Wednesday, April 1, 2026
Wednesday, April 1, 2026
Home Blog Page 1330

ಚುಟುಕು ಸುದ್ದಿ

0

ಶಿವಮೊಗ್ಗ:

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2022 ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಅಂತರಾಷ್ಟ್ರ, ರಾಷ್ಟ್ರ ಮತ್ತು ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ ಕ್ರೀಡಾಪಟುಗಳಿಗೆ ಸನ್ಮಾನ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

2022 ರಿಂದ ಜನವರಿಯಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಅಂತರಾಷ್ಟ್ರ, ರಾಷ್ಟ್ರ ಮತ್ತು ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಸ್ಥಾನಗಳಿಸಿದ ಪ್ರತಿಭಾನ್ವಿತ ಕ್ರೀಡಾಪಟುಗಳು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಅರ್ಜಿಗಳನ್ನು ಪಡೆದು, ಪ್ರಶಸ್ತಿ ಪತ್ರಗಳ ನಕಲುಗಳನ್ನು ಗೆಜೆಟೆಡ್‌ ಅಧಿಕಾರಿಗಳಿಂದ ದೃಢೀಕರಿಸಿ ಯುವ ಸಬಲೀಕ್ರಣ ಮತ್ತು ಕ್ರೀಡಾ ಇಲಾಖೆ ಕಚೇರಿ, ನೆಹರೂ ಕ್ರೀಡಾಂಗಣ, ಶಿವಮೊಗ್ಗ ಇಲ್ಲಿಗೆ ದಿನಾಂಕ: 24-01-2023 ರೊಳಗೆ ಸಲ್ಲಿಸಬಹುದು.

ಈ ಹಿಂದೆ ಜಿಲ್ಲಾಡಳಿತದಿಂದ ನಡೆದ ಕಾರ್ಯಕ್ರಮದಲ್ಲಿ ಈಗಾಗಲೇ ಸನ್ಮಾನಿತರಾದವರು, ಹಿರಿಯ ಕ್ರೀಡಾಪಟುಗಳು(ವೆಟರನ್ಸ್) ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಜೆಸಿಬಿ ಆಪರೇಟರ್ ಆಗಲು ಉಚಿತ ತರಬೇತಿ ಅರ್ಜಿಗಳಿಗೆ ಆಹ್ವಾನ

0

ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ-ಹಳಿಯಾಳ ಹಾಗೂ ಜೆಸಿಬಿ ಇಂಡಿಯಾ ಇವರ ಜಂಟಿ ಸಹಯೋಗದಲ್ಲಿ 30 ದಿನಗಳ ಜೆಸಿಬಿ ಆಪರೇಟರ್ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದ್ದು, 18-45 ವರ್ಷ ವಯೋಮಿತಿಯೊಳಗಿನ ಯುವಕರಿಂದ ಅರ್ಜಿ ಆಹ್ವಾನಿಸಿದೆ.

ಆಸಕ್ತರು ತಮ್ಮ ಹೆಸರು, ಹುಟ್ಟಿದ ದಿನಾಂಕ, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ತರಬೇತಿಯ ಅವಶ್ಯಕತೆ, ಹಾಲಿ ಮಾಡುತ್ತಿರುವ ಕೆಲಸ ಇತ್ಯಾದಿ ವಿವರಗಳನ್ನೊಳಗೊಂಡ ಅರ್ಜಿಯನ್ನು ಜನವರಿ 25 ರೊಳಗಾಗಿ ಕೆನರ ಬ್ಯಾಂಕ್ ದೇಶಪಾಂಡೆ ಆರ್‌ಸಿಟಿ, ವಿಸ್ತರಣಾ ಕೇಂದ್ರ ಹಸನಮಾಳ್, ದಾಂಡೇಲಿ-581325 ,ವಿಳಾಸಕ್ಕೆ ಕಳುಹಿಸುವುದು. ಅಥವಾ ಮೊ.ಸಂ.: 08284-298547/ 9449782425/973184284/ 9731842849 ಗೆ ವಾಟ್ಸ್ ಆ್ಯಪ್ ಮೂಲಕ ಕಳುಹಿಸುವುದು.

ತರಬೇತಿಯು ಊಟೋಪಚಾರ ಹಾಗೂ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು, ತರಬೇತಿಯ ನಂತರ ಉದ್ಯೋಗ ನಿಯೋಜನೆ ಮಾರ್ಗದರ್ಶನ ನೀಡಲಾಗುವುದು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಅಸ್ವಸ್ಥ ಮಕ್ಕಳನ್ನ ಮೆಗಾನ್ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಕ್ಷೇಮ ವಿಚಾರಿಸಿದ ಜಿಲ್ಲಾಧಿಕಾರಿ

0

ಮೇಲಿನ ಹನಸವಾಡಿಯ ಮೌಲಾನಾ ಆಜಾದ್ ವಸತಿ ಶಾಲೆಯಲ್ಲಿ ಸೋಮವಾರ ಮಧ್ಯಾಹ್ನ ಊಟದ ನಂತರ ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ನಗರದ ಮೆಗ್ಗಾನ್ ಆಸ್ಪತ್ರೆಗೆ ಧಾಖಲಿಸಲಾಗಿದ್ದು, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಆರೋಗ್ಯದ ಕುರಿತು ವಿಚಾರಿಸಿದರು.

ಆಸ್ಪತ್ರೆಗೆ ಭೇಟಿ ನೀಡಿದ ಅವರು ಮಾತನಾಡಿ, ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದ 92 ವಿದ್ಯಾರ್ಥಿನಿಯರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಎಲ್ಲ ವಿದ್ಯಾರ್ಥಿಗಳು ಆರೋಗ್ಯವಾಗಿದ್ದಾರೆ. ಯಾವುದೇ ತೊಂದರೆ ಇಲ್ಲ. ಈಗಾಗಲೇ 70 ವಿದ್ಯಾರ್ಥಿಗಳನ್ನು ಬಿಡುಗಡೆಗೊಳಿಸಲಾಗಿದ್ದು, ತಡವಾಗಿ ದಾಖಲಾದ ವಿದ್ಯಾರ್ಥಿಗಳನ್ನು ಇನ್ನು ಸ್ವಲ್ಪ ಕಾಲ ನಿಗಾ ವಹಿಸಿ ಅವರನ್ನೂ ಸಹ ಬಿಡುಗಡೆಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಡಿ.ಪ್ರಕಾಶ್, ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟೀಲ್, ಇತರೆ ವೈದ್ಯಾಧಿಕಾರಿಗಳು, ಅಧಿಕಾರಿಗಳು ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಹಿರಿಯ ರಾಜಕಾರಣಿ ತಿಮ್ಮಪ್ಪ ಹೆಗ್ಡೆ ಅವರ ನಿಧನಕ್ಕೆ ವಿವಿಧ ಗಣ್ಯರ ಶ್ರದ್ದಾಂಜಲಿ

