Sunday, April 12, 2026
Sunday, April 12, 2026
Home Blog Page 1242

Karnataka Assembly Election ಜಿಲ್ಲೆಯ ವಿವಿಧ ವಿಧಾನಸಭಾ ಚುನಾವಣಾ ಕ್ಷೇತಗಳಲ್ಲಿ ನಾಮ ಪತ್ರ ಸಲ್ಲಿಕೆ, ಎಲ್ಲೆಲ್ಲಿ ಎಷ್ಟೆಷ್ಟು?

0

Karnataka Assembly Election 2023 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ಜಿಲ್ಲೆಯಲ್ಲಿ ಒಟ್ಟು 06 ನಾಮಪತ್ರಗಳ ಸಲ್ಲಿಕೆಯಾಗಿದೆ.

ಭದ್ರಾವತಿ-112 ವಿಧಾನಸಭಾ ಕ್ಷೇತ್ರದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ(ಕೆ.ಆರ್.ಎಸ್) ಸುಮಿತ್ರಾ ಬಾಯಿ 01 ನಾಮಪತ್ರ, ಶಿವಮೊಗ್ಗ-113 ಕ್ಷೇತ್ರದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ರಾಜೇಂದ್ರ ಡಿ ಇವರು 01 ನಾಮಪತ್ರ, ಸೊರಬ-116 ಕ್ಷೇತ್ರದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಟಿ.ಮಂಜುನಾಥ ಇವರು 02 ನಾಮಪತ್ರಗಳು, ಸಾಗರ-117 ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಹೆಚ್ ಹಾಲಪ್ಪ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ತೀ.ನ.ಶ್ರೀನಿವಾಸ ತಲಾ 01 ಸೇರಿ ಒಟ್ಟು 05 ಅಭ್ಯರ್ಥಿಗಳು 06 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

Karnataka Assembly Election ಶಿವಮೊಗ್ಗ ಗ್ರಾಮಾಂತರ-111, ತೀರ್ಥಹಳ್ಳಿ-114 ಹಾಗೂ ಶಿಕಾರಿಪುರ-115 ಕ್ಷೇತ್ರದಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿರುವುದಿಲ್ಲ.

ಈವರೆಗೆ ಜಿಲ್ಲೆಯ 07 ವಿಧಾನಸಭಾ ಕ್ಷೇತ್ರಗಳು 05 ಅಭ್ಯರ್ಥಿಗಳು 07 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

Home Guard and Civil Defense Training Academy ಜಿಲ್ಲಾ ಗೃಹರಕ್ಷಕ ದಳದ ಎಚ್. ಜೈಶಂಕರ್ ಗೆ ಚಿನ್ನದ ಪದಕ

0

Home Guard and Civil Defense Training Academy ಬೆಂಗಳೂರಿನ
ಗೃಹರಕ್ಷಕ ಹಾಗೂ ಪೌರರಕ್ಷಣೆ ತರಬೇತಿ ಅಕಾಡೆಮಿಯಲ್ಲಿ
ಇತ್ತೀಚೆಗೆ ನಡೆದ ಗೃಹರಕ್ಷಕ ಅಧಿಕಾರಿಗಳ ತರಬೇತಿಯಲ್ಲಿ
ಭಾಗವಹಿಸಿದ್ದ ಶಿವಮೊಗ್ಗ ಜಿಲ್ಲಾ ಘಟದ ಗೃಹರಕ್ಷಕ ಹೆಚ್.
ಜೈಶಂಕರ್‌ರವರು ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿ ಚಿನ್ನದ
ಪದಕ ಗಳಿಸಿದ್ದಾರೆ.

Home Guard and Civil Defense Training Academy ಇವರಿಗೆ ಜಿಲ್ಲಾ ಸಮಾದೇಷ್ಟರಾದ ಚಂದನ
ಪಟೇಲ್ ಎಂ.ಪಿ., ಉಪ ಸಮಾದೇಷ್ಟರು, ಕಚೇರಿಯ ಸಿಬ್ಬಂದಿ ವರ್ಗ
ಹಾಗೂ ಜಿಲ್ಲಾ ಘಟಕಾಧಿಕಾರಿಗಳು ಮತ್ತು ಎಲ್ಲಾ ಸದಸ್ಯರುಗಳ
ಅಭಿನಂದಿಸಿದ್ದಾರೆ.

