Tuesday, April 7, 2026
Tuesday, April 7, 2026
Home Blog Page 1295

Shikaripur Constituency ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧೆ ಖಚಿತ

0

Shikaripur  Constituency ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಮಾದ್ಯಮದೊಂದಿಗೆ ಮಾತನಾಡಿದ್ದು, ಬಿ.ಎಸ್​ಯಡಿಯೂರಪ್ಪಗೆ ಶಿಕಾರಿಪುರ ರಾಜಕೀಯ ಜನ್ಮ ಕೊಟ್ಟಿದೆ, ಈಗ ಅದೇ ಕ್ಷೇತ್ರದಿಂದಲೇ ನನ್ನ ರಾಜಕೀಯ ಜೀವನ ಆರಂಭ ಆಗುತ್ತಿದೆ ಎಂದರು.

Shikaripur  Constituency ಶಿವಮೊಗ್ಗ ನೂತನ ಏರ್ಪೋರ್ಟ್ ಮೋದಿಯಿಂದ ಉದ್ಘಾಟನೆಯಾಗಿದೆ. ಇದು ಬಿ.ಎಸ್​.ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ವಿಶೇಷ ಕೊಡುಗೆ. ಬಿಎಸ್​ವೈ ಕನಸು ನನಸಾಗಿದೆ. ಮೋದಿ ಏರ್​ಪೋರ್ಟ್​ ಉದ್ಘಾಟನೆ ಮಾಡಿರುವುದು ಸಂತಸ ತಂದಿದೆ. ಯಡಿಯೂರಪ್ಪ ಮಾರ್ಗದರ್ಶನದಲ್ಲೇ ನಾನು ಕೂಡ ಹೋಗುತ್ತೇನೆ. ಬಿಎಸ್​ವೈ ಅವರೇ ನಮಗೆ ದೊಡ್ಡ ರಾಜಕೀಯ ಗುರು. ಶಿಕಾರಿಪುರ ಬಿಎಸ್​ವೈ ಅವರಿಗೆ ರಾಜಕೀಯ ಜನ್ಮ ಕೊಟ್ಟಿದೆ. ಈಗ ಅದೇ ಕ್ಷೇತ್ರದಿಂದ ನನ್ನ ರಾಜಕೀಯ ಜೀವನ ಆರಂಭ ಆಗುತ್ತಿದೆ ಈ ಮೂಲಕ ಟಿಕೆಟ್ ಸಿಗುವುದು ಖಚಿತ ಎಂದಿದ್ದಾರೆ.

ಪಕ್ಷ ಸಂಘಟನೆ ಜವಾಬ್ದಾರಿ ಕೊಟ್ಟಿದೆ. ಅದರಂತೆ ರಾಜ್ಯದೆಲ್ಲೆಡೆ ಪಕ್ಷ ಸಂಘಟನೆ ಮಾಡುತ್ತೇನೆ. ಚುನಾವಣೆ ಬಂದಾಗ ವಿಪಕ್ಷಗಳಿಗೆ ಅನುಕಂಪ ಬರುತ್ತದೆ. ಮೋದಿ ಅವರೇ ವಿಮಾನ ನಿಲ್ದಾಣ ಉದ್ಘಾಟನೆ ಮೂಲಕ ವಿಪಕ್ಷಗಳಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಬಿವೈ ವಿಜಯೇಂದ್ರ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ook Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

B.S.Yediyurappa ಶ್ರೀಯಡಿಯೂರಪ್ಪನವರು ಮಲೆನಾಡಿಗೇ ಒಂದು ಕಾಣಿಕೆ-ಬಸವರಾಜ ಬೊಮ್ಮಾಯಿ

0

ಬಿ.ಎಸ್.ಯಡಿಯೂರಪ್ಪನವರ ಹುಟ್ಟುಹಬ್ಬಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಶುಭಹಾರೈಸಿದ್ದಾರೆ.

B.S.Yediyurappa ಯಡಿಯೂರಪ್ಪನವರು ಮಲೆನಾಡಿಗೆ ಒಂದು ಕಾಣಿಕೆ.‌ ನಮ್ಮ ನಾಯಕರಾದ ಯಡಿಯೂರಪ್ಪ ಅವರ ಕನಸು ನನಸಾಗುತ್ತಿದೆ. ಮಲೆನಾಡಿನ ಅಭಿವೃದ್ಧಿಗೆ ಅವರು ಬಹಳವೇ ಶ್ರಮಿಸಿದ್ದಾರೆ. ಅವರ ಪರಿಶ್ರಮದ ಫಲವಾಗಿ ಇಂದು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಸ್ಥಾಪಿತವಾಗಿದೆ ಎಂದಿದ್ದಾರೆ.

