Thursday, April 2, 2026
Thursday, April 2, 2026
Home Blog Page 1327

ಬಳ್ಳಾರಿ ಉತ್ಸವಕ್ಕೆ ಸಾಗಿ ಬಂದ ಬಣ್ಣಬಣ್ಣದ ಬಂಡಿ ಸಾಲು

0

ಬಳ್ಳಾರಿ: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಬಳ್ಳಾರಿ ಉತ್ಸವದ ಅಂಗವಾಗಿ ಕೃಷಿ ಮಾರುಕಟ್ಟೆ ಆವರಣದಿಂದ ಮುನಿಸಿಪಲ್ ಮೈದಾನದವರೆಗೆ ಹಮ್ಮಿಕೊಳ್ಳಲಾಗಿತ್ತು. ನೂರಾರು ಅಲಂಕೃತ ಎತ್ತಿನ ಗಾಡಿಗಳ ಮೆರವಣಿಗೆಗೆ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಅವರು ಚಾಲನೆ ನೀಡಿದರು.

ಎತ್ತಿನ ಬಂಡಿ ಉತ್ಸವದಲ್ಲಿ ಶ್ರೀಧರಗಡ್ಡೆ, ಲಕ್ಷ್ಮೀನಗರ ಕ್ಯಾಂಪ್, ಕೊಳಗಲ್, ಸಂಜೀವರಾಯನ ಕೋಟೆ, ಚೆರಕುಂಟೆ ಹಾಗೂ ನೆರೆಯ ಆಂಧ್ರಪ್ರದೇಶದ ನಾನಾ ಗ್ರಾಮಗಳ ಸೇರಿದಂತೆ ತಳಿರು ತೋರಣಗಳಿಂದ ಸಿಂಗಾರಗೊಂಡ 100 ಕ್ಕೂ ಅಧಿಕ ಎತ್ತಿನ ಬಂಡಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದವು.

ಸಿಂಗಾರದ ಎತ್ತಿನ ಬಂಡಿಗಳು: ಎತ್ತಿನ ಬಂಡಿಗಳಿಗೆ ನಾನಾ ಹೂ, ತಳಿರು ತೋರಣ, ರಾಷ್ಟ್ರೀಯ ಐಕ್ಯತೆ ಸಾರುವ ಹಾಗೂ ನಾಡಿನ ಮೆರಗನ್ನು ಸಾರುವ ಬಾವುಟ, ಅನೇಕ ಬಣ್ಣದ ಬಲೂನ್‍ಗಳ ಮೂಲಕ ಸಿಂಗಾರಗೊಳಿಸಲಾಗಿತ್ತು. ಇದಲ್ಲದೇ, ಸದೃಢ ಆರೋಗ್ಯಕ್ಕಾಗಿ ಸಿರಿಧಾನ್ಯದ ಅರಿವು ಮೂಡಿಸುವ ಹಾಗೂ ಕೃಷಿ ಇಲಾಖೆಯ ಮಾಹಿತಿಯುಳ್ಳ ಬ್ಯಾನರ್‍ಗಳನ್ನು ಬಂಡಿಗಳಿಗೆ ಹಾಕಲಾಗಿತ್ತು.

ಪ್ರತಿಯೊಂದು ಎತ್ತುಗಳ ದೇಹದ ಮೇಲೆ ನೀಲಿ ಮತ್ತು ಕೆಂಪು ಬಣ್ಣಗಳಿಂದ ನಾನಾ ಚಿತ್ರಗಳನ್ನು ಬಿಡಿಸಲಾಗಿತ್ತು. ಎತ್ತುಗಳ ಕೊರಳಲ್ಲಿ ಗೆಜ್ಜೆಯ ಸರ, ನಾನಾ ಬಣ್ಣದ ಹಣೆಯ ಮೇಲೆ ಗಂಡೇವು ಕಟ್ಟಲಾಗಿತ್ತು.

ಪ್ರತಿಯೊಬ್ಬ ರೈತರು ಎತ್ತಿನ ಬಂಡಿ ಓಡಿಸುವವರು ಹಸಿರುಪೇಟ ತೊಟ್ಟಿದ್ದು ವಿಶೇಷವಾಗಿತ್ತು.
*

ಗಮನಸೆಳೆದ ಮಾಹಿತಿ ಬ್ಯಾನರ್‍ಗಳು; ಎತ್ತಿನ ಬಂಡಿ ಉತ್ಸವದಲ್ಲಿ ಎತ್ತಿನ ಬಂಡಿಗಳಲ್ಲಿ ಸಾವಯವ ಕೃಷಿ ಪದ್ಧತಿಗಳ ಅರಿವು ಮೂಡಿಸುವ ಬ್ಯಾನರ್, ಸಿರಿಧಾನ್ಯ ಬಳಕೆಯ ಮಹತ್ವ ಕುರಿತ ಬ್ಯಾನರ್‍ಗಳು, ಮತದಾನದ ಜಾಗೃತಿ ಮೂಡಿಸುವ ಬ್ಯಾನರ್‍ಗಳು ಮತ್ತು ಸಿರಿಧಾನ್ಯ ಬಳಕೆಯ ಸ್ಲೋಗನ್‍ಗಳ ಬ್ಯಾನರ್‍ಗಳು ಆಳವಡಿಸಿದ್ದು ನೋಡುಗರನ್ನು ಗಮನ ಸೆಳೆದವು.

ಗಮನ ಸೆಳೆದ ಕಲಾ ತಂಡಗಳು:

ಎತ್ತಿನ ಬಂಡಿ ಉತ್ಸವದಲ್ಲಿ ಕಲಾ ತಂಡಗಳಾದ ಡೊಳ್ಳು ಬಾರಿಸುವಿಕೆ, ಕಹಳೆ ಉದುವಿಕೆ, ಹುಲಿಕುಣಿತ, ಎತ್ತರದ ಮಾನವನ ನಡಿಗೆ ಸೇರಿದಂತೆ ಹಲವು ಕಲಾ ತಂಡಗಳು ಭಾಗವಹಿಸಿ ಕಲೆ ಪ್ರದರ್ಶಿಸಿದರು. ಮೆರವಣಿಗೆಯ ರಸ್ತೆಯ ಉದ್ದಕ್ಕೂ ಸಾರ್ವಜನಿಕರು ಹಾಗೂ ವಾಹನ ಸವಾರರು ಮೊಬೈಲ್ ಹಿಡಿದು ವಿಡಿಯೋ ಮಾಡುವ ಮೂಲಕ ಸಂಭ್ರಮಿಸಿದರು.

ನಾನಾ ರೀತಿಯ ಎತ್ತುಗಳು ಕಂಡು ಕೆಲವರು ಕೇಕೆ ಹಾಕುತ್ತ ಬಂಡಿಯಿಂದ ಓಡುತ್ತಿದ್ದರು. ನಾ ಮುಂದು ತಾ ಮುಂದು ಎನ್ನುವಂತೆ ಎತ್ತಿನ ಬಂಡಿಗಳು ಓಡಿಸಿದರು.

