Thursday, April 2, 2026
Thursday, April 2, 2026
Home Blog Page 1329

ಬಳ್ಳಾರಿ ಉತ್ಸವದ ಮುನ್ನ ನೀಲ ನಭದಲ್ಲಿಬಣ್ಣಬಣ್ಣದ ಗಾಳಿಪಟ ಹಾರಾಟ ಪ್ರದರ್ಶನ

0

ಬಳ್ಳಾರಿ: ಮಕ್ಕಳ ಬಾಲ್ಯದ ಆಟಗಳಲ್ಲಿ ಒಂದಾದ ಗಾಳಿಪಟ ಆಟವು ಮಕ್ಕಳಲ್ಲಿನ ಉಲ್ಲಾಸ ಮತ್ತು ಆಸಕ್ತಿಯನ್ನು ಬಿಂಬಿಸುವ ಆಟವಾಗಿದೆ ಎಂದು ಬಳ್ಳಾರಿ ಗ್ರಾಮೀಣ ಶಾಸಕರಾದ ಬಿ.ನಾಗೇಂದ್ರ ಅವರು ಹೇಳಿದರು.

ಬಳ್ಳಾರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಡೆಯಲಿರುವ ಬಳ್ಳಾರಿ ಉತ್ಸವದ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಗಾಳಿಪಟ ಸ್ಪರ್ಧೆ ಹಾಗೂ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ನಡೆಸಲಾಗುತ್ತಿರುವ ಬಳ್ಳಾರಿ ಉತ್ಸವ ನಮಗೆಲ್ಲಾ ಹಬ್ಬದ ವಾತಾವರಣವಾಗಿದೆ. ಉತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಈ ಸ್ಪರ್ಧೆಯು ಮಕ್ಕಳ ಮನರಂಜನೆಗೆ ಪೂರಕವಾಗಿದೆ.

ಗಾಳಿಪಟ ಹಾರಿಸುವಾಗ ನಾವೇ ಆಕಾಶದಲ್ಲಿ ಹಾರಾಡುತ್ತಿದ್ದೆವೆ ಎನ್ನುವ ರೀತಿ ಬಾಸವಾಗುತ್ತದೆ. ನಮ್ಮೆಲ್ಲರ ಬಾಲ್ಯದ ನೆನಪುಗಳನ್ನು ಮರುಕಳಿಸುವಂತೆ ಈ ಸ್ಪರ್ಧೆ ಆಯೋಜಿಸಿದ ಜಿಲ್ಲಾಡಳಿತಕ್ಕೆ ಈ ಸಂದರ್ಭದಲ್ಲಿ ಅಭಿನಂದಿಸಿದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿರಂಜಿತ್ ಕುಮಾರ್ ಬಂಡಾರು ಅವರು ಮಾತನಾಡಿ, ಬಳ್ಳಾರಿ ಉತ್ಸವದ ಅಂಗವಾಗಿ ಆಯೋಜಿಸಲಾದ ಗಾಳಿಪಟ ಸ್ಪರ್ಧೆ ಹಾಗೂ ಪ್ರದರ್ಶನಕ್ಕೆ ವಿಕೆ ರೋ ಕೈಟ್ಸ್, ದೊಡ್ಡ ಬಳ್ಳಾಪುರ ಕೈಟ್ಸ್, ಬೆಂಗಳೂರಿನ ನೋಪಾಸನ ಕೈಟ್ಸ್, ಹೈದರಾಬಾದ್‍ನ ಶ್ರೀನಿವಾಸ್ ಕೈಟ್ಸ್ ಅವರಿಂದ ಒಟ್ಟು 140 ವೈವಿಧ್ಯಮಯ ಗಾಳಿಪಟಗಳನ್ನು ಹಾರಿಸಲು ಕರೆಸಲಾಗಿದೆ. ಇದರಿಂದ ಉತ್ಸವಕ್ಕೆ ಇನ್ನಷ್ಟು ಮೆರಗನ್ನು ತರಲಿದೆ. ಈ ಪ್ರದರ್ಶನವು ದಿನಪೂರ್ತಿ ನಡೆಯಲಿದೆ ಎಂದು ತಿಳಿಸಿದರು.

ಶಾಲಾ ಕಾಲೇಜು ಮಕ್ಕಳಿಗೆ ಗಾಳಿಪಟಗಳನ್ನು ವಿತರಿಸಲಾಗುತ್ತದೆ. ಮಕ್ಕಳು ಕೂಡ ಹಾರಿಸುವ ಮೂಲಕ ಸಂಭ್ರಮಿಸಬಹುದು ಎಂದರು.

ಶಾಸಕ ನಾಗೇಂದ್ರ, ಮೇಯರ್ ಎಂ.ರಾಜೇಶ್ವರಿ, ಎಸ್ಪಿ ರಂಜಿತ್ ಕುಮಾರ್ ಬಂಡಾರು ಅವರು ಗಾಳಿಪಟ ಹಾರಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಎಂ.ರಾಜೇಶ್ವರಿ, ಉಪ ಮೇಯರ್ ಮಾಲನ್.ಬಿ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಹರಿಸಿಂಗ್ ರಾಥೋಡ್, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಂ.ಎ ಶಕೀಬ್ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು, ಪೆÇಲೀಸ್ ಇಲಾಖೆ ಅಧಿಕಾರಿಗಳು ಇದ್ದರು.

ನಂತರ ಶಾಲಾ ಕಾಲೇಜು ಮಕ್ಕಳೆಲ್ಲರೂ ಸೇರಿ ಗಾಳಿಪಟ ಹಾರಿಸುವ ಮೂಲಕ ಸಂಭ್ರಮಿಸಿದರು.

ಗಾಳಿಪಟ ಪ್ರದರ್ಶನದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರದ ಗಾಳಿಪಟ, ಸ್ಪೈಡರ್‍ಮ್ಯಾನ್ ಗಾಳಿಪಟ, ವಿಶ್ವೇಶ್ವರಯ್ಯ ಭಾವಚಿತ್ರದ ಗಾಳಿಪಟ, ಪ್ಯಾರಾಚೂಟ್ ಗಾಳಿಪಟ, ರಾಕೆಟ್ ಗಾಳಿಪಟ ಸೇರಿದಂತೆ 140ಕ್ಕೂ ಹೆಚ್ಚು ಗಾಳಿಪಟ ಹಾರಿಸಿದ್ದು ವಿಶೇಷವಾಗಿತ್ತು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಹುಣಸೋಡು ಸ್ಫೋಟ ಶೀಘ್ರ ಪರಿಹಾರ ನೀಡಲು ನವಕರ್ನಾಟಕ ನಿರ್ಮಾಣ ವೇದಿಕೆ ಆಗ್ರಹ

