Saturday, May 16, 2026
Saturday, May 16, 2026
Home Blog Page 130

CM Siddaramaiah ಮಲೆಯಾಳಿ ಭಾಷಾ ಮಸೂದೆ.ಕೇರಳ ಸರ್ಕಾರ ವಾಪಸು ಪಡೆಯಲಿ. ಕಾಸರಗೋಡು ಕನ್ನಡಿಗರ ಪರ ಸಿದ್ಧರಾಮಯ್ಯ

0

CM Siddaramaiah ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆಯನ್ನು ಕಡ್ಡಾಯಗೊಳಿಸುವ ಕೇರಳ ಸರ್ಕಾರದ ಪ್ರಸ್ತಾಪಿತ ಮಲೆಯಾಳಿ ಭಾಷಾ ಮಸೂದೆ-2025 ಸಂವಿಧಾನ ಖಾತರಿ ಮಾಡಿರುವ ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರವಾಗಿದೆ ಎಂದು ಹೇಳಲು ವಿಷಾಧಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ.

ಇಂತಹದ್ದೊಂದು ಕಾನೂನು ಜಾರಿಗೆ ಬಂದರೆ ಕೇರಳದ ಗಡಿಜಿಲ್ಲೆಗಳಲ್ಲಿ ಮುಖ್ಯವಾಗಿ ಕಾಸರಗೋಡಿನಲ್ಲಿ ವಾಸಿಸುತ್ತಿರುವ ಕನ್ನಡಿಗರು ಮಾತೃಭಾಷೆಯನ್ನು ಕಲಿಯುವ ಅವಕಾಶದಿಂದ ವಂಚಿತರಾಗಲಿದ್ದಾರೆ. ಭಾಷಾ ಅಲ್ಪಸಂಖ್ಯಾತರ ಮೂಲಭೂತ ಹಕ್ಕನ್ನು ದಮನ ಮಾಡುವ ಇಂತಹ ನಡೆಯನ್ನು ಕೇರಳದ ಕಮ್ಯುನಿಸ್ಟ್ ಸರ್ಕಾರದಿಂದ ನಾವು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ.

ಕಾಸರಗೋಡು ಇಂದು ಆಡಳಿತಾತ್ಮಕವಾಗಿ ಕೇರಳ ರಾಜ್ಯಕ್ಕೆ ಸೇರಿದ್ದರೂ ಅದು ಭಾವನಾತ್ಮಕವಾಗಿ ಕರ್ನಾಟಕ ರಾಜ್ಯಕ್ಕೆ ಸೇರಿದ್ದಾಗಿದೆ. ಅಲ್ಲಿನ ಜನ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯದ ಜೊತೆ ಮಿಳಿತವಾಗಿದ್ದಾರೆ. ಅವರು ಕರ್ನಾಟಕದ ಕನ್ನಡಿಗರಿಗಿಂತ ಕಡಿಮೆ ಕನ್ನಡಿಗರೇನಲ್ಲ. ಅವರ ಹಿತವನ್ನು ರಕ್ಷಿಸುವುದು ನಮ್ಮ ಸರ್ಕಾರದ ಕರ್ತವ್ಯವಾಗಿದೆ. ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ಭಾರತದ ಪ್ರತಿಯೊಬ್ಬ ಪ್ರಜೆಗೂ ಅವರ ಮಾತೃಭಾಷೆಯಲ್ಲಿ ಕಲಿಯುವ ಸ್ವಾತಂತ್ರ್ಯ ಇದೆ ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕೇರಳ ವಿಧಾನಸಭೆ ಅಂಗೀಕರಿಸಿರುವ ಮಲೆಯಾಳಿ ಭಾಷಾ ಮಸೂದೆ-2025 ಅನ್ನು ತಕ್ಷಣ ಹಿಂದೆಗೆದುಕೊಳ್ಳಬೇಕೆಂದು ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರನ್ನು ಆಗ್ರಹಿಸುತ್ತೇನೆ.

ಭಾಷಾ ಅಲ್ಪಸಂಖ್ಯಾತರಿಗೆ ಮಾತೃಭಾಷೆ ಎನ್ನುವುದು ಕೇವಲ ಭಾಷೆ ಅಲ್ಲ, ಅದು ಅವರಿಗೆ ಘನತೆಯ ಬದುಕು ನೀಡುವ ಅಸ್ಮಿತೆಯಾಗಿರುತ್ತದೆ. ಮಾತೃಭಾಷೆಯಲ್ಲಿ ಕಲಿಯುವ ಮಕ್ಕಳು ಸುಲಭದಲ್ಲಿ ವಿಷಯಗಳನ್ನು ಗ್ರಹಿಸುತ್ತಾರೆ ಎನ್ನುವದು ವೈಜ್ಞಾನಿಕವಾಗಿ ಸಾಬೀತಾಗಿದೆ. ಅವರ ಮೇಲೆ ಅನ್ಯಭಾಷೆಯನ್ನು ಹೇರುವುದರಿಂದ ಅವರ ಕಲಿಕಾ ಸಾಮರ್ಥ್ಯವನ್ನು ಕುಂದಿಸುವುದು ಮಾತ್ರವಲ್ಲ, ಒಂದು ಸ್ವತಂತ್ರಭಾಷೆಯ ಅವಸಾನಕ್ಕೆ ದಾರಿ ಮಾಡಿಕೊಟ್ಟ ಹಾಗಾಗುತ್ತದೆ.

