Thursday, April 2, 2026
Thursday, April 2, 2026
Home Blog Page 1326

ಶಿವಮೊಗ್ಗ ಜಿಲ್ಲೆಯ‌ ಜವಾಹರ್ ನವೋದಯ ವಿದ್ಯಾಲಯ ಪ್ರವೇಶಾತಿ ಪ್ರಕಟಣೆ

0

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಗಾಜನೂರು ಜವಾಹರ್ ನವೋದಯ ವಿದ್ಯಾಲಯದ 2023-24ನೇ ಸಾಲಿಗೆ 6ನೇ ತರಗತಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು www.navodaya.gov.in ಮೂಲಕ ದಿನಾಂಕ: 31/01/2023 ರೊಳಗಾಗಿ ಸಲ್ಲಿಸುವಂತೆ ನವೋದಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಸಿದ್ಧಗಂಗಾಶ್ರೀಗಳ 4 ನೇ ವಾರ್ಷಿಕ ಪುಣ್ಯಸ್ಮರಣೆ

0

ಶಿವಮೊಗ್ಗ: ನಗರದ ಡಯಾನಾ ಬುಕ್ ಗ್ಯಾಲರಿಯಲ್ಲಿ ತ್ರಿವಿಧ ದಾಸೋಹಿ, ಪದ್ಮಭೂಷಣ,
ಕರ್ನಾಟಕ ರತ್ನ, ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 4ನೇ
ವರ್ಷದ ಪುಣ್ಯಸ್ಮರಣೆ ಆಚರಿಸಲಾಯಿತು.

ಶಾಸಕ ಕೆ. ಎಸ್. ಈಶ್ವರಪ್ಪ, ಜ್ಯೋತಿ ಬೆಳಗಿ, ಶ್ರೀಗಳ ಭಾವಚಿತ್ರಕ್ಕೆ ಪುಷ್ಪ
ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಡಯಾನಾ ಬುಕ್ ಗ್ಯಾಲರಿಯ ಕೆ. ಎಲ್. ಈಶ್ವರ್, ಕೆ. ಎಲ್. ಶಿವಾನಂದ್,
ನ್ಯಾಯವಾದಿ ಶೈಲಜಾ ಪರಮೇಶ್ ಹಾಗೂ ಸಿಬ್ಬಂದಿಗಳು, ಗ್ರಾಹಕರು
ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಜನವರಿ24 ಶಿವಮೊಗ್ಗದಲ್ಲಿ ಉದ್ಯೋಗಮೇಳ

0

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯು ಜ.24ರಂದು ಬೆಳಿಗ್ಗೆ 10.00 ಕ್ಕೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಗುತ್ಯಪ್ಪ ಕಾಲೋನಿ, ಪಂಪಾನಗರ, ೨ನೇ ಕ್ರಾಸ್, ಸಾಗರ ರಸ್ತೆ, ಶಿವಮೊಗ್ಗ ಇಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಿದೆ.

ಉದ್ಯೋಗ ಮೇಳದಲ್ಲಿ ಪ್ರತಿಷ್ಟಿತ ಖಾಸಗಿ ಕಂಪೆನಿಗಳು ಭಾಗವಹಿಸಲಿದ್ದು ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲ್ಲಿದ್ದಾರೆ.

ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಯಾವುದೇ ಪದವಿ ತೇರ್ಗಡೆ ಹೊಂದಿದ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ತಮ್ಮ ಬಯೋಡೇಟಾ(ರೆಸ್ಯೂಮ್) ಮತ್ತು ಆಧಾರ್ ಕಾರ್ಡ್ ಪ್ರತಿ ತೆಗೆದುಕೊಂಡು ಸಂದರ್ಶನದಲ್ಲಿ ಭಾಗವಹಿಸಬಹುದು.

ಪ್ರವೇಶ ಉಚಿತವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಶಿವಮೊಗ್ಗ ದೂ.ಸಂ: 08182-255293, 9380663606 ನ್ನು ಸಂಪರ್ಕಿಸುವಂತೆ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇವು ಬೆಳೆಗಳ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ

0

ಶಿವಮೊಗ್ಗ: ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ ಹಾಗೂ ಪ್ರಾಣಿ ತಳಿ ಅನುವಂಶೀಯತೆ ಹಾಗೂ ತಳಿ ಶಾಸ್ತ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಗ್ರಾಮೀಣ ಪ್ರದೇಶದ ರೈತರು ಅಥವಾ ರೈತ ಮಹಿಳೆಯರು ಅಥವಾ ನಿರುದ್ಯೋಗ ಯುವಕ ಯುವತಿಯರಿಗೆ ಜ.23 ರಂದು ಶಿವಮೊಗ್ಗದ ವಿನೋಬನಗರದಲ್ಲಿರುವ ಪಶುವೈದ್ಯಕೀಯ ಮಹಾವಿದ್ಯಾಲಯದ ಪ್ರಾಣಿ ಅನುವಂಶೀಯತೆ ಹಾಗೂ ತಳಿಶಾಸ್ತ್ರ ವಿಭಾಗದಲ್ಲಿ ಮೇವು ಬೆಳೆಗಳ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ತರಬೇತಿಯಲ್ಲಿ ಹಸಿರು ಮೇವಿನ ಬೆಳೆಗಳ ಬೇಸಾಯ ಕ್ರಮಗಳು, ಮೇವು ಬೆಳೆಗಳ ತಾಕುಗಳಿಗೆ ಭೇಟಿ, ಮೇವು ಬೀಜಗಳ ಸಂಸ್ಕರಣೆ ಹಾಗೂ ಮೇವಿನ ತಳಿಗಳ ಪಸರಣೆ-ಪ್ರಾಯೋಗಿಕ ತರಬೇತಿ, ಹುಲ್ಲುಗಾವಲು ನಿರ್ವಹಣೆಯ ಅಗತ್ಯತೆಯ ಕುರಿತಾದ ವಿವಿಧ ವಿಷಯಗಳನ್ನು ತಿಳಿಸಲಾಗುವುದು.

