Friday, March 27, 2026
Friday, March 27, 2026
Home Blog Page 1367

ವಿಶೇಷ ಚೇತನ ಮಕ್ಕಳಲ್ಲಿ ಅಗಾಧ ನೆನಪು ವಿಚಾರಶಕ್ತಿಗಳಿರುತ್ತವೆ

0

ವಿಕಲಚೇತನ ಮಕ್ಕಳು ದೇವರ ಮಕ್ಕಳು. ಏಕೆಂದರೆ ಅವರಿಗೆ ದೇವರು ವಿಶೇಷವಾದ ಜ್ಞಾನ ಮತ್ತು ಚೈತನ್ಯವನ್ನು ನೀಡಿರುತ್ತಾನೆ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ನುಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಘೂ ಜಿಲ್ಲೆಯಲ್ಲಿ ವಿಕಲಚೇತನರ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿರುವ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗದ ಸಂತ ಥಾಮಸ್ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಶೇಷಚೇತನ ಮಕ್ಕಳಲ್ಲಿ ಎಲ್ಲರಿಗಿಂತ ಹೆಚ್ಚಿನ ವಿಚಾರ ಶಕ್ತಿ, ನೆನಪಿನ ಶಕ್ತಿ ಹೀಗೆ ವಿಶೇಷವಾದ ಶಕ್ತಿಯೊಂದು ಇರುತ್ತದೆ. ಅವರು ಅಸಾಮಾನ್ಯರಾಗಿರುತ್ತಾರೆ. ಮತ್ತು ಶ್ರಮಜೀವಿಗಳಾಗಿರುತ್ತಾರೆ. ಶ್ರಮ ಮತ್ತು ಪ್ರಯತ್ನಕ್ಕೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದ ಅವರು ಹೀಗೆ ಯಶಸ್ಸು ಸಾಧಿಸಿದ ವಿಶೇಷಚೇತನರ ನೈಜ ಘಟನೆಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಿ.ಜಿ.ಸುರೇಶ್ ಮಾತನಾಡಿ, ವಿಶೇಷಚೇತನರ ಪ್ರತಿಭೆ ಅನಾವರಣ ಮಾಡಲು ಈ ದಿನಾಚರಣೆ ಒಂದು ಸದಾವಕಾಶವಾಗಿದೆ. ಅವಕಾಶ ದೊರೆತಾಗ ಅದನ್ನು ಬಳಸಿಕೊಂಡು ಯಶಸ್ವಿಯಾಗಬೇಕು. ವಿಶೇಷಚೇತನ ಮಕ್ಕಳನ್ನು ನೋಡುವುದಕ್ಕೆ ಸಂತೋಷವಾಗುತ್ತದೆ. ಶಿಕ್ಷಕರು ಸಹ ಅವರಿಗೆ ಉತ್ತಮವಾದ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಕಲ್ಯಾಣಾಧಿಕಾರಿ ಶಿಲ್ಪಾ ಎಂ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿ, 21 ವಿವಿಧ ರೀತಿಯ ವಿಕಲಚೇತನರಿಗೆ ವಿವಿಧ ಯೋಜನೆಗಳಡಿ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 21,694 ವಿಕಲಚೇತನರಿದ್ದು, 16,336 ಯುಡಿಐಡಿ ಕಾರ್ಡ್‍ಗಳನ್ನು ವಿತರಿಸಲಾಗಿದೆ. 2021-22 ನೇ ಸಾಲಿನಲ್ಲಿ ಎಲ್ಲ ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಪ್ರೋತ್ಸಾಹಧನ ನೀಡಲಾಗಿದೆ. 301 ಫಲಾನುಭವಿಗಳಿಗೆ ಸಾಧನ ಸಲಕರಣೆ ವಿತರಿಸಲಾಗಿದೆ. 12 ಜನರಿಗೆ ಟಾಕಿಂಗ್ ಲ್ಯಾಪ್‍ಟಾಪ್, 226 ಜನರಿಗೆ ಗ್ರಾಮೀಣ ಪುನರ್ವಸತಿ, 42 ಜನರಿಗೆ ಯಂತ್ರಚಾಲಿತ ವಾಹನ, 24 ಜನರಿಗೆ ವಿವಾಹ ಪ್ರೋತ್ಸಾಹ ಧನ ಸೌಲಭ್ಯ ನೀಡಲಾಗಿದೆ. ಜಿಲ್ಲೆಯಲ್ಲಿ 04 ವಿಶೇಷಚೇತನರ ಶಾಲೆಗಳು ಮತ್ತು ಸುರಭಿ ಹಾಸ್ಟೆಲ್ ಕಾರ್ಯನಿರ್ವಹಿಸುತ್ತಿವೆ. ಹಿರಿಯ ನಾಗರೀಕರ ಸಹಾಯವಾಣಿ ಕೇಂದ್ರ, ವಿಕಲಚೇತನರ ಸಹಾಯವಾಣಿ ಕೇಂದ್ರಗಳು, ಎಂಆರ್‍ಡಬ್ಲ್ಯು, ವಿಆರ್‍ಡಬ್ಲ್ಯುಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸಾಂಸ್ತೃತಿಕ ಹಾಗೂ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ ವಿಕಲಚೇತನ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು ಹಾಗೂ ವಿಕಲಚೇತನರ ಕ್ಷೇತ್ರದಲ್ಲಿ ಸೇವೆಗೈದ ಪುಷ್ಪಮ್ಮ, ಕೆಂಪಮ್ಮ, ಪ್ರೇಮ, ಮಹಾಂತೇಶರಾವ್ ಮತ್ತು ಹೇಮಾವತಿ ಇವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕಿ ನಂದಿನಿ, ಶಾರದಾ ಅಂಧರ ಕೇಂದ್ರದ ಈಶ್ವರ್ ಭಟ್, ಆಶಾಕಿರಣ ಶಾಲೆಯ ಚಂದ್ರಯ್ಯ, ತರಂಗ ಶಾಲೆಯ ಕೃಷ್ಣಮೂರ್ತಿ, ಸಿದ್ದಾರ್ಥ ಅಂಧರ ಶಾಲೆಯ ಶಿವಬಸಪ್ಪ ಇದ್ದರು.

ಕಡಿಮೆ ಹಣದುಬ್ಬರಕ್ಕೆ ಮರಳಲು ನಾವು ಸಿದ್ಧರಾಗಿರ ಬೇಕು- ರಘುರಾಂ ರಾಜನ್

0

ಜಾಗತಿಕ ಆರ್ಥಿಕತೆಯು ಕಡಿಮೆ ಹಣದುಬ್ಬರದ ಯುಗಕ್ಕೆ ಮರಳಬಹುದು, ಆದ್ದರಿಂದ ಕಠಿಣ ಹಣಕಾಸು ನೀತಿಯನ್ನ ಅಳವಡಿಸಿಕೊಳ್ಳುವ ಕೇಂದ್ರೀಯ ಬ್ಯಾಂಕುಗಳು ಇದನ್ನ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಆರ್ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದರು.

