Saturday, August 8, 2026
Saturday, August 8, 2026
Home Blog Page 136

Art of Living in Bangalore ಆರ್ಟ್ ಆಫ್ ಲಿವಿಂಗ್ ಎಂದರೆ ಒಂದು ತತ್ವ. ಜೀವನದಲ್ಲಿ ಪೂರ್ಣವಾಗಿ ಬದುಕುವ ತತ್ವಶಾಸ್ತ್ರ.- ಶ್ರೀರವಿ ಶಂಕರ್ ಗುರೂಜಿ

0

Art of Living in Bangalore ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಆಯೋಜಿಸಿದ್ದ ಸಮಾಜದ ಗಣ್ಯ ವ್ಯಕ್ತಿಗಳ ಭೇಟಿ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರತಿನಿಧಿಗಳು ಭೇಟಿ ಮಾಡಿ ಶ್ರೀ ರವಿಶಂಕರ್ ಗುರೂಜಿ ಅವರೊಂದಿಗೆ ಸಮಾಲೋಚನೆ ನಡೆಸಿದರು.
ಆರ್ಟ್ ಆಫ್ ಲಿವಿಂಗ್ ಫೌಂಡೇಷನ್ ಸಂಸ್ಥಾಪಕ ಶ್ರೀ ರವಿಶಂಕರ್ ಮಾತನಾಡಿ, ಆರ್ಟ್ ಆಫ್ ಲಿವಿಂಗ್ ಒಂದು ತತ್ವ. ಜೀವನವನ್ನು ಪೂರ್ಣವಾಗಿ ಬದುಕುವ ತತ್ವಶಾಸ್ತ್ರ. ಮೂಲ ಮೌಲ್ಯವೆಂದರೆ ನಮ್ಮೊಳಗೆ ಶಾಂತಿಯನ್ನು ಕಂಡುಕೊಳ್ಳುವುದು ಮತ್ತು ನಮ್ಮ ಸಮಾಜದಲ್ಲಿ ವಿಭಿನ್ನ ಸಂಸ್ಕೃತಿಗಳು, ಸಂಪ್ರದಾಯಗಳು, ಧರ್ಮಗಳು, ರಾಷ್ಟ್ರೀಯತೆಗಳ ಜನರನ್ನು ಒಂದುಗೂಡಿಸುವುದು ಎಂದು ಹೇಳಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಲಕ್ಷಾಂತರ ಜನರ ಮೇಲೆ ಪ್ರಭಾವ ಬೀರಿದೆ. ಶಿವಮೊಗ್ಗದಲ್ಲಿ ಆರ್ಟ್ ಆಫ್ ಲಿವಿಂಗ್ ಪ್ರಬಲ ಅಸ್ತಿತ್ವ ಹೊಂದಿದ್ದು, ಒತ್ತಡ ಕಡಿಮೆ ಮಾಡುವ ಸುದರ್ಶನ ಕ್ರಿಯಾ ತಂತ್ರದ ಸುತ್ತ ಕೇಂದ್ರೀಕೃತವಾದ ಪರಿವರ್ತನಾ ಕೋರ್ಸ್ ಗಳನ್ನು ಒದಗಿಸುವ ಯೋಗ, ಧ್ಯಾನ ಮತ್ತು ಸೇವಾ ಯೋಜನೆಗಳಿಗಾಗಿ ತರಗತಿಗಳು, ಸಕ್ರಿಯ ಶಾಖೆಗಳನ್ನು ಒಳಗೊಂಡಿದೆ ಎಂದರು.
ಶಿವಮೊಗ್ಗ ಶಾಖೆಯ ಸ್ವಯಂಸೇವಕ, ರಾಜ್ಯ ಶಿಕ್ಷಕ ಸಂಯೋಜಕ ಮೂರ್ತಿ ಮಾತನಾಡಿ, ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಆಧಾರಿತ, ಲಾಭರಹಿತ, ಮಾನವೀಯ ಮತ್ತು ಶೈಕ್ಷಣಿಕ ಸರ್ಕಾರೇತರ ಸಂಸ್ಥೆ ಆಗಿದ್ದು, ಒತ್ತಡ-ಮುಕ್ತ ಮತ್ತು ಹಿಂಸಾಚಾರ ಮುಕ್ತ ಸಮಾಜವನ್ನು ಸೃಷ್ಟಿಸುವ ದೃಷ್ಟಿಕೋನ ಹೊಂದಿದೆ ಎಂದರು.
Art of Living in Bangalore ನಿಯೋಗದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ, ಶಕ್ತಿ ಇನ್ ಕಾರ್ಪೋರೇಷನ್ ಸಂಸ್ಥೆಯ ಶಿಲ್ಪಾ ಗೋಪಿನಾಥ್, ಶಿವಮೊಗ್ಗ ಶಾಖೆಯ ಸ್ವಯಂಸೇವಕ ಶಿಕ್ಷಕ ಪ್ರಕಾಶ್, ಮಂಜುನಾಥ್, ಸಂದೀಪ್, ಶಿವಮೊಗ್ಗ ಜಿಲ್ಲೆಯ ವಿವಿಧ ಗಣ್ಯರು ಭಾಗವಹಿಸಿದ್ದರು.

