Death News ಮೆಗ್ಗಾನ್ ಆಸ್ಪತ್ರೆಯ ಶರಾವತಿ ಬ್ಲಾಕ್ ಬಳಿ ಮಲಗಿದ್ದ ಸುಮಾರು 40 ರಿಂದ 45 ವಯಸ್ಸಿನ ಅಪರಿಚಿತ ವ್ಯಕ್ತಿಯನ್ನು ಮಾ.11 ರಂದು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದಾಗ ವ್ಯಕ್ತಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ.
ಅಪರಿಚಿತ ಮೃತ ವ್ಯಕ್ತಿಯು ಸುಮಾರು 5 ಅಡಿ 10 ಇಂಚು ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ತಲೆಯಲ್ಲಿ 3 ಇಂಚು ಉದ್ದದ ಕಪ್ಪು ಕೂದಲು, ಸುಮಾರು 2 ಇಂಚು ಉದ್ದದ ಕಪ್ಪು ಬಿಳಿ ಮಿಶ್ರಿತ ಬಣ್ಣದ ಕುರುಚಲು ಗಡ್ಡ ಮೀಸೆ ಇರುತ್ತದೆ. ಮೃತನ ಬಲಗೈನ ಮುಂಗೈ ಒಳಭಾಗದಲ್ಲಿ ಅಮ್ಮ ಎಂಬ ಹಚ್ಚೆ ಗುರುತು ಹಾಗೂ ಎಡಗೈನ ಮುಂಗೈನ ಒಳಭಾಗದಲ್ಲಿ ಮಂಜು ಎಂಬ ಹಚ್ಚೆ ಗುರುತು ಇರುತ್ತದೆ. ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ, ದೂ.ಸಂ: 08182-Death News 261414, 9611761255 ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.
Death News ಅಪರಿಚಿತ ವ್ಯಕ್ತಿ ಸಾವು: ಪೊಲೀಸ್ ಮಾಹಿತಿ
Siddaramaiah ರಾಜ್ಯದ ಏಳನೇ ವೇತನ ಆಯೋಗದ ವರದಿ ಸಲ್ಲಿಕೆ
Siddaramaiah ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ಅಧ್ಯಕ್ಷತೆಯ ರಾಜ್ಯದ ಏಳನೇ ವೇತನ ಆಯೋಗದವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ
ಅವರನ್ನು ಭೇಟಿಯಾಗಿ ವರದಿ ಸಲ್ಲಿಸಿದರು.
Siddaramaiah ಆಯೋಗದ ಸದಸ್ಯರಾದ ಪಿ.ಬಿ. ರಾಮಮೂರ್ತಿ, ಶ್ರೀಕಾಂತ್ ವನಹಳ್ಳಿ , ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಾ. ಕೆ.ವಿ. ತ್ರಿಲೋಕಚಂದ್ರ, ಹಣಕಾಸು ಇಲಾಖೆ ಕಾರ್ಯದರ್ಶಿ ಡಾ. ಪಿ.ಸಿ. ಜಾಫರ್, ವೇತನ ಆಯೋಗದ ಸದಸ್ಯ ಕಾರ್ಯದರ್ಶಿ ಹೆಫ್ಸಿಬಾರಾಣಿ ಕೊರ್ಲಪಾಟಿ ಉಪಸ್ಥಿತರಿದ್ದರು.
Karnataka ಕರ್ನಾಟಕ ನಾಮಕರಣಕ್ಕೆ ಸುವರ್ಣ ಸಂಭ್ರಮ: ವಿಧಾನಸೌಧ ಆವರಣದಲ್ಲಿ ಭುವನೇಶ್ವರಿ ಪ್ರತಿಮೆ ಪ್ರಸ್ತಾವನೆ
Karnataka ಕನ್ನಡ ನಾಡು- ನುಡಿ, ಸಂಸ್ಕೃತಿಯ ಸಂಕೇತವಾದ ತಾಯಿ ಭುವನೇಶ್ವರಿ ಪ್ರತಿಮೆಯನ್ನು ವಿಧಾನಸೌಧದ ಆವರಣದಲ್ಲಿ ಸುಮಾರು 23 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆದಷ್ಟು ಬೇಗ ಈ ಕಾಮಗಾರಿಯನ್ನು ಪ್ರಾರಂಭಿಸುವ ಇಚ್ಛೆಯನ್ನು ಸಂಪುಟ ವ್ಯಕ್ತಪಡಿಸಿದೆ.