Congress Karnataka ಕಾಂಗ್ರೆಸ್ 3 ನೇ ಪಟ್ಟಿಯಲ್ಲಿ ಶಿವಮೊಗ್ಗ ನಗರದ ಅಭ್ಯರ್ಥಿ ಹೆಸರು

Congress Karnataka ಶಿವಮೊಗ್ಗ ನಗರಕ್ಕೆ ಎಚ್ .ಸಿ. ಯೋಗೀಶ್ ಮತ್ತು ಶಿವಮೊಗ್ಗ ಗ್ರಾಮೀಣ ಕ್ಷೇತ್ರಕ್ಕೆ ಶ್ರೀನಿವಾಸ್ ಕರಿಯಣ್ಣ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದೆ. ಇದರೊಂದಿಗೆ ಶಿಕಾರಿಪುರಕ್ಕೆ ಗೋಣಿ ಮಾಲ್ ತೇಶ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.

ಹೊನ್ನಾಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಡಿ.ಜಿ.ಶಾಂತನಗೌಡ ಅಭ್ಯರ್ಥಿಯಾಗಿದ್ದಾರೆ‌.

ಶಿವಮೊಗ್ಗ ಯೂತ್ ಐಕಾನ್ ಅನ್ವೇಷಣೆಯಲ್ಲಿದ್ದ ಕಾಂಗ್ರೆಸ್ ಹೈ ಕಮಾಂಡ್ ಗೆ
ಶಿವಮೊಗ್ಗ ನಗರಪಾಲಿಕೆ ಕಾರ್ಪೋರೇಟರ್ ಎಚ್. ಸಿ. ಯೋಗೀಶ್ ಅವರ ಚುರುಕು ಹಾಗೂ ಹೊಳಪಿನ ಮುಖ ಸೆಳೆದಿದೆ.
ಎಚ್.ಸಿ.ಯೋಗಿಶ್ ಅವರು ಮಾಜಿ ಶಾಸಕ ಎಚ್. ಎಂ. ಚಂದ್ರಶೇಖರ್ ಅವರ ಸುಪುತ್ರರು.

ಶಿವಮೊಗ್ಗ ಗ್ರಾಮೀಣಕ್ಕೆ ಟಿಕೆಟ್ ಪಡೆದಿರುವ ಶ್ರೀನಿವಾಸ್ ಕರಿಯಣ್ಣ ಮಾಜಿ ಶಾಸಕ ಕರಿಯಣ್ಣನವರ ಪುತ್ರರಾಗಿದ್ದಾರೆ.

Congress Karnataka ಈ ಮೂಲಕ ಕಾಂಗ್ರೆಸ್ ಗ್ರಾಮೀಣ ಕ್ಷೇತ್ರದಿಂದ ಪ್ರಬಲ ಆಕಾಂಕ್ಷಿಗಳಾಗಿದ್ದ ನಾರಾಯಣಸ್ವಾಮಿ ಮತ್ತು ಪಲ್ಲವಿ ಅವರಿಗೆ ನಿರಾಶೆಯಾಗಿದೆ.

ಕಾಂಗ್ರೆಸ್ ಪ್ರಕಟಿಸಿದ 3 ನೇ ಪಟ್ಟಿಯಲ್ಲಿ ಇನ್ನೂ ಒಂದು ಪ್ರಮುಖ ಅಂಶ
ಗಮನ ಸೆಳೆದಿದೆ. ಇದೀಗ ಬಿಜೆಪಿ ತೊರೆದು ಕಾಂಗ್ರಸ್ ಸೇರಿದ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಕಾಂಗ್ರೆಸ್ ಅಥಣಿಯಿಂದ ಸ್ಪರ್ಧೆ ಮಾಡಲು ಟಿಕೆಟ್ ನೀಡಿದೆ.

