Monday, April 13, 2026
Monday, April 13, 2026
Home Blog Page 1223

Assembly Election ಚಿಕ್ಕಮಗಳೂರಿನಲ್ಲಿ ಜೆಡಿಯುನಿಂದ ಕಾಂಗ್ರೆಸ್ ಗೆ ಮುಖಂಡರ ಸೇರ್ಪಡೆ

0

Assembly Election ಚಿಕ್ಕಮಗಳೂರು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜೆಡಿಯು ಮಾಜಿ ಜಿಲ್ಲಾಧ್ಯಕ್ಷ ಕೆ.ಭರತ್ ಸೇರಿದಂತೆ ವಿವಿಧ ಪಕ್ಷದ ಮುಖಂಡರುಗಳು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಹಾಗೂ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಅಧಿಕೃತವಾಗಿ ಶುಕ್ರವಾರ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು.

ಈ ವೇಳೆ ಮಾತನಾಡಿದ ಕೆ.ಭರತ್ ಜನಪರವಾಗಿ ಹಲವಾರು ವರ್ಷಗಳಿಂದ ಸವಾಲುಗಳನ್ನು ಎದುರಿಸುತ್ತಾ ನೊಂದವರ ಪರ ಹೋರಾಟ ಮಾಡಲಾಗುತ್ತಿತ್ತು. ಆದರೆ ಕೊನೆಯ ಸಮಯದಲ್ಲಿ ಬಿಜೆಪಿಯ ಕೆಲವರು ನ್ಯಾಯ ಪರವಾದ ಹೋರಾಟವನ್ನು ಸಹಿಸಲಾರದೇ ತಮ್ಮ ಮೇಲೆ ಮೊಖದ್ದಮೆ ದಾಖಲಿಸುತ್ತಿದ್ದರು ಎಂದರು.

ಇಷ್ಟೆಲ್ಲಾ ಸಾಮಾಜಿಕ ಕಳಕಳಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾರ್ವಜನಿಕರ ಸೇವೆಗೆ ತಮ್ಮನ್ನು ತಾವು ಸಮರ್ಪಣೆ ಮಾಡಿಕೊಳ್ಳಲಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಸ್ವಲ್ಪ ಸಮಯ ರಾಜಕೀಯದಿಂದ ದೂರವಿದ್ದು ಇದೀಗ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದೇನೆ. ಇನ್ನೂ ಮುಂದಿನ ದಿನಗಳಲ್ಲಿ ಪಕ್ಷವನ್ನು ಕ್ಷೇತ್ರದಲ್ಲಿ ಹೆಚ್ಚಿನ ಮಟ್ಟದಲ್ಲಿ ಸಂಘಟಿಸಲು ಪ್ರಯತ್ನಿಸಲಾಗುವುದು ಎಂದರು.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಅತ್ಯಂತ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುವ ಜೊತೆಗೆ ಮತದಾನ ಕೊನೆಯ ದಿನದವರೆಗೂ ಚುರುಕಿನಿಂದ ಕೆಲಸ ಮಾಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ತರಲು ಸನ್ನದ್ದರಾಗಿರುವುದಾಗಿ ತಿಳಿಸಿದರು.

Assembly Election ಇದೇ ವೇಳೆ ಆಮ್‌ಆದ್ಮಿ, ಬಿಎಸ್ಪಿ ಸೇರಿದಂತೆ ವಿವಿಧ ಪಕ್ಷದ ಮುಖಂಡರುಗಳು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿಕೊಂಡು ಕಾಂಗ್ರೆಸ್ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸAದೀಪ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ|| ಅಂಶುಮAತ್, ಉಪಾಧ್ಯಕ್ಷ ಕೆ.ಎಸ್.ಶಾಂತೇಗೌಡ, ಮಾಜಿ ಅಧ್ಯಕ್ಷ ಡಾ|| ಡಿ.ಎಲ್.ವಿಜಯ್ ಕುಮಾರ್, ಎಂ.ಎಲ್.ಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ಜಿ.ಪಂ. ಮಾಜಿ ಅಧ್ಯಕ್ಷರಾದ ಎ.ಎನ್.ಮಹೇಶ್, ಕೆ.ಮಹಮ್ಮದ್, ವಕ್ತಾರ ರೂಬೆನ್ ಮೋಸಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಭದ್ರಾವತಿ ಗೆಲುವು ಯಾರಿಗೆ?

0

Assembly Election ಭದ್ರಾವತಿ ಬಹುತೇಕ ಚುನಾವಣೆಗಳಲ್ಲಿ ಕಾಂಗ್ರೆಸ್ ಹುರಿಯಾಳು ವಿಜೇರಾದ ಕ್ಷೇತ್ರ.
ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ಈ ನೇಮ ಮುರಿದಾಗಿದೆ.

ಅಲ್ಲಿ ಸ್ವಲ್ಪ ಅವಧಿ ಇಬ್ರಾಹಿಂ ಸೋದರರ ಮುಷ್ಠಿಯಲ್ಲಿ ಕೊಂಚ
ಕಾಲ ಬಿಗುವಿನ ವಾತಾವರಣವೂ ಇತ್ತು. ಅಲ್ಲಿಂದ ಕಾಂಗ್ರೆಸ್ ನ ಹಿಡಿತ ಸಡಿಲವಾಗಿ ಅಪ್ಪಾಜಿ ಗೌಡರು ಮೊದಲು ಪಕ್ಷೇತರರಾಗಿ ನಂತರ ಜೆಡಿಎಸ್ ಸದಸ್ಯರಾಗಿ ಗೆಲುವು ಪಡೆದರು. ಆಮೇಲೆ ಬಿ.ಕೆ.ಸಂಗಮೇಶ್ ಕೂಡ ಪಕ್ಷೇತರರಾಗಿ ಬಂದರು. ಶಾಸಕರಾದರು. ನಂತರ ಕಾಂಗ್ರೆಸ್ ಸೇರಿ ಮತ್ತೆ ಶಾಸಕರಾದರು.

