Thursday, March 26, 2026
Thursday, March 26, 2026
Home Blog Page 1388

ಉದ್ಯೋಗ ಕಡಿತ ಎಂಬ ತೂಗುಕತ್ತಿ

0

ಇಂದಿನ ಉದ್ಯೋಗ ಜಗತ್ತಿನಲ್ಲಿ ನಿರಾಳ ಅಂದರೆ ಸರ್ಕಾರಿ ನೌಕರಿ.ಏಕೆಂದರೆ ಅತ್ಯಂತ ಸೇವಾ ಭದ್ರತೆ ಅಲ್ಲಿ ಮಾತ್ರ ಲಭ್ಯ.
ಈಗ ಖಾಸಗಿ ಕ್ಷೇತ್ರದಲ್ಲಿ ಆಕರ್ಷಕ ಸಂಬಳ ಮತ್ತು ಸೌಲಭ್ಯಗಳಿಂದ ನೌಕರಿ ಮಾಡುವವರು ಅಪಾರ. ಒಂದುಕ್ಷಣ ಅವರ ಸೇವಾ ಭದ್ರತೆ ಬಗ್ಗೆ ಯೋಚಿಸುವ ಕಾಲ ಬಂದಿದೆ. ಒಂದು ಕಾಲದಲ್ಲಿ ಖಾಸಗಿ ಕ್ಷೇತ್ರಗಳ ಬಗ್ಗೆ
ಆಸಕ್ತಿಯೇ ಇರಲಿಲ್ಲ.
ಐಟಿಬಿಟಿ ಯುಗ ಬಂದಮೇಲೇ ಅದರತ್ತ ಸೆಳೆತ ಶುರುವಾಯಿತು.
ಕೈತುಂಬ ಸಂಬಳ ,ಸವಲತ್ತು ಇತ್ಯಾದಿ.

ವಿದ್ಯುನ್ಮಾನ ಯುಗದ ವರವೇ ಸಾಫ್ಟ್ ವೇರ್ ಪ್ರಪಂಚ. ಅದರಬೆಡಗಿಗೆ ಮಾರುಹೋಗದವರೇ ಇಲ್ಲ. ಭಾರತೀಯರಿಗಂತೂ
ತೆರೆದ ಬಾಗಿಲು. ಯಾರು ನೋಡಿ,ಕೇಳಿ ಮನೆಯಲ್ಲೊಬ್ಬರು ಸಾಫ್ಟ್ ವೇರ್ ಇಂಜಿನಿಯರ್ ಇದ್ದೇ ಇದ್ದಾರೆ.

ಖಾಸಗಿ ಕಂಪನಿಗಳು
ಗತಿಶೀಲತೆಯಲ್ಲಿ ಬೇಕಾಬಿಟ್ಟಿ ನೌಕರಿ ನೀಡುತ್ತವೆ. ಆದರೆ ಅವುಗಳ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದಾಗ
ಉದ್ಯೋಗ ಕಡಿತಕ್ಕೆ ಚಿಂತಿಸುತ್ತವೆ. ಇದರಿಂದ ತಮ್ಮ ಬದುಕನ್ನ ಕಂಡುಕೊಳ್ಳುತ್ತಿರುವ ಯುವ ಮತ್ತು ಕುಟುಂಬಸ್ಥರಾಗಿ ನೆಲೆಗೊಂಡ ಉದ್ಯೋಗಿಗಳಿಗೆ ಅಧೀರತೆ ಒಡ್ಡಿದಂತಾಗುತ್ತದೆ.
ಪ್ರತೀ ಉದ್ಯೋಗಿಗಳಿಗೆ ಮುಂದಿನ ಇಂತಿಷ್ಟು ತಿಂಗಳು ಅಷ್ಟಿಷ್ಟು ಶೇಕಡ ವೇತನ ನೀಡಬೇಕೆಂದು ಕಾನೂನು ನೀತಿಇದ್ದರೂ ಉದ್ಯೋಗ ಬಿಡಬೇಕಾಗಿ ಬಂದಿರುವವರಿಗೆ ಜೀವನ ನಿರ್ವಹಣೆ ಪ್ರಶ್ನಾರ್ಥಕ ಚಿನ್ಹೆ.

ಸೇವಾಭದ್ರತೆಯೇ ಇಲ್ಲಿ ಉದ್ಯೋಗಿ ವರ್ಗವನ್ನ ಕಾಡುವ ಸಮಸ್ಯೆ. ಇದಕ್ಕೊಂದು ಸೂಕ್ತ ದೇಶೀಯ ನೀತಿಯೇ ರೂಪಗೊಳ್ಳಬೇಕು.

ಪ್ರಸ್ತುತ ಖಾಸಗಿ ಕ್ಷೇತ್ರಗಳ ದಿಗ್ಗಜರಾದ ಜುಕರ್ ಬರ್ಗ್ ಮತ್ತು ಮಸ್ಕ್ ಅವರ
ಕಂಪನಿಗಳ ಉದ್ಯೋಗ ಕಡಿತ ಸುದ್ದಿಯಲ್ಲಿದೆ.

ಅಮೆರಿಕದಲ್ಲಿ ಸದ್ಯ ಆರ್ಥಿಕ ಹಿಂಜರಿತ ಕಾಲಿಕ್ಕಿದೆ. ಮಾಧ್ಯಮಗಳಲ್ಲಿ ಅದೇ ವಾರ್ತೆಗಳು.ಚಿತ್ರಗಳು.
ಆರ್ಥಿಕ ತಜ್ಞರ ಪ್ರಕಾರ ಕೋವಿಡ್ ಸನ್ನಿವೇಶದ ಕರಿನೆರಳೇ ಕಾರಣ.
ನಮ್ಮಲ್ಲೂ ಕೋವಿಡ್ ಇತ್ತು.ಹೋಯಿತು.
ಆದರೆ ಆರ್ಥಿಕತೆ ಅಧಃಪತನಗೊಳ್ಳಲಿಲ್ಲ. ಆರ್ಥಿಕ ತಜ್ಞರು ಭಾರತದ ಬಗ್ಗೆ ಒಂದಿಷ್ಟು ಒಳ್ಳೆಯ ಮಾತಾಡಿದ್ದಾರೆ.

ಟ್ವಟರ್ ಒಡೆಯ ಮಸ್ಕ್ ಬೇಡವೆಂದು ಬಿಟ್ಟ ಉದ್ಯೋಗಿಗಳನ್ನ ಮತ್ತೆ ವಾಪಸ್ ಬರಹೇಳಿರುವುದು ಈಗ ವರದಿಯಾಗಿದೆ.
ಅಲ್ಲಿನ ಲೋಪವೇ ಕಾರಣವಾಗಿರಬಹುದು.
ಒಂದು ವರದಿಯ ಪ್ರಕಾರ ಈ ಸಾಮಾಜಿಕ ಮಾಧ್ಯಮಗಳಲ್ಲಿನ ಆಂತರಿಕ
ಪ್ರತಿಸ್ಪರ್ಧೆಗಳೇ ಆರ್ಥಿಕ ಏರುಪೇರಿಗೆ ಕಾರಣವೆಂದಿದೆ.

ಅತ್ಯಂತ ಕನಿಕರಪಡುವ ಸಂಗತಿ. ಟ್ವಿಟರ್ ನಲ್ಲಿ ಗಡುವಿನೊಳಗೆ ಕೆಲಸ ಪೂರೈಸಲು ನೌಕರರು ಕಚೇರಿಗಳಲ್ಲೇ ಮಲಗಿ ಕರ್ತವ್ಯ ಮುಗಿಸಿದರಂತೆ.

ಇದೊಂದು ಸ್ಯಾಂಪಲ್ ಅಷ್ಟೆ. ಆರ್ಥಿಕ ಹಿಂಜರಿತ ಸುಳಿವು ನೀಡದೇ ಬರಬಹುದು. ನಮ್ಮಲ್ಲೂ ಎಚ್ಚರತಪ್ಪಬಾರದಷ್ಟೆ.

ಭಾರತೀಯ ಗಣ್ಯವ್ಯಕ್ತಿಗಳ ಟ್ವಿಟರ್ ಖಾತೆಗೆ ಅಫಿಷಿಯಲ್ ಎಂಬ ಸಂಕೇತ

0

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರ ಟ್ವೀಟರ್‌ ಖಾತೆಗಳಿಗೆ ಬ್ಲೂಟಿಕ್‌ ಜೊತೆಗೆ ‘ಅಫಿಶೀಯಲ್‌’ ಎಂಬ ಬೂದು ಬಣ್ಣದ ಗುರುತನ್ನು ನೀಡಲು ಟ್ವೀಟರ್‌ ಆರಂಭಿಸಿದೆ.

