Tuesday, April 7, 2026
Tuesday, April 7, 2026
Home Blog Page 1294

Government Employee Strike ಮಾರ್ಚ್ 1 ರಿಂದ ರಾಜ್ಯ ಸರ್ಕಾರಿ ನೌಕರರ ಮುಷ್ಕರ ಖಚಿತ- ಷಡಾಕ್ಷರಿ

0

Government Employee Strike  ಮಾ. 1 ರಿಂದ ರಾಜ್ಯ ಸರ್ಕಾರದ ವಿರುದ್ಧ ಅನಿರ್ದಿಷ್ಟಾವಧಿ ಮುಷ್ಕರ ನಡೆಯಲಿದೆ ಎಂದು
ಶಿವಮೊಗ್ಗದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ತಿಳಿಸಿದ್ದಾರೆ.

ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಮುಷ್ಕರ ನಡೆಸಲಾಗುತ್ತದೆ.
ಅನೇಕ ಸಂಕಷ್ಟದ ಸಂದರ್ಭಗಳಲ್ಲಿ ನಾವೆಲ್ಲರೂ ಸರ್ಕಾರದ ಪರವಾಗಿ ಕೆಲಸ ಮಾಡಿದ್ದೆವೆ.
ಆದರೆ, ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ.
ಆದರೆ, 7 ನೇ ವೇತನ ಆಯೋಗ ಜಾರಿಗೊಳಿಸಿಲ್ಲ.
7 ನೇ ವೇತನ ಆಯೋಗದಿಂದ ಶೇ. 40 ರಷ್ಟು ವೇತನ ಹೆಚ್ಚಳಕ್ಕೆ ಆಗ್ರಹಿಸುತ್ತಿದ್ದೆವೆ ಎಂದು ಹೇಳಿದರು.

Government Employee Strike  ನಾವು ಸರ್ಕಾರದ ವಿರುದ್ಧ ಪ್ರತಿಭಟನೆಯಾಗಲೀ, ಮುಷ್ಕರವಾಗಲಿ, ಅಥವಾ ಘೋಷಣೆ ಕೂಗುತ್ತಿಲ್ಲ.
ಆದರೆ, ನಾವು ಕರ್ತವ್ಯದಿಂದ ದೂರವುಳಿದು, ನಮ್ಮ, ನಮ್ಮ ಮನೆಯಲ್ಲಿರುತ್ತೇವೆ.
ಈ ರೀತಿ ಮೊದಲ ಹಂತದ ಪ್ರತಿಭಟನೆ ನಡೆಸಲಾಗುತ್ತಿಲ್ಲ.
ಎಲ್ಲಾ ಕ್ಷೇತ್ರದ 6 ಲಕ್ಷ ಸರ್ಕಾರಿ ನೌಕರರು ಪ್ರತಿಭಟನೆಗೆ ಮುಂದಾಗಿದ್ದೆವೆ.
ಪಂಜಾಬ್, ರಾಜಸ್ತಾನ, ಛತ್ತೀಸ್ ಘಢ, ಜಾರ್ಖಂಡ್, ಹಿಮಾಚಲಪ್ರದೇಶ, ರಾಜ್ಯಗಳ ಮಾದರಿಯಲ್ಲಿ ಎನ್.ಪಿ.ಎಸ್. ರದ್ದುಪಡಿಸಿ, ಓಪಿಎಸ್ ಯೋಜನೆ ಜಾರಿಗೆ ಆಗ್ರಹ.
ಮಾ. 1 ರಿಂದ ಯಾವ ನೌಕರರು ಕೂಡ ವಿಧಾನಸೌಧ, ವಿಕಾಸ ಸೌಧಕ್ಕೂ ಸೇರಿದಂತೆ, ಯಾವ ಸರ್ಕಾರಿ ಕಚೇರಿಗಳಿಗೂ ತೆರಳುವುದಿಲ್ಲ ಎಂದು ತಿಳಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Adichunchanagiri ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಫೆ.28ರಿಂದ ಜಾತ್ರಾ ಮಹೋತ್ಸವ

0

Adichunchanagiri ಸುಮಾರು ವರ್ಷಗಳ ಪ್ರಾಚೀನ ಗುರು ಪರಂಪರೆಯನ್ನು ಹೊಂದಿರುವ ಶ್ರೀಕ್ಷೇತ್ರವು ಮಯೂರ ಗಳ ತಾಣವಾಗಿದ್ದು, “ಮಯೂರ ವನ “ಎಂದು ಕರೆಯುವರು.

ಪುರಾಣದಲ್ಲಿ ಉಲ್ಲೇಖವಿರುವಂತೆ ಶ್ರೀ ಆದಿಚುಂಚನಗಿರಿ ಪೀಠವು ಸ್ಥಾಪನೆಯಾದುದು ತ್ರೇತ್ರಾಯುಗದಲ್ಲಿ ಪರಮೇಶ್ವರನೇ ಈ ಪೀಠದ ಸ್ಥಾಪಕನು. ಇಲ್ಲಿ ಸಾಕ್ಷಾತ್ ಪರಶಿವನೇ ಶ್ರೀ ಗಂಗಾಧರೇಶ್ವರ ನಾಗಿ ನೆಲೆ ನಿಂತಿದ್ದಾನೆ. ನಾಥ ಸಂಪ್ರದಾಯದ ದ್ವಾದಶ ಪೀಟಗಳಲ್ಲಿ ಆದಿ ಪೀಠವೇ ಶ್ರೀ ಆದಿಚುಂಚನಗಿರಿ ಪೀಠ. ಈ ಮಠದ ಗುರುಪರಂಪರೆಯು ದೀರ್ಘವಾದುದು, ಇದುವರೆಗೂ 72 ಧರ್ಮಗುರುಗಳು ಮಠಾಧಿಪತಿಗಳಾಗಿದ್ದಾರೆ.