ಉತ್ಸವದ ಚಾಲನೆಗೆ ಮುನ್ನ ಎಲ್ಲ ಅಧಿಕಾರಿಗಳು ರೈತರ ಹಸಿರು ಶಾಲಿನ ಪೇಟತೊಟ್ಟು ಮೆರವಣಿಗೆಯಲ್ಲಿ ಗಮನಸೆಳೆದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ, ಜಿ.ಪಂ ಸಿಇಒ ಜಿ.ಲಿಂಗಮೂರ್ತಿ, ಸಹಾಯಕ ಆಯುಕ್ತ ಹೇಮಂತ್ ಕುಮಾರ, ಎಡಿಸಿ ಪಿ.ಎಸ್. ಮಂಜುನಾಥ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಮಲ್ಲಿಕಾರ್ಜುನ, ಎಪಿಎಂಸಿ ಅಧ್ಯಕ್ಷ ಬಸವಲಿಂಗಪ್ಪ ಸೇರಿದಂತೆ ಇತರ ಅಧಿಕಾರಿಗಳು ಭಾಗವಹಿಸಿದ್ದರು.

ಈ ಮೆರವಣಿಗೆಯು ಕೃಷಿ ಮಾರುಕಟ್ಟೆಯಿಂದ ಆರಂಭವಾಗಿ ಮೋತಿ ವೃತ್ತ, ಎಸ್‍ಪಿ ಸರ್ಕಲ್ ಮಾರ್ಗವಾಗಿ ದುರುಗಮ್ಮ ದೇವಸ್ಥಾನದಿಂದ ಮುನಿಸಿಪಲ್ ಮೈದಾನದವರೆಗೆ ತಲುಪಿತು.

ಅತ್ಯುತ್ತಮವಾಗಿ ಸಿಂಗಾರಗೊಂಡ ಎತ್ತಿನ ಬಂಡಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತಿಯ ಬಹಮಾನ ನೀಡಲಾಯಿತು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ವೈಭವದ ನೆನಪು ಸಾರುವ ಹಂಪಿ ಉತ್ಸವ ಚಿನ್ಹೆ ಬಿಡುಗಡೆ

0

ಹಂಪಿ ಉತ್ಸವ: ವಿಶ್ವವಿಖ್ಯಾತ ಹಂಪಿಯಲ್ಲಿ ಜ.27ರಿಂದ ನಡೆಯಲಿರುವ ಹಂಪಿ ಉತ್ಸವದ ಆಚರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಉತ್ಸವದ ಲೋಗೊ ಅನಾವರಣಗೊಳಿಸಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ಹಂಪಿ ಉತ್ಸವದ ಲೋಗೊವನ್ನು ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಗೃಹ ಸಚಿವರಾದ ಅರಗ ಜ್ಞಾನೇಂದ್ರ, ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ, ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದ್ ಸಿಂಗ್, ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ, ಪೌರಾಡಳಿತ ಸಚಿವರಾದ ಎಂಟಿಬಿ ನಾಗರಾಜ್, ವಿಜಯನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಬಳ್ಳಾರಿ ತುಂಬಾ ರಂಗು ರಂಗಿನ ರಂಗೋಲಿ ಹಬ್ಬವೋ ಹಬ್ಬ

0

ಬಳ್ಳಾರಿ: ಚೊಚ್ಚಲ ಬಾರಿಗೆ ನಡೆಸಲಾಗುತ್ತಿರುವ ಬಳ್ಳಾರಿ ಉತ್ಸವಕ್ಕೆ ಕ್ಷಣಗಣನೆ ಬಾಕಿಯಿದ್ದು, ಜನರಲ್ಲಿ ದಿನದಿಂದ ದಿನಕ್ಕೆ ಉತ್ಸುಕತೆ ಹೆಚ್ಚಾಗುತ್ತಿದೆ.

ಹೀಗೆ ಕಂಡುಬಂದಿದ್ದು, ನಗರದ ಮುಖ್ಯ ರಸ್ತೆಗಳಲ್ಲಿ ಹಾಗೂ ಮುಖ್ಯ ವೃತ್ತಗಳಲ್ಲಿ ಹಾಕಲಾಗಿದ್ದ ರಂಗೋಲಿ ಚಿತ್ತಾರಗಳು. ಹೌದು ಬೆಳಗಿನ ಜಾವದಿಂದಲೇ ಯುವತಿಯರು ಮತ್ತು ಹೆಂಗಳೆಯರು ಕೈಯಲ್ಲಿ ರಂಗೋಲಿ ಹಿಡಿದು ಮುಖ್ಯ ವೃತ್ತಗಳಲ್ಲಿ ಹಾಗೂ ನಗರದ ಮುಖ್ಯ ರಸ್ತೆಗಳಲ್ಲಿ ರಂಗೋಲಿ ಬಿಟ್ಟಿದ್ದು, ವಿಶೇಷವಾಗಿತ್ತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ವತಿಯಿಂದ ಬಳ್ಳಾರಿ ಉತ್ಸವದ ಅಂಗವಾಗಿ ಜನವರಿ 20 ರಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಮೊದಲ ಸುತ್ತಿನ ರಂಗೋಲಿ ಸ್ಪರ್ಧೆಗೆ ಮಹಾನಗರ ಪಾಲಿಕೆಯ ಮಹಾಪೌರರಾದ ಎಂ.ರಾಜೇಶ್ವರಿ ಅವರು ರಂಗೋಲಿ ಹಾಕುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲೆ ವಿಭಜನೆಯಾದ ನಂತರ ಮೊದಲ ಬಾರಿಗೆ ನಡೆಸಲಾಗುತ್ತಿರುವ ಬಳ್ಳಾರಿ ಉತ್ಸವದ ಬಗ್ಗೆ ಎಲ್ಲರಲ್ಲೂ ಉತ್ಸಾಹ ಹೆಚ್ಚಾಗಿದೆ. ಅದರಲ್ಲೂ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿರುವ ರಂಗೋಲಿ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧೆಡೆಯ ಮತ್ತು ನಗರವಾಸಿಗಳು ಹಾಗೂ ಶಾಲಾ, ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಮಹಿಳೆಯರಲ್ಲಿ ಇನ್ನಷ್ಟು ಆಸಕ್ತಿಯನ್ನು ಹೆಚ್ಚಿಸಿದೆ ಎಂದು ಹೇಳಿ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಹಿಳೆಯರಿಗೆ ಮತ್ತು ಯುವತಿಯರಿಗೆ ಶುಭ ಹಾರೈಸಿದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಕೀನಾ ಅವರು ಮಾತನಾಡಿ, ಬಳ್ಳಾರಿ ಉತ್ಸವದ ಅಂಗವಾಗಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಎರಡು ಸುತ್ತಿನ ಸ್ಪರ್ಧೆ ಇದಾಗಿದೆ.