ವಿಧಾನಸಭಾ ಚುನಾವಣೆ ಎಂದರೆ ಅಪ್ಪಾಜಿ ಮತ್ತು ‌ಸಂಗಮೇಶ್ ಅವರ ಅಭಿಮಾನಿಗಳಲ್ಲಿ ಪರ ವಿರೋಧ ಚಕಮಕಿ ನಡೆಯುತ್ತಲೇ ಇತ್ತು.
ಭದ್ರಾವತಿಯಲ್ಲಿ ಇದು ಜನಜನಿತ.
ಗುಂಪು ಗಲಭೆಗಳು
ತಲೆಯೆತ್ತುತ್ತಿದ್ದವು.
ಶಾಂತಿಪ್ರಿಯ ಶಾಸಕರೆಂದು ಸಂಗಮೇಶ್ ಕರೆಸಿಕೊಂಡರು.
ಹಠಾತ್ ಅಪ್ಪಾಜಿ ಗೌಡರ ನಿಧನದ ನಂತರ ಸಂಗಮೇಶ್ ಗೆ ಸಮರ್ಥ ಎದುರಾಳಿ ಮತ್ತು ಪಕ್ಷ ಬಂದಿಲ್ಲ. ಕಾಂಗ್ರೆಸ್ ಟಿಕೆಟ್ ನಲ್ಲಿ ಗೆದ್ದ ಸಂಗಮೇಶ್ ತಮಗಿರುವ ಅವಕಾಶಗಳನ್ನ ಕೌಶಲದಿಂದ ಬಳಸಿಕೊಂಡರು. ಕೋವಿಡ್ ಸಮಯದಲ್ಲಿ ಶಾಸಕರಾಗಿ ಸಂಗಮೇಶ್ ನಿರ್ವಹಿಸಿದ ಪಾತ್ರ ಜನಮೆಚ್ಚುಗೆ ಗಳಿಸಿತು.

Assembly Election ಸಂಗಮೇಶ್ ತಮ್ಮ ಜನಪ್ರಿಯತೆಯನ್ನ ಕಡಿಮೆಮಾಡಿಕೊಳ್ಳಲೇ ಇಲ್ಲ. ವಿಐಎಸ್ ಎಲ್ ಉಳಿವಿಗೆ ಪರದಾಡುತ್ತಿತ್ತು. ಅದಕ್ಕೆಂದೆ ಗಣಿ ಪ್ರದೇಶವನ್ನ ಮೀಸಲಾಗಿಡಲು ರಾಜ್ಯ ಸರ್ಕಾರಕ್ಕೆ
ದುಂಬಾಲುಬಿದ್ದರು.
ಯಶಸ್ವಿಯಾದರು.

ಈ ಪ್ರಭಾವಳಿ ಸಂಗಮೇಶ್ ಪಡೆದಿದ್ದಾರೆ. ಬಿಜೆಪಿ
ಆಡಳಿತಶಕ್ತಿಯಿಂದ ಗೆಲ್ಲಲು ಪ್ರಯತ್ನಿಸಬೇಕಿದೆ.
ಸದ್ಯ ಸಂಗಮೇಶ್ ಎದುರು ಸಮರ್ಥ ಎದುರಾಳಿ ಅಂತ ಹೇಳಿಕೊಳ್ಳುವಂತೆ ಯಾರೂ ಇಲ್ಲ.

ಸಂಗಮೇಶ್ ಗೆಲ್ಲುವ ಅವಕಾಶಗಳೇ ಜಾಸ್ತಿ ಇದೆ. ರಾಜ್ಯ ಸರ್ಕಾರ
ವಿಐಎಸ್ ಎಲ್ ಮತ್ತು ಕಾಗದ ಕಾರ್ಖಾನೆ ಉಳಿಸಿದಿದ್ದರೆ ಅದರ ಕತೆಯೇ ಬೇರೆ ಇರುತ್ತಿತ್ತು. ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಎಲ್ಲಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೆ ಅಂದರೆ ಭದ್ರಾವತಿ ಬಗ್ಗೆ ಆತ್ಮವಿಶ್ವಾದಿಂದ ಹೇಳಲು ಸಾಧ್ಯವಿಲ್ಲ.

ಭದ್ರಾವತಿ ಪರಿಸ್ಥಿತಿ ಹಾಗಿದೆ.

Congress Karnataka ಕ್ರಾಂಗ್ರೆಸ್ ನಿಂದ ಕೇಜ್ರಿವಾಲ್ ಮಾದರಿಯ ಡಿಟೋ ಯೋಜನೆ

0

Congress Karnataka ರಾಜ್ಯದ ಎಲ್ಲಾ ಮಹಿಳೆಯರಿಗೆ ಎಲ್ಲಾ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಭರವಸೆಯನ್ನು ನೀಡುತ್ತದೆ ಕಾಂಗ್ರೆಸ್ ನೀಡಲಿದೆ.

Congress Karnataka ಕಾಂಗ್ರೆಸ್ ಮಹಿಳಾ ಸಬಲೀಕರಣಕ್ಕೆ ಬದ್ದವಾಗಿದೆ.
ಮಹಿಳೆಯರು ಸ್ವಾವಲಂಬಿಯಾಗಿ ಸುಭದ್ರ ಭವಿಷ್ಯ ರೂಪಿಸಿಕೊಳ್ಳಲು ನಮ್ಮ ಈ ಯೋಜನೆ ಮಹತ್ತರ ಪಾತ್ರ ವಹಿಸಲಿದೆ ಎಂದು ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಲಾಗಿದೆ.

Coronavirus Disease ನವದೆಹಲಿಯಲ್ಲಿ‌ಹೊಸ ಕೋವಿಡ್ ಪ್ರಕರಣ ಪತ್ತೆ

0

Coronavirus Disease ನವದೆಹಲಿಯಲ್ಲಿ ಗುರುವಾರ 865 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ರಾಷ್ಟ್ರ ರಾಜಧಾನಿಯ ಸಕ್ರಿಯ ಕ್ಯಾಸೆಲೋಡ್ ಪ್ರಸ್ತುತ 4,279 ರಷ್ಟಿದೆ. ಇವರಲ್ಲಿ 3,143 ರೋಗಿಗಳು ಮನೆಯಲ್ಲೇ ಐಸೊಲೇಷನ್‌ನಲ್ಲಿದ್ದಾರೆ ಎಂದು ಅದು ಹೇಳಿದೆ.

Coronavirus Disease ಜನರು ಕೋವಿಡ್ ರಕ್ಷಣೆ ಪಡೆಯಲು ಜನರು ಬೂಸ್ಟರ್‌ ಡೋಸ್‌ ಪಡೆಯಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವರ್ಷ ಇದುವರೆಗಿನ ಅತಿ ಹೆಚ್ಚು ಸಾವಿನ ಪ್ರಕರಣವಾಗಿದೆ. ದೆಹಲಿ ಸರ್ಕಾರದ ಆರೋಗ್ಯ ಬುಲೆಟಿನ್ ಪ್ರಕಾರ, ಒಟ್ಟಾರೆ ಕೋವಿಡ್ ಸಂಖ್ಯೆ 20,37,061 ಕ್ಕೆ ಏರಿದೆ.