CM Siddharamaiah ಬೀದರ್ ನಲ್ಲಿ 4೦ನೇ ರಾಜ್ಯ ಕಾರ್ಯನಿರತ ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಮುಖ್ಯಮಂತ್ರಿಗಳಿಂದ ಚಾಲನೆ

0

CM Siddharamaiah ಸೂಫಿ ಸಂತರ ನಾಡು ಬೀದರ್ ನಲ್ಲಿ ಇಂದು ಮತ್ತು ನಾಳೆ ನಡೆಯುತ್ತಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನದ ಉದ್ಘಾಟನೆಗೂ ಮುನ್ನ ಬೀದರ್ ನಗರದಲ್ಲಿ ಸಮ್ಮೇಳನ ಮೆರವಣಿಗೆ ನಡೆಯಿತು.

ಬೀದರ್ ನಗರದ ಬಸವೇಶ್ವರ ವೃತ್ತದಲ್ಲಿ ಬೈಲಹೊಂಗಲದ ಶ್ರೀ ನಿಜಗುಣಾನಂದ ಸ್ವಾಮೀಜಿ, ಪೌರಾಡಳಿತ ಸಚಿವ ರಹೀಂ ಖಾನ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸೇರಿದಂತೆ ಹಲವು ಗಣ್ಯರು ಶಾಂತಿ ಸಂದೇಶವಾಗಿ ಪಾರಿವಾಳ ಹಾರಿ ಬಿಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಈ ವೇಳೆ ಮೆರವಣಿಗೆಯನ್ನುದ್ದೇಶಿಸಿ ಬೈಲಹೊಂಗಲದ ಶ್ರೀನಿಜಗುಣಾನಂದ ಸ್ವಾಮೀಜಿ ಮಾತನಾಡಿದರು. ರಾಜ್ಯದ ತುತ್ತ ತುದಿಯಲ್ಲಿರುವ ಬೀದರ್ ಜಿಲ್ಲೆ ಕರ್ನಾಟಕದ ಕಿರೀಟ. ಸೂಫಿ ಸಂತರು ನೆಲೆಸಿದ್ದ ಊರು. ಇಂತಹ ಪುಣ್ಯ ಭೂಮಿಯಲ್ಲಿ ಪತ್ರಕರ್ತರ ರಾಜ್ಯ ಸಮ್ಮೇಳನ ನಡೆಯುತ್ತಿರುವುದು ತುಂಬಾ ವಿಶೇಷವಾಗಿದೆ. ಆ ಮೂಲಕ ಪತ್ರಕರ್ತರ ಲೇಖನಿಯು ಇಲ್ಲಿನ ಜನರ ಕುಂದು ಕೊರತೆಗಳ ಮೇಲೆ ಹೆಚ್ಚು ಬೆಳಕು ಚೆಲ್ಲುವುದರ ಮೂಲಕ ಈ ನೆಲಕ್ಕೆ ಶಾಂತಿ, ನೆಮ್ಮದಿ, ಸುಖ-ಸಮೃದ್ದಿ ಸಿಗುವಂತಾಗಲಿ ಎಂದರು.

ಸಮಾಜದಲ್ಲಿ ಪತ್ರಕರ್ತರ ಹೊಣೆಗಾರಿಕೆ ದೊಡ್ಡದು. ಅವರುಸಮಾಜವನ್ನು ಸದಾ ಎಚ್ಚರಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ. ಬದಲಾದ ಸಂದರ್ಭದಲ್ಲಿ ಮಾಧ್ಯಮವು ಕೂಡ ಕೆಲವರ ಹಿಡಿತಕ್ಕೆ ಸಿಲುಕಿ ಸಮಾಜದ ಹೊಣೆಗಾರಿಕೆಯಿಂದ ಜಾರಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಪತ್ರಕರ್ತರ ಈ ರಾಜ್ಯ ಸಮ್ಮೇಳನವು ಈ ಹೊಣೆಗಾರಿಕೆ ಬಗ್ಗೆ ಹೆಚ್ಚು ಅವಲೋಕನ ನಡೆಸಿಬೇಕಿದೆ ಎಂದರು.

CM Siddharamaiah ಡೊಳ್ಳು ಕುಣಿತ, ಬಂಜಾರ ಮಹಿಳೆಯರ ವಿಶೇಷ ಕುಣಿತ, ಬಸವಣ್ಣ ಹಾಗೂ ಡಿ.ವಿ.ಗುಂಡಪ್ಪ ಭಾವಚಿತ್ರ ಹೊತ್ತಿದ್ದ ಸಾರೋಟ ಹಾಗೂ ಆರ್ಕೇಸ್ಟ್ರಾ ಮೂಲಕ ಬಸವೇಶ್ವರ ವೃತ್ತದಿಂದ ಹೊರಟ ಮೆರವಣಿಗೆಯೂ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ, ಸಮ್ಮೇಳನನಡೆಯುತ್ತಿರುವ ಝೀರಾ ಕನ್ವೆನ್ಷನ್ ಹಾಲ್ ತಲುಪಿತು.

