Thursday, March 26, 2026
Thursday, March 26, 2026
Home Blog Page 1390

ಪುಣ್ಯಕೋಟಿ ದತ್ತು ಯೋಜನೆಗೆ ರಾಜ್ಯ ಸರ್ಕಾರಿ ನೌಕರರ ಸಂಘದ ದೇಣಿಗೆ

0

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ, ರಾಜ್ಯ ಸರ್ಕಾರದ ‘ಪುಣ್ಯಕೋಟಿ ದತ್ತು ಯೋಜನೆ’ಗೆ ರಾಜ್ಯ ಸರ್ಕಾರಿ ನೌಕರರು ಹಾಗೂ ಸರ್ಕಾರೇತರದ ಸಂಸ್ಥೆಗಳ ನೌಕರರು ದೇಣಿಗೆ ನೀಡಲು ಸಮ್ಮತಿಸಿರುವ ಕುರಿತು ಸಮ್ಮತಿ ಪತ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಸ್ತಾಂತರಿಸಿದರು.

ಮುಖ್ಯಮಂತ್ರಿಯವರು ಇತ್ತೀಚೆಗೆ ಸಮಾರಂಭವೊಂದರಲ್ಲಿ ಮಾಡಿದ ಮನವಿಗೆ ಸ್ಪಂದಿಸಿದ ನೌಕರರ ಸಂಘವು ರಾಜ್ಯ ಸರ್ಕಾರಿ ನೌಕರರು ಮತ್ತು ಸರ್ಕಾರದ ಇತರ ಸಂಸ್ಥೆಗಳ ನೌಕರರು ಸ್ವ-ಇಚ್ಛೆಯಿಂದ ದೇಣಿಗೆ ನೀಡಲು ಮುಂದಾಗಿದ್ದು, ಗ್ರೂಪ್ ಎ ಅಧಿಕಾರಿಗಳು 11,000 ರೂ., ಗ್ರೂಪ್ ಬಿ ಅಧಿಕಾರಿಗಳು 4000 ರೂ. ಹಾಗೂ ಸಿ ವೃಂದದ ನೌಕರರು 400 ರೂ. ದೇಣಿಗೆಯನ್ನು ಒಂದು ಬಾರಿಗೆ ಪಾವತಿಸಲು ಸಮ್ಮತಿಸಿದ್ದಾರೆ. ಇದನ್ನು ಅಕ್ಟೋಬರ್ ಹಾಗೂ ನವೆಂಬರ್ ತಿಂಗಳ ವೇತನದಲ್ಲಿ ಕಟಾಯಿಸುವಂತೆ ಕೋರಿದ್ದಾರೆ. ಈ ಮೊತ್ತವು ಸುಮಾರು 80 ರಿಂದ 100 ಕೋಟಿ ರೂ. ಗಳಾಗಲಿದೆ ಎಂದು ಅಂದಾಜಿಸಲಾಗಿದೆ.

ನೌಕರರ ಸಂಘದ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ರಾಜ್ಯ ಸರ್ಕಾರದ ಗೋಶಾಲೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮುದಿ ಗೋವುಗಳು ಆಶ್ರ ಯ ಪಡೆದಿವೆ. ಇವುಗಳ ಸಮರ್ಪಕ ಪಾಲನೆ ಪೋಷಣೆ ನಮ್ಮೆಲ್ಲರ ಕರ್ತವ್ಯವೂ ಹೌದು. ಈ ಪುಣ್ಯದ ಕೆಲಸದಲ್ಲಿ ಸರ್ಕಾರಿ ನೌಕರರು ಸ್ವಯಂ ಪ್ರೇರಣೆಯಿಂದ ಕೈಜೋಡಿಸಲು ಮುಂದಾಗಿರುವುದು ಅಭಿನಂದನಾರ್ಹ ಎಂದು ತಿಳಿಸಿದರು.

ನಮ್ಮ ಹೆಣ್ಣುಮಕ್ಕಳು ಹಿಜಾಬ್ ಧರಿಸಲು ಅವಕಾಶಕೊಡಿ-ಅಸಾಸುದ್ದೀನ್

0

ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ವಿಭಜಿತ ತೀರ್ಪಿಗೆ ಪ್ರತಿಕ್ರಿಯಿಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಮುಸ್ಲಿಂ ಹುಡುಗಿಯರ ಹಿಜಾಬ್ ಅನ್ನು ತೆಗೆದುಹಾಕುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗೋಲ್ಕೊಂಡಾ ಕೋಟೆಯಲ್ಲಿ ನಡೆದ ಸಭೆಯಲ್ಲಿ ಸಂವಾದದ ಸಂದರ್ಭದಲ್ಲಿ, ಹಿಜಾಬ್ ನಿಷೇಧದ ಕುರಿತು ಸುಪ್ರೀಂ ಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಿದ ಓವೈಸಿ, ಮುಸ್ಲಿಂ ಮಹಿಳೆಯರು ತಮ್ಮ ತಲೆಯನ್ನು ಮುಚ್ಚಲು ಬಯಸಿದರೆ, ಅವರು ತಮ್ಮ ಬುದ್ಧಿಯನ್ನು ಮುಚ್ಚಿಕೊಳ್ಳುತ್ತಿದ್ದಾರೆ ಎಂದು ಅರ್ಥವಲ್ಲ ಎಂದು ಹೇಳಿದ್ದಾರೆ.

