Tuesday, April 7, 2026
Tuesday, April 7, 2026
Home Blog Page 1296

COVID -19 ನೆರೆಯ ತಮಿಳ್ನಾಡಿನಲ್ಲಿ ಕೋವಿಡ್ ಕೊಂಚ ಸದ್ದುಮಾಡಿದೆ.ನಾವೂ ಎಚ್ಚರವಿರೋಣ

0

COVID -19 ರಾಜ್ಯದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಸ್ವಲ್ಪ ಏರಿಕೆಯಾದ ನಂತರ ತಮಿಳುನಾಡು ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ.

14 ಪ್ರಕರಣಗಳಲ್ಲಿ ಕೊಯಮತ್ತೂರಿನಲ್ಲಿ ನಾಲ್ಕು, ಚೆನ್ನೈ ನಗರದಲ್ಲಿ ಎರಡು ಮತ್ತು ಚೆಂಗಲ್ಪಟ್ಟು, ಕಾಂಚೀಪುರಂ, ಮಧುರೈ, ತಿರುಚಿ, ವಿರುಧುನಗರ, ಕೃಷ್ಣಗಿರಿ, ತಿರುವಳ್ಳೂರು ಮತ್ತು ತಿರುವರೂರಿನಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿವೆ.

COVID -19 ರಾಜ್ಯ ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಐಎಎನ್‌ಎಸ್ ಜೊತೆ ಮಾತನಾಡುತ್ತಾ, “ಕೋವಿಡ್ ಪ್ರಕರಣಗಳ ಸ್ವಲ್ಪ ಹೆಚ್ಚಳದ ಬಗ್ಗೆ ಭಯಪಡುವ ಅಗತ್ಯವಿಲ್ಲ, ಆದರೆ ನಾವು ರಾಜ್ಯ ಸಾರ್ವಜನಿಕ ಆರೋಗ್ಯ ಇಲಾಖೆಗೆ ಜಾಗರೂಕರಾಗಿರಲು ಮತ್ತು ಮಾದರಿಗಳ ಯಾದೃಚ್ಛಿಕ ಪರೀಕ್ಷೆಯನ್ನು ಹೆಚ್ಚಿಸಲು ಎಲ್ಲಾ ಜಿಲ್ಲಾ ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇವೆ.

ಮಾಸ್ಕ್ ಗಳ ಬಳಕೆ, ನಿಯಮಿತವಾಗಿ ಕೈಗಳನ್ನು ತೊಳೆಯುವುದು ಮತ್ತು ಸುರಕ್ಷಿತ ಅಂತರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನಾವು ಆರೋಗ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇವೆ.

ಮಾಸ್ಕ್ ಧರಿಸುವುದು, ನಿಯಮಿತವಾಗಿ ಕೈ ತೊಳೆಯುವುದು ಮತ್ತು ಸುರಕ್ಷಿತ ಅಂತರ ಸೇರಿದಂತೆ ಕೋವಿಡ್ ಸುರಕ್ಷತಾ ಕ್ರಮಗಳನ್ನು ಕಾಪಾಡಿಕೊಳ್ಳಲು ಪೊಲೀಸರು ವಾಹನ ಚಾಲಕರು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Narendra Modi ಶಿವಮೊಗ್ಗಕ್ಕೆ ಪ್ರಧಾನಿ ಮೋದಿ ಭೇಟಿ ಲೋಕಾರ್ಪಣೆ ಮತ್ತು ಉದ್ಘಾಟನೆಯಾಗುವ ಯೋಜನೆಗಳ ಮಾಹಿತಿ

0

Narendra Modi  ಫೆ.27ರಂದು ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಶಿವಮೊಗ್ಗ ತಾಲೂಕಿನ ಸೋಗಾನೆ ಬಳಿ 3.2 ಕಿ.ಮೀ. ಉದ್ದದ ರನ್ ವೇ ರೂ.600 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ವಿಮಾನ ನಿಲ್ದಾಣದ ಉದ್ಘಾಟನೆಯನ್ನೂ ಸಹ ನೆರವೇರಿಸಲಿದ್ದಾರೆ.

ಇದರೊಂದಿಗೆ ವಿವಿಧ ಯೋಜನೆಗಳ ಲೋಕಾರ್ಪಣೆ ಹಾಗೂ ಭೂಮಿ ಪೂಜೆ ನೆರವೇರಿಸಲಿದ್ದಾರೆ.

