Monday, March 30, 2026
Monday, March 30, 2026
Home Blog Page 1363

ವೈದ್ಯರಲ್ಲಿ ಸಮರ್ಪಣಾ ಮನೋಭಾವ ಮುಖ್ಯ-ಡಾ.ಶಿವಕುಮಾರ್ ಲಕ್ಕೋಳ್

0

ಸಮರ್ಪಣಾ ಭಾವದಿಂದ ವೈದ್ಯಕೀಯ ವೃತ್ತಿಯಲ್ಲಿ ಸೇವೆ ಸಲ್ಲಿಸುವ ಮನೋಭಾವವನ್ನು ಎಲ್ಲ ವೈದ್ಯರು ಹೊಂದಬೇಕು ಎಂದು ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ಶಾಖೆ ಅಧ್ಯಕ್ಷ ಡಾ. ಶಿವಕುಮಾರ್ ಬಿ ಲಕ್ಕೋಳ್ ಹೇಳಿದರು.

ಶಿವಮೊಗ್ಗ ನಗರದಲ್ಲಿರುವ ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಶಾಖೆಗೆ ಭೇಟಿ ಹಾಗೂ ಸಾಮಾನ್ಯ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಸೇವೆ ಮಾಡುವ ಆಶಯದಿಂದ ಕಾರ್ಯಕ್ರಮಗಳನ್ನು ರೂಪಿಸಬೇಕು. ಎಲ್ಲರೂ ಸೇವಾ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಬೇಕು ಎಂದು ತಿಳಿಸಿದರು.

ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಶಾಖೆಗಳಲ್ಲಿ ಶಿವಮೊಗ್ಗ ಶಾಖೆಯು ಪ್ರತಿಷ್ಠಿತ ಶಾಖೆಯಾಗಿ ಗುರುತಿಸಲ್ಪಟ್ಟಿದೆ. ರಾಜ್ಯದಲ್ಲಿರುವ ಎಲ್ಲ ಶಾಖೆಗಳಿಗಿಂತ ಹೆಚ್ಚು ಕೊಡುಗೆಯನ್ನು ಶಿವಮೊಗ್ಗ ನೀಡಿದೆ. ವೈದ್ಯಕೀಯ ಸಾಹಿತ್ಯ ಕ್ಷೇತ್ರಕ್ಕೂ ಶಿವಮೊಗ್ಗ ವೈದ್ಯ ಸಾಹಿತಿಗಳ ಕೊಡುಗೆ ಅಪಾರ. ಕ್ರೀಡೆ ಹಾಗೂ ಸೇವಾ ಕ್ಷೇತ್ರದಲ್ಲಿಯೂ ಶಿವಮೊಗ್ಗ ವೈದ್ಯರು ಉತ್ತಮ ಸಾಧನೆ ಮಾಡಿದ್ದಾರೆ ಎಂದರು.

ಭಾರತೀಯ ವೈದ್ಯಕೀಯ ಸಂಘದ ಸದಸ್ಯರು 26 ಸಾವಿರಕ್ಕಿಂತ ಹೆಚ್ಚು ಇದ್ದು, ಶಿವಮೊಗ್ಗ ಶಾಖೆಯಲ್ಲಿ ವೈದ್ಯ ಸದಸ್ಯರ ನೋಂದಣಿ ಹೆಚ್ಚಿಸಬೇಕು. ವೈದ್ಯಕೀಯ ಸಂಘದ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮಟ್ಟದಲ್ಲಿ ಈಡೇರಿಸಿಕೊಳ್ಳುವ ದೃಷ್ಠಿಯಿಂದ ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಶಾಖೆಯು ಸಂಪೂರ್ಣ ಪ್ರಯತ್ನ ನಡೆಸಲಿದೆ. ಎಲ್ಲ ಸದಸ್ಯರ ಪಾಲ್ಗೊಳ್ಳುವಿಕೆ ಬಹಳ ಮುಖ್ಯ ಎಂದು ಹೇಳಿದರು.

ವೈದ್ಯರ ಮೇಲೆ ಆಗುತ್ತಿರುವ ಹಲ್ಲೆ ತಡೆಗಟ್ಟುವ ನಿಟ್ಟಿನಲ್ಲಿ ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ಶಾಖೆಯು ಆರೋಗ್ಯ ಇಲಾಖೆ ಸಚಿವರು ಹಾಗೂ ರಾಜ್ಯ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದೆ. ವೈದ್ಯರ ಮೇಲಿನ ಹಲ್ಲೆ ಆರೋಪಿಗಳಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಡ ಹಾಕಲಾಗುತ್ತಿದೆ ಎಂದು ತಿಳಿಸಿದರು.

ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ಶಾಖೆ ಅಧ್ಯಕ್ಷ ಡಾ. ಅರುಣ್ ಎಂ.ಎಸ್. ಹಾಗೂ ಕಾರ್ಯದರ್ಶಿ ರಕ್ಷಾ ಯು ರಾವ್ ಮಾತನಾಡಿ, ಶಿವಮೊಗ್ಗ ಶಾಖೆಯು ಸಾರ್ವಜನಿಕರಲ್ಲಿ ಆರೋಗ್ಯ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮ ಹಾಗೂ ಸಮಾಜಮುಖಿ ಚಟುವಟಿಕೆಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬರುತ್ತಿದೆ. ರಕ್ತದಾನ ಶಿಬಿರ, ಆಶಾ ಕಾರ್ಯಕರ್ತರಿಗೆ ಆರೋಗ್ಯ ತಪಾಸಣೆ, ಮಹಿಳೆಯರಿಗೆ ಕ್ಯಾನ್ಸರ್ ಜಾಗೃತಿ, ಹಿರಿಯ ನಾಗರೀಕರಿಗೆ ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ಅನೇಕ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶಿವಮೊಗ್ಗ ಶಾಖೆಯು ಕಾರ್ಯ ಚಟುವಟಿಕೆಗಳನ್ನು ನಡೆಸುವ ಪ್ರಯತ್ನ ನಡೆದಿದೆ . ವೈದ್ಯರ ಸುರಕ್ಷತೆಗೆ ಸಂಬಂಧಿಸಿ ಪೊಲೀಸ್ ಇಲಾಖೆಯೊಂದಿಗೆ ನಿರಂತರ ಸಂಪರ್ಕ ಹಾಗೂ ಅಗತ್ಯ ಸಹಕಾರ ನೀಡುತ್ತ ಬರಲಾಗಿದೆ. ಐಎಂಎ ಶಿವಮೊಗ್ಗ ಸೇವಾ ಚಟುವಟಿಕೆಗಳ ಬಗ್ಗೆ ಮ್ಯಾಗಜೀನ್ ಪ್ರಕಟಿಸಲಾಗುತ್ತಿದೆ ಎಂದು ತಿಳಿಸಿದರು.

ಇದೆ ಸಂದರ್ಭದಲ್ಲಿ 2023 ನೇ ಸಾಲಿನ ಕಾಲೆಂಡರ್ ಬಿಡುಗಡೆಮಾಡಲಾಯಿತು .
ಭಾರತೀಯ ವೈದ್ಯಕೀಯ ಸಂಘದ ಹಿರಿಯ ಸದಸ್ಯ ಡಾ. ಪಿ.ನಾರಾಯಣ, ಡಾ. ಲಕ್ಷ್ಮಣ್ ಬಾಕ್ಲೆ, ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ಶಾಖೆ ಖಜಾಂಚಿ ಶಶಿಧರ್ , ಜಂಟಿ ಕಾರ್ಯದರ್ಶಿ ಡಾ. ಸತೀಶ್ ಎಂ.ಆರ್., ಹಿರಿಯ ವೈದ್ಯರಾದ ಡಾ . ಎನ್ . ಎಲ್ . ನಾಯಕ್ , ಡಾ . ನಾಗರಾಜ್ , ಡಾ . ಗೀತಾ ಇಸ್ಲೂರ್ , ಡಾ. ವಾಣಿ ಕೋರಿ ಮತ್ತಿತರರು ಉಪಸ್ಥಿತರಿದ್ದರು.

ಶಿವಮೊಗ್ಗದಲ್ಲಿ ಉದ್ಯೋಗ ಮೇಳ

0

ನಿಮಗೆ ನಿರುದ್ಯೋಗದ ಸಮಸ್ಯೆ ಕಾಡುತ್ತಿದೆಯೇ…?, ನಿಮಗೆ ಉದ್ಯೋಗದ ಅವಕಾಶಗಳು ದೊರೆಯುತ್ತಿಲ್ಲವೇ…? ಹಾಗಾದರೆ ನಿಮಗಿದೆ ಇಲ್ಲೊಂದು ಸುವರ್ಣ ಅವಕಾಶ…

ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಕೌಶಲ್ಯಾ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಜಿಲ್ಲಾ ಕೌಶಲ್ಯ ಮಿಷನ್ ಶಿವಮೊಗ್ಗ ಮತ್ತು ಸೈಯಾದ್ರಿ ಕಲಾ ಕಾಲೇಜಿನ ಸಹಭಾಗಿತ್ವದಲ್ಲಿ ಸರ್ವರಿಗೂ ಉದ್ಯೋಗ ಎಂಬ ಶೀರ್ಷಿಕೆ ಅಡಿಯಲ್ಲಿ ಇದೇ ತಿಂಗಳ 13 ರ ಬೆಳಿಗ್ಗೆ 9.30ಕ್ಕೆ ರಿಂದ ಸಂಜೆ 4 ಗಂಟೆಯವರೆಗೆ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಉದ್ಯೋಗ ಮೇಳ ನಡೆಯಲಿದೆ.

