Department of Horticulture ಶಿವಮೊಗ್ಗ ಜಿಲ್ಲಾ ತೋಟಗಾರಿಕೆ ಇಲಾಖಾ ವತಿಯಿಂದ 2024-25ನೇ ಸಾಲಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವೈಯಕ್ತಿಕ ಕೃಷಿ ಹೊಂಡ ನಿರ್ಮಾಣ, ಸಮುದಾಯ ಕೃಷಿಹೊಂಡ, ಪ್ಯಾಕ್ ಹೌಸ್ ನಿರ್ಮಾಣ, ಹಸಿರುಮನೆ ನೆರಳುಪರದೆ ನಿರ್ಮಾಣ, ಈರುಳ್ಳಿ ಶೇಖರಣಾ ಘಟಕ ನಿರ್ಮಾಣಕ್ಕಾಗಿ ಸೌಲಭ್ಯವನ್ನು ಪಡೆಯಲು ಅರ್ಹ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ರೈತರು ನಿಗಧಿತ ನಮೂನೆ ಅರ್ಜಿಯನ್ನು ಆಯಾ ತಾಲೂಕು ತೋಟಗಾರಿಕೆ ಇಲಾಖೆಯಲ್ಲಿ ಫೆ. 23 ರೊಳಗಾಗಿ ಹೆಸರನ್ನು ನೊಂದಾಯಿಸಿಕೊಳ್ಳುವಂತೆ ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Department of Horticulture ಹೆಚ್ಚಿನ ಮಾಹಿತಿಗಾಗಿ ಅಯಾ ತಾಲೂಕು ತೋಟಗಾರಿಕೆ ಕಚೇರಿಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕಿಸಬಹುದು.
Human rights ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿಂದ ಅವುಗಳನ್ನು ಯಾರೂ ಕಸಿಯುವಂತೆಯೂ ಇಲ್ಲ. ಇತರ ವ್ಯಕ್ತಿ, ಸಮೂಹ, ಸಂಸ್ಥೆ ಅಥವಾ ಸರಕಾರಗಳಿಂದ ವ್ಯಕ್ತಿಗಳ ಹಕ್ಕುಗಳ ಮೇಲೆ ಆಕ್ರಮಣವಾಗದಂತೆ ರಕ್ಷಿಸಬೇಕಾಗುತ್ತದೆ. ಆ ಕಾರಣಕ್ಕಾಗಿ ಭಾರತ ಸಂವಿಧಾನದಲ್ಲಿ, ‘ಭಾರತದ ಜನತೆಯಾದ ನಾವು…’ ನಮಗೆ ನಾವೇ ಕೆಲವು ಮೂಲಭೂತ ಹಕ್ಕುಗಳನ್ನು ಸುನಿಶ್ಚಿತಗೊಳಿಸಿಕೊಂಡಿದ್ದೇವೆ. ಸಂವಿಧಾನದ ಮೂರನೇ ಭಾಗದಲ್ಲಿ ಅನುಚ್ಛೇದ 12ರಿಂದ 35ರ ವರೆಗೆ ಭಾರತದ ಎಲ್ಲ ನಾಗರಿಕರಿಗೆ ಆರು ಬಗೆಯ ಮೂಲಭೂತ ಹಕ್ಕುಗಳ ರಕ್ಷಣೆಯನ್ನು ನೀಡಲಾಗಿದೆ. ಇಡೀ ಸಂವಿಧಾನವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿದಾಗ ಇಡೀ ದೇಶದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಗಳು, ಮತ್ತು ಅವುಗಳ ಮೂಲಕ ಸೃಷ್ಟಿಯಾಗುವ ಎಲ್ಲಾ ಸಂಪತ್ತು, ಸೌಕರ್ಯ, ಸೇವೆ ಇತ್ಯಾದಿಗಳು ಅಂತಿಮವಾಗಿ ಒಬ್ಬೊಬ್ಬ ನಾಗರಿಕರ ಅಭ್ಯುದಯಕ್ಕಾಗಿ ದುಡಿಯುತ್ತವೆ. ಅದಕ್ಕೇ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್, ‘ಸಂವಿಧಾನದ ಮೂಲ ಘಟಕ ಒಬ್ಬ ವ್ಯಕ್ತಿ ಎಂಬುದು ಮನವರಿಕೆಯಾದಾಗ ನನಗೆ ಸಂತೋಷವಾಗುತ್ತದೆ’ ಎಂದಿದ್ದು. ಅದಕ್ಕೆ ಸಂವಾದಿಯೆನ್ನುವಂತೆ ಮಹಾತ್ವ ಗಾಂಧಿಯವರು, “ಹಕ್ಕುಗಳ ನಿಜವಾದ ಮೂಲ, ಕರ್ತವ್ಯ. ನಾವೆಲ್ಲರೂ ನಮ್ಮ ಕರ್ತವ್ಯಗಳನ್ನು ನಿರ್ವಹಿಸಿದರೆ, ಹಕ್ಕುಗಳನ್ನು ಪಡೆಯುವುದು ಕಷ್ಟವಾಗುವುದಿಲ್ಲ.” ಎಂದರು.
ಕೇವಲ ಹಕ್ಕುಗಳನ್ನು ಬೇಡುವವರ ಕುರಿತು ಹೀಗೆ ಹೇಳಿದ ಅವರು ನಾವು ಕರ್ತವ್ಯಗಳನ್ನು ಪಾಲಿಸಿದೇ ಬರೀ ಹಕ್ಕುಗಳ ಬೆನ್ನು ಹತ್ತಿ ಓಡಿದರೆ ಅವು ನಮ್ಮಿಂದ ಇನ್ನಷ್ಟು ದೂರ ಹೋಗುತ್ತವೆ ಎಂದರು. ನಮ್ಮ ಸಂಸ್ಕೃತಿಯಲ್ಲಿ ಕರ್ತವ್ಯವೇ ಧರ್ಮ ಎನ್ನುತ್ತಾರೆ. ಹಕ್ಕುಗಳನ್ನು ಮೂಲಭೂತ ಎಂದು ಭಾವಿಸಲಾದ ಸಮಾಜದಲ್ಲಿ ವಾಸ್ತವವಾಗಿ ಕರ್ತವ್ಯಗಳು ಆ ವೈಯಕ್ತಿಕ ಹಕ್ಕುಗಳನ್ನು ಕಾಪಾಡುವ ಮತ್ತು ಎತ್ತಿಹಿಡಿಯುವ ಪಾತ್ರವನ್ನು ವಹಿಸುತ್ತವೆ. ಹೀಗಾಗಿ, ಕರ್ತವ್ಯವು ಹಕ್ಕಿನ ಅವಿಭಾಜ್ಯ ಅಂಗ. ಎಲ್ಲರೂ ಕರ್ತವ್ಯಗಳನ್ನು ಪಾಲಿಸಿದರೆ ಎಲ್ಲರ ಹಕ್ಕುಗಳು ತಾನಾಗಿಯೇ ರಕ್ಷಿಸಲ್ಪಡುತ್ತವೆ. ಮೂಲಭೂತ ಹಕ್ಕುಗಳು ವೈಯಕ್ತಿಕ ಘನತೆ ಮತ್ತು ಪ್ರಗತಿಯನ್ನು ಉತ್ತೇಜಿಸಿದರೆ ಮೂಲಭೂತ ಕರ್ತವ್ಯಗಳು ಪರಿಣಾಮತಃ ಸಾಮಾಜಿಕ ಐಕ್ಯ, ದೇಶಪ್ರೇಮ ಮತ್ತು ರಾಷ್ಟ್ರೀಯ ಅಖಂಡತೆಯನ್ನು ಸುನಿಶ್ಚಿತಗೊಳಿಸುತ್ತವೆ. ಭಾರತ ಸಂವಿಧಾನದ ಮೂರನೇ ಭಾಗದಲ್ಲಿ ನಮ್ಮ ಮೂಲಭೂತ ಹಕ್ಕುಗಳ ವಿವರಣೆ ಇದ್ದರೆ, ನಾಲ್ಕನೆಯ ಭಾಗದಲ್ಲಿ ನಮ್ಮ ಮೂಲಭೂತ ಕರ್ತವ್ಯಗಳ ಪಟ್ಟಿಯಿದೆ. ವಾಸ್ತವವಾಗಿ ಮೂರನೇ ಭಾಗದಲ್ಲಿ ಪ್ರಮುಖವಾಗಿ ಇರುವುದು ರಾಜ್ಯನೀತಿಯ ನಿರ್ದೇಶಕ ತತ್ತ್ವಗಳು. ಅದರ ನಂತರ ಸಂವಿಧಾನದ ಭಾಗ 4 ಎ, ಅನುಚ್ಛೇದ 51 ಎ-ಭಾಗದಲ್ಲಿ, ಎ-ಯಿಂದ ಕೆ ವರೆಗೆ 11 ಮೂಲಭೂತ ಕರ್ತವ್ಯಗಳನ್ನು ನಮಗೆ ನಾವು ವಿಧಿಸಿಕೊಂಡಿದ್ದೇವೆ. 51 ಎ. ಮೂಲಭೂತ ಕರ್ತವ್ಯಗಳು:
