Friday, August 7, 2026
Friday, August 7, 2026
Home Blog Page 133

B.Y. Raghavendra ಶಿವಮೊಗ್ಗದ ಸಂಚಾರ ವ್ಯವಸ್ಥೆ ಸುಧಾರಣೆ ಮಾಸ್ಟರ್ ಪ್ಲಾನ್: ಪ್ರಗತಿ ಪರಿಶೀಲನ ಸಭೆ

0

B.Y. Raghavendra ಶಿವಮೊಗ್ಗ ನಗರದ ಸಂಚಾರ ದಟ್ಟಣೆ ನಿವಾರಣೆ ಹಾಗೂ ರಸ್ತೆಗಳ ಅಭಿವೃದ್ಧಿ ಕುರಿತಂತೆ ಇಂದು ಪ್ರವಾಸಿ ಮಂದಿರದಲ್ಲಿ ಸಂಸದರಾದ ಶ್ರೀ ಬಿ. ವೈ. ರಾಘವೇಂದ್ರ ಅವರ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಶಾಸಕರಾದ ಎಸ್.ಎನ್, ಚೆನ್ನಬಸಪ್ಪನವರು ಪಾಲ್ಗೊಂಡರು.

B.Y. Raghavendra ಈ ಸಂದರ್ಭದಲ್ಲಿ ಸುಬ್ಬಯ್ಯ ಕಾಲೇಜಿನಿಂದ ಎಂ.ಆರ್.ಎಸ್ (NH-13) ಹಾಗೂ ಹರಿಗೆಯಿಂದ ಶ್ರೀರಾಂಪುರದವರೆಗಿನ (NH-206) ರಸ್ತೆಗಳ ಸಮಗ್ರ ಅಭಿವೃದ್ಧಿ ಕುರಿತಂತೆ ಹಾಗೂ ಪಾದಚಾರಿಗಳ ಸುರಕ್ಷತೆಗಾಗಿ ನಗರದ ಪ್ರಮುಖ 5 ಕೇಂದ್ರಗಳಲ್ಲಿ (ಎಂ.ಆರ್.ಎಸ್, ಸಂದೇಶ್ ಮೋಟಾರ್ಸ್, ಬಸ್ ನಿಲ್ದಾಣ, ಪ್ರವಾಸಿ ಮಂದಿರ ವೃತ್ತ ಹಾಗೂ ಗಾಡಿಕೊಪ್ಪ) ಜಪಾನ್ ಮಾದರಿಯ Foot Overbridges ನಿರ್ಮಿಸಲು ತಾಂತ್ರಿಕ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ಭಾರತದೇಶ ಕಂಡ ಮಹಾನ್ ವ್ಯಕ್ತಿ ,ಡಾ.ಅಂಬೇಡ್ಕರ್- ಶಕುಂತಲಾ ಚಂದ್ರಶೇಖರ್

0

ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಸಮಾನತೆಯ ಹರಿಕಾರ. ದೇಶದ ಮೊದಲ ಕಾನೂನಿನ ಸಚಿವರು, ಭಾರತ ದೇಶ ಕಂಡ ಮಹಾನ್ ವ್ಯಕ್ತಿ. ಸಂವಿಧಾನ ರಚನೆಯ ಕರಡು ಸಮಿತಿಯ ಅಧ್ಯಕ್ಷರಾಗಿದ್ದರು ಎಂದು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ಪ್ರಧಾನ ಆಯುಕ್ತಾರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ್ ನುಡಿದರು ಅವರು ಸ್ಕೌಟ್ ಭವನದಲ್ಲಿ ಆಯೋಜಿಸಲಾಗಿದ್ದ ಡಾ. ಬಿ ಆರ್ ಅಂಬೇಡ್ಕರ್ ರವರ 135 ನೇ ಜನ್ಮದಿನ ಜಯಂತಿ ಸಭೆಯಲ್ಲಿ ಮಾತನಾಡಿ, ಭಾರತದ ಬೃಹತ್ ಸಂವಿಧಾನಕ್ಕೆ ಇವರ ಕೊಡುಗೆ ಅಪಾರ ಹಾಗೂ ಇವರು ಅದ್ಭುತ ಸಂದೇಶ ನೀಡಿದ್ದಾರೆ. ಇತಿಹಾಸವನ್ನು ಮರೆತವರು ಇತಿಹಾಸ ನಿರ್ಮಿಸಲಾರರು, ಬದುಕು ಸುದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು. ವಿದ್ಯಾವಂತರಾಗಿ ಸಂಘಟಿತರಾಗಿ, ಜ್ಞಾನವು ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೆ ಆಧಾರವಾಗಿದೆ. ಇದೇ ಸಂದರ್ಭದಲ್ಲಿ ಕೇಂದ್ರ ಸ್ಥಾನಿಕ ಆಯುಕ್ತರಾದ ಆಯುಕ್ತರಾದ ಜಿ ವಿಜಯ್ ಕುಮಾರ್ ಮಾತನಾಡುತ್ತ . ಬಿ.ಆರ್.ಅಂಬೇಡ್ಕರ್ ಅವರು ಭಾರತದ ಇತಿಹಾಸದಲ್ಲಿ ಸ್ಮರಣೀಯ ವ್ಯಕ್ತಿ. ಭಾರತೀಯ ಸಮಾಜಕ್ಕೆ ಅವರ ಕೊಡುಗೆ ಅಪಾರ. ಏ.14ರಂದು ಅವರ ಜಯಂತಿ ಆಚರಣೆ ದೇಶಾದ್ಯಂತ ಆಚರಿಸಲಾಗುತ್ತದೆ. ಅಂಬೇಡ್ಕರ್ ಅವರು ಸಮಾಜ ಸುಧಾರಕರಾಗಿದ್ದರು. ನ್ಯಾಯಶಾಸ್ತ್ರಜ್ಞ ಹಾಗೂ ಅರ್ಥಶಾಸ್ತ್ರಜ್ಞರಾಗಿದ್ದರು ಎಂದರು. ಹಾಗೆ ಅಸ್ಪೃಶ್ಯತೆ ಹೋಗಲಾಡಿಸಲು ವಿಶೇಷ ಹೋರಾಟ ಮಾಡಿದ ಮಹಾನ್ ಸಾಧಕ ಇವರ ತತ್ವ ಆದರ್ಶ ಗುಣಗಳು ಇಂದಿನ ಯುವಕರಿಗೆ ದಾರಿದೀಪವಾಗಿದೆ ಎಂದು ನುಡಿದರು ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಕೆ ವಿ ಚಂದ್ರಶೇಖರಯ್ಯ
ಚುಡಾಮಣಿ ಪವಾರ್, ಕೇಂದ್ರ ಕಾಣಿಕ ಆಯುಕ್ತರಾದ ರಾಘವೇಂದ್ರ ವಿಜಯಪುರದ ರೇಂಜರ್ ಲೀಡರ್ ಶ್ವೇತಾ. ಜಿಲ್ಲಾ ತರಬೇತಿ ಆಯುಕ್ತರಾದ ಶಿವಶಂಕರ್. ಹಾಗೂ ರಾಜ್ಯದಿಂದ ಆಗಮಿಸಿದ ರೋವರ್ ರೇಂಜರ್ಸ್ ಮಕ್ಕಳು ಉಪಸ್ಥಿತರಿದ್ದರು.