ಈ ಮೆರವಣಿಗೆಯಲ್ಲಿ ಎಲ್ಲ ತಾಲೂಕುಗಳಿಂದ 80ಕ್ಕೂ ಹೆಚ್ಚು ಪತ್ರಕರ್ತರು ಭಾಗವಹಿಸಿದ ಶಿವಮೊಗ್ಗ ಜಿಲ್ಲೆಯ ಪತ್ರಕರ್ತರ ತಂಡವೂ ಗಮನ ಸೆಳೆಯಿತು.

ವ್ಯಕ್ತಿತ್ವ ವಿಕಸನಕ್ಕೆ ಭಕ್ತಿಮಾರ್ಗದ ಅನುಸರಣೆ ಅಗತ್ಯ- ಎಸ್.ಎಸ್.ಜ್ಯೋತಿ ಪ್ರಕಾಶ್

0

ಶ್ರೀರಾಮನ ಆದರ್ಶಗಳು ಎಂದೆಂದಿಗೂ ಪ್ರಸ್ತುತ. ವಿದ್ಯೆಯನ್ನು ಕಲಿಯಬೇಕೆಂದರೆ ಗುರುಗಳನ್ನು ನಾವು ಅನುಸರಿಸಿದಾಗ ಯಶಸ್ಸು ದೊರಕುತ್ತದೆ ಎಂದು ಶ್ರೀ ಶಿವಗಂಗಾ ಯೋಗ ಕೇಂದ್ರದ ಪ್ರಮುಖ ಎಸ್.ಎಸ್.ಜ್ಯೋತಿಪ್ರಕಾಶ್ ಹೇಳಿದರು.

ಶಿವಮೊಗ್ಗ ನಗರದ ಶ್ರೀ ಶಿವಗಂಗಾ ಯೋಗಕೇಂದ್ರದ ರಾಘವ ಶಾಖೆಯಿಂದ ಆಯೋಜಿಸಿದ್ದ ರಾಮನವಮಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವ್ಯಕ್ತಿ ವಿಕಸನಕ್ಕೆ ಇಂತಹ ಭಕ್ತಿ ಮಾರ್ಗವನ್ನು ಎಲ್ಲರೂ ಅನುಸರಿಸಬೇಕು. ಶ್ರೀ ಶಿವಗಂಗಾ ಯೋಗ ಕೇಂದ್ರದ ಗುರುಗಳು ಯೋಗಕ್ಕಾಗಿ ಜೀವನವನ್ನು ಮುಡಿಪಾಗಿಟ್ಟು ಆದರ್ಶವನ್ನು ಮೆರೆಯುತ್ತಿದ್ದಾರೆ ಎಂದು ತಿಳಿಸಿದರು.

ಯೋಗ ಶಿಕ್ಷಕ ಹರೀಶ್ ಮಾತನಾಡಿ, ರಾಮನ ಗುಣಗಳನ್ನು ನಾವು ಅಳವಡಿಸಿಕೊಂಡರೆ ನಮ್ಮ ಜೀವನ ಸುಗಮವಾಗುತ್ತದೆ. ಇಂದಿಗೂ ರಾಮನ ತತ್ವ ಆದರ್ಶ ಗುಣಗಳು ದಾರಿದೀಪವಾಗಿವೆ ಎಂದರು.

ರಾಮ ನವಮಿ ಪ್ರಯುಕ್ತ ರಾಘವ ಶಾಖೆಯ ಯೋಗ ಶಿಕ್ಷಣಾರ್ಥಿಗಳಿಂದ ಶ್ರೀರಾಮನಿಗೆ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿ ಭಜನೆಗಳನ್ನು ಹಾಡಿ ಯೋಗ ಪ್ರಾಣಾಯಾಮ ಧ್ಯಾನದ ಅಭ್ಯಾಸದಿಂದ ಶ್ರೀರಾಮನಿಗೆ ಭಕ್ತಿಯನ್ನು ಸಮರ್ಪಿಸಲಾಯಿತು.

ಯೋಗ ಶಿಕ್ಷಕ ಜಿ.ಎಸ್.ಓಂಕಾರ್ ಮಾತನಾಡಿ ಸಂಸ್ಕಾರ, ಸನ್ಮಾರ್ಗ, ಆಧ್ಯಾತ್ಮ ಹಾಗೂ ರಾಮ ನವಮಿಯ ಮಹತ್ವ ತಿಳಿಸಿಕೊಟ್ಟರು. ಹಿರಿಯ ಯೋಗಪಟು ಸುಬ್ರಮಣಿ ಅವರು ಯೋಗ ಮಾಡುವ ಸ್ಥಳದಲ್ಲಿ ಫೋಟೋವನ್ನು ಅನಾವರಣಗೊಳಿಸಿದರು.