71ನೇ ಪೀಠಾಧ್ಯಕ್ಷರಾದ ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮಿಗಳಿಂದಾಗಿ ಸಾಮಾಜಿಕ,ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಅಲ್ಲದೆ ಮಕ್ಕಳ ವಸತಿ ಶಾಲೆ, ಅನಾಥಾಶ್ರಮ, ವೃದ್ಧಾಶ್ರಮ, ಮಹಿಳಾ ಸೇವಾಶ್ರಮಗಳನ್ನು ಸ್ಥಾಪಿಸಿ, ನಿರ್ಗತಿಕರ ಬಗ್ಗೆ ವಿಶೇಷ ಮಮತೆಯನ್ನು ತೋರಿದ್ದಾರೆ.

ಶ್ರೀಕ್ಷೇತ್ರ ಆದಿಚುಂನಗಿರಿ ಮಹಾಸಂಸ್ಥಾನದಲ್ಲಿ ಫೆಬ್ರವರಿ 28 ರಿಂದ ಮಾರ್ಚ್ 8ರ ವರೆಗೆ 9 ದಿನಗಳ ಕಾಲ ಜಾತ್ರಾ ಮಹೋತ್ಸವ ಪ್ರಾರಂಭವಾಗಲಿದ್ದು,ಈ ಕಾರ್ಯಕ್ರಮದಲ್ಲಿ ಅನೇಕ ಪೂಜಾ ಕಾರ್ಯ ಸೇರಿದಂತೆ ಹಲವು ಧಾರ್ಮಿಕ ಮತ್ತು ಅಧ್ಯಾತ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಜಾತ್ರಾ ಮಹೋತ್ಸವ ಸುಸೂತ್ರವಾಗಿ ನಡೆಯಲಿ ಎಂಬ ಉದ್ದೇಶದಿಂದ ಫೆಬ್ರವರಿ 28ರ ಬೆಳಿಗ್ಗೆ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರಿಂದ ನಾಂದಿ ಪೂಜೆ ಹಾಗೂ ಧರ್ಮ ಧ್ವಜಾರೋಹಣ ಮಾಡುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. ಮಾರ್ಚ್ 1 ರ ಮಧ್ಯಾಹ್ನ 3 ಗಂಟೆಗೆ ಕಬ್ಬಡ್ಡಿ ಪಂದ್ಯಾವಳಿ ಉದ್ಘಾಟನೆ, ರಾತ್ರಿ 6 ಗಂಟೆಗೆ ಸರ್ವಾಲಂಕೃತ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ಉತ್ಸವ, ಮಾರ್ಚ್ 2 ರಂದು ಮಧ್ಯಾಹ್ನ 3ಕ್ಕೆ ಕಬ್ಬಡ್ಡಿ ಪಂದ್ಯಾವಳಿ ಸಮಾರೋಪ ಸಮಾರಂಭ, ರಾತ್ರಿ 7 ಗಂಟೆಗೆ ಮಲ್ಲೇಶ್ವರ ಸ್ವಾಮಿ ಉತ್ಸವ ನಡೆಯಲಿದೆ. ಮಾರ್ಚ್ 3 ರ ಬೆಳಿಗ್ಗೆ 9.30 ಗಂಟೆಗೆ ಉಚಿತ ಸಾಮೂಹಿಕ ವಿವಾಹ,ಹಾಗೂ ಹಿರಿಯ ದಂಪತಿಗೆ ಸನ್ಮಾನ ಸಮಾರಂಭ,ಸಂಜೆ 7ಗಂಟೆಗೆ ಶ್ರೀ ಸಿದ್ದೇಶ್ವರ ಸ್ವಾಮಿ ಉತ್ಸವ ನಡೆಯಲಿದೆ. ಮಾರ್ಚ್ 4 ರ ಬೆಳಿಗ್ಗೆ 7.30 ಕ್ಕೆ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ಸುವರ್ಣ ಕವಚ ಅಲಂಕಾರ ಹಾಗೂ ಶ್ರೀ ಗಂಗಾದೇಶ್ವರಸ್ವಾಮಿಗೆ ರಜತ ನಾಗಾಭರಣ ಅಲಂಕಾರ ಪೂಜೆ, ಸಂಜೆ 7 ಗಂಟೆಗೆ ಕಾಲಭೈರವೇಶ್ವರ ಸ್ವಾಮಿಯ ಹೂವಿನ ಪಲ್ಲಕ್ಕಿ ಉತ್ಸವ ಹಾಗೂ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ ಮುತ್ತಿನ ಪಾಲಕಿ ಉತ್ಸವ ನಡೆಯಲಿದೆ.

ಮಾರ್ಚ್ 5 ರ ಬೆಳಿಗ್ಗೆ 10 ಕ್ಕೆ ಶ್ರೀ ಆದಿಚುಂಚನಗಿರಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಉದ್ಘಾಟನೆ ನಡೆಯಲಿದೆ. ಸಂಜೆ 6 ಗಂಟೆಗೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರಿಂದ ಜ್ವಾಲಾ ಪೀಠಾರೋಹಣ, ಸಿದ್ದ ಸಿಂಹಾಸನ ಪೂಜೆ ನಡೆಯುತ್ತದೆ. ರಾತ್ರಿ 8 ಗಂಟೆಗೆ ಚಂದ್ರಮಂಡಲೋತ್ಸವ ಪೂಜೆ ನಡೆಯಲಿದೆ.