ಬ್ಯಾಂಕ್ ಆಫ್ ಥೈಲ್ಯಾಂಡ್ ಮತ್ತು ಬ್ಯಾಂಕ್ ಫಾರ್ ಇಂಟರ್ನ್ಯಾಷನಲ್ ಸೆಟಲ್ಮೆಂಟ್ಸ್ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕಡಿಮೆ ಹಣದುಬ್ಬರದ ಯುಗಕ್ಕೆ ಮರಳಲು ನಾವು ಸಿದ್ಧರಾಗಿರಬೇಕು’ ಎಂದರು.

ಕೇಂದ್ರೀಯ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದ 6 ಸದಸ್ಯರ ಹಣಕಾಸು ನೀತಿ ಸಮಿತಿ (MPC) ಸೋಮವಾರ ಸಭೆ ಸೇರಿ ಹಣಕಾಸು ನೀತಿಯನ್ನ ಪ್ರಕಟಿಸಲಿರುವ ಸಮಯದಲ್ಲಿಆರ್ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಅವ್ರಿಂದ ಈ ಹೇಳಿಕೆ ಬಂದಿದೆ.

ಕೇಂದ್ರೀಯ ಬ್ಯಾಂಕುಗಳು ಆಲೋಚಿಸುವ ಅಗತ್ಯವಿದೆ: ರಘುರಾಮ್ ರಾಜನ್
ಚಿಕಾಗೋ ವಿಶ್ವವಿದ್ಯಾಲಯದ ಬೂತ್ ಸ್ಕೂಲ್ ಆಫ್ ಬಿಸಿನೆಸ್’ನ ಹಣಕಾಸು ಪ್ರಾಧ್ಯಾಪಕರಾಗಿರುವ ರಾಜನ್, ಹಣದುಬ್ಬರವು ಕೆಳಮಟ್ಟದಿಂದ ಗರಿಷ್ಠ ಮಟ್ಟಕ್ಕೆ ಸಾಗಿದಾಗ ಕೇಂದ್ರೀಯ ಬ್ಯಾಂಕುಗಳು ತಮ್ಮ ನೀತಿಗಳು ತುಂಬಾ ವೇಗವಾಗಿವೆಯೇ ಎಂದು ತಮ್ಮನ್ನ ತಾವು ಕೇಳಿಕೊಳ್ಳಬೇಕು ಎಂದು ಹೇಳಿದರು. ‘ನಮ್ಮನ್ನು ಏಕೆ ಒತ್ತಾಯಿಸಲಾಯಿತು ಎಂಬುದನ್ನು ನಾವು ಪರಿಶೀಲಿಸಬೇಕಾಗಿದೆ’ ಎಂದು ರಾಜನ್ ಹೇಳಿದರು.

ಹಣದುಬ್ಬರ ಹೆಚ್ಚಳವನ್ನು ಗುರುತಿಸಲು ನಮಗೆ ಸಾಧ್ಯವಾಗದಿದ್ದರೆ ಮುಂದಿನ ಬಾರಿ ಅಂತಹ ಪರಿಸ್ಥಿತಿಗೆ ಸಿದ್ಧರಾಗಬೇಕೇ ಎಂದು ನಾವು ಮೌಲ್ಯಮಾಪನ ಮಾಡಬೇಕಾಗಿದೆ’ ಎಂದು ಅವರು ಹೇಳಿದರು.

ಶಬರಿ ಮಲೆ ಯಾತ್ರಿಕರಿಗೆ ಕೊರೋನ ನಿರ್ಬಂಧ ಸಡಿಲ

0

ಕೊರೋನಾ ಕಾರಣಕ್ಕಾಗಿ ಕಳೆದ ಮೂರು ವರ್ಷಗಳಿಂದಲೂ ಶಬರಿಮಲೆಗೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು. ಆದರೆ ಈಗ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಆದ್ದರಿಂದ, ಕೇಂದ್ರ ಸೇರಿದಂತೆ ಬಹುತೇಕ ಎಲ್ಲ ರಾಜ್ಯಗಳು ಕೊರೊನಾ ನಿರ್ಬಂಧಗಳಲ್ಲಿ ಸಡಿಲಿಕೆ ಮಾಡಿವೆ.

ಇದೀಗ ಈ ಬಾರಿ ಶಬರಿಮಲೆ ಸ್ವಾಮಿ ಅಯ್ಯಪ್ಪ ದರ್ಶನ ಆರಂಭವಾಗಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ತೆರಳುತ್ತಿದ್ದಾರೆ. ಇದರ ಮಧ್ಯೆ ಕೇರಳ ಸರ್ಕಾರ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದ್ದು, ಕೊರೊನಾ ನಿರ್ಬಂಧಗಳನ್ನು ಪೂರ್ಣ ಪ್ರಮಾಣದಲ್ಲಿ ಸಡಿಲಿಕೆ ಮಾಡಿದೆ.

ಈ ಬಾರಿ ಶಬರಿಮಲೆ ಯಾತ್ರೆಯನ್ನು ಅದ್ದೂರಿಯಾಗಿ ಆಯೋಜಿಸಲು ಸರ್ಕಾರ ತೀರ್ಮಾನಿಸಿದ್ದು, ಹೀಗಾಗಿ ಶಬರಿಮಲೆಗೆ ಬರುವ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಅನುಕೂಲವಾಗುವಂತೆ ಮಾರ್ಗ ಮಧ್ಯ ತಂಗಲು ವ್ಯವಸ್ಥೆ, ಆರೋಗ್ಯ ತಪಾಸಣೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ

ವಿಶ್ವ ವಿಕಲಾಂಗರ ದಿನ ಇರಲಿ ಅವರತ್ತ ನಮ್ಮ ಗಮನ

0

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯ 47/3 ಮೂಲಕ 1992 ರಲ್ಲಿ ಅಂಗವಿಕಲ ವ್ಯಕ್ತಿಗಳ ಅಂತರಾಷ್ಟ್ರೀಯ ದಿನದ ವಾರ್ಷಿಕ ಆಚರಣೆಯನ್ನು ಘೋಷಿಸಲಾಯಿತು.

ಈ ದಿನದ ಆಚರಣೆಯು ಅಂಗವೈಕಲ್ಯ ಸಮಸ್ಯೆಗಳ ತಿಳುವಳಿಕೆಯನ್ನು ಉತ್ತೇಜಿಸಲು ಮತ್ತು ವಿಕಲಾಂಗ ವ್ಯಕ್ತಿಗಳ ಘನತೆ, ಹಕ್ಕುಗಳು ಮತ್ತು ಯೋಗಕ್ಷೇಮಕ್ಕಾಗಿ ಬೆಂಬಲವನ್ನು ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ.

ಅಂಗವಿಕಲರು ಕೂಡಾ ಮನುಷ್ಯರೇ. ಅವರಿಗೂ ಭಾವನೆಗಳಿವೆ. ಜಗತ್ತಿನ ಆಗುಹೋಗುಗಳಿಗೆ ಸ್ಪಂದಿಸುವ ಬೌದ್ಧಿಕ ಸಾಮರ್ಥ್ಯವಿದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಅವರನ್ನು ಪ್ರತ್ಯೇಕವಾಗಿ ಪರಿಗಣಿಸುವ ಪರಿಪಾಠವೂ ಕೆಲವೆಡೆ ಕಾಣಿಸುತ್ತಿದೆ.

