Saturday, March 28, 2026
Saturday, March 28, 2026
Home Blog Page 1366

ಕೇಂದ್ರೀಯ ಕೈಗಾರಿಕಾ ಭದ್ರತಾ ದಳದಲ್ಲಿ ಉದ್ಯೋಗಾವಕಾಶ

0

ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ ಅಥವಾ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯು ಕಾನ್ಸ್‌ಟೇಬಲ್/ಟ್ರೇಡ್ಸ್‌ಮೆನ್‌ಗಳ ಹುದ್ದೆಗಳಿಗೆ ಅರ್ಜಿಗಳ

ಒಟ್ಟು ಹುದ್ದೆಗಳ ಸಂಖ್ಯೆ – 787
ಕಾನ್ಸ್‌ಟೇಬಲ್ / ಕುಕ್: 304 ಹುದ್ದೆಗಳು
ಕಾನ್ಸ್‌ಟೇಬಲ್/ ಚಮ್ಮಾರ: 6 ಹುದ್ದೆಗಳು
ಕಾನ್ಸ್‌ಟೇಬಲ್/ ಟೈಲರ್: 27 ಹುದ್ದೆಗಳು
ಕ್ಷೌರಿಕ: 102 ಹುದ್ದೆಗಳು
ವಾಷರ್ ಮ್ಯಾನ್: 118 ಹುದ್ದೆಗಳು / ಸ್ವೀಪರ್: 199 ಹುದ್ದೆಗಳು
ಪೇಂಟರ್: 01 ಹುದ್ದೆ
ಮೇಸನ್: 12 ಹುದ್ದೆಗಳು
ಕಾನ್ಸ್‌ಟೇಬಲ್/ ಪ್ಲಂಬರ್: 04 ಹುದ್ದೆಗಳು
ಕಾನ್ಸ್‌ಟೇಬಲ್/ ಮಾಲಿ: 03 ಹುದ್ದೆಗಳು
ಕಾನ್ಸ್‌ಟೇಬಲ್/ ವೆಲ್ಡರ್: 03 ಹುದ್ದೆಗಳು
ಕಾನ್ಸ್‌ಟೇಬಲ್/ ಚಮ್ಮಾರ: 01 ಹುದ್ದೆ
ಕಾನ್ಸ್‌ಟೇಬಲ್/ ಬಾರ್ಬರ್: 7

ವೇತನ:
ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಆರಂಭಿಕ ಮಾಸಿಕ ವೇತನವಾಗಿ 21700 ರೂ. ಸಿಗಲಿದೆ. ಹಾಗೆಯೇ 69100 ರೂ.ವರೆಗೆ ವೇತನ ಹೆಚ್ಚಳವಾಗಲಿದೆ.

ವಯೋಮಿತಿ:
ಅಭ್ಯರ್ಥಿಯು 01.08.2022 ರಂತೆ 18 ರಿಂದ 23 ವರ್ಷಗಳ ನಡುವೆ ಇರಬೇಕು. ಅಭ್ಯರ್ಥಿಗಳು 02/08/1999 ಕ್ಕಿಂತ ಮೊದಲು ಮತ್ತು 01/08/2004 ಕ್ಕಿಂತ ನಂತರ ಹುಟ್ಟಿರಬಾರದು.

ವಿದ್ಯಾರ್ಹತೆ:
ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ನಮೂನೆಯ ಸ್ವೀಕೃತಿಯ ಅಂತಿಮ ದಿನಾಂಕದ ಮೊದಲು ಮಾನ್ಯತೆ ಪಡೆದ ಶೈಕ್ಷಣಿಕ ಮಂಡಳಿಯಿಂದ 10 ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯ ಪ್ರಮಾಣ ಪತ್ರವನ್ನು ಹೊಂದಿರಬೇಕು.