CM Siddaramaiah ಕಾಸರಗೋಡಿನ ಜನ ಹಲವು ತಲೆಮಾರುಗಳಿಂದ ಕನ್ನಡ ಮಾಧ್ಯಮದಲ್ಲಿ ಓದಿದ್ದಾರೆ, ನಿತ್ಯದ ಬದುಕಿನಲ್ಲಿ ಕನ್ನಡವನ್ನು ನಿರಂತರವಾಗಿ ಬಳಸುತ್ತಾ ಬಂದಿದ್ದಾರೆ. ಕಾಸರಗೋಡು ಜಿಲ್ಲೆಯ ಶೇಕಡಾ 70ರಷ್ಟು ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಮತ್ತು ಕನ್ನಡ ಮಾಧ್ಯಮದಲ್ಲಿಯೇ ಕಲಿಯುವುದನ್ನು ಬಯಸುತ್ತಾರೆ ಎಂಬುದು ಅಲ್ಲಿನ ಕನ್ನಡಿಗರ ಒಕ್ಕೊರಲ ಅಭಿಪ್ರಾಯವಾಗಿದೆ. ಯಾವುದೇ ಒಂದು ಭಾಷೆ ಮತ್ತೊಂದು ಭಾಷೆಯ ವಿರುದ್ಧವಾಗಿ ಇರುವುದಿಲ್ಲ. ಭಾರತ ಬಹುಭಾಷೆ, ಬಹುಸಂಸ್ಕೃತಿ ಮತ್ತು ಬಹುಧರ್ಮದ ತೊಟ್ಟಿಲಾಗಿದೆ. ಈ ಬಹುತ್ವದ ವಾತಾವರಣಕ್ಕೆ ಧಕ್ಕೆ ಉಂಟು ಮಾಡುವ ಪ್ರಯತ್ನ ಅಪಾಯಕಾರಿಯಾಗಿದೆ.

ಭಾಷೆಯೂ ಸೇರಿದಂತೆ ಅಲ್ಪಸಂಖ್ಯಾತರ ಹಿತರಕ್ಷಣೆಯ ವಿಚಾರದಲ್ಲಿ ನಾವೆಲ್ಲರೂ ಗೌರವಿಸುವ ಸಂವಿಧಾನದಲ್ಲಿ ಸ್ಪಷ್ಟವಾಗಿದೆ. ಸಂವಿಧಾನದ 29 ಮತ್ತು 30ನೇ ಪರಿಚ‍್ಛೇದಗಳು ದೇಶದ ಯಾವುದೇ ಭಾಗದಲ್ಲಿ ವಾಸಿಸುತ್ತಿರುವವರಿಗೆ ತಮ್ಮ ಭಾಷೆ, ಲಿಪಿ ಮತ್ತು ಸಂಸ್ಕೃತಿ ರಕ್ಷಿಸಿಕೊಳ್ಳುವ ಹಕ್ಕನ್ನು ನೀಡಿದೆ. ಅವರಿಗೆ ತಮ್ಮ ಆಯ್ಕೆಯ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ನಡೆಸುವ ಹಕ್ಕನ್ನೂ ನೀಡುತ್ತದೆ. ಸಂವಿಧಾನದ 350 (ಎ) ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯಲ್ಲಿ ಕಲಿಯುವ ಸ್ವಾತಂತ್ರ್ಯವನ್ನು ನೀಡಿದೆ. ಸಂವಿಧಾನದ 350(ಬಿ) ಅಲ್ಪಸಂಖ್ಯಾತರ ರಕ್ಷಣೆಯ ಖಾತರಿಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಸರ್ಕಾರ ಅಲ್ಪಸಂಖ್ಯಾತರ ಭಾಷಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಮಾಡಬಾರದು ಎಂದಿದ್ದಾರೆ.

ಕರ್ನಾಟಕದಲ್ಲಿ ನಾವು ಕನ್ನಡ ಭಾಷೆಯನ್ನು ಪೊರೆಯುವ ಕೆಲಸ ಮಾಡಿದ ಹಾಗೆ, ಕೇರಳ ರಾಜ್ಯದಲ್ಲಿ ಮಲೆಯಾಳಿ ಭಾಷೆಯನ್ನು ಬೆಳೆಸುವ ಮತ್ತು ಉಳಿಸುವ ಸರ್ವ ಸ್ವಾತಂತ್ರ್ಯ ಅಲ್ಲಿನ ರಾಜ್ಯ ಸರ್ಕಾರಕ್ಕೆ ಇದೆ. ಆದರೆ ಒಂದು ಭಾಷೆಯ ಮೇಲೆ ಇನ್ನೊಂದು ಭಾಷೆಯನ್ನು ಹೇರುವ ಪ್ರಯತ್ನ ಸಲ್ಲದು.

ಕೇರಳ ಸರ್ಕಾರ ಈ ಮಸೂದೆಯನ್ನು ಜಾರಿಗೊಳಿಸಲು ಹೊರಟರೆ ಕನ್ನಡಿಗರು ಇದನ್ನು ಒಕ್ಕೊರಲಿನಿಂದ ವಿರೋಧಿಸಲಿದ್ದಾರೆ. ಕಾಸರಗೋಡಿನ ಕನ್ನಡಿಗರ ಜೊತೆಯಲ್ಲಿ ನಿಂತು ಅವರ ಭಾಷಾ ಸ್ವಾತಂತ್ರ್ಯದ ರಕ್ಷಣೆಗೆ ಸರ್ವರೀತಿಯ ಬೆಂಬಲವನ್ನು ನೀಡಲಿದ್ದಾರೆ ಎಂದಿದ್ದಾರೆ

Shiralakoppa Police Station ಕಾಣೆಯಾಗಿದ್ದಾರೆ. ಶಿರಾಳಕೊಪ್ಪ ಪೊಲೀಸ್ ಠಾಣೆ ಪ್ರಕಟಣೆ.