ಅಥವಾ ಕೆಲವೆಡೆ ಅವರಿಗೆ ಇನ್ನಿಲ್ಲದ ಅನುಕಂಪ ತೋರುವುದು ಇದೆ. ಇದು ತಪ್ಪು. ಅಂಗವಿಕಲರಿಗೂ ಸ್ವಾಭಿಮಾನದಿಂದ ಬದುಕುವ ಹಕ್ಕಿದೆ. ಅವರು ಸಮಾಜದ ಮುಖ್ಯವಾಹಿನಿಗಳಲ್ಲಿ ಗುರುತಿಸಿಕೊಳ್ಳಬಲ್ಲರು. ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷ ಣಿಕ, ಮಾಹಿತಿ ತಂತ್ರಜ್ಞಾನ, ಮನೊರಂಜನೆ ಮುಂತಾದ ಕ್ಷೇತ್ರದಲ್ಲಿ ಗುರುತಿಸಬಲ್ಲರು. ವಿಶೇಷವಾದ ಸಾಧನೆಯನ್ನು ಮಾಡಬಲ್ಲರು. ಸಮಾಜದಲ್ಲಿ ಅವರ ಮಹತ್ವ ಜನರಿಗೆ ಗೊತ್ತಾಗಬೇಕು ಎಂಬ ಉದ್ದೇಶದಿಂದಲೇ ವರ್ಷದ ಒಂದು ದಿನವನ್ನು ಅವರಿಗಾಗಿ ಮೀಸಲಾಗಿರಿಸಲಾಗಿದೆ.

ಅದುವೇ ಡಿಸೆಂಬರ್‌ 3. ಇದು ಜಗತ್ತಿನೆಲ್ಲೆಡೆ ವಿಶ್ವ ಅಂಗವಿಕಲ ದಿನವನ್ನಾಗಿ ಆಚರಿಸಲಾಗುತ್ತದೆ.

ಪ್ರತಿ ವರ್ಷ ಈ ದಿನವನ್ನು ವಿವಿಧ ಥೀಮ್‌ಗಳಡಿಯಲ್ಲಿ ಆಚರಿಸಲಾಗುತ್ತದೆ. ಅಂಗವಿಕಲರಿಗೂ ಸಮಾಜದ ಇತರ ವ್ಯಕ್ತಿಗಳಂತೆ ಸಮಾನವಾದ ಅವಕಾಶಗಳು ಸಿಗಬೇಕು‌. ಅವರಿಗೆ ಯೋಗ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬುದೇ ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ.

ಅಂಗವಿಕಲರ ಸ್ವಾವಲಂಬಿ ಬದುಕಿಗಾಗಿ ಹೊಸ ತಾಂತ್ರಿಕ ಆವಿಷ್ಕಾರಗಳು ನಡೆಯುತ್ತಲೇ ಇವೆ. ಪಾರ್ಶ್ವವಾಯು ಮತ್ತು ಬೆನ್ನುಹುರಿ ಸಮಸ್ಯೆಯಿಂದ ಕಾಲುಗಳಲ್ಲಿ ಸ್ವಾಧೀನ ಕಳೆದುಕೊಂಡವರಿಗೆ ಕೇವಲ ಗಾಲಿಕುರ್ಚಿಗಳೇ ಆಶ್ರಯವಾಗಿತ್ತು. ಇದೀಗ ಅವುಗಳನ್ನು ವಾಕರ್‌ ರೀತಿಯಲ್ಲಿ ಬಳಕೆ ಮಾಡಿಕೊಂಡು ಎಲೆಕ್ಟ್ರಿಕಲ್‌ ಸ್ಟಿಮ್ಯೂಲೇಶನ್‌ ತಂತ್ರಜ್ಞಾನದ ಮೂಲಕ ಸುಲಭವಾಗಿ ನಡೆಯಬಹುದು. ಈ ಸಾಧನದ ಮೂಲಕ ನರಗಳಿಗೆ ಮತ್ತು ಕಾಲಿನ ಮೂಳೆಗಳಿಗೆ ಶಕ್ತಿ ತುಂಬಲಾಗುತ್ತದೆ. ಹೀಗೆ ವಿವಿಧ ಬಗೆಯ ಎಲೆಕ್ಟ್ರಾನಿಕ್ ಉತ್ಪನ್ನಗಳು ಅಂಗವಿಕಲರಿಗೆ ನೆರವಾಗುತ್ತಿವೆ. ಅಂಗವಿಕಲು ಎನ್ನುವುದಕ್ಕಿಂತ ವಿಕಲಚೇತನರು ಎಂದು ಅವರನ್ನು ಕರೆಯುವುದು ಸೂಕ್ತವೆನಿಸುತ್ತದೆ. ವಿಕಲಚೇತನರಿಗೆ ಅನುಕಂಪದ ಬದಲಾಗಿ ಅವಕಾಶಗಳನ್ನು ನೀಡಿದ್ದಲ್ಲಿ ಅವರು ಇನ್ನಷ್ಟು ಸಾಧನೆಗಳನ್ನು ಮಾಡಲು ಸಾಧ್ಯವಾಗುತ್ತದೆ.
ಎಲ್ಲಾ ವಿಕಲಚೇತನರು ಆತ್ಮ ವಿಶ್ವಾಸದಿಂದ ಎಲ್ಲಾ ನೋವು, ಅವಮಾನಗಳನ್ನು ಮೆಟ್ಟಿ ನಿಂತು ಸಮಾಜಕ್ಕೆ ಆದರ್ಶವಾಗಲಿ ಎಂದು ಹಾರೈಸೋಣ.

ಏರುಗತಿಯಲ್ಲಿ ಟಾಟಾ ಕಾರುಗಳ ಮಾರಾಟ

0

ಭಾರತದಲ್ಲಿ ಮಾರುತಿ ಸುಜುಕಿ, ಹ್ಯುಂಡೈ ಕಾರುಗಳೊಂದಿಗೆ ಸ್ಪರ್ಧಿಸುವ ದೇಶದ ಪ್ರಮುಖ ವಾಹನ ತಯಾರಕರಲ್ಲಿ ಟಾಟಾ ಮೋಟಾರ್ಸ್ ಒಂದಾಗಿದೆ.

ಟಾಟಾ ಕಂಪನಿಯು 2022ರ ನವೆಂಬರ್ ತಿಂಗಳ ವಾಹನ ಮಾರಾಟದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಟಾಟಾ ಕಳೆದ ತಿಂಗಳು ಒಟ್ಟು 73,467 (ವಾಣಿಜ್ಯ ವಾಹನಗಳು ಸೇರಿದಂತೆ) ವಾಹನಗಳನ್ನು ಮಾರಾಟ ಮಾಡಿದೆ.

ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಟಾಟಾ ಕಂಪನಿಯು 58,073 ವಾಹನಗಳನ್ನು ಮಾರಾಟ ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇಕಡಾ 27 ರಷ್ಟು ಬೆಳವಣಿಗೆಯಾಗಿದೆ. ಟಾಟಾ ಕಳೆದ ತಿಂಗಳು ಭಾರತದಲ್ಲಿ ಒಟ್ಟು 46,037 ಪ್ರಯಾಣಿಕ ವಾಹನಗಳನ್ನು (ಕಾರುಗಳು ಮತ್ತು ಎಸ್‍ಯುವಿಗಳು) ಮಾರಾಟ ಮಾಡಿದೆ. ಕಾರು ತಯಾರಕರು ಕೇವಲ 29,778 ಯುನಿಟ್‌ಗಳನ್ನು ಮಾರಾಟ ಮಾಡಿದಾಗ ಟಾಟಾದ ಪ್ರಯಾಣಿಕ ವಾಹನ ವಿಭಾಗವು 2021ರ ನವೆಂಬರ್ ತಿಂಗಳಿಗೆ ಹೋಲಿಸಿದರೆ 16,259 ಯುನಿಟ್‌ಗಳು ಅಥವಾ ಶೇಕಡಾ 54.6 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

2022ರ ಅಕ್ಟೋಬರ್ ತಿಂಗಳಿನಲ್ಲಿ ಮಾರಾಟ ಮಾಡಿದ 45,217 ವಾಹನಗಳನ್ನು ಹೋಲಿಸಿದರೆ 820 ಯುನಿಟ್‌ಗಳು ಅಥವಾ ಶೇಕಡಾ 1.81 ರಷ್ಟು ಬೆಳವಣಿಗೆಯಾಗಿದೆ.

ಟಾಟಾ ಮೋಟಾರ್ಸ್ ಕಂಪನಿಯು ನವೆಂಬರ್ ತಿಂಗಳಿನಲ್ಲಿ 388 ಪ್ರಯಾಣಿಕ ವಾಹನಗಳನ್ನು ರಫ್ತು ಮಾಡಿದೆ. ಇದು ಕಳೆದ ವರ್ಷ ಕೇವಲ 169 ಯುನಿಟ್‌ಗಳನ್ನು ರಫ್ತು ಮಾಡಿದಾಗ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 129.58 ಅಥವಾ 219 ಯುನಿಟ್‌ಗಳ ಬೆಳವಣಿಗೆಯಾಗಿದೆ.

ದೇಶದಿಂದ ರಫ್ತು ಮಾಡಿದಾಗ ಅಕ್ಟೋಬರ್ 2022 ಕ್ಕೆ ಹೋಲಿಸಿದರೆ ಶೇಕಡಾ 88.34 ರಷ್ಟು ಏರಿಕೆಯಾಗಿದೆ.
ಟಾಟಾ ಮೋಟಾರ್ಸ್ ರಾಷ್ಟ್ರದ ಅತಿ ದೊಡ್ಡ ಪ್ರಯಾಣಿಕ ಎಲೆಕ್ಟ್ರಿಕ್ ವಾಹನ ತಯಾರಕರೂ ಆಗಿದೆ ಮತ್ತು ನವೆಂಬರ್‌ನಲ್ಲಿ ಕಾರು ತಯಾರಕರು ಕಳೆದ ತಿಂಗಳು ಒಟ್ಟು 4,277 ಎಲೆಕ್ಟ್ರಿಕ್ ವಾಹನಗಳನ್ನು ರಫ್ಟು ಮಾಡಿದೆ.

2021ರ ನವೆಂಬರ್ ತಿಂಗಳಿನಲ್ಲಿ ಮಾರಾಟವಾದ 1,660 ಯುನಿಟ್‌ಗಳಿಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇಕಡಾ 154.63 ರಷ್ಟು ಬೆಳವಣಿಗೆಯಾಗಿದೆ. 2022ರ ಅಕ್ಟೋಬರ್ ತಿಂಗಳ ಮಾರಾಟವಾದ 4,451 ಯುನಿಟ್‌ಗಳಿಗೆ ಹೋಲಿಸಿದರೆ ತಿಂಗಳಿನಿಂದ ತಿಂಗಳ ಮಾರಾಟದಲ್ಲಿ ಶೇಕಡಾ 3.9 ರಷ್ಟು ಕಡಿಮೆಯಾಗಿದೆ.

ನವೆಂಬರ್‌ನಲ್ಲಿ ಇದೇ ಅವಧಿಯಲ್ಲಿ ಮಾರಾಟವಾದ 32,245 ಯುನಿಟ್‌ಗಳಿಗೆ ಹೋಲಿಸಿದರೆ ಟಾಟಾ ಮೋಟಾರ್ಸ್‌ನ ವಾಣಿಜ್ಯ ವಾಹನಗಳ ಮಾರಾಟವು ಕಳೆದ ತಿಂಗಳು 29,053 CV ಯುನಿಟ್‌ಗಳನ್ನು (ರಫ್ತು ಸೇರಿದಂತೆ) ಮಾರಾಟ ಮಾಡಿದ್ದರಿಂದ ಸುಮಾರು 10 ಪ್ರತಿಶತದಷ್ಟು ಕಡಿಮೆಯಾಗಿದೆ.

ಟಾಟಾ ಕಳೆದ ತಿಂಗಳು ದೇಶೀಯವಾಗಿ 27,430 ವಾಣಿಜ್ಯ ವಾಹನಗಳನ್ನು ಮಾರಾಟ ಮಾಡಿದೆ. 2021ರ ನವೆಂಬರ್ ತಿಂಗಳಿನಲ್ಲಿ ಮಾರಾಟವಾದ 28,295 ಯುನಿಟ್‌ಗಳಿಗೆ ಹೋಲಿಸಿದರೆ ಕೇವಲ 3 ಶೇಕಡಾ (865 ಯುನಿಟ್‌ಗಳು) ಕಡಿಮೆಯಾಗಿದೆ.

ಸರ್ಕಾರಿ ಕ ಚೇರಿ, ಆಸ್ಪತ್ರೆ ಮತ್ತು ಕೃಷಿಕೇಂದ್ರಗಳಲ್ಲಿ ಏನಾಗುತ್ತಿದೆ ತಿಳಿಯಿರಿ- ಬಿ.ಎಸ್.ಪಾಟೀಲ್

0

ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದ್ದು, ಇದರಿಂದ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಇದು ಲೋಕಾಯುಕ್ತ ಪೋಲೀಸರ ಅಸಮರ್ಥತಯನ್ನು ತೋರಿಸುತ್ತಿದೆ ಎಂದು ಲೋಕಾಯುಕ್ತ ಬಿ.ಎಸ್. ಪಾಟೀಲ್ ಅವರು ಹೇಳಿದ್ದಾರೆ.

ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ದಾಖಲಾದ ಪ್ರಕರಣಗಳ ಪರಿಣಾಮಕಾರಿ ತನಿಖೆ ನಡೆಸುವ ಕುರಿತು ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಿಸಿ ಕಾಯ್ದೆಯಡಿ ಪ್ರಕರಣಗಳ ತನಿಖೆ ನಡೆಯುವ ಅಧಿಕಾರವನ್ನು ಲೋಕಾಯುಕ್ತಕ್ಕೆ ನೀಡಿದ ಬಳಿಕ ಜನರ ನಿರೀಕ್ಷೆಗಳು ಹೆಚ್ಚಾಗಿದೆ. ಈ ನಿರೀಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು ಭ್ರಷ್ಟಾಚಾರ ನಿಗ್ರಹ ದಳದ ಎಲ್ಲ ಸಿಬ್ಬಂದಿಯ ಕರ್ತವ್ಯ ಎಂದು ಹೇಳಿದ್ದಾರೆ.