Karnataka ಕನ್ನಡ ನಾಡು ಏಕೀಕರಣಗೊಂಡು, ಕರ್ನಾಟಕ ಎಂಬ ಹೆಸರು ನಾಮಕರಣವಾಗಿ 50 ವರ್ಷ ಸಂದಿರುವ ಸಂದರ್ಭದಲ್ಲಿ ಕನ್ನಡದ ಪ್ರತೀಕದ ಗುರುತು ಸರ್ಕಾರದ ಆವರಣದಲ್ಲಿರ ಬೇಕೆಂಬ ಉದ್ದೇಶದಿಂದ ಈ ನಿರ್ಣಯ ಕೈಗೊಳ್ಳಲಾಗಿದೆ.
World Consumers Rights Day ಜನಜಾಗೃತಿಯ ಬಗ್ಗೆಗ್ರಾಹಕರ ದಿನಾಚರಣೆ
World Consumers Rights Day ಇಂದು ವಿಶ್ವ ಗ್ರಾಹಕ ಹಕ್ಕುಗಳ ದಿನ. ಪ್ರತಿ ವರ್ಷ ಮಾರ್ಚ್ 15 ರಂದು ವಿಶ್ವ ಗ್ರಾಹಕ ಹಕ್ಕುಗಳ ದಿನ ವನ್ನು ಆಚರಣೆ ಮಾಡಲಾಗುತ್ತದೆ. ಗ್ರಾಹಕರಲ್ಲಿ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ಈ ದಿನವನ್ನು ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತದೆ.
ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನು 1983 ರಲ್ಲಿ ಮೊದಲ ಬಾರಿಗೆ ಆಚರಣೆ ಮಾಡಲಾಯಿತು. ಅಂದಿನಿಂದ ಇದನ್ನು ಪ್ರತಿವರ್ಷ ಮಾರ್ಚ್ 15ರಂದು ಜಾಗತಿಕವಾಗಿ ಆಚರಿಸಲಾಗುತ್ತದೆ.
ಗ್ರಾಹಕರ ಸುರಕ್ಷತೆ ಕಾಯ್ದೆಯ ಪ್ರಕಾರ ಗ್ರಾಹಕರಾಗಿ ಯಾವುದೇ ವಸ್ತು ಖರೀದಿಸುವಾಗ ವಸ್ತುವಿನ ಗುಣಮಟ್ಟ, ಸುರಕ್ಷತೆ, ವಸ್ತುವಿನ ಉತ್ಪಾದನೆ ಮತ್ತು ಅದರ ಕೊನೆಯ ಅವಧಿಯನ್ನು ಪರಿಶೀಲಿಸಬೇಕು ಎಂದು ಈ ದಿನದಂದು ಜನರಲ್ಲಿ ಜಾಗೃತಿ ಮೂಡಿಸಲಾಗುವುದು.
ಭಾರತದಲ್ಲೂ ಪ್ರತಿ ವರ್ಷ ಗ್ರಾಹಕರ ಹಕ್ಕುಗಳ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ದಿನದಂದು ವಿಚಾರ ಸಂಕಿರಣಗಳು, ಚರ್ಚಾಗೋಷ್ಠಿಗಳು, ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ.
ಭಾರತದಲ್ಲಿನ ಗ್ರಾಹಕರ ಕುಂದುಕೊರತೆಗಳನ್ನು ರಾಷ್ಟ್ರೀಯ ಗ್ರಾಹಕ ವಿವಾದಗಳ ಪರಿಹಾರ ಆಯೋಗವು ಪರಿಹರಿಸುತ್ತದೆ.
World Consumers Rights Day ಇದು 1988 ರಲ್ಲಿ ಗ್ರಾಹಕ ಸಂರಕ್ಷಣಾ ಕಾಯಿದೆಯಡಿಯಲ್ಲಿ ಜಾರಿಗೆ ತರಲಾಯಿತು. ಡಿಸೆಂಬರ್ 24, 1986ರಲ್ಲಿ ಅಧಿಕೃತವಾಗಿ ಭಾರತದಲ್ಲಿ ವಿಶ್ವ ಗ್ರಾಹಕರ ದಿನವನ್ನು ಆಚರಣೆಗೆ ತರಲಾಯಿತು. ಭಾರತದಲ್ಲಿ ಡಿಸೆಂಬರ್ 24 ನ್ನು ಗ್ರಾಹಕ ಹಕ್ಕುಗಳ ದಿನವಾಗಿ ಆಚರಿಸಲಾಗುತ್ತದೆ.