B.S.Yediyurappa ಮಾಧ್ಯಮ ಪ್ರತಿನಿಧಿಗಳಿಗೊಂದಿಗೆ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾಲದಲ್ಲಿ ಅತಿ ಹೆಚ್ಚು ವಿಮಾನ ನಿಲ್ದಾಣ ಸ್ಥಾಪನೆಯಾಗಿವೆ. ಈ ಭಾಗದಲ್ಲಿ ಜನರಿಗೆ ವಿಮಾನ ನಿಲ್ದಾಣದಿಂದ ಬಹಳಷ್ಟು ಅನುಕೂಲವಾಗಲಿದೆ. ಅಲ್ಲದೆ, ಇದು ಯಡಿಯೂರಪ್ಪ ಅವರ ಹುಟ್ಟುಹಬ್ಬದಂದೇ ಉದ್ಘಾಟನೆಯಾಗುತ್ತಿರುವುದು ದೈವಿಚ್ಛೆ ಎಂದು ಹೇಳಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

CM Bommayi ಶೀಘ್ರವೇ ರಾಜ್ಯ ಸರ್ಕಾರಿ ನೌಕರರಿಗೆ 7 ನೇ ವೇತನ ಆಯೋಗದ ಶಿಫಾರಸು ಜಾರಿ – ಸೀಎಂ ಬೊಮ್ಮಾಯಿ

0

CM Bommayi ರಾಜ್ಯ ಸರ್ಕಾರಿ ನೌಕರರಿಗೆ ಶೀಘ್ರವೇ ಸಿಹಿ ಸುದ್ದಿ ಸಿಗಲಿದೆ. 7ನೇ ವೇತನ ಆಯೋಗದ ಶಿಫಾರಸು ಜಾರಿ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದರು.

CM Bommayi ಸರ್ಕಾರಿ ನೌಕರರ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧವಾಗಿದೆ. 7ನೇ ವೇತನ ಆಯೋಗ ಶಿಫಾರಸು ಜಾರಿಗೆ ಅಗತ್ಯವಿರುವ ಹಣ ನೀಡಲಾಗುವುದು ಎಂದು ಗುಲ್ಬರ್ಗ ವಿವಿಯಲ್ಲಿ ಮುಕ್ತಾಯಗೊಂಡ ಕಲ್ಯಾಣ ಕರ್ನಾಟಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ಕಲ್ಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ಅವಧಿಗೆ ಮೊದಲೇ ವೇತನ ಆಯೋಗ ರಚಿಸಿದ್ದು ಇತಿಹಾಸದಲ್ಲೇ ಇದೇ ಮೊದಲಾಗಿದ್ದು, ಇದು ಮುಖ್ಯಮಂತ್ರಿಗಳು ಮತ್ತು ಸರ್ಕಾರಕ್ಕೆ ಸರ್ಕಾರಿ ನೌಕರರ ಬಗ್ಗೆ ಇರುವ ಕಾಳಜಿಯಾಗಿದೆ ಎಂದು ಹೇಳಿದರು.

ಯಾವುದೇ ಕಾರಣಕ್ಕೂ ಸರ್ಕಾರಿ ನೌಕರರು ಮುಷ್ಕರ ನಡೆಸಬಾರದು. ರಾಜ್ಯದ ಜನರ ಹಿತ ದೃಷ್ಟಿಯಿಂದ ಸರ್ಕಾರದೊಂದಿಗೆ ಸಹಕರಿಸಬೇಕು. ನಾನು ನೀಡಿದ ಮಾತಿನಂತೆ 7ನೇ ವೇತನ ಆಯೋಗ ರಚಿಸಿದ್ದು, ನೌಕರರ ಸಂಘದ ಬೇಡಿಕೆ ಈಡೇರಿಸಿದ್ದೇನೆ. ವೇತನ ಆಯೋಗದ ಅಧ್ಯಕ್ಷರು ಮಧ್ಯಂತರ ವರದಿ ನೀಡಿದರೆ ಹಣ ಮೀಸಲಿಡಲು ಸಿದ್ಧವಿದ್ದೇವೆ. ಮೊದಲು ವರದಿ ಬರಲಿ, ನೌಕರರ ಸಂಘದವರು ಸ್ವಲ್ಪ ತಾಳ್ಮೆಯಿಂದ ಇದ್ದರೆ ಎಲ್ಲವೂ ಸರಿಯಾಗುತ್ತದೆ ಎಂದು ಸಿಎಂ ತಿಳಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Recruitment In Karnataka Police ಕರ್ನಾಟಕ ಪೊಲೀಸ್ ತಾಂತ್ರಿಕ ಸಿಬ್ಬಂದಿ ಹುದ್ದೆ ನೇಮಕಾತಿ

0

Recruitment In Karnataka Police ಫೆಬ್ರವರಿ 2023 ರ ಕೆ ಎಸ್ ಪಿ ಅಧಿಕೃತ ಅಧಿಸೂಚನೆಯ ಮೂಲಕ ತಾಂತ್ರಿಕ ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ರಾಜ್ಯ ಪೊಲೀಸ್ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು ಇಂದೇ ಕೆಎಸ್​ಪಿಯ 25 ತಾಂತ್ರಿಕ ಸಿಬ್ಬಂದಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

Recruitment In Karnataka Police ಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನ ಅರಸುತ್ತಿರುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 08-ಮಾರ್ಚ್ 2023 ರಂದು ಅಥವಾ ಮೊದಲು ಆಫ್‌ಲೈನ್‌ ಮೋಡ್​ನಲ್ಲಿ ಅರ್ಜಿ ಸಲ್ಲಿಸಿ. ಈ ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು, ಎಷ್ಟು ವೇತನ ಸಿಗಲಿದೆ, ಅರ್ಜಿ ಸಲ್ಲಿಸುವುದು ಹೇಗೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