0

ಶಿವಮೊಗ್ಗ: ನವ ಕರ್ನಾಟಕ ನಿರ್ಮಾಣ ವೇದಿಕೆ ಇವರ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಹುಣಸೂಡು ಸ್ಪೋಟದಿಂದ ಹಾನಿಗೊಳಗಾಗಿರುವ ಮನೆಗಳ ಸಂತ್ರಸ್ತರಿಗೆ ಕೂಡಲೇ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಶಿವಮೊಗ್ಗ ನಗರದ ಹೊರವಲಯದ ಹುಣಸೋಡು ಬಳಿ ದಿನಾಂಕ 21-01-2021ರ ರಾತ್ರಿ ಕಲ್ಲುಕ್ವಾರೆಗಳಿಗೆ ಉಪಯೋಗಿಸಲು ಅಕ್ರಮವಾಗಿ ತಂದಿದ್ದ ಜಲೆಟಿನ್ ಕಡ್ಡಿಗಳು ಹಾಗೂ ಸಿಡಿಮದ್ದುಗಳು, ಸ್ಪೋಟಗೊಂಡು ಶಿವಮೊಗ್ಗ ಜಿಲ್ಲಾಯಾದ್ಯಂತ ಭೂಕಂಪನ ಉಂಟಾಗಿದೆ.

ಜಲ್ಲಿ ಕ್ರಶರ್ ಮತ್ತು ಕಲ್ಲು ಕ್ವಾರೆಗಳ ಸುದೀಪ್ ಸಮೀಪದಲ್ಲೇ ಇರುವ
ಸುತ್ತಮುತ್ತಲಿನ ಗ್ರಾಮಗಳಾದ ಗೆಜ್ಜೆನಹಳ್ಳಿ, ಹನುಮಂತನಗರ, ಹುಣಸೋಡು, ಅಬ್ಬಲಗೇರೆ, ಬಸವನ ಗಂಗೂರು, ಬೊಮ್ಮನಕಟ್ಟೆ ಹೀಗೆ ಸುತ್ತಮುತ್ತಲಿನ ಅನೇಕ ಗ್ರಾಮಗಳ ಮನೆಗಳ ಗೋಡೆಗಳು ಬಿರುಕು ಬಿಟ್ಟಿದೆ. ಕೆಲ ಮನೆಗಳ ಚಾವಣಿ ಹಾಳಾಗಿದೆ. ಇನ್ನು ಕೆಲವು ಮನೆಗಳು ಟಿವಿ, ಎಲೆಕ್ಟ್ರಾನಿಕ್ಸ್ ಉಪಕರಣಗಳು ಸ್ಫೋಟದಿಂದ ಹಾನಿಗೊಳದಾಗಿದೆ. ಜಿಲ್ಲಾಡಳಿತದ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ಲಕ್ಷದಿಂದ ತಮ್ಮ ದಲ್ಲದ ತಪ್ಪಿನಿಂದ ನೂರಾರು ಗ್ರಾಮಸ್ಥರು ಲಕ್ಷಾಂತರ ರೂಪಾಯಿಗಳ ನಷ್ಟ ಅನುಭವಿಸುವಂತಾಗಿದೆ. ಸುಮಾರು 850 ಸಂತ್ರಸ್ತರು ಪರಿಹಾರ ನೀಡಲು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲಾ ಪಂಚಾಯತ್ ಇಂಜಿನಿಯರ್ ವಿಭಾಗದಿಂದ ಪ್ರತಿಮನೆಗಳು ಶೇ.10 ರಷ್ಟು ಹಾನಿಗೊಳಗಾಗಿದೆ ಎಂದು ವರದಿ ನೀಡಿದ್ದಾರೆ.

ಆದರೆ ಘಟನೆ ನಡೆದು ಎರಡು ವರ್ಷ ಕಳೆದರೂ ಇಲ್ಲಿಯವರೆಗೆ ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ. ಘಟನೆಯಲ್ಲಿ ಕಾಣೆಯಾದವರ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಾಹಿತಿ ನೀಡಿಲ್ಲ. ಆದ್ದರಿಂದ ದಯಮಾಡಿ ಕೂಡಲೇ ಸಂತ್ರಸ್ತರಿಗೆ ಪರಿಹಾರ ನೀಡಬೇಕು. ಇಂತಹ ದುರ್ಘಟನೆಗೆ ಕಾರಣವಾದ ಮೇಲ್ಕಂಡ ಗ್ರಾಮಗಳ ಸುತ್ತಮುತ್ತಲಿರುವ ಕ್ವಾರೆ ಗಳನ್ನು,ಕ್ರಶರ್ ಗಳನ್ನು ಮುಚ್ಚ ಬೇಕು ಎಂದು ವಿನಂತಿ ಮಾಡಿದರು.

ಈ ಸಂದರ್ಭದಲ್ಲಿ ಗೋ. ರಮೇಶ್ ಗೌಡ . ರಾಜ್ಯಾದ್ಯಕ್ಷರು, ಸಂತೋಷ್ ಜಿಲ್ಲಾಧ್ಯಕ್ಷರು, ನಿಂಗರಾಜ್, ದೇವೇಂದ್ರಪ್ಪ, ಶ್ರೀಮತಿ ನಯನ, ನಾಗರಾಜ್, ಪುಷ್ಪ, ರಾಜು ಗುಜ್ಜರ್, ಲೋಕೇಶ್. ಹೆ, ಆಸಿಫ್ ಫಯಾಜ್ ಇನ್ನು ಮುಂತಾದವರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಸಾವೆಂಬ ನೋವು (ಇದು ಕಂಬನಿ‌ ಮಿಡಿತ)

0

Book Your Advertisement Now.

ಭಗವಂತ ಕೊಡುವಾಗ ಮೊಗೆ ಮೊಗೆದು ಕೊಡುತ್ತಾನೆ ಅನ್ನುತ್ತಾರೆ. ಹಾಗೆ ಕೊಟ್ಟದ್ದು ಪ್ರವಾಹೋಪಾದಿಯಲ್ಲಿ ಆದರೆ, ಅದರ ಹೊಡೆತದಿಂದ ತಪ್ಪಿಸಿಕೊಳ್ಳುವುದಾಗಲಿ ಅಥವಾ ಅದರೊಂದಿಗೆ ಹೋಗುವ ಧೈರ್ಯವಾಗಲಿ ಮಾಡುವುದು ಕಷ್ಟಸಾಧ್ಯವೇ ಸರಿ. ’ಜಾತಸ್ಯ ಹಿ ಮರಣಂ ಧ್ರುವಮ್’ ಎಂದಿರುವುದು ಹುಟ್ಟಿದವನು ಸಾಯಬೇಕು ಎಂಬರ್ಥ ಹುಟ್ಟಿ ಎಳೆವಯಸ್ಸಿನಲ್ಲೇ ಸಾಯುವುದಲ್ಲ… ಪೂರ್ಣ ಆಯುಷ್ಯವನ್ನು ಅನುಭವಿಸಿ ಮನುಷ್ಯ ಮರಣಿಸಬೇಕು. ಆಗ ಸಮಾಧಾನವಾಗಿರಬಹುದು.
ಆದರೆ, ಇತ್ತೀಚಿನ ದಿನಗಳಲ್ಲಿ ನಾವು ನೋಡುತ್ತಿರುವುದು ಹಿರಿಯರೆದುರಿಗೆ ಕಿರಿಯರ ಮರಣ…