Election Commission ಚುನಾವಣಾ ಆಯೋಗದಿಂದ ಮಾ,16 ಮಹತ್ವದ ಮಾಧ್ಯಮಗೋಷ್ಠಿ
Election Commission ಭಾರತದ ಚುನಾವಣಾ ಆಯೋಗವು ಮಾರ್ಚ್ 16 ರಂದು ಪ್ರೆಸ್ ಕಾನ್ಫರೆನ್ಸ್ ಆಯೋಜಿಸಿದೆ.
Election Commission ಈ ಸಭೆಯಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಸಾರ್ವತ್ರಿಕ ಚುನಾವಣೆಗಳ ವೇಳಾಪಟ್ಟಿಯನ್ನು ಪ್ರಕಟಿಸಲು ಭಾರತದ ಚುನಾವಣಾ ಆಯೋಗದಿಂದ ಪತ್ರಿಕಾಗೋಷ್ಠಿಯನ್ನ ನವದೆಹಲಿಯ
ಪ್ಲೀನರಿ ಹಾಲ್, ವಿಜ್ಞಾನ ಭವನ ದಲ್ಲಿ ಆಯೋಜಿಸಿದೆ.
Amitabh Bachchan ಮುಂಬೈ ಕೋಕಿಲ ಬೆನ್ ಆಸ್ಪತ್ರೆಗೆ ಅಮಿತಾಬ್ ದಾಖಲು
Amitabh Bachchan ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಮಿತಾಬ್ ಬಚ್ಚನ್ ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಅಮಿತಾಬ್ ಬಚ್ಚನ್ ಆಂಜಿಯೋಪ್ಲಾಸ್ಟಿಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ.
ಎದೆ ನೋವು ಕಾಣಿಸಿಕೊಂಡ ಬೆನ್ನಲ್ಲೇ ಬಾಲಿವುಡ್ ನಟ, ಬಿಗ್ ಬಿ ಅಮಿತಾಭ್ ಬಚ್ಚನ್ ರನ್ನು ಇಂದು ಬೆಳ್ಳಂಬೆಳಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
Amitabh Bachchan 81ರ ವಯಸ್ಸಿನ ಅಮಿತಾಭ್ ಬಚ್ಚನ್ ಇತ್ತೀಚಿಗಷ್ಟೇ ಕಲ್ಕಿ ಸಿನಿಮಾದ ಸಂಪೂರ್ಣ ಶೂಟಿಂಗ್ ಮುಗಿಸಿಕೊಂಡು ಮುಂಬೈಗೆ ಆಗಮಿಸಿದ್ದರು.
Zee Kannada ಮಾರ್ಚ್ 17 ರಂದು ಜೀ ಕನ್ನಡ ವಾಹಿನಿಯಿಂದ ಶಿವಮೊಗ್ಗದಲ್ಲಿ ಡಾನ್ಸ್ ಕರ್ನಾಟಕ ಡಾನ್ಸ್ ಗೆ ಆಡಿಷನ್
Zee Kannada ತನ್ನ ವಿಭಿನ್ನ ರಿಯಾಲಿಟಿ ಶೋಗಳ ಮೂಲಕ ಕರುನಾಡನ್ನ ರಂಜಿಸುತ್ತ ಬಂದಿರುವ ಜೀ ಕನ್ನಡ ವಾಹಿನಿಯು, ಈಗ ತನ್ನ ಹಿಟ್ ರಿಯಾಲಿಟಿ ಶೋಗಳಾದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮತ್ತು ಕಾಮಿಡಿ ಕಿಲಾಡಿಗಳನ್ನ ಮತ್ತೆ ತೆರೆಗೆ ತರಲು ತಯಾರಿ ನಡೆಸಿದೆ. 7 ಸೀಸನ್ಗಳನ್ನ ಯಶಸ್ವಿಯಾಗಿ ಪೂರೈಸಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಈಗ ತನ್ನ 8 ನೇ ಆವೃತ್ತಿಯೊಂದಿಗೆ ಮತ್ತೆ ಕರುನಾಡನ್ನ ಕುಣಿಸಲು ತಯಾರಾಗಿದೆ.ಈಗಾಗಲೇ ಸಾಕಷ್ಟು ಯುವ ನೃತ್ಯ ನಿರ್ದೇಶಕರನ್ನ ಸ್ಯಾಂಡಲ್ ವುಡ್ಡಿಗೆ ನೀಡಿರುವ ಈ ರಿಯಾಲಿಟಿ ಶೋ ಮತ್ತಷ್ಟು ನೃತ್ಯ ನಿರ್ದೇಶಕರನ್ನ ಹುಟ್ಟು ಹಾಕುವ ಕೆಲಸವನ್ನ ಈ ಆವೃತ್ತಿಯಲ್ಲಿ ಮತ್ತೆ ಮಾಡಲಿದೆ.