0

ಶಿವಮೊಗ್ಗ ಜಿಲ್ಲೆಯ “ರಾಜಕೀಯ ಭೀಷ್ಮ” ಎಂದೇ ಗುರುತಿಸಲ್ಪಡುವ ಅತ್ಯಂತ ಸರಳ ಸಜ್ಜನ ರಾಜಕಾರಣಿ ಎಲ್‌.ಟಿ. ತಿಮ್ಮಪ್ಪ ಹೆಗಡೆಯವರ ನಿಧನದ ವಾರ್ತೆ ಕೇಳಿ ಬೇಸರವಾಯಿತು. ಕೇವಲ ರಾಜಕೀಯ ಕ್ಷೇತ್ರಕ್ಕೆ ಅಂಟಿಕೊಳ್ಳದೆ ಸಹಕಾರಿ ಕ್ಷೇತ್ರ ವಿದ್ಯಾ ಕ್ಷೇತ್ರ, ಧಾರ್ಮಿಕ ಕ್ಷೇತ್ರ, ಹಾಗೂ ಬ್ರಾಹ್ಮಣ ಸಮುದಾಯ ನಡುವೆ ಕೂಡ ತಮ್ಮನ್ನು ತಾವು ತೊಡಸಿಕೊಂಡಿದ್ದ ತಿಮ್ಮಪ್ಪನವರು ಎಲ್ಲರನ್ನೂ ಗುರುತಿಸಿ ಮಾತನಾಡಿಸತ್ತಿದ್ದರು. ಯಾವುದೇ ಹಮ್ಮು ಬಿಮ್ಮಿಲ್ಲದೆ ಎಲ್ಲರೂಡನೆ ಒಂದಾಗಿ ಬೆರೆಯುತ್ತಿದ್ದರು. ಅವರ ಸರಣ ನಡವಳಿಕೆ ಸ್ನೇಹಶೀಲ ಸ್ವಭಾವ ನಿಜಕ್ಕೂ ನಮ್ಮೆಲ್ಲರಿಗೂ ಮಾದರಿ.94 ವರ್ಷದ ತಿಮ್ಮಪ್ಪನವರು ವಯೋ ಸಹಜವಾದ ಕಾಯಿಲೆಯಿಂದ ನಿಧನ ಹೊಂದಿದ್ದಾರೆ.
ಶ್ರೀ ತಿಮ್ಮಪ್ಪ ಹೆಗಡೆಯವರ ಆತ್ಮಕ್ಕೆ ಭಗವಂತ ಸದ್ಗತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ಈ ನೋವನ್ನು ಬರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಎಸ್.ದತ್ತಾತ್ರಿಯವರು ಶ್ರದ್ಧಾಂಜಲಿಯವರು ಸಂತಾಪ ಸೂಚಿಸಿದ್ದಾರೆ.

ಹಿರಿಯ ರಾಜಕಾರಣಿ ಎಲ್.ಟಿ. ತಿಮ್ಮಪ್ಪ ಹೆಗಡೆಯವರ ನಿಧನಕ್ಕೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸಾರ್ವಜನಿಕ ಜೀವನದಲ್ಲಿ ಹೇಗಿರಬೇಕು ಎಂಬುದಕ್ಕೆ ಎಲ್.ಟಿ. ಅವರ ಜೀವನ ಮಾದರಿಯಾಗಿದೆ. ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡ ಅವರ ಕಾರ್ಯವೈಖರಿ ಯುವ ಪೀಳಿಗೆಗೆ ಆದರ್ಶಪ್ರಾಯವಾಗಿದೆ ಎಂದು ಸಾಗರ ಶಾಸಕರಾದ ಎಚ್. ಹಾಲಪ್ಪನವರು ಸಂತಾಪ ಸೂಚಿಸಿದ್ದಾರೆ.

ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕರಾಗಿ ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಸದಾ ಶ್ರಮಿಸಿದ ಮೇರು ವ್ಯಕ್ತಿತ್ವ ಎಲ್. ಟಿ. ಅವರದ್ದು. ಕಾಂಗ್ರೆಸ್ ಪಕ್ಷದ ಸಂಘಟನೆಗೂ ಅವರು ನೀಡಿರುವ ಕೊಡುಗೆ ಅಪಾರ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಆರ್. ಜಯಂತ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ ‌.

ಮಲೆನಾಡು ಪ್ರದೇಶದ ಜನಮಾನಸದಲ್ಲಿ ಸದಾ ಉಳಿಯುವ ಕೆಲವೇ ರಾಜಕಾರಣಿಗಳ ಪೈಕಿ ಎಲ್.ಟಿ. ಕೂಡ ಒಬ್ಬರಾಗಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ಅವರು ಕೊಟ್ಟಿರುವ ಒತ್ತನ್ನು ಮರೆಯುವಂತಿಲ್ಲ ಎಂದು ಸಾಗರದ ಮಾಜಿ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರು ತಿಳಿಸಿದ್ದಾರೆ.

ಸರಳತೆ ಸಜ್ಜನಿಕೆಯ ಮನೋಭಾವದ ಎಲ್.ಟಿ. ತಿಮ್ಮಪ್ಪ ಹೆಗಡೆ ಅತ್ಯಂತ ಪ್ರಭಾವಿ ವ್ಯಕ್ತಿತ್ವ ಹೊಂದಿದ್ದರು. ರಾಜಕಾರಣದ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಅವರು ನೀಡಿರುವ ಕೊಡುಗೆಯನ್ನು ಮರೆಯುವಂತಿಲ್ಲ ಎಂದು ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪನವರು ಸಂತಾಪ ವ್ಯಕ್ತಪಡಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ವಿವಿಧ ಇಲಾಖೆಗಳ ಗ್ರೂಪ್ ಸಿ.ಪರೀಕ್ಷೆಗಳಿಗೆ ಜಿಲ್ಲೆಯಲ್ಲಿ ಪೂರ್ವ ಸಿದ್ಧತೆ

0

ಶಿವಮೊಗ್ಗ:
ಪೌರಾಡಳಿತ ನಿರ್ದೇಶನಾಲಯ ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಲ್ಲಿನ ವಿವಿಧ ಗ್ರೂಪ್ ‘ಸಿ’ ಹುದ್ದೆಗಳಿಗೆ ಕಡ್ಡಾಯ ಭಾಷಾ ಪರೀಕ್ಷೆ/ಸ್ಪರ್ಧಾತ್ಮಕ ಪರೀಕ್ಷೆಗಳು ಜ.21 ಮತ್ತು 22 ರಂದು ನಗರದ 4 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಸೂಚಿಸಿದರು.

ಶಿವಮೊಗ್ಗ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಸಂಬಂಧ ಮಾರ್ಗಾಧಿಕಾರಿಗಳು, ವೀಕ್ಷಕರು, ನಿರೀಕ್ಷಣಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜ.21 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ರವರೆಗೆ ಹಾಗೂ ಜ.22 ರಂದು ಬೆಳಿಗ್ಗೆ 10 ರಿಂದ 11.30 ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆವರೆಗೆ ಸಹ್ಯಾದ್ರಿ ಕಲಾ, ಸಹ್ಯಾದ್ರಿ ವಾಣಿಜ್ಯ, ಸಹ್ಯಾದ್ರಿ ವಿಜ್ಞಾನ ಹಾಗೂ ಕರ್ನಾಟಕ ಪಬ್ಲಿಕ್ ಶಾಲೆ ಒಟ್ಟು 4 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಒಟ್ಟು 714 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆಂದು ಮಾಹಿತಿ ನೀಡಿದರು.

ಈಗಾಗಲೇ ಪರೀಕ್ಷಾ ಕೇಂದ್ರಗಳಿಗೆ ಮಾರ್ಗಾಧಿಕಾರಿ, ವೀಕ್ಷಕರು ಹಾಗೂ ಸ್ಥಳೀಯ ನಿರೀಕ್ಷಣಾಧಿಕಗಳನ್ನು ನಿಯೋಜಿಸಲಾಗಿದೆ. 4 ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಪರೀಕ್ಷೆಗಳು ಪಾರದರ್ಶಕವಾಗಿ, ಸುಗಮವಾಗಿ ನಡೆಯಲು ಅನುಕೂಲವಾಗುವಂತೆ ಸೆಕ್ಷನ್ 144 ರನ್ವಯ ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀ ಫಾಸಲೆವರೆಗಿನ ಪ್ರದೇಶದಲ್ಲಿ ನಿಷೇಧಾಜ್ಞೆ ಹೊರಡಿಸಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ ಟೈಪಿಂಗ್, ಜೆರಾಕ್ಸ್, ಇತರೆ ಅಂಗಡಿಗಳು ನಿಷೇಧಾಜ್ಞೆ ಅವಧಿಯಲ್ಲಿ ತೆರೆಯುದನ್ನು ಪ್ರತಿಬಂಧಿಸಲಾಗಿದೆ.