ಮುಸ್ಲಿಮರು ಚಿಕ್ಕ ಮಕ್ಕಳಿಗೆ ಹಿಜಾಬ್ ಧರಿಸಲು ಒತ್ತಾಯಿಸುತ್ತಿದ್ದಾರೆ ಎಂದು ಅವರು ಹೇಳುತ್ತಾರೆ. ನಾವು ನಿಜವಾಗಿಯೂ ನಮ್ಮ ಹುಡುಗಿಯರನ್ನು ಒತ್ತಾಯಿಸುತ್ತಿದ್ದೇವೆಯೇ ನಮ್ಮ ಹೆಣ್ಣುಮಕ್ಕಳು ಹಿಜಾಬ್ ಧರಿಸಲು ಬಿಡಿ. ನೀವು ಬಯಸಿದರೆ ನಿಮ್ಮ ಬಿಕಿನಿಯನ್ನು ಧರಿಸಿ ಎಂದು ಎಐಎಂಐಎಂ ನಾಯಕ ಕಿಡಿ ಕಾರಿದ್ದಾರೆ.

ಹಿಜಾಬ್ ಮುಸ್ಲಿಮರು ಹಿಂದುಳಿದಿರುವುದನ್ನು ತೋರಿಸುತ್ತದೆಯೇ ಮುಸ್ಲಿಂ ಮಹಿಳೆಯರು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿಲ್ಲವೇ ಎಂದು ಪ್ರಶ್ನಿಸಿದರು.

ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮಿಂಚಿದ ಕರ್ನಾಟಕ

0

ಗುಜರಾತ್ ನಲ್ಲಿ ಅ.12ರ ಬುಧವಾರ ಮುಕ್ತಾಯಗೊಂಡ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕಕ್ಕೆ 88 ಪದಕಗಳು ಲಭಿಸಿದೆ. 27 ಚಿನ್ನದ ಪದಕಗಳು,23 ಬೆಳ್ಳಿ ಹಾಗೂ 38 ಕಂಚಿನ ಪದಕಗಳು ಬಂದಿವೆ.

ಈ ಮುಖಾಂತರ ದೇಶದಲ್ಲಿ ಪದಕ ವಿಜೇತ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದೆ. 21 ವರ್ಷಗಳ ನಂತರ ಕರ್ನಾಟಕ ಪುರುಷರ ಹಾಕಿ ತಂಡ ಚಿನ್ನದ ಪದಕ ಗೆದ್ದುಕೊಂಡಿದೆ.ಇದೇ ಪ್ರಥಮ ಬಾರಿಗೆ ಕರ್ನಾಟಕಕ್ಕೆ ಟಾಪ್ 5 ಸ್ಥಾನ ಸಿಕ್ಕಿದೆ.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಂಚಿಕೊಂಡ ಅಂಕಿಅಂಶಗಳ ಪ್ರಕಾರ, 2007 ರಲ್ಲಿ ರಾಜ್ಯವು 21 ಚಿನ್ನ ಸೇರಿದಂತೆ 71 ಪದಕಗಳನ್ನು ಗೆದ್ದುಕೊಂಡಿತ್ತು. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಯುವ ಸಬಲೀಕರಣ ಮತ್ತು ಕ್ರೀಡಾ ನಿರ್ದೇಶನಾಲಯದ ಆಯುಕ್ತ ಎಚ್ಎನ್ ಗೋಪಾಲಕೃಷ್ಣ, ರಾಜ್ಯವು ಕ್ರೀಡಾ ಮೂಲಸೌಕರ್ಯವನ್ನು ಸುಧಾರಿಸಲು ಮತ್ತು ಕ್ರೀಡಾಪಟುಗಳಿಗೆ ನೀಡುವ ಇತರ ಸೌಲಭ್ಯಗಳಿಗೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ಹೆಚ್ಚಿನ ಪದಕ ಗೆಲ್ಲಲು ಸಾಧ್ಯವಾಯಿತು. ರಾಜ್ಯ ಸರ್ಕಾರವು ಇತ್ತೀಚೆಗೆ ಅಮೃತ ಕ್ರೀಡಾ ಯೋಜನೆಯನ್ನು ಪ್ರಾರಂಭಿಸಿದೆ. ವಿದೇಶದಿಂದ ತರಬೇತಿ ಪಡೆಯಲು 75 ಕ್ರೀಡಾಪಟುಗಳಿಗೆ ತಲಾ 10 ಲಕ್ಷ ರೂಪಾಯಿ ನೀಡುತ್ತಿದೆ.

