Thursday, April 2, 2026
Thursday, April 2, 2026
Home Blog Page 1328

ಶಿವಮೊಗ್ಗ ಡಿಸಿಸಿ ಬ್ಯಾಂಕ್ ನೇಮಕಾತಿ ಪರೀಕ್ಷಾ ಫಲಿತಾಂಶ ವೆಬ್ ಸೈಟ್ ನಲ್ಲಿ ಪ್ರಕಟ

0

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ, ಶಿವಮೊಗ್ಗ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ದಿನಾಂಕ:12-11-2022 ಹಾಗೂ 13-11-2022 ರಂದು ನಡೆಸಲಾದ ನೇಮಕಾತಿ ಪರೀಕ್ಷೆಯ ಫಲಿತಾಂಶವನ್ನು ದಿನಾಂಕ: 19-01-2023 ರಂದು ಬ್ಯಾಂಕಿನ ವೆಬ್‍ಸೈಟ್ www.shimogadccbank.com ಇಲ್ಲಿ ಪ್ರಕಟಿಸಲಾಗಿದೆ ಎಂದು ಡಿಸಿಸಿ ಬ್ಯಾಂಕ್ ವ್ಯವಸ್ತಾಪಕ ನಿರ್ದೇಶಕರು ತಿಳಿಸಿದ್ದಾರೆ.

ಗುಡ್ಡೆಕೊಪ್ಪ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

0

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕು ಗುಡ್ಡೇಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಕ್ಕಳ ವಾದ್ಯತಂಡ, ಚದ್ಮ ವೇಷ, ಪೂರ್ಣಕುಂಭ, ಕಂಸಾಳೆ ತಂಡಗಳೊಂದಿಗೆ ವಿದ್ಯಾರ್ಥಿಗಳು ಗ್ರಾಮದಲ್ಲಿ ಮೆರವಣಿಗೆ ತೆರಳಿದ್ದರು.

ಮೆರವಣಿಗೆಯಲ್ಲಿ ಭಾರತಾಂಬೆ, ಯಕ್ಷಗಾನ,ಶಿವ,ರೈತ,ನೆಹರು, ಝಾನ್ಸಿರಾಣಿ ಲಕ್ಷ್ಮೀಬಾಯಿ,ಕೊಡವ ಶೈಲಿಯ ವೇಷಭೂಷಣಗಳು ಗಮನಸೆಳೆದವು.

ವೇದಿಕೆ ಕಾರ್ಯಕ್ರಮದಲ್ಲಿ ಗ್ರಾಮಪಂಚಾಯ್ತಿ ಅಧ್ಯಕ್ಷೆ ಸೂರ್ಯಕಲಾ ಅವರು ವಿಜ್ಞಾನ ವಿಸ್ಮಯ ಪ್ರಯೋಗದ ಮೂಲಕ ಉದ್ಘಾಟನೆ ನೆರವೇರಿಸಿದರು.

ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಸುರೇಶ್ ಅಧ್ಯಕ್ಷತೆ ವಹಿಸಿದ್ದರು.
ಸಮನ್ವಯಾಧಿಕಾರಿ ಗಣೇಶ್ ಸ್ವಾಗತಿಸಿದರು. ಭಾವಿಕ್ಕೆಸರು ಶಾಲೆ ಮುಖ್ಯಶಿಕ್ಷಕ ಸುರೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಸಭೆಯಲ್ಲಿ ಗ್ರಾಮಪಂಚಾಯ್ತಿ ಸದಸ್ಯಗುರುಮೂರ್ತಿ ಗೌಡರು, ಶ್ರೀಮತಿ ಉಮಾ,ರಾಘವೇಂದ್ರಪವಾರ್,ತಾ.ಪಂ.,ಮಾಜಿಸದಸ್ಯ ಟಿ.ಮಂಜುನಾಥ್,ಶಿಕ್ಷಣ ಇಲಾಖೆ ಅಧಿಕಾರಿಗಳಾದ ಪ್ರವೀಣ್, ಗುಡ್ಡೇಕೊಪ್ಪ ಶಾಲಾ ಮುಖ್ಯೋಪಾದ್ಯಾಯರಾದ ಲಕ್ಷ್ಮಣ್ ಮುಂತಾದವರು ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಸೋಲೇ ಗೆಲುವಿನ ಮೆಟ್ಟಿಲು-ವಿಶಾಲಾಕ್ಷಿ

0

ಚಿಕ್ಕಮಗಳೂರು: ತಾಲ್ಲೂಕಿನ ಧರಗುಣಿ ಗ್ರಾಮದಲ್ಲಿ ಜೈ ಭೀಮ್ ಯುವಕರ ಸಂಘದ ವತಿಯಿಂದ ಈಚೆಗೆ ನಡೆದ ವಾಲಿಬಾಲ್ ಕಪ್ ಪಂದ್ಯಾವಳಿಯಲ್ಲಿ ಮಲ್ಲಂದೂರು ತಂಡ ಪ್ರಥಮ, ಕದ್ರಿಮಿದ್ರಿ ತಂಡ ದ್ವಿತೀಯ, ವಳಗೇರನಹಳ್ಳಿ ತಂಡ ತೃತೀಯ ಹಾಗೂ ಭಕ್ತರಹಳ್ಳಿ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡು ಗೆಲುವನ್ನು ಮುಡಿಗೇರಿಸಿಕೊಂಡಿತು.

ಬಹುಮಾನ ವಿತರಿಸಿ ಮಾತನಾಡಿದ ಹಿರೇಕೊಳಲೆ ಗ್ರಾಮ ಪಂಚಾಯಿತಿ ಮಾಜಿ ವಿಶಾಲಾಕ್ಷಿ ಯಾವುದೇ ಕ್ರೀಡೆಗಳಲ್ಲಾಗಲೀ ಸೋಲು, ಗೆಲುವು ಸರ್ವೆ ಸಾಮಾನ್ಯವಾಗಿರುತ್ತದೆ.
ಕ್ರೀಡಾಪಟುಗಳು ಎಂದಿಗೂ ಎದೆಗುದದೇ ಸೋಲನ್ನೇ ಮುಂದಿನ ದಿನಗಳಲ್ಲಿ ಗೆಲುವಿನ ಮೆಟ್ಟಿಲುಗಳನ್ನಾಗಿ ರೂಪಿಸಿ ಕೊಂಡು ಯಶಸ್ಸಿನತ್ತ ಮುನ್ನಗ್ಗಬೇಕು ಎಂದು ತಿಳಿಸಿದರು.