ಆಸಕ್ತರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿ, ಉದ್ಯೋಗ ಮೇಳದ ಲಾಭವನ್ನು ಪಡೆದುಕೊಳ್ಳಿ. ಈ ಉದ್ಯೋಗ ಮೇಳಕ್ಕೆ ಸುಮಾರು ಮೂವತ್ತಕ್ಕೂ ಅಧಿಕ ಪ್ರತಿಷ್ಠಿತ ಕಂಪನಿಗಳು ಭಾಗವಹಿಸುತ್ತಿವೆ. 5ನೇ ತರಗತಿಯಿಂದ ಯಾವುದೇ ಸ್ನಾತಕೋತ್ತರ ಪದವಿ ಮುಗಿಸಿದ ಉದ್ಯೋಗಾಕಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು.

ಈ ಲಿಂಕ್ ಅನ್ನು ಬಳಸಿ ಆನ್ಲೈನ್ ಮುಖಾಂತರ ನೊಂದಣಿ ಮಾಡಿಕೊಳ್ಳಬಹುದು.

http://skillconnect.kaushalkar.com/candidatereg

ಉದ್ಯೋಗಾಕಾಂಕ್ಷಿಗಳು ಉದ್ಯೋಗ ಮೇಳಕ್ಕೆ ಬರುವಾಗ ಕನಿಷ್ಠ 10 ಪ್ರತಿ ಸ್ವ ವಿವರಗಳನ್ನು ಪ್ರತಿಯನ್ನು ತರಬಹುದು. ಇದರ ಜೊತೆಗೆ ಇತ್ತೀಚಿನ ಭಾವಚಿತ್ರವನ್ನು ತರಬೇಕು.

ಉದ್ಯೋಗ ಮೇಳದಲ್ಲಿ ಉದ್ಯೋಗಕಾಂಕ್ಷಿಗಳು ಭಾಗವಹಿಸಿ ಉದ್ಯೋಗವನ್ನು ಪಡೆದುಕೊಳ್ಳಿ ಎಂದು ಕೆ ಲೈವ್ ಬಳಗ ಆಶಿಸುತ್ತದೆ.

ನಷ್ಟದ ಸ್ಥಿತಿಯಿಂದ ಬ್ಯಾಂಕನ್ನ ಪ್ರಗತಿಯತ್ತ ಒಯ್ಯಬೇಕು-ಎಂ.ಕೆ.ದ್ಯಾವಪ್ಪ

0

ನಷ್ಟದಲ್ಲಿದ್ದ ಬ್ಯಾಂಕನ್ನು ಪ್ರಗತಿಯತ್ತ ಕೊಂಡೊಯ್ಯಬೇಕು. ಸರ್ಕಾರದಿಂದ ಮಂಜೂರಾದ 1.5 ಕೋಟಿ ಹಣವನ್ನು ರೈತರಿಗೆ ಶೇ.3ರ ದರದಲ್ಲಿ ಸಾಲ ನೀಡಬೇಕು ಎಂಬ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುವ ನನ್ನ ವಿರುದ್ಧ ಮಾಜಿ ಅಧ್ಯಕ್ಷ ಪಿ. ಎನ್. ಸುಬ್ರಾವ್ ಷಡ್ಯಂತರ ರೂಪಿಸಿ ಬ್ಯಾಂಕಿಗೆ ನಷ್ಟ ಉಂಟು ಮಾಡಿದ್ದಲ್ಲದೆ, ರೈತರಿಗೆ ಸಕಾಲಕ್ಕೆ ಸಾಲ ಸಿಗದಂತೆ ಮಾಡಿದ್ದಾರೆ ಎಂದು ಸಾಗರದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಎಂ.ಕೆ. ದ್ಯಾವಪ್ಪ ಅವರು ಹೇಳಿದರು.

ಸಾಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬ್ಯಾಂಕಿಗೆ ಅಧ್ಯಕ್ಷರಾಗಿದ್ದರು. ಆದರೆ ಈ ಹಿಂದೆ ಸತತ ಮೂರು ಬಾರಿ ರಾಜ್ಯ ಬ್ಯಾಂಕಿನಿಂದ ರೈತರ ಕೃಷಿ ಅಭಿವೃದ್ಧಿಗೆ ಮಂಜೂರಾದ ಹಣವನ್ನ ರೈತರಿಗೆ ಸಾಲವಾಗಿ ನೀಡದೆ, ರಾಜ್ಯ ಬ್ಯಾಂಕಿಗೆ ವಾಪಸ್ ಕಳುಹಿಸಿ, ರೈತರಿಗೆ ಅನ್ಯಾಯ ಮಾಡಿರುವುದಲ್ಲದೆ ಬ್ಯಾಂಕಿಗೂ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಬ್ಯಾಂಕಿನಿಂದ ಈ ಸಾಲಿನಲ್ಲಿ 1.50 ಕೋಟಿ ರೂಪಾಯಿ ನಮ್ಮ ಬ್ಯಾಂಕಿಗೆ ಬಂದಿದೆ. ಈ ಬಾರಿ ರಾಜ್ಯ ಬ್ಯಾಂಕಿನವರು ರೈತರಿಗೆ ಸಾಲ ನೀಡಲು ರಾಜ್ಯ ಬ್ಯಾಂಕಿನಿಂದ ನಿಯೋಜಿಸಲ್ಪಟ್ಟ ವ್ಯವಸ್ಥಾಪಕರುಗಳು ನಮ್ಮ ಬ್ಯಾಂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಮಾತ್ರ ಎಲ್ಲಾ ವ್ಯವಸ್ಥಾಪಕರಿಗೆ ರೈತರ ಸಾಲದ ಅರ್ಜಿಗಳನ್ನ ಕಳುಹಿಸಬೇಕೆಂದು ಶರತ್ತು ವಿಧಿಸಿ, ರೈತರಿಗೆ ಸಾಲ ನೀಡಲು ದಿನಾಂಕ ನಗದಿಗೊಳಿಸಿ ರೂ.1.5 ಕೋಟಿ ರೂಪಾಯಿ ಮಂಜೂರು ಮಾಡಿರುತ್ತಾರೆ. ಈ ವಿಚಾರದ ಬಗ್ಗೆ ನವೆಂಬರ್ 7ರಂದು ಆಡಳಿತ ಮಂಡಳಿ ಸಭೆ ಕರೆದು ತಿಳಿಸಿದ್ದೇನೆ. ಈ ಸಂದರ್ಭದಲ್ಲಿ ಕೆಲವು ನಿರ್ದೇಶಕರು ಈ ಶರತ್ತಿನ ಅನ್ವಯ ರಾಜ್ಯ ಅಧ್ಯಕ್ಷರಲ್ಲಿ ಕೇಳಿಕೊಳ್ಳುವುದು ಸೂಕ್ತ ಎಂದು ತಿಳಿಸಿದರು. ಆದರೆ, ಸುಬ್ರಾವ್ ಅವರು ಇನ್ನು ಸ್ವಲ್ಪ ದಿನ ಕಾದು ನೋಡೋಣ ಎಂದರು ಎಂದು ವಿವರಿಸಿದರು.

ಸಾಗರದಲ್ಲಿ ಶ್ರೀದತ್ತ ಜಯಂತಿ ಆಚರಣೆ

0

ಸಾಗರದ ಅಗ್ರಹಾರದಲ್ಲಿರುವ ಶ್ರೀ ದತ್ತ ಮಂದಿರದಲ್ಲಿ ಡಿಸೆಂಬರ್ 1ರಿಂದ 7ರವರೆಗೆ ಶ್ರೀ ದತ್ತ, ಶ್ರೀಧರ ಸ್ವಾಮಿಗಳ ರವರ ಜಯಂತಿ ಸಪ್ತಾಹ ಮಹೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಸಾಗರದ ಅಗ್ರಹಾರದಲ್ಲಿರುವ ಶ್ರೀ ದತ್ತ ಮಂದಿರದಲ್ಲಿ ಡಿಸೆಂಬರ್ 1ರಿಂದ 7ರವರೆಗೆ ಶ್ರೀ ದತ್ತ, ಶ್ರೀಧರ ಸ್ವಾಮಿಗಳ ರವರ ಜಯಂತಿ ಸಪ್ತಾಹ ಮಹೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಡಿಸೆಂಬರ್ 7ರಂದು ದತ್ತ ಜಯಂತಿ ಅಂಗವಾಗಿ ವಿಶೇಷ ಪೂಜೆ, ಶತರುದ್ರಾಭಿಷೇಕ, ದತ್ತ ಮೂಲ ಮಂತ್ರ ಹವನ, ಪೂರ್ಣಹುತಿ, ತೀರ್ಥ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನಡೆಯಿತು. ಸಂಜೆ ಜಯಂತಿಯ ಉತ್ಸವ, ಅಷ್ಟಾವದಾನಸೇವೆ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಿತು. ಸದ್ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು.

ಅನುದಾನರಹಿತ ಪಿಯು ಕಾಲೇಜು ಆರಂಭಿಸುವ ಸಂಸ್ಥೆಗಳು ಆನ್ ಲೈನ್ ಅರ್ಜಿ ಸಲ್ಲಿಸಬಹುದು

0

ಪದವಿ ಪೂರ್ವ ಶಿಕ್ಷಣ ಇಲಾಖೆ ಯು 2023-24 ನೇ ಶೈಕ್ಷಣಿಕ ಸಾಲಿನಲ್ಲಿ ಹೊಸ ಖಾಸಗಿ ಶಾಶ್ವತ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸಲು ಇಚ್ಚಿಸುವ ಅರ್ಹ ಶಿಕ್ಷಣ ಸಂಸ್ಥೆ ಅಥವಾ ಟ್ರಸ್ಟ್ ಗಳಿಂದ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅಜ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಡಿಸೆಂಬರ್ 6ರಿಂದ 31ರವರೆಗೆ ವಿಸ್ತರಿಸಲಾಗಿದೆ ಎಂದು ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಆಸಕ್ತರು ಇಲಾಖೆಯ ವೆಬ್ಸೈಟ್ www.pue.karnataka.gov.in ರ ನಿಗದಿತ ಲಿಂಕ್ https://dpue-exam. karnataka.gov.in/new college2324 ರಲ್ಲಿ ಅರ್ಜಿಗಳನ್ನ ಸಲ್ಲಿಸಬಹುದಾಗಿದೆ.