ಲೋಕಾಯುಕ್ತ ಪೊಲೀಸರು ತನಿಖೆಗಳನ್ನು ಉತ್ಸಾಹದಿಂದ ನಡೆಯಬೇಕು. ನೀವು (ಪೊಲೀಸ್ ಅಧಿಕಾರಿಗಳು)ಈ ಹಿಂದೆ ಹೇಗೆ ಕೆಲಸ ಮಾಡಿದ್ದೀರಿ ಎಂಬುದರ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಆದರೀಗ ನೀವು ನಿಮ್ಮ ಕೆಲಸದ ಮೇಲೆ ಸಂಪೂರ್ಣವಾಗಿ ಗಮನಹರಿಸಬೇಕು. ಜನಪ್ರತಿನಿಧಿಗಳಿಂದ ಯಾವುದೇ ಒತ್ತಡಗಳಿಲ್ಲ.

ಆದರೆ, ಸಂಸ್ಥೆಗಳ ಗುರಿಗಳಿಗೆ ವಿರುದ್ಧವಾಗಿ ಯಾರಾದರೂ ಕೆಲಸ ಮಾಡುತ್ತಿರುವುದು ಕಂಡುಬಂದಿದ್ದೇ ಆದರೆ, ಅವರ ಸಂಸ್ಥೆಯಲ್ಲಿ ಒಂದು ನಿಮಿಷ ಕೂಡ ಕೆಲಸ ಮಾಡಲು ಸಾಧ್ಯವಿಲ್ಲ. ಸಿಬ್ಬಂದಿಯ ಕಾರ್ಯಕ್ಷಮತೆಯ ಬಗ್ಗೆ ನಾನು ವರದಿಗಳನ್ನು ಪಡೆಯುವಲ್ಲಿ ಆಂತರಿಕ ಕಾರ್ಯವಿಧಾನವಿದೆ ಎಂದು ತಿಳಿಸಿದ್ದಾರೆ.

ಸಿಬ್ಬಂದಿಯಿಂದ ಯಾವುದೇ ಅಕ್ರಮ ನಡೆದರೆ ಸಂಸ್ಥೆ ನಗೆಪಾಟಲಿಗೀಡಾಗುತ್ತದೆ. “ನಾವು ಹಲವಾರು ಕಾರ್ಯಾಚರಣೆಗಳನ್ನು ಮಾಡುತ್ತಿರುತ್ತೇವೆ.

ಯಾವುದೇ ಅಧಿಕಾರಿ ಮಾಹಿತಿ ರವಾನಿಸಿರುವುದು ಕಂಡು ಬಂದಿದ್ದೇ ಆದರೆ, ಉಳಿದೆಲ್ಲ ತನಿಖೆಯನ್ನು ಬದಿಗಿಟ್ಟು, ಮೊದಲು ಯಾರು ಮಾಹಿತಿ ಸೋರಿಕೆ ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ತನಿಖೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಇದೇ ವೇಳೆ ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು ಮತ್ತು ಕೃಷಿ ಕೇಂದ್ರಗಳಿಗೆ ಅಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಇದಲ್ಲದೆ, ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣವು ಶೇಕಡಾ 85-90 ಆಗಿರಬೇಕು ಎಂದು ಹೇಳಿದರು.

ದೇಹದ ಆರೋಗ್ಯ ರಕ್ಷಣೆಯಲ್ಲಿ ದಾಳಿಂಬೆ ಫಲ

0

ದಾಳಿಂಬೆ ಹಣ್ಣಿನ ಸೇವನೆಯಿಂದ ನಮ್ಮ ದೇಹಕ್ಕೆ ಹಲವು ಪೋಷಕಾಂಶಗಳು ಸಿಗುತ್ತವೆ ಮತ್ತು ಈ ಹಣ್ಣಿಗೆ ಮಲಬದ್ಧತೆ ನಿವಾರಿಸುವ ಶಕ್ತಿ ಇದೆ ಎಂಬುದು ನಿಮಗೆಲ್ಲಾ ತಿಳಿದೇ ಇದೆ.

ಈ ಹಣ್ಣಿನ ಎಲೆಗಳಿಂದಲೂ ಹಲವು ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ.?
ಆಯುರ್ವೇದದಲ್ಲಿ ದಾಳಿಂಬೆ ಗಿಡದ ಎಲೆಗಳನ್ನೂ ಮದ್ದಾಗಿ ಬಳಸಲಾಗುತ್ತದೆ.
ಚಿಕ್ಕದಾಗಿರುವ ಇದರ ಎಲೆಗಳಿಂದ ರಸ ಹಿಂಡುವುದು ಪ್ರಯಾಸದ ಕೆಲಸವೂ ಹೌದು.

ಕಾಮಾಲೆ, ಹೊಟ್ಟೆನೋವು, ನಿದ್ರಾಹೀನತೆ ಮೊದಲಾದ ರೋಗಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ.
ಮಾಮೂಲಿ ಕೆಮ್ಮು ಮತ್ತು ಶೀತದ ನಿವಾರಣೆಗೆ ದಾಳಿಂಬೆ ಎಲೆಗಳನ್ನು ಕುದಿಸಿ, ಸೋಸಿ ತಣಿಸಿ ಸಂಗ್ರಹಿಸಿಡಿ.

ದಿನಕ್ಕೆ ಎರಡರಿಂದ ಮೂರು ಬಾರಿ ಕುಡಿಯುವುದರಿಂದ ಕೆಮ್ಮಿನೊಂದಿಗೆ ಕಫದ ಸಮಸ್ಯೆಯೂ ದೂರವಾಗುತ್ತದೆ.
ನಿದ್ರಾಹೀನತೆ ಸಮಸ್ಯೆಯನ್ನೂ ಇದು ನಿವಾರಿಸುತ್ತದೆ. ತುರಿಕೆ ಸಮಸ್ಯೆಯನ್ನೂ ಇದು ದೂರ ಮಾಡುತ್ತದೆ.

ದಾಳಿಂಬೆ ಎಲೆಗಳನ್ನು ನುಣ್ಣಗೆ ಅರೆದು ದಪ್ಪನೆಯ ಲೇಹಕ್ಕೆ ತುಸುವೇ ಅರಿಶಿನ ಉದುರಿಸಿ ತುರಿಕೆ ಇರುವಲ್ಲಿಗೆ ಲೇಪಿಸಿಕೊಳ್ಳಿ. ತುರಿಕೆ ಮತ್ತು ಉರಿಯಿಂದ ಇದು ಮುಕ್ತಿ ನೀಡುತ್ತದೆ. ದಿನಕ್ಕೆರಡು ಬಾರಿ ಬಳಸಿ. ಹಚ್ಚುವ ಮುನ್ನ ಉಪ್ಪು ನೀರಿನಲ್ಲಿ ಆ ಭಾಗವನ್ನು ತೊಳೆದುಕೊಳ್ಳಿ. ಯಾವುದೇ ಕಾರಣಕ್ಕೂ ಉಗುರನ್ನು ತಾಗಿಸದಿರಿ.