ಸಾಂಪ್ರದಾಯಿಕ (ಚುಕ್ಕಿ) ಮತ್ತು ಕಲಾಕೃತಿ ಆಧಾರದ ಮೇಲೆ ಎರಡನೇಯ ಸುತ್ತಿಗೆ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.

ಮೊದಲ ಸುತ್ತಿನಲ್ಲಿ ಒಟ್ಟು 160 ಮಹಿಳೆಯರು ಹಾಗೂ ಯುವತಿಯರು ಭಾಗವಹಿಸಿದ್ದಾರೆ. 50ರಿಂದ 60 ಜನರ ಸುಂದರವಾಗಿ ಮೂಡಿಬಂದ ರಂಗೋಲಿಯನ್ನು ನಾಳೆ ದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ನಡೆಯಲಿರುವ ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.

ಅಂತಿಮ ಸುತ್ತಿನಲ್ಲಿ ವಿಜೇತರಾದವರಿಗೆ ಮೊದಲ ಬಹುಮಾನ ಪಡೆದವರಿಗೆ ರೂ.3000, ಎರಡನೇ ಬಹುಮಾನ ರೂ.2000 ಹಾಗೂ ತೃತೀಯ ಬಹುಮಾನವಾಗಿ ರೂ.1000 ಗಳನ್ನು ನಗದು ಬಹುಮಾನದ ಜೊತೆಗೆ 4 ಸಮಾಧನಕರ ಬಹುಮಾನದ ಜೊತೆಗೆ ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರವನ್ನು ನೀಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಸಿಡಿಪಿಓ ಉಷಾ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಾದ ಮಲ್ಲಿಕಾರ್ಜುನ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ರಾಮಣ್ಣ, ಮೌನೇಶ್, ಡಬ್ಲ್ಯೂಸಿಡಿ ನಾಗವೇಣಿ, ವಾರ್ಡನ್ ಉಷಾ, ಅಂಬಿಕಾ ಸೇರಿದಂತೆ ಇತರರು ಇದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಸಿರಿಧಾನ್ಯ ಸೇವಿಸಿ ಬುಲೆಟ್ ನಂತೆ ಶಕ್ತಿವಂತರಾಗಿ-ಸಚಿವ ಬಿ.ಸಿ.ಪಾಟೀಲ್

0

ಬೆಂಗಳೂರು: ಈಟ್ ಮಿಲೆಟ್ ಸೇವ್ ಲೈಫ್ ಪರ್ ಪ್ಲಾನೆಟ್ ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲರು ಕರೆ ನೀಡುವ ಮೂಲಕ ಸಿರಿಧಾನ್ಯ ಬಳಕೆ ಉತ್ತಮ ಆರೋಗ್ಯ ಜೀವನಕ್ಕೆ ಆರೋಗ್ಯ ಜೀವನ ಶೈಲಿಗೆ ಭವಿಷ್ಯದ ಆಹಾರವೆಂದಿದ್ದಾರೆ.

ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳಕ್ಕೆ ರಾಶಿಪೂಜೆ ಟೇಪ್‌ಕತ್ತರಿಸುವ ಮೂಲಕ ಮುಖ್ಯಮಂತ್ರಿಗಳು ಹಾಗೂ ಕೇಂದ್ರದ ಪ್ರಮುಖ ಸಚಿವರೊಡನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ವೇದಿಕೆ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

ಕರ್ನಾಟಕ ಸರ್ಕಾರ ಕೃಷಿ ಇಲಾಖೆ ವತಿಯಿಂದ ಕಾರ್ಯಕ್ರಮ ನಡೆಯುತ್ತಿದೆ. ದೀನದಲಿತರ ಬಡವರಪರ ಕಾಳಜಿಯುಳ್ಳ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಕೇಂದ್ರದ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ 3 ದಿನ ಸಿರಿಧಾನ್ಯ ಮೇಳ ಹಮ್ಮಿಕೊಂಡಿದೆ‌.

ಬಹಳ ಸಂತಸದಿಂದ‌ ಈ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ ಉದ್ಘಾಟನೆಯಾಗಿದೆ.
ಕರ್ನಾಟಕ ಸರ್ಕಾರದ ಪ್ತಸ್ತಾವನೆಯ ಮೇರೆಗೆ ಕೇಂದ್ರ ಸರ್ಕಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಸಿರಿಧಾನ್ಯ ಮೇಳ ಕರ್ನಾಟಕದಲ್ಲಿ ನಡೆಯಲು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳನ್ನು ಬಿ.ಸಿ.ಪಾಟೀಲ್ ಅವರು ತಿಳಿಸಿದರು.

ಹಿಂದೆ ಸಿರಿಧಾನ್ಯವೆಂದರೆ ಬಡವರ ಆಹಾರವೆಂದಾಗಿತ್ತು.ಈಗ ಸಿರಿಧಾನ್ಯವೆನ್ನುವುದು ಸಿರಿವಂತರ ಆಹಾರವಾಗಿದೆ‌.ಇದಕ್ಕೆ ಜನರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿರುವುದು ಪ್ರಮುಖ ಕಾರಣವಾಗಿದೆ.

ಸಿರಿಧಾನ್ಯ ತಿಂದವರು ಬುಲೇಟ್‌ನಂತೆ ಶಕ್ತಿವಂತರಾಗುತ್ತಾರೆ. ಸಿರಿಧಾನ್ಯ ಪ್ರತಿ ಹೆಕ್ಟೇರ್‌ಗೆ 10 ಸಾವಿರ ಪ್ರೋತ್ಸಾಹ ಧನ ಸಿರಿಧಾನ್ಯ ರೈತರಿಗೆ ನೀಡಲಾಗುತ್ತಿದೆ.ಸಿರಿಧಾನ್ಯ ಬಳಕೆ ಹೆಚ್ಚುತ್ತಿದ್ದು ಒಂದು ಕಾಲದಲ್ಲಿ ಫುಡ್ ಸೆಕ್ಯೂರಿಟಿ ಬಗ್ಗೆ ಗಮನಕೊಡುತ್ತಿದ್ದೆವು.  ಈಗ ನ್ಯೂಟ್ರಿಷಿಯನ್ ಬಗ್ಗೆ ಹೆಚ್ಚು ಗಮನ ಹರಿಸಲಾಗುತ್ತಿದೆ. ಕೇಂದ್ರ ಸೇರಿದಂತೆ‌ ರಾಜ್ಯ ಸರ್ಕಾರ ಜನರ ಆರೋಗ್ಯದ ಬಗ್ಗೆ ಹೆಚ್ಚು‌ ಗಮನ ಹರಿಸುತ್ತಿವೆ. ಪ್ರಸಕ್ತ , 80 ಹೊಟೇಲ್‌ಗಳಲ್ಲಿ ಸಿರಿಧಾನ್ಯ ಪೂರೈಕೆ ಬೆಂಗಳೂರಿನಲ್ಲಿ ಆಗುತ್ತಿದೆ.ರೈತ ಮಕ್ಕಳ ರಿಸರ್ವೇಶನ್ ವಿಶ್ವ‌ವಿದ್ಯಾಲಯದಲ್ಲಿ ಏರಿಕೆಯಾಗಿದೆ.  ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಮೊದಲ ದಿನವೇ ರೈತ ವಿದ್ಯಾನಿಧಿ ಯೋಜನೆ ಜಾರಿಗೊಳಿಸಿ ಇಡೀ ದೇಶಕ್ಕೆ ಮಾದರಿ ಸಿಎಂ ಆಗಿದ್ದಾರೆ.ಈ ರೈತ ವಿದ್ಯಾನಿಧಿ ಯೋಜನೆ ರೈತಕಾರ್ಮಿಕ ಮಕ್ಕಳಿಗೂ ವಿಸ್ತರಿಸಲಾಗಿದೆ ಎಂದರು.