ಬ್ಲೂಟಿಕ್‌ ಖಾತೆಗಳಿಗೆ ತಿಂಗಳಿಗೆ 8 ಡಾಲರ್‌ ಪಾವತಿಸಬೇಕು ಎಂಬ ನಿಯಮದ ಮೊದಲ ಹಂತವಾಗಿ ಇದನ್ನು ಜಾರಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಪ್ರಸ್ತುತ ಬ್ಲೂಟಿಕ್‌ ಹೊಂದಿರುವ ರಾಜಕಾರಣಿಗಳು, ವ್ಯಾಪಾರ ಸಂಸ್ಥೆಗಳು, ಕಂಪನಿಗಳು, ಪಕ್ಷಗಳು ಮತ್ತು ಉನ್ನತ ದರ್ಜೆಯ ಖಾತೆಗಳಿಗೆ ಈ ಹೊಸ ಗುರುತನ್ನು ನೀಡಲಾಗುತ್ತಿದೆ.

ಮೋದಿ ಅವರ ಜೊತೆಗೆ ವಿತ್ತ ಸಚಿವೆ ನಿರ್ಮಲ ಸೀತಾರಾಮನ್‌ ಗೃಹ ಸಚಿವ ಅಮಿತ್‌ ಶಾ , ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ , ರಕ್ಷಣಾ ಸಚಿವ ರಾಜನಾಥ ಸಿಂಗ್‌ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ , ಕಾಂಗ್ರೆಸ್‌, ಬಿಜೆಪಿ ಸೇರಿ ಹಲವು ಖಾತೆಗಳಿಗೂ ಅಫಿಶಿಯಲ್‌ ಗುರುತನ್ನು ನೀಡಲಾಗಿದೆ.

ಉಳಿದ ಪ್ರಮುಖರ ಬ್ಲೂಟಿಕ್‌ ಮುಂದುವರಿಸಲಾಗಿದೆಯಾದರೂ ಅವರಿಗೆ ಅಫೀಶಿಯಲ್‌ ಎಂಬ ಲೇಬಲ್‌ ನೀಡಿಲ್ಲ. 8 ಡಾಲರ್‌ ಶುಲ್ಕ ಜಾರಿಯಾದ ಬಳಿಕ ಇವರು ಹಣ ನೀಡಿದಿದ್ದರೆ ಬ್ಲೂಟಿಕ್‌ ಹೋಗಬಹುದು ಎನ್ನಲಾಗುತ್ತಿದೆ.

ಅಮೆರಿಕ ಸಂಸತ್ತಿಗೆ ಬೆಳಗಾವಿ ಮೂಲದ ಥಾಣೇದಾರ್ ಆಯ್ಕೆ

0

ಅಮೆರಿಕ ಸಂಸತ್‌ಗೆ ನಡೆದ ಮಧ್ಯಂತರ ಚುನಾವಣೆಯಲ್ಲಿ ಬೆಳಗಾವಿ ಮೂಲದ ಶ್ರೀ ಥಾಣೆದಾರ್‌ ಆಯ್ಕೆಯಾಗಿದ್ದಾರೆ.

ಡೆಮಾಕ್ರೆಟಿಕ್‌ ಪಕ್ಷದಿಂದ ಸ್ಪರ್ಧಿಸಿದ್ದ ಥಾಣೆದಾರ್‌ 84096 ಮತಗಳನ್ನು ಪಡೆದರೆ, ಅವರ ಸಮೀಪದ ಪ್ರತಿಸ್ಪರ್ಧಿ, ರಿಪಬ್ಲಿಕನ್‌ ಪಕ್ಷದ ಮಾರ್ಟೆಲ್‌ ಬಿವಿಂಗ್‌ 27366 ಮತಗಳನ್ನು ಪಡೆದು ಸೋಲನ್ನಪ್ಪಿದರು.

ಮಿಚಿಗನ್‌ ಹೌಸ್‌ನ 3ನೇ ಜಿಲ್ಲೆಯಿಂದ ನಡೆದ ಈ ಚುನಾವಣೆಯಲ್ಲಿ ಗೆಲ್ಲುವ ಮೂಲಕ, ಮಿಚಿಗನ್‌ ರಾಜ್ಯದಿಂದ ಸಂಸತ್‌ಗೆ ಆಯ್ಕೆಯಾದ ಮೊದಲ ಭಾರತೀಯ ಎಂಬ ಹಿರಿಮೆ ಥಾಣೆದಾರ್‌ ಅವರ ಪಾಲಾಗಿದೆ.

ಹಾಲಿ ಅಮೆರಿಕ ಸಂಸತ್‌ನಲ್ಲಿ ಭಾರತೀಯ ಮೂಲದ ರಾಜಾ ಕೃಷ್ಣಮೂರ್ತಿ , ರೋ ಖನ್ನಾ ಮತ್ತು ಪ್ರಮೀಳಾ ಜಯಪಾಲ್‌ ಸದಸ್ಯರಾಗಿದ್ದು, ಇದೀಗ ನಾಲ್ಕನೇ ವ್ಯಕ್ತಿಯ ಸೇರ್ಪಡೆಯಾಗಿದೆ.

ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬೆಳೆದ ಶ್ರೀ ಥಾಣೆದಾರ್‌, ಆರಂಭದಲ್ಲಿ ಕುಟುಂಬ ನಿರ್ವಹಣೆಗೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಬಳಿಕ ಮುಂಬೈನಲ್ಲಿ ಭಾಭಾ ಪರಮಾಣು ಕೇಂದ್ರದಲ್ಲಿ ವಿಜ್ಞಾನಿಯಾಗಿದ್ದರು.

ಬಳಿಕ 70ರ ದಶಕದಲ್ಲಿ ಅಮೆರಿಕದಲ್ಲಿ ಯಶಸ್ವಿ ಉದ್ಯಮಿಯಾಗುವ ಕನಸು ಹೊತ್ತು ಕೈಯಲ್ಲಿ ಕೇವಲ 20 ಡಾಲರ್‌ (ಈಗಿನ ಲೆಕ್ಕಾಚಾರದಲ್ಲಿ 1600 ರು.) ಇಟ್ಟುಕೊಂಡು ಅಮೆರಿಕಕ್ಕೆ ಬಂದಿದ್ದರು. ನಂತರದ 5 ದಶಕಗಳಲ್ಲಿ ನಾನಾ ಹಂತಗಳನ್ನು ಏರಿ ರಾಜಕೀಯ ಪ್ರವೇಶ ಮಾಡಿ ಇದೀಗ ಸಂಸದರಾಗಿ ಹೊರಹೊಮ್ಮಿದ್ದಾರೆ

ಪಿ.ಎಚ್. ಡಿ.ಮಾನದಂಡಗಳಲ್ಲಿ ವ್ಯಾಪಕ ಬದಲಾವಣೆ

0

ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಡಾಕ್ಟರೇಟ್ ಕಾರ್ಯಕ್ರಮಗಳನ್ನು ನಿಯಂತ್ರಿಸುವ ಅರ್ಹತಾ ಮಾನದಂಡಗಳು, ಪ್ರವೇಶ ಕಾರ್ಯವಿಧಾನ ಮತ್ತು ಮೌಲ್ಯಮಾಪನ ವಿಧಾನಗಳಲ್ಲಿ ವ್ಯಾಪಕ ಬದಲಾವಣೆಗಳನ್ನು ಮಾಡಲಾಗಿದೆ.

ವಿಶ್ವವಿದ್ಯಾಲಯ ಧನಸಹಾಯ ಆಯೋಗ ಪಿಎಚ್​ಡಿ ಪದವಿಗಳ ಮೇಲೆ ಹೊಸ ನಿಯಮಗಳ ಬಗ್ಗೆ ಅಧಿಸೂಚನೆ ಹೊರಡಿಸಿದ್ದು, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಡಾಕ್ಟರೇಟ್ ಕಾರ್ಯಕ್ರಮಗಳನ್ನು ನಿಯಂತ್ರಿಸುವ ಅರ್ಹತಾ ಮಾನದಂಡಗಳು, ಪ್ರವೇಶ ಕಾರ್ಯವಿಧಾನ ಮತ್ತು ಮೌಲ್ಯಮಾಪನ ವಿಧಾನಗಳಲ್ಲಿ ವ್ಯಾಪಕ ಬದಲಾವಣೆಗಳನ್ನು ತರಲಾಗಿದೆ.

ನಿಯತಕಾಲಿಕಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುವ ಅಥವಾ ಸಮ್ಮೇಳನಗಳಲ್ಲಿ ಪ್ರಸ್ತುತಪಡಿಸುವ ಕಡ್ಡಾಯ ಅಗತ್ಯವನ್ನು ರದ್ದುಗೊಳಿಸಲಾಗಿದೆ. ಕೆಲಸ ಮಾಡುವ ವೃತ್ತಿಪರರಿಗೆ ಅರೆಕಾಲಿಕ ಪಿಎಚ್​ಡಿಗಳನ್ನು ಪ್ರಾರಂಭಿಸಲಾಗಿದೆ ಮತ್ತು ಹೊಸ ಇಡಬ್ಲ್ಯೂಎಸ್ ವರ್ಗಕ್ಕೆ ಸಹ ಪ್ರವೇಶಕ್ಕಾಗಿ ಅರ್ಹತೆಯಲ್ಲಿ ಶೇಕಡಾ 5 ರಷ್ಟು ಅಂಕಗಳ ಸಡಿಲಿಕೆ ಇದೆ.

ಪ್ರವೇಶಕ್ಕಾಗಿ ಅರ್ಹತಾ ಮಾನದಂಡಗಳನ್ನು ಬದಲಾಯಿಸಲಾಗಿದೆ. ನಾಲ್ಕು ವರ್ಷ ಅಥವಾ ಎಂಟು ಸೆಮಿಸ್ಟರ್ ಬ್ಯಾಚುಲರ್ಸ್ ಪ್ರೋಗ್ರಾಂ ಪದವಿಯನ್ನು ಒಟ್ಟು ಅಥವಾ ಅದರ ತತ್ಸಮಾನ ಗ್ರೇಡ್​ನಲ್ಲಿ ಕನಿಷ್ಠ 75 ಪ್ರತಿಶತ ಅಂಕಗಳೊಂದಿಗೆ ಹೊಂದಿರುವ ಯಾರಾದರೂ ಪಿಎಚ್​ಡಿಗೆ ಅರ್ಹರಾಗಿರುತ್ತಾರೆ.

ನಾಲ್ಕು ವರ್ಷಗಳ ಯುಜಿ ಕಾರ್ಯಕ್ರಮದ ನಂತರ ಪಿಎಚ್​ಡಿ ಪ್ರೋಗ್ರಾಂಗಳಿಗೆ ಸೇರುವವರು ಒಂದು ವರ್ಷದ ಸ್ನಾತಕೋತ್ತರ ಪದವಿಯ ನಂತರ ಅದನ್ನು ಮಾಡಬಹುದು. ಸಾಂಪ್ರದಾಯಿಕ ಮೂರು ವರ್ಷಗಳ ಯುಜಿ ಪದವಿಗಳನ್ನು ಹೊಂದಿರುವ ಪದವೀಧರರು ಎರಡು ವರ್ಷಗಳ ಸ್ನಾತಕೋತ್ತರ ಪದವಿಗಳನ್ನು ಪೂರ್ಣಗೊಳಿಸಿರಬೇಕು.

ಇಲ್ಲಿಯವರೆಗೆ ಡಾಕ್ಟರೇಟ್ ಆಕಾಂಕ್ಷಿಗಳಿಗೆ ಕನಿಷ್ಠ ಶೇಕಡಾ 55 ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಕಡ್ಡಾಯವಾಗಿತ್ತು. ಅನೇಕ ವಿಶ್ವವಿದ್ಯಾಲಯಗಳು ಎಂ.ಫಿಲ್ ಅನ್ನು ಹೆಬ್ಬಾಗಿಲಾಗಿ ಬಳಸುವಂತೆ ಒತ್ತಾಯಿಸಿದವು. ಎಂ.ಫಿಲ್ ಮಹಾಪ್ರಬಂಧವನ್ನು ಪೂರ್ಣಗೊಳಿಸಿದವರು ಮತ್ತು ವೈವಾ ವೋಸ್​ಗಾಗಿ ಕಾಯುತ್ತಿದ್ದವರನ್ನೂ ಪಿಎಚ್​ಡಿ ಪ್ರೋಗ್ರಾಂಗಳಿಗೆ ಸೇರಿಸಬಹುದು.

ಹೊಸ ನಿಯಮಗಳು ಎಂ.ಫಿಲ್ ಪ್ರೋಗ್ರಾಂ ಅನ್ನು ಸಂಪೂರ್ಣವಾಗಿ ನಿಲ್ಲಿಸುತ್ತವೆ. ಆದಾಗ್ಯೂ ಪ್ರಸ್ತುತ ಎಂ.ಫಿಲ್ ಪದವಿಗಳನ್ನು ಹೊಂದಿರುವ ಅಥವಾ ಅಧ್ಯಯನ ಮಾಡುವವರ ಮೇಲೆ ಅದು ಯಾವುದೇ ಪರಿಣಾಮ ಬೀರುವುದಿಲ್ಲ. ಕಾಯ್ದಿರಿಸಿದ ವರ್ಗದ ಅರ್ಜಿದಾರರಲ್ಲದೆ ಇಡಬ್ಲ್ಯೂಎಸ್ ಬ್ರಾಕೆಟ್ ಅಡಿಯಲ್ಲಿ ಬರುವವರಿಗೂ ಶೇಕಡಾ 5 ರಷ್ಟು ವಿನಾಯಿತಿ ನೀಡಲಾಗುವುದು.

ಪ್ರವೇಶದ ಕಾರ್ಯವಿಧಾನದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಿಲ್ಲ. ಈವರೆಗಿನ ಮಾನದಂಡದಂತೆ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಎನ್‌ಇಟಿ ಅಥವಾ ಜೆಆರ್​ಎಫ್​ ಅರ್ಹತಾ ಮಾರ್ಗ ಮತ್ತು ಸಂಸ್ಥೆಗಳ ಮಟ್ಟದಲ್ಲಿ ಪ್ರವೇಶ ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳನ್ನು ಪ್ರವೇಶಿಸಲು ಮುಕ್ತವಾಗಿರುತ್ತವೆ. ಪ್ರವೇಶ ಪಠ್ಯಕ್ರಮವು ಶೇಕಡಾ 50 ರಷ್ಟು ಸಂಶೋಧನಾ ವಿಧಾನವನ್ನು ಒಳಗೊಂಡಿರುತ್ತದೆ ಮತ್ತು ಶೇಕಡಾ 50 ರಷ್ಟು ವಿಷಯ ನಿರ್ದಿಷ್ಟವಾಗಿರುತ್ತದೆ ಎಂದು ನಿಬಂಧನೆಗಳು ಹೇಳುತ್ತವೆ.
ಪ್ರತಿ ಸಂಸ್ಥೆಯಲ್ಲಿ ಪಿಎಚ್​ಡಿ ಅಭ್ಯರ್ಥಿಗಳ ವಾರ್ಷಿಕ ಪ್ರವೇಶದಲ್ಲಿ ಶೇಕಡಾ 60 ರಷ್ಟು ಎನ್‌ಇಟಿ ಅಥವಾ ಜೆಆರ್​ಎಫ್​ ಅರ್ಹ ವ್ಯಕ್ತಿಗಳಿಗೆ ಮೀಸಲಿಡಬೇಕು ಎಂದು ನಿಗದಿಪಡಿಸುವ ತನ್ನ ಯೋಜನೆಯನ್ನು ಯುಜಿಸಿ ಈಗ ಕೈಬಿಟ್ಟಿದೆ.
ವೈಯಕ್ತಿಕ ವಿಶ್ವವಿದ್ಯಾಲಯಗಳು ನಡೆಸುವ ಪ್ರವೇಶ ಪರೀಕ್ಷೆಗಳ ಮೂಲಕ ಆಯ್ಕೆಯನ್ನು ಮಾಡಿದಾಗ ಲಿಖಿತ ಪರೀಕ್ಷೆಯಲ್ಲಿನ ಕಾರ್ಯಕ್ಷಮತೆಗೆ ಶೇಕಡಾ 70 ರಷ್ಟು ಮತ್ತು ಸಂದರ್ಶನಕ್ಕೆ ಶೇಕಡಾ 30ರಷ್ಟು ಪ್ರಾಮುಖ್ಯತೆ ನೀಡಲಾಗುತ್ತದೆ.
ಮಧ್ಯಸ್ಥಗಾರರ ಪ್ರತಿಕ್ರಿಯೆಯ ಆಧಾರದ ಮೇಲೆ, ಪಿಎಚ್​ಡಿಗಳಿಗೆ ಉದ್ದೇಶಿತ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಹೊಸ ನಿಬಂಧನೆಗಳಿಂದ ಹೊರಗಿಡಲಾಗಿದೆ.