ಅರ್ಜಿ ಶುಲ್ಕ:
ಸಾಮಾನ್ಯ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 100 ರೂ. ಪಾವತಿಸಬೇಕು. ಮಹಿಳಾ ಅಭ್ಯರ್ಥಿಗಳು ಮತ್ತು ಮೀಸಲಾತಿಗೆ ಅರ್ಹರಾಗಿರುವ ಪರಿಶಿಷ್ಟ ಜಾತಿಗಳು (SC), ಪರಿಶಿಷ್ಟ ಪಂಗಡಗಳು (ST), ಮತ್ತು ಮಾಜಿ ಸೈನಿಕರು (ESM) ಗೆ ಸೇರಿದವರು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 20, 2022.

ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಮಾಡಿ.

ಕೇಂದ್ರದ ಹೊಸ ಯೋಜನೆ ದವಾ ಕಾ ಆಧಾರ್ ಕಾರ್ಡ್

0

ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಔಷಧಿಗಳ ಕ್ಷೇತ್ರದಲ್ಲಿ ಮತ್ತೊಂದು ಹೊಸ ಯೋಜನೆಯನ್ನು ಅನುಷ್ಠಾನ ಮಾಡುತ್ತಿರುವ ಬಗ್ಗೆ ಯೋಜಿಸುತ್ತಿದೆ. ಮೋದಿ ಅವರು ಹೇಳಿರುವಂತೆ ಇದೊಂದು ದವಾ ಕಾ ಆಧಾರ್ ಕಾರ್ಡ್ ಯೋಜನೆಯಾಗಿದ್ದು ಈ ಮೂಲಕ ಭಾರತದಲ್ಲಿ ಮುಂಚೂಣಿಯಲ್ಲಿ ಮಾರಾಟವಾಗುವ ಹಲವು ಔಷಧಿಗಳ ಪ್ಯಾಕೆಟ್​ಗಳ ಮೇಲೆ ಕ್ಯೂಆರ್ ಅಥವಾ ಬಾರ್ ಕೋಡ್​ಗಳನ್ನು ಅಳವಡಿಸುವುದು ಕಡ್ಡಾಯವಾಗಲಿದೆ.

ಕಳೆದ ತಿಂಗಳಷ್ಟೇ ಆರೋಗ್ಯ ಮಂತ್ರಾಲಯವು ಮಾರಾಟವಾಗುವ ಮೊದಲ 300 ಔಷಧಿ ಬ್ರ್ಯಾಂಡುಗಳು ತಮ್ಮ ಔಷಧಿ ಉತ್ಪನ್ನಗಳ ಮೇಲೆ ಬಾರ್​ಕೋಡ್ ಅಳವಡಿಕೆಯನ್ನು ಕಡ್ಡಾಯಗೊಳಿಸುವ ಶೆಡ್ಯೂಲ್ H2 ಅನ್ನು ಜಾರಿ ಮಾಡಿದೆ.

ಈ ಉಪಕ್ರಮವು ಆಗಸ್ಟ್ 1, 2023 ರಿಂದ ಪರಿಣಾಮಕಾರಿಯಾಗಿ ಜಾರಿಗೆ ಬರಲಿದ್ದು ಈ ಮೂಲಕ ಔಷಧಿಗಳ ನೈಜತ್ವ, ಹಾಗೂ ಸಮರ್ಪಕವಾದ ರೀತಿಯಲ್ಲಿ ಅದರ ವ್ಯವಹಾರಗಳ ಮೇಲೆ ಹೆಚ್ಚಿನ ನಿಗಾ ಇರಿಸಬಹುದಾಗಿದೆ.

ಎರಡು ಸರ್ಕಾರಿ ಮೂಲಗಳ ಪ್ರಕಾರ ಈ ಉಪಕ್ರಮಕ್ಕೆ “ಔಷಧಿಗಳಿಗಾಗಿ ಆಧಾರ್ ಕಾರ್ಡ್” ಎಂಬ ಹೆಸರನ್ನಿರಿಸಲಾಗುವುದು ಎಂದಾಗಿದೆ.

