Physical education ಶಿವಮೊಗ್ಗ ಜಿಲ್ಲಾ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಿ.ಪಿ.ರವಿ ಕುಮಾರ್ ಮತ್ತು ಪ್ರಧಾನ ಕಾರ್ಯದರ್ಶಿಯಾದ ರತನ್ ಸಿಂಗ್ ರವರನ್ನು
ಕಟ್ಟೆ ಬಳಗದ ಸ್ನೇಹಿತರೆಲ್ಲರೂ ಸೇರಿ, ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಯಾದ ಮಹೇಶ್ ಉಲ್ಲತಿ ಮತ್ತು ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಯಾದ ಕೃಷ್ಣಮೂರ್ತಿ ಅನನ್ಯ ವಿದ್ಯಾಸಂಸ್ಥೆ ಅಧ್ಯಕ್ಷರಾದ ಗಿರೀಶ್ ಮತ್ತು ಸರ್ವೆ ನೌಕರ ಸಂಘದ ಅಧ್ಯಕ್ಷರಾದ ವೇಣು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ದಿನೇಶ್, ಜಿಲ್ಲಾ ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ರಾ. ಹ. ತಿಮ್ಮೇನಹಳ್ಳಿ, ಸಂಘದ ಕಾರ್ಯ ದರ್ಶಿ ಕೆ. ಜಿ. ಮಠಪತಿ, ಯೋಗೀಶ್ Physical education ಇನ್ನೂ ಮುಂತಾದವರು ಉಪಸ್ಥಿತರಿದ್ದರು.
Physical education ಜಿಲ್ಲಾ ಪ್ರಾಥಮಿಕ ಶಾಲೆಗಳ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ರವಿಕುಮಾರ್ ಆಯ್ಕೆ
S N Channabasappa ನವ್ಯಶ್ರೀ ನಾಗೇಶ್ ಅವರ ಪ್ರಕೃತಿ ಪ್ರೇಮ ಅನುಕರಣೀಯ- ಶಾಸಕ ಚನ್ನಬಸಪ್ಪ
S N Channabasappa ಪ್ರಕೃತಿಗೆ ಗೌರವ ಮತ್ತು ಕ್ರತಜ್ಞತೆ ಸಲ್ಲಿಸುವ ಮೂಲಕ ನವ್ಯಶ್ರೀ ಈಶ್ವರ ವನ ಚಾರಿಟೇಬಲ್ ಟ್ರಸ್ಟಿನ ಶಿವರಾತ್ರಿ ಉತ್ಸವ-24 ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ನಿರ್ಮೂಲನೆ ಬಗ್ಗೆ ಕಿರುಚಿತ್ರ ಪ್ರದರ್ಶನ, ಸಾಮಾಜಿಕ ಸೇವಾ ಪ್ರಶಸ್ತಿ ಮತ್ತು ಜಲಪಾತ ಚಲನಚಿತ್ರ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಆಗಮಿಸಿ ಮಾತನಾಡಿದರು.
ನವ್ಯಶ್ರೀ ನಾಗೇಶ ರವರ ಪ್ರಕ್ರತಿ ಪ್ರೇಮ ಸಮಾಜಕ್ಕೆ ಅನುಕರಣೀಯ ಅವರು ಮಾಡುವ ಕೆಲಸ ಎಲ್ಲರೂ ಮಾಡಿದಲ್ಲಿ ಸಕಾಲದಲ್ಲಿ ಮಳೆ ಬೆಳೆಯಾಗಿ ಯಾವುದೇ ಸಮಸ್ಯೆ ಇರುವುದಿಲ್ಲ. ಉಚಿತವಾಗಿ ಬಟ್ಟೆಯ ಚೀಲವನ್ನು ನೀಡುವ ಮೂಲಕ ಪ್ಲೇಸ್ಟಿಕ್ ನಿರ್ಮೂಲನೆಗೆ ಪ್ರೇರೆಪಿಸುತ್ತಿರುವ ಶ್ರೀಮತಿ ಗೀತಾ ಪಂಡಿತ್ ಮತ್ತು ವ್ರಧ್ಧರ, ಮಾನಸಿಕ ಅಸ್ವಸ್ಥರ ಮತ್ತು ಅನಾಥರ ಸೇವೆ ಮಾಡುವ ಶಿವಮೊಗ್ಗದ ಗುಡ್ ಲಕ್ ಅರೈಕೆ ಕೇಂದ್ರ ವನ್ನು ಗುರುತಿಸಿ ಸನ್ಮಾನಿಸಿ ದೇಣಿಗೆ ನೀಡುವ ಇವತ್ತಿನ ಈ ಸಮಾರಂಭದಲ್ಲಿರುವುದು ನನ್ನ ಭಾಗ್ಯ ಎಂದು ಹೇಳಿದರು.
ಇನ್ನೋಬ್ಬ ಅತಿಥಿಗಳಾದ ಪರಿಷತ್ತ ಸದಸ್ಯರು ಡಿ.ಎಸ್.ಅರುಣ್ ಮಾತನಾಡಿ ನಾಗೇಶ್ ಕಳೆದ ಹಲವಾರು ವರ್ಷಗಳಿಂದ ಸದ್ದಿಲ್ಲದೆ ಸೇವೆ ಮಾಡುವ ಮೂಲಕ ಜನಾನುರಾಗಿಯಾಗಿದ್ದಾರೆ. ಇವರ ಸೇವೆ ದೇವರ ಸೇವೆಗಿಂತ ಶ್ರೇಷ್ಠ ಎಂದು ತಿಳಿಸಿದರು.
ಹಸಿದವರಿಗೆ ಅನ್ನ ದಾಸೋಹ ಯೋಜನೆಯ ಮೂಲಕ ಜನಪ್ರಿಯತೆಯ ಹೊಂದಿದ್ದಾರೆ. ಸರ್ಕಾರ ಮಾಡದೇ ಇರುವ ಕೆಲಸ ಮಾಡುತ್ತಿರುವ ಇವರು ಪ್ರತೀ ವರ್ಷ ಶಿವರಾತ್ರಿ ಹಬ್ಬದ ಪ್ರಯುಕ್ತ ಸಾಮಾಜಿಕ, ಪರಿಸರ ಸಂರಕ್ಷಣೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಉಳಿಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ .
ನಗರದ ಗುಡ್ ಲಕ್ ಅರೈಕೆ ಕೇಂದ್ರದವರು ಮಾಡುತ್ತಿರುವ ಕೆಲಸ, ಹಿರಿಯರ ಅನಾಥರ ಸೇವೆ ತುಂಬ ಒಳ್ಳೆಯ ಕೆಲಸ ಇದು ಶಿವಮೊಗ್ಗದ ಹೆಮ್ಮೆಯ ಸಂಸ್ಥೆ.ಹಾಗೆ ಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಶ್ರೀಮತಿ ಗೀತಾ ಪಂಡಿತ್ ರವರ ಉಚಿತ ಬಟ್ಟೆಯ ಚೀಲ ಹೊಲಿದು ಕೊಡುವ ಸೇವೆ ಅನುಕರಣೀಯ.
S N Channabasappa ಈ ಸಮಾರಂಭದಲ್ಲಿ ವೇದಿಕೆಯಲ್ಲಿ ಜಲಪಾತ ಚಲನಚಿತ್ರ ನಿರ್ದೇಶಕರಾದ ಶ್ರೀ ರಮೇಶ ಬೇಗಾರ್ ಹಾಗೂ ಶ್ರೀ ರವೀಂದ್ರ ತುಂಬರಮನೆ,ನಿರ್ದೇಶಕ ಕಾಸರವಳ್ಳಿ,ರವೀಂದ್ರನಾಥ ಐತಾಳ,ಜಿ. ವಿಜಯಕುಮಾರ, ಶಿವಪ್ಪ ಗೌಡ ,ವಿ.ಎನ್.ಭಟ್ಟ ,ವಿನಯ ಮತ್ತು ಮಾಜಿ ಕೊರ್ಪರೇಟರ್ ವಿಶ್ವಾಸ ಉಪಸ್ಥಿತರಿದ್ದರು.
D S Arun ಭಾರತೀಯ ಸಂಸ್ಕೃತಿಯಲ್ಲಿ ವರ್ಷಪೂರ್ಣ ಮಾತೆಯನ್ನ ಪೂಜಿಸುವ ಪರಿಕಲ್ಪನೆಯಿದೆ- ಡಿ.ಎಸ್.ಅರುಣ್
“D S Arun ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ವರ್ಷದ 365 ದಿನಗಳೂ ಮಾತೆಯನ್ನು ಪೂಜಿಸುವ ಆಚರಣೆ,ಮಾತೃದೇವೋಭವ ಎಂಬ ಪರಿಕಲ್ಪನೆಯಿದೆ. ಹುಟ್ಟಿನಿಂದಲೇ ಬರುವ ಇಂಥಹ ಸಂಸ್ಕಾರವು ಸನಾತನ ಧರ್ಮದ ಹಿರಿಮೆಯಾಗಿದೆ “
ಎಂದು ಬ್ರಹ್ಮಾಕುಮಾರಿ ಈ ವಿ ವಿ ದಲ್ಲಿ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಶಾಸಕ ಡಿ ಎಸ್ ಅರುಣ್ ರವರು ನುಡಿದರು.
