Wednesday, April 30, 2025
Wednesday, April 30, 2025

D S Arun ಭಾರತೀಯ ಸಂಸ್ಕೃತಿಯಲ್ಲಿ ವರ್ಷಪೂರ್ಣ ಮಾತೆಯನ್ನ ಪೂಜಿಸುವ ಪರಿಕಲ್ಪನೆಯಿದೆ- ಡಿ.ಎಸ್.ಅರುಣ್

Date:

D S Arun ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ವರ್ಷದ 365 ದಿನಗಳೂ ಮಾತೆಯನ್ನು ಪೂಜಿಸುವ ಆಚರಣೆ,ಮಾತೃದೇವೋಭವ ಎಂಬ ಪರಿಕಲ್ಪನೆಯಿದೆ. ಹುಟ್ಟಿನಿಂದಲೇ ಬರುವ ಇಂಥಹ ಸಂಸ್ಕಾರವು ಸನಾತನ ಧರ್ಮದ ಹಿರಿಮೆಯಾಗಿದೆ “
ಎಂದು ಬ್ರಹ್ಮಾಕುಮಾರಿ ಈ ವಿ ವಿ ದಲ್ಲಿ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಶಾಸಕ ಡಿ ಎಸ್ ಅರುಣ್ ರವರು ನುಡಿದರು.
ಸಹಸ್ರಾರು ವರ್ಷಗಳ ಐತಿಹಾಸಿಕತೆ ನಮ್ಮ ಭಾರತಕಿದೆ. ಇದನ್ನು ಪುನರ್ ಜಾಗೃತಿಗೊಳಿಸಿ ಭಾರತವನ್ನು ಚ್ಯಾರಿತ್ರಿಕ ದೇಶವನ್ನಾಗಿಸುವ ಕೆಲಸವನ್ನು ಈಶ್ವರೀಯ ವಿ ವಿ ಮಾಡುತ್ತಿದೆ. ಸಂಸ್ಥೆಯ ಈ ಸತ್ಕಾರ್ಯದಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದು ಕರೆನೀಡಿದರು.

ರಾಜಯೋಗಿನಿ
ಬಿ ಕೆ ಸ್ನೇಹಕ್ಕನವರು ಮಹಾಶಿವರಾತ್ರಿ ಆಧ್ಯಾತ್ಮಿಕ ಅರ್ಥವನ್ನು ತಿಳಿಸಿ ಮಹಿಳಾ ದಿನಾಚರಣೆಯ ಬಗ್ಗೆ ಜಾಗೃತಿ ಮೂಡಿಸಿದರು.

ಶ್ರೀಮತಿ ಪುಷ್ಪ ಶೆಟ್ಟಿಯವರು
ಸಂಸ್ಥೆಯ ಒಡನಾಟದಲ್ಲಿ ತಮಗಾದ ಅನುಭವವನ್ನು ಹಂಚಿಕೊಳ್ಳುತ್ತಾ “ಆಧ್ಯಾತ್ಮ ಜ್ಞಾನದಿಂದ ನನ್ನ ಜೀವನದಲ್ಲಿ ಸಕಾರಾತ್ಮಕತೆ ಬೆಳೆದು ಸಂಸ್ಕಾರಗಳು ಉತ್ತಮಗೊಂಡವು. ಈಗಲೂ ನಾನು ಯಾವುದೇ ಜವಾಬ್ದಾರಿ ಗಳನ್ನು ಮೊದಲು ಈಶ್ವರನಿಗೆ ಒಪ್ಪಿಸಿ , ನಂತರ ಕರ್ತವ್ಯ ಮಾಡುತ್ತೇನೆ. ಇದರ ಪರಿಣಾಮ ಸಕಾರಾತ್ಮಕವಾಗಿರುವುದು ಎಂದು ಶ್ರೀಮತಿ ಪುಷ್ಪ ಶೆಟ್ಟಿಯವರು ತಿಳಿಸಿದರು.

ಮಹಿಳಾ ದಿನಾಚರಣೆಯ ಶುಭ ಹಾರೈಸಿ ಶ್ರೀಮತಿ ಸುರೇಖಾ ಮುರಳಿಧರ್ ಮಾತನಾಡುತ್ತಾ ಇಂಥಹ ಆಧ್ಯಾತ್ಮಿಕ ತಳಹದಿಯುಳ್ಳ ಸಂಸ್ಥೆಗಳೇ ಭವ್ಯ ಭಾರತದ ಭದ್ರ ಬುನಾದಿಯಾಗಿವೆ. ಇಂಥಹ ಅಮೂಲ್ಯವಾದ ಈಶ್ವರೀಯ ತತ್ವಗಳು ಕೋಟಿ ಕೋಟಿ ಜನರಿಗೆ ಹರಡಲಿ ಎಂದರು.

