Assembly Election ಶಿವಮೊಗ್ಗದಲ್ಲಿ ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮ
Assembly Election ಶಿವಮೊಗ್ಗದಲ್ಲಿ ಮತದಾನ ಜಾಗೃತಿಗಾಗಿ ಏ.30ರಂದು ರಾಜ್ಯಾದ್ಯಂತ ‘ನಮ್ಮ ನಡೆ ಮತಗಟ್ಟೆಯ ಕಡೆ’ ಕಾರ್ಯಕ್ರಮದಡಿ ಏಕಕಾಲಕ್ಕೆ ಧ್ವಜಾರೋಹಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 2018ರ ಚುನಾವಣೆಯಲ್ಲಿ ಕಡಿಮೆ ಮತದಾನ ಆಗಿರುವ ಮತಗಟ್ಟೆಗಳಲ್ಲಿ ಏ.30 ರ ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ಆಯೋಜಿಸಲಾಗಿದೆ.
ಬಿಳಿ ಬಟ್ಟೆಯ ಮೇಲೆ ರಾಜ್ಯದ ನಕ್ಷೆ ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ ಎಂಬ ಬರಹ ಹಾಗೂ ಎಲೆಕ್ಷನ್ ಕಮಿಷನ್ ಆಫ್ ಇಂಡಿಯಾ ಹಾಗೂ ಚಿನ್ನೆ ಇರುವ ವಿಶೇಷ ಧ್ವಜದ ಮಾದರಿ ಸಿದ್ಧಪಡಿಸಿ ಸ್ವೀಪ್ ಕಮಿಟಿಗಳಿಗೆ ಕಳಿಸಲಾಗಿದೆ.
Assembly Election ಏ.30 ಬಿಎಲ್‍ಒಗಳು ಧ್ವಜಾರೋಹಣ ನೆರವೇರಿಸಲಿದ್ದು, ಮತಗಟ್ಟೆ, ಗ್ರಾಪಂ ಅಧಿಕಾರಿ, ಸಿಬ್ಬಂದಿ, ಆಶಾ, ಅಂಗನವಾಡಿ, ಕಾರಕರ್ತೆಯರು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಯಾವುದೇ ರಾಜಕೀಯ ಪ್ರೇರಿತ ಅಥವಾ ಸಂಬಂಧಿತ ವ್ಯಕ್ತಿಗಳು ಭಾಗವಹಿಸುವುದಕ್ಕೆ ಅವಕಾಶವಿರುವುದಿಲ್ಲ.
ಆಯೋಗದ ರಾಜ್ಯ, ಜಿಲ್ಲಾ ರಾಯಭಾರಿಗಳಾಗಿರುವ ಸೆಲೆಬ್ರಿಟಿಗಳ ನೆರವಿನೊಂದಿಗೆ ಜಾಥಾ, ರಂಗೋಲಿ, ಬೈಕ್ ಜಾಥಾ ಇತ್ಯಾದಿಗಳ ಮೂಲಕ ಮತದಾರರಲ್ಲಿ ಕಡ್ಡಾಯ ಮತದಾನದ ಬಗ್ಗೆ ಅರಿವು ಮೂಡಿಸಲಾಗುತ್ತಿದ್ದು ಸಖಿ, ಅಂಗವಿಕಲ, ಯುವ ಮತದಾರರು ಹಾಗೂ ಪರಂಪರೆ ಮತಗಟ್ಟೆಗಳನ್ನೂ ಸ್ಥಾಪಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ತಿಳಿಸಿದ್ದಾರೆ.
Assembly Election ಆಯನೂರು ಮಂಜುನಾಥ್ ಬಿಜೆಪಿ ಗೆ ಟಕ್ಕರ್ ಕೊಡುವರೆ?
Assembly Election ರಾಜ್ಯ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕೆ. ಎಸ್. ಈಶ್ವರಪ್ಪ ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ ಮಾಡಿ,ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದಿದ್ದೇನೆ ಎಂದ ಸುದ್ದಿ ಶಿವಮೊಗ್ಗದಲ್ಲಿ ಸಂಚಲನ ಮೂಡಿಸಿತ್ತು.
ಆದರೆ ಅವರ ಮಗನಿಗೆ ಸಹ ಟಿಕೆಟ್ ಕೈತಪ್ಪಿದ್ದು, ಕ್ಷೇತ್ರದ ರಾಜಕೀಯ ಲೆಕ್ಕಾಚಾರ ಬುಡಮೇಲಾಗಿದೆ.