ಡಾ.ಸಮೀಕ್ಷಾ ರೆಡ್ಡಿ ಅವರ ಬಲಿ ಪಡೆದ ನೀರಾನೆ ” ಹಂಸಿಣಿ”, ಅನಾರೋಗ್ಯದಿಂದ ಸಾವು

0

ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿದ್ದ 12 ವರ್ಷದ ಹೆಣ್ಣು ಹಿಪ್ಪೊಪೊಟಾಮಸ್ (ನೀರಾನೆ) ‘ಹಂಸಿಣಿ’ ಮಂಗಳವಾರ ಮಧ್ಯಾಹ್ನ ಮೃತಪಟ್ಟಿದೆ.
ಗರ್ಭಿಣಿಯಾಗಿದ್ದ ಹಂಸಿಣಿ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಎಂಟು ತಿಂಗಳ ಗರ್ಭಾವಸ್ಥೆಯ ಅವಧಿ ಮಾರ್ಚ್ ಮಧ್ಯಭಾಗದಲ್ಲೇ ಪೂರ್ಣಗೊಂಡಿದ್ದರೂ, ಪ್ರಸವದ ಯಾವುದೇ ಲಕ್ಷಣಗಳು ಕಂಡುಬಂದಿರಲಿಲ್ಲ. ಈ ನಡುವೆ ಪ್ರಾಣಿಯು ಆಹಾರ ಸೇವನೆ ಕಡಿಮೆ ಮಾಡಿ, ಅತ್ಯಂತ ನಿಶ್ಯಕ್ತಿಯಿಂದ ಕೂಡಿತ್ತು.
ಚಿಕಿತ್ಸೆ ಮತ್ತು ಸೋಂಕು: ಪ್ರಾಣಿಯ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಏಪ್ರಿಲ್ 10 ರಂದು ಮೈಸೂರಿನ ಕರ್ನಾಟಕ ಮೃಗಾಲಯ ಪ್ರಾಧಿಕಾರದ ವನ್ಯಜೀವಿ ಪಶುವೈದ್ಯರ ತಂಡ ಆಗಮಿಸಿ ತಪಾಸಣೆ ನಡೆಸಿತ್ತು. ರಕ್ತ ಮತ್ತು ದ್ರವಗಳ ಪರೀಕ್ಷೆಯ ವರದಿಯಲ್ಲಿ ಗರ್ಭಾಶಯದಲ್ಲಿ ಗಂಭೀರವಾದ ಸೋಂಕು ಇರುವುದು ಪತ್ತೆಯಾಗಿತ್ತು. ಗರ್ಭಾಶಯದ ಒಳಗೇ ಭ್ರೂಣ ಮರಣ ಹೊಂದಿದ್ದು ಇದು ಸೋಂಕಿಗೆ ಕಾರಣವಾಗಿರಬಹುದು ಎಂದು ಪಶುವೈದ್ಯರು ಅಭಿಪ್ರಾಯಪಟ್ಟಿದ್ದರು.
ಕರ್ನಾಟಕ ಮೃಗಾಲಯ ಪ್ರಾಧಿಕಾರ, ಮೈಸೂರು ಪಶುವೈದ್ಯರು ಹಾಗೂ ಪಶುವೈದ್ಯಕೀಯ ಪ್ರಸೂತಿ ತಜ್ಞರ ಮಾರ್ಗದರ್ಶನದಲ್ಲಿ ಹಂಸಿಣಿಗೆ ಸತತವಾಗಿ ಚಿಕಿತ್ಸೆ ಮತ್ತು ಆರೈಕೆ ನೀಡಲಾಗುತ್ತಿತ್ತು. ಆದರೆ, ಸೋಂಕು ಪ್ರಾಣಿಯ ಪ್ರಮುಖ ಅಂಗಾಂಗಗಳ ಮೇಲೆ ತೀವ್ರ ಪರಿಣಾಮ ಬೀರಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 14ರ ಮಧ್ಯಾಹ್ನ 3.08 ಗಂಟೆಗೆ ಹಂಸಿಣಿ ಕೊನೆಯುಸಿರೆಳೆದಿದೆ ಎಂದು ತ್ಯಾವರೆಕೊಪ್ಪ ಹುಲಿ-ಸಿಂಹ ಧಾಮದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

Dr. B.R. Ambedkar ಡಾ.ಅಂಬೇಡ್ಕರ್ ಸರಳ ಜೀವನ ನಡೆಸಿದ ಮಹನ್ ನಾಯಕರು- ಸುರೇಶ್ ವೈ ಹಳ್ಳಿ.