ಸಹಸ್ರಾರು ವರ್ಷಗಳ ಐತಿಹಾಸಿಕತೆ ನಮ್ಮ ಭಾರತಕಿದೆ. ಇದನ್ನು ಪುನರ್ ಜಾಗೃತಿಗೊಳಿಸಿ ಭಾರತವನ್ನು ಚ್ಯಾರಿತ್ರಿಕ ದೇಶವನ್ನಾಗಿಸುವ ಕೆಲಸವನ್ನು ಈಶ್ವರೀಯ ವಿ ವಿ ಮಾಡುತ್ತಿದೆ. ಸಂಸ್ಥೆಯ ಈ ಸತ್ಕಾರ್ಯದಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದು ಕರೆನೀಡಿದರು.
ರಾಜಯೋಗಿನಿ
ಬಿ ಕೆ ಸ್ನೇಹಕ್ಕನವರು ಮಹಾಶಿವರಾತ್ರಿ ಆಧ್ಯಾತ್ಮಿಕ ಅರ್ಥವನ್ನು ತಿಳಿಸಿ ಮಹಿಳಾ ದಿನಾಚರಣೆಯ ಬಗ್ಗೆ ಜಾಗೃತಿ ಮೂಡಿಸಿದರು.
ಶ್ರೀಮತಿ ಪುಷ್ಪ ಶೆಟ್ಟಿಯವರು
ಸಂಸ್ಥೆಯ ಒಡನಾಟದಲ್ಲಿ ತಮಗಾದ ಅನುಭವವನ್ನು ಹಂಚಿಕೊಳ್ಳುತ್ತಾ “ಆಧ್ಯಾತ್ಮ ಜ್ಞಾನದಿಂದ ನನ್ನ ಜೀವನದಲ್ಲಿ ಸಕಾರಾತ್ಮಕತೆ ಬೆಳೆದು ಸಂಸ್ಕಾರಗಳು ಉತ್ತಮಗೊಂಡವು. ಈಗಲೂ ನಾನು ಯಾವುದೇ ಜವಾಬ್ದಾರಿ ಗಳನ್ನು ಮೊದಲು ಈಶ್ವರನಿಗೆ ಒಪ್ಪಿಸಿ , ನಂತರ ಕರ್ತವ್ಯ ಮಾಡುತ್ತೇನೆ. ಇದರ ಪರಿಣಾಮ ಸಕಾರಾತ್ಮಕವಾಗಿರುವುದು ಎಂದು ಶ್ರೀಮತಿ ಪುಷ್ಪ ಶೆಟ್ಟಿಯವರು ತಿಳಿಸಿದರು.
ಮಹಿಳಾ ದಿನಾಚರಣೆಯ ಶುಭ ಹಾರೈಸಿ ಶ್ರೀಮತಿ ಸುರೇಖಾ ಮುರಳಿಧರ್ ಮಾತನಾಡುತ್ತಾ ಇಂಥಹ ಆಧ್ಯಾತ್ಮಿಕ ತಳಹದಿಯುಳ್ಳ ಸಂಸ್ಥೆಗಳೇ ಭವ್ಯ ಭಾರತದ ಭದ್ರ ಬುನಾದಿಯಾಗಿವೆ. ಇಂಥಹ ಅಮೂಲ್ಯವಾದ ಈಶ್ವರೀಯ ತತ್ವಗಳು ಕೋಟಿ ಕೋಟಿ ಜನರಿಗೆ ಹರಡಲಿ ಎಂದರು.
ಸಹೋದರಿ ಅನ್ನಿಸ್ ಫಾತಿಮಾ , ಅಧ್ಯಕ್ಷರು AMWO ಮಾತನಾಡುತ್ತಾ ಮಹಿಳೆಯ ಪ್ರಗತಿಯೇ ದೇಶದ ಪ್ರಗತಿಯಾಗಿದೆ. ಆಧ್ಯಾತ್ಮಿಕತೆ ಇರುವಲ್ಲಿ ಆನಂದ ,ಶಾಂತಿ , ಪ್ರೇಮದ ಬಾಂಧವ್ಯ ಬೆಸೆಯುವುದು ಎಂದು ಅಭಿಪ್ರಾಯಪಟ್ಟರು.
D S Arun ಸಹೋದರಿ ರಿಜ್ವಾನ್ ಸಿದ್ಧಿಕ್ ಎಲ್ಲ ಧರ್ಮಗಳ ಮೂಲ ಉದ್ದೇಶವೇ ಶಾಂತಿ ಹಾಗೂ ವ್ಯಕ್ತಿಯನ್ನು ಕೆಡುಕುಗಳಿಂದ ಶುದ್ಧೀಕರಿಸಿ ಒಳಿತಿನೆಡೆಗೆ ಮುನ್ನಡೆಸುವುದೇ ಆಧ್ಯಾತ್ಮ ಎಂದರು. ಓರ್ವ ತಾಯಿ ತನ್ನ ಮಕ್ಕಳನ್ನು ಸಕಾರಾತ್ಮಕವಾಗಿ ಬೆಳೆಸಿದರೆ ತನ್ನ ಕುಟುಂಬಕ್ಕೆ ಮಾತ್ರವಲ್ಲದೇ ಇದು ಸಮಾಜಕ್ಕೆ ಮಹಿಳೆಯ ಅತಿದೊಡ್ಡ ಕೊಡುಗೆ ಎಂದರು.
ಶ್ರೀ ಹರ್ಷ ಕಾಮತ್ , ಉದ್ಯಮಿಗಳು ಮಾತನಾಡುತ್ತಾ ಶಂಖುವು ಡೊಂಕಾಗಿದ್ದರೂ ಪರಮಾತ್ಮನ ಕೈ ಸೇರಿದಾಗ ಪಾಂಚಜನ್ಯವಾಗಿ ಮೊಳಗುವಂತೆ ನಾವು ಸಹ ಈಶ್ವರೀಯ ವಿಶ್ವವಿದ್ಯಾಲಯದ ಪರಂಧಾಮವಾಸಿ ಪರಮಾತ್ಮನ ಕೈಯಲ್ಲಿ ಸಿಕ್ಕಾಗ ಡೊಂಕುಗಳು ಶಮನಗೊಂಡು ಪಾಂಚಜನ್ಯವಾಗಿ ಮೊಳಗುತ್ತೇವೆ. ಈ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಮಕ್ಕಳು , ಯುವಪೀಳಿಗೆ ಈ ವೇದಿಕೆಗೆ ಬರಬೇಕು ಎಂದು ಅಭಿಪ್ರಾಯಪಟ್ಟರು.
ರಾಜಯೋಗಿನಿ ಬಿಕೆ ಅನಸೂಯಕ್ಕನವರು ಕಾರ್ಯಕ್ರಮದ ನೇತೃತ್ವ ವಹಿಸಿ ಅಚ್ಚುಕಟ್ಟಾಗಿ ನಿರೂಪಿಸಿದರು..
ಬಿಕೆ ಮಂಜಪ್ಪನವರು ವಂದಿಸಿದರು. ಶಶಿಕಲಾ ಹಾಗು ಭಾಗ್ಯ ಪ್ರಾರ್ಥನ ಗೀತೆಯನ್ನು ಹಾಡಿದರು.ಬಿಕೆ ಅನ್ನಪೂರ್ಣಕ್ಕ ಪ್ರಸಾದ ವಿತರಿಸಿದರು.
Skill Development Training ಕೌಶಲ್ಯಾಭಿವೃದ್ದಿ ತರಬೇತಿ ಪಡೆಯಲು ವಾಲ್ಮೀಕಿ ಪರಿಶಿಷ್ಠ ಪಂಗಡ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ
Skill Development Training ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಿಂದ 2023-24 ನೇ ಸಾಲಿಗೆ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ/ಯುವತಿಯರುಗಳಿಗೆ ಕೌಶಲ್ಯಾಭಿವೃದ್ದಿ ತರಬೇತಿ ನೀಡಲು ಆಫ್ಲೈನ್ ಅರ್ಜಿ ಆಹ್ವಾನಿಸಲಾಗಿದೆ.