ಕ್ಷೇತ್ರದಲ್ಲಿ 5 ಬಾರಿ ಗೆದ್ದಿದ್ದ ಕೆ. ಎಸ್. ಈಶ್ವರಪ್ಪ ಸ್ಪರ್ಧೆ ಮಾಡುತಿಲ್ಲ. ಮಾಜಿ ಶಾಸಕ ಕೆ. ಬಿ. ಪ್ರಸನ್ನ ಕುಮಾರ್ ಬಿಟ್ಟು ಹೆಚ್. ಸಿ. ಯೋಗೇಶ್ ಎಂಬ ಹೊಸ ಮುಖಕ್ಕೆ ಕಾಂಗ್ರೆಸ್ ಟಿಕೆಟ್ ನೀಡಿದೆ.
Assembly Election ಆಯನೂರು ಮಂಜುನಾಥ್ ಜಿಲ್ಲೆಯ ಅನುಭವಸ್ಥ ರಾಜಕಾರಣಿ. ಆದರೆ ಬಿಜೆಪಿ ಪಕ್ಷದಲ್ಲಿ ಇಲ್ಲ ಎಂಬುದನ್ನು ಗಮನಿಸಬೇಕಿದೆ.
ಶಿವಮೊಗ್ಗ ನಗರ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಹೆಚ್. ಸಿ. ಯೋಗೇಶ್, ಬಿಜೆಪಿಯಿಂದ ಎಸ್. ಎನ್. ಚೆನ್ನಬಸಪ್ಪ, ಜೆಡಿಎಸ್‌ನಿಂದ ಆಯನೂರು ಮಂಜುನಾಥ್ ಅಭ್ಯರ್ಥಿಗಳು. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಆಯನೂರು ಮಂಜುನಾಥ್ ಕೊನೆ ಕ್ಷಣದಲ್ಲಿ ಜೆಡಿಎಸ್ ಸೇರಿ ಕ್ಷೇತ್ರದ ರಾಜಕೀಯ ಚಿತ್ರಣ ಬದಲಿಸಿದ್ದಾರೆ.
Congress Karnataka ಖರ್ಗೆ ಪಶ್ಚಾತ್ತಾಪ ಚಾಪ್ಟರ್ ಕ್ಲೋಸ್ ಎಂದರು ಸಿದ್ಧರಾಮಯ್ಯ
Congress Karnataka ಪ್ರಧಾನಿ ಮೋದಿ ವಿಷ ಸರ್ಪವಿದ್ದಂತೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ರು, ಅಲ್ಲದೇ ಇದಕ್ಕೆ ಅವರು ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಪಶ್ಚಾತ್ತಾಪಕ್ಕಿಂತ ಬೇರೆ ಶಿಕ್ಷೆಯಿಲ್ಲ ಅಲ್ವಾ ?. ನಾನು ಯತ್ನಾಳ್ ಹೇಳಿಕೆಗೆಲ್ಲಾ ಉತ್ತರಕೊಡಲು ಹೋಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
Congress Karnataka ಅಲ್ಲದೇ ಮಲ್ಲಿಕಾರ್ಜುನ ಖರ್ಗೆಯವರ ಈ ಹೇಳಿಕೆಯನ್ನು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸುತ್ತಿದ್ದಾರೆ.
ಖರ್ಗೆ ಈಗಾಗಲೇ ಯಾರಿಗಾದ್ರೂ ನೋವಾಗಿದ್ರೆ, ವಿಷಾಧ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.
Congress Karnataka ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ-ವೈ.ಬಿ.ಚಂದ್ರಕಾಂತ್
Congress Karnataka ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಯ ಅಧ್ಯಕ್ಷರಾಗಿದ್ದ
ಅವಧಿಯಲ್ಲಿ ಕಾರ್ಖಾನೆಯ ಅಭಿವೃದ್ದಿಪಡಿಸುವ ಬದಲಿಗೆ ಬಾಳೆ ತೋಟಕ್ಕೆ ಆನೆ
ನುಗ್ಗಿದಂತೆ ಕಾರ್ಖಾನೆಗೆ ದುರ್ಘಗತಿ ಕಾಣಿಸಿದ ಮೇಲೆಯೆ ಅಧಿಕಾರಕ್ಕೆ ಬಂದ
ಭಾರತೀಯ ಜನತಾ ಪಕ್ಷದ ಅನೈತಿಕ ಸರ್ಕಾರದಲ್ಲಿ ಆರಗ
ಜ್ಞಾನೇಂದ್ರರವರು ಗೃಹ ಸಚಿವರಾಗಿದ್ದರು ಎನ್ನುವುದನ್ನು
ಮರೆಯಬಾರದೆಂದು ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ವಕ್ತಾರರಾದ
ವೈ.ಬಿ.ಚಂದ್ರಕಾಂತ್ ಎದುರೇಟು ನೀಡಿದ್ದಾರೆ.