ಪರೀಕ್ಷಾ ಕೇಂದ್ರಗಳಿಗೆ ಯಾವುದೇ ರೀತಿಯ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳಿಗೆ ಅವಕಾಶವಿರುವುದಿಲ್ಲ ಎಂದು ತಿಳಿಸಿದ, ಅವರು ಕೆಪಿಎಸ್‍ಸಿ ಮಾರ್ಗಸೂಚಿಯನ್ವಯ ಅಭ್ಯರ್ಥಿಗಳಿಗೆ ಆಸನಗಳ ವ್ಯವಸ್ಥೆ ಮಾಡಿ, ಮೂಲಭೂತ ಸೌಕರ್ಯವನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪರೀಕ್ಷಾ ಮಾರ್ಗಸೂಚಿಯ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ ಅವರು ಶಾಂತ ರೀತಿಯಲ್ಲಿ, ಸುವ್ಯವಸ್ಥಿತವಾಗಿ ಪರೀಕ್ಷೆಗಳನ್ನು ನಡೆಸಲು ಅಗತ್ಯವಾದ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡು ಪರೀಕ್ಷೆಯನ್ನು ಯಶಸ್ವಿಗೊಳಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಅಧಿಕಾರಿಗಳು ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಳಿಗೆ ತೆರೆಯಲು ಆಹ್ವಾನ

0

ಶಿವಮೊಗ್ಗ: ಫೆಬ್ರವರಿ 1ಮತ್ತು 2 ಶಿವಮೊಗ್ಗ ಜಿಲ್ಲಾ 17 ನೆಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸಿದ್ದತೆ ಮಾಡುತ್ತಿದ್ದೇವೆ.

ಸಮ್ಮೇಳನ ಅಧ್ಯಕ್ಷರಾಗಿ ಪತ್ರಕರ್ತರು, ಸಾಹಿತಿಗಳು ಆದ ಶ್ರೀ ಲಕ್ಷ್ಮಣ ಕೊಡಸೆ ಅವರನ್ನು ಆಯ್ಕೆ ಮಾಡಲಾಗಿದೆ.

ಸಮ್ಮೇಳನ ಅರ್ಥಪೂರ್ಣವಾಗಿಸಲು ಉತ್ತಮ ಚಿಂತನೆಗಳಿಗೆ ಒತ್ತು ನೀಡಲಾಗಿದೆ. ಮಲೆನಾಡಿನ ಬೇಗುದಿಗಳು, ಸಾಹಿತ್ಯ ಸಾಂಸ್ಕೃತಿಕ ಬಿಕ್ಕಟ್ಟುಗಳು, ಜಾನಪದ ಮರು ಓದು – ಆಧುನಿಕತೆ, ಪ್ರಚಲಿತ ಸಮಸ್ಯೆಗಳು, ಕಾವ್ಯ ಸಂಭ್ರಮ ಸೇರಿದಂತೆ ಹಲವು ಗೋಷ್ಠಿ ಗಳನ್ನು ಏರ್ಪಡಿಸಲಾಗಿದೆ.

ಸಮ್ಮೇಳನ ಫೆಬ್ರವರಿ 1,2 ಬುಧವಾರ, ಗುರುವಾರ ಶಿವಮೊಗ್ಗ ಚಾಲುಕ್ಯ ನಗರದ ಸಾಹಿತ್ಯ ಗ್ರಾಮದಲ್ಲಿ ನಡೆಯಲಿದೆ. ಉಪನ್ಯಾಸಕರು, ಶಿಕ್ಷಕರು ಸಮ್ಮೇಳನದಲ್ಲಿ ಭಾಗವಹಿಸಲು, ಸಾಹಿತ್ಯ ಆಸಕ್ತಿ ವಿಸ್ತಾರವಾಗಲು ಅನುಕೂಲ ಆಗುವಂತೆ ವಿಶೇಷ ರಜೆ ಸೌಲಭ್ಯ ನೀಡಲಾಗಿದೆ.

ಸಮ್ಮೇಳನ ಎಂದಾಕ್ಷಣ ಪುಸ್ತಕ ಪ್ರದರ್ಶನ, ಮಾರಾಟ ಇರಲೇಬೇಕು. ಸಾಹಿತ್ಯ ಆಸಕ್ತರ ಮನತಣಿಸಲು ಪುಸ್ತಕ ಪ್ರದರ್ಶನ, ಮಾರಾಟ ಮಾಡಲು ಆಸಕ್ತಿಯಿರುವವರು ಒಂದು ಸಾವಿರ ರೂ ಶುಲ್ಕ ಪಾವತಿ ಮಾಡಿ ಹೆಸರು ನೋಂದಣಿ ಮಾಡಲು ಕೋರುತ್ತೇವೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷರಾದ ಶ್ರೀ ಡಿ. ಮಂಜುನಾಥ ಕೋರಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಆಹಾರ ಸೇವಿಸಿ ಅಸ್ವಸ್ಥರಾದ 108 ವಿದ್ಯಾರ್ಥಿಗಳು ಮೆಗಾನ್ ಆಸ್ಪತ್ರೆಗೆ ದಾಖಲು

0

ಶಿವಮೊಗ್ಗ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲಾ ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವ ಪ್ರಕರಣ ಇಂದು ಕೂಡ ಮುಂದುವರೆದಿದೆ.

ತಡರಾತ್ರಿ ಮೇಲಿನ ಹನಸವಾಡಿ ಮೊರಾರ್ಜಿ ಶಾಲೆಯ 108 ಮಕ್ಕಳು ಅಸ್ವಸ್ಥತರಾಗಿದ್ದರು. ಈಗ ಮಲವಗೊಪ್ಪ, ಗಾಜನೂರು ಮೊರಾರ್ಜಿ ಶಾಲೆ, ಹೊಳಲೂರು, ಮಕ್ಕಳು ಅಸ್ವಸ್ಥಗೊಂಡು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೆಳಗ್ಗೆಯಿಂದ ಮಲವಗೊಪ್ಪ ಮೊರಾರ್ಜಿ ಶಾಲೆಯ 30 ಮಕ್ಕಳು, ಗಾಜನೂರು ಮೊರಾರ್ಜಿ ಶಾಲೆಯ 20 ಮಕ್ಕಳು ಹಾಗೂ ಹೊಳಲೂರು ಮೊರಾರ್ಜಿ ಶಾಲೆಯ 10 ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.

ಅನಾರೋಗ್ಯದ ಪ್ರಕರಣಗಳಿಂದ ಒಟ್ಟು ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ 108ಕ್ಕೆ ಏರಿಕೆಯಾಗಿದೆ. ಅದರ ಎಲ್ಲಾ ವಿದ್ಯಾರ್ಥಿಗಳ ಆರೋಗ್ಯ ಸ್ಥಿರವಾಗಿದ್ದು ಯಾವುದೇ ತೊಂದರೆ ಇಲ್ಲ ಎಂದು ತಿಳಿದುಬಂದಿದೆ.

ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜಣ್ಣ ಸಂಕಣ್ಣನವರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿಗಳ ಆರೋಗ್ಯವನ್ನು ವಿಚಾರಿಸಿದರು.