0

Shiralakoppa Police Station ಶಿಕಾರಿಪುರ ತಾಲೂಕು ಶೀರಿಹಳ್ಳಿ ಗ್ರಾಮ ವಾಸಿ ಲಲಿತಾ ಬಾಯಿ ಎಂಬುವವರ ಪತಿ ಹಾಲಾ ನಾಯ್ಕ ಬಿನ್ ಸೋಮ್ಲಾ ನಾಯ್ಕ ಎಂಬ 47 ವರ್ಷದ ವ್ಯಕ್ತಿ ಡಿ. 15 ರಂದು ತನ್ನ ಅತ್ತೆ ಮನೆಯಿಂದ ಕಾಣೆಯಾದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ.
Shiralakoppa Police Station ಈ ವ್ಯಕ್ತಿಯ ಚಹರೆ 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಕನ್ನಡ ಮತ್ತು ಲಂಬಾಣಿ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಶರ್ಟ್ ಮತ್ತು ಬಿಳಿ ಪಂಚೆ ಹಾಗೂ ಹಸಿರು ಜರ್ಕಿನ್ ಧರಿಸಿರುತ್ತಾರೆ.
ಈ ವ್ಯಕ್ತಿಯ ಕುರಿತು ಸುಳಿವು ಸಿಕ್ಕಲ್ಲಿ ಶಿರಾಳಕೊಪ್ಪ ಪೊಲೀಸ್ ಠಾಣೆಗೆ ಖುದ್ದಾಗಿ ಅಥವಾ ದೂ.ಸಂ.: 9480803367 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Prabhuling Kavalikatti ಡೀಸಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಸ್ಕೌಟ್ಸ್ & ಗೈಡ್ಸ್ ಸಂಸ್ಥೆಯಿಂದ ಗೌರವಾರ್ಪಣೆ

0

Prabhuling Kavalikatti ನೂತನ ಜಿಲ್ಲಾಧಿಕಾರಿ ಪ್ರಭುಲಿಂಗಪ್ಪ ಕವಳಿಕಟ್ಟಿ ಅವರಿಗೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು ಭೇಟಿ ನೀಡಿ ಅಭಿನಂದಿಸಿದರು.

ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಪ್ರಭುಲಿಂಗಪ್ಪ ಕವಳಿಕಟ್ಟಿ ಅವರನ್ನು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು ಭೇಟಿ ನೀಡಿ ಸಮಾಲೋಚನೆ ನಡೆಸಿದರು. ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಅವರು ಜಿಲ್ಲಾಧಿಕಾರಿ ಪ್ರಭುಲಿಂಗಪ್ಪ ಅವರನ್ನು ಅಭಿನಂದಿಸಿದರು.

Prabhuling Kavalikatti ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುವ ಜತೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು. ಶಿವಮೊಗ್ಗ ಜಿಲ್ಲೆಯ ಕೈಗಾರಿಕಾ ಮತ್ತು ವಾಣಿಜ್ಯ ಅಭಿವೃದ್ಧಿಗೆ ಸಂಘವು ಜಿಲ್ಲಾಧಿಕಾರಿ ಜೊತೆ ಕೈಜೋಡಿಸುತ್ತದೆ ಎಂದು ಬಿ.ಗೋಪಿನಾಥ್ ತಿಳಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ, ನಿರ್ದೇಶಕರಾದ ಕೆ.ಬಿ.ಶಿವಕುಮಾರ್, ಗಣೇಶ ಎಂ.ಅಂಗಡಿ, ರಾಜಶೇಖರ್, ಲಕ್ಷ್ಮೀದೇವಿ ಗೋಪಿನಾಥ್, ಮಾಚೇನಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷ ಡಿ.ಜಿ.ಬೆನಕಪ್ಪ ಹಾಜರಿದ್ದರು.

Shimoga News ಜನವರಿ 11. ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಕಲ ಸಿದ್ಧತೆ-ವಿ.ಅಭಿಷೇಕ್.