ವಾಲಿಬಾಲ್ ಪಂದ್ಯಾವಳಿಯು ಆರೋಗ್ಯವೃದ್ದಿಯ ಉತ್ತಮ ಕ್ರೀಡೆ. ಇಂತಹ ಕ್ರೀಡೆಗಳಲ್ಲಿ ಅತಿಹೆಚ್ಚು ಯುವಕರು ಭಾಗವಹಿಸುವುದರಿಂದ ಆರೋಗ್ಯಯುತ ಸದೃಢರಾಗಲು ಸಾಧ್ಯ. ಕ್ರೀಡೆಗಳು ಮನುಷ್ಯನಿಗೆ ಮಾನಸಿಕ ಮತ್ತು ಆರೋಗ್ಯಪೂರ್ಣವಾಗಿ ಬದುಕಲು ಸಹಾಯ ಮಾಡುವ ಸಾಧನ ಎಂದು ಹೇಳಿದರು.
ಇದೇ ವೇಳೆ ಧರಗುಣಿ ಗ್ರಾಮದ ಹಿರಿಯರಿಗೆ, ಶಾಲೆ ಅಡುಗೆಯವರು, ಗ್ರಾಮ ಪಂಚಾಯಿತಿ ಸದಸ್ಯರುಗಳು, ಆಶಾ ಕಾರ್ಯಕರ್ತೆಯರು, ಹಿರಿಯರು ಮತ್ತು ವೀರಭದ್ರೇಶ್ವರ ಬಸ್ ಮಾಲೀಕರಿಗೆ ಚಾಲಕರು, ನಿರ್ವಾಹಕರು ಸೇರಿದಂತೆ ವಿವಿಧ ಗಣ್ಯರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪಂದ್ಯಾವಳಿ ಆಯೋಜಕರಾದ ಸತೀಶ್, ರವಿ, ವಿಜಯ್, ಉಮೇಶ್ ಸಂತೋಷ್, ಮದು, ಕಿರಣ್, ಮಹೇಶ್, ಹರೀಶ್, ಪರಮೇಶ್, ಲೋಹಿತ್, ಚೇತನ್, ಶ್ರೀಕಾಂತ್, ಯುವಕರ ಸಂಘದ ಅರುಣ್‌ಕುಮಾರ್, ಗ್ರಾಮದ ಹಿರಿಯ ಪುಟ್ಟಸ್ವಾಮಿ, ಪಂಚಾಯಿತಿ ಬಿಲ್ ಕಲೆಕ್ಟರ್ ಚಂದ್ರಶೇಖರ್, ಹಂಪಾಪುರ ಮಂಜೇಗೌಡ, ಪ್ರಕಾಶ್, ಸುರೇಶ್, ಉಮೇಶ್ ಕುಮಾರ್, ಧರಗುಣಿ ಸುರೇಶ್, ಶಿವಕುಮಾರ್, ಮಂಜುನಾಥ್.ಕೆ.ಆರ್ ಮತ್ತಿತರರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಆಹಾರ ಸೇವನೆ ಬಗ್ಗೆ ಎಲ್ಲರೂ ಜಾಗೃತಿವಹಿಸಬೇಕು-ಪೂರ್ಣಿಮಾ ಸುನೀಲ್

0

ಶಿವಮೊಗ್ಗ: ಕಲುಷಿತ ಆಹಾರ ಸೇವನೆ ಮಾಡಿದ್ದರಿಂದ ಆರೋಗ್ಯ ಸಮಸ್ಯೆಯಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಮೇಲಿನ ಹನಸವಾಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳನ್ನು ಜೆಸಿಐ ಶಿವಮೊಗ್ಗ ಭಾವನಾ ಸಂಸ್ಥೆ ಪದಾಧಿಕಾರಿಗಳು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಆಹಾರ ಸೇವನೆ ಬಗ್ಗೆ ಪ್ರತಿಯೊಬ್ಬರು ಜಾಗೃತಿ ವಹಿಸಬೇಕು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜೆಸಿಐ ಶಿವಮೊಗ್ಗ ಭಾವನಾ ಸಂಸ್ಥೆ ಅಧ್ಯಕ್ಷೆ ಪೂರ್ಣಿಮಾ ಸುನೀಲ್ ತಿಳಿಸಿದರು.

ಕಲುಷಿತ ಆಹಾರ ಸೇವಿಸಿ ಆರೋಗ್ಯ ಸಮಸ್ಯೆ ಉಂಟಾಗಿರುವ ಮಕ್ಕಳ ಆರೋಗ್ಯ ವಿಚಾರಿಸಿದರು.

ಜೆಸಿಐ ಶಿವಮೊಗ್ಗ ಭಾವನಾ ಸಂಸ್ಥೆಯ ಎಲ್ಲ ಪೂರ್ವಾಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಸದಸ್ಯರ ಸಹಕಾರದಿಂದ ಮುಂದಿನ ದಿನಗಳಲ್ಲಿ ಹೆಚ್ಚು ಸಮಾಜಮುಖಿ ಚಟುವಟಿಕೆಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಮಕ್ಕಳು, ಮಹಿಳೆಯರು ಹಾಗೂ ಸಾರ್ವಜನಿಕರಿಗೆ ಅನುಕೂಲ ಒದಗಿಸುವ ಆರೋಗ್ಯ ಶಿಬಿರಗಳನ್ನು ನಡೆಸಲಾಗುತ್ತದೆ ಎಂದು ಹೇಳಿದರು.

ಜೆಸಿಐ ಶಿವಮೊಗ್ಗ ಭಾವನಾ ನಿಕಟಪೂರ್ವ ಅಧ್ಯಕ್ಷೆ ಶಾರದಾ ಶೇಷಗಿರಿಗೌಡ ಮಾತನಾಡಿ, ಜೆಸಿಐ ಸಂಸ್ಥೆಯು ಸೇವಾ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಆರೋಗ್ಯ ಕ್ಷೇತ್ರದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಜೆಸಿಐ ಭಾವನಾ ಶಿವಮೊಗ್ಗ ಸಂಸ್ಥೆ ವತಿಯಿಂದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಮೇಲಿನ ಹನಸವಾಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಅಧ್ಯಕ್ಷೆ ಪೂರ್ಣಿಮಾ ಸುನಿಲ್ ಅವರು ಬಿಸ್ಕೆಟ್ ಮತ್ತು ಹಣ್ಣಗಳನ್ನು ವಿತರಿಸಿದರು.