ಶಿರಾಳಕೊಪ್ಪ ಪುರಸಭೆ: ಘನತ್ಯಾಜ್ಯ ವಿಲೇವಾರಿ ನಿಯಮ ಜಾರಿ

0

ಶಿರಾಳಕೊಪ್ಪ ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು, ಉಗುಳುವುದು, ಸ್ನಾನ ಮಾಡುವುದು, ಮೂತ್ರ ವಿಸರ್ಜನೆ ಮತ್ತು ಬಯಲು ಮಲವಿಸರ್ಜನೆ ಮಾಡಿ ಸಾರ್ವಜನಿಕ ಉಪದ್ರವ ಉಂಟುಮಾಡುವುದಕ್ಕೆ ಹಾಗೂ ಇನ್ನಿತರೆ ಉಲ್ಲಂಘನೆಗಳಿಗೆ ಜುಲ್ಮಾನೆಗಳನ್ನು ವಿಧಿಸಲಾಗುವುದು.


ಕರ್ನಾಟಕ ಪೌರಸಭೆಗಳ ಘನತ್ಯಾಜ್ಯ ನಿರ್ವಹಣಾ ಮಾದರಿ ಉಪನಿಯಮಗಳು 2019, ಅಧಿಸೂಚನೆ ಸಂಖ್ಯೆ:ನಅಇ 90 ಸಿಎಸ್‍ಎಸ್ 2018, ಬೆಂಗಳೂರು ದಿನಾಂಕ:-09-10-2019 ನ್ನು ಶಿರಾಳಕೊಪ್ಪ ಪುರಸಭೆ ವ್ಯಾಪ್ತಿಗೆ ಯಥಾವತ್ತಾಗಿ ಅಳವಡಿಸಕೊಳ್ಳಲು ಪುರಸಭೆಯ ಸಾಮಾನ್ಯ ಸಭೆ ದಿನಾಂಕ:-14.07.2022ರಲ್ಲಿ ತೀರ್ಮಾನಿಸಲಾಗಿರುತ್ತದೆ.
ಅದರಂತೆ ಸದರಿ ಮಾದರಿ ಉಪನಿಯಮದ ನಿಯಮಗಳು, ಅಧಿಸೂಚಿ ಗಿII ರಂತೆ ಘನತ್ಯಾಜ್ಯ ನಿರ್ವಹಣೆಯ ಸೇವಾ ಶುಲ್ಕವನ್ನು ಹಾಗೂ ಅಧಿಸೂಚಿ ಗಿIII ರಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು, ಉಗುಳುವುದು, ಸ್ನಾನ ಮಾಡುವುದು, ಮೂತ್ರ ವಿಸರ್ಜನೆ ಮತ್ತು ಬಯಲು ಮಲವಿಸರ್ಜನೆ ಮಾಢಿ ಸಾರ್ವಜನಿಕ ಉಪದ್ರವ ಉಂಟುಮಾಡುವುದಕ್ಕೆ ಹಾಗೂ ಇನ್ನಿತರೆ ಉಲ್ಲಂಘನೆಗಳಿಗೆ ಜುಲ್ಮಾನೆಗಳನ್ನು ವಿಧಿಸಲಾಗುತ್ತದೆ ಎಂದು ಸಾರ್ವಜನಿಕರ ಮಾಹಿತಿಗಾಗಿ ಸದರಿ ಪ್ರಕಟಣೆಯನ್ನು ಹೊರಡಿಸಲಾಗಿದೆ. ಸದರಿ ಮಾದರಿ ಉಪನಿಯಮ ಪ್ರತಿಯನ್ನು ಶಿರಾಳಕೊಪ್ಪ ಪುರಸಭೆಯ ಅಧಿಕೃತ ಜಾಲತಾಣ www.shiralakoppatown.mrc.gov.in ರಲ್ಲಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಯನ್ನು ಪುರಸಭೆ ಕಛೇರಿ ಆರೋಗ್ಯ ವಿಭಾಗವನ್ನು ಸಂಪರ್ಕಿಸಿ ಪಡೆಯಬಹುದಾಗಿದೆ ಎಂದು ಶಿರಾಳಕೊಪ್ಪ ಪುರಸಭೆ ಮುಖ್ಯಾಧಿಕಾರಿ ಹೇಮಂತ್ ಎಸ್ ಡೊಳ್ಳೆ ಅವರು ತಿಳಿಸಿದ್ದಾರೆ.