Skill Development Training ಎಸ್ಇಡಿಪಿ ಆನ್ ಸೆಲ್ಫ್ ಎಂಪ್ಲಾಯ್ಡ್ ಟೈಲರ್ 60 ದಿನ, ಬೌಟಿಕ್, ಅಸಿಸ್ಟೆಂಟ್ ಹೇರ್ ಥೆರಪಿಸ್ಟ್, ಫ್ಯಾಷನ್ ಡಿಸೈನರ್, ಹಾರ್ಡ್ವೇರ್ ರಿಪೇರ್ ಟೆಕ್ನೀಷಿಯನ್, ಹೇರ್ ಸ್ಟೈಲಿಸ್ಟ್, ಬ್ಯೂಟಿ ಥೆರಪಿಸ್ಟ್, ಡೊಮೆಸ್ಟಿಕ್ ಡಾಟಾಎಂಟ್ರಿ ಆಪರೇಟರ್, ಸೋಲಾರ್ ಪ್ಯಾನೆಲ್ ಇನ್ಸ್ಟಲೇಷನ್ ಆಂಡ್ ಸರ್ವಿಸ್ ತಲಾ 30 ದಿನಗಳ ತರಬೇತಿ ನೀಡಲಾಗುವುದು. ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ : 08182 276776 ನ್ನು ಸಂಪರ್ಕಿಸಬಹುದೆಂದು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
SN Channabasappa ತೆರಿಗೆ ಕಟ್ಟಿದ ನಾಗರಿಕರಿಗೆ ಮೂಲಭೂತ ಸೌಕರ್ಯ ನೀಡಬೇಕು- ಶಾಸಕ ಎಸ್.ಎನ್.ಚನ್ನಬಸಪ್ಪ
SN Channabasappa ಶಿವಮೊಗ್ಗ ಮಹಾನಗರಪಾಲಿಕೆ 5 ನೇ ವಾರ್ಡ್ ಗೆ ನಗರ ಕ್ಷೇತ್ರದ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಭೇಟಿ ನೀಡಿದ್ದರು.
ಹೊಸದಾಗಿ ಮನೆಗಳು ನಿರ್ಮಾಣವಾಗಿರುವ ಬಡಾವಣೆಗಳ ನಾಗರೀಕರ ಕುಂದುಕೊರತೆಗಳನ್ನ ಆಲಿಸಿದರು.
ಮಲ್ಲಿಗೆ ನಗರ ಸಂಯುಕ್ತ ನಾಗರಿಕರ ವೇದಿಕೆಯ ಎಲ್ಲ ಪ್ರಮುಖರೂ ಜನಸ್ನೇಹೀ ಶಾಸಕರಬಳಿ ಸಮಸ್ಯೆಗಳ ಬಗ್ಗೆ ಮುಖತಃ ನಿವೇದಿಸಿದರು.
ಕುಡಿಯುವ ನೀರಿನ ಸಂಪರ್ಕವನ್ನ ಈಗ್ಯೆ ಒಂದು ವರ್ಷವಾದರೂ ನೀಡಿಲ್ಲ. ಜಲಜೀವನ್ ಮಿಷನ್ ಯೋಜನೆಯಲ್ಲಿ
ಕೇವಲ ಪೈಪ್ ಲೈನ್ ಗಳನ್ನ ಮಾತ್ರ ಎಳೆದಿದ್ದಾರೆ. ಒಂದು ವರ್ಷದ ಮೇಲೆ ಎರಡು ತಿಂಗಳಾದರೂ ನೀರು ಬಂದಿಲ್ಲ. ಸ್ವಂತ ಕೊಳವೆಬಾವಿಗಳು ಬತ್ತುತ್ತಿವೆ. ಈ ಗoಭೀರ ಪರಿಸ್ಥಿತಿ ಬಗ್ಗೆ ತಕ್ಷಣ ಕ್ರಮ ಜರುಗಿಸಿ ಎಂದು ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು. ಹಾಜರಿದ್ದ ಕಾರ್ಯಪಾಲಕ ಇಂಜಿನಿಯರ್ ಸಿದ್ದಪ್ಪ ನವರು ಇನ್ನೊಂದು ತಿಂಗಳೊಳಗೆ ಕುಡಿಯುವ ನೀರಿನ ಸಂಪರ್ಕ ನೀಡಲು ಕ್ರಮ ಕೈಗೊಳ್ಳುವುದಾಗಿ ಇಲ್ಲಿಯವರೆಗೆ ನಡೆದ ಕ್ರಮಗಳ ಬಗ್ಗೆ ಶಾಸಕರ ಗಮನಕ್ಕೆ ತಂದರು.
ಲೇಔಟ್ ಗಳಲ್ಲಿ ಕನಿಷ್ಠ ಸಂಖ್ಯೆಯ ಮನೆಗಳ ನಿರ್ಮಾಣವಾಗದೇ ಇದ್ದರೆ ಮೂಲಭೂತ ಸೌಕರ್ಯ ನೀಡಲು ಕಾನೂನು ಅಡ್ಡಿಯಿದೆ ಎಂದು ತಿಳಿಸಿದ ಅಧಿಕಾರಿಗಳ ಮಾತಿಗೆ
ಶಾಸಕರು” ತೆರಿಗೆ ಕಟ್ಟಿದ ಮೇಲೆ ಮೂಲಭೂತ ಸೌಕರ್ಯ ಕೊಡಬೇಕಾದದ್ದು ಕರ್ತವ್ಯ ,ಈ ಬಗ್ಗೆ ಕಮೀಷನರ್ ಬಳಿ ಮಾತಾಡಿದ್ದೇವೆ ಎಂದು ಹೇಳಿದರು.
ವಿದ್ಯುದ್ದೀಪಗಳಿಲ್ಲದೇ ಸಂಜೆಯಾಗುತ್ತಲೇ ರಸ್ತೆಯಲ್ಲಿ ಸಂಚರಿಸಲು ಭಯವಾಗುತ್ತದೆ. ಸರಗಳ್ಳರು, ಮೊಬೈಲ್ ದರೋಡೆ
ಹಾಗೂ ರಸ್ತೆ ಬದಿ ಕುಳಿತು ಮದ್ಯಸೇವಿಸುವವರ
ಹಾವಳಿ,ಅವರು ಬಿಸಾಕುವ ಬಾಟಲಿಗಳು,ಒಡೆದ ಗಾಜಿನ ಚೂರುಗಳು
ಹೀಗೆ ಅದೊಂದು ಮಹಿಳೆಯರು,ಮಕ್ಕಳಿಗೆ ಆತಂಕ,ಅಪಾಯಗಳ ಸನ್ನಿವೇಶ ನಿರ್ಮಾಣವಾಗಿವೆ ಎಂದು ಮಹಿಳೆಯರು ತಮ್ಮ ಆತಂಕವನ್ನು ವ್ಯಕ್ತಪಡಿಸಿದರು.
ಮನೆಗಳ ಕಿಟಕಿ ಸರಳು ಕತ್ತರಿಸಿ ಮನೆಯಲ್ಲಿ ಒಡವೆ,ವಸ್ತುಗಳು ಕಳ್ಳತನವಾಗಿವೆ.
SN Channabasappa ಗೌಳಿಗರ ಬಡಾವಣೆ ಬಳಿ ಎಮ್ ಸ್ಯಾಂಡ್ ತಯಾರಿಯಿಂದ ಬರುವ ಧೂಳು ಹತ್ತಿರದ ಮನೆಗಳಿಗೆ ನುಗ್ಗಿ ಆರೋಗ್ಯಕ್ಕೆ ಹಾನಿಯುಂಟುಮಾಡುತ್ತಿವೆ.
ಕೃಷಿ ಲೇಔಟ್ ಸುತ್ತಮುತ್ತ ಸಮರ್ಪಕವಾಗಿ ವಿದ್ಯುತ್ ಸಂಪರ್ಕವಿಲ್ಲ. ಜಯಕಮಲ್ ಎನ್ ಕ್ಲೇವ್ ನಲ್ಲಿ ಮಾಲೀಕರು ಸರ್ಕಾರದವರು ಜಲಜೀವನ್ ಯೋಜನೆಯಲ್ಲಿ ನೀರುಕೊಡುತ್ತಾರೆ ಎಂದು ಲೇ ಔಟಿನಲ್ಲಿನ ಕುಡಿಯುವ ನೀರಿನ ಸಂಪರ್ಕವನ್ನು ಧ್ವಂಸ ಮಾಡಿದ್ದಾರೆ. ಕೃಷಿ ಲೇಔಟಿನಲ್ಲಿ ತಿರುವುಗಳ ರಸ್ತೆಗಳು ಉತ್ತಮಸ್ಥಿತಿಯಲ್ಲಿಲ್ಲ. ಹೀಗಾಗಿ ಇಲ್ಲಿನ ಎಲ್ಲಾ ಲೇಔಟ್ ಮಾಲೀಕರು
ನಿವಾಸಿಗಳಿಗೆ ಸ್ಪಂದಿಸುತ್ತಿಲ್ಲ ಎಂದು
ನಿವಾಸಿಗಳು ತಮ್ಮ ಅಹವಾಲು ಹೇಳಿಕೊಂಡರು.

ಬೀದಿದೀಪಗಳ ಬಗ್ಗೆ ಮಹಾನಗರಪಾಲಿಕೆಯ ಜೆಇ ಗಣೇಶ್ ಅವರು ಶಾಸಕರು ನೀಡಿದ ಸೂಚನೆಗಳನ್ನ ಗುರುತು ಮಾಡಿಕೊಂಡರು.
ವ್ಯಾಪಕವಾಗಿ ಬೆಳಕು ನೀಡುವ ಎಲ್ ಇಡಿ ಬಲ್ಬ್ ಗಳನ್ನ ಜೋಡಿಸಲು ಶಾಸಕರು ಒತ್ತಿ ಹೇಳಿದರು.