ಕಾಂಗ್ರೇಸ್ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವ
ಉದ್ದೇಶದಿಂದ ಹುಟ್ಟಿ 130 ವರ್ಷಗಳು ಕಳೆದಿವೆ.
Congress Karnataka ಕಾಂಗ್ರೇಸ್ ಪಕ್ಷ 60
ವರ್ಷಗಳಿಗೂ ಹೆಚ್ಚು ಅವಧಿ ದೇಶದ ರಕ್ಷಣೆ ಮತ್ತು
ಅಭಿವೃದ್ದಿಯನ್ನು ಗಮನದಲ್ಲಿ ಇಟ್ಟುಕೊಂಡು ಧಕ್ಷತೆಯಿಂದ ಅಧಿಕಾರ
ನಡೆಸಿದೆ. ಕಾಂಗ್ರೇಸ್‌ಗೆ ಅನೈತಿಕತೆ ಅಂದರೆ ಏನೆಂದು ಗೊತ್ತಿಲ್ಲ. ಆದರೆ,
ಕಳೆದ 09ವರ್ಷಗಳಿಂದ ಪ್ರಧಾನಿ ಆಗಿರುವ ನರೇಂದ್ರ ಮೋದಿಯವರು
ಕಂಡಕಂಡವರಿಗೆ ಮೂರು ಕಾಸಿಗೆ ಮಾರಾಟ ಮಾಡಿದ ಆಸ್ತಿಗಳೆಲ್ಲವು
ಕಾಂಗ್ರೇಸ್ ಸರ್ಕಾರ ಕಷ್ಷಪಟ್ಟು ಮಾಡಿಟ್ಟಿದ್ದ ಆಸ್ತಿಗಳಾಗಿವೆ.
ಮೋದಿಯವರು
ದೇಶದ ಆಸ್ಥಿಗಳನ್ನು ಮಾರಾಟ ಮಾಡಿ ದೇಶವನ್ನು ದಿವಾಳಿ ಅಂಚಿಗೆ ತಂದ
ಕೀರ್ತಿಗೆ ಪಾತ್ರರಾಗಿದ್ದಾರೆ. ಜ್ಞಾನೇಂದ್ರರವರು ಇಂತಹ ಪಕ್ಷದಲ್ಲಿ
ಇದ್ದುಕೊಂಡು ಕಾಂಗ್ರೇಸ್ ಪಕ್ಷಕ್ಕೆ ಬುದ್ದಿ ಹೇಳುವುದು ಎಷ್ಷು ಸರಿ.
ರಾಜ್ಯದಲ್ಲಿ ಈ ಬಾರಿ ಕಾಂಗ್ರೇಸ್ ಪಕ್ಷ ಆಡಳಿತಕ್ಕೆ ಬಂದರೆ ರಾಜ್ಯದ ಜನರಿಗೆ ಯಾವ
ಸೌಲಭ್ಯಗಳನ್ನು ಕೊಡಬಹುದು ಎನ್ನುವ ಬಗ್ಗೆ ಸರಿಯಾದ ಜ್ಞಾನ
ಇಟ್ಟುಕೊಂಡೆ ಪ್ರಾಮಾಣಿಕವಾದ ಭರವಸೆಗಳನ್ನು ನೀಡಿದೆ.
ದೇಶದ ಜನರ ನಂಬಿಕೆಯನ್ನು ದುರುಪಯೋಗ ಮಾಡಿಕೊಂಡು
ಆಡಳಿತ ನಡೆಸುತ್ತಿರುವ ಮೋದಿಯವರು ಜನಗಳಿಗೆ ಮೂಲಭೂತವಾಗಿ
ದೊರಕಿಸಿಕೊಡಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಡದೇ ಜನರನ್ನು
ತೆರಿಗೆ ರೂಪದಲಿ ಜೀವಂತ ಸುಲಿಯುತ್ತಿದ್ದಾರೆ.
ಪ್ರಕೃತಿ ವಿಕೋಪದಂತಹ
ಸಂದರ್ಭಗಳಲ್ಲಿ ಕೂಡ ಮೋದಿಯವರು ಕರ್ನಾಟಕಕ್ಕೆ ಏಕೆ ಕಾಲಿಡಲಿಲ್ಲ.
ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರು ಕೇಂದ್ರದಿಂದ ಏಕೆ
ಪರಿಹಾರ ಹಣ ತರಿಸಲು ವಿಫಲರಾದರು. ತೀರ್ಥಹಳ್ಳಿ ಕ್ಷೇತ್ರಕ್ಕೆ ಪ್ರಕೃತಿ
ವಿಕೋಪದ ಸಂದರ್ಭದಲ್ಲಿ ಎಷ್ಟು ಜನ ಸಂತ್ರಸ್ಥರಿಗೆ ಹಣ ಬಿಡುಗಡೆ
ಮಾಡಿಸಿದರೆಂದು ಅಂಕಿ ಅಂಶಗಳ ಸಹಿತ ಆರಗ ಜ್ಞಾನೇಂದ್ರರವರು ಹೇಳಲಿ.
ಇದಾವುದನ್ನು ಮಾಡದೆ ಈಗ ಚುನಾವಣೆ ಸಂದರ್ಭದಲ್ಲಿ ಗೆಲ್ಲುವ
ಉದ್ದೇಶದಿಂದ ದೊಂಬರಾಟ ಮಾಡುತ್ತಿದ್ದಾರೆಂದು ವಕ್ತಾರರಾದ
ವೈ.ಬಿ.ಚಂದ್ರಕಾಂತ್ ಆರೋಪಿಸಿದ್ದಾರೆ.
ರಾಜ್ಯದ ವಾರ್ಷಿಕ ಬಜೆಟ್ 3.09 ಕೋಟಿ ಇರುವಾಗ ಕಾಂಗ್ರೇಸ್ ಸರ್ಕಾರ
ಕೈಗೊಳ್ಳಲಿರುವ ಯೋಜನೆಗಳಿಗೆ 02 ಲಕ್ಷ ಕೋಟಿ ಹಣ
ಬೇಕಾಗಬಹುದೆಂದು ಆರಗ ಜ್ಞಾನೇಂದ್ರರವರು ನೀಡಿರುವ ಹೇಳಿಕೆತಲೆಬುಡವಿಲ್ಲದ ತಪ್ಪು ಲೆಕ್ಕಾಚಾರದ ಹೇಳಿಕೆಯಾಗಿದೆ ಎಂದಿದ್ದಾರೆ.
ತೀರ್ಥಹಳ್ಳಿ
ಕ್ಷೇತ್ರದ ಪ್ರಜ್ಞಾವಂತ ಮತದಾರರು ಬಿ.ಜೆ.ಪಿ.ಗೆ ಯಾವುದೆ ಸೊಪ್ಪು
ಹಾಕದೆ, ಪ್ರಾಮಾಣಿಕ ಹಾಗೂ ದಕ್ಷ ರಾಜಕಾರಣಿ ಆಗಿರುವ ಮಾಜಿ ಸಚಿವ ಕಿಮ್ಮನೆ
ರತ್ನಾಕರ್ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ
ಗೆಲ್ಲಿಸುವುದರಲ್ಲಿ ಮತ್ತು ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷವೆ ಆಡಳಿತಕ್ಕೆ
ಬರುವುದರಲ್ಲಿ ಯಾವುದೆ ಅನುಮಾನ ಇಲ್ಲವೆಂದು ಜಿಲ್ಲಾ ಕಾಂಗ್ರೇಸ್
ವಕ್ತಾರರಾದ ವೈ.ಬಿ.ಚಂದ್ರಕಾಂತ್ ಸವಾಲು ಹಾಕಿದ್ದಾರೆ.
Assembly Election ಮತದಾನದ ಪ್ರಮಾಣ ಕಡಿಮೆಯಾಗಲು ವಿದ್ಯಾವಂತರೇ ಪ್ರಮುಖ ಕಾರಣ-ವಾಸುದೇವ್
Assembly Election ಚುನಾವಣೆಯಲ್ಲಿ ಮತದಾನ ಪ್ರಮಾಣ ಕಡಿಮೆ ಆಗುವಲ್ಲಿ ವಿದ್ಯಾವಂತರು ಪ್ರಮುಖ ಕಾರಣ ಆಗಿರುತ್ತಾರೆ. ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಾರೆ. ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ ಆಗಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ವಾಸುದೇವ್ ಹೇಳಿದರು.