ಜೆಸಿಐ ಶಿವಮೊಗ್ಗ ಭಾವನಾ ಸಂಸ್ಥೆ ಕಾರ್ಯದರ್ಶಿ ಕವಿತಾ ಜೋಯಿಸ್, ಜೆಸಿಐ ಸಂಸ್ಥೆಯ ಕರಿಬಸಮ್ಮ ಮತ್ತಿತರರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಜ 21 ಸಾಗರದಲ್ಲಿ ಪರಣಿತಿ ರಾಷ್ಟ್ರೀಯ ನೃತ್ಯ ಸಂಗೀತೋತ್ಸವ

0

ಶಿವಮೊಗ್ಗ: ಪರಿಣಿತಿ ಕಲಾಕೇಂದ್ರದ 8ನೇ ವರ್ಷದ ಸಂಭ್ರಮದ ಪ್ರಯುಕ್ತ ನಗರದ ಗಾಂಧಿ ಮೈದಾನದಲ್ಲಿ ಪರಿಣಿತಿ ಕಲಾಕೇಂದ್ರದ ವತಿಯಿಂದ ಜನವರಿ 21 ಹಾಗೂ 22ರ ಸಂಜೆ 5ಕ್ಕೆ 8ನೇ ವರ್ಷದ ಪರಿಣಿತಿ ರಾಷ್ಟ್ರೀಯ ನೃತ್ಯ ಸಂಗೀತೋತ್ಸವ 2023 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸಾಗರ ನಗರದ ಗಾಂಧಿ ಮೈದಾನದಲ್ಲಿ ಜನವರಿ 21ರ ಸಂಜೆ 5ಕ್ಕೆ ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಮತ್ತು ಸಾಗರ ಶಾಸಕ ಹರತಾಳು ಹಾಲಪ್ಪ ಅವರು 8ನೇ ವರ್ಷದ ಪರಿಣಿತಿ ರಾಷ್ಟ್ರೀಯ ನೃತ್ಯ ಸಂಗೀತೋತ್ಸವ 2023 ಉದ್ಘಾಟಿಸುವರು.

ಪರಿಣಿತಿ ಕಲಾಕೇಂದ್ರದ ಗೌರವಾಧ್ಯಕ್ಷೆ ವೀಣಾ ಬೆಳೆಯೂರು ಅಧ್ಯಕ್ಷತೆ ವಹಿಸುವರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಎನ್ ಛಲವಾದಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು. ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್.ಎಚ್., ಉದ್ಯಮಿ ಟಿ.ವಿ.ಪಾಂಡುರಂಗ, ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ನಿರ್ದೇಶಕ ಕೆ.ಸಿದ್ದಪ್ಪ, ಸಾಗರ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ನಗರಸಭೆ ಸದಸ್ಯ ಟಿ.ಡಿ.ಮೇಘರಾಜ ಪಾಲ್ಗೊಳ್ಳುವರು.
ಎಲ್.ಬಿ. ಎಸ್.ಬಿ.ಎಸ್ ಕಾಲೇಜಿನ ಪ್ರಾಚಾರ್ಯ ಡಾ. ಲಕ್ಷ್ಮೀಶ ಎ.ಎಸ್, ಉದ್ಯಮಿ ಎಸ್.ಡಿ.ವೀರಪ್ಪ, ಆರಗ ಚಂದ್ರಶೇಖರ್, ನಗರಸಭೆ ಉಪಾಧ್ಯಕ್ಷ ವಿ.ಮಹೇಶ್, ಸದಸ್ಯರಾದ ಅರವಿಂದ ರಾಯ್ಕರ್, ಗಣೇಶ್ ಪ್ರಸಾದ್, ತುಕರಾಮ್ ಉಪಸ್ಥಿತರಿರುವರು.

ಸಾಗರ ನಗರದ ಗಾಂಧಿ ಮೈದಾನದಲ್ಲಿ ಜನವರಿ 22ರ ಸಂಜೆ 5ಕ್ಕೆ ಸಮಾರೋಪ ನಡೆಯಲಿದೆ. ಪರಿಣಿತಿ ರಾಷ್ಟ್ರೀಯ ನೃತ್ಯ ಸಂಗೀತೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಅಧ್ಯಕ್ಷತೆ ವಹಿಸುವರು. ಹೈಕೋರ್ಟ್ ಹಿರಿಯ ವಕೀಲ ಕೆ.ದಿವಾಕರ್, ಭಾರತೀಯ ವಿದ್ಯಾಭವನ ಜಂಟಿ ನಿರ್ದೇಶಕ ವೇಣುಗೋಪಾಲ್, ವಿಠ್ಠಲ್ ಪೈ ಹೆಗ್ಗೋಡು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
2 ದಿನ ಆಯೋಜಿಸಿರುವ 8ನೇ ವರ್ಷದ ಪರಿಣಿತಿ ರಾಷ್ಟ್ರೀಯ ನೃತ್ಯ ಸಂಗೀತೋತ್ಸವ 2023 ಕಾರ್ಯಕ್ರಮದಲ್ಲಿ ಸಾಗರ ಬಳಸಗೋಡಿನ ನಮನ ಎಸ್ ಅವರಿಂದ ಯೋಗ ಪ್ರದರ್ಶನ ನಡೆಯಲಿದೆ.

ಬೆಂಗಳೂರು, ಕೇರಳ, ಪಶ್ಚಿಮ ಬಂಗಾಳ, ಮಲೇಷಿಯಾ ಸೇರಿ ವಿವಿಧೆಡೆಯಿಂದ ಕಲಾವಿದರು ನೃತ್ಯ ಸಂಗೀತೋತ್ಸವದಲ್ಲಿ ಪಾಲ್ಗೊಳ್ಳುವರು ಎಂದು ಪರಿಣಿತಿ ಕಲಾಕೇಂದ್ರದ ವಿದ್ವಾನ್ ಎಂ.ಗೋಪಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಉದ್ಯಮಿಗಳು ವಾಚ್ ಪಾರ್ಕ್ ಸ್ಥಾಪಿಸಲು ಮುಂದೆ ಬಂದರೆ ಸರ್ಕಾರದ ಸಹಕಾರವಿದೆ-ಅಶ್ವತ್ಥನಾರಾಯಣ

0

ಬೆಂಗಳೂರು: ಗಡಿಯಾರ ಉದ್ಯಮಕ್ಕೆ ಸಂಬಂಧಿಸಿದವರು ವಾಚ್ ಪಾರ್ಕ್ ಸ್ಥಾಪಿಸಲು ಮುಂದೆ ಬಂದರೆ ಸರ್ಕಾರ ಎಲ್ಲಾ ಅಗತ್ಯ ಸಹಕಾರ ನೀಡಲು ಸಿದ್ಧವಿದೆ ಎಂದು ಐಟಿಬಿಟಿ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ. ಸಿ ಎನ್ ಅಶ್ವತ್ಥ ನಾರಾಯಣ ಅವರು ಹೇಳಿದರು.