0

Shimoga News ವಿವಿಧ ಇಲಾಖೆ/ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಜ.11 ರಂದು ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿದ್ದು, ಅಗತ್ಯವಾದ ಸಕಲ ಸಿದ್ದತೆಗಳನ್ನು ಮಾಡಿಕೊಂಡು ಪರೀಕ್ಷೆಗಳನ್ನು ಶಾಂತಿಯುತವಾಗಿ ಯಶಸ್ವಿಗೊಳಿಸಬೇಕೆಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಪರೀಕ್ಷೆ ಕುರಿತು ಸಂಬAಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲು ಕರೆಯಲಾಗಿದ್ದ ಪರೀಕ್ಷಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರೀಕ್ಷೆಗಳು ನಗರದ ಒಟ್ಟು 14 ಪರೀಕ್ಷಾ ಕೇಂದ್ರಗಳಲ್ಲಿ ಭಾನುವಾರ ಬೆಳಿಗ್ಗೆ 11.30 ರಿಂದ 12.30 ಮತ್ತು ಮಧ್ಯಾಹ್ನ 2.30 ರಿಂದ ಸಂಜೆ 4.30 ರವರೆಗೆ ನಡೆಯಲಿವೆ. ಪರೀಕ್ಷೆಗೆ ಜಿಲ್ಲೆಯಿಂದ ಬೆಳಿಗ್ಗೆ ಒಟ್ಟು 4313 ಮತ್ತು ಮಧ್ಯಾಹ್ನ 4271 ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ.
ಪ್ರಶ್ನೆ ಪತ್ರಿಕೆ ವಿತರಕ ಮಾರ್ಗಗಳನ್ನು ನಿಗದಿಪಡಿಸಿದ್ದು, ಪತ್ರಿಕೆ ಸಾಗಾಟ ಮಾಡಲು ಸಂಬAಧಿಸಿದAತೆ ತ್ರಿಸದಸ್ಯ ಸಮಿತಿಯನ್ನು ಈಗಾಗಲೇ ರಚಿಸಲಾಗಿದೆ. ಪರೀಕ್ಷಾ ಗೌಪ್ಯ ಸಾಮಗ್ರಿಯನ್ನು ಠೇವಣಿಕರಿಸಲು ಮತ್ತು ವಿತರಿಸಲು ಜಿಲ್ಲಾ ಖಜಾನೆಗೆ ಸೂಚಿಸಲಾಗಿದೆ.
ಪರೀಕ್ಷಾ ಕೇಂದ್ರದ ಸುತ್ತಮುತ್ತ 200 ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದು, ಸಾರ್ವಜನಿಕರ ಪ್ರವೇಶ ನಿಷೇಧಿಸಿದೆ ಹಾಗೂ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಬಂಧ್ ಮಾಡಲು ಸೂಚಿಸಲಾಗಿದೆ.
ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಬಂದೋಬಸ್ತ್, ಪರೀಕ್ಷಾರ್ಥಿಗಳ ತಪಾಸಣೆಗೆ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರತಿ ಕೇಂದ್ರಕ್ಕೆ ಎ ಮತ್ತು ಬಿ ದರ್ಜೆಯ ಅಧಿಕಾರಿಗಳನ್ನು ವೀಕ್ಷಕರಾಗಿ ನೇಮಿಸಲಾಗಿದೆ. ಪ್ರತಿ ಕೇಂದ್ರಕ್ಕೆ ಹಿರಿಯ ಪ್ರಾಂಶುಪಾಲರನ್ನು ಪ್ರಶ್ನೆ ಪತ್ರಿಕೆ ಪಾಲಕರನ್ನಾಗಿ ಹಾಗೂ ಒಬ್ಬರು ಉಪನ್ಯಾಸಕರನ್ನು ಜಾಗೃತದಳದ ಸಿಬ್ಬಂದಿಯಾಗಿ ನೇಮಿಸಲಾಗಿದೆ.
Shimoga News ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಅಳವಡಿಸಿದ್ದು, ಜ್ಯಾಮರ್‌ಗಳನ್ನು ಅಳವಡಿಸಲಾಗುವುದು. ಹಾಗೂ ಯಾವುದೇ ರೀತಿಯ ಎಲೆಕ್ಟಾçನಿಕ್ ಮತ್ತು ಡಿಜಿಟಲ್ ವಾಚು, ವಸ್ತುಗಳಿಗೆ ಪ್ರವೇಶವಿಲ್ಲ. ಅಭ್ಯರ್ಥಿಗಳು ಧರಿಸುವ ಮೆಟಲ್ ಆಭರಣಗಳು, ವಸ್ತçಸಂಹಿತೆ ಬಗ್ಗೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದು, ಸೂಕ್ಷö್ಮವಾಗಿ ತಮ್ಮ ವಿವೇಚನೆ ಮತ್ತು ನಿಯಮಗಳನ್ವಯ ಈ ಕುರಿತು ನಿರ್ವಹಣೆ ಮಾಡಿ ಪರೀಕ್ಷೆಗಳು ಶಾಂತಿಯುತವಾಗಿ ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವಿಕಲಚೇತನ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ನೆಲ ಮಾಳಿಗೆಯಲ್ಲಿ ಪರೀಕ್ಷೆಗೆ ಅವಕಾಶ ಮಾಡಿ ಅವರಿಗೆ ನಿಯಮಾನುಸಾರ ಇರುವ ಸೌಲಭ್ಯಗಳನ್ನು ನೀಡಬೇಕು. ಪರೀಕ್ಷೆಗೆ ನಿಯೋಜಿಸಿದ ಅಧಿಕಾರಿಗಳಿಗೆ ಈಗಾಗಲೇ ಎಲ್ಲ ರೀತಿಯ ಸೂಚನೆಗಳನ್ನು ನೀಡಿದ್ದು, ಸಂಬAಧಿಸಿದ ಅಧಿಕಾರಿಗಳು ಪರೀಕ್ಷೆಗಳು ಶಾಂತಿ ಮತ್ತು ಸುವ್ಯಸ್ಥಿತವಾಗಿ ನಡೆಯುವಂತೆ ಕ್ರಮ ವಹಿಸಿ ಯಶಸ್ವಿಗೊಳಿಸಬೇಕೆಂದು ಸೂಚನೆ ನೀಡಿದರು.
ಸಭೆಯಲ್ಲಿ ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ, ಜಿಲ್ಲಾ ಖಜಾನಾಧಿಕಾರಿ ಸಾವಿತ್ರಿ, ಬಿಇಓ ರಮೇಶ್, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಅಧಿಕಾರಿಗಳು ಪಾಲ್ಗೊಂಡಿದ್ದರು.

Mathura Paradise ಮಥುರಾ ಪ್ಯಾರೆಡೈಸ್‌ ನಲ್ಲಿ ಆಟ,ಊಟ, ಹಾಡು.ನೃತ್ಯ. ಇತ್ಯಾದಿ” ಸಂಕ್ರಾಂತಿ ಸಂಭ್ರಮ”. ಪಾಲ್ಗೊಳ್ಳಲು ಆಮಂತ್ರಣ.

0

Mathura Paradise ನಗರದ ಮಥುರಾ ಪ್ಯಾರಾಡೈಸ್‌ನಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಜನವರಿ 16ರಿಂದ 18ರವರೆಗೆ ಮಕರ ಸಂಕ್ರಾಂತಿ ಸಂಭ್ರಮ ಹಮ್ಮಿಕೊಳ್ಳಲಾಗಿದೆ. ಆಟ, ಊಟ, ಹಾಡು, ಕೋಲಾಟ, ರಸಪ್ರಶ್ನೆ, ಬಹುಮಾನ, ಅದೃಷ್ಟವಂತರಿಗೆ ಬೆಳ್ಳಿ ನಾಣ್ಯ ಉಡುಗೊರೆ ಸಹ ನೀಡಲಾಗುತ್ತಿದೆ. ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ವೇದಿಕೆ, ಸಾಹಸ ಮತ್ತು ಸಂಸ್ಕೃತಿ ವೇದಿಕೆ, ನಮ್ಮ ಕನಸಿನ ಶಿವಮೊಗ್ಗ, ಬೈಕ್ ಕ್ಲಬ್, ಮಲೆನಾಡು ಇತಿಹಾಸ ವೇದಿಕೆ ಸಹಯೋಗದಲ್ಲಿ ಸಂಕ್ರಾಂತಿ ಸಂಭ್ರಮ ಹಮ್ಮಿಕೊಳ್ಳಲಾಗಿದೆ. ಹಬ್ಬದ ವಿಶೇಷ ಊಟ ಸೇವಿಸಲು ನೋಂದಣಿ ಮಾಡುವುದಕ್ಕಾಗಿ 9916334736 ಅಥವಾ 7892426584 ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಎನ್‌.ಗೋಪಿನಾಥ್‌ ತಿಳಿಸಿದ್ದಾರೆ..

