Sunday, April 5, 2026
Sunday, April 5, 2026
Home Blog Page 1315

ಶಿವಮೊಗ್ಗ ಗ್ರಾಮಾಂತರ ಪ್ರದೇಶಗಳಲ್ಲಿ ಬಾಲಕಾರ್ಮಿಕರನ್ನ ಪತ್ತೆಮಾಡುವ ಕಾರ್ಯ

0

ಕಾರ್ಮಿಕ ಇಲಾಖೆ ವತಿಯಿಂದ ಶಿವಮೊಗ್ಗ ಗ್ರಾಮಾಂತರ ಪ್ರದೇಶಗಳಾದ ಸಿದ್ಲೀಪುರ, ಹೊಳೆಬೆನವಳ್ಳಿ, ಪಿಳ್ಳಂಗೇರಿ, ಹೊಳೆಹೊನ್ನೂರು, ಜಾವಳ್ಳಿ, ಕೋಟೆಗಂಗೂರು ಪ್ರದೇಶದ ಕೋಳಿ ಫಾರಂ, ಇಟ್ಟಿಗೆಭಟ್ಟಿ, ಕಟ್ಟಡ ನಿರ್ಮಾಣ ಪ್ರದೇಶಗಳಲ್ಲಿ ಭೇಟಿ ನೀಡಿ ಬಾಲಕಾರ್ಮಿಕ ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016 ಕಲಂ 3ರನ್ವಯ ಮತ್ತು ಜೀತ ಕಾರ್ಮಿಕ ಪದ್ಧತಿ (ರದ್ಧತಿ) ಕಾಯ್ದೆ 1976ರಡಿ ತಪಾಸಣೆಯನ್ನು ಹಮ್ಮಿಕೊಳ್ಳಲಾಯಿತು.

ಈ ತಪಾಸಣೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಸೀಬಿರಂಗಯ್ಯ ಕಾರ್ಮಿಕ ನಿರೀಕ್ಷಕರಾದ ಸುಖಿತ, ಯೋಜನಾ ನಿರ್ದೇಶಕ ರಘುನಾಥ ಹಾಜರಿದ್ದು, ಬಾಲಕಾರ್ಮಿಕ ಕಾಯ್ದೆ ಹಾಗೂ ಜೀತ ಕಾರ್ಮಿಕ ಪದ್ಧತಿ ಬಗ್ಗೆ ಕಾರ್ಮಿಕರಲ್ಲಿ ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಲೋಕಾಯುಕ್ತ ಪೋಲೀಸ್ ಅಧಿಕಾರಿಗಳಿಂದ ಅಹವಾಲು ಸ್ವೀಕಾರ

0

ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಜಿಲ್ಲಾ ಅಧಿಕಾರಿಗಳು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಫೆಬ್ರವರಿ-2023ರ ಮಾಹೆಯ ದಿನಗಳಂದು ಬೆಳಿಗ್ಗೆ 11:00 ಗಂಟೆಯಿಂದ ಮಧ್ಯಾಹ್ನ 01 ಗಂಟೆಯವರೆಗೆ ಸಾರ್ವಜನಿಕರ ಕುಂದು ಕೊರತೆ ಸ್ವೀಕಾರ ಸಭೆ ನಡೆಸಲಾಗುವುದು.

ಫೆ.07 ರಂದು ಹೊಸನಗರ ತಾಲೂಕು ಪಂಚಾಯತ್ ಸಭಾಂಗಣ, ಫೆ.09 ರಂದು ಶಿಕಾರಿಪುರ ತಾಲೂಕು ಪಂಚಾಯತ್ ಸಭಾಂಗಣ, ಫೆ. 14 ರಂದು ಭದ್ರಾವತಿ ತಾಲೂಕು ಪಂಚಾಯತ್ ಸಭಾಂಗಣ, ಫೆ. 16 ರಂದು ತರ‍್ಥಹಳ್ಳಿ ತಾಲೂಕು ಪಂಚಾಯತ್ ಸಭಾಂಗಣ, ಫೆ.22 ರಂದು ಸಾಗರ ತಾಲೂಕು ಪಂಚಾಯತ್ ಸಭಾಂಗಣ ಹಾಗೂ ಫೆ.27 ರಂದು ಸೊರಬ ತಾಲೂಕು ಪಂಚಾಯತ್ ಸಭಾಂಗಣಗಳಲ್ಲಿ ಸಭೆ ನಡೆಯಲಿದೆ.