ಸಹೋದರಿ ಅನ್ನಿಸ್ ಫಾತಿಮಾ , ಅಧ್ಯಕ್ಷರು AMWO ಮಾತನಾಡುತ್ತಾ ಮಹಿಳೆಯ ಪ್ರಗತಿಯೇ ದೇಶದ ಪ್ರಗತಿಯಾಗಿದೆ. ಆಧ್ಯಾತ್ಮಿಕತೆ ಇರುವಲ್ಲಿ ಆನಂದ ,ಶಾಂತಿ , ಪ್ರೇಮದ ಬಾಂಧವ್ಯ ಬೆಸೆಯುವುದು ಎಂದು ಅಭಿಪ್ರಾಯಪಟ್ಟರು.

D S Arun ಸಹೋದರಿ ರಿಜ್ವಾನ್ ಸಿದ್ಧಿಕ್ ಎಲ್ಲ ಧರ್ಮಗಳ ಮೂಲ ಉದ್ದೇಶವೇ ಶಾಂತಿ ಹಾಗೂ ವ್ಯಕ್ತಿಯನ್ನು ಕೆಡುಕುಗಳಿಂದ ಶುದ್ಧೀಕರಿಸಿ ಒಳಿತಿನೆಡೆಗೆ ಮುನ್ನಡೆಸುವುದೇ ಆಧ್ಯಾತ್ಮ ಎಂದರು. ಓರ್ವ ತಾಯಿ ತನ್ನ ಮಕ್ಕಳನ್ನು ಸಕಾರಾತ್ಮಕವಾಗಿ ಬೆಳೆಸಿದರೆ ತನ್ನ ಕುಟುಂಬಕ್ಕೆ ಮಾತ್ರವಲ್ಲದೇ ಇದು ಸಮಾಜಕ್ಕೆ ಮಹಿಳೆಯ ಅತಿದೊಡ್ಡ ಕೊಡುಗೆ ಎಂದರು.
ಶ್ರೀ ಹರ್ಷ ಕಾಮತ್ , ಉದ್ಯಮಿಗಳು ಮಾತನಾಡುತ್ತಾ ಶಂಖುವು ಡೊಂಕಾಗಿದ್ದರೂ ಪರಮಾತ್ಮನ ಕೈ ಸೇರಿದಾಗ ಪಾಂಚಜನ್ಯವಾಗಿ ಮೊಳಗುವಂತೆ ನಾವು ಸಹ ಈಶ್ವರೀಯ ವಿಶ್ವವಿದ್ಯಾಲಯದ ಪರಂಧಾಮವಾಸಿ ಪರಮಾತ್ಮನ ಕೈಯಲ್ಲಿ ಸಿಕ್ಕಾಗ ಡೊಂಕುಗಳು ಶಮನಗೊಂಡು ಪಾಂಚಜನ್ಯವಾಗಿ ಮೊಳಗುತ್ತೇವೆ. ಈ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಮಕ್ಕಳು , ಯುವಪೀಳಿಗೆ ಈ ವೇದಿಕೆಗೆ ಬರಬೇಕು ಎಂದು ಅಭಿಪ್ರಾಯಪಟ್ಟರು.

ರಾಜಯೋಗಿನಿ ಬಿಕೆ ಅನಸೂಯಕ್ಕನವರು ಕಾರ್ಯಕ್ರಮದ ನೇತೃತ್ವ ವಹಿಸಿ ಅಚ್ಚುಕಟ್ಟಾಗಿ ನಿರೂಪಿಸಿದರು..
ಬಿಕೆ ಮಂಜಪ್ಪನವರು ವಂದಿಸಿದರು. ಶಶಿಕಲಾ ಹಾಗು ಭಾಗ್ಯ ಪ್ರಾರ್ಥನ ಗೀತೆಯನ್ನು ಹಾಡಿದರು.ಬಿಕೆ ಅನ್ನಪೂರ್ಣಕ್ಕ ಪ್ರಸಾದ ವಿತರಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Yadav School of Chess Institute ಯಾದವ ಸಂಸ್ಥೆಯಿಂದ ಚೆಸ್ ತರಬೇತಿ ಶಿಬಿರ

Yadav School of Chess Institute ರವೀದ್ರನಗರದ ಯಾದವ ಸ್ಕೂಲ್ ಆಫ್...

Shivaganga Yoga Center ನಗರದ ಅತಿದೊಡ್ಡ ಬಾಡಾವಣೆಗಳಿಗೆ ₹140 ಕೋಟಿ ಅನುದಾನದಿಂದ ಅಭಿವೃದ್ಧಿ- ವಿಶ್ವಾಸ್

Shivaganga Yoga Center ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ...

Sarva Samriddhi Sadhana Center ರಿಪ್ಪನ್ ಪೇಟೆ ಮೂಗುಡ್ತಿ ಸರ್ವಸಮೃದ್ಧಿ ಸಾಧನಾ ಕೇಂದ್ರದಲ್ಲಿ ಮಕ್ಕಳಿಗಾಗಿ ಸಂಸ್ಕಾರ ಶಿಬಿರ

Sarva Samriddhi Sadhana Center ಹೊಸನಗರದ ರಿಪ್ಪನ್‌ಪೇಟೆ ಮೂಗುಡ್ತಿ ಸರ್ವಸಮೃದ್ಧಿ ಸಾಧನಾ...