ವಿವಾದಯೆಬ್ಬಿಸಿ ಈಗ ವಿಷಾದಿಸಿದ ಜಾರಕಿಹೊಳಿ

0

ಹಿಂದೂ ಪದದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕೊನೆಗೂ ಸಾರ್ವಜನಿಕ ರ ಆಕ್ರೋಶಕ್ಕೆ ಮಣಿದಿದ್ದು ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದಿದ್ದಾರೆ. ಈ ಹೇಳಿಕೆಯಿಂದ ಯಾರಿಗಾದರೂ ಮನಸ್ಸಿಗೆ ನೋವಾಗಿದ್ದರೆ ಅದಕ್ಕೆ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಸತೀಶ್ ಜಾರಕಿಹೊಳಿ, ‘ನಿಪ್ಪಾಣಿಯಲ್ಲಿ ನಡೆದ ಮಾನವ ಬಂಧುತ್ವ ವೇದಿಕೆ ಕಾರ್ಯಕ್ರಮ ದಲ್ಲಿ ನಾನು ಹಿಂದೂ ಪದದ ಬಗ್ಗೆ ಆಡಿದ ಒಂದು ಮಾತು ವಿವಾದಕ್ಕೆ ಕಾರಣವಾಗಿದೆ. ಇದನ್ನು ತಿರುಚಿ ಅಪಪ್ರಚಾರ ಮಾಡುತ್ತಿರುವದರಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಬಾರದು ಎಂಬ ಉದ್ದೇಶದಿಂದ ನನ್ನ ಹೇಳಿಕೆಯನ್ನು ಹಿಂಪಡೆಯುತ್ತಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಹೊರಟಿವೆ. ನನ್ನ ತೇಜೋವಧೆ ಹಾಗೂ ಹಾನಿ ಉಂಟುಮಾಡುವ ವ್ಯವಸ್ಥಿತ ಪಿತೂರಿ ನಡೆದಿದೆ. ಕಾರಣ ಮೇಲಿನ ಎಲ್ಲ ಅಂಶಗಳನ್ನು ಪರಿಶೀಲಿಸಲು ಮತ್ತು ನೈಜ ಸ್ಥಿತಿಯನ್ನು ವಿವರಿಸದೆ ಈ ಅವಾಂತರ ಸೃಷ್ಟಿದವರ ಮೇಲೆ ತನಿಖೆ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಹಿಂದೂ ಶಬ್ದ ಪರ್ಷಿಯನ್ ಭಾಷೆಯಿಂದ ಬಂದಿದೆ. ಇದು ಭಾರತ ದೇಶಕ್ಕೆ ಹೇಗೆ ಬಂತು? ಹಲವಾರು ಲೇಖನಗಳಲ್ಲಿ ಹಿಂದೂ ಎಂಬ ಪದದ ಅರ್ಥ ಕೆಟ್ಟದಾಗಿದೆ ಎಂದು ಬರೆದಿರುತ್ತಾರೆ ಅಂತಾ ಹೇಳಿರುತ್ತೇನೆ ಮತ್ತು ಇದು ಸಾರ್ವಜನಿಕವಾಗಿ ಚರ್ಚೆ ಆಗಬೇಕಾಗಿರುವದು ಬಹಳ ಅವಶ್ಯಕತೆ ಇದೆ ಎಂದು ಸಹ ಹೇಳಿರುತ್ತೇನೆ. ವಿಕಿಪಿಡಿಯಾ, ಪುಸ್ತಕಗಳು, ಶಬ್ಬಕೋಶಗಳು ಮತ್ತು ಇತಿಹಾಸಕಾರರ ಬರಹಗಳ ಉಲ್ಲೇಖದ ಮೇಲೆ ಭಾಷಣ ಆಧಾರಿತವಾಗಿರುತ್ತದೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಹೊರಟಿರುತ್ತಾರೆ.

ಜೊತೆಗೆ ನನಗೆ ತೇಜೋವಧೆ ಹಾಗೂ ಹಾನಿಯುಂಟು ಮಾಡುವ ವ್ಯವಸ್ಥಿತ ಪಿತೂರಿ ನಡೆದಿರುತ್ತದೆ. ಮೇಲಿನ ಎಲ್ಲ ಅಂಶಗಳನ್ನು ಪರಿಶೀಲಿಸಲು ಮತ್ತು ನೈಜ ಸ್ಥಿತಿಯನ್ನು ವಿವರಿಸದೇ ಈ ಅವಾಂತರ ಸೃಷ್ಟಿಸಿದವರ ಮೇಲೆ ತಕ್ಷಣ ತನಿಖಾ ಸಮಿತಿ ರಚಿಸಬೇಕು ಎಂದು ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ.

ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆಗೈದ ಡಾ.ಶ್ರೀರಾಮ್

0

ಮೈಸೂರಿನ ಜೆಎಸ್‌ಎಸ್ ಮೆಡಿಕಲ್ ಕಾಲೇಜಿನಲ್ಲಿ ಚಿನ್ನದ ಪದಕ ಪಡೆದಿರುವ ಡಾ,ಶ್ರೀರಾಮ್ ಬಿ.ಎಸ್ 29ನೇ ವರ್ಷದಲ್ಲಿ ವೈದಕೀಯ ಔಷಧಶಾಸ್ತ್ರದಲ್ಲಿ ಪಿಹೆಚ್‌ಡಿ ನಿಟ್ಟೆ ಯೂನಿವರ್‌ಸಿಟಿ ಮಂಗಳೂರಿನಲ್ಲಿ ಡಾ.ರಾಮಚಂದ್ರ ಅವರ ಮಾರ್ಗದರ್ಶನದಲ್ಲಿ ಪಿಹೆಚ್‌ಡಿ ಪಡೆದ ಅತಿ ಕಿರಿಯ ವಯಸ್ಸಿನ ಸಾಧಕ ಎಂಬ ದಾಖಲೆಗೆ ಅರ್ಹತೆ ಹೊಂದಿರುವುದು ಸಾಗರದ ಚಿನ್ನದ ಯುವಕನ ಸಾಧನೆಯಾಗಿದೆ.

ಸಾಗರದ ಪತ್ರಿಕಾ ಭವನದಲ್ಲಿ ಗೋಷ್ಠಿಯಲ್ಲಿ ಮಾತನಾಡಿದ ಅವರು ವೈದ್ಯಕೀಯ ಮತ್ತು ಔಷಧ ಶಾಸ್ತ್ರದಲ್ಲಿ ಪಿಹೆಚ್‌ಡಿ ಪಡೆದಿರುವ 2.5 ವರ್ಷಗಳಲ್ಲಿನ ಸಮಾಜಕ್ಕೆ ಪೂರಕವಾದ ಅಂಶಗಳ ಕುರಿತು ಡಾ,ಶ್ರೀರಾಮ್ ಬಿ.ಎಸ್ ಮಾಹಿತಿ ನೀಡಿದರು.

ಮನುಷ್ಯನ ವಯಸ್ಸನ್ನು ತಡೆ ಹಿಡಿಯುವ ಉತ್ತಮ ಅವಕಾಶವಿದೆ.ಸಾವು ಖಚಿತ,ಬದುಕಿನಲ್ಲಿ ಆರೋಗ್ಯವಂತ ವ್ಯಕ್ತಿಯಾಗಿ ಹೆಚ್ಚು ಕಾಲ ವಯಸ್ಸಾಗದಂತೆ ಸೌಂದರ್ಯಸಹಿತವಾದ ಜೀವನ ನಿರ್ವಹಣೆಯ ಕುರಿತು ಪ್ರಯೋಗಾತ್ಮಕ ಫಲಿತಾಂಶ ಪಡೆದಿರುವುದಾಗಿ ವಿವರಿಸಿದರು.

ಯುವಕ-ಯುವತಿಯರು ಮಾತ್ರವಲ್ಲ,ಸ್ತ್ರೀ ಪುರುಷರು ವಯಸ್ಸಾಗದಂತೆ ಚರ್ಮ ಸುಕ್ಕುಗಟ್ಟದಂತೆ,ಕೂದಲುಗಳು ಹಣ್ಣಾಗದಂತೆ ಆರೋಗ್ಯವಂತ ಸವಂದರ್ಯಕ್ಕಾಗಿ ಹಾತೊರೆಯುವಂತಹ ಪರ್ವಕಾಲದಲ್ಲಿ ನಮ್ಮ ಈ ವೈಜ್ಞಾನಿಕ ಸಂಶೋಧನೆಯ ಸತ್ಯಗಳನ್ನು ಸಮಾಜಕ್ಕೆ ತಿಳಿಸುವುದರಿಂದ ಕೇವಲ ಪುಸ್ತಕಕ್ಕೆ ಸೀಮಿತವಾಗದೇ ಸಮುದಾಯದ ಜನರಿಗೆ ಉಪಯೋಗವಾಗಲಿ ಎಂದು ಆಶಿಸಿದರು.