ಮಾರ್ಚ್ ಸಂಜೆ 6.30 ಗಂಟೆಗೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ, ಸರ್ವಧರ್ಮ ಸಮ್ಮೇಳನ ನಡೆಯಲಿದೆ. ರಾತ್ರಿ 8ಕ್ಕೆ ಕಾಲಭೈರವೇಶ್ವರ ಸ್ವಾಮಿಯ ತಿರುಗಣಿ ಉತ್ಸವ,ಪುಷ್ಕರಣಿಯಲ್ಲಿ ತೆಪ್ಪೋತ್ಸವ ನಂತರ ನಾಟಕ ಪ್ರದರ್ಶನ ಕಾರ್ಯಕ್ರಮಗಳು ನಡೆಯಲಿವೆ.

ಮಾ.7 ರ ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಗಂಗಾಧರೇಶ್ವರ ಸ್ವಾಮಿಯ ಮಹಾರಥೋತ್ಸವ ಹಾಗೂ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮಿಯವರ ಅಡ್ಡಪಾಲಕಿ ಉತ್ಸವ ಬಹಳ ವಿಜ್ರಂಭಣೆಯಿಂದ ಜರುಗಲಿದೆ.

Adichunchanagiri  ನಾಡಿನಾದ್ಯಂತ ಸಹಸ್ರಾರು ಭಕ್ತರು ಆಗಮಿಸಲಿದ್ದಾರೆ. ಸಂಜೆ 6 ಗಂಟೆಗೆ ನೂರಾರು ಗ್ರಾಮದೇವತೆಗಳ ಉತ್ಸವ ಮೂರ್ತಿಗಳೊಂದಿಗೆ ಗಿರಿ ಪ್ರದಕ್ಷಿಣೆ ನಡೆಯಲಿದೆ.ಬಳಿಕ ಸೋಮೇಶ್ವರ ಸ್ವಾಮಿಯ ಉತ್ಸವ ನಡೆಯಲಿದೆ.ಮಾರ್ಚ್ 8ರ ಬೆಳಿಗ್ಗೆ 9 ಗಂಟೆಗೆ ಕ್ಷೇತ್ರದ ಬಿಂದು ಸರೋವರದಲ್ಲಿ ಅವಭೃತ ಸ್ನಾನ ಮಹಾಭಿಷೇಕ ಮತ್ತು ಸಭಾ ಕಾರ್ಯಕ್ರಮದ ಬಳಿಕ ಧರ್ಮಧ್ವಜಾವರೋಹಣದೊಂದಿಗೆ 9 ದಿನಗಳ ಜಾತ್ರಾ ಮಹೋತ್ಸವಕ್ಕೆ ತೆರೆಬೀಳಲಿದೆ.

ಇಂದಿಗೂ ಪೂಜ್ಯ ಸ್ವಾಮಿಗಳವರ ಅನುಪಸ್ಥಿತಿಯಲ್ಲಿ ಆ ಎಲ್ಲಾ ಸೇವಾ ಕಾರ್ಯಗಳು ಮುಂದುವರಿಯುತ್ತಿವೆ.ಸ್ವಾಮೀಜಿಯವರು ಇಲ್ಲದಿರಬಹುದು, ಆದರೆ ಶ್ರೀಕ್ಷೇತ್ರದಲ್ಲಿ ಹಮ್ಮಿಕೊಳ್ಳುವ ಪ್ರತಿಯೊಂದು ಕಾರ್ಯದ ಯಶಸ್ಸಿನ ಹಿಂದೆ ಸ್ವಾಮಿಗಳವರ ಉಪಸ್ಥಿತಿಯನ್ನು ಇಂದಿಗೂ ಕಾಣಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು.

ರಾ. ಹ. ತಿಮ್ಮೇನಹಳ್ಳಿ, ಶಿವಮೊಗ್ಗ 9880839575.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shivamogga Namma Halli Theatre | ಶಿವಮೊಗ್ಗದಲ್ಲಿ ನಮ್ಮಹಳ್ಳಿ ಥಿಯೇಟರ್ ದಶಮಾನೋತ್ಸವ

0

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

How to Face Exams ಪರೀಕ್ಷೆಯನ್ನ ಆತ್ಮವಿಶ್ವಾಸದಿಂದ ಎದುರಿಸಿ-ಪ್ರಜ್ವಲ್ ಜೈನ್

How to Face Exams ವಿದ್ಯಾರ್ಥಿಗಳು ಪರೀಕ್ಷೆ ಎಂದರೆ ಭಯಪಡುವ ಅಗತ್ಯವಿಲ್ಲ. ಕಬ್ಬಿಣದ ಕಡಲೆ ಎಂಬ ಮನೋಭಾವ ಬೇಡ. ಸರಿಯಾದ ಅಧ್ಯಯನ ಕ್ರಮವನ್ನು ಅನುಸರಿಸಿ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು ಎಂದು ಜೆಸಿ ಅಂತರಾಷ್ಟ್ರೀಯ ತರಬೇತುದಾರ ಪ್ರಜ್ವಲ್ ಜೈನ್ ಹೇಳಿದರು.

ಶಿವಮೊಗ್ಗದ ರಾಜೇಂದ್ರನಗರದ ರೋಟರಿ ಶಾಲೆಯ ರೋಟರಿ ಸಭಾಂಗಣದಲ್ಲಿ ಪ್ರೌಢಶಾಲೆಯ ಮಕ್ಕಳಿಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಪರೀಕ್ಷೆ ಹಬ್ಬ, ಪರೀಕ್ಷೆ ಎಂದರೆ ಭಯ ಬೇಡ” ವಿಷಯ ಕುರಿತು ಮಾತನಾಡಿದರು.