ರಾಜ್ಯದ ಹಲವೆಡೆ ಡಿ.8 ರವರೆಗೆ ಭಾರೀ ಮಳೆ ಸಾಧ್ಯತೆ

0

ಚಳಿಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ನಾಳೆಯಿಂದ ಬೆಂಗಳೂರು ಸೇರಿ ರಾಜ್ಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಡಿಸೆಂಬರ್ 5 ರ ನಾಳೆಯಿಂದ ಡಿಸೆಂಬರ್ 8 ರವರೆಗೆ ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ಸೇರಿದಂತೆ ಮಲೆನಾಡು, ಕರಾವಳಿ, ಉತ್ತರ ಕರ್ನಾಟಕದ ಕೆಲವೆಡೆ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾನಗರ ಜಿಲ್ಲೆಗಳು ಹಾಗೂ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಾಳೆಯಿಂದ ನಾಲ್ಕು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ನಟ ಶಿವರಾಜ್ ಕುಮಾರ್ ರಾಯರ ದರ್ಶನಕ್ಕೆ ಮಂತ್ರಾಲಯ ಭೇಟಿ

0

ಹ್ಯಾಟ್ರಿಕ್ ಹೀರೊ ಡಾ.ಶಿವರಾಜ್ ಕುಮಾರ್ ಮತ್ತು ಪತ್ನಿ ಗೀತಾ ಹಾಗೂ ನಿರ್ದೇಶಕ ಹರ್ಷ ದಂಪತಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ದರ್ಶನಾಶೀರ್ವಾದ ಪಡೆದರು.

ರಾಯಚೂರು ನಗರದಲ್ಲಿ ಶಿವಣ್ಣನವರ 125ನೇ ಸಿನಿಮಾ ವೇದ ಟೀಸರ್ ಬಿಡುಗಡೆ ಕಾರ್ಯಕ್ರಮ ನಿಮಿತ್ತ ಬೆಳಗ್ಗೆ ಆಗಮಿಸಿದ್ದಾರೆ.

ಮೊದಲಿಗೆ ಮಂಚಾಲಮ್ಮದೇವಿ ದರ್ಶನ ಪಡೆದು ಬಳಿಕ ರಾಯರ ಮೂಲ ಬೃಂದಾವನದ ದರ್ಶನ ಪಡೆದರು. ನಂತರ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಆಶೀರ್ವಾದ ಪಡೆದು ಕೆಲ ಕಾಲ ಸಮಾಲೋಚನೆ ನಡೆಸಿದರು.

ಇಂದು ಸಂಜೆ ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ ಮೈದಾನದಲ್ಲಿ ಟೀಸರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ನಿರೂಪಕಿ ಅನುಶ್ರೀ ಕೂಡ ಭಾಗವಹಿಸುವ ಸಾಧ್ಯತೆಗಳಿವೆ.

ಕೆನಡಾ ದೇಶದಿಂದ ಭಾರತೀಯ ವೃತ್ತಿಪರರಿಗೆ ಕೆಲಸದ ಪರವಾನಗಿ ವಿಸ್ತರಣಾ ಸೌಲಭ್ಯ

0

ಮುಂದಿನ ವರ್ಷದಿಂದ ತಾತ್ಕಾಲಿಕ ಅಂತರಾಷ್ಟ್ರೀಯ ಉದ್ಯೋಗಿಗಳ ಕುಟುಂಬ ಸದಸ್ಯರಿಗೆ ತನ್ನ ಕೆಲಸದ ಪರವಾನಿಗೆಯನ್ನು ವಿಸ್ತರಿಸಿರುವ ಕೆನಡಾವು ಭಾರತೀಯ ವೃತ್ತಿಪರರು ಮತ್ತು ಇತರ ವಿದೇಶಿಯರಿಗೆ ಪ್ರಯೋಜನಕಾರಿಯಾದ ಮಹತ್ವದ ಕ್ರಮವನ್ನು ಪ್ರಾರಂಭಿಸಿದೆ.

ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡುವಾಗ ಕೆನಡಾದ ವಲಸೆ, ನಿರಾಶ್ರಿತರ ಮತ್ತು ಪೌರತ್ವ ಸಚಿವ ಸೀನ್ ಫ್ರೇಸರ್ ಅವರು, ತಮ್ಮ ಇಲಾಖೆಯು ತಾತ್ಕಾಲಿಕ ವಿದೇಶಿ ಕಾರ್ಮಿಕರ ಕುಟುಂಬ ಸದಸ್ಯರಿಗೆ ಕೆಲಸದ ಪರವಾನಗಿಯನ್ನು ವಿಸ್ತರಿಸುತ್ತಿದೆ ಎಂದು ಶುಕ್ರವಾರ ಘೋಷಿಸಿದರು.

ಪ್ರಮುಖ ಅರ್ಜಿದಾರರು ಉನ್ನತ ಕೌಶಲ್ಯದ ಉದ್ಯೋಗದಲ್ಲಿ ಕೆಲಸ ಮಾಡುತ್ತಿದ್ದರೆ ಮಾತ್ರ ಸಂಗಾತಿಗಳು ಕೆಲಸದ ಪರವಾನಿಗೆಗೆ ಅರ್ಹರಾಗಿರುತ್ತಾರೆ. ಈ ತಾತ್ಕಾಲಿಕ ಕ್ರಮವು ಕುಟುಂಬಗಳನ್ನು ಒಟ್ಟಿಗೆ ಇರಿಸುವ ಮೂಲಕ ಕಾರ್ಮಿಕರ ಭಾವನಾತ್ಮಕ ಯೋಗಕ್ಷೇಮ, ದೈಹಿಕ ಆರೋಗ್ಯ ಮತ್ತು ಆರ್ಥಿಕ ಸ್ಥಿರತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಇದರ ಪರಿಣಾಮವಾಗಿ ವಲಸೆ, ನಿರಾಶ್ರಿತರು ಮತ್ತು ಪೌರತ್ವ ಕೆನಡಾ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯ ಪ್ರಕಾರ, ಕಾರ್ಮಿಕರು ತಮ್ಮ ಒಟ್ಟಾರೆ ಕೆಲಸದ ವಾತಾವರಣ ಮತ್ತು ಸಮುದಾಯಕ್ಕೆ ಉತ್ತಮವಾಗಿ ಸಂಯೋಜಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ.

ಜನವರಿ 2023 ರಿಂದ ತಾತ್ಕಾಲಿಕ 2 ವರ್ಷದ ಅಂದಾಜಿನ ಮೂಲಕ, ಕೆನಡಾವು ಎಲ್ಲಾ ಕೌಶಲ್ಯ ಹಂತಗಳಲ್ಲಿನ ಕಾರ್ಮಿಕರಿಗೆ ಹಂತ ಹಂತದ ವಿಧಾನದ ಮೂಲಕ ಸಂಗಾತಿಗಳು ಮತ್ತು ಕೆಲಸ ಮಾಡುವ ವಯಸ್ಸಿನ ಮಕ್ಕಳಿಗೆ ಕೆನಡಾದಲ್ಲಿ ಕೆಲಸ ಮಾಡಲು ಅರ್ಹತೆಯನ್ನು ವಿಸ್ತರಿಸುತ್ತದೆ. ಇದು ಆರೋಗ್ಯ ರಕ್ಷಣೆ, ವ್ಯಾಪಾರ ಮತ್ತು ಆತಿಥ್ಯದಲ್ಲಿ ಕಾರ್ಮಿಕರ ಕುಟುಂಬಗಳನ್ನು ಒಳಗೊಂಡಿರುತ್ತದೆ,

ಈ ಹೊಸ ವಿಧಾನದ ಪರಿಣಾಮವಾಗಿ, 200,000 ಕ್ಕೂ ಹೆಚ್ಚು ವಿದೇಶಿ ಕಾರ್ಮಿಕರ ಕುಟುಂಬದ ಸದಸ್ಯರು ಕೆನಡಾದಲ್ಲಿ ಕೆಲಸ ಮಾಡಲು ಪ್ರಾರಂಭಿಸಬಹುದು ಎಂದು ಅಂದಾಜಿಸಲಾಗಿದೆ. ಕೆನಡಾದಲ್ಲಿ ಕೆಲಸ ಮಾಡಲು ಬಯಸುವ ವಿದೇಶಿ ಉದ್ಯೋಗಿಗಳಿಗೆ ಮತ್ತು ಅವರ ಕಾರ್ಮಿಕ ಅಗತ್ಯಗಳನ್ನು ಪರಿಹರಿಸುವ ಉದ್ಯೋಗದಾತರಿಗೆ ಹೆಚ್ಚಿನ ಅವಕಾಶವನ್ನು ನೀಡುತ್ತದೆ.