KSP ಹುದ್ದೆಯ ವಿವರಗಳು

ಬೋಟ್ ಕ್ಯಾಪ್ಟನ್ 6 ಹುದ್ದೆಗಳು ಖಾಲಿ
ಸಹಾಯಕ ಬೋಟ್ ಕ್ಯಾಪ್ಟನ್ 7 ಹುದ್ದೆಗಳು ಖಾಲಿ
ಮೋಟಾರ್ ಲಾಂಚ್ ಮೆಕ್ಯಾನಿಕ್ 2 ಹುದ್ದೆಗಳು ಖಾಲಿ
ಇಂಜಿನ್ ಡ್ರೈವರ್ 10 ಹುದ್ದೆಗಳು ಖಾಲಿ
ಲಿಖಿತ ಪರೀಕ್ಷೆ ಮತ್ತು ಮೌಖೀಕ ಸಂದರ್ಶನ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

KSP ಹುದ್ದೆಯ ಅಧಿಸೂಚನೆ

ಸಂಸ್ಥೆಯ ಹೆಸರು: ಕರ್ನಾಟಕ ರಾಜ್ಯ ಪೊಲೀಸ್ (KSP)
ಹುದ್ದೆಗಳ ಸಂಖ್ಯೆ: 25
ಉದ್ಯೋಗ ಸ್ಥಳ: ಕರ್ನಾಟಕ
ಹುದ್ದೆಯ ಹೆಸರು: ತಾಂತ್ರಿಕ ಸಿಬ್ಬಂದಿ
ಸಂಬಳ: ಕೆಎಸ್‌ಪಿ ನಿಯಮಗಳ ಪ್ರಕಾರ

ಅರ್ಜಿ ಸಲ್ಲಿಸುವುದು ಹೇಗೆ?

ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಅಂದರೆ ಅಂಚೆ ಅಥವಾ ಇನ್ನಿತರ ವಿಧಾನಗಳ ಮೂಲಕ ಅರ್ಜಿಗಳನ್ನು ಕಳುಹಿಸಬಹುದು.

KSP ತಾಂತ್ರಿಕ ಸಿಬ್ಬಂದಿ ಉದ್ಯೋಗಗಳು 2023 ಗೆ ಅರ್ಜಿ ಸಲ್ಲಿಸಲು ಕ್ರಮಗಳು

ಮೊದಲನೆಯದಾಗಿ KSP ನೇಮಕಾತಿ ಅಧಿಸೂಚನೆ 2023 ಅನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರ ಅರ್ಜಿ ಸಲ್ಲಿಸಲಿಚ್ಛಿಸುವವರು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಬೇಕು – ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ.

ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಬೇಕು. ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಇಟ್ಟುಕೊಂಡಿರಿ.

ಅಧಿಕೃತ ಅಧಿಸೂಚನೆಯಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಮತ್ತು ನಿಗದಿತ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.
ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ).
ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಮತ್ತೊಮ್ಮೆ ಪರಿಶೀಲಿಸಿ.

ಅರ್ಜಿಗಳನ್ನು ಕಳುಹಿಸಬೇಕಾದ ವಿಳಾಸ:

ಸೂಪರಿಟೆಂಡೆಂಟ್ ಆಫ್ ಪೊಲೀಸ್, ಕೋಸ್ಟ್ ಗಾರ್ಡ್ ಟಿ
ಪೋಲಿಸ್ ,ಉಡುಪಿ , ತಾಂತ್ರಿಕ ಸಿಬ್ಬಂದಿ ನೇಮಕಾತಿ ಸಮಿತಿ, ಕರ್ನಾಟಕ- 576101

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಅರ್ಜಿ ಕಳುಹಿಸಲು ಕೊನೆಯ ದಿನಾಂಕ- ಮಾರ್ಚ್ 08, 2023

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಮಾಡಿಕೊಳ್ಳಿ

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

B.S.Yediyurappa ಸದಾ ಹೊಳೆವ ರಾಜಕೀಯ ನಕ್ಷತ್ರ ಬಿಎಸ್ ವೈ

0

B.S.Yediyurappa ರಾಜಕೀಯ ಎಲ್ಲರಿಗೂ ತೆರೆದ ಬಾಗಿಲು. ಆದರೆ ಒಳಹೋಗಿ ಕರಗಿ ಹೋಗುವವರೆ ಬಹಳ.‌ ಆದರೆ ಹೋದ ಬಾಗಿಲಿನಿಂದ ವಾಪಸ್ ಬರುವವರು ಬೆರಳೆಣಿಕೆಯ ಮಂದಿ. ಅದೇ ಖ್ಯಾತಿ,ಗರಂ, ತಾಜಾತನ ಉಳಿಸಿಕೊಂಡು ಬರುವುದು ಅಪರೂಪ. ಅಂತಹವರಲ್ಲಿ ರಾಜಾಹುಲಿ ಖ್ಯಾತಿಯ ಬಿ.ಎಸ್. ಯಡಿಯೂರಪ್ಪ ಒಬ್ಬರು.

ಒಂದು ಖ್ಯಾತಿ ಪಡೆಯದ ಪಕ್ಷ. ಒಂದೇ ಅಂಕಿಯ ಅಭ್ಯರ್ಥಿ ಗೆಲುವು ಪಡೆಯುತ್ತಿದ್ದ ಸುಮಾರು ಇಪ್ಪತ್ತು ವರ್ಷಗಳ ಚುನಾವಣಾ ಇತಿಹಾಸ ನಮಗೆಲ್ಲ ಗೊತ್ತೇ ಇದೆ.