ಸರ್ಕಾರ ಈಗ ಗ್ರಾಮೀಣ ಪ್ರದೇಶದ ಕ್ರೀಡಾ ಪ್ರತಿಭೆಗಳನ್ನು ಪೋಷಿಸುವತ್ತ ಗಮನಹರಿಸುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ 6,700 ಕ್ಕೂ ಹೆಚ್ಚು ಆಟದ ಮೈದಾನಗಳು, ಟ್ರ್ಯಾಕ್ಗಳು, ವಾಲಿಬಾಲ್ ಮೈದಾನಗಳು ಮತ್ತು ಇತರ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು 504 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸಹಯೋಗದೊಂದಿಗೆ ಎಂ ಎನ್ಆರ್ ಇಜಿಎ ಯೋಜನೆಗಳ ಅಡಿಯಲ್ಲಿ ಈಗಾಗಲೇ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು. ತರಬೇತುದಾರರ ನೇಮಕಾತಿ ಕುರಿತು ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳಿಗೆ ತರಬೇತಿ ನೀಡಲು ಇಲಾಖೆಯು ಪ್ರಥಮ ಬಾರಿಗೆ 176 ತರಬೇತುದಾರರನ್ನು ನೇಮಿಸಿಕೊಳ್ಳುತ್ತಿದೆ.

176 ರಲ್ಲಿ, ಶೇ. 50 ಮೀಸಲಾತಿಯು ಕ್ರೀಡಾ ಕೋಟಾದ ಅಭ್ಯರ್ಥಿಗಳಿಗೆ ಮತ್ತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿದವರಿಗೆ ಇರುತ್ತದೆ ಎಂದರು. ಇಷ್ಟು ವರ್ಷಗಳ ಕಾಲ ಶಿಕ್ಷಣ ಇಲಾಖೆಯು ಪಿಟಿ ಶಿಕ್ಷಕರಿಗೆ ತರಬೇತಿ ನೀಡಲು ಶಿಕ್ಷಣ ಇಲಾಖೆ ಮೇಲೆ ಅವಲಂಬಿತವಾಗಿತ್ತು. ಆದರೆ ಈಗ, ನಾವು ನಮ್ಮದೇ ಆದ ತಜ್ಞರನ್ನು ಹೊಂದಿದ್ದರೆ ಸಹಾಯವಾಗುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ 181 ಕೋವಿಡ್ ಸೋಂಕು ಪ್ರಕರಣ

0

ರಾಜ್ಯದಲ್ಲಿ ಗುರುವಾರ ಹೊಸದಾಗಿ 181 ಕೋವಿಡ್‌ ಸೋಂಕು ಪ್ರಕರಣ ವರದಿಯಾಗಿದ್ದು, 3 ಮಂದಿ ಮೃತಪಟ್ಟಿದ್ದಾರೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 110 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇಬ್ಬರು ಬಲಿಯಾಗಿದ್ದಾರೆ.

ಮೈಸೂರಿನಲ್ಲಿ 10 ಪ್ರಕರಣ ದಾಖಲಾಗಿದೆ. ಓರ್ವ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾನೆ. ಉಳಿದ ಜಿಲ್ಲೆಗಳಲ್ಲಿ ಬೆರಳೆಣಿಕೆಯಷ್ಟು ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಒಟ್ಟು 2,848 ಕೋವಿಡ್‌ ಪ್ರಕರಣಗಳು ಸಕ್ರಿಯವಾಗಿದೆ. ಗುರುವಾರ 146 ಮಂದಿ ಬಿಡುಗಡೆ ಹೊಂದಿದ್ದಾರೆ.

ಬೆಂಗಳೂರಿನಲ್ಲಿ ಅತೀ ಹೆಚ್ಚು 2,573 ಕೋವಿಡ್‌ ಕೇಸ್‌ಗಳು ಸಕ್ರೀಯವಾಗಿದ್ದರೆ, ರಾಮನಗರ 43, ಮೈಸೂರು 39, ಬಳ್ಳಾರಿ 33, ದ.ಕನ್ನಡದಲ್ಲಿ 23 ಕೋವಿಡ್‌ ಪ್ರಕರಣ ಪತ್ತೆಯಾಗಿದೆ. ನಂತರದ ಸ್ಥಾನದಲ್ಲಿವೆ.