ಶಿಕ್ಷಕ ವಿಜಯ ಕೃಷ್ಣ ಅವರು ಶ್ರೀರಾಮನಿಗೆ ಭಕ್ತಿಯಿಂದ ಪ್ರಾರ್ಥಿಸಿದರು. ಪಾನಕ, ಕೋಸಂಬರಿ ಫಲ ಸಿಹಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಸುಜಾತ, ಗಾಯತ್ರಿ, ಶ್ರೀನಿವಾಸ್, ನರಸೋಜಿರಾವ್, ಮಹೇಶ್, ಸೌಮ್ಯ, ಲತಾ, ಶೈಲಜಾ, ಶೋಭಾ, ದೀಪಕ್ ಹಾಗೂ ಯೋಗಪಟುಗಳು ಉಪಸ್ಥಿತರಿದ್ದರು.

ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವುದು ತಾಯಂದಿರ ಕರ್ತವ್ಯ- ಗಂಗಾಬಾಯಿ

0

ತಾಯಿ ಮತ್ತು ಮಗುವಿನ ಆರೋಗ್ಯ ಬಹಳ ಮುಖ್ಯ ಹಾಗಾಗಿ ಅವರಲ್ಲಿ ಅಪೌಷ್ಟಿಕತೆ ನಿವಾರಣೆ ಮಾಡಿ ಪೌಷ್ಟಿಕತೆಯ ಆಹಾರಗಳನ್ನು ನೀಡುತ್ತಾ, ಅವರಿಗೆ ಶಕ್ತಿ ತುಂಬುವುದು ಎಲ್ಲ ತಾಯಂದಿರ ಕರ್ತವ್ಯ ಎಂದು ಶ್ರೀಮತಿ ಗಂಗಾಬಾಯಿ ಶಿಶು ಅಭಿವೃದ್ಧಿಯ ಯೋಜನಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನೆ ಶಿವಮೊಗ್ಗ ಅವರು ತಿಳಿಸಿದರು.
ಅವರು ಭಾರತ ಸರ್ಕಾರದ ಕೇಂದ್ರ ಸಂವಹನ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ಶಿವಮೊಗ್ಗ. ಇವರ ಸಹಯೋಗದಲ್ಲಿ ಪೋಷಣ್ ಪಕ್ವಾಡ 2026 ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ತಾಯಿ ಮತ್ತು ಮಗುವಿನ ರಕ್ಷಣೆಗೆ ನಾವೆಲ್ಲರೂ ಪೌಷ್ಟಿಕಾಂಶ ಇರುವ ಒಳ್ಳೆಯ ಆಹಾರವನ್ನು ಸರಿಯಾದ ರೀತಿಯಲ್ಲಿ ನೀಡುವುದರೊಂದಿಗೆ ತಾಯಿ ಆರೋಗ್ಯ ಹಾಗೂ ಮಗುವಿನ ಬೆಳವಣಿಗೆ ಕುರಿತಂತೆ ನಾವೆಲ್ಲರೂ ಗಮನಹರಿಸಬೇಕಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀಮತಿ ಅಕ್ಷಯ ಅವರು ಮಾತನಾಡಿ ಇಲಾಖೆಯ ವತಿಯಿಂದ ಮಗುವಿನ ಬೆಳವಣಿಗೆಗೆ ಹಾಗೂ ತಾಯಿ ಆರೋಗ್ಯದ ರಕ್ಷಣೆಗಾಗಿ ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಕುರಿತಂತೆ ವಿವರಣೆ ನೀಡಿದರು.

ಈ ಪೋಷಣ ಪಕ್ವಾಡ ಕಾರ್ಯಕ್ರಮ ಏಪ್ರಿಲ್ 9 ರಿಂದ ಏಪ್ರಿಲ್ 23ರ ವರೆಗೆ ನಡೆಯಲಿದೆ .
ಈ ಕಾರ್ಯಕ್ರಮದಲ್ಲಿ ಶ್ರೀ ಸಿ ವಿ ಲಕ್ಷ್ಮಿಕಾಂತ ಕ್ಷೇತ್ರ ಪ್ರಚಾರ ಸಹಾಯಕರು ,ಕೇಂದ್ರ ಸಂವಹನ ಇಲಾಖೆ, ಹಾಗೂ ಶಿಶು ಅಭಿವೃದ್ಧಿ ಯೋಜನೆಯ ಹಿರಿಯ ಮೇಲ್ವಿಚಾರಕಿಯರಾದ ಶ್ರೀಮತಿ ರೇಖಾ,ಶ್ರೀಮತಿ ಆಶಾ, ಶ್ರೀಮತಿ ಪ್ರತಿಮಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸಾರ್ವಜನಿಕ ಮಹಿಳೆಯರು ಭಾಗವಹಿಸಿದ್ದರು.