DC Shivamogga ಸಂಭ್ರಮದ ಗಣರಾಜ್ಯೋತ್ಸವಕ್ಕೆ ಜಿಲ್ಲಾಡಳಿತ ಸಕಲರೀತಿ ಸಜ್ಜಾಗಿದೆ- ಪ್ರಭುಲಿಂಗ ಕವಳಿಕಟ್ಟಿ.

0

DC Shivamogga ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಜನವರಿ 26 ರಂದು ನಗರದ ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿರುವ ಗಣರಾಜ್ಯೋತ್ಸವ ದಿನಾಚರಣೆಗೆ ಅಗತ್ಯವಾದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಿಷ್ಟಾಚಾರದಂತೆ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು ಹಾಗೂ ಗಣ್ಯರನ್ನು ಆಹ್ವಾನಿಸಲಾಗುವುದು. ಜನವರಿ 26 ರಂದು ಬೆಳಿಗ್ಗೆ 09 ಗಂಟೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಧ್ವಜಾರೋಹಣ ನೆರವೇರಿಸಿ, ಜಿಲ್ಲೆಯ ಜನತೆಗೆ ಗಣರಾಜ್ಯೋತ್ಸವದ ಸಂದೇಶ ನೀಡಿ, ಧ್ವಜವಂದನೆ ಸ್ವೀಕರಿಸುವರು. ನಂತರ ಪೊಲೀಸ್, ಹೋಂ ಗಾರ್ಡ್, ಬಾಲಮಂದಿರದ ಮಕ್ಕಳು, ಪಾಲಿಕೆ ಸಿಬ್ಬಂದಿ, ಸ್ಕೌಟ್ಸ್ & ಗೈಡ್ಸ್, ಸೇವಾದಳ, ಶಾಲಾ ಮಕ್ಕಳಿಂದ ಆಕರ್ಷಕ ಪಥಸಂಚಲನ ನಡೆಯಲಿದೆ. ನಂತರ ಶಾಲಾ ಮಕ್ಕಳ ಸಾಮೂಹಿಕ ನೃತ್ಯ ಕಾರ್ಯಕ್ರಮಗಳು ನಡೆಯಲಿದ್ದು, ಅಂದು ಸಂಜೆ 6 ರಿಂದ 9ರವರೆಗೆ ನಗರದ ಕುವೆಂಪು ರಂಗಮAದಿರದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಗಣರಾಜ್ಯೋತ್ಸವದ ಅಂಗವಾಗಿ ನಗರದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ, ನಗರದ ಪ್ರಮುಖ ರಸ್ತೆ, ವರ್ತುಲಗಳಲ್ಲಿ ತಳಿರು-ತೋರಣ ಮತ್ತು ವಿದ್ಯುದ್ದೀಪಗಳಿಂದ ಅಲಂಕರಿಸುವAತೆ ಆಯಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲು ಹಲವು ಸಮಿತಿಗಳನ್ನು ರಚಿಸಲಾಗಿದ್ದು, ಹಲವು ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಉಸ್ತುವಾರಿಗಾಗಿ ನಿಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದಂತೆ ನೋಡಿಕೊಳ್ಳಲು ಕ್ರೀಡಾಂಗಣದ ವೇದಿಕೆ ಆವರಣ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಸೂಕ್ತ ಪೊಲೀಸ್ ಭದ್ರತೆ ಮತ್ತು ಟ್ರಾಫಿಕ್ ವ್ಯವಸ್ಥೆಯನ್ನು ಕಾಪಾಡಲು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದರು.
DC Shivamogga ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆಯನ್ನು ಮುದ್ರಿಸಿ, ವಿತರಿಸಲು ಕ್ರಮವಹಿಸುವಂತೆ ಅಪರ ಜಿಲ್ಲಾಧಿಕಾರಿಗಳು, ಪಾಲಿಕೆ ಆಯುಕ್ತರು, ಜಿ.ಪಂ ಉಪಕಾರ್ಯದರ್ಶಿಗಳು ಹಾಗೂ ತಹಶೀಲ್ದಾರರಿಗೆ ತಿಳಿಸಿದರು. ಪೆರೇಡ್ ಹಾಗೂ ಸುತ್ತಮುತ್ತಲಿನ ಜಾಗವನ್ನು ಮುಂಚಿತವಾಗಿ ಸ್ವಚ್ಚಗೊಳಿಸಿ ಸಿದ್ದಗೊಳಿಸುವುದು, ನೀರಿನ ವ್ಯವಸ್ಥೆ, ಆಸನ ವ್ಯವಸ್ಥೆ, ವೇದಿಕೆ ಸಿದ್ದತೆ, ಸೌಂಡ್ ಸಿಸ್ಟಂ, ವೇದಿಕೆ ಅಲಂಕಾರ ಮಾಡುವಂತೆ ಪಾಲಿಕೆ, ಸಶಸ್ತ್ರ ಮೀಸಲು ಪಡೆ, ಲೋಕೋಪಯೋಗಿ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಕ್ರೀಡಾ ಯುವಜನ ಸಬಲೀಕರಣ ಇಲಾಖೆಗಳ ಅಧಿಕಾರಿಗಳಿಗೆ ತಿಳಿಸಿದರು. ಸರ್ಕಾರದ ಸುತ್ತೋಲೆಯಂತೆ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಮತ್ತು ಕಚೇರಿಗಳಲ್ಲಿ ಪ್ರತಿ ವರ್ಷದಂತೆ ಧ್ವಜಾರೋಹಣಕ್ಕೆ ಸಿದ್ದತೆ ಮಾಡಿಕೊಳ್ಳಬೇಕು ಎಂದರು.
ಸ್ವಾಗತ ಕಮಾನು ಸಿದ್ದತೆ, ಸೂಕ್ತ ಪೊಲೀಸ್ ಭದ್ರತೆ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುದೀಪ ಅಲಂಕಾರ ವ್ಯವಸ್ಥೆ, ಆಂಬುಲೆನ್ಸ್, ಅಗ್ನಿಶಾಮಕ ವಾಹನದ ವ್ಯವಸ್ಥೆ, ಮಕ್ಕಳಿಗೆ ಸಿಹಿ ಹಂಚಿಕೆ ಹಾಗೂ ಆಸ್ಪತ್ರೆ ಮತ್ತು ಇತರೆ ಸಂಸ್ಥೆಗಳಲ್ಲಿ ಹಣ್ಣು, ಸಿಹಿ ಹಂಚಿಕೆ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಿದರು. ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆಯಾದ ಪೆರೇಡ್ ಪ್ರದರ್ಶನದ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಿದರು. ಧ್ವಜಾರೋಹಣದ ನಂತರ ವಿದ್ಯಾರ್ಥಿಗಳಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಿ, ನಿಗದಿತ ವೇಳೆಯಲ್ಲಿ ಮುಗಿಯುವಂತೆ ಕ್ರಮ ಕೈಗೊಳ್ಳಲು ಡಿಡಿಪಿಐ ಮತ್ತು ಬಿಇಓ ಅವರಿಗೆ ಸೂಚನೆ ನೀಡಿದರು. ಸಂಭ್ರಮಾಚರಣೆಯ ಅಂಗವಾಗಿ ಪಾಲಿಕೆ ಮತ್ತು ಶಿಮುಲ್ ವತಿಯಿಂದ ಗಣ್ಯರು ಮತ್ತು ಸಾರ್ವಜನಿಕರಿಗೆ ಸಿಹಿ ಹಂಚಿಕೆ, ಶಾಲಾ ಮಕ್ಕಳಿಗೆ ಉಪಹಾರ ವ್ಯವಸ್ಥೆ ಮಾಡುವಂತೆ ತಿಳಿಸಿದರು.
ಸಂಬAಧಿಸಿದ ಎಲ್ಲ ಅಧಿಕಾರಿಗಳು ಸೂಕ್ತ ಸಿದ್ದತೆಗಳನ್ನು ಮಾಡಿಕೊಂಡು ಆಚರಣೆಯನ್ನು ಯಶಸ್ವಿಗೊಳಿಸಬೇಕು ಹಾಗೂ ಅಂದು ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ತಪ್ಪದೇ ಭಾಗವಹಿಸುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡ, ಕೆಎಸ್‌ಆರ್‌ಪಿ ಕಮಾಂಡೆAಟ್ ಯುವಕುಮಾರ್, ಎಸಿ ಸತ್ಯನಾರಾಯಣ, ಸೂಡಾ ಆಯುಕ್ತರಾದ ವಿಶ್ವನಾಥ ಮುದಜ್ಜಿ, ತಹಶೀಲ್ದಾರ್ ರಾಜೀವ್, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