Karnataka Legal Services Authority ಜನಸಾಮಾನ್ಯರ ನೆಮ್ಮದಿಯ ಬದುಕಿಗೆ ಅವಕಾಶಕಾನೂನು ಸೇವಾ ಪ್ರಾಧಿಕಾರದ ಉದ್ದೇಶ- ನ್ಯಾ.ಬಿ.ವೀರಪ್ಪ

0

Karnataka Legal Services Authority ಅರ್ಹರಿಗೆ ಉಚಿತ ಕಾನೂನು ಸೇವೆ, ಸಲಹೆ ನೀಡುವುದಲ್ಲದೆ ಈಗಾಗಲೇ ನ್ಯಾಯಾಲಯದಲ್ಲಿ ದಾಖಲಾಗಿರುವ ಮೊಕದ್ದಮೆಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡುವುದು, ಲೋಕ ಅದಾಲತ್‌ನಲ್ಲಿ ಪ್ರಕರಣಗಳು ವಿಚಾರಣೆಗೆ ಬರುವ ಮುನ್ನವೇ ರಾಜೀಸಂದಾನದ ಮೂಲಕ ಇತ್ಯರ್ಥಗೊಳಿಸಿ, ಜನಸಾಮಾನ್ಯರ ನೆಮ್ಮದಿಯ ಬದುಕಿಗೆ ಅವಕಾಶ ಕಲ್ಪಿಸುವುದು ಕಾನೂನು ಸೇವಾ ಪ್ರಾಧಿಕಾರದ ಉದ್ದೇಶವಾಗಿದೆ ಎಂದು ಹೈಕೋರ್ಟ್ನ ಹಿರಿಯ ನ್ಯಾಯಾಧೀಶ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಕಾರ್ಯಾಧ್ಯಕ್ಷ ಬಿ.ವೀರಪ್ಪ ಅವರು ಹೇಳಿದರು.

ಅವರು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಕೀಲರ ಸಂಘ, ಪೀಪಲ್ ಲಾಯರ್ಸ್ ಗಿಲ್ಡ್ ಮತ್ತು ಎಸ್.ಎಸ್.ಎಸ್.ಎಂ.ಎಸ್. ಸ್ವಯಂ ಸೇವಾ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಕಾನೂನು ಅರಿವು – ನೆರವು ಮಹಾಮೇಳವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

Karnataka Legal Services Authority ರಾಜ್ಯದಲ್ಲಿಯೇ ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸಾ ಕೊಠಡಿಯನ್ನು ಆರಂಭಿಸಲಾಗಿರುವುದು ಸಂತಸದ ಸಂಗತಿ. ಲಿಂಗತ್ವ ಅಲ್ಪಸಂಖ್ಯಾತರು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆ ಸವಾಲುಗಳು ಅನೇಕ. ಸಂವಿಧಾನದ ಆಶಯದಂತೆ ಅವರಿಗೂ ಸಮಾನವಾದ ಹಕ್ಕು ಮತ್ತು ಅವಕಾಶಗಳನ್ನು ಒದಗಿಸಲಾಗಿದೆ. ಆದರೂ ಇನ್ನಷ್ಟು ಸೇವಾ -ಸೌಲಭ್ಯಗಳು ದೊರೆಯುವಂತಾಗಬೇಕು ಎಂದರು.

ಭಾರತೀಯ ಸೈನ್ಯದಲ್ಲೂ ಲಿಂಗತ್ವ ಅಲ್ಪಸಂಖ್ಯಾತರು ಸೇವೆ ಸಲ್ಲಿಸುವಂತಾಗಬೇಕು.ಭ್ರಷ್ಟಾಚಾರ ನಾಗರೀಕ ಸಮಾಜದ ಕಳಂಕ. ಅದು ಕ್ಯಾನ್ಸರ್ ಇದ್ದಂತೆ. ಮನೆಯಲ್ಲಿನ ಪ್ರತಿ ಮಹಿಳೆಯರು ಮನೆಯ ಯಜಮಾನ ತರುವ ಹಣ ನ್ಯಾಯದ ಸಂಪಾದನೆಯೇ ಎಂದು ಪ್ರಶ್ನಿಸುವಂತಾಗಬೇಕು. ತಪ್ಪಿದಲ್ಲಿ ಅದು ಭ್ರಷ್ಟಾಚಾರಕ್ಕೆ ಸಹಕಾರ ನೀಡಿದಂತೆ ಎಂದ ಅವರು ಈ ನಿಟ್ಟಿನಲ್ಲಿ ಎಲ್ಲಾ ಮಹಿಳೆಯರು ಸಂಕಲ್ಪ ಮಾಡುವಂತೆ ಸೂಚಿಸಿದರು.

