Saturday, August 8, 2026
Saturday, August 8, 2026
Home Blog Page 141

ರಾಗಿಗುಡ್ಡ ಪ್ರದೇಶ ಜನತೆಯ ಸಮಸ್ಯೆ ನಿವಾರಿಸಿದ ಪಾಲಿಕೆ ಆಯುಕ್ತರಿಗೆ ಅಭಿನಂದನೆ ಸಲ್ಲಿಸಿದ ಕರವೆ ಜನಮನ ಸಂಘಟನೆ

0

ಮಹಾನಗರ ಪಾಲಿಕೆಯ ಆಯುಕ್ತರಾದ ಸನ್ಮಾನ್ಯ ಮಾಯಣ್ಣ ಗೌಡರು, ಕರವೇ, ಜನ ಮನ ರಾಜ್ಯ ಸಂಘಟನೆಯ ಮನವಿಗೆ ಸ್ಪಂದಿಸಿ ರಾಗಿಗುಡ್ಡ ಭಾಗದ ಸಮಸ್ಯೆಯನ್ನು ಪರಿ ಹರಿಸಿರುತ್ತಾರೆ. ಅವರಿಗೆ ನಮ್ಮ ಸಂಘಟನೆಯ ವತಿಯಿಂದ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿ ಮಾತನಾಡಿದ ಜನ ಮನ ಸಂಘಟನೆಯ ರಾಜ್ಯಧ್ಯಕ್ಷರಾದ ಕೆ ಜನಾರ್ಧನ್ ಸಾಲಿಯನ್ ರವರು ಆಯುಕ್ತರ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಮಾಯಣ್ಣ ಗೌಡರ ಸೇವೆಯ ಅಗತ್ಯತೆ ನಮ್ಮ ಶಿವಮೊಗ್ಗ ನಗರಕ್ಕೆ ತುಂಬಾ ಅವಶ್ಯವಾಗಿದ್ದು, ಇದೇ ರೀತಿಯ ಸೇವಾ ಸಹಕಾರವನ್ನು ನಮಗೆ ನೀಡಲಿ ಎಂದರು. ಇವರೊಂದಿಗೆ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್ ಮಾಲತೇಶ್, ಮತ್ತು ಪದಾಧಿಕಾರಿಗಳಾದ ರಾಮವಿ, ರಾಮಣ್ಣ ರಾಗಿಗುಡ್ಡ,ಮತ್ತಿತರರು ಭಾಗವಹಿಸಿದ್ದರು.

Department of Agriculture ಶಿವಮೊಗ್ಗ ಜಿಲ್ಲೆಯ ರೈತರು ಯೂರಿಯ ರಸಗೊಬ್ಬರ ಖರೀದಿಸಲು ಎಫ್ ಐ ಡಿ ಸಂಖ್ಯೆ ಕಡ್ಡಾಯ

0

ಶಿವಮೊಗ್ಗ ಜಿಲ್ಲೆಯ ರೈತರು ಯೂರಿಯಾ ರಸಗೊಬ್ಬರವನ್ನು ಖರೀದಿಸಲು ಇನ್ನು ಮುಂದೆ ಫಾರ್ಮರ್ ಐಡಿ (ಎಫ್‌ಐಡಿ) ಸಂಖ್ಯೆಯನ್ನು ಹೊಂದಿರುವುದು ಕಡ್ಡಾಯವಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಕಿರಣ್ ಕುಮಾರ್ ತಿಳಿಸಿದ್ದಾರೆ.

2026-27ನೇ ಸಾಲಿನ ಮುಂಗಾರು ಹಂಗಾಮಿನಿಂದ ಈ ಹೊಸ ನಿಯಮ ಜಾರಿಗೆ ಬರಲಿದ್ದು, ರಸಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ ತರಲು ಮತ್ತು ಕಾಳಸಂತೆಯಲ್ಲಿ ಗೊಬ್ಬರ ಮಾರಾಟವಾಗುವುದನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ.

ಕೆ-ಕಿಸಾನ್ ತಂತ್ರಾಂಶದ ಬಳಕೆ: ರೈತರು ತಮ್ಮ ಜಮೀನಿನ ವಿಸ್ತೀರ್ಣ ಮತ್ತು ಬೆಳೆದ ಬೆಳೆಗೆ ಅನುಗುಣವಾಗಿ ಎಷ್ಟು ಪ್ರಮಾಣದ ಗೊಬ್ಬರ ಅಗತ್ಯವಿದೆಯೋ ಅಷ್ಟನ್ನು ಮಾತ್ರ ‘ಕೆ-ಕಿಸಾನ್’ ತಂತ್ರಾಂಶದ ಮೂಲಕ ವಿತರಿಸಲಾಗುವುದು.