ಆಸಕ್ತರು ತಮ್ಮ ಹೆಸರನ್ನು ಡಾ. ಆರ್. ಜಯಶ್ರೀ, ಸಹ ಪ್ರಾಧ್ಯಾಪಕರು ಹಾಗೂ ರಾ.ಕೃ.ವಿಕಾಸ ಯೋಜನಾ ಸಂಯೋಜಕರು, ಪ್ರಾಣಿ ಅನುವಂಶೀಯತೆ ಹಾಗೂ ತಳಿಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ವಿನೋಬನಗರ, ಶಿವಮೊಗ್ಗ, ಮೊ.ಸಂ.: 9916918909/8310384135 ಗಳಿಗೆ ಎಸ್.ಎಂ.ಎಸ್./ವಾಟ್ಸಾಪ್ ಅಥವಾ ನೇರ ಸಂಪರ್ಕಿಸಿ ನೋಂದಾಯಿಸಿಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿಲಾಗಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಜಾತಿಯ ವಿಷಬೀಜ ಬಿತ್ತುವವರನ್ನ ಕಿತ್ತೊಗೆಯುವ ಸಮಯ ಬಂದಿದೆ- ಕೆ.ಎಸ್.ಈಶ್ವರಪ್ಪ

0

ಶಿವಮೊಗ್ಗ:
ಜಾತಿಯ ವಿಷ ಬೀಜ ಬಿತ್ತುವವರನ್ನು ಕಿತ್ತೊಗೆಯುವ ಸಮಯ ಬಂದಿದೆ. ನಾವೆಲ್ಲ ಒಂದೇ ಎನ್ನುವ ಮಹಾಪುರಷರ ಮಾರ್ಗದರ್ಶನದಲ್ಲಿ ನಡೆಯಬೇಕಿದೆ ಎಂದು ಶಾಸಕರಾದ ಕೆ.ಎಸ್.ಈಶ್ವರಪ್ಪ ನುಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು

ನಿಜಶರಣ ಅಂಬಿಗರ ಚೌಡಯ್ಯ ಈ ನಾಡು ಕಂಡ ಅಪರೂಪದ ಮಹಾನ್ ಪುರಷ. ನಮ್ಮಲ್ಲಿ ಹಿರಿಮೆ ಇರಬೇಕು. ಕೀಳರಿಮೆ ಅಲ್ಲ ಎಂದು ತೋರಿದವರು. ಅನುಭವ ಮಂಟಪದಲ್ಲಿ ಯಾವುದೇ ಮುಲಾಜಿಲ್ಲದೇ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ನಿಜವಾದ ಧ್ವನಿಯಾಗಿದ್ದ ಅವರನ್ನು ಬಸವಣ್ಣನವರು ನಿಜಶರಣ ಎಂದು ಕರೆದಿದ್ದಾರೆ.

ಹಿಂದೆ ಭಾರತ ವಿಶ್ವಗುರು ಆಗಿದ್ದು ನಡುವಿನಲ್ಲಿ ಬಡ ರಾಷ್ಟ್ರವಾಗಿತ್ತು. ಇದೀಗ ಮತ್ತೆ ಇಂತಹ ಮಹಾನ್ ಪುರುಷರ ಪರಿಶ್ರಮದಿಂದಾಗಿ ವಿಶ್ವಗುರುವಾಗುವ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ. ರಾಷ್ಟ್ರ ಸಬಲವಾಗುತ್ತಿದೆ. ರಾಜ್ಯ ಸರ್ಕಾರ ಹಿಂದುಳಿದವರ ಅಭಿವೃದ್ದಿಗೆ ಬದ್ದವಾಗಿದೆ. ಅಭಿವೃದ್ದಿ ಕಾರ್ಯಕಗಳನ್ನು ಕೈಗೊಂಡಿದೆ ಎಂದ ಅವರು ಶಿವಮೊಗ್ಗದಲ್ಲಿ ಸಮಾಜದ ಏಳ್ಗೆಗಾಗಿ ದುಡಿದ ಗಾಂಧಿ ಬಸಪ್ಪನವರ ಹೆಸರನ್ನು ಸರ್ಕಲ್ ಮತ್ತು ರಸ್ತೆಗೆ ಇಡಲು ಸರ್ಕಾರ ನಿರ್ಧರಿಸಿದೆ.ಫೆ.08 ರಂದು ಮಾನ್ಯ ಮುಖ್ಯಮಂತ್ರಿಗಳು ನಾಮಕರಣ ಮಾಡುವರು ಎಂದು ಇದೇ ವೇಳೆ ತಿಳಿಸಿದರು.

ಸಂಸದರಾದ ಬಿ.ವೈ.ರಾಘವೇಂದ್ರ ಮಾತನಾಡಿ, 12 ನೇ ಶತಮಾನದ ಬಸವಣ್ಣನವರ ಸಾಮಾಜಿಕ ಕ್ರಾಂತಿಗೆ ಬೆನ್ನೆಲುಬಾಗಿ ನಿಂತವರಲ್ಲಿ ಅಂಬಿಗರ ಚೌಡಯ್ಯ ಸಹ ಅಗ್ರಗಣ್ಯರು. ಲೋಕ ಕಲ್ಯಾಣಕ್ಕಾಗಿ ಸ್ವಂತ ಒಡೆತನದ ಭೂಮಿಯನ್ನು ದಾನ ಮಾಡಿದ ಮಹಾನ್ ಶರಣರು ಇವರಾಗಿದ್ದು ಸಾಮಾಜಿಕವಾದ ಅನೇಕ ವಿರೋಧಗಳ ನಡುವೆಯೂ ವಚನ ಸಾಹಿತ್ಯದ ಮೂಲಕ ಸುಧಾರಣೆ ತಂದವರು. ದೋಣಿಗೆ ಹುಟ್ಟು ಹಾಕುವ ಮೂಲಕ ನಂಬಿದವರಿಗೆ ದಡ ಸೇರಿಸುವ ಮಹಾನ್ ಕಾಯಕಯೋಗಿ ಎಂದರು.