ನೀನಾಸಂ ಶಿಬಿರಕ್ಕೆ ಏಪ್ರಿಲ್ 20 ಕೊನೆಯ ದಿನಾಂಕ. ಆನ್ ಲೈನ್ ಮೂಲಕ ಹೆಚ್ಚು ಅರ್ಜಿ ಬಂದಲ್ಲಿ ಮುನ್ನವೇ ಪ್ರವೇಶ ಕೋರಿಕೆ ಅಸ್ವೀಕಾರ.

0

ಕಳೆದ ಎರಡೂವರೆ ದಶಕಗಳಿಂದ ರಂಗತರಬೇತಿ ನಡೆಸುತ್ತಿರುವ ನೀನಾಸಮ್ ರಂಗಶಿಕ್ಷಣ ಕೇಂದ್ರವು ಇದೇ 2026 ಮೇ 11ರಿಂದ 31ರ ವರೆಗೆ 21 ದಿನಗಳ ರಂಗತರಬೇತಿ ಶಿಬಿರವೊಂದನ್ನು ನಡೆಸುತ್ತಿದೆ. ಈ ಶಿಬಿರದಲ್ಲಿ ರಂಗಶಿಕ್ಷಣ ಕೇಂದ್ರದ ಅಧ್ಯಾಪಕರು ಮತ್ತು ಅತಿಥಿ ಅಧ್ಯಾಪಕರು ತರಬೇತಿ ನಡೆಸಿಕೊಡುತ್ತಾರೆ. ರಂಗಮಾಧ್ಯಮದ ಪ್ರಾಯೋಗಿಕ ಮತ್ತು ಸೈದ್ಧಾಂತಿಕ ವಿಚಾರಗಳ ಬಗ್ಗೆ ಈ ಶಿಬಿರದಲ್ಲಿ ಮಾಹಿತಿಗಳನ್ನು ನೀಡುವ ಜತೆಗೆ ಶಿಬಿರಾರ್ಥಿಗಳಿಗೆ ನುರಿತ ನಿರ್ದೇಶಕರಿಂದ ರಂಗನಾಟಕ ಪ್ರಯೋಗಗಳನ್ನೂ ಮಾಡಿಸಲಾಗುತ್ತದೆ. ಈ ಶಿಬಿರವು ರಂಗಭೂಮಿಯನ್ನು ಪ್ರವೇಶಿಸಬಯಸುವ ಹೊಸಬರಿಗೆ ಮತ್ತು ರಂಗಭೂಮಿಯಲ್ಲಿ ಅನುಭವವಿದ್ದು ಅದನ್ನು ಬೆಳೆಸಿಕೊಳ್ಳಲು ಬಯಸುವವರಿಗೆ ಉಪಯುಕ್ತವಾಗುತ್ತದೆ.

ಅರ್ಜಿ ಸಲ್ಲಿಸಲು ಕಡೆಯ ದಿನಾಂಕ: 20 ಏಪ್ರಿಲ್ 2026
ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬಂದ ಪಕ್ಷದಲ್ಲಿ ಆನ್-ಲೈನ್ ಅರ್ಜಿ ಸೌಲಭ್ಯವನ್ನು ಈ ದಿನಾಂಕಕ್ಕೆ ಮೊದಲೇ ಮುಚ್ಚಲಾಗುತ್ತದೆ.

ಶಿವಮೊಗ್ಗದ ಬಾಡಿಗೆ ಕೊಠಡಿಯಲ್ಲಿ ಪುರುಷನ ಶವ ಪತ್ತೆ. ಪೊಲೀಸ್ ಪ್ರಕಟಣೆ

0

ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಮನೆ 2ನೇ ಕ್ರಾಸ್ ವೆಂಕಟೇಶ್ವರ ನಿಲಯದ ಬಾಡಿಗೆ ರೂಂ ನಂ. 06 ರಲ್ಲಿ 13 ತಿಂಗಳಿನಿಂದ ವಾಸವಾಗಿದ್ದ ಸುಮಾರು 65 ವರ್ಷದ ರಾಮಚಂದ್ರ ರಾವ್ ಎಂಬುವವರ ಶವ ಪತ್ತೆಯಾಗಿದೆ.

ಈತನ ವಾರಸುದಾರರು ಯಾರು ಇರದೆ ಪಾರ್ಕ್ ಬಡಾವಣೆಯ ಕಾರ್ತಿಕ್ ಭವನ ಹೋಟೆಲ್ ಹಾಗೂ ಕುವೆಂಪು ರಸ್ತೆಯ ಪಾಕಶಾಲೆ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದರು.
ಈ ಮೃತನ ಚಹರೆ 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡುಮುಖ ಹೊಂದಿರುತ್ತಾರೆ. ಈ ಮೃತ ವ್ಯಕ್ತಿಯ ವಾರಸುದಾರರು ಇದ್ದಲ್ಲಿ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-221414/ 9916882544 ಗಳನ್ನು ಸಂಪರ್ಕಿಸುವಂತೆ ಪೊಲೀಸ್ ತಿಳಿಸಿದೆ.

