Sunday, April 12, 2026
Sunday, April 12, 2026
Home Blog Page 1241

Karnataka Assembly Election ಕಮಲ ಕಿವುಚಿ ಕೈ ಯತ್ತ ಶೆಟ್ಟರ್ ಚಿತ್ತ?

0

Karnataka Assembly Election ಹುಬ್ಬಳ್ಳಿ– ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್‌ ಕೈತಪ್ಪುವುದು ಖಚಿತವಾಗುತ್ತಿದ್ದಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಜಗದೀಶ ಶೆಟ್ಟರ್‌ ಶನಿವಾರ ಘೋಷಣೆ ಮಾಡಿದ್ದಾರೆ. ಭಾನುವಾರ ಬೆಳಿಗ್ಗೆ ಶಿರಸಿಯಲ್ಲಿ ವಿಧಾನಸಭಾಧ್ಯಕ್ಷ
ರನ್ನು ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಈ ಮೂಲಕ‌ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಹಗ್ಗ ಜಗ್ಗಾಟಕ್ಕೆ ತೆರೆ ಬಿದ್ದಿದೆ.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಶಿರಸಿ ಕಚೇರಿಗೆ ಭಾನುವಾರ ತಮ್ಮ ಬೆಂಬಲಿಗರ ಜೊತೆಗೂಡಿ ಬಂದ ಶೆಟ್ಟರ್ ಕಾಗೇರಿ ಜೊತೆ ಕೆಲ ಸಮಯ ಚರ್ಚಿಸಿದರು.

ಶನಿವಾರ ಬಿಜೆಪಿ ಪ್ರಮುಖರು ಸೇರಿ ಹುಬ್ಬಳ್ಳಿಯಲ್ಲಿ ಶೆಟ್ಟರ್ ಜೊತೆ ನಡೆಸಿದ ಸಂಧಾನ ವಿಫಲವಾದ ಕಾರಣ ಶೆಟ್ಟರ್ ರಾಜೀನಾಮೆ ಸಲ್ಲಿಸಿದ್ದರು.

Karnataka Assembly Election ಶಾಸಕ ಸ್ಥಾನದ ಜೊತೆಗೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ಇಂದೇ ರಾಜಿನಾಮೆ ಕೊಡುತ್ತೇನೆ. ನಂತರ ವಾಪಸ್ ಬಂದು ಹಿತೈಷಿಗಳ ಜೊತೆ ಚರ್ಚಿಸಿ ಮುಂದಿನ ಹೆಜ್ಜೆ ಬಗ್ಗೆ ನಿರ್ಧರಿಸುತ್ತೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದರು.

ನೇರ ಶಿರಸಿಗೆ ತೆರಳಿ
ಸ್ಪೀಕರ್ ಕಾಗೇರಿ ಅವರ ಗೃಹಕಚೇರಿಯಲ್ಲಿ ಖುದ್ದು ರಾಜಿನಾಮೆ ಪತ್ರ ಸಲ್ಲಿಸಿದ್ದಾರೆ.
ಇಲ್ಲಿಯವರೆಗೂ ಹೈ ಕಮಾಂಡ್ ಮಾತಿಗೆ ಶೆಟ್ಟರ್ ‌ಧನಾತ್ಮಕ ಸ್ಪಂದಿಸುವರೆಂಬ ನಿರೀಕ್ಷೆ ಹುಸಿಯಾಗಿದೆ.

ದೂರದಲ್ಲೇ ಇದ್ದರೂ ಹಿರಿಯ ಬಿಜೆಪಿ ನಾಯಕ ಬಿಎಸ್ ವೈ
ಸಂಧಾನ ಮಾತುಕತೆಯ ಎಲ್ಲ ವಿಷಯಗಳನ್ನೂ ಬಹಿರಂಗಪಡಿಸಿದರು.

ಶೆಟ್ಟರ್ ಅವರೇ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ
” ಇಷ್ಟೆಲ್ಲಾ ಸ್ಥಾನ ಮಾನ ಅನುಭವಿ ಸಿಯೂ ಅವರು (ಬಿಎಸ್ ವೈ) ಕೆಜೆಪಿ ಕಡೆ ಹೋಗಲಿಲ್ಲವೆ? ಎಂದು ಶೆಟ್ಟರ್ ಪ್ರಶ್ನಿಸಿದ್ದನ್ನ ಬಿಎಸ್ ವೈ ಗಮನಕ್ಕೆ ಪತ್ರಕರ್ತರು ತಂದರು.

“ತಾವು ಹೋಗಿದ್ದು ನಿಜ.ಆದರೆ ವಾಪಸ್ ಬಿಜೆಪಿ ಗೆ ಬಂದು ಜನತೆಯ ಕ್ಷಮೆ ಕೇಳಿದೆ” ಎಂದು ಬಿಎಸ್ ವೈ ಪತ್ರಕರ್ತರಿಗೆ ಉತ್ತರಿಸದರು.