ವಿದ್ಯಾರ್ಥಿಗಳು ಉತ್ತಮ ಆಹಾರ ತೆಗೆದುಕೊಳ್ಳುವ ಜತೆಯಲ್ಲಿ ಸರಿಯಾದ ದಿನನಿತ್ಯದ ಕಲಿಕಾ ಕ್ರಮವನ್ನು ಪಾಲಿಸಬೇಕು. ಶ್ರದ್ಧೆ, ಏಕಾಗ್ರತೆಯಿಂದ ಅಧ್ಯಯನ ನಡೆಸಬೇಕು. ಕಲಿಕಾ ಸಾಮಾರ್ಥ್ಯ ವೃದ್ಧಿಯಾಗುವ ಜತೆಯಲ್ಲಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಇದೇ, ಸಂದರ್ಭದಲ್ಲಿ ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಮಾತನಾಡಿ, ಇಂದು ಶಿಕ್ಷಣ ವ್ಯಾಪಾರೀಕರಣ ಆಗುತ್ತಿದೆ. ಇಂತಹ ಶಿಬಿರಗಳನ್ನು ಹೆಚ್ಚು ಹೆಚ್ಚು ಶುಲ್ಕ ಪಡೆದು ನೀಡಲಾಗುತ್ತಿದೆ. ಆದರೆ ಜೆಸಿ ಸಹ್ಯಾದ್ರಿ ಸಂಸ್ಥೆ ವತಿಯಿಂದ ಅನೇಕ ಶಾಲೆಗಳಲ್ಲಿ ಉಚಿತವಾಗಿ ತರಬೇತಿ ಶಿಬಿರ ನಡೆಸುತ್ತಿದೆ. ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

How to Face Exams ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಸಿಐ ಸಹ್ಯಾದ್ರಿ ಶಿವಮೊಗ್ಗ ಅಧ್ಯಕ್ಷೆ ಸುಷ್ಮಾ ಹಿರೇಮಠ್ ಮಾತನಾಡಿ, ಪರೀಕ್ಷೆ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಗೆ ಇಂತಹ ಶಿಬಿರಗಳ ಸೌಲಭ್ಯ ಒದಗಿಸುವುದರಿಂದ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಲು ಮಾರ್ಗದರ್ಶನ ಸಿಗುತ್ತದೆ. ಪರೀಕ್ಷಾ ಭಯ ಹೋಗಿಸಲು ಸಾಧ್ಯವಾಗುತ್ತದೆ. ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಧನಾತ್ಮಕ ಆಲೋಚನೆಯೊಂದಿಗೆ ಮುನ್ನಡೆಯಬೇಕು. ಯಶಸ್ಸು ಗಳಿಸಲು ಸಹಕಾರಿ ಆಗುತ್ತದೆ ಎಂದು ತಿಳಿಸಿದರು.

ಜೆಸಿಐ ಸಹ್ಯಾದ್ರಿ ಶಿವಮೊಗ್ಗ ಉಪಾಧ್ಯಕ್ಷ ಬಿ.ಎನ್.ಸಂತೋಷ್‌ಕುಮಾರ್, ವಲಯ ಉಪಾಧ್ಯಕ್ಷ ಸತೀಶ್‌ಚಂದ್ರ, ಸಹ ಕಾರ್ಯದರ್ಶಿ ಜಿ.ವಿ.ಗಣೇಶ್, ಮುಖ್ಯಶಿಕ್ಷಕ ಸೂರ್ಯನಾರಾಯಣ್, ಜಯಶೀಲ ಬಾಯಿ, ಜಿ.ವಿಜಯ್‌ ಕುಮಾರ್ ಹಾಗೂ ಸಂಸ್ಥೆಯ ಪದಾಧಿಕಾರಿಗಳು, ನಿರ್ದೇಶಕರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shivamogga Airport ಪ್ರಕೃತಿ ಸಂಸ್ಕೃತಿ ಸಿರಿಯ ಶಿವಮೊಗ್ಗದಲ್ಲಿ ವಿಕಾಸದ ಹೊಸ ಅಧ್ಯಾಯ ಆರಂಭ- ಪ್ರಧಾನಿ ಮೋದಿ

0

Shivamogga Airport ಪ್ರಕೃತಿ, ಸಂಸ್ಕೃತಿ ಮತ್ತು ಕೃಷಿಯನ್ನು ಮೇಳೈಸಿಕೊಂಡಿರುವ ಶಿವಮೊಗ್ಗದಲ್ಲಿ ವಿಕಾಸದ ಹೊಸ ಅಧ್ಯಾಯ ಆರಂಭವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಶಿವಮೊಗ್ಗದ ಸೋಗಾನೆಯಲ್ಲಿ ನೂತನವಾಗಿ ನಿರ್ಮಿಸಿರುವ ವಿಮಾನ ನಿಲ್ದಾಣ ಉದ್ಘಾಟಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ, ಶಿಲಾನ್ಯಾಸವನ್ನು ನೆರವೇರಿಸಿ ಅವರು ಮಾತನಾಡಿದರು.

ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಪ್ರಾರಂಭವಾಗುವ ಮೂಲಕ ಇಲ್ಲಿನ ಧೀರ್ಘ ಕಾಲದ ಬೇಡಿಕೆ ಈಡೇರಿದೆ. ವಿಮಾನ ನಿಲ್ದಾಣ ಅತ್ಯಂತ ಸುಂದರವಾಗಿ ನಿರ್ಮಾಣಗೊಂಡಿದೆ. ಇದು ಜಿಲ್ಲೆಯ ಜನರ ಕನಸಿನ ಅಭಿಯಾನವಾಗಿದೆ. ರೈಲ್ವೇ-ಹೇರ್‍ವೇ-ಹೈವೇ ಮತ್ತು ಡಿಜಿಟಲ್ ಸಂಪರ್ಕದಲ್ಲಿ ದಾಪುಗಾಲು ಇರಿಸಲಾಗುತ್ತಿದೆ ಎಂದು ಅವರು ಹೇಳಿದರು.