ಹೊಸ ಎಫ್‌ಐಡಿ ನೋಂದಣಿ: ಇದುವರೆಗೆ ಫಾರ್ಮರ್ ಐಡಿ ಹೊಂದಿರದ ರೈತರು ತಕ್ಷಣವೇ ತಮ್ಮ ದಾಖಲೆಗಳಾದ ಪಹಣಿ, ಬ್ಯಾಂಕ್ ಪಾಸ್ ಬುಕ್ ಮತ್ತು ಆಧಾರ್ ಕಾರ್ಡ್ನೊಂದಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬೇಕು.

ಸರ್ವೆ ನಂಬರ್ ಜೋಡಣೆ: ಈಗಾಗಲೇ ಎಫ್‌ಐಡಿ ಹೊಂದಿರುವ ರೈತರು ತಮ್ಮ ಎಲ್ಲಾ ಸರ್ವೆ ನಂಬರ್‌ಗಳನ್ನು ಅದಕ್ಕೆ ಜೋಡಣೆ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

Department of Agriculture ಮಾರಾಟಗಾರರಿಗೆ ಎಚ್ಚರಿಕೆ: ಅಧಿಕೃತ ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ಕೆ-ಕಿಸಾನ್ ತಂತ್ರಾಂಶದಲ್ಲಿ ರೈತರ ಎಫ್‌ಐಡಿ ನಮೂದಿಸಿಯೇ ಗೊಬ್ಬರ ಮಾರಾಟ ಮಾಡಬೇಕು. ಈ ಸಂಬಂಧ ಇಲಾಖಾಧಿಕಾರಿಗಳಿಗೆ ತರಬೇತಿ ಹಾಗೂ ಮಾಹಿತಿ ನೀಡಲಾಗಿದೆ. ಚಿಲ್ಲರೆ ರಸಗೊಬ್ಬರ ಮಾರಾಟಗಾರರು ತಮ್ಮ ಎಲ್ಲ ಓ ಫಾರಂ ನವೀಕರಣಗೊಳಿಸಿಕೊಳ್ಳಬೇಕು. ಒಂದು ವೇಳೆ ಮಾರಾಟಗಾರರು ಓ ಫಾರಂ ಗಳ ನೋಂದಣಿ ಇಲ್ಲದೇ ಮಾರಾಟ ಮಾಡಿದಲ್ಲಿ, ನಿಯಮ ಮೀರಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಥವಾ ಕೃಷಿಯೇತರ ಉದ್ದೇಶಕ್ಕೆ ಗೊಬ್ಬರ ನೀಡಿದರೆ ಅಂತಹ ಮಾರಾಟಗಾರರ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಕುಂಸಿ ಮೆಸ್ಕಾಂ ವಿದ್ಯುತ್ ಉಪ ವಿಭಾಗದ ಹಾರ್ನಳ್ಳಿ, ರಾಮನಗರ ಸುತ್ತಮುತ್ತ ಕಾಮಗಾರಿ ನಿಮಿತ್ತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

0

ಕುಂಸಿ ಉಪವಿಭಾಗದ ಹಾರ್ನಳ್ಳಿ ಶಾಖಾ ವ್ಯಾಪಿಯಲ್ಲಿ ಎಲ್.ಟಿ ರೀ-ಕಂಡರಿಂಗ್ ತುರ್ತು ಕಾಮಗಾರಿಯನ್ನು ನಿರ್ವಹಿಸುವುದರಿಂದ ಕುಂಸಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಹಳ್ಳಿಗಳಾದ ಹಾರ್ನಳ್ಳಿ, ರಾಮನಗರ, ಮುದುವಾಲ, ಯಡವಾಲ, ದೇವಬಾಳು, ತ್ಯಾಜವಳ್ಳಿ, ಕೊನಗವಳ್ಳಿ, ಹಿಟ್ಟೂರು, ನಾರಾಯಣಪುರ, ಮಲ್ಲಾಪುರ, ರಟ್ಟೆಹಳ್ಳಿ, ವಿಠಗೊಂಡನಕೊಪ್ಪ, ವೀರಣ್ಣನಬೇನವಳ್ಳಿ, ಕೆಸುವಿನ ಕಟ್ಟೆ, ಸೇವಲಾಲ್ ನಗರ, ಯರೆಕೊಪ್ಪ ಚಾಮೇನಹಳ್ಳಿ, ನಾಗರಭಾವಿ ಹಾಗೂ ಸುತ್ತಮುತ್ತ ಗ್ರಾಮಗಳ ವ್ಯಾಪ್ತಿಯಲ್ಲಿ ಏ. 8 ರಂದು ಬೆಳಗ್ಗೆ 10:00 ರಿಂದ ಸಂಜೆ 6:00 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