ಪೈಪ್ ಲೈನ್ ಎಳೆಯುವಲ್ಲಿ, ಚರಂಡಿ ನಿರ್ಮಿಸುವಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆಯೂ ಶಾಸಕರು ಅಧಿಕಾರಿಗಳಿಗೆ ನಿವಾಸಿಗಳ ಹಿತ ರಕ್ಷಿಸಲು ಕಿವಿಮಾತು ಹೇಳಿದರು.
ಎಲ್ಲರೂ ಕೂಡ ತಮಗೆ ಎದುರಾಗುವ ದೈನಿಕ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು.
ನಾಗರಿಕರ ಅಹವಾಲು ಆಲಿಸಲು ಆಗಮಿಸಿದ ಜನಸ್ನೇಹಿ ಶಾಸಕ “ಚೆನ್ನಿ” ಅವರು ಸಾರ್ವಜನಿಕರ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಿದರು. ಮೊದಲಲ್ಲಿ ಶಾಸಕರಿಗೆ ಮಲ್ಲಿಗೆ ನಗರ ಸಂಯುಕ್ತ ವೇದಿಕೆಯಿಂದ ಪುಷ್ಪಮಾಲೆ,ಶಾಲು ಹೊದಿಸಿ ಬರಮಾಡಿಕೊಳ್ಳಲಾಯಿತು.
ಪ್ರಮುಖರಾದ ಶ್ರೀಧರ್ ಮಾಸ್ಟರ್, ದೇವರಾಜ್, ಪ್ರಶಾಂತ್ ಅವರು ಇಡೀ ಚಟುವಟಿಕೆಯ ಹಿನ್ನೆಲೆಯಲ್ಲಿ ಶ್ರಮಿಸಿದ ಬಗ್ಗೆ ವಂದನೆ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಕೆ ಲೈವ್ ಪ್ರಧಾನ ಸಂಪಾದಕ ಡಾ.ಸುಧೀಂದ್ರ, ಮೆಸ್ಕಾಂ ನಿವೃತ್ತ ಜೆಇ ಶ್ರೀಧರರಾವ್ ನಾಡಿಗ್. ದಂತವೈದ್ಯ ಡಾ.ಶಿವಾಜಿರಾವ್, ಸಿದ್ಧೇಶ್ವರ ಲೇಔಟ್ ಮಾಲೀಕ ಸತೀಷ್, ಪೊಲೀಸ್ ಸಿಬ್ಬಂದಿ ಸತೀಷ್, ಸಮಾಜ ಸೇವಕಿ ಶ್ರೀಮತಿ ಮಮತಾ ಹೆಗ್ಡೆ, ಜ್ಯೋತಿ ಶ್ರೀಧರರಾವ್,
ಕಲಾ ಶಾಂತಿ ಕುಮಾರ್, ಮಮತಾ ಶಿವಾಜಿರಾವ್,ಮಲ್ಲಿಕಾ ಭಟ್ ಮುಂತಾದವರು ಹಾಜರಿದ್ದು ಅಹವಾಲುಗಳನ್ನ ನಿವೇದಿಸಿದರು.

C. T. Ravi ಎಸ್,ಟಿ.ಸಮುದಾಯಕ್ಕೆ ಪರಿಪೂರ್ಣ ಸವಲತ್ತು ನೀಡಿ ಬೆಂಬಲಿಸಿರುವುದು ಬಿಜೆಪಿ ಮಾತ್ರ- ಸಿ.ಟಿ.ರವಿ
C. T. Ravi ಪರಿಶಿಷ್ಟ ಪಂಗಡ ಸಮುದಾಯದವನ್ನು ತಳಮಟ್ಟದಿಂದ ಎತ್ತಿಹಿಡಿದು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಬಲಿಷ್ಟಗೊಳಿಸುವ ಮೂಲಕ ಜನಾಂಗದ ಬೆಳವಣಿಗೆಗೆ ಪಕ್ಷವು ನಿರಂತರವಾಗಿ ಸ್ಪಂದಿಸುತ್ತಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ನಗರದ ಬಿಜೆಪಿ ಪಾಂಚಜನ್ಯ ಕಚೇರಿಯಲ್ಲಿ ಜಿಲ್ಲಾ ಎಸ್.ಟಿ. ಮೋರ್ಚಾ ಘಟಕದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಪರಿಶಿಷ್ಟ ಪಂಗಡಗಳ ಮುನ್ನೆಡೆ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ರಾಷ್ಟçಪತಿ ಹುದ್ದೆಯನ್ನು ಹಿಂದುಳಿದ ವರ್ಗದ ಮಹಿಳೆಗೆ ಕಲ್ಪಿಸಿ ಸಮುದಾಯಕ್ಕೆ ಬಿಜೆಪಿ ಕೊಡುಗೆ ಏನೆಂದು ತಕ್ಕ ಉತ್ತರ ನೀಡಿರುವುದು ಬಿಜೆಪಿ. ಅದಲ್ಲದೇ ಮದಕರಿ ನಾಯಕ, ಓನಕೆ ಓಬವ್ವ, ಬಿಸ್ಸಾ ಮುಂಡ, ವಾಲ್ಮೀಕಿ ಸೇರಿದಂತೆ ಜನಾಂಗದ ಮಹಾಪುರುಷರ ಜಯಂತಿಗೆ ಅಡಿಪಾಯ ಹಾಕಿರುವುದು ಭಾರತೀಯ ಜನತಾ ಪಾರ್ಟಿ ಎಂದು ಬಣ್ಣಿಸಿದರು.
ಜನಾಂಗದ ಮಕ್ಕಳ ವಿದ್ಯಾಭ್ಯಾಸ ಹಾಗೂ ಉದ್ಯೋಗಕ್ಕೆ ಶೇ.೩ ರಷ್ಟಿದ್ದ ಮೀಸಲಾತಿಯನ್ನು ಶೇ.೭ಕ್ಕೆ ಏರಿಕೆ ಗೊಳಿಸಿದೆ. ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಧ್ವನಿಯಾಗಿ ನಿಲ್ಲುವ ಮೂಲಕ ಸಮುದಾಯವನ್ನು ಮುನ್ನೆಡೆಗೆ ತರುವಲ್ಲಿ ಬಹಳಷ್ಟು ಶ್ರಮವಹಿಸಿದ್ದು ಹಲವಾರು ª ಜನಾಂಗದ ಮುಖಂಡರುಗಳಿಗೆ ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ ದೊರಕಿಸಿ ಕಾಳಜಿ ತೋರಿದೆ ಎಂದರು.
ರಾಜ್ಯದಲ್ಲಿ ಹಲವಾರು ಮಂದಿ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡು ಕೇವಲ ಜಾತಿ ರಾಜಕೀಯ ಮಾಡಿವೆ. ಆದರೆ ಎಸ್.ಟಿ. ಸಮುದಾಯಕ್ಕೆ ಪರಿಪೂರ್ಣ ಸವಲತ್ತು ಒದಗಿಸಿ ಬೆಂಬಲಿಸಿರುವುದು ಬಿಜೆಪಿ ಮಾತ್ರ ಎಂದ ಅವರು ಕಾಂಗ್ರೆಸ್ ರಾಮನ ಇತಿಹಾಸವನ್ನೇ ಕಾಲ್ಪನಿಕ ಎನ್ನುತ್ತಿವೆ. ಹಾಗಾದರೆ ರಾಮಾಯಣ ರಚಿಸಿದ ವಾಲ್ಮೀಕಿಯನ್ನು ಕಾಲ್ಪನಿಕ ಎನ್ನುವ ಮನಸ್ಥಿತಿ ಬರುವುದರಲ್ಲಿ ಸಂಶಯವಿಲ್ಲ ಎಂದರು.
ಪ್ರಸ್ತುತ ಕಾಂಗ್ರೆಸ್ ಪಕ್ಷದವರು ಅಧಿಕಾರ ಆಸೆಗಾಗಿ ಮಾತ್ರ ಹಿಂದುಳಿದ ವರ್ಗಕ್ಕೆ ಬೆಂಬಲಿಸುವ ನಾಟಕ ವಾಡುತ್ತಿದೆಯೇ ಹೊರತು ನೈಜವಾಗಿ ಸ್ಪಂದಿಸುವ ಗುಣ ಅವರಲ್ಲಿಲ್ಲ. ಮೋದಿ ನೇತೃತ್ವದ ಕೇಂದ್ರ ಹಾಗೂ ಈ ಹಿಂದೆ ಅಧಿಕಾರ ನಿರ್ವಹಿಸಿದ ಬಿಜೆಪಿ ಸರ್ಕಾರ ಕೊಡುಗೆಗಳೇ ಎಸ್.ಟಿ. ಸಮುದಾಯಕ್ಕೆ ಆರ್ಥಿಕವಾಗಿ ಶಕ್ತಿ ನೀಡಿ ರುವುದು ಸ್ಪಷ್ಟವಾಗಿದೆ ಎಂದರು.