ಪೊಲೀಸ್ ಇಲಾಖೆಯಲ್ಲಿ 1137 ಪಿಸಿ ಹುದ್ದೆಗಳ ಭರ್ತಿಗೆ ಆದೇಶ

ರಾಜ್ಯದಲ್ಲಿ ಖಾಲಿ ಇರುವ 1137 ಪೊಲೀಸ್ ಸಿವಿಲ್‌ ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪೊಲೀಸ್‌ ಇಲಾಖೆಯ ಆಧಿಕೃತ ವೆಬ್‌ಸೈಟ್‌ನಲ್ಲಿ ಅ. 20ರಿಂದ ಅರ್ಜಿ ಸಲ್ಲಿಸಬಹುದಾಗಿದೆ.

ನ.21 ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ. ನ.23 ಶುಲ್ಕ ಪಾವತಿಸಲು ಕೊನೆ ದಿನವಾಗಿದೆ.

ವಯೋಮಿತಿ, ವಿದ್ಯಾರ್ಹತೆ, ಅರ್ಜಿ ಸಲ್ಲಿಕೆ ವಿಧಾನ ಮತ್ತು ಇತರೆ ಮಾಹಿತಿಗಾಗಿ https://ksp.karnataka.gov.in/ ಅಥವಾ https://ksp-recruitment.in/

ಭರಮಸಾಗರದಲ್ಲಿ ಮಳೆ ಯದ್ವಾತದ್ವ ಸುರಿದು ಕೆರೆ ಏರಿ ಬಿರುಕು

0

ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸತತ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ವರುಣನ ಅಬ್ಬರಕ್ಕೆ ಕೆರೆ- ಕಟ್ಟೆಗಳು ಉಕ್ಕಿ ಹರಿಯುತ್ತಿವೆ. ಇದರಿಂದ‌ ಜಿಲ್ಲೆಯ ಪ್ರಮುಖ ಬೆಳೆಗಳಾದ ಮೆಕ್ಕೆಜೋಳ, ಅಡಿಕೆ, ಜೋಳ, ರಾಗಿ ಬೆಳೆಗಳಿಗೆ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.

ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ, ಸಿರಿಗೆರೆ, ವಿಜಾಪುರ, ಬಿದರಕೆರೆ ಸುತ್ತಮುತ್ತಲಿನ ಕೆರೆಯು ತುಂಬಿ ಕೊಡಿ ಮೂಲಕ ನೀರು ಹೋರಹೋಗುತ್ತಿದೆ. ಸಾವಿರಾರು ಎಕರೆ ಕೃಷಿ ಭೂಮಿಗೆ ನೀರು ನುಗ್ಗಿದೆ.

ಇದರಿಂದ ಕೊಯ್ಲಿಗೆ ಬಂದ ಮೆಕ್ಕೆಜೋಳ ಬೆಳೆ ಜಲಾವೃತವಾಗಿದೆ. ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇನ್ನೂ ಭರಮಸಾಗರ ಗ್ರಾಮದಲ್ಲಿ ಏತ ನೀರಾವರಿ ಯೋಜನೆ ಮೂಲಕ ನಿರ್ಮಾಣವಾಗಿರುವ ಬಿಚ್ಚುಗತ್ತಿ ಭರಮಣ್ಣ ನಾಯಕ ನಿರ್ಮಾಣ ಮಾಡಿರುವ ಸುಮಾರು 300 ವರ್ಷಕ್ಕಿಂತ ಹಿಂದಿನ ಹೆಸರಾಂತ 1000 ಎಕರೆ ವಿಸ್ತೀರ್ಣದ ದೊಡ್ಡ ಕೆರೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವ ಪರಿಣಾಮ ಕೆರೆಯ ಪ್ರಮುಖ ಏರಿ, ನೀರಿನ ಒತ್ತಡದಿಂದ ಬಿರುಕು ಬಿದ್ದ ಪರಿಣಾಮ ಸ್ಥಳೀಯ ಜನರ ಮತ್ತು ರೈತರ ಆತಂಕದ ಪರಿಣಾಮ ಭರಮಸಾಗರದ ಕೆರೆಯ ತಡೆಗೋಡೆ ಯನ್ನು ಸಡಿಲಿಸಿ ಹೆಚ್ಚಿನ ನೀರನ್ನು ಹೊರಗೆ ಬಿಡಲಾಗಿದೆ.

ಕೆರೆ ಏರಿಯಲ್ಲಿ ಕಾಣಿಸಿರುವ ಬಿರುಕನ್ನು ಸರಿಪಡಿಸಲಾಗಿತ್ತಿದೆ, ಬಿರುಕು ಬಿಟ್ಟಿರುವ ಏರಿಯ ಮೇಲೆ ವಾಹನ ಸಂಚಾರ ನಿಲ್ಲಿಸಲಾಗಿದೆ. ಹಿಂದೆ ಕಳಪೆ ರಸ್ತೆ ಕಾಮಗಾರಿ ಹಾಗೂ ಏತನೀರಾವರಿ ಯೋಜನೆಯಲ್ಲಿ ಅಪಾರ ಪ್ರಮಾಣದ ಹಣ ಖರ್ಚು ಮಾಡಿ ಕೆರೆಯನ್ನು ನವೀಕರಣ ಮಾಡಿದ ಸಂಧರ್ಭದಲ್ಲಿ ಏರಿಯ ಭದ್ರತೆ, ಸುರಕ್ಷತೆಗೆ ಸರಿಯಾದ ಮುತುವರ್ಜಿ ತೆಗೆದುಕೊಂಡು ನೀರನ್ನು ಹರಿಸಬೇಕಾಗಿತ್ತು. ಆದರೆ, ಆ ಕೆಲಸ ಮಾಡದೆ ನೀರನ್ನು ಹರಿಸಿದ ಪರಿಣಾಮ ಇಂದು ಈ ಸಮಸ್ಯೆ ಎದುರಿಸಬೇಕಾಗಿದೆ.