Shivamogga Airport ಇಂಡಿಗೋ ಏರ್ ಲೈನ್ಸ್ ನಿಂದ ಶೀಘ್ರದಲ್ಲೇ ಶಿವಮೊಗ್ಗ-ಬೆಂಗಳೂರು ವಿಮಾನ ಸಂಚಾರ

0

Shivamogga Airport ಶಿವಮೊಗ್ಗ ವಿಮಾನ ನಿಲ್ದಾಣದಿಂದ ಶೀಘ್ರ ವಿಮಾನಗಳ ಸಂಚಾರ ಶೀಘ್ರದಲ್ಲೇ ಆರಂಭಿಸುವ ಸಾಧ್ಯತೆ ಇದೆ ಎಂದು ಇಂಡಿಗೋ ಏರ್‌ಲೈನ್ಸ್ ಕರ್ನಾಟಕ ಸೇಲ್ಸ್ ಸೀನಿಯರ್ ಮ್ಯಾನೇಜರ್ ಸೌರಭ್ ಸಚದೇವ್ ಹೇಳಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವಜ್ರ ಮಹೋತ್ಸವದ ಭಾಗವಾಗಿ ಆಯೋಜಿಸಿದ್ದ ಇಂಡಿಗೋ ಏರ್‌ಲೈನ್ಸ್ ಅಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಶಿವಮೊಗ್ಗದಿಂದ ಹೆಚ್ಚು ಅವಶ್ಯಕತೆ ಇರುವ ಹಾಗೂ ಪ್ರಮುಖ ಸ್ಥಳಗಳಿಗೆ ಸಂಚಾರ ಮಾರ್ಗ ರೂಪಿಸುವ ಬಗ್ಗೆ ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಸೇವೆ ಆರಂಭ ಆಗುವುದರಿಂಧ ಕೈಗಾರಿಕಾ ಹಾಗೂ ಉದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಕೈಗಾರಿಕೆ, ಉದ್ಯಮಗಳ ಸ್ಥಾಪನೆ ಹೆಚ್ಚಿಸುವ ಜತೆಯಲ್ಲಿ, ಶಿವಮೊಗ್ಗ-ದಾವಣಗೆರೆ, ಶಿವಮೊಗ್ಗ-ಚಿತ್ರದುರ್ಗ ಒಳಗೊಂಡಂತೆ ಕೈಗಾರಿಕಾ ಕಾರಿಡಾರ್ ಸ್ಥಾಪನೆಯಾದಲ್ಲಿ ಉದ್ಯಮ ಕ್ಷೇತ್ರಕ್ಕೆ ಹೆಚ್ಚು ಉಪಯೋಗವಾಗಲಿದೆ ಎಂದು ಹೇಳಿದರು.

Shivamogga Airport ಶಿವಮೊಗ್ಗ ಜಿಲ್ಲೆ ಪ್ರವಾಸೋದ್ಯಮದ ಕೇಂದ್ರ ಸ್ಥಾನ ಆಗಿದ್ದು, ಶಿವಮೊಗ್ಗ ಕೇಂದ್ರ ಸ್ಥಾನದಿಂದ ಪ್ರಮುಖ ಪ್ರವಾಸಿ ತಾಣಗಳಿಗೆ ಸಮೀಪ ಆಗಲಿದೆ. ಪ್ರವಾಸೋದ್ಯಮ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವ ದೃಷ್ಠಿಯಿಂದಲೂ ವಿಮಾನಯಾನ ಸೌಲಭ್ಯ ಪರಿಣಾಮಕಾರಿಯಾಗಿ ಬಳಕೆ ಮಾಡಲು ಪ್ರೋತ್ಸಾಹಿಸಬೇಕಿದೆ ಎಂದು ತಿಳಿಸಿದರು.

ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮೂಲಸೌಕರ್ಯ ಸಮಿತಿ ಚರ‍್ಮನ್ ಸುಕುಮಾರ್ ಅವರು ಇಂಡಿಗೋ ಏರ್‌ಲೈನ್ಸ್ ಅಧಿಕಾರಿಗಳಿಗೆ ಶಿವಮೊಗ್ಗ ವಿಮಾನ ನಿಲ್ದಾಣ, ಮಾರ್ಗಗಳ ಹಾಗೂ ಅಗತ್ಯತೆಗಳ ಬಗ್ಗೆ ಮಾಹಿತಿ ನೀಡಿದರು.

ಇಂಡಿಗೋ ಏರ್‌ಲೈನ್ಸ್ ಅಧಿಕಾರಿಗಳು ಶಿವಮೊಗ್ಗ ಜಿಲ್ಲೆಯ ವಾಣಿಜ್ಯ, ಕೈಗಾರಿಕೆ ಹಾಗೂ ಉದ್ಯಮಿಗಳ ಅವಶ್ಯಕತೆಗಳನ್ನು ತಿಳಿದುಕೊಳ್ಳುವ ಪ್ರಯುಕ್ತ ಹಾಗೂ ವಿಮಾನ ಸಂಚಾರ ಮಾರ್ಗಗಳ ಕುರಿತು ಸಂವಾದ ನಡೆಸಿದರು.

ಟ್ರೇಡ್ಸ್ ಅಸಿಸ್ಟೆಂಟ್ ಮ್ಯಾನೇಜರ್ ಮನೋಜ್ ಪ್ರಭು, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ಮರಿಸ್ವಾಮಿ, ಹಾಲಸ್ವಾಮಿ, ಎಂ.ರಾಜು, ಗಣೇಶ್ ಅಂಗಡಿ, ರಮೇಶ್ ಹೆಗಡೆ, ಪರಮೇಶ್ವರ್, ಬೆನಕಪ್ಪ, ಸುರೇಶ್, ಕಿರಣ್ ಉಪಸ್ಥಿತರಿದ್ದರು.

Assembly Election ಪ್ರತಿಯೊಂದು ಬೂತ್ ನಲ್ಲೂ ಉತ್ತಮ ಸ್ಪಂದನ- ಅಶೋಕ ನಾಯಕ್

0

Assembly Election ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೊಳೆಹೊನ್ನೂರು ಮಹಾಶಕ್ತಿ ಕೇಂದ್ರದ ವಿವಿಧ ಬೂತ್‌ಗಳಲ್ಲಿ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಬಿ.ಅಶೋಕ ನಾಯ್ಕ ಪ್ರಚಾರ ಕಾರ್ಯ ನಡೆಸಿದರು.