ಅಕ್ಕಮಹಾದೇವಿ ಜನ್ಮಸ್ಥಳವಾದ ಶಿಕಾರಿಪುರದಲ್ಲಿ ಅಕ್ಷರಧಾಮದ ರೀತಿಯಲ್ಲಿ ಅಭಿವೃದ್ದಿಪಡಿಸಲಾಗುತ್ತಿದೆ. ನಾಡಿನ 30 ಶರಣರ ಪುತ್ಥಳಿಗಳನ್ನು ಅನಾವರಣ ಮಾಡಲಾಗುತ್ತಿದೆ. ಅದರಲ್ಲಿ ಅಂಬಿಗರ ಚೌಡಯ್ಯನವರ ಪುತ್ಥಳಿ ಸಹ ಇದ್ದು 12 ನೇ ಶತಮಾನದ ಮಹಿಳಾ ಧ್ವನಿಯಾದ ಅಕ್ಕಮಹಾದೇವಿಯವರ ಸುಮಾರು 75 ಅಡಿಗಿಂತ ಎತ್ತರದ ಪುತ್ಥಳಿಯನ್ನು ಅನಾವಣ ಮಾಡಲಾಗುತ್ತಿದೆ ಎಂದರು.

ಕುವೆಂಪು ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ಉಪ ಕುಲಸಚಿವರಾದ ಡಾ.ಶ್ರೀಶೈಲ ಸಿ ಹರಕಂಚಿ ಇವರು ಅಂಬಿಗರ ಚೌಡಯ್ಯ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಜಿಲ್ಲಾ ಗಂಗಾಮತಸ್ಥ ಸಮಾಜದ ಅಧ್ಯಕ್ಷ ಡಿ.ಬಿ.ಕೆಂಚಪ್ಪ, ಜಿಲ್ಲಾ ಮೊಗವೀರರ ಸಂಘದ ಅಧ್ಯಕ್ಷ ಅಣ್ಣಪ್ಪ, ತಾಲ್ಲೂಕು ಗಂಗಾಮತಸ್ಥ ಸಮಾಜದ ಅಧ್ಯಕ್ಷ ಸತೀಶ್ ಗಾಂಧಿ ಬಸಪ್ಪ, ಅಪರ ಜಿಲ್ಲಾಧಿಕರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ, ಜಿ.ಪಂ ಯೋಜನಾ ನಿರ್ದೇಶಕಿ ನಂದಿನಿ, ಆಹಾರ ಇಲಾಖೆ ಜಂಟಿ ನಿರ್ದೇಶಕ ಅವಿನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್ ಇತರರು ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆಮಾಡುತ್ತಿದ್ದಾರೆ- ಶಿವಲೀಲಾ

0

ಶಿವಮೊಗ್ಗ: ಮೇಕಪ್ ಕಲಿಕೆಯಿಂದ ಮಹಿಳೆಯರು ಮತ್ತು ಯುವತಿಯರು ಸ್ವ ಉದ್ಯೋಗ ,ಸ್ವಂತ ದುಡಿಮೆಯನ್ನ ಸೃಷ್ಠಿಸಿಕೊಳ್ಳುವ ಜೊತೆಗೆ ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಅಶ್ವಿನೀಸ್ ಮೇಕೋವರ್ ಸಂಸ್ಥೆಯ ಮುಖ್ಯಸ್ಥೆ ಅಶ್ವಿನಿ ಎಸ್. ಎಂ ಅವರು ಹೇಳಿದರು.

ಅವರು ಮೇಕಪ್ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಮಾತನಾಡುತ್ತಾ, ಶಿವಮೊಗ್ಗ ನಗರದಲ್ಲಿ ಮೊದಲ ಬಾರಿಗೆ ಅಶ್ವಿನೀಸ್ ಮೇಕೋವರ್ ಸ್ಟುಡಿಯೋ ಸಂಸ್ಥೆಯ ವಾರ್ಷಿಕೊತ್ಸವ ಮತ್ತು ಮಹಾ ಶಿವರಾತ್ರಿ ಹಬ್ಬದ ವಿಶೇಷವಾಗಿ ಮಹಿಳೆಯರಿಗೆ, ಯುವತಿಯರಿಗೆ ರಿಯಾಯಿತಿ ದರದಲ್ಲಿ ಮೇಕಪ್ ತರಬೇತಿ ನೀಡಲಾಗುತ್ತಿದೆ ಎಂದರು.

ಮಹಿಳೆಯರು ಎಲ್ಲಾ ರಂಗಗಳಲ್ಲಿ ಕೆಲಸ ಮಾಡಬಲ್ಲೆ ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ.

ಕೇವಲ ಮನೆ ಕೆಲಸಗಳಿಗೆ ಮಾತ್ರ ಸೀಮಿತವಾಗದೇ ಎಲ್ಲ ರಂಗಗಳಲ್ಲಿಯೂ ತೊಡಗಿಕೊಳ್ಳಬೇಕು ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶಿವಲೀಲಾ ಅವರು ಕರೆ ನೀಡಿದರು. ಫೆಬ್ರವರಿಯಿಂದ 15ರಿಂದ ಹೊಸ ಬ್ಯಾಚ್ ಆರಂಭಗೊಳ್ಳುತ್ತಿದೆ. ಮೇಕಪ್ ಕೊರ್ಸ್ ಗೆ ಸೇರಬಯಸುವ ಯುವತಿಯರು ಮತ್ತು ಮಹಿಳಾ ವಿದ್ಯಾರ್ಥಿಗಳಿಗೆ ಅತಿ ಕಡಿಮೆ ದರದಲ್ಲಿ ಅತ್ಯುನ್ನತ ಗುಣಮಟ್ಟದ ಮೇಕಪ್ ತರಬೇತಿಯನ್ನು ಶಿವಮೊಗ್ಗ ಸಿಟಿಯಲ್ಲೆ ಹೇಳಿಕೊಡಲಾಗುವುದು ಎಂದು ಸಂಸ್ಥಾಪಕರು ತಿಳಿಸಿದರು.