ಶಿವಮೊಗ್ಗ ನಗರದಲ್ಲಿ ಚಾಯ್ ಪೇ ಚರ್ಚಾ, ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮತದಾನ ಮಾಡಲು ಯಾವುದೇ ಆಮಿಷಕ್ಕೆ ಒಳಗಾಗಬಾರದು. ಮೌಲ್ಯರಹಿತ ರಾಜಕಾರಣಿಗಳನ್ನು ಆಯ್ಕೆ ಮಾಡಬಾರದು. ಉತ್ತಮ ಪ್ರತಿನಿಧಿಗಳ ಆಯ್ಕೆಗೆ ಹೆಚ್ಚು ಮತದಾನ ಆಗಬೇಕು. ಮತದಾನದ ಹಕ್ಕನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ವೈದ್ಯ ಶ್ರೀಧರ್ ಮಾತನಾಡಿ, ಕಾರ್ಯನಿಮಿತ ಬೆಂಗಳೂರು ಸೇರಿದಂತೆ ವಿವಿಧೆಡೆ ಕೆಲಸ ಮಾಡುತ್ತಿರುವವರನ್ನು ಕರೆಸಬೇಕು. ಮತದಾನದ ಹಕ್ಕು ಚಲಾಯಿಸಬೇಕು. ಜನರಿಂದ ಜನರಿಗಾಗಿ ಪ್ರತಿನಿಧಿಗಳ ಆಯ್ಕೆ ಮಾಡುವುದರಿಂದ ಸದೃಡ ಕರ್ನಾಟಕ ಮತ್ತು ಸಶಕ್ತ ಭಾರತ ನಿರ್ಮಾಣ ಸಾಧ್ಯ ಎಂದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಸಂತ ಹೋಬಳಿದಾರ್ ಮಾತನಾಡಿ, ಎಲ್ಲರೂ ಮತದಾನ ಮಾಡಿ, ಉತ್ತಮರನ್ನು ಆಯ್ಕೆ ಮಾಡೋಣ. ಮತದಾನ ರಾಜ್ಯದ ವಿಕಾಸಕ್ಕೆ ವರದಾನ. ಮತದಾನ ಪ್ರಬಲ ಅಸ್ತ್ರ ಎಂದು ಹೇಳಿದರು.
Assembly Election ವಿಜಯ್‌ಕುಮಾರ್ ಜೈನ್ ಮಾತನಾಡಿ, ಮತದಾನವೇ ಪ್ರಜಾಪ್ರಭುತ್ವದ ಆಧಾರ ಎಂದರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಮಾತನಾಡಿ, ಮತದಾನ ನಮ್ಮ ಹಕ್ಕು, ಅದನ್ನು ಕಡ್ಡಾಯವಾಗಿ ಚಲಾಯಿಸೋಣ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸೋಣ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್, ಎಸ್.ಎಸ್.ವಾಗೇಶ್, ಶಿವಾನಂದರಾವ್ ಸಾನು, ದಿಲೀಪ್ ನಾಡಿಗ್, ಎ.ಮಂಜುನಾಥ್, ನಟರಾಜ್, ಚಂದ್ರಹಾಸ ರಾಯ್ಕರ್, ಮಂಜುನಾಥ್ ಕದಂ ಮುಂತಾದವರು ಭಾಗವಹಿಸಿದ್ದರು.
Rotary International Shivamogga ಸಮಯದ ಸದ್ವಿನಿಯೋಗ ಯಶಸ್ಸಿಗೆ ಮೆಟ್ಟಿಲು-ವಿಲಿಯಂ ಡಿಸೋಜಾ
Rotary International Shivamogga ಪ್ರತಿಯೊಬ್ಬರ ಜೀವನದಲ್ಲಿ ಸಮಯ ಬಹಳ ಮುಖ್ಯ. ಬದುಕಿನಲ್ಲಿ ಮಹತ್ತರ ಪಾತ್ರ ವಹಿಸುವ ಸಮಯದ ಸದ್ವಿನಿಯೋಗ ಮಾಡಿಕೊಂಡರೆ ಯಶಸ್ಸಿನ ಮೆಟ್ಟಿಲು ಹತ್ತಲು ಸಾಧ್ಯ ಎಂದು ರಾಷ್ಟ್ರೀಯ ತರಬೇತುದಾರ ವಿಲಿಯಂ ಡಿಸೋಜಾ ಹೇಳಿದರು.
ಶಿವಮೊಗ್ಗ ನಗರದಲ್ಲಿ ರೋಟರಿ ಸಂಸ್ಥೆಯ ಸದಸ್ಯರ ಆರ್‌ಎಂಬಿ ವ್ಯವಹಾರಿಕ ಸಂಸ್ಥೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ವ್ಯವಹಾರದಲ್ಲಿ ಎಲ್ಲ ಉದ್ಯಮಿಗಳು ಸಮಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಇದರಿಂದ ಉತ್ತಮ ಪ್ರತಿಫಲ ಸಿಗುತ್ತದೆ. ಯಾವುದೇ ಉದ್ಯಮದಾರರಿಗೆ ಮೊದಲು ಗುರಿ, ಛಲ ಪ್ರಾಮಾಣಿಕತೆ, ಮೌಲ್ಯಗಳು ಹಾಗೂ ನೈತಿಕತೆ ಬಹಳ ಮುಖ್ಯ ಆಗಿರುತ್ತವೆ. ಇದೆಲ್ಲವನ್ನು ರೂಡಿಸಿಕೊಂಡರೆ ವ್ಯವಹಾರದಲ್ಲಿ ಅಭಿವೃದ್ಧಿ ನಿಶ್ಚಿತ ಎಂದು ತಿಳಿಸಿದರು.