ಭ್ರಷ್ಟಾಚಾರವೆಂಬ ಕೊಳಕು ಮಂಡಲ

0

ಭ್ರಷ್ಟಾಚಾರ ಎಂಬುದು ಸಮಾಜದ ಅನಿಷ್ಟ ಪದ್ದತಿಗಳಲ್ಲಿ ಒಂದಾಗಿದೆ… ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ ಎಂಬುವುದು ಸರ್ವೇಸಾಮಾನ್ಯ. ಎಲ್ಲಾ ಕ್ಷೇತ್ರಗಳಲ್ಲೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ…

ದಿನನಿತ್ಯ ನಾವು ಮಾಧ್ಯಮಗಳ ಮುಖಾಂತರ ಅನೇಕ ಬೆಳಕಿಗೆ ಬಂದ ಭ್ರಷ್ಟಾಚಾರದ ಪ್ರಕರಣಗಳನ್ನು ನೋಡುತ್ತೇವೆ… ಹೀಗೆ ಬೆಳಕಿಗೆ ಬರದ ಅದೆಷ್ಟೋ ಭ್ರಷ್ಟಾಚಾರದ ಪ್ರಕರಣಗಳು ಮರೆಮಾಚುವೆ…

ಭ್ರಷ್ಟಾಚಾರದಿಂದ ದೇಶದ ಉನ್ನತಿಗೆ ಅಡ್ಡಿ ಉಂಟಾಗುತ್ತದೆ… ನೀವು ಯಾವುದೇ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಿ, ಅದರಲ್ಲಿ ಭ್ರಷ್ಟಾಚಾರ ಎಂಬ ಕೊಳಕು ಪದ್ಧತಿ ಇದ್ದೇ ಇರುತ್ತದೆ…
ಉದಾಹರಣೆಗೆ ಶಿಕ್ಷಣ, ರಾಜುಕೀಯ, ವೈದ್ಯಕೀಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ನಾವು ಭ್ರಷ್ಟಾಚಾರ ಎಂಬ ಕೆಟ್ಟ ಹುಳುವನ್ನು ಕಾಣಬಹುದು…

ಭ್ರಷ್ಟಾಚಾರವು ಎಲ್ಲಾ ಸಮಾಜಗಳಲ್ಲಿಯೂ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಅಡ್ಡಿ ಉಂಟು ಮಾಡುತ್ತಿರುವ ಗಂಭೀರ ಅಪರಾಧವಾಗಿದೆ.

ಸಮಾಜದ ಕೆಟ್ಟ ಹುಳು ಎಂದು ಪ್ರತಿಬಿಂಬಿಸುವ ಭ್ರಷ್ಟಾಚಾರವನ್ನು ಬುಡ ಸಮೇತ ಕಿತ್ತು ಹಾಕಲು… ಮತ್ತು ಭ್ರಷ್ಟಾಚಾರದ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವಸಂಸ್ಥೆ 2003 ರ ಡಿಸೆಂಬರ್ 9 ಈ ದಿನದಂದು ಅಂತರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ ಎಂದು ಘೋಷಿಸಿತು.

ಇಷ್ಟಾದರೂ ಕೂಡ ಭ್ರಷ್ಟಾಚಾರ ಇನ್ನೂ ಕೊನೆಗಾಣದೇ ಇರುವುದು ವಿಷಾಧಕರ ಸಂಗತಿ…

  • ರಚನಾ.ಕೆ. ಆರ್

ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮಾಂಡೌಸ್ ಚಂಡಮಾರುತ ಪರಿಣಾಮ

0

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮಾಂಡೌಸ್ ಚಂಡಮಾರುತ ಇನ್ನಷ್ಟು ತೀವ್ರತೆಯನ್ನು ಉಂಟುಮಾಡಿದೆ. ಈ ತೀವ್ರತೆಯಿಂದ ದೇಶದ ಅನೇಕ ರಾಜ್ಯದಲ್ಲಿ ಭಾರಿ ಮಳೆ ಆಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮಾಂಡೌಸ್ ಚಂಡಮಾರುತದ ಪ್ರಭಾವದಿಂದ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಡಿಸೆಂಬರ್ 10ರಿಂದ 12ರವರೆಗೆ ಕು ಸಹಿತ ಬಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಕರ್ನಾಟಕದ ಜಿಲ್ಲೆಗಳಾದ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಇನ್ನು ಅನೇಕ ಕಡೆ ಮಳೆ ಆಗುವ ಸಾಧ್ಯತೆ ಇದೆ. ಆದ್ದರಿಂದ ಇಷ್ಟು ಜಿಲ್ಲೆಗಳಿಗೆ 3ದಿನ ಎಲ್ಲೋ ಅಲರ್ಟ್ ಆಗಿದೆ ಘೋಷಿಸಲಾಗಿದೆ.