Department of Agriculture ಮೆಕ್ಕೆಜೋಳ ಬೆಳೆಗೆ ವಿಮೆ ಪರಿಹಾರ ಪಡೆಯದ ರೈತರು ಆಕ್ಷೇಪಣೆ ಸಲ್ಲಿಸಲು ಅವಕಾಶ

0

Department of Agriculture 2024ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ‘ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ’ ಅಡಿಯಲ್ಲಿ ಮೆಕ್ಕೆಜೋಳ ಬೆಳೆಗೆ ವಿಮೆ ಮಾಡಿಸಿ, ತಾಂತ್ರಿಕ ಕಾರಣಗಳಿಂದ ಪರಿಹಾರ ಲಭಿಸದ ರೈತರಿಗೆ ಆಕ್ಷೇಪಣೆ ಸಲ್ಲಿಸಲು ಕೃಷಿ ಇಲಾಖೆ ಅವಕಾಶ ನೀಡಿದೆ.

ಬೆಳೆ ಸಮೀಕ್ಷೆಯ ಫೋಟೋಗಳು ಮತ್ತು ವಿಮೆ ಮಾಡಿಸಿದ ಬೆಳೆಗಳ ನಡುವೆ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಕೆಲವು ಅರ್ಜಿಗಳನ್ನು ವಿಮಾ ಸಂಸ್ಥೆಯು ತಿರಸ್ಕರಿಸಿದೆ.

ಇಂತಹ ತಿರಸ್ಕೃತಗೊಂಡ ಅರ್ಜಿಗಳ ಪಟ್ಟಿಯನ್ನು ಆಯಾ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸಲಾಗಿದೆ.
ಯಾವ ರೈತರಿಗೆ ಇನ್ನೂ ವಿಮೆ ಪರಿಹಾರ ಬಂದಿಲ್ಲವೋ, ಅವರು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಪಟ್ಟಿಯನ್ನು ಪರಿಶೀಲಿಸಬೇಕು.

ತಮ್ಮ ಹೆಸರು ತಿರಸ್ಕೃತ ಪಟ್ಟಿಯಲ್ಲಿದ್ದರೆ, 2024ರ ಮುಂಗಾರು ಹಂಗಾಮಿನ ಪಹಣಿ (ಇದರಲ್ಲಿ ವಿಮೆ ಮಾಡಿಸಿದ ಬೆಳೆ ನಮೂದಾಗಿರಬೇಕು), ಬೆಂಬಲ ಬೆಲೆ ಯೋಜನೆಯಲ್ಲಿ ಪ್ರಯೋಜನೆ ಪಡೆದಿರುವ ಬಗ್ಗೆ ರಸೀದಿ, ಪಶು ಆಹಾರ ಘಟಕಕ್ಕೆ ನೀಡಿದ ಬಗ್ಗೆ ಅಥವಾ ಎಪಿಎಂಸಿ ಮಾರುಕಟ್ಟೆಗೆ ಉತ್ಪನ್ನಗಳನ್ನು ಮಾರಾಟ ಮಾಡಿದ ರಸೀದಿಗಳೊಂದಿಗೆ ಲಿಖಿತ ಮನವಿಯನ್ನು ಸಲ್ಲಿಸಬಹುದು.

Department of Agriculture ಆಕ್ಷೇಪಣೆ ಸಲ್ಲಿಸಲು ಏಪ್ರಿಲ್ 25 ಕೊನೆಯ ದಿನಾಂಕವಾಗಿದೆ. ಸಲ್ಲಿಕೆಯಾದ ಮನವಿಗಳನ್ನು ತಾಲೂಕು ಮಟ್ಟದ ತಹಶೀಲ್ದಾರರ ಅಧ್ಯಕ್ಷತೆಯ ಸಮಿತಿಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಶಿವಮೊಗ್ಗ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

District Consumer Disputes Redressal Commission ಹೊಸನಗರ ಕೆನರಾ ಬ್ಯಾಂಕ್ ಸೇವಾ ನ್ಯೂನತೆ, ಗ್ರಾಹಕರಿಗೆ ಪರಿಹಾರ ನೀಡಲು ಆಯೋಗದ ತೀರ್ಪು