ವ್ಯವಹಾರದಲ್ಲಿ ಗ್ರಾಹಕರೊಂದಿಗೆ, ಸಿಬ್ಬಂದಿಯೊಂದಿಗೆ ನಮ್ರತೆ, ವಿನಯತೆ ಹಾಗೂ ಸರಳತೆ ಸೌಜನ್ಯದೊಂದಿಗೆ ನಾವುಗಳು ನಡೆದುಕೊಂಡಾಗ ಯಶಸ್ಸು ಕಟ್ಟಿಟ್ಟ ಬುತ್ತಿ. ಯಶಸ್ವಿ ಉದ್ಯಮದಾರರು ಯಾವಾಗಲೂ ಕೆಲವು ಸೂತ್ರಗಳನ್ನು ಪಾಲಿಸಬೇಕಾಗುತ್ತದೆ. ಆಧ್ಯಾತ್ಮಿಕತೆ, ಪ್ರಸನ್ನತೆ, ತನ್ಮಯತೆ ಹಾಗೂ ನಾವು ಬೆಳೆಯುವುದರ ಜೊತೆಗೆ ಇತರನ್ನು ಬೆಳೆಸಬೇಕು ಎಂದರು.
Rotary International Shivamogga ಜವಾಬ್ದಾರಿ, ಹೊಣೆಗಾರಿಕೆ, ಪ್ರಾಮಾಣಿಕತೆ, ನಂಬಿಕೆ ಹಾಗೂ ಸಮಗ್ರತೆ ಇವೆಲ್ಲವೂ ರೂಡಿಸಿಕೊಂಡಾಗ ನಾವುಗಳು ವ್ಯವಹಾರದಲ್ಲಿ ಉನ್ನತ ಸ್ಥಾನವನ್ನು ತಲುಪಿಸುವುದು ಸುಲಭ. ನಾವು ಯಾವುದೇ ಕಾರ್ಯ ಮಾಡಿದ್ದಲ್ಲಿ ಪ್ರದರ್ಶನವಾಗಬಾರದು, ಅದು ನಿದರ್ಶನವಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಆರ್‌ಎಂಬಿ ಸಂಸ್ಥೆಯ ಅಧ್ಯಕ್ಷ ವಸಂತ್ ಹೋಬಳಿದಾರ್ ಮಾತನಾಡಿ, ಯಾವುದೇ ವ್ಯವಹಾರದಲ್ಲಿ ಪ್ರಾಮಾಣಿಕತೆ ಹಾಗೂ ಸರಳತೆ ರೂಢಿಸಿಕೊಳ್ಳಬೇಕು. ಉತ್ತಮ ವ್ಯವಹಾರಿಕ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಆರ್ ಎಂ ಬಿ ಶಿವಮೊಗ್ಗ ಸಂಸ್ಥೆಯ ಕಾರ್ಯದರ್ಶಿ ಮೋಹನ್, ಖಜಾಂಚಿ ಆನಂದ್, ಮೆಂಬರ್‌ಶಿಪ್ ಡೆವಲಪ್‌ಮೆಂಟ್ ಚೇರ್ಮನ್ ವಿಜಯಕುಮಾರ್, ಮಂಜುನಾಥ ಕದಂ, ಕುಮಾರ್ ಎಸ್ ಕೆ, ರಾಕೇಶ್ ಗೌಡ ಹಾಗೂ ಎಲ್ಲ ಆರ್ ಎಂ ಬಿ ಸದಸ್ಯರು ಉಪಸ್ಥಿತರಿದ್ದರು.
youth Hostel Association ಚಾರಣದಿಂದ ಮಕ್ಕಳಲ್ಲಿ ಆತ್ಮ ವಿಶ್ವಾಸವೃದ್ಧಿ-ಮನು ಪವಾರ್
youth Hostel Association ಚಾರಣದಲ್ಲಿ ಮಕ್ಕಳು ಪಾಲ್ಗೊಳ್ಳುವುದರಿಂದ ಆತ್ಮವಿಶ್ವಾಸ ವೃದ್ಧಿಯಾಗುವ ಜತೆಯಲ್ಲಿ ಜವಾಬ್ದಾರಿ ಹೆಚ್ಚಿಸುತ್ತದೆ. ಇದರಿಂದ ಧೈರ್ಯ ಮನೋಭಾವ ಬೆಳೆಯುತ್ತದೆ. ಉತ್ತಮ ಜೀವನ ನಡೆಸಲು ಸಹಕಾರಿ ಎಂದು ಯೂತ್ ಹಾಸ್ಟೆಲ್ಸ್ ಮಾಜಿ ಚೇರ‍್ಮನ್ ಮನು ಪಾವರ್ ಹೇಳಿದರು.