ಬಿ.ಎಸ್ ಯಡಿಯೂರಪ್ಪ ಅವರ ಜನ್ಮ ದಿನದಂದೇ ಸಾವಿರಾರು ಕೋಟಿ ರೂಪಾಯಿ ವೆಚ್ವದಲ್ಲಿ ಕೈಗೊಂಡಿರುವ ಹತ್ತಾರು ಕಾಮಗಾರಿಗಳ ಲೋಕಾರ್ಪಣೆ, ಶಂಕುಸ್ಥಾಪನೆ ನಡೆಸಿರುವುದು ಹೆಮ್ಮೆಯ ವಿಚಾರ. ಅವರು ಬಡವರ ಪರ ಮತ್ತು ಜನಪರ ಕಾರ್ಯಗಳ ಮೂಲಕ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ ಎಂದರು.

Shivamogga Airport ರಾಜ್ಯದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳಾಗುತ್ತಿದ್ದು ವಿಕಾಸದ ಹಾದಿಯನ್ನು ಚುರುಕಾಗಿಸಿದೆ. ಗ್ರಾಮೀಣ ಭಾಗಗಳಲ್ಲಿಯೂ ಉತ್ತಮ ಅಭಿವೃದ್ದಿ ಆಗುತ್ತಿದೆ ಎಂದರು.

ಏರ್ ಇಂಡಿಯಾದ ಸಾರ್ಮಥ್ರ್ಯ ಇಡೀ ವಿಶ್ವವೇ ಮಾತನಾಡಿ, ಮೆಚ್ಚುವಂತೆ ಬೆಳಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ. 2014 ರ ಹಿಂದೆ ದೊಡ್ಡ ನಗರಗಳಲ್ಲಿ ಮಾತ್ರ ವಿಮಾನ ನಿಲ್ದಾಣ ಇತ್ತು. ಈಗ ಎಲ್ಲೆಡೆ ಅಭಿವೃದ್ದಿ ಆಗುತ್ತಿದೆ. 74 ಹೊಸ ವಿಮಾನ ನಿಲ್ದಾಣ ಸ್ಥಾಪನೆಗೆ ಚಾಲನೆ ನೀಡಲಾಗಿದ್ದು, ಸಾಮಾನ್ಯರೂ ವಿಮಾನಯಾನ ಮಾಡುವ ಅವಕಾಶ ಒದಗಿಸಲಾಗುತ್ತಿದೆ. ಬಡತನ ನಿರ್ಮೂಲನೆ ಜೊತೆಗೆ ಎಲ್ಲಾ ರೀತಿಯ ಸುಸ್ಥಿರ ಅಭಿವೃದ್ಧಿಗೆ ಕ್ರಮವಹಿಸಿದೆ ಎಂದು ಅವರು ಹೇಳಿದರು.

ಶಿವಮೊಗ್ಗವು ಪ್ರಕೃತಿ- ಸಂಸ್ಕೃತಿ ಮತ್ತು ಕೃಷಿಯ ರಹದಾರಿಯಾಗಿದೆ. ರಾಷ್ಟ್ರಕವಿ ಕುವೆಂಪು ಜನಿಸಿದ ಈ ನೆಲ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ.ಇಲ್ಲಿನ ವನ್ಯಜೀವ ವೈವಿಧ್ಯತೆ, ಆಗುಂಬೆಯ ಅದ್ಭುತ ರಮಣೀಯತೆ, ಸಿಂಹಧಾಮ ಸಫಾರಿ, ಪರ್ವತಗಳು, ನದಿ ಬೆಟ್ಟಗಳು, ಗ್ರಾಮ ಮತ್ತೂರು, ಸ್ವಾತಂತ್ರ್ಯ ಹೋರಾಟಗಾರರ ಈಸೂರು, ಸಿಂಗಂದೂರು ಚೌಡೇಶ್ವರಿ, ಶ್ರೀಧರಾಶ್ರಮ ಹೀಗೆ ಅನೇಕ ಪುರಾಣ ಪ್ರಸಿದ್ದ ಸ್ಥಳಗಳನ್ನು ಹೊಂದಿದೆ.

ಶಿವಮೊಗ್ಗ ಉತ್ತಮವಾದ ಕೃಷಿ ಕೇಂದ್ರ ಆಗಿದ್ದು ಭತ್ತ, ಅಡಿಕೆ, ಟೀ, ಮಸಾಲ ಪದಾರ್ಥ, ವಿವಿಧ ಧಾನ್ಯಗಳು ಹೀಗೆ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತದೆ. ರೈತರು ಬೆಳೆದ ಬೆಳೆಗೆ ಉತ್ತಮ ಮಾರುಕಟ್ಟೆ ಒದಗಿಸಲು ಸಂಪರ್ಕದ ಅವಶ್ಯಕತೆ ಇದೆ. ಸರ್ಕಾರ ಇದನ್ನು ಒದಗಿಸುತ್ತಿದೆ. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲ್ವೇ ಮಾರ್ಗದಿಂದ ಹೊಸ ಸಂಪರ್ಕ ಸಾಧ್ಯವಾಗಿ ಕೃಷಿ ಮಾರುಕಟ್ಟೆಗೆ ಉತ್ತೇಜನ ದೊರೆಯಲಿದೆ. ಹಾಗೆಯೇ ಕೋಟೆಗಂಗೂರು ಕೋಚ್ ಟರ್ಮಿನಲ್ ನಿರ್ಮಾಣದಿಂದ ಸಂಪರ್ಕ ಸಾಮಥ್ರ್ಯ ಹೆಚ್ಚಲಿದೆ ಎಂದರು.