‘ಇಂಡಿಯಾ ಇಂಟರ್ ನ್ಯಾಷನಲ್ ಅಂಡ್ ಕ್ಲಾಕ್ ಫೇರ್’ ವತಿಯಿಂದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿರುವ ‘ಸಮಯ ಭಾರತಿ- 2023’ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಸರ್ಕಾರ ಈಗ ನಿಯಮಗಳನ್ನು ಸುಲಭಗೊಳಿಸಿದೆ. ಆ ಪ್ರಕಾರ ಕೈಗಾರಿಕೆಗೆ ಸಂಬಂಧಿಸಿದವರು ತಮ್ಮದೇ ಆದ ಉದ್ಯಮ ಪಾರ್ಕ್ ಗಳನ್ನು ಸ್ಥಾಪಿಸಿ ತಾವೇ ನಿರ್ವಹಿಸಬಹುದು. ಇದಕ್ಕೆ ಬೇಕಾದ ಭೂಮಿ ಖರೀದಿ ಪ್ರಕ್ರಿಯೆಯನ್ನು ಈಗ ಸರಳಗೊಳಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಕೈಗಾರಿಕಾ ವಾತಾವರಣವನ್ನು ಉತ್ತೇಜಿಸುವ ಸಲುವಾಗಿ ಸರ್ಕಾರ ಬಿಗಿ ನಿಯಮಗಳಿಗೆ ಬದಲಾಗಿ ಅನುಸರಿಸಲು ಸುಲಭವಾದ ನಿಯಮಾವಳಿಯನ್ನು ಜಾರಿಗೆ ತಂದಿದೆ. ಉದ್ಯಮಗಳು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ತನ್ನ ಮನಸ್ಸಿಗೆ ಒಪ್ಪುವಂತಹ ಗಡಿಯಾರ ಹಾಕಿಕೊಳ್ಳಬೇಕೆಂಬುದು ಪ್ರತಿಯೊಬ್ಬ ವ್ಯಕ್ತಿಯ ಬಯಕೆಯಾಗಿರುತ್ತದೆ. ಆದ್ದರಿಂದ, ಗಡಿಯಾರ ಉದ್ಯಮವು ಯಾವಾಗಲೂ ಬೇಡಿಕೆಯಲ್ಲಿರುವ ಉದ್ಯಮವಾಗಿರುತ್ತದೆ ಎಂದರು.

ಸರ್ಕಾರವು ಈಗ ವಿದ್ಯಾರ್ಥಿಗಳ ಕಲಿಕೆ ಹಾಗೂ ಅವರಿಗೆ ಕೌಶಲ ತರಬೇತಿ ಇವೆರಡಕ್ಕೂ ಒಟ್ಟೊಟ್ಟಿಗೆ ಒತ್ತು ಕೊಡುತ್ತಿದೆ. ಕಲಿಕೆಯ ಬೇರೆ, ಕೌಶಲವೇ ಬೇರೆ ಎಂಬ ಪರಿಸ್ಥಿತಿ ಈಗ ಇಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಕೌಶಲ್ಯವಿರುವ ವ್ಯಕ್ತಿಯನ್ನಾಗಿಸುವುದೇ ಸರ್ಕಾರದ ಗುರಿಯಾಗಿದೆ. ಹೀಗಾಗಿ ಗಡಿಯಾರ ಉದ್ಯಮಕ್ಕೆ ಅಗತ್ಯವಿರುವ ಕೌಶಲ್ಯಯುಕ್ತ ಮಾನವ ಸಂಪನ್ಮೂಲವನ್ನು ಸರ್ಕಾರ ಲಭ್ಯವಾಗಿಸಲಿದೆ ಎಂದು ಅಶ್ವಥ್ ನಾರಾಯಣ್ ಅವರು ಹೇಳಿದರು.

ಯುವಕರಿಗೆ ನಾನಾ ರೀತಿಯ ಕೌಶಲ ತರಬೇತಿಗಳನ್ನು ಸರ್ಕಾರ ಆದ್ಯತೆಯ ಮೇರೆಗೆ ಕೊಡುತ್ತಿದೆ. ಗಡಿಯಾರ ಉದ್ಯಮ ಸೇರಿದಂತೆ ಬೇಡಿಕೆಯಲ್ಲಿರುವ ಎಲ್ಲಾ ಉದ್ಯಮಗಳಿಗೂ ಮಾನವ ಸಂಪನ್ಮೂಲವನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಚಿವರು ಪ್ರದರ್ಶನಕ್ಕೆ ಇರಿಸಿರುವ ಅನೇಕ ಬಗೆಯ ಗಡಿಯಾರಗಳನ್ನು ನೋಡಿ ವಿನ್ಯಾಸಗಳ ಹೊಸತನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾಸ್ಕರ್ ಭಟ್ ಉದ್ಘಾಟಿಸಿದರು. ಗಡಿಯಾರ ಉದ್ಯಮದ ಹಿರಿಯರಾದ ಯಜ್ಞನಾರಾಯಣ, ಸಮಯ ಭಾರತಿ ಸಿಇಒ ಹೇಮಂತ್, ಟೈಟನ್ ಸಿಇಒ ಸುಪರ್ಣಾ, ದೀಪಕ್, ವಿನೋದ್ ಮತ್ತಿತರರು ಇದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಬಾಲ ಗಂಗಾಧರನಾಥ ಶ್ರೀಗಳು ಅನ್ನ ಮತ್ತು ಜ್ಞಾನ ದಾಸೋಹಿಯಾಗಿದ್ದರು

0

ಚಿಕ್ಕಮಗಳೂರು: ಸಂಪತ್ತು ಶಾಶ್ವತವಲ್ಲ, ಪರಿಸರಕ್ಕೆ ಹೆಚ್ಚಿನ ಕೊಡುಗೆ ನೀಡಿದವರು ಹಾಗೂ ಲೋಕಕ್ಕಾಗಿ ಬದುಕಿದ ಮಹನೀಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಜಯಂತಿ ಯನ್ನು ನಾವು ಆಚರಿಸಬೇಕು ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ಹೇಳಿದರು.