ವಿಜಯನಗರ ಸಾಮ್ರಾಜ್ಯ, ಚಿತ್ರದ ಕಲ್ಲಿನ ಕೋಟೆ ಸೇರಿದಂತೆ ಇನ್ನಿತರೆ ರಾಜಮಹಾರಾಜರ ಆಧಾರವಾಗಿ ವಾಲ್ಮೀಕಿ ಸಮಾಜ ನಿಂತಿತ್ತು. ಪರಿಶಿಷ್ಟ ಪಂಗಡಗಳ ಶೌರ್ಯ ಪರಂಪರೆಯನ್ನು ಬೇಡರ ಕಣ್ಣಪ್ಪ, ಬಿರ್ಸಾಮುಂಡಾ, ಸುರಪುರದ ವೆಂಕಟಪ್ಪ ನಾಯಕ ಹಾಗೂ ಸಿಂಧೂರ ಲಕ್ಷö್ಮಣ ಸಾರಿದ ಸರ್ವಶ್ರೇಷ್ಟರು ಎಂದು ತಿಳಿಸಿದರು.
C. T. Ravi ಬಹುತೇಕ ಪರಿಶಿಷ್ಟ ಜಾತಿ, ಪಂಗಡಕ್ಕೆ ಗುರುತಿಸಿ ಪ್ರೋತ್ಸಾಹಿಸಿರುವ ಬಿಜೆಪಿಗೆ ಮುಂದಿನ ಚುನಾವಣೆಯ ಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಕೆಲಸ ನಿಮ್ಮಿಂದಾಗಬೇಕಿದೆ. ದೇಶದ ರಕ್ಷಣೆ ಹಾಗೂ ಭದ್ರತೆ ಹಿತದೃಷ್ಟಿಯಿಂದ ಒಂದು ಹೆಜ್ಜೆ ಮುಂದಿಟ್ಟು ನೀವು ಸೇರಿದಂತೆ ನಿಮ್ಮವರನ್ನು ಮನವರಿಸಿ ನರೇಂದ್ರ ಮೋದಿಗೆ ಮತ್ತೊಮ್ಮೆ ಪ್ರಧಾನಿ ಯಾಗಿಸಲು ನಿರ್ಭೀತರಾಗಿ ಕೈಜೋಡಿಸಬೇಕು ಎಂದರು.
ದೇಶದ ಆರ್ಥಿಕ ಭದ್ರತೆ ಮೆಚ್ಚುಗೆ ವ್ಯಕ್ತಪಡಿಸಿ ಮೋದಿಗೆ ಇಡೀ ಪ್ರಪಂಚದ ದೊಡ್ಡ ದೊಡ್ಡ ರಾಷ್ಟçದ ನಾಯ ಕರುಗಳು ಕಳಕಳಿ ವ್ಯಕ್ತಪಡಿಸಿದೆ. ಅಲ್ಲದೇ ಉಕ್ರೇನ್, ಸಿರಿಯಾ, ಪಾಕಿಸ್ತಾನ ಹಾಗೂ ಇಸ್ರೇಲ್ನಲ್ಲಿ ಸಿಲುಕಿರುವ ಭಾ ರತೀಯರನ್ನು ಸುರಕ್ಷಿತವಾಗಿ ತವರಿನತ್ತ್ತ ಕರೆತಂದಿರುವುದು ಮೋದಿಬಿಟ್ಟರೆ ಬರ್ಯಾವ ನಾಯಕರಿಂದ ಅಸಾಧ್ಯ. ಹೀಗಾಗಿ ಮೋದಿ ಬೆಂಬಲಿಸಿ ದೇಶ ಬೆಳೆಸಬೇಕಿದೆ ಎಂದರು.
ಮಾಜಿ ಗೃಹ ಸಚಿವ ಆರಗಜ್ಞಾನೇಂದ್ರ ಮಾತನಾಡಿ ಬಡವರು ಹಾಗೂ ಹಿಂದುಳಿದ ವರ್ಗದವರು ಚಿಕಿತ್ಸಾ ಸಮಯದಲ್ಲಿ ಹೆಚ್ಚು ಹಣಕಾಸು ಕಟ್ಟಲಾಗದೇ ಸಾವೇ ಕೊನೆಯಘಟ್ಟ ಅಂದುಕೊ0ಡಿದ್ದರು. ಆದರೆ ಕೇಂದ್ರ ಸರ್ಕಾ ರ ದೇಶದ ಪ್ರಜೆಗಳಿಗೆ 5ಲಕ್ಷ ರೂ. ಇನ್ಸೂರೆನ್ಸ್ ಕಲ್ಪಿಸುವ ಮೂಲಕ ಬದುಕಲು ಅವಕಾಶ ಮಾಡಿಕೊಟ್ಟವರನ್ನು ಸ್ಮರಿಸಬೇಕು ಎಂದರು.
ಕೇOದ್ರ ಸರ್ಕಾರದ ಜನಪರ ಯೋಜನೆಗಳು ದೇಶದ ಪ್ರತಿಯೊಂದು ಸಮಾಜಕ್ಕೆ ಸರ್ವಸಮಾನವಾಗಿ ಒದಗಿಸುತ್ತಿದೆ. ಮೋದಿ ಗ್ಯಾರಂಟಿಗಳೇ ಮುಂದಿನ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ಸಾಧ್ಯ. ಹೀಗಾಗಿ ಕಾ ರ್ಯಕರ್ತರು ಎಚ್ಚೆತ್ತುಕೊಂಡು ಲೋಕಸಭಾ ಸಮರದಲ್ಲಿ ಯಾವುದೇ ಆಮಿಷಗಳಿಗೆ ಒಳಗಾಗದೇ ದೇಶದ ಬೆಳವ ಣಿಗೆ ಕಾರ್ಯೋನ್ಮುಖರಾಗಿ ದುಡಿಯಬೇಕು ಎಂದು ಸಲಹೆ ಮಾಡಿದರು.
ರಾಜ್ಯ ಎಸ್.ಟಿ. ಮೋರ್ಚಾ ಘಟಕದ ಅಧ್ಯಕ್ಷ ಬಂಗಾರು ಹನುಮಂತು ಮಾತನಾಡಿ ರಾಜ್ಯಾದ್ಯಂತ ಅತ್ಯಂತ ಹಿಂದುಳಿದ ಸಮುದಾಯಕ್ಕೆ ರಾಜಕೀಯವಾಗಿ ಶಕ್ತಿ ತುಂಬಿದ ಪಕ್ಷ ಬಿಜೆಪಿ. ಸರ್ಕಾರ ರಚನೆಗೊಂಡ ಪ್ರತಿ ಸಾರಿಯು ಒಂದಲ್ಲೊAದು ಯೋಜನೆಗಳನ್ನು ಜನಾಂಗಕ್ಕೆ ರೂಪಿಸಿ ಏಳಿಗೆಗೆ ಸಹಕರಿಸುತ್ತಿರುವುದು ಮರೆಯಲಾಗದ ವಿಷಯ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಗ್ಯಾರಂಟಿ, ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ಮಾಜಿ ಶಾಸಕ ಸಿ.ಟಿ.ರವಿಯವರ ಜನಾಂಗದ ಮೇಲಿನ ಸಹಕಾರದಿಂದ ಇಂದು ಉನ್ನತ ಹುದ್ದೆ ಅಲಂಕರಿಸಲು ಕಾರಣವಾಗಿದೆ. ಕ್ಷೇತ್ರದಲ್ಲೂ ವಾಲ್ಮೀಕಿ ಭವನ ನಿರ್ಮಿಸಿ ಸಮುದಾಯಕ್ಕೆ ಪೂರಕವಾಗಿರುವ ರವಿ ಯವರ ಕಾಳಜಿ ಅವಿಸ್ಮರಣೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಟಿ. ಮೋರ್ಚಾ ಘಟಕದ ಜಿಲ್ಲಾಧ್ಯಕ್ಷ ನಂದೀಶ್ ಮದಕರಿ ಪರಿಶಿಷ್ಟ ಜನಾಂಗದ ಮಹಾಪುರುಷರ ಹಿನ್ನೆಲೆಯನ್ನು ಅರಿತು ರಾಜ್ಯದಲ್ಲಿ ಅಧಿಕೃತ ಆಚರಣೆಗೆ ಸ್ಪಂದಿಸಿದ ಬಿಜೆಪಿಗೆ ಬೆಂಬಲಿಸಬೇಕು. ಜಿಲ್ಲೆಯ ಜನಾಂಗಕ್ಕೂ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಲು ಸಹಕರಿಸಿರುವ ಅನುಕೂಲ ಮಾಡಿಕೊಟ್ಟಿರುವ ಮುಖಂಡರುಗಳಿಗೆ ಕೃತಜ್ಞತೆ ಸಲ್ಲಿಸಿದರು.