ಬುದ್ಧಿಶಕ್ತಿ ಭಗವಂತ ‌ನಮಗೆ ನೀಡಿದ ದೊಡ್ಡ ಆಸ್ತಿ -ಶ್ರೀವಿಧುಶೇಖರ ಭಾರತಿ ಸ್ವಾಮಿಗಳು

0

ಮನುಷ್ಯ ಎಲ್ಲ ಪ್ರಾಣಿಗಳಿಗಿಂತಲೂ ಶ್ರೇಷ್ಠ. ಕಾರಣ ಆತನ ಬುದ್ಧಿಶಕ್ತಿ. ಶಾರೀರಿಕವಾಗಿ ಮನುಷ್ಯ ಬಲಹೀನನಾದರೂ ಪ್ರಾಣಿಗಳಿಗಿಂತ ಶ್ರೇಷ್ಠ ಎಂಬುದಕ್ಕೆ ಆನೆಗೆ ಶಿಕ್ಷಣ ಕೊಟ್ಟು ತಾನು ಹೇಳಿದಂತೆ ಕೇಳುವಂತೆ ಮಾಡುವ ಬುದ್ಧಿಚಾತುರ್ಯ ಅವನಲ್ಲಿದೆ. ಪಕ್ಷಿಗಳಿಗಿಂತಲೂ ವೇಗವಾಗಿ ಹೋಗುವ ಸಾಧನವನ್ನು ಮನುಷ್ಯ ಕಂಡು ಹಿಡಿದಿದ್ದಾನೆ. ಮೀನಿನಂತೆ ಈಜಲಾಗದಿದ್ದರೂ ಬಹು ಹೊತ್ತು ನೀರೊಳಗಿದ್ದು ಕೆಲಸ ಮಾಡುವ ಪರಿಕರಗಳನ್ನು ಅನ್ವೇಶಿಸಿದ್ದಾನೆ.

ಹಾಗಾಗಿ ಬುದ್ಧಿಶಕ್ತಿ ಭಗವಂತ ನಮಗೆ ನೀಡಿದ ದೊಡ್ಡ ಆಸ್ತಿ. ಈ ಬುದ್ಧಿಯಲ್ಲಿ ನಾಲ್ಕು ವಿಭಾಗ ಮಾಡಿದ್ದಾರೆ. ಪ್ರಕೃತಿಯಲ್ಲಿ ಏನು ನಡೆಯುತ್ತಾ ಇದೆ ಎಂಬುದನ್ನು ಗಮನಿಸುವ ಶಕ್ತಿ ಇರುವುದು ಬುದ್ಧಿ.

ಮುಂದೆ ಏನು ನಡೆಯುತ್ತದೆ ಎಂಬುದು ಗೊತ್ತಾಗುವುದು ಮತಿ. ಹಿಂದೆ ನಡೆದ ಎಲ್ಲಾ ವಿಷಯಗಳೂ ಜ್ಞಾಪಕದಲ್ಲಿರುವುದು ಸ್ಮೃತಿ. ಕೊನೆಯದಾಗಿ ಈಗೇನು ನಡೆಯುತ್ತಿದೆ? ಮುಂದೇನು ನಡೆಯಲಿದೆ? ಹಿಂದೆ ಏನು ನಡೆದಿತ್ತು? ಈ ಮೂರನ್ನೂ ತಿಳಿಯುವ ಸಾಮರ್ಥ್ಯ ಇರುವುದು ಪ್ರಜ್ಞಾ ಎಂದು. ಈ ವಿದ್ಯಾಸಂಸ್ಥೆಗೆ ಪ್ರಜ್ಞಾ ಎಂಬ ಹೆಸರಿನ ಸಾರ್ಥಕತೆ ಬರುವಂತಹ ವಿದ್ಯಾರ್ಥಿಗಳು ನೀವಾಗಿ.

ಪ್ರಜ್ಞಾಶಾಲಿಗಳಾಗಿ ಎಂದು ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಪೇಸ್ ಪಿ. ಯು ಕಾಲೇಜಿನ ಅನ್ನಪೂರ್ಣಾ ಭೋಜನಾಲಯವನ್ನು ಉದ್ಘಾಟನೆ ಮಾಡಿ ವಿದ್ಯಾರ್ಥಿಗಳಿಗೆ ಅನುಗ್ರಹ ಸಂದೇಶಸಲ್ಲಿ ಶೃಂಗೇರಿ ಶಾರದಾ ಪೀಠದ ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರು ನುಡಿದರು. ಇದು ಅತ್ಯಂತ ಅಮೂಲ್ಯವಾದ ಸಮಯ.

ಸಮಾಜಕ್ಕೆ ಏನಾದರೂ ಒಳ್ಳೆಯದನ್ನು ಮಾಡಬೇಕೆಂಬ ಲಕ್ಷ್ಯವನ್ನಿಟ್ಟುಕೊಂಡು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಬೇಕು. ವಿದ್ಯಾಭ್ಯಾಸ ಎಂದರೆ ಮೊಸರೊಳಗಿಂದ ಬೆಣ್ಣೆ ಬರುವವರೆಗೂ ಕಡೆಯುತ್ತೇವಲ್ಲ ಹಾಗೆ ವಿದ್ಯೆ ಅರಿವಾಗುವವರೆಗೂ ಅಭ್ಯಾಸ ಮಾಡಬೇಕು.
ಸನಾತನ ಧರ್ಮ ಅತ್ಯಂತ ಶ್ರೇಷ್ಠವಾದ ಧರ್ಮ.

ವಿದ್ಯಾಭ್ಯಾಸದ ನಂತರ ನೀವು ಪ್ರಪಂಚದ ಯಾವ ಮೂಲೆಗೆ ಹೋದರೂ ನಿಮ್ಮ ಮೂಲವನ್ನು ಮರೆಯಬಾರದು., ಸಂಸ್ಕಾರ ಎಂದಿಗೂ ಬಿಡಬಾರದು. ನಮ್ಮ ಬಾರತೀಯ ಸನಾತನ ಧರ್ಮದಲ್ಲಿ ಎರಡು ಸಂಗತಿಗಳನ್ನು ಪ್ರಮುಖವಾಗಿ ಹೇಳಿದ್ದಾರೆ. ಮನುಷ್ಯ ಜಗನ್ನಿಯಾಮಕನಾದ ಭಗವಂತನ ಅನುಗ್ರಹ ಪಡೆಯಲು ಏನು ಮಾಡಬೇಕು ಹಾಗೂ ಮನುಷ್ಯ ಒಬ್ಬ ಸಜ್ಜನನಾಗಿ ಜೀವನ ನಡೆಸಿ ಪ್ರಪಂಚಕ್ಕೆ ತನ್ನಿಂದ ಒಳ್ಳೆಯದಾಗಬೇಕೆಂದು ಬಯಸಬೇಕು.

ಇದನ್ನು ಪಾಲಿಸಿ ಎಂದು ಎಲ್ಲರನ್ನೂ ಅನುಗ್ರಹಿಸಿದರು.
ಕಾರ್ಯಕ್ರಮದಲ್ಲಿ ಪ್ರಜ್ಞಾ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷರು ಮಾನ್ಯ ಶಾಸಕರಾದ ಶ್ರೀ ಕೆ . ಎಸ್ . ಈಶ್ವರಪ್ಪ, ಉಪಾಧ್ಯಕ್ಷರಾದ ಪ್ರೊ. ಆನಂದ್ , ಕಾರ್ಯದರ್ಶಿಗಳು ಹಾಗೂ ಪ್ರಾಚಾರ್ಯರಾದ ಪ್ರೊ. ಬಿ. ಎನ್. ವಿಶ್ವನಾಥಯ್ಯ, ನಿರ್ದೇಶಕರುಗಳಾದ ಪ್ರೊ ಹೆಚ್. ಆರ್. ಶಂಕರನಾರಾಯಣ ಶಾಸ್ತ್ರಿ ಹಾಗೂ ಡಾ. ಮೈಥಿಲಿ ಸಿ. ಉಪಸ್ಥಿತರಿದ್ದರು.