ಲೋಕಾರ್ಪಣೆಗೊಳ್ಳಲಿರುವ ಯೋಜನೆಗಳು

ಕೆಎಂಎಫ್ ಪ್ಯಾಕಿಂಗ್ ಕಟ್ಟಡ
ಶಿವಮೊಗ್ಗ ತಾಲೂಕಿನ ಮಾಚೇನಹಳ್ಳಿಯ ಕೆಎಂಎಫ್ ನಿಂದ ರೂ.45 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಪ್ಯಾಕಿಂಗ್ ಕಟ್ಟಡ

Narendra Modi  ಜಲಜೀವನ್ ಮಿಷನ್
ಕುಡಿಯುವ ನೀರು ಯೋಜನೆ 908 ಕಾಮಗಾರಿ ರೂ.213.53 ಕೋಟಿ
ಬಹುಗ್ರಾಮ ಕುಡಿಯುವ ನೀರು ಯೋಜನೆ 1 ಕಾಮಗಾರಿ 91.5 ಕೋಟಿ

ಶಿವಮೊಗ್ಗ ಸ್ಮಾರ್ಟ್ ಸಿಟಿ
ಶಿವಮೊಗ್ಗ ನಗರದ ಒಟ್ಟು 44 ವಿವಿಧ ಯೋಜನೆಗಳು – ರೂ.897.16 ಕೋಟಿಗಳ ಕಾಮಗಾರಿ

ಮ್ಯಾಮ್ ಕೋಸ್ ಆಡಳಿತ ಕಚೇರಿ ಕಟ್ಟಡ
8 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಆಡಳಿತ ಕಚೇರಿ ಕಟ್ಟಡ

ಭೂಮಿ ಪೂಜೆ ಕಾರ್ಯಕ್ರಮ

ರೈಲ್ವೆ ಯೋಜನೆಗಳು
ಶಿವಮೊಗ್ಗ – ಶಿಕಾರಿಪುರ -ರಾಣೆಬೆನ್ನೂರು ರೈಲ್ವೆ ಮಾರ್ಗ
ಸುಮಾರು 103 ಕಿ.ಮೀ.-ರೂ. 1200 ಕೋಟಿ ವೆಚ್ಚ

ಕೋಟೆ ಗಂಗೂರಿನಲ್ಲಿ ರೈಲ್ವೆ ಕೋಚಿಂಗ್ ಡಿಪೋ ಮತ್ತು ಟರ್ಮಿನಲ್ ನಿರ್ಮಾಣ ಸುಮಾರು ರೂ.100 ಕೋಟಿಗಳ ವೆಚ್ಚ

ರಾಷ್ಟ್ರೀಯ ಹೆದ್ದಾರಿ -ರಸ್ತೆ ಮತ್ತು ಸೇತುವೆ
ರಾಷ್ಟ್ರೀಯ ಹೆದ್ದಾರಿ ಯೋಜನೆಯ ಸೇತುವೆಗಳನ್ನೊಳಗೊಂಡಂತೆ 3 ರಸ್ತೆ ಕಾಮಗಾರಿಗಳು 24 ಕಿ.ಮೀ. ಒಟ್ಟು 219.20 ಕೋಟಿ

ಜುಲೈ ಜೀವನ ಮಿಷನ್
ಕುಡಿಯುವ ನೀರು ಯೋಜನೆ 1204 ಕಾಮಗಾರಿ ರೂ.312.51 ಕೋಟಿ
ಬಹು ಗ್ರಾಮ ಕುಡಿಯುವ ನೀರು ಯೋಜನೆ, 3 ಕಾಮಗಾರಿ 862 ಕೋಟಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ
ದೇಶದ ಕಿಸಾನ್ ಸಮ್ಮಾನ್ ಯೋಜನೆಯ 13ನೇ ಕಂತಿನ ಅನುದಾನ ಬಿಡುಗಡೆ
ಜಿಲ್ಲೆಯ 1.55 ಲಕ್ಷ ಫಲಾನುಭವಿಗಳು , ಅಂದಾಜು ಮೊತ್ತ ರೂ.31 ಕೋಟಿ