ಶಿವಮೊಗ್ಗ ಉತ್ತಮ ಶಿಕ್ಷಣ ಕೇಂದ್ರವೂ ಆಗಿದ್ದು ಸಂಪರ್ಕ ಮತ್ತು ಮೂಲಭೂತ ಸೌಕರ್ಯದ ಅಭಿವೃದ್ದಿಯಿಂದ ಉದ್ಯೋಗಾವಕಾಶ ಹೆಚ್ಚಲಿದೆ. ಪ್ರತಿ ಮನೆಗೆ ಕುಡಿಯುವ ನೀರು ಸಂಪರ್ಕ ನೀಡಲು ಜಲ ಜೀವನ ಮಿಷನ್ ಅಡಿಯಲ್ಲಿ ನೀರಿನ ಸಂಪರ್ಕ ನೀಡಲಾಗತ್ತಿದೆ ಎಂದರು.

ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮಾತನಾಡಿ, ದೇಶದಲ್ಲಿ ಕರ್ನಾಟಕ ನಂ.1 ರಾಜ್ಯವಾಗುವ ನಿಟ್ಟಿನಲ್ಲಿ ಬೆಳೆಯುತ್ತಿದೆ. ತಾಂತ್ರಿಕತೆ, ನಾವೀನ್ಯತೆ ಕ್ಷೇತ್ರದಲ್ಲಿ ದಾಪುಗಾಲು ಇರಿಸುತ್ತಿದ್ದು ವಾಣಿಜ್ಯ, ವ್ಯಾಪಾರ ಕ್ಷೇತ್ರದಲ್ಲಿ ಬೆಳವಣಿಗೆಯಾಗುತ್ತಿದೆ. ಹೊಸ ಉದ್ಯೋಗ ಸೃಷ್ಟಿಯಾಗುತ್ತಿದೆ. ಆರೋಗ್ಯ, ವಸತಿ ಮತ್ತು ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ವಿಮಾನ ನಿಲ್ದಾಣಗಳ ಸ್ಥಾಪನೆಯಿಂದ ದೇಶದ ಮೂಲೆ ಮೂಲೆಗೆ ಸಂಪರ್ಕ ಸಾಧ್ಯವಾಗುತ್ತಿದೆ ಎಂದ ಅವರು ಶಿವಮೊಗ್ಗ ವಿಮಾನ ನಿಲ್ದಾಣ ಇನ್ನೊಂದೆರಡು ವರ್ಷದಲ್ಲಿ ಅಂತರಾಷ್ಟ್ರೀಯ ನಿಲ್ದಾಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಕೇಂದ್ರದ ಸಂಸದೀಯ ವ್ಯವಹಾರ ಸಚಿವರಾದ ಪ್ರಹ್ಲಾದ ಜೋಷಿ, ಸಂಸದರಾದ ಬಿ.ವೈ.ರಾಘವೇಂದ್ರ, ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸಿನಾರಾಯಣಗೌಡ, ನಗರಾಭಿವೃದ್ದಿ ಸಚಿವರಾದ ಬಿ.ಎ.ಬಸವರಾಜ, ಲೋಕೋಪಯೋಗಿ ಸಚಿವರಾದ ಸಿ.ಸಿ.ಪಾಟಿಲ್, ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್, ವಸತಿ ಸಚಿವರಾದ ವಿ.ಸೋಮಣ್ಣ, ಶಾಸಕರಾದ ಕೆ.ಎಸ್.ಈಶ್ವರಪ್ಪ, ಕೆ.ಬಿ.ಅಶೋಕನಾಯ್ಕ, ಹರತಾಳು ಹಾಲಪ್ಪ ಆಯನೂರು ಮಂಜುನಾಥ್, ರುದ್ರೇಗೌಡ, ಡಿ.ಎಸ್.ಅರುಣ್, ಭಾರತಿ ಶೆಟ್ಟಿ ಪಾಲ್ಗೊಂಡಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

NSS Talent Ankitha | ಅರಳಿದ ಪ್ರತಿಭೆ ಅಂಕಿತಾ

0

NSS Talent Ankitha | ಅರಳಿದ ಪ್ರತಿಭೆ ಅಂಕಿತಾ

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Kuvempu ಕುವೆಂಪು ಅವರನ್ನ ಮರೆತ ವಿಮಾನ ನಿಲ್ದಾಣ ಬ್ಯಾನರ್ ಗಳು

0

Kuvempu  ದೂರಕೆ ದೂರಕೆ ಬಹುಬಹು ದೂರಕ
ಹಾರುವೆ ಗಾನ ವಿಮಾನದಲಿ..
ಎಂದು ಕವಿಸಮಯದಲ್ಲಿ ಮಲೆನಾಡಿಗೆ ಗಾನ ವಿಮಾನದ ಕಲ್ಪನೆ ಕುವೆಂಪು ಅವರದ್ದು.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಹೆಸರಿಡುವ ಬಗ್ಗೆ ರಾಜ್ಯ ಸರ್ಕಾರ
ತೀರ್ಮಾನಿಸಿ ಶಿಫಾರಸು ಮಾಡಿದೆ ಎಂಬ ಸಂಗತಿ ಕೂಡ ಪ್ರಕಟವಾಗಿದೆ.

Kuvempu  ಆದರೆ ವಿಮಾನ ನಿಲ್ದಾಣದ ಉದ್ಘಾಟನೆಯ ದಿನ ಇಡೀ ನಗರದ ತುಂಬ ಬಿಜೆಪಿ ಪಕ್ಷದ ಬ್ಯಾನರ್ ಗಳು. ಶುಭ, ಸ್ವಾಗತ ಕೋರುವ ಫ್ಲೆಕ್ಸಿಗಳೇ ತುಂಬಿ ತುಳುಕುತ್ತಿದ್ದವು.