ಇದರ ಜೊತೆಜೊತೆಗೆ ಸತತ 4 ಹಿಟ್ ಸೀಸನ್ನುಗಳನ್ನ ಕೊಟ್ಟಿರುವ ಕರುನಾಡಿನ ನೆಚ್ಚಿನ ರಿಯಾಲಿಟಿ ಶೋಗಳಲ್ಲಿ ಒಂದಾದ ಕಾಮಿಡಿ ಕಿಲಾಡಿಗಳು ಈಗಾಗಲೇ ಸಾಕಷ್ಟು ಕಾಮಿಡಿ ಕಲಾವಿದರನ್ನ ಕರುನಾಡಿಗೆ ನೀಡಿರುವುದು ಈಗ ಇತಿಹಾಸ.ವೇದಿಕೆಗಾಗಿ ಕಾಯುತ್ತಿರುವ ಅದೆಷ್ಟೋ ಹಾಸ್ಯ ನಟನಟಿಯರ ಕನಸನ್ನ ನನಸು ಮಾಡುತ್ತಿರುವ ಈ ರಿಯಾಲಿಟಿ ಶೋ ಈ ಬಾರಿ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಎಂಬ ಹೊಸ ರೂಪದಲ್ಲಿ ಕರುನಾಡಿನ ಮುಂದೆ ಬರಲಿದೆ. ಈ ಹಂತದಲ್ಲಿ ಇದಕ್ಕೆ
ಪೂರ್ವಬಾವಿ ತಯಾರಿ ಎಂಬಂತೆ ಆಡಿಷನ್ ಪ್ರಕ್ರಿಯೇ ಕರುನಾಡಿನಾದ್ಯಂತ ಶುರುವಾಗಿದೆ.
Zee Kannada ಇದೇ ಮಾರ್ಚ್ 17 ರಂದು ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ರವರೆಗೆ ಬಸವೇಶ್ವರ ವಿದ್ಯಾಸಂಸ್ಥೆ,ಹಳೆ ತಾಲ್ಲೂಕು ಆಫೀಸ್ ರೋಡ್,ವೀರಶೈವ ಕಲ್ಯಾಣ ಮಂಟಪ ಹತ್ತಿರ,ಶಿವಮೊಗ್ಗ.ಇಲ್ಲಿ ಆಡಿಷನ್ ನಡೆಯಲಿದೆ.
ಆಡಿಷನಲ್ಲಿ ಭಾಗವಹಿಸಲು ಇಚ್ಚಿಸುವವರು ಅಡ್ರಸ್ ಪ್ರೂಪ್ ಜೆರಾಕ್ಸ್ ಜೊತೆ ಎರಡು ಪಾಸ್ ಪೋರ್ಟ್ ಸೈಜ್ ಪೋಟೊದೊಂದಿಗೆ ಆಡಿಷನ್ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದ್ದು,ಜೀ ಕನ್ನಡ ವಾಹಿನಿಯು ಈ ಆಡಿಷನ್ಗೆ ಯಾವುದೇ ಶುಲ್ಕು ವಿಧಿಸಿರುವುದಿಲ್ಲವೆಂದು ಸ್ಪಷ್ಟ ಪಡಿಸಿದೆ ಹಾಗು ವಾಹಿನಿಯ ಹೆಸರಲ್ಲಿ ಹಣ ಕೇಳುವವರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ತಿಳಿಸಿದೆ.
Amit Shah ಪೌರತ್ವ ಸಂಬಂಧಿತ ಕಾನೂನು ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರ- ಅಮಿತ್ ಷಾ
Amit Shah ಪೌರತ್ವ ತಿದ್ದುಪಡಿ
ಕಾಯ್ದೆಯನ್ನು
ಯಾವುದೇ
ಕಾರಣಕ್ಕೂ ವಾಪಸ್
ಪಡೆಯುವುದಿಲ್ಲ
ಎಂದು ಕೇಂದ್ರ ಗೃಹ
ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.