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Belagavi VTU ಶ್ರೀ ನಿರಜ್ ಅವರಿಗೆ ಬೆಳಗಾವಿ ವಿಟಿಯು ನಿಂದ ಪಿಎಚ್ ಡಿ ಪದವಿ

0

Belagavi VTU ಶಿವಮೊಗ್ಗ ನಗರದ ಜೆ.ಎನ್.ಎನ್. ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ನೀರಜ್ ಎಸ್.ಎನ್. ಅವರು ಮಂಡಿಸಿದ ‘ಮಾಡಲಿಂಗ್ ಆನ್ ಪೆಡೆಸ್ಟ್ರಿಯನ್ ಕ್ರಾಸಿಂಗ್ ಬಿಹೇವಿಯರ್ ಇನ್ ಮಿಕ್ಸೆಡ್ ಟ್ರಾಫಿಕ್ ಕಂಡಿಶನ್ ಅಟ್ ಸಿಗ್ನಲೈಸ್ಡ್ ಇಂಟರ್‌ಸೆಕ್ಷನ್ ಆಫ್ ಬೆಂಗಳೂರು ಸಿಟಿ’ ಮಹಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ ಪಿ.ಹೆಚ್.ಡಿ. ಪದವಿ ನೀಡಿ ಗೌರವಿಸಿದೆ.

Belagavi VTU ಅವರಿಗೆ ಸಹೋದ್ಯೋಗಿಗಳು ಮತ್ತು ಮಿತ್ರರು ಅಭಿನಂದನೆ ಸಲ್ಲಿಸಿದ್ದಾರೆ.

Pancharatna Yatna ಫೆ.28 ಪಂಚರತ್ನಯಾತ್ರೆ ಚಿಕ್ಕಮಗಳೂರು ಜೆಡಿಎಸ್ ಸಕಲಸಜ್ಜು

0

Pancharatna Yatna ಚಿಕ್ಕಮಗಳೂರು ಕ್ಷೇತ್ರದಲ್ಲಿ ಫೆ.28 ರಂದು ಪಂಚರತ್ನ ಯಾತ್ರೆಯ ಕಾರ್ಯಕ್ರಮವು ಸಂಚರಿಸುವ ಹಿನ್ನೆಲೆಯಲ್ಲಿ ಅಂದು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರುಗಳು ಅತ್ಯಂತ ಅದ್ದೂರಿಯಾಗಿ ಯಾತ್ರೆಯನ್ನು ಸ್ವಾಗತಿಸಲು ಸಿದ್ದತೆ ನಡೆಸಲಾಗಿದೆ ಎಂದು ಜೆಡಿಎಸ್ ನಗರ ಮಹಾಪ್ರಧಾನ ಕಾರ್ಯದರ್ಶಿ ಸಿ.ಕೆ.ಮೂರ್ತಿ ಹೇಳಿದ್ದಾರೆ.

ಈ ಸಂಬಂಧ ಹೇಳಿಕೆಯಲ್ಲಿ ತಿಳಿಸಿರುವ ಅವರು ಪಂಚರತ್ನ ಯಾತ್ರೆಯು ತಾಲ್ಲೂಕಿನ ದೇವನೂರು, ಸಖರಾಯಪಟ್ಟಣ, ಲಕ್ಯಾ ಮಾರ್ಗವಾಗಿ ನಗರದ ಎಐಟಿ ಸರ್ಕಲ್‌ಗೆ ಸಮೀಪಿಸುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಸ್ವಾಗತಿಸಲು ಮುಂದಾಗಲಾಗುವುದು ಎಂದು ತಿಳಿಸಿದ್ದಾರೆ.

ಯಾತ್ರೆಯು ನಗರಕ್ಕೆ ಸಮೀಪಿಸುವ ಮೊದಲನೇ ಸುಮಾರು ಮೂರು ಸಾವಿರ ಮಂದಿ ಬೈಕ್‌ಜಾಥಾದ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ನಂತರ ಎಐಟಿ ಸರ್ಕಲ್ ತಲುಪಿ ಪಂಚರತ್ನ ಯಾತ್ರೆ ಹಾಗೂ ಹೆಚ್.ಡಿ.ಕುಮಾರಸ್ವಾಮಿಯವರನ್ನು ಮೆರವಣಿಗೆ ಮೂಲಕ ಕರೆತರಲಾಗುವುದು ಎಂದಿದ್ದಾರೆ.