B.S.Yediyurappa ಜನಸಂಘ
ನಂತರ ಜನತಾ ಪಕ್ಷ , ಆನಂತರ ಭಾರತೀಯ ಜನತಾ ಪಕ್ಷ.

ಈ ಸಂಘಟನೆಗೆ ತನ್ನದೇ ಪಾತಳಿಯಿದೆ. ಸುಭದ್ರ ಮಾನಸಿಕ
ಒಡಂಬಡಿಕೆ. ಅಂದರೆ ತನ್ನ ನಾಯಕರ ರಾಷ್ಟ್ರೀಯ ಚಿಂತನೆಗಳಿಗೆ ಸಮರ್ಪಣೆ.

ಈ ಸಮರ್ಪಣೆ ಸುಲಭವಲ್ಲ.
ಸಾಧನೆಗೆ ಅಸಾಧ್ಯವೆನಿಸಿದರೂ
ಅದನ್ನ ಸಾಧಿಸಿದವರು ನಮ್ಮ ಕಣ್ಣೆದುರು ಆಗಿ ಹೋಗಿದ್ದಾರೆ. ಆಗುತ್ತಿದ್ದಾರೆ. ಈ ಸಾಲಿನಲ್ಲಿ ಜೂಕಿನಕೆರೆ ಸಿದ್ಧಲಿಂಗಪ್ಪ ಯಡಿಯೂಪ್ಪ ನಮಗೆ ತೀರ ಹತ್ತಿರ ಕಾಣುತ್ತಿರುವ ಹಿರಿಯ ಚೇತನ.

ರಾಜ್ಯವಾರು ಅದರಲ್ಲೂ, ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳ ಮೇಲುಗೈಯಾಗಿತ್ತು. ಮತ್ತೆ ಬಿಜೆಪಿಗೆ ಆಡಳಿತ ಸೂತ್ರ ಸಿಗದು ಎಂದೇ ನಂಬಿಕೊಂಡು ಬಂದಿದ್ದ ಪರಿಣಿತರ ಲೆಕ್ಕಾಚಾರವನ್ನ ತಲೆಕೆಳಗು ಮಾಡಿದ ಬಿಎಸ್ ವೈ ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಒಂದು ಇಮೇಜನ್ನ ಸೃಷ್ಟಿಸಿದರು.

ಕರ್ನಾಟಕದಲ್ಲಿ ಅವರ ರಾಜಕೀಯ ಜಾಣ್ಮೆಯನ್ನ ಯಾರಾದರೂ ಮೆಚ್ಚಲೇಬೇಕು. ಜೆಡಿಎಸ್ ಕುಮಾರಸ್ವಾಮಿಯವರಿಗೆ ಬೇಷರತ್
ಮುಖ್ಯಮಂತ್ರಿಯನ್ನಾಗಿಸಿ ಬಿಜೆಪಿಗೆ
ಆಡಳಿತದಲ್ಲಿ ಪಾಲು ಪಡೆಯುವ ಕೌಶಲವನ್ನ ಮರೆಯುವಂತಿಲ್ಲ.

ಆರ್ ಎಸ್ಎಸ್ ನ ಕಟ್ಟಾ ಸ್ವಯಂಸೇವಕರ ಮನೋಧರ್ಮವೇ ಅದು. ನಾಯಕತ್ವ ಬೆಳೆಸುವ ಪರಿಯಲ್ಲಿ ತಾವೂ ಸಮಾನಾಂತರ
ಧ್ಯೇಯವಾಗಿ ರೂಪುಗೊಳ್ಳುವುದು.
ಏಕೆಂದರೆ ಒಡನಾಡಿ ದೌರ್ಬಲ್ಯಕ್ಕೆ ಒಳಗಾದರೆ ಆ ಹೊತ್ತಿನ ಸನ್ನಿವೇಶ
ನಿರ್ವಹಿಸಲೂ ಸಮರ್ಥರಾಗಿ ಜೊತೆಯಲ್ಲಿರುವ ಸಹಭಾಗಿತ್ವ.

ಇಡೀ ರಾಜ್ಯದ ರೈತಪರಧ್ವನಿಯಾಗಿ ವಿಧಾನಸೌಧದಕಂಭಗಳನ್ನ ಅಲುಗಾಡುವಂತೆ ಮಾಡಿದವರು. ಅಲ್ಲಿಂದಲೇ ಬಿಎಸ್ ವೈ ಚರಿಶ್ಮ ಶುರು. ನಂತರ ಬಿಜೆಪಿ ಪಕ್ಷದ ಶಾಸಕರಾಗಿ‌ ಗೆಲುವು ಪಡೆಯುತ್ತಾ ಬಂದರು. ಆ ಅವಧಿಯಲ್ಲಂತೂ ಬಿಎಸ್ ವೈ ಪಕ್ಕಾ ಅನುಭವಿಯಾಗಿಯೂ ಮತ್ತು ಸಮೂಹ ನಾಯಕರಾಗಿ ಜನಪ್ರಿಯ ನಾಯಕನಾಗಿ ಹೊರಹೊಮ್ಮಿದರು.