ಮುಂದೊಮ್ಮೆ ಶೆಟ್ಟರ್ ಹಾಗೆ ವಾಪಸ್ ಬಂದರೆ ನಿಮ್ಮ ಅಭಿಪ್ರಾಯವೇನು ಎಂಬ ಮಾಧ್ಯಮದವರ ಪ್ರಶ್ನೆಗೆ ” ತೆರೆದ ಮನಸ್ಸಿನಿಂದ ಸ್ವಾಗತಿಸುತ್ತೇವೆ” ಎಂದು ಬಿಎಸ್ ವೈ ನುಡಿದರು.

ಪಂಚಾಯತ್ ವ್ಯವಸ್ಥೆ ಸದೃಢಗೊಳಿಸುವತ್ತ ಹೆಚ್ಚಿನ ಒತ್ತು-ಡಿ.ಎಸ್.ಅರುಣ್

0

Rural Vidhan Sabha Constituency ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಆಡಳಿತ ನಡೆಸುತ್ತಿರುವುದರಿಂದ ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದು, ಡಬಲ್ ಇಂಜಿನ್ ಸರ್ಕಾರದ ವಿಶೇಷ lಯೋಜನೆಗಳಿಂದ ರಾಜ್ಯದ ಎಲ್ಲ ಗ್ರಾಮಗಳ ಸಬಲೀಕರಣ ಆಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.

ಗ್ರಾಮಾಂತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮಹಾಶಕ್ತಿ ಕೇಂದ್ರಗಳ ಗ್ರಾಮ ಪಂಚಾಯಿತಿ ಸದಸ್ಯರ ಸಭೆಯಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶ ಆರ್ಥಿಕವಾಗಿ ಬಲಿಷ್ಠವಾಗಿದ್ದು, ಮೋದಿ ಅವರು ಗ್ರಾಮಗಳ ಸಬಲೀಕರಣಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ. ರಾಜ್ಯ ಸರ್ಕಾರ ಕೂಡ ಗ್ರಾಮ ಗ್ರಾಮಗಳಲ್ಲಿ ಅಭಿವೃದ್ಧಿ ಕೆಲಸ ಮಾಡಿದೆ ಎಂದು ತಿಳಿಸಿದರು.

Rural Vidhan Sabha Constituency ಪಂಚಾಯಿತಿ ವ್ಯವಸ್ಥೆ ಸದೃಢಗೊಳಿಸುವಲ್ಲಿ ಬಿಜೆಪಿ ಹೆಚ್ಚಿನ ಒತ್ತು ನೀಡುತ್ತಿದ್ದು, ಗ್ರಾಮ ಸದಸ್ಯರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಮುಂದಾಗಿದೆ. ಗ್ರಾಮ ಮಟ್ಟದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳನ್ನು ಗ್ರಾಮದ ಮನೆ ಮನೆಗಳಿಗೂ ತಲುಪಿಸುವ ಕೆಲಸ ಆಗಬೇಕು ಎಂದರು.

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಬಿ.ಅಶೋಕನಾಯ್ಕ ಮಾತನಾಡಿ, ಐದು ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳ ಪರಿಣಾಮ ಬಿಜೆಪಿಗೆ ಹೆಚ್ಚಿನ ಜನಬೆಂಬಲ ವ್ಯಕ್ತವಾಗುತ್ತಿದೆ. ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಏ. 18ರ ಮಂಗಳವಾರ ನಾಮಪತ್ರ ಸಲ್ಲಿಸುತ್ತಿದ್ದು, ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದು ಹೇಳಿದರು.

ಕ್ಷೇತ್ರ ಪ್ರಭಾರಿ ಎಸ್.ದತ್ತಾತ್ರಿ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಭಿವೃದ್ಧಿಗೆ ವಿಶೇಷ ಪ್ರಾಮುಖ್ಯತೆ ನೀಡಿದ್ದು, ಕೋಟ್ಯಾಂತರ ರೂ.ಗಳ ಅನುದಾನದಲ್ಲಿ ಯೋಜನೆಗಳ ಅನುಷ್ಠಾನ ಮಾಡಿದೆ. ವಿಮಾನ ನಿಲ್ದಾಣ, ರಸ್ತೆ, ರೈಲ್ವೇ ಸಾರಿಗೆ ಸಂಪರ್ಕ ವ್ಯವಸ್ಥೆ ಸದೃಢಗೊಳಿಸಿದೆ ಎಂದು ತಿಳಿಸಿದರು.