ಬೇಜವಾಬ್ದಾರಿತನ, ವಿಳಂಬ ಮತ್ತು ಅಧಿಕೃತ ಕೆಲಸಕ್ಕಾಗಿ ಲಂಚಕ್ಕೆ ಬೇಡಿಕೆ ಇಟ್ಟಂತಹ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಸಾರ್ವಜನಿಕರು ಲಿಖಿತ ಅಹವಾಲು ಸಲ್ಲಿಸುವಂತೆ ಶಿವಮೊಗ್ಗದ ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಚಿಕ್ಕಮಗಳೂರಿನಲ್ಲಿ ಅಮ್ ಆದ್ಮಿ ಪಕ್ಷದಿಂದ ಮತದಾರ ಜಾಗೃತಿ ಬೈಕ್ ಜಾಥಾ

0

ಚುನಾವಣಾ ಸಮಯದಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೇ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಬೇಕು ಎಂದು ಆಗ್ರಹಿಸಿ ಎಎಪಿ ಮುಖಂಡರುಗಳು ಹಾಗೂ ಕಾರ್ಯ ಕರ್ತರು ಪಕ್ಷದ ಜಿಲ್ಲಾ ಕಚೇರಿಯಿಂದ ಚಿಕ್ಕಮಗಳೂರಿನ ಪ್ರಮುಖ ರಸ್ತೆಗಳಲ್ಲಿ ಬೈಕ್ ಜಾಥಾ ನಡೆಸಿ ಜಾಗೃತಿ ಮೂಡಿಸಿದರು.

ಬೈಕ್ ಜಾಥಾವು ನಗರದ ಅಂಬೇಡ್ಕರ್ ರಸ್ತೆ, ಎಂ.ಜಿ.ರಸ್ತೆ, ಐ.ಜಿ.ರಸ್ತೆ ಮೂಲಕ ಆಜಾದ್ ಪಾರ್ಕ್ ವೃತ್ತದಲ್ಲಿ ಮುಕ್ತಾಯಗೊಳಿಸಲಾಯಿತು.
ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ಡಾ|| ಕೆ.ಸುಂದರಗೌಡ ದೇಶದಲ್ಲಿ ಎಎಪಿ ಪಕ್ಷ ಬಲಿಷ್ಟವಾಗಿ ಬೆಳೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಚುನಾವಣೆಯಲ್ಲಿ ಮತದಾನ ಮೌಲ್ಯ ಯುತವಾದುದು. ಮತದಾರರು ಆಸೆ, ಆಮಿಷಕ್ಕೆ ಒಳಗಾಗದೇ ವಿವೇಚನಾಯುತವಾಗಿ ಹಕ್ಕು ಚಲಾಯಿ ಸಬೇಕು ಎಂದರು.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಹೇಮಂತ್, ಮುಖಂಡರುಗಳಾದ ಜಮೀಲ್ ಅಹ್ಮದ್, ಎಂ.ಪಿ.ಈರೇಗೌಡ, ಪವನ್, ರವಿ ಹಾಗೂ ವಿವಿಧ ತಾಲ್ಲೂಕು ಅಧ್ಯಕ್ಷರುಗಳು ಪಾಲ್ಗೊಂಡಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಉಪ್ಪಳ್ಳಿಯಲ್ಲಿ ಶ್ರೀಮಹಾಲಕ್ಷ್ಮಿ ಶಕ್ತಿಗಣಪತಿ ದೇವಾಲಯ ವಾರ್ಷಿಕೋತ್ಸವ

0

ಚಿಕ್ಕಮಗಳೂರು ಜಿಲ್ಲೆಯ ಉಪ್ಪಳ್ಳಿಯ ಶ್ರೀ ಮಹಾಲಕ್ಷೀ ಶಕ್ತಿಗಣಪತಿ ದೇವಾಲಯದ 12ನೇ ವರ್ಷದ ವಾರ್ಷಿಕೋತ್ಸವ ಮಹೋತ್ಸವು ಫೆ.06 ರಂದು ವಿವಿಧ ಹೋಮಗಳು ಹಾಗೂ ವಿಶೇಷ ಪೂಜೆ ಯನ್ನು ನಡೆಸುವ ಮೂಲಕ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದೆ.

ದೇವಾಲಯ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಸನ್ಮಾನ ಸಮಾರಂಭವನ್ನು ನಡೆಸಲು ತೀರ್ಮಾನಿಸಲಾಗಿದ್ದು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣು ಗೋಪಾಲ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ದೇವಾಲಯ ಧರ್ಮದರ್ಶಿ ವಿಷ್ಣುಮೂರ್ತಿ ಉಪಾಧ್ಯಾಯ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾದೇಶಿಕ ಅಧಿಕಾರಿ ಮಂಜುನಾಥಯ್ಯ, ನಗರಸಭಾ ಮಾಜಿ ಅಧ್ಯಕ್ಷ ಹೆಚ್.ಡಿ.ತಮ್ಮಯ್ಯ, ವಕೀಲ ಪಿ.ಎಸ್.ಎನ್.ಕಾರಂತರು, ಶಾಸ್ತ ಡ್ರೈವಿಂಗ್ ಸ್ಕೂಲ್‌ನ ಕೆ.ಆರ್.ಅನಿಲ್ ಕುಮಾರ್ ಮತ್ತಿತರರು ಭಾಗವಹಿಸಲಿದ್ದಾರೆ.

ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಜಿಲ್ಲೆಯ ಕೆಲವು ಹಾಸ್ಟೆಲ್ ಗಳಲ್ಲಿ ಅವ್ಯವಹಾರ ನಡೆದ ಬಗ್ಗೆ ದಲಿತ ಸಂಘರ್ಷ ಸಮಿತಿಯಿಂದ ದೂರು ಸಲ್ಲಿಕೆ

0

2021-22ನೇ ಸಾಲಿನಿಂದ ಪ್ರಸ್ತುತ ದಿನದವರೆಗೂ ಜಿ.ಇ.ಎಂ. (ಜೆಮ್) ಎಂಬ ಕಂಪನಿಯು ಕರ್ನಾಟಕ ಪಾರದರ್ಶಕ ಅಧಿನಿಯಮದ ನಿಯಮಗಳನ್ನು ಉಲ್ಲಂಘಿಸಿ ಬಾರೀ ಅವ್ಯವಹಾರದಲ್ಲಿ ತೊಡಗಿದೆ ಎಂದು ದಲಿತ ಸಂಘರ್ಷ ಸಮಿತಿಗಳ ಐಕ್ಯಾತಾ ಚಾಲನಾ ಸಮಿತಿಯು ಜಿಲ್ಲಾ ಪಂಚಾಯಿತಿಗೆ ಮನವಿ ನೀಡಿ ದೂರು ಸಲ್ಲಿಸಿದೆ.

ಈ ಸಂಬಂಧ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಫ್ರಭು ಅವರಿಗೆ ಮನವಿ ಸಲ್ಲಿಸಿದ ಚಾಲನಾ ಸಮಿತಿ ಸದಸ್ಯರು ಕಂಪನಿಯು ತಿಂಗಳ ನಿಗಧಿತ ಖರ್ಚಿಗಿಂತ ಹೆಚ್ಚು ಹಣ ವ್ಯಯಿಸಿ ಜಿಲ್ಲೆಯಲ್ಲಿ ಭಾರೀ ಅವ್ಯವಹಾರ ನಡೆಸಿ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.

ಈ ವೇಳೆ ಮಾತನಾಡಿದ ಚಾಲನಾ ಸಮಿತಿ ಸದಸ್ಯ ದಂಟರಮಕ್ಕಿ ಶ್ರೀನಿವಾಸ್ ಸರ್ಕಾರದ ಅಧೀನದ ಲ್ಲಿರುವ ಜಿ.ಇ.ಎಂ. (ಜೆಮ್) ಎಂಬ ಕಂಪನಿಯು ಜಿಲ್ಲೆಯಲ್ಲಿರುವ ಹಾಸ್ಟೆಲ್‌ನ ಮೂಲಭೂತ ವಸ್ತುಗಳ ಒಂದು ತಿಂಗಳ ನಿಯಮಿತ ಖರೀದಿಗಿಂತಲೂ ಐದು ಪಟ್ಟು ಹೆಚ್ಚು ಹಣ ವ್ಯಯಿಸಿ ಭಾರೀ ಅವ್ಯವಹಾರದಲ್ಲಿ ತೊಡಗಿ ಪಾರದರ್ಶಕ ಅಧಿನಿಯಮವನ್ನು ಉಲ್ಲಂಘಿಸಿದೆ ಎಂದು ದೂರಿದರು.

ಜಿಇಎಂ (ಜೆಮ್) ಕಂಪನಿಯು ಮಾರುಕಟ್ಟೆ ದರ ಹಾಗೂ ಅದರ ಗುಣಮಟ್ಟದ ಬ್ರಾಂಡ್ ಕಾರ್ಯ ಕ್ಷಮತೆಗಳನ್ನು ಪರಿಶೀಲಿಸಿ ಆಯ್ಕೆ ಮಾಡಬೇಕಾಗಿದೆ. ಮಾಹೆಯಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಸರಕು ಸೇವೆಗಳನ್ನು ಪಡೆಯಬೇಕಿದೆ. ಆದರೆ ಕಂಪನಿಯು ಸೋಲಾರ್ ವಾಟರ್ ಹೀಟರ್ ವಿಚಾರವಾಗಿ ಮಾಹೆಯ ಒಂದೇ ದಿನದಲ್ಲಿ 36 ಲಕ್ಷ ಸರಕನ್ನು ಆಯ್ಕೆ ಮಾಡಿ ಅಧಿನಿಯಮ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿದೆ ಎಂದರು.