ಇದೇ ವೇಳೆ ಎಸ್.ಟಿ.ಮೋರ್ಚಾ ಜಿಲ್ಲಾಧ್ಯಕ್ಷ ನಂದೀಶ್ ಮದಕರಿ ಅವರಿಗೆ ರಾಜ್ಯಾಧ್ಯಕ್ಷ ಬಂಗಾರ ಹನು ಮಂತ ಪಕ್ಷದ ಬಾವುಟವನ್ನು ನೀಡುವ ಮೂಲಕ ಜವಾಬ್ದಾರಿಯನ್ನು ವಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಡಾ. ನರೇಂದ್ರ, ರಾಜ್ಯ ಎಸ್.ಟಿ. ಮೋರ್ಚಾ ಘಟಕದ ಉಪಾಧ್ಯಕ್ಷರಾದ ಗೋಪಾಲಕೃಷ್ಣ, ಅನಿಲ್ಕುಮಾರ್, ಕಾರ್ಯಕಾರಣಿ ಸಮಿತಿ ಸದಸ್ಯ ರಾಜು ಆಗರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಎಂ.ಮಧುಕುಮಾರ್, ಎಂ.ಟಿ.ಶOಕರ್, ಕಾರ್ಯದರ್ಶಿ ನಾಗರಾಜು, ನಗರಾಧ್ಯಕ್ಷ ಪ್ರದೀಪ್, ಮುಖಂಡರುಗಳಾದ ದೀಪಕ್ದೊಡ್ಡಯ್ಯ, ಸುನೀಲ್, ಜಗ ದೀಶ್, ಜ್ಞಾನಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
International Women’s Day ಆತ್ಮ ನಿರ್ಭರ ಭಾರತದ ಹಿರಿಮೆಗೆ ಸಹಕಾರಿಗಳಾಗಿರಿ- ಶ್ರೀರಂಜಿನಿ ದತ್ತಾತ್ರಿ
International Women’s Day ಭಾವಸಾರ್ ವಿಜನ್ ಇಂಡಿಯಾ ಶಿವಮೊಗ್ಗ ಪ್ರೇರಣಾದಿಂದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಜಿಲ್ಲಾ ಕಾರಾಗೃಹ, ಶಿವಮೊಗ್ಗದ ಮಹಿಳಾ ಬಂದಿಖಾನೆಯ ನಿವಾಸಿಗಳಿಗೆ ಸ್ವಾವಲಂಬಿ ಬದುಕು ಹಾಗೂ ಕೌಶಲ್ಯ ಭರಿತ ಜೀವನ ಕುರಿತು ಕಾರ್ಯಕ್ರಮ ಏರ್ಪಡಿಸಿದ್ದು , ಹಲವು ಆಟೋಟ ಸ್ಪರ್ಧೆಗಳನ್ನು ನಡೆಸಿ ಎಲ್ಲರಿಗೂ ಬಹುಮಾನ ಹಾಗೂ ಸಿಹಿ ವಿತರಿಸಿ, ಬಂದೀಖಾನೆಯ ಅಸಿಸ್ಟೆಂಟ್ ಜೈಲರ್ ಶಾಂತಮ್ಮ ನವರು ಹಾಗೂ ಮಹಿಳಾ ಸಿಬ್ಬಂದಿಗಳನ್ನು ಗೌರವಿಸಲಾಯಿತಿ.
ಜೀವನದ ಕೆಲವು ಸಂದರ್ಭಗಳಲ್ಲಿ ನಮಗರಿವಿಲ್ಲದೆ ಅಪರಾಧಗಳನ್ನು ಎಸಗಿ ಶಿಕ್ಷೆಗೆ ಒಳಪಡುತ್ತೇವೆ. ಆದರೆ ಈ ಅವಧಿಯ ದಿನಗಳನ್ನು ಬದುಕಿನ ಬದಲಾವಣೆಯ ಹಾದಿ ಎಂದು ಪರಿಗಣಿಸಿ, ಜೈಲ್ ನಿವಾಸಿಗಳಿಗೆ ವಿವಿಧ ಕೌಶಲ್ಯಗಳನ್ನು ಹಲವು ಎನ್.ಜಿ.ಓ. ಗಳಿಂದ ಏರ್ಪಡಿಸಿ ನಿವಾಸಿಗಳ ಮಾನಸಿಕ ಸ್ಥಿಮಿತ, ಏಕಾಗ್ರತೆ ಹಾಗೂ ಅವರ ಆರ್ಥಿಕ ಅಭಿವೃದ್ಧಿಗೂ ಸಹಕಾರ ನೀಡುವ ಹಲವು ಯೋಜನೆಗಳನ್ನು ಶಿವಮೊಗ್ಗ ಜಿಲ್ಲಾ ಬಂದಿಖಾನೆ ಅಳವಡಿಸಿರುವುದು ನಿಜಕ್ಕೂ ಅಭಿನಂದನೀಯ. ನೀಡುವ ಅವಕಾಶವನ್ನು ಸದುಪಯೋಗ ಮಾಡಿಕೊಂಡು, ಶಿಕ್ಷೆಯ ಅವಧಿ ಮುಗಿದು ಹೊರಬಂದ ನಂತರ ಗುಡಿ ಕೈಗಾರಿಕೆ,ಮಡಿಕೆ, ಕುಡಿಕೆ, ಹೂದಾನಿ, ಬಟ್ಟೆ ನೇಯ್ಗೆ, ಬ್ಯಾಗ್ ಹೆಣಿಕೆ, ಬ್ಯೂಟಿಪಾರ್ಲರ್, ವೇಷಭೂಷಣಗಳ ಮಾರಾಟ ಮಳಿಗೆ ಹೀಗೆ ಹಲವು ಕೌಶಲ್ಯ ಕಲೆಗಳ ಯೋಜನೆಗಳನ್ನು ಗೃಹ ಕೈಗಾರಿಕೆಗಳ ಮೂಲಕ ಅಳವಡಿಸಿಕೊಳ್ಳಿ. ವಿಶೇಷವಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ಈ ಸಂಬಂಧ ನೀಡುವ ಸವಲತ್ತುಗಳನ್ನು ಬಳಸಿಕೊಂಡು ಸ್ವಾವಲಂಬಿ ಬದುಕಿನತ್ತ ಮುನ್ನಡೆಯಬಹುದು. ಇದೊಂದು ಪರಿವರ್ತನೆಯ ಆಲಯವೆಂದು ಭಾವಿಸಿ. ಬದುಕಿನ ಪುಟಗಳು ನಮ್ಮದು ಆ ಪುಟಗಳನ್ನು ಸುಂದರ, ಸಂಭ್ರಮ ಆಗಿಸಿಕೊಳ್ಳು ಜವಾಬ್ದಾರಿ ನಮ್ಮ ಹಣೆಬರಹ ರೂಪಿಸುವ ಹೊಣೆ ನಮ್ಮದೆ ಎಂಬ ಹಲವು ವಿಚಾರಗಳನ್ನು ಕಥೆಗಳ ಮೂಲಕ ವಿವರಿಸಿದರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀರಂಜಿನಿ ದತ್ತಾತ್ರಿ ಯವರು.
International Women’s Day ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡುತ್ತಾ ಬಟ್ಟೆನೇಯ್ಗೆ, ಮಣ್ಣಿನಿಂದ ವಸ್ತುಗಳ ತಯಾರಿಕೆ, ಹೂಗಿಡಗಳ ನರ್ಸರಿ, ಬುಟ್ಟಿ ಹೆಣೆಯುವುದು, ಪರಿಸರ ಸ್ನೇಹಿ ವಸ್ತುಗಳಿಂದ ನೂರಾರು ವಸ್ತುಗಳನ್ನು ತಯಾರಿಸುವ ಮೂಲಕ ಆರ್ಥಿಕ ಅಭಿವೃದ್ಧಿಗೆ ಅನುಕೂಲ ಮಾಡಿಕೊಳ್ಳುವ ಹಲವು ಯೋಜನೆಗಳನ್ನು ಬಳಸಿಕೊಂಡು ಸ್ವಾವಲಂಬಿ ಬದುಕನ್ನು ಮುನ್ನಡೆಸಲು ಸಿದ್ದರಾಗಿರಿ. ಆತ್ಮ ನಿರ್ಭರ ಭಾರತದ ಹಿರಿಮೆಗೆ ಸಹಕಾರಿಗಳಾಗಿರಿ, ಅತ್ಯುತ್ತಮ ಕೌಶಲ್ಯ ಕಲಿಕೆಗೂ ಅವಕಾಶ ನೀಡುವ ಈ ಸಮಯದ ಸದುಪಯೋಗ ಮಾಡಿಕೊಳ್ಳುವ ಧೃಡತೆ ನಿಮ್ಮೊಳಗಿರಲಿ ಎಂದು
ಶ್ರೀರಂಜಿನಿ ದತ್ತಾತ್ರಿ, ಲೇಖಕಿ , ರಾಜ್ಯ ಮಹಿಳಾ ಪ್ರತಿನಿಧಿ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
ಇವರು ಮುಖ್ಯ ಅತಿಥಿಗಳ ಮಾತುಗಳನಾಡಿದರು.