0

District Consumer Disputes Redressal Commission ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಎಂ. ಗುಡ್ಡೆಕೊಪ್ಪ ವಾಸಿ ಧನಂಜಯ ಎಂ.ವಿ. ಎಂಬುವವರು ಹೊಸನಗರ ಕೆನರಾ ಬ್ಯಾಂಕ್ ಶಾಖೆಯ ಮೇಲೆ ತಮ್ಮ ಒಡಿ ಖಾತೆ ಹಣ ಕಡಿತಗೊಳಿಸಿ, ಹಣವನ್ನು ಹಿಂದುರುಗಿಸದೇ ಸೇವಾನ್ಯೂನತೆಯನ್ನು ಎಸಗಿದ ಬಗ್ಗೆ ನೀಡಿದ ದೂರಿನ ಕುರಿತು ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಹಣವನ್ನು ಹಿಂದುರುಗಿಸುವಂತೆ ಆದೇಶಿಸಿ ತೀರ್ಪು ನೀಡಿದೆ.

ದೂರುದಾರರು ಎದುರುದಾರ ಬ್ಯಾಂಕಿನಲ್ಲಿ ಒಡಿ ಖಾತೆ ಹೊಂದಿದ್ದು, ರೂ. 2.80 ಲಕ್ಷದ ಸೌಲಭ್ಯ ಪಡೆದಿರುತ್ತಾರೆ. ಜೂನ್ 2024 ರಲ್ಲಿ ಯಾವುದೇ ಮುನ್ಸೂಚನೆಯಿಲ್ಲದೆ ಈ ಖಾತೆಯಿಂದ ರೂ. 3,89,544/- ಹಣ ಕಡಿತವಾಗಿ ಉಳಿಕೆ ಮೊತ್ತ ಸೊನ್ನೆ ತೋರಿಸುತ್ತಿದ್ದು, ಈ ವಿಷಯವಾಗಿ ಬ್ಯಾಂಕ್‌ನ್ನು ಸಂಪರ್ಕಿಸಿದಾಗ ವ್ಯವಸ್ಥಾಪಕರು 2 ದಿನಗಳೊಳಗಾಗಿ ಹಣವನ್ನು ಹಿಂದುರುಗಿಸುವುದಾಗಿ ತಿಳಿಸಿರುತ್ತಾರೆ.

ಆದರೆ ಹಣವನ್ನು ಹಿಂದಿರುಗಿಸದಿರುವುದರಿಂದ 2025ರಲ್ಲಿ ಲೀಗಲ್ ನೋಟೀಸ್ ನೀಡಿದ್ದು, ಅದಕ್ಕೂ ಎದುರುದಾರರು ಯಾವುದೇ ಪ್ರತ್ಯುತ್ತರ ನೀಡದೆ ಸೇವಾನ್ಯೂನತೆ ಎಸಗಿರುತ್ತಾರೆ ಎಂದು ಆಯೋಗಕ್ಕೆ ದೂರನ್ನು ಸಲ್ಲಿಸಿರುತ್ತಾರೆ.
District Consumer Disputes Redressal Commission ಆಯೋಗವು ದೂರನ್ನು ದಾಖಲಿಸಿಕೊಂಡು ಎದುರುದಾರರಿಗೆ ನೋಟೀಸ್ ನೀಡಿದ್ದು, ಎದುರುದಾರರು ಆಯೋಗಕ್ಕೆ ತಮ್ಮ ವಕೀಲರ ಮೂಲಕ ಹಾಜರಾಗಿದ್ದು, ಎರಡೂ ಪಕ್ಷಗಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲಾತಿಗಳನ್ನು ಪರಿಶೀಲಿಸಿ, ವಾದ ವಿವಾದವನ್ನು ಆಲಿಸಿ, ಎದುರುದಾರರು ದೂರದಾರರ ಒಡಿ ಖಾತೆಯಿಂದ ಹಣವನ್ನು ಕಡಿಗೊಳಿಸಿ ಹಿಂತಿರುಗಿಸದೆ ಸೇವಾನ್ಯೂನ್ಯತೆ ಎಸಗಿರುತ್ತಾರೆ ಎಂದು ತೀರ್ಮಾನಿಸಿ, ದೂರನ್ನು ಭಾಗಶಃ ಪುರಸ್ಕರಿಸಿ, ಎದುರುದಾರರು ದೂರುದಾರರ ಖಾತೆಯಲ್ಲಿದ್ದ ರೂ.3,89,554 /- ಗಳಿಗೆ ದಿ: 18/02/2025 ರಿಂದ ಅನ್ವಯವಾಗುವಂತೆ ವಾರ್ಷಿಕ ಶೇ. 9ರ ಬಡ್ಡಿಯನ್ನು ಸೇರಿಸಿ, ಪೂರ್ತಿ ಹಣ ಪಾವತಿಸುವವರೆಗೆ ನೀಡತಕ್ಕದ್ದು, ಹಾಗೂ ರೂ. 1,00,000/- ಗಳನ್ನು ಮಾನಸಿಕ ವೇದನೆಗೆ ಪರಿಹಾರವಾಗಿ ಮತ್ತು ರೂ. 10,000/- ಗಳನ್ನು ದೂರಿನ ಖರ್ಚು ವೆಚ್ಚಕ್ಕಾಗಿ ಈ ಆದೇಶವಾದ 45 ದಿನಗಳೊಳಗಾಗಿ ದೂರುದಾರರಿಗೆ ಪಾವತಿಸುವಂತೆ ತಪ್ಪಿದ್ದಲ್ಲಿ ವಾರ್ಷಿಕ ಶೇ. 12ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಮಾ. 31 ರಂದು ಆದೇಶಿಸಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಗಂಗಾಧರ ನಾಯ್ಕ್ ಎಂ.ಟಿ. ತಿಳಿಸಿದ್ದಾರೆ.