ಪ್ರತಿ ಬೂತ್‌ಗಳಲ್ಲಿ ನೂರಾರು ಕಾರ್ಯಕರ್ತರು ಬಿಜೆಪಿ ಪರ ಜೈಘೋಷ ಕೂಗಿ ಪ್ರಚಾರದಲ್ಲಿ ಭಾಗಿಯಾಗಿದ್ದರು.

ಹೊಳೆಹೊನ್ನೂರು ಮಹಾಶಕ್ತಿ ಕೇಂದ್ರದ ಭಗವತಿ ಕೆರೆ ಗ್ರಾಮದಿಂದ ಶುಕ್ರವಾರ ಬೆಳಗ್ಗೆ ಮತಯಾಚನೆ ಆರಂಭಿಸಿದ ಗ್ರಾಮಾಂತರ ಅಭ್ಯರ್ಥಿ ಕೆ.ಬಿ.ಅಶೋಕನಾಯ್ಕ, ನಂತರ ಶ್ರೀನಿವಾಸಪುರ ಗ್ರಾಮ, ಹನುಮಂತಾಪುರ ಸೇರಿದಂತೆ ಹತ್ತಕ್ಕೂ ಹೆಚ್ಚು ಗ್ರಾಮಗಳ ಬೂತ್‌ಗಳಲ್ಲಿ ಪ್ರಚಾರ ಕಾರ್ಯ ನಡೆಸಿ ಮತಯಾಚನೆ ನಡೆಸಿದರು.

ಪ್ರತಿ ಗ್ರಾಮಗಳಲ್ಲಿ ಮನೆ ಮನೆಗಳಿಗೆ ತೆರಳಿ ಬಿಜೆಪಿ ಬೆಂಬಲಿಸಲು ಮನವಿ ಮಾಡಿದರು.

ಶ್ರೀನಿವಾಸಪುರ ಗ್ರಾಮದಲ್ಲಿ ಮತಯಾಚನೆ ನಡೆಸಿದ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಬಿ.ಅಶೋಕನಾಯ್ಕ, ಪ್ರಧಾನಿ ನರೇಂದ್ರ ಮೋದಿ ಅವರು ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ್ದು, ಬಿಜೆಪಿ ಪಕ್ಷಕ್ಕೆ ಬೂತ್ ಮಟ್ಟದ ಕಾರ್ಯಕರ್ತರ ಸಂಘಟಿತ ಶಕ್ತಿಯೇ ಬಲ. ಪ್ರತಿಯೊಂದು ಬೂತ್‌ಗಳಲ್ಲಿಯೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.

Assembly Election ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಹಾಶಕ್ತಿ ಕೇಂದ್ರಗಳಲ್ಲಿರುವ ವಿವಿಧ ಬೂತ್‌ಗಳ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರದ ಸಾಧನೆಗಳನ್ನು ಮನೆ ಮನೆಗಳಿಗೆ ತಲುಪಿಸುತ್ತಿದ್ದಾರೆ. ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಸಾರ್ವಜನಿಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿಯೂ ಬಿಜೆಪಿ ಪಕ್ಷ ರಾಜ್ಯದಲ್ಲಿಯೇ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ಮೂಲಕ ಅಭಿವೃದ್ಧಿ ಪರ್ವ ಮುಂದುವರೆಸಲಿದೆ ಎಂದರು.

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಚುನಾವಣಾ ಕಾರ್ಯಾಲಯದಲ್ಲಿ ಪ್ರಮುಖರ ಸಭೆ ನಡೆಸಲಾಯಿತು. ಕ್ಷೇತ್ರ ಪ್ರಭಾರಿ ಎಸ್.ದತ್ತಾತ್ರಿ, ಮಂಡಲ ಅಧ್ಯಕ್ಷ ರತ್ನಾಕರ ಶೆಣೈ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಪ್ರಮುಖ್ ವೀರೂಪಾಕ್ಷಪ್ಪ, ಗ್ರಾಮಾಂತರ ಕ್ಷೇತ್ರ ಚುನಾವಣಾ ಸಮಿತಿ ಸಂಚಾಲಕ ಸಿಂಗನಹಳ್ಳಿ ಸುರೇಶ್, ಸ್ವರೂಪ್ ಸೇರಿದಂತೆ ಪ್ರಮುಖರು ಸಭೆ ನಡೆಸಿದರು.

ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೊಳೆಹೊನ್ನೂರು ಮಹಾಶಕ್ತಿ ಕೇಂದ್ರದ ವಿವಿಧ ಬೂತ್‌ಗಳ ಪ್ರಚಾರ ಕಾರ್ಯದಲ್ಲಿ ಮಂಡಲ ಅಧ್ಯಕ್ಷ ಮಂಜುನಾಥ್ ಕಲ್ಲಜ್ಜನಾಳ್, ಶ್ರೀನಿವಾಸ್, ಪರಮೇಶ್ವರಪ್ಪ, ಸುಬ್ರಹ್ಮಣ್ಯ, ಜಗದೀಶ್ ಮತ್ತಿತರರು ಹಾಜರಿದ್ದರು.

Klive.news ಎಲ್ಲರಿಗೂ ನಾಲಗೆಯ ನಿಯಂತ್ರಣವಿರಬೇಕು

0

Klive.news ಮನುಷ್ಯನ ನಾಲಿಗೆ ಬಗ್ಗೆ ದಾಸರು ಹೇಳಿದ್ದು ನೆನಪಿಗೆ ಬರುತ್ತದೆ.
“ಆಚಾರವಿಲ್ಲದ ನಾಲಗೆ ನಿನ್ನ‌ ನೀಚ ಬುದ್ಧಿಯ ಬಿಡು ನಾಲಗೆ..”

ವಿಚಾರವಿಲ್ಲದೆ ಪರರ ದೂಷಿಸುವುದಕ್ಕೆ
ಚಾಚಿಕೊಂಡಿರುವಂತ ನಾಲಿಗೆ …
ಇದು ಎಲ್ಲರಿಗೂ ಅಂದರೆ ಪರಸ್ಪರ ದೂಷಿಸುವ ಮನೋಭಾವದವರಿಗೆ ಹೇಳಿದ ವಿಡಂಬನೆಯಾಗಿದೆ.