ಹಾಸ್ಟೆಲ್ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗಿರುವುದು ಯಾಕೆ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಣುತ್ತಿತ್ತು. ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾದ ವಿದ್ಯಾರ್ಥಿನಿಯರಲ್ಲಿ ಶೇಕಡಾ 100 ರಷ್ಟು ವಿದ್ಯಾರ್ಥಿಗಳು ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಜನವರಿ 15 ರಂದು ಆಯೋಜಿಸಿದ್ದ ಯೋಗಾಥಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳೇ ಆಗಿದ್ದಾರೆ.

15 ರ ಬೆಳಿಗ್ಗೆ ಯೋಗಥಾನ್ ನಲ್ಲಿ ಭಾಗವಹಿಸಿದ ಮಕ್ಕಳಲ್ಲಿ ಅಂದು ಸಂಜೆ ವಾಂತಿ ಹೊಟ್ಟೆನೋವು ತಲೆನೋವು ಬೆನ್ನುನೋವು ಕಾಣಿಸಿಕೊಂಡಿದೆ.

ಮೇಲಿನ ಹನಸವಾಡಿ, ಹೊಳಲೂರು,ಕುಂಸಿ, ಮಲವಗೊಪ್ಪ ಗಾಜನೂರು ವಿದ್ಯಾನಗರದ ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ವಾಂತಿ ಕಾಣಿಸಿಕೊಂಡಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

ಯೋಗಥಾನ್ ನಲ್ಲಿ ಭಾಗವಹಿಸದೇ ಇರುವ ವಸತಿ ಶಾಲೆಯ ವಿದ್ಯಾರ್ಥಿಗಳಲ್ಲಿ ಯಾರೊಬ್ಬರಿಗೂ ವಾಂತಿ ಹೊಟ್ಟೆನೋವು ಕಾಣಿಸಿಕೊಂಡಿಲ್ಲ.

ಯೋಗಥಾನ್ ನಲ್ಲಿ ಭಾಗವಹಿಸಿದ ಮಕ್ಕಳಿಗೆ ಅಂದು ಸಂಕ್ರಾಂತಿಯ ಎಳ್ಳುಬೆಲ್ಲದ ಪ್ಯಾಕೇಟ್ ನೀಡಲಾಗಿತ್ತು. ಅಲ್ಲದೆ ಮಜ್ಜಿಗೆಯನ್ನು ವಿತರಿಸಲಾಗಿತ್ತು. ಎಲ್ಲಾ ಮಕ್ಕಳು ಖುಷಿಯಾಗಿಯೇ ಹಾಸ್ಟೆಲ್ ಸೇರಿದ್ದಾರೆ. ಇದಾದ ನಂತರ ವಸತಿ ಶಾಲೆಯ ಊಟ ನೀರು ಸೇವಿಸಿದ್ದಾರೆ. ತದನಂತರದಲ್ಲಿ ಕಾಣಿಸಿಕೊಂಡ ವಾಂತಿ ಮತ್ತು ಹೊಟ್ಟೆ ನೋವು ವಿದ್ಯಾರ್ಥಿಗಳಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ‌.

ಆಸ್ಪತ್ರೆಗೆ ದಾಖಲಾದ ಎಲ್ಲಾ ವಿದ್ಯಾರ್ಥಿಗಳು ಯೋಗಾಥಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳೇ ಆಗಿದ್ದು, ಅಲ್ಲೇ ಎಲ್ಲೋ ವ್ಯತ್ಯಾಸವಾದಂತೆ ಕಾಣುತ್ತಿದೆ. ವೈದ್ಯರು ವಾಂತಿ ಹೊಟ್ಟೆ ನೋವಿಗೆ ಸಂಬಂಧಿಸಿದಂತೆ ಮಾದರಿಯನ್ನು ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
.ಹಾಸ್ಟೆಲ್ ಊಟ ನೀರಿನಲ್ಲಿ, ಆಹಾರದಲ್ಲಿ ವ್ಯತ್ಯಾಸವಾಗಿದೆಯೋ, ಎಳ್ಳುಬೆಲ್ಲದಿಂದ ತೊಂದರೆಯಾಗಿದೆಯೋ ಅಥವಾ ಮಜ್ಜಿಗೆಯಿಂದ ಆರೋಗ್ಯ ಹದಗೆಟ್ಟಿತೋ ಎನ್ನುವುದನ್ನು ವೈದ್ಯಕೀಯ ವರದಿ ಬಂದ ನಂತರವಷ್ಟೆ ಗೊತ್ತಾಗಬೇಕಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಜೆಸಿಐ ಸಮಾಜಮುಖಿ ಕಾರ್ಯಗಳಿಗೆ ಸರ್ಕಾರಿ ನೌಕರರ ಸಂಘದ ಸಹಕಾರವಿದೆ- ಷಡಕ್ಷರಿ

0

ಶಿವಮೊಗ್ಗ : ಕಾರ್ಯಕ್ರಮ ಶಿಸ್ತು, ಸಂಯಮಕ್ಕೆ ಜೆಸಿಐ ಮಾದರಿಯಾಗಿದೆ ಅಲ್ಲದೆ ಸಾರ್ವಜನಿಕ ಜೀವನದಲ್ಲಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ವ್ಯಾಪ್ತಿಯಲ್ಲಿ ಸಮಾಜಮುಖಿಯಾಗಿ ಅಮೂಲಾಗ್ರ ಸೇವೆ ಸಲ್ಲಿಸುತ್ತಿರುವುದು ಗಮನಾರ್ಹ ಎಂದು ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿಎಸ್.ಷಡಾಕ್ಷರಿಯವರು ತಿಳಿಸಿದರು.

ಶಿವಮೊಗ್ಗ ನಗರದ ಸರ್ಕಾರಿ ನೌಕರರ ಭವನದಲ್ಲಿ ಏರ್ಪಡಿಸಲಾಗಿದ್ದ ಜೆಸಿಐ ಶಿವಮೊಗ್ಗ ಶರಾವತಿ ಘಟಕದ 5ನೇ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿ ನಿರಂತರವಾಗಿ ಜೆಸಿಐ ಸಂಸ್ಥೆ ಮಹಿಳಾ ಸಬಲತೆ, ನಾಯಕತ್ವ ರೂಪಿಸುವಿಕೆ, ಪರಿಸರದ ಕಾಳಜಿ, ವಿವಿಧ ಸಮುದಾಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು ಆಯಾ ಘಟಕಗಳಿಗೆ ಸ್ವಂತದ ಕಚೇರಿ ಹೊಂದಿರುವುದಿಲ್ಲ ಬದಲಿಗೆ ಆ ವರ್ಷದ ಘಟಕಾಧ್ಯಕ್ಷರ ಮನೆಯೇ ಕಛೇರಿಯಾಗಿಸಿಕೊಂಡು ಅಚ್ಚುಕಟ್ಟಾಗಿ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಶ್ಲಾಘನೀಯವಾಗಿದೆ.

ಮುಂದಿನ ದಿನಗಳಲ್ಲಿ ಜೆಸಿಐ ಸಂಸ್ಥೆಯಿಂದ ಹಮ್ಮಿಕೊಳ್ಳುವ ಯಾವುದೇ ಕಾರ್ಯಕ್ರಮವಾಗಿರಲಿ ಉಚಿತವಾಗಿ ಈ ನೌಕರರ ಭವನವನ್ನು ಉಪಯೋಗಿಸಿಕೊಳ್ಳಬಹುದು ಎಂದು ಸಿ.ಎಸ್ ಷಡಾಕ್ಷರಿಯವರು ಭರವಸೆ ನೀಡಿದರು.