ಕಂಪನಿಯಿಂದ ಪೂರೈಕೆಯಾದ ಸರಕುಗಳಲ್ಲಿಯೂ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರದಲ್ಲಿ ಸರಕುಗಳನ್ನು ಖರೀದಿಸಲಾಗಿರುತ್ತದೆ. ಉಪನಿರ್ದೇಶಕರ ವೈಯಕ್ತಿಕ ಲಾಭಕ್ಕಾಗಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳ ಅನುದಾನವನ್ನು ಕೂಡಾ ಜೆಮ್‌ನಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ.

2021-22ನೇ ಸಾಲಿನ ಕೆಟಿಪಿಪಿ ನಿಯಮಗಳನ್ನು ಗಾಳಿಗೆ ತೂರಿ ಒಂದೇ ಸರಕುಗಳನ್ನು ಹಲವು ಬಾರಿ ಖರೀದಿಸಲು ತಾಲ್ಲೂಕು ಹಂತದ ಅಧಿಕಾರಿಗಳಿಗೆ ಸೂಚಿಸಿ ಮೇಲು ರುಜುಗೊಳಿಸಿರುವುದು ಕಂಡು ಬಂದಿರುತ್ತದೆ ಎಂದರು.

ಜಿಲ್ಲಾ ವೃತ್ತಿಪರ ಹಾಸ್ಟೆಲ್‌ನಲ್ಲಿ 180ಕ್ಕೂ ಹೆಚ್ಚು ಅಕ್ಕಿಮೂಟೆಗಳನ್ನು ದಾಸ್ತಾನು ಮಾಡಿದ್ದರೂ ಸಹ ಪುನಃ ಅಕ್ಕಿಗೆ ಇಂಡೆಂಟ್ ಹಾಕಿದ್ದಾರೆ. ನಂತರ ವಿಷಯ ಹೊರಬಂದಾಕ್ಷಣ ಕೂಡಲೇ ಅಕ್ಕಿ ಮೂಟೆ ಯನ್ನು ಹಾಸ್ಟೆನ್‌ನಿಂದ ಕಣ್ಮರೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ವಾರ್ಡನ್ ಹಾಗೂ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದರು.

ಕೂಡಲೇ ಇಷ್ಟೆಲ್ಲಾ ಅವ್ಯವಹಾರದಲ್ಲಿ ತೊಡಗಿರುವ ಅಧಿಕಾರಿಗಳು ಹಾಗೂ ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿರುವವರ ವಿರುದ್ಧ ನ್ಯಾಯಯುತ ತನಿಖೆ ನಡೆಸಿ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಮರ್ಲೆ ಅಣ್ಣಯ್ಯ, ಬಾಲಕೃಷ್ಣ ಬಿಳೇಕಲ್ಲು, ಸುಜೇಂದ್ರ, ಸಂತೋಷ್ ಮತ್ತಿತರರು ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಉತ್ತಮ ವಿಚಾರ ಪ್ರೇರಣೆಗಳನ್ನ ಕಾರಾಗೃಹ ಬಂದಿಗಳುವ್ಯಕ್ತಿತ್ವ ವಿಕಸನಕ್ಕೆ ರೂಢಿಸಿಕೊಳ್ಳಬೇಕು-ಶ್ರೀಶೈಲ ಎಸ್ ಮೇಟಿ

0

ಪ್ರತಿಯೊಬ್ಬರ ಬದುಕಿನ ಉತ್ತಮ ವಿಚಾರ, ಆದರ್ಶ ಹಾಗೂ ಪ್ರೇರಣೆಯನ್ನು ಕಾರಾಗೃಹ ಬಂಧಿಗಳು ಜೀವನದಲ್ಲಿ ಮೈಗೂಡಿಸಿಕೊಳ್ಳುವುದೇ ವ್ಯಕ್ತಿತ್ವ ವಿಕಸನ ಮೂಲ ಧ್ಯೇಯ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ಶ್ರೀಶೈಲ ಎಸ್.ಮೇಟಿ ಹೇಳಿದರು.

ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ವತಿಯಿಂದ ನಗರದ ಕಾರಾಗೃಹದಲ್ಲಿ ಕಾರಾಗೃಹವಾಸಿಗಳಿಗೆ ಏರ್ಪಡಿಸಲಾಗಿದ್ದ ಬಂಧಿಗಳ ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ಗುರುವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮನರಂಜನೆ ಎಂಬುದು ವ್ಯಕ್ತಿತ್ವ ವಿಕಸನ ಒಂದು ಭಾಗವಾಗಿದೆ. ಆ ನಿಟ್ಟಿನಲ್ಲಿ ಕಾರಾಗೃಹವಾಸಿಗಳು ತಮ್ಮತನವನ್ನು ಬೆಳೆಸಿಕೊಳ್ಳುತ್ತಾ ವಿಕಸನದಲ್ಲಿ ಭಾಗವಹಿಸಬೇಕು. ಬದುಕಿನಲ್ಲಿ ಉತ್ತಮ ಚಿಂತನೆ, ತಾಳ್ಮೆ ಹಾಗೂ ಶಾಂತಿಯಿಂದ ವ್ಯಕ್ತಿತ್ವ ವಿಕಸನ ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.

ದೇಶ ಹಾಗೂ ನಾಡಿನಲ್ಲಿ ಅನೇಕ ಮಂದಿ ಮಹಾನೀಯರು ಉತ್ತಮ ಸೇವೆಯನ್ನು ಸಲ್ಲಿಸಿದ್ದಾರೆ. ಅಂತಹವರ ವ್ಯಕ್ತಿತ್ವವನ್ನು ಪ್ರತಿಯೊಬ್ಬರು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಭವಿಷ್ಯದಲ್ಲಿ ಉತ್ತಮ ಸತ್ಪಜೆಯಾಗಿ ಜೀವಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಮನಃಶಾಸ್ತೃದ ಚಿಂತಕ ಫಾದರ್ ವಿನಯ್ ಮಾತನಾಡಿ ಆಕಸ್ಮಿಕ ನಡೆಯುವ ತಪ್ಪುಗಳಿಂದ ಕೆಲವು ಮಂದಿ ಕಾರಾವಾಸಿಗಳಾಗುತ್ತಾರೆ. ಇರುವಷ್ಟು ದಿನಗಳಲ್ಲಿ ಇತರರಿಂದ ಉತ್ತಮ ವ್ಯಕ್ತಿತ್ವವನ್ನು ಪಡೆದುಕೊಳ್ಳ ಬೇಕು. ಬಿಡುಗಡೆ ನಂತರ ಸಾತ್ವಿಕ ಜೀವನ ನಡೆಸಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಾಮಾಜಿಕ ಸೇವಾ ನಿರ್ದೇಶಕ ಪ್ರದೀಪ್, ಯುವ ನಿರ್ದೇಶಕ ಸಚ್ಚಿನ್, ಜೈಲರ್ ಎಂ.ಕೆ.ನೆಲಧರಿ, ಕಾರಾಗೃಹ ಸಿಬ್ಬಂದಿಗಳು ಹಾಗೂ ಕಾರಾಗೃಹಬಂಧಿಗಳು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಹೊಳೆಹೊನ್ನೂರಿನಲ್ಲಿ ಪತ್ರಿಕಾಭವನ ಕಟ್ಟಡಕ್ಕೆ ನಿವೇಶನ ನೀಡಲು ಮನವಿ

0

ಶಿವಮೊಗ್ಗ ಜಿಲ್ಲಾ ಕಾರ‍್ಯನಿರತ ಪತ್ರಕರ್ತರ ಸಂಘದ ಹೊಳೆಹೊನ್ನೂರು ಹೋಬಳಿ ಘಟಕದ ಪತ್ರಿಕಾ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡುವಂತೆ ಕೋರಿ ಸ್ಥಳೀಯ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಂ.ಎಲ್.ನಾಗರಾಜ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಚ್.ಜಿ.ವಿಜಯರಾಜ್ ಮಾತನಾಡಿ, ಜನರಿಗೆ ತ್ವರಿತವಾಗಿ ಸುದ್ದಿ ಹಾಗೂ ಮಾಧ್ಯಮದ ಇತರೆ ಸೇವೆ ಒದಗಿಸುವ ಉದ್ಧೇಶದಿಂದ ಸಂಘವು ಅಸ್ತಿತ್ವಕ್ಕೆ ಬಂದಿದೆ. ಪತ್ರಿಕಾಗೋಷ್ಠಿ ಇಲ್ಲವೆ ಇತರೆ ಚಟುವಟಿಕಗಳು ನಡೆಸಬೇಕೆಂದರೆ ಶಿವಮೊಗ್ಗ ಅಥವಾ ಭದ್ರಾವತಿಗೆ ನಗರಕ್ಕೆ ಹೋಗಬೇಕಿದೆ. ಆದರೆ ಅವರಿಗೆ ಸ್ಥಳೀಯವಾಗಿಯೆ ಅವಕಾಶ ಕಲ್ಪಿಸಿ ಸ್ಥಳಿಯ ಸುದ್ದಿಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ಸಂಘದ ಆಶಯವಾಗಿದೆ. ಆದ್ದರಿಂದ ಇಲ್ಲಿ ಸುಸಜ್ಜಿತ ಪತ್ರಿಕಾ ಭವನದ ಅವಶ್ಯಕತೆ ಇದೆ ಎಂದು ಮುಖ್ಯಾಧಿಕಾರಿಗೆ ಮನವರಿಕೆ ಮಾಡಿಕೊಟ್ಟರು.