(Human rights ಎ) ಸಂವಿಧಾನಕ್ಕೆ ಬದ್ಧವಾಗಿರುವುದು ಹಾಗೂ ಅದರ ಆದರ್ಶಗಳನ್ನು ಮತ್ತು ಸಂಸ್ಥೆಗಳನ್ನು, ರಾಷ್ಟ್ರಧ್ವಜವನ್ನು ಹಾಗೂ ರಾಷ್ಟ್ರಗೀತೆಯನ್ನು ಗೌರವಿಸುವುದು; (ಬಿ) ನಮ್ಮ ರಾಷ್ಟ್ರೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸ್ಫೂರ್ತಿದಾಯಕವಾಗಿದ್ದ ಉದಾತ್ತ ಆದರ್ಶಗಳನ್ನು ಗೌರವಿಸುವುದು ಮತ್ತು ಅನುಸರಿಸುವುದು; (ಸಿ) ಭಾರತದ ಸಾರ್ವಭೌಮತ್ವವನ್ನು, ಐಕ್ಯತೆ ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುವುದು ಹಾಗೂ ಸಂರಕ್ಷಿಸುವುದು; (ಡಿ) ದೇಶವನ್ನು ರಕ್ಷಿಸುವುದು ಮತ್ತು ಕರೆಬಂದಾಗ ರಾಷ್ಟ್ರಕ್ಕೆ ಸೇವೆ ಸಲ್ಲಿಸುವುದು; (ಇ) ಧಾರ್ಮಿಕ, ಭಾμÁ ಮತ್ತು ಪ್ರಾದೇಶಿಕ ಅಥವಾ ಜಾತಿ ಪಂಗಡಗಳ ಭೇದಭಾವಗಳನ್ನು ಮೀರಿ ಭಾರತದ ಎಲ್ಲಾ ಜನರಲ್ಲಿ ಸಾಮರಸ್ಯವನ್ನು ಮತ್ತು ಸಮಾನ ಭ್ರಾತøತ್ವದ ಭಾವನೆಯನ್ನು ಬೆಳೆಸುವುದು ಮತ್ತು ಸ್ತ್ರೀಯರ ಗೌರವಕ್ಕೆ ಕುಂದುಂಟುಮಾಡುವ ಆಚರಣೆಗಳನ್ನು ಬಿಟ್ಟುಬಿಡುವುದು; (ಎಫ್) ನಮ್ಮ ಸಮ್ಮಿಶ್ರ ಸಂಸ್ಕøತಿಯ ಭವ್ಯಪರಂಪರೆಯನ್ನು ಗೌರವಿಸುವುದು ಹಾಗೂ ಕಾಪಾಡುವುದು; (ಜಿ) ಅರಣ್ಯಗಳು, ಸರೋವರಗಳು, ನದಿಗಳು ಮತ್ತು ವನ್ಯಜೀವಿಗಳು ಸೇರಿದಂತೆ ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವುದು ಹಾಗೂ ಅಭಿವøದ್ಧಿಗೊಳಿಸುವುದು ಮತ್ತು ಪ್ರಾಣಿಗಳಿಗೆ ಅನುಕಂಪ ತೋರಿಸುವುದು; (ಹೆಚ್) ವೈಜ್ಞಾನಿಕ ಮನೋವೃತ್ತಿ, ಮಾನವೀಯತೆ, ಜಿe್ಞÁಸೆ ಮತ್ತು ಸುಧಾರಣೆಯ ಮನೋಭಾವವನ್ನು ಬೆಳೆಸುವುದು; (ಐ) ಸಾರ್ವಜನಿಕ ಸ್ವತ್ತನ್ನು ರಕ್ಷಿಸುವುದು ಮತ್ತು ಹಿಂಸೆಯನ್ನು ತ್ಯಜಿಸುವುದು; (ಜೆ) ರಾಷ್ಟ್ರವು ನಿರಂತರವಾಗಿ ಸಾಧನೆಯ ಮತ್ತು ಸಿದ್ಧಿಯ ಉನ್ನತ ಮಟ್ಟಗಳನ್ನು ತಲುಪಲು ವೈಯಕ್ತಿಕ ಹಾಗೂ ಸಾಮೂಹಿಕ ಚಟುವಟಿಕೆಯ ಎಲ್ಲಾ ಕಾರ್ಯಕ್ಷೇತ್ರಗಳಲ್ಲಿ ಉನ್ನತಿಗಾಗಿ ಶ್ರಮಿಸುವುದು. (ಕೆ) ತಂದೆ- ತಾಯಿ ಅಥವಾ ಪೋಷಕರು, ಆರರಿಂದ ಹದಿನಾಲ್ಕು ವಯಸ್ಸಿನ ತಮ್ಮ ಮಕ್ಕಳಿಗೆ ಶಿಕ್ಷಣ ಪಡೆಯಲು ಅವಕಾಶಗಳನ್ನು ಒದಗಿಸುವುದು/. ಇವುಗಳಲ್ಲಿ ನನ್ನ ಮಟ್ಟಿಗೆ ಅನುಚ್ಛೇದ 51 ಎ (ಎಚ್)ನಲ್ಲಿರುವ, ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸುವುದು ಎಂಬುದು ಹೆಚ್ಚು ಮಹತ್ವದ ಕರ್ತವ್ಯವಾಗಿ ತೋರುತ್ತದೆ. ಏಕೆಂದರೆ ಜನತಂತ್ರದ ಭದ್ರ ಬುನಾದಿಯೇ ಪ್ರಜ್ಞಾವಂತ, ಸ್ವತಂತ್ರ ಮನೋಭಾವದ ನಾಗರಿಕರು. ಈ ಪ್ರಶ್ನೆ ಕೇಳುವ, ಗಟ್ಟಿ ಪುರಾವೆಗಳಿರುವುದನ್ನಷ್ಟನ್ನೇ ಒಪ್ಪುವ, ಮತ ಧರ್ಮ, ಅಲೌಕಿಕ ನಂಬಿಕೆ, ಅಂಧಶ್ರದ್ಧೆಗಳನ್ನು ದೇಶದ ರಾಜಕೀಯ, ಆರ್ಥಿಕ ಚೌಕಟ್ಟಿನಲ್ಲಿ ಅಡ್ಡಿಬಾರದಂತೆ ಎಚ್ಚರಿಕೆ ವಹಿಸುವ ತಯಾರಿ ವೈಜ್ಞಾನಿಕ ಮನೋವೃತ್ತಿ ಉಳ್ಳವರಿಗೆ ಮಾತ್ರ ಇರುತ್ತದೆ. ವೈಜ್ಞಾನಿಕ ಮನೋವೃತ್ತಿ ಉಳ್ಳವರಿಗೆ ಅದರ ಮುಂದಿನ ಭಾಗವಾದ. ಮಾನವೀಯತೆ, ಜಿe್ಞÁಸೆ ಮತ್ತು ಸುಧಾರಣೆಯ ಮನೋಭಾವವನ್ನು ಸಹಜವಾಗಿಯೇ ಮೈಗೂಡಿರುತ್ತವೆ. ಉಳಿದ ಹತ್ತು ಕತ್ರ್ಯವ್ಯಗಳ ಪಾಲನೆಯೂ ಅವರಿಗೆ ವಿಶೇಷವಾಗಿ ತೋರುವುದಿಲ್ಲ. ಆದ್ದರಿಂದ ಜವಾಬ್ದಾರಿಯುತವಾದ ನಾಗರಿಕರಾಗಲು ಸ್ವತಃ ನಾವು ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸಿಕೊಳ್ಳಬೇಕು, ಮತ್ತು ಇತರರಲ್ಲಿಯೂ ಅದನ್ನು ಪ್ರೇರೇಪಿಸುವುದಕ್ಕೆ ಶ್ರಮಿಸಬೇಕು.