ನಗರದ ಗೃಹಮಂಡಳಿಯ ಬಿಜಿಎಸ್ ಶಾಲೆಯಲ್ಲಿ ಬಾಲಗಂಗಾಧರನಾಥ ಸ್ವಾಮೀಜಿಯವರ 78 ನೇ ಜಯಂತ್ಯುತ್ಸವದಲ್ಲಿ ಮಾತನಾಡಿ, ಪೂಜ್ಯ ಸ್ವಾಮೀಜಿಯವರು ಶಿಕ್ಷಣ, ಆರೋಗ್ಯ, ಅನ್ನದಾನಿ ಹಾಗೂ ಪರಿಸರ ಪ್ರೇಮಿಯಾಗಿದ್ದವರು. ಜೊತೆಗೆ ಅವರ ಮೊಗದಲ್ಲಿ ಚಂದ್ರನ ತೇಜಸ್ಸು ಕಾಣುತ್ತಿತ್ತು ಎಂದು ತಿಳಿಸಿದರು.
ಶಿಕ್ಷಕರು ಲೌಕಿಕ ಬದುಕಿಗೆ ಪಾಠ ಮಾಡುತ್ತಾರೆ, ಹಾಗೆಯೇ ಶ್ರೀಗಳು ಆಧ್ಯಾತ್ಮಿಕ ಸಾಕ್ಷಾತ್ಕಾರಕ್ಕೆ ಸಾಕ್ಷಿ ಯಾಗಿ ಪ್ರವಚನ ನೀಡುತ್ತಾರೆ. ಬಾಲಗಂಗಾಧರ ಸ್ವಾಮೀಜಿಯವರು ಇಂದು ಅನ್ನ ದಾಸೋಹ, ಜ್ಞಾನ ದಾಸೋಹ, ಪರಿಸರ ಪ್ರೇಮಿಯಾಗಿದ್ದವರು, ಹೆಣ್ಣಾಗಿ ಹೊಟ್ಟೋದಕ್ಕಿಂತ, ಮಣ್ಣಾಗಿ ಹುಟ್ಟಿದರೆ, ಮಣ್ಣೀನ ಮೇಲೊಂದು ಮರವಾಗಿ ಹುಟ್ಟಿದರೆ ಪುಣ್ಯಾವಂತರಿಗೆ ನೆರಳಾಗುತ್ತೀಯ ಎಂಬ ಅದ್ಭುತ ನುಡಿಗಳ ನ್ನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿ.ತಿಪ್ಪೇರುದ್ರಪ್ಪ, ಮುಳ್ಳಿನ ಹಾದಿಯನ್ನು ಬೇಧಿಸಿ ದೇಶ-ವಿದೇಶಗಳಲ್ಲಿ ಶಿಕ್ಷಣ ಸಂಸ್ಥೆಯನ್ನು ನಿರ್ಮಾಣ ಮಾಡಿದವರು ಸ್ವಾಮೀಜಿ, ಇಂತಹ ಮಹಾನ್ ವ್ಯಕ್ತಿಗಳ ಚರಿತ್ರೆ ನಮ್ಮ ಬದುಕಿನ ಸನ್ಮಾರ್ಗದೆಡೆಗೆ ತೆಗೆದುಕೊಂಡು ಹೋಗುವುದು. ಶ್ರೀಗಳು ಸಂಘಜೀವಿ, ನಮ್ಮೊಂದಿಗೆ ಕುಳಿತು ಪ್ರಸಾದ ಸ್ವೀಕರಿಸುತ್ತಿದ್ದರು.

ಅನ್ನದಾಸೋಹಿ, ಜ್ಞಾನದಾಸೋಹಿ, ಪರಿಸರ ಪ್ರೇಮಿ, ಆರೋಗ್ಯಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದ ಮಹಾನ್ ವ್ಯಕ್ತಿ ಇವರು.

ತಂತ್ರಗಾರಿಕೆ ಬೆಳೆಯಬೇಕು ಎಂಬ ಉದ್ದೇಶದಿಂದ ಚಿಕ್ಕಮಗಳೂರಿನಲ್ಲಿ ತಂತ್ರ ಜ್ಞಾನ ಕಾಲೇಜನ್ನು ಸಹ ಸ್ಥಾಪಿಸಿದರು.

ಶ್ರೀಗಳು ಕೇವಲ ಮಠದ ಸ್ಥಾಪಕರಾಗಲಿಲ್ಲ, ಸಮಾಜ, ಸಂಘಟನೆ, ಶಿಕ್ಷಣವನ್ನು ಬೆಳೆಸಿದರು. ಇವರನ್ನು ಜ್ಞಾನಪೂರ್ಣ ಜಗನ್ ಜ್ಯೋತಿ, ಸುಜ್ಞಾನ ಜ್ಯೋತಿ ಎಂದು ಸಹ ಕರೆಯುವರು ಎಂದರು.

ಬಿಜಿಎಸ್ ಪಿಯು ಕಾಲೇಜಿನ ಪ್ರಿನ್ಸಿಪಾಲ್ ಜೆ.ಜಿ.ಸುರೇಂದ್ರ ಮಾತನಾಡಿ ಬಾಲಗಂಗಾಧರನಾಥ ಸ್ವಾಮೀಜಿಯವರು ದೇಶಕ್ಕೆ ಸಿಕ್ಕಿರುವ ಮಹಾನ್ ಚೇತನ, ಸುಮಾರು 400 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿರುವ ಇವರು ಪ್ರತಿ ಹಳ್ಳಿಗಳ ಬಡ ವಿದ್ಯಾರ್ಥಿಗೂ ಶಿಕ್ಷಣ ಸಿಗಬೇಕು ಎಂಬುದು ಸ್ವಾಮೀಜಿಯವರ ಆಶಯವಾಗಿತ್ತು. 5 ಕೋಟಿ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆ ಮಾಡುವ ಗುರಿ ಸ್ವಾಮೀಜಿಯವರು ಹೊಂದಿದ್ದರು ಎಂದು ತಿಳಿಸಿದರು.

ಬಾಲಗಂಗಾಧರನಾಥ ಸ್ವಾಮೀಜಿಯವರ 78 ನೇ ಜಯಂತ್ಯುತ್ಸವದ ಅಂಗವಾಗಿ ಬಿಜಿಎಸ್ ಶಾಲೆಯ ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳು ಗೃಹಮಂಡಳಿ ಬಡಾವಣೆಯ ಮುಖ್ಯರಸ್ತೆಯನ್ನು ಸ್ವಚ್ಛಗೊ ಳಿಸುವ ಮೂಲಕ ಶ್ರಮದಾನ ಮಾಡಿ ಸ್ವಾಮೀಜಿಯವರಿಗೆ ಗೌರವ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಆದಿಚುಂಚನಗಿರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಿ.ಆರ್.ಚಂದ್ರಶೇ ಖರ್, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಇದ್ದರು. ಹತ್ತನೇ ತರಗತಿ ವಿದ್ಯಾರ್ಥಿನಿ ವರ್ಷ ಪ್ರಾರ್ಥಿಸಿ, ವಾಣಿಜ್ಯ ವಿಭಾಗದ ಪಿಯು ವಿದ್ಯಾರ್ಥಿನಿ ಭೂಮಿಕ ಸ್ವಾಗತಿಸಿ, ಹತ್ತನೇ ತರಗತಿ ವಿದ್ಯಾರ್ಥಿನಿ ಪೂರ್ವಿಕ ವಂದಿಸಿ, ಸಹಶಿಕ್ಷಕಿ ಪಲ್ಲವಿ ನಿರೂಪಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕೇಂದ್ರ ಸರ್ಕಾರಿ ಸೇವೆ ನೇಮಕಾತಿಯಲ್ಲಿ ರಾಜ್ಯದವರ ಸಂಖ್ಯೆ ಹೆಚ್ಚಾಗಬೇಕು- ಸಚಿವ ಅಶ್ವತ್ಥ ನಾರಾಯಣ

0

ಬೆಂಗಳೂರು: ಬಿಎ, ಬಿಕಾಂ, ಬಿ.ಎಸ್ಸಿ, ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ‘ಸ್ಪರ್ಧಾ ಅರಿವು’ ನಿಯತಕಾಲಿಕೆ ಗುರುವಾರ ಒಡಂಬಡಿಕೆ ಮಾಡಿಕೊಂಡವು.