ಇನ್ನೂ ಬಾಳಿ ಬದುಕುವುದು ಸಾಕಷ್ಟಿದ್ದರೂ ಅವರ ಬದುಕು ಇನ್ನೂ ಅರಳುವ ಮುನ್ನವೇ ಬಾಡುವುದನ್ನು ಕಾಣುತ್ತಿದ್ದೇವೆ. ಇದು ಕಲಿಯುಗದ ಲಕ್ಷಣಗಳಲ್ಲಿ ಈ ಬಗೆಯೂ ಒಂದಾಗಿರಬಹುದು…

ವಯಸ್ಸಾದವರೆದುರಿಗೆ ಮೊಮ್ಮಕ್ಕಳು ಸಾಯುವುದು. ಸಾವಿಲ್ಲದ ಮನೆ ಇಲ್ಲ ಸರಿ ಆದರೆ, ಆ ಸಾವು ದುರ್ಮರಣ ಆಗಬಾರದು. ಇಷ್ಟೆಲ್ಲಾ ಬರೆಯಲು ಕಾರಣ ನಿನ್ನೆಯಷ್ಟೇ ಮರಣಿಸಿದ ಸಮಿತ್ ಎಂಬ ಹತ್ತೊಂಭತ್ತರ ಹರೆಯದ ತರುಣನ ಸಾವು. ಆತನ ಬಗ್ಗೆ ಹೇಳಲೇ ಬೇಕು ಎಂದೇ ಈ ಬರವಣಿಗೆ. ನಾನು ಅತೀ ಹತ್ತಿರದಿಂದ ಅವನನ್ನ ಕಂಡಿರದಿದ್ದರೂ ನಮ್ಮ ಮನೆಯ ಎದುರಿನ ರೇವತಿ ಅಮ್ಮನಿಂದ ಸಾಕಷ್ಟು ಬಾರಿ ಆತನ ಬಗ್ಗೆ ಕೇಳಿ ತಿಳಿದಿದ್ದೆ. ತನ್ನ ಸಣ್ಣ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಆತ ಜೊತೆಗಿದ್ದ ತನ್ನ ಚಿಕ್ಕ ತಮ್ಮನಿಗೆ ತಂದೆಯೂ ಆಗಿ, ಅಣ್ಣನೂ ಆಗಿ ನೋಡಿಕೊಳ್ಳುತ್ತಿದ್ದ. ಅಷ್ಟೇ ಅಲ್ಲ ತಾಯಿಯ ಪ್ರೀತಿಯ ಮಗ, ಅಜ್ಜಿಯ ಮುದ್ದಿನ ಮೊಮ್ಮಗ…
ತಾನು ಓದಲೆಂದು ಉಡುಪಿಗೆ ಹೋದರೂ ಸಹ ಬಂದಾಗ ಮನೆಯವರೆಲ್ಲರ ಕಾಳಜಿ ಅವನ ಹೆಗಲಿಗೆ ಜವಾಬ್ದಾರಿಯಂತೆ ಏರಿ ಕುಳಿತಿರುತ್ತಿತ್ತು.

ಅಮ್ಮ ಶಿವಮೊಗ್ಗದ ಪ್ರಖ್ಯಾತ ಶಾಲೆಯಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರೂ ಅದಾವುದರ ಇನ್ಫ್ಲುಯೆನ್ಸ್ ಬಳಸಿಕೊಳ್ಳದೆ ನಿಷ್ಠೆಯಿಂದ ಓದಿ 2019 ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 624ಅಂಕ ಗಳಿಸುವುದರೊಂದಿಗೆ ರಾಜ್ಯ ಹಾಗೂ ಜಿಲ್ಲೆಯ ಮಟ್ಟದಲ್ಲಿ ಗುರುತಿಸಿಕೊಂಡು ಅನೇಕ ಸನ್ಮಾನಗಳಿಗೆ ಭಾಜನನಾಗಿದ್ದ.

ಎಲ್ಲ ಶಿಕ್ಷಕರ ಅಚ್ಚುಮೆಚ್ಚಿನ ಶಿಷ್ಯನೂ ಆಗಿದ್ದ ಸಮಿತ್. ಶ್ರದ್ಧೆಯ ಓದು ಅವನನ್ನು ಸಿ.ಎ. ಪರೀಕ್ಷೆಯಲ್ಲಿ ಪಾಸಾಗಬೇಕೆಂಬ ಗುರಿಯ ಕಡೆಗೆ ಕೊಂಡೊಯ್ದು ಉಡುಪಿಯ ಪೂರ್ಣಪ್ರಜ್ಞಾ ಸಂಜೆ ಕಾಲೇಜಿನಲ್ಲಿ ಬಿ.ಕಾಂ ಪದವಿ. ಬೆಳಗ್ಗೆ ಸಿ.ಎ. ಪರೀಕ್ಷೆಯ ಕೋಚಿಂಗ್‌ಗಾಗಿ ಈ ಊರನ್ನು ಬಿಡಬೇಕಾಗಿ ಬಂತು.

ಎಲ್ಲೆಡೆಯೂ ಒಳ್ಳೆಯ ಶಿಸ್ತಿನ ಹುಡುಗನೆಂದೇ ಪ್ರಸಿದ್ಧಿ ಹೊಂದಿದ್ದಲ್ಲದೇ ಮೆಚ್ಚಿನ ವಿದ್ಯಾರ್ಥಿ ಕೂಡ ಆಗಿ ಹೊರಹೊಮ್ಮಿದ್ದ. ತಾನು ತಾಯಿ, ಅಜ್ಜಿಯರನ್ನು ತನ್ನ ತಮ್ಮಂದಿರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಬೆಟ್ಟದಷ್ಟು ಆಸೆ ಕನಸುಗಳನ್ನು ಹೊತ್ತಿದ್ದ ಆತ ನಿನ್ನೆಯ ಬೈಕ್ ಅಪಘಾತದಲ್ಲಿ ಎಲ್ಲರ ಕನಸಿನ ಕುಡಿ ಚಿಗುರುವುದರಲ್ಲೇ ಮುರುಟಿದಂತಾಗಿದೆ. ಮನೆಯ ಊರುಗೋಲೇ ಕಳಚಿ ಬಿದ್ದಂತಹ ಭಾವ ಭಾಸವಾಗಿದೆ. ಭಗವಂತ ಅವನಲ್ಲಿ ಎಲ್ಲ ಒಳ್ಳೆಯ ಗುಣಗಳನ್ನು ತುಂಬಿ ಅವನ ಒಳ್ಳೆತನ ಹೆಚ್ಚಾಯಿತೆಂದು ತನ್ನೆಡೆಗೆ ಕರೆದುಕೊಂಡನೇನೋ ಎಂಬುದು ಅವನ ಅಂತಿಮ ದರ್ಶನಕ್ಕೆ ಬಂದವರೆಲ್ಲರ ಮಾತು. ಅದೂ ಅಲ್ಲದೇ ಹೂದೋಟದ ಚೆಂದದ ಹೂವೇ ಭಗವಂತನಿಗೆ ಪ್ರೀತಿ ಅಲ್ಲವೇ… ಸಮಿತ್ ಸದ್ಗುಣಗಳ ಗಣಿ. ಅವನು ವಿನಯತೆಯ ಸಾಕಾರ ಮೂರ್ತಿ. ಎಸ್.ಎಸ್.ಎಲ್.ಸಿಯಲ್ಲಿ ಅಧಿಕ ಅಂಕಗಳಿಸಿದ ಆತನ ಮಾತುಗಳನ್ನು ಕೇಳುತ್ತಿದ್ದೆ.