ಕೇಂದ್ರದ ಸಚಿವರಾದ ಕೈಲಾಸ್‌ನಾಥ್ ಚೌದರಿ, ಶೋಭಾ ಕರಂದ್ಲಾಜೆ, ಉತ್ತರ ಪ್ರದೇಶದ ಕೃಷಿ ಸಚಿವ ಸೂರ್ಯ ಪ್ರತಾಪ್ ರಾಜ್ಯದ ಸಚಿವ ಸಿ.ಎನ್.ಅಶ್ವತ್ಥನಾರಾಯಣ,‌ವಿಧಾನಪರಿಷತ್ ಸದಸ್ಯರಾದ ಟಿ.ಎ.ಶರವಣ,ಅ.ದೇವೇಗೌಡ, ನಾರಾಯಣಸ್ವಾಮಿ ಹೆಬ್ಬಾಳ, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಕೇಂದ್ರದ ಹಾಗೂ ರಾಜ್ಯದ ಪ್ರಮುಖ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕರ್ನಾಟಕ ಕೃಷಿ ಇಲಾಖೆಯ ಅಪರ‌ಮುಖ್ಯ ಕಾರ್ಯದರ್ಶಿ ಶಿವಯೋಗಿ ಕಳಸದ ವೇದಿಕೆಗೆ ಗಣ್ಯರನ್ನು ಸ್ವಾಗತಿಸಿದರು.
ವೇದಿಕೆ ಕಾರ್ಯಕ್ರಮದಲ್ಲಿ ಸಿರಿಧಾನ್ಯದಿಂದ ತಯಾರಿಸಿದ ಉಡುಗೊರೆಯನ್ನು ಸಿಎಂ ಸೇರಿದಂತೆ ಗಣ್ಯರಿಗೆ ನೀಡಲಾಯಿತು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಶಿವಮೊಗ್ಗದಲ್ಲಿ ಬಾಲ ಕಾರ್ಮಿಕರ ಪತ್ತೆ ಮತ್ತು ತಪಾಸಣೆ

0

ಶಿವಮೊಗ್ಗ:
ದಿನಾಂಕ: 19/01/2023 ರಂದು ಶಿವಮೊಗ್ಗ ನಗರದಲ್ಲಿ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿಯಿಂದ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಕಾಯ್ದೆ 1986 ಮತ್ತು ತಿದ್ದುಪಡಿ ಕಾಯ್ದೆ 2016 ರಡಿ ನಗರದ ದುರ್ಗಿಗುಡಿ, ಜೈಲ್ ಸರ್ಕಲ್, ಎಲ್.ಎಲ್.ಆರ್ ರಸ್ತೆಗಳಲ್ಲಿ ತಪಾಸಣೆ ಹಮ್ಮಿಕೊಳ್ಳಲಾಯಿತು.

ತಪಾಸಣೆಯಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರಾವಸ್ಥೆ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ ತಿದ್ದುಪಡಿಕಾಯ್ದೆ 2016 ಕಲಂ 3ರನ್ವಯ 14 ವರ್ಷದೊಳಗಿನ ಬಾಲಕಾರ್ಮಿಕರನ್ನು ಹಾಗೂ ಕಲಂ 3(ಎ)ರನ್ವಯಅಪಾಯಕಾರಿ ಉದ್ದಿಮೆ/ಕೈಗಾರಿಕೆಗಳಲ್ಲಿ 18 ವರ್ಷದೊಳಗಿನ ಕಿಶೋರರರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಅಥವಾ ಕೆಲಸ ಮಾಡಲು ಅವಕಾಶ ಮಾಡಿಕೊಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ.

ನೇಮಿಸಿಕೊಂಡ ಮಾಲೀಕರ ವಿರುದ್ಧ ನ್ಯಾಯಾಲಯವು ಕನಿಷ್ಠ ರೂ20,000/- ದಿಂದಗರಿಷ್ಠ 50,000/- ದವರೆಗೆ ದಂಡವನ್ನು ಅಥವಾ 6 ತಿಂಗಳಿನಿಂದ 2ವರ್ಷದವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿರುತ್ತದೆ ಎಂಬ ಮಾಹಿತಿಯನ್ನು ತಿಳಿಸಲಾಯಿತು.

ಈ ತಪಾಸಣಾ ತಂಡದಲ್ಲಿ ಕಾರ್ಮಿಕ ನಿರೀಕ್ಷಕರಾದ ಭೀಮೇಶ್, ಯೋಜನಾ ನಿರ್ದೇಶಕ ರಘುನಾಥ, ಶಿಕ್ಷಣ ಇಲಾಖೆಯ ಅಶೋಕ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಶಾಂತಾಬಾಯಿ ಮತ್ತು ಪುನೀತ್ ಹಾಗೂ ಮಕ್ಕಳ ಸಹಾಯವಾಣಿಯ ಮೇರಿ ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ದಂಡಿಗೆ ಬೆತ್ತ ಹಿಡಿದು ದಣಿಯದೆ ಹಾಡಿದವರು

0

ಶ್ರೀ ಪುರಂದರ ದಾಸರು ಕನ್ನಡನಾಡು ಕಂಡ ಹಾಡಿನ ಮೂಲಕ ಧರ್ಮ ಪ್ರಸಾರವನ್ನು ಕೈಗೊಂಡ ಅಪ್ರತಿಮ ಹರಿದಾಸವರೇಣ್ಯರು. ಕನ್ನಡ ಭಾಷೆಗೆ ವಿಶಿಷ್ಟವಾದ ಮೆರುಗನ್ನು ತಮ್ಮ ಗೀತೆಗಳ ಮೂಲಕತಂದುಕೊಟ್ಟ ಮಹಾನುಭಾವರು.

ದಾಸರು ಪೂರ್ವ ಜೀವನದಲ್ಲಿ ಮಹಾ ಜಿಪುಣಾ
ಗ್ರೇಸರರೆಂದು ಪ್ರಸಿದ್ಧಿ ಪಡೆದ ಇವರು ನಂತರ ಸರ್ವಸ್ವವನ್ನೂ ದಾನಮಾಡಿ ದಾನ ಶೂರರೆನಿಸಿದ್ದು ವಿಶಿಷ್ಟ ದೈವ ಸಂಕಲ್ಪ.

