Friday, August 14, 2026
Friday, August 14, 2026

Sri Shivaganga Yoga Centre ಫೆ.16 ರಂದು ಅಖಂಡ ಸೂರ್ಯ ನಮಸ್ಕಾರ ಕಾರ್ಯಕ್ರಮ

Date:

Sri Shivaganga Yoga Centre ಶ್ರೀ. ಶಿವಗಂಗಾ ಯೋಗ ಕೇಂದ್ರದ ವತಿಯಿಂದ ರಥ ಸಪ್ತಮಿ, ಶಿವನಮೂರ್ತಿ ಪ್ರತಿಷ್ಠಾಪನೆ ವರ್ಷದ ಪೂಜೆ ಮತ್ತು ರುದ್ರಾಭಿಷೇಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಶಿವಮೊಗ್ಗದ, ಕಲ್ಲಹಳ್ಳಿ ವಿನೋಭ ನಗರದಲ್ಲಿರುವ ನಮ್ಮ ಯೋಗ ಕೇಂದ್ರದ ಆವರಣದಲ್ಲಿ ರಥಸಪ್ತಮಿ ಆಚರಣೆ, ಶಿವನ ಪೂಜೆ ಮತ್ತು ರುದ್ರಾಭಿಷೇಕ ಕಾರ್ಯಕ್ರಮ ಏರ್ಪಡಿಸಲಾಗಿದೆ.

ದಿನಾಂಕ 16.2.2024 ಶುಕ್ರವಾರ ರಥಸಪ್ತಮಿ ಪ್ರಯುಕ್ತ ಮುಂಜಾನೆ 05.30 ಕ್ಕೆ ಸೂರ್ಯದೇವನಿಗೆ ಪೂಜೆ ನೆರವೇರಲಿದೆ. ಜಗತ್ತಿಗೆ ಬೆಳಕು ನೀಡಿ ಜೀವಿಗಳಿಗೆ ಚೈತನ್ಯ ಕೊಡುವ ಸೂರ್ಯದೇವನಿಗೆ ಕೃತಜ್ಞತೆ ಸಲ್ಲಿಸಲು ಯೋಗ ಶಿಕ್ಷಣಾರ್ಥಿಗಳಿಂದ ಸಾಮೂಹಿಕ ಅಖಂಡ ಸೂರ್ಯ ನಮಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಇದೇ ಸಂದರ್ಭದಲ್ಲಿ ಯೋಗ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಶಿವನ ಮೂರ್ತಿಯ ಅನಾವರಣ ಮತ್ತು ಪ್ರಾಣ ಪ್ರತಿಷ್ಠಾಪನೆ ಮಾಡಿ ಒಂದು ವರ್ಷ ಪೂರ್ಣವಾಗುತ್ತದೆ. ಅದರ ಪ್ರಯುಕ್ತ ಅದೇ ದಿನ ಮುಂಜಾನೆ 07.00 ಗಂಟೆಗೆ ಶಿವಪೂಜೆ ಮತ್ತು ರುದ್ರಾಭಿಷೇಕ ಕಾರ್ಯಕ್ರಮ ನೆರವೇರಲಿದೆ.

Sri Shivaganga Yoga Centre ಸೂರ್ಯ ನಮಸ್ಕಾರ ಮತ್ತು ಪೂಜಾ ಕಾರ್ಯಕ್ರಮಕ್ಕೆ ಶಿವಮೊಗ್ಗ ನಗರದ ಯೋಗಾಸಕ್ತರು ಮತ್ತು ದೈವ ಭಕ್ತರೆಲ್ಲರೂ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಯೋಗಾಚಾರ್ಯ ಶ್ರೀ ಸಿ. ವಿ. ರುದ್ರಾರಾಧ್ಯರು ಮತ್ತು ಶ್ರೀ ಶಿವಗಂಗಾ ಯೋಗ ಟ್ರಸ್ಟ್ ನ ಕಾರ್ಯದರ್ಶಿವರಾದ ಶ್ರೀ ಎಸ್.ಎಸ್.ಜ್ಯೋತಿಪ್ರಕಾಶ್ ರವರು ಕೋರಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Araga Jnanendra ಶಿವಮೊಗ್ಗದಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

Araga Jnanendra ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು...

Madhu Bangarappa ವ್ಯವಸ್ಥೆಯಲ್ಲಿ ಮೂಲ ಬದಲಾವಣೆ.ನಮ್ಮ ಸರ್ಕಾರದ ಉದ್ದೇಶ- ಸಚಿವ ಮಧು ಬಂಗಾರಪ್ಪ

Madhu Bangarappa ಸರ್ಕಾರಿ ಶಾಲೆಯ ಅಭಿವೃದ್ಧಿ, ಗುಣಮಟ್ಟದ ಶಿಕ್ಷಣದ ಬಗ್ಗೆ ಸಚಿವನಾಗಿ...