ನಮ್ಮ ಸಂಸ್ಥೆಯು ವಿಶೇಷವಾಗಿ ವಿದ್ಯಾರ್ಥಿಗಳಿಗೆ ಮೇಕಪ್ ಕೋರ್ಸ್ ನ ಸಿಲೆಬಸ್ ಪ್ರಿಂಟ್ ಬುಕ್ , ಮೇಕಪ್ ಕಲಿಕೆಗೆ ಅಗತ್ಯವಾಗಿ ಬೇಕಾದ ಅಭ್ಯಾಸಕರ ಉಪಕರಣಗಳು ಮತ್ತು ಸೌಂದರ್ಯ ವರ್ಧಕ ವಸ್ತುವನ್ನು ಸಹ ಸಂಸ್ಥೆಯೇ ನೀಡುತ್ತದೆ ಮತ್ತು ಅಶ್ವಿನಿಸ್ ಮೇಕೊವರ್ ಸಂಸ್ಥೆಯ ಕೋರ್ಸ್ ಅಂತಿಮದ ಆಯೋಜನೆಯ ಬೃಹತ್ ಸಮಾರೋಪ ವೇದಿಕೆಯಲ್ಲಿ, ಸ್ವತಃ ವಿದ್ಯಾರ್ಥಿಗಳಿಂದಲೆ ಸೆಲೆಬ್ರಿಟಿಗಳಿಗೆ ಅಥವಾ ಇತರರಿಗೆ ಮೇಕಪ್ ಮಾಡಲು ಅವಕಾಶ ಒದಗಿಸಿ, ಸರ್ಟಿಫಿಕೇಟ್ ಸಹ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.

ಹೆಚ್ಚಿನ ಮಾಹಿತಿಗಾಗಿ ಕೂಡಲೇ ಕರೆ ಮಾಡಿ : 9901216093
ಬಾಕ್ಸ್
ಕಾರ್ಯಕ್ರಮದಲ್ಲಿ ತರಬೇತಿ ಪಡೆದ‌ ಮಹಿಳೆಯರು ಉಪಸ್ಥಿತರಿದ್ದರು.

ಬಾಕ್ಸ್
ಅಶ್ವಿನಿ ಮೇಕೊವರ್ ಸಂಸ್ಥೆಯ ಮೊದಲ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ 31 ಜನವರಿ 2023ರ ಮಂಗಳವಾರದ ಒಳಗೆ ಮೇಕಪ್ ಕೋರ್ಸ್ ಗೆ ನೋಂದಣಿಯಾದ ವಿದ್ಯಾರ್ಥಿಗಳಿಗೆ, ಇದೇ ಪ್ರಥಮ ಬಾರಿಗೆ ತರಬೇತಿ ಶುಲ್ಕದಲ್ಲಿ 60% ವಿಶೇಷ ರಿಯಾಯಿತಿಯನ್ನ ಆಫರ್ ನೀಡಲಾಗುತ್ತಿದೆ. ( ಕಡೆಯ ದಿನಾಂಕ ಮುಗಿದ ಮೇಲೆ ಈ ಆಫರ್ ಕಡ್ಡಾಯವಾಗಿ ಇರುವುದಿಲ್ಲ .ಮೊದಲು ನೊಂದಣಿಯಾದ 10ಜನರಿಗೆ ಮಾತ್ರ ಮೊದಲ ಆದ್ಯತೆ ) ಎಂದು ಸಂಸ್ಥೆಯ ಮುಖ್ಯಸ್ಥರಾದ ಅಶ್ವಿನಿ ಎಸ್ ಎಂ ಅವರು ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಬಳ್ಳಾರಿ ಉತ್ಸವದಲ್ಲಿ ಮನಮೋಹಕ ಮೆಹಂದಿ ಸ್ಪರ್ಧೆ

0

ಬಳ್ಳಾರಿ: ಕಣ್ಮನ ಸೆಳೆಯುವ ವಿವಿಧ ವಿನ್ಯಾಸದ ಚಿತ್ರಗಳು, ಕಲಾತ್ಮಕತೆಯಿಂದ ಕೂಡಿದ ಬಗೆಬಗೆಯ ವಿನ್ಯಾಸಗಳು ಅಂಗೈನಲ್ಲಿ ಮೂಡಿದ ಸುಂದರ ಕ್ಷಣವದು.

ನಗರ ಮುನಿಸಿಪಲ್ ಮೈದಾನದಲ್ಲಿ ಬಳ್ಳಾರಿ ಜಿಲ್ಲಾ ಉತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮೆಹಂದಿ ಸ್ಪರ್ಧೆಯಲ್ಲಿ ವಿವಿಧ ಶೈಲಿಯ ಮೆಹಂದಿಯ ಪ್ರದರ್ಶನ ಕಂಡುಬಂತು.

ಮೆಹಂದಿ ಸ್ಪರ್ಧೆಯಲ್ಲಿ 70ಕ್ಕೂ ಹೆಚ್ಚು ಯುವತಿಯರು, ಮಹಿಳೆಯರು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು, ಎಲ್ಲರೂ ಗಮನ ಸೆಳೆಯುವಂತೆ ಮೆಹಂದಿ ಹಾಕಿಸಿಕೊಂಡರು.

ಬೆಳಿಗ್ಗೆ 10.45 ಕ್ಕೆ ಆರಂಭವಾದ ಮೆಹಂದಿ ಸ್ಪರ್ಧೆಯು ಮಧ್ಯಾಹ್ನ 12.15 ರವರೆಗೂ ನಡೆಯಿತು.

ಅಂಗೈನಲ್ಲಿ ತಮ್ಮ ಕಲ್ಪನೆಯ ಚಿತ್ತಾರ ಮೂಡಿಸಲು ಸುಮಾರು 1.30 ಗಂಟೆಯ ಕಾಲಾವಕಾಶ ನೀಡಲಾಗಿತ್ತು.

