Sunday, August 2, 2026
Sunday, August 2, 2026

C. T. Ravi ಸುವರ್ಣ ಕೆಲಸಗಾರರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನ ನೀಡಬೇಕು- ಸಿ.ಟಿ.ರವಿ

Date:

C. T. Ravi ಅಸಂಘಟಿತ ಕಾರ್ಮಿಕರಾದ ಸುವರ್ಣ ಕೆಲಸಗಾರರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯ ಒದಗಿಸುವುದು ಹಾಗೂ ವೃತ್ತಿಯಲ್ಲಿ ಆಗುತ್ತಿರುವ ಕೆಲವು ಸಮಸ್ಯೆಗಳನ್ನು ಬಗೆಹರಿಸಿ ಸುಸ್ಥಿರ ಜೀವನ ನಡೆಸಲು ಅನುವು ಮಾಡಿಕೊಡಬೇಕು ಎಂದು ಚಿಕ್ಕಮಗಳೂರು ಜಿಲ್ಲಾ ಸುವರ್ಣಗಾರರ ಕ್ಷೇಮಾಭಿವೃದ್ದಿ ಸಂಘವು ಶಾಸಕ ಸಿ.ಟಿ.ರವಿ ಅವರನ್ನು ಒತ್ತಾಯಿಸಿದರು.

ಈ ಸಂಬಂಧ ಶಾಸಕರ ಸ್ವಗೃಹದಲ್ಲಿ ಸಂಘದ ಪದಾಧಿಕಾರಿಗಳು ಭೇಟಿ ಮಾಡಿ ಮನವಿ ಸಲ್ಲಿಸಿದ ಅವರು ಸರ್ಕಾರದ ಸೌಲಭ್ಯ ಹಾಗೂ ವೃತ್ತಿಯಲ್ಲಿರುವ ಕೆಲವು ಸಮಸ್ಯೆಗಳನ್ನು ಬಗೆಹರಿಸಿಕೊಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಸಿ.ಆರ್.ಸುಧೀರ್‌ಕುಮಾರ್ ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಸುವರ್ಣ ಕೆಲಸಗಾರರು ಕಾರ್ಯನಿರ್ವಹಿಸುತ್ತಿರುವ ಅಂಗಡಿ ಮುಂಗಟ್ಟುದಾರರಿಗೆ ಚಿನ್ನಾಭರಣ ಆರೋಪದ ಸುಳ್ಳು ಮಾಹಿತಿ ಮೇರೆಗೆ ಕೆಲವು ಪೊಲೀಸ್ ಅಧಿಕಾರಿಗಳು ಪದೇ ಪದೇ ತೊಂದರೆ ನೀಡಲಾಗುತ್ತಿದೆ.ಇದನ್ನು ಸೂಕ್ತ ನಿರ್ದೇಶನ ನೀಡಿ ಸಮಸ್ಯೆ ಇತ್ಯರ್ಥಪಡಿಸಿಕೊಡಬೇಕು ಎಂದರು.

C. T. Ravi ಪ್ರಸ್ತುತ ನಗರದಲ್ಲಿ ದೊಡ್ಡಮಟ್ಟದ ಚಿನ್ನಾಭರಣದ ಅಂಗಡಿ ಮುಂಗಟ್ಟುಗಳು ಬೃಹದಾಕಾರದಲ್ಲಿ ತಲೆಎತ್ತಿರುವ ಪರಿಣಾಮ ಸಣ್ಣಪುಟ್ಟ ಅಂಗಡಿ ಮುಂಗಟ್ಟುದಾರರಿಗೆ ಕೆಲಸಗಳು ಕಡಿಮೆಯಾಗಿದೆ. ಇದರೊಂದಿಗೆ ಚಿನ್ನಾಭರಣಕ್ಕೆ ಸಂವಾಬ್ಧಿಸಿದಂತೆ ಕೆಲವು ಅಧಿಕಾರಿಗಳು ತೊಂದರೆ ನೀಡುತ್ತಿರುವ ಪರಿಣಾಮ ನಿತ್ಯದ ವ್ಯವಹಾರಕ್ಕೂ ತೊಂದರೆ ಯಾಗಿದೆ ಎಂದರು.
ಅಸಂಘಟಿತ ಸುವರ್ಣ ಕೆಲಸಗಾರರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯವನ್ನು ಒದಗಿಸುವುದು ಹಾಗೂ ಸುಖಸುಮ್ಮನೆ ಚಿನ್ನಾಭರಣದ ಆರೋಪ ಮಾಡುವ ಕೆಲವು ಅಧಿಕಾರಿಗಳಿಗೆ ತೊಂದರೆ ನೀಡದಂತೆ ಕ್ರಮವಹಿ ಸಿದ್ದಲ್ಲಿ ಸುವರ್ಣ ಕೆಲಸಗಾರರು ಉತ್ತಮ ಜೀವನ ನಡೆಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀಕಾಂತ್‌ಶೆಟ್, ಸಿ.ಎಸ್.ಅರುಣ್, ಸುನೀಲ್ ಜಾದವ್, ಖಜಾಂಚಿ ತೀರ್ಥ, ಸದಸ್ಯರುಗಳಾದ ಉಮೇಶ್, ಸುದೀಪ, ಪೋಪಟ್, ಕಲ್ಲೇಶ್ ಆಚಾರ್ಯ, ಹಿರೇಬೆಂಗಾಲಿ, ದೇವರಾಜ್, ಧನಂಜಯ್, ಚಂದ್ರಶೇಖರ್, ಪ್ರಕಾಶ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ₹ 6.400 ಕೋಟಿ ವೆಚ್ಚದ ಶಿವಮೊಗ್ಗ- ತುಮಕೂರು ಚತುಷ್ಪಥ ರಸ್ತೆ ಮುಂದಿನ ಮಾರ್ಚ್ ಗೆ ಸಿದ್ಧ- ಬಿ.ವೈ.ರಾಘವೇಂದ್ರ

B.Y. Raghavendra ಮಲೆನಾಡು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ...

S. N. Channabasappa ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಮುಖ್ಯ ಕರ್ತವ್ಯ- ಎಸ್.ಎನ್.ಚನ್ನಬಸಪ್ಪ

S. N. Channabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ...

Rotary Club of Shivamogga ಮಕ್ಕಳಲ್ಲಿ ರೋಟರಿ ಸಂಸ್ಥೆ ನಾಯಕತ್ವ ಗುಣಗಳನ್ನ ಬೆಳೆಸುತ್ತದೆ- ಡಿ.ಕೆ.ನರಹರಿ

Rotary Club of Shivamogga ರೋಟರಿ ಸಂಸ್ಥೆಯು ಮಕ್ಕಳಿಗೆ ಶಾಲಾ ಹಂತದಲ್ಲಿಯೇ...

B.Y. Raghavendra ಹವಾಮಾನ ಆಧಾರಿತ ಬೆಳೆವಿಮೆ: ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ವಿಸ್ತರಿಸಿ- ಸಂಸದ ಬಿ.ವೈ‌.ರಾಘವೇಂದ್ರ

B.Y. Raghavendra ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ.34 ರಷ್ಟು ಮಳೆ...