Actor Yash ಯಶಸ್ವಿ ” ಯಶ್”ಗೆಬರ್ತ್ ಡೇ ‘ಗುಡ್ ವಿಶ್’

0

Actor Yash ನವೀನ್ ಕುಮಾರ್ ಗೌಡ ಅಂದ್ರೆ ಕನ್ನಡಿಗರಿಗೆ ಯಾರೀತ ಅಂತ ಹುಬ್ಬೇರಿಸಬಹುದು. ಅದು ಸಹಜ. ಸಿನಿಮಾರಂಗದಲ್ಲಿ ಪ್ರವೇಶಮಾಡುವಾಗ ಹೆಸರು ಬದಲಿಸುವ ಸಂಪ್ರದಾಯ‌ ನಡೆದು ಬಂದಿದೆ. ಅದರಂತೆ ನವೀನ್ ಕುಮಾರ್ ಕನ್ನಡ ಬೆಳ್ಳಿತೆರೆಯ ಮೇಲೆ ಮಿಂಚಿದಾಗ ಹೆಸರು ಬದಲಾಯಿತು.
ಒಂದು ಸಿನಿಮಾದಿಂದ ಮತ್ತೊಂದಕ್ಕೆ ಪಟಪಟನೇ ಚಿಮ್ಮುತ್ತಾ ಬಂದ ಪ್ರತಿಭಾವಂತ ‘ಯಶ್ ‘ ಈಗ ಜನಜನಿತ.
ಕೆಜಿಎಫ್ ಚಿತ್ರವಂತೂ ಕನ್ಮಚಿತ್ರ ಜಗತ್ತೊಂದೇ ಅಲ್ಲ ಭಾರತೀಯ ಚಿತ್ರರಂಗದ ಹಿರಿಯಣ್ಣಗಳೂ ಬೆರಗಾಗುವಂತೆ ಮಾಡಿದ್ದು ಈಗ ಇತಿಹಾಸ.
Actor Yash ಇಂದು “ಯಶ್” ಜನ್ಮದಿನ .
ಹಾಗಂದೇ ಅವರ ಅಭಿಮಾನಿಗಳಿಗೆಲ್ಲಾ ಸಂಭ್ರಮದ ಕ್ಷಣ.
ಯಶ್..ಕೇವಲ ಸಿನಿಮಾ ಹೆಸರು ಗಳಿಕೆ
ಒಂದೇ ಅಲ್ಲ. ಆರ್ಥಿಕ‌”ಗಳಿಕೆ” ಯನ್ನೂ
ಸಮಾಜಕ್ಕೆ “ಯಶೋಮಾರ್ಗ”ದ ಮೂಲಕ ಹಂಚುತ್ತಿದ್ದಾರೆ.
ಕನ್ನಡದ ಬಹುಪಾಲು ಜನಪ್ರಿಯ ಚಿತ್ರನಟರು ಹೀಗೆ ಒಂದಿಲ್ಲೊಂದು ಸಾಮಾಜಿಕ ಸ್ಪಂದನ ಉಳ್ಳವರಾಗಿದ್ದಾರೆ.
ಡಾ.ರಾಜ್, ಡಾ.ಶಿವರಾಜ್ ಕುಮಾರ್, ಡಾ.ಪುನೀತ್ ರಾಜ್ ಕುಮಾರ್, ದರ್ಶನ್,ಅಂಬರೀಶ್, ಹೀಗೆ ಪಟ್ಟಿ ಬೆಳೆಸಬಹುದು.