ಮಹಾಕವಿಯ ಹೆಸರನ್ನಿಡುವ ಯಾವ ಸೂಚನೆಯೂ ಇರದೇ ಒಂದು ರೀತಿಯ ಜಾಣಮೌನ ಎದ್ದು ಕಾಣುತ್ತಿತ್ತು. ಯಾರಾದರೂ ಒಂದು ಬ್ಯಾನರ್ ನಲ್ಲೂ ಗೌರವಕ್ಕಾದರೂ
ಕುವೆಂಪು ಅವರ ಹೆಸರು,ಫೋಟೋ
ಹಾಕಿರಲಿಲ್ಲ. ಅಂದರೆ ಪಕ್ದ ಎಲ್ಲರಿಗೂ
ಕುವೆಂಪು ನಾಮಕರಣ ಆಗುವುದಿಲ್ಲ ಎಂಬ ವಾಸ್ತವದ ಅರಿವಿದ್ದಿರಲೇ ಬೇಕು.

ಒಟ್ಟಾರೆ ವಿಮಾನ ನಿಲ್ದಾಣಕ್ಕೆ ಹೆಸರಿಡುವ ಪ್ರಸ್ತಾವನೆ ಸಮಯದಲ್ಲಿ
ಕ್ರಿಯಾಶೀಲರಾಗಿದ್ದ ನಾಯಕರೂ
ಈ ಬಗ್ಗೆ ಮಾಧ್ಯಮಗಳಿಗೆ ಏನಾದರೂ ತೊಡಕಿದ್ದರೆ ತಿಳಿಸಬಹುದಿತ್ತು. ಒಂದು ರೀತಿ ಸಾರ್ವಜನಿಕರಲ್ಲಿ ವಿಮಾನ ನಿಲ್ದಾಣಕ್ಕೆ ಹೆಸರಿಡುವ ಪ್ರಕ್ರಿಯೆ ಬಗ್ಗೆ
ದೊಡ್ಡ ಸಂದೇಹ ಹುಟ್ಟಿದೆ.

ಯಾವುದೂ ಒತ್ತಾಯವಿಲ್ಲ.ಆದರೆ
ಪ್ರಸ್ತಾವನೆ ಏನಾಯಿತು? ಎಂಬುದೇ
ಮಿಲಿಯನ್ ಡಾಲರ್ ಪ್ರಶ್ನೆ.???

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Namma Halli Theatre ಮಕ್ಕಳಲ್ಲಿ ರಂಗಭೂಮಿ ಅಭಿರುಚಿ ಬೆಳೆಸಲು ನೂತನ ಶಿಕ್ಷಣ ನೀತಿಯಲ್ಲಿ ಅವಕಾಶ-ಸಂದೇಶ್ ಜವಳಿ

0

Namma Halli Theatre  ನಮ್ಮ ಹಳ್ಳಿ ಥಿಯೇಟರ್ ತಂಡಕ್ಕೆ ಇಂದು 10 ವರ್ಷದ ಸಂಭ್ರಮ. 10 ವರ್ಷದಲ್ಲಿ ಒಂದು ರಂಗ ಕಲಾ ತಂಡ ಶಿವಮೊಗ್ಗ ಮಾತ್ರವಲ್ಲದೆ ರಾಜ್ಯದ್ಯಂತ ಹೆಸರು ಮಾಡಿದೆ ಎಂದರೇ ಅದು ಸಾಮಾನ್ಯ ವಿಷಯವಲ್ಲ ಎಂದು ನಮ್ಮ ಹಳ್ಳಿ ಥಿಯೇಟರ್ ಸಂಸ್ಥೆಯ ಅಧ್ಯಕ್ಷ ಪ್ರವೀಣ್ ಎಸ್ ಹಾಲ್ಮತ್ತೂರು ತಿಳಿಸಿದರು.

ಶಿವಮೊಗ್ಗದ ಸ್ವರ್ಣ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದ್ದ ನಮ್ಮ ಹಳ್ಳಿ ಥಿಯೇಟರ್ ತಂಡದ ದಶಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಅಮರ ಪುತ್ರರು ಚೆನ್ನಬೈರಾ ದೇವಿ, 10 ಮೂಡಿದ ಹೊತ್ತು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

Namma Halli Theatre  ಆರು ಜನ ಸಮಾನ ವಯಸ್ಕರ ಸೇರಿ ತಂಡ ಕಟ್ಟಿಕೊಂಡು ರಂಗ ಪಯಣಕ್ಕೆ ನಾಂದಿ ಹಾಡಿದ್ದಾರೆ ಎಂದರು.

ನಮ್ಮ ಹಳ್ಳಿ ಥಿಯೇಟರ್ ತಂಡದಿಂದ ಸಮಾಜ ಸೇವಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ದಂತ ವೈದ್ಯ ಡಾ. ವಿ ಎಲ್ ಎಸ್ ಕುಮಾರ್ ಅವರು, ಕೋವಿಡ್ ಸಂದರ್ಭದಲ್ಲಿ ನಾವೆಲ್ಲ ಅನೇಕ ಸಮಸ್ಯೆಗಳನ್ನು ಎದುರಿಸಿದ್ದೇವೆ. ಅಂತಹ ಸ್ಥಿತಿ ಮುಂದಿನ ದಿನದಲ್ಲಿ ಎದುರಾಗುವುದು ಬೇಡ. ನಿಮ್ಮ ಕೈಲಾದ ಸಹಾಯವನ್ನು ಮಾಡಿ
ಮಾನವೀಯತೆ ಮರೆಯಿರಿ ಎಂದು ಕಿವಿ ಮಾತನ್ನಾಡಿದರು.

