Saturday, August 8, 2026
Saturday, August 8, 2026
Home Blog Page 138

Sri Adi Chunchanagiri ಶ್ರೀಆದಿಚುಂಚನಗಿರಿ ಸ್ವತಂತ್ರ ಪಪೂ ಕಾಲೇಜಿಗೆ ಶೇ 99.71 ಫಲಿತಾಂಶ. ಸಂಗಡ 5 ವಿದ್ಯಾರ್ಥಿಗಳ ಉನ್ನತ ಶ್ರೇಣಿ ಸಾಧನೆ.

0

Sri Adi Chunchanagiri ಶಿವಮೊಗ್ಗ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಈ ಬಾರಿ ದ್ವಿತೀಯ ಪಿಯುಸಿ ಯಲ್ಲಿ ಅತ್ಯುನ್ನತ ಫಲಿತಾಂಶವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ಕ್ಕೆ ಹಾಜರಾದ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ: ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗಳು- 351, ತೇರ್ಗಡೆಯಾದ ವಿದ್ಯಾರ್ಥಿಗಳು- 350, 209 ಡಿಸ್ಟಿಂಕ್ಷನ್,137 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮತ್ತು 05 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯನ್ನು ಪಡೆದು 99.71% ಫಲಿತಾಂಶದೊಂದಿಗೆ ತೇರ್ಗಡೆ ಹೊಂದಿರುತ್ತಾರೆ.
ಈ ಸಾಧನೆಯನ್ನು ಮೆಚ್ಚಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು, ಶ್ರೀ ನಾದಮಯಾನಂದನಾಥ ಸ್ವಾಮೀಜಿಯವರು, ಆಡಳಿತ ಮಂಡಳಿಯ ನಿರ್ದೇಶಕರು, ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಶುಭ ಶುಭ ಹಾರೈಸಿರುತ್ತಾರೆ. ಸಲ್ಲಿಸಿರುತ್ತಾರೆ.
ಬಾಕ್ಸ್:
Sri Adi Chunchanagiri ಕಾಲೇಜಿಗೆ 5 ರ‍್ಯಾಂಕ್ ಉತ್ತಮ ಸಾಧನೆ: ಲಕ್ಷ್ಮಿ ಹೆಚ್.ಕೆ. 600ಕ್ಕೆ 593 ಅಂಕ ಪಡೆದು ರಾಜ್ಯಕ್ಕೆ 6ನೇ ರ‍್ಯಾಂಕ್ , ಜಿಯಾ ಶೇಟ್ 600 ಕ್ಕೆ 592 ಅಂಕ ಪಡೆದು 7ನೇ ರ‍್ಯಾಂಕ್ , ಫರಿಯಲ್ ಫಾತಿಮ 600 ಕ್ಕೆ 591 ಅಂಕ ಪಡೆದು 8ನೇ ರ‍್ಯಾಂಕ್ ,ತೇಜಶ್ರೀ ಎಸ್. 600 ಕ್ಕೆ 590 ಅಂಕ ಪಡೆದು 9ನೇ ರ‍್ಯಾಂಕ್ ಹಾಗೂ ಅನ್ನಪೂರ್ಣ ಜಿ.ಎಸ್. 600ಕ್ಕೆ 589 ಅಂಕ ಪಡೆದು 10ನೇ ರ‍್ಯಾಂಕ್ ಪಡೆದು ಕಾಲೇಜಿಗೆ ಹಾಗೂ ಶಿವಮೊಗ್ಗ ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾರೆ.

S.N. Channabasappa ಶಿವಮೊಗ್ಗ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಸಂಕಲ್ಪ- ಶಾಸಕ ಎಸ್.ಎನ್.ಚನ್ನಬಸಪ್ಪ.

0

S.N. Channabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ವಾರ್ಡ್ ಅನ್ನು ಸುಸಜ್ಜಿತವಾಗಿ ರೂಪಿಸುವ ಮತ್ತು ನಾಗರಿಕರಿಗೆ ಉತ್ತಮ ಮೂಲಸೌಕರ್ಯ ಒದಗಿಸುವ ಸಂಕಲ್ಪದೊಂದಿಗೆ ಇಂದು ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ನಗರದ ವಿವಿಧ ಭಾಗಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.