ಹ್ಯಾಪಿ ಬರ್ತ್ ಡೆ ಯಶ್….

Department of Railway ಸಂಕ್ರಾಂತಿ ವಿಶೇಷ ತಾಳಗುಪ್ಪ- ಯಶವಂತಪುರ ನಡುವೆ ವಿಶೇಷ ರೈಲುಗಳ ಸಂಚಾರ

0

Department of Railway ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಸುಗಮ ಪ್ರಯಾಣಕ್ಕೆ ಅನುವು ಮಾಡಿಕೊಡಲು, ನೈಋತ್ಯ ರೈಲ್ವೆಯು ಯಶವಂತಪುರ ಮತ್ತು ತಾಳಗುಪ್ಪ ನಿಲ್ದಾಣಗಳ ನಡುವೆ ಎರಡು ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.

ರೈಲು ಸಂಖ್ಯೆ 06585 ಯಶವಂತಪುರ-ತಾಳಗುಪ್ಪ ವಿಶೇಷ ಎಕ್ಸ್‌ಪ್ರೆಸ್ ರೈಲು ದಿನಾಂಕ 13.01.2026 ರಂದು (ಮಂಗಳವಾರ) ರಾತ್ರಿ 10:45ಕ್ಕೆ ಯಶವಂತಪುರದಿಂದ ಹೊರಟು, ಮರುದಿನ ಬೆಳಗಿನ ಜಾವ 04:45ಕ್ಕೆ ತಾಳಗುಪ್ಪ ತಲುಪಲಿದೆ. ಇದರ ಜೋಡಿ ರೈಲು, ರೈಲು ಸಂಖ್ಯೆ 06586 ತಾಳಗುಪ್ಪ-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ದಿನಾಂಕ 14.01.2026 ರಂದು (ಬುಧವಾರ) ಬೆಳಿಗ್ಗೆ 10:00ಕ್ಕೆ ತಾಳಗುಪ್ಪದಿಂದ ಹೊರಟು, ಅಂದೇ ಸಂಜೆ 05:15ಕ್ಕೆ ಯಶವಂತಪುರ ತಲುಪಲಿದೆ.

ಈ ವಿಶೇಷ ರೈಲು ಥಮ ದರ್ಜೆ ಎಸಿ (1), ಎಸಿ ಟು ಟೈರ್ (2), ಎಸಿ ತ್ರೀ-ಟೈರ್ (6), ಸ್ಲೀಪರ್ ಕ್ಲಾಸ್ (8), ಜನರಲ್ ಸೆಕೆಂಡ್ ಕ್ಲಾಸ್ (3) ಮತ್ತು ಎಸ್‌ಎಲ್‌ಆರ್/ಡಿ (2) ಬೋಗಿಗಳು ಸೇರಿದಂತೆ 22 ಬೋಗಿಗಳನ್ನು ಒಳಗೊಂಡಿರುತ್ತದೆ.

ಅದೇ ರೀತಿ, ರೈಲು ಸಂಖ್ಯೆ 06587 ಯಶವಂತಪುರ-ತಾಳಗುಪ್ಪ ವಿಶೇಷ ಎಕ್ಸ್‌ಪ್ರೆಸ್ ರೈಲು ದಿನಾಂಕ 23.01.2026 ರಂದು (ಶುಕ್ರವಾರ) ರಾತ್ರಿ 10:45ಕ್ಕೆ ಯಶವಂತಪುರದಿಂದ ಹೊರಟು, ಮರುದಿನ ಬೆಳಗಿನ ಜಾವ 04:45ಕ್ಕೆ ತಾಳಗುಪ್ಪ ತಲುಪಲಿದೆ. ಇದರ ಜೋಡಿ ರೈಲು, ರೈಲು ಸಂಖ್ಯೆ 06588 ತಾಳಗುಪ್ಪ-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ದಿನಾಂಕ ರೈಲು 24.01.2026 ರಂದು (ಶನಿವಾರ) ಬೆಳಿಗ್ಗೆ 10:00ಕ್ಕೆ ತಾಳಗುಪ್ಪದಿಂದ ಹೊರಟು, ಅದೇ ದಿನ ಸಂಜೆ 05:15 ಕ್ಕೆ ಯಶವಂತಪುರ ತಲುಪಲಿದೆ.

Department of Railway ಈ ವಿಶೇಷ ರೈಲುಗಳು ಎರಡೂ ದಿಕ್ಕುಗಳಲ್ಲಿ ಸಂಚರಿಸುವಾಗ ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ತರೀಕೆರೆ, ಭದ್ರಾವತಿ, ಶಿವಮೊಗ್ಗ ಟೌನ್, ಆನಂದಪುರಂ ಮತ್ತು ಸಾಗರ ಜಂಬಗಾರು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿವೆ.