ಮಂಡಲ ಅಧ್ಯಕ್ಷ ರತ್ನಾಕರ ಶೆಣೈ ಮಾತನಾಡಿ, ಕೆ.ಬಿ.ಅಶೋಕ ನಾಯ್ಕ ಅವರು ಶಾಸಕರಾಗಿ ಮಾಡಿದ ಅಭಿವೃದ್ಧಿ ಕೆಲಸಗಳ ಬಗ್ಗೆ ಪ್ರತಿಯೊಂದು ಗ್ರಾಮದ ಮನೆ ಮನೆಗಳಿಗೂ ತಲುಪಿಸುವ ಮೂಲಕ ಬಿಜೆಪಿ ಅಭ್ಯರ್ಥಿಯನ್ನು ಮತ್ತೊಮ್ಮೆ ಗೆಲ್ಲಿಸಲು ಎಲ್ಲರೂ ಶ್ರಮಿಸಬೇಕು. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕು ಎಂದರು.
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಮಹಾಶಕ್ತಿ ಕೇಂದ್ರಗಳ ಗ್ರಾಮ ಪಂಚಾಯಿತಿ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ಪಕ್ಷಗಳ ಮುಖಂಡರು ಬಿಜೆಪಿಗೆ ಸೇರ್ಪಡೆಯಾದರು.

ಕುಂಸಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಮಲೇಶಂಕರ ಗ್ರಾಮದ ಶ್ರೀ ಮಲೇಶಂಕರ ಸ್ವಾಮಿಯ ರಥೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಬಿ.ಅಶೋಕನಾಯ್ಕ ಪಾಲ್ಗೊಂಡು ದೇವರ ದರ್ಶನ ಪಡೆದರು. ಆನವೇರಿ ಗ್ರಾಮದಲ್ಲಿ ಪಕ್ಷದ ಮುಖಂಡರ ಮನೆಗಳಿಗೆ ಭೇಟಿ ನೀಡಿದರು.
ಭಾನುವಾರ ಬೆಳಗ್ಗೆಯಿಂದಲೇ ಗ್ರಾಮಾಂತರ ಪ್ರದೇಶದ ವಿವಿಧ ಭಾಗಗಳಲ್ಲಿ ಇರುವ ದೇವಸ್ಥಾನಗಳಿಗೆ ಗ್ರಾಮಾಂತರ ಅಭ್ಯರ್ಥಿ ಕೆ.ಬಿ.ಅಶೋಕನಾಯ್ಕ ಭೇಟಿ ನೀಡಿದರು.

ರವೀಂದ್ರನಗರದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಊರಗಡೂರು ಶಿವದುರ್ಗ ಶ್ರೀ ವಿನಾಯಕ ಸ್ವಾಮಿ, ನಿದಿಗೆ ಶ್ರೀ ಶನೈಶ್ಚರ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದರು.

ಮಂಡಲ ಅಧ್ಯಕ್ಷ ಮಂಜುನಾಥ್ ಕಲ್ಲಜ್ಜನಾಳ್, ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಗೋಪಾಲ್, ಗಿರೀಶ್, ಹೊಳೆಹೊನ್ನೂರು ಮಂಡಲ ಪ್ರಧಾನ ಕಾರ್ಯದರ್ಶಿ ಉಜ್ಜಿನಪ್ಪ, ಮಲ್ಲೇಶ್, ಷಡಾಕ್ಷರಪ್ಪ ಗೌಡ, ಜಗದೀಶ್ ಗೌಡ, ಮಂಜಣ್ಣ, ವಿರೇಶ್, ಶಿವಣ್ಣ, ದಾನಶೇಖರಪ್ಪ, ಹಾಲೇಶ್, ಚನ್ನಬಸಪ್ಪ, ರಂಗೋಜಿ ರಾವ್, ಸುರೇಶ್, ರುದ್ರೋಜಿರಾವ್, ರಮೇಶ್ ಭೈರನಕೊಪ್ಪ ಮತ್ತಿತರರು ಉಪಸ್ಥಿತರಿದ್ದರು

Karnataka Assembly Election ಬಲೆ ಹಿಡಿದು ಬೇಟೆಗೆ ಕಾಯುತ್ತಿರುವ ರಾಜಕೀಯ ಪಕ್ಷಗಳು

0

Karnataka Assembly Election ಕಳೆದ ವಾರವಷ್ಟೇ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರಿದರು.
ಕಾಂಗ್ರೆಸ್ ಸೇರಿದ್ದ ವೈಎಸ್ ವಿ ದತ್ತ ಮತ್ತೆ ಜೆಡಿಎಸ್ ಗೆ ವಾಪಸಾದರು.
ಆಮ್ ಆದ್ಮಿ ಸೇರಿದ್ದ ಭಾಸ್ಕರ ರಾವ್ ಬಿಜೆಪಿ ಬಾವುಟ ಹಿಡಿದರು.
ಶೇ40 ಪ್ರಕರಣ ಆರೋಪಿ ಈಶ್ವರಪ್ಪ ಕ್ಲೀನ್ ಚಿಟ್ ಪಡೆದು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಘೋಷಣೆ ಮಾಡಿದರು. ಮಾಜಿ ಸಚಿವ ಅಂಗಾರ, ಹಾಲಾಡಿ ಶ್ರೀನಿವಾಸ ಶೆಟ್ಟಿ ಮುಂತಾದವರು ರಾಜಕೀಯ ವೈರಾಗ್ಯ ತಾಳಿದರು.
ಚಿಂಚನಸೂರ್ ಕಮಲ ಬಿಟ್ಟು ಕೈ ಹಿಡಿದರು.