ಪಿಯು ಪರೀಕ್ಷೆಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ

0

ದ್ವಿತೀಯ ಪಿಯು ವೇಳಾಪಟ್ಟಿ ಇತ್ತೀಚಿಗಷ್ಟೆ ಬಿಡುಗಡೆಯಾಗಿದೆ ಇದರ ಹಿನ್ನೆಲೆಯಲ್ಲೇ ಪಿಯುಸಿ ಪರೀಕ್ಷೆಗೆ ಸಂಬಂಧಿಸಿದ ಇನ್ನೊಂದು ಮಹತ್ವದ ಮಾಹಿತಿ ಹೊರಬಿದ್ದಿದೆ. ಅದೇನೆಂದರೆ ಪಿಯುಸಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆಯಾಗಿದೆ.ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಈಗ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದು.

ಅದರಲ್ಲೂ ಅನಿತ್ತೀರ್ಣಾರಾದವರು ಹಾಗೂ ಫಲಿತಾಂಶ ತಿರಸ್ಕರಿಸಿದ ವಿದ್ಯಾರ್ಥಿಗಳು ಈಗ ಅರ್ಜಿ ಸಲ್ಲಿಸಬಹುದು.

ಈ ಮುನ್ನ ಖಾಸಗಿ ಅಭ್ಯರ್ಥಿಗಳು, ಅನುತ್ತೀರ್ಣ ಹಾಗೂ ಫಲಿತಾಂಶ ತಿರಸ್ಕರಿಸಿದ ವಿದ್ಯಾರ್ಥಿಗಳ ನೋಂದಣಿ ಮತ್ತು ಪರೀಕ್ಷಾ ಶುಲ್ಕ ಪಾವತಿ ಮಾಡಲು ನವೆಂಬರ್ 28 ರವರೆಗೆ ಅವಕಾಶ ನೀಡಿತ್ತು. ಈಗ ಈ ದಿನಾಂಕವನ್ನು ಪೋಷಕರು ಹಾಗೂ ವಿದ್ಯಾರ್ಥಿಗಳ ಮನವಿ ಮೇರೆಗೆ ಡಿಸೆಂಬರ್ 12ರ ವರೆಗೆ ಮುಂದೂಡಿದೆ.

ಮಾರ್ಚ್ 2023ರಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ 2023ರ ವಾರ್ಷಿಕ ಪರೀಕ್ಷೆಗೆ ಖಾಸಗಿ ಅಭ್ಯರ್ಥಿಗಳ ವಿದ್ಯಾರ್ಥಿಗಳ ನೋಂದಣಿಗೆ ಅವಧಿ ವಿಸ್ತರಿಸಲಾಗಿದೆ. ಇದರ ಜೊತೆಗೆ ಅನುತ್ತೀರ್ಣ ಹಾಗು ಫಲಿತಾಂಶ ತಿರಸ್ಕರಿಸಿದ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಸಂದಾಯ ಮಾಡಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ.

ಈ ಮುನ್ನ ಖಾಸಗಿ ಅಭ್ಯರ್ಥಿಗಳು, ಅನುತ್ತೀರ್ಣ ಹಾಗೂ ಫಲಿತಾಂಶ ತಿರಸ್ಕರಿಸಿದ ವಿದ್ಯಾರ್ಥಿಗಳ ನೋಂದಣಿ ಮತ್ತು ಪರೀಕ್ಷಾ ಶುಲ್ಕ ಪಾವತಿಸಲು ನವೆಂಬರ್ 28 ರವರೆಗೆ ಅವಕಾಶ ನೀಡಲಾಗಿತ್ತು.

ಈಗ ಈ ದಿನಾಂಕವನ್ನು ಪೋಷಕರು ಹಾಗೂ ವಿದ್ಯಾರ್ಥಿಗಳ ಮನವಿ ಮೇರೆಗೆ ಡಿಸೆಂಬರ್ 12ರ ವರೆಗೆ ವಿಸ್ತರಿಸಲಾಗಿದೆ.

ಈ ಕುರಿತು ಕರ್ನಾಟಕ ಶಾಲಾ ಪರಿಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿದ್ದು, ಪೋಷಕರು ಹಾಗು ವಿದ್ಯಾರ್ಥಿಗಳು ದೂರವಾಣಿ ಕರೆ ಮತ್ತು ಮನವಿ ಪತ್ರಗಳ ಮೇರೆಗೆ ಖಾಸಗಿ ಅಭ್ಯರ್ಥಿಯಾಗಿ ನೋಂದಾಯಿಸಿಕೊಳ್ಳುವ ದಿನಾಂಕವನ್ನು ಮತ್ತು ಅನುತ್ತೀರ್ಣ ಹಾಗು ಫಲಿತಾಂಶ ತಿರಸ್ಕರಿಸಿದ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಪಾವತಿಸುವ ದಿನಾಂಕವನ್ನು ಮುಂದೂಡಲಾಗಿದ್ದು ಇದೀಗ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ.

  1. ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ/ ಸಿಬಿಎಸ್‌ಇ/ ಐಸಿಎಸ್‌ಇ/ ಎನ್‌ಐಓಎಸ್‌ ಗಳಲ್ಲಿ ವ್ಯಾಸಂಗ ಮಾಡಿ 2022ರ ಜೂನ್ ಅಥವಾ ಅದಕ್ಕೂ ಹಿಂದಿನ ವರ್ಷಗಳಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  2. ವಿದ್ಯಾರ್ಥಿಗೆ 17 ವರ್ಷ ತುಂಬಿರಬೇಕು.
  3. ಇತರೆ ರಾಜ್ಯಗಳ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ/ 10ನೇ ತರಗತಿ ಪರೀಕ್ಷೆ ತೆಗೆದುಕೊಂಡು, ಪರೀಕ್ಷೆಯಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಅಥವಾ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿ ತೇರ್ಗಡೆ ಹೊಂದಿರಬೇಕು ಮತ್ತು 2022 ರ ಜೂನ್ ಅಥವಾ ಅದಕ್ಕೂ ಹಿಂದಿನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು.
  4. ನೋಂದಣಿ ಶುಲ್ಕ ಇತರ ವಿದ್ಯಾರ್ಥಿಗಳಿಗೆ – 60 ರೂ.
  5. ನೋಂದಣಿ ಶುಲ್ಕ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಪ್ರವರ್ಗ 1 ವಿದ್ಯಾರ್ಥಿಗಳಿಗೆ- 60 ರೂ ಪಾವತಿಸಬೇಕಾಗುತ್ತದೆ.
  6. ದಾಖಲಾತಿ ಶುಲ್ಕ ಇತರ ವಿದ್ಯಾರ್ಥಿಗಳಿಗೆ 400 ರೂ. ಆಗಿದೆ.
  7. ದಾಖಲಾತಿ ಶುಲ್ಕ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಪ್ರವರ್ಗ 1 ವಿದ್ಯಾರ್ಥಿಗಳಿಗೆ 400 ರೂ.
  8. ಕಾಲೇಜು ಅಭಿವೃದ್ಧಿ ಶುಲ್ಕ ಇತರ ವಿದ್ಯಾರ್ಥಿಗಳಿಗೆ – 1020 ರೂ.
  9. ಕಾಲೇಜು ಶುಲ್ಕ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಪ್ರವರ್ಗ-1 ವಿದ್ಯಾರ್ಥಿಗಳಿಗೆ – 1020 ರೂ.