ಮುಖ್ಯಾಧಿಕಾರಿ ಎಮ್.ಎಲ್.ನಾಗರಾಜ್ ಅವರು ಪ್ರತಿಕ್ರಿಯೆ ನೀಡಿ, ಸರಕಾರದ ಸುತ್ತೋಲೆಯ ಪ್ರಕಾರ ಕಾನೂನಿನ ಪರಿಮಿತಿಯೊಳಗೆ ಸೂಕ್ತವಾದ ಸ್ಥಳ ಆಯ್ಕೆ ಮಾಡಿ ಶೀಘ್ರ ಸ್ಥಳಾವಕಾಶ ಮಾಡಿಕೊಡಲಾಗುತ್ತದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಹೋಬಳಿ ಘಟಕದ ಪ್ರಧಾನ ಕರ‍್ಯದರ್ಶಿ ಕೆ.ರಂಗನಾಥ್ ಹಾಗೂ ಸದಸ್ಯರು ಇದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕ್ರೀಡಾಸಕ್ತಿಯಿಂದ ಮಕ್ಕಳು ಜೀವನದಲ್ಲಿ ಶಿಸ್ತುಬದ್ಧರಾಗಿರುತ್ತಾರೆ- ರವಿಕುಮಾರ್

0

ಇಂದು ಮಕ್ಕಳಿಗೆ ಸಂಸ್ಕೃತಯುತ ಶಿಕ್ಷಣ ನೀಡುವುದು ಅತೀ ಮುಖ್ಯ. ಜೊತೆಗೆ ಕ್ರೀಡಾ ಕೂಟಕ್ಕೂ ಹೆಚ್ಚಿನ ಮಹತ್ವ ನೀಡಿದಲ್ಲಿ ಮಕ್ಕಳು ಓದಿನಲ್ಲಿ ಹಾಗೂ ಬದುಕಿನಲ್ಲಿ ಶಿಸ್ತುಬದ್ಧರಾಗಿರಲು ಸಹಕಾರವಾಗು ತ್ತದೆ ಎಂದು ಕೆಪಿಸಿಸಿ ಸಂಯೋಜಕ ಎಸ್. ರವಿಕುಮಾರ್ ತಿಳಿಸಿದರು.

ಗುರುಪುರದ ದೆಹಲಿ ಇಂಟರ್ ನ್ಯಾಷನಲ್ ಸ್ಕೂಲ್ ವತಿಯಿಂದ ನಗರದ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಶಾಲಾ ಮಕ್ಕಳ ಹಾಗೂ ಪೋಷಕರ ಕ್ರೀಡಾಕೂಟವನ್ನು ಪಾರಿಹಾಳ ಹಾರಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶಿವಮೊಗ್ಗದಲ್ಲಿ ಉತ್ತಮ ಶಿಕ್ಷಣ ನೀಡುವ ಶಾಲೆಗಳ ಪೈಕಿ ದೆಹಲಿ ಇಂಟರ್ ನ್ಯಾಷನಲ್ ಶಾಲೆ ಕೂಡ ಅತ್ಯುತ್ತಮ ಶಿಕ್ಷಣ ನೀಡುತ್ತಿದೆ ಎಂದು ಶ್ಲಾಘಿಸಿದ ಅವರು, ಕ್ರೀಡಾಕೂಟ ಹಾಗೂ ಓದಿನಲ್ಲಿ ಮಕ್ಕಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗಳಿಸಿರುವುದು ಹೆಮ್ಮೆಯ ವಿಷಯ. ಶಾಲೆಯು ಇನ್ನೂ ಉತ್ತಮ ಸಾಧನೆಗಳನ್ನು ಮಾಡಿ ಉತ್ತುಂಗಕ್ಕೆ ಏರಲಿ ಎಂದು ಹಾರೈಸಿದರು.