ಶಿವಮೊಗ್ಗ ಭಾವಸಾರ್ ವಿಜನ್ ಪ್ರೇರಣದ ಅಧ್ಯಕ್ಷರಾದ ಶ್ರೀಮತಿ ಉಮಾ ವೆಂಕಟೇಶ್ ರವರು ಕೌಶಲ್ಯ ಕಲಿಕೆ ಪ್ರತಿಯೊಬ್ಬರಲ್ಲು ಸಹಜವಾಗಿ ಇರುತದ್ದು ಅದನ್ನು ಅಳವಡಿಸಿಕೊಳ್ಳುವ ಚಿತ್ತ ಮತ್ತು ಆತ್ಮವಿಶ್ವಾಸ ನಾವು ಹೊಂದಬೇಕು ಎಂದರು. ಮನಸ್ಸಿದ್ದರೆ ಮಾರ್ಗ ಎಂದರಿತು ನಡೆಯಿರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳನ್ನು ಮಹಿಳಾ ಬಂದಿಖಾನೆಯ ಅಸಿಸ್ಟೆಂಟ್ ಜೈಲರ್ ಶ್ರೀಮತಿ ಶಾಂತಾರವರು ನೆರವೇರಿಸಿ, ಸ್ವಾವಲಂಬಿ ಬದುಕಿಗೆ ಬೇಕಾದಷ್ಟು ಮಾರ್ಗಗಳನ್ನು ನಮ್ಮ ಬಂದೀಖಾನೆ ನಿತ್ಯ ಕಲಿಸುತ್ತಲೇ ಇದೆ. ಸಮಾಜಕ್ಕೆ, ಕುಟುಂಬಕ್ಕೆ ಆಧಾರವಾಗುವ ಜೀವನ ಕಲಿಕೆ ಹಾಗೂ ಆರ್ಥಿಕ ಸದೃಢ ಹೊಂದಲು ಬೇಕಾದ ಕೌಶಲ್ಯ ಕಲಿಕೆಗಳನ್ನು ಮತ್ತಷ್ಟು ಗಮನವಿಟ್ಟು ಕಲಿಯಿರಿ. ಜನಜೀವನ ದ ಪ್ರತಿ ಪುಟಗಳನ್ನು ಅತ್ಯುತ್ತಮ ಆಗಿಸಿಕೊಳ್ಳುವ ಜವಾಬ್ದಾರಿ ನಮ್ಮದೇ ಎಂದು ಹಿತ ನುಡಿದರು.
ಭಾವಸಾರ್ ವಿಜನ್ ಇಂಡಿಯಾ ಶಿವಮೊಗ್ಗ ಪ್ರೇರಣಾ.
ಕಾರ್ಯದರ್ಶಿ ಕವಿತ ಹರೀಶ್, ಸಹ ಕಾರ್ಯದರ್ಶಿ ಸುಮಾ ನವಲೆ, ನಿರ್ದೆಶಕರಾದ ಸ್ನೇಹ ಪ್ರಶಾಂತ್, ವೀಣಾ ನಂಜುಂಡ, ವನಿತಾ ನವಲೆ, ಕಾವ್ಯ ಅವಿನಾಶ್,
ಇಂದು ನವಲೆ, ದೀಪಿಕಾ ಹರೀಶ್ ಮೊದಲಾದವರು ವಿವಿಧ ಆಟೋಟ ಸ್ಪರ್ಧೆಗಳನ್ನು ಆಡಿಸಿ ಬಹುಮಾನ ಮತ್ತು ಸಿಹಿ ವಿತರಿಸಿದರು.
ಬಂದೀಖಾನೆಯ ಶಾಂತಾರವರು ಹಾಗೂ ಎಲ್ಲ ಸಿಬ್ಬಂದಿಯವರಿಗೂ ಮಹಿಳಾ ದಿನಾಚರಣೆ ಅಂಗವಾಗಿ ಗೌರವಿಸಲಾಯಿತು.
B. Y. Raghavendra ಕಾಂತೇಶ್ ಗೆ ಹಾವೇರಿ ಟಿಕೆಟ್ ಗೆ ಪ್ರಯತ್ನಿಸುವೆ- ಬಿಎಸ್ ವೈ
B. Y. Raghavendra ಭಾನುವಾರದಂದು ನಡೆಯಬೇಕಾಗಿದ್ದ ದೆಹಲಿಯಲ್ಲಿ ಚುನಾವಣಾ ಸಮಿತಿ ಸಭೆ ಮುಂದೂಡಿಕೆ ಆಗಿದೆ. ಆದರಿಂದ ನಾನು ದೆಹಲಿಗೆ ಹೋಗುತ್ತಿಲ್ಲ. ಇದರಿಂದ ನಾಳೆ ಶಿವಮೊಗ್ಗದಲ್ಲೇ ಚುನಾವಣೆ ತಯಾರಿ ನಡೆಸುತ್ತೇನೆ ಎಂದು ಬಿಜೆಪಿ ಕೇಂದ್ರೀಯ ಸಂಸದಿಯ ಮಂಡಳಿಯ ಸದಸ್ಯ ಬಿ.ಎಸ್.ಯಡಿಯೂರಪ್ಪ ಶಿವಮೊಗ್ಗದಲ್ಲಿ ತಿಳಿಸಿದ್ದಾರೆ.
ಲೋಕಸಭ ಚುನಾವಣೆ ಬಿಜೆಪಿಗೆ ವಾತಾವರಣ ತುಂಬಾ ಚೆನ್ನಾಗಿದೆ. 28 ಲೋಕಸಭ ಕ್ಷೇತ್ರದಲ್ಲಿ 25 ರಲ್ಲಿ ಗೆಲ್ಲಲು ಶ್ರಮ ಹಾಕುತ್ತೇವೆ. ಅದರಲ್ಲಿ ಯಶಸ್ವಿ ಆಗುವ ವಿಶ್ವಾಸವಿದೆ. ರಾಜಕೀಯ ಪಕ್ಷದಲ್ಲಿ ಸ್ವಾಭಾವಿಕ ಟಿಕೆಟ್ ಹಂಚಿಕೆಗೂ ಮುನ್ನ ಗೊಂದಲ ಇರುತ್ತದೆ. ಒಂದು ಸಲ ಪಟ್ಟಿ ಬಿಡುಗಡೆಯಾದ ಮೇಲೆ ಎಲ್ಲರೂ ಹೊಂದಿಕೊಂಡು ಹೋಗುತ್ತೇವೆ. ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನ ಮಂತ್ರಿ ಆಗಬೇಕು ಎಂಬುದು ನಮ್ಮ ಬಯಕೆ.
B. Y. Raghavendra ಇದರಿಂದ ಯಾರೂ ಸಹ ಟಿಕೆಟ್ ಹಂಚಿಕೆ ನಂತರ ವಿರೋಧ ವ್ಯಕ್ತಪಡಿಸುವುದಿಲ್ಲ. ಯಾರಾದರೂ ಬೇಸರ ವ್ಯಕ್ತಪಡಿಸಿದರೆ ಅದನ್ನು ಸರಿದೂಗಿಸುತ್ತೇವೆ. ಕಾಂತೇಶ್ ರವರಿಗೆ ಟಿಕೆಟ್ ಕೊಡಿಸಲು ಪ್ರಯತ್ನ ಮಾಡ್ತಾ ಇದ್ದೇವೆ. ಮತ್ತೊಮ್ಮೆ ದೆಹಲಿಗೆ ಹೋಗಿ ಪ್ರಯತ್ನ ಮುಂದುವರೆಸುತ್ತೇನೆ. ನನ್ನ ಕಡೆಯಿಂದ ಪ್ರಮಾಣಿಕ ಪಯತ್ನ ಮಾಡುತ್ತೇನೆ. ಟಿಕೆಟ್ ಯಾರಿಗೆ ನೀಡಬೇಕೆಂದು ಚುನಾವಣಾ ಸಮಿತಿ ತೀರ್ಮಾನ ಮಾಡಲಿದೆ ಎಂದರು.
Miss World Award ಜೆಕ್ ಯುವತಿಗೆ ವಿಶ್ವಸುಂದರಿ ಪಟ್ಟ ಭಾರತದ ಸಿನಿ ಶೆಟ್ಟಿಗೆ 8 ನೇ ಸ್ಥಾನ
Miss World Award ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾ 2024ನೇ ಆವೃತ್ತಿಯ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.ಮುಂಬೈನ ಜಿಯೋ ವರ್ಲ್ಡ್ ಕನ್ವೆಷನ್ ಸೆಂಟರ್ ನಲ್ಲಿ ಶನಿವಾರ ನಡೆದ ಸ್ಪರ್ಧೆಯಲ್ಲಿ ಅವರು 71ನೇ ವಿಶ್ವಸುಂದರಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಭಾರತದಿಂದ ಸ್ಪರ್ಧಿಸಿದ್ದ ಸಿನಿ ಶೆಟ್ಟಿ 8ನೇ ಸ್ಥಾನಕ್ಕೆ ತೃಪ್ತಿಪಟ್ಟುವಂತಾಯಿತು. ಮಿಸ್ ಲೆಬನಾನ್ ಯಾಸ್ಮಿನಾ ಜೈಟೌನ್ ಮೊದಲ ರನ್ನರ್ ಅಪ್ ಆದರು. ಕಳೆದ ಬಾರಿಯ ವಿಜೇತೆ ಪೋಲೆಡ್ ನ ಕರೋಲಿನಾ ಬಿಲಾವ್ಸ್ಕಾ ಅವರು ತಮ್ಮ ಉತ್ತರಾಧಿಕಾರಿ ಕ್ರಿಸ್ಟಿನಾಗೆ ವಿಶ್ವ ಸುಂದರಿ ಕಿರೀಟವನ್ನು ತೊಡಿಸಿದರು.