S.N. Channabasappa ಶಾಸಕರಿಗೆ ನೀಡುವ ಅನುದಾನದಲ್ಲಿ ಪ್ರತೀ ವರ್ಷ ₹10 ಲಕ್ಷ ವಿಶೇಷಚೇತನರ ಅಭಿವೃದ್ಧಿಗೆ ನೀಡುವೆ- ಶಾಸಕ ಎಸ್.ಎನ್.ಚನ್ನಬಸಪ್ಪ

0

S.N. Channabasappa ವಿಶೇಷಚೇತನರ ಸಾಧನೆಗಳು ಕೂಡ ವಿಶೇಷವಾಗಿದ್ದು, ಅವರ ಸಾಧನೆಗಳನ್ನು ಉತ್ತೇಜಿಸಿ, ಅವರಲ್ಲಿ ಆತ್ಮಸ್ಥೆöÊರ್ಯವನ್ನು ತುಂಬಬೇಕು ಎಂದು ಶಾಸಕರಾದ ಎಸ್ ಎನ್ ಚನ್ನಬಸಪ್ಪ ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಐಕ್ಯೂಎಸಿ ಮಾರ್ಗದರ್ಶನದಲ್ಲಿ ಸಬಲ ವಿಶೇಷಚೇತನರ ಸಬಲೀಕರಣ ಕೋಶ, ಸಿಬಿಆರ್ ಕಾನೂನು ಕಾಲೇಜು ಮತ್ತು ದಿವ್ಯಾಂಗರ ಸಬಲೀಕರಣಕ್ಕಾಗಿ ಸಮರ್ಪಿತ ಸಕ್ಷಮ್ ಸಂಸ್ಥೆ ಹಾಗೂ ಸಿಸಿಪಿಡಿ, ನವವದೆಹಲಿ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ-2016’ರ ಕುರಿತು ಏರ್ಪಡಿಸಲಾಗಿದ್ದ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ 9 ಲಕ್ಷ ವಿಶೇಷಚೇತನರಿದ್ದಾರೆ. ಅವರ ಶ್ರೇಯೋಭಿವೃದ್ದಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ನೀಡುತ್ತಾ ಬಂದಿದೆ. ನಮ್ಮ ಜಿಲ್ಲೆಯಲ್ಲಿ 23,200 ವಿಶೇಷಚೇತನರು ಇದ್ದು, ಇವರ ಅಭಿವೃದ್ದಿ ಮೊದಲು ನಮ್ಮ ಜಿಲ್ಲೆಯಿಂದಲೇ ಶುರುವಾಗಬೇಕು. ಈ ನಿಟ್ಟಿನಲ್ಲಿ ನಾವೇಲ್ಲೂರು ಶ್ರಮಿಸೋಣ ಎಂದ ಅವರು ತಮ್ಮ ಅನುದಾನದಲ್ಲಿ ಪ್ರತಿ ವರ್ಷ ವಿಶೇಷಚೇತನರ ಅಭಿವೃದ್ದಿಗಾಗಿ ರೂ.10 ಲಕ್ಷ ನೀಡಲಾಗುವುದು ಎಂದು ಭರವಸೆ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ.ಎಸ್ ಮಾತನಾಡಿ, ವಿಕಲಚೇತನ ವ್ಯಕ್ತಿಗಳ ಕಾನೂನು ಮತ್ತು ಹಕ್ಕುಗಳ ಬಗ್ಗೆ ಅಧ್ಯಯನ ಕೈಗೊಳ್ಳಬೇಕು ಹಾಗೂ ಅವರಿಗೆ ಅವರ ಹಕ್ಕುಗಳ ಬಗ್ಗೆ ತಿಳಿಸಿಕೊಡಬೇಕು. ವಿದ್ಯಾರ್ಥಿಗಳು ನಿರಂತರ ಕಲಿಕೆಯಲ್ಲಿ ತೊಡಗಿಕೊಳ್ಳಬೇಕು. ಇತಿಹಾಸದಿಂದ ಶುರುವಾಗಿ ಭವಿಷ್ಯದ ಕಡೆಗೆ ನಮ್ಮನ್ನು ಕೊಂಡೊಯ್ಯುವ ಇಂತಹ ವಿಶೇಷ ಕಾರ್ಯಾಗಾರಗಳು ಇನ್ನೂ ಹೆಚ್ಚೆಚ್ಚು ನಡೆಯಬೇಕು ಎಂದ ಅವರು ವಿದ್ಯಾರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕೆಂದರು.