ಏಕಬಳಕೆ ಪ್ಲಾಸ್ಟಿಕ್ ಉತ್ಪಾದನೆ,ದಾಸ್ತಾನು ವಿತರಣೆ ನಿಷೇಧ-ಹೇಮಂತ್ ಎಸ್ ಡೊಳ್ಳೆ

0

ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯ 2021ರ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ತಿದ್ದುಪಡಿ ನಿಯಮಗಳ ಅಧಿಸೂಚನೆ ಅಉ-ಆಐ-ಇ-12082021-228947 ನವದೆಹಲಿ, ದಿನಾಂಕ:-12.08.2021 ರಂತೆ 2022ರ ಜುಲೈ 1 ರಿಂದ ಜಾರಿಗೆ ಬರುವಂತೆ ಪಾಲಿಸ್ಟೈರೀನ್ ಮತ್ತು ಪಾಲಿಸ್ಟೈರೀನ್ ನಿಂದ ತಯಾರಿಸಿದ ಉತ್ಪನ್ನಗಳು ಮತ್ತು ಏಕ ಬಳಕೆ ಪ್ಲಾಸ್ಟಿಕ್ ಈ ಕೆಳಕಂಡ ಪ್ಲಾಸ್ಟಿಕ್ ಉತ್ಪನ್ನಗಳ ಉತ್ಪಾದನೆ, ಆಮದು, ದಾಸ್ತಾನು, ವಿತರಣೆ, ಮಾರಾಟ ಮತ್ತು ಬಳಕೆಯನ್ನು ನಿಷೇ ಧಿಸಲಾಗಿದೆ.

ಪ್ಲಾಸ್ಟಿಕ್ ಕಡ್ಡಿಗಳನ್ನು ಒಳಗೊಂಡಿರುವ ಕಿವಿಯ ಕೊಳೆ ತೆಗೆಯುವ ಇಯರ್ ಬಡ್ಸ್, ಬಲೂನ್ ಗಳಲ್ಲಿನ ಪ್ಲಾಸ್ಟಿಕ್ ಕಡ್ಡಿಗಳು, ಪ್ಲಾಸ್ಟಿಕ್ ಧ್ವಜಗಳು, ಕ್ಯಾಂಡಿ ಕಡ್ಡಿಗಳು, ಐಸ್‍ಕ್ರೀಮ್ ಕಡ್ಡಿಗಳು, ಅಲಂಕಾರಕ್ಕೆ ಬಳಸುವ ಪಾಲಿಸ್ಟೈರೀನ್ ಮತ್ತು ಪ್ಲೇಟ್‍ಗಳು, ಕಪ್‍ಗಳು, ಗ್ಲಾಸ್‍ಗಳು, ಕಟ್ಲರಿ ಚಮಚ, ಚಾಕು, ಸ್ಟ್ರಾ, ಟ್ರೇಗಳು, ಸಿಹಿ ತಿನಿಸುಗಳ ಬಾಕ್ಸ್ ಗಳ ಮೇಲಿನ ಹೊದಿಕೆ, ಆಹ್ವಾನ ಪತ್ರಿಕೆ ಮತ್ತು ಸಿಗರೇಟು ಪ್ಯಾಕೆಟ್, 100 ಮೈಕ್ರಾನ್ ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಅಥವಾ ಪಿವಿಸಿ ಬ್ಯಾನರ್ ಗಳು, ಸ್ಟಿಕ್ಕರ್ಸ್ ಗಳನ್ನು ಶಿರಾಳಕೊಪ್ಪ ಪುರಸಭೆ ವ್ಯಾಪ್ತಿಯಲ್ಲಿ ಮೇಲ್ಕಂಡ ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳ ಉತ್ಪಾದನೆ, ಆಮದು, ದಾಸ್ತಾನು, ವಿತರಣೆ, ಮಾರಾಟ ಮತ್ತು ಬಳಕೆ ಮಾಡುವವರಿಗೆ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಿರಾಳಕೊಪ್ಪ ಪುರಸಭೆ ಮುಖ್ಯಾಧಿಕಾರಿ ಹೇಮಂತ್ ಎಸ್ ಡೊಳ್ಳೆ ಅವರು ತಿಳಿಸಿದ್ದಾರೆ.

ಸರ್ಕಾರದ ಆಸ್ತಿ ನಮ್ಮ ಆಸ್ತಿ

0

ನಮ್ ಜನರಿಗೆ ಸಾರ್ವಜನಿಕರ ಆಸ್ತಿ ಅಂದ್ರೇ, ತುಂಬಾ ಪ್ರೀತಿ ಜಾಸ್ತಿ ಅನ್ಸುತ್ತೆ… ಅಲ್ವಾ…!