ಇನ್ನು ಇಂತಹ ಸಂವಿಧಾನದ ಆಶಯಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದ್ದು ಅವರಿಗೆ ನನ್ನ ಅಭಿನಂದನೆಗಳು
81/37-3, 12ನೇ ಡಿ ಮೇನ್ ಶಿವನಗರ, ಬೆಂಗಳೂರು-560 010 ಮೊ:9845299621 ಇಮೇಲ್: pasha1950@gmail.com
Sant Sevalal Jayanti ಶಿವಮೊಗ್ಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಬಂಜಾರ ಸಂಘ ಶಿವಮೊಗ್ಗ ಇವರ ಸಂಯಕ್ತಾಶ್ರಯದಲ್ಲಿ ಫೆ.15 ರ ಬೆಳಗ್ಗೆ 11 ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಸಂತ ಶ್ರೀ ಸೇವಾಲಾಲ್ ಜಯಂತಿಯನ್ನು ಏರ್ಪಡಿಸಲಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧುಬಂಗಾರಪ್ಪ ಇವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಶಾಸಕರಾದ ಎಸ್.ಎನ್. ಚನ್ನಬಸಪ್ಪರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕoತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ತಂಗಡಗಿ ಶಿವರಾಜ್ ಸಂಗಪ್ಪ ಮತ್ತು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಹಾಗೂ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಿ. ಸುಧಾಕರ್ ಇವರುಗಳು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರಲಿದ್ದಾರೆ.
Sant Sevalal Jayanti ಕಾರ್ಯಕ್ರಮದಲ್ಲಿ ಸಂಸದರು, ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ಪಾಲಿಕೆ ಮಹಾಪೌರರು, ಜನಪ್ರತಿನಿಧಿಗಳು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಜಿಲ್ಲಾ ಬಂಜಾರ ಸಂಘದ ಉಪಾಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿ.ಪಂ ಸಿಇಓ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಮತ್ತು ಇನ್ನಿತರ ಗಣ್ಯರು, ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಯುವ ಲೇಖಕ ಹಾಗೂ ಬಂಜಾರ ಸಂಸ್ಕೃತಿ ಚಿಂತಕ ರುದ್ರು ಪುನೀತ್ರವರಿಂದ ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ.
Klive news article ಇದು “ಗೋಪಿ ವೃತ್ತ” ಅಲ್ಲ “ಟಿ.ಸೀನಪ್ಪ ಶೆಟ್ಟಿ ವೃತ್ತ” ಈ ಹೆಸರನ್ನೇ ಬಳಸುವಂತೆ ಸಾರ್ವಜನಿಕರು, ಸಂಘ ಸಂಸ್ಥೆಗಳಲ್ಲಿ ಮನವಿ…
ಒಂದು ಕಾಲದಲ್ಲಿ ಶಿವಮೊಗ್ಗೆಯ ಹೃದಯಭಾಗದಲ್ಲಿನ ಸೀನಪ್ಪ ಶೆಟ್ಟಿ ವೃತ್ತದಲ್ಲಿ ಗೋಪಿ ಹೋಟೆಲ್ ಇದ್ದು, ಈ ಕಾರಣಕ್ಕಾಗಿ ಗೋಪಿವೃತ್ತ ಎಂದು ಬಳಕೆಗೆ ಬಂದಿತು. ವಾಸ್ತವವಾಗಿ, ಗೋಪಿ ಎಂಬ ಹೆಸರಿಗೂ, ಆ ವೃತ್ತಕ್ಕೂ ಯಾವುದೇ ಸಂಬoಧ ಇಲ್ಲ. ಆದಾಗ್ಯೂ ಲಾಗಾಯ್ತಿನಿಂದ ಈ ಹೆಸರೇ ಪ್ರಚಲಿತವಾಗಿದೆ. ಈ ವೃತ್ತರಚನೆ-ವಿನ್ಯಾಸ ಹಾಗೂ ಆಕರ್ಷಣೀಯವಾಗಿಸಿದ ಟಿ. ಸೀನಪ್ಪ ಶೆಟ್ಟರ ಹೆಸರು ಮರೆಯಾಗಿರುವುದು ಮಾತ್ರ ವಿಪರ್ಯಾಸದ ಸಂಗತಿ. ಆದರೆ ಈ ವೃತ್ತದ ಇತಿಹಾಸವನ್ನು ಅವಲೋಕಿಸುವುದಾದರೆ, ಈ ಹಿಂದೆ 1946ರಲ್ಲಿ ಈ ಜಾಗದಲ್ಲಿ ಚಾಮುಂಡೇಶ್ವರಿ ಭವನ ಎಂಬ ಹೋಟೆಲ್ ಅನ್ನು ಕುಂದಾಪುರದ ವೆಂಕಟರಾವ್ ಎಂಬುವವರು ಪ್ರಾರಂಭಿಸಿದ್ದರು. ಮುಂದೆ ಇದು, ಸೆಂಟ್ರಲ್ ಕರ್ನಾಟಕ ಹೋಟೆಲ್ ಆಗಿ ಪರಿವರ್ತನೆಯಾಗಿತ್ತು.
ಆನಂತರ ಈ ಜಾಗದಲ್ಲಿ ಮಾಳೂರು ರಾಮಸ್ವಾಮಿಯವರು ಗೋಪಿ ಹೋಟೆಲ್ ಹೆಸರಿನಲ್ಲಿ ಹೋಟೆಲ್ ಉದ್ಯಮವನ್ನು ಆರಂಭಿಸಿದ್ದರು. ಹೀಗಾಗಿ ಈ ವೃತ್ತಕ್ಕೆ ತನ್ನಷ್ಟಕ್ಕೆ ತಾನೇ ಗೋಪಿ ಸರ್ಕಲ್ ಎಂಬ ಹೆಸರು ಬಾಯಿಂದ ಬಾಯಿಗೆ ಹರಿದು ಬಂದಿದೆ. ಹಾಗೆ ನೋಡಿದರೆ, ಇದಕ್ಕೂ ಮೊದಲು ಇದು ಪೋಸ್ಟಾಫೀಸ್ ವೃತ್ತವಾಗಿತ್ತು. ಬ್ರಿಟೀಷರ ಕಾಲದಲ್ಲಿ ಈ ಭಾಗದಲ್ಲಿ ಪ್ರಧಾನ ಅಂಚೆ ಕಛೇರಿ ಇದ್ದ ಕಾರಣದಿಂದಾಗಿ, ಈ ವೃತ್ತಕ್ಕೆ ಪೋಸ್ಟಾಫೀಸ್ ವೃತ್ತ ಎಂದೂ ಕರೆಯಲಾಗಿತ್ತು.