ಶಿವಮೊಗ್ಗದಿಂದ ಹಿಮಾಲಯಕ್ಕೆ ಚಾರಣ ಹೊರಟ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಮಕ್ಕಳು ಚಾರಣದಲ್ಲಿ ಪ್ರತಿಯೊಂದು ಉತ್ತಮ ಅಂಶಗಳನ್ನು ಕಲಿಯಬೇಕು. ನೋಡುವ, ಕೇಳುವ ವಿವಿಧ ವಿಷಯಗಳಿಂದ ಜ್ಞಾನ ಪಡೆಯಬೇಕು ಎಂದು ತಿಳಿಸಿದರು.
ವೈಎಚ್‌ಎಐ ರಾಜ್ಯ ಉಪಾಧ್ಯಕ್ಷ ಜಿ.ವಿಜಯ್‌ಕುಮಾರ್ ಮಾತನಾಡಿ, ದಿನ ನಿತ್ಯದ ಸುಭದ್ರ ಜೀವನದಿಂದ ಹೊರ ಬಂದು, ಸಾಮಾನ್ಯರಂತೆ ಜೀವನ ನಡೆಸುವುದನ್ನು ಮಕ್ಕಳಿಗೆ ಕಲಿಸುವುದರಿಂದ ಅವರ ಭವಿಷ್ಯ ಉಜ್ವಲ ವಾಗುತ್ತದೆ ಎಂದು ಹೇಳಿದರು.
youth Hostel Association ತರುಣೋದಯ ಘಟಕದ ಚೇರ‍್ಮನ್ ವಾಗೇಶ್ ಮಾತನಾಡಿ, ಜೀವನದಲ್ಲಿ ತಮ್ಮ ಕೆಲಸವನ್ನು ತಾವೇ ಹೇಗೆ ಮಾಡಿ ಕೊಳ್ಳಬೇಕೆಂದು ಚಾರಣ ಕಲಿಸುತ್ತದೆ. ಜೊತೆಗೆ ಪ್ರಕೃತಿ ವಿಸ್ಮಯ, ದೇಶದ ನಾನಾ ರಾಜ್ಯಗಳ ಜನ ಜೀವನ, ಸಂಸ್ಕೃತಿ ಪರಿಚಯವನ್ನು ಹಾಗೂ ಪ್ರಕೃತಿ ಅಧ್ಯಯನವನ್ನು ಮಕ್ಕಳು ಕಲಿಯುವುದು ಅವಶ್ಯಕ ಎಂದು ತಿಳಿಸಿದರು.
ಹರೀಶ್ ಪಂಡಿತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ಚಾರಣಕ್ಕೆ ಕಳುಹಿಸಲು ಬಹಳ ತೊಂದರೆ ತೆಗೆದುಕೊಳ್ಳಬೇಕು. ದೊರೈ ಚಿನ್ನಪ್ಪ ಹಾಗೂ ಅಶ್ವಿನಿ ಅವರು ಜವಾಬ್ದಾರಿ ತೆಗೆದುಕೊಂಡು ನಮಗೆ ಬಹಳ ಸಹಕಾರಿಯಾಗಿದ್ದಾರೆ.
ಹಾಗೆಯೆ ಕಾರ್ಯದರ್ಶಿ ಪ್ರಶಾಂತ್, ನಿರ್ದೇಶಕರಾದ ರಾಘವೇಂದ್ರ, ದೀಪ, ಶೃತಿ, ದಯಾನಂದ್, ಭದ್ರಿನಾಥ್ ಉಳಿದ ಸದಸ್ಯರಿಂದಲೂ ಉತ್ತಮ ಸಹಕಾರ ಸಿಗುತ್ತಿದೆ ಎಂದರು.