ಇತ್ತೀಚೆಗೆ ನೀಡಿದ ಒಂದು ಮಹತ್ವದ ತೀರ್ಪಿನಿಂದ ಸಾರಿಗೆ ನಿಯಮಗಳ ಅನುಷ್ಟಾನದಲ್ಲಿ ಅಲ್ಪ ಸಡಿಲಿಕೆ ಮಾಡಿದ್ದರಿಂದಾಗಿ ಪ್ರಕರಣಗಳು ನಿಯಂತ್ರಣಕ್ಕೆ ಬಂದಿವೆ ಮಾತ್ರವಲ್ಲ ಕೋಟ್ಯಾಂತರ ರೂಪಾಯಿಗಳ ಆದಾಯ ಸರ್ಕಾರಕ್ಕೆ ಬಂದಿದೆ ಎಂದರು.

ಪೋಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಶಿಕ್ಷಣ ನೀಡಬೇಕು. ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಪ್ರತಿ ವ್ಯಕ್ತಿಯೂ ಮಾನವೀಯ ನೆಲೆಯಲ್ಲಿಲ ಜೀವನ ನಿರ್ವಹಣೆ ಮಾಡಬೇಕು. ಮಕ್ಕಳು ತಮ್ಮ ಪೋಷಕರನ್ನು ನಿರ್ಲಕ್ಷಿಸುವುದು ಸಲ್ಲದು ಎಂದರು.

ಸಾಧ್ಯವಿರುವಲ್ಲಿ ಮರ-ಗಿಡಗಳನ್ನು ಬೆಳೆಸಿ, ಸ್ವಚ್ಚ, ಸ್ವಸ್ಥ ಹಾಗೂ ಸುಂದರ ಪರಿಸರ ನಿರ್ಮಾಣಕ್ಕೆ ಸಹಕರಿಸುವಂತೆ ಅವರು ಮನವಿ ಮಾಡಿದರು.
ಶಿಕ್ಷಣ ಉತ್ತಮ ಬದುಕಿನ ಬ್ರಹ್ಮಾಸ್ತ್ರಿ ಶಿಕ್ಷಿತರ ಜೀವನ ಸುಖಮಯವಾಗಿರಲಿದೆ. ವ್ಯಕ್ತಿಗೆ ವಿದ್ಯೆಯೊಂದಿಗೆ ವಿನಮ್ರತೆಯೂ ಭೂಷಣ ತರಲಿದೆ. ಅಶಿಕ್ಷಿತ ಹೆಚ್ಚು ಸಂಕಷ್ಟಕ್ಕೊಳಗಾಗುತ್ತಾನೆ. ಶಿಕ್ಷಣ ಎಲ್ಲರ ಬಲಿಷ್ಟ ಅಸ್ತ್ರವಾಗಿದೆ. ಅದರಲ್ಲೂ ಕೆಲವು ಸಾಮಾಜಿಕ ಹೊಣೆಗಾರಿಕೆ ಮರೆತ ವಿದ್ಯಾವಂತರಿಂದಲೇ ಮೋಸ-ವಂಚನೆ ನಡೆಯುತ್ತಿರುವುದು ಆತಂಕಕಾರಿ ಬೆಳವಣಿ ಗೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ, ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ , ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‌ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ವಕೀಲರ ಸಂಘದ ಅಧ್ಯಕ್ಷ ಬಿ.ಜಿ.ಶಿವಮೂರ್ತಿ, ಸಿಮ್ಸ್ ನಿರ್ದೇಶಕ ಡಾ|| ವಿರೂಪಾಕ್ಷಪ್ಪ, ಎಸ್.ಎಸ್.ಎಸ್.ಎಂ.ಎಸ್.ಸಂಸ್ಥೆಯ ನಿರ್ದೇಶಕ ಫಾ|| ಕ್ಲಿಫೋರ್ಡ್ ರೋಷನ್ ಪಿಂಟೋ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ ಸೇರಿದಂತೆ ಅನೇಕ ಗಣ್ಯರು, ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಲಿಂಗತ್ವ ಅಲ್ಪಸಂಖ್ಯಾತರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಕುವೆಂಪು ರಂಗಮಂದಿರದ ಆವರಣದಲ್ಲಿ ಸ್ಥಾಪಿಸಲಾಗಿದ್ದ ಮಹಿಳಾ ಸ್ವಸಹಾಯ ಗುಂಪುಗಳ ಪ್ರತಿನಿಧಿಗಳು ಉತ್ಪಾದಿಸುತ್ತಿರುವ ಉತ್ಪನ್ನಗಳು, ಸರ್ಕಾರದ ವಿವಿಧ ಇಲಾಖಾ ಯೋಜನೆಗಳ ಕುರಿತು ಮಾಹಿತಿ ಒದಗಿಸುವ ಸ್ಟಾಲ್‌ಗಳನ್ನು ಹೈಕೋರ್ಟ್ ಹಿರಿಯ ನ್ಯಾಯಾಧೀಶ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಕಾರ್ಯಾಧ್ಯಕ್ಷ ಬಿ.ವೀರಪ್ಪ ಅವರು ಗಣ್ಯರೊಂದಿಗೆ ವೀಕ್ಷಿಸಿ, ಮಾಹಿತಿ ಪಡೆದರು.