ಅವರ ರಾಜಕೀಯ ಜೀವನದಲ್ಲಿ ಮೇಲ್ನೋಟಕ್ಕೆ ಎರಡು ಗಾಢ ತಿರುವುಗಳನ್ನ ಗುರುತಿಸಬಹುದು.
( ಸಾರ್ವಜನಿಕ ವಲಯದಲ್ಲಿ ಕೇಳಿಬಂದಂತೆ) ಕೌಟುಂಬಿಕ ಮತ್ತು ಸ್ವಾರ್ಥಿಗಳ ಒತ್ತಡಗಳಿಂದಾಗಿ ಡಿನೋಟಿಫಿಕೇಷನ್ ಆರೋಪಕ್ಕೆ ಗುರಿಯಾಗಿ 23 ದಿನಗಳ ಕಾರಾಗೃಹವಾಸ.( ನಂತರ ಕೋರ್ಟ್ ಅವುಗಳನ್ನ ರದ್ದುಗೊಳಿಸಿತು)
ಮತ್ತೊಂದು ಪಕ್ಷವೇ ಅವರನ್ನ
ದೂರಮಾಡಿದಾಗ ತಮ್ಮ ವೈಯಕ್ತಿಕ
ವರ್ಚಸ್ಸನ್ನ ಕಡಿಮೆಯಾಗದಂತೆ
ಕೆಜೆಪಿ ಪಕ್ಷ ಸಂಘಟನೆ ಮಾಡಿದ ಪ್ರಸಂಗ.

ಫೀನಿಕ್ಸ್ ನಂತೆ ಮತ್ತೆ ಹುಟ್ಟುಪಡೆದ ಬಿಎಸ್ ವೈ ಅವರ ಗಂಭೀರ ಮತ್ತು ತೀವ್ರತೆಯನ್ನ ಯಾರೂ ತಡೆಯುವಂತಿರಲಿಲ್ಲ. ಪಕ್ಷಕ್ಕೆ ಮತ್ತೆ ಅವರೇ ಬೆನ್ನೆಲುಬಾದರು.

ಬಿಎಸ್ ವೈ ರಂತೆ ವರ್ಚಸ್ಸು ಪಡೆದ ಮತ್ತೊಬ್ಬ ನಾಯಕ ಅವರ ಆಗಿನ ಅವಧಿಯ ಗೈರುಹಾಜರಿಯಲ್ಲಿ ರೂಪುಗೊಳ್ಳಲೇ ಇಲ್ಲ ಅನ್ನಬಹುದು.

ಪಕ್ಷ ಸಂಘಟನೆ ಮತ್ತು ರಾಜ್ಯದಾದ್ಯಂತ ಅವರಿಗೆ ನಿರ್ಮಾಣವಾಗಿದ್ದ ಪ್ರಭಾವಲಯ
ಚೂರೂ ಕಳೆಗುಂದಿರಲಿಲ್ಲ. ಹಿಂದಿನ ಎಲ್ಲ ಕಹಿಘಟನೆಗಳೂ ಮಂಜಿನಂತೆ ಕರಗಿಹೋಗಿದ್ದವು.

ಇಷ್ಟುಹೊತ್ತಿಗೆ ಬಿಎಸ್ ವೈ ರಾಜ್ಯದ ಎಲ್ಲ ಜಾತಿಮತಗಳ ಒಲವಿಗೆ ಪಾತ್ರರಾಗಿದ್ದರು. ಅದರಲ್ಲಂತೂ ಜೆಡಿಸ್ ಜೊತೆ ಸಮ್ಮಿಶ್ರ ಸರ್ಕಾರಮಾಡಿದ ನಂತರ ನಡೆದ
ರಾಜಕೀಯ ಒಡಂಬಡಿಕೆಗೆ ಜೆಡಿಎಸ್
ಹಿಂದೇಟು ಹಾಕಿದ ನಂತರ ಪಕ್ಷಕ್ಕೆ ಅಪಾರ ಜನಾನುಕಂಪ ಗಳಿಸಿದ್ದರು.

ಮುಖ್ಯಮಂತ್ರಿಗಳಾಗಿ‌‌ ಅವರ ಜನಪ್ರಿಯತೆ ಹೆಚ್ಚುತ್ತಲೇ ಹೋಗಿತ್ತು.
ಜೈಲುವಾಸದ ಕಪ್ಪು ಚುಕ್ಕೆ ಕೂಡ ಆ ಜನಪ್ರಿಯತೆಯ ಮುಂದೆ ಮಂಕಾಯಿತು.

ಅವರು ನಾಕುಬಾರಿ ಮುಖ್ಯಮಂತ್ರಿಗಳಾಗುವ ಪ್ರಸಂಗ ಅನಿವಾರ್ಯವಾಗೇ ಬಂದಿತು.
ಬೇರೆಬೇರೆ ಮುಖಗಳು ಮುಖ್ಯ ಮಂತ್ರಿಗಳಾದರೂ ಬಿಎಸ್ ವೈ
ಇಮೇಜಿನ ಮುಂದೆ ನಿಲ್ಲಲಾಗಲಿಲ್ಲ.ಮತ್ತೆ ಬಿಎಸ್ ವೈ
ಅನಿವಾರ್ಯವಾಗಿದ್ದರು.