ಮೆಹಂದಿ ಸ್ಪರ್ಧೆಯ ತೀರ್ಪುಗಾರರಾಗಿ ಪ್ರೋಬೇಷನರಿ ಐ ಎ ಎಸ್ ಅಧಿಕಾರಿ ರೂಪಿಂದರ್ ಕೌರ್ ಕಾರ್ಯನಿರ್ವಹಿಸಿದರು.

ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿವರಿಗೆ ರೂ. 3000/-, ದ್ವಿತೀಯ ಸ್ಥಾನಕ್ಕೆ ರೂ. 2000/- ಹಾಗೂ ತೃತೀಯ ಸ್ಥಾನ ಪಡೆದವರಿಗೆ ರೂ. 1000/- ನಗದು ಬಹುಮಾನ, ಐದು ಸಮಾಧಾನಕರ ಬಹುಮಾನ ಸೇರಿದಂತೆ ಭಾಗವಹಿಸಿದ ಎಲ್ಲರಿಗೂ ಬಳ್ಳಾರಿ ಉತ್ಸದ ನಿಮಿತ್ತ ಅಭಿನಂದನಾ ಪತ್ರ ನೀಡಲಾಯಿತು.

ಬಳ್ಳಾರಿ ಉತ್ಸವಕ್ಕೆ ಮಹಿಳಾ ಮೆರಗು: ಪ್ರಥಮ ಬಾರಿಗೆ ಆಯೋಜಿಸಲಾಗಿರುವ ಬಳ್ಳಾರಿ ಉತ್ಸವದಲ್ಲಿ ನಗರದ ಮಹಿಳೆಯರು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಉತ್ಸವಕ್ಕೆ ವಿಶೇಷ ಮೆರಗು ನೀಡಿದ್ದಾರೆ ಎಂದು ಪಾಲಿಕೆ ಮೇಯರ್ ರಾಜೇಶ್ವರಿ ಹೇಳಿದರು.

ಬಳ್ಳಾರಿ ಮುನಿಸಿಪಲ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಮೆಹಂದಿ ಸ್ಪರ್ಧೆಯಲ್ಲಿ ಸ್ವತಃ ಅಂಗೈಗೆ ಮೆಹಂದಿ ಹಾಕಿಸಿಕೊಳ್ಳುವುದರ ಚಾಲನೆ ನೀಡಿ ಅವರು ಮಾತನಾಡಿದರು.

ಉತ್ಸವದಲ್ಲಿ ಮಹಿಳೆಯರು ಪಾಲ್ಗೊಳ್ಳವ ನಿಟ್ಟಿನಲ್ಲಿ ರಂಗೋಲಿ, ಪಾನೀಪುರಿ, ಮೆಹಂದಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಈ ಸ್ಪರ್ಧೆಗಳಲ್ಲಿ ಮಹಿಳೆಯರು ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು, ಬಹಳಷ್ಟು ಯುವತಿಯರು ಮೆಹಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.

ಮುಂದೆ ಯುವತಿಯರೆಲ್ಲರಿಗೂ ಮದುವೆ ಮೆಹಂದಿ ಹಾಕಿಸಿಕೊಳ್ಳವ ಅದೃಷ್ಟ ಬರಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಕೀನಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಮತ್ತಿರರು ಇದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಚಿಕ್ಕಮಗಳೂರು ಹಬ್ಬ ಬಿಜೆಪಿ ಹಬ್ಬವಾಗುತ್ತಿದೆ ಜೆಡಿಎಸ್ ನಗರ ಸಭಾಸದಸ್ಯ ಆರೋಪ

0

ಚಿಕ್ಕಮಗಳೂರು: ಹಬ್ಬ ಹಾಗೂ ನಗರಸಭಾ ಅಧ್ಯಕ್ಷರ ಕಚೇರಿ ನವೀಕರಣ ಕಾರ್ಯದಲ್ಲಿ ಸಾರ್ವಜನಿಕರ ಕಂದಾಯದ ಲಕ್ಷಾಂತರ ರೂ.ಗಳ ಹಣವನ್ನು ಬೇಕಾಬಿಟ್ಟಿ ವ್ಯಯಿಸಿ ಹಗಲು ದರೋಡೆ ನಡೆಸುವ ಜೊತೆಗೆ ಹಬ್ಬವನ್ನು ಬಿಜೆಪಿಯ ಚುನಾವಣಾ ಉತ್ಸವದಂತೆ ಜಿಲ್ಲಾಳಿ ಡತವು ಆಚರಿಸುತ್ತಿದೆ ಎಂದು ಜೆಡಿಎಸ್ ನಗರಸಭಾ ಸದಸ್ಯ ಎ.ಸಿ.ಕುಮಾರಗೌಡ ಅವರು ಆರೋಪಿಸಿದ್ದಾರೆ.

ಈ ಸಂಬಂಧ ಹೇಳಿಕೆಯಲ್ಲಿ ತಿಳಿಸಿರುವ ಅವರು ಚಿಕ್ಕಮಗಳೂರು ಹಬ್ಬದ ಕಾರ್ಯಕ್ರಮದ ವೇದಿಕೆಗಳಲ್ಲಿ ಬಿಜೆಪಿ ಹೊರತುಪಡಿಸಿ ಬರ‍್ಯಾವ ಪಕ್ಷದವರಿಗೂ ಆಹ್ವಾನಿಸದೇ ಶಿಷ್ಟಾಚಾರ ಉಲ್ಲಂ ಘಿಸಿದ್ದಾರೆ. ಜಿಲ್ಲಾಡಳಿತದ ಕಾರ್ಯಕ್ರಮವನ್ನು ಬಿಜೆಪಿಯು ಚುನಾವಣಾ ರೀತಿಯಲ್ಲಿ ಬಳಸಿಕೊಂಡು ಸಾರ್ವಜನಿಕರ ಹಣವನ್ನು ಪುಕಟೆ ವ್ಯಯಿಸುತ್ತಿದೆ ಎಂದು ದೂರಿದ್ದಾರೆ.