ವಾರ್ಡ್ ನಂಬರ್ 5: ಪೂರಲೆ ಭಾಗದ ಅಂಬುಜ ಅಪಾರ್ಟ್‌ಮೆಂಟ್ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿ.

ವಾರ್ಡ್ ನಂಬರ್ 18: ಆರ್.ಎಂ.ಎಲ್ ನಗರದ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿ.

ಸಾರ್ವಜನಿಕರ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಈ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಗಳನ್ನು ಅತ್ಯಂತ ಗುಣಮಟ್ಟದಿಂದ ಹಾಗೂ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು ಎಂದು ಇದೇ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

S.N. Channabasappa ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷರಾದ ಶ್ರೀ ಮೋಹನ್ ರೆಡ್ಡಿ, ಪ್ರಮುಖರಾದ ಶ್ರೀ ಪೆರುಮಾಳ್, ಶ್ರೀ ರಮೇಶ್, ಶ್ರೀ ಜಗನ್ನಾಥ್, ಶ್ರೀ ಹರ್ಷ, ಶ್ರೀ ಮಲ್ಲಿಕಾರ್ಜುನ್, ಶ್ರೀ ಆನಂದ್, ವಾರ್ಡ್ ನ ಅಧ್ಯಕ್ಷರಾದ ಶ್ರೀ ರಮೇಶ್, ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ್, ಶ್ರೀ ಸುಧೀರ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

ಧನ್ಯವಾದಗಳೊಂದಿಗೆ,
ಶಾಸಕರ ಕಚೇರಿ, ಶಿವಮೊಗ್ಗ.

MESCOM ಮೆಸ್ಕಾಂ ಕೈಗೊಂಡಿರುವ ಪೂರ್ವಾನ್ವಯ ವಿದ್ಯುತ್ ದರ ಏರಿಕೆಗೆ ಹೋಟೆಲ್ ಮಾಲೀಕರ ಸಂಘದ ವಿರೋಧ.

0

MESCOM ಮೆಸ್ಕಾಂನಿಂದ ಜಾರಿಗೆ ತರಲಾದ ಪೂರ್ವಾನ್ವಯದ ವಿದ್ಯುತ್ ದರ ಏರಿಕೆಗೆ ಶಿವಮೊಗ್ಗ ಹೋಟೆಲ್ ಮಾಲೀಕರ ಸಂಘದ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಏಪ್ರಿಲ್ 2026ರಲ್ಲಿ ವಿತರಿಸಲಾದ ಪರಿಷ್ಕೃತ ವಿದ್ಯುತ್ ಬಿಲ್‌ಗಳಲ್ಲಿ ಮೇ 2025ರಿಂದ ಮಾರ್ಚ್ 2026ರವರೆಗಿನ ಬಾಕಿ ಮೊತ್ತವನ್ನು ಪೂರ್ವಾನ್ವಯದ ದರದಲ್ಲಿ ಸೇರಿಸಲಾಗಿದೆ. ಇದರಿಂದ ಶಿವಮೊಗ್ಗದ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಲಾಡ್ಜ್ ಗಳ ಮೇಲೆ ಅನಿರೀಕ್ಷಿತ ಮತ್ತು ಬಾರಿ ಆರ್ಥಿಕ ಹೊರೆ ಬಿದ್ದಿದೆ ಎಂದು ಸಂಘ ತಿಳಿಸಿದೆ.

ಹಿನ್ನೋಟದ ಬಿಲ್ಲಿಂಗ್ ಕ್ರಮವು ಅನ್ಯಾಯ. ಆರ್ಥಿಕವಾಗಿ ಹಾನಿಕಾರಕ ಮತ್ತು ನೈಸರ್ಗಿಕ ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ ಎಂದು ಸಂಘದ ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವ್ಯವಹಾರಗಳಿಗೆ ಮುಂಚಿತವಾಗಿ ಮಾಹಿತಿ ನೀಡಿಲ್ಲ ಅಥವಾ ಸಿದ್ಧತೆ ಮಾಡಿಕೊಳ್ಳಲು ಅವಕಾಶ ನೀಡಿಲ್ಲ ಎಂದು ದೂರಿದ್ದಾರೆ.