ಡಿಸಿಟಿ ಆಯುಕ್ತ ಪಿ.ಪ್ರದೀಪ್ ಮತ್ತು ‘ಸ್ಪರ್ಧಾ ಅರಿವು’ ಸಿಇಒ ಸತೀಶ ಗೌಡ ಅವರು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, “ಕೇಂದ್ರ ಸರ್ಕಾರಿ ಸೇವೆಗಳಿಗೆ ನಮ್ಮ ಕರ್ನಾಟಕದಿಂದ ನೇಮಕವಾಗುವವರ ಸಂಖ್ಯೆ ಇನ್ನೂ ಹೆಚ್ಚಾಗಬೇಕು ಎಂದರು.

ಸ್ಟ್ಯಾಫ್ ಸೆಲೆಕ್ಷನ್ ಕಮಿಷನ್ (ಎಸ್ಎಸ್ಸಿ) ಮೂಲಕ ಸದ್ಯದಲ್ಲೇ 30 ಸಾವಿರ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಹುದ್ದೆಗಳಿಗೆ ಹಾಗೂ ಯುಪಿಎಸ್ಸಿ ನಡೆಸುವ ನೇಮಕಾತಿಗಳಿಗೆ ನಮ್ಮ ಕರ್ನಾಟಕದವರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಬೇಕೆಂಬುದು ಈ ಒಡಂಬಡಿಕೆಯ ಉದ್ದೇಶ ಎಂದು ಅವರು ವಿವರಿಸಿದರು.

ಬಿಎ, ಬಿಕಾಂ, ಬಿಎಸ್ಸಿ, ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ಕೋರ್ಸ್ ಗಳ ಕೊನೆಯ ವರ್ಷದಲ್ಲಿರುವ ವಿದ್ಯಾರ್ಥಿಗಳಿಗೆ ಎಸ್ಎಸ್ ಸಿ ಮೂಲಕ ವಿವಿಧ ಹುದ್ದೆಗಳಿಗೆ ನಡೆಯುವ ಪರೀಕ್ಷೆಗಳಿಗೆ ತರಬೇತಿ ಕೊಡಲಾಗುತ್ತದೆ. ನೋಂದಣಿ ಮಾಡಿಸಿಕೊಳ್ಳುವ ಪ್ರತಿ ಅಭ್ಯರ್ಥಿಯು ಮೊಬೈಲ್ ಮೂಲಕ ಪ್ರತಿ ತಿಂಗಳು ಹೊಸ ಹಾಗೂ ಪರಿಷ್ಕೃತ ಮಾಹಿತಿಗಳಿಂದ ಕೂಡಿದ ನಿಯತಕಾಲಿಕವನ್ನು ಅಧ್ಯಯನ ಮಾಡಬಹುದು. ಕ್ಯುಆರ್ ಕೋಡ್ ಮೂಲಕ ಇದನ್ನು ನೋಡುವ ಅವಕಾಶವನ್ನೂ ಒದಗಿಸಲಾಗುತ್ತದೆ. ತಯಾರಿ ಭಾಗವಾಗಿ ವಾರಕ್ಕೊಮ್ಮೆ ಸ್ಟಡಿ ಪ್ಲಾನ್ ಸಿದ್ದಪಡಿಸುವ ಜೊತೆಗೆ ಪರೀಕ್ಷೆಯನ್ನೂ ನಡೆಸಲಾಗುತ್ತದೆ.
ಅಲ್ಲದೆ, ಶಿಕ್ಷಕರ ಮೂಲಕ ತರಬೇತಿಗೂ ವ್ಯವಸ್ಥೆ ಮಾಡಲಾಗುವುದು ಎಂದು ಅವವರು ತಿಳಿಸಿದರು.

ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ಕೊಡಲಾಗಿದೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ ಹೊಸದಾಗಿ 10 ಸಾವಿರ ಕಾಯಂ ಹುದ್ದೆಗಳ ನೇಮಕಾತಿಗೆ ಪ್ರಸ್ತಾವ ಸಲ್ಲಿಸಲಾಗುವುದು. ಇದರ ಜೊತೆಗೆ ಇನ್ನೂ 10 ಸಾವಿರ ಅತಿಥಿ ಉಪನ್ಯಾಸಕರು ಸೇರ್ಪಡೆಯಾಗಲಿದ್ದಾರೆ. ಅದಕ್ಕೆ ತಕ್ಕಂತೆ ಸರ್ಕಾರಿ ಕಾಲೇಜುಗಳಲ್ಲಿನ ಪ್ರವೇಶಾತಿ ಸಂಖ್ಯೆಯನ್ನು ಈಗಿರುವ 5 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಿಸುವ ಗುರಿ ಹೊಂದಬೇಕು ಎಂದು ಹೇಳಿದರು.

‘ಸ್ಪರ್ಧಾ ಅರಿವು’ ನಿರ್ದೇಶಕ ಗಿರೀಶ, ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕ ಡಾ. ಅಪ್ಪಾಜಿ ಗೌಡ, ತಾಂತ್ರಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಶ್ರೀಕಾಂತ್, ಬೈರಪ್ಪ ಅವರು ಇದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

₹20 ಕೋಟಿ ಮೌಲ್ಯದ ಶ್ವಾನ ಬಳ್ಳಾರಿ ಉತ್ಸವ ಶ್ವಾನ ಪ್ರದರ್ಶನದ ವಿಶೇಷ ಆಕರ್ಷಣೆ

0

ಬಳ್ಳಾರಿ: ಜಿಲ್ಲಾಡಳಿತ ವತಿಯಿಂದ ಪ್ರಥಮ ಬಾರಿಗೆ ನಡೆಸಲಾಗುತ್ತಿರುವ ಬಳ್ಳಾರಿ ಉತ್ಸವದಲ್ಲಿ ಈಗಾಗಲೇ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ.

ಉತ್ಸವದ ಮೆರಗನ್ನು ಇನ್ನಷ್ಟು ಹೆಚ್ಚಿಸಲು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಜನವರಿ 22 ರಂದು ಬೆಳಗ್ಗೆ 8ರಿಂದ ವಿವಿಧ ತಳಿಯ ಶ್ವಾನ ಪ್ರದರ್ಶನ ಕಾರ್ಯಕ್ರಮವನ್ನು ಬಳ್ಳಾರಿಯ ವಾಡ್ರ್ಲಾ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ.