ರಂಗಸಾದಕ ಪ್ರಶಸ್ತಿ ಸ್ವೀಕರಿಸಿದ ರಂಗಕರ್ಮಿಗಳಾದ ಶ್ರೀಮತಿ ದಾಕ್ಷಾಯಿಣಿ ಭಟ್ ಅವರು , ಇಲ್ಲಿಯವರೆಗೆ ವಿವಿಧ ಕಡೆಗಳಲ್ಲಿ ಅನೇಕ ಪ್ರಶಸ್ತಿಗಳು ದೊರೆತಿವೆ. ಆದರೆ ನಮ್ಮ ತವರು ಜಿಲ್ಲೆಯಲ್ಲಿ ಪ್ರಶಸ್ತಿ ಪಡೆಯುತ್ತಿರುವ ಸಂತೋಷಕ್ಕೆ ಪಾರವೇ ಇಲ್ಲ. ನನ್ನ ರಂಗಭೂಮಿ ಪಯಣದಲ್ಲಿ ಈ ಪ್ರಶಸ್ತಿ ಮರೆಯಲು ಸಾಧ್ಯವಿಲ್ಲ. ನಮ್ಮ ಹಳ್ಳಿ ಥಿಯೇಟರ್ ತಂಡವು ಈ ರೀತಿ ರಂಗಕರ್ಮಿಗಳನ್ನ ಗುರುತಿಸಿ ಪ್ರಶಸ್ತಿ ನೀಡುವುದು ನಿಜಕ್ಕೂ ಶ್ಲಾಘನೀಯ ಎಂದರು.

ರಂಗಾಯಣ ನಿರ್ದೇಶಕ ಸಂದೇಶ ಜವಳಿ ಅವರು ಮಾತನಾಡಿ, ಶಾಲಾ ಹಂತದಲ್ಲಿ ಮಕ್ಕಳಿಗೆ ರಂಗಭೂಮಿ ಬಗ್ಗೆ ಅರಿವು ಮೂಡಿಸಲು ನೂತನ ಶಿಕ್ಷಣ ನೀತಿಯಿಂದ ಅನೇಕ ಬದಲಾವಣೆಗಳು ಆಗಿವೆ. ಮುಂದಿನ ದಿನಗಳಲ್ಲಿ ರಂಗಭೂಮಿ ಬಗ್ಗೆ ಮಕ್ಕಳಲ್ಲಿ ಹೊಸ ಅಭಿರುಚಿ ಬೆಳೆಯಲಿದೆ ಎಂದರು.

ಶ್ರೀಪಾದ ತೀರ್ಥಹಳ್ಳಿ ಮತ್ತು ಶಿವಕುಮಾರ್ ತೀರ್ಥಹಳ್ಳಿಯವರ ಸಹ ನಿರ್ದೇಶನ ಮತ್ತು ಸಂಗೀತ ಸಂಯೋಜನೆ ಇರುವ ರಾಜ್ಯ ಪ್ರಶಸ್ತಿ ಪಡೆದ ತುರುಬು ಕಟ್ಟುವ ಹದನ ನಾಟಕ ಪ್ರದರ್ಶನ ನಡೆಯಿತು.

ಈ ಸಂದರ್ಭದಲ್ಲಿ
ನಮ್ಮ ಹಳ್ಳಿ ಥಿಯೇಟರ್ ರಂಗ ಸಮಾಜ ಸದಸ್ಯರಾದ ಡಾಕ್ಟರ್ ಗುರುಪ್ರಸಾದ್ ಟಿ ಆರ್, ಪ್ರಮುಖರಾದ ಸ್ಪೂರ್ತಿ ಪ್ರಸಾದ್, ಸಂಧ್ಯಾ ಕಾವೇರಿ, ವಿನಯ್, ಸಂದೇಶ್ ಭಟ್, ನಮ್ಮ ಹಳ್ಳಿ ಥಿಯೇಟರ್ ಕಲಾವಿದರು, ರಂಗಾಸಕ್ತರು ಹಾಗೂ ಇನ್ನಿತರರು ಭಾಗಿಯಾಗಿದ್ದರು‌

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

B.S.Yediyurappa ಬಿಎಸ್ ವೈ 80 ನೇ ಜನ್ಮದಿನಕ್ಕೆ ಅಭಿಮಾನಿಗಳಿಂದ 80 ಕೆಜಿ ತೂಕದ ಕೇಕ್

0

B.S.Yediyurappa ಶಿವಮೊಗ್ಗ ಜಿಲ್ಲೆ ಭದ್ರಾವತಿ ಮತ್ತು ಶಿವಮೊಗ್ಗದ ತಮಿಳು ಸಮುದಾಯದ ಅಭಿಮಾನಿಗಳು ಸೇರಿ ಶಿವಮೊಗ್ಗದ ವಿನೋಬನಗರದ ಬಿ.ಎಸ್. ಯಡಿಯೂರಪ್ಪನವರ ಮನೆಗೆ ತೆರಳಿ 80 ಕೆಜಿ ತೂಕದ ಕೇಕ್ ಕತ್ತರಿಸಿ ತಮ್ಮ ನೆಚ್ಚಿನ ನಾಯಕನ ಜನುಮದಿನವನ್ನು ಆಚರಿಸಿದ್ದಾರೆ.

ಅಭಿಮಾನಿಗಳು ಯಡಿಯೂರಪ್ಪನವರ ಪರ ಘೋಷಣೆ ಕೂಗಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು.

B.S.Yediyurappa ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಗೃಹ ಸಚಿವ ಆರಗ ಜ್ಞಾನೇಂದ್ರ , ಪುತ್ರರಾದ ಬಿ ವೈ ರಾಘವೇಂದ್ರ , ಬಿವೈ ವಿಜಯೇಂದ್ರ ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.