Pancharatna Yatna ಪಂಚರತ್ನ ಯಾತ್ರೆಯ ಮೆರವಣಿಗೆಯು ಹನುಮಂತಪ್ಪ ಸರ್ಕಲ್ ಬಂದಾಕ್ಷಣ ಡೊಳ್ಳುಕುಣಿತ, ಡಿ.ಜೆ. ಸೇರಿದಂತೆ ಐವತ್ತು ಹೆಚ್ಚು ಕಲಾತಂಡಗಳೊಂದಿಗೆ ಆಜಾದ್‌ಪಾರ್ಕ್ವರೆಗೆ ಹತ್ತು ಸಾವಿರಕ್ಕೂ ಹೆಚ್ಚು ಕಾರ್ಯಕರ್ತ ರು, ಮುಖಂಡರುಗಳು ಹಾಗೂ ಅಭಿಮಾನಿಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬೃಹತ್ ಬಹಿರಂಗ ಸಭೆ ನಡೆಯಲಿದ್ದು ನಂತರ ತೇಗೂರು ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಮುಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಕೆ. ಇಬ್ರಾಹಿಂ, ಜಿಲ್ಲಾಧ್ಯಕ್ಷ ರಂಜನ್‌ ಅಜಿತ್‌ಕುಮಾರ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ, ಕ್ಷೇತ್ರದ ಅಭ್ಯರ್ಥಿ ಬಿ.ಎಂ.ತಿಮ್ಮಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಪಂಚರತ್ನ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shimogga Airport Inauguration ವಿಮಾನ ನಿಲ್ದಾಣ ಉದ್ಘಾಟನೆಗೆ ಸಾರ್ವಜನಿಕರ ಬದಲಾಗಿ ವಿದ್ಯಾರ್ಥಿಗಳನ್ನು ಸೇರಿಸುತ್ತಿರುವುದು ನ್ಯಾಯವೇ ? ಬೇಲೂರು ಗೋಪಾಲಕೃಷ್ಣ

0

Shimogga Airport Inauguration  ಫೆ. 27ರಂದು ಶಿವಮೊಗ್ಗವಿಮಾನ ನಿಲ್ದಾಣ ಉದ್ಘಾಟನೆಗೊಳ್ಳಲಿದೆ.ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಮಾಡಲಿದ್ದಾರೆಂದು ಎಲ್ಲಾ ಕಾಲೇಜಿಗೆ ಹೋಗಿ ವಿದ್ಯಾರ್ಥಿಗಳನ್ನು ಕಳುಹಿಸುವಂತೆ ದುಂಬಾಲು ಬೀಳಲಾಗುತ್ತಿದೆ.

Shimogga Airport Inauguration ಶಾಲಾ ಕಾಲೇಜುಗಳ ಬಾಗಿಲು ಮುಚ್ಚಿ ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಕಳುಹಿಸಿ ಎಂದು ಹೇಳುತ್ತಿದ್ದಾರೆ. ಕಾರ್ಯಕ್ರಮಕ್ಕೆ ಸಾರ್ವಜನಿಕರನ್ನ ಸೇರಿಸುವ ಬದಲು ವಿದ್ಯಾರ್ಥಿಗಳನ್ನು ಸೇರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿ ಬಿಜೆಪಿಗೆ ಬರಬಾರದಿತ್ತು .ಇದು ಯಾಕೆಂದು ತನಿಖೆಯಾಗಬೇಕು ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.

ಇದಲ್ಲದೆ ಈ ಸಂಬಂಧ ಕಾಂಗ್ರೆಸ್​ ಪಕ್ಷದ ಎನ್‍ಎಸ್‍ಯುಐ ಘಟಕ ಇದರ ವಿರುದ್ಧ ಹೋರಾಟ ನಡೆಸಲಿದೆ ಎಂದು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ .

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Sumukha Urban Rural Development Trust ಸಮುಖ ಅರ್ಬನ್ ಅಂಡ್ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ವತಿಯಿಂದ ಅಸಹಾಯಕ ವೃದ್ದರಿಗಾಗಿ ವೃದ್ಧಾಶ್ರಮ

0

Sumukha Urban Rural Development Trust  ಸಮುಖ ಅರ್ಬನ್ ಅಂಡ್ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ಶಿವಮೊಗ್ಗ ಈ ಸಂಸ್ಥೆಯು ಸುಮಾರು ನಾಲ್ಕು ವರ್ಷದಿಂದ ಶಿವಮೊಗ್ಗ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ.