ಜಿಲ್ಲಾ ಹಬ್ಬದ ಹಿನ್ನೆಲೆಯಲ್ಲಿ ಮಲ್ಲೇಗೌಡ ಆಸ್ಪತ್ರೆ ಸಮೀಪದಲ್ಲಿದ್ದ ಪಾದಚಾರಿಗಳ ಪುಟ್ ಬಾತ್‌ನ್ನು ತರಾತೂರಿಯಲ್ಲಿ ದುರಸ್ಥಿಗೊಳಿಸುವ ಮೂಲಕ ಕಳಪೆ ಕಾಮಗಾರಿ ಎಸಗಲಾಗಿದೆ. ಜೊತೆಗೆ ಸರ್ಕಲ್ ಸಮೀಪದಲ್ಲಿ ಮೇಕ್ ಇಂಡಿಯಾ ಸಂಬಂಧಿಸಿದ ಪ್ರತಿಮೆಯನ್ನು ಕೇವಲ 20 ದಿನಗಳಲ್ಲಿ ಕೆಲಸ ಪೂರ್ಣ ಗೊಳಿಸಿರುವುದು ಎಷ್ಟರ ಮಟ್ಟಿಗೆ ಸೂಕ್ತವೆನಿಸಿದೆ ಎಂದು ಪ್ರಶ್ನಿಸಿದ್ದಾರೆ.
ಹಿರೇಮಗಳೂರು ಹಾಗೂ ನಗರದ ಹೆರಿಗೆ ಆಸ್ಪತ್ರೆಯ ಸಮೀಪದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಕೆಲಸ ಪ್ರಾರಂಭವಾಗಿ ಅನೇಕ ವರ್ಷಗಳು ಕಳೆದರೂ ಪೂರ್ಣಗೊಂಡಿಲ್ಲ. ಆದರೆ ಆಜಾದ್‌ಪಾರ್ಕ್ನಲ್ಲಿ ರಾಜಕೀಯ ದುರುದ್ದೇಶದಿಂದ ತಮಗೆ ಬೇಕಾದ ರೀತಿಯಲ್ಲಿ ಪ್ರತಿಮೆ ಕಾಮಗಾರಿಗಳನ್ನು ಪೂರೈಸುತ್ತಿ ರುವುದು ಗಮನಿಸಿದರೆ ದಲಿತರ ಮೇಲೆ ಅಸಡ್ಡೆ ವಹಿಸಲಾಗುತ್ತಿದೆ ಎಂದು ದೂರಿದ್ದಾರೆ.
ನಗರಸಭಾ ಕಚೇರಿಯು ಸ್ಥಾಪನೆಯಾಗಿ ಹತ್ತು ವರ್ಷಗಳು ಕಳೆದಿವೆ. ಇದಾದ ನಂತರ ಕಟ್ಟಡ ನಿರ್ಮಾಣದ ವೇಳೆಯಲ್ಲಿ ಗುಣಮಟ್ಟ ಕಾಪಾಡದೇ ಹಿನ್ನೆಲೆಯಲ್ಲಿ ಕಚೇರಿಯ ಬಿಲ್ಡಿಂಗ್‌ನ ಗೋಡೆಗಳು ಶಿಥಿಲೀಕರಣವಾಗಿ ಬಿರುಕು ಬಿಟ್ಟಿವೆ ಹಾಗೂ ಸೋರಿಕೆಯು ಕಾಣುತ್ತಿವೆ. ಕಟ್ಟಡ ನಿರ್ಮಾಣ ವೇಳೆಯಲ್ಲಿ ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಂಡು ನಿರ್ವಹಣೆ ಕೆಲಸವನ್ನು ನಿಭಾಯಿಸದೇ ಅವರಿಂದಲೂ ಕಮೀಷನ್ ಆಸೆಯಿಂದಾಗಿ ದುರಸ್ಥಿ ಕಾಮಗಾರಿ ನಡೆಸಲಾಗುತ್ತಿದೆ ಎಂದಿದ್ದಾರೆ.