ದೇಶದಲ್ಲಿ ಕೇರಳದ ನರ್ಸಿಂಗ್ ವಿದ್ಯಾರ್ಥಿ ವಿಷ್ಟು ಎಂಬ 30 ವರ್ಷದ ಯುವಕ ನರ್ಸಿಂಗ್‌ನಲ್ಲಿ ಪಿಹೆಚ್‌ಡಿ ಮಾಡುವ ಮೂಲಕ ರೆಕಾರ್ಡ್ ಮಾಡಿದ್ದಾನೆ.ಆದರೇ ನಾನು ವೈಧ್ಯಕೀಯ ಮತ್ತು ಔಷಧ ಶಾಸ್ತದಲ್ಲಿ ಕೇವಲ 29 ನೇ ವರ್ಷದಲ್ಲಿಯೇ ಪಿಹೆಚ್‌ಡಿ ಮಾಡಿರುವುದು ರೆಕಾರ್ಡ್ ಆಗಿರುವುದನ್ನು ನನ್ನ ಸೌಭಗ್ಯ ಎಂದರು.

ಇಂತಹ ವಿಶೇಷ ಸಂಶೋಧನೆಗೆ ಇಲಿಗಳನ್ನು ಬಳಸಲಾಗಿದೆ.ಇಲಿಗಳ ಮರಿಗಳಿಗೆ ವಯಸ್ಸಾಗದಂತೆ ತಡೆಯಲು ಸಕ್ಕರೆ ಇಂಜೆಕ್ಸನ್ ಮಾಡಲಾಗಿದೆ.ಕೆಲವು ಇಲಿಗಳಿಗೆ ನಿರಂತರ ಈಜಲು ಬಿಡಲಾಗಿತ್ತು.ಮೆಡ್‌ಫಾರ್ಮಿನ್ ಔಷಧ ನೀಡುವುದು ಸೇರಿದಂತೆ ಹಲವು ಪ್ರಯೋಗಗಳಿಂದ ಇಲಿಗಳ ದೇಹದಲ್ಲಾಗುವ ಬದಲಾವಣೆಗಳನ್ನು ದಾಖಲಿಸುವ ಮೂಲಕ ಪ್ರಾಣ ಗಳ ಹಾಗೂ ಮನುಷ್ಯರ ವಯಸ್ಸನ್ನು ನಿಯಂತ್ರಿಸಲು ಸಾಧ್ಯ ಎಂಬ ಅಂಶ ಸಂಶೋಧನೆಯಿಂದ ಬಹಿರಂಗವಾಗಿದೆ ಎಂದರು.

ಮನುಷ್ಯ ವಿಪರೀತ ತಿನ್ನುವುದರಿಂದ ಅನಾರೋಗ್ಯಕ್ಕೆ ತುತ್ತಾಗುತ್ತಾನೆ.ಆಹಾರ ಸೇವನೆಯಲ್ಲಿ ಮಿತಿ ಅಳವಡಿಸಿಕೊಳ್ಳುವುದರಿಂದ ರೋಗಮುಕ್ತರಾಗಿ ಸೌಂದರ್ಯ ಮತ್ತು ಆಯಸ್ಸನ್ನು ವೃದ್ಧಿಸಿಕೊಳ್ಳಲು ಸಾಧ್ಯವಿದೆ.ಉಪವಾಸ ಉಪಾಸನೆಗಳಿಂದ ಆರೋಗ್ಯವಂತರಾಗಲು ಸಾಧ್ಯ.ಆದ್ದರಿಂದ ಏಕಾದಶಿ,ರಂಜಾನ್,ವೃತ ನಿಯಮಗಳ ಸಂಕೋಲೆಗಳಿಂದ ಆರೋಗ್ಯಕರ ಸಂಪ್ರದಾಯವನ್ನು ಅಳವಡಿಸಿರುವುದು ಎಂದು ಸಂಶೋಧನೆಯಿಂದ ತಿಳಿಯುತ್ತದೆ ಎಂದರು.

ಈರುಳ್ಳಿ ಮತ್ತು ಸೇಬು ಸೇವನೆಯಿಂದ ವಯಸ್ಸನ್ನು ತಡೆಯಬಹುದಾಗಿದೆ.ಕೆಲವರು 30-35 ನೇ ವರ್ಷದಲ್ಲಿಯೇ ವೃದ್ದರಂತೆ ಕಾಣುತ್ತಾರೆ. ಆದ್ದರಿಂದ ಪ್ರತಿನಿತ್ಯ ಒಂದು ಹೊತ್ತು ಕೇವಲ ಹಣ್ಣುಗಳನ್ನು ಮಾತ್ರ ತಿನ್ನುವ ಮೂಲಕ ಮತ್ತು ಉಳಿದ ಹೊತ್ತುಗಳಲ್ಲಿ ಮಿತವಾದ ಆಹಾರ ಸೇವನೆಯಿಂದ ಹಾಗೂ ಉಪವಾಸಗಳನ್ನು ರೂಡಿಸಿಕೊಳ್ಳುವುದರಿಂದ ಸೌಂದರ್ಯದ ಜೊತೆಗೆ ವಯಸ್ಸನ್ನು ನಿಯಂತ್ರಿಸಬಹುದು ಎಂದರು.

ಮನುಷ್ಯನ ದೇಹಕ್ಕೆ ಅಗಸೆ ಬೀಜ ಮತ್ತು ಬೆಣ್ಣೆ ಹಣ್ಣು ಅಥವಾ ಮೀನಿನ ಎಣ್ಣೆ ಸೇವನೆಯಿಂದ ಮಾನವನ ದೇಹದಲ್ಲಿ ಪುಫಾ ಹೆಚ್ಚಿಸಿಕೊಳ್ಳುವುದರಿಂದ ದೇಹದಲ್ಲಿ ಉತ್ತಮ ಬೆಳವಣ ಗೆಗಳಾಗುತ್ತವೆ.ಆರೋಗ್ಯ ನೆಮ್ಮದಿಯಿಂದ ಆಯಸ್ಸು ಹೆಚ್ಚಳದ ಜೊತೆಗೆ ವಯಸ್ಸಿನ ತಡೆಯಾಗುತ್ತದೆ ಎಂದರು.
ಸಂಶೋಧನೆಗಳಿಂದ ಹಲವು ಸತ್ಯಗಳು ಹೊರಬೀಳುತ್ತವೆ. ಸೌತ್‌ ಆಪ್ರಿಕಾದಲ್ಲಿ ರಕ್ತದ ಒತ್ತಡ ಕಾಯಿಲೇಯೇ ಇಲ್ಲ.ಕಾರಣ ಸೌತ್ ಆಫ್ರಿಕಾ ನಾಗರಿಕರು ಉಪ್ಪು ತಿನ್ನುವುದಿಲ್ಲ.ಅಡುಗೆಗೆ ಉಪ್ಪನ್ನೇ ಬಳಸದಿರುವ ಕಾರಣ ರಕ್ತದ ಒತ್ತಡಮುಕ್ತ ಜೀವನ ನಡೆಸುತ್ತಿರುವುದು ಸಂಶೋಧನೆಗಳಿಗೆ ಪುಷ್ಟಿ ನೀಡುತ್ತದೆ ಎಂದರು.

ಕೋವಿಡ್ ಬಾರದೇ ಹೋಗಿದ್ದಲ್ಲಿ ಇನ್ನೂ ಮೊದಲೇ ನನ್ನ ಪಿಹೆಚ್‌ಡಿ ದೊರೆಯುತ್ತಿತ್ತು. ಆದರೂ ತೃಪ್ತಿಯಿದೆ ನನ್ನ ಸಂಶೋಧನೆಗೆ ದೊರಕಿರುವ ಪ್ರಮಾಣಪತ್ರಕ್ಕಿಂತ ನನ್ನ ಮೇಲೂ ನನ್ನ ಸಂಶೋಧನೆಯ ಪ್ರಯೋಗದಲ್ಲಿ ಸಕಾರಾತ್ಮಕ ಫಲಿತಾಂಶ ಕಂಡುಕೊಂಡಿದ್ದೇನೆ ಎಂದರು.