0

Dr. B.R. Ambedkar ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (RSETI), ಹೊಳಲೂರು ಇಲ್ಲಿ 135ನೇ ಅಂಬೇಡ್ಕರ್ ಜಯಂತಿಯನ್ನು ಅತ್ಯಂತ ಗೌರವದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸುರೇಶ್ ವೈ ಹಳ್ಳಿ, ಶ್ರೀಮತಿ ದೀಪ ಜಿ, ಟ್ರೈನರ್ ಕತ್ತುಮನ್ನಿಸಾ, ಹಾಗೂ ಟೈಲರಿಂಗ್ ತರಬೇತಿಯಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆರಂಭಿಸಲಾಯಿತು. ನಂತರ ಮಾತನಾಡಿದ ಅತಿಥಿಗಳು ಮತ್ತು ಉಪನ್ಯಾಸಕರು ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಶೈಲಿ, ಸಾಧನೆಗಳು ಹಾಗೂ ಸಮಾಜಕ್ಕೆ ನೀಡಿದ ಮಹತ್ತರ ಕೊಡುಗೆಗಳ ಕುರಿತು ವಿವರವಾಗಿ ಬೆಳಕು ಚೆಲ್ಲಿದರು.
ಅಂಬೇಡ್ಕರ್ ಅವರು ಸರಳ ಜೀವನ ನಡೆಸಿದ ಮಹಾನ್ ನಾಯಕರು. ಅವರು ಶಿಕ್ಷಣವನ್ನು ಶಕ್ತಿ ಎಂದು ನಂಬಿ, ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಅನೇಕ ಹೋರಾಟಗಳನ್ನು ನಡೆಸಿದರು. ಭಾರತೀಯ ಸಂವಿಧಾನದ ಶಿಲ್ಪಿಯಾಗಿರುವ ಅವರು ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯದ ಮೌಲ್ಯಗಳನ್ನು ಸಮಾಜಕ್ಕೆ ನೀಡಿದ್ದಾರೆ.
Dr. B.R. Ambedkar  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತರಬೇತಿಗಾರರಿಗೆ ಅಂಬೇಡ್ಕರ್ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರಣೆ ನೀಡಲಾಯಿತು. ವಿಶೇಷವಾಗಿ ಶಿಕ್ಷಣದ ಮಹತ್ವ, ಸ್ವಾಭಿಮಾನ ಮತ್ತು ಸ್ವಾವಲಂಬನೆ ಕುರಿತು ತಿಳಿಸಿ, ಜೀವನದಲ್ಲಿ ಮುಂದುವರಿಯಲು ಮಾರ್ಗದರ್ಶನ ನೀಡಲಾಯಿತು.
ಈ ಕಾರ್ಯಕ್ರಮವು ಎಲ್ಲರಿಗೂ ಪ್ರೇರಣಾದಾಯಕವಾಗಿದ್ದು, ಅಂಬೇಡ್ಕರ್ ಅವರ ಚಿಂತನೆಗಳನ್ನು ಮತ್ತೆ ನೆನಪಿಸುವ ಒಂದು ಅರ್ಥಪೂರ್ಣ ಆಚರಣೆಯಾಗಿ నిలಿಯಿತು.

D S Arun ಶಿವಮೊಗ್ಗ ಹಾಸನ& ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯ ವಿವಿಧ ವಯೋಮಾನ ವಿಭಾಗಗಳಲ್ಲಿ ಕೆಎಸ್ಸಿಎ ವಲಯ ಆಯ್ಕೆ ಪ್ರಕ್ರಿಯೆ- ಡಿ.ಎಸ್.ಅರುಣ್

0

D S Arun ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ.ಎಸ್.ಸಿ.ಎ.), ಶಿವಮೊಗ್ಗ ವಲಯದ ವತಿಯಿಂದ 2026–27ನೇ ಸಾಲಿನ ಅಕಾಡೆಮಿ ಆಯ್ಕೆ ಪ್ರಕ್ರಿಯೆಗಳು (ಪುರುಷರು ಹಾಗೂ ಮಹಿಳೆಯರಿಗೆ) ಆಯೋಜಿಸಲಾಗುತ್ತಿದೆ ಎಂಬುದನ್ನು ತಿಳಿಸಲು ಸಂತೋಷವಾಗುತ್ತದೆ.
ಈ ಆಯ್ಕೆ ಪ್ರಕ್ರಿಯೆಗಳು ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳ ವ್ಯಾಪ್ತಿಯಲ್ಲಿ ವಿವಿಧ ವಯೋಮಾನದ ವಿಭಾಗಗಳಲ್ಲಿ ನಡೆಯಲಿದ್ದು, ದಿನಾಂಕ 20 ಮಾರ್ಚ್ 2026 ರಂದು ಪ್ರಕಟಿಸಿದ ಅಧಿಕೃತ ವೇಳಾಪಟ್ಟಿಯಂತೆ ಆಯೋಜಿಸಲಾಗುತ್ತಿದೆ.
ಈ ಪ್ರಕ್ರಿಯೆಗಳ ಮೂಲಕ ಅಂಡರ್-14, ಅಂಡರ್-16, ಅಂಡರ್-19 (ಬಾಲಕರು) ಹಾಗೂ ಅಂಡರ್-15, ಅಂಡರ್-19 (ಮಹಿಳೆಯರು) ವಿಭಾಗಗಳಲ್ಲಿ ಪ್ರತಿಭಾವಂತ ಆಟಗಾರರನ್ನು ಗುರುತಿಸಿ, ಮುಂದಿನ ಹಂತದಲ್ಲಿ ಕೆ.ಎಸ್.ಸಿ.ಎ. ಅಕಾಡೆಮಿ ತರಬೇತಿ ಕಾರ್ಯಕ್ರಮಗಳಿಗೆ ಆಯ್ಕೆ ಮಾಡಲಾಗುತ್ತದೆ.
ಈ ಸಂದರ್ಭದಲ್ಲಿ, ಕೆ.ಎಸ್.ಸಿ.ಎ. ಶಿವಮೊಗ್ಗ ವಲಯದ ಕನ್ವೀನರ್ ಶ್ರೀ ಡಿ. ಎಸ್. ಅರುಣ್ ಅವರು ಸ್ಥಳದಲ್ಲಿ ಹಾಜರಿದ್ದು, ಆಯ್ಕೆ ಪ್ರಕ್ರಿಯೆಯು ನ್ಯಾಯಸಮ್ಮತವಾಗಿ, ಪಾರದರ್ಶಕವಾಗಿ ಹಾಗೂ ಸುಗಮವಾಗಿ ನಡೆಯುವಂತೆ ಮೇಲ್ವಿಚಾರಣೆ ನಡೆಸುತ್ತಿದಾರೆ.
ಈ ಮಹತ್ವದ ಕ್ರೀಡಾ ಚಟುವಟಿಕೆಯನ್ನು ನಿಮ್ಮ ಪ್ರತಿಷ್ಠಿತ ಮಾಧ್ಯಮಗಳ ಮೂಲಕ ಪ್ರಸಾರ / ಪ್ರಕಟಣೆ ಮಾಡುವಂತೆ ವಿನಂತಿಸುತ್ತೇವೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಕೆ.ಎಸ್.ಸಿ.ಎ. ಶಿವಮೊಗ್ಗ ವಲಯ: ಕೆ.ಎಸ್.ಸಿ.ಎ. ನವಲೆ ಕ್ರೀಡಾಂಗಣ, ಶಿವಮೊಗ್ಗ
ಇಮೇಲ್: shivamogga@ksca.co.in
ನಿಮ್ಮ ಸಹಕಾರಕ್ಕೆ ಧನ್ಯವಾದಗಳು.
ವಂದನೆಗಳೊಂದಿಗೆ,
ಡಿ. ಎಸ್. ಅರುಣ್
ವಲಯ ಕನ್ವೀನರ್
KSCA ಶಿವಮೊಗ್ಗ ವಲಯ.