Tennis Tournament In Shivamogga ಜಿಲ್ಲಾ ಮಟ್ಟದ ಟೆನ್ನಿಸ್ ಪಂದ್ಯಾವಳಿ: ಕುಂಸಿ ತಂಡಕ್ಕೆ ಭಗೀರಥ ಕಪ್

0

Tennis Tournament In Shivamogga ಶಿವಮೊಗ್ಗ ಇತ್ತೀಚಿಗೆ ನಡೆದಂತಹ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಪಂದ್ಯಾವಳಿ ಕೃಷಿ ಕಾಲೇಜು ಕ್ರೀಡಾಂಗಣದಲ್ಲಿ ನಡೆಸಲಾಯಿತು.

ಬಂದಂತಹ ತಂಡಗಳಾದ ಸಾಗರ,ಕಾಶಿಪುರ, ಬೊಮ್ಮನಕಟ್ಟೆ, ಶಿವಮೊಗ್ಗ ಸಿಟಿ , ಹೊಳೆಹೊನ್ನೂರು, ಭದ್ರಾವತಿ, ಮಾರಶೆಟ್ಟಿಹಳ್ಳಿ, ತಟ್ಟೆಹಳ್ಳಿ, ಕುಂಸಿ , ಹಾರನಹಳ್ಳಿ ಒಟ್ಟು 10 ತಂಡಗಳು ಭಾಗವಹಿಸಿದ್ದವು.

ಭಗೀರಥ ಕಪ್ 2023 ಕುಂಸಿ ತಂಡ ಮೊದಲ ಸ್ಥಾನ ಪಡೆದರೆ ಕಾಶಿಪುರ ತಂಡವು ದ್ವಿತೀಯ ಸ್ಥಾನ ತೃತಿಯ ಸ್ಥಾನವು
ಮಾರಶೆಟ್ಟಿಹಳ್ಳಿ ಮತ್ತು ಶಿವಮೊಗ್ಗ ಸಿಟಿ ಡ್ರಾಗೆ ಈ ವರ್ಷದ ಕಪ್ ಅಂತ್ಯಗೊಂಡಿತು.

Tennis Tournament In Shivamogga ಜೊತೆಗೆ ರಾಷ್ಟ್ರಮಟ್ಟದ ಕ್ರೀಡಾಪಟುಗಳನ್ನು ಸಹ ಸನ್ಮಾನಿಸಲಾಯಿತು..
ಶಿವಮೊಗ್ಗ ಜಿಲ್ಲೆಯಿಂದ ಬಂದಿದ್ದಂತಹ ಎಲ್ಲಾ ಯುವಕರುಗಳು ಸ್ಪಂದಿಸಿ ನಮ್ಮ ಸಮಾಜವು ಒಟ್ಟಾಗಿ ಸೇರಿ ಒಗ್ಗಟ್ಟಿನ ಮಂತ್ರವೆಂದು ತೋರಿಸಿಕೊಟ್ಟರು.

ಈ ವರ್ಷವೂ ಕಪ್ ನಡೆಯಲು ಭಗೀರಥ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಮಾರ್ಗದರ್ಶಕರ ಸಲಹೆ ಸಮಿತಿಯ ಜೊತೆಗೆ ಎಲ್ಲಾ ಗ್ರಾಮದ ಯಜಮಾನರುಗಳು, ದೇವಸ್ಥಾನದ ಗೌಡರುಗಳ ಸಲಹೆಯಂತೆ ಭಗೀರಥ ಕಪ್ 2023 ಯಶಸ್ವಿಗೆ ಕಾರಣವಾಯಿತು.