ಸಂತೋಷದ ವಿಚಾರ ಎಂದರೆ ಈಗ ಏರಿಯ ಭದ್ರತೆಗೆ ಗಮನ ಹರಿಸಿ ಕೆಲಸ ಮಾಡುತ್ತಿದ್ದಾರೆ, ನೋಡೋಣ ಇದು ಎಷ್ಟರ ಮಟ್ಟಿಗೆ ಸರಿಯಾಗುತ್ತದೆ, ಆ ಕೆಲಸಕ್ಕೆ ನಮ್ಮ ಭರಮಸಾಗರದ ಜನತೆ ರೈತರು ರಾಜಕೀಯ ಮುಖಂಡರು ಈ ಏರಿ ಭದ್ರತೆ ಕೆಲಸ ಮುಚ್ಚುತ್ತಾರೆ.

ಹಳ್ಳಿ ಹಳ್ಳಿಗಳ ನೀರಿನ ಕಾಲುವೆಯಲ್ಲಿ ಹರಿವು ಹೆಚ್ಚಾದ ಪರಿಣಾಮ ಹಳ್ಳಗಳು ತುಂಬಿ ಹರಿಯುತ್ತಿದೆ. ಅಪಾರ ಪ್ರಮಾಣ ನೀರು ರೈತರ ಜಮೀನಿಗೆ ನುಗ್ಗುತ್ತಿದೆ. ಮಳೆ ನೀರಿನಿಂದ ಭರಮಸಾಗರ ಹೋಬಳಿಯ, ಹಳ್ಳ ಉಕ್ಕಿ ಹರಿಯುತ್ತಿರುವ ಕಾರಣ ದೊಡ್ಡ ಮತ್ತು ಸಣ್ಣ ಕೆರೆಗಳ ಸುತ್ತಮುತ್ತಲಿನ ಜಮೀನು ಪೂರ್ಣವಾಗಿ ನೀರಾಗಿದೆ.

ಈ ಹಿಂದೆ ರೈತರು, ಭರಮಸಾಗರ ಜನರು ಅನೇಕ ರೀತಿಯ ಒತ್ತಡದಿಂದ ಕರ್ನಾಟಕ ನೀರಾವರಿ ನಿಗಮದ ಎಂಜಿನಿಯರ್‌ಗಳು ಕೆರೆ ಭಾಗಕ್ಕೆ ಭೇಟಿ ನೀಡಿ ದುರಸ್ತಿ ಕಾರ್ಯ ಮಸಡಿರುತ್ತಾರೆ ಆದರೆ ಅದು ಸರಿಯಾಗಿ ಸಮರ್ಪಕವಾಗಿ ಮಾಡದೆ ಮತ್ತೆ ಹೆಚ್ಚಿನ ಬಿರುಕು ಕಾಣಿಸಿಕೊಂಡಿದೆ ಮತ್ತೆ ಬಿರುಕಿಗೆ ಮಣ್ಣು ತುಂಬುವ ಕಾರ್ಯ ಪ್ರಾರಂಭವಾಗಿದೆ. ಎಷ್ಟರ ಮಟ್ಟಿಗೆ ಸರಿಯಾಗುತ್ತದೆ ಕಾದು ನೋಡಬೇಕಿದೆ.

ಅಡಿಕೆ, ತೆಂಗು ತೋಟ, ಕೊಯ್ಲಿಗೆ ಬಂದ ಮೆಕ್ಕೆಜೋಳ, ರಾಗಿ, ಜೋಳದ ಜಮೀನುಗಳು ಮುಳುಗಡೆಯಾಗಿವೆ, ಕೆರೆ ಕೋಡಿಗಳಿಂದ ನೀರು ಹರಿದು ತಗ್ಗು ಪ್ರದೇಶದಲ್ಲಿರುವ ಜಮೀನುಗಳು ಮುಳುಗಡೆಯಾಗಿದೆ.
ಇನ್ನೂ ರೈತರಿಗೆ ಆದ ಹಾನಿಯನ್ನು ಸರ್ಕಾರ ಯಾವರೀತಿ ಅವರ ಸಮಸ್ಯೆ ಬಗೆ ಹರಿಸುತ್ತದೆ ಕಾದು ನೋಡಬೇಕಿದೆ.