ಕೋವಿಡ್ ನಂತರದ ಪರಿಸ್ಥಿತಿಯಿಂದ ಚೇತರಿಸಿಕೊಳ್ಳುತ್ತಿರುವ ಮತ್ತು ಕಡಿಮೆ ಲಾಭಾಂಶದಲ್ಲಿ ನಡೆಯುತ್ತಿರುವ ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರವು ಹಠಾತ್ ಹೆಚ್ಚುವರಿ ಹೊರೆಯಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

ಸಂಘವು ಪ್ರಮುಖ ಅಂಶಗಳ ಬಗ್ಗೆ ಪ್ರಸ್ತಾಪಿಸಿದೆ. ಹಲವಾರು ಸಣ್ಣ ಮತ್ತು ಮಧ್ಯಮ ಗಾತ್ರದ ಹೋಟೆಲ್‌ಗಳು ಮುಚ್ಚುವ ಭೀತಿಯಲ್ಲಿವೆ. ನೂರಾರು ಕಾರ್ಮಿಕರ ಉದ್ಯೋಗಕ್ಕೆ ಅಪಾಯ ಎದುರಾಗಿದೆ. ಸ್ಥಳೀಯ ಆರ್ಥಿಕತೆ ಮತ್ತು ಪ್ರವಾಸೋದ್ಯಮ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.

ಶಿವಮೊಗ್ಗ ಹೋಟೆಲ್ ಮಾಲೀಕರ ಸಂಘ ಸರ್ಕಾರದ ಪ್ರಮುಖ ಬೇಡಿಕೆಗಳನ್ನು ಇಟ್ಟಿದೆ. ಪೂರ್ವಾನ್ವಯದ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು. ದರ ಪರಿಷ್ಕರಣೆಯನ್ನು ಕೇವಲ ಮುಂದಿನ ದಿನಾಂಕದಿಂದ ಮಾತ್ರ ಜಾರಿಗೆ ತರಬೇಕು. ಬಿಲ್ಲಿಂಗ್ ಲೆಕ್ಕಾಚಾರದಲ್ಲಿ ಪಾರದರ್ಶಕತೆ ಇರಬೇಕು. ಪ್ರಮುಖ ನೀತಿ ಬದಲಾವಣೆಗಳ ಮೊದಲು ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ನಡೆಸಬೇಕು.

MESCOM ಈ ಸಮಸ್ಯೆಯು ಬಗೆಹರಿಯದಿದ್ದರೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವನ್ನು ಸಂಪರ್ಕಿಸಲು ಮತ್ತು ಕಾನೂನು ಕ್ರಮ ಕೈಗೊಳ್ಳಲು ಸಂಘವು ನಿರ್ಧರಿಸಿದೆ. ಈ ವಿಷಯವನ್ನು ಜನಪ್ರತಿನಿಧಿಗಳ ಗಮನಕ್ಕೆ ತರಲು ಮತ್ತು ಅಗತ್ಯವಿದ್ದಲ್ಲಿ ಸಾಮೂಹಿಕ ಹೋರಾಟ ಸಂಘಟಿಸಲು ಸಂಘವು ನಿರ್ಧರಿಸಿದೆ. “ನಾವು ದರ ಪರಿಷ್ಕರಣೆಯ ವಿರುದ್ಧವಿಲ್ಲ. ಆದರೆ ಪೂರ್ವಾನ್ವಯವಾಗಿ (ಹಿನ್ನೋಟದ) ದರ ಹೇರುವುದು ಸ್ವೀಕಾರಾರ್ಹವಲ್ಲ ಮತ್ತು ಅನ್ಯಾಯದಾಯಕ” ಎಂದು ಶಿವಮೊಗ್ಗ ಹೋಟೆಲ್ ಮಾಲೀಕರ ಸಂಘ ಅಧ್ಯಕ್ಷ ಯು.ಎಂ.ಶಂಕರನಾರಾಯಣ ಹೊಳ್ಳ ಹಾಗೂ ಕಾರ್ಯದರ್ಶಿ ಎನ್.ಗೋಪಿನಾಥ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2nd PUC Exam Result 2026 ಪಿಯು (ವಿಜ್ಞಾನ ) ಪರೀಕ್ಷೆ: ಶಿವಮೊಗ್ಗದ ಮಹೀನ್ ಖಾನುಂ ಗೆ600/596 ಸಾಧನೆಯ ಗರಿ.