Dr. Ambedkar ಇಂದಿನ ಯುವಕರು ಅಂಬೇಡ್ಕರ್ ಜೀವನ ಚರಿತ್ರೆ ಓದಿದರೆ ಸಾಕು ಖಿನ್ನತೆಯಿಂದ ಹೊರಬರಬಹುದು- ಬಿ.ವೈ‌ರಾಘವೇಂದ್ರ.

0

Dr. Ambedkar ಅನ್ಯಾಯದ ವಿರುದ್ದ ಧ್ವನಿಯಾಗಿ, ಸಮಾನತೆಗಾಗಿ ಹೋರಾಡಿದ
ಯುಗಪುರುಷ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ನಮ್ಮೆಲ್ಲರಿಗೂ‌ ಮಾದರಿಯಾಗಿದ್ದಾರೆ ಎಂದು ಸಂಸದರಾದ ಬಿ.ವೈ.ರಾಘವೇಂದ್ರ ತಿಳಿಸಿದರು.
ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಂಗಳವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಸಂವಿಧಾನ ಶಿಲ್ಪಿ, ಭಾರತ ರತ್ನ, ಬಾಬಾ ಸಾಹೇಬ್ ಡಾ।। ಬಿ.ಆರ್ ಅಂಬೇಡ್ಕ‌ರವರ135ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ರವರ ತತ್ವಗಳು, ಆದರ್ಶಗಳು ಹಾಗೂ
ಮೌಲ್ಯಗಳು ಉದಾತ್ತವಾಗಿದ್ದು, ನಾವೆಲ್ಲ ಅದೇ ಸಂಕಲ್ಪ ಮಾಡಿ ಅವನ್ನು ಮುನ್ನಡೆಸಿಕೊಂಡು‌ ಹೋಗಬೇಕಿದೆ.
ಅತ್ಯಂತ ಸುಶಿಕ್ಷಿತರಾಗಿದ್ದ ಅವರು ಶ್ರೇಷ್ಟ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದಿದ್ದಾರೆ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಡಾಕ್ಟರೇಟ್ ಪಡೆದ ಮೊದಲ ಭಾರತೀಯರಾದ ಇವರು ಅತ್ಯಂತ ಮೇಧಾವಿ. ಅಸಮಾನತೆ ವಿರುದ್ದ ಧ್ವನಿ ಎತ್ತಿ, ಮಹಿಳಾ ಹಕ್ಕುಗಳಿಗೆ ಹೋರಾಡಿ, ಹಿಂದೂ ಕೋಡ್ ಬಿಲ್ ಮೂಲಕ ಮಹಿಳೆಯರಿಗೆ ಹಕ್ಕುಗಳನ್ನು‌ ನೀಡಿದರು.
ಇಂದಿನ‌ ಯುವಜನತೆ ಅಂಬೇಡ್ಕರ್ ರವರ ಜೀವನ ಚರಿತ್ರೆ, ಅವರ ಸಾಹಿತ್ಯವನ್ನು ಓದಿ ತಿಳಿದರೆ ಸಾಕು, ಖಿನ್ನತೆಯಿಂದ ಹೊರ ಬರಬಹುದು ಎಂದ ಅವರು ಅಂಬೇಡ್ಕರ್ ರವರ ಧ್ವನಿಯನ್ನು ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಶಾಸಕರಾದ ಎಸ್ ಎನ್ ಚನ್ನಬಸಪ್ಪ ಮಾತನಾಡಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಕೇಲವ ವ್ಯಕ್ತಿಯಲ್ಲ ಅವರೊಬ್ಬ ಶಕ್ತಿ. ಅಸ್ಪೃಶ್ಯತೆ ನಿವಾರಣೆ ಮಾಡಿ, ಸರ್ವಧರ್ಮಗಳು ಸಮ ಭಾವದಿಂದ ಬದುಕಬೇಕೆಂಬ ಸಂವಿಧಾನ ನೀಡಿದ ಮಹಾನ್ ಚೇತನ.
ಬಿದ್ದವರನ್ನು ಮೇಲೆತ್ತಿ, ಅಸ್ಪೃಶ್ಯತೆ ವಿರುದ್ದ ಗಟ್ಟಿಯಾಗಿ ಧ್ವನಿ ಎತ್ತಿದ ಅಂಬೇಡ್ಕರ್ ರವರ ಮೊದಲ ಸೂತ್ರ ಶಿಕ್ಷಣವಾಗಿದ್ದು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದರು.
ಭಾರತೀಯ ಸಂವಿಧಾನ ರಚನೆ ಮುನ್ನ ನಮ್ಮ ದೇಶದ ಪ್ರತಿ ಅಂಶಗಳನ್ನು ಅಧ್ಯಯನ ಮಾಡಿ, ಸರ್ವಧರ್ಮಗಳು ಸಮವೆಂದು ಸಾರುವ ಅಂಶಗಳ ಆಧಾರದ ಮೇಲೆ ಸಂವಿಧಾನ ರಚಿಸಿ ಪ್ರಾತಸ್ಮರಣೀಯರಾಗಿದ್ದಾರೆ.
ದೇಶಕ್ಕಾಗಿ ಬದುಕಿದ ಅವರ ಕಾರ್ಯಗಳು ಎಂದಿಗೂ ಜೀವಂತ.
ಪ್ರತಿಭಟನೆ ಮೂಲಕ ಅಸ್ಪೃಶ್ಯರಿಗೆ ಮಂದಿರಗಳಿಗೆ ಪ್ರವೇಶ ಕೊಡಿಸಿದರು. ಎಲ್ಲರನ್ನೂ ಒಂದುಗೂಡಿಸುವ ಕೆಲಸ ಮಾಡಿದರು. ಅವರ ಜೀವನವೇ ಹೋರಾಟವಾಗಿದ್ದು,
ಯಾರೇ ಆಗಲಿ ಯಾವುದೇ ಮಠ, ಮಂದಿರಕ್ಕೆ ಯಾವಾಗಲಾದರೂ ಹೋಗಬಹುದು, ಯಾವುದೇ ಕೇರಿಯಲ್ಲಿ ಬಾವಿ ನೀರು ಕುಡಿಯುವಂತೆ ಮಾಡುವ ಮೂಲಕ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡಿದರು. ಇಂತಹ ಭವ್ಯ ಭಾರತದ ಅಭಿವೃದ್ಧಿಯ ತೇರನ್ನು ನಾವೆಲ್ಲ ಸೇರಿ ಎಳೆಯಬೇಕಿದೆ ಎಂದರು.
ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶಾರದಾ ಪೂರ್ಯಾನಾಯ್ಕ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ರವರು ದೈವದತ್ತ ಕೊಡುಗೆ. ನಮ್ಮ‌ ಸಂವಿಧಾನಕ್ಕೆ ಮಹಾನ್ ಶಕ್ತಿ ಇದ್ದು, ಪರಿಣಾಮಕಾರಿಯಾಗಿ ನಾವೆಲ್ಲ ಅನುಷ್ಠಾನ ಮಾಡಿಕೊಂಡು ಹೋಗಬೇಕಿದೆ. ನಮ್ಮೆಲ್ಲರಿಗೆ ಧ್ವನಿ‌ ನೀಡಿದ ಮಹಾನ್ ಚೇತನವು ಹಾಕಿಕೊಟ್ಟ ದಾರಿಯಲ್ಲಿ ನಾವು ಸಾಗಬೇಕು. ಮಹಿಳೆಯರ ಹಕ್ಕುಗಳು ಮತ್ತು ಸಮಾನತೆಗಾಗಿ ವಿಶೇಷವಾಗಿ ಹೋರಾಡಿದ ಶಕ್ತಿ ಅವರು ಎಂದು ಸ್ಮರಿಸಿದರು.
ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕರಾದ ಡಾ.ನಾಗೇಶ್ ಬಿದರಗೋಡು ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ರವರ ವಿಷಯದಲ್ಲಿ ವಿಜೃಂಭಣೆಗಿಂತ ವಿಚಾರ ಮುಖ್ಯ, ಆರಾಧನೆಗಿಂತ ಆಚರಣೆ ಮುಖ್ಯವಾಗಬೇಕು. ಅಂಬೇಡ್ಕರ್ ಪ್ರಜ್ಞೆಯಾಗಿ ನಮ್ಮೊಳಗೆ ಇರಬೇಕು. ಯಾವ ಮಾನದಂಡಗಳಲ್ಲೂ ಅವರನ್ನು ಅಳೆಯಲು ಸಾಧ್ಯವಿಲ್ಲ. ಅಗತ್ಯವಿರುವುದನ್ನು ಹುಟ್ಟುಹಾಕಿದರು.
ಸಂಘರ್ಷದ ಹಾದಿಗಿಂತ ಸಂವಾದದ ಹಾದಿ ಅವರದ್ದಾಗಿತ್ತು. ಮನುಷ್ಯರು ಮನುಷ್ಯರ ಮುಂದೆ ಸಮಾನವಾಗಿರಬೇಕು ಎಂಬುದು ಅವರ ನಡೆಯಾಗಿತ್ತು.
ಶಿಕ್ಷಣ ಪಡಯಿರಿ, ಸಂಘಟಿತರಾಗಿ ಹೋರಾಡಿ ಎಂಬುದು ಅವರ ಮೂಲಮಂತ್ರವಾಗಿತ್ತು.
ಮಹಿಳೆಯರನ್ನು ಈ ದೇಶದ ಪ್ರಗತಿಯ
ಮಾನದಂಡವಾಗಿ ಎತ್ತಿ ಹಿಡಿದವರು ಅಂಬೇಡ್ಕರ್ ಎಂದರು.
Dr. Ambedkar ಈಗಲೂ ಅಸಮಾನತೆ ಇದೆ. ನಮ್ಮ ಎದೆಯೊಳಗೆ ಅಂಬೇಡ್ಕರ್ ಇಳಿಯದ ಹೊರತು, ಅವರನ್ನು ಅನುಸರಿಸದ ಹೊರತು ಅಸಮಾನತೆ ಹೋಗಲಾಡಿಸಲು ಸಾಧ್ಯವಿಲ್ಲ.
ಮನುಷ್ಯರಾಗಲು ಹಿಂದೆ ಉಳಿದಿದ್ದು, ಆ ನಿಟ್ಟಿನಲ್ಲಿ‌ ನಾವು ಮುಂದೆ ಸಾಗಬೇಕಿದೆ.
ಅಂಬೇಡ್ಕರ್ ಕಂಡ ಕನಸಿನೆಡೆ ನಮ್ಮ‌ಹೆಜ್ಜೆ ಇರಿಸಬೇಕಿದೆ. ಕಿರಿಯ ತಲೆಮಾರು ಅವರ ದಾರಿಯಲ್ಲಿ ಸಾಗಬೇಕಿದೆ ಎಂದರು.
ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ, ಕರ್ನಾಟಕ ರಾಜ್ಯ ಜವಳಿ‌ ಮೂಲ ಸೌಲಭ್ಯ(ವಿದ್ಯುತ್ ಮಗ್ಗಗಳು) ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಚೇತನ್ ಕೆ, ಸೂಡಾ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು. ಹಾಗೂ ಸಮಾಜ ಕಲ್ಯಾಣ ಇಲಾಖೆಯಡಿ ಬರುವ ವಸತಿ ನಿಲಯಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.
ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ, ಜಿ.ಪಂ. ಸಿಇಓ ಹೇಮಂತ್ ಎನ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ, ಸಮಾಜ‌ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲೇಶಪ್ಪ ಡಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Nalanda Chess Academy ನಳಂದ ಚೆಸ್ ಅಕಾಡೆಮಿಯ ಬೇಸಿಗೆ ಶಿಬಿರದ ಮಾಹಿತಿ.