ಅಧಿಕಾರ ಎನ್ನುವುದು ಶಾಶ್ವತವಲ್ಲ. ಅಧಿಕಾರ ಲಭಿಸಿದಾಗ ಅಂತಹ ಆವಕಾಶವನ್ನು ಸದುಪಯೋಗಪಡಿಸಿಕೊಂಡು ಜನಮಾನಸದಲ್ಲಿ ಉಳಿಯುವಂತಹ ಕೆಲಸವನ್ನು ಮಾಡಿದಾಗ ಮಾತ್ರವೇ ಅಧಿಕಾರ ಸಿಕ್ಕಿದ್ದಕ್ಕೂ ಸಾರ್ಥಕ ಎಂದು ಅವರು ನುಡಿದರು.

ಇಂತಹ ಹಾದಿಯಲ್ಲಿ ಸುಧೀರ್ಘ ಒಂದು ವರುಷದ ಅವಧಿಯಲ್ಲಿ ಜೆಸಿ. ಸೌಮ್ಯ ಅರಳಪ್ಪನವರು ಮೆಚ್ಚುಗೆಯ ಕೆಲಸಗಳನ್ನು ಮಾಡಿದ್ದಾರೆ. ಇದಕ್ಕೆ ಅವರ ಕುಟುಂಬದವರ ಬೆಂಬಲ ಕಾರಣ ಎಂದು ತಿಳಿದಾಗ ನಾವು ನಮ್ಮ ನೌಕರರ ಸಂಘಟನೆಯಲ್ಲಿ ಕುಟುಂಬದವರನ್ನು ಜೋಡಿಸಿಕೊಂಡರೆ ಕೆಲಸಗಳು ಸುಗಮವಾಗಬಹುದು ಎಂದು ತಿಳಿಸಿದ್ದರಲ್ಲದೆ ಕಾರ್ಯಕ್ರಮದ ಅಭಿವೃದ್ದಿಗಳು, ಪರಸ್ಪರ ಹೊಂದಾಣಿಕೆ, ಜೆಸಿಐ ಶಿಷ್ಟಾಚಾರಗಳು ಗಮನ ಸೆಳೆದಿದೆ ಎಂದರು. ಹೀಗೆಯೇ ಮುಂದಿನ ಅವಧಿಗೆ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿರುವ ಜೆಸಿ.ಶೋಭಾ ಸತೀಶ್‌ರವರು ಇನ್ನೂ ಹೆಚ್ಚಿನ ಒಳಿತಿನ ಸಮಾಜಮುಖಿ ಕೆಲಸಗಳು ಮಾಡುವಂತಾಗಲಿ ಇದಕ್ಕೆ ಎಲ್ಲಾ ರೀತಿಯ ಸಹಕಾರಗಳನ್ನು ನೌಕರರ ಸಂಘದಿಂದಲೂ ನೀಡುತ್ತೇವೆ ಎಂದು ಈ ಸಂದರ್ಭದಲ್ಲಿ ಶುಭ ಹಾರೈಸಿದರು.

ಜೆಡಿಎಸ್ ರಾಜ್ಯ ವಕ್ತಾರರು ಹಾಗೂ ಜಿಲ್ಲಾಧ್ಯಕ್ಷರಾಗಿರುವ ಎಂ.ಶ್ರೀಕಾಂತ್‌ರವರು ಮಾತನಾಡಿ, ಸಮಾಜಸೇವೆಯಲ್ಲಿ ತಾಳ್ಮೆ ಇರಬೇಕು ಇಲ್ಲದಿದ್ದರೆ ಸೇವೆ ಅಪೂರ್ಣ ಎಂದು ಅವರು ಅಭಿಪ್ರಾಯಿಸಿದರು.

ಜೆಸಿಐ ಶಿವಮೊಗ್ಗ ಶರಾವತಿ ಘಟಕದಿಂದ ಅಧ್ಬುತ ಕಾರ್ಯಕ್ರಮಗಳನ್ನು ರೂಪಸಿ ಸಾಗುತ್ತಿರುವುದು ಗಮನಿಸಿದ್ದೇನೆ.

ಹಿಂದಿನ ಅವಧಿಯಲ್ಲಿ ನಡೆದ ಮಂಗಳಮುಖಿ ಕಾರ್ಯಕ್ರಮ ನಿಜಕ್ಕೂ ನಾಗರೀಕ ಸಮುದಾಯಕ್ಕೆ ಮಾದರಿ ಎಂದು ತಿಳಿಸಿದರು.

ಮಂಗಳಮುಖಿಯರ ಪ್ರತಿನಿಧಿ ಅಕ್ಕಯ್ಯನವರ ಕುರಿತಾದ ನಾಟಕರೂಪಕವನ್ನು ನಾವು ಹಮ್ಮಿಕೊಳ್ಳುವುದಕ್ಕೆ ಪ್ರೇರಣೆಯಾಗಿತ್ತು ಎಂದರೆ ತಪ್ಪಾಗಲಾರದು ಎಂದು ಎಂ.ಶ್ರೀಕಾಂತ್ ತಿಳಿಸಿದರು.

ಮುಂದಿನ ದಿನಗಳಲ್ಲಿ ಹೊಸ ಅಧ್ಯಕ್ಷರಾದ ಜೆಸಿ.ಶೋಭಾ ಸತೀಶ್‌ರವರ ನೇತೃತ್ವದ ತಂಡಕ್ಕೂ ಸಹಕಾರ ಇದ್ದೇ ಇರುತ್ತದೆ ಎಂದು ಅವರು ತಿಳಿಸಿ ನೂತನ ತಂಡಕ್ಕೆ ಹಾರೈಸಿದರು.

2022ರ ಅವಧಿಯ ವರದಿಯನ್ನು ಓದಿ ತಿಳಿಸಿ ಜೆಸಿಗಳ ಸ್ಪಂದನೆಯನ್ನು ಸ್ಮರಿಸಿ ನೆನಪಿನ ಕಾಣಿಕೆಯನ್ನು ಜೆಸಿ. ಸೌಮ್ಯ ಅರಳಪ್ಪನವರು ನೀಡಿದರು.

ನೂತನ ಅಧ್ಯಕ್ಷರಾ ಜೆ.ಸಿ.ಶೋಭಾ ಸತೀಶ್‌ರವರಿಗೆ ವಲಯ-24ರ ಅಧ್ಯಕ್ಷರಾದ ಜೆಸಿ.ಅನುಷ್‌ಗೌಡರವರು ಪ್ರಮಾಣವಚನ ಬೋಧಿಸಿದರು. 2023ರ ಅವಧಿಯ ಎಲ್‌ಜಿಬಿ ತಂಡಕ್ಕೆ ನೂತನ ಅಧ್ಯಕ್ಷರಿಂದ ಪ್ರಮಾಣವಚನ ಬೋಧಿಸಲಾಯಿತು. ನೂತನ ಜೆಸಿ ಸದಸ್ಯರಿಗೆ ವಲಯ ಉಪಾಧ್ಯಕ್ಷರಾದ ಜೆಸಿ. ಸತೀಶ್ ಚಂದ್ರರವರು ಪ್ರಮಾಣವಚನ ಬೋಧಿಸಿದರು.