Sumukha Urban Rural Development Trust  ಇದರೊಂದಿಗೆ ಅಸಹಾಯಕ ಹೆಣ್ಣು ಮಕ್ಕಳಿಗೆ ಹಾಗೂ ವೃದ್ಧರಿಗೆ ವೃದ್ಧಾಶ್ರಮವನ್ನು ತೆರೆದಿದ್ದು ವೃದ್ಧರಿಗೆ ಆಶ್ರಯ ನೀಡುತ್ತಿದೆ.
ಈ ಸಂಸ್ಥೆಯು ವೃದ್ದಾಶ್ರಮದಲ್ಲಿ ಶುಚಿತ್ವ ವಾತಾವರಣ , ವಸತಿ , ಊಟ, ಆರೈಕೆ, ಉಚಿತ ಸೇವೆ ನೀಡುತ್ತಿದೆ.
ಅಸಹಾಯಕರು ವೃದ್ದರು ಇಲ್ಲಿ ಆಶ್ರಯ ಪಡೆಯಬಹುದಾಗಿದೆ.

ಈ ಟ್ರಸ್ಟ್ ನಲ್ಲಿ ದೊರೆಯುವಂತಹ ಎಲ್ಲಾ ಸವಲತ್ತುಗಳನ್ನು ನಗರ ಮತ್ತು ಗ್ರಾಮೀಣ ಭಾಗಗಳಲ್ಲಿರುವ ಅಸಹಾಯಕ ಹೆಣ್ಣು ಮಕ್ಕಳು ಹಾಗೂ ವೃದ್ದರು ಪಡೆಯಬೇಕೆಂದು ಸಮುಖ ಅರ್ಬನ್ ಅಂಡ್ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ಆಡಳಿತ ಮಂಡಳಿ ತಿಳಿಸಿದೆ

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Sarji Foundation Shimogga ಮನುಷ್ಯ ಜನ್ಮ ಬೇರೆಲ್ಲಾ ಜೀವಿಗಳಿಗಿಂತ ಶ್ರೇಷ್ಠ – ಡಾ.ಧನಂಜಯ ಸರ್ಜಿ

0

Sarji Foundation Shimogga ಮೆದುಳು ಮಾನವನ ಅತ್ಯಂತ ಶ್ರೇಷ್ಠ ಅಂಗವಾಗಿದ್ದು, ಸಂಪೂರ್ಣ ನಡತೆಯನ್ನು ನಿಗ್ರಹಿಸುತ್ತದೆ ಎಂದು ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್‌ ಟ್ರಸ್ಟಿ ಡಾ. ಧನಂಜಯ ಸರ್ಜಿ ಹೇಳಿದರು.

ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಕ್ಯಾಂಪಸ್‌ನಲ್ಲಿ ಪಾಥ್‌ವೇಸ್‌ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

Sarji Foundation Shimogga  ಮನುಷ್ಯನ ದೇಹವು ಭಗವಂತನಿಂದ ರಚಿಸಲ್ಪಟ್ಟಿದ್ದು, ಮೆದುಳು ಶ್ರೇಷ್ಠ ಅಂಗವಾಗಿದ್ದು, ಹಲವಾರು ವಿಶೇಷತೆಗಳನ್ನು ಹೊಂದಿರುವ ಮಾನವರಾದ ನಾವು ಬುದ್ದಿವಂತಿಕೆಯಿಂದಾಗಿ ಬೇರೆಲ್ಲಾ ಜೀವಿಗಳಿಗಿಂತಲೂ ಸರ್ವ ಶ್ರೇಷ್ಠರಾಗಿದ್ದೇವೆ. ನಮಗಿರುವ ಸಾಮರ್ಥ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದ ಅವರು ವಿದ್ಯಾರ್ಥಿಗಳಿಗೆ ಮೆದುಳಿನ ಬಗ್ಗೆ ಸಂಪೂರ್ಣ ವೈಜ್ಞಾನಿಕ ಮಾಹಿತಿ ನೀಡಿದರು.