ಡಿವೈಎಸ್‌ಪಿ ಬಾಲರಾಜ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ತಂದೆ ತಾಯಿಯರು, ಅಜ್ಜಿ, ತಾತಂದಿರೊಂದಿಗೆ ಮಕ್ಕಳು ಬೆರೆತು ಕ್ರೀಡಾಕೂಟಗಳಲ್ಲಿ ತೊಡಗುವುದ ರಿಂದ ಪ್ರೀತಿ ವಿಶ್ವಾಸ ಹೆಚ್ಚುತ್ತದೆ. ಅಂತಹ ಒಂದು ವಿಶೇಷ ವೇದಿಕೆ ಯನ್ನು ಈ ಶಾಲೆ ಕಲ್ಪಿಸಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಶಿವಮೊಗ್ಗದಲ್ಲಿ ಡೆಲ್ಲಿ ಇಂಟರ್ ನ್ಯಾಷನಲ್ ಶಾಲೆಯು ಕಳೆದ 9 ವರ್ಷಗಳಿಂದ ವಿಶೇಷ ಹಾಗೂ ವಿನೂತನ ಶೈಲಿಯಲ್ಲಿ ಪಾಠ ಪ್ರವಚನ ನೀಡುತ್ತ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ತನ್ನದೇ ಆದ ಚಾಪನ್ನು ಮೂಡಿಸಿದೆ. ಶಾಲೆಯ ಶೈಕ್ಷಣಿಕ ಕಾರ್ಯವನ್ನು ಗುರಿತಿಸಿದ ಭಾರತದಲ್ಲಿ ಪ್ರಸಿದ್ಧಿ ಪಡೆದಿರುವ ಎಜುಕೇಷನ್ ಟುಡೇ ಪತ್ರಿಕೆಯು ಶೈಕ್ಷಣಿಕ ಸರ್ವೇ ನಡೆಸಿ ನಮ್ಮ ಶಾಲೆಗೆ ಎರಡು ಅತ್ಯುನ್ನತ ರಾಷ್ಟ್ರಮಟ್ಟದ ಎರಡು ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ ಎಂದು ಫೌಂಡರ್ ಡೈರೆಕ್ಟರ್ ಡಾ. ಎಸ್.ಬಿ. ಜಗದೀಶ್ ಗೌಡ ಸಂತಸ ವ್ಯಕ್ತಪಡಿಸಿದರು.

ವಿಜೇತ ಮಕ್ಕಳು ಹಾಗೂ ಪೋಷಕರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಡಾಕ್ಟ ರೇಟ್ ಪಡೆದುಕೊಂಡ ಜಗದೀಶ್ ಗೌಡರನ್ನು ಅತಿಥಿಗಳು, ಪೋಷಕರು ಸನ್ಮಾನಿಸಿ ಅಭಿನಂದಿಸಿದರು.

ಪಾಲಿಕೆ ಸದಸ್ಯ ಹೆಚ್.ಸಿ. ಯೋಗೀಶ್, ಮಾಜಿ ಸದಸ್ಯ ಐಡಿಯಲ್ ಗೋಪಿ ಹಾಗೂ ಬಂಟರ ಸಮಾಜದ ಮಾಜಿ ಅಧ್ಯಕ್ಷ ಬಿ.ಎಸ್. ಸುರೇಶ್ ಶೆಟ್ಟಿö ಹಾಗೂ ಶಾಲೆಯ ಛೇರ್‌ಮನ್ ರಮ್ಯ ಜಗದೀಶ್ ಗೌಡ ಸೇರಿದಂತೆ ಶಾಲಾ ಶಿಕ್ಷಕಿಯರು ಸಿಬ್ಬಂದ್ದಿಯವರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಸಂಸತ್ತಿನಲ್ಲೂ ಸದ್ದುಮಾಡಿರುವ ಅದಾನಿ ಕಂಪನಿ ಷೇರುಗಳ ವಿವಾದ

0

ಅದಾನಿ ಸಮೂಹದ ಅವ್ಯವಹಾರದ ಬಗ್ಗೆ ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ , ನಿಯಮ 267ರ ಅಡಿ ವಿಷಯದ ಚರ್ಚೆಗೆ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು.

ಶೇರು ಮೌಲ್ಯಗಳ ಕೃತಕ ಏರಿಳಿಕೆ ಮಾಡಿದ ಆರೋಪ ಹೊತ್ತಿರುವ ಅದಾನಿ ಗ್ರೂಪ್ ನ ಅವ್ಯವಹಾರದ ಕುರಿತ ಹಿಂಡನ್ ಬರ್ಗ್ ರಿಸರ್ಚ್ ನೀಡಿದ್ದ ವರದಿ ಪ್ರಸ್ತಾಪಿಸಿ ಆರೋಪಗಳ ಬಗ್ಗೆ ಜಂಟಿ ಸಂಸದೀಯ ಸಮಿತಿ ಅಥವಾ ಸುಪ್ರೀಂ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಪ್ರತಿಪಕ್ಷಗಳ ಸದಸ್ಯರು ಆಗ್ರಹಿಸಿದರು‌.