ನವಕೋಟಿ ಎನ್ನಿಸಿದ ಮಹಾ
ಲಕ್ಷ್ಮಿಯನ್ನು ತೊರೆದು ಅವಳ ಪತಿಯಾದ ಶ್ರೀಮನ್ನಾರಾಯಣನನ್ನು ಆರಾಧಿಸಿದ್ದು ಇವರ ಜೀವನದ ಅಮೋಘ ಸಾಧನೆ.

ಕೇವಲ, ಮಹಾಲಕ್ಷ್ಮಿಯ ಉಪಾಸನೆ ಒಂದರಿಂದಲೇ ಜೀವನದಲ್ಲಿ ಸಾರ್ಥಕ್ಯ ಸಾಧ್ಯವಾಗುವುದಿಲ್ಲ. ಲಕ್ಷ್ಮೀರಮಣನಾದ ನಾರಾಯಣನ ಉಪಾಸನೆಯಿಂದ ಜೀವನ ಸಾರ್ಥಕ್ಯ ಪಡೆಯಬಹುದೆಂಬುದನ್ನು ಮಾನವ
ಕೋಟಿಗೆ ತೋರಿಸಿಕೊಟ್ಟ ಮಹಿಮರು. ಪೂರ್ವ ಜೀವನದಲ್ಲಿ ಚಿನಿವಾರ ವೃತ್ತಿಯಿಂದ ಬೆಳ್ಳಿ, ಬಂಗಾರದ ವ್ಯಾಪಾರಿಗಳಾಗಿದ್ದರೆ ಅನಂತರದಲ್ಲಿ ತಮ್ಮ ಪದಗಳ ಗಾಯನದ ಮೂಲಕ ಸಂಗೀತದ ಸುವರ್ಣ ಸುಧೆಯನ್ನು ಹರಿಸಿದ ಗೀತಾಚಾರ್ಯರು.

ಇವರ ಈ ಮಹಾನ್ ಪರಿವರ್ತನೆಗೆ ಒಂದು ರೀತಿಯಲ್ಲಿ ಅವರ ಕೈಹಿಡಿದ ಧರ್ಮಪತ್ನಿ ಸರಸ್ವತೀ
ಬಾಯಿಯವರ ಧರ್ಮಶ್ರದ್ಧೆಯೇ ಪ್ರಮುಖವಾದ
ಕಾರಣವೆಂದು ಹೇಳಬಹುದು.

ಪುರಂದರದಾಸರು ಎಷ್ಟು ಜಿಪುಣತನವನ್ನು ಹೊಂದಿದ್ದರೋ ಅಷ್ಟೇ ಹೆಚ್ಚಿನ ಧಾರಾಳತನವನ್ನು ಹೊಂದಿದ್ದವರು. ಶ್ರೀಮತಿ
ಸರಸ್ವತೀ ಬಾಯಿಯವರು. ಇದರ ಸ್ಮರಣೆಗೆಂಬಂತೆ” ಹೆಂಡತಿ ಸಂತತಿ ಸಾವಿರವಾಗಲಿ ದಂಡಿಗೆ ಬೆತ್ತ ಹಿಡಿಸಿ
ದಳಯ್ಯ”ಎಂದು ಪುರಂದರದಾಸರು ಹೆಂಡತಿಗೆ ಕೃತಜ್ಞತೆಯನ್ನು ಈ ಕೃತಿಯಲ್ಲಿ ಹೇಳಿದ್ದಾರೆ.

“ಹೆಂಡತಿ ಸಂತತಿ ಸಾವಿರವಾಗಲಿ…
ದಂಡಿಗೆ ಬೆತ್ತ ಹಿಡಿಸಿದಳಯ್ಯಾ,
ಪತಿಯು ಸನ್ಮಾರ್ಗವನ್ನು ಹಿಡಿಯಲು ಪತ್ನಿಯಾದವಳು ವಹಿಸಬೇಕಾದ ಎಚ್ಚರಿಕೆಯ
ತಿಳುವಳಿಕೆಯನ್ನು ಸರಸ್ವತೀ ಬಾಯಿಯವರಿಂದ
ತಿಳಿದುಕೊಳ್ಳಬಹುದಾಗಿದೆ.

ಶ್ರೀವ್ಯಾಸರಾಯರಂತಹ ಶ್ರೇಷ್ಠಯತಿಗಳನ್ನು ಗುರುಗಳಾಗಿ ಪಡೆದ ಮಹಾನುಭಾವರು ಶ್ರೀಪುರಂದರ
ದಾಸರು. ಅಂದು ವಿಜಯನಗರವೆಂದು ಕರೆಸಿಕೊಂಡ ಇಂದಿನ ಹಂಪೆ ಇವರ ಹರಿದಾಸ ಜೀವನದ ಮುಖ್ಯ ಕಾರ್ಯಕ್ಷೇತ್ರವಾಗಿದ್ದು, ಇವರನ್ನು ವಿಜಯನಗರದ ಹರಿದಾಸರೆಂದೇ ಗುರುತಿಸುವಂತೆ ಮಾಡಿದೆ. ಪುರಂದರದಾಸರ ದೇಶ ಸಂಚಾರ ಕೇವಲ ತೀರ್ಥಕ್ಷೇತ್ರ ದರ್ಶನ ಮಾತ್ರ ಆಗಿರದೇ,ತೀರ್ಥಕ್ಷೇತ್ರ ಮಹಿಮೆಯ ಪ್ರಸಾರ ಕಾರ್ಯವೂ ಆಗಿ ಜ್ಞಾನ
ಪ್ರಸಾರ ಕಾರ್ಯವೆನಿಸಿತು.

ಸಂಗೀತ ಪಿತಾಮಹರೆಂದು ಕರೆಸಿಕೊಂಡವರು ಶ್ರೀಪುರಂದರದಾಸರು.ಅವರತ್ಯಾಗಮಯಜೀವನ,ಅವರಲ್ಲಿದ್ದ ಅಪಾರವಾದ ತೇಜಸ್ಸು,ಅಪಾರವಾದ ಭಕ್ತಿ,ಸಂಗೀತಜ್ಞಾನ,ಎಲ್ಲಕ್ಕಿಂತಹೆಚ್ಚಾಗಿಪಾಮರರಿಗೆ,ಅಬಾಲವೃದ್ಧರಿಗೆ ಅರ್ಥವಾಗುವಂತೆ ಅವರು ರಚಿಸಿದ ಹಾಡುಗಳಲ್ಲಿ ಕಂಡ ಸರಳವಾದ ಭಾಷೆ. ಈ ಎಲ್ಲ ಗುಣಗಳೂ ಅವರನ್ನು ಜನಪ್ರಿಯರನ್ನಾಗಿಸಿತು.