ಶಿವಮೊಗ್ಗೆಯ ಹೃದಯಭಾಗದಲ್ಲಿರುವ ಪ್ರಮುಖ ವೃತ್ತಇದಾಗಿದ್ದು, ಇದನ್ನು ಕೊಡುಗೈ ದಾನಿಗಳೂ, ಪ್ರಾಮಾಣಿಕ ಹಾಗೂ ಪಾರದರ್ಶಕ ವ್ಯಾಪಾರಸ್ಥರೂ ಆಗಿದ್ದ ಸೀನಪ್ಪ ಶೆಟ್ಟರ ಸಹೋದರರು ಅವರ ಅಣ್ಣನ ನೆನಪಿಗಾಗಿ 1956 ರಲ್ಲಿ ಈ ವೃತ್ತವನ್ನು ನಿರ್ಮಿಸಿ ಸಮಾಜಕ್ಕೆ ಅರ್ಪಿಸಿದ್ದರು. ಆಗಿನ ಕಾಲದಲ್ಲಿ 25,000 ರೂ.ಗಳನ್ನು ಖರ್ಚು ಮಾಡಿ, ಈ ವೃತ್ತವನ್ನು ನಿರ್ಮಿಸಲಾಗಿತ್ತು. ಸುತ್ತಲೂ ಕಲ್ಲನ್ನು ವೃತ್ತಾಕಾರದಲ್ಲಿ ಬಳಸಿ ನಿರ್ಮಿಸಿದ ಆಕರ್ಷಕ ವೃತ್ತ ಇದಾಗಿತ್ತು. ಟಿ.ಸೀನಪ್ಪ ಶೆಟ್ಟರ ಇನ್ನೊಬ್ಬ ಸಹೋದರರಾದ ಟಿ ರಾಮಸ್ವಾಮಿ ಶೆಟ್ಟಿಯವರು, 1958ರಲ್ಲಿ ಆಕಸ್ಮಿಕ ಅಪಘಾತದಲ್ಲಿತೀರಿಕೊಂಡರು. ಆದ್ದರಿಂದ ಅವರ ನೆನಪಿಗಾಗಿ 1959 ರಲ್ಲಿ ಅವರ ಸಹೋದರರು ಮತ್ತೆ 20,000ರೂ.ಗಳನ್ನು ಖರ್ಚು ಮಾಡಿ, ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಈ ವೃತ್ತದಲ್ಲಿ ಅವರ ಹೆಸರಲ್ಲಿ ನಾಮಫಲಕದೊಂದಿಗೆ ನೀರಿನ ಕಾರಂಜಿ (ಫೌಂಟೆನ್) ನಿರ್ಮಿಸಲಾಗಿತ್ತು. ಇದು ಮಲೆನಾಡು ಭಾಗದ ಮೊದಲ ನೀರಿನ ಕಾರಂಜಿ. ಇದು ಆ ಕಾಲದಲ್ಲಿಯೇ ವರ್ಣರಂಜಿತವಾದ ವಿದ್ಯುತ್ ದೀಪಗಳಿಂದ ಅಲಂಕೃತವಾಗಿದ್ದ ಕಾರಂಜಿ ವೃತ್ತ. ಈ ವೃತ್ತದ ಮೂಲಕ ಹಾದು ಹೋಗುವುದೇ ಒಂದು ರೋಮಾಂಚಕಾರಿ ಅನುಭವವಾಗಿತ್ತು. ಸುತ್ತಲೂ ಕಲ್ಲಿನ ಬೆಂಚ್ಗಳಲ್ಲಿ ಸಂಜೆ ಜನ ಕುಳಿತು ಕಾರಂಜಿಯನ್ನು ವೀಕ್ಷಿಸುತ್ತಿದ್ದರು. ಕಾಲ ಕಳೆದಂತೆ ಸಂಚಾರ ಒತ್ತಡ ಹೆಚ್ಚಾದಂತೆಲ್ಲಾ ಮುಂದೆ ಈ ಕಾರಂಜಿಯನ್ನು ಅನಿವಾರ್ಯವಾಗಿ ನಗರಸಭೆ ಆವರಣಕ್ಕೆ ನಾಮಫಲಕದ ಸಮೇತ ಸ್ಥಳಾಂತರಿಸಲಾಗಿತ್ತು. ಮುಂದೆ ಈ ಕಾರಂಜಿ ಹಳತಾದ್ದರಿಂದ ಹಾಗೂ ಈ ಕಾರಂಜಿ ಇದ್ದ ಜಾಗದಲ್ಲಿ ಅಂಬೇಡ್ಕರ್ರವರ ಪ್ರತಿಮೆ ಸ್ಥಾಪಿಸಬೇಕಾದ್ದರಿಂದ ಪಾಲಿಕೆಯವರು ಕಾರಂಜಿಯನ್ನು ತೆರವುಗೊಳಿಸಿದರು. ಸೀನಪ್ಪ ಶೆಟ್ಟಿ ವೃತ್ತ ಹಾಗೂ ಇಂದಿನ ಪಾಲಿಕೆ ಆವರಣದಲ್ಲಿ ಗಮನ ಸೆಳೆದಿದ್ದ ಈ ಕಾರಂಜಿ ಪ್ರಸ್ತುತ ಮೂಲೆ ಗುಂಪಾಗಬೇಕಾಯಿತು. ಸುಮಾರು 57 ವರ್ಷಗಳ ಕಾಲ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದ ಕಾರಂಜಿ ಇತಿಹಾಸದ ಪುಟ ಸೇರಿತ್ತು. ಸೀನಪ್ಪ ಶೆಟ್ಟಿ ಸಹೋದರರ ಈ ಕೊಡುಗೆ ಈಗ ನೆನಪು ಮಾತ್ರ.
Klive news article ಮುಂದೆ ಈ ವೃತ್ತದಲ್ಲಿ ಸಿಗ್ನಲ್ ಲೈಟ್ಗಳ ಅಳವಡಿಕೆಗೆ ಶ್ರೀನಿಧಿ ಕುಟುಂಬ ತನ್ನ ಕೊಡುಗೆಯಾಗಿ 15,000 ರೂ ಗಳ ವಂತಿಕೆ ನೀಡಿತ್ತು. ಈ ಎಲ್ಲಾ ಹಿನ್ನೆಲೆಯಲ್ಲಿ ನಗರದ ಹೃದಯ ಭಾಗದಲ್ಲಿನ ಈ ವೃತ್ತದ ನಿರ್ಮಾಣ ಹಾಗೂ ಸೌಂದರ್ಯೀಕರಣಕ್ಕೆ ಕಾರಣರಾದ ಟಿ. ಸೀನಪ್ಪ ಶೆಟ್ಟಿಯವರ ಹೆಸರನ್ನೇ ಮುಂದಿನ ದಿನಗಳಲ್ಲಿಉಳಿಸಿಕೊಂಡು ಹೋಗಬೇಕಿದೆ. ಹೀಗಾಗಿ ಸಾರ್ವಜನಿಕರು, ಸಂಘ ಸಂಸ್ಥೆಗಳು ಈ ವೃತ್ತಕ್ಕೆ ಟಿ.ಸೀನಪ್ಪ ಶೆಟ್ಟಿಯವರ ಹೆಸರನ್ನೇ ಬಳಸುವಂತೆ ವಿನಂತಿಸಲಾಗುತ್ತಿದೆ. ಈ ಮೂಲಕ ಮುಂದಿನ ತಲೆಮಾರಿಗೆ ಅನನ್ಯ ಕೊಡುಗೆ ನೀಡಿದ ಮಹನೀಯರನ್ನು ಸ್ಮರಿಸುವ ಕೆಲಸವಾಗಬೇಕಿದೆ.