ವರದಿ ಕೃಪೆ:
ಮುರುಳೀಧರ್ ನಾಡಿಗೇರ್

ಬಹು ವೈದ್ಯಕೀಯ ಪದ್ಧತಿಗಳಿಂದ ಮಧುಮೇಹಕ್ಕೆ ಚಿಕಿತ್ಸೆಜನ ಜಾಗೃತಿ ಸಮಾವೇಶ

0

ವಿನ್ ಲೈಫ್ ಟ್ರಸ್ಟ್ ವತಿಯಿಂದ ಮಧುಮೇಹ ಜನಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.

ಇದೇ ಮೊದಲ ಬಾರಿಗೆ ಸಕ್ಕರೆ ಕಾಯಿಲೆ ನಿವಾರಣೆ ಹಾಗೂ ನಿಯಂತ್ರಣಕ್ಕೆ ಅಲೋಪತಿ, ಆಯುರ್ವೇದ ಮತ್ತು ಯೋಗ ಸೇರಿದಂತೆ ಎಲ್ಲಾ ವೈದ್ಯಕೀಯ ಪದ್ಧತಿಗಳ ಸಮಾಧಮ ಹಾಗೂ ಮುಕ್ತ ಚರ್ಚೆಯನ್ನು ಅಕ್ಟೋಬರ್ 16 ,2022 ರ ಬೆಳಿಗ್ಗೆ 9:00 ಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ಈ ಸಮಾವೇಶದಲ್ಲಿ ಸಕ್ಕರೆ ಕಾಯಿಲೆಗೆ ಸಂಬಂಧಪಟ್ಟಂತೆ ಆಧುನಿಕ ಆವಿಷ್ಕಾರಗಳು, ಬೃಹತ್ ವಸ್ತು ಪ್ರದರ್ಶನ, ಸಂವಾದ, ಪ್ರಾತ್ಯಕ್ಷಿಕೆ, ಸಂವಾದ, ರಸಪ್ರಶ್ನೆ ಮತ್ತು ಉಪನ್ಯಾಸವನ್ನು ಏರ್ಪಡಿಸಲಾಗಿದೆ.

ಈ ಸಮಾವೇಶದಲ್ಲಿ ಭಾಗವಹಿಸಿ ಸಕ್ಕರೆ ಕಾಯಿಲೆ ಕುರಿತಾಗಿ ಹೆಚ್ಚಿನ ಅರಿವಿನ ಬಗ್ಗೆ ಮಾಹಿತಿ ನೀಡಲಾಗುತ್ತದೆ.

ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

ರಾಜ್ಯದ ಆಯ್ದ 16 ಜಿಲ್ಲೆಗಳಿಗೆ 24 ಗಂಟೆಯೊಳಗೆ ಮಳೆಹಾನಿ ಪರಿಹಾರಕ್ಕೆ ಸಿಎಂ ಸೂಚನೆ

0

ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜೀವ ಹಾನಿಯ ಜೊತೆಗೆ ಹೊಲಗದ್ದೆಗಳಿಗೆ ನೀರು ನುಗ್ಗಿರುವ ಪರಿಣಾಮ ಬೆಳೆ ನಷ್ಟವೂ ಸಂಭವಿಸಿದೆ. ಇದರ ಜೊತೆಗೆ ರಸ್ತೆಗಳು ಸಹ ಕಿತ್ತು ಹೋಗಿವೆ.

ಇದೀಗ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ರಾಜ್ಯದ ಆಯ್ದ 16 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮಳೆ ಹಾನಿಗೆ ಸಂಬಂಧಿಸಿದಂತೆ 24 ಗಂಟೆಗಳೊಳಗಾಗಿ ಪರಿಹಾರ ವಿತರಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಮಳೆಯಿಂದಾಗಿ ಮೃತಪಟ್ಟ 13 ಮಂದಿಯ ಕುಟುಂಬಗಳಿಗೆ ಈಗಾಗಲೇ ಪರಿಹಾರ ನೀಡಲಾಗಿದೆ ಎಂದು ತಿಳಿಸಿರುವ ಮುಖ್ಯಮಂತ್ರಿಗಳು, ಯಾವುದೇ ವಿಳಂಬ ಮಾಡದೆ ತ್ವರಿತವಾಗಿ ಮಳೆ ಹಾನಿ ಪರಿಹಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