ಸಿಎಎ ಸಂವಿಧಾನ ನಿಬಂಧನೆಗಳನ್ನು
ಉಲ್ಲಂಘಿಸುವುದಿಲ್ಲ. ಇದು ದೇಶದಲ್ಲಿ
ಭಾರತೀಯ ಪೌರತ್ವವನ್ನು ಖಾತ್ರಿಪಡಿಸಿ
ಕೊಳ್ಳಲು ಇರುವ ಸಾರ್ವಭೌಮ ಹಕ್ಕಾಗಿದೆ.
ಕಾಯಿದೆ ವಿಚಾರದಲ್ಲಿ ರಾಜಿ ಪ್ರಶ್ನೆಯೇ
ಇಲ್ಲ, ಅದನ್ನು ಹಿಂಪಡೆಯುವುದಿಲ್ಲ.’
ಎಂದು ಹೇಳಿದ್ದಾರೆ.
ಇದೇ ವೇಳೆ ಕಾಯ್ದೆ ಜಾರಿಗೊಳಿಸು
ವುದಿಲ್ಲ ಎಂದು ಹೇಳಿರುವ ಹಲವು ರಾಜ್ಯ
ಗಳಿಗೆ ತಿರುಗೇಟು ನೀಡಿರುವ ಅವರು,ಪೌರತ್ವಕ್ಕೆ ಸಂಬಂಧಿಸಿದ ಕಾನೂನುಗಳನ್ನು
ಜಾರಿಗೊಳಿಸಲು ಕೇಂದ್ರ ಸರಕಾರಕ್ಕೆ ಮಾತ್ರ
ಅಧಿಕಾರವಿದೆ,ಎಂದು ಪ್ರತಿಪಾದಿಸಿದ್ದಾರೆ.
Amit Shah ಸುದ್ದಿಸಂಸ್ಥೆಯೊಂದಕ್ಕೆ
ನೀಡಿದ
ಸಂದರ್ಶನದಲ್ಲಿ ಗೃಹ ಸಚಿವರು, ಕಾಯಿದೆ
ಅಸಂವಿಧಾನಿಕ ಎಂದು ಟೀಕಿಸುತ್ತಿರುವ ಪ್ರತಿ
ಪಕ್ಷಗಳ ನಾಯಕರ ವಿರುದ್ಧ
ಹರಿಹಾಯ್ದಿದ್ದಾರೆ.
Petrol Price Cut: ಮಾರ್ಚ್ 15 ರಿಂದ ಪೆಟ್ರೋಲ್ & ಡೀಸೆಲ್ ಬೆಲೆಯಲ್ಲಿ ಲೀ.ಗೆ ₹2 ಇಳಿಕೆ
Petrol Price Cut: ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ₹2 ಕಡಿತಗೊಳಿಸಿದ್ದು, ಮಾರ್ಚ್ 15 ರಂದು ಬೆಳಿಗ್ಗೆ 6 ಗಂಟೆಯಿಂದ ಜಾರಿಗೆ ಬರಲಿದೆ ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
“ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿನ ಕಡಿತವು ಗ್ರಾಹಕರ ವೆಚ್ಚವನ್ನು ತಗ್ಗಿಸುತ್ತದೆ ಮತ್ತು ಡೀಸೆಲ್, ಆರು ಕೋಟಿ ಕಾರುಗಳು ಮತ್ತು 27 ಕೋಟಿ ದ್ವಿಚಕ್ರ ವಾಹನಗಳಲ್ಲಿ ಚಲಿಸುವ 58 ಲಕ್ಷ ಭಾರೀ ಸರಕುಗಳ ವಾಹನಗಳ ನಿರ್ವಹಣಾ ವೆಚ್ಚವನ್ನು ಕಡಿಮೆ Petrol Price Cut: ಮಾಡುತ್ತದೆ” ಎಂದು ಶ್ರೀಹರ್ದೀಪ್ ಸಿಂಗ್ ಪುರಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
Eshwara Khandre ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ 152 ಹುದ್ದೆಗಳಿಗೆ ನೇರ ನೇಮಕಾತಿ- ಸಚಿವ ಈಶ್ವರ ಖಂಡ್ರೆ
Eshwara Khandre ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಮಹತ್ವದ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಶಕ್ತಿ ತುಂಬಲು ನಿರ್ಧರಿಸಲಾಗಿದ್ದು, 152 ಹುದ್ದೆಗಳನ್ನು ನೇರ ನೇಮಕಾತಿ Eshwara Khandre ಮೂಲಕ ಭರ್ತಿ ಮಾಡಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