ಆಯೋಜಕರುಗಳಾಗಿ ಮುರಳಿ ಹೆಚ್ ಸಣ್ಣಕ್ಕಿ ಅಕಾಡೆಮಿ ಸ್ಥಾಪಕರು, ನವೀನ್ ಕುಮಾರ್ ಎಸ್ ವಿ, ಗುರುಪ್ರಸಾದ್ ಎಮ್, ಸಂಜಯ್, ಭರತ್, ಕಾರ್ತಿಕ್ ಆರ್ ವಿ, ಮಂಜುನಾಥ್ ಎನ್, ಮಾಲತೇಶ್ ಎನ್ , ಅಣ್ಣಪ್ಪ (ಅಕಾಡೆಮಿಯ ಪತ್ರಿಕಾ ಪ್ರಚಾರಕರು) ಉಪಸ್ಥಿತರಿದ್ದರು.

Mcgann District Hospital Shivamogga ಶಿವಮೊಗ್ಗದಲ್ಲಿ ಪ್ರಪ್ರಥಮ ವಾಗಿ ಲಿಂಗತ್ವ ಅಲ್ಪ ಸಂಖ್ಯಾತರಿಗೆ ಪ್ರತ್ಯೇಕ ಚಿಕಿತ್ಸಾ ಕೊಠಡಿ- ನ್ಯಾ.ಬಿ.ವೀರಪ್ಪ

0

Mcgann District Hospital Shivamogga ಶಿವಮೊಗ್ಗದ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ನೂತನವಾಗಿ ತೆರೆಯಲಾಗಿರುವ ಪ್ರತ್ಯೇಕ ಚಿಕಿತ್ಸಾ ಕೊಠಡಿಯನ್ನು ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಬಿ.ವೀರಪ್ಪ ಅವರು ಉದ್ಘಾಟಿಸಿದರು.

ಈ ವೇಳೆ ಅವರು ಮಾತನಾಡಿ, ನಾನು ಬೇರೆಡೆ ಲಿಂಗತ್ವ ಅಲ್ಪಸಂಖ್ಯಾತರಿಗೆಂದೇ ಪ್ರತ್ಯೇಕವಾದ ಚಿಕಿತ್ಸಾ ಮತ್ತು ತಪಾಸಣಾ ಕೊಠಡಿ ನೋಡಿಲ್ಲ. ಇದೇ ಮೊದಲ ಈ ರೀತಿಯ ಕೇಂದ್ರವಾಗಿದ್ದು ಲಿಂಗತ್ವ ಅಲ್ಪಸಂಖ್ಯಾತರು ಇದರ ಬಳಕೆ ಮಾಡಿಕೊಳ್ಳಬೇಕು. ವೈದ್ಯರೂ ಸಹ ಮುತುವರ್ಜಿ ಮತ್ತು ಕಾಳಜಿಯಿಂದ ರೋಗಿಗಳ ತಪಾಸಣೆ ನಡೆಸಿ, ಚಿಕಿತ್ಸೆ ನೀಡಬೇಕೆಂದು ತಿಳಿಸಿದರು.

Mcgann District Hospital Shivamogga ಇದೇ ವೇಳೆ ಆಸ್ಪತ್ರೆಯ ಎಂಐಸಿಯು ಸೇರಿದಂತೆ ವಿವಿಧ ವಾರ್ಡ್‍ಗಳಿಗೆ ಭೇಟಿ ನೀಡಿ, ರೋಗಿಗಳೊಂದಿಗೆ ಸಮಾಲೋಚಿಸಿದರು.

ರೋಗಿಗಳ ಸೂಕ್ತ ಕಾಳಜಿ ವಹಿಸುವಂತೆ ವೈದ್ಯರು/ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಸಿಮ್ಸ್ ನಿರ್ದೇಶಕ ಡಾ.ವಿರೂಪಾಕ್ಷಪ್ಪ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್, ಇತರೆ ವೈದ್ಯರು, ಅಧಿಕಾರಿಗಳು ಇದ್ದರು.