ಪಕ್ಷವು ಅವರಿಗೆ ಸ್ವಲ್ಪ ಕಾಲ ಇರಿಸುಮುರಿಸು ಉಂಟುಮಾಡಿತ್ತು.
ಆದರೆ ಬಿಎಸ್ ವೈ ಅವರ ಶಕ್ತಿ , ಸಾಮರ್ಥ್ಯದ ಬಗ್ಗೆ ಎಚ್ಚರಗೊಂಡು ಕೇಂದ್ರೀಯ ಚುನಾವಣಾ ಸಮಿತಿಯ ಸದಸ್ಯತ್ವ ನೀಡಿ ಗೌರವ ವ್ಯಕ್ತಪಡಿಸಿದೆ.ಇದೊಂದು ರೀತಿ ಸಣ್ಣಗಾಯಕ್ಕೆ ಮುಲಾಮು ಹಚ್ಚಿ ಉಪಶಮನ ಮಾಡಿದಂತಾಗಿದೆ.

ಬಹಳಷ್ಟು ಸಂಗತಿಗಳನ್ನ ಮಾಧ್ಯಮಗಳು ಬಿಚ್ಚಿಟ್ಟಿವೆ.
ಆದರೆ ಎಲ್ಲವನ್ನೂ ಮೀರಿ ಜನ ಒಪ್ಪಿಕೊಂಡ ನಾಯಕ ಎಂಬುದಂತೂ ನಿರ್ವಿವಾದ.

ಮೊನ್ನಿನ ಅವರ ಶಾಸನ ಸಭೆ ಅಧಿವೇಶನದ ವಿದಾಯ ಭಾಷಣ
ಅವರ ರಾಜಕೀಯ ಮಾಗುವಿಕೆಯ ಸಂಕೇತವಾಗಿದೆ.
ಮತ್ತೆ ನಾನು( ಶಾಸಕನಾಗಿ) ವಿಧಾನ ಸೌಧ ಪ್ರವೇಶಮಾಡೋದಿಲ್ಲ.
ಚುನಾವಣೆಗೆ ನಿಲ್ಲೋದಿಲ್ಲ.
ನಮಗೆ ಹಿರಿಯರಾದ ಮಾಜಿ ಪ್ರಧಾನಿ ದೇವೇಗೌಡರು ರಾಜಕೀಯವಾಗಿ ಆದರ್ಶ.
ಇತ್ಯಾದಿ ಅವರ ನುಡಿಗಳು ನೆನಪಿನಲ್ಲಿಟ್ಟುಕೊಳ್ಳುವಂಹವು.
ವಿಪಕ್ಷಗಳೂ ಕೂಡ ಬಿಎಸ್ ವೈ ಅವರಿಗೆ ರಾಜಕೀಯ ನಿವೃತ್ತಿ ಘೋಷಿಸಬೇಡಿ. ಶಾಸಕರಾಗಿ ಆಯ್ಕೆಯಾಗಿ ಬನ್ನಿ. ನಿಮ್ಮಂತಹ ಹಿರಿಯ ಅನುಭವಿಗಳು ಸದನದಲ್ಲಿರಬೇಕು ಎಂದು ಭಾವುಕರಾಗಿ ಹೇಳಿದ ಮಾತುಗಳು ಮನಮುಟ್ಟುವಂತಿವೆ.

ಬಿಎಸ್ ವೈ ಈಗ ಎಂಭತ್ತರ ಹರೆಯದಲ್ಲಿದ್ದಾರೆ. ಅಧಿಕಾರ,ಆಡಳಿತ, ಸಂಘಟನೆ, ಮಾರ್ಗದರ್ಶನ ಇವು ಮಿಳಿತಗೊಂಡ ಅನುಭವಗಳ ನಿಧಿಯಾಗಿದ್ದಾರೆ.
ರಾಜ್ಯದಾದ್ಯಂತ ಸಂಚರಿಸಿ ಪಕ್ಷ ಸಂಘಟಿಸುತ್ತೇನೆ ಎಂಬ ಅವರ
ಮಾತುಗಳು ಈ ವಯಸ್ಸಿನಲ್ಲೂ
ಚೈತನ್ಯದ ಚಿಲುಮೆಯಾಗಿರುವ ಅವರ ರಾಜಕೀಯ ಸಂಕಲ್ಪವನ್ನ
ಬಿಂಬಿಸುತ್ತವೆ.

ಅದಕ್ಕೆ ಕೆ ಲೈವ್ ನ್ಯೂಸ್ ಹಿರಿಯ ಚೇತನಕ್ಕೆ

ಲಾಂಗ್ ಲೀವ್ ,ಬಿಎಸ್ ವೈ
ಹಿರಿಯ ಚೇತನ ಬಿಎಸ್ ವೈ
ನಮ್ಮೊಂದಿಗೆ ನೂರ್ಕಾಲವಿರಲಿ
ಎಂದು ಎಂಭತ್ತರ ಜನ್ಮದಿನದ ಶುಭ ಸಂದರ್ಭದಲ್ಲಿ ಶುಭ ಹಾರೈಸುತ್ತದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shivamogga Airport ಏರ್ ಪೋರ್ಟ್ ಉದ್ಘಾಟನೆಗೆ ಮುನ್ನ ಕುವೆಂಪು ಅವರನ್ನ ದಿಲ್ಲಿಯಲ್ಲಿ ಸ್ಮರಿಸಿದ ಪ್ರಧಾನಿ ಮೋದಿ

0

Shivamogga Airport  ಪ್ರಧಾನಿ ನರೇಂದ್ರ ಮೋದಿಯವರು ದೇಶದ ಕರ್ನಾಟಕದ ಕೊಡುಗೆಯನ್ನು ನೆನಪಿಸಿಕೊಂಡಿದ್ದಾರೆ.
ದಿಲ್ಲಿಯ ಕರ್ನಾಟಕ ಸಂಘದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ತಾಲಕಟೋರಾ ಸ್ಟೇಡಿಯಂ ನಲ್ಲಿ ಅಯೋಜಿಸಿದ್ಧ ಬಾರಿಸು ಕನ್ನಡ ಡಿಂಡಿಮವ ಸಾಂಸ್ಕೃತಿಕ ಸಂಭ್ರಮಕ್ಕೆ ಚಾಲನೆ ನೀಡಿದರು.