ಸಾಗರ ತಾಲ್ಲೂಕಿನ ಬೇದೂರಿನ ಕೃಷಿಕ ಸುರೇಶ್ ಮತ್ತು ರಂಜನಾ ದಂಪತಿಗಳ ಪುತ್ರ ಡಾ.ಶ್ರೀರಾಮ ಬೇದೂರಿನ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಪ್ರೌಢಶಾಲಾ ಶಿಕ್ಷಣವನ್ನು ಸಾಗರದ ಸೆಂಟ್‌ ಜೋಸೇಫ್ ಶಾಲೆಯಲ್ಲಿ ಪಡೆದು ಪ್ರಥಮ ಮತ್ತು ದ್ವಿತೀಯ ಪಿಯು ಶಿಕ್ಷಣವನ್ನು ಸಾಗರದ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಪೂರೈಸಿದ್ದಾರೆ. ನಂತರ ದಕ್ಷಿಣ ಕನ್ನಡದ ಉಜಿರೆಯಲ್ಲಿನ ಧರ್ಮಸ್ಥಳ ಕಾಲೇಜಿನಲ್ಲಿ ಮನಃಶಾಸ್ತ್ರ (ಸೈಕಾಲಜಿ) ವಿಷಯದಲ್ಲಿ ಪದವಿಧರನಾಗಿ ಮೈಸೂರಿನ ಜೆಎಸ್‌ಎಸ್ ಮೆಡಿಕಲ್ ಕಾಲೇಜಿನಲ್ಲಿ ವೈಧ್ಯಕೀಯ ಶಾಸ್ತçವನ್ನು ಅಧ್ಯಯನ ಮಾಡಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಯಾಗಿ ಹೊರಹೊಮ್ಮುತ್ತಿದ್ದಂತೆ ಮಡಕೇರಿ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಭೋದಕನಾಗಿ ನೌಕರಿ ದೊರೆಯುತ್ತದೆ.

ಪಿಹೆಚ್‌ಡಿ ಮಾಡುವ ಆಶಯ ಗುರಿ ಹೊಂದಿರುವ ಶ್ರೀರಾಮ್ ವೈದ್ಯಕೀಯ ಉಪನ್ಯಾಸಕ ವೃತ್ತಿಗೆ ರಾಜೀನಾಮೆ ನೀಡಿ ಡಾ.ರಾಮಚಂದ್ರ ಅವರ ಮಾರ್ಗದರ್ಶನದಲ್ಲಿ ಪಿಹೆಚ್‌ಡಿ ಮಾಡಲು ಆರಂಭಿಸಿದಾಗ ಕೋವಿಡ್ ಹಾವಳಿ ಹೆಚ್ಚಾಯಿತು.ಈ ಪರ್ವಕಾಲದಲ್ಲಿ ಶಿವಮೊಗ್ಗದ ಮೆಡಿಕಲ್ (ಮೆಗ್ಗಾನ್)ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ವೈದ್ಯಕೀಯ ಶಾಸ್ತ್ರದ ಉಪನ್ಯಾಸಕರಾಗಿ ವೃತ್ತಿ ನಿರ್ವಹಿಸುತ್ತಿರುವ ಡಾ.ಶ್ರೀರಾಮ್ ಅವರು ಇಂದು ಗುರುವಾರ ಸಾಗರ ತಾಲ್ಲೂಕಿನ ಮುಂಗರವಳ್ಳಿಯ ವಧುವಿನೊಂದಿಗೆ ವಿವಾಹ ನಿಶ್ಚಯ ಕಾರ್ಯಕ್ರಮ ನೆರವೇರುತ್ತಿರುವುದು ಒಂಟಿಯಲ್ಲ. ಜಂಟಿಯಾಗುವ ವೈವಾಹಿಕ ಜೀವನದ ಪ್ರಥಮ ಹೊಸ್ತಿಲಿನಲ್ಲಿರುವ ಅವರಿಗೆ ಶುಭವಾಗಲಿ.

ಕಾನೂನಿಗೆ ಗೌರವ ನೀಡಿ ಬದುಕಬೇಕಿದೆ- ಪ್ರಸನ್ನ ಕರ್ಮಕರ್

0

ಕಾರ್ಕಳ ಕ್ರಿಯೇಟಿವ್‌ ಕಾಲೇಜಿನಲ್ಲಿ ಕಾನೂನು ಅರಿವು ಮತ್ತು ನಮಗೂ ಹಕ್ಕಿದೆ @75 ಕಾರ್ಯಕ್ರಮ
ನಮ್ಮ ದೇಶದ ಕಾನೂನು ಅತ್ಯಂತ ಪರಿಣಾಮಕಾರಿಯಾಗಿದ್ದು, ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನ ನ್ಯಾಯದ ಹಕ್ಕನ್ನು ನೀಡಿದೆ.

ಕಾನೂನಿನ ಅಡಿಯಲ್ಲಿ ಪ್ರತಿ ನಾಗರೀಕನೂ ಕಾನೂನಿಗೆ ತಲೆಬಾಗಿ ತನ್ನ ಸ್ವಾತಂತ್ರವನ್ನು ಅನುಭವಿಸಬೇಕು. ನಮ್ಮ ಹಕ್ಕುಗಳಿಗಾಗಿ ಹೋರಾಡಿ ನ್ಯಾಯಾಲಯದಲ್ಲಿ ನ್ಯಾಯ ಪಡೆಯುವ ವ್ಯವಸ್ಥೆಯೂ ಇದೆ. ಇದನ್ನು ದೇಶದ ನಾಗರೀಕರಾದ ನಾವೆಲ್ಲ ಅರ್ಥೈಸಿಕೊಂಡು ಕಾನೂನಿಗೆ ಗೌರವ ನೀಡಿ ಬದುಕಬೇಕಿದೆ ಎಂದು ವಕೀಲ ಶ್ರೀ. ಪ್ರಸನ್ನ ಕರ್ಮರ್ಕರ್‌ ಹೇಳಿದರು.

ಅವರು ಕಾರ್ಕಳದ ಕ್ರಿಯೇಟಿವ್‌ ಪ.ಪೂ ಕಾಲೇಜಿನಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಕಾನೂನು ಅರಿವು ಮತ್ತು ಪ್ರಚಾರ ಅಭಿಯಾನದ ನಮಗೂ ಹಕ್ಕಿದೆ @ 75 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌ ನಾವೆಲ್ಲ ಕಾನೂನು ಮತ್ತು ಸಂವಿಧಾನದ ಆಶಯವನ್ನು ಗೌರವಿಸೋಣ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಸಂಸ್ಥಾಪಕರಾದ ಅಶ್ವಥ್‌ ಎಸ್.ಎಲ್‌, ಗಣಪತಿ ಕೆ.ಎಸ್‌, ಸಾರ್ವಜನಿಕ ಸಂಪರ್ಕ ಅಧಿಕಾರಿ ಲಿಶಾನ್‌ ಗೌಡ, ಉಪನ್ಯಾಸಕರಾದ ರಾಘವೇಂದ್ರ ರಾವ್‌, ಉಮೇಶ್‌, ಅಕ್ಷತಾ ಜೈನ್‌, ಚಂದ್ರಕಾಂತ್‌ ಉಪಸ್ಥಿತರಿದ್ದರು.
ಶ್ರೀ. ಉಮೇಶ್‌ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ನಾವೀನ್ಯತೆ ಮತ್ತು ಉದ್ಯಮಶೀಲತೆ ಶೈಕ್ಷಣಿಕವಾಗಿ ಪ್ರಮುಖವಾಗಿವೆ- ಸಿಡಾಕ್ ಸುದರ್ಶನ್

0

ಕೇಂದ್ರ ಸರ್ಕಾರದ ‘ಪರಮ್ ಉತ್ಕರ್ಷ್’ ಉನ್ನತ ಕ್ಷಮತೆಯ ಕಂಪ್ಯೂಟಿಂಗ್ ಯಂತ್ರವಾಗಿದ್ದು ಶೈಕ್ಷಣಿಕವಾಗಿ ಹೊರಹೊಮ್ಮುವ ನವೀನ ಚಿಂತನೆಗಳಿಗೆ ಪೂರಕ ಶಕ್ತಿಯಾಗಿದೆ ಎಂದು ಸಿಡಾಕ್ ಸಂಸ್ಥೆಯ ನಿರ್ದೇಶಕ ಡಾ.ಎಸ್.ಡಿ. ಸುದರ್ಶನ್ ತಿಳಿಸಿದರು.