ಸಹ್ಯಾದ್ರಿ ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಎ ಎಸ್‌ ಚಂದ್ರಶೇಖರ್‌ ಮಾತನಾಡಿ, ವಿದ್ಯೆಯೇ ಸರ್ವಸ್ವ, ವಿದ್ಯಾರ್ಥಿಗಳೇ ನಮ್ಮ ಮುಂದಿನ ಆಸ್ತಿ. ಸಮಯವನ್ನು ಹರಣ ಮಾಡದೇ ಭವಿಷ್ಯದ ಬಗ್ಗೆ ಉನ್ನತ ಗುರಿ ಹೊಂದುವ ಮೂಲಕ ಯಶಸ್ಸು ಕಾಣುವಂತೆ ಸಲಹೆ ನೀಡಿದರು.

ನಂತರ ಪಾಥ್ವೇಸ್‌ನ ಹಿರಿಯ ವಿದ್ಯಾರ್ಥಿ ಶಿವಕುಮಾರ್‌ ಅವರು ತಮ್ಮ ಹಿಂದಿನ ದಿನಗಳನ್ನು ಮೆಲಕು ಹಾಕಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎನ್‌ ರಾಜೇಶ್ವರಿ ವಹಿಸಿದ್ದರು, ಪಾಥ್ವೇಸ್‌ ಘಟಕದ ನಿರ್ದೇಶಕರಾದ ಪ್ರೊ. ಸಿ.ಕೆ.ರಮೇಶ್‌, ಪ್ರೊ. ಎಂ ಕೆ ವೀಣಾ, ಪ್ರೊ. ಕೆ.ಬಿ.ಧನಂಜಯ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

City corporation Shivamogga ಮಹಾನಗರ ಪಾಲಿಕೆ ಬಜೆಟ್ ಮಂಡನೆಗೆ ವಿರೋಧಪಕ್ಷದ ವಿರೋಧ

0

City corporation Shivamogga  ಪಾಲಿಕೆಯಲ್ಲಿ ಮಂಡಿಸಿರುವ ಬಜೆಟ್ ಮನೆಗೂ ಅಲ್ಲ ,ಸ್ಮಶಾನಕ್ಕೂ ಅಲ್ಲ. ಇದು ಕನ್ನಡಿಯೊಳಗಿನ ಗಂಟು ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಕನ್ನಡಿ ಹಿಡಿದು ಪಾಲಿಕೆ ಆವರಣದಲ್ಲಿ ಪ್ರತಿಭಟಸಿದರು.

ಬಜೆಟ್ ಮಂಡನೆ ನಂತರ ಹಿಂದಿನ ವರ್ಷದ ಖರ್ಚು ವೆಚ್ಚದ ಕುರಿತು ಸಭೆಯಲ್ಲಿ ಚರ್ಚೆಗೆ ಆಸ್ಪದ ಕೊಡಿ ಎಂದು ವಿರೋಧ ಪಕ್ಷದ ಸದಸ್ಯರು ಕೇಳಿಕೊಂಡರು.

City corporation Shivamogga  2023-24ನೇ ಸಾಲಿನ ಬಜೆಟ್ ನಲ್ಲಿ ಲವ ಕುಶ ಮಕ್ಕಳ ಕಲ್ಯಾಣ ಯೋಜನೆ ಅಡಿ ಪಾಲಿಕೆ ವ್ಯಾಪ್ತಿಯಲ್ಲಿ ಮಕ್ಕಳಲ್ಲಿ ಕಲೆ, ನಾಟಕ, ಆಟ ಇತ್ಯಾದಿ ವಿಕಾಸಕ್ಕಾಗಿ ಬಾಲ ವಿಕಾಸ ಕೇಂದ್ರಗಳ ಮೂಲಕ ಚಟುವಟಿಕೆ ರೂಪಿಸಲು 10 ಲಕ್ಷ ಮೀಸಲಿರಿಸಲಾಗಿದೆ ಎಂದು ಹೇಳುತ್ತಿದ್ದಾರೆ.