ವೇದಿಕೆಯಲ್ಲಿ 2022ರ ಅಧ್ಯಕ್ಷರಾದ ಜೆಸಿ.ಸೌಮ್ಯ ಅರಳಪ್ಪ, 2023ರ ಅಧ್ಯಕ್ಷರಾದ ಜೆಸಿ.ಶೋಭಾ ಸತೀಶ್, ಕಾರ್ಯದರ್ಶಿಗಳಾದ ಜೆಸಿ.ಮಮತಾ ಶಿವಣ್ಣ, ವಲಯಾಧ್ಯಕ್ಷರಾದ ಜೆಸಿ.ಅನುಷ್ ಗೌಡ, ವಲಯ ಉಪಾಧ್ಯಕ್ಷರಾದ ಜೆಸಿ.ಸತೀಶ್ ಚಂದ್ರ, ಜೆಜೆಸಿ ವಿಭಾಗದ ಅಧ್ಯಕ್ಷರಾದ ಜೆಜೆಸಿ ನಿಶಾಂತ್ ಎಸ್ ಗಾರಾ, ಲೇಡಿ ಜೆಸಿ ವಿಭಾಗದ ಜೆಸಿ.ದಿವ್ಯಾ ಪ್ರವೀಣ್ ಸೇರಿದಂತೆ ಘಟಕದ ಐಪಿಪಿ ಜೆಸಿ.ಮೋಹನ್ ಕಲ್ಪತರು, ಕಾರ್ಯಕ್ರಮದ ಪಿಡಿ. ಜೆಸಿ ಎಂ.ಡಿ ಯಾಹ್ಯರವರುಗಳು ಉಪಸ್ಥಿತರಿದ್ದರು.

ಪದಗ್ರಹಣದಲ್ಲಿ ಘಟಕದ ಎಲ್ಲಾ ಜೆಸಿಗಳು ಹಾಗೂ ಶಿವಮೊಗ್ಗದ ಎಲ್ಲಾ ಜೆಸಿಐ ಘಟಕದವರು ಭಾಗವಹಿಸಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮನಸ್ಸಿನಿಂದ ಮನಸ್ಸಿಗೆ -14

0

ರಾಜಕಾರಣಿಗಳ ಜೊತೆ ಮಾಧ್ಯಮಗಳ ಅನೈತಿಕ ಸಂಬಂಧ – ಹೊಟ್ಟೆ ಪಾಡಿಗಾಗಿ ಕೆಲವರು – ಶೋಕಿಗಾಗಿ ಕೆಲವರು – ಐಷಾರಾಮಿಗಾಗಿ ಹಲವರು…

ಇನ್ನೂ ಸುಮಾರು 5/6 ತಿಂಗಳು ಇರುವಾಗಲೇ ಈ ರಾಜ್ಯಕ್ಕೆ ಚುನಾವಣಾ ಜ್ವರ ಅಥವಾ ರೋಗ ಹಬ್ಬಿಸಿ ಆಡಳಿತ ವ್ಯವಸ್ಥೆಯನ್ನು ಮತ್ತು ಸಾರ್ವಜನಿಕ ಅಭಿಪ್ರಾಯವನ್ನು ದಿಕ್ಕು ತಪ್ಪಿಸಿ ಅಷ್ಟೂ ದಿನಗಳ ಅಭಿವೃದ್ಧಿಯನ್ನು ನಾಶಪಡಿಸುತ್ತಿರುವ ಮಾಧ್ಯಮಗಳಿಗೆ ಧಿಕ್ಕಾರ.

ಚುನಾವಣೆ ಎಂಬುದೇನು ಯುದ್ದವೇ ?
ಅಜನ್ಮ ವೈರಿಗಳ ಕಾದಾಟವೇ ?
ಶತ್ರುಗಳ ಮೇಲಿನ ಆಕ್ರಮಣವೇ ?
ಸಂಪತ್ತನ್ನು ಕೊಳ್ಳೆ ಹೊಡೆದು ಶಾಶ್ವತ ಅಧಿಕಾರ ಸ್ಥಾಪಿಸುವ ಶಕ್ತಿ ಪ್ರದರ್ಶನವೇ ? ಕುರುಕ್ಷೇತ್ರವೇ ?

ಭಾರತದ ಪ್ರಜಾಪ್ರಭುತ್ವದಲ್ಲಿ ಚುನಾವಣೆ ಎಂಬುದು ಕೇವಲ ಜನ ಪ್ರತಿನಿಧಿಗಳ ಒಂದು ಸರಳ ಆಯ್ಕೆ ಪ್ರಕ್ರಿಯೆ ಮಾತ್ರ. ಜನಸಂಖ್ಯೆ ಹೆಚ್ಚಿರುವುದರಿಂದ ಸುಮಾರು ಒಂದು ತಿಂಗಳಷ್ಟು ಸಮಯಾವಕಾಶ ಬೇಕಾಗುತ್ತದೆ.

ಯಾರೇ ಗೆದ್ದರು ಅವರಿಗೆ ಊರು ರಾಜ್ಯ ದೇಶವನ್ನು ಬರೆದು ಕೊಡುವುದಿಲ್ಲ. ನಮ್ಮ ಪ್ರತಿನಿಧಿಯಾಗಿ ಸಂವಿಧಾನಾತ್ಮಕ ಕಾನೂನುಗಳ ಅಡಿಯಲ್ಲಿ ನಮ್ಮದೇ ತೆರಿಗೆ ಹಣದಲ್ಲಿ ಸಂಬಳ ಪಡೆದು ಸುಮಾರು ಐದು ವರ್ಷ ನಮ್ಮ ಸೇವೆ ಮಾಡಲು ಆಯ್ಕೆಗೊಂಡ ಸೇವಕರು ಮಾತ್ರ…

ಆದರೆ ಈ ಮಾಧ್ಯಮಗಳು ಅವರನ್ನು ಸೂಪರ್ ಸ್ಟಾರ್ ಗಳಂತೆ ಚಿತ್ರಿಸುವುದು ನೋಡಿದರೆ ಇವರು ಹೊಟ್ಟೆ ಪಾಡಿಗಾಗಿ ಯಾವ ನೀಚತನಕ್ಕೂ ಇಳಿಯಲು ಸಿದ್ದರಿದ್ದಾರೆ ಎನಿಸುತ್ತದೆ.

ಸಿದ್ದರಾಮಯ್ಯ ಕೋಲಾರದಲ್ಲಿ ನಿಂತರೆ ನಮಗೇನು – ಮಂಗಳೂರಿನಲ್ಲಿ ನಿಂತರೆ ನಮಗೇನು ?
ಯಡಿಯೂರಪ್ಪ ರಾಜಕೀಯ ನಿವೃತ್ತಿ ಪಡೆದರೆ ನಮಗೇನು ?
ಕುಮಾರಸ್ವಾಮಿ ಯಾತ್ರೆ ಮಾಡಿದರೆ ನಮಗೇನು ? ಇನ್ಯಾರೋ ಗೆದ್ದರೆ ನಮಗೇನು ? ಸೋತರೆ ನಮಗೇನು ?
ಅದೂ ಇಷ್ಟು ಬೇಗ ತಲೆ ಕೆಡಿಸಿಕೊಳ್ಳುವ ವಿಷಯವೇ ಅಲ್ಲ.

ಇವರಲ್ಲಿ ಯಾರು ಗೆಲ್ಲುತ್ತಾರೆ ಎಂದು ಈ ಆರು ತಿಂಗಳಿನಿಂದ ಕುತೂಹಲ ಇಟ್ಟುಕೊಂಡು ಕಾಯಲು ಕರ್ನಾಟಕವೇನು ಇವರ ಮನೆಯ ಆಸ್ತಿಯೇ ?
ನಾವೇನು ಇವರ ಮನೆಯ ಗುಲಾಮರೇ ?

ಮಾಧ್ಯಮಗಳು ತಮ್ಮ ಸ್ವಾರ್ಥದ ಯಶಸ್ಸಿಗಾಗಿ ರಾಜಕಾರಣಿಗಳ ಜೊತೆ ಅನೈತಿಕ ಸಂಬಂಧ ಹೊಂದಿರಬಹುದು. ಆದರೆ ನಾವು ಪ್ರಜೆಗಳು. ನಾವು ನೈತಿಕವಾಗಿರೋಣ…..