Rotary Club of Shivamogga ಡಾ.ಅಂಬೇಡ್ಕರ್ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದ ನಾಯಕ- ಎಂ.ಚಂದ್ರಶೇಖರಯ್ಯ

0

Rotary Club of Shivamogga ಭಾರತದಲ್ಲಿನ ಬಹುತ್ವವುಳ್ಳ ಸಮಾಜದಲ್ಲಿ ಹೆಚ್ಚಿನವರು ಎಲ್ಲ ಕ್ಷೇತ್ರಗಳಲ್ಲಿ ಅಸಮಾನತೆಯಿಂದ ಬಳಲುತ್ತಿದ್ದರು. ಇಂತಹ ಕಾಲಘಟ್ಟದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಂತ ಶ್ರೇಷ್ಠ ಗ್ರಂಥವನ್ನು ರಚಿಸಿ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದ ಮಹಾನ್ ನಾಯಕ ಎಂದು ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಚಂದ್ರಶೇಖರಯ್ಯ ಎಂ. ಹೇಳಿದರು.

ರೋಟರಿ ಶಿವಮೊಗ್ಗ ಪೂರ್ವ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಗಳ ವತಿಯಿಂದ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಅಚರಣೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಸಂವಿಧಾನ ವ್ಯವಸ್ಥೆಯಿಂದ ಎಲ್ಲರಿಗೂ ಅವಕಾಶ ಸಿಗುತ್ತಿದ್ದು, ಉತ್ತಮ ಸಮಾಜ ರೂಪುಗೊಳ್ಳುವಲ್ಲಿ ಅಂಬೇಡ್ಕರ್ ಅವರ ಕೊಡುಗೆ ಅಪಾರ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕುರಿತು ಹೆಚ್ಚಿನ ಅಧ್ಯಯನ ನಡೆಸಬೇಕು. ಅವರ ಕೃತಿಗಳನ್ನು ಯುವಜನತೆ ಅಧ್ಯಯನ ನಡೆಸಬೇಕು ಎಂದು ತಿಳಿಸಿದರು.

Rotary Club of Shivamogga ಅಂಬೇಡ್ಕರ್ ಅವರು ಶೋಷಿತ ವರ್ಗದ ಧ್ವನಿಯಾಗಿದ್ದರು. ಲಂಡನ್‌ನಲ್ಲಿ ಅಧ್ಯಯನ ನಡೆಸಿದ ಅವರು ನಂತರ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿ ಪಡೆದುಕೊಂಡರು.

ಸಮಸಮಾಜದ ಕನಸು ಕಂಡಂತಹ ಅಂಬೇಡ್ಕರ್ ಸಂವಿಧಾನದ ಮೂಲಕ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದರು ಎಂದು ಹೇಳಿದರು.
ಟ್ರಸ್ಟ್ ಉಪಾಧ್ಯಕ್ಷ ಡಾ. ಪರಮೇಶ್ವರ್ ಶಿಗ್ಗಾಂವ್, ಕಾರ್ಯದರ್ಶಿ ರಾಮಚಂದ್ರ, ಖಜಾಂಚಿ ಮತ್ತು ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ಪ್ರಾಚಾರ್ಯ ಸೂರ್ಯನಾರಾಯಣ, ಮುಖ್ಯ ಶಿಕ್ಷಕಿ ಜಯಶೀಲಬಾಯಿ, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ದೈಹಿಕ ಶಿಕ್ಷಕ ಮಹಾಬಲೇಶ್, ಹಾಜರಿದ್ದರು.

Sri Dharmasthala Manjunatheshwar Ayurvedic College Hassan ಡಾ.ಕಮಲಶ್ರೀ ಅವರಿಗೆ ಆಯುರ್ವೇದ ಸ್ನಾತಕೋತ್ತರ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿ

Sri Dharmasthala Manjunatheshwar Ayurvedic College Hassan ಶಿವಮೊಗ್ಗ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ಪರೀಕ್ಷೆಯಲ್ಲಿ ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದಿಕ್ ಕಾಲೇಜಿನ ವಿಧ್ಯಾರ್ಥಿನಿ ಡಾ. ಕಮಲಶ್ರೀ ಅವರು (ರಚನಾ ಶರೀರ ವಿಭಾಗ)ದಲ್ಲಿ ಪ್ರಥಮ ರ‍್ಯಾಂಕ್ ಪಡೆದು ಚಿನ್ನದ ಪದಕಕ್ಕೆ ಭಾಜನರಾಗಿರುತ್ತಾರೆ.