2nd PUC Exam Result 2026 ರಾಜ್ಯದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ.

ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿನಿ ಮಹಿನ್ ಖಾನುಂ ಅಫ್ರಿದಿ ಅವರು 600ಕ್ಕೆ 596 ಅಂಕ ಗಳಿಸಿದ್ದಾರೆ.

ಇಂಗ್ಲಿಷ್-98, ಹಿಂದಿ-100, ಫಿಸಿಕ್ಸ್-100, ಕೆಮಿಸ್ಟ್ರಿ-99, ಗಣಿತ-100 ಹಾಗೂ ಜೀವಶಾಸ್ತ್ರ-99 ಅಂಕಗಳನ್ನು ಪಡೆದಿದ್ದಾರೆ.

2nd PUC Exam Result 2026 ಶಿವಮೊಗ್ಗ ನಗರದ ಜಬ್ಬೀರ್ ಅಹಮ್ಮದ್ ಖಾನ್ ಮತ್ತು ಆಯೆಷಾ ಸಿದ್ಧಿಕಾ ಖಾನುಂ ಪುತ್ರಿ ಮಹಿನ್ ಖಾನುಂ ಅಫ್ರಿದಿ ಅವರು ಪೇಸ್ ಪದವಿ ಪೂರ್ವ ಕಾಲೇಜಿನಲ್ಲಿ ಓದುತ್ತಿದ್ದರು.

Pace PU College Shivamogga ಶಿವಮೊಗ್ಗ ಪೇಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಡಿಸ್ಟಿಂಕ್ಷನ್ ಸುಗ್ಗಿ.

Pace PU College Shivamogga 2025-26ನೇ ಸಾಲಿನ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆ-1ಕ್ಕೆ ಶಿವಮೊಗ್ಗದ ಪೇಸ್ ಪಿ.ಯು ಕಾಲೇಜಿನ ಹಾಜರಾದ ಒಟ್ಟು 697 ವಿದ್ಯಾರ್ಥಿಗಳಲ್ಲಿ 479 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 210 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯನ್ನು, 04 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯನ್ನು ಪಡೆದು 99.42% ಫಲಿತಾಂಶದೊಂದಿಗೆ ತೇರ್ಗಡೆ ಹೊಂದಿರುತ್ತಾರೆ.

ಮಹಿನ್ ಖಾನುಂ ಅಫ್ರಿದಿ 600ಕ್ಕೆ 596 ಅಂಕಗಳನ್ನು ಪಡೆದು ರಾಜ್ಯಕ್ಕೆ 3ನೇ ಸ್ಥಾನ, ಸಾಧ್ವಿ ಎಂ.ಎಸ್ 600ಕ್ಕೆ 594 ಅಂಕ ಪಡೆದು ರಾಜ್ಯಕ್ಕೆ 5ನೇ ಸ್ಥಾನ, ಅಂಕಿತ್ ಯು.ವಿ , ಧೃತಿ ಎಚ್. ಭಟ್, ಹಾಗೂ ಸಿಂಚನಾ ಪಿ.ಓ. 600ಕ್ಕೆ 589 ಅಂಕ ಪಡೆದು ರಾಜ್ಯಕ್ಕೆ 10ನೇ ಸ್ಥಾನ ಪಡೆದಿದ್ದಾರೆ.

Pace PU College Shivamogga ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ಕಾಲೇಜಿಗೆ ಹಾಗೂ ಶಿವಮೊಗ್ಗ ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾರೆ. ಇವರ ಈ ಸಾಧನೆಗೆ ಕಾಲೇಜಿನ ಟ್ರಸ್ಟಿಗಳು, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ

CM Siddharamaiah ಚುನಾವಣಾ ಆಯೋಗವು ಗ್ಯಾರಂಟಿ ಯೋಜನೆಗಳ ಲೆಕ್ಕ ಕೇಳಿ ನಮ್ಮನ್ನ ಬೆದರಿಸಲು ಹೊರಟಿದೆ- ಸಿದ್ಧರಾಮಯ್ಯ