ಶಿವಮೊಗ್ಗದ ಜೆ.ಎನ್.ಎನ್. ಎಂಜಿನಿಯರಿಂಗ್ ಕಾಲೇಜು ಹಾಗೂ ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರ್ಸ್ ಮಂಗಳೂರು ಉಪವಿಭಾಗದ ವತಿಯಿಂದ ಶುಕ್ರವಾರ ಆರಂಭವಾದ ಎರಡು ದಿನಗಳ ಅಂತರರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ನಾವೀನ್ಯತೆ ಮತ್ತು ಉದ್ಯಮಶೀಲ ಚಿಂತನೆಗಳು ಶೈಕ್ಷಣಿಕವಾಗಿ ಪ್ರಮುಖ ಪಾತ್ರ ವಹಿಸುತ್ತಿವೆ. ಇಂತಹ ಸಂದರ್ಭದಲ್ಲಿ ಎರಡು ಮತ್ತು ಮೂರನೇ ಶ್ರೇಣಿ ನಗರಗಳ ಶೈಕ್ಷಣಿಕ ವ್ಯವಸ್ಥೆಗೆ ಪೂರಕವಾಗಿ ಕೇಂದ್ರ ಸರ್ಕಾರದ ಸಿಡಾಕ್ ಮೂಲಕ ರೂಪಿಸಿರುವ ‘ಪರಮ್ ಉತ್ಕರ್ಷ್’ ಕಂಪ್ಯೂಟಿಂಗ್ ಯಂತ್ರ, ಕೃತಕ ಬುದ್ಧಿಮತ್ತೆಯ ಮೂಲಕ ಆವಿಷ್ಕಾರಿ ಸೌಲಭ್ಯಗಳನ್ನು ನೀಡಲಿದೆ.

ಶಿವಮೊಗ್ಗದ ವಿದ್ಯಾರ್ಥಿಗಳು ಇಂತಹ ತಂತ್ರಜ್ಞಾನದ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.
‘ಅನ್ವೇಷಣಾತ್ಮಕ ಗುಣ ಬೆಳೆಸಿಕೊಳ್ಳಲು ಸಹಭಾಗಿತ್ವದ ಅವಶ್ಯಕತೆ ಇದೆ. ಬದುಕಿನಲ್ಲಿ ಶಿಕ್ಷಣದ ಕಲಿಕೆಗಿಂತ ಬುದ್ಧಿಶಕ್ತಿ ಅನುಭವಾಧಾರಿತವಾಗಿ ಕಲಿಯುವುದೇ ಹೆಚ್ಚು. ಅಂತಹ ಕಲಿಕೆಗೆ ನಮ್ಮ ನಡುವಿನ ಸ್ನೇಹಿತರ, ಬಂಧುಗಳ, ಸಹೋದ್ಯೋಗಿಗಳ ಸಹಭಾಗಿತ್ವ ಅತ್ಯವಶ್ಯಕ.

ಆಗ ಮಾತ್ರ ವಾಸ್ತವತೆಯ ಅರಿವು ಪಡೆಯಲು ಸಾಧ್ಯ’ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣರಾವ್ ಮಾತನಾಡಿ, ‘ಆಧುನಿಕತೆಯ ಒಲವಿನ ಹಿಂದೆ ಉಂಟಾಗುತ್ತಿರುವ ತ್ಯಾಜ್ಯಗಳ ಬಗ್ಗೆ ನಾವು ಯೋಚಿಸಬೇಕಿದೆ. ಇತಿಹಾಸದ ಪುಟಗಳನ್ನು ಮೆಲುಕು ಹಾಕಿದಾಗ ಜ್ಞಾನದ ವಿನಿಮಯ ಎಂಬುದು ನಮ್ಮ ರಾಜ ಮಹಾರಾಜರ ಕಾಲದಲ್ಲಿಂದಲೂ ಉನ್ನತವಾಗಿತ್ತು. ಅಂತಹ ಪರಂಪರೆ ಇಲ್ಲಿಯವರೆಗೂ ಮುಂದುವರಿಸಿಕೊಂಡು ಬಂದಿದೆ.
ಮನುಷ್ಯನಲ್ಲಿ ಜ್ಞಾನ ಹೆಚ್ಚಾದಂತೆ ಸೌಜನ್ಯ ಹೆಚ್ಚಾಗಬೇಕಾಗಿದೆ. ಆಗ ಮಾತ್ರ ಶಿಕ್ಷಣದ ಪರಿಪೂರ್ಣತೆ ಸಾಧ್ಯ’ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ, ನಿರ್ದೇಶಕರಾದ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ, ಎಚ್.ಸಿ‌. ಶಿವಕುಮಾರ್, ಕಾರ್ಯಕ್ರಮ ಸಂಘಟನಾ ಮುಖ್ಯಸ್ಥರಾದ ಡಾ.ಪಿ. ಮಂಜುನಾಥ, ಡಾ.ಎಸ್.ವಿ ಸತ್ಯನಾರಾಯಣ, ಡಾ.ಪೂರ್ಣಲತಾ ಇದ್ದರು. ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಂಶೋಧನಾರ್ಥಿಗಳು ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು.

ಫೈಬರ್ ಸ್ಯಾಚುರೇಷನ್ ಯೋಜನೆಯಡಿ ದೇಶದಲ್ಲಿ ನಾಲ್ಕು ಸ್ಥಳಗಳಲ್ಲಿ ಸಾಗರ ತಾಲೂಕು ಆಯ್ಕೆ

0

2018 ರಲ್ಲಿ ಸಾಗರಕ್ಕೆ ಆಗಮಿಸಿದ ಅಂದಿನ ದೂರ ಸಂಪರ್ಕ ಮತ್ತು ಸಂವಹನ ಸಚಿವರಾದ ಮನೋಜ್ ಕುಮಾರ್ ಸಿನ್ಹಾ ರವರೊಂದಿಗೆ ಹೆಚ್.ಹಾಲಪ್ಪ ನವರು ನೆಟ್ ವರ್ಕ್ ಸಮಸ್ಯೆ ಬಗ್ಗೆ ಚರ್ಚಿಸಿದ್ದರು. ಸಾಗರ-ಹೊಸನಗರ ತಾ. ನೆಟ್ ವರ್ಕ್ ನೆಟ್ ವರ್ಕ್ ಸಮಸ್ಯೆಯಿಂದ ಸಾರ್ವಜನಿಕರು No Network- No Voting ಅಭಿಯಾನದಲ್ಲಿ ಹೋರಾಟ ನೆಡೆಸಿದ್ದರು, ಇದಕ್ಕೆ ಶಾಸಕರು ಬೆಂಬಲ ಸೂಚಿಸಿ, ಸಂಸದರಾದ ಬಿ.ವೈ ರಾಘವೇಂದ್ರ ರವರ ಸಮ್ಮುಖದಲ್ಲಿ ಕೇಂದ್ರ ದೂರ ಸಂಪರ್ಕ ಮತ್ತು ಸಂವಹನ ಸಚಿವರನ್ನು ಬೇಟಿಯಾಗಿ ಮಲೆನಾಡಿನ ನೆಟ್ ವರ್ಕ್ ಸಮಸ್ಯೆಗೆ ವಿಶೇಷ ಯೋಜನೆ ಜಾರಿಗೆ ತರುವಂತೆ ಚರ್ಚಿಸಿದ್ದರು.

ಇದರ ಮುಂದುವರೆದ ಭಾಗವಾಗಿ ಕೇಂದ್ರ ಸರ್ಕಾರವು BSNL ನ ಸಹಭಾಗಿತ್ವದೊಂದಿಗೆ ಹಳ್ಳಿಗಳಲ್ಲಿ ಇಂಟರ್ ನೆಟ್ ಸೇವೆಗಳನ್ನು ವಿಸ್ತರಿಸಲು ದೇಶದ 4 ಆಯ್ದ ತಾಲ್ಲೂಕುಗಳಲ್ಲಿ Fiber saturation ಯೋಜನೆ ಆರಂಭಿಸಿದ್ದು. ಸದರಿ ಯೋಜನೆಯ ಬಗ್ಗೆ ಇಂದು (15-10-2022) ಶಾಸಕರಾದ ಹೆಚ್.ಹಾಲಪ್ಪ ನವರು, ಪತ್ರಿಕಾ ಗೋಷ್ಠಿ ನೆಡೆಸಿ, ಈ ಯೋಜನೆಗೆ ಕರ್ನಾಟದಲ್ಲಿ ಸಾಗರ ತಾಲ್ಲೂಕು ಆಯ್ಕೆಯಾಗಿದ್ದು, 36 ಮೊಬೈಲ್ ಟವರ್ ಅಳವಡಿಸಲು ನಿರ್ಧರಿಸಲಾಗಿದೆ ಮತ್ತು 3 ಸಾವಿರಕ್ಕೂ ಅಧಿಕ ಮನೆಗಳಿಗೆ ಉಚಿತ ಸಂಪರ್ಕ ಕಲ್ಪಿಸಲು ತೀರ್ಮಾಸಿದ್ದು, ಸಾರ್ವಜನಿಕರು ಇದೇ ನವಂಬರ್ 30 ರ ಒಳಗೆ ತಮ್ಮ ತಮ್ಮ ಗ್ರಾ.ಪಂ ಕಾರ್ಯಾಲಯದಲ್ಲಿ ಅರ್ಜಿ ಸಲ್ಲಿಸುವಂತೆ ಕೋರಿ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕೇಂದ್ರ ಸರ್ಕಾರದ ದೂರಸಂಪರ್ಕ ಮತ್ತು ಸಂವಹನ ಇಲಾಖೆ ಜಂಟಿ ಕಾರ್ಯದರ್ಶಿ ಸುಶೀಲ್ ಕುಮಾರ್ ವರ್ಮಾ IRS, (DOT Dehli) ಸಂಜೀವ್ DDG DOT banglore, ರಾಜೀವ್ ಕುಮಾರ್ Director DOT banglore, ಧನಂಜಯ್ ಕುಮಾರ್ ತ್ರಿಪಾಠಿ GM BSNL ಶಿವಮೊಗ್ಗ, ಇವರುಗಳನ್ನು ಅಭಿನಂದಿಸಿ, ಯೋಜನೆ ಅನುಷ್ಠಾನ ಗೊಳಿಸಿದ, *ಸನ್ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜೀ ಯವರಿಗೆ, ಕೇಂದ್ರ ದೂರಸಂಪರ್ಕ ಮತ್ತು ಸಂವಹನ ಸಚಿವರಾದ ಅಶ್ವಿನಿ ವೈಷ್ಣವ್ ರವರಿಗೆ, ಹಾಗೂ ವಿಶೇಷ ಸಹಕಾರ ನೀಡಿದ ಸಂಸದರಾದ ಬಿ.ವೈ ರಾಘವೇಂದ್ರ ರವರಿಗೆ ಧನ್ಯವಾದ ಸಲ್ಲಿಸಿದರು.