ಸಾಮಾನ್ಯ ಜನರು ಜೀವನದಲ್ಲಿ ಸಮಾಧಾನ ಬೇಕೆನಿಸಿದಾಗ,ಧೈರ್ಯಗುಂದಿದಾಗ,ಸ್ಫೂರ್ತಿಯ ಅವಶ್ಯಕತೆ ಬೇಕಾದಾಗ,ಉತ್ಸಾಹ ಉಕ್ಕಿ ಬಂದಾಗ ಪುರಂದರದಾಸರು, ರಚಿಸಿದ ನುಡಿಮುತ್ತುಗಳನ್ನು ನೆನೆಸಿಕೊಂಡುಆನಂದವನ್ನು ಪಡೆದಿದ್ದಾರೆ.

ಇವರು ರಚಿಸಿರುವ ಹಾಡುಗಳಲ್ಲಿ ಕಂಡುಬರುವ ಸರಳವಾದ ಶೈಲಿ ಎಲ್ಲರ ಅಂತರಂಗವನ್ನು ಹೊಕ್ಕು ನಾಡಿನಲ್ಲಿ
ಅಸಂಖ್ಯಾತ ಜನರಿಗೆ ಮಾರ್ಗದರ್ಶನ ಮಾಡಿವೆ ಮತ್ತು ಉತ್ಸಾಹ ತುಂಬಿ ದೈವಭಕ್ತಿಯನ್ನು ಪ್ರೇರೇಪಿ
ಸಿವೆ. ಕೀರ್ತನೆ ಸಾಹಿತ್ಯದಲ್ಲಿ ಪುರಂದರ ದಾಸರದ್ದು ಬಹುದೊಡ್ಡ ಕೊಡುಗೆ,ಅದರಲ್ಲೂ ಕರ್ನಾಟಕ ಸಂಗೀತಕ್ಕೆಸಲ್ಲಿಸಿರುವಕೊಡುಗೆಬಹಳಅಪಾರ
ವಾಗಿದೆ. ಅವರು ಸಲ್ಲಿಸಿರುವ ಈ ಅಮೂಲ್ಯ ಸೇವೆಗಾಗಿಯೇ ಅವರನ್ನು ಸಂಗೀತ ಪಿತಾಮಹ ಎಂದು ಕರೆಯುತ್ತಾರೆ.

“ದಾಸರೆಂದರೆಪುರಂದರದಾಸರಯ್ಯ”ಎಂದು ಶ್ರೀವ್ಯಾಸರಾಯರಿಂದಲೇ ಮೆಚ್ಚುಗೆ ಪಡೆದಂತಹ ದಾಸ ಶ್ರೇಷ್ಠರು ಶ್ರೀಪುರಂದರದಾಸರು.

ಇವರ ಕೀರ್ತನೆಗಳಲ್ಲಿ ಆಧ್ಯಾತ್ಮದ ಜೊತೆ ಸಾಮಾಜಿಕ ಕಳಕಳಿಯನ್ನೂ ಸಾರುವಂತಹ ಸಾಹಿತ್ಯವಿದೆ. ಶೈಲಿಇದೆ. ಇವರ ಕೀರ್ತನೆಗಳು ಮನಸ್ಸಿಗೆ ಮುದವನ್ನುಕೊಡುತ್ತವೆ. ಶ್ರೀಪುರಂದರದಾಸರ ಕೃತಿಗಳು ಸಾರ್ವಕಾಲಿಕವಾಗಿ ಸತ್ಯವೂ,ಸುಲಲಿತವೂ ಮತ್ತು ಸುಂದರವೂ ಆಗಿವೆ.ಕೀರ್ತನೆಗಳನ್ನು ರಚಿಸಿ,ಹಾಡಿ ಜನಸಾಮಾನ್ಯರ ಮನಸ್ಸಿಗೆ ಮುಟ್ಟುವಂತೆ ಪ್ರಚಾರಮಾಡಿದ ರೀತಿ ಅನುಪಮವಾಗಿದೆ.

ನಾಲಿಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು ಎಂಬ ಮಾತನ್ನು ಪುರಂದರದಾಸರ ಕೀರ್ತನೆಯಿಂದ ತಿಳಿಯಬಹುದು.

“ಆಚಾರವಿಲ್ಲದನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ”.
ಯಾವುದೇ ಕಾರಣವಿಲ್ಲದೆ ಬೇರೆಯವರನ್ನು ದೂಷಿಸುವುದಕ್ಕೆಂದೇ ಚಾಚಿ ಕೊಂಡಿರುವಂಥ ನಾಲಿಗೆ ಎಂದು ತಿಳಿಸುವುದರಮೂಲಕ ಸಮಾಜವನ್ನು ತಿದ್ದುವ ಕಾರ್ಯಕ್ಕೂ ಮುಂದಾದ ದಾಸರ ಕೊಡುಗೆ ಅಮೂಲ್ಯವಾಗಿದೆ.

ಇವರು ಗೀತೆ ಗಳನ್ನು ರಚಿಸಿ ಜನ ಸಾಮಾನ್ಯರಿಗೂ ಕನ್ನಡ ಸಾಹಿತ್ಯಕ್ಕೂ ಚಿರವಾದ ಬೆಸುಗೆಯನ್ನು ಗಂಟು ಹಾಕಿದವರು ಶ್ರೀದಾಸರು.
ಶ್ರೀದಾಸರು ತಮ್ಮ ಹಾಡುಗಳ ಮೂಲಕ ಈ ಐಹಿಕ ಭೋಗ ಭಾಗ್ಯಗಳೆಲ್ಲ ಅಸ್ಥಿರ,ಭಗವಂತನ ಕರುಣೆಯೊಂದೇ ಸ್ಥಿರ ಎಂದು ತಿಳಿಯಪಡಿಸಿದವರು.

ಶ್ರೀಪುರಂದರ ವಿಠಲನ ಪರಮಾನುಗ್ರಹ ಪಾತ್ರರಾದ ಅವರು ಹೋದ ದಾರಿಯೇ ಹೆದ್ದಾರಿ,ನುಡಿದ ಮಾತೇ ದಿವ್ಯೋಪದೇಶ,ಅವರು ಮಾಡಿದ ಕಾರ್ಯವೇ ಲೋಕಕ್ಕೆ ಮಾದರಿ.ಮಿತಿಮೀರಿದ ಧನಲೋಭದಿಂದ ಕಿಲುಬು ಹಿಡಿದಿದ್ದ ಅವರ ಹೃದಯವು ಪುರಂದರ ವಿಠಲನಮೇಲಿನ ಭಕ್ತಿಯಿಂದ ಶುದ್ಧವಾದ ಸುಧಾ ಕಲಶವಾಯಿತು.