ಇದನ್ನ ಬರೆಯಲು ಹಿನ್ನೆಲೆ ಪ್ರಸ್ತುತ ಚುನಾವಣಾ ವಾತಾವರಣ.
ಮಾಧ್ಯಮಗಳಲ್ಲಿ ನೀವೆಲ್ಲ ನೋಡಿದಂತೆ ನಮ್ಮ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ಮೋದಿಯವರ ಬಗ್ಗೆ
ವಿಷದ ಹಾವು ಎಂಬ ಅರ್ಥ ಬರುವಂತೆ ಮಾತಾಡಿದ್ದರು ಆ ಸುದ್ದಿ ದೃಶ್ಯಮಾಧ್ಯಮಗಳಲ್ಲಿ ಪ್ರಸಾರವಾಗಿದೆ.
ಮಾನ್ಯ ಹಿರಿಯ ಖರ್ಗೆ ಅವರು ಮಾತಾಡಿದ ಬಗ್ಗೆ ದೃಶ್ಯದ ಕ್ಲಿಪಿಂಗ್ ರಿಪೀಟ್ ಮಾಡಿ ಖಾಸಗಿ ಟಿವಿಗಳು ತೋರಿಸಿವೆ.
ಅದಕ್ಕೆ ಪ್ರತ್ಯೇಕ ಪತ್ರಿಕಾಗೋಷ್ಠಿಯಲ್ಲಿ
ತಾವು ಆ ರೀತಿ ಮಾತಾಡಿಲ್ಲ. ಮಾಧ್ಯಮಗಳು‌‌ ತಿರುಚಿವೆ ಎಂಬ ಹೇಳಿಕೆ ನೀಡಿದರು.

Klive.news ವೀಕ್ಷಕರು ತಮ್ಮ ಕಣ್ಣು‌ಕಿವಿಗಳ ಬಗೆಗಿನ ನಂಬಿಕೆ ವಿಚಲಿತಗೊಳ್ಳುವಂತೆ
ಮಾಡಿಬಿಟ್ಟರು.
ಹಿರಿಯ ವ್ಯಕ್ತಿ ನಿಜ.ಆದರೆ ಆಡುಮಾತಿನ ವಾಕ್ಯ ರಚನೆಯಲ್ಲಿ ಬಳಸಿದ ಮತ್ತು ‌ವೀಕ್ಷಕರು ಕೇಳಿದ ಪದಗಳು ಅವೇ ಆಗಿವೆ.
ಇಲ್ಲಿ ಮುಖ್ಯವಾಗಿ ಬಿಜೆಪಿ‌,ಜೆಡಿಎಸ್ ಮತ್ತು ಕಾಂಗ್ರೆಸ್ ಎಲ್ಲರೂ ಈ ರೀತಿಯಾಗಿ ಒಮ್ಮೊಮ್ಮೆ ನಿಯಂತ್ರಣ ತಪ್ಪಿ ಮಾತನಾಡುವುದು ಸಾಮಾನ್ಯ.
ಮಾನ್ಯ ಖರಘರ ಅವರು ಅದಕ್ಕೆ ತಿದ್ದುಪಡಿ ಹೇಳಿ
ಆರ್ ಎಸ್ಎಸ್ ಮತ್ತು‌ ಬಿಜೆಪಿ ವಿಷಕಾರಿ ಆಲೋಚನೆಯುಳ್ಳ ವ್ಯಕ್ತಿಗಳಿದ್ದಾರೆ. ಮೋದಿಯವರ ಬಗ್ಗೆ ಆ ರೀತಿ ಹೇಳಿಲ್ಲ.
ಯಾರಿಗಾದರೂ ನೋವಾಗಿದ್ದರೆ ಖೇದ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ್ದಾರೆ.

ಚುನಾವಣೆಯಕಾವಿನಲ್ಲಿ ಭಾವನಾತ್ಯಕವಾಗಿ ಭಾಷಣಮಾಡುವುದು ಸಹಜ. ಆದರೆ
ಸ್ಥಾನಮಾನ ಮತ್ತು ಮಾನವೀಯ ಅಂತಃಕರಣಗಳನ್ನ ಗಾಳಿಗೆ ತೂರಬಾರದು ಎಂಬ ವಿವೇಕ ಎಲ್ಲ ಪಕ್ಷದವರಿಗೂ ಅಗತ್ಯ.

BJP karnataka ಸಾಗರದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಿಂದ ಮೀಟ್ ದಿ ಪ್ರೆಸ್ ಕಾರ್ಯಕ್ರಮ

0

BJP karnataka ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯ 07 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲುವ ಮೂಲಕ ಹೊಸ ಭಾಷ್ಯ ಬರೆಯುತ್ತೇವೆ ಎಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ವಿಶ್ವಾಸ ವ್ಯಕ್ತಪಡಿಸಿದರು.

ಅವರು ಸಾಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಸಂವಾದದಲ್ಲಿ ಪತ್ರಕರ್ತರುಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು ಈಗಾಗಲೇ ಜಿಲ್ಲೆಯ 06 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದು, 06 ಕ್ಷೇತ್ರಗಳನ್ನು ಉಳಿಸಿಕೊಳ್ಳುವ ಜೊತೆಗೆ ಭದ್ರಾವತಿಯಲ್ಲಿಯೂ ತ್ರಿಕೋನ ಸ್ಪರ್ಧೆಯ ಪರಿಣಾಮ ಬಿಜೆಪಿ ಗೆಲ್ಲುವ ಮೂಲಕ ಜಿಲ್ಲೆಯ 07 ಸ್ಥಾನಗಳಲ್ಲಿಯೂ ಬಿಜೆಪಿ ವಿಜಯದ ಪತಾಕೆಯನ್ನು ಹಾರಿಸುತ್ತದೆ ಎಂದರು.

ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವಕ್ಕಿಂತ ಹೈಕಮಾಂಡಿನ ಹೇರಿಕೆಯ ಕುರಿತು ಆರೋಪಗಳು ಕೇಳಿಬರುತ್ತಿವೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಇದೊಂದು ತಪ್ಪು ತಿಳುವಳಿಕೆಯಾಗಿದೆ. ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷವಾಗಿರುವ ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿಯೇ ಗುಪ್ತ ಮತದಾನ ನಡೆಸಲಾಗಿದೆ. ಹೆಚ್ಚು ಮತಗಳ ಲಭ್ಯತೆಯ ಆಧಾರದಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳನ್ನು ವಿಧಾನಸಭೆ ಚುನಾವಣೆಗೆ ಟಿಕೇಟ್ ನೀಡಿರುವ ಮಾದರಿ ನಿಜವಾದ ಪ್ರಜಾಪ್ರಭುತ್ವಕ್ಕೆ ಬಿಜೆಪಿಯಿಂದ ಸಂದ ಗೌರವ ಎಂದು ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ಕುರಿತು ವಿವರಿಸಿದರು.