0

CM Siddharamaiah ದಾವಣಗೆರೆ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ನಡೆಯುತ್ತಿರುವ ಉಪಚುನಾವಣೆಗಳ ಸಂದರ್ಭದಲ್ಲಿ ಕೇಂದ್ರ ಚುನಾವಣಾ ಆಯೋಗವು (ECI) ನಮ್ಮ ಸರ್ಕಾರಕ್ಕೆ ರಾಜ್ಯದ ಗ್ಯಾರಂಟಿ ಯೋಜನೆಗಳಡಿ ಬಿಡುಗಡೆಯಾದ ನಿಧಿಗಳ ವಿವರಗಳನ್ನು ಕೇಳಿರುವುದು ಚುನಾವಣಾ ಆಯೋಗದ ಪಕ್ಷಪಾತಿತನವನ್ನು ತೋರಿಸುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

CM Siddharamaiah ಮಹಾರಾಷ್ಟ್ರ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ಚುನಾವಣೆಗೂ ಮುನ್ನ ಅಲ್ಲಿನ ಬಿಜೆಪಿ ಸರ್ಕಾರ ನಗದು ವರ್ಗಾವಣೆ ಯೋಜನೆಗಳ ಜಾರಿಮಾಡಿದಾಗ ಕಣ್ಮುಚ್ಚಿ ಕೂತಿದ್ದ ಚುನಾವಣಾ ಆಯೋಗ, ಕಳೆದ ಎರಡೂ ಮುಕ್ಕಾಲು ವರ್ಷದಿಂದ ಜಾರಿಯಿರುವ ಗ್ಯಾರಂಟಿ ಯೋಜನೆಗಳ ಲೆಕ್ಕಕೇಳಿ ನಮ್ಮನ್ನು ಬೆದರಿಸಲು ಹೊರಟಿದೆ. ಇಂಥ ಗೊಡ್ಡು ಬೆದರಿಕೆ ಬಗ್ಗುವವರು ನಾವಲ್ಲ.
ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಖಡಕ್ ಆಗಿ ತಮ್ಮ ಅನಿಸಿಕೆಯನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಸಂಶಯಾಸ್ಪದ ರೀತಿಯಲ್ಲಿ ಶಿವಮೊಗ್ಗದ ಯುವಕನ ಸಾವು

0

ಶಿವಮೊಗ್ಗದ ತುಂಗಾನಗರ ಬಳಿಯ ಕಾಮತ್ ಲೇ ಔಟ್ ನಲ್ಲಿ ಯುವಕನೊಬ್ಬ ಅನುಮಾನಾಸ್ಪದ ಸಾವನ್ನಪ್ಪಿರುವ ಘಟನೆ ನಡೆದಿದೆ.

24 ವರ್ಷದ ಮಂಜುನಾಥ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಅಡಿಕೆ ಆರಿಸುವ ಕೆಲಸ, ಗಾರೆ ಹಾಗೂ ಶಿಲ್ಪಿ ಮಾಡ್ತಿದ್ದ ಮಂಜುನಾಥ್ ಅವರು
ಒಂದು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದರು ಎನ್ನಲಾಗಿದೆ.

ಸ್ಥಳಕ್ಕೆ ಸೋಕೋ ಟೀಮ್ ಹಾಗೂ ಪೊಲೀಸರ ಭೇಟಿ- ಪರಿಶೀಲನೆ ನಡೆಸಿದ್ದಾರೆ.

ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ‌

ಶಿವಮೊಗ್ಗದ ದೋಸೆ ಪ್ರಿಯರಿಗೆ “ಗ್ಯಾಸ್ ಟ್ರಬಲ್ ” ಟಿಫಿನ್ ಮಿಸ್‌ ಆಗ್ತಿದೆಯ,??

0

ಮಲೆನಾಡಿನಲ್ಲಿಯೂ ಕೂಡ ಇರಾನ್ ಇಸ್ರೇಲ್ ಹಾಗೂ ಅಮೇರಿಕ ಯುದ್ಧದ ಬಿಸಿ ತಟ್ಟಿದೆ. ಶಿವಮೊಗ್ಗದ ಹಳೆಯ ಹಾಗೂ ಪ್ರಸಿದ್ಧ ಪಲ್ಲವಿ ಹೋಟೆಲ್ ನಲ್ಲೂ ದೋಸೆಗಾಗಿ ತಿಂಡಿ ಪ್ರಿಯರು ಪರದಾಡುವಂತಾಗಿದೆ.