ಶ್ರದ್ಧೆಯ ಓದು, ಪ್ರಾಮಾಣಿಕ ಪ್ರಯತ್ನ, ಒತ್ತಡ ರಹಿತ ಪರೀಕ್ಷೆಯ ತಯಾರಿ… ಉತ್ತರ ಬರುತ್ತಿಲ್ಲವೆಂದು ಬಾಯಿಪಾಠ ಮಾಡಿ ತೊಂದರೆಗೆ ಒಳಗಾಗಬಾರದು. ಎಂಬ ಕಿವಿಮಾತು ಎಲ್ಲವೂ ಆತನ ಸಜ್ಜನಿಕೆಗೆ ಸಾಕ್ಷಿ.
ಆ ಮನೆಗೆ ಹೋದರೆ ಕಾಣಸಿಗುವುದು ಸಣ್ಣ ವಯಸ್ಸಿನಲ್ಲಿ ಪತಿಯನ್ನೂ ಕಳೆದುಕೊಂಡು ಮಗನನ್ನೂ ಕಳೆದುಕೊಂಡ ಹೆಣ್ಣುಮಗಳ ದುಃಖ. ತನ್ನ ಮುದ್ದಿನ, ಮನೆಗೆ ಊರುಗೋಲಿನಂತಿದ್ದ ಮೊಮ್ಮಗನ ಕಳೆದುಕೊಂಡು ರೋದಿಸುತ್ತಿರುವ ಅಜ್ಜಿ. ಅವರಿಗಂತೂ ತನ್ನ ಪತಿಯ, ಮಗನ ಹಾಗೂ ಮೊಮ್ಮಗನ ಸಾವಿನ ದರ್ಶನ ಅಬ್ಬಾ ಆ ನೋವು ಹೇಳಲಸಾಧ್ಯ… ಸಾವು…!, ಬದುಕಿನ ಭರವಸೆಯನ್ನೇ ಕಳೆಯುವಂತಾದರೆ ಬದುಕಿದ್ದವರ ಸ್ಥಿತಿ ಶೋಚನೀಯ… ಆ ಕುಟುಂಬಕ್ಕೆ ಭಗವಂತ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದಷ್ಟೇ ನಮ್ಮ ಪ್ರಾರ್ಥನೆ.

ಇತ್ತೀಚಿನ ದಿನಗಳಲ್ಲಿ ಈ ರೀತಿಯ ಸಾವು ತುಂಬಾ ಕೇಳಿ ಬರುತ್ತಿರುವುದು ವಿಷಾದದ ಸಂಗತಿಯಾಗಿದೆ… ಮೊನ್ನೆ ಮೊನ್ನೆಯಷ್ಟೇ ಬಿ.ವೈ. ರಾಘವೇಂದ್ರ ಅವರ ಆಪ್ತ ಛಾಯಾಗ್ರಾಹಕ, ಕ್ರಿಯಾಶೀಲತೆಗೆ ಮತ್ತೊಂದು ಹೆಸರಾದ ಪ್ರಸನ್ನನ ಸಾವಿನ ದುರಂತ ಮಾಸುವ ಮುನ್ನವೇ ಇಂತಹ ಆಘಾತಗಳು ಬಂದೆರಗಿರುವುದು ಅತ್ಯಂತ ದುಃಖಕರ… ಈ ದುರ್ಮರಣ ನಿಲ್ಲಲಿ… ಕ್ರಿಯಾಶೀಲ ಯುವ ಜನತೆ ಬಾಳಲಿ…, ಈ ಸಾವು ನ್ಯಾಯವೇ ಎಂದು ಗೋಗರೆಯುವ ಸ್ಥಿತಿ ಯಾರಿಗೂ ಬಾರದಿರಲಿ. ಸಮಿತ್, ಪ್ರಸನ್ನರಂತವರು ಮತ್ತೆ ಹುಟ್ಟಿ ಬರಲಿ…

-ಡಾ. ಮೈತ್ರೇಯಿ ಆದಿತ್ಯಪ್ರಸಾದ್
ಸಂಸ್ಕೃತ ಉಪನ್ಯಾಸಕರು
ಪೇಸ್ ಪಿ ಯು ಕಾಲೇಜ್, ಶಿವಮೊಗ್ಗ

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಜ್ಞಾನ ವೈಭವ ದಿಂದ ವಿದ್ಯಾರ್ಥಿಗಳ ಜ್ಞಾನ ವರ್ಧನೆ- ಶೋಭಾ ಕರಂದ್ಲಾಜೆ

0

Book You

ನವ ಕರ್ನಾಟಕ ನಿರ್ಮಾಣ ವೇದಿಕೆ ಇವರ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಹುಣಸೂಡು ಸ್ಪೋಟದಿಂದ ಹಾನಿಗೊಳಗಾಗಿರುವ ಮನೆಗಳ ಸಂತ್ರಸ್ತರಿಗೆ ಕೂಡಲೇ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಶಿವಮೊಗ್ಗ ನಗರದ ಹೊರವಲಯದ ಹುಣಸೋಡು ಬಳಿ ದಿನಾಂಕ 21-01-2021ರ ರಾತ್ರಿ ಕಲ್ಲುಕ್ವಾರೆಗಳಿಗೆ ಉಪಯೋಗಿಸಲು ಅಕ್ರಮವಾಗಿ ತಂದಿದ್ದ ಜಲೆಟಿನ್ ಕಡ್ಡಿಗಳು ಹಾಗೂ ಸಿಡಿಮದ್ದುಗಳು, ಸ್ಪೋಟಗೊಂಡು ಶಿವಮೊಗ್ಗ ಜಿಲ್ಲಾಯಾದ್ಯಂತ ಭೂಕಂಪನ ಉಂಟಾಗಿದೆ.