kuvempu University ಕುವೆಂಪು ವಿವಿ ಎನ್ ಎಸ್ಎಸ್ ಸಮಾಜಮುಖಿ ಯಾಗಿ ಚಟುವಟಿಕೆಯಲ್ಲಿದೆ- ಪ್ರೊ.ವೀರಭದ್ರಪ್ಪ
kuvempu University 28-04-2023ರಂದು ಸಹ್ಯಾದ್ರಿ ಕಾಲೇಜಿನ ರಾಧಾಕೃಷ್ಣ ಸಬಾಂಗಣ ಶಿವಮೊಗ್ಗ ಇಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ರಾಸೇಯೋ ಅಧಿಕಾರಿಗಳ ಮತ್ತು ಪ್ರಾಂಶುಪಾಲರ ಸಭೆಯನ್ನು ಏರ್ಪಡಿಸಲಾಗಿತ್ತು. ಮಾನ್ಯ ಕುಲಪತಿಗಳಾದ ಪ್ರೊ.ಬಿ.ಪಿ.ವೀರಭದ್ರಪ್ಪ ಇವರು ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ ಎನ್.ಎಸ್.ಎಸ್. ಕಾರ್ಯಕ್ರಮಗಳು ಸಮಾಜಮುಖಿಯಾಗಿದ್ದು, ನಮ್ಮ ಕುವೆಂಪು ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಕಾರ್ಯಕ್ರಮಗಳು ಅತ್ಯುತ್ತಮವಾಗಿ ಮೂಡಿಬರುತ್ತಿದೆ. ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಕುವೆಂಪು ವಿಶ್ವವಿದ್ಯಾಲಯಕ್ಕೆ ಮಾನ್ಯತೆ ದೊರೆಯುವಲ್ಲಿ ಎನ್.ಎಸ್.ಎಸ್. ಪ್ರಮುಖ ಪಾತ್ರ ವಹಿಸಿದೆ ಇದಕ್ಕೆ ಡಾ ನಾಗರಾಜ್ ಪರಿಸರ ಇವರ ಶ್ರಮ ಮುಖ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು ಮತ್ತು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರುಗಳಾದ ಡಾ. ಪದ್ಮೇಗೌಡ ಎ ಟಿ, ಡಿ.ವಿ.ಎಸ್. ಸಂಜೆ ಕಾಲೇಜು ಮತ್ತು ಡಾ ಸಂಧ್ಯಾಕಾವೇರಿ, ಕಟೀಲ್ ಆಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ನೂತನ ವಿಶೇಷ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸ್ವಯಂ ಸೇವಕರಲ್ಲಿ ಸಾಮಾಜಿಕ ಭದ್ದತೆ, ಜೀವನ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಹಾಗು ರಾಸೇಯೋ ಪ್ರಾಮುಖ್ಯತೆಯನ್ನು ತಿಳಿಸಿದರು.
kuvempu University ಡಾ. ರಾಜೇಶ್ವರಿ ಎನ್ ಪ್ರಾಂಶುಪಾಲರು, ಸಹ್ಯಾದ್ರಿ ವಿಜ್ನಾನ ಕಾಲೇಜು, ಶಿವಮೊಗ್ಗ ಇವರು ಅಧ್ಯಕ್ಷತೆ ವಹಿಸಿ ನಮ್ಮ ಕಾಲೇಜಿನ ವರದಿಗಳು ನಾವು ಮಾಡಿರುವ ಕೆಲಸಗಳನ್ನು ತಿಳಿಸುತ್ತವೆ ಎಂದು ತಿಳಿಸಿದರು. ಎಲ್ಲರನ್ನೂ ಸ್ವಾಗತಿಸುತ್ತಾ ಪ್ರಾಸ್ತಾವಿಕ ನುಡಿಗಳನ್ನು ಆಡಿದ ಡಾ. ನಾಗರಾಜ ಪರಿಸರ, ಕಾರ್ಯಕ್ರಮ ಸಂಯೋಜನಾಧಿಕಾರಿಗಳು, ಇವರು ಶಿವಮೊಗ್ಗ ಮತ್ತು ಚಿಕ್ಕಮಳೂರು ಎರಡೂ ಜಿಲ್ಲೆಗಳ ಎನ್.ಎಸ್.ಎಸ್. ಅಧಿಕಾರಿಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇನ್ನೂ ಹೆಚ್ಚಿನ ರೀತಿಯಲ್ಲಿ ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಎನ್.ಎಸ್.ಎಸ್. ಸ್ವಯಂ ಸೇವಕರು ಪರಿಸರ ಸಂರಕ್ಷಣೆ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವ ಕಾರ್ಯ ರಾಸೇಯೋ ಅಧಿಕಾರಿಗಳು ಮಾಡಬೇಕು ಎಂದು ತಿಳಿಸಿದರು..
ರಾಸೇಯೋ ಅಧಿಕಾರಿಗಳಾದ ಡಾ ರೇಷ್ಮಾ ನಿರೂಪಿಸಿ, ಡಾ ಶುಭ ಮರವಂತೆ ಪ್ರಾರ್ಥಿಸಿ, ಡಾ. ಶಿವಮೂರ್ತಿ ಸರ್ವರಿಗೂ ವಂದಿಸಿದರು.