ಕಳೆದ 28 ವರ್ಷಗಳಿಂದ ಶಿವಮೊಗ್ಗದ ಪಲ್ಲವಿ ಹೋಟೆಲ್ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಸಿಗುವ ದೋಸೆ ಹಾಗೂ ಪೂರಿಗೆ ತಿಂಡಿ ಪ್ರಿಯರಿದ್ದಾರೆ. ಈಗ ಗ್ಯಾಸ್ ಸಿಗದ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ಸೌದೆ ಒಲೆಗೆ ಮೊರೆ ಹೋಗಿದ್ದಾರೆ. ಆದ್ದರಿಂದ ಇಡ್ಲಿ ಹಾಗೂ ಊಟ ಟೀ ಮಾತ್ರ ಸಿಗುತ್ತಿದೆ. ಗ್ಯಾಸ್ ಸಿಗದಿದ್ದಕ್ಕೆ ಮೆನುವಿನಲ್ಲಿ ಹಲವು ತಿಂಡಿಗಳನ್ನು ಕಟ್ ಮಾಡಲಾಗಿದೆ.

ಜಿಲ್ಲೆಯಾದ್ಯಂತ ಜಾನುವಾರುಗಳಿಗೆ‌ ಕಾಲುಬಾಯಿ ರೋಗ ವಿರುದ್ಧ ಏಪ್ರಿಲ್ 23 ರಿಂದ ಲಸಿಕಾ ಅಭಿಯಾನ- ಪ್ರಭುಲಿಂಗ ಕವಳಿಕಟ್ಟಿ