ಜಲ್ಲಿ ಕ್ರಶರ್ ಮತ್ತು ಕಲ್ಲು ಕ್ವಾರೆಗಳ ಸುದೀಪ್ ಸಮೀಪದಲ್ಲೇ ಇರುವ
ಸುತ್ತಮುತ್ತಲಿನ ಗ್ರಾಮಗಳಾದ ಗೆಜ್ಜೆನಹಳ್ಳಿ, ಹನುಮಂತನಗರ, ಹುಣಸೋಡು, ಅಬ್ಬಲಗೇರೆ, ಬಸವನ ಗಂಗೂರು, ಬೊಮ್ಮನಕಟ್ಟೆ ಹೀಗೆ ಸುತ್ತಮುತ್ತಲಿನ ಅನೇಕ ಗ್ರಾಮಗಳ ಮನೆಗಳ ಗೋಡೆಗಳು ಬಿರುಕು ಬಿಟ್ಟಿದೆ. ಕೆಲ ಮನೆಗಳ ಚಾವಣಿ ಹಾಳಾಗಿದೆ. ಇನ್ನು ಕೆಲವು ಮನೆಗಳು ಟಿವಿ, ಎಲೆಕ್ಟ್ರಾನಿಕ್ಸ್ ಉಪಕರಣಗಳು ಸ್ಫೋಟದಿಂದ ಹಾನಿಗೊಳದಾಗಿದೆ. ಜಿಲ್ಲಾಡಳಿತದ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ಲಕ್ಷದಿಂದ ತಮ್ಮ ದಲ್ಲದ ತಪ್ಪಿನಿಂದ ನೂರಾರು ಗ್ರಾಮಸ್ಥರು ಲಕ್ಷಾಂತರ ರೂಪಾಯಿಗಳ ನಷ್ಟ ಅನುಭವಿಸುವಂತಾಗಿದೆ. ಸುಮಾರು 850 ಸಂತ್ರಸ್ತರು ಪರಿಹಾರ ನೀಡಲು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲಾ ಪಂಚಾಯತ್ ಇಂಜಿನಿಯರ್ ವಿಭಾಗದಿಂದ ಪ್ರತಿಮನೆಗಳು ಶೇ.10 ರಷ್ಟು ಹಾನಿಗೊಳಗಾಗಿದೆ ಎಂದು ವರದಿ ನೀಡಿದ್ದಾರೆ.

ಆದರೆ ಘಟನೆ ನಡೆದು ಎರಡು ವರ್ಷ ಕಳೆದರೂ ಇಲ್ಲಿಯವರೆಗೆ ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ. ಘಟನೆಯಲ್ಲಿ ಕಾಣೆಯಾದವರ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಾಹಿತಿ ನೀಡಿಲ್ಲ. ಆದ್ದರಿಂದ ದಯಮಾಡಿ ಕೂಡಲೇ ಸಂತ್ರಸ್ತರಿಗೆ ಪರಿಹಾರ ನೀಡಬೇಕು. ಇಂತಹ ದುರ್ಘಟನೆಗೆ ಕಾರಣವಾದ ಮೇಲ್ಕಂಡ ಗ್ರಾಮಗಳ ಸುತ್ತಮುತ್ತಲಿರುವ ಕ್ವಾರೆ ಗಳನ್ನು,ಕ್ರಶರ್ ಗಳನ್ನು ಮುಚ್ಚ ಬೇಕು ಎಂದು ವಿನಂತಿ ಮಾಡಿದರು.

ಈ ಸಂದರ್ಭದಲ್ಲಿ ಗೋ. ರಮೇಶ್ ಗೌಡ . ರಾಜ್ಯಾದ್ಯಕ್ಷರು, ಸಂತೋಷ್ ಜಿಲ್ಲಾಧ್ಯಕ್ಷರು, ನಿಂಗರಾಜ್, ದೇವೇಂದ್ರಪ್ಪ, ಶ್ರೀಮತಿ ನಯನ, ನಾಗರಾಜ್, ಪುಷ್ಪ, ರಾಜು ಗುಜ್ಜರ್, ಲೋಕೇಶ್. ಹೆ, ಆಸಿಫ್ ಫಯಾಜ್ ಇನ್ನು ಮುಂತಾದವರು ಉಪಸ್ಥಿತರಿದ್ದರು.

r Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಶಿವಮೊಗ್ಗ ಮತ್ತು ದಾವಣಗೆರೆಯಲ್ಲಿ ನಿಧಿ ಆಪ್ಕೆ ನಿಕಟ್ 2.00 ಕಾರ್ಯಕ್ರಮ

0

ಇತ್ತೀಚಿನ ದಿನಗಳಲ್ಲಿ ಭಾರತ ಸರ್ಕಾರವು ಗಮನಿಸಿದಂತೆ ದೇಶದ 500 ಕ್ಕೂ ಹೆಚ್ಚಿನ ಜಿಲ್ಲೆಗಳಲ್ಲಿ ಸಾಮಾಜಿಕ ಭದ್ರತೆಯ ಬಗ್ಗೆ ತಿಳುವಳಿಕೆ ಇಲ್ಲದಿರುವುದು, ಅದನ್ನು ಸುಧಾರಿಸುವುದರಲ್ಲಿ, ದೊಡ್ಡ ಅಡಚಣೆಯಾಗಿದೆ.

ಭಾರತದಲ್ಲಿ ವಯೋವೃದ್ಧರ ಜನಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಾರ್ಮಿಕ ವಲಯದ ಜನತೆಯು ನಿವೃತ್ತಿಯ ಸಮಯದಲ್ಲಿ ಅಥವಾ ನಂತರದಲ್ಲಿ, ಸಾಮಾಜಿಕ ಭದ್ರತೆಯ ಪ್ರಯೋಜನಗಳು ಮತ್ತು ಉಳಿತಾಯಗಳ ಬಗ್ಗೆ ಮಾಹಿತಿ ಹೊಂದಿರುವುದು ಅವಶ್ಯಕವಾಗಿದೆ.

ಪ್ರತಿಯೊಂದು ಜಿಲ್ಲೆಗಳಲ್ಲಿ ದುಡಿಯುವ ಜನಸಂಖ್ಯೆಯ ಸಾಮಾಜಿಕ ಭದ್ರತೆಯ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ಒಂದು ಹೆಜ್ಜೆ ಗುರುತಾಗಿ ಮತ್ತು ಸಂಸ್ಥೆಯ ಉಪಸ್ಥಿತಿಯನ್ನು ಹೆಚ್ಚಿಸುವ ಉದ್ದೇಶದಿಂದ ಪ್ರತಿ ತಿಂಗಳ 27 ರಂದು ನಿಧಿ ಆಪ್, ನಿಕಟ್‌ 2.00 ಕಾರ್ಯಕ್ರಮವನ್ನು ಎಲ್ಲಾ ಗಳಲ್ಲಿ ಆಯೋಜಿಸಲಾಗುತ್ತಿದೆ.