ಇಂದಿಗೆ ನಗರಸಭಾ ಅಧ್ಯಕ್ಷರ ಅವಧಿ ಒಂದು ವರ್ಷ ಪೂರೈಸಿದ್ದು ಅಧ್ಯಕ್ಷರ ಕೊಠಡಿ ನವೀಕರಣ ಕ್ಕಾಗಿ ಸಾರ್ವಜನಿಕರ ಕಂದಾಯದ ೫೦ ಲಕ್ಷ ರೂ. ವ್ಯಯಿಸಿ ಸ್ವಂತ ರೀತಿಯಲ್ಲಿ ಅಧ್ಯಕ್ಷರು ಬಳಕೆ ಮಾಡಿ ಕೊಳ್ಳಲಾಗುತ್ತಿದೆ. ಇದರ ನಡುವೆ ಪೌರ ಕಾರ್ಮಿಕರಿಗೆ ಸಂಕಷ್ಟ ಭತ್ಯೆ ನೀಡಬೇಕೆಂಬ ನಿರ್ಣಯವನ್ನು ಕಳೆದ ಸಭೆಯಲ್ಲಿ ತೀರ್ಮಾನಿಸಿದ್ದರೂ ಸಹ ಹತ್ತು ತಿಂಗಳ ಭತ್ಯೆಯ ಹಣವನ್ನು ನೀಡದೇ ಸತಾಯಿ ಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಕಳೆದ ವರ್ಷದಲ್ಲಿ ನಗರಸಭಾ ಆಡಳಿತವು ಬೀದಿಬದಿ ವ್ಯಾಪಾರಸ್ಥರಿಗೆ ಅನೇಕ ಬಾರಿ ತೊಂದರೆ ನೀಡಿ ವ್ಯವಹಾರಕ್ಕೆ ಅವಕಾಶ ನೀಡಿರುವುದಿಲ್ಲ. ಇದೀಗ ಚುನಾವಣಾ ಸಮೀಪಿಸುತ್ತಿರುವ ಸಂದರ್ಭದಲ್ಲಿ ಸಣ್ಣಪುಟ್ಟ ಬೀದಿಬದಿ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಿಕೊಟ್ಟಿರುವುದು ಶಾಸಕರ ಪರ ಹಾಗೂ ಚುನಾ ವಣೆಯ ಪ್ರಚಾರಕ್ಕಾಗಿ ನಗರಸಭಾ ಕಾರ್ಯನಿರ್ವಹಿಲಾಗುತ್ತಿದೆ ಎಂದು ಟೀಕಿಸಿದ್ದಾರೆ.
ನಗರದಲ್ಲಿ ಪ್ಲಾಸ್ಟಿಕ್ ನಿರ್ಮೂಲನೆಗೊಳಿಸಲು ನಗರಸಭಾವು ನಾನಾರೀತಿಯ ದಾಳಿಗಳು ನಡೆಸಿರುವುದು ಸಂತಸದ ವಿಷಯ. ಆದರೆ ಸಣ್ಣಪುಟ್ಟ ಅಂಗಡಿಗಳು ಹಾಗೂ ಸೂಪರ್‌ಮಾರ್ಕೆಟ್‌ಗಳಲ್ಲಿ ತಿಂಗಳಲ್ಲಿ ಅನೇಕ ಬಾರಿ ದಾಳಿ ನಡೆಸಿ ದಂಡ ಹಾಕುವ ನಗರಸಭಾ ಅಧ್ಯಕ್ಷರು, ದಂಡ ಹಾಕಿದ ಮೊತ್ತದ ಮಾಹಿತಿ ಯನ್ನು ನೀಡುತ್ತಿಲ್ಲ. ಹಾಗಾದರೆ ದಂಡದ ಹಣವು ಎಲ್ಲಿ ವ್ಯಯವಾಗುತ್ತಿದೆ ಎಂದು ಸೂಕ್ತವಾಗಿ ತಿಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಜಿಲ್ಲಾ ಉತ್ಸವದಲ್ಲಿ ವಿಐಪಿ ಹಾಗೂ ವಿವಿಐಪಿ ಪಾಸ್‌ಗಳಿಗೆ ವಿತರಣೆ ಸಂಬಂಧಪಟ್ಟಂತೆ ನಗರಸಭಾ ಸದಸ್ಯರಿಗೆ 2 ಪಾಸ್, ವಿಧಾನ ಪರಿಷತ್ ಸದಸ್ಯರಿಗೆ 10 ಪಾಸ್ ಮಾತ್ರ ವಿತರಿಸಲಾಗಿದೆ. ಆದರೆ ಬಿಜೆಪಿಯ ಸಾಮಾನ್ಯ ಕಾರ್ಯಕರ್ತರ ಕೈಯಲ್ಲೂ ಒಂದೊಂದು ಪಾಸ್‌ಗಳನ್ನು ವಿತರಿಸಲಾಗಿದ್ದು ಹಬ್ಬದಲ್ಲಿ ಎಷ್ಟು ಪಾಸ್ ಮುದ್ರಿಸಿ ಹಂಚಲಾಗಿದೆ ಎಂದು ವಿವರಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಖಾಸಗೀ ಉದ್ಯಮಿಗಳು ಸಹಯೋಗದೊಂದಿಗೆ ಜಿಲ್ಲಾ ಉತ್ಸವ ಆಚರಣೆ ಮಾಡಲಾಗು ತ್ತಿದೆ. ಇದನ್ನು ಹೊರತುಪಡಿಸಿ ನಗರಸಭಾದಿಂದ ಸಾಕಷ್ಟು ಅನುದಾನವನ್ನು ಹಬ್ಬಕ್ಕಾಗಿ ವ್ಯಯಿಸಿದ್ದರೂ ಇದುವರೆಗೂ ನಗರಸಭಾ ಹೆಸರನ್ನೇಳದೇ ಮುಚ್ಚಿಟ್ಟು ಅಲ್ಲಿಯೂ ಹಣವನ್ನು ಕಬಳಿಸುವ ಯತ್ನ ನಡೆಸಲಾಗುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಕೇವಲ ಸ್ಥಳೀಯ ಜನಪ್ರತಿನಿಧಿಗಳ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಇದರ ನಡುವೆ ಶಾಸಕರ ಹಿಂಬಾಲಕರು ಸಾರ್ವಜನಿಕರ ಹಣದಲ್ಲಿ ಇಂತಿಷ್ಟು ಕಮೀಷನ್ ಎಂದು ಹೆಸರೇಳಿಕೊಂಡು ಹಣವನ್ನು ದೋಚುವಲ್ಲಿ ತೊಡಗಿದ್ದಾರೆ ಎಂದು ತಿಳಿಸಿದ್ದಾರೆ.
ಕೂಡಲೇ ಜಿಲ್ಲಾಧಿಕಾರಿಗಳು ನಗರಸಭಾದಿಂದ ಬಿಡುಗಡೆಯಾಗುತ್ತಿರುವ ಅನವಶ್ಯಕ ಹಣಕ್ಕೆ ಕಡಿವಾಣ ಹಾಕಬೇಕು ಹಾಗೂ ಜಿಲ್ಲಾ ಹಬ್ಬ ಮುಗಿದ ಕೂಡಲೇ ಒಂದುವಾರಗಳಲ್ಲಿ ಖರ್ಚಿನ ಪೂರ್ಣ ಮಾಹಿತಿಯನ್ನು ಸಾರ್ವಜನಿಕರ ಮುಂದಿಡುವ ಕೆಲಸ ಮೊದಲಾಗಬೇಕು ಎಂದು ಒತ್ತಾಯಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಶಿವಮೊಗ್ಗದ ಯುವಕರು