MESCOM ಏಪ್ರಿಲ್ 8. ಶಿವಮೊಗ್ಗದ ನಂಜಪ್ಪ ಲೇ ಔಟ್ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ.ಮೆಸ್ಕಾಂ ಪ್ರಕಟಣೆ

0

MESCOM ಶಿವಮೊಗ್ಗ ನಗರ ಉಪವಿಭಾಗ-1 ಘಟಕ-1ರ ವ್ಯಾಪ್ತಿಯಲ್ಲಿ ಏ. 08 ರಂದು ಬೆಳಿಗ್ಗೆ 9.30 ರಿಂದ ಸಂಜೆ 6.00 ರವರೆಗೆ ತುರ್ತು ಕಾಮಗಾರಿ ಹಮ್ಮಿಕೊಂಡಿರುವದರಿಂದ ನಂಜಪ್ಪ ಲೇಔಟ್, ಪ್ರಿಯಾಂಕ ಲೇಔಟ್, ಪಂಡಿತ್ ಲೇಔಟ್, ಊರುಗಡೂರು, ಕಂಟ್ರಿಕಬ್ಲ್ ರಸ್ತೆ, ಎಂ.ಸಿ.ಲೇಔಟ್, ಗೋಶಾಲೆ ರಸ್ತೆ, ಶ್ರೀರಾಮ ಬಡಾವಣೆ, ತೋಟಗಾರಿಕೆ ಇಲಾಖೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

B.Y. Raghavendra ಕೇಂದ್ರ ಸಚಿವರೊಂದಿಗೆ ಅಡಿಕೆ ಕೃಷಿಕರ ಸಮಸ್ಯೆ ಚರ್ಚಿಸಿದ ಬಿ.ವೈ.ರಾಘವೇಂದ್ರ

0

B.Y. Raghavendra ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾನ್ ಜಿ ಅವರನ್ನು
ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅವರು ನವದೆಹಲಿಯಲ್ಲಿ ಭೇಟಿ ಮಾಡಿದ್ದರು.
ಅಡಿಕೆ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿ, ಅಡಿಕೆ ಕೃಷಿಕರ ಭವಿಷ್ಯದ ಬಗ್ಗೆ ಕಾಳಜಿ ತಾಳಲು ಸಚಿವರ ಗಮನ ಸೆಳೆದರು.

WHO/IARC ವರ್ಗೀಕರಣ ಹಾಗೂ ಕೊಲಂಬೊ ಘೋಷಣೆಯ ನಂತರದ ಬೆಳವಣಿಗೆಗಳ ಬಗ್ಗೆ ಗಮನ ಸೆಳೆದರು. ಅಲ್ಲದೇ ಇದು ರೈತರು ಮತ್ತು ಗ್ರಾಮೀಣ ಜೀವನೋಪಾಯದ ಮೇಲೆ ಬೀರುವ ಪರಿಣಾಮವನ್ನು ಸಂಸದರು ಒತ್ತಿಹೇಳಿದರು

B.Y. Raghavendra ಮಾನ್ಯ ಸಚಿವರು ವಿಷಯವನ್ನು ಸಕಾರಾತ್ಮಕವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದ ಬಿ.ವೈ‌ರಾಘವೇಂದ್ರ ಸಚಿವರ ಭೇಟಿಯ ಬಗ್ಗೆ
ಹರ್ಷ ವ್ಯಕ್ತಪಡಿಸಿದ್ದಾರೆ.