ಇಷ್ಟೆಲ್ಲಾ ನಡೆಯುವಾಗ ಎಲ್ಲಾ ಪಕ್ಷಗಳೂ ಇನ್ನೂ ತಮ್ಮ ಚುನಾವಣಾ ಹುರಿಯಾಳುಗಳ ಪೂರ್ಣಪಟ್ಟಿ ಬಿಡುಗಡೆ ಮಾಡಿಲ್ಲ. ಎಲ್ಲವಕ್ಕೂ ಅನ್ಯ ಪಕ್ಷಗಳ ಘಟ್ಟಿ ನಾಯಕ ರಾಜಿನಾಮೆ ನೀಡಿ ತಮ್ಮ ಪಕ್ಷಕ್ಕೆ ಬರಬಹುದೆಂಬ ನಿರೀಕ್ಷೆಗಳನ್ನ ಗುಪ್ಪೆ ಹಾಕಿಕೊಂಡಿವೆ.

Karnataka Assembly Election ಟಿಕೇಟು ಸಿಗಬಹುದು ಆದರೆ ಜನ ಮೂಢರಲ್ಲ. ಇವತ್ತು ಪಕ್ಷಬಿಟ್ಟು ಪಕ್ಷ ಸೇರುವವರ ಬಗ್ಗೆ ಇಡೀಯಾಗಿ ಅಳೆಯುತ್ತಾರೆ. ಮುಂಚೆ ಪಕ್ಷವನ್ನ ನೋಡಿ ಮತ ನೀಡುವ ಕಾಲವಿತ್ತು.ಕತ್ತೆಯಾದರೂ ನಿಂತೆ ಪಕ್ಷದ ಜನಪ್ರಿಯತೆಯಿಂದ ಗೆದ್ದು ಬಿಡುತ್ತೆ ಎಂಬ ಅಂಬೋಣವಿತ್ತು.

ಅದೆಲ್ಲವೂ ಮುಗಿದುಹೋಗಿದೆ. ಕೇವಲ ಅಧಿಕಾರ,ಸ್ಥಾನಮಾನ, ಹಣಕ್ಕಾಗಿ ಹಪಹಪಿಸುವವರ ಬಗ್ಗೆ ಜನಕ್ಕೆ ಹೇಸಿಗೆ ಬಂದಿದೆ. ತಮ್ಮ ಕಾರ್ಯಕ್ಷಮತೆ, ಪ್ರಾಮಾಣಿಕತೆ ,
ಜನಹಿತ ಇವುಗಳ ಬಗ್ಗೆ ಸಂಕಲ್ಪವುಳ್ಳವರನ್ನ ಗುರುತಿಸುತ್ತಾರೆ.
ಈಗ ಪಕ್ಷಗಳು ಬಂದ ಬಂದವರಿಗೆ ಬಲೆಬೀಸಿ ಬೇಟೆಯಾಡಬಹುದು.ಮತಪೆಟ್ಟಿಗೆಯ ಪ್ರಭು ಅಂಥವರ ಬಂಡವಾಳ ಅರಿತಿರುತ್ತಾನೆ ಎಂಬುದನ್ನ ಎಲ್ಲಾ ಪಕ್ಷಗಳೂ ಈಗ ತಿಳಿಯಬೇಕಾದ ನಿಷ್ಠುರ ಸತ್ಯ.

‌Assembly Election ಶೆಟ್ಟರ್ ಅವರ ತೀರ್ಮಾನ ಮನಸ್ಸಿಗೆ ನೋವಾಗಿದೆ- ಬಸವರಾಜ ಬೊಮ್ಮಾಯಿ

0

Assembly Election ಇಡೀ ಬಿಜೆಪಿ ಪಕ್ಷಕ್ಕೆ ಇವತ್ತು ಪಕ್ಷಾಘಾತವಾದಂತೆ. ಸುಧಾರಿಸಿಕೊಳ್ಳಲು ಕೆಲು ದಿನಗಳೇ ಬೇಕಾಗುತ್ತದೆ.ದಕ್ಷಿಣಭಾರತದಲ್ಲೇ ಮೊದಲಿಗೆ ಬಿಜೆಪಿ ಸರ್ಕಾರ ತರುವಲ್ಲಿ ಬಿಎಸ್ ವೈ ಅವರೊಡನೆ ಹೆಗಲಿಗೆ ಹೆಗಲು ಕೊಟ್ಟ ನಾಯಕ ಶೆಟ್ಟರ್ ಬಿಜೆಪಿ ಗೆ ಗುಡ್ ಬೈ ಹೇಳಿರುವುದು ಅಚ್ಚರಿಯ ಸುದ್ದಿ. ರಾಜ್ಯದಲ್ಲೇ ಬಿಜೆಪಿ ವಲಯದಲ್ಲಿ ಅನಿರೀಕ್ಷಿತ ಬೆಳವಣಿಗೆ.