ಮಧ್ಯ ಪ್ರದೇಶದಲ್ಲಿ ರಾಹುಲ್ ಭಾರತ್ ಜೋಡೋ 11 ದಿನ ಪೂರ್ಣ

0

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಾರಥ್ಯದಲ್ಲಿ ನಡೆಯುತ್ತಿರುವ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಮಧ್ಯ ಪ್ರದೇಶದಲ್ಲಿ 11ನೇ ದಿನಕ್ಕೆ ಕಾಲಿಟ್ಟಿದ್ದು, ಆಗರ್ ಮಾಲ್ವಾ ಜಿಲ್ಲೆಯಿಂದ ಶನಿವಾರ ಪುನರ್ ಆರಂಭವಾಯಿತು.

ಇಂದು ಬೆಳಗ್ಗೆ 6 ಗಂಟೆ ಸುಮಾರಿನಲ್ಲಿ ಆಗರ್ ಮಾಲ್ವಾದ ಮಹುದಿಯಾ ಗ್ರಾಮದ ಬಸ್ ನಿಲ್ದಾಣದಲ್ಲಿ ಯಾತ್ರೆ ಆರಂಭವಾಯಿತು. ಇದು ಈವರೆಗೂ ರಾಹುಲ್ ನಡೆಸುತ್ತಿರುವ ಒಟ್ಟಾರೇ 87 ದಿನದ ಯಾತ್ರೆಯಾಗಿದೆ. ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆ ಆರಂಭವಾಗಿತ್ತು. ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಟಿ.ಎಂ. ಕೃಷ್ಣ ಈ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಅಮ್ಲಾ ಗ್ರಾಮದಲ್ಲಿ ಯಾತ್ರೆಗೆ ವಿರಾಮ ನೀಡಲಾಗಿದ್ದು, ಮಧ್ಯಾಹ್ನ 3-30ಕ್ಕೆ ಸುಸ್ನೆರ್ ಟೌನ್ ನ ಜೈನ್ ಮಂದಿರದಿಂದ ಆರಂಭವಾಗಲಿದ್ದು, ಆಗರ್ ಮಾಲ್ವಾದ ಮಂಗೇಶ್ ಪುರ್ ಚೌರಾ ತಲುಪಲಿದೆ. ಗಣರಾಜ್ಯೋತ್ಸವ ದಿನದಂದು ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಭಾರತ್ ಜೋಡೋ ಯಾತ್ರೆ ಕೊನೆಗೊಳಿಸಲು ಕಾಂಗ್ರೆಸ್ ನಿರ್ಧಾರ ಲಾಲಾ ಖೇಡಿ ಗ್ರಾಮದಲ್ಲಿ ಯಾತ್ರೆಯಲ್ಲಿ ಪಾಲ್ಗೊಂಡವರು ರಾತ್ರಿ ತಂಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಯಾತ್ರೆ ಡಿಸೆಂಬರ್ 4 ರಂದು ರಾಜಸ್ಥಾನ ತಲುಪಲಿದೆ. ಅದಕ್ಕೂ ಮುನ್ನ ಪೂರ್ವ ಮಧ್ಯ ಪ್ರದೇಶದ ಮಾಲ್ವಾ- ನಿಮಾರ್ ವಲಯದಲ್ಲಿ 380 ಕಿ.ಮೀ. ದೂರ ಕ್ರಮಿಸಲಿದೆ.