ಆಡಳಿತದ ವಿರೋಧಿ ಅಲೆ ಮತ್ತು ಜನಪರ ಯೋಜನೆಗಳ ತುಲನೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಪಡೆಯಲು ಸಾಧ್ಯವೇ?ಎಂಬ ಪ್ರಶ್ನೆಗೆ ಆಡಳಿತದ ವಿರೋಧಿ ಅಲೆ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ,ಬಿಜೆಪಿಗೆ ಆಡಳಿತದ ಪರವಾದ ಅಲೆಯಿದೆ.

ಅಬಿವೃದ್ಧಿಯ ಹಾಗೂ ಜನಪರ ಯೊಜನೆಗಳ ಅಲೆಯಿದೆ.ಕೊರೋನಾ ಕಾಲದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜನಪರ ಜೀವಪರ ಆಡಳಿತದಿಂದ ಔಷಧಿ,ಆಹಾರ,ಮಾಸ್ಕ್ ಸೇರಿದಂತೆ ಸಮರೋಪಾದಿಯಲ್ಲಿ ಸ್ಪಂದಿಸಿ ಕೊರೋನಾ ನಿರ್ವಹಣೆ ಮೂಲಕ ಭಾರತ ವಿಶ್ವಕ್ಕೆ ಮಾದರಿಯಾಗಿದೆ ಎಂದರು.

BJP karnataka ಆದಾಯವೇ ಇಲ್ಲದ ಕೊರೋನಾ ಕಾಲದಲ್ಲಿ ಇರುವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಯೂ ದೇಶದಲ್ಲಿ ಆರ್ಥಿಕ ಸ್ಥಿತಿಯನ್ನು ಕಾಪಾಡಿಕೊಂಡಿರುವ ದೇಶ ಪ್ರಧಾನಿ ನರೇಂದ್ರಮೋದಿಯವರ ಸಮರ್ಥ ಆಢಳಿತವನ್ನು ಹೊಂದಿರುವ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದ್ದರಿಂದ ಬಿಜೆಪಿ ಆಡಳಿತದ ಪರವಾದ ಅಲೆ ಚುನಾವಣೆಯಲ್ಲಿ ಬೀಸತೊಡಗಿದೆ ಎಂದರು.

ರಾಜಕೀಯ ಪಕ್ಷದಲ್ಲಿ ನಿಯಮಗಳಿರುತ್ತವೆ.ಅಂತಹ ನಿಯಮಗಳಿಗೆ ಬದ್ದರಾಗಿ ದೇಶಕ್ಕೆ ಮಾದರಿಯಾದ ನಿಲುವು ಪ್ರಕಟಿಸುವ ಮೂಲಕ ರಾಷ್ಟ್ರೀಯ ನಾಯಕರ ಮೆಚ್ಚುಗೆಗೆ ಪಾತ್ರವಾಗಿರುವ ಪಕ್ಷ ನಿಷ್ಠೆಯ ಜೊತೆಗೆ ನಮಗೆಲ್ಲ ಮಾದರಿ ಆದರ್ಶ ವ್ಯಕ್ತಿ ಶಿವಮೊಗ್ಗದ ಹಿರಿಯ ಮುತ್ಸದ್ದಿ ಕೆ.ಎಸ್.ಈಶ್ವರಪ್ಪನವರು. ಅವರು ಚುನಾವಣೆಗೆ ನಿಲ್ಲಬೇಕು ಎಂಬುದು ನಮ್ಮೆಲ್ಲರ ಆಶಯವಾಗಿತ್ತು.

ಅವರು ಸ್ಪರ್ಧಿಸಿದ್ದರೇ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ಶಕ್ತಿಯಿತ್ತು.ಅಂತಹ ಧೀಮಂತ ನಾಯಕ ಈಶ್ವರಪ್ಪನವರು ರಾಜಕೀಯ ವ್ಯಕ್ತಿಗಳಿಗೆ ಮೇಲ್ಪಂಕ್ತಿ ಹಾಕಿದ್ದಾರೆ ಎಂದು ಮೇಘರಾಜ್ ಮೆಚ್ಚುಗೆಯ ಮಾತುಗಳನ್ನಾಡಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಭದ್ರಾವತಿಯ ಜೀವಾಳ ವಿ.ಎಸ್.ಐ.ಎಲ್ ಕಾರ್ಖಾನೆ ಮುಚ್ಚುವ ಅಂತಿಮ ಹಂತದಲ್ಲಿದ್ದಾಗ ಲೋಕಸಭಾ ಸದಸ್ಯರುಗಳಾದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ಸರ್ಕಾರದ ಗಮನಸೆಳೆಯುವ ಮೂಲಕ ಭದ್ರಾವತಿಯ ಕಾರ್ಖಾನೆಯನ್ನು ಪುನಶ್ಚೇತನಕ್ಕೆ ಅವಕಾಶ ಕಲ್ಪಿಸಿಸದ್ದಾರೆ. ದೇಶದ ದೊಡ್ಡ ಸೇತುವೆಗಳ ಸಾಲಿನಲ್ಲಿ ನಿಲ್ಲುವ ತುಮರಿ ಸೇತುವೆ ಕಾಮಗಾರಿ ಚುರುಕಿನಿಂದ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಪ್ರಗತಿಯಲ್ಲಿದೆ ಎಂದರು.

ವಿಮಾನ ನಿಲ್ದಾಣ ಲೋಕರ್ಪಣೆಗೊಂಡಿದ್ದು,ಕೈಗಾರಿಕೆಗಳು ಶಿವಮೊಗ್ಗದತ್ತ ದೃಷ್ಟಿ ಹರಿಸಲು ಸುವರ್ಣಾವಕಾಶ ಕಲ್ಪಿಸಿರುವುದು ಬಿಜೆಪಿಯ ಸಾಧನೆಯಲ್ಲವೇ?ಶಿವಮೊಗ್ಗ ಗ್ರಾಮಾಂತರದಲ್ಲಿ ಮತ್ತು ಶಿಕಾರಿಪುರದಲ್ಲಿ ಏತ ನೀರಾವರಿ ಯೋಜನೆಯ ಮೂಲಕ ನಾಲೆಗಳ ನಿರ್ಮಿಸಿ ನೀರು ಹರಿಸಿರುವುದು ಬಿಜೆಪಿ ಸಾಧನೆಯಾಗಿದೆ.

