಿಂದ 30 ವರ್ಷದೊಳಗಿನ ಅಭ್ಯರ್ಥಿಗಳು ಬಯೋಡೆಟಾ ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದು. ಉಚಿತ ಪ್ರವೇಶ ಇರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಗುತ್ಯಪ್ಪ ಕಾಲೋನಿ, 2ನೇ ಕ್ರಾಸ್, ಪಂಪನಗರ, ಸಾಗರ ರಸ್ತೆ, ಶಿವಮೊಗ್ಗ ಇವರನ್ನು ಖುದ್ದಾಗಿ ಅಥವಾ ಮೊಬೈಲ್ ಸಂಖ್ಯೆ 9380663606/ 9108235132 ಗಳನ್ನು ಸಂಪರ್ಕಿಸುವAತೆ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.