ಜಿಪುಣಾಗ್ರೇಸರ ಚಕ್ರವರ್ತಿಯಾಗಿದ್ದ ಶ್ರೀನಿವಾಸ ನಾಯಕರು ಭಕ್ತ ಪುರಂದರದಾಸರಾದರು.
ಇಂತಹ ದಾಸ ಶ್ರೇಷ್ಠರು ಹರಿಪಾದವನ್ನು ಸೇರಿದ್ದು ಶಾಲಿ ವಾಹನಶಕ 1486ರ ಪುಷ್ಯಮಾಸದ ಬಹುಳ
ಅಮಾವಾಸ್ಯೆಯಂದು ಹಂಪಿಯಲ್ಲಿ.

ಇಂತಹ ಮಹಾಮಹಿಮರನ್ನು ,ಪರಮಭಾಗವತ
ರನ್ನು,ಹರಿದಾಸ ಶ್ರೇಷ್ಠರನ್ನು ನೆನೆವ ದಿನವೇ ಸುದಿನ.ಪುಷ್ಯಮಾಸದ ಬಹುಳ ಅಮಾವಾಸ್ಯೆ
ಶ್ರೀಪುರಂದರದಾಸರ ಆರಾಧನೆಯ ದಿನನಾವೂ
ಅವರ ಸ್ಮರಣೆಮಾಡಿ ಭಕ್ತಿಯ ನಮನಗಳನ್ನು ಸಲ್ಲಿಸಿ ಅವರ ಅನುಗ್ರಹಕ್ಕೆ ಪಾತ್ರರಾಗೋಣ.

ಗುರುಪುರಂದರದಾಸರೇ ನಿಮ್ಮ ಚರಣ ಸರಸಿಜ ನಂಬಿದೆ.
ಗರುವ ರಹಿತನ ಮಾಡಿ ಎಮ್ಮನು
ಪೊರೆವ ಭಾರವು ನಿಮ್ಮದೆ…

ಬರಹ:
ಎನ್.ಜಯಭೀಮ್ ಜೊಯಿಸ್.
ಶಿವಮೊಗ್ಗ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಬೆಳ್ಳಿಹಬ್ಬದ ಸಂಭ್ರಮದಲ್ಲಿ ಕಾಚಿನಕಟ್ಟೆ ಸರ್ಕಾರಿ ಶಾಲೆ

0

ಶಿವಮೊಗ್ಗ: ಇದು ಸರ್ಕಾರಿ ಪ್ರೌಢಶಾಲೆಯಾದರೂ ಸೌಲಭ್ಯ ಮತ್ತು ಗುಣಮಟ್ಟದ ಶಿಕ್ಷಣದಲ್ಲಿ ಯಾವುದೇ ಖಾಸಗಿ ಶಾಲೆಗಳಿಗೇನು ಕಡಿಮೆ ಇಲ್ಲ. ಸರ್ಕಾರಿ ಶಾಲೆಗಳಿಗೆ ಮಕ್ಕಳೇ ಬರುವುದಿಲ್ಲ ಎಂಬ ದೂರುಗಳೇ ಕೇಳಿ ಬರುವಾಗ ಈ ಶಾಲೆಯಲ್ಲಿ 150ಕ್ಕಿಂತ ಅಧಿಕ ವಿದ್ಯಾರ್ಥಿಗಳಿದ್ದಾರೆ.

ಇದು ಶಿವಮೊಗ್ಗ ತಾಲೂಕು ಕರ‍್ಲಹಳ್ಳಿ- ಕಾಚಿನಕಟ್ಟೆಯ ನೇತಾಜಿ ಸುಭಾಷ್‌ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆ. ಗುಣಮಟ್ಟದ ಶಿಕ್ಷಣದಲ್ಲಿ ಜಿಲ್ಲೆಯಲ್ಲೇ ಹೆಸರು ಗಳಿಸಿದ ಈ ಶಾಲೆಗೆ ಈಗ ರಜತ ಮಹೋತ್ಸವದ ಸಂಭ್ರಮ. 1997ರಲ್ಲಿ ಆರಂಭವಾದ ಶಾಲೆಗೆ 25 ಸಂವತ್ಸರಗಳು ಮುಗಿದ ಹಿನ್ನೆಲೆಯಲ್ಲಿ ಜ.22ರಂದು ಬೆಳಗ್ಗೆ 10 ಗಂಟೆಗೆ ರಜತ ಮಹೋತ್ಸವ, ಗುರುವಂದನಾ ಮತ್ತು ಹಳೆ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ರಜತ ಮಹೋತ್ಸವ ಅಂಗವಾಗಿ ಶಾಲೆಯಲ್ಲಿ ಇದೂವರೆಗೆ ಸೇವೆ ಸಲ್ಲಿಸಿದ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಗುಮಾಸ್ತರು, ಡಿ ಗ್ರೂಪ್ ನೌಕರರು, ಕಳೆದ 25 ವರ್ಷದಲ್ಲಿ ಪ್ರತಿವರ್ಷ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಳೆ ವಿದ್ಯಾರ್ಥಿಗಳು, ದಾನಿಗಳು ಮತ್ತು ಶಾಲೆ ಅಭಿವೃದ್ಧಿಗೆ ಶ್ರಮಿಸಿದವರನ್ನು ಸನ್ಮಾನಿಸಲಾಗುವುದು.

ಇದೇ ಸಂದರ್ಭದಲ್ಲಿ ಅಶೋಕ ಚಕ್ರ ಲಾಂಛನದ ಮಾದರಿಯ ಧ್ವಜ ಸ್ತಂಭ ಮುಖ್ಯದ್ವಾರ, ಹೆಚ್ಚುವರಿ ಕಟ್ಟಡಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಸಹ ನೆರವೇರಿಸಲಾಗುವುದು.

ಮಹೋತ್ಸವಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲೆಯ ಚುನಾಯಿತ ಪ್ರತಿನಿಗಳು, ಗಣ್ಯರು ಭಾಗವಹಿಸುವರು.

ಸಂಜೆ ನಡೆಯುವ ಹಳೆ ವಿದ್ಯಾರ್ಥಿಗಳ ಸಮಾಗಮ ಮತ್ತು ವೇದಿಕೆ ಕಾರ್ಯಕ್ರಮದಲ್ಲಿ ಕರ‍್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ತ್ರೀಶಕ್ತಿ ಸಂಘಟನೆಗಳ ಸದಸ್ಯರು, ಸರ್ಕಾರಿ ಪ್ರೌಢಶಾಲೆ ಸೇರಿದಂತೆ ಸುತ್ತಮುತ್ತಲ ಶಾಲೆಗಳ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳನ್ನು ನಡೆಸಿಕೊಡುವರು.

ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳು, ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶಾಲಾಭಿವೃದ್ಧಿ ಸಮಿತಿ ಮತ್ತು ರಜತ ಮಹೋತ್ಸವ ಸಮಿತಿ ಪದಾಕಾರಿಗಳು ಮನವಿ ಮಾಡಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಜಿಲ್ಲೆಯ ವಿಶೇಷ ಚೇತನೆ ಜ್ಯೋತಿ ಮರಿಗೌಡ ಕಠ್ಮಂಡುನಲ್ಲಿ ನಡೆಯುವ ಥ್ರೋಬಾಲ್ ಪಂದ್ಯಾವಳಿಗೆ ಅಯ್ಕೆ

0

ಶಿವಮೊಗ್ಗ : ಇತ್ತೀಚೆಗೆ ತಮಿಳುನಾಡಿನ ಈರೋಡ್ ಸೆಂಗುಥಾರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಇಂಡಿಯನ್ ಪ್ಯಾತಾ ಥ್ರೋಬಾಲ್ ಆಯ್ಕೆ ಶಿಬಿರದಲ್ಲಿ ಭಾಗವಹಿಸಿದ್ದ ಜಿಲ್ಲೆಯ ಭದ್ರಾವತಿ ತಾಲೂಕು ಮಾರುತಿನಗರದ ವಿಶೇಷಚೇತನೆ ಜ್ಯೋತಿ ಎಸ್ ಮರಿಗೌಡ ಅವರು ಫೆಬ್ರವರಿ 21ರಂದು ನೇಪಾಳದ ಕಠ್ಮಂಡುವಿನಲ್ಲಿ ನಡೆಯುವ ಇಂಡೋ-ನೇಪಾಳ- ಬಾಂಗ್ಲಾ ದೇಶ ತ್ರಿಕೋನ ಪ್ಯಾರಾ ಥ್ರೋಬಾಲ್ ಟೂರ್ನಮೆಂಟ್‌ಗೆ ಆಯ್ಕೆಯಾಗಿರುತ್ತಾರೆ. ಇವರಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಶುಭಹಾರೈಸಿದ್ದಾರೆ.Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಶ್ರೀವೀರೇಶ್ವರ ಪುಣ್ಯಾಶ್ರಮದಲ್ಲಿ ಅಮಾವಾಸ್ಯೆ ಸಂಗೀತ ಕಾರ್ಯಕ್ರಮ

0

ಶಿವಮೊಗ್ಗ :- ಸಾಗರ ರಸ್ತೆಯ ಡಾ. ಪಂಡಿತ ಪುಟ್ಟರಾಜಕವಿ ಗವಾಯಿಗ ಳವರ ಕುರುಡು ಮಕ್ಕಳ ಸಂಗೀತ ವಿದ್ಯಾಲಯ ಮತ್ತು ಶ್ರೀ ವೀರೇಶ್ವರ ಪುಣ್ಯಾಶ್ರಮ ಉಚಿತ ಸಂಸ್ಕೃತ ಪಾಠಶಾಲೆಯಲ್ಲಿ ಜ. 21ರ ನಾಳೆ ಸಂಜೆ 6.30ಕ್ಕೆ ಗಾನಲಹರಿ 74ನೇ ಅಮಾವಾಸ್ಯೆ ಸಂಗೀತ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ರಾಜ್ಯ ಪ್ರಶಸ್ತಿ ಪುರಸ್ಕೃತ ಗವಾಯಿಗಳಾದ ಪಂ. ಆರ್.ಬಿ. ಸಂಗಮೇಶ್ವರ ಅಧ್ಯಕ್ಷತೆ ವಹಿಸುವರು. ಶಿಕ್ಷಕಿ ಸೌಮ್ಯ ಎಸ್. ಮಾರುತಿ ಅತಿಥಿಗಳಾಗಿ ಆಗಮಿಸಲಿದ್ದಾರೆ.

ವಿನೋಬನಗರದ ಪ್ರತಿಮಾ ಉಡುಪ ಸಂಗಡಿಗರಿಂದ ಭಜನೆ ನಡೆಯಲಿದೆ. ರಾಮಣ್ಣ ಭಜಂತ್ರಿ ಶಹನಾಯಿ, ವೀರಭದ್ರಯ್ಯ ಶಾಸ್ತಿç ವೇದಘೊಷ, ತುಕಾರಾಮ್ ರಂಗಧೋಳ್, ವಿನಾಯಕ್ ಭಟ್ ತಬಲ ಹಾಗೂ ಶಿವರಾಜಪ್ಪ, ಸಿದ್ದಣ್ಣ ಬಡಿಗೇರ್, ವೀರಣ್ಣ ಮಾಳೇನಹಳ್ಳಿ ಹರ‍್ಮೋನಿಯಂ ನುಡಿಸಲಿದ್ದಾರೆ.

ಶ್ರೀಗೌರಿ ಪ್ರಾರ್ಥನೆ, ಉಸ್ತಾದ್ ಹುಮಾಯೂನ್ ಹರ್ಲಾಪುರ್ ನಿರೂಪಿಸಲಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿಗಳು

0

ಶಿವಮೊಗ್ಗ:
ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ದಿನಾಂಕ: 30-12-2022 ಮತ್ತು 17-01-2023 ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ರಸಪ್ರಶ್ನೆ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಶಿವಮೊಗ್ಗ ಜಿಲ್ಲೆಯ ಪ್ರೌಢಶಾಲೆ ಮತ್ತು ಪಿಯು ಕಾಲೇಜು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿರುತ್ತಾರೆ.

ಪ್ರೌಢಶಾಲಾ ವಿಭಾಗದ ರಸಪ್ರಶ್ನೆ ಸ್ಪರ್ಧೆಯಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಗುಡ್ಡೆಕೇರಿಯ ಸರ್ಕಾರಿ ಪ್ರೌಢಶಾಲೆಯ ಶ್ರೀರಾಂ ಭಟ್ ಹೆಚ್.ಎಸ್ ಹಾಗೂ ಅಭಿಜ್ಞ ಓ.ಎ ಇವರು ಪ್ರಥಮ ಸ್ಥಾನ ಪಡೆದಿರುತ್ತಾರೆ.

ಪದವಿಪೂರ್ವ ಕಾಲೇಜು ವಿಭಾಗದಲ್ಲಿ ಶಿವಮೊಗ್ಗದ ಕಸ್ತೂರಿಬಾ ಪಿಯು ಕಾಲೇಜಿನ ಅರ್ಫಾ ರೀಮ್ ತಾಜ್ ಆಂಗ್ಲ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಚಂದನ ಹೊಸೂರ್ ಇವರು ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ವಿವಿಧ ಸ್ಪರ್ಧೆಗಳಲ್ಲಿ ಸ್ಥಾನ ಗಳಿಸಿ ಜಿಲ್ಲೆಗೆ ಹೆಮ್ಮೆ ತಂದಿರುವ ಈ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿ.ಪಂ ಸಿಇಓ ಎನ್.ಡಿ.ಪ್ರಕಾಶ್, ಸ್ವೀಪ್ ನೋಡಲ್ ಅಧಿಕಾರಿ ನವೀನ್ ಕುಮಾರ್, ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ನವೀದ್ ಅಹ್ಮದ್, ಡಿಡಿಪಿಯು ಕೃಷ್ಣಪ್ಪ, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಇವರು ಅಭಿನಂದನೆ ಸಲ್ಲಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.