ರಾಜ್ಯದಲ್ಲಿ ಬಿಜೆಪಿಗೆ ಭವಿಷ್ಯವೇ ಇಲ್ಲ ಎಂದು ಬರೀ ವಿರೋಧ ಪಕ್ಷಗಳ ಸಾಲಿನಲ್ಲಿ ಕೂರುತ್ತಿದ್ದ ನಾಯಕಮಣಿಗಳು ಆಡಳಿತದ ಚುಕ್ಕಾಣಿ ಹಿಡಿಯುವಲ್ಲಿ ಬಿಎಸ್ ವೈ,ಶೆಟ್ಟರ್,ಈಶ್ವರಪ್ಪ,
ಜನಾರ್ದನ ರೆಡ್ಡಿ ,ಮುಂತಾದವರ
ಕೊಡುಗೆ ಇದೆ. ಕೇಂದ್ರದ ನಾಯಕರೂ ಕೂಡ ರಾಜ್ಯಮಟ್ಟದ ನಾಯಕರಿಗೆ ಮಣೆ ಹಾಕುವ ಪರಿಸ್ಥಿತಿ ನಿರ್ಮಾಣವಾಗಿತ್ತು.

Assembly Election ಆದರೆ ಯಾವತ್ತು ಕೇಂದ್ರದಲ್ಲಿ ಬಿಜೆಪಿ ಸಮರ್ಥವಾಗಿ ಬೇರೂರಿತೋ ಅಲ್ಲಿಂದ ರಾಜ್ಯಗಳಲ್ಲಿನ ಪಕ್ಷ ಬೆಳವಣಿಗೆ ಬಗ್ಗೆ ಸೂತ್ರವಾಡಿಸಲು ಶುರುಮಾಡಿತು.
ರಾಜ್ಯಗಳಲ್ಲಿ ಬಿಜೆಪಿ ಆಡಳಿವು ಒಂದು ಹಂತ ಮುಟ್ಟಿದ ನಂತರ ಈ ಪ್ರಕ್ರಿಯೆ ಶುರುವಾಯಿತು.
ಕರ್ನಾಟಕದಲ್ಲಿ ಮುಂಚೆ ಬಿಎಸ್ ವೈ ಹೇಳಿದ್ದಕ್ಕೆಲ್ಲಾ ಹ್ಞೂಂ ಗುಡುತ್ತಿದ್ದ ಹೈಕಮಾಂಡ್ ನಿಧಾನವಾಗಿ ಭವಿಷ್ಯದಲ್ಲಿ ಪಕ್ಷ ಪ್ರಬಲಗೊಳಿಸುವ ಚಿಂತನೆಯಲ್ಲಿ ತೊಡಗಿತು.ಹೀಗಾಗಿ
ಪಿಕ್ ಅಂಡ್ ಚೂಸ್,
ಪರ್ಫಾಮೆನ್ಸ್ ಆಧಾರಿತ ಆಯ್ಕೆಗಳನ್ಮ ಮಾಡತೊಡಗಿತು.

ಈ ಪ್ರಕ್ರಿಯೆಗಳ ಫಲವೇ ಪ್ರಸ್ತುತ ಕರ್ನಾಟಕದಲ್ಲಿ ನಿಂತ ನೀರನ್ನ ಕಲಕಿದಂತಾಗಿದೆ.
ಗೆಲ್ಲುವ ಕುದುರೆಯನ್ನೇ ಮತ್ತೆ ‌ಮತ್ತೆ ಆರಿಸಿ ಚುನಾವಣೆ ಟಿಕೇಟ್ ನೀಡುವ ಸಂಪ್ರದಾಯ ಮುರಿದು‌ ಈಗ ಮುಂದೇನು? ಎಂಬ ಪ್ರಶ್ನೆ ಬಿಜೇಪಿಯನ್ನೇ ಕಾಡುತ್ತಿದೆ.

ಪಕ್ಷಾಂತರ ಪರ್ವವೂ ಈಗ ಬಿರುಸಾಗಿದೆ. ಅಲ್ಲಿ ಬಿಟ್ಟವರನ್ನ ಇಲ್ಲಿಗೆ.ಇಲ್ಲಿ ಬಿಟ್ಟವರನ್ನ ಅಲ್ಲಿಗೆ ಸೇರಿಸಿಕೊಳ್ಳುವ ಸಮಯಾವಧಾನ ಪ್ರಸಂಗಕ್ಕೆ ನಾವೆಲ್ಲಾ ಸಾಕ್ಷಿಯಾಗಿದ್ದೇವೆ.

ಬೊಮ್ಮಾಯಿ ಅವರು
ಹಿರಿಯರ ಸಂಖ್ಯೆ ಕಡಿಮೆಮಾಡಿ ಕಿರಿಯ ಪೀಳಿಗೆಗೆ ಮಣೆ ಹಾಕುವ ಹೈಕಮಾಂಡ್ ಪ್ರಯತ್ನವನ್ನ ಶೆಟ್ಟರ್ ಅರ್ಥಮಾಡಿಕೊಳ್ಳಲಾರದೇ ಹೋದರಲ್ಲ ಎಂದು ಬೇಸರಪಟ್ಟಿದ್ದಾರೆ.