ಆದರೆ ಕಳೆದ ಬಜೆಟ್ ನಲ್ಲಿಯೂ ಕೂಡ ಇದೆ ಯೋಜನೆಗೆ 10 ಲಕ್ಷ ಮೀಸಲಿಡಲಾಗಿತ್ತು . ಆದರೆ ಅದರಲ್ಲಿ ಒಂದು ರೂಪಾಯಿ ಕೂಡ ಬಳಕೆಯಾಗಿಲ್ಲ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್, ಚನ್ನಬಸಪ್ಪ, ರಮೇಶ್ ಹೆಗಡೆ, ಎಚ್ ಸಿ ಯೋಗೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

VISL Industry ವಿ ಐಎಸ್ ಎಲ್ ಮುಚ್ಚದಂತೆ ಒತ್ತಾಯಿಸಿ ಭದ್ರಾವತಿ ಬಂದ್ ಸಂಪೂರ್ಣ

0

VISL Industry ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್‌ಎಲ್)ಯನ್ನು ಮುಚ್ಚುವ ನಿರ್ಧಾರ ಕೈಬಿಟ್ಟು, ಬಂಡವಾಳ ತೊಡಗಿಸಿ ಪುನಶ್ಚತನಗೊಳಿಸಬೇಕು ಎಂದು ಆಗ್ರಹಿಸಿ ಕಾರ್ಮಿಕರು ಹಾಗೂ ನಗರದ ವಿವಿಧ ಸಂಘಟನೆಗಳು ಕರೆ ನೀಡಿದ್ದ ‘ಭದ್ರಾವತಿ ಬಂದ್‌’ ಯಶಸ್ವಿಯಾಗಿದೆ.

VISL Industry ಬಸ್ ನಿಲ್ದಾಣದ ಎದುರಿನ ವೃತ್ತ ಹಾಗೂ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನ ಕಾರರು ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ವ್ಯಾಪಾರಸ್ಥರು ಸ್ವಯಂ- ಪ್ರೇರಿತರಾಗಿ ಅಂಗಡಿಗಳನ್ನು ಬಂದ್‌ ಮಾಡಿದರು.
ಬೆಳಿಗ್ಗೆಯಿಂದಲೇ ಬಂದ್‌ಗೆ ವ್ಯಾಪಕ ಪ್ರತಿಕ್ರಿಯೆ ದೊರೆಯಿತು.

ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಬಸ್ ಮತ್ತು ಆಟೋ ಸಂಚಾರ ಕಂಡುಬರಲಿಲ್ಲ. ಸರ್ಕಾರಿ ಕಚೇರಿಗಳು ತೆರೆದಿದ್ದರೂ ನೌಕರರು ಬರಲಿಲ್ಲ. ಶಾಲೆ ಕಾಲೇಜುಗಳನ್ನೂ ಬಂದ್ ಮಾಡಲಾಗಿತ್ತು.

ವಿಐಎಸ್ ಎಲ್ ಗೇಟ್ ಮುಂಭಾಗದಿಂದ ಬಿ‌.ಎಚ್.ರಸ್ತೆ, ರಂಗಪ್ಪ ವೃತ್ತದ ಮೂಲಕ ತಾಲ್ಲೂಕು ಕಚೇರಿವರೆಗೆ ಪ್ರತಿಭಟನಾಕಾರರು ಮೆರವಣಿಗೆ ನಡೆಸಿ, ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Vasudeva Kutumbakam ವಸುದೇವ ಕುಟುಂಬಕಃನಿಂದ ವಿಶ್ವಶಾಂತಿ ಸಾಧ್ಯ

0

Vasudeva Kutumbakam ಅರಿವು-ಶಾಂತಿ-ಸಾಮರಸ್ಯದ ದಿನವನ್ನು ರೋಟರಿ ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಿಸುತ್ತಿದ್ದು, ನಮ್ಮ ಪೂರ್ವಜರು ಹೇಳಿದ “ವಸುದೇವ ಕುಟುಂಬಕಃ” ಪಾಲಿಸಿದಾಗ ಮಾತ್ರ ವಿಶ್ವ ಶಾಂತಿ ಹೊಂದಲು ಸಾಧ್ಯ ಎಂದು ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಹೇಳಿದರು.