S.N. Channabasappa ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶಶಿಧರ್ ಎಸ್, ನವದೆಹಲಿಯ ಸಿಸಿಪಿಡಿ ಆಯುಕ್ತರಾದ ಗೋವಿಂದರಾಜ್, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳಾದ ಸುವರ್ಣ ನಾಯಕ್, ಐಕ್ಯೂಎಸಿ ಸಂಚಾಲಕರರಾದ ವಿದ್ಯಾ ಮರಿಯಾ ಜೋಸೆಫ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ.ಸುರೇಶ್ ಅನಗವಾಡಿ ,ಸಕ್ಷಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಉಮೇಶ್ ಅಂದಾರೆ ಉಪಸ್ಥಿತರಿದ್ದರು.

ಏಪ್ರಿಲ್ 12. ಶಿವಮೊಗ್ಗದ ವಿನಾಯಕ ನಗರ, ರವೀಂದ್ರ ನಗರ‌ ಸುತ್ತಮುತ್ತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

0

ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬ ತೆರವುಗೊಳಿಸುವ ಕಾಮಗಾರಿ ಹಮ್ಮಿಕೊಂಡಿದ್ದು, ಏ.12 ರಂದು ಬೆಳಗ್ಗೆ 10.00 ರಿಂದ ಮಧ್ಯಾಹ್ನ 2.00 ರವರೆಗೆ ಉಷಾ ನರ್ಸಿಂಗ್ ಹೋಂ ವೃತ್ತದಲ್ಲಿನ ಅಗಲೀಕರಣ ಕಾಮಗಾರಿ ಹಮ್ಮಿಕೊಂಡಿದ್ದು, ವಿನಾಯಕನಗರ, ಹನುಮಂತನಗರ, ರವೀಂದ್ರನಗರ, ರಾಜೇಂದ್ರನಗರ, ಸವಳಂಗ ರಸ್ತೆ, ಉಷಾ ನರ್ಸಿಂಗ್ ಹೋಂ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

DC shivamogga ಹುಲಿಕಲ್ ಘಾಟಿ ಮಣ್ಣಿನ ಕುಸಿತ. ಮೃತ ಕಾರ್ಮಿಕರ ಕುಟುಂಬಗಳಿಗೆ ಡೀಸಿ ಪ್ರಭುಲಿಂಗ ಕವಳಿಕಟ್ಟಿ ಸಾಂತ್ವನ

0

DC shivamogga ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹುಲಿಕಲ್ ಬಾಳೆಬರೆ ಘಾಟಿ ಬಳಿ ಕಾಮಗಾರಿ ನಡೆಯುತ್ತಿದ್ದ ವೇಳೆ ಸಂಭವಿಸಿದ ಮಣ್ಣು ಕುಸಿತದ ಘಟನೆಯಲ್ಲಿ ಮೂರು ಜನ ಕಾರ್ಮಿಕರು ಮೃತಪಟ್ಟಿದ್ದು, ಘಟನಾ ಸ್ಥಳಕ್ಕೆ ಶುಕ್ರವಾರ ಬೆಳಿಗ್ಗೆ ಶಾಸಕರಾದ ಆರಗ ಜ್ಞಾನೇಂದ್ರ ಮತ್ತು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಮಣ್ಣು ಕುಸಿತದ ದುರ್ಘಟನೆಯಲ್ಲಿ ಹೊಸನಗರ ತಾಲ್ಲೂಕಿನ ಕೋಟೆ ಶಿರೂರಿನ ಓರ್ವ ಕಾರ್ಮಿಕ ಮತ್ತು ಹಾವೇರಿ ತಾಲ್ಲೂಕಿನ ನೆಲೊಗಲ್ಲು ಗ್ರಾಮದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ನಾಲ್ಕು ಜನ ಕಾರ್ಮಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ನಗರ, ತೀರ್ಥಹಳ್ಳಿ ಮತ್ತು ಮಣಿಪಾಲದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲಾಧಿಕಾರಿಗಳು ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು, ಮುಂದಿನ ಕ್ರಮದ ಕುರಿತು ಸೂಚನೆಗಳನ್ನು ನೀಡಿದರು. ನಂತರ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಮೃತರ ಸಂಬಧಿಕರೊಂದಿಗೆ ಮಾತನಾಡಿ, ಸಾಂತ್ವನ ಹೇಳಿದರು. ಹಾಗೂ ಮೃತ ಕಾರ್ಮಿಕರ ಕುಟುಂಬಕ್ಕೆ ಸರ್ಕಾರದ ವತಿಯಿಂದ ಸೂಕ್ತ ಪರಿಹಾರವನ್ನು ನೀಡಲಾಗುವುದು ಎಂದು ತಿಳಿಸಿದರು.
ಈ ವೇಳೆ ಸಾಗರ ಉಪವಿಭಾಗದ ಎಸಿ ವೀರೇಶ್, ಹೊಸನಗರ ತಹಶೀಲ್ದಾರ್ ಭರತ್ ಕುಮಾರ್, ಪಿಡಬ್ಲುö್ಯಡಿ ಮುಖ್ಯ ಅಭಿಯಂತರರು, ಎಇಇ ಇತರೆ ಅಧಿಕಾರಿಗಳು ಹಾಜರಿದ್ದರು.