0

ಶಿವಮೊಗ್ಗ: ಇಲ್ಲಿನ ದುರ್ಗಿಗುಡಿಯ ಲಕ್ಷ್ಮೀ ಗೆಲಾಕ್ಷಿಯಲ್ಲಿರುವ ಫಿಟ್‌ಕೇರ್ ಜಿಮ್‌ನ ಕ್ರೀಡಾಪಟುಗಳು ಇತ್ತೀಚೆಗೆ ವಿಶಾಖಪಟ್ಟಣದಲ್ಲಿ ನಡೆದ ಇಂಡಿಯನ್ ನ್ಯಾಷನಲ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ 14 ಚಿನ್ನದ ಪದಕಗಳನ್ನು ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಮಹಿಳೆಯರ 84 ಕೆ.ಜಿ. ಜ್ಯೂನಿಯರ್ ವಿಭಾಗದಲ್ಲಿ ಅಶ್ವಿನಿ ಎ.ಜಿ. ಪ್ರಥಮ ಸ್ಥಾನ ಹಾಗೂ ದ್ವಿತೀಯ ಸ್ಥಾನ ಗಳಿಸಿ ಒಂದು ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಜಿ.ಸಿ. ಜಗದೀಶ್ ಡೆಡ್‌ಲಿಫ್ಟ್ನಲ್ಲಿ ಪ್ರಥಮ, ಬೆಂಚ್‌ಪ್ರೆಸ್‌ನಲ್ಲಿ ಪ್ರಥಮ, ಪವರ್‌ಲಿಫ್ಟಿಂಗ್‌ನಲ್ಲಿ ಪ್ರಥಮ ಸ್ಥಾನ ಗಳಿಸಿ 3 ಚಿನ್ನದ ಪದಕ ಹಾಗೂ ಚಾಂಪಿಯನ್ ಶಿಪ್ ತಮ್ಮದಾಗಿಸಿಕೊಂಡಿದ್ದಾರೆ.

ಪಿ. ವಿನಾಯಕ್ ಬೆಂಚ್ ಪ್ರೆಸ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿ ಪದಕ, ಪಿ. ದೀಪಕ್ ಬೆಂಚ್‌ಪ್ರೆಸ್‌ನಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಹಾಘೂ ಪೂಜಾ ಎ.ಬೇದ್ರೆ ಅವವರು ಡೆಡ್‌ಲಿಫ್ಟ್ನಲ್ಲಿ ಪ್ರಥಮ, ತೃತೀಯ ಸ್ಥಾನ ಗಳಿಸಿ ಮೂರು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದರೆ, ಲೋಹಿತ್ ಸಿಂಗ್ ಪವರ್ ಲಿಫ್ಟಿಂಗ್‌ನಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಗಳಿಸಿ ಮೂರು ಪದಕಗಳನ್ನು ಪಡೆದಿದ್ದಾರೆ.

ಈ ಕ್ರೀಡಾಪಟುಗಳನ್ನು ಫಿಟ್‌ಕೇರ್ ಜಿಮ್‌ನ ಸಹ ಕ್ರೀಡಾಪಟುಗಳು, ತರಬೇತುದಾರರು ಹಾಗೂ ಸ್ನೇಹಿತರು ಅಭಿನಂದಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಜೆಸಿಐ ನಿಂದ ಸಂಚಾರಿ ಪೊಲೀಸ್ ಸಿಬ್ಬಂದಿಗೆ ಸನ್ಮಾನ

0

ಶಿವಮೊಗ್ಗ : ಜೆಸಿಐ ಶಿವಮೊಗ್ಗ ಶರಾವತಿ ಘಟಕದ ವತಿಯಿಂದ ಸೆಲ್ಯೂಟ್ ದ ಸೈಲೆಂಟ್ ವರ್ಕರ್ ಕಾರ್ಯಕ್ರಮವನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿಯವರ ಕಾರ್ಯಾಲಯದಲ್ಲಿ ಸರಳವಾಗಿ ಹಮ್ಮಿಕೊಳ್ಳಲಾಗಿತ್ತು.

ನಗರದಲ್ಲಿ ಸಾರ್ವಜನಿಕ ವಿಶ್ವಾಸದೊಂದಿಗೆ ಜನಸ್ನೇಹಿಯಾಗಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಟ್ರಾಪಿಕ್ ಪಿಎಸ್‌ಐ ಶೈಲಜಾ, ಸಂಚಾರಿ ಪೊಲೀಸ್ ಠಾಣೆಯ ಎಎಸ್‌ಐ ಮಂಜುನಾಥ್
ಸಿಬ್ಬಂದಿಗಳಾದ ಸಂತೋಷ್ ಬೆನ್ನೂರ್, ಮಂಜುನಾಥ್ ಪಾಟೀಲ್‌ರವರುಗಳನ್ನು ಸನ್ಮಾನಿಸಲಾಯಿತು.

ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಕತ್ಯವ್ಯವನ್ನು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿ ಮಾತಾನಾಡಿದ, ಜಿಲ್ಲಾರಕ್ಷಣಾಧಿಕಾರಿ ಮಿಥುನ್‌ಕುಮಾರ್‌ರವರು ಮುಖ್ಯ ಅತಿಥಿಗಳಾಗಿದ್ದರು.

ಈ ಕಾರ್ಯಕ್ರಮದಲ್ಲಿ ಜೆಸಿಐ ಶಿವಮೊಗ್ಗ ಶರಾವತಿ ಘಟಕದ ಅಧ್ಯಕ್ಷರಾದ ಜೆಸಿ.ಶೋಭಾ ಸತೀಶ್ ಕಾರ್ಯದರ್ಶಿಗಳಾದ ಜೆಸಿ. ಸ್ಮಿತಾ ಮೋಹನ್, ಐಪಿಪಿ ಜೆಸಿ.ಸೌಮ್ಯ ಅರಳಪ್ಪ, ಕಾರ್ಯಕ್ರಮದ ನಿರ್ದೇಶಕರಾದ ಚಂದ್ರಹಾಸ್ ಎನ್ ರಾಯ್ಕರ್ ಹಾಗೂ ಘಟಕದ ಪೂರ್ವಧ್ಯಕ್ಷರುಗಳು ಸೇರಿದಂತೆ ಎಲ್ಲಾ ಜೆಸಿಗಳು ಭಾಗವಹಿಸಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.