0

Nalanda Chess Academy ನಗರದ ನಳಂದಾ ಚೆಸ್ ಅಕಾಡೆಮಿಯಿಂದ ಬರುವ ಗ್ರೀಷ್ಮ ಕೋಚಿಂಗ್ ಕ್ಯಾಂಪ್‌ಗಳನ್ನು ಘೋಷಿಸುವುದು ನಮಗೆ ಸಂತೋಷವಾಗಿದೆ. ಎಲ್ಲಾ ಮಟ್ಟದ ಆಟಗಾರರಿಗೆ ವಿನ್ಯಾಸಗೊಳಿಸಲಾದ ಈ ಕ್ಯಾಂಪ್‌ಗಳು ಗುರಿ-ಆಧಾರಿತ ತರಬೇತಿ, ದೈನಂದಿನ ಆಟ ಸೆಷನ್‌ಗಳು ಮತ್ತು ಮಜÁ ಸ್ಪರ್ಧೆಗಳ ಮೂಲಕ ಕೌಶಲ್ಯ ಅಭಿವೃದ್ಧಿಗೆ ಗಮನ ಹರಿಸುತ್ತವೆ.
ನಿಮ್ಮ ಚೆಸ್ ಕೌಶಲ್ಯವನ್ನು ತೀಕ್ಷ÷್ಣಗೊಳಿಸಲು ನಮ್ಮೊಂದಿಗೆ ಸೇರಿ ಕ್ಯಾಂಪ್ ಷೆಡ್ಯೂಲ್ ಮತ್ತು ವಿವರಗಳು¾ಅಡ್ವಾನ್ಸ್÷್ಡ ೨ ಕ್ಯಾಂಪ್ (ಅನುಭವಿ ಆಟಗಾರರಿಗೆ)¾ದಿನಾಂಕಗಳು: ಏಪ್ರಿಲ್ ೧೬ ಹಾಗೂ 25 ಮತ್ತು ಮೇ1, 10, ಪ್ರತಿದಿನ ಬೆಳಿಗ್ಗೆ ೯.೩೦ರಿಂದ ಮಧ್ಯಾಹ್ನ ೪.೩೦ರವರೆಗೆ ಓಪನಿಂಗ್ ಸಿದ್ಧಾಂತಗಳು, ಮಧ್ಯಭಾಗದ ಟ್ಯಾಕ್ಟಿಕ್ಸ್, ಮುಖ್ಯ ಎಂಡ್‌ಗೇಮ್, ಪಝಲ್‌ಗಳು,ಕನಿಷ್ಠ ೨ ಗಂಟೆಗಳ ಆಟ ಸೆಷನ್ ಮತ್ತು ಆಟ ವಿಶ್ಲೇಷಣೆ, ಹೆಚ್ಚುವರಿ ಬ್ಲಿಟ್ಜ್ ಸ್ಪರ್ಧೆಗಳು, ರ್ಯಾಪಿಡ್ ಚೆಸ್ ಟೂರ್ನಿಯುಂಟ್ ಮತ್ತು ಪಝಲ್-ಪರಿಹಾರ ಸ್ಪರ್ಧೆಗಳು ಅಡ್ವಾನ್ಸ್ಡ್ 1 ಕ್ಯಾಂಪ್ (ಮೂಲಭೂತಗಳನ್ನು ತಿಳಿದವರಿಗೆ) ದಿನಾಂಕಗಳು: ಏಪ್ರಿಲ್ ೧೬, ೨೫ ಮತ್ತು ಮೇ ೧, ೧೦, ೨೦೨೬ ಪ್ರತಿದಿನ ಮಧ್ಯಾಹ್ನ 3.30 ರಿಂದ ೫ರವರೆಗೆ 5ರಿಂದ 6ಗಂಟೆಗಳವರೆಗೆ ಆಟ ಸೆಷನ್, ಕನಿಷ್ಠ ಟ್ಯಾಕ್ಟಿಕ್ಸ್ಕನಿಷ್ಠ ಎಂಡ್‌ಗೇಮ್ Nalanda Chess Academy ಪ್ರತಿದಿನ ೧ ಗಂಟೆಯ ಆಟ ಸೆಷನ್, ಮೂಲಭೂತ ಸಿದ್ಧಾಂತಗಳು ಬೇಸಿಕ್ ಚೆಸ್ ಕೋಚಿಂಗ್ ಕ್ಯಾಂಪ್ (ಪೂರ್ಣ ನವಶಿಕ್ಷಕರಿಗೆ) ಏಪ್ರಿಲ್ 16, 25ಮತ್ತು ಮೇ 1, 10, 2026 ಪ್ರತಿದಿನ ಬೆಳಿಗ್ಗೆ ೯.೩೦ರಿಂದ ೧೧ರವರೆಗೆ ಚೆಸ್ ಮೂಲಭೂತಗಳ ಪರಿಚಯವನ್ನು ಮಜÁ ಮೂಲಕ ಶುರುವಿನಿಂದ ಕಲಿಸುವುದು!¾ಲಾಡ್ಜಿಂಗ್ ಮತ್ತು ಬೋರ್ಡಿಂಗ್ ವಿವರಗಳು ಮತ್ತು ವ್ಯವಸ್ಥೆಗೆ ಉಡುಪ ಅವರ ಮೊ. 9844436276, 9945809662 ಅಥವಾ ಅಕಾಡೆಮಿಗೆ ಭೇಟಿ ನೀಡಲು ಕೋರಿದ್ದಾರೆ.

Ambedkar Jayanti ಏಪ್ರಿಲ್14. ಸಮಾನತೆ,ಸ್ವಾತಂತ್ರ್ಯ, & ಸಾಮಾಜಿಕ ಮೌಲ್ಯಗಳನ್ನ ಉಸಿರಾಗಿಸಿಕೊಳ್ಳುವ ದಿನ- ಕೆ.ರಂಗನಾಥ್.

0

Ambedkar Jayanti ಡಾ ಬಿ ಆರ್ ಅಂಬೇಡ್ಕರ್ ಜಯಂತಿ- ನಮ್ಮೂರ ಬಳಗದಿಂದ ಸಂವಿಧಾನ ಪೀಠಿಕೆ ಓದುವ ಮುಖಾಂತರ ಆಚರಣೆ – ಸಮಾನತೆ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳ ಸಂಕಲ್ಪ ದಿನ – ಕೆ ರಂಗನಾಥ್

ಸಂವಿಧಾನ ಶಿಲ್ಪಿ ಭಾರತ ರತ್ನ ಡಾ ಬಿ.ಆರ್ ಅಂಬೇಡ್ಕರ್ ಅವರ 135 ನೇ ಜಯಂತೋತ್ಸವವನ್ನು ನಮ್ಮೂರ ಬಳಗದ ವತಿಯಿಂದ ಇಂದು ಬೆಳಗ್ಗೆ ಅಲ್ಲಮಪ್ರಭು ಮೈದಾನ ಫ್ರೀಡಂ ಪಾರ್ಕ್ ನಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಂವಿಧಾನದ ಪೀಠಿಕೆಯನ್ನು ಓದಿ, ಸಿಹಿ ವಿತರಿಸಿ ಆಚರಿಸಲಾಯಿತು