Shivamogga Airport  ದೇವರ ದಾಸಿಮಯ್ಯ, ಬಸವಣ್ಣ, ಮಾದಾರ ಚೆನ್ನಯ್ಯ, ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರು ಅನಾದಿಕಾಲದಲ್ಲಿ ಭಾರತಕ್ಕೆ ಪ್ರೇರಣೆ ನೀಡಿದ್ದಾರೆ. ಹಾಗೆ ಆಧುನಿಕ ಕಾಲದಲ್ಲಿ ಫೀಲ್ಡ್ ಮಾರ್ಷಲ್ ಕೆಎಂ ಕಾರ್ಯಪ್ಪ, ಸರ್ ಎಂ ವಿಶ್ವೇಶ್ವರಯ್ಯ , ಕುವೆಂಪು ಅವರು ದೇಶಕ್ಕೆ ಸ್ಫೂರ್ತಿಯಾಗಿದ್ದಾರೆ
ಎಂದು ಸ್ಮರಿಸಿಕೊಂಡರು.


ರಾಮಾಯಣದ ಕಾಲದಿಂದಲೂ ಹನುಮಂತನ ರೂಪದಲ್ಲಿ ದೇಶಕ್ಕೆ ಕರ್ನಾಟಕದ ಕೊಡುಗೆ ಅಪಾರವಾಗಿದೆ. ಹನುಮಂತನ ಹೊರತಾಗಿ ರಾಮಾಯಣ ಪೂರ್ಣವಾಗುವುದಿಲ್ಲ. ಕರ್ನಾಟಕದ ಹೊರತಾಗಿ ಭಾರತದ ವೈವಿಧ್ಯತೆ ಪೂರ್ಣವಾಗುವುದಿಲ್ಲ ಎಂದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shimogga Airport ಲೋಕಾರ್ಪಣೆಗೆ ಸಜ್ಜಾಗಿರುವ ಏರ್ ಪೋರ್ಟ್ ವೀಕ್ಷಣೆ

0

Shimogga Airport ಫೆ.27ರಂದು ನಿಕಟಪೂರ್ವ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್ ಯಡಿಯೂರಪ್ಪ ನವರೊಂದಿಗೆ ಬಿ.ವೈ. ರಾಘವೇಂದ್ರ ಅವರು ವಿಮಾನ ನಿಲ್ದಾಣದ ಉದ್ಘಾಟನೆಯ ಅಂತಿಮ ಸಿದ್ಧತೆಗಳನ್ನು ವೀಕ್ಷಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Bangalore Agriculture University ಮಾರ್ಚ್ 4 ಮತ್ತು 5 ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಸಿರಿಧಾನ್ಯ ಶೃಂಗಸಭೆ

0

Bangalore Agriculture University  ತಮಿಳುನಾಡಿನ ತಂಜಾವೂರಿನ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಉದ್ಯಮಶೀಲತೆ ಮತ್ತು ನಿರ್ವಹಣೆ ಸಂಸ್ಥೆಯ ಸಹಯೋಗದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಜಿಕೆವಿಕೆ ಆವರಣದಲ್ಲಿ ಮಾ.4 ಮತ್ತು 5 ರಂದು ‘ರಾಷ್ಟ್ರೀಯ ಸಿರಿಧಾನ್ಯ ಶೃಂಗಸಭೆ-2023’ ಹಮ್ಮಿಕೊಂಡಿದೆ.

Bangalore Agriculture University  ಈ ಶೃಂಗಸಭೆಯಲ್ಲಿ ಸುಮಾರು 200 ಮಳಿಗೆಗಳಿರಲಿವೆ. ಸಿಹಿ ಧಾನ್ಯಗಳ ಮಾರುಕಟ್ಟೆ ಸಂಪರ್ಕ ವೃದ್ಧಿಸಲು ಮತ್ತು ಮಾರಾಟದ ತಿಳುವಳಿಕೆ ನೀಡಲು ಉದ್ಯಮಿಗಳಿಂದ ಉದ್ಯಮಿಗಳಿಗೆ , ಉದ್ಯಮಿಗಳಿಂದ ಗ್ರಾಹಕರಿಗೆ ಸಭೆಗಳನ್ನು ಆಯೋಜಿಸಲಾಗಿದೆ.

ಇದಲ್ಲದೆ ನಾನಾ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಲು 8 ಪ್ರತ್ಯೇಕ ತಾಂತ್ರಿಕ ಅಧಿವೇಶನಗಳಿರುತ್ತವೆ ಎಂದು ಬೆಂಗಳೂರು ಕೃಷಿ ವಿವಿ ಕುಲಪತಿ ಎಸ್. ವಿ. ಸುರೇಶ್ ಅವರು ತಿಳಿಸಿದ್ದಾರೆ.