ಈ ವಿಶೇಷ ರೈಲು ಪ್ರಥಮ ದರ್ಜೆ ಕಮ್ ಎಸಿ ಟು ಟೈರ್ (1), ಎಸಿ ತ್ರೀ-ಟೈರ್ (2), ಸ್ಲೀಪರ್ ಕ್ಲಾಸ್ (10), ಜನರಲ್ ಸೆಕೆಂಡ್ ಕ್ಲಾಸ್ (5) ಮತ್ತು ಎಸ್‌ಎಲ್‌ಆರ್/ಡಿ (2) ಬೋಗಿಗಳು ಸೇರಿದಂತೆ 20 ಬೋಗಿಗಳನ್ನು ಒಳಗೊಂಡಿರುತ್ತದೆ.

ಪ್ರಯಾಣಿಕರು ಈ ವಿಶೇಷ ರೈಲು ಸೇವೆಯ ಲಾಭವನ್ನು ಪಡೆದುಕೊಳ್ಳಲು ಹಾಗೂ ಮುಂಚಿತವಾಗಿ ತಮ್ಮ ಪ್ರಯಾಣವನ್ನು ಯೋಜಿಸಲು ಕೋರಲಾಗಿದೆ.

Shivamogga Traffic Police ಸಂಚಾರಿ ಠಾಣೆ ಮುಖ್ಯಪೇದೆ ಜಕ್ರಿಯಾ ನೇಣಿಗೆ ಶರಣು

0

Shivamogga Traffic Police ಶಿವಮೊಗ್ಗ ಪಶ್ಚಿಮ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ. ಮುಖ್ಯ ಪೇದೆ
ಜಕ್ರಿಯಾ (55)ನೇಣು ಹಾಕಿಕೊಂಡಿದ್ದಾರೆ.

ಕಳೆದ ರಾತ್ರಿ ಠಾಣೆಯಲ್ಲಿ ನೇಣು ಹಾಕಿಕೊಂಡ ಜಕ್ರಿಯಾ ಇಹಲೋಕ ತ್ಯಜಿಸಿದ್ದಾರೆ.

ಇತ್ತೀಚೆಗಷ್ಟೇ ಎಎಸ್ಐ ಆಗಿ ಬಡ್ತಿ ಆದೇಶ ಪಡೆದಿದ್ದ ಜಕ್ರಿಯಾ ಅವರು
ಬಡ್ತಿ ನಿರಾಕರಿಸಿ ಮುಖ್ಯ ಪೇದೆ ಹುದ್ದೆಯಲ್ಲೇ ಮುಂದುವರಿದಿದ್ದರು.
ಕಳೆದ ನಾಲ್ಕೈದು ವರ್ಷದಿಂದ ಪಶ್ಚಿಮ ಟ್ರಾಫಿಕ್ ಠಾಣೆಯಲ್ಲಿ
ಜಕ್ರಿಯಾ ಕರ್ತವ್ಯ ನಿರ್ವಹಿಸುತ್ತಿದ್ದ‌ರು.

Shivamogga Traffic Police ಸ್ಥಳಕ್ಕೆ ಎಸ್ಪಿ ನಿಖಿಲ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Department of Empowerment of the Disabled and Senior Citizens ಸಾಧನ ಯೋಜನೆಯಡಿ ಪ್ರೋತ್ಸಾಹ ಧನ ಪಡೆಯಲು ವಿಶೇಷಚೇತನರಿಂದ ಅರ್ಜಿ ಆಹ್ವಾನ

0

Department of Empowerment of the Disabled and Senior Citizens ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಸಾಧನ ಯೋಜನೆಯಡಿ ಪ್ರೋತ್ಸಾಹ ಧನ ಪಡೆಯಲು ವಿಶೇಷ ಚೇತನರಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.

ಜಿಲ್ಲೆಯ ಅರ್ಹ ಆಸಕ್ತ ವಿಶೇಷ ಚೇತನರು ಸೇವಾಸಿಂಧು ತಂತ್ರಾಂಶ https://sevasindhuservices.kanranatak.gov.in ಪೋರ್ಟಲ್ ಮೂಲಕ ಅಥವಾ ಗ್ರಾಮಾ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಹಾಗೂ ನೇರವಾಗಿಯು ತಮ್ಮ ಲಾಗಿನ್ ಬಳಸಿ ಜ. 31 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

Department of Empowerment of the Disabled and Senior Citizens ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-251676 ಅಥವಾ ತಾ.ಪಂ/ಗ್ರಾ.ಪಂ.ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂ.ಆರ್.ಡಬ್ಲ್ಯೂ/ ಯುಆರ್‌ಡಬ್ಲ್ಯೂ/ ವಿಆರ್‌ಡಬ್ಲ್ಯೂ ಗಳನ್ನು ಸಂರ್ಕಿಸುವುದು.
ಶಿವಮೊಗ್ಗ ಎಂ.ಆರ್.ಡಬ್ಲ್ಯೂ- ಮಲ್ಲಿಕಾರ್ಜುನ್-9980150110, ಭದ್ರಾವತಿ ಎಂ.ಆರ್.ಡಬ್ಲ್ಯೂ -ದಿನೇಶ್ -7899137243, ತೀರ್ಥಹಳ್ಳಿ ಎಂ.ಆರ್.ಡಬ್ಲ್ಯೂ- ದಿವಾಕರ್-9480767638, ಶಿಕಾರಿಪುರ ಎಂ.ಆರ್.ಡಬ್ಲ್ಯೂ- ಹುಚ್ಚರಾಯಪ್ಪ – 9741161346, ಹೊಸನಗರ ಎಂ.ಆರ್.ಡಬ್ಲ್ಯೂ- ರವಿಕುಮಾರ್ -9731922693, ಸಾಗರ ಎಂ.ಆರ್.ಡಬ್ಲ್ಯೂ- ಶ್ಯಾಮ್ ಸುಂದರ್ -9535247757 ಇವರುಗಳನ್ನು ಸಂಪರ್ಕಿಸುವುದು.