ಬಳ್ಳಾರಿ ನಗರವಾಸಿಗಳು ತಮ್ಮ ತಮ್ಮ ಶ್ವಾನಗಳನ್ನು ಪ್ರದರ್ಶಿಸಲು ಈಗಾಗಲೇ ನೊಂದಣಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಸ್ಪರ್ಧೆಯಲ್ಲಿ ಶ್ವಾನಗಳಿಗೆ ನೆರಳು ಮತ್ತು ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತ ಶ್ವಾನಗಳಿಗೆ ಆಕರ್ಷಕ ಬಹುಮಾನ ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಜಾತಿ ಶ್ವಾನಗಳಿಗೆ ಮಾತ್ರ ಅವಕಾಶವಿರುತ್ತದೆ. ಶ್ವಾನ ಪ್ರದರ್ಶನಕ್ಕೆ ನೊಂದಣಿಯು ಉಚಿತವಾಗಿರುತ್ತದೆ. ನೊಂದಣಿ ಮಾಡಿಸಲು ಕೊನೆಯ ದಿನ ಜನವರಿ 20ರಂದು ಸಂಜೆ 5 ರವರೆಗೆ ಇರುತ್ತದೆ.

ರೂ.20 ಕೋಟಿ ಮೌಲ್ಯದ ಶ್ವಾನ ಬಳ್ಳಾರಿಗೆ; ರಾಜ್ಯದಲ್ಲಿ ಅತ್ಯಂತ ದುಬಾರಿ ಬೆಲೆಯ ಶ್ವಾನ ಎಂಬ ಹೆಗ್ಗಳಿಕೆಗೆ ಪಾತ್ರವಾದ ಹಾಗೂ ರಾಜ್ಯ ಸೇರಿ ದೇಶದ ನಾನಾ ಪ್ರದರ್ಶನದಲ್ಲಿ ಪಾಲ್ಗೊಂಡು ನೋಡುಗರ ಗಮನ ಸೆಳೆದಿರುವ ಬೆಂಗಳೂರಿನ ಸತೀಶ್ ಕೆಡಬಾಮ್ಸ್ ಅವರ ಕೆಡಬಾಮ್ಸ್ ಹೈದರ್ ಎನ್ನುವ ಕಕೇಶಿಯಾ ಶೆಫರ್ಡ್ ಎಂಬ ವಿಶೇಷ ತಳಿಯ ಶ್ವಾನದ ಬೆಲೆಯು ಬರೋಬ್ಬರಿ ರೂ.20 ಕೋಟಿಯ ಶ್ವಾನವಾಗಿದೆ. ಸಿಂಹದಂತೆ ಕಾಣುವ ಅಪರೂಪದ ಈ ಶ್ವಾನದ ತೂಕ 100 ಕೆಜಿ ಇದೆ. ಎತ್ತರದಲ್ಲೂ 6 ಅಡಿ ಇದೆ. ಉಳಿದ ಸಾಮಾನ್ಯ ನಾಯಿಗಳಿಗಿಂತ ತುಂಬಾ ದೊಡ್ಡದಾಗಿರುವುದು ಮತ್ತೊಂದು ಆಕರ್ಷಣೆಯಾಗಿದೆ. ಇದು ಬಳ್ಳಾರಿ ಉತ್ಸವದ ಮೆರಗನ್ನು ಹೆಚ್ಚಿಸಲು ಜ.22ರಂದು ನಡೆಯುವ ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಲಿದೆ.

ಶ್ವಾನ ಪ್ರದರ್ಶನದಲ್ಲಿ ಭಾಗವಹಿಸುವ ಮಾಲೀಕರಿಗೆ ಸೂಚನೆಗಳು: ಶ್ವಾನ ಪ್ರದರ್ಶನಕ್ಕೆ ಬರುವ ಶ್ವಾನಗಳಿಗೆ ಸರಿಯಾದ ಬೆಲ್ಟ್ ಮತ್ತು ಚೈನ್‍ನ್ನು ತೊಡಿಸಿಕೊಂಡು ಬರಬೇಕು. ಶ್ವಾನದ ಉತ್ತಮ ಗುಣಗಳನ್ನು ನಿರ್ಣಾಯಕರ ಗಮನಕ್ಕೆ ಬರುವಂತೆ ಪ್ರದರ್ಶಿಸಬೇಕು. ಶ್ವಾನದ ಸಂಪೂರ್ಣ ಮಾಹಿತಿ ಮಾಲೀಕರು ತಿಳಿದಿರಬೇಕು. ಶ್ವಾನ ಪ್ರದರ್ಶನದ ದಿನಾಂಕದಂದು ಸ್ನಾನ ಮಾಡಿಸಬಾರದು. ಶ್ವಾನ ಪ್ರದರ್ಶನದಂದು ನಿರ್ಣಾಯಕರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕು. ಶ್ವಾನದ ದೇಹದ ಅಂಗ ರಚನೆಯ ಜೊತೆಗೆ ಕೂದಲಿನ ಕಾಂತಿ, ಹಲ್ಲುಗಳನ್ನು, ಮೂಗು, ಕಿವಿಗಳನ್ನು ಪರೀಕ್ಷಿಸುವುದರಿಂದ ಅವುಗಳನ್ನು ಶುಚಿಯಾಗಿಟ್ಟಿರಬೇಕು.
ಶ್ವಾನ ಪ್ರದರ್ಶನದಂದು ತುರ್ತು ಚಿಕಿತ್ಸೆಯ ಸೌಲಭ್ಯಗಳು ಲಭ್ಯವಿರುತ್ತದೆ.

ಸ್ಪರ್ಧೆಯ ಬಹುಮಾನದ ವಿವರಗಳು: ಪ್ರತಿ ತಳಿಗೆ ಮೊದಲನೇ ಸ್ಥಾನ ರೂ.3 ಸಾವಿರ, ಎರಡನೇ ಸ್ಥಾನ ರೂ.2 ಸಾವಿರದಂತೆ ಬಹುಮಾನ ನೀಡಲಾಗುವುದು. ಎಲ್ಲಾ ತಳಿಯ ಪುಟ್ಟ ನಾಯಿ ಮರಿಗಳಿಗೆ (3 ರಿಂದ 12ನೇ ತಿಂಗಳವರೆಗಿನ) ಮೊದಲನೇ ಸ್ಥಾನ ರೂ.3 ಸಾವಿರ, ಎರಡನೇ ಸ್ಥಾನ ರೂ.2 ಸಾವಿರ ಮತ್ತು ಮೂರನೇ ಸ್ಥಾನ ರೂ.1 ಸಾವಿರದಂತೆ ಬಹುಮಾನ ನೀಡಲಾಗುವುದು. ಪ್ರತಿ ವಯಸ್ಕ ಗುಂಪಿನ ಶ್ವಾನ ತಳಿಯಲ್ಲಿ ಮೊದಲ ಸ್ಥಾನ ಪಡೆದ ಶ್ವಾನವನ್ನು ಕೊನೆಯ ಸುತ್ತಾದ “ಪ್ರದರ್ಶನದ ಉತ್ತಮ ತಳಿ” ಸ್ಪರ್ಧೆಗೆ ಆಯ್ಕೆಮಾಡಿ ರೂ.10 ಸಾವಿರ ಬಹುಮಾನವನ್ನು ನೀಡಲಾಗುತ್ತದೆ.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಶ್ವಾನಗಳಿಗೆ ಭಾಗವಹಿಸಿದ ಪ್ರಶಸ್ತಿ ಪತ್ರ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಹಾಗೂ ನೊಂದಣಿಗಾಗಿ ಮೊ.9590576964, 8310089055, 9980254131, 9916503138, 9686041441, 9880678426 ಗೆ ಸಂಪರ್ಕಿಸಬಹುದು.
ಉತ್ಸವದ ಅಂಗವಾಗಿ ನಡೆಸಲಾಗುತ್ತಿರುವ ವಿವಿಧ ಸ್ಪರ್ಧೆ ಮತ್ತು ಕಾರ್ಯಕ್ರಮಗಳಲ್ಲಿ ಸಾರ್ವಜನಿಕರೆಲ್ಲರೂ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಉತ್ಸವ ಆಚರಣಾ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಪಾಕಿಸ್ತಾನ ಪಾಠ ಕಲಿತಿದೆಯಾ?