ಪುನರಾವರ್ತಿತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಕುರಿತು
ಮಾರ್ಚ್ 2023 ರಲ್ಲಿ ನಡೆಸಲಾಗುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಅನುತ್ತೀರ್ಣ ವಿದ್ಯಾರ್ಥಿಗಳು ಪಾವತಿಸಬೇಕಾದ ಶುಲ್ಕ ಮತ್ತು ಫಲಿತಾಂಶ ತಿರಸ್ಕರಣಾ ಶುಲ್ಕಗಳ ವಿವರವನ್ನು ಈ ರೀತಿ ಹೊರಡಿಸಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಪ್ರವರ್ಗ 1ರ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ.
ಒಂದು ವಿಷಯಕ್ಕೆ – 140 ರೂ.
ಎರಡು ವಿಷಯಕ್ಕೆ – 270 ರೂ.
ಮೂರು ಅಥವಾ ಹೆಚ್ಚಿನ ವಿಷಯಗಳು- 400 ರೂ.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಪ್ರವರ್ಗ-1ರ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಂದ ಕಡ್ಡಾಯವಾಗಿ ಸಲ್ಲಿಸಬೇಕಾದ ಅಂಕಪಟ್ಟಿ ಶುಲ್ಕ – 50 ರೂ.
ಪರೀಕ್ಷೆಗೆ ನಿಗದಿ ಮಾಡಿರುವ ಈ ಮೇಲಿನ ಶುಲ್ಕಗಳ ಜೊತೆಗೆ ರೂ. 500 ದಂಡ ಶುಲ್ಕ, ಗರಿಷ್ಠ ರೂ. 700 ಕಾರ್ಯನಿರತ ಶುಲ್ಕದೊಂದಿಗೆ ವಿಶೇಷ ದಂಡ ಶುಲ್ಕ 1320 ರೂಪಾಯಿಗಳನ್ನು ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ವಕ್ಫ್ ಮಂಡಳಿ ತೀರ್ಮಾನ ಒಳ್ಳೆಯ ಬೆಳವಣಿಗೆಯಲ್ಲ- ಇಬ್ರಾಹಿಂ

0

ರಾಜ್ಯದಲ್ಲಿ ಎಲ್ಲ ವರ್ಗಗಳ ಹಿತಕ್ಕಾಗಿ ವಿದ್ಯಾದಾನವನ್ನು ಮಾಡುವ ನಿಟ್ಟಿನಲ್ಲಿ ಸರಕಾರ ಆಲೋಚನೆ ಮಾಡಬೇಕು. ಹಿಂದೂಗಳಿಗೊಂದು, ಮುಸ್ಲಿಮರಿಗಾಗಿ ಪ್ರತ್ಯೇಕವಾಗಿ ಕಾಲೇಜು ಮಾಡ್ತಾರೇನು?
ಬಿಜೆಪಿಗರ ತಲೆ ಸರಿಯಾಗಿ ಓಡುತ್ತಿಲ್ಲ, ವಕ್ಫ್ ಬೋರ್ಡ್ ತೀರ್ಮಾನ ಒಳ್ಳೆಯ ಬೆಳೆವಣಿಗೆಯಲ್ಲ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಕ್ಫ್ ಬೋರ್ಡ್ ನಿರ್ಧಾರದ ಹಿಂದೆ ಸರಕಾರದ ದೂರದೃಷ್ಟಿ ಇದೆ. ಇದರಿಂದ ಎರಡೂ ವ್ಯವಸ್ಥೆಗಳನ್ನು ಹುಟ್ಟುಹಾಕುವ ಆ ಮೂಲಕ ಶಿಕ್ಷಣದ ಹಕ್ಕಿನಿಂದ ಕೆಲವು ವರ್ಗವನ್ನು ವಂಚಿಸುವ ಕೆಲಸ ನಡೆದಿದೆ ಎಂದರು.

ಅ. 5 ತಿಂಗಳಲ್ಲಿ ಬಿಜೆಪಿ ಸರಕಾರ ಬಿದ್ದು ಹೋಗುತ್ತದೆ. ಇವರೇನು ಕಾಲೇಜು ಆರಂಭಿಸುತ್ತಾರೆ. ನಾವು ಅಧಿಕಾರಕ್ಕೆ ಬಂದ ಬಳಿಕ ಕಾಲೇಜು ಆರಂಭಿಸುತ್ತೇವೆ. ಆದರೆ, ಅದು ಎಲ್ಲ ವರ್ಗಗಳಿಗೆ, ಬಡ ಮಕ್ಕಳಿಗೆ ಶಿಕ್ಷಣ ನೀಡುವಂತಹ ಕಾಲೇಜು ಆಗಿರಲಿದೆ ಎಂದ ಅವರು, ಹೋಬಳಿ ಮಟ್ಟಕ್ಕೆ ಒಂದು ಕಾಲೇಜು ಮಾಡುವುದು ನಮ್ಮ ಉದ್ದೇಶವಾಗಿದೆ ಎಂದರು.

ನಮ್ಮ ಪಕ್ಷದಲ್ಲಿ ಡಿಸೆಂಬರ್‌ನಲ್ಲಿ ಮೊದಲ ಹಂತದ ಟಿಕೆಟ್‌ ಘೋಷಣೆಯಾಗಲಿದೆ. ಎಲ್ಲ ತೀರ್ಮಾನಗಳನ್ನು ದೇವೇಗೌಡರು ಕೈಗೊಳ್ಳುತ್ತಾರೆ. ಅವರು ಹಿರಿಯ ಯಜಮಾನರಿದ್ದಾರೆ. ಅವರ ತೀರ್ಮಾನಗಳೇ ಅಂತಿಮ. ಅವರು ಸಾಕಷ್ಟು ಅನುಭವ ಮತ್ತು ದೂರದೃಷ್ಟಿ ಹೊಂದಿದ್ದಾರೆ ಎಂದರು.

ಮುಖ್ಯ ಮಂತ್ರಿ ಅಭ್ಯರ್ಥಿ ಕುಮಾರಸ್ವಾಮಿ ಅವರೇ, ಅದರಲ್ಲಿ ಬದಲಿಲ್ಲ. ಇನ್ನುಳಿದಂತೆ ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ.
ನನ್ನ ಪುತ್ರ ಹುಮನಬಾದ್‌ನಲ್ಲಿ ಸ್ಪರ್ಧಿಸುವ ಕುರಿತು ಪಕ್ಷವೇ ತೀರ್ಮಾನಿಸಲಿದೆ ಎಂದರು