Sri Dharmasthala Manjunatheshwar Ayurvedic College Hassan ಶಿವಮೊಗ್ಗದ ಗುಡ್ ಲಕ್ ಅರೈಕೆ ಕೇಂದ್ರದ ಅಧ್ಯಕ್ಷ ರವೀಂದ್ರನಾಥ ಐತಾಳ ಮತ್ತು ನಳಿನಿ ಐತಾಳರ ಮಗ ನಿತಿನ್ ಐತಾಳ ಪತ್ನಿ. ಇವರ ಸಾಧನೆಗೆ ಶಿವಮೊಗ್ಗ ಉತ್ತರದ ಎಲ್ಲಾ ರೋಟರಿ ಹಾಗೂ ಇನ್ನರ್ ವ್ಹೀಲ್ ಸದಸ್ಯರು, ಆರ್‌ಎಂಬಿ ಸದಸ್ಯರು, ಗುಡ್ ಲಕ್ ಸದಸ್ಯರು , ಫ್ರೆಂಡ್ಸ್ ಸೆಂಟರ್ ಸದಸ್ಯರು ಮತ್ತು ಮಿತ್ರರು ಅಭಿನಂದಿಸಿದ್ದಾರೆ.

Canara Bank Rural Self Employment Training Center ಏಪ್ರಿಲ್17 ರಿಂದ ಹೊಳಲೂರಿನಲ್ಲಿ ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕಾ ಉಚಿತ ತರಬೇತಿ

Canara Bank Rural Self Employment Training Center ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ,ಶಿವಮೊಗ್ಗ ತಾಲ್ಲೂಕು ಹೊಳಲೂರಿನಲ್ಲಿ “ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ” 10 ದಿನಗಳ ಉಚಿತ ತರಬೇತಿಯನ್ನು ಹಮ್ಮಿಕೊಂಡಿದ್ದು ಆಸಕ್ತಿ ಇರುವ ರೈತರು, ಕಾರ್ಮಿಕರು, ನಿರುದ್ಯೋಗಿ ಯುವಕ ಮತ್ತು ಯುವತಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಭ್ಯರ್ಥಿಯು 18 ರಿಂದ 45 ವರ್ಷ ವಯೋಮಿತಿ ಒಳಗಿನವರಾಗಿರಬೇಕು ಮತ್ತು 08ನೇ ತರಗತಿ ಉತ್ತೀರ್ಣರಾಗಿರಬೇಕು.

ಉಚಿತ ತರಬೇತಿಯನ್ನು ಪಡೆದ ನಂತರ ಸ್ವ-ಉದ್ಯೋಗವನ್ನು ಪ್ರಾರಂಭ ಮಾಡುವವರಾಗಿರಬೇಕು. ತರಬೇತಿ ಅವಧಿಯಲ್ಲಿ ಉಚಿತ ಊಟ-ವಸತಿ ವ್ಯವಸ್ಥೆ ಇರುತ್ತದೆ. ತರಬೇತಿ ಅವಧಿಯಲ್ಲಿ ಸಂಸ್ಥೆಯಲ್ಲಿ ಉಳಿದುಕೊಳ್ಳುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

Canara Bank Rural Self Employment Training Center ತರಬೇತಿಯು 17/04/2023 ರಿಂದ ಪ್ರಾರಂಭವಾಗಲಿದ್ದು ಆಸಕ್ತರು ಹೆಸರು, ವಿಳಾಸ, ಮೊಬೈಲ್ ನಂ. ವಿದ್ಯಾರ್ಹತೆ, ಮತ್ತು ವಯಸ್ಸಿನ ವಿವರಗಳೊಂದಿಗೆ:
ನಿರ್ದೇಶಕರು,
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ -ಉದ್ಯೋಗ ತರಬೇತಿ ಸಂಸ್ಥೆ,
ಹೊನ್ನಾಳಿ ರಸ್ತೆ, ಹೊಳಲೂರು-577216 (ಶಿವಮೊಗ್ಗ ತಾಲ್ಲೂಕು)
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. 8722384541, 9743429595, 8660062683, 9449371579, 9481955721 ಅನ್ನು ಸಂಪರ್ಕಿಸಬಹುದಾಗಿದೆ