ಪಕ್ಷ ಕಟ್ಟಿದವರಲ್ಲಿ ಶೆಟ್ಟರ್ ನೀಡಿದ ಕೊಡುಗೆ ಬಗ್ಗೆ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಆದರೇನು ಈಗ ಟಿಕೇಟಿಗಾಗಿ ರೈಲು ಹುಡುಕುವ ಸಮಯ.
ಆದ್ದರಿಂದ ಯಾವ ಪಕ್ಷದ ಡಬ್ಬಿಯೋ ಹತ್ತಿ ಪ್ರಯಾಣ ಮಾಡಿದರಾಯಿತು ಅನ್ನುವ ಮನಸ್ಥಿತಿ
ಶೆಟ್ಟರ್ ಮತ್ತು ಸವದಿಯವರನ್ನ ನೋಡಿದರೆ ತಿಳಿಯುತ್ತದೆ.

Bjp Karnataka ಹೈಕಮಾಂಡ್ ಕಸರತ್ತಿಗೆ ಕ್ಯಾರೆ ಅನ್ನದ ಶೆಟ್ಟರ್

Bjp Karnataka ಉತ್ತರ ಕರ್ನಾಟಕ ಭಾಗದ ಪ್ರಭಾವಿ ನಾಯಕ ಶೆಟ್ಟರ್ ಈಗ ಬಿಜೆಪಿಯಲ್ಲಿ ಉಳಿದಿಲ್ಲ. ರಾಜಿನಾಮೆ ನೀಡಿ ಆಗಿದೆ.

ಕೇಂದ್ರದಿಂದ ಹೈಕಮಾಂಡ್ ಪರವಾಗಿ ಬಂದ ಧರ್ಮೇಂದ್ರ ಪ್ರಧಾನ್
ಅವರ ರಾಯಭಾರ ಫಲಿಸಲಿಲ್ಲ. ಸಚಿವ ಪ್ರಹ್ಲಾದ್ ಜೋಷಿ ಕೂಡ ಇದ್ದರು.
ಸ್ವತಃ ಶೆಟ್ಟರ್ ನಿವಾಸಕ್ಕೇ ಬಂದು ಸಮಾಲೋಚನೆ ನಡೆಸಿದರು. ಆದರೆ ಎಲ್ಲವೂ ಹೊಳೆ ನೀರಿನಲ್ಲಿ ಹುಣಿಸೇ ಹಣ್ಣು ಕಿವುಚಿದಂತಾಯಿತು.
ಈ ಬಗ್ಗೆ ಸ್ಪಷ್ಟವಾಗಿ ಶೆಟ್ಟರ್ ನಿವಾಸದಲ್ಲಿ ಏನೇನು‌ ಮಾತುಕತೆಯಾಯಿತು? ಎನ್ನುವುದು ತಡರಾತ್ರಿ ಸ್ಪಷ್ಟತೆ ಇರಲಿಲ್ಲ. ಈಗಷ್ಟೇ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಬಿಎಸ್ ವೈ ಅವರಿಂದ ವಿಷಯ ಬಹಿರಂಗವಾಗಿದೆ.
ಆ ಅಂಶಗಳಾವುವು ಎನ್ನುವುದನ್ನ ಪರಿಶೀಲಿಸೋಣ.

Bjp Karnataka ನಿವೃತ್ತಿ ಆಗು ಅಂತ ಮುಂಚಿತವಾಗಿಯೇ ಹೇಳಿದ್ದ ಶೆಟ್ಟರ್ ಮಾತಿಗೆ ಬಿಎಸ್ ವೈ
ಪ್ರತಿಕ್ರಿಯಿಸಿದರು.
ನಿವೃತಗತಿಯಾಗಿ ಎಂಬ ಪ್ರಸ್ತಾಪ ಶೆಟ್ಟರ್ ಅವರಿಗೆ ಹೇಳುವ ಇರಾದೆ ಹೈಕಮಾಂಡ್ ಗೆ ಇರಲಿಲ್ಲ.
ಶೆಟ್ಟರ್ ಅವರಿಗೆ ಟಿಕೆಟ್ ನಿರಾಕರಣೆ ವಿಷಯ ತಿಳಿಸಲಾಯಿತು. ಅದಕ್ಕೆ ಪ್ರತಿಯಾಗಿ ಕೇಂದ್ರ ಸಚಿವ ಸ್ಥಾನ ಅಥವಾ ಉನ್ನತ ಹುದ್ದೆ ನೀಡುವ ಪ್ರಸ್ತಾಪ ತಿಳಿಸಲಾಗಿದೆ ಎಂದು ಬಿಎಸ್ ವೈ ಮಾಧ್ಯಮದವರಿಗೆ ತಿಳಿಸಿದರು.
ಪಕ್ಷ ಎಲ್ಲ ಸ್ಥಾನಮಾನಗಳನ್ನ ತಮಗೆ,ಈಶ್ವರಪ್ಪನವರಿಗೆ , ಸವದಿ ಅವರಿಗೆ
ನೀಡಿದೆ. ತಾವು ಮುಖ್ಯಮಂತ್ರಿ ಸ್ಥಾನಕ್ಕೆ ಸ್ವಪ್ರೇರಣೆಯಿಂದಲೇ
ರಾಜಿನಾಮೆ ನೀಡಿದೆ.
ಪಕ್ಷದಲ್ಲಿ ಹೊಸ ಮುಖ ,ಹೊಸ ಬೆಳವಣಿಗೆಗಳಿಗೆ ಅವಕಾಶ ಸಿಗಲಿಕ್ಕೆ ಅನುವುಮಾಡಿಕೊಟ್ಟೆವು. ಶೆಟ್ಟರ್ ಅವರು ಸ್ಪಂದಿಸಬಹುದಾಗಿತ್ತು.ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ. ತಿಳಿಸಿದರು.