ಇದರ ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲಾ ವ್ಯವಹಾರಗಳಲ್ಲಿ ಸುತ್ತೋಲೆ, ಪತ್ರಿಕಾ ಪ್ರಕಟಣೆಗಳಲ್ಲಿ ಸಹ ತಪ್ಪದೇ ಈ ಸರ್ಕಲ್ನ ಹೆಸರು ನಮೂದಿಸುವಾಗ ಟಿ. ಸೀನಪ್ಪಶೆಟ್ಟಿ ವೃತ್ತ ಎಂದೇ ಬಳಸುವಂತೆ ವಿನಂತಿಸಲಾಗಿದೆ. ಮಹಾನಗರ ಪಾಲಿಕೆಯ ಎಲ್ಲಾ ದಾಖಲಾತಿಗಳಲ್ಲೂ ಸಹ ಸೀನಪ್ಪಶೆಟ್ಟಿ ವೃತ್ತ ಎಂದು ಅಧಿಕೃತವಾಗಿ ನಮೂದಾಗಿದ್ದರೂ, ಸಾರ್ವಜನಿಕ ಬಳಕೆ ಅಷ್ಟಾಗಿ ಕಂಡು ಬಂದಿಲ್ಲದಿರುವುದು ವಿಷಾದಕರ. ಮುಂದಿನ ದಿನಗಳಲ್ಲಿ ಈ ವೃತ್ತ ಟಿ.ಸೀನಪ್ಪ ಶೆಟ್ಟಿ ವೃತ್ತ ಎಂದೇ ಬಳಕೆಯಾಗಬೇಕು ಎಂಬ ಉದ್ದೇಶದಿಂದ ಅವರ ಮುಂದಿನ ತಲೆಮಾರು ಕಲ್ಲು ಕೆತ್ತನೆಯ ನಾಮಫಲಕವನ್ನು ಅಳವಡಿಸಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆ ಅವಧಿಯಲ್ಲಿ ಈ ವೃತ್ತ ಈಗ ಇನ್ನಷ್ಟು ವಿಶಾಲವಾಗಿದೆ. ಸಂಚಾರ ಸುಗಮವಾಗಿ ನಡೆಯಬೇಕು ಎಂದು ಸಿಗ್ನಲ್ ಲೈಟ್ ಅಳವಡಿಸಲಾಗಿದೆ. ಸಾರ್ವಜನಿಕರು, ಸಂಘ ಸಂಸ್ಥೆಗಳು ಈ ವೃತ್ತವನ್ನು ಇನ್ನು ಮುಂದೆ ಟಿ.ಸೀನಪ್ಪಶೆಟ್ಟಿ ವೃತ್ತ ಎಂದು ಗುರುತಿಸಿ, ಅವರ ಅನನ್ಯ ಹಾಗೂ ದೂರದೃಷ್ಟಿಯ ಕೊಡುಗೆಯನ್ನು ಮುಂದಿನ ಪೀಳಿಗೆಗೆ ದಾಖಲಿಸಬೇಕಾಗಿ ಕೋರಲಾಗಿದೆ. ಇದರಿಂದ ದಾನಿಗಳಾಗಿ ಸಾರ್ವಜನಿಕರು ಮುಂದೆ ಬರಲು ಪ್ರೋತ್ಸಾಹ ನೀಡಿದಂತಾಗುತ್ತದೆ.
ಫ್ಲೆಕ್ಸ್ಗಳನ್ನು ಮಾಡಿಸುವ ಗ್ರಾಹಕರು ಸಾಮಾನ್ಯವಾಗಿ ಗೋಪಿ ವೃತ್ತ ಎಂದು ನಮೂದಿಸುತ್ತಾರೆ. ಆದರೆ, ದಯವಿಟ್ಟು ಫ್ಲೆಕ್ಸ್ ಮಾಡುವವರು ಫ್ಲೆಕ್ಸ್ಗಳಲ್ಲಿ ಗೋಪಿ ವೃತ್ತ ಎಂದು ಬಳಸದೆ ‘ಟಿ.ಸೀನಪ್ಪ ಶೆಟ್ಟಿ ವೃತ್ತ’ ಎಂದು ನಮೂದಿಸಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತೇವೆ. • ಟಿ. ಸೀನಪ್ಪ ಶೆಟ್ಟಿ ಪರಿವಾರದ ಕಿರು ಪರಿಚಯ
ಮೂಲತಃ ತರೀಕೆರೆಯ ನಿವಾಸಿಗಳಾದ ಟಿ. ಸೀನಪ್ಪಶೆಟ್ಟಿ ಪರಿವಾರ ವ್ಯವಹಾರದ ದೃಷ್ಟಿಯಿಂದ ಶಿವಮೊಗ್ಗದಲ್ಲಿ ನೆಲೆ ನಿಂತವರು. ಹಿರಿಯರಾದ ಟಿ. ಸೀನಪ್ಪ ಶೆಟ್ಟಿಯವರ ಸಹೋದರರಾದ ಟಿ. ನಾರಾಯಣಶೆಟ್ಟಿ, ಟಿ. ಗೋವಿಂದಸ್ವಾಮಿಶೆಟ್ಟಿ, ಟಿ. ರಾಮಸ್ವಾಮಿಶೆಟ್ಟಿ, ಟಿ. ಪುಟ್ಟಸ್ವಾಮಿಶೆಟ್ಟಿ, ಟಿ. ನಾಗರಾಜ ಶೆಟ್ಟಿ ಅವರು ಕೊಡುಗೈ ದಾನಿಗಳಾಗಿ ಶಿವಮೊಗ್ಗದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹದಾಯಕರಾಗಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಹೃದಯಭಾಗದಲ್ಲಿನ ಈ ವೃತ್ತ ನಿರ್ಮಾಣ ಹಾಗೂ ಸೌಂದರ್ಯೀಕರಣಕ್ಕೆ ಕಾರಣರಾದ ಟಿ. ಸೀನಪ್ಪ ಶೆಟ್ಟಿಯವರ ಹೆಸರನ್ನೇ ಉಳಿಸಿಕೊಂಡು ಹೋಗಬೇಕಿದೆ. ಹೀಗಾಗಿ ಸಾರ್ವಜನಿಕರು, ಸಂಘ ಸಂಸ್ಥೆಗಳು ಈ ವೃತ್ತಕ್ಕೆ ಟಿ.ಸೀನಪ್ಪ ಶೆಟ್ಟಿಯವರ ಹೆಸರನ್ನೇ ಬಳಸುವಂತೆ ವಿನಂತಿಸಲಾಗಿದೆ. ತಮ್ಮ ಬರವಣಿಗೆಗಳಲ್ಲಿ ಈ ಸರ್ಕಲ್ ಟಿ. ಸೀನಪ್ಪ ಶೆಟ್ಟಿ ಸರ್ಕಲ್ ಎಂದು ಹೆಸರು ಬಳಸುವ ಮೂಲಕ, ಮುಂದಿನ ತಲೆಮಾರಿಗೆ ಅನನ್ಯ ಕೊಡುಗೆ ನೀಡಿದ ಮಹನೀಯರನ್ನು ಸ್ಮರಿಸುವ ಕೆಲಸವಾಗಬೇಕಿದೆ. ಪ್ರಸ್ತುತ ಶ್ರೀನಿಧಿ ಕುಟುಂಬದ ಕುಡಿಗಳಾದ ಟಿ. ಆರ್. ಅಶ್ವತ್ಥನಾರಾಯಣ ಶೆಟ್ಟಿ, ಟಿ. ಆರ್. ವೆಂಕಟೇಶಮೂರ್ತಿ ಹಾಗೂ ಅವರ ಮಕ್ಕಳು ಈ ಸಂಸ್ಥೆಯನ್ನು ಹೆಚ್ಚು ಶ್ರದ್ಧೆಯಿಂದ ನಡೆಸುತ್ತಾ, ಶಿವಮೊಗ್ಗೆಯ ಜನತೆಗೆ ಅನೇಕ ವಿಧದಲ್ಲಿ ತಮ್ಮ ಶಕ್ತಿ ಅನುಸಾರ ಸೇವೆಯನ್ನು ಸಲ್ಲಿಸುತ್ತಿದ್ದು, ಅವರ ಮಕ್ಕಳು ಸಹ ಈ ಕಾರ್ಯದಲ್ಲಿ ಹೆಚ್ಚಿನ ಕಾಳಜಿ ವಹಿಸುತ್ತಿರುವುದು ಸಂತೋಷದ ವಿಚಾರ.