ಯಾಕ್ ಈ ತರ ಹೇಳ್ತಾ ಇದೀನಿ ಅಂದ್ರೆ, ಸಾರ್ವಜನಿಕ ಸ್ಥಳಗಳಾದ ಸಾರ್ವಜನಿಕ ಶೌಚಾಲಯ, ಬಸ್ ಸ್ಟ್ಯಾಂಡ್ ಈ ಸ್ಥಳಗಳಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸುತ್ತಾರೆ… ಏನಿದು ಕಲಾಕೃತಿ ಅಂತ ಯೋಚಿಸುತ್ತಿದ್ದೀರಾ…

ಅದೇನು ಅಂದ್ರೆ ನಮ್ ಜನಗಳಿಗೆ ಚೆನ್ನಾಗಿರುವ ಸ್ಥಳಗಳನ್ನು ನೋಡಿದ್ರೆ, ಅದನ್ನ ಹೇಗಾದರೂ ಹಾಳು ಮಾಡಬೇಕೆಂಬ ಮನಸ್ಥಿತಿಯೇನೋ, ಬಸ್ಟಾಂಡ್ ಗೋಡೆಗಳ ಮೇಲೆ ತಮ್ಮದೇ ಆದ ಕಲಾ ಕೃತಿಗಳನ್ನು ಚಿತ್ರಿಸಿರುತ್ತಾರೆ…

ಅಷ್ಟೇ ಅಲ್ಲ ಬಸ್ಟಾಂಡ್ ಗೋಡೆಗಳ ಮೇಲೆ ತಂಬಾಕಿನ ಉಗುಳುವಿಕೆಯ ನಾನಾ ಕಲಾಕೃತಿಗಳು ಮೂಡಿಬಂದಿರುತ್ತವೆ. ಕೆಲವು ಜನಗಳಿಗೊಂತು ತಮ್ಮ ದಲ್ಲದ ಸ್ಥಳಗಳ ಬಗ್ಗೆ ಒಂದು ಚೂರು ಕಾಳಜಿನೇ ಇರೋದಿಲ್ಲ ಅಲ್ವಾ…!

ತಮ್ಮ ಮನಸ್ಸಿಗೆ ಬಂದಂತೆ ಕಲಾಕೃತಿಗಳನ್ನು ಗೋಡೆ ಮೇಲೆ ಕೆತ್ತಿ ತಮ್ಮ ಪ್ರೇಮಕಹಾನಿಗಳನ್ನು ಬಿಂಬಿಸಿರುತ್ತಾರೆ. ಸಿಕ್ಕಿದ ಕಡೆ ಕಸ ಹಾಕುವುದು. ಸಿಕ್ಕ ಕಡೆ ಎಂದು ತಂಬಾಕನ್ನು ಉಗುಳುವುದು. ಇದೇ ಆಗಿ ಹೋಗಿದೆ…

ಸಾರ್ವಜನಿಕ ಬಸ್ ಸ್ಟ್ಯಾಂಡ್ ಗಳಂತೂ ಅಬ್ಬಬ್ಬಾ…!
ಒಮ್ಮೊಮ್ಮೆ ಅನ್ಸಿಬಿಡುತ್ತೆ, ಅದು ಬಸ್ಟ್ಯಾಂಡೋ ಅಥವಾ ಮೋರಿಗುಂಡಿಯೋ? ಅಲ್ಲಿರುವ ಸಾರ್ವಜನಿಕ ಶೌಚಾಲಯಕ್ಕೆ ನರಕ ಲೋಕದಲ್ಲಿ ಇದ್ದಿವೋ ಅಥವಾ ಶೌಚಾಲಯದಲ್ಲಿ ಇದ್ದಿವೋ ಒಂದು ಕ್ಷಣ ಯಾವುದು ತಿಳಿಯುವುದಿಲ್ಲ…
ಅಷ್ಟರಮಟ್ಟಿಗೆ ಜನರು ಕೊಳಕು ಮಾಡಿರುತ್ತಾರೆ. ಇದರಿಂದ ಇನ್ನೊಬ್ಬರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುತ್ತೆ ಅನ್ನುವ ಪರಿಜ್ಞಾನವೂ ಕೂಡ ಅವರಲ್ಲಿ ಇರೋದಿಲ್ಲ ಅನ್ಸುತ್ತೆ. ಅಷ್ಟರಮಟ್ಟಿಗೆ ಜನ ಸಾರ್ವಜನಿಕ ಸ್ಥಳಗಳ ಮೇಲೆ ಗೌರವ ತೋರಿಸುತ್ತಾರೆ ನೋಡಿ…

ಇನ್ಮೇಲಾದ್ರೂ ನಮ್ ಜನಗಳು ಸಾರ್ವಜನಿಕ ಆಸ್ತಿ ನಮ್ಮೆಲ್ಲರ ಆಸ್ತಿ ಎಂದು ಅರಿತು, ಸ್ವಚ್ಛತೆಗೆ ಸಹಕರಿಸಿ…

  • ರಚನಾ.ಕೆ. ಆರ್