ಕ್ರಿಸ್ಟಿನಾ ಪಿಸ್ಕೋವಾ
ಭಾರತದಲ್ಲಿ ಫೆಬ್ರವರಿ 18 ರಿಂದ ಮಾರ್ಚ್ 9 ರವರೆಗೆ ವಿಶ್ವ ಸುಂದರಿ ಸ್ಪರ್ಧೆ!
ಅಧಿಕೃತ ವೆಬ್ಸೈಟ್ನ ಪ್ರಕಾರ, ಪಿಸ್ಕೋವಾ ಅವರು ಕಾನೂನು ಮತ್ತು ವ್ಯವಹಾರ ಆಡಳಿತದಲ್ಲಿ ಪ್ರತ್ಯೇಕ ಪದವಿಗಳನ್ನು ಪಡೆಯುತ್ತಿದ್ದಾರೆ. 20ರ ಹರೆಯದಲ್ಲಿರುವ ಪಿಸ್ಕೋವಾ ಅವರು ಕ್ರಿಸ್ಟಿನಾ ಪಿಸ್ಕೊ ಫೌಂಡೇಶನ್ನ ಸಂಸ್ಥಾಪಕಿಯೂ ಹೌದು. ಇಂಗ್ಲಿಷ್, ಪೋಲಿಷ್, ಸ್ಲೋವಾಕ್ ಮತ್ತು ಜರ್ಮನ್ ಭಾಷೆಗಳಲ್ಲಿ ನಿರರ್ಗಳವಾಗಿರುವ ಮಾಡೆಲ್, ಶಿಕ್ಷಣದ ಮೂಲಕ ಸುಸ್ಥಿರ ಅಭಿವೃದ್ಧಿಗಾಗಿ ಪ್ರತಿಪಾದಕರಾಗಿದ್ದಾರೆ.
28 ವರ್ಷಗಳ ನಂತರ ಭಾರತ ವಿಶ್ವ ಸುಂದರಿ ಸ್ಪರ್ಧೆ ಆಯೋಜಿಸಿತ್ತು. ಭಾರತ ಇದುವರೆಗೆ 6 ವಿಶ್ವ ಸುಂದರಿ ಪಟ್ಟ ಗಳಿಸಿದೆ. ಮೊದಲ Miss World Award ಬಾರಿಗೆ ಮೊದಲ ಬಾರಿಗೆ ರೀಟಾ ಫರಿಯಾ 1966ರಲ್ಲಿ ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದರು. ನಂತರ ಐಶ್ವರ್ಯಾ ರೈ ಬಚ್ಚನ್ (1994), ಡಯಾನಾ ಹೇಡನ್ (1997), ಯುಕ್ತಾ ಮುಖಿ (1999), ಪ್ರಿಯಾಂಕಾ ಚೋಪ್ರಾ (2000) ಮತ್ತು ಇತ್ತೀಚೆಗೆ ಮಾನುಷಿ ಚಿಲ್ಲರ್ (2017) ವಿಶ್ವ ಸುಂದರಿ ಪಟ್ಟವನ್ನು ಅಲಂಕರಿಸಿದ್ದಾರೆ.
Sri Shivaganga Yoga Kendra ಶಿವಗಂಗಾ ಯೋಗ ಕೇಂದ್ರದಲ್ಲಿ ವಿಶೇಷ ಮಹಾಶಿವರಾತ್ರಿ
Sri Shivaganga Yoga Kendra ಮಹಾಶಿವರಾತ್ರಿ ಪ್ರಯುಕ್ತ ವಿನೋಬನಗರದ ಕಲ್ಲಳ್ಳಿಯ ಶ್ರೀ ಶಿವಗಂಗಾ ಯೋಗಕೇಂದ್ರದಲ್ಲಿ ಶಿವನಿಗೆ ವಿಶೇಷ ಪ್ರಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.
ಶಿವಗಂಗಾ ಯೋಗಕೇಂದ್ರದ ಎಲ್ಲ ಶಾಖೆಗಳ ಯೋಗಪಟುಗಳು ಭಾಗವಹಿಸಿ ಭಜನೆ ಹಾಗೂ ಭಕ್ತಿ ಗೀತೆಗಳನ್ನು ಹಾಡಿದರು.
ಶಿವಗಂಗಾ ಯೋಗಕೇಂದ್ರದ ಕಾರ್ಯದರ್ಶಿ ಎಸ್.ಎಸ್.ಜ್ಯೋತಿಪ್ರಕಾಶ್ ಮಾತನಾಡಿ, ನಾಡಿನಾದ್ಯಂತ ಮಹಾ ಶಿವರಾತ್ರಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ನಮ್ಮ ಯೋಗ ಕೇಂದ್ರದಲ್ಲಿ ಶಿವನ ಪ್ರತಿಮೆ ಸ್ಥಾಪಿಸಿದ್ದು, ಎರಡನೆಯ ವರ್ಷದ ಮಹಾಶಿವರಾತ್ರಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಪ್ರತಿ ದಿನ ಶಿವನಾಮಸ್ಮರಣೆಯನ್ನು ಮಾಡುತ್ತ ಸನ್ಮಾರ್ಗದಲ್ಲಿ ನಡೆಯೋಣ ಎಂದು ತಿಳಿಸಿದರು.
ಡಾ ನಾಗರಾಜ ಪರಿಸರ ಮಾತನಾಡಿ, ಶಿವನು ಪ್ರಕೃತಿ ಪ್ರಿಯನು, ಎಲ್ಲ ಪ್ರಾಣಿ ಪಕ್ಷಿಗಳಿಗೂ ಬದುಕುವ ಹಕ್ಕಿದೆ. ಈ ನಿಟ್ಟಿನಲ್ಲಿ ನಾವು ಜಲ ಮಾಲಿನ್ಯ, ಪರಿಸರ ಮಾಲಿನ್ಯ ಮಾಡದೆ ಹೆಚ್ಚು ಹೆಚ್ಚು ಗಿಡ ಮರಗಳನ್ನು ಬೆಳೆಸಿ ಅಂತರ್ಜಲವನ್ನು ಹೆಚ್ಚಿಸುವ ಕಡೆ ಗಮನ ಹರಿಸಬೇಕು ಎಂದು ತಿಳಿಸಿದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ. ವಿಜಯಕುಮಾರ್ ಮಾತನಾಡಿ, ನಾವೆಲ್ಲ ಪ್ರತಿದಿನ ಯೋಗ ಮಾಡುವುದರಿಂದ ಆರೋಗ್ಯವಾಗಿದ್ದೇವೆ. ನಾವು ಮಾತ್ರ ಆರೋಗ್ಯವಾಗಿದ್ದರೆ ಸಾಲದು, ಎಲ್ಲರಿಗೂ ಯೋಗ ಮಾಡಲು ತಿಳಿಸಿ ಎಲ್ಲರೂ ಆರೋಗ್ಯವಾಗಿರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿ ಮಹಾಶಿವರಾತ್ರಿಯ ಶುಭಾಶಯಗಳನ್ನು ಕೋರಿದರು.
ಯೋಗ ಕೇಂದ್ರದ ಗುರು ಯೋಗಾಚಾರ್ಯ ರುದ್ರಾರಾಧ್ಯ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನೆರವೇರಿದವು. ಮುಂದಿನ ದಿನಗಳಲ್ಲಿ ಶಿವರಾತ್ರಿ ಸಂಭ್ರಮವನ್ನು ಮತ್ತಷ್ಟು ವಿಜೃಂಭಣೆಯಿಂದ ಮಾಡೋಣ ಎಂದು ತಿಳಿಸಿದರು.
ವಿವಿಧ ಭಜನಾ ಮಂಡಳಿಯ ಸದಸ್ಯರು ಭಜನೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಡಾ. ನಾಗರಾಜ ಪರಿಸರ ಅವರ ನೇತೃತ್ವದಲ್ಲಿ ಬೆಳಗಿನವರೆಗೆ ಜಾಗರಣೆಯನ್ನು ಮಾಡಲಾಯಿತು.
Sri Shivaganga Yoga Kendra ವಿಶೇಷ ಪೂಜೆ ರುದ್ರಾಭಿಷೇಕ ಭಜನೆ ಧ್ಯಾನ ನೆರವೇರಿತು. ಸಾವಿರಕ್ಕೂ ಹೆಚ್ಚು ಯೋಗಪಟುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