ಇದರಿಂದ ಈ ಸರ್ಕಲ್ ಹೆಸರು ಬಳಸುವ ಸಂದರ್ಭಗಳಲ್ಲಿ ದಯವಿಟ್ಟು “ಟಿ. ಸೀನಪ್ಪ ಶೆಟ್ಟಿ ವೃತ್ತ” ಎಂದೇ ಕರೆಯಬೇಕು ಅಥವಾ ನಮೂದಿಸಬೇಕಾಗಿ ಶಿವಮೊಗ್ಗೆಯ ಪ್ರಜೆಯಾಗಿ ಎಲ್ಲರನ್ನೂ ಪ್ರಾರ್ಥಿಸುತ್ತೇನೆ.
ಲೇ; ಹೆಚ್.ಖಂಡೋಬರಾವ್ ಸಹನಾ, ಗಾಂಧಿನಗರ ಮುಖ್ಯರಸ್ತೆ ಶಿವಮೊಗ್ಗ
Sri Shivaganga Yoga Centre ಶ್ರೀ. ಶಿವಗಂಗಾ ಯೋಗ ಕೇಂದ್ರದ ವತಿಯಿಂದ ರಥ ಸಪ್ತಮಿ, ಶಿವನಮೂರ್ತಿ ಪ್ರತಿಷ್ಠಾಪನೆ ವರ್ಷದ ಪೂಜೆ ಮತ್ತು ರುದ್ರಾಭಿಷೇಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗದ, ಕಲ್ಲಹಳ್ಳಿ ವಿನೋಭ ನಗರದಲ್ಲಿರುವ ನಮ್ಮ ಯೋಗ ಕೇಂದ್ರದ ಆವರಣದಲ್ಲಿ ರಥಸಪ್ತಮಿ ಆಚರಣೆ, ಶಿವನ ಪೂಜೆ ಮತ್ತು ರುದ್ರಾಭಿಷೇಕ ಕಾರ್ಯಕ್ರಮ ಏರ್ಪಡಿಸಲಾಗಿದೆ.
ದಿನಾಂಕ 16.2.2024 ಶುಕ್ರವಾರ ರಥಸಪ್ತಮಿ ಪ್ರಯುಕ್ತ ಮುಂಜಾನೆ 05.30 ಕ್ಕೆ ಸೂರ್ಯದೇವನಿಗೆ ಪೂಜೆ ನೆರವೇರಲಿದೆ. ಜಗತ್ತಿಗೆ ಬೆಳಕು ನೀಡಿ ಜೀವಿಗಳಿಗೆ ಚೈತನ್ಯ ಕೊಡುವ ಸೂರ್ಯದೇವನಿಗೆ ಕೃತಜ್ಞತೆ ಸಲ್ಲಿಸಲು ಯೋಗ ಶಿಕ್ಷಣಾರ್ಥಿಗಳಿಂದ ಸಾಮೂಹಿಕ ಅಖಂಡ ಸೂರ್ಯ ನಮಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇದೇ ಸಂದರ್ಭದಲ್ಲಿ ಯೋಗ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಶಿವನ ಮೂರ್ತಿಯ ಅನಾವರಣ ಮತ್ತು ಪ್ರಾಣ ಪ್ರತಿಷ್ಠಾಪನೆ ಮಾಡಿ ಒಂದು ವರ್ಷ ಪೂರ್ಣವಾಗುತ್ತದೆ. ಅದರ ಪ್ರಯುಕ್ತ ಅದೇ ದಿನ ಮುಂಜಾನೆ 07.00 ಗಂಟೆಗೆ ಶಿವಪೂಜೆ ಮತ್ತು ರುದ್ರಾಭಿಷೇಕ ಕಾರ್ಯಕ್ರಮ ನೆರವೇರಲಿದೆ.
Sri Shivaganga Yoga Centre ಸೂರ್ಯ ನಮಸ್ಕಾರ ಮತ್ತು ಪೂಜಾ ಕಾರ್ಯಕ್ರಮಕ್ಕೆ ಶಿವಮೊಗ್ಗ ನಗರದ ಯೋಗಾಸಕ್ತರು ಮತ್ತು ದೈವ ಭಕ್ತರೆಲ್ಲರೂ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಯೋಗಾಚಾರ್ಯ ಶ್ರೀ ಸಿ. ವಿ. ರುದ್ರಾರಾಧ್ಯರು ಮತ್ತು ಶ್ರೀ ಶಿವಗಂಗಾ ಯೋಗ ಟ್ರಸ್ಟ್ ನ ಕಾರ್ಯದರ್ಶಿವರಾದ ಶ್ರೀ ಎಸ್.ಎಸ್.ಜ್ಯೋತಿಪ್ರಕಾಶ್ ರವರು ಕೋರಿದ್ದಾರೆ.
Shaakhahari Movie ಕೀಳಂಬಿ ವಿಡಿಯೋ ಲ್ಯಾಬ್ ಪ್ರೈವೇಟ್ ಲಿಮಿಟೆಡ್ ನಿರ್ಮಾಣ ಮಾಡಿರುವ ಮಲೆನಾಡಿನ ಹೊಚ್ಚ ಹೊಸ ಚಲನಚಿತ್ರ ಶಾಖಾಹಾರಿ ಸಿನಿಮಾವು ಇದೇ ತಿಂಗಳ ಫೆಬ್ರವರಿ 16ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.
ಈ ಕುರಿತು ಶಿವಮೊಗ್ಗದ ಶುಭಂ ಹೋಟೆಲ್ ನಲ್ಲಿ ಚಿತ್ರ ತಂಡವು ಪತ್ರಿಕಾಗೋಷ್ಠಿ ನಡೆಸಿತು.
ಸಿನಿಮಾವು ತೀರ್ಥಹಳ್ಳಿಯ ಸುತ್ತಮುತ್ತಲಿನ ಭಾಗದಲ್ಲಿ ಚಿತ್ರಿಕರಣಗೊಂಡಿದೆ. ಹೊಸ ಪ್ರತಿಭೆಗಳು ನಮ್ಮ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದಾರೆ.
ಸಿನಿಮಾವನ್ನು ನಿರ್ಮಾಪಕರಾಗಿ ಪ್ರೇಕ್ಷಕನಾಗಿ ನೋಡುವುದಾದರೆ, ಸಿನಿಮಾವು ಅದ್ಭುತವಾಗಿದೆ. ಸಿನಿಮಾದ ಟ್ರೈಲರ್ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಸಿನಿಮಾ ನನ್ನ ನಿರೀಕ್ಷೆಗಿಂತ ಹೆಚ್ಚಾಗಿಯೇ ಮೂಡಿಬಂದಿದೆ. ಫೆಬ್ರವರಿ 16ರಂದು ರಾಜ್ಯಾದ್ಯಂತ ಶಾಖಾಹಾರಿ ಸಿನಿಮಾ ತೆರೆಯ ಮೇಲೆ ಕಾಣಲಿದೆ. ದಯಮಾಡಿ ಎಲ್ಲರೂ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿ ಚಿತ್ರ ತಂಡವನ್ನು ಪ್ರೋತ್ಸಾಹಿಸಿ ಎಂದು ಶಾಖಾಹಾರಿ ಸಿನಿಮಾದ ನಿರ್ಮಾಪಕರಾದ ರಾಜೇಶ್ ಕೀಳಂಬಿ ಅವರು ಹೇಳಿದರು.