ಈ ಕಲ್ಮಶ ನೀರು, ಮಲಿನ ಗಾಳಿ, ರಸಾಯನಿಕಯುಕ್ತ ಆಹಾರ, ಲಂಚಗುಳಿತನ, ಬೆಲೆ ಏರಿಕೆ, ನಿರುದ್ಯೋಗ, ಅಭದ್ರತೆ ಜೀವನ ಮಾಡುತ್ತಿರುವುದಕ್ಕೆ ಮೂಲ ಕಾರಣರಾದ ಕೆಲವೇ ರಾಜಕೀಯ ನಾಯಕರುಗಳ‌ ಹಿಡಿತಕ್ಕೆ ಸಿಲುಕಿ ನರಳಲು ಇವರೇನು ರಾಜ ಮಹಾರಾಜರಲ್ಲ. ಎಂ ಎಲ್ ಎ – ಮಂತ್ರಿ – ಮುಖ್ಯಮಂತ್ರಿ ಸ್ಥಾನ ಇವರ ಗುತ್ತಿಗೆಯಲ್ಲ. ಇವರ ಸುಳ್ಳು ಭರವಸೆಯ ಭಾಷಣ ಕೇಳಲು ನಾವು ಮೂರ್ಖರಲ್ಲ….

ಈ ಸಮೀಕ್ಷೆಗಳು, ಈ ಊಹೆಗಳು, ಈ ಅಭಿಪ್ರಾಯಗಳ ಅವಶ್ಯಕತೆ ಇದೆಯೇ ? ಮಾಡಲು ಬೇಕಾದಷ್ಟು ಕೆಲಸಗಳು ಮಾಧ್ಯಮಗಳಿಗೆ ಇರುವಾಗ ಈ ಚುನಾವಣಾ ಕಾವೇರಿಸುವ ಚೇಷ್ಟೇ ಬೇಕೆ ? ಹಾಗಾದರೆ ಚುನಾವಣಾ ಆಯೋಗ ಇರುವುದಾದರೂ ಏಕೆ ?
ಒಂದು ವೇಳೆ ಇವರ ಸಮೀಕ್ಷೆಗಳು ನಿಜವಾದರೂ ಅದರಿಂದ ಆಗಬಹುದಾದ ನೇರ ಪ್ರಯೋಜನವೇನು ?

ಚುನಾವಣೆ ಎಂದರೆ ಏನು ? ಮತದಾನ ಹೇಗಿರುತ್ತದೆ ? ಮತದಾನದ ಮಹತ್ವ ಏನು ? ಮತ ಹಾಕುವಾಗ ಅನುಸರಿಸಬೇಕಾದ ಮಾನದಂಡಗಳೇನು ? ಜನ ಪ್ರತಿನಿಧಿಗಳು ಹೇಗಿರಬೇಕು ? ಸೈದ್ಧಾಂತಿಕ ಸ್ಪಷ್ಟತೆ ಎಂದರೇನು ? ಮತದಾನ ತಪ್ಪಾದಲ್ಲಿ ಅಥವಾ ಮಾರಿ ಕೊಂಡಲ್ಲಿ ಅದರ ಪರಿಣಾಮ ಏನಾಗುತ್ತದೆ ? ಮತದಾನದ ಸಂದರ್ಭದಲ್ಲಿ ಹೇಗೆ ಯಾವುದೇ ಆಮಿಷ ಅಥವಾ ಭಾವನಾತ್ಮಕ ವಿಷಯಗಳಿಗೆ ಮರುಳಾಗದೆ ಮನಸ್ಸನ್ನು ನಿಯಂತ್ರಿಸಬೇಕು ? ಮುಂತಾದ ಅನೇಕ ವಿಷಯಗಳ ಬಗ್ಗೆ ಚರ್ಚಿಸಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡದೇ ಆ ಕ್ಷೇತ್ರದಲ್ಲಿ ಅವರು ಗೆಲ್ಲುತ್ತಾರೆ ಈ ಕ್ಷೇತ್ರದಲ್ಲಿ ಇವರು ಗೆಲ್ಲುತ್ತಾರೆ ಎಂದು ತುತ್ತೂರಿ ಊದುತ್ತಾ ಇರುವುದಕ್ಕೆ ಮಾತ್ರ ಮಾಧ್ಯಮಗಳು ಸೀಮಿತವೇ.

ಜನರ ಸಮಸ್ಯೆಗಳಿಗೆ ಕಾವಲಾಗಬೇಕಾದವರೇ ಸಮಸ್ಯೆಯಾಗಿದ್ದಾರೆ. ಇತ್ತೀಚೆಗಷ್ಟೇ ಭಾರತದ ಸರ್ವೋಚ್ಚ ನ್ಯಾಯಾಲಯ ” ಮಾಧ್ಯಮಗಳು ಸಮಾಜವನ್ನು ಒಡೆಯುತ್ತಿವೆ ” ಎಂದು ಬಹಿರಂಗವಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ. ಇದು ಅವರ ಅನೈತಿಕ ಸಂಬಂಧಕ್ಕೆ ಸಾಕ್ಷಿಯಲ್ಲವೇ ?

ಇರುವ ಬಹುತೇಕ ಎಲ್ಲಾ ಚಾನಲ್ ಗಳು ಚುನಾವಣೆ ಚುನಾವಣೆ ರಣ ಕಹಳೆ ಕುರುಕ್ಷೇತ್ರ ಹೀಗೆ ಅನಾವಶ್ಯಕವಾಗಿ ಕಿರುಚುತ್ತಾ ಇದ್ದರೆ ಆಡಳಿತ ಮತ್ತು ಜನರ ಮನಸ್ಥಿತಿ ಎಷ್ಟು ಹಾಳಾಗಬಹುದು ಎಂಬ ಕಲ್ಪನೆಯೇ ಇಲ್ಲದ ಮೂರ್ಖರಿಗೆ ಹೇಗೆ ತಿಳಿವಳಿಕೆ ಹೇಳುವುದು ದಯವಿಟ್ಟು ತಿಳಿಸಿ.

ಮತದಾರರ ಜಾಗೃತಿಗಿಂತ ಮಾಧ್ಯಮಗಳ ಜಾಗೃತಿ ಮತ್ತು ಅವರ ಅನೈತಿಕ ಸಂಬಂಧವೇ ಇಂದು ಹೆಚ್ಚು ಚರ್ಚಿಸಬೇಕಾಗಿರುವುದು ಭಾರತದ ಪ್ರಜಾಪ್ರಭುತ್ವದ ದುರಂತ…

ಮಾಧ್ಯಮಗಳೆಂಬ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವನ್ನು ಶುದ್ದೀಕರಿಸುವ ಪ್ರಕ್ರಿಯೆ ಬೇಗ ಆರಂಭವಾಗಲಿ ಮತ್ತು ಅಲ್ಲಿನ ಕೆಲವೇ ಪ್ರಬುದ್ಧ ಮನಸ್ಸುಗಳ ಬೇಗ ಜಾಗೃತರಾಗಲಿ ಎಂದು ಆಶಿಸುತ್ತಾ…

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.