ಕರವೇ , ಕಾವಲು ಪಡೆಗೆ ಪದಾಧಿಕಾರಿಗಳ ಆಯ್ಕೆ

0

ಕರವೇ ಕವಲು ಪಡೆ ನೂತನ ಪದಾಧಿಕಾರಿಗಳ ಆಯ್ಕೆ ಕರ್ನಾಟಕ ರಕ್ಷಣಾ ವೇದಿಕೆ (ರಿ) ಕಾವಲು ಪಡೆ ಶಿವಮೊಗ್ಗ ಜಿಲ್ಲೆ ಶಿವಮೊಗ್ಗ.
ಶಿವಮೊಗ್ಗ ಜಿಲ್ಲಾ ನೂತನ ಜಿಲ್ಲಾಧ್ಯಕ್ಷರು ಮತ್ತು ಎಲ್ಲಾ ಪದಾಧಿಕಾರಿಗಳ ಮತ್ತು ಮಹಿಳಾ ಮಹಿಳಾ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳ ಹಾಗೂ ಸದಸ್ಯರ ಸೇರ್ಪಡೆ ಕಾರ್ಯಕ್ರಮ ಶಿವಮೊಗ್ಗ ನಗರದ ಪ್ರವಾಸಿ ಮಂದಿರದಲ್ಲಿ ನೆರವೇರಿಸಲಾಯಿತು.
ಸಂಸ್ಥಾಪಕ -ರಾಜ್ಯಾಧ್ಯಕ್ಷರು : ಡಾll ಎಚ್ ಸುರೇಶ್
ಜಿಲ್ಲಾ ಗೌರವಾಧ್ಯಕ್ಷರು : ವಿ ಮೂರ್ತಿ ಜ್ವಾಲಾಮುಖಿ (ಡಾಕ್ಟರ್ ರಾಜಕುಮಾರ್ ಅಭಿಮಾನಿಗಳ ಸಂಘ)
ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು: ಶಿವಕುಮಾರ್ ಎಸ್ ಬಿ.
ಜಿಲ್ಲಾ ಉಪಾಧ್ಯಕ್ಷರು: ರಮೇಶ್ ಮಲ್ಲಿಗೇನಹಳ್ಳಿ
ಜಿಲ್ಲಾ ಪ್ರಧಾನ ಕಾರ್ಯದರ್ಶಿ: ಕೆಬಿ ಉಮೇಶ್.
ಜಿಲ್ಲಾ ಸಂಘಟನಾ ಕಾರ್ಯದರ್ಶಿ: ವೈ ಎಸ್ ಜಗದೀಶ್.
ನಗರ ಕಾರ್ಯದರ್ಶಿ: ಪಂಚಾಕ್ಷರಿ ಎಂವಿ
ಸಾಗರ ತಾಲೂಕು ಅಧ್ಯಕ್ಷರು ಸಾಗರ ತಾಲೂಕು ಅಧ್ಯಕ್ಷರು & ಜಿಲ್ಲಾ ಸಂಚಾಲಕರು: ಕುಮಾರ್ ಎನ್ ಬಿ
ಮಾಲತೇಶ್ ಟಿ
ಗಣೇಶ್ ಆರ್
ಮೋಹನ್ ದುಮ್ಮಳ್ಳಿ
ರಾಜೇಶ್.
ಸಂಸ್ಕೃತಿ ಘಟಕದ ರಾಜ್ಯಾಧ್ಯಕ್ಷರು: ಮಂಜುನಾಥ್ ಪಾಂಡವಪುರ.
ಬಳ್ಳಾರಿ ಯುವ ಸಂಘಟಕ ಅಧ್ಯಕ್ಷರು: ವಿ ಎಸ್ ಸಾಗರ್.
ಸಂಡೂರು ತಾಲೂಕು ಅಧ್ಯಕ್ಷರು: ಶ್ರೀನಿವಾಸ್.
ಬಳ್ಳಾರಿ ನಗರ ಯುವ ಘಟಕ ಅಧ್ಯಕ್ಷರು: ಶಮಿದ್ ಅಲಿ.
ಶಿವಮೊಗ್ಗ ಜಿಲ್ಲಾ ಮಹಿಳಾ ಅಧ್ಯಕ್ಷರು: ಶಾರದಾ ಶ್ರೀಧರ್ ಮೂರ್ತಿ.
ಮಹಿಳಾ ಜಿಲ್ಲಾ ಉಪಾಧ್ಯಕ್ಷರು: ಅನ್ನಪೂರ್ಣ .ಡಿ.
ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ: ಶಿಲ್ಪಾ ಎನ್ ಪಿ