0

ಶಿವಮೊಗ್ಗ ಜಿಲ್ಲೆಯಲ್ಲಿ ಜಾನುವಾರುಗಳ ಆರೋಗ್ಯ ರಕ್ಷಣೆಗಾಗಿ ಏಪ್ರಿಲ್ 23 ರಿಂದ 9ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು ಎಲ್ಲ ಜಾನುವಾರುಗಳಿಗೆ ಲಸಿಕೆ ಹಾಕಿಸುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.
ಜಿಲ್ಲಾಡಳಿತ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ 9ನೇ ಸುತ್ತಿನ ಕಾಲು ಮತ್ತು ಜ್ವರ ಲಸಿಕಾ ಕಾರ್ಯಕ್ರಮದ ಜಿಲ್ಲಾ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಾನುವಾರುಗಳಲ್ಲಿ ಕಾಲು ಮತ್ತು ಬಾಯಿರೋಗ(ಎಫ್‌ಎಂಡಿ) ತಡೆಗಟ್ಟಲು ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಉಚಿತವಾಗಿ ಪ್ರತಿ 6 ತಿಂಗಳಿಗೊಮ್ಮೆ ಲಸಿಕೆಗಳನ್ನು ನೀಡಲಾಗುತ್ತದೆ. ಇದೇ ಏಪ್ರಿಲ್ 23 ರಿಂದ ಮೇ 22 ರವರೆಗೆ ಒಟ್ಟು 30 ದಿನಗಳ ಕಾಲ ಜಿಲ್ಲೆಯಾದ್ಯಂತ ಈ ಅಭಿಯಾನ ನಡೆಯಲಿದ್ದು 2030 ರ ವೇಳೆಗೆ ದೇಶದಿಂದ ಕಾಲುಬಾಯಿ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ.
ಜಿಲ್ಲೆಯ ಅಂಕಿ-ಅAಶ : ಜಿಲ್ಲೆಯಲ್ಲಿ 3,86,030 ಹಸುಗಳು ಹಾಗೂ 80,622 ಎಮ್ಮೆಗಳು ಸೇರಿ ಒಟ್ಟು 4,66,652 ಜಾನುವಾರುಗಳಿದ್ದು ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಜಿಲ್ಲೆಯಾದ್ಯಂತ ಒಟ್ಟು 477 ಲಸಿಕೆದಾರರನ್ನು ನೇಮಕ ಮಾಡಲಾಗಿದೆ.
ಜಿಲ್ಲೆಯಲ್ಲಿ 532715 ಡೋಸ್ ಲಸಿಕೆ ದಾಸ್ತಾನು ಮಾಡಲಾಗಿದ್ದು, ಲಸಿಕಾ ಕಾರ್ಯಕ್ರಮವು ಪ್ರತಿದಿನ ಬೆಳಿಗ್ಗೆ 7 ರಿಂದ 11 ಗಂಟೆಯವರೆಗೆ ನಡೆಯಲಿದೆ. ಲಸಿಕೆ ಹಾಕುವ ಸಮಯದಲ್ಲಿ ರೈತರ ಆಧಾರ್ ಸಂಖ್ಯೆ ಹಾಗೂ ಜಾನುವಾರುಗಳ ಕಿವಿ ಓಲೆ(ಟ್ಯಾಗ್ ನಂಬರ್) ವಿವರಗಳನ್ನು ಕಡ್ಡಾಯವಾಗಿ ಪಡೆಯಲಾಗುವುದು ಎಂದ ಅವರು ಇದನ್ನು ‘ಭಾರತ್ ಪಶುಧನ್’ ತಂತ್ರಾAಶದಲ್ಲಿ ಅಪ್‌ಲೋಡ್ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಲಸಿಕೆ ಹಾಕಿದ ನಂತರ ಯಾವುದೇ ವ್ಯತಿರಿಕ್ತ ಪರಿಣಾಮಗಳು ಕಂಡುಬAದಲ್ಲಿ ತಕ್ಷಣದ ಚಿಕಿತ್ಸೆಗಾಗಿ ತುರ್ತು ಔಷಧಿಗಳನ್ನು ಸಿದ್ಧಪಡಿಸಿಕೊಳ್ಳಲು ಸೂಚಿಸಿದ ಅವರು ಗ್ರಾ.ಪಂ ಗಳ ಹಳ್ಳಿಗಳಲ್ಲಿ ವಾರ್ಡ್ಗಳಲ್ಲಿ, ಲಸಿಕೆ ನೀಡುವ ಬಗ್ಗೆ ಹೆಚ್ಚಿನ ಪ್ರಚಾರ ನೀಡುವಂತೆ ತಿಳಿಸಿದರು.
ಮನೆ ಬಾಗಿಲಿಗೆ ಲಸಿಕೆ : ಪಶುಪಾಲನಾ ಇಲಾಖೆಯ ಸಿಬ್ಬಂದಿಗಳು ರೈತರ ಮನೆಬಾಗಿಲಿಗೆ ಬಂದು ಉಚಿತವಾಗಿ ಲಸಿಕೆ ಹಾಕಲಿದ್ದು, ಜಿಲ್ಲೆಯ ಎಲ್ಲಾ ರೈತರು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸುವ ಮೂಲಕ ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಸಭೆಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಬಾಬುರತ್ನ, ಡಿಯುಡಿಸಿ ಯೋಜನಾ ನಿರ್ದೇಶಕ ರಂಗಸ್ವಾಮಿ, ಇತರೆ ಅಧಿಕಾರಿಗಳು ಹಾಜರಿದ್ದರು.

ಶಿವಮೊಗ್ಗ ರಾಗಿಗುಡ್ಡ ಪ್ರದೇಶವಾಸಿ ಮಹಿಳೆ ನಾಪತ್ತೆ. ಪೊಲೀಸ್ ಪ್ರಕಟಣೆ

0

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ರಾಗಿಗುಡ್ಡ ವಾಸಿ ಜಿಯಾವುಲ್ಲಾ ಎಂಬುವವರ ಪತ್ನಿ ಮಾಲನ್ ಜಹಾನ್ ಎಂಬ 29 ವರ್ಷ ಮಹಿಳೆ ಮಾ. 30 ರಂದು ಮನೆಯಿಂದ ಹೊರಗೆ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈಕೆಯ ಚಹರೆ ಕೋಲುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, 5.5 ಅಡಿ ಎತ್ತರವಿರುತ್ತಾರೆ. ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ.
ಈಕೆಯ ಬಗ್ಗೆ ಸುಳಿವು ದೊರೆತಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಅಥವಾ ಕಂಟ್ರೋಲ್ ರೂಂ. ದೂ.ಸಂ.: 100/ 08182-261400/261418/ 9480803332/ 9480803350 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.