Rotary Club Shivamogga ಷೇರು ಹೂಡಿಕೆಗಳಲ್ಲಿ ಜಾಗ್ರತೆ.ಅನಧೀಕೃತ ಕಂಪೆನಿಗಳಲ್ಲಿ ಹಣ ತೊಡಗಿಸಬೇಡಿ- ಹಣಕಾಸು ಸಲಹೆಗಾರ ಆನಂದ್

0

Rotary Club Shivamogga ಸಾರ್ವಜನಿಕರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಹಣಕಾಸು ಸಲಹೆಗಾರ ಕೆ.ಆನಂದ್ ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಪೂರ್ವದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಣಕಾಸು ವಿಷಯ ಕುರಿತು ಉಪನ್ಯಾಸದಲ್ಲಿ ಮಾತನಾಡಿ, ಮೊದಲು ಜಾಲತಾಣಗಳಲ್ಲಿ ಹಣವನ್ನು ತೊಡಗಿಸಬಾರದು. ಯಾವುದೇ ಷೇರುಗಳ ಮೇಲೆ ಹಣ ಹೂಡಿಕೆ ಮಾಡುವಾದ ಅಲ್ಪ ಮೊತ್ತ ತೊಡಗಿಸಬೇಕು. ಯಾವುದೇ ಅನಧಿಕೃತ ಸಂಸ್ಥೆಗಳಲ್ಲಿ ಹಣವನ್ನ ತೊಡಗಿಸಬಾರದು ಎಂದು ತಿಳಿಸಿದರು.

ಹಣ ತೊಡಗಿಸುವ ಮುನ್ನ ಕೆಲವೊಂದು ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆಯಬೇಕು. ಷೇರುಗಳ ಮೇಲೆ ತೊಡಗಿಸುವಾಗ ಕಂಪನಿಯ ವಿವರಗಳನ್ನು ಪಡೆದು ಹಾಗೂ ಆರ್‌ಡಿಎ ರೆಗುಲೇಶನ್ ಆಕ್ಟ್ ಕಂಪನಿ ಹೊಂದಿದೆಯಾ ಎಂಬ ಅಂಶವನ್ನು ತಿಳಿದುಕೊಳ್ಳಬೇಕು. ನಂತರ ಹಣ ಹೂಡಿಕೆ ಮಾಡಬೇಕು. ಬರೀ ಲಾಭಕ್ಕೋಸ್ಕರ ಹಣವನ್ನು ತೊಡಗಿಸಿದರೆ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದರು.

ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಅಧ್ಯಕ್ಷ ಡಿ.ಕಿಶೋರ್‌ಕುಮಾರ್ ಮಾತನಾಡಿ, ಷೇರುಗಳು ಮತ್ತು ಮ್ಯೂಚುಯಲ್ ಫಂಡ್‌ನಲ್ಲಿ ಹಣ ಹೂಡಿಕೆ ಮಾಡುವ ಮುನ್ನ ಹೆಚ್ಚಿನ ಮಾಹಿತಿ ಹೊಂದಬೇಕು. ಕಷ್ಟಪಟ್ಟು ದುಡಿದ ಹಣದ ಬಗ್ಗೆ ಗಮನ ಇರಬೇಕು. ಹೆಚ್ಚು ಬಡ್ಡಿಗೋಸ್ಕರ ಹಣವನ್ನು ಬೇರೆಯವರಿಗೆ ಸಾಲ ನೀಡಿದರೆ ಹಣದ ವಾಪಸ್ ಸಿಗುವ ಬಗ್ಗೆ ಯಾವುದೇ ಖಾತರಿ ಇರುವುದಿಲ್ಲ ಎಂದು ತಿಳಿಸಿದರು.

ಹಣಕಾಸು ಸಲಹೆಗಾರ ಎಸ್.ಎನ್.ಸಂಜೀವ್ ಮಾತನಾಡಿ, ಯಾವುದೇ ಮ್ಯೂಚುಯಲ್ ಫಂಡ್, ಷೇರು ಹೂಡಿಕೆ ಮಾಡುವುದು ಹಾಗೂ ಸಾಲ ಕೊಡುವ ಸಂದರ್ಭಗಳಲ್ಲಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಅಧಿಕೃತ ಸಂಸ್ಥೆಗಳಲ್ಲಿ ಹಣವನ್ನು ತೊಡಗಿಸುವುದು ಸೂಕ್ತ ಎಂದು ಹೇಳಿದರು.