Department of Legal Metrology ಜಿಲ್ಲಾ ಕಾನೂನು ಮಾಪನ ಶಾಸ್ತ್ರ ಇಲಾಖೆಯ ವಾರ್ಷಿಕ ಪ್ರಗತಿ

0


Department of Legal Metrology ಶಿವಮೊಗ್ಗ ಜಿಲ್ಲೆಯಲ್ಲಿ 2022-23 ನೇ ಸಾಲಿನಲ್ಲಿ ಏಪ್ರಿಲ್ -2022 ರಿಂದ ಮಾರ್ಚ್ -2023 ರವರೆಗೆ ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ ಸಾಧಿಸಲಾದ ಪ್ರಗತಿಯ ವಿವರವನ್ನು ಇಲಾಖೆಯ ಸಹಾಯಕ ನಿಯಂತ್ರಕರು ಈ ಕೆಳಗಿನಂತೆ ನೀಡಿರುತ್ತಾರೆ.


Department of Legal Metrology ತೂಕ, ಅಳತೆ ಸಾಧನಗಳ ಸತ್ಯಾಪನೆ/ಮುದ್ರೆಯಿಂದ ಸಂಗ್ರಹಿಸಿದ ಶುಲ್ಕ ರೂ. 1,74,06,734/- ಆಗಿರುತ್ತದೆ. ತಪಾಸಣೆ ಮಾಡಿರುವ ವ್ಯಾಪಾರಸ್ಥರ ಮತ್ತು ಕೈಗಾರಿಕೆಗಳ ಸಂಖ್ಯೆ 2850. ತಪ್ಪಿತಸ್ಥರ ಮೇಲೆ ಹೂಡಿರುವ ಮೊಕದ್ದಮೆಗಳ ಸಂಖ್ಯೆ 952 ಆಗಿರುತ್ತದೆ. ರಾಜಿ ಅಭಿಸಂದಾನ ಮಾಡಿರುವ ಮೊಕದ್ದಮೆಗಳ ಸಂಖ್ಯೆ 952. ಮೊಕದ್ದಮೆಗಳನ್ನು ರಾಜಿ ಅಭಿಸಂಧಾನ ಮಾಡಿ ವಿಧಿಸಿದ ದಂಡ ರೂ.18,30,300/- ಆಗಿರುತ್ತದೆ ಎಂದು ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯ ನಿಯಂತ್ರಕ ಎಸ್.ಮಂಜುನಾಥ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ನೇಮಕವಾಗಿರುವ ವಿವಿಧ ವಿಧಾನಸಭಾ ಕ್ಷೇತ್ರಗಳ ಚುನಾವಣಾ ವೆಚ್ಚ ವೀಕ್ಷಕರ ಸಂಪರ್ಕ ಫೋನ್ ಸಂಖ್ಯೆಗಳು

0

Assembly Election ವಿಧಾನಸಭಾ ಚುನಾವಣೆ-2023 ಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಶಿವಮೊಗ್ಗ ಜಿಲ್ಲೆಯ 07 ವಿಧಾನಸಭಾ ಕ್ಷೇತ್ರಗಳಿಗೆ ಈ ಕೆಳಗಿನಂತೆ ಚುನಾವಣಾ ವೆಚ್ಚ ವೀಕ್ಷಕರನ್ನು ನೇಮಿಸಿದೆ.