ಶಿವಮೊಗ್ಗ ಸಕ್ಷಮದ ಶಿವಕುಮಾರ್ ಗೆ ರಾಜ್ಯ ಪ್ರಶಸ್ತಿ

0

ಈ ವರ್ಷದ ವಿಶ್ವ ವಿಶೇಷಚೇತನರ ದಿನಾಚರಣೆ 2022ರ ಪ್ರಯುಕ್ತ ಕರ್ನಾಟಕ ರಾಜ್ಯ ಸರಕಾರದ ದಿವ್ಯಾಂಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ, ದಿವ್ಯಾಂಗ ಕ್ಷೇತ್ರದಲ್ಲಿ ಅತ್ತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ ಕೊಡಲ್ಪಡುವ ರಾಜ್ಯ ಪ್ರಶಸ್ತಿಗೆ ಶಿವಮೊಗ್ಗ ಜಿಲ್ಲೆಯ ಸಿ.ಆರ್ ಶಿವಕುಮಾರ್ ಜಿಲ್ಲಾ ಸಂಚಾಲಕರು ಸಕ್ಷಮ ಶಿವಮೊಗ್ಗ ಇವರನ್ನು ಆಯ್ಕೆ ಮಾಡಿ ಇಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ವಿಶ್ವ ವಿಶೇಷಚೇತನ ದಿನಾಚರಣೆಯ ಸಂದರ್ಭದಲ್ಲಿ ರಾಜ್ಯದ ಮುಖ್ಯ ಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿವರು ಹಾಗು ದಿವ್ಯಾಂಗ ಇಲಾಖೆಯ ಸಚಿವರಾದ ಶ್ರೀ ಹಾಲಪ್ಪ ಆಚಾರ್ ಇವರ ಉಪಸ್ಥಿತಿಯಲ್ಲಿ ಈ ರಾಜ್ಯ ಪ್ರಶಸ್ತಿಯನ್ನು ವಿತರಿಸಲಾಯಿತು.

ಜಿ20 ಅಧ್ಯಕ್ಷಗಿರಿ ಅವಧಿಯಲ್ಲಿ ಭಾರತಕ್ಕೆ ಅಮೆರಿಕದ ಪೂರ್ಣ ಸಹಕಾರ- ಬೈಡೆನ್

0

ಭಾರತ ಅಮೆರಿಕದ “ಬಲವಾದ ಪಾಲುದಾರ” ಎಂದು ಬಣ್ಣಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು, ಭಾರತದ ಜಿ20 ಅಧ್ಯಕ್ಷೀಯ ಅವಧಿಯಲ್ಲಿ ನನ್ನ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಲು ಎದುರು ನೋಡುತ್ತಿರುವುದಾಗಿ ಶುಕ್ರವಾರ ಹೇಳಿದ್ದಾರೆ.

ಭಾರತ ಅಮೆರಿಕದ ಪ್ರಬಲ ಪಾಲುದಾರ ಮತ್ತು ಭಾರತದ ಜಿ20 ಅಧ್ಯಕ್ಷೀಯ ಅವಧಿಯಲ್ಲಿ ನನ್ನ ಸ್ನೇಹಿತ ಪ್ರಧಾನಿ ಮೋದಿ ಅವರನ್ನು ಬೆಂಬಲಿಸಲು ನಾನು ಎದುರು ನೋಡುತ್ತಿದ್ದೇನೆ” ಎಂದು ಬೈಡೆನ್ ಇಂದು ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ:ಭಾರತದ ಜಿ20 ಅಧ್ಯಕ್ಷತೆ ಮಾನವಕುಲದ ಪ್ರಯೋಜನಕ್ಕಾಗಿ ಕೆಲಸ ಮಾಡಲಿದೆ: ಪ್ರಧಾನಿ ಮೋದಿ “ಭಾರತದ ಜಿ20 ಅಧ್ಯಕ್ಷತೆಯು ಸಾರ್ವತ್ರಿಕ ಏಕತೆಯ ಭಾವನೆಯನ್ನು ಮತ್ತಷ್ಟು ಉತ್ತೇಜಿಸಲುತ ಕೆಲಸ ಮಾಡುತ್ತದೆ. ಆದ್ದರಿಂದ ನಮ್ಮ ಘೋಷವಾಕ್ಯ – ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂದು ಪ್ರಧಾನಿ ಮೋದಿ ಗುರುವಾರ ಹೇಳಿದ್ದರು.