Rotary Club Shivamogga ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಹಕಾರ್ಯದರ್ಶಿ ಡಾ. ಎಂ.ಎಸ್.ಅರುಣ್ ಮಾತನಾಡಿ, ಕಷ್ಟಪಟ್ಟು ದುಡಿದ ಹಣವನ್ನು ತೊಡಗಿಸುವಾಗ ಜಾಗೃತ ಆಗಿರುವ ಜೊತೆಗೆ ಹಣಕಾಸು ಸಲಹೆಗಾರರನ್ನು ಭೇಟಿ ಮಾಡಿ ಸಲಹೆ ಪಡೆಯಬೇಕು. ನಂತರ ಹಣವನ್ನು ತೊಡಗಿಸುವುದು ಸೂಕ್ತ ಎಂದು ತಿಳಿಸಿದರು.

ರೋಟರಿ ಶ್ರೀಕಾಂತ್, ನಿಯೋಜಿತ ಸೇನಾನಿ ಎ.ಒ.ಮಹೇಶ್, ಕೇಶವಪ್ಪ, ಅರುಣ್ ದೀಕ್ಷಿತ್, ಗಣೇಶ್, ಶ್ರೀನಿವಾಸ್ ಗೌಡ, ಸುರೇಶ್, ಪರಮೇಶ್ವರಿ, ಗಂಗಪ್ಪ, ವೀಣಾ ಕಿಶೋರ್, ಕೀರ್ತನ, ನಿಯೋಜಿತ ಅಧ್ಯಕ್ಷ ಶೇಷಗಿರಿ.ಡಿ.ಕೆ ಮತ್ತು ನಿಯೋಜಿತ ಖಜಾಂಚಿ ಎಸ್.ಸುನೀಲ್ ಇತರರಿದ್ದರು.

ಶಿವಮೊಗ್ಗ 35 ನೇ ವಾರ್ಡಿನಲ್ಲಿ ಮಳ ನೀರುನುಗ್ಗಿ ಅವಾಂತರ. ಪಾಲಿಕೆ ಪರಿಹಾರ ಕ್ರಮಕೈಗೊಳ್ಳಲು ಯುವ ಕಾಂಗ್ರೆಸ್ ಒತ್ತಾಯ

0

ಶಿವಮೊಗ್ಗ ನಗರದ 35 ವಾರ್ಡ್ ಗಳ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಜಕಾಲುವೆ ಮತ್ತು ಚರಂಡಿಗಳ ಹೂಳು ತೆಗೆಯದ ಕಾರಣ ಮೊನ್ನೆ ರಾತ್ರಿ ಬಂದ ಮಳೆಗೆ ಮನೆಗಳಿಗೆ ನೀರು ನುಗ್ಗಿ ಎಲ್ಲ ವಾರ್ಡ್ಗಳಲ್ಲಿ ರಸ್ತೆ ಮೇಲೆ ಹರಿಯುತ್ತಿದ್ದು ಹಲವಾರು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಆಹಾರ ವಸ್ತುಗಳು ಹಾಗೂ ಲಕ್ಷಾಂತರ ಮೌಲ್ಯದ ಗೃಹ ಉಪಯೋಗಿ ವಸ್ತುಗಳು ನೀರಿನಲ್ಲಿ ಮುಳುಗಿ ಜನ ಸಂಕಷ್ಟ ಎದುರಿಸಿದ್ದಾರೆ, ಇದರಿಂದ ಜನ ಮಹಾನಗರ ಪಾಲಿಕೆಗೆ ಆಡಳಿತ ವರ್ಗಕ್ಕೆ ಇಡಿ ಶಾಪವನ್ನು ಹಾಕುತ್ತಿದ್ದು. ಒಂದು ಮಳೆಗೆ ಹೀಗಾದರೆ ಮುಂಬರುವ ಮಳೆಗಾಲದಲ್ಲಿ ಯಾವ ಸ್ಥಿತಿಯೆಂದು ಯೋಚಿಸುತ್ತಿದ್ದಾರೆ.