Assembly Election ವೆಚ್ಚ ವೀಕ್ಷಕರು & ಸಂಪರ್ಕ ಸಂಖ್ಯೆ : ಶಿವಮೊಗ್ಗ ಗ್ರಾಮಾಂತರ-111 ಮತ್ತು ಭದ್ರಾವತಿ-112 ಗೆ ಪೃಥ್ವಿಪಾಲ್ ಸಿಂಗ್ ಕಾನಾವತ್ ಮೊ.ಸಂ: 9971107165, 8197699587. ಶಿವಮೊಗ್ಗ-113 ಅಮಿತಾಬ್ ಸಾಹ್ ಮೊ.ಸಂ: 9013851480, 7676668713. ತೀರ್ಥಹಳ್ಳಿ-114 ರಮಾಕಾಂತ್ ಪ್ರಧಾನ್ ಮೊ.ಸಂ: 9438917438, 8197699324. ಶಿಕಾರಿಪುರ-115 ಭವಾನಿ ಶಂಕರ್ ಮೀನಾ ಮೊ.ಸಂ: 9051158999, 8197699742. ಸೊರಬ-116 ಮತ್ತು ಸಾಗರ-117 ನಿಧಿ ನಾಯರ್ ಮೊ.ಸಂ: 9910134435, 8197699727 ಆಗಿರುತ್ತದೆ.

DC Shivamogga ಭತ್ತಕ್ಕೆ ಬೆಂಬಲ ಬೆಲೆ ಪ್ರಕಟಿಸಿದ ಜಿಲ್ಲಾಡಳಿತ

0

DC Shivamogga 2022-23ನೇ ಸಾಲಿನ ಮುಂಗಾರುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ ಖರೀದಿಸಲು ಭತ್ತ ಖರೀದಿ ಕೇಂದ್ರಗಳಲ್ಲಿ ಪ್ರಾರಂಭಿಸಲಾಗಿದೆ.

DC Shivamogga ಪ್ರತಿ ಎಕರೆಗೆ 25 ಕ್ವಿಂಟಾಲ್‌ನಂತೆ ಹಾಗೂ ಗರಿಷ್ಠ 40 ಕ್ವಿಂಟಾಲ್ ಮೀರದಂತೆ ಸಾಮಾನ್ಯ ಭತ್ತಕ್ಕೆ ರೂ. 2040/- ಮತ್ತು ಗ್ರೇಡ್ ಎ ಭತ್ತಕ್ಕೆ ರೂ. 2060/- ನಿಗಧಿಪಡಿಸಲಾಗಿದ್ದು, ರೈತರಿಂದ ಭತ್ತ ಖರೀದಿಸುವ ಅವಧಿಯನ್ನು ಏ. 30ರವರೆಗೆ ವಿಸ್ತರಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ರೈತರು ಈ ಸದವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಈಗಾಗಲೇ ತಾಲೂಕು ಎ.ಪಿ.ಎಂ.ಸಿ. ಯಾರ್ಡ್ಗಳಲ್ಲಿ ತೆರೆಯಲಾಗಿರುವ ಭತ್ತ ಖರೀದಿ ಕೇಂದ್ರಗಳನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Power Outage In Shivamogga ಏಪ್ರಿಲ್ 18 ರಂದು ಗಾಜನೂರು ಸುತ್ತಮುತ್ತ ವಿದ್ಯುತ್ ವ್ಯತ್ಯಯ

0

Power Outage In Shivamogga ಶಿವಮೊಗ್ಗ ತಾಲ್ಲೂಕು ಎಂ.ಆರ್,ಎಸ್ 110/11 ಕೆವಿ ಎಸ್.ಕೆ ಮಾರ್ಗದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವ ಕಾರಣ ಈ ಮಾರ್ಗಗಳಿಂದ ವಿದ್ಯುತ್ ಸರಬರಾಜು ಪಡೆಯುವ ಗಾಜನೂರು 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಕೆಳಕಂಡ ಗ್ರಾಮಗಳಲ್ಲಿ ಏ.18 ರಂದು ಬೆಳಗ್ಗೆ 9:30 ರಿಂದ ಸಂಜೆ 06 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

Power Outage In Shivamogga ಗಾಜನೂರು, ಗಾಜನೂರು ಅಗ್ರಹಾರ ಮತ್ತು ಡ್ಯಾಂ, ಸಕ್ರೇಬೈಲು, ತಿಮ್ಕಾಪುರ, ತಟ್ಟಿಕೆರೆ, ವೀರಾಪುರ, ಹೊಸಕೊಪ್ಪ, ಹಾಲಲಕ್ಕವಳ್ಳಿ ಎ & ಬಿ, ಕಡೇಕಲ್, ಯರಗನಾಳ್, ಕುಸ್ಕೂರು, ಸಿದ್ದರಹಳ್ಳಿ, ಇಂದಿರಾನಗರ, ಮುಳ್ಕೆರೆ ಮತ್ತು ಮುತ್ತಿನಕೊಪ್ಪ ವಿದ್ಯುತ್ ವಿತರಣಾ ಕೇಂದ್ರ ಎಫ್-14 ಸಿದ್ದಮ್ಮಾಜಿ ಹೊಸೂರು ಮಾರ್ಗದ ಸಿದ್ದಮ್ಮಾಜಿ ಹೊಸೂರು, ಲಿಂಗಾಪುರ, ಕಾಕನಹಸೂಡಿ, ಉಂಬ್ಳೇಬೈಲು ಕುಡಿಯುವ ನೀರಿನ ಘಟಕ, ಚಿಕ್ಕಳಕೆರೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.