ಭಾರತ ಅಮೆರಿಕದ ಪ್ರಬಲ ಪಾಲುದಾರ ಮತ್ತು ಭಾರತದ ಜಿ20 ಅಧ್ಯಕ್ಷೀಯ ಅವಧಿಯಲ್ಲಿ ನನ್ನ ಸ್ನೇಹಿತ ಪ್ರಧಾನಿ ಮೋದಿ ಅವರನ್ನು ಬೆಂಬಲಿಸಲು ನಾನು ಎದುರು ನೋಡುತ್ತಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ “ಭಾರತದ ಜಿ20 ಅಧ್ಯಕ್ಷತೆಯು ಸಾರ್ವತ್ರಿಕ ಏಕತೆಯ ಭಾವನೆಯನ್ನು ಮತ್ತಷ್ಟು ಉತ್ತೇಜಿಸಲುತ ಕೆಲಸ ಮಾಡುತ್ತದೆ. ಆದ್ದರಿಂದ ನಮ್ಮ ಘೋಷವಾಕ್ಯ ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂದು ಪ್ರಧಾನಿ ಮೋದಿ ಗುರುವಾರ ಹೇಳಿದ್ದರು.

ವಿದ್ಯುತ್ ಬಳಕೆದಾರರ ಶುಲ್ಕ ಇಳಿಕೆಗೆ ಸರ್ಕಾರದ ಚಿಂತನೆ-ಸಚಿವ ಸುನೀಲ್ ಕುಮಾರ್

0

ಹೊಸ ವರ್ಷಕ್ಕೆ ಮೊದಲೇ ರಾಜ್ಯದ ಜನತೆಗೆ ಸಿಹಿ ಸುದ್ದಿ ಸಿಕ್ಕಿದೆ. ವಿದ್ಯುತ್ ದರ ಇಳಿಕೆಗೆ ಚಿಂತನೆ ನಡೆದಿದೆ.

ಗೃಹ ಬಳಕೆ ಸೇರಿದಂತೆ ಎಲ್ಲಾ ಬಗೆಯ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ವಿದ್ಯುತ್ ದರ ಕಡಿತ ಮಾಡಲು ಚಿಂತನೆ ನಡೆದಿದೆ.

ಬಳಕೆದಾರರ ಶುಲ್ಕವನ್ನು ಕಡಿತಗೊಳಿಸಲು ನಿರ್ಧರಿಸಲಾಗಿದ್ದು, ಪ್ರತಿ ಯೂನಿಟ್ ಗೆ 70 ಪೈಸೆಯಿಂದ ಎರಡು ರೂಪಾಯಿವರೆಗೆ ಇಳಿಕೆಯಾಗಬಹುದು ಎಂದು ಹೇಳಲಾಗಿದೆ.

ಗ್ರಾಮೀಣ ವಿದ್ಯುತ್ ಬಳಕೆದಾರರಿಗೆ ರಿಯಾಯಿತಿ ನೀಡಲಾಗುವುದು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಹಕರಿಗೆ ಬಳಕೆದಾರರ ಶುಲ್ಕದಲ್ಲಿ 25 ಪೈಸೆಯಷ್ಟು ರಿಯಾಯಿತಿ ನೀಡಲಾಗುತ್ತದೆ. 50 ಯೂನಿಟ್ ವರೆಗೆ ಲೈಫ್ ಲೈನ್ ಬಳಕೆಯಲ್ಲಿ ಗ್ರಾಹಕರಿಗೆ ಪ್ರತಿ ಯೂನಿಟ್ ಗೆ ವಿಧಿಸುತ್ತಿದ್ದ 4.15 ರೂ. ಮತ್ತು 4.05 ರೂ. ಬದಲಿಗೆ 3.6 ರೂ. ಶುಲ್ಕ ವಿಧಿಸಲು ಚಿಂತನೆ ನಡೆದಿದೆ.