ಈಗಾಗಲೇ ಜನಪ್ರತಿನಿಧಿಗಳು ನೀರು ನುಗ್ಗಿದ ಮನೆಗಳಿಗೆ ಆಗಮಿಸಿ ಪರಿಹಾರದ ಭರವಸೆಯನ್ನು ನೀಡಿದ್ದಾರೆ ಆದರೆ ಪರಿಹಾರ ಭರವಸೆಯಾಗಿ ಉಳಿಯದೆ, ಕೂಡಲೆ ತಾಲೂಕು ಆಡಳಿತ,ಮಹಾನಗರ ಪಾಲಿಕೆಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ನೀರು ನುಗ್ಗಿದ ಮನೆಗಳ ಸರ್ವೆ ನಡೆಸಿ ಸೂಕ್ತ ಪರಿಹಾರ ನೀಡಬೇಕು, ರಾಜ ಕಾಲುವೆಯ ಹೂಳು ತೆಗೆಸಿ ಜೊತೆಗೆ ನಗರದಲ್ಲಿ ಹಲವು ವಾರ್ಡ್ ಗಳಲ್ಲಿ ಸ್ಮಾರ್ಟ್ ಸಿಟಿ ವ್ಯಾಪ್ತಿಯಲ್ಲಿ ಚರಂಡಿಗಳು ನಿರ್ಮಾಣವಾದ ದಿನದಿಂದ ಹೂಳು ತೆಗೆಯದೆ ಸಣ್ಣ ಮಳೆಯಲ್ಲೂ ಅವಾಂತರ ಸೃಷ್ಟಿಸುತ್ತಿದ್ದು. ಹಾಗೂ ಸ್ಮಾರ್ಟ್ ಸಿಟಿ ವ್ಯಾಪ್ತಿಗೆ ಒಳಪಡದ ಹಲವು ವಾರ್ಡುಗಳಲ್ಲಿ ಚರಂಡಿಗಳು, ಡೆಕ್ ಸ್ಲಾಬ್ ಗಳು ಶಿಥಿಲಗೊಂಡಿದ್ದು. ಇಂತಹ ಶಿಥಿಲಗೊಂಡ ಚರಂಡಿಗಳನ್ನು ಮರು ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಯುವ ಕಾಂಗ್ರೆಸ್ ಮುಖಂಡ ಹೆಚ್.ಪಿ. ಗಿರೀಶ್ ಆಗ್ರಹಿಸಿದ್ದಾರೆ.

ಏಪ್ರಿಲ್ 8 ರಿಂದ 14 ವರೆಗೆ ಮಕ್ಕಳಿಗೆ ಉಚಿತ ವ್ಯಕ್ತಿತ್ವ ವಿಕಸನ ಶಿಬಿರ- ಬ್ರಹ್ಮಕುಮಾರಿ ಸ್ವಾತಿ ಅಕ್ಕ

0

2026 ಬೇಸಿಗೆ ರಜಾ ಪ್ರಯುಕ್ತ ದಿನಾಂಕ :-08-04-26 ರಿಂದ 14-04-26 ರ ವರೆಗೆ ಬೆಳಗ್ಗೆ 10 ರಿಂದ ಮದ್ಯಾಹ್ನ 1 ಗಂಟೆಯ ವರೆಗೆ 11 ರಿಂದ 16 ವರ್ಷದ ವಯೋಮಿತಿ ಇರುವ ಮಕ್ಕಳಿಗೆ ಸರ್ಜಿ ಕನ್ವೇನ್ಷನ್ ಹಾಲ್ ಎದುರುಗಡೆ, ಭಂಡಾರಿ ಗ್ಯಾಸ್ ಗೌಡನ್ ಹತ್ತಿರ ಸವಳಂಗ ರಸ್ತೆ, ನವುಲೆ,ಶಿವಮೊಗ್ಗ ದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಬೇಸಿಗೆ ಶಿಬಿರದ ಪ್ರಯುಕ್ತ ಮಕ್ಕಳಿಗೆ ಯೋಗ, ಚಿತ್ರ ಕಲೆ, ನೈತಿಕ ಶಿಕ್ಷಣ, ನೆನಪಿನ ನಿರ್ವಹಣೆ, ಆರೋಗ್ಯ, ಶ್ಲೋಕ ವಚನ ಹಾಗೂ ಇನ್ನಿತರ ವಿಷಯಗಳ ಬಗ್ಗೆ ವ್ಯಕ್ತಿತ್ವ ವಿಕಸನ ಶಿಬಿರವನ್ನು ಉಚಿತವಾಗಿ ಏರ್ಪಡಿಸಲಾಗಿದೆ. ಶಿಬಿರಕ್ಕೆ ಪೂರ್ಣವಾಗಿ ಭಾಗವಹಿಸಿದ ಮಕ್ಕಳಿಗೆ ಸರ್ಟಿಫಿಕೇಟ್ ಕೊಡಲಾಗುವುದು. ಮಕ್ಕಳು ತಮ್ಮ ಹೆಸರನ್ನು ದಿನಾಂಕ 07-04-2026 ಮಂಗಳವಾರ ಸಂಜೆಯ ಒಳಗಾಗಿ ಈ 7975303219 ನಂಬರ್ ಗೆ ಉಚಿತವಾಗಿ ನೋಂದಾಯಿಸಿ ಕೊಳ್ಳುವುದರ ಮೂಲಕ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದು ತಮ್ಮ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಿ ಎಂದು ರಾಜಯೋಗಿನಿ ಬ್ರಹ್ಮಕುಮಾರಿ ಸ್ವಾತಿ ಅಕ್ಕನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.