ಐದು ರೂಪಾಯಿ ಡಾಕ್ಟರ್ ಶಂಕರೇಗೌಡರಿಗೆ ಇಂಡಿಯನ್ ಆಫ್ ದ ಇಯರ್ ಪ್ರಶಸ್ತಿ

0

ರಾಜ್ಯದಲ್ಲಿ ಕೇವಲ 5 ರೂಪಾಯಿಯಲ್ಲಿ ವೈದ್ಯಕೀಯ ಚಿಕಿತ್ಸೆ ನೀಡುವ ಮುಖಾಂತರ ಸಾಧನೆಗೈದ ಮಂಡ್ಯದ ವೈದ್ಯ ಶ್ರೀ ಶಂಕರೇಗೌಡರಿಗೆ. ಸಾಮಾಜಿಕ ಬದಲಾವಣೆ ವಿಭಾಗದಲ್ಲಿ ಇಂಡಿಯನ್‌ ಆಫ್‌ ದಿ ಇಯರ್‌ 2022 ಖಾಸಗಿ ಸಂಸ್ಥೆಯೊಂದು ಗುರುತಿಸಿ ಗೌರವ ಸಲ್ಲಿಸಿದ್ದಾರೆ.

ನಾನು 1982ರಿಂದ 5 ರೂಪಾಯಿಯಲ್ಲಿ ಚಿಕಿತ್ಸೆ ನೀಡುತ್ತ ಬಂದಿದ್ದೇನೆ. ನಮ್ಮಲ್ಲಿ ಯಾವ ಜ್ಞಾನವಿದೆಯೋ ಅದನ್ನು ಎಲ್ಲರಿಗೂ ಸಮಾಜವಾಗಿ ನೀಡಬೇಕು. ಹಾಗಾಗಿ ನನ್ನ ಜ್ಞಾನವನ್ನು ನನ್ನ ಶಿಕ್ಷಣಕ್ಕೆ ಕಾರಣರಾದ ಜನರಿಗೆ ನೀಡಬೇಕು ಎಂಬ ಉದ್ದೇಶದಿಂದ ಪದವಿ ಪಡೆದ ಬಳಿಕ ಈ ವೃತ್ತಿ ಪ್ರಾರಂಭಿಸಿದ್ದೇನೆ ಎಂದು ಪ್ರಶಸ್ತಿ ಸ್ವೀಕರಿಸಿದ ಬಳಿ ಮಾತನಾಡಿದ್ದಾರೆ.

ಈ ಕಾರ್ಯಕ್ರಮವೂ ನವದೆಹಲಿಯಲ್ಲಿ ಆಯೋಜಿಸಿದೆ. ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಪ್ರಶಸ್ತಿ ಪ್ರಧಾನ ಮಾಡಿದ್ದಾರೆ.

ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಟ್ವಿಟ್ಟರ್‌ನಲ್ಲಿ ಟ್ವೀಟ್‌ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

5 ರೂಪಾಯಿ ಡಾಕ್ಟರ್ ಎಂದೇ ಪ್ರಖ್ಯಾತಿಗಳಿಸಿರುವ ಮಂಡ್ಯದ ವೈದ್ಯ ಶ್ರೀ ಶಂಕರೇಗೌಡರಿಗೆ ಇಂಡಿಯನ್‌ ಆಫ್‌ ದಿ ಇಯರ್‌ ಪ್ರಶಸ್ತಿ ಲಭಿಸಿರುವುದು ಅತ್ಯಂತ ಅಭಿನಂದನಾರ್ಹ ಸಂಗತಿಯಾಗಿದೆ. ಗ್ರಾಮೀಣ ಭಾಗದ ಜನರ ಸೇವೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಟ್ವೀಟ್‌ ಮಾಡಿದ್ದಾರೆ.

ಉಕ್ರೇನ್ ನ್ಯಾಟೋ ಸೇರಿದರೆ ಮಹಾಯುದ್ಧ ಖಚಿತರಷ್ಯ ಎಚ್ಚರಿಕೆ

0

ಅಮೆರಿಕ ನೇತೃತ್ವದ ಸೇನಾ ಮೈತ್ರಿಕೂಟ ನ್ಯಾಟೊಗೆ ಉಕ್ರೇನ್‌ ಸೇರಿದರೆ, ಆ ರಾಷ್ಟ್ರದಲ್ಲಿನ ಸಂಘರ್ಷವು ಮೂರನೇ ಮಹಾಯುದ್ಧಕ್ಕೆ ದಾರಿಯಾಗುವುದು ಖಚಿತ ಎಂದು ರಷ್ಯಾದ ಭದ್ರತಾ ಸಮಿತಿ ಗುರುವಾರ ಗಂಭೀರ ಎಚ್ಚರಿಕೆ ನೀಡಿದೆ.