Ambedkar Jayanti ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಮ್ಮೂರ ಬಳಗದ ಪ್ರಧಾನ ಸಂಚಾಲಕ ಕೆ.ರಂಗನಾಥ್ ರವರು “ಕಲಿಯಿರಿ, ಸಂಘಟಿತರಾಗಿ, ಹೋರಾಡಿ” ಇದು ಕೇವಲ ಘೋಷಣೆಯಲ್ಲ, ಪ್ರತಿಯೊಬ್ಬರ ಬದುಕಿಗೆ ದಾರಿದೀಪ.​ ಏಪ್ರಿಲ್ 14, ಕೇವಲ ಒಂದು ಆಚರಣೆಯ ದಿನವಲ್ಲ; ಸಮಾನತೆ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ನಮ್ಮ ಉಸಿರಾಗಿಸಿಕೊಳ್ಳುವ ಸಂಕಲ್ಪದ ದಿನ. ಬಾಬಾಸಾಹೇಬ್ ಅಂಬೇಡ್ಕರ್ ಅವರು ನಮಗೆ ನೀಡಿದ ಅತಿದೊಡ್ಡ ಉಡುಗೊರೆ ಎಂದರೆ ನಮ್ಮ ‘ಭಾರತದ ಸಂವಿಧಾನ’. ಇದು ಪ್ರತಿಯೊಬ್ಬ ಭಾರತೀಯನ ಹಕ್ಕುಗಳನ್ನು ರಕ್ಷಿಸುವ ಮತ್ತು ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವ ಪವಿತ್ರ ಗ್ರಂಥ.​ಶಿಕ್ಷಣವೇ ಶಕ್ತಿ ಎಂದು ಜಗತ್ತಿಗೆ ಸಾರಿದ, ಅಸಮಾನತೆಯ ವಿರುದ್ಧ ಸಿಡಿದೆದ್ದ ಆ ಮಹಾನ್ ಚೇತನದ ಹೆಜ್ಜೆಗುರುತುಗಳನ್ನು ನಾವೆಲ್ಲರೂ ಅನುಸರಿಸೋಣ. ಅವರ ವಿಚಾರಧಾರೆಗಳು ಇಂದಿಗೂ, ಎಂದೆಂದಿಗೂ ಪ್ರಸ್ತುತ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ನಮ್ಮೂರ ಬಳಗದ ಗೌರವ ಸಂಚಾಲಕರಾದ ಹೆಚ್ ಪಾಲಾಕ್ಷಿ, ಸಿ ರವಿ, ಸಂಚಾಲಕರುಗಳಾದ ಕೆ.ಆರ್ ಸುರೇಶ್, ಎಚ್‌.ಪಿ ಗಿರೀಶ್, ಟಿ ಗುರುಪ್ರಸಾದ್, ಎಂ ರಾಕೇಶ್, ರಾಜೇಶ್ ಮಂದಾರ, ರವಿ ಶಾಸ್ತ್ರಿ, ಮೈಸೂರು ಕುಮಾರ್ ,ಜಯಪ್ರಕಾಶ್, ಕೇಶವಮೂರ್ತಿ,ಗೋಪಿ ಆಚಾರಿ,ದಾನೇಶ್, ಕಿರಣ್, ಕೇಶವ ಸೀಗೆಹಟ್ಟಿ,ಶ್ರೀಕಾಂತ್, ರಾಘವೇಂದ್ರ, ನಂದನ್, ತೇಜಸ್, ಸಂದೇಶ್, ಇತರರು ಇದ್ದರು

B.Y. Vijayendra ಸ್ವಾತಂತ್ರ್ಯಾನಂತರ ಡಾ.ಅಂಬೇಡ್ಕರ್ ಅವರಿಗೆ ಗೌರವ ಕೊಡುವ ಕೆಲಸ ಬಿಜೆಪಿ ಮಾಡಿದೆ- ಬಿ.ವೈ.ವಿಜಯೇಂದ್ರ

0

B.Y. Vijayendra ಬಿ ಆರ್ ಅಂಬೇಡ್ಕರ್ ಅವರ ಜನ್ಮದಿನವನ್ನು ಬಹಳ ಅರ್ಥಪೂರ್ಣವಾಗಿ ಬಿಜೆಪಿಯವರು ಆಚರಣೆ ಮಾಡುತ್ತಿದ್ದೇವೆ.ನೆನ್ನೆ ಎಲ್ಲಾ ನಗರದ ಅಂಬೇಡ್ಕರ್ ಅವರ ಪುತ್ತಳಿ ಸ್ವಚ್ಛತೆ ಮಾಡುವುದು.ದೀಪಗಳನ್ನು ಪ್ರಜ್ವಲಿಸುವ ಮೂಲಕ ಅವರ ಜನ್ಮದಿನವನ್ನು ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಿದ್ದೇವೆ ಎಂದರು.

ಸ್ವತಂತ್ರ ನಂತರ ಅಂಬೇಡ್ಕರ್ ಅವರಿಗೆ ಗೌರವವನ್ನು ಕೊಡುವ ಕೆಲಸ ಬಿಜೆಪಿ ಮಾಡಿದೆ.
ಅಂಬೇಡ್ಕರ್ ಅವರ ಕನಸನ್ನ ನನಸು ಮಾಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿಗಳು ಮುಂದಾಳತ್ವವನ್ನು ವಹಿಸಿದ್ದಾರೆ.

ಕಾಂಗ್ರೆಸ್ ಅಂಬೇಡ್ಕರ್ ಅವರ ಹೆಸರನ್ನ ಇಟ್ಟುಕೊಂಡು ಶೋಷಿತ ವರ್ಗದವರ ವೋಟ್ ಬ್ಯಾಂಕಿಗಾಗಿ ದುರುಬಳಕೆ ಮಾಡಿಕೊಂಡಿದೆ.
ಅಂಬೇಡ್ಕರ್ ಅವರ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಕಾಂಗ್ರೆಸ್ಗರು, ಎರಡು ಬಾರಿ ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸೋಲಿಸಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಉಪಚುನಾವಣೆ ವಿಚಾರವಾಗಿ ಮುಖ್ಯಮಂತ್ರಿಗಳಾದಿಯಾಗಿ ಕಾಂಗ್ರೆಸ್ ನವರು ಏನೇ ಪುಂಗಿಬಾರಿಸಿದರು. ಎರಡು ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲುತ್ತದೆ.
ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆಯಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದು ಹೇಳಿದರು.

ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಲಿದೆ. ಎರಡು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲುವುದಕ್ಕೆ ಸಾಧ್ಯವೇ ಇಲ್ಲ.
ಕಾಂಗ್ರೆಸ್ ಸರ್ಕಾರದ ವಿರುದ್ಧ ಜನ ಬೇಸತ್ತಿದ್ದಾರೆ.
ಆಡಳಿತ ಯಂತ್ರ ಕುಸಿದಿರುವುದು ಹಾಗೂ ಮುಖ್ಯಮಂತ್ರಿಯ ಕುರ್ಚಿ ಗಾಗಿ ಪೈಪೋಟಿಯಲ್ಲಿ ಬೀದಿ ಕಾಳಗ ನಡೆಯುತ್ತಿದೆ ಎಂದು ಹೇಳಿದರು.

B.Y. Vijayendra ಅಭಿವೃದ್ಧಿ ಕೂಡ ರಾಜ್ಯದಲ್ಲಿ ಇಲ್ಲ. ಕಾಂಗ್ರೆಸ್ ಸರ್ಕಾರ ಎಂದರೆ ಕಾಂಗ್ರೆಸ್ ಸರ್ಕಾರ ಎಂದರೆ ಅಲ್ಪಸಂಖ್ಯಾತರ ಓಲೈಕೆ ಮಾಡಿಕೊಂಡು ಹಿಂದುಗಳಿಗೆ ಅಪಮಾನ ಮಾಡುತ್ತಿದ್ದಾರೆ‌ ಎಂದು ತಿಳಿಸಿದರು.

ಇದರ ಎಲ್ಲದರ ಪರಿಣಾಮ ಎರಡು ಕ್ಷೇತ್ರದಲ್ಲಿ ಬಿಜೆಪಿ ಆಶೀರ್ವಾದ ಮಾಡಲಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗಳಿಗೆ ನಾನು ಸವಾಲನ್ನು ಹಾಕುತ್ತೇನೆ.
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಯಲ್ಲಿ ಇದ್ದಾಗ ಏನು ಅಭಿವೃದ್ಧಿ ಕಾರ್ಯಗಳಾಗಿದೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಮೇಲೆ ಮೈಸೂರಿಗೆ ಏನು ಅಭಿವೃದ್ಧಿ ಕೆಲಸಗಳಾಗಿವೆ ಎಂದು ಹೇಳಿದರು.

ಈ ಬಗ್ಗೆ ಬಹಿರಂಗವಾಗಿ ಚರ್ಚೆಗೆ ಬರಲಿ. ದುರಂತವೆಂದರೆ ಮೈಸೂರಿನಲ್ಲಿ ಎಂ ಎಸ್ ಐ ಎಲ್ ಉಳಿಸಿಕೊಳ್ಳಲು ಆಗುತ್ತಿಲ್ಲ. ಎಂಎಸ್ಐಎಲ್ ಅನ್ನು ಮಚ್ಚಿ ಅಲ್ಲೊಂದು ಸ್ಟೇಡಿಯಂ ಮಾಡಲು ಹೊರಟಿದ್ದಾರೆ.ಇವರಿಗೆ ಅಭಿವೃದ್ಧಿಯ ಮೇಲೆ ಯಾವುದೇ ಕಾಳಜಿ ಇಲ್ಲ.
ನಾಲ್ಕನೇ ತಾರೀಕು ಜನರು ಇದಕ್ಕೆ ಸರಿಯಾಗಿ ಉತ್ತರ ಕೊಡುತ್ತಾರೆ ಎಂದು ತಿಳಿಸಿದರು.

Shivamogga Namma Halli Theatre ಡಾ.ರಘುನಂದನ್& ಜಿ. ಎಂ.ರೇಖಾ ಅವರಿಗೆ ನಮ್ಮ ಹಳ್ಳಿಥಿಯೇಟರ್ ವಾರ್ಷಿಕ ಪ್ರಶಸ್ತಿ ಘೋಷಣೆ.

0

Shivamogga Namma Halli Theatre ನಮ್ಮ ಹಳ್ಳಿ ಥಿಯೇಟರ್ ನೀಡುವ 2025-26 ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಘೋಷಿಸಿದ್ದು ರಂಗಭೂಮಿಯ ಸಾಧನೆಗಾಗಿ ಖ್ಯಾತ ರಂಗಕರ್ಮಿ ಡಾ.ಬೇಲೂರು ರಘುನಂದನ್ ಹಾಗೂ ಸಮಾಜಸೇವೆಗಾಗಿ ಶ್ರೀಮತಿ ರೇಖಾ ಜಿ.ಎಂ ರವರಿಗೆ ಈ ಬಾರಿಯ ಪ್ರಶಸ್ತಿ ಪ್ರಕಟವಾಗಿದೆ ಎಂದು ನಮ್ಮ ಹಳ್ಳಿ ಥಿಯೇಟರ್ ತಂಡದ ಅಧ್ಯಕ್ಷರಾದ ಚೇತನ್.ಸಿ ತಿಳಿಸಿದ್ದಾರೆ. ಪ್ರಶಸ್ತಿಯು ನಗದು, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರವನ್ನು ಒಳಗೊಂಡಿದ್ದು ಸನ್ಮಾನ ಕಾರ್ಯಕ್ರಮವನ್ನು ಏಪ್ರಿಲ್ 27 ರಂದು ಕರ್ನಾಟಕ ಸಂಘದಲ್ಲಿ ನಡೆಯುವ ಮನಃಸ್ಫೂರ್ತಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಮಾಡಲಾಗುವುದು. ಈ Shivamogga Namma Halli Theatre ಮೊದಲು ಈ ಪ್ರಶಸ್ತಿಗೆ ಪದ್ಮಶ್ರೀ ಹಾಜಬ್ಬ, ಡಾ.ವಿ.ಎಲ್.ಎಸ್.ಕುಮಾರ್, ಡಾ.ರಜನಿ.ಎ.ಪೈ, ಮಾಲತಿ.ಎಸ್, ಸಂದೇಶ್ ಜವಳಿ, ಪುರುಷೋತ್ತಮ ತಲವಾಟ, ಸೇತುರಾಂ, ಗಣೇಶ್ ಮಾಸ್ಟರ್, ಡಾ.ಸಂಧ್ಯಾ ಕಾವೇರಿ .ಡಾ.ಗಜಾನನ ಶರ್ಮಾ, ದಾಕ್ಷಾಯಿಣಿ ಭಟ್, ಜನಾರ್ಧನ್ ರವರು ಭಾಜನರಾಗಿದ್ದರು.