ಪ್ರವಾಸಿ ತಾಣಗಳಾಗಿರುವ ಗುಡವಿ,ಅಕ್ಕಮಹಾದೇವಿ ಜನ್ಮಸ್ಥಳ,ಕೆಳದಿ-ಇಕ್ಕೇರಿ ಹಾಗೂ ಜೋಗ ಮತ್ತು ಸಿಗಂಧೂರು,ವರದಹಳ್ಳಿ ಸೇರಿದಂತೆ ಪ್ರವಾಸಿ ತಾಣಗಳಿಗೆ ಸಂಪರ್ಕ ರಸ್ತೆಗಳ ಅಭಿವೃದ್ಧಿಗಳು ಬಿಜೆಪಿ ಪಕ್ಷದ ಸಾಧನೆಯ ಸಾಲಿನಲ್ಲಿ ನಿಲ್ಲುತ್ತವೆ.ಕರ್ನಾಟಕದ ಇತಿಹಾಸದಲ್ಲಿ ಹೊಸ ರೈಲ್ವೇ ಮರ್ಗ ರಾಣೆಬೆನ್ನೂರಿನಿಂದ ಶಿಕಾರಿಪುರದ ಸಂಪರ್ಕದ ಯೋಜನೆ ಐತಿಹಾಸಿಕವಾಗಿದೆ. ಆದ್ದರಿಂದ ಬಿಜೆಪಿ ಪಕ್ಷಕ್ಕೆ ಇಂತಹ ಜಿಲ್ಲೆಯ ಸಮಗ್ರ ಅಬಿವೃದ್ಧಿ ಕಾರ್ಯಗಳೇ ಶ್ರಿರಕ್ಷೆಯಾಗಿವೆ ಎಂದರು.
ಬಿಜೆಪಿಗೆ ಲಿಂಗಾಯಿತ ಮತ್ತು ಬ್ರಾಹ್ಮಣ ವಿರೋಧಿ ಆರೋಪಗಳು ಕೇಳಿಬರುತ್ತಿವೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೇಘರಾಜ್ ಅಂತಹ ಯಾವ ಆರೊಪಗಳು ಇಲ್ಲ.ವಿರೋಧಿಗಳ ಸೃಷ್ಟಿಯಾಗಿದೆ. ಧನಾತ್ಮಕ ಚಿಂತನೆಯಿಲ್ಲದವರು ವಿಪಕ್ಷದವರು ಜಾತಿ-ಧರ್ಮಗಳ ನಡುವೆ ವಿಷ ಬೀಜವನ್ನು ಬಿತ್ತಿ ವಿರೋಧಿ ಅಲೆ ಸೃಷ್ಟಿಸುವ ಷಡ್ಯಂತ್ರವನ್ನು ಹೆಣೆಯುತ್ತಾರೆ. ಆದರೇ ಬಿಜೆಪಿ ಅಭಿವೃದ್ಧಿ-ಸುಧಾರಣೆ-ಪ್ರಗತಿಯ ಅಜೆಂಡದಿಂದ ಮತದಾರರ ಮನಸ್ಸನ್ನು ಗೆಲ್ಲುತ್ತದೆ ಎಂದರು.

ಬಿಜೆಪಿ ಸರ್ಕಾರ ಮಾಡಿದ ಮೀಸಲಾತಿ ವರ್ಗೀಕರಣದ ವಿರುದ್ಧ ಹಿಂದುಳಿದ ವರ್ಗಗಳ ಅಸಮಾಧಾನ ಬಿಜೆಪಿ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲವೇ? ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೇಘರಾಜ್ ಮೀಸಲಾತಿ ವರ್ಗೀಕರಣ ಬಿಜೆಪಿ ಸರ್ಕಾರದ ಐತಿಹಾಸಿಕ ನಿರ್ಣಯ ಮಾಡಿದೆ. ಸದಾಶಿವ ಆಯೋಗದ ವರದಿಯಲ್ಲಿ ಬಂಜಾರ,ಭೋವಿ,ಕೊರಮ-ಕೊರಚ ಸಮುದಾಯಗಳಿಗೆ ಮೀಸಲಾತಿಯಿರಲಿಲ್ಲ.ಅಂತಹ ನೀತಿಯನ್ನು ಬದಲಾಯಿಸಿ ಬಂಜಾರ,ಭೋವಿ,ಕೊರಮ-ಕೊರಚ ಸಮುದಾಯಗಳಿಗೆ ಮೀಸಲಾತಿಯ ಲಾಭ ದೊರೆಯುವಂತೆ ಮಾಡಿರುವುದನ್ನು ಹಂತ ಹಂತವಾಗಿ ಅರ್ಥ ಮಾಡಿಕೊಂಡು ಬಿಜೆಪಿ ನಿರ್ಣಯವನ್ನು ಬೆಂಬಲಿಸುತ್ತಿವೆ ಎಂದರು.

ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವಂತಿಲ್ಲ.ಅಂತಹ 5.5% ಮೀಸಲಾತಿಯನ್ನು ಕೊರತೆ ಇರುವ ಸಮುದಾಯಗಳಿಗೆ ವರ್ಗೀಕರಿಸಲಾಗಿದೆ ಎಮದು ಮೀಸಲಾತಿಯ ಕುರಿತು ಬಿಜೆಪಿ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.

ಎಲ್ಲಾ ಸಮುದಾಯಗಳ ಹಿತ ಬಯಸುವ ಬಿಜೆಪಿ ಸರ್ಕಾರವನ್ನು ಮತ್ತೊಮೆ ರಾಜ್ಯದ ಮತದಾರರು ಬೆಂಬಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಸ್ತುತ ಚುನಾವಣೆಯಲ್ಲಿ ಬಿಜೆಪಿ ಪ್ರಮುಖ ಅಜೆಂಡಾ ಹಿಂದುತ್ವಾನಾ..? ಅಬಿವೃದ್ದಿನಾ..?ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೇಘರಾಜ್ ಹಿಂದುತ್ವ ಜೀವನ ಕ್ರಮ,ಆದ್ದರಿಂದ ಬಿಜೆಪಿ ರಾಷ್ಟ್ರೀಯತೆ,ದೇಶದ ಏಕತೆ, ಅಖಂಡತೆಗಳ ನಡುವೆ ಭದ್ರತೆ ಜೊತೆಗೆ ಅಭಿವೃದ್ದಿಯ ಅಜೆಂಡಗಲ ಮೂಲಕ ರಾಜ್ಯದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದರು.