ಶಿವಮೊಗ್ಗ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿ ಹಾಗೂ ಎಲ್ಲ ಕ್ಲಬ್‌ಗಳ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

Vasudeva Kutumbakam ಶತಮಾನಗಳ ಹಿಂದೆಯ “ಕಾಯಕವೇ ಕೈಲಾಸ” ಎಂದು ಹೇಳಿದ ಎಲ್ಲ ಮಹನಿಯರ ಮಾತು ಇಂದಿಗೂ ಪ್ರಸ್ತುತ. ಮಹನೀಯರ ಹೊರತುಪಡಿಸಿ ಇನ್ನುಳಿದ ಜನರನ್ನು ಎಲ್ಲರೂ ಮರೆತುಹೋಗಿದ್ದಾರೆ. ಕಾರಣ ಸ್ವಾರ್ಥಿಯಾದವರನ್ನು ಎಲ್ಲರೂ ಮರೆಯುತ್ತಾರೆ. ರೋಟರಿ ಜನ್ಮ ದಿನವನ್ನು ವಿಶ್ವ ಅರಿವಿನ ದಿನವಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಕನ್ನಡದ ಹಲವಾರು ಕವಿತೆಗಳನ್ನು ಉದಾಹರಿಸಿ, ಎಲ್ಲರೂ ನಿಸ್ವಾರ್ಥದಿಂದ ಸೇವೆ ಮಾಡಿದಾಗ ಮಾತ್ರ ಸರ್ವರೂ ಸಮೃದ್ಧಿಯಿಂದ ಬದುಕು ಸಾಗಿಸಲು ಸಾಧ್ಯ.. ಈ ನಿಟ್ಟಿನಲ್ಲಿ ರೋಟರಿ ಸಂಸ್ಥೆಯು ಹಲವಾರು ಕಾರ್ಯಕ್ರಮ ಹಾಕಿಕೊಂಡು ಸೇವಾ ಚಟುವಟಿಕೆ ನಡೆಸುವ ಮೂಲಕ ಮನೆ ಮಾತಾಗಿದೆ ಎಂದರು.

ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿ ಅಧ್ಯಕ್ಷ ಎನ್.ಜೆ.ಸುರೇಶ್ ಮಾತನಾಡಿ, ಜನಸಾಮಾನ್ಯರನ್ನು ಕಾಡುತ್ತಿದ್ದ ಮಾರಕ ಕಾಯಿಲೆಗಳನ್ನು ವಿಶ್ವದಿಂದ ಹೊಡೆದೊಡಿಸಿದ ಯಶಸ್ಸು ರೋಟರಿ ಸಂಸ್ಥೆಗೆ ಇದೆ. ಇದರಿಂದ ಶಾಂತಿಯುತ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.

ರೋಟರಿ ವಲಯ 11ರ ಸಹಾಯಕ ಗವರ್ನರ್ ಡಾ. ಗುಡದಪ್ಪ ಕಸಬಿ ಪ್ರಾಸ್ತಾವಿಕವಾಗಿ ಮಾತನಾಡಿ, ರೋಟರಿ ಸಂಸ್ಥೆಯು ಪ್ರಾರಂಭಗೊಂಡ ಕೊಠಡಿ ಚಿಕಾಗೊದಲ್ಲಿ ಇಂದಿಗೂ ಯಾತ್ರಾಸ್ಥಳದಂತೆ ಕಂಗೊಳಿಸುತ್ತಿದೆ. ಸೇವಾ ಕಾರ್ಯಗಳಲ್ಲಿ ರೋಟರಿ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.

ರೋಟರಿ ವಲಯ 10ರ ಸಹಾಯಕ ಗವರ್ನರ್ ಸುನೀತಾ ಶ್ರೀಧರ್, ದೇವೇಂದ್ರಪ್ಪ, ವೀಣಾ ಸುರೇಶ್, ಮಂಜುಳಾ ರಾಜು, ಎನ್.ವಿ.ಭಟ್, ರೇವಣಸಿದ್ದಪ್ಪ, ಸುಮತಿ, ಚಂದ್ರು, ಜಗದೀಶ್ ಸರ್ಜ, ಜಿ.ವಿಜಯ್ ಕುಮಾರ್, ಮಾಜಿ ಜಿಲ್ಲಾ ರಾಜಪಾಲ ಪ್ರೊ. ಎ.ಎಸ್.ಚಂದ್ರಶೇಖರ್, ಎಂ.ಜಿ.ರಾಮಚಂದ್ರಮೂರ್ತಿ, ಆನಂದ ಮೂರ್ತಿ, ಎಲ್ಲ ಕ್ಲಬ್ ಅಧ್ಯಕ್ಷರು ಹಾಗೂ ನಗರದ ಎಲ್ಲ ಎಂಟು ಕ್ಲಬ್‌ಗಳ ಕಾರ್ಯದರ್ಶಿಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.