Shaakhahari Movie ಶಾಖಾಹಾರಿ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಗೋಪಾಲ್ ಕೃಷ್ಣ ದೇಶಪಾಂಡೆ ಅವರು ಮಾತನಾಡಿ, ಸಿನಿಮಾದ ಪ್ರಮುಖ ಪಾತ್ರಧಾರಿಯಾದ ರಂಗಾಯಣ ರಘು ಅವರ ಜೊತೆಗೆ ಮೊದಲ ಬಾರಿಗೆ ನಾನು ಅಭಿನಯಿಸಿದ್ದೇನೆ. ಅವರ ಜೊತೆಗೆ ಕಳೆದ ಪ್ರತಿಯೊಂದು ಕ್ಷಣವು ತೆರೆಯ ಮೇಲೆ ಕಾಣಲಿದೆ. ಸಿನಿಮಾದಲ್ಲಿ ನನಗೆ ಪೊಲೀಸ್ ಪಾತ್ರವನ್ನು ನೀಡಿದ್ದು, ಇತರೆ ಸಿನಿಮಾಕ್ಕಿಂತಲೂ ಅದ್ಭುತ ಪಾತ್ರ ನನಗೆ ದೊರೆತಿದೆ. ಮಲೆನಾಡಿನ ಭಾಗದಲ್ಲಿ ಸಿನಿಮಾವು ಚಿತ್ರೀಕರಣಗೊಂಡಿದ್ದು, ಮಲೆನಾಡಿನ ಆಡು ಭಾಷೆಯಲ್ಲಿಯೇ ಸಂಭಾಷಣೆಗಳಿಂದ ಕೂಡಿದೆ ಎಂದರು.
ಇನ್ನು ಸಿನಿಮಾದ ನಿರ್ದೇಶಕರಾದ ಸಂದೀಪ್ ಸುಂಕದ್ ಅವರು ಮಾತನಾಡಿ, ಸಿನಿಮಾದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಈಗಾಗಲೇ ಸಿನಿಮಾದ ಎರಡು ಹಾಡುಗಳು ಎಂಟಿಆರ್ ಯು ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಈ ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಖಾಹಾರಿ ಸಿನಿಮಾದ ಇನ್ನೋರ್ವ ನಿರ್ಮಾಪಕರಾದ ಶ್ರೀಮತಿ ರಂಜಿನಿ ಉಪಸ್ಥಿತರಿದ್ದರು.
Free self employment training ಉಚಿತ ಸ್ವ ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಹೊಳಲೂರು (ಶಿವಮೊಗ್ಗ ತಾಲ್ಲೂಕು) ಇಲ್ಲಿ ಉಚಿತ ತರಬೇತಿಯನ್ನು ಹಮ್ಮಿಕೊಂಡಿದ್ದಾರೆ. ಆಸಕ್ತಿ ಇರುವ ರೈತರು, ಕಾರ್ಮಿಕರು, ಸ್ವ ಉದ್ಯೋಗ ಅಸಕ್ತ ಯುವಕ ಮತ್ತು ಯುವತಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಸಲ್ಲಿಸಬಹುದು.
ಅಭ್ಯರ್ಥಿಯು 18ರಿಂದ 45 ವರ್ಷ ವಯೋಮಿತಿ ಒಳಗಿನವರಾಗಿರಬೇಕು ಮತ್ತು 8ನೇ ತರಗತಿ ಉತ್ತೀರ್ಣರಾಗಿರಬೇಕು. ಮತ್ತು ಗ್ರಾಮೀಣ ಭಾಗದ ಬಿಪಿಎಲ್ ಕಾರ್ಡ ಹೊಂದಿದು ಉಚಿತ ತರಬೇತಿಯನ್ನು ಪಡೆದ ನಂತರ ಸ್ವ-ಉದ್ಯೋಗವನ್ನು ಪ್ರಾರಂಭ ಮಾಡುವವರಾಗಿರಬೇಕು. ತರಬೇತಿ ಅವಧಿಯಲ್ಲಿ ಉಚಿತ ಊಟ-ವಸತಿ ವ್ಯವಸ್ಥೆ ಇರುತ್ತದೆ. ತರಬೇತಿ ಅವಧಿಯಲ್ಲಿ ಸಂಸ್ಥೆಯಲ್ಲಿ ಉಳಿದುಕೊಳ್ಳುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
Free self employment training ತರಬೇತಿಯು ಪ್ರಾರಂಭವಾಗಲಿದ್ದು ಆಸಕ್ತರು ಹೆಸರು, ವಿಳಾಸ, ಮೊಬೈಲ್ ನಂ. ವಿದ್ಯಾರ್ಹತೆ, ಮತ್ತು ವಯಸ್ಸಿನ ವಿವರಗಳೊಂದಿಗೆ: ನಿರ್ದೇಶಕರು, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ -ಉದ್ಯೋಗ ತರಬೇತಿ ಸಂಸ್ಥೆ, ಹೊನ್ನಾಳಿ ರಸ್ತೆ, ಹೊಳಲೂರು- 577216 (ಶಿವಮೊಗ್ಗ ತಾಲ್ಲೂಕು) ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. 9481955721, 9743429595, 8722384541, 9449371579, 8105378735 ಅಥವಾ Email-cbrsetiholalur@gmail.com ಸಂಪರ್ಕಿಸಬಹುದು.
Tunga Bridge ತೀರ್ಥಹಳ್ಳಿಪಟ್ಟಣದ ಕುರುವಳ್ಳಿ ಜಯಚಾಮರಾಜೇಂದ್ರ ತುಂಗಾ ಕಮಾನು ಸೇತುವೆ ಮೇಲೆ ನಾಳೆ ಡಾಂಬರೀಕರಣ ನಡೆಸಲು ಹೆದ್ದಾರಿ ಇಲಾಖೆ ತೀರ್ಮಾನಿಸಿದೆ.
Tunga Bridge ನಾಳೆ ಈ ಮುಖ್ಯ ರಸ್ತೆಯನ್ನು ಬಂದ್ ಮಾಡಲಾಗುತ್ತದೆ ಎಂಬ ಆದೇಶವನ್ನು ಪ್ರಕಟಿಸಿದ್ದಾರೆ, ಇದಕ್ಕೆ ಸಾರ್ವಜನಿಕರು, ವಾಹನ ಸವಾರರು, ವರ್ತಕರು, ಹಾಗೂ ಶಾಲಾ ವಿದ್ಯಾರ್ಥಿಗಳ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದು, ದಿಡೀರ್ ಸೇತುವೆ ರಸ್ತೆ ಬಂದ್ ಮಾಡಿದರೆ ವ್ಯಾಪಾರ ವಹಿವಾಟು, ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಆದರಿಂದ ಸರ್ಕಾರಿ ರಜೆ ದಿನ ಭಾನುವಾರ ರಸ್ತೆ ಕಾಮಗಾರಿ ನಡೆಸುವಂತೆ ಹೈವೇ ಅಧಿಕಾರಿಗಳಿಗೆ ಸಾರ್ವಜನಿಕರು ಈ ಮೂಲಕ ಆಗ್ರಹ ಮಾಡಿದ್ದಾರೆ
Siddaramaiah ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕರಾದ ಜಗಜ್ಯೋತಿ ಬಸವಣ್ಣನವರ ಭಾವಚಿತ್ರವನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಅನಾವರಣಗೊಳಿಸಿ ಮಾತನಾಡಿದರು.
“ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ” ಎಂಬ ಘೋಷವಾಕ್ಯ ಇಡೀ ರಾಜ್ಯದ ತುಂಬ ಮೊಳಗಲಿದೆ. ಫೆ. 17 ರಂದು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅನಾವರಣ ಮಾಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ತಾಲ್ಲೂಕು ಮಟ್ಟದಲ್ಲಿ ಶಾಸಕರು ಹಾಗೂ ಎಲ್ಲಾ ನಗರ ಹಾಗೂ ಗ್ರಾಮೀಣ ಸಂಸ್ಥೆಗಳಲ್ಲಿ ಆಯಾ ಅಧ್ಯಕ್ಷರಿಂದ ನೆರವೇರಿಸಲು ಸೂಚಿಸಲಾಗಿದೆ. ಎಲ್ಲ ಕಚೇರಿಗಳಲ್ಲಿಯೂ ಬಸವಣ್ಣನವರ ಭಾವಚಿತ್ರವಿರಬೇಕು, ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಸ್ವಲ್ಪವಾದರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಬಸವ ಜಯಂತಿ ಆಚರಿಸಿ, ಬದುಕಿನ ಕಷ್ಟಗಳಿಗೆ ಹಣೆಬರಹ, ನನ್ನ ಕರ್ಮ ಎನ್ನುವುದು ಪುನ: ದಾರಿ ತಪ್ಪಿಸಿದಂತಾಗುತ್ತದೆ. ಬಸವಾದಿ ಶರಣರ ಆಶಯದಂತೆ ಸಮಾಜ ಮೊದಲು ಮೌಢ್ಯಗಳಿಂದ ಆಚೆ ಬರಬೇಕು. ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು. ದ್ವೇಷಿಸುವುದು ದುರ್ಗುಣ. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎನ್ನುವುದು ಅತ್ಯಂತ ಯೋಗ್ಯವಾಗಿದೆ. ಶಿವಮೊಗ್ಗದಲ್ಲಿ ಹಳೇ ಜೈಲು ಆವರಣವನ್ನು ಅಲ್ಲಮಪ್ರಭು ಎಂದು ನಾಮಕರಣ ಮಾಡಲಾಗಿದೆ. ಬಿಜಾಪುರ ಮಹಿಳಾ ವಿಸ್ವವಿದ್ಯಾಲಯಕ್ಕೆ ಅಕ್ಕಮಹಹಾದೇವಿ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಿದ್ದು ನಮ್ಮ ಸರ್ಕಾರ. ಸಮಾಜದಲ್ಲಿ ಬದಲಾವಣೆ ತರಲು ಈ ಕೆಲಸಗಳನ್ನು ಮಾಡುತ್ತಿದ್ದೇವೆ. ಬಸವಾದಿ ಶರಣರ ವಚನಗಳು ಹಿಂದೆ, ಇಂದು ಹಾಗೂ ಮುಂದೆಯೂ ಪ್ರಸ್ತುತವಾಗಿರಲಿದೆ. ಬಸವಣ್ಣನವರ ಕಾರ್ಯಕ್ರಮಕ್ಕೆ ಯಾವ ಕಾರಣಕ್ಕೂ ಸರ್ಕಾರದಲ್ಲಿ ಅನುದಾನದ ಕೊರತೆಯಿಲ್ಲ.
ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ. ಬುದ್ಧ, ಬಸವ, ಮಹಾತ್ಮಾ ಗಾಂಧಿ, ಅಂಬೇಡ್ಕರ್ ಈ ಎಲ್ಲ ಮಹನೀಯರು ಆರೋಗ್ಯಕರ, ಮನುಷ್ಯತ್ವದಿಂದ ಕೂಡಿದ ಸಾಮಾಜಿಕ ವ್ಯವಸ್ಥೆಯನ್ನು ಬಯಸಿದವರು. ಜಾತೀಯತೆ, ಮೌಢ್ಯ ಕಂದಾಚಾರಗಳು ಸಮಾಜದಲ್ಲಿ ಪ್ರಚಲಿತವಾಗಿದೆ. ಅಸಮಾನತೆ ತೊಲಗಿ ಎಲ್ಲರೂ ಗೌರವದಿಂದ ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕೆಂಬ ದಿಸೆಯಲ್ಲಿ ಬಸವಣ್ಣನವರು ಶ್ರಮಿಸಿದರು ಎಂದು ಹೇಳಿದರು.
Siddaramaiah ನುಡಿದಂತೆ ನಡೆದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ವರ್ಗರಹಿತ, ಜಾತಿರಹಿತ, ಮೌಢ್ಯಗಳಿಲ್ಲದ ವೈಚಾರಿಕ ಸಮಾಜ ಸ್ಥಾಪನೆಯ ಆಶಯದಿಂದ ವಚನಗಳನ್ನು ರಚಿಸಿದರು. ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳ ರೀತಿಯಲ್ಲಿ ವಚನಗಳನ್ನು ರಚಿಸಿ ಜನರಲ್ಲಿ ಜಾಗೃತಿ ಮೂಡಿಸಿದರು. ಕಾಯಕ, ದಾಸೋಹವನ್ನು ಬೋಧಿಸಿದ ಬಸವಣ್ಣನವರು ಯಾರೂ ಕುಳಿತು ತಿನ್ನದೇ ಕಾಯಕದಲ್ಲಿ ತೊಡಗಬೇಕೆಂದು ಪ್ರತಿಪಾದಿಸಿದರು. ಬಡವರು ಬಡವರಾಗಿಯೇ ಉಳಿಯುವ ಹಾಗೂ ಶ್ರೀಮಂತರ ಕೂತು ತಿನ್ನುವ ವ್ಯವಸ್ಥೆ ಹೋಗಬೇಕು. ಅಧಿಕಾರ ಮತ್ತು ಸಂಪತ್ತು ಕೆಲವೇ ಜನರ ಕೈಯಲ್ಲಿ ಇರಬಾರದು, ಎಲ್ಲರಿಗೂ ಸಮಪಾಲು, ಸಮಬಾಳು ಎಂದು ಬಸವಾದಿ ಶರಣರು, ಅಂಬೇಡ್ಕರ್ ತಿಳಿಸಿದ್ದರು ಎಂದು ಹೇಳಿದರು.
Karate tournament 04/02/2024 ರ ಭಾನುವಾರದಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಸಾಂಸ್ಕೃತಿಕ ಭವನದಲ್ಲಿ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.
ಈ ಪಂದ್ಯಾವಳಿಗೆ ಸಹ್ಯಾದ್ರಿ ಶಿವಮೊಗ್ಗ ಜಿಲ್ಲಾ ಕರಾಟೆ ಸಂಸ್ಥೆಯ ಕ್ರೀಡಾಪಟುಗಳು ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಪದಕಗಳನ್ನು ಗೆದ್ದು ತಂಡದ ಚಾಂಪಿಯನ್ಶಿಪನ್ನು ಪಡೆದಿರುತ್ತಾರೆ.
ಕೊನೆಯ ಹಂತದಲ್ಲಿ ನಡೆಯುವ ಓಪನ್ ಕರಾಟೆ ಚಾಂಪಿಯನ್ಶಿಪ್ ಪಂದ್ಯಾವಳಿಯಲ್ಲಿ ಭಾಗವಹಿಸಿದಂತಹ ಇದೇ ಸಂಸ್ಥೆಯ ಪ್ರೀತಮ್ . ವಿ ವಿಜಯಶಾಲಿಯಾಗಿ ಸೈಕಲ್ ಹಾಗೂ ಆಕರ್ಷಿಕ ಟ್ರೋಫಿ ಯನ್ನು ಬಹುಮಾನವಾಗಿ ಪಡೆದಿರುತ್ತಾನೆ. ಸಂಸ್ಥೆಯ ತರಬೇತುದಾರರಾದ ಸನ್ ಸೈ ನವೀನ್, ಸನ್ ಸೈ ಮಂಜು, ಸನ್ ಸೈ ಸಾದಿಕ್ ಅಭಿನಂದಿಸಿರುತ್ತಾರೆ.
Karate tournament ಹಾಗೂ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಮತ್ತು ಅಪರಾಧ ನಿಯಂತ್ರಣ ಸಂಸ್ಥೆಯ ನಿರ್ದೇಶಕರಾದಂತಹ ಅಬ್ದುಲ್ ರಜಾಕ್, ಮೈಕಲ್ ಕೆನಿತ್, ವಕೀಲರಾದ ಸಂತೋಷ್, ಜಿಲ್ಲಾ ಉಪಾಧ್ಯಕ್ಷರಾದಂತಹ ನಾಸಿಫ್ ಅಹಮ್ಮದ್ ರಾದಂತಹ ಹಾಗೂ ಸಂಸ್ಥೆಯ ಎಲ್ಲಾ ಸದಸ್ಯರುಗಳು ಪಂದ್ಯಾವಳಿಯಲ್ಲಿ ಭಾಗವಹಿಸಿ ಪದಕಗಳು ಹಾಗೂ ಓಪನ್ ಚಾಂಪಿಯನ್ಶಿಪ್ ನಲ್ಲಿ ಸೈಕಲ್ ಪಡೆದಿರುವ ಕ್ರೀಡಾಪಟು ಪ್ರೀತಮ್ ಗೆ ಶುಭಾಶಯಗಳನ್ನು ಕೋರಿರುತ್ತಾರೆ.