0

ದೇಶದ ಸಂಪನ್ಮೂಲಗಳನ್ನು ಬಾಂಬು ಟ್ಯಾಂಕರ್ ಗಳಿಗೆ ವ್ಯರ್ಥ ಮಾಡಲು ಪಾಕ್ ಸಿದ್ಧವಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಶಹಬಾಜ್ ಶರೀಫ್ ಅವರು ಹೇಳಿದ್ದಾರೆ.
ಈಗಾಗಲೇ ಆರ್ಥಿಕತೆ ಜರ್ಜರಿತವಾಗಿರುವ ಪಾಕಿಸ್ತಾನದಲ್ಲಿ ದಿನನಿತ್ಯದ ದಿನಸಿ ಬೆಲೆ ಗಗನಕ್ಕೇರಿದೆ. ಆಂತರಿಕ ರಾಜಕಾರಣದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಸೆಣೆಸಾಡುತ್ತಿವೆ. ಪ್ರವಾಹದ ಕಾರಣದಿಂದಾಗಿ ಅಲ್ಲಿನ ಮೂರನೇ ಒಂದು ಭಾಗದ ಜನರ ಬಾಳು ದಮನೀಯವಾಗಿತ್ತು. ಇಂಧನ ತುರ್ತು ರಕ್ಷಿಸಲು ದೇಶದ ಎಲ್ಲಾ ಮಾಲ್ ಗಳನ್ನು ರಾತ್ರಿ 8:30ಕ್ಕೆ ಮುಚ್ಚಲು ಆದೇಶಿಸಿತ್ತು. ಸರ್ಕಾರಿ ಕಛೇರಿಗಳಲ್ಲಿ ವಿದ್ಯುತ್ ಬಳಕೆ ಶೇಕಡ 30ರಷ್ಟಕ್ಕೆ ಮಿತಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
ಈ ದುಃಸ್ಥಿತಿಗೆ ಕೋವಿಡ್ ಕೂಡ ಪ್ರಮುಖ ಕಾರಣವಾಗಿದೆ.

ಮಾಧ್ಯಮಗಳ ವರದಿಗಳು ಹೇಳುವಂತೆ ಕೃಷಿಗೆ ನೀಡುವ ಸಹಾಯಧನವನ್ನು ವಾಣಿಜ್ಯ ಬೆಳೆಗಳಿಗೆ ಬಹುಪಾಲು ನೀಡಿದ್ದರ, ಪರಿಣಾಮ ಆಹಾರ ಬೆಳೆಗಳ ಉತ್ಪಾದನೆಯಲ್ಲಿ ಕುಸಿತವಾಗಿದೆ. ಸಹಾಯಧನದ ಆಸೆಗೆ ಕೃಷಿಕರು ವಾಣಿಜ್ಯ ಬೆಳೆಗಳತ್ತ ಆಸಕ್ತಿ ತೋರಿಸಿದ್ದರ ಪರಿಣಾಮ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದೆ.

ಅಂತರಾಷ್ಟ್ರೀಯ ಹಣಕಾಸು ನಿಧಿಗೆ 23 ಸಲ ಪಾಕಿಸ್ತಾನ ಸಾಲಕ್ಕೆ ಅರ್ಜಿ ಹಾಕಿದೆ. ಐಎಂಎಫ್ ನಾ ಷರತ್ತಿಗೆ ಪಾಕಿಸ್ತಾನ ಒಪ್ಪಿಲ್ಲ. ಒಪ್ಪುವ ಸ್ಥಿತಿಯಲ್ಲಿಲ್ಲದ ಕಾರಣ ಹಣಕಾಸು ನೆರವು ತಕ್ಷಣ ಲಭಿಸಿಲ್ಲ. ಇದೂ ಒಂದು ದೊಡ್ಡ ಪೆಟ್ಟು.

ಸದ್ಯ ಹೊರದೇಶಗಳಿಂದ ಆರ್ಥಿಕ ನೆರವು ಸಿಗುವ ಭರವಸೆಯಿಂದ ಪಾಕಿಸ್ತಾನ ಉಸಿರಾಡುತ್ತಿದೆ. ಇಂತಹ ವಿಲಕ್ಷಣ ಸನ್ನಿವೇಶದಲ್ಲಿ ಪಾಕಿಸ್ತಾನ ಮತ್ತು ಕಾಶ್ಮೀರ ಸಮಸ್ಯೆ ಬಗ್ಗೆ ವಿದೇಶಿ ಸಂಯುಕ್ತ ಅರಬ್ ರಾಷ್ಟ್ರದ ಮಧ್ಯಸ್ಥಿಕೆ ಬಗ್ಗೆ ಹಪಹಪಿ ಹೇಳಿಕೆ ನೀಡಿದೆ.

ಭಾರತದೊಂದಿಗೆ ಶಾಂತಿ ಬಯಸುತ್ತೇನೆ ಎಂದು ಹೇಳಿ ಹಳೆಯ ದ್ವೇಷ, ಯುದ್ಧಗಳ ಬಗ್ಗೆ ಪಶ್ಚಾತ್ತಾಪವಾದಂತೆ ಮಾತನಾಡುತ್ತಿದೆ. ಉಭಯ ರಾಷ್ಟ್ರಗಳ ಜನ ಕೂಡಿ ಬಾಳಬೇಕು ಎಂದು ಪ್ರಧಾನಿ ಮೋದಿ ಅವರಿಗೆ ತನ್ನ ಸಂದೇಶ ಕಳಿಸಿದೆ.

ಭಾರತ ವಿದೇಶಾಂಗ ಇಲಾಖೆ ಕಾಶ್ಮೀರ ಸಮಸ್ಯೆ ಬಗ್ಗೆ ಮೂರನೇ ದೇಶದ ಮಧ್ಯಸ್ಥಿಕೆ ಒಪ್ಪುವುದಿಲ್ಲ ಎಂದು ತಿಳಿಸಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.