ಸಾಗರದಲ್ಲಿ ಬಿಜೆಪಿ ಶಾಸಕ ಹಾಲಪ್ಪನವರು 20 ಸಾವಿರ ಮತಗಳ ಅಂತರದಿಂದ ಜಯಗಳಿಸುತ್ತಾರೆ ಎಂದ ಅವರು ಸಾಗರದಲ್ಲಿ ಅಬಿವೃದ್ಧಿಯ ಮಹಾಪೂರವೇ ಹರಿದಿದೆ. ಕ್ಷೇತ್ರದಲ್ಲಿ 888 ರಸ್ತೆಗಳ ಅಬಿವೃದ್ದಿಯಾಗಿವೆ. ಚತುಷ್ಪಥ ರಸ್ತೆಗಳು ಮತ್ತು ದ್ವಪಥ ರಸ್ತೆಗಳ ಅಬಿವೃದ್ಧಿ ಕಾರ್ಯಗಳು ನಡೆದಿವೆ.ಸಾಗರಕ್ಕೆ ಸೇರುವ ಎಲ್ಲಾ ಸಂಪರ್ಕ ರಸ್ತೆಗಳು ಅಭಿವೃದ್ಧಿಯಗಿವೆ. ಸಾಗರವನ್ನು ಆರೋಗ್ಯ ಸಾಗರವನ್ನಾಗಿ ಆಸ್ಪತ್ರೆಗಳ ಸುಧಾರಣೆ,ವಿದ್ಯಾಸಾಗರದ ಪ್ರಯುಕ್ತ ಕಾಲೇಜುಗಳ ಕಟ್ಟಡಗಳ ಸಹಿತ ಮೂಲಭೂತ ಸೌಲಭ್ಯಗಳ ಸುಧಾರಣೆ,ಪ್ರವಾಸಿ ಸಾಗರವನ್ನಾಗಿಸಲು ಜೋಗ ಸೇರಿದಂತೆ ಸಮಗ್ರ ಅಬಿವೃದ್ಧಿಗೆ ಆರಂಭ ಮಾಡಿರುವ ಕಾರಣ ಅಬಿವೃದ್ಧಿಯೇ ಬಿಜೆಪಿಯನ್ನು ಆಕಷಿಸುತ್ತಿದೆ ಎಂದರು.

ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಎ.ಡಿ.ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆವಹಿಸಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಎಸ್.ವಿ.ಹಿತಕರ ಜೈನ್,ಬಿಜೆಪಿ ಮಾದ್ಯಮ ಪ್ರಮುಖ್ ಹು.ಬಾ.ಅಶೋಕ್ ಉಪಸ್ಥಿತರಿದ್ದು, ಪತ್ರಕರ್ತ ಧರ್ಮರಾಜ್ ಸ್ವಾಗತಿಸಿ,ಪತ್ರಕರ್ತರ ಸಂಘದ ಖಜಾಂಚಿ ರಮೇಶ್ ಎನ್ ವಂದಿಸಿದರು.

Chamber Of Commerce Shivamogga ಹೋಟೆಲ್ ಮತ್ತು ಲಾಡ್ಜ್ ಸೇವೆಯನ್ನ ಉದ್ಯಮವೆಂದು ಪರಿಗಣಿಸಲು ಮನವಿ

0

Chamber Of Commerce Shivamogga ಶಿವಮೊಗ್ಗದಲ್ಲಿ ಹೊಟೇಲ್ ಮತ್ತು ಲಾಡ್ಜ್ ಸೇವೆಯನ್ನು
ಉದ್ಯಮವೆಂದು ಪರಿಗಣಿಸಿ ಪ್ರೋತ್ಸಾಹಿಸುವಂತೆ ಶಿವಮೊಗ್ಗ ಜಿಲ್ಲಾ
ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ
ಸಭೆಯ ಸಂದರ್ಭದಲ್ಲಿ ಕೇಂದ್ರ ಬೃಹತ್ ಕೈಗಾರಿಕಾ ಸಚಿವ
ಮಹೇಂದ್ರನಾಥ ಪಾಂಡೆ ಅವರಿಗೆ ಮನವಿ ಸಲ್ಲಿಸಲಾಯಿತು.

ಹೊಟೇಲ್ ಮತ್ತು ಲಾಡ್ಜ್ ಸೇವೆಯು ಅತಿ ಹೆಚ್ಚಿನ ಉದ್ಯೋಗ
ಅವಕಾಶಗಳನ್ನು ನೀಡುತ್ತಿದ್ದು, ಉದ್ಯೋಗದ ಜತೆಯಲ್ಲಿ
ಉಚಿತ ಊಟ ಹಾಗೂ ವಸತಿ ವ್ಯವಸ್ಥೆಯು ಬಹುತೇಕ
ಹೊಟೇಲ್‌ಗಳಲ್ಲಿ ಲಭ್ಯವಿದೆ. ಸೂಕ್ತ ಕೌಶಲ್ಯ ತರಬೇತಿಯು
ನೀಡಲಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

Chamber Of Commerce Shivamogga ಹೊಟೇಲ್ ಹಾಗೂ ಲಾಡ್ಜ್ ಸೇವೆಯನ್ನು ಉದ್ಯಮ ಎಂದು
ಪರಿಗಣಿಸಬೇಕು. ಉದ್ಯೋಗ ಮಾಡುತ್ತಿರುವವರಿಗೆ ಇಎಸ್‌ಐ ಹಾಗೂ
ಪಿಎಫ್‌ಗೆ ಅಗತ್ಯವಿರುವ ಅನುದಾನವನ್ನು ಕೇಂದ್ರ ಸರ್ಕಾರದಿಂದ
ಒದಗಿಸಬೇಕು. ಇದರಿಂದ ಹೊಟೇಲ್, ಲಾಡ್ಜ್ ಸೇವೆಯನ್ನು ಇನ್ನೂ
ಹೆಚ್ಚಿನ ಉದ್ಯೋಗ ಅವಕಾಶಗಳ ಸೃಷ್ಠಿಯಾಗುತ್ತದೆ ಎಂದು
ಮನವಿ ಮಾಡಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಸಂಘ ಮತ್ತು ಕೈಗಾರಿಕಾ ಸಂಘದ
ಅಧ್ಯಕ್ಷ ಎನ್.ಗೋಪಿನಾಥ್ ಅವರು ಹೊಟೇಲ್, ಲಾಡ್ಜ್
ಸೇವೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ
ಸಿಗಬೇಕಾದ ಪೂರಕ ಸೌಕರ್ಯಗಳ ಬಗ್ಗೆ ಕೇಂದ್ರ ಸಚಿವರಿಗೆ
ಮಾಹಿತಿ ನೀಡಿದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಸಂಘ
ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್,
ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹ ಕಾರ್ಯದರ್ಶಿ
ಜಿ.ವಿಜಯಕುಮಾರ್, ಜೈಮಾತಾ ಗ್ರಾಂಡ್ಯೂರ್ ಮ್ಯಾನೇಜಿಂಗ್
ಡೈರೆಕ್ಟರ್ ಎಂ.ಎಸ್.ಗುರುರಾಜ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು
ಕೈಗಾರಿಕಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.