ಬರಹ: ವಿವೇಕಾನಂದ ಎಚ್. ಕೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮಕ್ಕಳಲ್ಲಿ ನಾಡಿನ ಸಂಸ್ಕೃತಿ ಪರಂಪರೆಯ ಬಗ್ಗೆ ಜಾಗೃತಿ ಮೂಡಿಸಿ-ಡಾ.ಮಂಜಮ್ಮ ಜೋಗತಿ

0

ಮಕ್ಕಳಿಗೆ ಸಂಸ್ಕೃತಿ ಮತ್ತು ಸಂಸ್ಕಾರ ಧಾರೆಯುವ ಕೆಲಸವನ್ನು ಪ್ರತಿಯೊಬ್ಬ ಪೋಷಕರೂ ಮಾಡಬೇಕು ಎಂದು ಪದ್ಮಶ್ರೀ ಪುರಸ್ಕೃತೆ ಡಾ.ಮಂಜಮ್ಮ ಜೋಗತಿ ಸಲಹೆ ನೀಡಿದರು.

ಶಿವಮೊಗ್ಗದ ಕುವೆಂಪು ರಂಗ ಮಂದಿರದಲ್ಲಿ ವಿದ್ಯಾದೀಪ ಎಜುಕೇಷನ್‌ ಟ್ರಸ್ಟ್ ನಲ್ಲಿ ಹಮ್ಮಿಕೊಂಡಿದ್ದ ಕ್ರಿಯೇಟಿವ್‌ ಕಿಡ್ಸ್ ಸ್ಕೂಲ್‌ನ 7ನೇ ವಾರ್ಷಿಕೋತ್ಸವ ಸಮಾರಂಭವನ್ನು ಅವರು ದೀಪ ಬೆಳೆಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳನ್ನು ಕೇವಲ ಓದಿಗಷ್ಟೇ ಸೀಮಿತಗೊಳಿಸದೇ ಗುರು- ಹಿರಿಯರನ್ನು ಗೌರವದಿಂದ ಕಾಣುವಂತ ಮನಸ್ಥಿತಿ ಬೆಳೆಸಬೇಕು. ಅಲ್ಲದೇ ನಾಡಿನ ಹಬ್ಬ- ಹರಿದಿನ, ಪರಂಪರೆಯ ಬಗ್ಗೆ ತಿಳಿಸಿಕೊಡಬೇಕು, ನಯ- ವಿನಯ, ಆಚಾರ- ವಿಚಾರಗಳನ್ನು ಮಕ್ಕಳಿಗೆ ಕಲಿಸಬೇಕು ಎಂದು ಸಲಹೆ ನೀಡಿದರು.

ನಾನು ಬಂಧು- ಬಳಗ, ಸಮಾಜದ ದೌರ್ಜನ್ಯ ಹಾಗೂ ತಾತರ‍ಸಾರದ ಮಧ್ಯೆಯೇ ಬೆಳೆದು ಬಂದೆ. ಯಾವತ್ತೂ ಎದೆಗುಂದಲಿಲ್ಲ. ಹಾಗಾಗಿ ಪೋಷಕರು ಮಕ್ಕಳಿಗೆ ಸಾಧಕರ ಪರಿಚಯವನ್ನು ತಿಳಿಸುತ್ತಾ ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಪ್ರಯತ್ನಮಾಡಬೇಕು ಎಂದು ಹೇಳಿದರು.

ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್‌ ಟ್ರಸ್ಟಿ ಡಾ.ಧನಂಜಯ ಮಾತನಾಡಿ, ವಿದ್ಯಾದೀಪ ಎಜುಕೇಷನ್‌ ಟ್ರಸ್ಟ್ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಸಂಸ್ಥೆಯು ಬೆಳೆಯುತ್ತಿದೆ. ಈ ನಿಟ್ಟಿನಲ್ಲಿ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಪಾತ್ರದ ದೊಡ್ಡದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದು ಸಂಕ್ರಾಂತಿ ಸಂಬ್ರಮದ ಕಾಲ. ಈ ವೇಳೆ ಸೂರ್ಯ ಆರಾಧನೆಯೇ ಒಂದು ವಿಶೇಷ. ಭಾರತೀಯ ಸಂಸ್ಕೃತಿಯಲ್ಲಿ ಪ್ರತಿ ಹಬ್ಬಗಳಿಗೂ ಒಂದೊಂದು ವಿಶೇಷ ಸಂಪ್ರದಾಯ, ಆಚರಣೆಯ ಮಹತ್ವವಿದೆ. ರೈತರು ಆ ದಿನ ಎತ್ತುಗಳಿಗೆ ಪೂಜೆ ಸಲ್ಲಿಸಿ ಕಿಚ್ಚು ಹಾಯಿಸುತ್ತಾ, ತಾವು ಬೆಳೆದ ಬೆಳೆಗಳನ್ನು ರಾಶಿ ರಾಶಿಯಾಗಿ ಹಾಕಿ ಪೂಜೆ ಸಲ್ಲಿಸಿ ಸುಗ್ಗಿಯ ಹಬ್ಬವಾಗಿ ಸಂಭ್ರಮಿಸುತ್ತಾರೆ. ಈ ಹಬ್ಬವು ನಾಡಿಗೆ ಸಮೃದ್ಧಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು.

ಸಂಕ್ರಾಂತಿ ಸಂದರ್ಭ ಉತ್ತರಾಯಣದ ನಂತರ ಸೂರ್ಯ ದಕ್ಷಿಣಾಯಣದತ್ತ ಸೂರ್ಯ ತನ್ನ ಪಥವನ್ನು ಬದಲಿಸುತ್ತಾನೆ. ಮಹಾಭಾರತದ ಭೀಷ್ಮ ಪಿತಾಮಹನು ಬಾಣಗಳ ಮೇಲೆ ಮಲಗಿಯಾತನೆ ಅನುಭವಿಸುತ್ತಿದ್ದರೂ ದಕ್ಷಿಣಾಯನದಲ್ಲಿ ತನ್ನ ದೇಹವನ್ನು ತ್ಯಜಿಸಲು ಒಪ್ಪದೆ ಉತ್ತರಾಯಣದ ಪುಣ್ಯಕಾಲದ ಅಷ್ಟಮಿ ದಿನ ಸಾವನ್ನು ಬರ ಮಾಡಿಕೊಳ್ಳುತ್ತಾನೆ. ಅಂತಹ ಪುಣ್ಯಕಾಲವಿದು ಎಂದರು.

ವಿದ್ಯಾದೀಪ ಎಜುಕೇಷನ್‌ ಟ್ರಸ್ಟ್‌ ನ ಕಾರ್ಯದರ್ಶಿ ರಾಮಕೃಷ್ಣ ಶೆಟ್ಟಿ, ಚೇರ್ಮನ್‌ ದೀಪ್ತಿ ಆರ್‌.ಶೆಟ್ಟಿ, ಸ್ಕೂಲ್‌ನ ಪ್ರಾಂಶುಪಾಲರಾದ ರೇಖಾ ಕೆ.ಬಸವರಾಜ್‌ ಮತ್ತಿತರರು ಭಾಗವಹಿಸಿದ್ದರು. ಈ ಸಂದರ್ಭ ಡಾ.ಮಂಜಮ್ಮ ಜೋಗತಿ ಹಾಗೂ ಡಾ. ಧನಂಜಯ ಸರ್ಜಿಅವರನ್ನು ಸನ್ಮಾನಿಸಲಾಯಿತು.

ವೇದಿಕೆಯ ಮೇಲೆ ಸ್ತ್ರೀ ಒಂದು ಶಕ್ತಿ ಶೀರ್ಷಿಕೆಯ ಫೋಟೊ ಬೂತ್‌ ಗಮನ ಸೆಳೆಯಿತು. ಪುಟಾಣಿ ಮಕ್ಕಳು ವೈವಿಧ್ಯಮಯ ಮನರಂಜನಾ ಕಾರ್ಯಕ್ರಮಗಳನ್ನು ಪ್ರದರ್ಶಿಸುವ ಮೂಲಕ ಜನಮನಸೂರೆಗೊಂಡರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.