ನ್ಯಾಟೊ ಸೇರಿದರೆ ಸಂಘರ್ಷ ಉಲ್ಬಣಿಸಿ, ಮೂರನೇ ವಿಶ್ವ ಸಮರ ಸಂಭವಿಸುವುದು ಖಚಿತ ಎನ್ನುವುದು ಉಕ್ರೇನ್‌ಗೂ ಚೆನ್ನಾಗಿಯೇ ಗೊತ್ತಿದೆ’ ಎಂದು ರಷ್ಯಾದ ಭದ್ರತಾ ಮಂಡಳಿಯ ಉಪ ಕಾರ್ಯದರ್ಶಿ ಅಲೆಕ್ಸಾಂಡರ್ ವೆನೆಡಿಕ್ಟೊವ್ ಹೇಳಿದ್ದಾರೆ. ಈ ಹೇಳಿಕೆ ಉಲ್ಲೇಖಿಸಿ ರಷ್ಯಾದ ಸರ್ಕಾರಿ ನಿಯಂತ್ರಣ ಸುದ್ದಿಸಂಸ್ಥೆ ‘ಟಾಸ್‌’ ಕೂಡ ವರದಿ ಮಾಡಿದೆ.

‘ಉಕ್ರೇನ್‌ಗೆ ಸದಸ್ಯತ್ವ ನೀಡುವ ಕೋರಿಕೆ ಪರಿಗಣಿಸಿದರೆ ಅದರಿಂದ ಆಗುವ ಸಂಘರ್ಷದ ಪರಿಣಾಮದ ಅರಿವು ಪಶ್ಚಿಮದ ರಾಷ್ಟ್ರಗಳಿಗಿದೆ. ಸದಸ್ಯತ್ವ ನೀಡುವ ತೀರ್ಮಾನ ಸ್ವಾಭಾವಿಕವಾಗಿ ಆತ್ಮಹತ್ಯೆಗೆ ಸಮಾನ ಎನ್ನುವುದನ್ನು ನ್ಯಾಟೊ ಸದಸ್ಯ ರಾಷ್ಟ್ರಗಳು ಅರ್ಥ ಮಾಡಿಕೊಂಡಿವೆ’ ಎಂದು ವೆನೆಡಿಕ್ಟೊವ್ ಹೇಳಿದ್ದಾರೆ.

ಸೆ.30ರಂದು ಪುಟಿನ್ ಅವರು ಆಕ್ರಮಿಸಿಕೊಂಡಿರುವ ಉಕ್ರೇನ್‌ನ ಶೇ 18ರಷ್ಟು ಭೂಪ್ರದೇಶವನ್ನು ರಷ್ಯಾ ಸ್ವಾಧೀನಕ್ಕೆ ಸೇರಿಸಿಕೊಳ್ಳುತ್ತಿರುವುದಾಗಿ ಔಪಚಾರಿಕ ಘೋಷಣೆ ಹೊರಡಿಸಿದ ಕೆಲವೇ ಗಂಟೆಗಳಲ್ಲಿ, ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ನ್ಯಾಟೊದ ತ್ವರಿತಗತಿಯ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿರುವುದಾಗಿ ಅಚ್ಚರಿಯ ಘೋಷಣೆ ಮಾಡಿದ್ದರು.

ಅಣ್ವಸ್ತ್ರ ಸಂಘರ್ಷದ ಪರಿಣಾಮ ಇಡೀ ಭೂಮಂಡಲಕ್ಕೆ: ಅಣ್ವಸ್ತ್ರ ಸಂಘರ್ಷದ ಪರಿಣಾಮ ರಷ್ಯಾ ಮತ್ತು ಪಶ್ಚಿಮದ ಸಂಘಟಿತ ರಾಷ್ಟ್ರಗಳಿಗಷ್ಟೇ ಸೀಮಿತವಾಗುವುದಿಲ್ಲ, ಈ ಗ್ರಹದ ಪ್ರತಿ ದೇಶದ ಮೇಲೂ ದುರಂತ ಉಂಟು ಮಾಡುತ್ತದೆ. ಮನುಕುಲಕ್ಕೆ ವಿನಾಶಕಾರಿಯಾಗಿದೆ. ರಷ್ಯಾ ವಿರುದ್ಧ ರಕ್ಷಣಾತ್ಮಕ ದಾಳಿಗೆ ಝೆಲೆನ್‌ಸ್ಕಿ ಕರೆ ನೀಡಿರುವುದು ಅತ್ಯಂತ ಅಪಾಯಕಾರಿಯಾದುದು ಎಂದು ವೆನೆಡಿಕ್ಟೊವ್ ಹೇಳಿದರು.

ರಷ್ಯಾ ಮತ್ತು ಅಮೆರಿಕ ಅತಿದೊಡ್ಡ ಅಣ್ವಸ್ತ್ರ ಶಕ್ತಿ ರಾಷ್ಟ್ರಗಳಾಗಿವೆ. ವಿಶ್ವದಲ್ಲಿರುವ ಅಣು ಸಿಡಿತಲೆಗಳಲ್ಲಿ ಶೇ 90ರಷ್ಟು ಈ 2 ರಾಷ್ಟ್ರಗಳ ಬತ್ತಳಿಕೆಯಲ್ಲಿವೆ.