ಇದು ಭವಿಷ್ಯ ನಿಧಿ ಸದಸ್ಯರ ಪಿಂಚಣಿದಾರರ ಮತ್ತು ಉದ್ಯೋಗದಾತರ ಕುಂದು ಕೊರತೆ ನಿವಾರಣಾ ವೇದಿಕೆಯಾಗಿ ಮತ್ತು ಮಾಹಿತಿ ವಿನಿಮಯ ಕಾರ್ಯಕ್ರಮವಾಗಿ ರೂಪುಗೊಂಡಿದ್ದು, ಸದಸ್ಯರು ಉದ್ಯೋಗದಾತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಿಕೆಯಿಂದ, ಹೆಚ್ಚಿನ ವ್ಯಾಪ್ತಿಯನ್ನು ಸುಲಭವಾಗಿ ತಲುಪಬಹುದಾಗಿದೆ.

ಮೇಲಿನ ಉದ್ದೇಶದಂತೆ ಶಿವಮೊಗ್ಗದ ಚೇಂಬರ್ ಆಫ್ ಕಾಮರ್ಸ್ ಮತ್ತು ದಾವಣಗೆರೆಯ BIET ಕಾಲೇಜು ಕ್ಯಾಂಪಸ್ ನಲ್ಲಿ ದಿನಾಂಕ 27-01-2023ರಂದು ಬೆಳಿಗ್ಗೆ 9:00ಯಿಂದ ನಿಧಿ ಆಪ್ಕೆ ನಿಕಟ್ 2.00 ಕಾರ್ಯಕ್ರಮವನ್ನು ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ ಭವಿಷ್ಯ ನಿಧಿ ಸದಸ್ಯರು, ಪಿಂಚಣಿ ದಾರರು ಹಾಗೂ ಉದ್ಯೋಗದಾತರ ಗಳಿಗಾಗಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು, ಪ್ರಾದೇಶಿಕ ಕಚೇರಿ ಶಿವಮೊಗ್ಗ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಗಿಲ್ ಗಿಲಿಗಿಲಿ ಬ್ಯಾಟಿಂಗ್ದ್ವಿಶತಕದಿಂದ ಭಾರತಕ್ಕೆ ಗೆಲುವು

0

ಕ್ರಿಕೆಟ್ ಅನಿಶ್ಚಿತ ಆಟ ಎನ್ನುವುದನ್ನು ಪ್ರತೀ ಪಂದ್ಯವೂ ಸಾಬೀತು ಮಾಡುತ್ತಿರುತ್ತದೆ. ಶಕ್ತ ನ್ಯೂಜಿಲೆಂಡ್ ತಂಡದ ಎದುರು ಭಾರತ ತಂಡ ಸಮವಾಗಿ ಸೆಟೆದು ನಿಂತರೂ ಏಕದಿನ ಕ್ರಿಕೆಟ್ ನಲ್ಲಿ ಮೊದಲ ಪಂದ್ಯ ದಲ್ಲಿ ಭಾರತ ಗೆಲುವಿನಿಂದ ಬೀಗಿದೆ.

ಹೈದರಾಬಾದ್ ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಅತ್ಯಂತ ರೋಚಕ ಕ್ಷಣಗಳನ್ನು ಕ್ರಿಕೆಟ್ ಪ್ರೇಮಿಗಳಿಗೆ ಭಾರತ ಮತ್ತು ನ್ಯೂಜಿಲ್ಯಾಂಡ್ ಆಟಗಾರರು ಸೃಷ್ಟಿಸಿದ್ದರು.

ಭಾರತ ಟಾಸ್ಕ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು‌. 50 ಓವರ್ 8 ವಿಕೆಟ್ ನಷ್ಟಕ್ಕೆ 349 ರನ್ ಕಲೆ ಹಾಕಿತು. ನ್ಯೂಜಿಲೆಂಡ್ ಗೆ ಅತ್ಯಂತ ಕಠಿಣವೇನೂ ಆಗಿರಲಿಲ್ಲ. ಹಾಗೆಯೇ ಅವರು ಹೋರಾಟ ಪ್ರದರ್ಶಿಸಿದರು.

ಭಾರತ ಆರಂಭಿಕ ಬ್ಯಾಟರ್ ಗಿಲ್ ಮತ್ತು ರೋಹಿತ್ ಶರ್ಮಾ ಮೊದಲ ವಿಕೆಟ್ ಜೊತೆಯಾಟದಲ್ಲಿ 60 ರನ್ ಸೇರಿಸಿದರು.
ರೋಹಿತ್ 34 ರನ್ ಗಳಿಗೆ ಔಟಾದರು. ನಂತರ ಗಿಲ್ ಅವರಿಗೆ ಕೊಹ್ಲಿ ಸಾತ್ ನೀಡಿದರು. ಕೇವಲ 8 ರನ್ ಗಳಿಗೆ ಅವರು ಪೆವಿಲಿಯನ್ ಗೆ ಮರಳಿದರು. ಆಮೇಲೆ ಇಶಾನ್ ಸೇರಿದರು. 5 ರನ್ ಗಳಿಸಿ ಔಟಾದರು.

ಸೂರ್ಯಕುಮಾರ್ 31 ರನ್ ಗಳಿಸಿದರು. ಆಗ 4 ವಿಕೆಟ್ ಗೆ 175 ರನ್ ಗಳಾಗಿದ್ದವು. ಹಾರ್ದಿಕ್ ಒಂದಿಷ್ಟು ಚುರುಕು ರನ್ ಗಳಿಸಿದರು. 28ಕ್ಕೆ ಔಟಾದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಗಿಲ್ ಮಾತ್ರ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ನಿಂದ ಬೃಹತ್ ಮೊತ್ತ ಕಟ್ಟುವ ಸಾಹಸಿಯಂತೆ ತೋರಿದರು.

19ನೇ ಏಕದಿನ ಪಂದ್ಯದಲ್ಲಿ ಅತ್ಯಂತ ವೇಗವಾಗಿ 87 ಎಸೆತಗಳಲ್ಲಿ ಶತಕ ಬಾರಿಸಿದ ಬ್ಯಾಟ್ಸ್ಮನ್ ಎಂಬ ದಾಖಲೆಗೆ ಪಾತ್ರರಾದರು ‌.

ಗಿಲ್ ಎಷ್ಟು ಆಕ್ರಮಣಕಾರಿ ಎಂದರೆ ಸತತ ಮೂರು ಸಿಕ್ಸರ್ ಗಳನ್ನ ಬಾರಿಸಿ ನ್ಯೂಜಿಲೆಂಡ್ ಬೌಲರ್ ಗಳನ್ನು ಕಂಗೆಡಿಸಿದರು. ರೋಚಕ ಬ್ಯಾಟಿಂಗ್ ನಿಂದ 208 ರನ್ ಗಳಿಸಿದರು.
ಅದರಲ್ಲಿ 19 ಬೌಂಡರಿಗಳು 9 ಸಿಕ್ಸರ್ ಗಳಿದ್ದವು.