50 ರಿಂದ 200 ಯೂನಿಟ್ ವರೆಗಿನ ಸ್ಲ್ಯಾಬ್ ವಿಲೀನಗೊಳಿಸಿ ಆರಂಭಿಕ ದರ ಯೂನಿಟ್ ಗೆ 3.60 ರೂ. ನಿಗದಿ ಮಾಡುವ ಸಾಧ್ಯತೆ ಇದೆ. ನಂತರದ ಯೂನಿಟ್ ಗಳಿಗೆ 4.60 ರೂ. ಶುಲ್ಕ ವಿಧಿಸಲಾಗುವುದು. 200 ಯೂನಿಟ್ ಗಿಂತ ಹೆಚ್ಚಿನ ಬಳಕೆಗೆ 7 ರೂ. ದರ ವಿಧಿಸುವ ಸಾಧ್ಯತೆ ಇದೆ.ಕೈಗಾರಿಕೆಗಳಿಗೂ ಈ ಸೌಲಭ್ಯ ಸಿಗಲಿದೆ.

ಅನಗತ್ಯ ವೆಚ್ಚಗಳಿಗೆ ಕಡಿವಾಳ ಹಾಕಿ ಗ್ರಾಹಕ ಸ್ನೇಹಿಯಾಗಿ ಜನಪರ ನಿಲುವು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಬಳಕೆದಾರರ ಶುಲ್ಕ ಇಳಿಕೆಗೆ ಚಿಂತನೆ ನಡೆದಿದೆ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಅವರು ಹೇಳಿದ್ದಾರೆ.

ಕೋರ್ಟ್ ಕಲಾಪಗಳಲ್ಲಿ ಪ್ರಾದೇಶಿಕ ಭಾಷೆಗೆ ಆದ್ಯತೆ ಅಗತ್ಯ-ಸಚಿವ ರಿಜಿಜು

0

ಕೇಂದ್ರ ಸರ್ಕಾರವು ಕರ್ನಾಟಕ ಸೇರಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಿಂದಿ ಹೇರಿಕೆ ಮಾಡುತ್ತಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ದೇಶದ ಕೋರ್ಟ್‌ ಕಲಾಪ, ಪ್ರತಿಯೊಂದು ಚಟುವಟಿಕೆಗಳಲ್ಲೂ ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ನೀಡುವ ಅಗತ್ಯವಿದೆ’ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ.

ಚೆನ್ನೈನಲ್ಲಿ ನಡೆದ ಅಂಬೇಡ್ಕರ್ ಕಾನೂನು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ‘ದೇಶದ ನ್ಯಾಯಾಲಯಗಳ ಪ್ರತಿಯೊಂದು ಚಟುವಟಿಕೆಗಳೂ ಆಯಾ ಪ್ರಾದೇಶಿಕ ಭಾಷೆಯಲ್ಲಿಯೇ ಇರಬೇಕು. ಇದರ ದಿಸೆಯಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ, ಎಲ್ಲ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ಜೊತೆ ಮಾತುಕತೆ ನಡೆಸಿದ್ದೇನೆ ಎಂದು ತಿಳಿಸಿದ್ದಾರೆ.

ದೇಶದ ಸಂಸ್ಕೃತಿ, ಭಾಷೆ, ಸಂಪ್ರದಾಯವನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ಯುವುದು ಪ್ರಧಾನಿ ನರೇಂದ್ರ ಮೋದಿ ಅವರ ಆದ್ಯತೆಯಾಗಿದೆ. ಅದರಂತೆ, ನ್ಯಾಯಾಲಯಗಳಲ್ಲೂ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡಬೇಕಿದೆ. ಇದರಿಂದ ಸ್ಥಳೀಯ ಭಾಷೆಗಳಿಗೆ ಉತ್ತೇಜನ ಸಿಕ್ಕಂತಾಗುತ್ತದೆ ಎಂದಿದ್ದಾರೆ.