ಹರಿಯಾಣದಲ್ಲಿ ಉತ್ಪಾದಿತ ಕೆಮ್ಮಿನ ಸಿರಪ್ ಸೇವಿಸಿ ಗ್ಯಾಂಬಿಯಾದೇಶದ 66 ಮಕ್ಕಳ ಸಾವು

0

ಪಶ್ಚಿಮ ಆಫ್ರಿಕಾದ ಗ್ಯಾಂಬಿಯಾ ದೇಶದಲ್ಲಿ 66 ಮಕ್ಕಳ ಸಾವು ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ. ಇಲ್ಲಿನ ಮಕ್ಕಳ ಸಾವಿಗೆ ಕಾರಣ ಭಾರತದ ಕೆಮ್ಮು ಸಿರಪ್ ಎಂದು ಹೇಳಲಾಗುತ್ತಿದೆ.

ಈ ನಾಲ್ಕು ಕೆಮ್ಮು ಸಿರಪ್‌ಗಳನ್ನು ಹರಿಯಾಣ ಮೂಲದ ಪಾರ್ಮಾ ಕಂಪನಿಯಾದ ಮೈಡೆನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ತಯಾರಿಸಲಾಗಿದೆ ಎಂದು ತಿಳಿದುಬಂದಿದೆ.

ಇದು ವಿಷಕಾರಿ ಮತ್ತು ಮಾರಣಾಂತಿಕ ಅಂಶಗಳನ್ನು ಒಳಗೊಂಡಿದೆ ಎಂದು ಡಬ್ಲುಎಚ್‌ಒ ಮಾಹಿತಿ ನೀಡಿದೆ. ಈ ಔಷಧದ ಕುರಿತಾಗಿ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಯನ್ನು ರವಾನಿಸಿದ್ದು, ಇದರಲ್ಲಿದ್ದ ವಿಷದಿಂದಾಗಿ ಪರಿಣಾಮವಾಗಿ ಮಕ್ಕಳಲ್ಲಿ ಮೂತ್ರಪಿಂಡ ಸೋಂಕು ಕಾಣಿಸಿಕೊಂಡು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ ಎಂದು ಹೇಳಿಕೊಂಡಿದೆ. ಹೀಗಿರುವಾಗ ಕೆಮ್ಮಿನ ಸಿರಪ್‌ನಲ್ಲಿರುವ ಕೆಲವೊಂದು ರಾಸಾಯನಿಕಗಳ ಬಗ್ಗೆ ತಿಳಿದುಕೊಳ್ಳುವುದು ಅತೀ ಅಗತ್ಯವಾಗಿದೆ.

ನಿಮ್ಮ ಮಗುವಿಗೆ ಯಾವುದೇ ಪ್ರಿಸ್ಕ್ರಿಪ್ಷನ್ ಅಥವಾ ಓವರ್-ದಿ-ಕೌಂಟರ್ (OTC) ಔಷಧಿಗಳನ್ನು ನೀಡುವ ಮೊದಲು ವೈದ್ಯರನ್ನು ನೋಡಲು ಮರೆಯದಿರಿ.

ಔಷಧವನ್ನು ಹೇಗೆ ನೀಡಬೇಕು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. (ಕೆಲವೊಂದು ಔಷಧಿಗಳನ್ನು ನೀಡುವ ವಿಧಾನ ವಿಭಿನ್ನವಾಗಿರುತ್ತದೆ)

ಔಷಧವನ್ನು ಆಹಾರದ ಮೊದಲು ತೆಗೆದುಕೊಳ್ಳಬೇಕೋ, ನಂತರ ತೆಗೆದುಕೊಳ್ಳಬೇಕೋ ಎಂಬ ಸೂಚನೆಗಳನ್ನು ಗಮನಿಸಿಕೊಳ್ಳಿ

ಔಷಧವನ್ನು ಹೇಗೆ ಇಡುವುದು, ಔಷಧಿಯನ್ನು ಎಷ್ಟು ದಿನ ಸುರಕ್ಷಿತವಾಗಿ ಇಡಬಹುದು ಎಂಬುದನ್ನು ತಿಳಿಯಿರಿ.

ಇತರ ಔಷಧಿಗಳೊಂದಿಗೆ ತೆಗೆದುಕೊಳ್ಳಬಹುದೇ ಎಂಬ ಬಗ್ಗೆ ವಿಚಾರಿಸಿಕೊಳ್ಳಿ.

ಫಾರ್ಮಾಸಿಸ್ಟ್‌ಗಳು ಕೆಲವೊಮ್ಮೆ ಅಗತ್ಯಕ್ಕಿಂತ ಹೆಚ್ಚಿನ ಔಷಧಿಗಳನ್ನು ನೀಡಬಹುದು, ಆದ್ದರಿಂದ ಔಷಧವು ಉಳಿಯುತ್ತದೆ. ಹಾಗೆಂದು
ಉಳಿದ ಔಷಧಿಗಳನ್ನು ಎಂದಿಗೂ ಬಳಸಬೇಡಿ. ನಿಮ್ಮ ಬಳಿ ಯಾವುದೇ ದ್ರವ ಔಷಧ ಉಳಿದಿದ್ದರೆ, ಅದನ್ನು ಎಸೆಯಿರಿ.

ಹಳೆಯ ಔಷಧವನ್ನು ಬಳಸಬೇಡಿ, ಮುಕ್ತಾಯ ದಿನಾಂಕದ (Expiry date) ಮೇಲೆ ಕಣ್ಣಿಡಿ.

ವಯಸ್ಕರಿಗೆ ಅಥವಾ ಬೇರೆಯವರಿಗೆ ನೀಡಿದ ಔಷಧಿಗಳನ್ನು ನಿಮ್ಮ ಮಗುವಿಗೆ ಎಂದಿಗೂ ನೀಡಬೇಡಿ. ಇಬ್ಬರಿಗೆ ಒಂದೇ ಕಾಯಿಲೆ ( ಇದ್ದರೂ ಅವರಿಗೆ ಬೇರೆ ಬೇರೆ ಡೋಸ್ ಬೇಕು.

ವಯಸ್ಕರಿಗೆ ಉದ್ದೇಶಿಸಿರುವ ಔಷಧಿಯನ್ನು ಮಗುವಿಗೆ ಎಂದಿಗೂ ನೀಡಬೇಡಿ. ನಿಮ್ಮ ಮಗುವಿಗೆ ಒಂದೇ ರೀತಿಯ ಪದಾರ್ಥಗಳೊಂದಿಗೆ ಎರಡು ರೀತಿಯ ಔಷಧಿಗಳನ್ನು ನೀಡುವ ಮೊದಲು ನಿಮ್ಮ ವೈದ್ಯರು ಅಥವಾ ಔಷಧಿಕಾರರನ್ನು ಪರಿಶೀಲಿಸಿ.

ಔಷಧದ ಹೆಸರು ಮತ್ತು ಅದನ್ನು ಏಕೆ ನೀಡಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ
-ಔಷಧಿಯನ್ನು ಎಷ್ಟು, ಯಾವಾಗ ಮತ್ತು ಎಷ್ಟು ಸಮಯದವರೆಗೆ ನೀಡಬೇಕು ಎಂಬುದನ್ನು ತಿಳಿಯಿರಿ.