ಆದರೆ ಚರ್ಚೆಗೆ ಅವಕಾಶ ಕಲ್ಪಿಸಲು ಸಭಾಪತಿ ಜಗದೀಶ್ ಧನಕರ್ ನಿರಾಕರಿಸಿದರು. ಇದರಿಂದ ಆಕ್ರೋಶಗೊಂಡ ಪ್ರತಿಪಕ್ಷಗಳು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರಿಂದ ಗದ್ದಲ ಉಂಟಾಗಿ ಕಲಾಪ ಮುಂದೂಡಿಕೆಯಾಯಿತು.

ಬಳಿಕ ಸದನದ ಹೊರಗೆ ಮಾತನಾಡಿದ ಖರ್ಗೆ , ಎಸ್ ಬಿ ಐ, ಎಲ್ಐಸಿ ಸೇರಿದಂತೆ ಸಾರ್ವಜನಿಕ ಸಂಸ್ಥೆಗಳು ಅದಾನಿ ಸಮೂಹದ ಕಂಪನಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿವೆ. ಹಿಂಡನ್ ಬರ್ಗ್ ವರದಿಯಿಂದ ಶೇರುಗಳ ಮೌಲ್ಯ ಪಾತಾಳಕ್ಕೆ ಕುಸಿದಿದೆ.

ಇದರಿಂದ ಸಾರ್ವಜನಿಕರಿಗೆ ತಮ್ಮ ಹಣದ ಬಗ್ಗೆ ಆತಂಕ ಶುರುವಾಗಿದೆ. ಸರ್ಕಾರ ಜನರಲ್ಲಿ ಮೂಡಿರುವ ಸಂಶಯವನ್ನು ನಿವಾರಿಸಲು ಮುಂದಾಗಬೇಕು. ಸಮಗ್ರ ತನಿಖೆಗೆ ಆದೇಶಿಸಿ ತನಿಕಾ ವರದಿ ಅಂಶಗಳನ್ನೂ ಪ್ರತಿದಿನ ಪ್ರಕಟಿಸಬೇಕು ಎಂದು ಒತ್ತಾಯಿಸಿದರು

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಯಡಿಯೂರಪ್ಪನವರ ಜೊತೆ ಮುಖ್ಯಮಂತ್ರಿ ಬೊಮ್ಮಾಯಿ ಶರಾವತಿ ಸಂತ್ರಸ್ತರ ಸಮಾಲೋಚನೆ

0

ಸಾವಿರಾರು ಶರಾವತಿ ಸಂತ್ರಸ್ತ ಕುಟುಂಬಗಳು ಹಲವು ದಶಕಗಳಿಂದ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ನೇತೃತ್ವ ದಲ್ಲಿ ಶಿವಮೊಗ್ಗ ಭಾಗದ ಪ್ರಮುಖರ ಸಭೆ ನಡೆಸಿದರು.

ಸಭೆ ಬಳಿಕ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ವಸ್ತುಸ್ಥಿತಿ ವಿವರಿಸಿದರು. ಆದ್ಯತೆ ಮೇಲೆ ಸಮಸ್ಯೆ ಬಗೆಹರಿಸಲು ತಾವು ಗಮನಹರಿಸುವುದಾಗಿ ಸಿಎಂ ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಶರಾವತಿ ಯೋಜನೆ ಮುಳುಗಡೆ ಸಂತ್ರಸ್ಥರ ಪುನರ್ ವಸತಿ ಸಮಸ್ಯೆ ಪರಿಹಾರ ಸಂಬಂಧ ಆದ್ಯತೆ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕಂದಾಯ ಹಾಗೂ ಅರಣ್ಯ ಅಧಿಕಾರಿಗಳಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ನಿರ್ದೇಶನ ನೀಡಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪನವರು, ಎಲ್ಲಾ ಸರ್ವೆ ನಡೆಸಿ ಪ್ರಸ್ತಾವನೆ ಕಳಿಸುವಂತೆ ಕೇಂದ್ರ ಸಚಿವರು ಸಲಹೆ ಮಾಡಿದ್ದಾರೆ. ಅಂತೆಯೇ ಜಿಲ್ಲಾಡಳಿತ ಸರ್ವೇ ಮಾಡಿ ಪ್ರಸ್ತಾವನೆ ಸಿದ್ಧಪಡಿಸಿದೆ. ಸುಮಾರು 9 ಸಾವಿರ ಎಕರೆ ಜಮೀನು ಹಕ್ಕು ನೀಡುವ ಸಂಬಂಧ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ತಿಳಿಸಿದರು.