ನ್ಯೂಜಿಲೆಂಡ್ ತಂಡ ಆತ್ಮವಿಶ್ವಾಸದಿಂದಲೇ ಬೃಹತ್ ಮೊತ್ತವನ್ನ ಎದುರಿಸಿ ಕಣಕ್ಕಿಳಿಯಿತು. ಆದರೆ ಸಿರಾಜ್ ಅವರ ಬೌಲಿಂಗ್ ದಾಳಿಗೆ ಬಸವಳಿದು 131 ರನ್ ಗಳಾಗುವಷ್ಟರಲ್ಲಿ ಆರು ವಿಕೆಟ್ ಕಳೆದುಕೊಂಡಿತು.

ಬ್ರೇಸ್ ವೇಲ್ ಮಾತ್ರ 140 ರನ್ ಗಳಿಸಿ ಪ್ರತಿರೋಧ ತೋರಿದರು. ಸ್ಯಾಂಟ್ನರ್ ಜೊತೆಯಾಟದಲ್ಲಿ ಮತ್ತೆ ಸುಧಾರಿಸಿಕೊಳ್ಳುವ ಸ್ಥೈರ್ಯ ತೋರಿದರು. ಅವರಿರ್ವರ ಜೊತೆಯಾಟ ನೋಡಿದರೆ ಪಂದ್ಯ ನ್ಯೂಜಿಲೆಂಡ್ ಪರ ವಾಲುತ್ತಿರುವಂತೆ ಕಂಡು ಬಂದಿತು.

ಕುಲದೀಪ್ ,ಶಮಿ, ಶಾರ್ದುಲ್, ಹಾರ್ದಿಕ್, ಸಿರಾಜ್, ಒಟ್ಟು ಬೌಲಿಂಗ್ ಎದುರು 337 ರನ್ ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು. ಭಾರತಕ್ಕೆ 12 ರನ್ ಗಳ ಅಂತರದ ರೋಚಕ ಜಯ ಲಭಿಸಿತು.

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-0 ಮುಂದಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಭದ್ರಾವತಿ ವಿಐಎಸ್ ಎಲ್ ಸಂಸ್ಥಾಪನಾ ದಿನಾಚರಣೆ

0

VISL ನಲ್ಲಿ 105ನೇ ಸ್ಥಾಪನೆಯ ವರ್ಷದ ಅಂಗವಾಗಿ ಅತ್ಯುತ್ತಮ ಇಂಜೀನಿಯರ್, ರಾಜನೀತಿಜ್ಞ ಸರ್. ಎಮ್. ವಿಶ್ವೇಶ್ವರಾಯರವರ ಪ್ರತಿಮೆಗೆ ದಿನಾಂಕ 18-01-2023 ರಂದು ಮಾಲಾರ್ಪಣೆ ಮಾಡುವ ಮೂಲಕ ವಿ.ಐ.ಎಸ್.ಪಿಯ ಸಮುದಾಯವು ತಮ್ಮ ಗೌರವ ವಂದನೆಗಳನ್ನು ಸಲ್ಲಿಸಿತು.

ಶ್ರೀ ಬಿ.ಎಲ್. ಚಂದ್ವಾನಿ, ಕಾರ್ಯಪಾಲಕ ನಿರ್ದೇಶಕರು, ಶ್ರೀ ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ) ಶ್ರೀ ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕರು (ಸಿಬ್ಬಂದಿ ಮತ್ತು ಸಾರ್ವಜನಿಕ ಸಂಪರ್ಕ), ಶ್ರೀ ಜೆ. ಜಗದೀಶ, ಅಧ್ಯಕ್ಷರು, ಗಿISಐ ಕಾರ್ಮಿಕರ ಸಂಘ, ಶ್ರೀ ಸುಗಾಲಿ ಲೋಕನಾಥ, ಅಧ್ಯಕ್ಷರು,VISL ಅಧಿಕಾರಿಗಳ ಸಂಘ ಇವರುಗಳು VISL ಆವರಣದೊಳಗಿರುವ ಸರ್. ಎಮ್. ವಿಶ್ವೇಶ್ವರಾಯರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಸ್ಥಾಪಕರಾದ ಸರ್. ಎಮ್. ವಿಶ್ವೇಶ್ವರಾಯರವರಿಗೆ ತಮ್ಮ ನಮ್ರತೆಯ ಗೌರವ ವಂದನೆಗಳನ್ನು ಸಲ್ಲಿಸಿದರು.

ಈ ಕಾರ್ಯಕ್ರಮದ ಸ್ಮರಣಾರ್ಥ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆಯ ಭಾಗವಾಗಿ ಗ್ರಾಮೀಣ ಶಿಕ್ಷಕರಿಗೆ ತರಬೇತಿಗಾಗಿ ಒಂದು ಲಕ್ಷ ರೂಪಾಯಿ ಮೌಲ್ಯದ 2 ಕಂಪ್ಯೂಟರುಗಳು ಮತ್ತು ವೀಡಿಯೋ ವೆಬ್‌ಕ್ಯಾಮ್‌ಅನ್ನು ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಎ.ಕೆ. ನಾಗೇಂದ್ರಪ್ಪರವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಎಸ್.ಕೆ. ರವಿಕುಮಾರ್, ಎಜುಕೇಷನ್ ಕೋ-ಆರ್ಡಿನೇಟರ್ ಉಪಸ್ಥಿತರಿದ್ದರು.

VISL ಅತಿಥಿಗೃಹದ ಮಾಹಿತಿ ವ್ಯವಸ್ಥೆಯನ್ನು ಉದ್ಘಾಟಿಸಲಾಯಿತು.VISL ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ್ದು, ಶ್ರೀ ನಿತಿನ್ ಜೋಸ್, ಸಹಾಯಕ ಮಹಾಪ್ರಬಂಧಕರು ನೇತೃತ್ವದ ಸಿಸ್ಟಂ ಸುಧಾರಣೆಯ ಪ್ರಕ್ರಿಯೆಯ ಭಾಗವಾಗಿ ಪ್ರಾರಂಭಿಸಲಾಗಿದೆ.

ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ನೀರಿನ ಕಂದಾಯ ಕಟ್ಟಲು ನಗರ ಪಾಲಿಕೆಯ ವಸೂಲಾತಿ ಕೌಂಟರ್ ಆರಂಭ

0

ಶಿವಮೊಗ್ಗ : ಶಿವಮೊಗ್ಗ ನಗರ
ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ
ಮತ್ತು ಉಪವಿಭಾಗವು ದಿ:22/01/2023ರ ಭಾನುವಾರದಂದು
2022-23 ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕಂದಾಯ
ವಸೂಲಾತಿಗಾಗಿ “ಜಯನಗರ ಸರ್ವೋದಯ ಶಾಲೆಯ
ಹತ್ತಿರ, ಶಾಂತಿನಗರ ಪೊಲೀಸ್ ಚೌಕಿ ಕೊನೆ ಬಸ್‌ಸ್ಟಾಪ್ ಹತ್ತಿರ,
ಭಾರತೀಯ ಸಭಾ ಭವನದ ಎದುರು ಆರ್.ಎಂ.ಎಲ್.ನಗರ,
ದ್ರೌಪದಮ್ಮ ಸರ್ಕಲ್ ಹತ್ತಿರ, ನ್ಯೂಮಂಡ್ಲಿ ಸರ್ಕಲ್ ಹತ್ತಿರ
ಶಿವಮೊಗ್ಗ” ಗಳಲ್ಲಿ ವಿಶೇಷ ನೀರಿನ ಕಂದಾಯ ವಸೂಲಾತಿ
ಕೌಂಟರ್‌ಗಳನ್ನು ತೆರೆಯಲಾಗಿದೆ.

ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ
ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು
ಕಡಿತಗೊಳಿಸುವುದು
ಅನಿವಾರ್ಯವಾಗಲಿದೆ.

ಸಾರ್ವಜನಿಕರು
ಸಹಕರಿಸುವಂತೆ ಕರ್ನಾಟಕ ನಗರ ನೀರುಸರಬರಾಜು ಮತ್ತು
ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ
ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ವೈಭವದ ಹಂಪಿ ಉತ್ಸವಕ್ಕೆ ಭರದ ಸಿದ್ಧತೆ

0

ಹಂಪಿ ಉತ್ಸವ 2023; ವೇದಿಕೆ ನಿರ್ಮಾಣಕ್ಕೆ ಸಜ್ಜು
ಹೊಸಪೇಟೆ(ವಿಜಯನಗರ),ಜ.18(ಕರ್ನಾಟಕ ವಾರ್ತೆ): ಜನವರಿ ತಿಂಗಳ ಅಂತ್ಯದಲ್ಲಿ ನಡೆಯಲಿರುವ ವಿಶ್ವವಿಖ್ಯಾತ ಹಂಪಿ ಉತ್ಸವ ಆಚರಣೆಗೆ ಸಂಬಂಧಿಸಿದಂತೆ ಸಕಲ ಸಿದ್ಧತೆಗಳನ್ನು ಜಿಲ್ಲಾಡಳಿತ ಕೈಗೊಳ್ಳುತ್ತಿದೆ.
ಹಂಪಿಯ ಗಾಯಿತ್ರಿ ಪೀಠದ ಮೈದಾನದ ಆವರಣದಲ್ಲಿ ಹಂಪಿ ಉತ್ಸವ ಸಮಾರಂಭದ ಅಂಗವಾಗಿ ಮುಖ್ಯವೇದಿಕೆಯನ್ನು ನಿರ್ಮಿಸಲು ಸಜ್ಜುಗೊಳಿಸಲಾಗುತ್ತಿದೆ. ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಗಾಯತ್ರಿ ಪೀಠ, ಎದುರು ಬಸವಣ್ಣ ಮಂಟಪ, ವಿರುಪಾಕ್ಷೇಶ್ವರ ದೇವಸ್ಥಾನದ ಆವರಣ ಹಾಗೂ ಸಾಸುವೆಕಾಳು ಗಣಪ ಮಂಟಪದ ಬಳಿ ವೇದಿಕೆ ನಿರ್ಮಿಸಲಾಗುತ್ತಿದೆ.

ಮುಖ್ಯವೇದಿಕೆಯಾದ ಗಾಯಿತ್ರಿಪೀಠದ ಆವರಣದ ಸ್ವಚ್ಛತೆಯನ್ನು ಪೌರ ಕಾರ್ಮಿಕರು ಕೈಗೊಳ್ಳುತ್ತಿದ್ದಾರೆ. ಮುಖ್ಯ ವೇದಿಕೆ ಜೊತೆಗೆ ಉಳಿದ ವೇದಿಕೆಗಳ ಪರಿಶೀಲನೆ ಹಾಗೂ ಸಿದ್ಧತೆಯನ್ನು ಕೈಗೊಳ್ಳಲಾಗುತ್ತಿದೆ.
ಪಾರ್ಕಿಂಗ್ ಸೌಲಭ್ಯ: ಹಂಪಿ ಉತ್ಸವಕ್ಕೆ ಆಗಮಿಸಲಿರುವ ಪ್ರವಾಸಿಗರ ಅನುಕೂಲಕ್ಕಾಗಿ ವಾಹನಗಳ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲು ಸ್ವಚ್ಛತೆಯನ್ನು ಹಾಗೂ ಹೆಚ್ಚಿನ ಸ್ಥಳಾವಕಾಶವನ್ನು ನಿರ್ಮಿಸಲು ಪೌರಕಾರ್ಮಿಕರು ಕಾರ್ಯನಿರತರಾಗಿದ್ದಾರೆ.

ಪರೀಕ್ಷಾ ಪೇ ಚರ್ಚಾ ಅಂಗವಾಗಿ ಚಿತ್ರಕಲಾ ಸ್ಪರ್ಧೆ

0

ಶಿವಮೊಗ್ಗ: ವಿದ್ಯಾರ್ಥಿಗಳ ಮೇಲಿನ ಪರೀಕ್ಷೆಯ ಒತ್ತಡವನ್ನು ನಿವಾರಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿರುವ ಪರೀಕ್ಷಾ ಪೇ ಚರ್ಚಾ ಅಂಗವಾಗಿ ಕೇಂದ್ರೀಯ ವಿದ್ಯಾಲಯದಲ್ಲಿ ಸಿಬಿಎಸ್‌ಸಿ ಶಾಲೆಗಳ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಪರೀಕ್ಷಾ ಪೇ ಚರ್ಚಾ ಕುರಿತು ಪ್ರಧಾನಿ ಅವರು ನೀಡಿರುವ ಅಂಶಗಳನ್ನು ಇಟ್ಟುಕೊಂಡು ಚಿತ್ರ ರಚಿಸಬೇಕು. ಶಿವಮೊಗ್ಗ ನಗರದ ಎಲ್ಲಾ ಸಿಬಿಎಸ್‌ಸಿ ಶಾಲೆಗಳ 9ರಿಂದ 12ನೇ ತರಗತಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ಸ್ಪರ್ಧೆಯು ಜನವರಿ 23ರಂದು ಬೆಳಿಗ್ಗೆ 10ರಿಂದ 12ರವರೆಗೆ ನಡೆಯಲಿದೆ ಎಂದು ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಯು.ಪಿ.ಬಿನೋಯ್ ತಿಳಿಸಿದ್ದಾರೆ.