ಈ ಸಿಹಿಧಾನ್ಯ ಶೃಂಗಸಭೆಗೆ ಈಗಾಗಲೇ ಎರಡು ಸಾವಿರ ಮಂದಿ ನೊಂದಾಯಿಸಿಕೊಂಡಿದ್ದು  ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

PM Narendra Modi ಪಾಕಿನ ಯುವಜನರಿಗೆ ಮೋದಿಯೇ ಪ್ರಧಾನಿಯಾಗಿ ಅಚ್ಚುಮೆಚ್ಚು

0

PM Narendra Modi ಜನಪ್ರಿಯ ಯೂಟ್ಯೂಬರ್‌’ನೊಂದಿಗಿನ ಸಂವಾದದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಪಾಕಿಸ್ತಾನಿ ವ್ಯಕ್ತಿಯೊಬ್ಬರು ಪ್ರಶಂಸಿಸಿರುವುದು ಗಡಿಯ ಎರಡೂ ಬದಿಗಳಲ್ಲಿ ವೈರಲ್ ಆಗಿದೆ.

ಮೊದಲ ಸಂದರ್ಶನದ ನಂತರ ಕೆಲವರು ನನಗೆ ಪಾಕಿಸ್ತಾನಿಯಾಗಿ ಇಂತಹ ಹೇಳಿಕೆಗಳನ್ನು ಮಾಡಬಾರದಿತ್ತು ಎಂದು ಹೇಳಿದ್ದರು. ಆದರೆ ಮೋದಿಯನ್ನು ಹೊಗಳುವುದರಲ್ಲಿ ತಾನು ಪ್ರಾಮಾಣಿಕನಿದ್ದೇನೆ. ಏಕೆಂದರೆ ಮೋದಿ ಅವರು ತಮ್ಮ ದೇಶವನ್ನು ಸರಿಪಡಿಸಿದ್ದಾರೆ.

PM Narendra Modi ಸನಾ ಅಮ್ಜದ್ ಎಂಬವರ ಯೂಟ್ಯೂಬ್ ಚಾನೆಲ್‌’ನಲ್ಲಿ ಪಾಕಿಸ್ತಾನಿ ಪ್ರಜೆಯ ಮಾತುಗಳ ಸಖತ್ ವೈರಲ್ ಆಗಿವೆ.

“ತಮ್ಮ ದೇಶವನ್ನು ಕಾಪಾಡಲು ಮೋದಿಯಂತಹ ನಾಯಕ ಬೇಕು ಎಂದು ಪ್ರಾರ್ಥಿಸುತ್ತೇನೆ. ಕಳೆದ ಎಂಟು ವರ್ಷಗಳಲ್ಲಿ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ” ಎಂದು ಹೇಳಿರುವ ಮಾತುಗಳು ಎಲ್ಲೆಡೆ ಸಕ್ಕತ್ ವೈರಲ್ ಆಗಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

G20 Summit ಜಿ 20 ಸಮೂಹ ರಾಷ್ಟ್ರಗಳ ನೇತೃತ್ವದ ಭಾರತ ಆಯೋಜಿಸಿರುವ ಸಭೆಗಳ ಮೊದಲ ಪತ್ರಿಕಾಗೋಷ್ಠಿ

0



G20 Summit ಜಿ20 ರಾಷ್ಟ್ರಗಳ ಹಣಕಾಸು ಸಚಿವರು ಹಾಗೂ ಕೇಂದ್ರೀಯ ಬ್ಯಾಂಕ್ ಗವರ್ನರ್ ಗಳ (ಎಫ್ ಎಮ್ ಸಿಬಿಜಿ) ಸಭೆ ಇಂದು ನಗರದಲ್ಲಿ ಮುಕ್ತಾಯಗೊಂಡ ಬಳಿಕ ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಭೆಯ ಆಗುಹೋಗುಗಳನ್ನು ಕುರಿತ ಪತ್ರಿಕಾ ಗೋಷ್ಟಿಯೊಂದನ್ನು ನಡೆಸಿದರು.

ಮಾಧ್ಯಮ ಪ್ರತಿನಿಧಿಗಳಿಗೊಂದಿಗೆ ಮಾತನಾಡಿದ ಅವರು, ಎಫ್ ಎಮ್ ಸಿಬಿಜಿ ಸಭೆಯ ನಂತರ ನಡೆಯುತ್ತಿರುವ ಏಕೈಕ ಮಾಧ್ಯಮದೊಂದಿಗಿನ ಸಂವಾದ ಇದಾಗಿದೆ ಎಂದರು.

G20 Summit ಸಭೆಯನ್ನು ಆಯೋಜಿಸಿದ ಉದ್ದೇಶದ ಬಗ್ಗೆ ಮಾತಾಡಿದ ಅವರು, ಪ್ರಸ್ತುತ ಹಣಕಾಸು ವರ್ಷದಲ್ಲಿ ಜಿ20 ರಾಷ್ಟ್ರಗಳ ಹಣಕಾಸು ಸಚಿವರು ಹಾಗೂ ಕೇಂದ್ರೀಯ ಬ್ಯಾಂಕ್ ಗವರ್ನರ್ ಗಳಿಂದ ಮಾರ್ಗದರ್ಶನ ಮತ್ತು ಸಲಹೆಗಳನ್ನು ಪಡೆಯುವುದಾಗಿತ್ತು ಎಂದು ಹೇಳಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.